Tag: tourism

  • 2028ರ ವೇಳೆಗೆ 80  ಕೋಟಿ ಪ್ರವಾಸಿಗರನ್ನು ಆಕರ್ಷಿಸುವ ಗುರಿ – ಉತ್ತರ ಪ್ರದೇಶದಲ್ಲಿ ತಯಾರಿ ಹೇಗಿದೆ?

    2028ರ ವೇಳೆಗೆ 80  ಕೋಟಿ ಪ್ರವಾಸಿಗರನ್ನು ಆಕರ್ಷಿಸುವ ಗುರಿ – ಉತ್ತರ ಪ್ರದೇಶದಲ್ಲಿ ತಯಾರಿ ಹೇಗಿದೆ?

    ತ್ತರ ಪ್ರದೇಶ ಇತಿಹಾಸ, ಸಂಸ್ಕೃತಿ ಮತ್ತು ಆಧ್ಯಾತ್ಮಿಕತೆಗೆ ಹೆಸರುವಾಸಿಯಾಗಿದೆ. ತನ್ನ ಶ್ರೀಮಂತ ಸಾಂಸ್ಕೃತಿಕ ಪರಂಪರೆ ಮತ್ತು ಐತಿಹಾಸಿಕ ಮಹತ್ವಗಳಿರುವ ಸ್ಥಳಗಳನ್ನು ಹೊಂದಿರುವ ಉತ್ತರ ಪ್ರದೇಶ ಪ್ರವಾಸೋದ್ಯಮ ವಲಯದಲ್ಲಿ ಜಾಗತಿಕ ಗಮನ ಸೆಳೆಯುತ್ತಿದೆ. ಇದೀಗ 2028ರ ವೇಳೆಗೆ 80 ಕೋಟಿ ಪ್ರವಾಸಿಗರನ್ನು ಆಕರ್ಷಿಸುವ ಗುರಿಯೊಂದಿಗೆ ಉತ್ತರ ಪ್ರದೇಶವು ಭಾರತದಲ್ಲಿ ಪ್ರಧಾನ ಪ್ರವಾಸೋದ್ಯಮ ಕೇಂದ್ರವಾಗಲು ಯೋಜನೆಗಳನ್ನು ರೂಪಿಸಿದೆ. ಹಾಗಿದ್ರೆ ಉತ್ತರ ಪ್ರದೇಶದ ಪ್ರವಾಸೋದ್ಯಮ ಹೇಗಿದೆ? ಪ್ರವಾಸೋದ್ಯಮದ ಕೇಂದ್ರ ಬಿಂದುವಾಗಲು ತಯಾರಿ ಹೇಗೆ ನಡೆಯುತ್ತಿದೆ ಎಂಬುದರ ಕುರಿತು ಇಲ್ಲಿ ವಿವರಿಸಲಾಗಿದೆ.

    ಆಗ್ರಾದ ತಾಜ್ ಮಹಲ್ ಮತ್ತು ಅಯೋಧ್ಯೆಯ ರಾಮಮಂದಿರ ಸೇರಿದಂತೆ ಸಾಂಪ್ರದಾಯಿಕ ಹೆಗ್ಗುರುತುಗಳಿಗೆ  ಉತ್ತರ ಪ್ರದೇಶ ಹೆಸರುವಾಸಿಯಾಗಿದೆ. ಉತ್ತರ ಪ್ರದೇಶವು ಭಾರತದ ಕೆಲವು ಪ್ರಸಿದ್ಧ ಪ್ರವಾಸಿ ಆಕರ್ಷಣೆಗಳು ಮತ್ತು ರಾಷ್ಟ್ರೀಯ ಉದ್ಯಾನವನಗಳನ್ನು ಹೊಂದಿದೆ. ಯುಪಿ ಸರ್ಕಾರವು ಹೆಚ್ಚಿನ ಪ್ರವಾಸಿಗರನ್ನು ಆಕರ್ಷಿಸಲು ಮತ್ತು ಮುಂಬರುವ ವರ್ಷಗಳಲ್ಲಿ ಕ್ಷೇತ್ರದ ಬೆಳವಣಿಗೆಯನ್ನು ಗಣನೀಯವಾಗಿ ಹೆಚ್ಚಿಸಲು ಹಲವಾರು ಯೋಜನೆಯನ್ನು ರೂಪಿಸಿದೆ.

    ಪ್ರಮುಖ ಪ್ರವಾಸಿ ತಾಣಗಳ ಪುನರುಜ್ಜೀವನ ಮತ್ತು ಸ್ಥಳೀಯ ಸಾರಿಗೆ ಮೂಲಸೌಕರ್ಯಗಳ ವರ್ಧನೆಯು ಈ ಯೋಜನೆಯ ಪ್ರಮುಖ ಗುರಿಯಾಗಿದೆ. ಉತ್ತರ ಪ್ರದೇಶ ಪ್ರವಾಸೋದ್ಯಮದ ಬೆಳವಣಿಗೆ ಈಗಾಗಲೇ ಪ್ರವಾಸಿಗರ ಸಂಖ್ಯೆಯಲ್ಲಿ ಗಮನಾರ್ಹ ಹೆಚ್ಚಳಕ್ಕೆ ಕಾರಣವಾಗಿವೆ. 2023 ರಲ್ಲಿ, ಉತ್ತರ ಪ್ರದೇಶಕ್ಕೆ 48 ಕೋಟಿ ಪ್ರವಾಸಿಗರು ಆಗಮಿಸಿದ್ದಾರೆ.

    2028ರ ವೇಳೆಗೆ ಈ ಸಂಖ್ಯೆಯನ್ನು 80 ಕೋಟಿಗೆ ವಿಸ್ತರಿಸುವುದು ಸರ್ಕಾರದ ಗುರಿಯಾಗಿದೆ. ಈ ಮಹತ್ವಾಕಾಂಕ್ಷೆಯ ಯೋಜನೆಯ ಮೂಲಕ ಪ್ರವಾಸೋದ್ಯಮ ವಲಯದ ಒಟ್ಟು ಮೌಲ್ಯವರ್ಧನೆಯನ್ನು 70,000 ಕೋಟಿ ರೂ.ಗೆ ಹೆಚ್ಚಿಸಬೇಕೆಂದು ಚಿಂತಿಸಿದೆ. 2011 ರಲ್ಲಿ 11,000 ಕೋಟಿ ರೂ.ಮೌಲ್ಯವರ್ಧನೆ ವರದಿಯಾಗಿದೆ.ಇದೀಗ ತನ್ನ ಗುರಿಯನ್ನು ತಲುಪಲು ಉತ್ತರ ಪ್ರದೇಶ ರಾಜ್ಯದಾದ್ಯಂತ 12 ಹೊಸ ಪ್ರವಾಸೋದ್ಯಮ ಸರ್ಕ್ಯೂಟ್‌ಗಳ ಅಭಿವೃದ್ಧಿ ಸೇರಿದಂತೆ ಹಲವಾರು ಕಾರ್ಯತಂತ್ರದ ಕ್ರಮಗಳ ಕುರಿತು ಯೋಜನೆ ರೂಪಿಸಿದೆ. ಈ ಸರ್ಕ್ಯೂಟ್‌ಗಳ ಪ್ರಾಥಮಿಕ ಕಾರ್ಯವು ಈಗಾಗಲೇ ಪ್ರಾರಂಭವಾಗಿದೆ, ಸಮೀಕ್ಷೆಗಳು, ಮತ್ತು ಪ್ರಮುಖ ಸ್ಥಳಗಳನ್ನು ವರ್ಧಿಸಲು ಮತ್ತು ಪ್ರಚಾರದ ಕುರಿತು ಯೋಜನೆ ನಡೆಯುತ್ತಿದೆ.

    ಇತ್ತೀಚಿನ ವರ್ಷಗಳಲ್ಲಿ, ಉತ್ತರ ಪ್ರದೇಶವು ಪ್ರವಾಸಿಗರ ಸಂಖ್ಯೆಯಲ್ಲಿ ಗಮನಾರ್ಹ ಹೆಚ್ಚಳವನ್ನು ಕಂಡಿದೆ. 2016-17ರಲ್ಲಿ ಪ್ರವಾಸಿಗರ ಸಂಖ್ಯೆ 23 ಕೋಟಿ ಇತ್ತು. ಬಳಿಕ  2023-24ರಲ್ಲಿ 48 ಕೋಟಿಗೆ ಏರಿತು.  ಇದು ಸರಿಸುಮಾರು 51% ಬೆಳವಣಿಗೆಯನ್ನು ತೋರಿಸುತ್ತದೆ. ಈ ಹೆಚ್ಚಳವು ಸರಿಯಾದ ಕಾರ್ಯತಂತ್ರಗಳು ಮತ್ತು ಸುಧಾರಣೆಗಳೊಂದಿಗೆ ಇನ್ನಷ್ಟು ಪ್ರವಾಸಿಗರನ್ನು ಆಕರ್ಷಿಸುವ ಬಗ್ಗೆ ಒತ್ತಿಹೇಳುತ್ತದೆ.

    ಹೆಚ್ಚುತ್ತಿರುವ ಬೇಡಿಕೆಯನ್ನು ಪೂರೈಸಲು ವಸತಿ ಆಯ್ಕೆಗಳನ್ನು ಹೆಚ್ಚಿಸಲು ರಾಜ್ಯ ಸರ್ಕಾರವು ಕೆಲಸ ಮಾಡುತ್ತಿದೆ. ಪ್ರಮುಖ ನಗರಗಳಲ್ಲಿ ವಸತಿ ಸೌಲಭ್ಯಗಳನ್ನು ವಿಸ್ತರಿಸುವ ಮೂಲಕ, UP ಪ್ರಯಾಣಿಕರಿಗೆ ವೈವಿಧ್ಯಮಯ ಮತ್ತು ಆರಾಮದಾಯಕ ಆಯ್ಕೆಗಳನ್ನು ಒದಗಿಸುವ ಗುರಿಯನ್ನು ಹೊಂದಿದೆ. 

    ರಾಜ್ಯವು ಆಧ್ಯಾತ್ಮಿಕ ಪ್ರವಾಸೋದ್ಯಮದ ಮೇಲೆ ಕೇಂದ್ರೀಕರಿಸಿದೆ. ಅನೇಕ ಭಕ್ತರು ಅಯೋಧ್ಯೆ, ಕಾಶಿ, ಮಥುರಾ, ನೈಮಿಶಾರಣ್ಯ ಮತ್ತು ಪ್ರಯಾಗರಾಜ್‌ನಂತಹ ಧಾರ್ಮಿಕ ಸ್ಥಳಗಳಿಗೆ ಭೇಟಿ ನೀಡುತ್ತಾರೆ. ಕೈಗಾರಿಕಾ ಅಭಿವೃದ್ಧಿಯೊಂದಿಗೆ ಪ್ರವಾಸೋದ್ಯಮವನ್ನು ಉತ್ತೇಜಿಸುವ ಅಗತ್ಯವನ್ನು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ವಿವರಿಸಿದ್ದಾರೆ. 

    ಉತ್ತರ ಪ್ರದೇಶದಲ್ಲಿರುವ ಪ್ರಮುಖ ಪ್ರವಾಸಿ ತಾಣಗಳು:
    ಅಯೋಧ್ಯೆ ರಾಮಮಂದಿರ: ಅಯೋಧ್ಯೆ ರಾಮಮಂದಿರವು ಜನವರಿ 22,2024ರಂದು ಲೋಕಾರ್ಪಣೆಗೊಂಡಿತು. ಮಂದಿರವು ಸಾಂಪ್ರದಾಯಿಕ ನಾಗರ ಶೈಲಿಯಲ್ಲಿದೆ. 380 ಅಡಿ ಉದ್ದ (ಪೂರ್ವ-ಪಶ್ಚಿಮ), 250 ಅಡಿ ಅಗಲ ಮತ್ತು 161 ಅಡಿ ಎತ್ತರವನ್ನು ಹೊಂದಿದೆ. ನಾಗರ ವಾಸ್ತುಶಿಲ್ಪವು ಉತ್ತರ ಭಾರತದಲ್ಲಿ ಹುಟ್ಟಿಕೊಂಡ ದೇವಾಲಯದ ವಾಸ್ತುಶಿಲ್ಪದ ಶೈಲಿಯಾಗಿದೆ. ಇದು ಒಟ್ಟು 392 ಕಂಬಗಳು ಮತ್ತು 44 ಬಾಗಿಲುಗಳನ್ನು ಹೊಂದಿದೆ.

    ತಾಜ್‌ ಮಹಲ್:‌ ತಾಜ್‌ ಮಹಲ್‌ ಎಂದರೆ ಅದನ್ನು ಪ್ರೀತಿಯ ಸಂಕೇತ ಎನ್ನಲಾಗುತ್ತದೆ, ವಿಶ್ವದ ಏಳು ಅದ್ಭುತಗಳಲ್ಲಿ ಒಂದಾದ ತಾಜ್ ಮಹಲ್ ದೇಶದ ಅತಿ ಹೆಚ್ಚು ಪ್ರವಾಸಿಗರ ಆಕರ್ಷಣೆಗಳಲ್ಲಿ ಒಂದಾಗಿದೆ. ಇಸ್ಲಾಮಿಕ್, ಪರ್ಷಿಯನ್ ಮತ್ತು ಭಾರತೀಯ ವಾಸ್ತುಶಿಲ್ಪದ ಸುಂದರವಾದ ಮಿಶ್ರಣವನ್ನು ಪ್ರದರ್ಶಿಸುವ ಈ ಐತಿಹಾಸಿಕ ಅದ್ಭುತ ಇದಾಗಿದೆ. ತಾಜ್‌ಮಹಲ್‌ ಅನ್ನು ಸುಮಾರು 20,000 ಕಾರ್ಮಿಕರ ಸಹಾಯದಿಂದ 22 ವರ್ಷಗಳಲ್ಲಿ ನಿರ್ಮಿಸಲಾಗಿದೆ. ತಾಜ್ ಮಹಲ್ ನಿರ್ಮಿಸಲು, ಸುಮಾರು 1,000 ಆನೆಗಳನ್ನು ಬಳಸಲಾಗಿತ್ತು. ಯುನೆಸ್ಕೋ ವಿಶ್ವ ಪರಂಪರೆಯ ತಾಣ ಮತ್ತು ವಿಶ್ವದ ಏಳು ಅದ್ಭುತಗಳಲ್ಲಿ ಒಂದಾದ ಈ ಸ್ಮಾರಕವು ವರ್ಷಪೂರ್ತಿ ವಿಶ್ವದಾದ್ಯಂತದ ದೇಶೀಯ ಮತ್ತು ಅಂತರರಾಷ್ಟ್ರೀಯ ಪ್ರವಾಸಿಗರನ್ನು ಆಕರ್ಷಿಸುತ್ತದೆ.

    ಪ್ರಯಾಗ್‌ರಾಜ್:‌ 12 ವರ್ಷಕ್ಕೊಮ್ಮೆ ಸಂಭವಿಸುವ ಮಹಾ ಕುಂಭಮೇಳಕ್ಕೆ ವಿಶ್ವದ ಮೂಲೆ ಮೂಲೆಗಳಿಂದ ಜನರ ದಂಡೇ ಇಲ್ಲಿಗೆ ಆಗಮಿಸುತ್ತದೆ. ಅಲಹಾಬಾದ್‌ನ ತ್ರಿವೇಣಿ ಸಂಗಮ ಹಿಂದೂಗಳಿಗೆ ಪ್ರಮುಖ ಯಾತ್ರಾ ಸ್ಥಳವಾಗಿದೆ. ಹಿಂದೂ ಪುರಾಣದ ಪ್ರಕಾರ, 3 ಪ್ರಮುಖ ನದಿಗಳ ಸಂಗಮವಾಗುವ ಸ್ಥಳವನ್ನು ತ್ರಿವೇಣಿ ಸಂಗಮ ಎಂದು ಕರೆಯಲಾಗುತ್ತದೆ. ಇಲ್ಲಿ ಗಂಗಾ, ಯಮುನಾ ಹಾಗು ಸರಸ್ವತಿ ನದಿಗಳು ಸಂಗಮಿಸುತ್ತದೆ.

    ಮಥುರಾ: ಕೃಷ್ಣನ ಜನ್ಮಸ್ಥಳ ಎಂದು ಕರೆಯಲ್ಪಡುವ, ಯಮುನಾ ನದಿಯ ದಡದಲ್ಲಿರುವ ಮಥುರಾ ಉತ್ತರ ಪ್ರದೇಶದ ಜಿಲ್ಲಾ ಕೇಂದ್ರ. ಇದು ಜನಪ್ರಿಯ ಪ್ರವಾಸಿ ಸ್ಥಳಗಳಲ್ಲಿ ಒಂದಾಗಿದೆ . ದೆಹಲಿ ಬಳಿ ಭೇಟಿ ನೀಡುವ ಅತ್ಯುತ್ತಮ ಸ್ಥಳಗಳಲ್ಲಿ ಒಂದಾಗಿದೆ. ಹಿಂದೂಗಳು ಪವಿತ್ರವೆಂದು ಪರಿಗಣಿಸುವ ಏಳು ನಗರಗಳಲ್ಲಿ (ಸಪ್ತಾ ಪುರಿ) ಮಥುರಾ ಕೂಡ ಒಂದು. 

    ಹೀಗೆ ಇನ್ನೂ ಅನೇಕ ಪ್ರವಾಸಿ ತಾಣಗಳನ್ನು ಉತ್ತರ ಪ್ರದೇಶ ಹೊಂದಿದೆ. ಇದನ್ನು ಇನ್ನಷ್ಟು ಅಭಿವೃದ್ಧಿಪಡಿಸಿ ಇನ್ನೂ ಹೆಚ್ಚಿನ ಪ್ರವಾಸಿಗರನ್ನು ಸೆಳೆಯುವ ಪ್ರಯತ್ನವನ್ನು ಉತ್ತರ ಪ್ರದೇಶ ಮಾಡುತ್ತಿದೆ. 

  • Ayodhya Ram Mandir: ರಾಮನೂರಿನಲ್ಲಿ ತಲೆಎತ್ತಲಿದೆ ದೇಶದ ಮೊದಲ 7 ಸ್ಟಾರ್‌ ಸಸ್ಯಹಾರಿ ಹೋಟೆಲ್‌

    Ayodhya Ram Mandir: ರಾಮನೂರಿನಲ್ಲಿ ತಲೆಎತ್ತಲಿದೆ ದೇಶದ ಮೊದಲ 7 ಸ್ಟಾರ್‌ ಸಸ್ಯಹಾರಿ ಹೋಟೆಲ್‌

    ಅಯೋಧ್ಯೆ (ಉತ್ತರ ಪ್ರದೇಶ): ದೇವನಗರಿ ಅಯೋಧ್ಯೆಯಲ್ಲಿ ರಾಮಲಲ್ಲಾ (Ayodhya Ram Lalla) ಪ್ರಾಣಪ್ರತಿಷ್ಠಾಪನೆಗೂ ಮುನ್ನವೇ ಹತ್ತು ಹಲವು ವಿಶೇಷತೆಗಳು ಕಂಡುಬರುತ್ತಿವೆ. ಪ್ರವಾಸೋದ್ಯಮಕ್ಕೂ ಹೆಚ್ಚು ಒತ್ತು ನೀಡಲಾಗುತ್ತಿದೆ. ಹಾಗಾಗಿ ಐಷಾರಾಮಿ 7 ಸ್ಟಾರ್‌ ಹೋಟೆಲ್‌ (7 Star Luxury Hotel) ತೆರೆಯಲಾಗುತ್ತಿದ್ದು, ಅದು ಸಂಪೂರ್ಣ ಸಸ್ಯಹಾರಿ ಆಹಾರ ಪದಾರ್ಥವನ್ನು ಮಾತ್ರ ಪೂರೈಸಲಿದೆ. ಇದು ದೇಶದ ಮೊದಲ ಸಸ್ಯಹಾರಿ ಐಷಾರಾಮಿ ಹೋಟೆಲ್‌ ಎನಿಸಿಕೊಳ್ಳಲಿದೆ.

    ಜ.22ರಂದು ರಾಮಮಂದಿರ ಉದ್ಘಾಟನೆಯಾಗುತ್ತಿರುವ ಹಿನ್ನೆಲೆಯಲ್ಲಿ ವೈವಿದ್ಯಮಯ ಚಟುವಟಿಕೆಗಳು ತಲೆ ಎತ್ತುತ್ತಿವೆ. ಮುಂಬೈ ಮೂಲದ ರಿಯಲ್‌ ಎಸ್ಟೇಟ್‌ ಸಂಸ್ಥೆಯು ಅಯೋಧ್ಯೆಯಲ್ಲಿ ಪಂಚತಾರಾ ಹೋಟೆಲ್‌ ಅನ್ನೂ ಸ್ಥಾಪಿಸಲಿದೆ ಎಂದು ಉನ್ನತ ಮೂಲಗಳಿಂದ ತಿಳಿದುಬಂದಿದೆ. ಇದನ್ನೂ ಓದಿ: ರಾಮಲಲ್ಲಾ ಪ್ರಾಣಪ್ರತಿಷ್ಠೆ ದಿನ ಶಾಸಕ ಅಭಯ ಪಾಟೀಲ್‌ ಕಡೆಯಿಂದ 5 ಲಕ್ಷ ಲಾಡು ವಿತರಣೆ

    ಅಯೋಧ್ಯೆ ಉದ್ಘಾಟನೆಯು ಹಲವು ಪ್ರವಾಸೋದ್ಯಮ ಚಟುವಟಿಕೆಗಳಿಗೆ ಉತ್ತೇಜನ ನೀಡಿದೆ. ಅದಕ್ಕೆ ಪೂರಕವಾಗಿ ಪ್ರವಾಸೋದ್ಯಮ ಕೇಂದ್ರಗಳನ್ನೂ ರೂಪಿಸಲಾಗುತ್ತಿದೆ. ಈಗಾಗಲೇ ನವೀಕರಿಸಿದ ರೈಲು ನಿಲ್ದಾಣ ಕಾರ್ಯಪ್ರವೃತ್ತವಾಗಿದ್ದು, ಇದೇ ಶುಕ್ರವಾರದಿಂದ ವಿಮಾನ ನಿಲ್ದಾಣ ಸೇವೆಯೂ ಆರಂಭವಾಗಲಿದೆ. ಇದರೊಂದಿಗೆ ಅಯೋಧ್ಯೆ ನಗರವನ್ನು ಸ್ಮಾರ್ಟ್‌ ಸಿಟಿ (Smart City) ಮಾಡುವ ಯೋಜನೆಯನ್ನೂ ಹಾಕಿಕೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ. ಇದನ್ನೂ ಓದಿ: ರಾಮಮಂದಿರ ನಿರ್ಮಾಣವನ್ನು 74% ಮುಸ್ಲಿಮರು ಸಂಭ್ರಮಿಸ್ತಾರೆ: ಮುಸ್ಲಿಂ ರಾಷ್ಟ್ರೀಯ ಮಂಚ್

    ಅಯೋಧ್ಯೆಯಲ್ಲಿ ಮನೆ ಕಟ್ಟಲು ಮುಂದಾದ ಅಮಿತಾಭ್:
    ಬಾಲಿವುಡ್ (Bollywood) ಖ್ಯಾತ ನಟ ಅಮಿತಾಭ್ ಬಚ್ಚನ್ (Amitabh Bachchan) ಅಯೋಧ್ಯೆಯಲ್ಲಿ (Ayodhya) ಮನೆ ಹೊಂದಲು ನಿರ್ಧರಿಸಿದ್ದು, ನಿವೇಶನ ಖರೀದಿ ಮಾಡಿದ್ದಾರೆ. ಮುಂಬೈ ಮೂಲದ ಡೆವಲಪರ್‍ ಕಂಪೆನಿಯಿಂದ ಈ ನಿವೇಶನ ಖರೀದಿ ಮಾಡಿದ್ದು, ನಿವೇಶನದ ಮೌಲ್ಯ 14.5 ಕೋಟಿ ರೂಪಾಯಿ ಎಂದು ಹೇಳಲಾಗುತ್ತಿದೆ.

    ಮೊನ್ನೆಯಷ್ಟೇ ಅಯೋಧ್ಯೆಯಲ್ಲಿ ನಡೆಯುತ್ತಿರುವ ರಾಮಮಂದಿರ ಉದ್ಘಾಟನಾ ಸಮಾರಂಭದ ಆಮಂತ್ರಣ ಪತ್ರಿಕೆ ಪಡೆದ್ದ ಅಮಿತಾಭ್, ಇದೀಗ ರಾಮನೂರಿನಲ್ಲೇ ಮನೆ ಮಾಡಲು ನಿರ್ಧಾರ ಮಾಡಿದ್ದು, ಸಹಜವಾಗಿಯೇ ಅಭಿಮಾನಿಗಳಿಗೆ ಸಂಭ್ರಮ ತಂದಿದೆ. ರಾಮ ನಿಮ್ಮನ್ನು ಕಾಪಾಡಲಿ ಎಂದು ಶುಭ ಕೋರಿದ್ದಾರೆ. ಇದನ್ನೂ ಓದಿ: ರಾಮಮಂದಿರ ಪ್ರಾಣಪ್ರತಿಷ್ಠೆಗೆ 55 ರಾಷ್ಟ್ರಗಳ 100ಕ್ಕೂ ಹೆಚ್ಚು ಗಣ್ಯರಿಗೆ ಆಹ್ವಾನ – ಯಾವ್ಯಾವ ದೇಶಕ್ಕೆ ಆಮಂತ್ರಣ?

  • #BoycottMaldives ಯಶಸ್ವಿ – EaseMyTripನಿಂದ ಮಾಲ್ಡೀವ್ಸ್‌ ಫ್ಲೈಟ್‌ ಬುಕ್ಕಿಂಗ್‌ ರದ್ದು

    #BoycottMaldives ಯಶಸ್ವಿ – EaseMyTripನಿಂದ ಮಾಲ್ಡೀವ್ಸ್‌ ಫ್ಲೈಟ್‌ ಬುಕ್ಕಿಂಗ್‌ ರದ್ದು

    – ಮೋದಿಯನ್ನು ಟೀಕಿಸಿದ್ದ 3 ಸಚಿವರು ಸಸ್ಪೆಂಡ್‌

    ನವದೆಹಲಿ/ಮಾಲೆ: #BoycottMaldives ಅಭಿಯಾನ ಯಶಸ್ವಿಯಾಗಿದ್ದು EaseMyTrip ಮಾಲ್ಡೀವ್ಸ್‌ ಫ್ಲೈಟ್‌ ಬುಕ್ಕಿಂಗ್‌ ರದ್ದು ಮಾಡಿದೆ.

    ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರನ್ನು ಟೀಕಿಸಿದ್ದಕ್ಕೆ ಭಾರತೀಯ ನೆಟ್ಟಿಗರು ಮಾಲ್ಡೀವ್ಸ್‌ ಪ್ರವಾಸವನ್ನು ರದ್ದು ಮಾಡಬೇಕೆಂದು ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡ್‌ ಸೃಷ್ಟಿಸಿದ್ದರು. ಇದಕ್ಕೆ ಬೆಂಬಲ ವ್ಯಕ್ತಪಡಿಸಿದ EaseMyTrip ಫ್ಲೈಟ್‌ ಬುಕ್ಕಿಂಗ್‌ ರದ್ದು ಮಾಡಿದೆ.

    ಭಾರತದ ಆನ್‌ಲೈನ್‌ ಟ್ರಾವೆಲ್‌ ಕಂಪನಿ EaseMyTrip ಸಿಇಒ ನಿಶಾಂತ್‌ ಪಿಟ್ಟಿ ಸಾಮಾಜಿಕ ಜಾಲತಾಣದಲ್ಲಿ ಭಾರತೀಯರಿಗೆ ಬೆಂಬಲ ವ್ಯಕ್ತಪಡಿಸುವ ಉದ್ದೇಶದಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.

    ಪ್ರಧಾನಿ ನರೇಂದ್ರ ಮೋದಿ ಅವರನ್ನು ಟೀಕಿಸಿ ಭಾರತೀಯ ನೆಟ್ಟಿಗರ ಆಕ್ರೋಶಕ್ಕೆ ಗುರಿಯಾಗಿದ್ದ ಮೂವರು ಸಚಿವರನ್ನು ಮಾಲ್ಡೀವ್ಸ್‌ ಸರ್ಕಾರ (Maldives govt) ಅಮಾನುತು ಮಾಡಿದೆ.  ಮೋದಿ ವಿರುದ್ಧ ಕೀಳು ಅಭಿರುಚಿಯುಳ್ಳ ಹೇಳಿಕೆ ನೀಡಿದ್ದ ಮಾರಿಯಂ ಶಿಯುನಾ, ಮಲ್ಲಾ ಷರೀಫ್‌ ಹಾಗೂ ಮಝೂಂ ಮಜೀದ್ ಅವರನ್ನು ಅಮಾನತು ಮಾಡಲಾಗಿದೆ.  ಇದನ್ನೂ ಓದಿ: ಮೋದಿ ಭೇಟಿ ಬಳಿಕ ಲಕ್ಷದ್ವೀಪ ಪ್ರವಾಸದತ್ತ ಭಾರತೀಯರ ಚಿತ್ತ – #BoycottMaldives ಫುಲ್‌ ಟ್ರೆಂಡ್‌

    ಮಾಲ್ಡೀವ್ಸ್‌ ಅಧ್ಯಕ್ಷ ಮೊಹಮ್ಮದ್ ಮಿಜು
    ಮಾಲ್ಡೀವ್ಸ್‌ ಅಧ್ಯಕ್ಷ ಮೊಹಮ್ಮದ್ ಮಿಜು

    ಪ್ರಧಾನಿ ಮೋದಿ ಕುರಿತಾಗಿ ಎರಡು ದೇಶಗಳ ಮಧ್ಯೆ ಬಿಕಟ್ಟು ಸೃಷ್ಟಿಯಾಗಿತ್ತು. ಸ್ವತ: ಮಾಲ್ಡೀವ್ಸ್‌ ಜನರೇ ಸಚಿವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಬೆನ್ನಲ್ಲೇ ಅಧ್ಯಕ್ಷ ಮೊಹಮ್ಮದ್ ಮಿಜು (Mohamed Muizzu) ನೇತೃತ್ವದ ಸರ್ಕಾರ ಅಮಾನತು ಮಾಡುವ ಮೂಲಕ ಶಿಸ್ತು ಕ್ರಮ ಜರುಗಿಸಿದೆ.

    ಅಮಾನತು ಯಾಕೆ?
    ಲಕ್ಷದ್ವೀಪಕ್ಕೆ ಪ್ರವಾಸ ಕೈಗೊಂಡಿದ್ದ ಪ್ರಧಾನಿ ಮೋದಿ ಸ್ನಾರ್ಕಲಿಂಗ್ ಮಾಡಿ ಅಲ್ಲಿನ ಸಮುದ್ರ ತೀರದ ಫೋಟೋ ಹಾಕಿ ಮಾಲ್ಡೀವ್ಸ್‌ಗೆ ಲಕ್ಷದ್ವೀಪ ಪರ್ಯಾಯ ಪ್ರವಾಸಿ ತಾಣವಾಗಬಹುದು ಎಂಬ ಅಭಿಪ್ರಾಯ ಸೃಷ್ಟಿಸಿದ್ದರು. ಅಷ್ಟೇ ಅಲ್ಲದೇ ಸಾಹಸಪ್ರಿಯರೆಲ್ಲ ಲಕ್ಷದ್ವೀಪಕ್ಕೆ (Lakshadweep) ಭೇಟಿ ನೀಡಿ ಎಂದು ಕರೆ ನೀಡುವ ಮೂಲಕ ಭಾರತ ವಿರೋಧಿ ಧೋರಣೆ ಬೆಳೆಸಿಕೊಳ್ಳುತ್ತಿರುವ ಮಾಲ್ಡೀವ್ಸ್‌ಗೆ ಹೋಗಬೇಡಿ ಎಂದು ಪರೋಕ್ಷವಾಗಿ ಸಂದೇಶ ರವಾನಿಸಿದ್ದರು.

    ಈ ಪೋಸ್ಟ್‌ ವೈರಲ್‌ ಆಗುತ್ತಿದ್ದಂತೆ ಮಾಲ್ಡೀವ್ಸ್‌ ಸರ್ಕಾರದ ಸಚಿವರು ಲಕ್ಷದ್ವೀಪ ಮತ್ತು ಮೋದಿಯನ್ನು ಟೀಕಿಸಿ ಅಭಿಪ್ರಾಯ ಹಂಚಿಕೊಂಡಿದ್ದರು. ಇದರಿಂದ ಕೆರಳಿದ ನೆಟ್ಟಿಗರು #BoycottMaldives ಅಭಿಯಾನ ಆರಂಭಿಸಿದ್ದರು. ಇದರ ಜೊತೆ #ExploreIndianIslands ಬಳಸಿ ಭಾರತದ ಸುಂದರ ದ್ವೀಪಗಳನ್ನು ಪರಿಚಯ ಮಾಡಿಸುವ ಟ್ರೆಂಡ್‌ ಸೃಷ್ಟಿಸಿದ್ದರು. ಇದನ್ನೂ ಓದಿ: ಲಕ್ಷದ್ವೀಪಕ್ಕೆ ಮೋದಿ ಭೇಟಿ: ಮಾಲ್ಡೀವ್ಸ್‌ಗೆ ಬಿಗ್‌ ಶಾಕ್‌

    ಸಾಮಾಜಿಕ ಜಾಲತಾಣದಲ್ಲಿ ಆರಂಭವಾದ ಈ ಟ್ರೆಂಡ್‌ ನಿಜವಾಗಿ ಫಲ ನೀಡಲು ಆರಂಭಿಸಿತು. 8 ಸಾವಿರ ಹೋಟೆಲ್‌ ಬುಕ್ಕಿಂಗ್‌, 2,500 ವಿಮಾನ ಪ್ರಯಾಣದ ಟಿಕೆಟ್‌ ರದ್ದು ಮಾಡಿ ಭಾರತೀಯ ಪ್ರವಾಸಿಗರು ಬಿಸಿ ಮುಟ್ಟಿಸಿದ್ದರು. ರದ್ದು ಮಾಡಿದ್ದು ಮಾತ್ರವಲ್ಲದೇ ರದ್ದು ಮಾಡಿದ ಟಿಕೆಟ್‌ ವಿವರಗಳನ್ನು ಸೋಶಿಯಲ್‌ ಮೀಡಿಯಾದಲ್ಲಿ ಹಾಕಿ ಮತ್ತಷ್ಟು ಟ್ರೆಂಡ್‌ ಸೃಷ್ಟಿಸಿದರು. ಇದರ ಮಾಲ್ಡೀವ್ಸ್‌ ಪ್ರವಾಸಿ ವೆಬ್‌ಸೈಟ್‌ಗಳಲ್ಲಿ ಸರ್ಕಾರದ ಸಚಿವರ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಇದಲ್ಲೆದರ ಪರಿಣಾಮ ಭಾರತೀಯ ಪ್ರವಾಸಿಗರ ಆಕ್ರೋಶಕ್ಕೆ ಮಣಿದ ಮಾಲ್ಡೀವ್ಸ್‌ ಈಗ ಸಚಿವರನ್ನು ಅಮಾನತು ಮಾಡಿದೆ.

    ಭಾರತ ವಿರೋಧಿ ಸರ್ಕಾರ:
    ಮಾಲ್ಡೀವ್ಸ್‌ಗೆ ಪ್ರವಾಸೋದ್ಯಮವೇ ಮುಖ್ಯ ಅದಾಯವಾಗಿದ್ದು, ಹೆಚ್ಚಿನ ಸಂಖ್ಯೆಯ ಭಾರತೀಯರು ಭೇಟಿ ನೀಡುತ್ತಾರೆ. ಇಲ್ಲಿಯವರೆಗೆ ಭಾರತದ ಸ್ನೇಹಿತನಾಗಿದ್ದ ಮಾಲ್ಡಿವ್ಸ್‌ನಲ್ಲಿ ಈಗ ಹೊಸ ಸರ್ಕಾರ ರಚನೆಯಾಗಿದ್ದು ಈಗ ಚೀನಾದತ್ತ ವಾಲಿದೆ. ಹೊಸ ಸರ್ಕಾರ ಅಲ್ಲಿರುವ ಸೇನೆಯನ್ನು ಹಿಂದಕ್ಕೆ ಪಡೆಯುವಂತೆ ಭಾರತಕ್ಕೆ ಸೂಚಿಸಿದೆ.

    2021ರಲ್ಲಿ 2.91 ಲಕ್ಷ, 2022ರಲ್ಲಿ 2.41 ಲಕ್ಷ ಮಂದಿ ಭಾರತೀಯರು ಮಾಲ್ಡೀವ್ಸ್‌ಗೆ ಭೇಟಿ ನೀಡಿದ್ದಾರೆ. ಮಾಲ್ಡೀವ್ಸ್‌ಗೆ ಅತಿ ಹೆಚ್ಚು ವಿದೇಶಿಗರು ಭೇಟಿ ನೀಡುವ ದೇಶಗಳ ಪೈಕಿ ಭಾರತ ಮೊದಲ ಸ್ಥಾನದಲ್ಲಿದೆ. 2023ರ ಜೂನ್‌ವರೆಗೆ 1 ಲಕ್ಷ ಮಂದಿ ಮಾಲ್ಡೀವ್ಸ್‌ಗೆ ಭೇಟಿ ನೀಡಿದ್ದಾರೆ.

    ಬಿಳಿ ಮರಳು, ಸ್ವಚ್ಛ ಬೀಚ್ ಹಾಗೂ ಹವಳದ ದಂಡೆಗಳು ಹೀಗೆ ಮಾಲ್ಡೀವ್ಸ್‌ ಮತ್ತು ಲಕ್ಷದ್ವೀಪದ ನಡುವೆ ಸಾಕಷ್ಟು ಸಾಮ್ಯತೆಗಳಿವೆ. ಈಗ ಲಕ್ಷದ್ವೀಪದಲ್ಲಿ ಮೂಲಸೌಕರ್ಯ ಸಾಕಷ್ಟು ಅಭಿವೃದ್ಧಿಯಾಗಿದ್ದು ಭಾರೀ ಸಂಖ್ಯೆಯಲ್ಲಿ ವಿದೇಶಿಗರು ಭೇಟಿ ನೀಡುತ್ತಿದ್ದಾರೆ. 2021 ರಲ್ಲಿ ಕೇವಲ 4 ಸಾವಿರ ಮಂದಿ ಭೇಟಿ ನೀಡಿದ್ದರೆ 2022ರಲ್ಲಿ ಈ ಸಂಖ್ಯೆ 1 ಲಕ್ಷಕ್ಕೆ ಏರಿಕೆಯಾಗಿದೆ.

     

  • ಶೀಘ್ರದಲ್ಲೇ ಹೊಸ ಪ್ರವಾಸೋದ್ಯಮ ನೀತಿ ಜಾರಿ: ಸಚಿವ ಹೆಚ್.ಕೆ. ಪಾಟೀಲ್

    ಶೀಘ್ರದಲ್ಲೇ ಹೊಸ ಪ್ರವಾಸೋದ್ಯಮ ನೀತಿ ಜಾರಿ: ಸಚಿವ ಹೆಚ್.ಕೆ. ಪಾಟೀಲ್

    – ಬಡವರಿಗೂ ಎಟುಕುವಂತೆ ಪ್ರವಾಸೋದ್ಯಮ ಅಭಿವೃದ್ಧಿ

    ಬೆಂಗಳೂರು: ಮುಂದಿನ ಒಂದು ತಿಂಗಳ ಒಳಗಾಗಿ ರಾಜ್ಯದಲ್ಲಿ ಹೊಸ ಪ್ರವಾಸೋದ್ಯಮ ನೀತಿ ಜಾರಿಯಾಗಲಿದೆ ಎಂದು ಪ್ರವಾಸೋದ್ಯಮ ಮತ್ತು ಸಂಸದೀಯ ವ್ಯವಹಾರಗಳ ಖಾತೆ ಸಚಿವ ಹೆಚ್.ಕೆ. ಪಾಟೀಲ್ (H.K. Patil) ತಿಳಿಸಿದರು.

    ಶುಕ್ರವಾರ ಅವರು ಚಿಕ್ಕಬಳ್ಳಾಪುರ ಜಿಲ್ಲೆಯ ಇತಿಹಾಸ ಮತ್ತು ವಿಶ್ವಪ್ರಸಿದ್ಧ ನಂದಿಗಿರಿಧಾಮದಲ್ಲಿ ಪ್ರವಾಸೋದ್ಯಮ ಇಲಾಖೆಯಿಂದ 95 ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾದ 200 ಆಸನಗಳ ಸಾಮರ್ಥ್ಯದ ಸಮ್ಮೇಳನ ಸಭಾಂಗಣವನ್ನು ಉದ್ಘಾಟಿಸಿ ಮಾತನಾಡಿದರು. ಇದನ್ನೂ ಓದಿ: ಬಿ.ಕೆ. ಹರಿಪ್ರಸಾದ್‍ರನ್ನು ರಾಜಕೀಯವಾಗಿ ಮುಗಿಸಲು ಕಾಂಗ್ರೆಸ್ ನಾಯಕರಿಂದಲೇ ಸಂಚು: ಪ್ರಣವಾನಂದ ಸ್ವಾಮೀಜಿ ಆರೋಪ

    ಇಷ್ಟು ದಿನಗಳ ಕಾಲ ಪ್ರವಾಸೋದ್ಯಮ‌ ಎಂದರೆ ಶ್ರೀಮಂತರಿಗೆ ಎಂಬ ಭಾವನೆ ಇತ್ತು. ಪ್ರವಾಸೋದ್ಯಮ ಇಲಾಖೆ ಆ ರೀತಿಯ ಅಪವಾದವನ್ನು ತೊಡೆದು ಹಾಕಿ ಶ್ರಮಿಕರನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ಪ್ರವಾಸೋದ್ಯಮದಲ್ಲಿ ಹೊಸ ಬದಲಾವಣೆ ತರಲು ಚಿಂತನೆ ನಡೆಸಿದೆ. ಕೃಷಿ, ಶಿಕ್ಷಣ ಮತ್ತು ಶ್ರದ್ಧಾ ಪ್ರವಾಸಿ ಕೇಂದ್ರಗಳನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ಅವುಗಳ ಬೆಳವಣಿಗೆಗೆ ಪೂರಕವಾಗಿ ಮತ್ತು ಸಹಕಾರಿಯಾಗಿ ಪ್ರವಾಸೋದ್ಯಮ ನೀತಿಯನ್ನು ರೂಪಿಸುವ ಅಗತ್ಯತೆಯನ್ನು ಸರ್ಕಾರ ಕಂಡುಕೊಂಡಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಹೊಸ ಪ್ರವಾಸೋದ್ಯಮ ನೀತಿಯನ್ನು ಜಾರಿ ಮಾಡಲು ನಿರ್ಧರಿಸಿದೆ. ಇನ್ನು ಒಂದು ತಿಂಗಳೊಳಗಾಗಿ ರಾಜ್ಯದಲ್ಲಿ ಹೊಸ ಪ್ರವಾಸೋದ್ಯಮ ನೀತಿ ಜಾರಿಯಾಗಲಿದೆ ಎಂದರು.

    ನಂದಿ ಬೆಟ್ಟದಲ್ಲಿ ಕೆಎಸ್‌ಡಿಟಿಸಿ ಬಂದ ಮೇಲೆ ಪ್ರವಾಸಿಗರಿಗೆ ಎಲ್ಲಿ ಏನಿದೆ ಎಂದು ತಿಳಿಯಲು ಸೂಚನಾ ಫಲಕಗಳನ್ನು ಹಾಕಲಾಗಿದೆ. ಶೌಚಾಲಯ ವ್ಯವಸ್ಥೆಯನ್ನು ಉತ್ತಮ ಗೊಳಿಸಲಾಗಿದೆ. ಬೆಟ್ಟದ ಸ್ವಚ್ಛತೆಗೆ 20 ಮಂದಿ ಸಿಬ್ಬಂದಿ ನೇಮಿಸಲಾಗಿದೆ ಎಂದು ಸಚಿವರು ತಿಳಿಸಿದರು. ಇದನ್ನೂ ಓದಿ: ನಾವು ಕಮಿಷನ್ ಹಿಂದೆ ಬಿದ್ದವರಲ್ಲ, ಭ್ರಷ್ಟರ ಬೆನ್ನು ಬಿದ್ದವರು – ಸಿಎಂ

    ನಂದಿ ಸಮಗ್ರ ಅಭಿವೃದ್ಧಿ:
    ಬ್ಯಾಂಬೊ ವಾಕ್ ವೇಯನ್ನು ಪುನರ್ ಅಭಿವೃದ್ಧಿ ಪಡಿಸಲಾಗಿದೆ. ನೆಲ್ಲಿಕಾಯಿ ಬಸವಣ್ಣ ದೇವಾಲಯವನ್ನು ಹೊಸದಾಗಿ ನವೀಕರಣ ಮಾಡಲಾಗಿದೆ. ಎಲ್ಲೆಡೆ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. 150 ಸೋಲಾರ್ ದೀಪಗಳನ್ನು ಅಳವಡಿಸಲಾಗಿದೆ. ಉತ್ತಮ ಕುಡಿಯುವ ನೀರಿನ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಪ್ರವಾಸಿಗರು ಕುಳಿತುಕೊಳ್ಳಲು ಹೊಸದಾಗಿ 50 ವಿಶ್ರಾಂತಿ ಆಸನಗಳನ್ನು ಅಳವಡಿಸಲಾಗಿದೆ. ಪಾರ್ಕಿಂಗ್ ವ್ಯವಸ್ಥೆಯನ್ನು ಉತ್ತಮ ಪಡಿಸಿ 4 ತಿಂಗಳಲ್ಲಿ ಸುಮಾರು 6 ಕೋಟಿ ಆದಾಯ ತಂದು ಕೊಡಲಾಗಿದೆ. ಮುಂದಿನ ದಿನಗಳಲ್ಲಿ ಆದಾಯ ಹೆಚ್ಚಿಸಲು ಯೋಜಿಸಲಾಗಿದೆ. ಒಟ್ಟಾರೆ ನಂದಿ ಬೆಟ್ಟವನ್ನು ಸಮಗ್ರವಾಗಿ ಅಭಿವೃದ್ಧಿಪಡಿಸಿ ಇನ್ನಷ್ಟು ಪ್ರವಾಸಿಗರನ್ನು ಆಕರ್ಷಿಸಲು ಯೋಜಿಸಲಾಗಿದೆ ಎಂದು ಹೇಳಿದರು.

    ಈ ಸಂದರ್ಭದಲ್ಲಿ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಜಗದೀಶ್, ಕೆಎಸ್‌ಟಿಡಿ ನಿಗಮದ ಸ್ಥಳೀಯ ಅಧಿಕಾರಿಗಳು ಸೇರಿದಂತೆ ಪ್ರವಾಸೋದ್ಯಮ ಮತ್ತು ಸಂಸದೀಯ ವ್ಯವಹಾರಗಳ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಪ್ರವಾಸಿಗರೇ ಹಾಂಕಾಂಗ್‌ಗೆ ಬನ್ನಿ – 5 ಲಕ್ಷ ವಿಮಾನ ಟಿಕೆಟ್ ಫ್ರೀ

    ಪ್ರವಾಸಿಗರೇ ಹಾಂಕಾಂಗ್‌ಗೆ ಬನ್ನಿ – 5 ಲಕ್ಷ ವಿಮಾನ ಟಿಕೆಟ್ ಫ್ರೀ

    ಬೀಜಿಂಗ್: ಕೊರೊನಾ ವ್ಯಾಪಕತೆಯಿಂದ ಚೇತರಿಸಿಕೊಂಡಿರುವ ವಿಶ್ವಪ್ರಸಿದ್ಧ ಪ್ರವಾಸಿ ತಾಣ ಹಾಂಕಾಂಗ್ (Hong Kong) ಇದೀಗ ಬಂಪರ್ ಆಫರ್‌ನೊಂದಿಗೆ ಪ್ರವಾಸಿಗರನ್ನ ಸ್ವಾಗತಿಸಲು ಸಜ್ಜಾಗಿದೆ. ಅದರ ಪ್ರಚಾರಾಂದೋಲನದ ಭಾಗವಾಗಿ 5 ಲಕ್ಷ ವಿಮಾನ ಪ್ರಯಾಣದ ಟಿಕೆಟ್‌ಗಳನ್ನು (Flight Tickets) ಪ್ರವಾಸಿಗರಿಗೆ ಉಚಿತವಾಗಿ ನೀಡುವುದಾಗಿಯೂ ಘೋಷಣೆ ಮಾಡಿದೆ.

    `ಹಲೋ, ಹಾಂಕಾಂಗ್’ (Hello Hong Kong) ಹೆಸರಲ್ಲಿ ಸರ್ಕಾರ ಮರು ಬ್ರ‍್ಯಾಂಡಿಂಗ್ ಅಭಿಯಾನ ಶುರುಮಾಡಿದೆ. ವಿಶ್ವದ ಪ್ರವಾಸಿಗರನ್ನ ಆಕರ್ಷಿಸುವುದು ಇದರ ಉದ್ದೇಶವಾಗಿದೆ. ಅಲ್ಲದೇ ಬರುವವರಿಗೆ `ಐಸೊಲೇಶನ್ ಆಗಲಿ, ಕ್ವಾರಂಟೈನ್ ಆಗಲಿ ಅಥವಾ ನಿರ್ಬಂಧಗಳಾಗಲಿ ಇರುವುದಿಲ್ಲ, ಪ್ರವಾಸಿಗರು ಭೇಟಿ ನೀಡಬಹುದು. ಇದನ್ನೂ ಓದಿ: ಯುದ್ಧ ವಿಮಾನಗಳನ್ನು ಕಳುಹಿಸುತ್ತೇವೆ – ಉಕ್ರೇನ್ ಬೆಂಬಲಕ್ಕೆ ನಿಂತ ಬ್ರಿಟನ್

    ಈ ಕೊಡುಗೆಯು ಮಾರ್ಚ್‌ನಲ್ಲಿ ಆರಂಭವಾಗುತ್ತದೆ. ಸ್ಥಳೀಯ ಏರ್‌ಲೈನ್ಸ್ ಕ್ಯಾಥೆ ಪೆಸಿಫಿಕ್ (Airlines Cathay Pacific), ಎಚ್‌ಕೆ ಎಕ್ಸ್‌ಪ್ರೆಸ್‌ ಮತ್ತು ಹಾಂಕಾಂಗ್ ಏರ್‌ಲೈನ್ಸ್‌ನಿಂದ (Hong Kong Airlines)ಉಚಿತ ಟಿಕೆಟ್ ವಿತರಿಸಲಾಗುತ್ತದೆ. ಬೇಸಿಗೆಯಲ್ಲಿ ಇನ್ನೂ 80,000 ಟಿಕೆಟ್‌ಗಳನ್ನು ನೀಡಲಾಗುವುದು ಎಂದು ಘೋಷಣೆ ಮಾಡಿದೆ.

    ಶೂನ್ಯ ಕೋವಿಡ್ ನೀತಿ, ಕಠಿಣ ಕ್ವಾರಂಟೈನ್ ನೀತಿಯಿಂದ ಹಾಂಕಾಂಗ್ ತತ್ತರಿಸಿತ್ತು. ಪ್ರವಾಸಿಗರು ಬಾರದ ಕಾರಣ ಇಲ್ಲಿನ ಆರ್ಥಿಕ ವ್ಯವಸ್ಥೆಯೂ ಕುಸಿದಿತ್ತು. ಈಗ ಹಾಂಕಾಂಗ್ ಕೊರೊನಾಮುಕ್ತವಾಗಿದ್ದು, ಮತ್ತೆ ಪ್ರವಾಸಿಗಳನ್ನು ಸೆಳೆಯಲು ಮುಂದಾಗಿದೆ. ಇದನ್ನೂ ಓದಿ: ಅಮೆರಿಕದ ಅಣ್ವಸ್ತ್ರ ತಾಣದ ಮೇಲೆ ಚೀನಾದ ಬೇಹುಗಾರಿಕಾ ಬಲೂನು ಹಾರಾಟ

    ಹಾಂಕಾಂಗ್ 2022ರಲ್ಲಿ ಕೇವಲ 6 ಲಕ್ಷ ಪ್ರವಾಸಿಗರು ಭೇಟಿ ನೀಡಿದ್ದರು. 2018ರ ಅಂಕಿ- ಅಂಶಕ್ಕೆ ಹೋಲಿಸಿದರೆ ಇದು ಕಡಿಮೆಯಾಗಿದೆ. ಅಲ್ಲದೇ ಕಳೆದ ವರ್ಷದ 1.40 ಲಕ್ಷಕ್ಕೂ ಹೆಚ್ಚು ಕಾರ್ಮಿಕರು ಹಾಂಗ್ ಕಾಂಗ್ ತೊರೆದಿದ್ದರು. ಕಳೆದ ಮೂರು ವರ್ಷದಲ್ಲಿ 130 ಅಂತಾರಾಷ್ಟ್ರೀಯ ಕಂಪನಿಗಳ ಕಚೇರಿ ಬಂದ್ ಆಗಿವೆ. ಇದರಿಂದ ಆರ್ಥಿಕತೆ ಶೇ.3.5 ರಷ್ಟು ಕುಗ್ಗಿತು ಎಂದು ವರದಿಯಾಗಿದೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಚಿಕ್ಕಮಗಳೂರು, ಕೊಡಗನ್ನು ಸ್ವಿಜರ್ಲ್ಯಾಂಡ್ ರೀತಿ ಬೆಳೆಸಿ – ಎಷ್ಟು ಬೇಕಾದ್ರೂ ಹಣ ಕೊಡ್ತೀವಿ: ಬೊಮ್ಮಾಯಿ

    ಚಿಕ್ಕಮಗಳೂರು, ಕೊಡಗನ್ನು ಸ್ವಿಜರ್ಲ್ಯಾಂಡ್ ರೀತಿ ಬೆಳೆಸಿ – ಎಷ್ಟು ಬೇಕಾದ್ರೂ ಹಣ ಕೊಡ್ತೀವಿ: ಬೊಮ್ಮಾಯಿ

    ಚಿಕ್ಕಮಗಳೂರು: ನಿಮಗೇನು ಸಹಾಯ ಬೇಕು ನಾನು ಮಾಡುತ್ತೇನೆ. ಎಷ್ಟು ಹಣ ಬೇಕು ನಾನು ಕೊಡುತ್ತೇನೆ. ಚಿಕ್ಕಮಗಳೂರಿನ (Chikkamagaluru) ಟೂರಿಸಂ (Tourism) ಅನ್ನು ದೊಡ್ಡ ಪ್ರಮಾಣದಲ್ಲಿ ಬೆಳೆಸಿ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಹೇಳಿದ್ದಾರೆ.

    ಬುಧವಾರ ಆರಂಭವಾದ 5 ದಿನಗಳ ಚಿಕ್ಕಮಗಳೂರು ಉತ್ಸವವನ್ನು ಉದ್ಘಾಟಿಸಿ ಜಿಲ್ಲಾಧಿಕಾರಿ ಕೆಎನ್ ರಮೇಶ್‌ಗೆ ಕಿವಿಮಾತು ಹೇಳಿರುವ ಅವರು, ಕಾಫಿನಾಡು ಚಿಕ್ಕಮಗಳೂರಿನಲ್ಲಿ ಅಂತಾರಾಷ್ಟ್ರಿಯ ಮಟ್ಟದ ಟೂರಿಸಂ ಮಾಡಲು ಅವಕಾಶವಿದೆ. ಅಡ್ವೆಂಚರ್ ಟೂರಿಸಂ ಚಿಕ್ಕಮಗಳೂರಿನಲ್ಲಿ ಬಿಟ್ಟರೆ ಮತ್ತೆಲ್ಲೂ ಮಾಡಲು ಸಾಧ್ಯವಿಲ್ಲ. ಸಣ್ಣಪುಟ್ಟದ್ದು ಮಾಡುವುದನ್ನು ಬಿಟ್ಟು ದೊಡ್ಡದ್ದನ್ನು ಮಾಡಿ. ದೊಡ್ಡ ಮಾಸ್ಟರ್ ಪ್ಲಾನ್ ಮಾಡಿ. ನಿಮಗೆ ಎಷ್ಟು ಹಣ ಬೇಕು ನಾನು ಕೊಡಲು ಸಿದ್ಧನಿದ್ದೇನೆ ಎಂದು ಭರವಸೆ ನೀಡಿದರು.

    ಸ್ವಿಜರ್ಲ್ಯಾಂಡ್ ಯಾವ ರೀತಿ ಟೂರಿಸಂ ಬೆಳೆಸಿದ್ದಾರೆ, ಅದೇ ರೀತಿ ಚಿಕ್ಕಮಗಳೂರು ಮತ್ತು ಕೊಡಗಿನಲ್ಲೂ (Kodagu) ಬೆಳೆಸಬಹುದು. ಆ ರೀತಿ ಬೆಳೆಸಬೇಕು ಅನ್ನೋದು ನನ್ನ ಇಚ್ಛೆ. ಇದಕ್ಕೆ ನನ್ನ ಸಂಪೂರ್ಣ ಬೆಂಬಲ ಇದೆ. ನಿಮಗೇನು ಬೇಕು, ಯಾವ ರೀತಿಯ ಸಪೋರ್ಟ್ ಬೇಕು ಅದಕ್ಕೆ ನಾನು ವ್ಯವಸ್ಥೆ ಕಲ್ಪಿಸುತ್ತೇನೆ ಎಂದಿದ್ದಾರೆ. ಇದನ್ನೂ ಓದಿ: ಬೆಳ್ಳಂಬೆಳಗ್ಗೆ ಹಾಸನ ಕಾರಾಗೃಹದ ಮೇಲೆ ಪೊಲೀಸರಿಂದ ದಾಳಿ – ಮೊಬೈಲ್ ಫೋನ್, ಗಾಂಜಾ ಪತ್ತೆ

    ಚಿಕ್ಕಮಗಳೂರಿನ ಟೂರಿಸಂ ಬೆಳೆಸಿ. ನಿಮಗೆ 1 ವರ್ಷ ಅವಕಾಶ ನೀಡುತ್ತೇನೆ. ಮುಂದಿನ ಚಿಕ್ಕಮಗಳೂರು ಹಬ್ಬಕ್ಕೆ ಏರ್‌ಸ್ಟ್ರಿಪ್ ಇರಬೇಕು. ನಾವು ಅಲ್ಲಿ ಇಳಿದು ಇಲ್ಲಿಗೆ ಬರಬೇಕು. ಎಲ್ಲಾ ತಯಾರಿ ಮಾಡಿ. ಇದೇ ವರ್ಷ ಮುಳ್ಳಯ್ಯನಗಿರಿಗೆ ರೋಪ್ ವೇ ಸ್ಯಾಂಕ್ಷನ್ ಮಾಡಿದ್ದೇನೆ. ಕೇಂದ್ರ ಸಚಿವ ನಿತಿನ್ ಗಡ್ಕರಿ ಕೂಡಾ ಹಣ ನೀಡುವುದಾಗಿ ಹೇಳಿದ್ದಾರೆ. ಆ ರೋಪ್ ವೇಯನ್ನು ಕೂಡಾ ಆದಷ್ಟು ಬೇಗ ಮಾಡೋಣ ಎಂದರು.

    ಕೇರಳದವರು ತಮ್ಮ ಟೂರಿಸಂಗೆ ದೇವರ ನಾಡು ಎಂದು ಟ್ಯಾಗ್‌ಲೈನ್ ಹಾಕಿದ್ದಾರೆ. ಆದರೆ ಕರ್ನಾಟಕವೇ ದೇವರು ಅತ್ಯಂತ ಇಷ್ಟಪಡುವ ರಾಜ್ಯ. ನಿಸರ್ಗ ನಮಗೆ ಆ ಮಟ್ಟಕ್ಕೆ ಕಾಣಿಕೆ ನೀಡಿದೆ. ಅದನ್ನು ನಾವು ಉಳಿಸಿ-ಬೆಳೆಸಬೇಕು ಎಂದು ಹೇಳಿದರು. ಇದನ್ನೂ ಓದಿ: ಕಲ್ಯಾಣ ಕರ್ನಾಟಕದಲ್ಲಿ ಮೋದಿ ಮತ ಭೇಟೆ – ಏನಿದು ಬಿಜೆಪಿ ರಣತಂತ್ರ?

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಐಷಾರಾಮಿ ಅನುಭವ ನೀಡುವ ಮಹಾರಾಜ ಎಕ್ಸ್‌ಪ್ರೆಸ್‌ ರೈಲು – ಟಿಕೆಟ್ ದರ ಒಬ್ಬರಿಗೆ 19 ಲಕ್ಷ

    ಐಷಾರಾಮಿ ಅನುಭವ ನೀಡುವ ಮಹಾರಾಜ ಎಕ್ಸ್‌ಪ್ರೆಸ್‌ ರೈಲು – ಟಿಕೆಟ್ ದರ ಒಬ್ಬರಿಗೆ 19 ಲಕ್ಷ

    ನವದೆಹಲಿ: ನಿತ್ಯ ಸಾಮಾನ್ಯ ರೈಲುಗಳಲ್ಲಿ (Railway) ಪ್ರಯಾಣಿಸುವಾಗ ಹಳಿಗಳ ಮೇಲಿನ ಶಬ್ಧ, ನೂಕಾಟದ ಗದ್ದಲ, ದೀರ್ಘ ಸಮಯದವರೆಗೆ ದಣಿದ ಪ್ರಯಾಣ ಎಲ್ಲ ರೀತಿಯ ಅನುಭವವೂ ಆಗುತ್ತದೆ. ಹಾಗಾಗಿಯೇ ಭಾರತೀಯ ರೈಲ್ವೆ ಇಲಾಖೆಯೂ (Indian Railway) ಪ್ರಯಾಣಿಕರ ಅನುಕೂಲಗಳಿಗೆ ತಕ್ಕಂತೆ ವಿಶೇಷ ರೈಲುಗಳ (Speical Train) ಕಡೆಗೆ ಹೆಚ್ಚಿನ ಒಲವು ತೋರುತ್ತಿದೆ.

    ಈಗಾಗಲೇ ಎಸಿ ಕೋಚ್‌ಗಳಿಗೆ ಹಾಸಿಗೆ ವ್ಯವಸ್ಥೆಗಳ ಸೌಲಭ್ಯ ಕಲ್ಪಿಸಿದೆ. ಜೊತೆಗೆ ಪ್ರಯಾಣ ಸುಲಭವಾಗಿಸಲು ಸೆಮಿ ಹೈಸ್ಪೀಡ್ ರೈಲು ವಂದೇ ಭಾರತ್ ಎಕ್ಸ್‌ಪ್ರೆಸ್‌ ಅನ್ನೂ ಅನುಷ್ಠಾನಕ್ಕೆ ತಂದಿದೆ. ಇದೀಗ ಲಕ್ಷ-ಲಕ್ಷ ಹಣ ಕೊಟ್ಟು ಮಹಾರಾಜನಂತೆ ಪ್ರಯಾಣಿಕರು ಪ್ರವಾಸ ಕೈಗೊಳ್ಳುವ ಅವಕಾಶ ರೈಲ್ವೆ ಇಲಾಖೆ ಕಲ್ಪಿಸಿದೆ. ಅದಕ್ಕಾಗಿ ಮಹಾರಾಜ ಎಕ್ಸ್‌ಪ್ರೆಸ್‌ ವಿಶೇಷ ರೈಲು (Maharajas Express) ಸೇವೆಯನ್ನು ಜಾರಿಗೊಳಿಸಿದೆ. ಇದನ್ನೂ ಓದಿ: ಇನ್ಮುಂದೆ ಎಸಿ ರೈಲು ಕೋಚ್‌ಗಳಿಗೆ ವಿಶೇಷ ಸೌಲಭ್ಯ – ಸೆ.20ರಿಂದಲೇ ಜಾರಿ

    ಹೌದು.. ಭಾರತೀಯ ರೈಲ್ವೆ ಕ್ಯಾಟರಿಂಗ್ ಮತ್ತು ಟೂರಿಸಂ ಕಾರ್ಪೊರೇಷನ್ (IRCTC) ನಿರ್ವಹಿಸುವ ಮಹಾರಾe ಎಕ್ಸ್‌ಪ್ರೆಸ್‌ ರೈಲು ಅತ್ಯಂತ ಐಷಾರಾಮಿ ಅನುಭವವನ್ನು ನೀಡುತ್ತದೆ. ಬರುವ ಅತಿಥಿಗಳಿಗೆ ಸ್ವರ್ಗ ಲೋಕವನ್ನೇ ತೆರೆದಿರುತ್ತದೆ. ದಿ ಇಂಡಿಯನ್ ಪನೋರೋಮಾ, ಟ್ರೆಷರ್ಸ್ ಆಫ್ ಇಂಡಿಯಾ, ದಿ ಇಂಡಿಯನ್ ಸ್ಪ್ಲೆಂಡರ್ ಮತ್ತು ದಿ ಹೆರಿಟೇಜ್ ಆಫ್ ಇಂಡಿಯಾ ನಾಲ್ಕು ವಿಭಾಗಗಳಲ್ಲಿ ಈ ಐಷಾರಾಮಿ ರೈಲು ಸಂಚರಿಸಲಿದ್ದು, ಪ್ರಯಾಣಿಕರು ಯಾವುದಾರೂ ಒಂದನ್ನು ಆಯ್ಕೆ ಮಾಡಿಕೊಂಡು 7 ದಿನಗಳ ಪ್ರವಾಸ ಮಾಡಬಹುದಾಗಿದೆ. ಅತ್ಯಾಧುನಿಕ ಸೇವೆಗಳೂ ಇದರಲ್ಲಿ ಲಭ್ಯವಿರಲಿದೆ. ಆದ್ರೆ ಒಬ್ಬರಿಗೆ ಟಿಕೆಟ್ ದರ 19 ಲಕ್ಷ ರೂ. ಇರಲಿದೆ (GST ಸೇರಿ 19,90,800 ರೂ.) ಎಂದು ಐಆರ್‌ಸಿಟಿಸಿ ಹೇಳಿದೆ.

    ವಿಶೇಷತೆ ಏನಿದೆ?
    ಒಂದು ಕೋಚ್‌ನಲ್ಲಿ ಡೈನಿಂಗ್ ಹಾಲ್, ಸ್ನಾನಗೃಹ ಹಾಗೂ ಎರಡು ಐಷಾರಾಮಿ ಬೆಡ್‌ರೂಮ್‌ಗಳು, ಎರಡು ದೊಡ್ಡ ಕಿಟಕಿಗಳು ಇರಲಿವೆ. ಪ್ರತಿ ಪ್ಯಾಸೆಂಜರ್‌ಗೂ ಪ್ರತ್ಯೇಕ ಬಟ್ಲರ್‌ಗಳ ಸೇವೆಗೆ ಮೀಸಲಾಗಿರುತ್ತದೆ. ಮಿನಿ ಬಾರ್, ಎಸಿ ಹಾಗೂ ವೈ-ಫೈ ಸೌಲಭ್ಯ, ಇಂಟರ್‌ನೆಟ್, ಟಿವಿ ಹಾಗೂ ತಮ್ಮಿಷ್ಟದ ಸಿನಿಮಾಗಳನ್ನು ನೋಡಲು ಡಿವಿಡಿ ಪ್ಲೇಯರ್‌ಗಳ ಅತ್ಯಾಧುನಿಕ ಸೌಲಭ್ಯಗಳು ಇರುತ್ತವೆ. ಇದು ಭಾರತೀಯ ರೈಲ್ವೆಯಲ್ಲೇ ಅತ್ಯಂತ ದುಬಾರಿ ಟಿಕೆಟ್ ಕೋಚ್ ಆಗಿದೆ. ಇದನ್ನೂ ಓದಿ: ಜೂನ್ 30ರವರೆಗೆ ರೈಲ್ವೇ ಟಿಕೆಟ್ ಬುಕ್ಕಿಂಗ್ ರದ್ದು – ವಿಶೇಷ ರೈಲುಗಳು ಓಡುತ್ತೆ

    ಜಾಲತಾಣದಲ್ಲಿ ಬಳಕೆದಾರರೊಬ್ಬರು ಮಹಾರಾಜ ಎಕ್ಸ್‌ಪ್ರೆಸ್‌ ರೈಲಿನ ವಿಶೇಷತೆಯ ವೀಡಿಯೋ ಹಂಚಿಕೊಂಡಿದ್ದು, ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಹಾಗೆಯೇ ಟೀಕೆಗಳೂ ಕೇಳಿಬಂದಿವೆ. ಇದಕ್ಕೆ ಪ್ರತಿಕ್ರಿಯಿಸಿರುವ ನೆಟ್ಟಿಗರು, ನಾನು ಆ ದರದಲ್ಲಿ ಆಸ್ತಿಯನ್ನೇ ಖರೀದಿಸುತ್ತೇನೆ ಅಂದಿದ್ದಾರೆ. ಮತ್ತೊಬ್ಬರು ಈ ಮೊತ್ತದಲ್ಲಿ ನಾನು ನ್ಯೂಯಾರ್ಕ್ ನಗರ ಅಥವಾ ವಿದೇಶದಲ್ಲಿ ಯಾವುದೇ ದೇಶಕ್ಕೆ ಭೇಟಿ ನೀಡಬಹುದು. ಅದರ ಹೊರತಾಗಿಯೂ ಹಣ ಉಳಿಯುತ್ತದೆ ಎಂದು ಪ್ರತಿಕ್ರಿಯಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಗುಡ್‌ನ್ಯೂಸ್ – ಭಾರತೀಯರಿಗೆ ಜರ್ಮನ್ ವೀಸಾ ಶುಲ್ಕ ಕಡಿತ

    ಗುಡ್‌ನ್ಯೂಸ್ – ಭಾರತೀಯರಿಗೆ ಜರ್ಮನ್ ವೀಸಾ ಶುಲ್ಕ ಕಡಿತ

    ಮುಂಬೈ: ಭಾರತೀಯ ನಾಗರಿಕರಿಗೆ (Indians) ವೀಸಾಗಳ ಶುಲ್ಕ ಕಡಿತಗೊಳಿಸಿರುವುದಾಗಿ ಮುಂಬೈನಲ್ಲಿರುವ ಜರ್ಮನ್ (Germany) ರಾಯಭಾರ ಕಚೇರಿಯು ಘೋಷಿಸಿದೆ.

    ಹೊಸ ನಿಯಮಗಳ ಅನ್ವಯ ಭಾರತೀಯರಿಗೆ ಅಲ್ಪಾವಧಿ ವೀಸಾ ಹಾಗೂ ನ್ಯಾಷನಲ್ ವೀಸಾಗಳ (National Visa) ಶುಲ್ಕವನ್ನು ಕಡಿಮೆ ಮಾಡಿದೆ. ಅಲ್ಪಾವಧಿ ಹಾಗೂ ನ್ಯಾಷನಲ್ ವೀಸಾಗಳು ಗರಿಷ್ಠ 90 ದಿನಗಳ ವರೆಗೆ ಉಳಿಯಲು ಅನುಮತಿಸುತ್ತದೆ. ಜರ್ಮನಿಯಲ್ಲಿ ತಮ್ಮ ಅಧ್ಯಯನ ಮುಂದುವರಿಸುವ ವಿದ್ಯಾರ್ಥಿಗಳಿಗೆ (Students) ನ್ಯಾಷನಲ್ ವೀಸಾಗಳು ಸಹಾಯಕವಾಗಲಿದೆ. ಇದನ್ನೂ ಓದಿ: ಚಿಕ್ಕಬಳ್ಳಾಪುರದಲ್ಲಿ ನಾಗಮಂಟಪ ಉದ್ಘಾಟನೆ – ಜನವರಿಯಲ್ಲಿ ಆದಿಯೋಗಿ ಪ್ರತಿಮೆ ಲೋಕಾರ್ಪಣೆ

    ಅಲ್ಪಾವಧಿ ವೀಸಾಗೆ ವಯಸ್ಕರಿಗೆ 6,400 ರೂ.(80 ಡಾಲರ್), ಅಪ್ರಾಪ್ತರಿಗೆ 3,200 ರೂ. (40 ಡಾಲರ್) ಇರಲಿದ್ದು, ನ್ಯಾಷನಲ್ ವೀಸಾಕ್ಕೆ ವಯಸ್ಕರಿಗೆ 6 ಸಾವಿರ ರೂ (75 ಡಾಲರ್) ಹಾಗೂ ಅಪ್ರಾಪ್ತರಿಗೆ 3 ಸಾವಿರ ರೂ. (37.50 ಡಾಲರ್) ಗಳಷ್ಟು ಶುಲ್ಕ ಇರಲಿದೆ ಎಂದು ರಾಯಭಾರ ಕಚೇರಿ ಹೇಳಿದೆ.

    Live Tv
    [brid partner=56869869 player=32851 video=960834 autoplay=true]

  • ಕೊಡಗಿನಲ್ಲಿ 3ನೇ ಸಾಕಾನೆ ಶಿಬಿರ ಲೋಕಾರ್ಪಣೆ – ಹಾರಂಗಿ ವಿಶೇಷತೆ ಏನು?

    ಕೊಡಗಿನಲ್ಲಿ 3ನೇ ಸಾಕಾನೆ ಶಿಬಿರ ಲೋಕಾರ್ಪಣೆ – ಹಾರಂಗಿ ವಿಶೇಷತೆ ಏನು?

    ಮಡಿಕೇರಿ: ಪ್ರವಾಸಿಗರ ಸ್ವರ್ಗ, ಹಚ್ಚ ಹಸಿರ ಬೆಟ್ಟ ಗುಡ್ಡಗಳ ಸುಂದರ ಪ್ರಕೃತಿಯ ತವರು ಕೊಡಗಿನಲ್ಲಿ(Kodagu) ಮೂರನೇ ಸಾಕಾನೆ ಶಿಬಿರ(Elephant Camp)ಲೋಕಾರ್ಪಣೆಗೊಂಡಿದೆ.

    ಜಿಲ್ಲೆಯಲ್ಲಿ ಇಲ್ಲಿಯವರೆಗೆ ದುಬಾರೆ ಹಾಗೂ ಮತ್ತಿಗೋಡಿನಲ್ಲಿ ಸಾಕಾನೆ ಶಿಬಿರಗಳಿದ್ದವು. ಈ ಸಾಲಿಗೆ ಈಗ ಹಾರಂಗಿ(Harangi) ಸಾಕಾನೆ ಶಿಬಿರವೂ ಸೇರ್ಪಡೆಗೊಂಡಿದೆ.

    ದುಬಾರೆ ಸಾಕಾನೆ ಶಿಬಿರದಲ್ಲಿ(Dubare Elephant Camp) ಬರೋಬ್ಬರಿ 32 ಸಾಕಾನೆಗಳಿತ್ತು. ಆದರೆ ಇಷ್ಟೊಂದು ಆನೆಗಳ ಒತ್ತಡ ತಡೆದುಕೊಳ್ಳಲು ಆ ಶಿಬಿರಕ್ಕೆ ಸಾಧ್ಯವಾಗುತ್ತಿರಲಿಲ್ಲ. ಅಷ್ಟೇ ಅಲ್ಲದೇ ಸಾಕಾನೆ ಶಿಬಿರದಲ್ಲಿ ಇಂತಿಷ್ಟೇ ಆನೆಗಳಿರಬೇಕು ಎಂಬ ಸುಪ್ರಿಂ ಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಹೊಸ ಸಾಕಾನೆ‌ ಶಿಬಿರವನ್ನು ತೆರೆಯಲಾಗಿದೆ. ಈಗಾಗಲೇ ದುಬಾರೆಯಿಂದ 7 ಸಾಕಾನೆಗಳನ್ನು ಶಿಫ್ಟ್ ಮಾಡಲಾಗಿದೆ.

    ಮತ್ತಿಗೋಡು, ದುಬಾರೆ ಸಾಕಾನೆ ಶಿಬಿರಗಳಿಗಿಂತ ವಿಭಿನ್ನವಾಗಿದೆ ಈ ಹಾರಂಗಿ ಸಾಕಾನೆ ಶಿಬಿರ. ಈ ಸಾಕಾನೆ ಶಿಬಿರ ಹಾರಂಗಿ ಜಲಾಶಯದ ಹಿನ್ನೀರಿನ ಸುಂದರ ಪ್ರಕೃತಿಯ ಮಡಿಲಲ್ಲಿ ಇರುವುದು ವಿಶೇಷ. ಸುಮಾರು 2 ಸಾವಿರ ಎಕ್ರೆ ವಿಶಾಲವಾದ ಅರಣ್ಯ ಪ್ರದೇಶದಲ್ಲಿ ಈ ಶಿಬಿರವನ್ನು ತೆರೆಯಲಾಗಿದೆ. ಇದನ್ನೂ ಓದಿ: ಅಂದು ಬ್ರಿಟಿಷರ ತರಕಾರಿ ತೋಟ, ಇಂದು ವಿಶ್ವ ಪ್ರಸಿದ್ಧ ಪ್ರವಾಸಿ ಗಾರ್ಡನ್‌

     

    ಹಿನ್ನೀರು ಪ್ರದೇಶದಲ್ಲಿ ಆನೆಗಳ ಮಜ್ಜನ, ಆನೆಗಳ ಆಹಾರ, ಆನೆ ಸವಾರಿ ಮೊದಲಾದ ಚಟುವಟಿಕೆಗಳಿವೆ. ಶಿಬಿರದಲ್ಲಿ ಬಗೆ ಬಗೆಯ ಮರಗಳ ವೃಕ್ಷೋಧ್ಯಾನ ತಲೆ ಎತ್ತುತ್ತಿದೆ. ಜೊತೆಗೆ ಮಕ್ಕಳಿಗೆ ಆಡವಾಡಲು ಪ್ರತ್ಯೇಕ ಆಟದ ಸ್ಥಳಾವಕಾಶವಿದೆ. ಅಷ್ಟೇ ಅಲ್ಲದೇ ಬೋಟಿಂಗ್ ಅನುಭವ ಕೂಡ ಇಲ್ಲಿ ಸಿಗಲಿದೆ.

    ಜಲಾಶಯದ ಹಿನ್ನೀರು ಪ್ರದೇಶದಲ್ಲಿ ಕುಳಿತು ಸೂರ್ಯಾಸ್ತಮಾನದ ದೃಶ್ಯವನ್ನು ಕಣ್ತುಂಬಿಕೊಳ್ಳಬಹುದು. ಈ ನೂತನ ಶಿಬಿರದಿಂದ ಸ್ಥಳೀಯ ವ್ಯಾಪಾರ ಉದ್ಯಮಕ್ಕೂ ಪುನಶ್ಚೇತನ ಸಿಗಲಿದೆ. ಕೊಡಗು ಪ್ರವಾಸೋದ್ಯಮಕ್ಕೆ(Kodagu Tourism) ಮತ್ತೊಂದು ಗರಿ ಎಂಬಂತೆ ಸೇರ್ಪಡೆಯಾಗಿರುವ ಹಾರಂಗಿ ಸಾಕಾನೆ ಶಿಬಿರ ಮತ್ತಷ್ಟು ಪ್ರವಾಸಿಗರನ್ನು ಆಕರ್ಷಿಸುವುದರಲ್ಲಿ ಎರಡು ಮಾತಿಲ್ಲ.

    Live Tv
    [brid partner=56869869 player=32851 video=960834 autoplay=true]

  • ಕೊಡಚಾದ್ರಿ ಸೇರಿದಂತೆ ದೇಶದ 18 ಕಡೆ ರೋಪ್‌ವೇ ನಿರ್ಮಿಸಲು ಕೇಂದ್ರ ಯೋಜನೆ

    ಕೊಡಚಾದ್ರಿ ಸೇರಿದಂತೆ ದೇಶದ 18 ಕಡೆ ರೋಪ್‌ವೇ ನಿರ್ಮಿಸಲು ಕೇಂದ್ರ ಯೋಜನೆ

    ನವದೆಹಲಿ: ಉಡುಪಿಯ (Udupi) ಕೊಡಚಾದ್ರಿ ಬೆಟ್ಟ (Kodachadri Hill) ಸೇರಿದಂತೆ ದೇಶಾದ್ಯಂತ ಸುಮಾರು 18 ಕಡೆಗಳಲ್ಲಿ ರೋಪ್‌ವೇ (Ropeway) ಯೋಜನೆಯನ್ನು ಪ್ರಾರಂಭಿಸಲು ಕೇಂದ್ರ ಸರ್ಕಾರ ಮುಂದಾಗಿದೆ.

    ಕರ್ನಾಟಕದ ಕೊಡಚಾದ್ರಿ ಬೆಟ್ಟಕ್ಕೆ ಸುಮಾರು 7 ಕಿ.ಮೀ ಉದ್ದದ ರೋಪ್‌ವೇಯನ್ನು ನಿರ್ಮಿಸಲು ಕೇಂದ್ರ ಯೋಜಿಸಿದೆ. ಇದರೊಂದಿಗೆ ಜಮ್ಮು ಮತ್ತು ಕಾಶ್ಮೀರ, ಈಶಾನ್ಯ ರಾಜ್ಯಗಳಾದ ತ್ರಿಪುರಾ, ಅರುಣಾಚಲ ಪ್ರದೇಶ, ಮಣಿಪುರ, ತಮಿಳುನಾಡು, ಆಂಧ್ರಪ್ರದೇಶ, ತಮಿಳುನಾಡು, ಲೇಹ್, ಸೇರಿದಂತೆ ಒಟ್ಟು 18 ಕಡೆಗಳಲ್ಲಿ ರೋಪ್‌ವೇ ನಿರ್ಮಾಣದ ಯೋಜನೆ ಒಳಗೊಂಡಿದೆ.

    ಜಮ್ಮು ಮತ್ತು ಕಾಶ್ಮೀರದಲ್ಲಿ ಬೆಟ್ಟದ ಮೇಲಿರುವ ಪ್ರಾಚೀನ ಶಂಕರಾಚಾರ್ಯ ದೇವಾಲಯಕ್ಕೆ 1 ಕಿ.ಮೀ ಉದ್ದದ ರೋಪ್‌ವೇ, ಜಮ್ಮು ಪ್ರದೇಶದ ಮಾತಾ ವೈಷ್ಣೋ ದೇವಿ ದೇವಸ್ಥಾನದ ಬಳಿ ಶಿವಖೋರಿ ದೇವಸ್ಥಾನದವರೆಗೆ 2 ಕಿ.ಮೀ, ಪುಣೆಯ ರಾಜ್‌ಗಡ್ ಕೋಟೆಗೆ 1.4 ಕಿ.ಮೀ, ಆಂಧ್ರಪ್ರದೇಶದ ಶ್ರೀಶೈಲಂ ದೇವಸ್ಥಾನಕ್ಕೆ 2.3 ಕಿ.ಮೀ, ತೆಲಂಗಾಣದ ಈಗಳಪೆಂಟಾದಿಂದ ಕೃಷ್ಣಾ ನದಿಗೆ ಅಡ್ಡಲಾಗಿ, ಉತ್ತರ ಪ್ರದೇಶದ ಗಾಜಿಯಾಬಾದ್‌ನ ವೈಶಾಲಿ ಮೆಟ್ರೋ ನಿಲ್ದಾಣದಿಂದ ಮೋಹನ್ ನಗರ ಮೆಟ್ರೋ ನಿಲ್ದಾಣದವರೆಗೆ 10 ಕಿ.ಮೀ ಉದ್ದದ ರೋಪ್‌ವೇ ನಿರ್ಮಾಣದ ಬಗ್ಗೆಯೂ ಕೇಂದ್ರ ಮುಂದಾಗಿದೆ. ಇದನ್ನೂ ಓದಿ: ರಿಲಯನ್ಸ್ ಆಸ್ಪತ್ರೆಯನ್ನು ಸ್ಫೋಟಿಸುತ್ತೇನೆ- ಮುಖೇಶ್ ಅಂಬಾನಿ, ಕುಟುಂಬಸ್ಥರಿಗೆ ಜೀವ ಬೆದರಿಕೆ

    ರೋಪ್‌ವೇ ಯೋಜನೆ ಯಾಕೆ?
    ರೋಪ್‌ವೇ ಯೋಜನೆ ಕೇಬಲ್ ಕಾರ್‌ಗಳ (Cable Car) ಮೂಲಕ ಗಂಟೆಗೆ ಸುಮಾರು 6,000-8,000 ಪ್ರಯಾಣಿಕರನ್ನು ಸಾಗಿಸುವ ಸಾಮರ್ಥ್ಯ ಹೊಂದಿದೆ. ಇದು ಗುಡ್ಡಗಾಡು ಪ್ರದೇಶದಲ್ಲಿಯೂ ನೇರ ರೇಖೆಯಲ್ಲಿ ನಿರ್ಮಿಸಬಹುದಾಗಿದೆ. ಇವು ಗಂಟೆಗೆ 15-30 ಕಿ.ಮೀ ವೇಗದಲ್ಲಿ ಸಾಗಬಲ್ಲುದಾಗಿದ್ದು, ಮೂಲ ಹಾಗೂ ಗಮ್ಯಸ್ಥಾನವನ್ನು ಸಂಪರ್ಕಿಸುವ ದೂರ ರಸ್ತೆ ಮಾರ್ಗಗಳಿಗಿಂತ ಕಡಿಮೆಯಾಗುತ್ತದೆ. ರೋಪ್‌ವೇಗಳು ಪ್ರವಾಸೋದ್ಯಮಕ್ಕೆ, ಗುಡ್ಡಗಾಡು ಪ್ರದೇಶಗಳಲ್ಲಿ ಪ್ರಯಾಣಕ್ಕೆ ಉತ್ತಮವಾಗಿರುವುದು ಮಾತ್ರವಲ್ಲದೇ ಆಕರ್ಷಕ ಸಾರಿಗೆ ವಿಧಾನವೂ ಆಗಿದೆ. ಇದನ್ನೂ ಓದಿ: ಸೇನೆಯ ಚೀತಾ ಹೆಲಿಕಾಪ್ಟರ್ ಪತನ- ಪೈಲಟ್ ಹುತಾತ್ಮ

    Live Tv
    [brid partner=56869869 player=32851 video=960834 autoplay=true]