Tag: tourism

  • ಆಂಧ್ರ ಪ್ರವಾಸೋದ್ಯಮ ಕ್ಷೇತ್ರದಲ್ಲಿ ಕ್ರಾಂತಿಕಾರಿ ಬದಲಾವಣೆ – ಮನೆ ಬಾಗಿಲಿಗೇ ಬರಲಿದೆ ಕ್ಯಾರವಾನ್

    ಆಂಧ್ರ ಪ್ರವಾಸೋದ್ಯಮ ಕ್ಷೇತ್ರದಲ್ಲಿ ಕ್ರಾಂತಿಕಾರಿ ಬದಲಾವಣೆ – ಮನೆ ಬಾಗಿಲಿಗೇ ಬರಲಿದೆ ಕ್ಯಾರವಾನ್

    ಪ್ರವಾಸೋದ್ಯಮ (Tourism) ಕ್ಷೇತ್ರದಲ್ಲಿ ಮತ್ತೊಂದು ಕ್ರಾಂತಿಕಾರಿ ಬದಲಾವಣೆ ತರಲು ಆಂಧ್ರ (Andhra Pradesh) ಸರ್ಕಾರ ಮುಂದಾಗಿದೆ. ಪ್ರವಾಸಿಗರ ಮನೆಗಳಿಗೆ ತಲುಪುವ ‘ಕ್ಯಾರವಾನ್ ಪ್ರವಾಸಿ ವಾಹನಗಳು’ ಶೀಘ್ರದಲ್ಲೇ ರಾಜ್ಯದಲ್ಲಿ ಜಾರಿಗೆ ಬರಲಿವೆ. ಈ ಯೋಜನೆಯ ಮೂಲಕ ಪ್ರವಾಸಿಗರು ತಮ್ಮ ಮನೆಗಳಿಂದ ಪ್ರವಾಸಿ ತಾಣಗಳಿಗೆ ಹಾಯಾಗಿ ಪ್ರಯಾಣಿಸಬಹುದಾಗಿದೆ. ಈ ಹೊಸ ಕಲ್ಪನೆಗೆ ಅನುಗುಣವಾಗಿ ರಾಜ್ಯ ಸರ್ಕಾರವು ವಿಶೇಷ ಕ್ಯಾರವಾನ್ (Caravan) ನೀತಿಯನ್ನೂ ಸಿದ್ಧಪಡಿಸುತ್ತಿದೆ. ಹಾಗಿದ್ರೆ ಏನಿದು ಕ್ಯಾರಾವಾನ್‌? ಪ್ರವಾಸಿಗರಿಗೆ ಇದು ಹೇಗೆ ಪ್ರಯೋಜನಕಾರಿ? ಕ್ಯಾರಾವಾನ್‌ ವಿಶೇಷತೆಗಳೇನು ಎಂಬ ಕುರಿತು ಇಲ್ಲಿ ವಿವರಿಸಲಾಗಿದೆ.

    ಆಂಧ್ರಪ್ರದೇಶ ಸರ್ಕಾರವು ಪ್ರವಾಸೋದ್ಯಮ ಮತ್ತು ನಗರಾಭಿವೃದ್ಧಿಗೆ ಹೊಸ ಹಾದಿಯನ್ನು ರೂಪಿಸುತ್ತಿದೆ. ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು (Chandrababu Naidu) ಅವರ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ, ಕ್ಯಾರವಾನ್ ಪ್ರವಾಸೋದ್ಯಮ ನೀತಿಯನ್ನು ಪ್ರಾರಂಭಿಸುವುದು, ಚಾಲಕರಿಗೆ ನೇರ ಹಣಕಾಸು ನೆರವು ಮತ್ತು ದೊಡ್ಡ ಪ್ರಮಾಣದ ನಗರ ಮೂಲಸೌಕರ್ಯ ಯೋಜನೆಗಳು ಸೇರಿದಂತೆ ಹಲವಾರು ಪ್ರಮುಖ ಯೋಜನೆಗಳಿಗೆ ಅನುಮೋದನೆ ನೀಡಲಾಗಿದೆ. ಆಂಧ್ರಪ್ರದೇಶ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ (APTDC) ಸಹಯೋಗದೊಂದಿಗೆ ಓಜಿ ಡ್ರೀಮ್‌ಲೈನರ್ ಕಂಪನಿಯು ವಿಶಾಖಪಟ್ಟಣದಲ್ಲಿ ಐಷಾರಾಮಿ ಕ್ಯಾರವಾನ್ ಅನ್ನು ಪ್ರಾರಂಭಿಸಿದೆ.

    ಒಂದೇ ಕಡೆ ಎಲ್ಲಾ ವ್ಯವಸ್ಥೆ:
    ಈ ಮೊದಲು ಪ್ರವಾಸಿಗರು ವಸತಿ ಮತ್ತು ಪ್ರಯಾಣಕ್ಕಾಗಿ ಪ್ರತ್ಯೇಕ ವ್ಯವಸ್ಥೆಗಳನ್ನು ಮಾಡಬೇಕಾಗಿತ್ತು. ಆದರೆ, ಕ್ಯಾರವಾನ್ ವಾಹನಗಳ ಮೂಲಕ ಪ್ರಯಾಣ, ವಸತಿ ಮತ್ತು ಆಹಾರ ಒಂದೇ ಸ್ಥಳದಲ್ಲಿ ಲಭ್ಯವಾಗಲಿದೆ. ಇವು ಆಧುನಿಕ ಸೌಲಭ್ಯಗಳನ್ನು ಹೊಂದಿರುವ ‘ಮೊಬೈಲ್ ಮನೆಗಳು’ ಇದ್ದಂತೆ. ಪ್ರವಾಸಿಗರು ಈ ವಾಹನಗಳನ್ನು ಬುಕ್ ಮಾಡಿ ಅರಕು, ಲಂಬಸಿಂಘಿ, ಗಂಡಿಕೋಟ, ಸೂರ್ಯಲಂಕಾ ಬೀಚ್, ಶ್ರೀಶೈಲಂ ಮತ್ತು ತಿರುಪತಿಯಂತಹ ಸ್ಥಳಗಳಿಗೆ ತಮ್ಮ ಮನೆಗಳಿಂದಲೇ ಪ್ರಯಾಣಿಸಬಹುದು.

    ವಿಶೇಷವಾಗಿ ಕುಟುಂಬ ಅಥವಾ ಸ್ನೇಹಿತರೊಂದಿಗೆ ದೀರ್ಘ ಪ್ರಯಾಣ ಮತ್ತು ರಸ್ತೆ ಪ್ರಯಾಣಕ್ಕೆ ಕ್ಯಾರವ್ಯಾನ್‌ಗಳು ಸೂಕ್ತ. ಮಲಗಲು ಹಾಸಿಗೆ, ಅಡುಗೆ ಮಾಡಲು ಸಣ್ಣ ಅಡುಗೆಮನೆ, ಶೌಚಾಲಯ ಮತ್ತು ಕುಳಿತುಕೊಳ್ಳಲು ವ್ಯವಸ್ಥೆ ಸೇರಿದಂತೆ ಆರಾಮದಾಯಕ ಪ್ರಯಾಣಕ್ಕೆ ಅಗತ್ಯವಿರುವ ಎಲ್ಲಾ ಸೌಲಭ್ಯಗಳನ್ನು ಅವು ಹೊಂದಿವೆ. ಕ್ಯಾರವ್ಯಾನ್‌ನ ಒಳ ವಿನ್ಯಾಸ ಸಾಮಾನ್ಯವಾಗಿ ಸರಳವಾಗಿದೆ.ಇದು ಕ್ಯಾಂಪ್, ಪಿಕ್ನಿಕ್ ಮುಂತಾದ ದೀರ್ಘ ಪ್ರಯಾಣಕ್ಕೆ ಸೂಕ್ತವಾಗಿದೆ.

    ಕುಟುಂಬ, ಸ್ನೇಹಿತರು ಅಥವಾ ಸಂಬಂಧಿಕರೊಂದಿಗೆ ಪ್ರವಾಸಿ ತಾಣಗಳಿಗೆ ಭೇಟಿ ನೀಡಲು ಕ್ಯಾರವಾನ್ ಬಸ್‌ಗಳು ಅನುಕೂಲಕರವಾಗಿವೆ. ಸುಮಾರು 10 ರಿಂದ 15 ಜನರು ಏಕಕಾಲದಲ್ಲಿ ಆರಾಮವಾಗಿ ಪ್ರಯಾಣಿಸಬಹುದು. ನಾವು ಉಪಾಹಾರದಿಂದ ಭೋಜನದವರೆಗೆ ಎಲ್ಲವನ್ನೂ ಒದಗಿಸುತ್ತೇವೆ. ಅತಿಥಿಗಳು ವಿಶೇಷ ಭಕ್ಷ್ಯಗಳನ್ನು ಬಯಸಿದರೆ, ಅವುಗಳನ್ನೂ ವ್ಯವಸ್ಥೆ ಮಾಡುತ್ತೇವೆ. ಪ್ರತಿ ಪ್ರವಾಸಕ್ಕೂ ಮಾರ್ಗದರ್ಶಿ ಜೊತೆಗಿರುತ್ತಾರೆ. ಶೀಘ್ರದಲ್ಲೇ ಪ್ಯಾಕೇಜ್‌ಗಳನ್ನು ಘೋಷಿಸುತ್ತೇವೆ ಎಂದು ಓಜಿ ಡ್ರೀಮ್‌ಲೈನರ್‌ ಕಂಪನಿಯ ಸಿಇಓ ಶಿವಾಜಿ ತಿಳಿಸಿದ್ದಾರೆ.

    2029ರ ವೇಳೆಗೆ 150 ಕ್ಯಾರವಾನ್‌ಗಳು:
    ಆಂಧ್ರ ಸರ್ಕಾರವು 2029ರ ವೇಳೆಗೆ 150 ಕ್ಯಾರವಾನ್ ವಾಹನಗಳು ಮತ್ತು 25 ಕ್ಯಾರವಾನ್ ಪಾರ್ಕ್‌ಗಳನ್ನು ಸ್ಥಾಪಿಸುವ ಗುರಿಯನ್ನು ಹೊಂದಿದೆ.. ಆರಂಭದಲ್ಲಿ ಈ ವಾಹನಗಳನ್ನು ಖಾಸಗಿ ನಿರ್ವಾಹಕರು ನಿರ್ವಹಿಸುತ್ತಾರೆ. ಸರ್ಕಾರವು ಅವರಿಗೆ ತೆರಿಗೆ ವಿನಾಯಿತಿ ಮತ್ತು SGST ಮರುಪಾವತಿಯಂತಹ ಅನೇಕ ಪ್ರೋತ್ಸಾಹಕಗಳನ್ನು ಒದಗಿಸುತ್ತಿದೆ.

    ಖಾಸಗಿ ನಿರ್ವಾಹಕರಿಗೆ ವಿಶೇಷ ರಿಯಾಯಿತಿಗಳು:
    ಕ್ಯಾರವಾನ್ ಪಾಲಿಸಿಯಡಿಯಲ್ಲಿ ಮೊದಲ 25 ವಾಹನಗಳಿಗೆ 100%  Life Tax Exemption (ರೂ. 3 ಲಕ್ಷದವರೆಗೆ), ಮುಂದಿನ 13 ವಾಹನಗಳಿಗೆ 50% ರಿಯಾಯಿತಿ (ರೂ. 2 ಲಕ್ಷದವರೆಗೆ) ಹಾಗೂ ಇನ್ನೂ 12 ವಾಹನಗಳಿಗೆ 25% ರಿಯಾಯಿತಿ (ರೂ. 1 ಲಕ್ಷದವರೆಗೆ) ನೀಡಲಾಗುತ್ತದೆ. ಇದರ ಜೊತೆಗೆ ಏಳು ವರ್ಷಗಳ ಕಾಲ SGST ಮರುಪಾವತಿ ಸೌಲಭ್ಯವನ್ನು ಒದಗಿಸಲಾಗುವುದು. ಇದು ಖಾಸಗಿ ನಿರ್ವಾಹಕರು ಕ್ಯಾರವಾನ್ ವಲಯದಲ್ಲಿ ಹೂಡಿಕೆ ಮಾಡಲು ಪ್ರೋತ್ಸಾಹಿಸುತ್ತದೆ ಎಂದು ಅಧಿಕಾರಿಗಳು ಆಶಿಸಿದ್ದಾರೆ.

    ಕ್ಯಾರವಾನ್ ಪಾರ್ಕ್‌ಗಳಿಗೆ ವಿಶೇಷ ಪ್ರೋತ್ಸಾಹ:
    ಆಂಧ್ರ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ (ಎಪಿಟಿಡಿಸಿ) ಕ್ಯಾರವಾನ್ ಪಾರ್ಕ್‌ಗಳನ್ನು ಸ್ಥಾಪಿಸಲು ಭೂಮಿಯನ್ನು ಹಂಚಿಕೆ ಮಾಡುತ್ತದೆ. ಈ ಉದ್ಯಾನವನಗಳು ಕ್ಯಾರವಾನ್‌ಗಳಿಗೆ ಪಾರ್ಕಿಂಗ್ ಸೌಲಭ್ಯಗಳು, ವಸತಿ, ಆಹಾರ ಮತ್ತು ಪ್ರವಾಸಿಗರಿಗೆ ಇತರ ಸೌಲಭ್ಯಗಳನ್ನು ಒಳಗೊಂಡಿರುತ್ತವೆ. ಮೊದಲ ಹಂತದಲ್ಲಿ, ಗಂಡಿಕೋಟ, ಅರಕು, ಸೂರ್ಯಲಂಕಾ ಬೀಚ್, ನಾಗಾರ್ಜುನಸಾಗರ ಮತ್ತು ಶ್ರೀಶೈಲಂನಂತಹ ಪ್ರಮುಖ ಪ್ರವಾಸಿ ತಾಣಗಳಲ್ಲಿ ಉದ್ಯಾನವನಗಳನ್ನು ಸ್ಥಾಪಿಸುವ ಸಾಧ್ಯತೆಯಿದೆ.

    ಪ್ರಸ್ತುತ ರಾಜ್ಯದಲ್ಲಿ ಸ್ವದೇಶ್ ದರ್ಶನ್ 2.0, ಸಾಸ್ಕಿಯಾ ಯೋಜನೆಗಳು ಮತ್ತು ಗಮ್ಯಸ್ಥಾನ ಅಭಿವೃದ್ಧಿ ಯೋಜನೆಗಳನ್ನು ಜಾರಿಗೆ ತರಲಾಗುತ್ತಿದೆ.
    -ಗಂಡಿಕೋಟ ಮತ್ತು ಗೋದಾವರಿ ಪ್ರದೇಶಗಳ ಅಭಿವೃದ್ಧಿಗೆ 172.35 ಕೋಟಿ ರೂ.
    -ಅರಕು, ಲಂಬಸಿಂಗಿ ಮತ್ತು ಸೂರ್ಯಲಂಕಾ ಕಡಲತೀರಗಳ ಅಭಿವೃದ್ಧಿಗೆ 127.39 ಕೋಟಿ ರೂ.
    -ಅಹೋಬಿಲಂ ಮತ್ತು ನಾಗಾರ್ಜುನಸಾಗರ ಯೋಜನೆಗಳಿಗೆ 49.49 ಕೋಟಿ ರೂ.
    ಈ ಯೋಜನೆಗಳ ಪ್ರವಾಸೋದ್ಯಮ ಮೌಲ್ಯವನ್ನು ಹೆಚ್ಚಿಸುವಲ್ಲಿ ಕ್ಯಾರವಾನ್ ವಾಹನಗಳು ಪ್ರಮುಖ ಪಾತ್ರ ವಹಿಸುತ್ತವೆ.

    ದರ ಎಷ್ಟು?
    ಒಬ್ಬ ವ್ಯಕ್ತಿಯು ಸುಮಾರು 2,500 ರೂ. ಪಾವತಿಸಿದರೆ, ಪೂರ್ಣ ದಿನ ಪ್ರಯಾಣಿಸಬಹುದು ಮತ್ತು ರಾತ್ರಿ ವಾಸ್ತವ್ಯವನ್ನು ಆನಂದಿಸಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ, ಅಂತಿಮ ಬೆಲೆ ಓಜಿ ಡ್ರೀಮ್‌ಲೈನರ್ ಮತ್ತು ಆಂಧ್ರಪ್ರದೇಶ ಪ್ರವಾಸೋದ್ಯಮ ಇಲಾಖೆಯ ನಡುವಿನ ಒಪ್ಪಂದವನ್ನು ಅವಲಂಬಿಸಿರುತ್ತದೆ.

    ವಿಶೇಷ ಸೌಲಭ್ಯಗಳು:
    – ಈ ಕ್ಯಾರವಾನ್ ವಾಹನಗಳು ಸಣ್ಣ ಬಸ್ಸಿನ ಗಾತ್ರವನ್ನು ಹೊಂದಿವೆ.
    – 2-6 ಜನರಿಗೆ ಅವಕಾಶ ಕಲ್ಪಿಸಲು ವಿನ್ಯಾಸಗೊಳಿಸಲಾಗಿದೆ.
    – ಹಾಸಿಗೆಗಳು, ಊಟಕ್ಕೆ ಜಾಗವಿದೆ.
    – ಗ್ಯಾಸ್ ಸ್ಟೌವ್, ಇಂಡಕ್ಷನ್ ಕುಕ್ಕರ್, ಫ್ರಿಡ್ಜ್, ಮೈಕ್ರೋವೇವ್ ಓವನ್ ವ್ಯವಸ್ಥೆ ಇದೆ.
    – ಕುಡಿಯುವ ನೀರಿನ ಟ್ಯಾಂಕ್, ಸಿಂಕ್, ಸ್ನಾನಗೃಹ, ಶೌಚಾಲಯ, ಶವರ್, ವಾಶ್ ಬೇಸಿನ್ ಇರಲಿದೆ.
    – ಏರ್ ಕಂಡೀಷನರ್, ಹೀಟರ್, ವೈ-ಫೈ, ದೂರದರ್ಶನವಿದೆ.
    – ಜಿಪಿಎಸ್ ಟ್ರ್ಯಾಕಿಂಗ್, ಅಗ್ನಿಶಾಮಕಗಳು, ಪ್ರಥಮ ಚಿಕಿತ್ಸಾ ಕಿಟ್ ಇರಲಿದೆ.

    ಕ್ಯಾರವಾನ್‌ಗಳು ಪ್ರಯಾಣಿಸುವ ಆರಂಭಿಕ ಮಾರ್ಗಗಳು:
    ವಿಶಾಖಪಟ್ಟಣಂ – ಅರಕು
    ವಿಶಾಖಪಟ್ಟಣಂ – ಲಂಬಸಿಂಗಿ
    ವಿಜಯವಾಡ – ಗಂಡಿಕೋಟ
    ವಿಜಯವಾಡ – ಸೂರ್ಯಲಂಕಾ ಬೀಚ್
    ವಿಜಯವಾಡ – ನಾಗಾರ್ಜುನಸಾಗರ
    ವಿಜಯವಾಡ – ಶ್ರೀಶೈಲಂ
    ವಿಜಯವಾಡ – ತಿರುಪತಿ

    ಹೋಂ-ಸ್ಟೇ ವಸತಿ ಸೌಲಭ್ಯಗಳನ್ನು ಹೊಂದಿರುವ ಈ ಕ್ಯಾರವಾನ್‌ಗಳು ರಾಜ್ಯದ ಪ್ರವಾಸೋದ್ಯಮ ವಲಯವನ್ನು ಅಂತಾರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ಯುತ್ತವೆ. ಕೇರಳ, ಗೋವಾ ಮತ್ತು ಕರ್ನಾಟಕದಂತೆಯೇ, ಆಂಧ್ರಪ್ರದೇಶವೂ ಈಗ ಕ್ಯಾರವಾನ್ ಪ್ರವಾಸೋದ್ಯಮದಲ್ಲಿ ಸ್ಥಾನ ಪಡೆಯಲಿದೆ.

  • ದ.ಕ.-ಉಡುಪಿ ಜಿಲ್ಲೆಗಳ ಪ್ರವಾಸಿ ತಾಣಗಳ ಅಭಿವೃದ್ಧಿಗೆ ಸರ್ಕಾರದಿಂದ ‘ಮಾಸ್ಟರ್ ಪ್ಲಾನ್’!

    ದ.ಕ.-ಉಡುಪಿ ಜಿಲ್ಲೆಗಳ ಪ್ರವಾಸಿ ತಾಣಗಳ ಅಭಿವೃದ್ಧಿಗೆ ಸರ್ಕಾರದಿಂದ ‘ಮಾಸ್ಟರ್ ಪ್ಲಾನ್’!

    -ಶಾಸಕ ಮಂಜುನಾಥ ಭಂಡಾರಿ ಮನವಿಗೆ ಸಚಿವರ ಸ್ಪಂದನೆ

    ಬೆಂಗಳೂರು: ವಿಧಾನ ಪರಿಷತ್ ಕಲಾಪದಲ್ಲಿ ಶಾಸಕ ಮಂಜುನಾಥ ಭಂಡಾರಿಯವರು (Manjunath Bhandari) ಪಶ್ಚಿಮ ಘಟ್ಟದಿಂದ ಹರಿಯುವ ನದಿಗಳು, ಜಲಪಾತಗಳು, ಕಡಲ ತೀರಗಳು ಹಾಗೂ ಧಾರ್ಮಿಕ ಕ್ಷೇತ್ರಗಳನ್ನು ಹೊಂದಿರುವ ದಕ್ಷಿಣ ಕನ್ನಡ (Dakshina Kannada) ಮತ್ತು ಉಡುಪಿ (Udupi) ಜಿಲ್ಲೆಯ ಪ್ರವಾಸಿ ತಾಣಗಳ (Tourist Place) ಅಭಿವೃದ್ಧಿಗಾಗಿ ಈ ಪ್ರದೇಶವನ್ನುʼಟೂರಿಸಂ ಹಬ್ʼ ಆಗಿ ರೂಪಿಸಲು ಮಾಸ್ಟರ್ ಪ್ಲಾನ್ ತಯಾರಿಸುವ ಕುರಿತಂತೆ ಸರ್ಕಾರದ ಗಮನಕ್ಕೆ ತಂದಿದ್ದು, ಸರ್ಕಾರವು ಈ ಕುರಿತು ನೀಡಿರುವ ಭರವಸೆಯ ಹಿನ್ನೆಲೆಯಲ್ಲಿ ಇಂದು ನಡೆದ ಸರ್ಕಾರಿ ಭರವಸೆಗಳ ಸಮಿತಿ ಸಭೆಯಲ್ಲಿ ಈ ವಿಷಯವನ್ನು ಚರ್ಚಿಸಲಾಯಿತು.

    ಈ ಕುರಿತು ಶೀಘ್ರವೇ ಎರಡು ಜಿಲ್ಲೆಗಳಲ್ಲಿ ಪ್ರತ್ಯೇಕವಾಗಿ ಸಭೆ ಕರೆಯಲಾಗುವುದು. ಜಿಲ್ಲೆಗಳಲ್ಲಿ ಸಭೆ ನಡೆಸಲು ಜಿಲ್ಲಾಧಿಕಾರಿಗಳೇ ಮುಖ್ಯಸ್ಥರಾಗಿರುವುದರಿಂದ ಅವರ ಮೂಲಕ ಸಭೆ ಕರೆದು ಅದಕ್ಕೆ ಸದಸ್ಯರನ್ನು ಆಹ್ವಾನಿಸಿ, ಪ್ರವಾಸೋದ್ಯಮ ಚಟುವಟಿಕೆ ಗಳಿಗಾಗಿ ಅನುದಾನವನ್ನು ವಿನಿಯೋಗಿಸುವ ಬಗ್ಗೆ ಯೋಜನೆ ಮಾಡಲಾಗುವುದು ಮತ್ತು ʼರಿವರ್ ಫೆಸ್ಟ್ರವಲ್ʼ ಬಗ್ಗೆ ಅನುದಾನ ಬಿಡುಗಡೆ ಮಾಡಲಾಗುವುದು ಎಂದು ಪ್ರವಾಸೋದ್ಯಮ ಜೀವಿಶಾಸ್ತ್ರ ಸಚಿವರು ತಿಳಿಸಿದ್ದಾರೆ.

    ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಕಡಲ ತೀರದ ಪ್ರವಾಸೋದ್ಯಮ ಅಭಿವೃದ್ಧಿಗೆ ಕರಾವಳಿ ಬೀಚ್ ಪ್ರವಾಸೋದ್ಯಮ ಕಾರ್ಯಪಡೆಯನ್ನು ರಚಿಸುವ ಹಾಗೂ ಕಡಲ ತೀರದ ಸಮಗ್ರ ಅಭಿವೃದ್ಧಿಗಾಗಿ ವಿಸ್ತ್ರತ ಯೋಜನೆಯನ್ನು ತಯಾರಿಸಲು ಸರ್ಕಾರದ ಆದೇಶ ಸಂಖ್ಯೆ: ಟಿಓಆ‌ರ್/154/ಟಿಡಿಪಿ/2023, ಬೆಂಗಳೂರು 21.08.2024ರಂದು ಅನುಮೋದನೆಯನ್ನು ನೀಡಿರುತ್ತದೆ.

    ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಕಡಲ ತೀರದ ಪ್ರವಾಸೋದ್ಯಮ ಅಭಿವೃದ್ಧಿ ಹಾಗೂ ರಸ್ತೆ ಬದಿ ಸೌಲಭ್ಯಗಳನ್ನು ಉನ್ನತೀಕರಿಸುವ ಮೂಲಕ ಶೈಕ್ಷಣಿಕ, ಆರೋಗ್ಯ, ಸಾಹಸ, ಪರಿಸರ, ಜಲಸಾರಿಗೆ ಹಾಗೂ ಕಡಲ ತೀರದ ಪ್ರವಾಸೋದ್ಯಮಗಳಿಗೆ ಲಭ್ಯವಿರುವ ಅವಕಾಶಗಳನ್ನು ಉಪಯೋಗಿಸಿಕೊಳ್ಳಲಾಗುವುದು ಎಂದು ಘೋಷಿಸಲಾಗಿದೆ. ಸರ್ಕಾರದ ಆದೇಶ ಸಂಖ್ಯೆ ಟಿಒಆರ್ 56 ಟಿಡಿಪಿ 2025, 23-07-2025 ಘೋಷಣೆಯನ್ನು ಅನುಷ್ಠಾನಗೊಳಿಸುವ ಪ್ರಸ್ತಾವನೆಗೆ ತಾತ್ವಿಕ ಅನುಮೋದನೆ ನೀಡಿದೆ.

    ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ತಣ್ಣೀರುಬಾವಿ ಕಡಲ ತೀರದಲ್ಲಿ ರೆಸಾರ್ಟ್ ನಿರ್ಮಾಣ ಕಾಮಗಾರಿಗೆ ಸಂಬಂಧಿಸಿದಂತೆ ಸಮಗ್ರ ಯೋಜನಾ ವರದಿಯನ್ನು ಸಿದ್ಧಪಡಿಸಲು ಸಮಾಲೋಚಕ ಸಂಸ್ಥೆಯನ್ನು ಆಯ್ಕೆ ಮಾಡಲು ಟೆಂಡರ್ ಪ್ರಕಟಿಸಲಾಗಿದ್ದು, ಸದರಿ ಟೆಂಡರ್ನ ತಾಂತ್ರಿಕ ಬಿಡ್ಡನ್ನು ದಿನಾಂಕ ಆ.7 ರಂದು ತೆರೆಯಲಾಗಿದ್ದು, ಸದರಿ ಟೆಂಡರ್ ನಲ್ಲಿ 3 ಬಿಡ್ಡುದಾರರು ಭಾಗವಹಿಸಿದ್ದು, ಸದರಿ ಬಿಡ್ಡುದಾರರಿಗೆ ತಾಂತ್ರಿಕ ಪ್ರಾತ್ಯಕ್ಷಿಕೆ ಆ.29 ರಂದು ಆಯೋಜಿಸಿದ್ದು, ಸದರಿ ಬಿಡ್ ಪರಿಶೀಲನಾ ಹಂತದಲ್ಲಿರುತ್ತದೆ.

    ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ಕೋಡಿಕಲ್, ಗುರುಪುರ ನದಿ ತೀರದಲ್ಲಿ ರೆಸಾರ್ಟ್ ನಿರ್ಮಾಣ ಕಾಮಗಾರಿಗೆ ಸಂಬಂಧಿಸಿದಂತೆ ವಹಿವಾಟು ಸಲಹೆಗಾರರನ್ನು ಆಯ್ಕೆ ಮಾಡಿಕೊಳ್ಳಲು Infrastructure Development Ports and inland Water Transport Department Government of karnataka (IDP & IWTD) ರವರೊಂದಿಗೆ ಏಂಪ್ಯಾನಲ್ ಆಗಿರುವ ಸಂಸ್ಥೆಗಳಿಗೆ ಮಾತ್ರ ಟೆಂಡರ್ ಪ್ರಕಟಿಸಿದ್ದು, ಸದರಿ ಟೆಂಡರ್ ನ Pre-Bid ಸಭೆಯಲ್ಲಿ ಏಂಪ್ಯಾನಲ್ಡ್ ಬಿಡ್ಡುದಾರರಿಗೆ ಪ್ರಕಟಿಸಿರುವ ಟೆಂಡರ್ ಬದಲಿಗೆ ಒಪನ್ ಟೆಂಡ‌ರ್ ಅನ್ನು ಪ್ರಕಟಿಸಿರುವಂತೆ ಬಿಡ್ಡುದಾರ ಸಂಸ್ಥೆಗಳು ಕೋರಿರುತ್ತಾರೆ. ಆದ್ದರಿಂದ ಸದರಿ ಟೆಂಡ‌ರ್ ಅನ್ನು ರದ್ದುಪಡಿಸಿದ್ದು, ಮತ್ತೊಮ್ಮೆ ಅತ್ಯಂತ ಜರೂರಾಗಿ ಟೆಂಡರ್ (Open Tender) ಅನ್ನು ಮರುಪ್ರಕಟಿಸಲಾಗಿದ್ದು, ಸದರಿ ಟೆಂಡರ್‌ನ ತಾಂತ್ರಿಕ ಬಿಡ್ಡನ್ನು ಸೆ.12ರಂದು ತೆರೆಯಲಾಗುವುದು.

    ಉಡುಪಿ ಜಿಲ್ಲೆಯ ಸದರಿ ಮೂರು ಪ್ರವಾಸಿ ತಾಣಗಳನ್ನು ಅಭಿವೃದ್ಧಿಪಡಿಸಲು ಸಂಬಂಧಿಸಿದಂತೆ ವಹಿವಾಟು ಸಲಹೆಗಾರರನ್ನು ಆಯ್ಕೆ ಮಾಡಿಕೊಳ್ಳಲು Infrastructure Development Ports and inland Water Transport Department Government of karnataka (IDP & IWTD) ಎಂಪ್ಯಾನಲ್ ಆಗಿರುವ ಸಂಸ್ಥೆಗಳಿಗೆ ಮಾತ್ರ ಟೆಂಡರ್ ಪ್ರಕಟಿಸಿದ್ದು, ಸದರಿ ಟೆಂಡರ್ Pre-Bid ಸಭೆಯಲ್ಲಿ ಏಂಪ್ಯಾನಲ್ಡ್ ಬಿಡ್ಡುದಾರರಿಗೆ ಪ್ರಕಟಿಸಿರುವ ಟೆಂಡ‌ರ್ ಬದಲಿಗೆ ಒಪನ್ ಟೆಂಡರ್ ಅನ್ನು ಪ್ರಕಟಿಸಿರುವಂತೆ ಬಿಡುದಾರ ಸಂಸ್ಥೆಗಳು ಕೋರಿರುತ್ತಾರೆ. ಆದ್ದರಿಂದ ಸದರಿ ಟೆಂಡರ್ ಅನ್ನು ರದ್ದುಪಡಿಸಿದ್ದು, ಮತ್ತೊಮ್ಮೆ ಅತ್ಯಂತ ಜರೂರಾಗಿ ಟೆಂಡರ್ (Open Tender) ಅನ್ನು ಮರುಪ್ರಕಟಿಸಲಾಗಿದ್ದು, ಸದರಿ ಟೆಂಡರ್ ತಾಂತ್ರಿಕ ಬಿಡ್ಡನ್ನು ಸೆ.12ರಂದು ತೆರೆಯಲಾಗುವುದು ಎಂದು ಪ್ರವಾಸೋದ್ಯಮ ಇಲಾಖೆ ಸಚಿವರು ತಿಳಿಸಿದ್ದಾರೆ.

  • ಯಾವೆಲ್ಲ ದೇಶಗಳಿಗೆ ವೀಸಾ ಮುಕ್ತ ಚೀನಾ ಪ್ರವೇಶ? ಪ್ರವಾಸಿಗರನ್ನು ಸೆಳೆಯಲು ಕಾರಣಗಳೇನು?

    ಯಾವೆಲ್ಲ ದೇಶಗಳಿಗೆ ವೀಸಾ ಮುಕ್ತ ಚೀನಾ ಪ್ರವೇಶ? ಪ್ರವಾಸಿಗರನ್ನು ಸೆಳೆಯಲು ಕಾರಣಗಳೇನು?

    ಚೀನಾವು (China) ತನ್ನ ದೇಶಕ್ಕೆ ಪ್ರವಾಸಿಗರನ್ನು ಸೆಳೆಯಲು 75 ದೇಶಗಳಿಗೆ ವೀಸಾ (Visa) ನೀತಿಯನ್ನು ಸಡಿಲಗೊಳಿಸಿದೆ. ಹೌದು ಚೀನಾವು ಪ್ರವಾಸೋದ್ಯಮ, ಆರ್ಥಿಕತೆಯನ್ನು ಹೆಚ್ಚಿಸಲು 75 ದೇಶಗಳ ಪ್ರವಾಸಿಗರು ವೀಸಾ ಇಲ್ಲದೆ 30 ದಿನಗಳವರೆಗೆ ಇರಲು ಅವಕಾಶ ನೀಡುವ ಮೂಲಕ ಪ್ರವಾಸಿಗರನ್ನು (Tourists) ಸೆಳೆಯಲು ವಿನೂತನ ಕ್ರಮ ಕೈಗೊಂಡಿದೆ.

    ಮಹಾಮಾರಿ ಕೊರೋನಾದ ಚೀನಾವು ತತ್ತರಿಸಿ ಹೋಗಿತ್ತು. ಅಲ್ಲದೇ ವಿದೇಶಗರ ಭೇಟಿ ನಿರ್ಬಂಧ ಹೇರಿತ್ತು. ಬಳಿಕ ಕೋವಿಡ್‌-19 ನ ನಿರ್ಬಂಧಗಳನ್ನು ತೆಗೆದುಹಾಕಿದ ನಂತರ, ಚೀನಾ 2023ರ ಆರಂಭದಲ್ಲಿ ಪ್ರವಾಸಿಗರಿಗೆ ತನ್ನ ಗಡಿಗಳನ್ನು ಮತ್ತೆ ತೆರೆಯಿತು. ಆದರೆ ಆ ವರ್ಷದಲ್ಲಿ ಕೇವಲ 13.8 ಮಿಲಿಯನ್ ಅಂದರೆ 1 ಕೋಟಿಯ 35 ಲಕ್ಷ ಜನರಷ್ಟೇ ಭೇಟಿ ನೀಡಿದ್ದರು.

    ಕೊರೋನಾ ಕಾಲಿಡುವ ಮೊದಲು ಅಂದರೆ 2019ರಲ್ಲಿ 31.9 ಮಿಲಿಯನ್ ಅಂದರೆ 3 ಕೋಟಿ 19 ಲಕ್ಷದಷ್ಟು ಜನರು ಭೇಟಿ ನೀಡಿದ್ದರು. 2019ರಲ್ಲಿ ಭೇಟಿ ನೀಡಿದ ಪ್ರವಾಸಿಗರ ಸಂಖ್ಯೆಯ ಅರ್ಧಕ್ಕಿಂತ ಕಡಿಮೆ ಜನರು 2023ರಲ್ಲಿ ಭೇಟಿ ನೀಡಿದ್ದರು. ಹೀಗಾಗಿ ಪ್ರವಾಸಿಗರನ್ನು ತನ್ನತ್ತ ಸೆಳೆಯಲು ವೀಸಾ ಮುಕ್ತ ಪ್ರವೇಶ ಎಂದು ವಿನೂತನ ಕ್ರಮವನ್ನು ಕೈಗೊಂಡಿದೆ.

    ಯಾವೆಲ್ಲ ದೇಶಗಳಿಗೆ ವೀಸಾ ಮುಕ್ತ ಪ್ರವೇಶ?
    ಡಿಸೆಂಬರ್ 2023ರಲ್ಲಿ, ಚೀನಾ ಫ್ರಾನ್ಸ್, ಜರ್ಮನಿ, ಇಟಲಿ, ನೆದರ್ಲ್ಯಾಂಡ್ಸ್, ಸ್ಪೇನ್ ಮತ್ತು ಮಲೇಷ್ಯಾದ ನಾಗರಿಕರಿಗೆ ವೀಸಾ-ಮುಕ್ತ ಪ್ರವೇಶವನ್ನು ಘೋಷಿಸಿತ್ತು. ಅಂದಿನಿಂದ ಬಹುತೇಕ ಎಲ್ಲಾ ಯುರೋಪನ್ನು ಸೇರಿಸಲಾಗಿದೆ. ಐದು ಲ್ಯಾಟಿನ್ ಅಮೆರಿಕನ್ ದೇಶಗಳು ಮತ್ತು ಉಜ್ಬೇಕಿಸ್ತಾನ್‌ನಿಂದ ಪ್ರಯಾಣಿಕರಿಗೆ ಕಳೆದ ತಿಂಗಳು ಅರ್ಹತೆ ನೀಡಲಾಗಿತ್ತು. ನಂತರ ಮಧ್ಯಪ್ರಾಚ್ಯದ 4 ದೇಶದವರಿಗೆ ವೀಸಾ ಮುಕ್ತ ಪ್ರವೇಶದ ಅವಕಾಶ ನೀಡಿದೆ. ಜುಲೈ 16 ರಂದು ಅಜರ್ಬೈಜಾನ್ ಸೇರ್ಪಡಿಸಲಾಗಿದ್ದು, ಒಟ್ಟು 75 ದೇಶಗಳಿಗೆ ವೀಸಾ ಮುಕ್ತ ಪ್ರವೇಶಕ್ಕೆ ಅವಕಾಶ ನೀಡಿದೆ.

    ಸುಮಾರು ಮೂರನೇ ಎರಡರಷ್ಟು ದೇಶಗಳಿಗೆ ಒಂದು ವರ್ಷದ ಪ್ರಾಯೋಗಿಕ ಆಧಾರದ ಮೇಲೆ ವೀಸಾ-ಮುಕ್ತ ಪ್ರವೇಶವನ್ನು ನೀಡಲಾಗಿದೆ. ಚೀನಾದೊಂದಿಗೆ ಆಫ್ರಿಕಾ ಖಂಡವು ನಿಕಟ ಸಂಬಂಧವನ್ನು ಹೊಂದಿದ್ದರೂ, ಆಫ್ರಿಕಾದ ಯಾವ ದೇಶವು ವೀಸಾ-ಮುಕ್ತ ಪ್ರವೇಶಕ್ಕೆ ಅರ್ಹವಾಗಿಲ್ಲ.

    ವೀಸಾ-ಮುಕ್ತ ಯೋಜನೆಯಲ್ಲಿಲ್ಲದ 10 ದೇಶಗಳವರಿಗೆ ಇನ್ನೊಂದು ಆಯ್ಕೆ:
    ಜೆಕ್ ರಿಪಬ್ಲಿಕ್, ಲಿಥುವೇನಿಯಾ, ಸ್ವೀಡನ್, ರಷ್ಯಾ, ಯುನೈಟೆಡ್ ಕಿಂಗ್‌ಡಮ್, ಉಕ್ರೇನ್, ಇಂಡೋನೇಷ್ಯಾ, ಕೆನಡಾ, ಯುಎಸ್ ಮತ್ತು ಮೆಕ್ಸಿಕೊ ದೇಶಗಳಿಗೆ ಚೀನಾ ವೀಸಾ-ಮುಕ್ತ ಪ್ರವೇಶಕ್ಕೆ ಅವಕಾಶ ನೀಡಿಲ್ಲ. ಆದರೆ ಆ ದೇಶಗಳಿಗೆ ಚೀನಾವು ಮತ್ತೊಂದು ಅವಕಾಶವನ್ನು ನೀಡಿದೆ. ಆ ದೇಶದ ಪ್ರವಾಸಿಗರು ಬೇರೆ ದೇಶಕ್ಕೆ ಹೊರಟರೆ 10 ದಿನಗಳವರೆಗೆ ಚೀನಾವನ್ನು ಪ್ರವೇಶಿಸಬಹುದು. ಚೀನಾದ ರಾಷ್ಟ್ರೀಯ ವಲಸೆ ಆಡಳಿತದ ಪ್ರಕಾರ, ಈ ನೀತಿಯು 60 ಪ್ರವೇಶ ದ್ವಾರಗಳಿಗೆ ಸೀಮಿತವಾಗಿದೆ.

    ಯುಕೆ ಹೊರತುಪಡಿಸಿ, ಸ್ವೀಡನ್ ಮಾತ್ರ 30 ದಿನಗಳ ಪಟ್ಟಿಯಲ್ಲಿ ಸ್ಥಾನ ಪಡೆಯದ ಏಕೈಕ ಹೆಚ್ಚಿನ ಆದಾಯದ ಯುರೋಪಿಯನ್ ದೇಶವಾಗಿದೆ. ಆಡಳಿತಾರೂಢ ಚೀನೀ ಕಮ್ಯುನಿಸ್ಟ್ ಪಕ್ಷವು 2020ರಲ್ಲಿ ಸ್ವೀಡನ್‌ನ ಪುಸ್ತಕ ಮಾರಾಟಗಾರ ಗುಯಿ ಮಿನ್ಹೈಗೆ 10 ವರ್ಷಗಳ ಜೈಲು ಶಿಕ್ಷೆ ವಿಧಿಸಿದಾಗಿನಿಂದ ಚೀನಾದೊಂದಿಗಿನ ಸಂಬಂಧಗಳು ಹದಗೆಟ್ಟಿವೆ. ಗುಯಿ 2015ರಲ್ಲಿ ಥೈಲ್ಯಾಂಡ್‌ನಲ್ಲಿರುವ ಕಡಲತೀರದ ಮನೆಯಿಂದ ಕಣ್ಮರೆಯಾಗಿದ್ದರು. ಬಳಿಕ ಕೆಲವು ತಿಂಗಳ ನಂತರ ಚೀನಾದ ಪೊಲೀಸ್ ಕಸ್ಟಡಿಯಲ್ಲಿ ಬಂಧಿಯಾಗಿರುವುದು ತಿಳಿದಿತ್ತು. ಇದರಿಂದ ಈ ಎರಡು ದೇಶಗಳ ಸಂಬಂಧವು ಮುರಿದು ಹೋಗಿದೆ.

    ವೀಸಾಗೆ ಅರ್ಜಿ ಸಲ್ಲಿಸುವುದು ಮತ್ತು ಈ ಪ್ರಕ್ರಿಯೆಯು ಜನರಿಗೆ ತುಂಬಾ ಗೊಂದಲವನ್ನು ಸೃಷ್ಟಿಸಿತ್ತು. ಈ ವೀಸಾ-ಮುಕ್ತ ಪ್ರವೇಶಕ್ಕೆ ಅವಕಾಶ ನೀಡಿರುವುದು ಪ್ರವಾಸಿಗರಿಗೆ ನಿಜಕ್ಕೂ ಸಹಾಯ ಮಾಡುತ್ತದೆ ಎಂದು ಇತ್ತೀಚೆಗೆ ಬೀಜಿಂಗ್‌ನಲ್ಲಿರುವ ಟೆಂಪಲ್ ಆಫ್ ಹೆವನ್‌ಗೆ ಭೇಟಿ ನೀಡಿದ್ದ ಪ್ರವಾಸಿಗರೊಬ್ಬರು ತಿಳಿಸಿದ್ದರು.

    ಹೆಚ್ಚಿನ ಪ್ರವಾಸಿ ತಾಣಗಳಿರುವ ಚೀನಾ ದೇಶದಲ್ಲಿ ವಿದೇಶಿಯರಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ದೇಶೀಯ ಪ್ರವಾಸಿಗರೇ ಭೇಟಿ ನೀಡುತ್ತಿದ್ದರು. ಆದರೆ ಈ ಹೊಸ ಕ್ರಮದಿಂದ ವಿದೇಶಿ ಪ್ರವಾಸಿಗರ ದಂಡು ಹರಿದು ಬರಲಿದ್ದು, ಪ್ರಯಾಣ ಕಂಪನಿಗಳು ಮತ್ತು ಪ್ರವಾಸ ಮಾರ್ಗದರ್ಶಕರು ಈಗ ಹೆಚ್ಚಿನ ಒಳಹರಿವಿಗಾಗಿ ತಯಾರಿ ನಡೆಸುತ್ತಿದ್ದಾರೆ.

    ಚೀನಾದಲ್ಲಿ ಈ ಹೊಸ ಕ್ರಮದಿಂದ ವ್ಯಾಪಾರ, ವ್ಯವಹಾರದಲ್ಲಿ ತೀವ್ರ ಏರಿಕೆ ಕಂಡಿದ್ದು, ಚೀನಾದ ವೆಬ್‌ಸೈಟ್‌ಗಳಲ್ಲಿ ವಿಮಾನ, ಹೋಟೆಲ್‌ ಹಾಗೂ ಇನ್ನಿತರ ಬುಕಿಂಗ್‌ಗಳು ದ್ವಿಗುಣಗೊಂಡಿದೆ ಎಂದು ಮೂಲಗಳು ತಿಳಿಸಿವೆ.

  • ಪ್ರತಿ ರಾಜ್ಯದಲ್ಲಿ ಒಂದು ವಿಶ್ವದರ್ಜೆಯ ಪ್ರವಾಸಿ ತಾಣ ಅಭಿವೃದ್ಧಿಪಡಿಸಿ: ಮೋದಿ ಕರೆ

    ಪ್ರತಿ ರಾಜ್ಯದಲ್ಲಿ ಒಂದು ವಿಶ್ವದರ್ಜೆಯ ಪ್ರವಾಸಿ ತಾಣ ಅಭಿವೃದ್ಧಿಪಡಿಸಿ: ಮೋದಿ ಕರೆ

    – ಟೀಂ ಇಂಡಿಯಾ ರೀತಿ ಕೇಂದ್ರ, ರಾಜ್ಯಗಳು ಒಟ್ಟಾಗಿ ಕೆಲಸ ಮಾಡಬೇಕು: ಪ್ರಧಾನಿ

    ನವದೆಹಲಿ: ವಿಕಸಿತ ಭಾರತ (Viksit Bharat) ಗುರಿಯನ್ನು ಸಾಧಿಸಲು ಕೇಂದ್ರ ಮತ್ತು ರಾಜ್ಯಗಳು ಒಟ್ಟಾಗಿ ‘ಟೀಂ ಇಂಡಿಯಾ’ ರೀತಿ ಕೆಲಸ ಮಾಡಬೇಕೆಂದು ಪ್ರಧಾನಿ ಮೋದಿ (Narendra Modi) ಕರೆ ನೀಡಿದರು.

    ನೀತಿ ಆಯೋಗದ (Niti Aayog) ಹತ್ತನೇ ಸಭೆಯ ಅಧ್ಯಕ್ಷತೆ ವಹಿಸಿದ ಅವರು, ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳನ್ನು ಉದ್ದೇಶಿಸಿ ಮಾತನಾಡಿದರು. ನಾವು ಅಭಿವೃದ್ಧಿಯ ವೇಗವನ್ನು ಹೆಚ್ಚಿಸಬೇಕು. ಕೇಂದ್ರ ಮತ್ತು ಎಲ್ಲಾ ರಾಜ್ಯಗಳು ಒಟ್ಟಾಗಿ ಟೀಂ ಇಂಡಿಯಾದಂತೆ ಒಟ್ಟಾಗಿ ಕೆಲಸ ಮಾಡಿದರೆ, ಯಾವುದೇ ಗುರಿ ಅಸಾಧ್ಯವಲ್ಲ. ವಿಕಸಿತ ಭಾರತ ಭಾರತ ಪ್ರತಿಯೊಬ್ಬ ಭಾರತೀಯನ ಗುರಿ. ಪ್ರತಿಯೊಂದು ರಾಜ್ಯ ವಿಕಸಿತ ಆದಾಗ, ಭಾರತ ವಿಕಸಿತವಾಗುತ್ತದೆ. ಇದು 140 ಕೋಟಿ ನಾಗರಿಕರ ಆಕಾಂಕ್ಷೆ ಎಂದು ಅಭಿಪ್ರಾಯಪಟ್ಟರು. ಇದನ್ನೂ ಓದಿ: ಮೋದಿ ನೇತೃತ್ವದ ನೀತಿ ಆಯೋಗದ ಸಭೆಗೆ ಸಿದ್ದರಾಮಯ್ಯ ಗೈರು

    ರಾಜ್ಯಗಳು ಜಾಗತಿಕ ಮಾನದಂಡಗಳಿಗೆ ಅನುಗುಣವಾಗಿ ಅಗತ್ಯ ಸೌಲಭ್ಯಗಳು ಮತ್ತು ಮೂಲಸೌಕರ್ಯಗಳನ್ನು ಒದಗಿಸುವ ಮೂಲಕ ಕನಿಷ್ಠ ಒಂದು ಪ್ರವಾಸಿ ತಾಣವನ್ನು ವಿಶ್ವದರ್ಜೆಯ ತಾಣವನ್ನಾಗಿ ಅಭಿವೃದ್ಧಿಪಡಿಸಬೇಕು. ಒಂದು ರಾಜ್ಯ, ಒಂದು ಜಾಗತಿಕ ತಾಣ. ಇದು ನೆರೆಯ ನಗರಗಳನ್ನು ಪ್ರವಾಸಿ ಸ್ಥಳಗಳಾಗಿ ಅಭಿವೃದ್ಧಿಪಡಿಸಲು ಸಹ ಕಾರಣವಾಗುತ್ತದೆ ಎಂದರು. ಇದನ್ನೂ ಓದಿ: ಪ್ರೀತಿಸಿದವನೊಂದಿಗೆ ಮನೆಬಿಟ್ಟು ಹೋದ ಮಗಳು – ಮನನೊಂದು ಒಂದೇ ಕುಟುಂಬದ ಮೂವರು ಆತ್ಮಹತ್ಯೆ ಶಂಕೆ

    ಭಾರತ ವೇಗವಾಗಿ ನಗರೀಕರಣಗೊಳ್ಳುತ್ತಿದೆ. ಭವಿಷ್ಯಕ್ಕೆ ಸಿದ್ಧವಾಗಿರುವ ನಗರಗಳತ್ತ ನಾವು ಕೆಲಸ ಮಾಡಬೇಕು. ಬೆಳವಣಿಗೆ, ನಾವೀನ್ಯತೆ ಮತ್ತು ಸುಸ್ಥಿರತೆಯು ನಮ್ಮ ನಗರಗಳ ಅಭಿವೃದ್ಧಿಗೆ ಎಂಜಿನ್ ಆಗಿರಬೇಕು. ನಮ್ಮ ಕಾರ್ಯಪಡೆಯಲ್ಲಿ ಮಹಿಳೆಯರನ್ನು ಸೇರಿಸಿಕೊಳ್ಳುವ ನಿಟ್ಟಿನಲ್ಲಿ ನಾವು ಕೆಲಸ ಮಾಡಬೇಕು. ಅವರು ಕಾರ್ಯಪಡೆಯಲ್ಲಿ ಗೌರವಯುತವಾಗಿ ಸಂಯೋಜಿಸಲ್ಪಡುವಂತೆ ನಾವು ಕಾನೂನುಗಳು, ನೀತಿಗಳನ್ನು ರೂಪಿಸಬೇಕು ಎಂದು ತಿಳಿಸಿದರು. ಇದನ್ನೂ ಓದಿ: `ಯುವನಿಧಿ’ ಗ್ಯಾರಂಟಿ ಹಣದಿಂದ ಲ್ಯಾಪ್‌ಟಾಪ್‌ ಖರೀದಿಸಿದ ವಿದ್ಯಾರ್ಥಿನಿ ಇಶಾ ಆಸಿಫ್‌

    ಸರ್ಕಾರ ಜಾರಿಗೆ ತಂದ ನೀತಿಗಳು ಸಾಮಾನ್ಯ ನಾಗರಿಕರ ಜೀವನದಲ್ಲಿ ಬದಲಾವಣೆ ತರುವ ರೀತಿಯಲ್ಲಿ ನಾವು ಕೆಲಸ ಮಾಡಬೇಕು. ಜನರು ಬದಲಾವಣೆಯನ್ನು ಅನುಭವಿಸಿದಾಗ ಮಾತ್ರ, ಅದು ಬದಲಾವಣೆಯನ್ನು ಬಲಪಡಿಸುತ್ತದೆ. ಬದಲಾವಣೆಯನ್ನು ಒಂದು ಚಳುವಳಿಯಾಗಿ ಪರಿವರ್ತಿಸುತ್ತದೆ. 140 ಕೋಟಿ ಜನರ ಆಕಾಂಕ್ಷೆಗಳನ್ನು ಈಡೇರಿಸಲು ನಮಗೆ ಒಂದು ತಂಡವಾಗಲು ಉತ್ತಮ ಅವಕಾಶವಿದೆ. 2047ರ ವೇಳೆಗೆ ಭಾರತವನ್ನು ವಿಕಸಿತ ಮಾಡುವುದು ನಮ್ಮ ಗುರಿಯಾಗಿದೆ. ಪ್ರತಿಯೊಂದು ರಾಜ್ಯ, ಪ್ರತಿಯೊಂದು ನಗರ, ಪ್ರತಿಯೊಂದು ನಗರ ಪಾಲಿಕೆ ಮತ್ತು ಪ್ರತಿಯೊಂದು ಗ್ರಾಮವನ್ನು ವಿಕಸಿತ ಮಾಡುವ ಗುರಿ ನಮಗಿರಬೇಕು. ನಾವು ಈ ಮಾರ್ಗಗಳಲ್ಲಿ ಕೆಲಸ ಮಾಡಿದರೆ, ವಿಕಸಿತ ಭಾರತ ಆಗಲು 2047ರವರೆಗೆ ಕಾಯಬೇಕಾಗಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಇದನ್ನೂ ಓದಿ: ಅಡ್ರೆಸ್ ತಪ್ಪಾಗಿದ್ದಕ್ಕೆ ಗಲಾಟೆ – ಗ್ರಾಹಕನಿಗೆ ಹಿಗ್ಗಾಮುಗ್ಗಾ ಥಳಿಸಿದ ಡೆಲಿವರಿ ಬಾಯ್!

    ಪುದುಚೇರಿ ಸಿಎಂ ರಂಗಸ್ವಾಮಿ, ಕರ್ನಾಟಕ ಸಿಎಂ ಸಿದ್ಧರಾಮಯ್ಯ ಮತ್ತು ಕೇರಳದ ಮುಖ್ಯಮಂತ್ರಿ ಪಿಣರಾಯ್ ವಿಜಯನ್ ಸಭೆಗೆ ಗೈರುಹಾಜರಾಗಿದ್ದರು. ಆಂಧ್ರಪ್ರದೇಶ, ತಮಿಳುನಾಡು ಮತ್ತು ತೆಲಂಗಾಣ ಮುಖ್ಯಮಂತ್ರಿಗಳಾದ ಎನ್ ಚಂದ್ರಬಾಬು ನಾಯ್ಡು, ಎಂಕೆ ಸ್ಟಾಲಿನ್ ಮತ್ತು ರೇವಂತ್ ರೆಡ್ಡಿ ಉಪಸ್ಥಿತರಿದ್ದರು. ಜಮ್ಮು ಕಾಶ್ಮೀರದ ಸಿಎಂ ಒಮರ್ ಅಬ್ದುಲ್ಲಾ ಮತ್ತು ಹಿಮಾಚಲ ಪ್ರದೇಶದ ಸುಖವಿಂದರ್ ಸುಖು ಕೂಡ ಸಭೆಯಲ್ಲಿ ಭಾಗವಹಿಸಿದ್ದರು. ಇದನ್ನೂ ಓದಿ: Vijayapura | ಡ್ಯಾನ್ಸ್ ಮಾಡುತ್ತಿರುವಾಗಲೇ ಹೃದಯಾಘಾತ – ಯುವಕ ಸಾವು

  • Boycott Turkey – ಸೇಬು, ಚೆರ‍್ರಿ, ಮಾರ್ಬಲ್‌ಗಳ ಆಮದು ಬ್ಯಾನ್‌ಗೆ ನಿರ್ಧಾರ

    Boycott Turkey – ಸೇಬು, ಚೆರ‍್ರಿ, ಮಾರ್ಬಲ್‌ಗಳ ಆಮದು ಬ್ಯಾನ್‌ಗೆ ನಿರ್ಧಾರ

    – ಭಾರತದಿಂದ ಟರ್ಕಿ ಪ್ರವಾಸಕ್ಕೆ ಬಹಿಷ್ಕಾರ
    – ಚಿತ್ರೀಕರಣ ಕೂಡ ಬ್ಯಾನ್

    ನವದೆಹಲಿ: ಪಾಕಿಸ್ತಾನದ (Pakistan) ಬೆನ್ನಿಗೆ ನಿಂತ ಟರ್ಕಿಗೆ (Turkey) ಭಾರತೀಯರು ದೇಶಾದ್ಯಾಂತ ಸರಿಯಾದ ಬುದ್ಧಿ ಕಲಿಸುತ್ತಿದ್ದಾರೆ. ಟರ್ಕಿ ದೇಶದ ವಿರುದ್ಧ ಭಾರತದಿಂದ ಬಾಯ್ಕಾಟ್ (Boycott Turkey) ಅಭಿಯಾನ ಜೋರಾಗಿದೆ. ಸೇಬು, ಚೆರ‍್ರಿ, ಆಲಿವ್ ಆಯಿಲ್, ಮಾರ್ಬಲ್ಸ್, ಎಲೆಕ್ಟ್ರಾನಿಕ್ ವಸ್ತುಗಳು, ಫ್ಯಾಷನ್ ಉತ್ಪನ್ನಗಳು ಬ್ಯಾನ್ ಮಾಡಲು ನಿರ್ಧರಿಸಲಾಗಿದೆ.

    ಪಾಪಿ ಪಾಕ್ ಬೆನ್ನಿಗೆ ನಿಂತ ಟರ್ಕಿ ವಿರುದ್ಧ ಮಂಗಳವಾರ ಪುಣೆಯ ಹೋಲ್‌ಸೆಲ್, ರೀಟೇಲ್ ವ್ಯಾಪಾರಸ್ಥರು ಸೇಬು ಹಣ್ಣು ಆಮದು ಮಾಡಿಕೊಳ್ಳುವುದನ್ನು ಬಹಿಷ್ಕರಿಸಿದ್ದರು. ಇದೀಗ ಉದಯಪುರದ ಮಾರ್ಬಲ್ ಅಸೋಸಿಯೇಷನ್ ಕೂಡ ಟರ್ಕಿ ಮಾರ್ಬಲ್‌ಗಳ ಆಮದು ಬ್ಯಾನ್ ಮಾಡಲು ನಿರ್ಧರಿಸಿದೆ. ಭಾರತದಲ್ಲಿ ಮೂರು ತಿಂಗಳಿಗೆ ಸುಮಾರು 1,200 ರಿಂದ 1,500 ಕೋಟಿ ರೂಪಾಯಿ ಮೌಲ್ಯದ ಟರ್ಕಿ ಸೇಬನ್ನು ಖರೀದಿ ಮಾಡಲಾಗುತ್ತಿತ್ತು. ಇದೀಗ ಬ್ಯಾನ್‌ನಿಂದ ಟರ್ಕಿಗೆ ಶಾಕ್ ಎದುರಾಗಿದೆ. ಇದನ್ನೂ ಓದಿ: ನರೇಗಾ ಕಾರ್ಮಿಕರನ್ನು ಹೊತ್ತೊಯ್ಯುತ್ತಿದ್ದ ಟಾಟಾ ಏಸ್ ಪಲ್ಟಿ – 31 ಜನರಿಗೆ ಗಾಯ

    ಇತ್ತ ಟರ್ಕಿಯ ಮಾರ್ಬಲ್‌ಗಳನ್ನು ಬ್ಯಾನ್ ಮಾಡಿರುವ ಭಾರತದ ವ್ಯಾಪಾರಿಗಳು ಟರ್ಕಿಯ ಹಲವು ಉತ್ಪನ್ನ ಮತ್ತು ಪ್ರವಾಸವನ್ನು ಬಹಿಷ್ಕರಿಸಿದ್ದಾರೆ. ಪಾಕಿಸ್ತಾನವನ್ನು ಬೆಂಬಲಿಸಿದ್ದಕ್ಕೆ ಟರ್ಕಿ ಆರ್ಥಿಕ ಹೊಡೆತದ ಭೀತಿ ಎದುರಿಸುವಂತಾಗಿದೆ. ಟರ್ಕಿಗೆ 2024ರಲ್ಲಿ 3.3 ಲಕ್ಷ ಭಾರತೀಯ ಪ್ರವಾಸಿಗರು ಭೇಟಿ ಕೊಟ್ಟಿದ್ದರು. ಸಾವಿರಾರು ಭಾರತೀಯರು ಈಗಾಗಲೇ ತಮ್ಮ ಟರ್ಕಿ ಪ್ರವಾಸವನ್ನು ರದ್ದು ಮಾಡುತ್ತಿದ್ದಾರೆ. ಟರ್ಕಿ, ಅಜರ್‌ಬೈಜಾನ್ ದೇಶಕ್ಕೆ ಹೋಗುವ ಭಾರತೀಯರ ಸಂಖ್ಯೆಯಲ್ಲಿ ಕುಸಿತವಾಗಿದೆ. ಈಸಿ ಮೈ ಟ್ರಿಪ್ (EaseMyTrip) ಕೂಡ ಪಾಕ್ ಬೆಂಬಲಿಸಿದ ಟರ್ಕಿ, ಅಜರ್‌ಬೈಜಾನ್ ವಿರುದ್ಧ ಬಾಯ್ಕಾಟ್ ಅಭಿಯಾನಕ್ಕೆ ಕೈ ಜೋಡಿಸಿದೆ. ಪ್ರವಾಸಿಗರ ಈ ಬಾಯ್ಕಾಟ್‌ನಿಂದ ಟರ್ಕಿ, ಅಜರ್‌ಬೈಜಾನ್ ಸುಮಾರು 3 ಸಾವಿರ ಕೋಟಿಗೂ ಹೆಚ್ಚು ನಷ್ಟವಾಗುತ್ತಿದೆ. ಇದನ್ನೂ ಓದಿ: ಪ್ಲೀಸ್‌ ನೀರು ಹರಿಸಿ – ಸಿಂಧೂ ಜಲ ಒಪ್ಪಂದವನ್ನು ಪರಿಶೀಲಿಸುವಂತೆ ಪಾಕ್‌ ಪತ್ರ

    ಇದಷ್ಟೇ ಅಲ್ಲದೇ ಭಾರತೀಯ ಚಿತ್ರೋದ್ಯಮ ಕೂಡ ಟರ್ಕಿಗೆ ಶಾಕ್ ಕೊಟ್ಟಿದೆ. ಇನ್ನುಮುಂದೆ ಯಾವುದೇ ಸಿನಿಮಾ ಚಿತ್ರೀಕರಣಕ್ಕೆ ಟರ್ಕಿಗೆ ತೆರಳದಂತೆ ನಿರ್ಧಾರ ತೆಗೆದುಕೊಳ್ಳಲಾಗಿದೆ.‌  ಇದನ್ನೂ ಓದಿ:  ಭಾರತದಲ್ಲಿ ಕಾಂಗ್ರೆಸ್ ಉಗ್ರರನ್ನು ಸಾಕುತ್ತಿದೆ: ರವಿಕುಮಾರ್ ಕಿಡಿ

  • ಭಾರತದಲ್ಲಿ ಹೆಚ್ಚುತ್ತಿರುವ ಪ್ಯಾರಾಗ್ಲೈಡಿಂಗ್ ದುರಂತ – ಸೇಫ್ ಆಗೋದು ಹೇಗೆ?

    ಭಾರತದಲ್ಲಿ ಹೆಚ್ಚುತ್ತಿರುವ ಪ್ಯಾರಾಗ್ಲೈಡಿಂಗ್ ದುರಂತ – ಸೇಫ್ ಆಗೋದು ಹೇಗೆ?

    – ಭಾರತದ ಪ್ರಮುಖ ಪ್ಯಾರಾಗ್ಲೈಡಿಂಗ್‌ ತಾಣಗಳು

    ಭಾರತದಲ್ಲಿ ಪ್ರವಾಸೋದ್ಯಮ (Tourism) ಬೆಳದಂತೆ ದೇಶದ ವಿವಿಧೆಡೆ ಪ್ಯಾರಾಗ್ಲೈಡಿಂಗ್‌ನಂತಹ (Paragliding) ಸಾಹಸಗಳು ಸಹ ಹೆಚ್ಚಾಗುತ್ತಿದೆ. ಇನ್ನೂ ಹಕ್ಕಿಯಂತೆ ಗಾಳಿಯಲ್ಲಿ ಹಾರಬೇಕು ಎಂದು ಬಯಸುವವರಿಗೆ ಪ್ಯಾರಾಗ್ಲೈಡಿಂಗ್ ಉತ್ತಮ. ಸಾಹಸ ಚಟುವಟಿಕೆಯಲ್ಲಿ ಅತಿಯಾದ ಆಸಕ್ತಿ ಹೊಂದಿರುವವರು ಜೀವನದಲ್ಲಿ ಒಮ್ಮೆಯಾದರೂ ಪ್ಯಾರಾಗ್ಲೈಡಿಂಗ್ ಅನುಭವವನ್ನು ಪಡೆಯಬೇಕು ಎಂಬ ಆಸೆಯನ್ನು ಹೊಂದಿಯೇ ಹೊಂದಿರುತ್ತಾರೆ. ಆದರೆ ಇತ್ತೀಚಿನ ದಿನಗಳಲ್ಲಿ ಪ್ಯಾರಾಗ್ಲೈಡಿಂಗ್‌ ದುರಂತಗಳು ಹೆಚ್ಚುತ್ತಿದ್ದು ಇದೆಷ್ಟು ಸೇಫ್‌ ಎಂಬ ಪ್ರಶ್ನೆಯೂ ಎದ್ದಿದೆ.

    ದೇಶದಲ್ಲಿ 2023 ರಲ್ಲಿ 20 ಮಂದಿ ಪ್ಯಾರಾಗ್ಲೈಡಿಂಗ್ ದುರಂತದಲ್ಲಿ ಸಾವಿಗೀಡಾಗಿದ್ದಾರೆ. ಇನ್ನು 2024ರಲ್ಲಿ ಇಬ್ಬರು ಸಾವಿಗೀಡಾಗಿದ್ದಾರೆ. ಇನ್ನೂ 2025ರ ಆರಂಭದಲ್ಲೇ ಗೋವಾದಲ್ಲಿ (Goa) ಇಬ್ಬರು ಹಾಗೂ ಶಿಮ್ಲಾದಲ್ಲಿ ಒಬ್ಬರು ಸೇರಿದಂತೆ ಮೂರು ಜನರ ಸಾವಾಗಿದೆ. ಇಂತಹ ದುರಂತಗಳಿಗೆ ಕಾರಣ ಹಾಗೂ ದುರಂತಗಳು ಆಗದಂತೆ ತಡೆಯಲು ಕ್ರಮ ಏನು ಎಂಬುದರ ಬಗ್ಗೆ ಇಲ್ಲಿ ವಿವರಿಸಲಾಗಿದೆ.

    ಭಾರತದ ಪ್ರಮುಖ ಸುರಕ್ಷಿತ ಪ್ಯಾರಾಗ್ಲೈಡಿಂಗ್‌ ತಾಣಗಳು
    – ಹಿಮಾಚಲ ಪ್ರದೇಶದ ​ಬಿರ್‌ ಬಿಲ್ಲಿಂಗ್‌
    ಹಿಮಾಚಲ ಪ್ರದೇಶದ ಬಿರ್ ಬಿಲ್ಲಿಂಗ್‌ ಪ್ಯಾರಾಗ್ಲೈಡಿಂಗ್ ರಾಜಧಾನಿ ಎಂದೇ ಕರೆಯಲಾಗುತ್ತದೆ. ‌ ಇಲ್ಲಿ ಪ್ಯಾರಾಗ್ಲೈಡಿಂಗ್ ಕೈಗೊಳ್ಳಲು ಬಿರ್ ಲ್ಯಾಂಡಿಂಗ್ ಪಾಯಿಂಟ್‌ಗೆ ಹೋಗಬೇಕಾಗುತ್ತದೆ. ಇದು ಏಷ್ಯಾದ ಅತಿ ಎತ್ತರದ ಪ್ಯಾರಾಗ್ಲೈಡಿಂಗ್ ಪಾಯಿಂಟ್‌ ಆಗಿದೆ. ಇಲ್ಲಿಗೆ ಭೇಟಿ ನೀಡಲು ಅಕ್ಟೋಬರ್‌ನಿಂದ ಜೂನ್ ತಿಂಗಳ ನಡುವೆ ಉತ್ತಮ ಸಮಯವಾಗಿದೆ.
    – ತಮಿಳುನಾಡಿನ ಯಳಗಿರಿ
    ತಮಿಳುನಾಡಿನ ಯಳಗಿರಿಗೆ ವೆಲ್ಲೂರು ಜಿಲ್ಲೆಯ ಅದ್ಭುತವಾದ ಗಿರಿಧಾಮವಾಗಿದೆ. ಇದು ದಕ್ಷಿಣ ಭಾಗದಲ್ಲಿರುವ ಜನಪ್ರಿಯ ಪ್ಯಾರಾಗ್ಲೈಡಿಂಗ್ ತಾಣವಾಗಿದೆ. ಸೆಪ್ಟೆಂಬರ್‌ನಿಂದ ಫೆಬ್ರವರಿ ತಿಂಗಳ ನಡುವೆ ಇಲ್ಲಿಗೆ ಭೇಟಿ ನೀಡಲು ಉತ್ತಮ ಸಮಯವಾಗಿದೆ.

    – ಹಿಮಾಚಲ ಪ್ರದೇಶದ ​ಮನಾಲಿ
    ಹಿಮಾಚಲ ಪ್ರದೇಶದ (Himachal Pradesh) ಅತ್ಯಂತ ರಮಣೀಯವಾದ ತಾಣವಾದ ಮನಾಲಿಯಲ್ಲಿ ಪ್ಯಾರಾಗ್ಲೈಡಿಂಗ್ ಮಾಡುವುದು ಉತ್ತಮ ಅನುಭವ ನೀಡುತ್ತದೆ ಎಂದು ಭೇಟಿಕೊಟ್ಟವರ ಮಾತು. ಪರ್ವತಗಳ ಮಡಿಲಲ್ಲಿ ಹಿಮಾಲಯ ಶ್ರೇಣಿಗಳ ನಡುವೆ ಮತ್ತು 5000 ಅಡಿ ಎತ್ತರದಲ್ಲಿ ಪ್ಯಾರಾಗ್ಲೈಡಿಂಗ್ ಮಾಡಬಹುದಾಗಿದೆ. ಇಲ್ಲಿಗೆ ಭೇಟಿ ನೀಡಲು ಅಕ್ಟೋಬರ್‌ನಿಂದ ಮೇ ತಿಂಗಳ ನಡುವೆ ಉತ್ತಮ ಸಮಯವಾಗಿದೆ.

    – ಮಹಾರಾಷ್ಟ್ರದ ​ಕಾಮ್ಶೆತ್
    ಮಹಾರಾಷ್ಟ್ರದ ಕಾಮ್ಶೆತ್ ನಲ್ಲಿ ಪ್ಯಾರಾಗ್ಲೈಡಿಂಗ್ ಪುಣೆಯಿಂದ ಕೇವಲ 45 ಕಿ.ಮೀ ದೂರದಲ್ಲಿದೆ. ಇಲ್ಲಿಗೆ ಭೇಟಿ ನೀಡಲು ಅಕ್ಟೋಬರ್‌ ನಿಂದ ಜುಲೈ ತಿಂಗಳ ನಡುವೆ ಉತ್ತಮ ಸಮಯವಾಗಿದೆ.

    – ಜಮ್ಮುವಿನ ​ಸನಾಸರ್
    ಈ ತಾಣ ಸಮುದ್ರಮಟ್ಟದಿಂದ ಸುಮಾರು 2000 ಅಡಿ ಎತ್ತರದಲ್ಲಿದೆ. ಹಿಮಾಲಯದ ನಡುವೆ ಪ್ಯಾರಾಗ್ಲೈಡಿಂಗ್ ಮಾಡುವ ರೋಮಾಂಚಕ ಅನುಭವವನ್ನು ಈ ತಾಣ ನೀಡುತ್ತದೆ. ಇಲ್ಲಿಗೆ ಭೇಟಿ ನೀಡಲು ಮೇ ಮತ್ತು ಜೂನ್ ತಿಂಗಳ ನಡುವೆ ಹಾಗೂ ಸೆಪ್ಟೆಂಬರ್ ಮತ್ತು ಅಕ್ಟೋಬರ್‌ ತಿಂಗಳ ನಡುವೆ ಉತ್ತಮ ಸಮಯವಾಗಿದೆ.

    – ಕರ್ನಾಟಕದ ನಂದಿಗಿರಿಧಾಮ
    ಇಲ್ಲಿನ (Nandhi Giridhama) ಪ್ರಕೃತಿ ಸೊಬಗು, ಸೌಂದರ್ಯ ನೊಡುವುದೇ ಚೆಂದ. ಅಂತಹದ್ದರಲ್ಲಿ ಆಗಸದಲ್ಲಿ ಹಕ್ಕಿಯಂತೆ ಹಾರಾಡುತ್ತಾ, ಇಡೀ ನಂದಿಬೆಟ್ಟದ ವಿಹಂಗಮ ನೋಟ ನೋಡುವ ಅವಕಾಶ ಇಲ್ಲಿ ನಮಗೆ ಸಿಗುತ್ತದೆ. ಅ.2024ರಲ್ಲಿ ಇಲ್ಲಿ ಪ್ಯಾರಾಗ್ಲೈಡಿಂಗ್ ಆರಂಭಿಸಲಾಗಿದೆ. ಇಲ್ಲಿಗೆ ಭೇಟಿ ನೀಡಲು ಅಕ್ಟೋಬರ್‌ನಿಂದ ಮೇ ತಿಂಗಳ ನಡುವೆ ಉತ್ತಮ ಸಮಯವಾಗಿದೆ.

    ಪ್ಯಾರಾಗ್ಲೈಡಿಂಗ್ ದುರಂತಕ್ಕೆ ಕಾರಣಗಳೇನು?
    ಅಗ್ಗದ ಪ್ಯಾರಾಗ್ಲೈಡಿಂಗ್ ಬಳಕೆ ಮಾಡುವುದು. ಹೆಚ್ಚಿನ ಲಾಭವನ್ನು ಮಾಡಲು ಕಂಪನಿಗಳು ಕಡಿಮೆ ಅನುಭವ ಇರುವ ಪೈಲಟ್‌ಗಳನ್ನು ನೇಮಿಸಿಕೊಳ್ಳುವುದು ಹಾಗೂ ಹೆಚ್ಚಿನ ಹಣ ಸಂಪಾದನೆಗೆ ಅಸುರಕ್ಷಿತ ವಾತಾವರಣದಲ್ಲಿ ಹಾರಾಟ ಮಾಡುವುದು ಪ್ಯಾರಾಗ್ಲೈಡಿಂಗ್ ದುರಂತಕ್ಕೆ ಪ್ರಮುಖ ಕಾರಣವಾಗಿದೆ.

    ಹಾರಾಟದ ಸಮಯದಲ್ಲಿ ತುರ್ತು ಸಂದರ್ಭದಲ್ಲಿ ಬಳಸುವ ಪ್ಯಾರಾಚೂಟ್ ಇಲ್ಲದಿರುವುದು. ಹಣಕ್ಕಾಗಿ ಉತ್ತಮ ತರಬೇತಿ ಮತ್ತು ಜ್ಞಾನವಿಲ್ಲದ ಪೈಲಟ್‌ಗಳು ಪ್ರಯಾಣಿಕರೊಂದಿಗೆ ಚಮತ್ಕಾರಿಕ ತಂತ್ರಗಳನ್ನು ಪ್ರದರ್ಶನಮಾಡುವುದು. ಅಲ್ಲದೇ ಹಾರುವ ಮೊದಲು ಪೈಲಟ್‌ಗಳು, ಪ್ರವಾಸಿಗರು ಆಲ್ಕೋಹಾಲ್ ಅಥವಾ ಡ್ರಗ್ಸ್ ಬಳಸುತ್ತಿದ್ದಾರೆ ಎಂಬ ಆರೋಪವಿದೆ. ಇಂತಹ ಜವಾಬ್ಧಾರಿ ಇಲ್ಲದ ನಡೆಗಳು ಸಹ ದುರಂತಕ್ಕೆ ಕಾರಣವಾಗಿವೆ.

    ಇತ್ತೀಚೆಗೆ ತಮಿಳುನಾಡಿನ ಪ್ರವಾಸಿಗರೊಬ್ಬರು ಶಿಮ್ಲಾದ ಗಡ್ಸಾದಲ್ಲಿ ಪ್ಯಾರಾಗ್ಲೈಡಿಂಗ್ ವೇಳೆ ಮತ್ತೊಂದು ಪ್ಯಾರಾಗ್ಲೈಡಿಂಗ್‌ಗೆ ಡಿಕ್ಕಿಯಾಗಿ, ಸಾವನ್ನಪ್ಪಿದ್ದರು. ಈ ವೇಳೆ ಪೈಲಟ್‌ಗೆ ಸಣ್ಣಪುಟ್ಟ ಗಾಯಗಳಾಗಿತ್ತು. ಮತ್ತೊಂದು ಪ್ಯಾರಾಗ್ಲೈಡಿಂಗ್‌ನ ಪೈಲಟ್‌ ಅದನ್ನು ಸುರಕ್ಷಿತವಾಗಿ ಲ್ಯಾಂಡ್‌ ಮಾಡಿದ್ದರು. ಇದಾದ ಬಳಿಕ ಈ ಪ್ರದೇಶದಲ್ಲಿ ಪ್ಯಾರಾಗ್ಲೈಡಿಂಗ್‌ನ್ನು ಸ್ಥಗಿತಗೊಳಿಸಲಾಗಿದೆ.

    ಪ್ಯಾರಾಗ್ಲೈಡಿಂಗ್ ಸುರಕ್ಷಿತವಾಗಿರೋದು ಹೇಗೆ?
    ಹವಾಮಾನ ಮುನ್ಸೂಚನೆಗಳನ್ನು ಪರಿಶೀಲಿಸಿ ಪ್ಯಾರಾಗ್ಲೈಡಿಂಗ್‌ಗೆ ಮುಂದಾಗಬೇಕು. ಪ್ರಾರಾಗ್ಲೈಂಡಿಂಗ್ ಮಾಡುವವರು ಮನಸ್ಸಿನಲ್ಲಿಟ್ಟುಕೊಳ್ಳಬೇಕಾದ ಮೊದಲ ವಿಷಯ ಇದು. ಆಗ ಮಾತ್ರ ಇಂತಹ ದುರಂತದಿಂದ ಪಾರಾಗಲು ಸಾಧ್ಯವಿದೆ.

    ಪೈಲಟ್‌ನ ಅರ್ಹತೆಗಳನ್ನು ಪರಿಶೀಲಿಸಬೇಕು. ಪೈಲಟ್‌ಗಳನ್ನು P1 ರಿಂದ P5ವರೆಗೆ ವರ್ಗೀಕರಿಸಲಾಗಿದೆ. P1 ರಿಂದ P4 ಪ್ರಮಾಣೀಕರಣಗಳು ವೈಯಕ್ತಿಕ, ವಾಣಿಜ್ಯೇತರ ಹಾರಾಟಕ್ಕಾಗಿ, P4-P5-ಮಟ್ಟದ ಪೈಲಟ್‌ಗಳು ವಾಣಿಜ್ಯ ಹಾರಾಟ ನಡೆಸಬಹುದಾಗಿದೆ. P5 ಶ್ರೇಣಿ ಪಡೆಯಲು 100-150 ಗಂಟೆಗಳ ಹಾರಾಟದ ಅನುಭವ ಇದರಬೇಕು. ಅಲ್ಲದೇ ನೀರಿನ ಮೇಲೆ ಲ್ಯಾಂಡ್ ಸೇರಿದಂತೆ ತುರ್ತು ಕಾರ್ಯವಿಧಾನಗಳನ್ನು ಒಳಗೊಂಡಿರುವ ಸಿಮ್ಯುಲೇಶನ್ ಆಫ್ ಇನ್ಸಿಡೆಂಟ್ ಇನ್ ಫ್ಲೈಟ್ (SIV) ಕೋರ್ಸ್ ಪೂರ್ಣಗೊಳಿಸುವ ಅಗತ್ಯವಿದೆ.

    ಉಪಕರಣಗಳ ಗುಣಮಟ್ಟ, ಸ್ಥಿತಿಯನ್ನು ಪರಿಶೀಲಿಸಬೇಕು. ಕ್ಯಾನೋಪಿ, ಹಾರ್ನೆಸ್‌ಗಳು ಮತ್ತು ಮೀಸಲು ಪ್ಯಾರಾಚೂಟ್‌ಗಳು ಸೇರಿದಂತೆ ಎಲ್ಲಾ ಪ್ಯಾರಾಗ್ಲೈಡಿಂಗ್ ಉಪಕರಣಗಳ ಸ್ಥಿತಿಯನ್ನು ಸಂಪೂರ್ಣವಾಗಿ ಪರಿಶೀಲಿಸಬೇಕು. ಏಕೆಂದರೆ ಸಣ್ಣ ತಾಂತ್ರಿಕ ದೋಷ ಸಹ ದುರಂತಕ್ಕೆ ಕಾರಣವಾಗಬಹುದು.

    ಮೊದಲು ನೆಲದ ಮೇಲೆ ಸ್ವಲ್ಪ ಅಭ್ಯಾಸ ಮಾಡಬೇಕು. ಬಳಿಕ ಪ್ಯಾರಾಗ್ಲೈಡಿಂಗ್‌ಗೆ ಮುಂದಾಗ ಬೇಕು. ಮೊದಲ ಪ್ರಯತ್ನದಲ್ಲಿದ್ದವರು ಟೇಕ್‌ಆಫ್ ಮತ್ತು ಲ್ಯಾಂಡಿಂಗ್‌ಗೆ ಸಾಕಷ್ಟು ಜಾಗವನ್ನು ಆರಿಸಿಕೊಳ್ಳಬೇಕು ಎಂದು ಪ್ಯಾರಾಗ್ಲೈಡಿಂಗ್‌ನಲ್ಲಿ ಸಾಕಷ್ಟು ಅನುಭವ ಇರುವವರು ಅಭಿಪ್ರಾಯಪಡುತ್ತಾರೆ.

  • ಪ್ರವಾಸೋದ್ಯಮಕ್ಕೆ ಉತ್ತೇಜನ – ಹೋಂಸ್ಟೇ ನಿರ್ಮಾಣಕ್ಕೆ ಮುದ್ರಾ ಲೋನ್‌ ವಿಸ್ತರಣೆ

    ಪ್ರವಾಸೋದ್ಯಮಕ್ಕೆ ಉತ್ತೇಜನ – ಹೋಂಸ್ಟೇ ನಿರ್ಮಾಣಕ್ಕೆ ಮುದ್ರಾ ಲೋನ್‌ ವಿಸ್ತರಣೆ

    ನವದೆಹಲಿ: ಪ್ರವಾಸೋದ್ಯಮಕ್ಕೆ (Tourism) ಉತ್ತೇಜನ ನೀಡುವ ಸಲುವಾಗಿ ಹೋಂಸ್ಟೇ (Homestays) ನಿರ್ಮಾಣಕ್ಕೆ ಮುದ್ರಾ ಲೋನ್‌ (Mudra Loans) ವಿಸ್ತರಿಸುವುದಾಗಿ ಬಜೆಟ್‌ (Union Budget 2025 ) ಮಂಡನೆ ವೇಳೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.

    50 ಪ್ರವಾಸೋದ್ಯಮ ತಾಣಗಳನ್ನು ಅಭಿವೃದ್ಧಿಪಡಿಸಲು ಕೇಂದ್ರ ಹಾಗೂ ರಾಜ್ಯಗಳ ಸಹಭಾಗಿತ್ವದಲ್ಲಿ ಟಾಪ್ 50 ಪ್ರವಾಸಿ ತಾಣಗಳನ್ನು ಅಭಿವೃದ್ಧಿಪಡಿಸಲಿದೆ. ಇದಕ್ಕಾಗಿ ಹೋಂಸ್ಟೇ ನಿರ್ಮಾಣಕ್ಕೆ ಮುದ್ರಾ ಸಾಲ ವಿಸ್ತರಿಸಲಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಕರ್ನಾಟಕಕ್ಕೆ ಬಜೆಟ್‌ನಲ್ಲಿ ದೊಡ್ಡ ಅನ್ಯಾಯ: ಸಿಎಂ

    ದೇಶದಲ್ಲಿ ಪ್ರವಾಸೋದ್ಯಮವನ್ನು ಹೆಚ್ಚಿಸುವ ಪ್ರಯತ್ನ ನಡೆಯುತ್ತಿದೆ. ಇನ್ನೂ ಖಾಸಗಿ ವಲಯದ ಸಹಭಾಗಿತ್ವದಲ್ಲಿ ವೈದ್ಯಕೀಯ ಪ್ರವಾಸೋದ್ಯಮವನ್ನು ಉತ್ತೇಜಿಸಲಾಗುವುದು. ಸರ್ಕಾರವು ಭಗವಾನ್ ಬುದ್ಧನ ಜೀವನ ಮತ್ತು ಸಮಯಕ್ಕೆ ಸಂಬಂಧಿಸಿದ ತಾಣಗಳ ಬಗ್ಗೆ ವಿಶೇಷ ಗಮನ ನೀಡಲಿದೆ ಎಂದು ಅವರು ಹೇಳಿದ್ದಾರೆ.

    ಇದೇ ವೇಳೆ ಬಿಹಾರದ ಮಿಥಿಲಾಂಚಲ್ ಪ್ರದೇಶದ 50,000 ಹೆಕ್ಟೇರ್‌ಗೆ ಪ್ರಯೋಜನವನ್ನು ನೀಡುವ ಪಶ್ಚಿಮ ಕೋಸಿ ಕಾಲುವೆಗೆ ಆರ್ಥಿಕ ನೆರವು ನೀಡಲಾಗುವುದು ಎಂದು ತಿಳಿಸಿದ್ದಾರೆ.

    ಪ್ರಧಾನ ಮಂತ್ರಿ ಮುದ್ರಾ ಯೋಜನೆ (PMMY) ಏಪ್ರಿಲ್ 8, 2015 ರಂದು ಪ್ರಧಾನಿ ಮೋದಿಯವರು ಪ್ರಾರಂಭಿಸಿದ ಯೋಜನೆಯಾಗಿದ್ದು, ಇದು ಕಾರ್ಪೊರೇಟ್ ಅಲ್ಲದ, ಕೃಷಿಯೇತರ ಸಣ್ಣ, ಸೂಕ್ಷ್ಮ ಉದ್ಯಮಗಳಿಗೆ ಬ್ಯಾಂಕ್‌ ಮೂಲಕ 20 ಲಕ್ಷ ರೂ.ವರೆಗೆ ಸಾಲವನ್ನು ಒದಗಿಸುತ್ತದೆ. ಇದನ್ನೂ ಓದಿ: Budget 2025: ಗ್ರಾಮೀಣ ಆರ್ಥಿಕತೆಗೆ ವೇಗವರ್ಧಕವಾಗಿ ಭಾರತೀಯ ಅಂಚೆ ಸೇವೆಗಳ ಕಾರ್ಯನಿರ್ವಹಣೆ

  • ಮುರುಡೇಶ್ವರ| ಕಡಲ ತೀರ ನಿರ್ಬಂಧ ತೆರವಿಗೆ ನಾನಾ ವಿಘ್ನ – ಪ್ರವಾಸಿಗರಿಗೆ ನಿರಾಸೆ

    ಮುರುಡೇಶ್ವರ| ಕಡಲ ತೀರ ನಿರ್ಬಂಧ ತೆರವಿಗೆ ನಾನಾ ವಿಘ್ನ – ಪ್ರವಾಸಿಗರಿಗೆ ನಿರಾಸೆ

    ಕಾರವಾರ: ಕ್ರಿಸ್‌ಮಸ್ (Christmas) ಸೇರಿದಂತೆ ಸಾಲು ಸಾಲು ರಜೆಗೆ (Holiday) ಪ್ರವಾಸಿಗರು (Tourist) ಮುರುಡೇಶ್ವರಕ್ಕೆ (Murudeshwar) ಬರುತ್ತಿದ್ದು, ಸಮುದ್ರ ಭಾಗದಲ್ಲಿ ಜಲಸಾಹಸ ಕ್ರೀಡೆಗಳು ಬಂದ್‌ ಆಗಿರುವುದರಿಂದ ನಿರಾಸೆಯಿಂದ ಹಿಂದಿರುಗುತ್ತಿದ್ದಾರೆ.

    ಲೈಫ್‌ ಗಾರ್ಡ್‌, ಭದ್ರತೆ ವ್ಯವಸ್ಥೆ ಕಲ್ಪಿಸಿ ತಕ್ಷಣ ಪ್ರವಾಸಿಗರಿಗೆ ಕಡಲ ತೀರ ಭಾಗಕ್ಕೆ ಪ್ರವೇಶ ನೀಡಬೇಕು ಎಂದು ಪ್ರವಾಸೋದ್ಯಮ ನಂಬಿದ ಸ್ಥಳೀಯ ಉದ್ಯಮಿಗಳು ಜಿಲ್ಲಾಡಳಿತಕ್ಕೆ ಮನವಿ ಸಹ ನೀಡಿದ್ದರು. ಶೀಘ್ರದಲ್ಲೇ ಮುರುಡೇಶ್ವರ ಕಡಲ ತೀರದಲ್ಲಿ ಸೂಕ್ತ ವ್ಯವಸ್ಥೆ ಕಲ್ಪಿಸಿ ಅವಕಾಶ ಮಾಡಿಕೊಡುವುದಾಗಿ ಜಿಲ್ಲಾಧಿಕಾರಿ ಲಕ್ಷ್ಮಿ ಪ್ರಿಯಾರವರು ಮಾಹಿತಿ ನೀಡಿದ್ದರು. ಆದರೆ ಅಧಿಕಾರಿಗಳ ಸಮನ್ವಯ ಕೊರತೆಯಿಂದಾಗಿ ಪ್ರವಾಸಿಗರಿಗೆ ಕಡಲತೀರಕ್ಕೆ ಪ್ರವೇಶ ಸಿಗುತ್ತಿಲ್ಲ.

    ಮುರುಡೇಶ್ವರದಲ್ಲಿ ಪ್ರವಾಸಿಗರ ರಕ್ಷಣೆಗಾಗಿ ಲೈಫ್ ಗಾರ್ಡ್‌ಗಳನ್ನು ನೇಮಿಸಲಾಗಿದೆ. ಎಸಿ ನೇತೃತ್ವದ ಸಮಿತಿ ಸಹ ಜಾರಿಗೆ ತರಲಾಗಿದೆ. ಬುಧವಾರದಂದು ಕಡಲ ತೀರ ಭಾಗದಲ್ಲಿ ಸುರಕ್ಷಿತ ಮತ್ತು ಅಪಾಯಕಾರಿ ವಲಯವನ್ನು ಗುರುತಿಸಿ ರೋಪ್‌ಗಳನ್ನು ಅಳವಡಿಸಲಾಗಿತ್ತು.

    ಗುರುವಾರ ಆಗಮಿಸಿದ ಎಸಿ ಡಾ.ನಯನಾ ರೋಪ್ ಅಳವಡಿಕೆ ಮಾಡಿದ್ದು ಸರಿಯಿಲ್ಲ ಎಂದು ಹೇಳಿ ಬೇರೆ ಕಡೆ ಅಳವಡಿಸಲು ಸೂಚಿಸಿದ್ದರು. ಹೀಗಾಗಿ ಶ್ರಮ ಪಟ್ಟು ಹಾಕಿದ್ದ ರೋಪ್‌ಗಳನ್ನು ಮತ್ತೆ ತೆಗೆಯಲಾಗಿದೆ. ಇದರಿಂದ ಪ್ರವಾಸಿಗರಿಗೆ ಅವಕಾಶ ಕಲ್ಪಿಸಲು ಸಾಧ್ಯವಾಗಿಲ್ಲ. ಇದಲ್ಲದೇ ರಕ್ಷಣಾ ಚಟುವಟಿಕೆ ಬಗ್ಗೆ ಅಧಿಕಾರಿಗಳಿಗೂ ಸಮರ್ಪಕ ಮಾಹಿತಿ ಇಲ್ಲ. ಇದರಿಂದಾಗಿ ಹಲವು ಗೊಂದಲಗಳು ಸೃಷ್ಟಿಯಾಗಿದೆ. ಇದನ್ನೂ ಓದಿ: ರೇಪ್‌ ಕೇಸ್ ಕೊಟ್ಟವರು ಪರಿಚಯವೇ ಇಲ್ಲ ಅಂತ ದೇವರ ಮೇಲೆ ಪ್ರಮಾಣ ಮಾಡಲಿ: ಮುನಿರತ್ನ

    ಬಹತೇಕ ಶನಿವಾರ ಮುರುಡೇಶ್ವರ ಕಡಲ ತೀರಕ್ಕೆ ಪ್ರವಾಸಿಗರಿಗೆ ಪ್ರವೇಶ ನೀಡುವುದಾಗಿ ಮೂಲಗಳಿಂದ ಮಾಹಿತಿ ಬಂದಿದ್ದು, ಹೊಸ ವರ್ಷಕ್ಕಾದರೂ ಪ್ರವಾಸಿಗರಿಗೆ ನಿರ್ಬಂಧ ತೆರವಾಗುತ್ತಾ ಎಂಬುದನ್ನು ಕಾದು ನೋಡಬೇಕಿದೆ.

     

  • Chikkaballapura | ನಂದಿಗಿರಿಧಾಮದಲ್ಲಿ ಹೊಸ ವರ್ಷ ಆಚರಣೆಗೆ ಬ್ರೇಕ್ – ಪ್ರವಾಸಿಗರಿಗೆ ಶಾಕ್‌

    Chikkaballapura | ನಂದಿಗಿರಿಧಾಮದಲ್ಲಿ ಹೊಸ ವರ್ಷ ಆಚರಣೆಗೆ ಬ್ರೇಕ್ – ಪ್ರವಾಸಿಗರಿಗೆ ಶಾಕ್‌

    ಚಿಕ್ಕಬಳ್ಳಾಪುರ: ಹೊಸ ವರ್ಷಾಚರಣೆಗೂ ನಂದಿಬೆಟ್ಟಕ್ಕೂ ಅದೇನೊ ಒಂಥರ ನಂಟು.. ಪ್ರಕೃತಿ ಮಡಿಲಲ್ಲಿ ಕುಡಿದು ಕುಣಿದು ಕುಪ್ಪಳಿಸಿ ಹೊಸ ವರ್ಷ 2025ನ್ನು (New Year 2025) ಸ್ವಾಗತಿಸೋಣ ಅಂತ, ಕೆಲ ಪಾರ್ಟಿ ಪ್ರಿಯರು ಅಂದುಕೊಂಡಿದ್ರೆ… ಈಗಲೇ ನಿಮ್ಮ ಪ್ಲ್ಯಾನ್‌ ಬದಲಾಯಿಸಿಕೊಳ್ಳಿ, ಯಾಕಂದ್ರೆ ನಂದಿಗಿರಿಧಾಮದಲ್ಲಿ ಹೊಸ ವರ್ಷಾಚರಣೆಗೆ ಚಿಕ್ಕಬಳ್ಳಾಪುರ (Chikkaballapura) ಜಿಲ್ಲಾಡಳಿತ ಸಂಪೂರ್ಣ ನಿಷೇಧ ಏರಿದೆ.

    ಚಿಕ್ಕಬಳ್ಳಾಪುರ ತಾಲೂಕಿನ ನಂದಿಗಿರಿಧಾಮ (Nandi Hills) ಅಂದ್ರೆ ತಂಪಾದ ಹವಾಗುಣ, ತುಂತುರು ಮಳೆ, ಗಿಡ, ಮರ, ಬಳ್ಳಿಗಳ ಸೊಬಗು, ನಕ್ಕು ನಲಿಯುವ ತರಹೆವಾರು ಹೂಗಳ ವಯ್ಯಾರ. ಮಿಗಿಲಾಗಿ ಸಮುದ್ರಮಟ್ಟದಿಂದ 1,478 ಮೀಟರ್ ಎತ್ತರದಲ್ಲಿ ನಿಂತು ಸೂರ್ಯೋದಯ ಹಾಗೂ ಸೂರ್ಯಾಸ್ತ ವಿಹಂಗಮ ನೋಟ ನೋಡುವುದಕ್ಕೆ ತುಂಬಾ ಫೇಮಸ್. ಇನ್ನೂ ನಂದಿಗಿರಿಧಾಮದಲ್ಲಿ ಕಾಣಸಿಗುವ ಬೆಳ್ಳಿ ಮೋಡ, ಇಬ್ಬನಿ, ಸುತ್ತಲೂ ಎತ್ತ ನೋಡಿದರೂ ಮುತ್ತಿಕ್ಕುವ ಮಂಜು, ಇಂಥ ಪ್ರಕೃತಿ ಸೊಬಗಿನಲ್ಲಿ ಕುಳಿತು ಹೊಸ ವರ್ಷ 2025ನ್ನು ಸ್ವಾಗತೀಸೋಣ ಅಂತ ಕೆಲವು ಪಾರ್ಟಿ ಪ್ರಿಯರು ಅಂದುಕೊಂಡಿದ್ರು. ಆದ್ರೆ ಚಿಕ್ಕಬಳ್ಳಾಪುರ ಜಿಲ್ಲಾಡಳಿತ ಪಾರ್ಟಿ ಪ್ರಿಯರ ಕನಸಿಗೆ ತಣ್ಣೀರು ಎರಚಿದೆ. ಗಿರಿಧಾಮದಲ್ಲಿ ಹೊಸ ವರ್ಷಾಚರಣೆಗೆ ನಿರ್ಬಂಧ ವಿಧಿಸಿದೆ.

    ಡಿಸೆಂಬರ್ 31ರ ಸಂಜೆ 6 ಗಂಟೆಯಿಂದ 2025 ಜನವರಿ 1 ರಂದು ಬೆಳಿಗ್ಗೆ 6 ಗಂಟೆವರೆಗೂ ಸಾರ್ವಜನಿಕ ಪ್ರವೇಶ ನಿರ್ಬಂಧಿಸಿದ್ದು, ಜೊತೆಗೆ ಅತಿಥಿ ಗೃಹಗಳಿಗೆ ಪ್ರವೇಶವನ್ನೂ ಬಂದ್ ಮಾಡಲಾಗಿದೆ. ಇದ್ರಿಂದ ಪ್ರವಾಸೋದ್ಯಮ ಇಲಾಖೆಗೂ ನಿರ್ಬಂಧದ ಬಿಸಿ ಮುಟ್ಟಿದೆ. ಇದನ್ನೂ ಓದಿ: ಕಬ್ಬನ್‌ ಪಾರ್ಕ್‌ – ಯಾವುದೇ ಗುಂಪು ಚಟುವಟಿಕೆಗೆ ಅನುಮತಿ ಕಡ್ಡಾಯ

    ಒಟ್ಟಾರೆ ಹೊಸ ವರ್ಷ ಆಚರಣೆಗೆ ಬೆಂಗಳೂರಿನ ಪಬ್ ರೆಸಾರ್ಟ್‌ಗಳ ಬದಲು ಪ್ರಕೃತಿಯ ಮಡಿಲಲ್ಲಿ ಹೊಸ ವರ್ಷಾಚರಣೆಯ ಕನಸ್ಸು ಕಂಡಿದ್ದ ಯುವ ಸಮುದಾಯಕ್ಕೆ ನಿರಾಸೆಯಾಗಿದೆ. ಇದನ್ನೂ ಓದಿ: ಅಮಿತ್ ಶಾ ಫೇಕ್ ಎನ್‍ಕೌಂಟರ್‌ಗೆ ಹೆಸರುವಾಸಿ: ಜೋಶಿ ವಿರುದ್ಧ ಹರಿಪ್ರಸಾದ್ ಕಿಡಿ

  • Tourism| ಕೇಂದ್ರದ ಯೋಜನೆಯಡಿ ಆಲಮಟ್ಟಿ, ಹರಕಲ್ ಗ್ರಾಮಗಳ ಅಭಿವೃದ್ಧಿ

    Tourism| ಕೇಂದ್ರದ ಯೋಜನೆಯಡಿ ಆಲಮಟ್ಟಿ, ಹರಕಲ್ ಗ್ರಾಮಗಳ ಅಭಿವೃದ್ಧಿ

    ಬಾಗಲಕೋಟೆ: ಕೇಂದ್ರ ಸರ್ಕಾರದ ಮಹತ್ವಕಾಂಕ್ಷಿ ಯೋಜನೆಯಡಿ ಪ್ರವಾಸೋದ್ಯಮ ಪೂರಕವಾಗಿ ಮತ್ತು ಸ್ಥಳೀಯ ಜನರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಆಲಮಟ್ಟಿ (Alamati), ಹರಕಲ್ (Harakal) ಗ್ರಾಮಗಳನ್ನು ಅಭಿವೃದ್ಧಿ ಪಡಿಸಲಾಗುತ್ತದೆ ಎಂದು ಕರ್ನಾಟಕ ಜಲ ಸಾರಿಗೆ ಮಂಡಳಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಜಯರಾಮ್ ರಾವಪುರ್ ತಿಳಿಸಿದರು.

    ವಿಜಯಪುರ (Vijayapura) ಮತ್ತು ಬಾಗಲಕೋಟೆ (Bagalkot) ಜಿಲ್ಲೆಯ ಆಲಮಟ್ಟಿ ಮತ್ತು ಹೆರಕಲ್ ಗ್ರಾಮಗಳಲ್ಲಿರುವ ಉದ್ದೇಶಿತ ಯೋಜನಾ ಸ್ಥಳಗಳ ಕಾರ್ಯ ಯೋಜನೆ ಭೂಸ್ವಾಧೀನ ಮತ್ತು ಜಲ ಸಾರಿಗೆ ಉಪಯುಕ್ತತೆ ಬಗ್ಗೆ ಪರಿಶೀಲನೆ ಹಾಗೂ ಆಲಮಟ್ಟಿ ಅಣೆಕಟ್ಟಿನ ಕೆಳಭಾಗದಲ್ಲಿರುವ 21 ಎಕರೆ ಜಮೀನಿನಲ್ಲಿ ಕೈಗೆತ್ತಿಕೊಳ್ಳಲು ಉದ್ದೇಶಿಸಿರುವ ಮೀನು ಸಾಕಾಣಿಕಾ ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಪಡೆದರು.  ಇದನ್ನೂ ಓದಿ: ನಾಲ್ಕೇ ತಿಂಗಳಿಗೆ ಪಾಕ್‌ ತಂಡದ ಮುಖ್ಯ ಕೋಚ್‌ ಹುದ್ದೆಗೆ ಗ್ಯಾರಿ ಗುಡ್‌ಬೈ

    ಜಿಲ್ಲೆಯಲ್ಲಿರುವ ಜಲಮಾರ್ಗದ ಮುಖಾಂತರ ಪ್ರವಾಸೋದ್ಯಮ (Tourism) ಅಭಿವೃದ್ಧಿ ಪಡಿಸಿದ್ದಲ್ಲಿ ಸ್ಥಳೀಯ ಜನರಿಗೆ ವಿವಿಧ ಆರ್ಥಿಕ ಪ್ರಯೋಜನ ಪಡೆದುಕೊಳ್ಳಬಹುದಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರ ಗಮನ ಸೆಳೆದು ನೀರು ಆಧಾರಿತ ಕ್ರೀಡೆ ಅನುಭವಿಸುವ ಅವಕಾಶಗಳನ್ನು ಒದಗಿಸಿದರೆ ಪ್ರವಾಸೋದ್ಯಮ ಚಟುವಟಿಕೆಗಳು ಅಭಿವೃದ್ಧಿಯಾಗಲಿವೆ ಎಂದು ಜಯರಾಮ್ ರಾವಪುರ್ ತಿಳಿಸಿದರು.

    ಈ ಪ್ರದೇಶದಲ್ಲಿ ದೋಣಿ, ನೌಕೆ ಬೋಟ್ ಯಾರ್ಡ್‌ಗಳು ಹಾಗೂ ಸಂಬಂಧಿತ ಉಪಕರಣಗಳ ತಯಾರಿಕೆ ಹಾಗೂ ಇತರರ ಬೆಂಬಲದೊಂದಿಗೆ ಉದ್ಯಮ ತೆರೆಯುವ ಸಾಮರ್ಥ್ಯವನ್ನು ಅಭಿವೃದ್ಧಿ ಪಡಿಸಲು ನೆರವಾಗಲಿದೆ ಎಂದರು.

    ಸುತ್ತಮುತ್ತಲಿನ ಜಿಲ್ಲೆಯಲ್ಲಿರುವ ಪ್ರವಾಸಿ ತಾಣಗಳು ವಿಶ್ವ ಪರಂಪರೆಯ ಪಟ್ಟಿಯಲ್ಲಿದ್ದು ಜಲಮಾರ್ಗದ ಅಭಿವೃದ್ಧಿಗೆ ಮೂಲಸೌಕರ್ಯ ಒದಗಿಸಿದಲ್ಲಿ ಪ್ರತಿದಿನ ಹೆಚ್ಚಿನ ಸಂಖ್ಯೆ ಪ್ರವಾಸಿಗರನ್ನು ಆಕರ್ಷಿಸಿ ಸರ್ಕಾರಕ್ಕೆ ಆದಾಯ ಗಳಿಸಬಹುದಾಗಿದೆ ಎಂದು ತಿಳಿಸಿದರು. ಇದನ್ನೂ ಓದಿ: ಕಾಂಗ್ರೆಸ್‌ ಸರ್ಕಾರದಿಂದ ಲ್ಯಾಂಡ್‌ ಜಿಹಾದ್‌, ಜಮೀರ್ ಒಬ್ಬ ಆಧುನಿಕ ಟಿಪ್ಪು ಸುಲ್ತಾನ್: ಆರ್.ಅಶೋಕ್

    ಈ ಸಂದರ್ಭದಲ್ಲಿ ಕೃಷ್ಣ ಜಲ ಭಾಗ್ಯ ನಿಗಮದ ಅಧೀಕ್ಷಕ ಎಂಜಿನಿಯರ್ ಹಿರೇಗೌಡರ್ ಕಾರ್ಯನಿರ್ವಾಹಕ ಎಂಜಿನಿಯರ್ ದೊಡ್ಡಮನಿ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಚಲವಾದಿ, ಕರ್ನಾಟಕ ಜಲ ಸಾರಿಗೆ ಮಂಡಳಿ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಪಾಂಡುರಂಗ ಕುಲಕರ್ಣಿ ಸೇರಿದಂತೆ ಇತರರು ಉಪಸ್ಥಿತರಿದ್ದರು.