ಚಿಕ್ಕಬಳ್ಳಾಪುರ: ಸದಾ ಪ್ರೇಮ ಪಕ್ಷಿಗಳಿಂದ ಗಿಜುಗುಡೋ ಪ್ರೇಮಧಾಮ ನಂದಿಬೆಟ್ಟ. ಪ್ರೀತಿ, ಪ್ರೇಮ, ಪ್ರಣಯಕ್ಕೆ ಫೇಮಸ್ ಆಗಿರೋ ಆ ಪ್ರೇಮಧಾಮದಲ್ಲಿ ಅಲ್ಲಿ ಪ್ರೇಮ ಪಕ್ಷಿಗಳದ್ದೇ ಕಲರವ. ಹಾಗಂತ ನೀವು ಒಬ್ಬರೇ ಆ ಪ್ರೇಮಧಾಮಕ್ಕೆ ಹೋಗುವಂತಿಲ್ಲ. ಪ್ರೀತಿಸಿದ ಹುಡುಗಿಯ ಕೈ ಹಿಡಿದು ಜೊತೆ ಜೊತೆಯಾಗಿ ಹೋದ್ರೆ ಮಾತ್ರ ನಿಮಗೆ ಮುಕ್ತ ಅವಕಾಶ. ಆದರೆ ನೀವು ಒಬ್ಬರೇ ಆ ಪ್ರೇಮಧಾಮಕ್ಕೆ ಹೋದ್ರೆ ನಿಮಗೆ ಅಲ್ಲಿ ನಿಮಗೆ ನೋ ಎಂಟ್ರಿ.
ವಿಶ್ವವಿಖ್ಯಾತ ನಂದಿಗಿರಿಧಾಮಕ್ಕೆ ಒಬ್ಬಂಟಿಯಾಗಿ ಯಾರೇ ಬಂದ್ರೂ ಪ್ರವೇಶ ನಿರ್ಬಂಧಿಸಲಾಗಿದೆ. ನಂದಿಗಿರಿಧಾಮದ ಟಿಕೆಟ್ ಕೌಂಟರ್ ಬಳಿಯೇ ನಿಮ್ಮನ್ನ ತಡೆದು ವಾಪಾಸ್ ಕಳಿಸಲಾಗುತ್ತದೆ. ಇಲ್ಲಿನ ಸಿಬ್ಬಂದಿಯನ್ನ ಎಷ್ಟೇ ಕಾಡಿ, ಬೇಡಿದ್ರೂ ಕೂಡ ಒಬ್ಬಂಟಿಗರಿಗೆ ಮಾತ್ರ ನೋ ಎಂಟ್ರಿ. ಸೂಸೈಡ್ ತಡೆಯಬೇಕೆನ್ನುವ ಉದ್ದೇಶದಿಂದ ನಂದಿಗಿರಧಾಮದ ಗೇಟ್ ಬಳಿಯೇ ಒಬ್ಬರಿಗೆ ಪ್ರವೇಶಿವಿಲ್ಲ ಅಂತಾ ನಾಮಫಲಕ ಹಾಕಲಾಗಿದೆ.
ಹಚ್ಚ ಹಸುರಿನ ವಾತಾವರಣದಲ್ಲಿ ದಿನ ಕಳೆಯೋಣ ಅಂತಾ ದೂರ ದೂರಿಂದ ಬರ್ತಿರೋ ಒಬ್ಬಂಟಿ ಪ್ರವಾಸಿಗರು ಬೇಸರದಿಂದ ವಾಪಸ್ ಹೋಗುತ್ತಿದ್ದಾರೆ. ಹೀಗಾಗಿ ನೀವು ಒಬ್ಬರೇ ನಂದಿಗಿರಿಧಾಮಕ್ಕೆ ಬರೋ ಪ್ಲಾನ್ ಇದ್ದರೆ ಸ್ವಲ್ಪ ಬದಲಾಯಿಸಿಕೊಳ್ಳಿ.
ಪಾಟ್ನಾ: ಬಿಹಾರದಲ್ಲಿ ಪ್ರವಾಸಕ್ಕೆ ಬಂದಿದ್ದ ಮಕ್ಕಳು ಶಿಕ್ಷಕರ ಬೇಜವಾಬ್ದಾರಿಯಿಂದ ರಸ್ತೆಯಲ್ಲೇ ಮಲಗಿ ಸುದ್ದಿಯಾಗಿದ್ದಾರೆ.
ಚಂಪಾರಣ್ ಸರ್ಕಾರಿ ಶಾಲೆಯ 57 ಮಕ್ಕಳನ್ನು ‘ಮುಖ್ಯಮಂತ್ರಿ ಬಿಹಾರ್ ದರ್ಶನ ಯೋಜನೆ’ ಅಡಿಯಲ್ಲಿ ಪ್ರವಾಸಕ್ಕೆ ಕರೆದೊಯ್ಯಲಾಗಿತ್ತು. ಪ್ರವಾಸಕ್ಕೆಂದು ಸರ್ಕಾರ ಊಟ ತಿಂಡಿ ಸೇರಿದಂತೆ 20 ಸಾವಿರ ರೂ. ಮಂಜೂರು ಮಾಡಿತ್ತು. ಅದರಂತೆ ಮಕ್ಕಳನ್ನು ಐತಿಹಾಸಿಕ ತಾಣಗಳಾದ ನಳಂದ ವಿಶ್ವವಿದ್ಯಾಲಯ, ರಾಜ್‍ಗಿರ್ ಗೆ ಕರೆದುಕೊಂಡು ಹೋಗಿದ್ದಾರೆ. ಬಳಿಕ ಅಲ್ಲಿಂದ ಪಾಟ್ನಾದ ಮೃಗಾಲಯಕ್ಕೆ ಕರೆತರಲಾಗಿತ್ತು.
ಮೃಗಾಲಯವನ್ನು ವಿಕ್ಷಿಸಿದ ಬಳಿಕ ಮಕ್ಕಳು ಧಣಿದಿದ್ದಾರೆ ಎಂದು ಶಿಕ್ಷಕರೊಬ್ಬರು ಅಲ್ಲೇ ರಸ್ತೆಯ ಬದಿಯ ಫುಟ್‍ಪಾತ್‍ನಲ್ಲೇ ಮಲಗಿಸಿದ್ದಾರೆ.
Students of a government school of Champaran who were on an excursion trip as part of Mukhyamantri Bihar Darshan Yojna were allegedly made to sleep on the streets outside Patna zoo on Tuesday night (September 25). #Biharpic.twitter.com/YFsG3334Bu
ಮೃಗಾಲಯದ ಸುತ್ತ ಎಲ್ಲೂ ಹೋಟೆಲ್ ವ್ಯವಸ್ಥೆ ಇರಲಿಲ್ಲ. ಹೀಗಾಗಿ ಮಕ್ಕಳಿಗೆ ಹಸಿವಾದ್ದರಿಂದ ನಾವೇ ಮಾಡಿದ ಅಡುಗೆಯನ್ನು ಮಾಡಿ, ಅಲ್ಲೇ ಅಲ್ಲಿಯೇ ಮಲಗಿ ಮುಂಜಾನೆ ಎದ್ದು ತೆರಳಿದ್ದೇವೆ ಎಂದು ಶಿಕ್ಷಕರೊಬ್ಬರು ಹೇಳಿದ್ದಾರೆ.
ಮಕ್ಕಳಿಗೆ ಮಲಗಲು ಸೂಕ್ತ ವ್ಯವಸ್ಥೆಯನ್ನು ಕಲ್ಪಿಸದೇ, ಶಾಲಾ ಸಿಬ್ಬಂದಿ ಬೀದಿಯಲ್ಲಿ ಟರ್ಪಲ್ ಹಾಸಿ ಮಕ್ಕಳನ್ನು ಮಲಗಿಸಿ ನಿರ್ಲಕ್ಷ್ಯವನ್ನು ತೋರಿದ್ದಕ್ಕೆ ವ್ಯಾಪಕ ಟೀಕೆ ಕೇಳಿ ಬಂದಿದೆ.
ಬಾಗಲಕೋಟೆ: ಇಂದಿನಿಂದ ಎರಡು ದಿನಗಳ ಕಾಲ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಜಿಲ್ಲೆಯ ಪ್ರವಾಸ ಕೈಗೊಂಡಿದ್ದಾರೆ. ಯುರೋಪ್ ಪ್ರವಾಸದ ನಂತರ ಮತ್ತೆ ಬಾದಾಮಿ ಕ್ಷೇತ್ರದ ಕಡೆ ಮುಖ ಮಾಡಿದ್ದು, ಅವರಿಗಾಗಿ 20 ಲಕ್ಷ ರೂ. ಖರ್ಚು ಮಾಡಿ ಗೃಹ ಕಚೇರಿಯನ್ನು ಸಿದ್ಧ ಪಡಿಸಲಾಗಿದೆ.
ಬಾದಾಮಿಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯಗೆ ಮನೆ ಸಿಗಲಿಲ್ಲ. ಹೀಗಾಗಿ ಲೋಕೋಪಯೋಗಿ ಸಹಾಯಕ ಎಂಜಿನಿಯರ್ ಮನೆಯನ್ನೇ ತಮ್ಮ ಗೃಹಕಚೇರಿಯನ್ನಾಗಿ ಮಾಡಿಕೊಂಡಿದ್ದಾರೆ. ಲೋಕೋಪಯೋಗಿ ಇಲಾಖೆ ಸಹಾಯಕ ಎಂಜಿನಿಯರ್ ಮನೆಗೆ ಈಗ ನವೀಕರಣ ಭಾಗ್ಯ ಸಿಕ್ಕಿದ್ದು, ಕಚೇರಿ ಸಿದ್ದರಾಮಯ್ಯ ಗೃಹ ಕಚೇರಿಯಾಗಿ ಲಕಲಕ ಹೊಳೆಯುತ್ತಿದೆ.
ಐಶಾರಾಮಿ ಕಚೇರಿಗೆ ಇಂದು ಉದ್ಘಾಟನೆ ಭಾಗ್ಯ ದೊರೆತಿದ್ದು, ಎಸಿ, ಸೋಫಾ ಸೆಟ್, ವಿಶ್ರಾಂತಿ ಗೃಹ, ಟಿವಿ, ಕಬೋರ್ಡ್ ಮತ್ತು ಮೀಟಿಂಗ್ ಹಾಲ್ ಎಲ್ಲವೂ ಹೈಟೆಕ್ ಆಗಿದೆ. ಸಿದ್ದರಾಮಯ್ಯನವರು ಈ ಹಿಂದೆ ಬಾದಾಮಿಯಲ್ಲಿ ಮನೆ ಮಾಡುತ್ತೇನೆ ಅಂತ ಹೇಳಿದ್ದರು. ಆದರೆ ಬಾದಾಮಿಯಲ್ಲಿ ಒಳ್ಳೆ ಮನೆ ಸಿಗಲಿಲ್ಲ. ಸದ್ಯ ಕಚೇರಿ ಆರಂಭಿಸುತ್ತೇನೆ ಅಂತ ಎರಡು ತಿಂಗಳ ಹಿಂದೆ ಸಿದ್ದರಾಮಯ್ಯ ಜನರೆದುರು ಹೇಳಿಕೊಂಡಿದ್ದರು. ಇದೀಗ ಮನೆ ಬದಲು ಗೃಹಕಚೇರಿ ಆರಂಭವಾಗುತ್ತಿದೆ.
ಗೃಹಕಚೇರಿ ಉದ್ಘಾಟನೆ ನಂತರ ಬಾದಾಮಿಯ ಅಕ್ಕಮಹಾದೇವಿ ಕಲ್ಯಾಣಮಂಟಪದಲ್ಲಿ ಪುರಸಭಾ ಸದಸ್ಯರ ಅಭಿನಂದನಾ ಕಾರ್ಯಕ್ರಮ ನಡೆಯಲಿದೆ. ನಂತರ ಸಾರ್ವಜನಿಕರಿಂದ ಅಹವಾಲು ಸ್ವೀಕಾರ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಬಳಿಕ ಸಂಜೆ ಜಮಖಂಡಿ ನಗರದ ಜಮಖಂಡಿ ನಗರದ ಬಸವಭವನದಲ್ಲಿ ಕೈ ಕಾರ್ಯಕರ್ತರ ಸಭೆ ಆಯೋಜಿಸಲಾಗಿದೆ. ಸಭೆ ನಂತರ ರಾತ್ರಿ ಬಾದಾಮಿ ಪಟ್ಟಣದಲ್ಲಿ ಸಿದ್ದರಾಮಯ್ಯ ವಾಸ್ತವ್ಯ ಮಾಡಲಿದ್ದಾರೆ.
ಶುಕ್ರವಾರ ಸಿದ್ದರಾಮಯ್ಯ ಬಾದಾಮಿ ತಾಲ್ಲೂಕಿನ ಕೆರೂರು ಪಟ್ಟಣಕ್ಕೆ ಭೇಟಿ ನೀಡಿ ಕೆರೂರು ಪಟ್ಟಣ ಪಂಚಾಯತ್ ಸದಸ್ಯರ ಅಭಿನಂದನಾ ಕಾರ್ಯಕ್ರಮ ನಡೆಸಲಿದ್ದಾರೆ. ಬಳಿಕ ರಾಚೋಟೇಶ್ವರ ಕಲ್ಯಾಣಮಂಟಪದಲ್ಲಿ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗಿಯಾಗಿ ಬಳಿಕ ಕೆರೂರು ಭಾಗದ ಜನರಿಂದ ಅಹವಾಲು ಸ್ವೀಕರಿಸಲಿದ್ದಾರೆ. ನಂತರ ಮಧ್ಯಾಹ್ನ ಕೆರೂರು ಪಟ್ಟಣದಿಂದ ಗದಗ ಜಿಲ್ಲೆಗೆ ತೆರಳಲಿದ್ದಾರೆ.
ಬೆಂಗಳೂರು: ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ (ಕೆಎಸ್‍ಟಿಡಿಸಿ) 5 ದಿನಗಳು ಚಳಿಗಾಲದ ವಿಶೇಷ ಪ್ರವಾಸಗಳನ್ನು ಕೈಗೊಂಡಿದೆ.
ಅಕ್ಟೋಬರ್-ಜನವರಿ ತಿಂಗಳಲ್ಲಿ ಉತ್ತರ ಕರ್ನಾಟಕದ ಪಾರಂಪರಿಕ ಸ್ಥಳಗಳಿಗೆ 5 ದಿನಗಳ ಪ್ರವಾಸವನ್ನು ಆಯೋಜಿಸಿದೆ. ಸದರಿ ಪ್ರವಾಸಕ್ಕೆ ಒಬ್ಬರಿಗೆ ಸಾರಿಗೆ ಮತ್ತು ವಸತಿ ಸೌಲಭ್ಯ ಸೇರಿ 4,700 ರೂಪಾಯಿ. ಅದೇ ರೀತಿ ಸಮುದ್ರ ತೀರ ಪ್ರವಾಸವಾಗಿ ಗೋವಾ-ಗೋಕರ್ಣಕ್ಕೆ ಪ್ರವಾಸ ಆಯೋಜಿಸಿದೆ. ಸದರಿ ಪ್ರವಾಸಕ್ಕೆ ಒಬ್ಬರಿಗೆ ಸಾರಿಗೆ ಮತ್ತು ವಸತಿ ಸೌಲಭ್ಯ ಸೇರಿ 5,600 ರೂಪಾಯಿ ಇದೆ.
ಎಸಿ ಡಿಲಕ್ಸ್ ವಾಹನ ಸೌಲಭ್ಯದ ಪ್ರವಾಸ ಇದಾಗಿದ್ದು, ಪ್ರವಾಸದ ಬುಕ್ಕಿಂಗ್‍ಗಾಗಿ ಯಶವಂತಪುರದಲ್ಲಿರುವ ಕೆಎಸ್‍ಟಿಡಿಸಿ ಬುಕ್ಕಿಂಗ್ ಕೇಂದ್ರ ಅಥವಾ ಕೆಂಪೇಗೌಡ ಬಸ್ ನಿಲ್ದಾಣದಲ್ಲಿನ ನಿಗಮದ ಕೌಂಟರನ್ನು ಸಂಪರ್ಕಿಸಬಹುದಾಗಿದೆ.
ಹೆಚ್ಚಿನ ಮಾಹಿತಿಗಾಗಿ ಕೆಳಕಂಡ ದೂರವಾಣಿಯನ್ನು ಸಂಪರ್ಕಿಸಬಹುದಾಗಿದೆ. ದೂರವಾಣಿ ಸಂಖ್ಯೆ- 080-43344334/35, 8970650070/ 8970650075.
ಮಡಿಕೇರಿ: ಭಾರೀ ಮಳೆ ಹಾಗೂ ಭಯಾನಕ ಭೂ ಕುಸಿತಕ್ಕೆ ತುತ್ತಾಗಿದ್ದ ಪ್ರವಾಸಿಗರ ಸ್ವರ್ಗ ಕೊಡಗು ಅಕ್ಷರಶಃ ತತ್ತರಿಸಿತ್ತು. ಹೀಗಾಗಿ ಮಡಿಕೇರಿಗೆ ಪ್ರವಾಸಿಗರನ್ನು ನಿಷೇಧಿಸಲಾಗಿತ್ತು. ಆದ್ರೆ ಇದೀಗ ಕೊಡಗಿಗೆ ಪ್ರವಾಸಿಗರು ಸ್ವಲ್ಪ ಸ್ವಲ್ಪವಾಗಿ ಬರಲು ಪ್ರಾರಂಭಿಸಿದ್ದಾರೆ.
ಆಗಸ್ಟ್ 10ರ ನಂತರ ತಿಂಗಳ ಕೊನೆವರೆಗೂ ಕೊಡಗು ಅಪಾಯದ ಸ್ಥಳವಾಗಿ ಮಾರ್ಪಟ್ಟಿತ್ತು. ಈ ಹಿನ್ನೆಲೆಯಲ್ಲಿ ಕೊಡಗು ಟೂರಿಸಂ ಒಂದು ತಿಂಗಳ ಕಾಲ ಬ್ಯಾನ್ ಆಗಿತ್ತು. ಪ್ರವಾಸಿಗರು ಕೊಡಗು ಪ್ರವೇಶಿಸದಂತೆ ನಿರ್ಭಂಧ ಹೇರಲಾಗಿತ್ತು. ಆದರೆ ಈಗ ಅಬ್ಬಿಫಾಲ್ಸ್, ಮಾಂದಲ್‍ಪಟ್ಟಿ, ತಡಿಯಂಡಮೋಳ್‍ಯಂತಹ ಪ್ರಮುಖ ಪ್ರವಾಸಿ ತಾಣಗಳನ್ನು ಬಿಟ್ಟು ಉಳಿದಂತ ಸ್ಥಳಗಳಿಗೆ ಪ್ರವಾಸಿಗರು ಬರುತ್ತಿದ್ದಾರೆ.
ಈ ಹಿನ್ನೆಲೆಯಲ್ಲಿ ಇದೀಗ ಪ್ರವಾಸಿಗರ ಹಾಟ್ ಸ್ಪಾಟ್ ಸಹಜ ಸ್ಥಿತಿಗೆ ಮರಳುತ್ತಿರುವುದರಿಂದ ಕೊಡಗು ಪ್ರವಾಸಿಗರಿಗೆ ಮುಕ್ತವಾದಂತಾಗಿದೆ. ಪ್ರವಾಸೋದ್ಯಮ ನಂಬಿದ್ದವರ ಮೊಗದಲ್ಲಿ ಮಂದಹಾಸ ಮೂಡಿದೆ. ಆದರೆ ಇನ್ನೂ ಕೂಡಾ ಮಡಿಕೇರಿ-ಸೋಮವಾರಪೇಟೆ, ಹಾಸನ-ಮಡಿಕೇರಿ-ಮಂಗಳೂರು ಹಾಗೂ ಅಬ್ಬಿಫಾಲ್ಸ್, ಮಾಂದಲ್‍ಪಟ್ಟಿ, ತಡಿಯಂಡಮೋಳ್‍ಯಂತಹ ಪ್ರಮುಖ ಪ್ರವಾಸಿ ತಾಣಗಳ ರಸ್ತೆ ಸಂಚಾರಕ್ಕೆ ಮುಕ್ತವಾಗದಿರುವುದರಿಂದ ಈ ಮೂರೂ ತಾಣಗಳ ಭೇಟಿಗೆ ನಿಷೇಧ ಮುಂದುವರಿಸಲಾಗಿದೆ.
ಮಂಜಿನ ನಗರಿ ಮಡಿಕೇರಿ ರಾಜಾಸೀಟ್ ದುಬಾರೆ ನಿಸರ್ಗಧಾಮಗಳಲ್ಲಿ ಪ್ರವಾಸಿಗರು ಕಂಡು ಬರುತ್ತಿದ್ದಾರೆ. ಅಲ್ಲದೆ ವಿಕೇಂಡ್ ಗಳನ್ನು ಎಂಜಾಯ್ ಮಾಡುತ್ತಿರುವ ದೃಶ್ಯ ಕಂಡು ಬರುತ್ತಿದೆ. ಈ ಹಿಂದೆ ಜಿಲ್ಲಾಧಿಕಾರಿಗಳು ಆಗಸ್ಟ್ 31ರವರೆಗೂ ಕೊಡಗಿಗೆ ಪ್ರವಾಸಿಗರು ಬರಬಾರದು ಎಂದು ಆದೇಶ ಹೊರಡಿಸಿದ್ದರು.
ಮಡಿಕೇರಿ: ಮಹಾಮಳೆಯಿಂದ ಕೊಡಗಿನ ಚಿತ್ರಣವೇ ಸಂಪೂರ್ಣ ಬದಲಾಗಿದೆ. ದುರಂತ ಸ್ಥಳಗಳು ಇದೀಗ ಟೂರಿಸ್ಟ್ ಸ್ಪಾಟ್‍ಗಳಾಗಿದ್ದು, ರಾಜ್ಯದ ವಿವಿಧ ಮೂಲೆಗಳಿಂದ ಜನರು ತಂಡೋಪತಂಡವಾಗಿ ಬರುತ್ತಿದ್ದಾರೆ.
ಕೊಡಗಿನಲ್ಲಿ ಮಳೆ ಇಳಿಮುಖವಾಗುತ್ತಿದ್ದಂತೆ ಜಿಲ್ಲೆಯ ಪರಿಸ್ಥಿತಿ ಹೇಗಾಗಿರಬಹುದು ಎಂಬ ಕುತೂಹಲ ರಾಜ್ಯದ ಜನರನ್ನು ಕಾಡುತ್ತಿದೆ. ಕೇವಲ ಕೊಡಗು ಮಾತ್ರವಲ್ಲದೆ, ಇದೀಗ ರಾಜ್ಯದ ವಿವಿಧ ಭಾಗಗಳಿಂದ ಪ್ರವಾಹದಿಂದ ಕುಸಿದಿರುವ ಮಕ್ಕಂದೂರು ತಾಣವನ್ನು ವೀಕ್ಷಿಸಲು ಜನರು ಬರುತ್ತಿದ್ದಾರೆ. ಮಕ್ಕಂದೂರಿನಲ್ಲಿ ಮಳೆಗೆ ರಸ್ತೆಯ ಸಮೇತ ಪ್ರಪಾತಕ್ಕೆ ಜಾರಿದೆ. ಕೊಚ್ಚಿಕೊಂಡು ಹೋದ ರಸ್ತೆಯನ್ನು ನೋಡಲು ಪ್ರವಾಸಿಗರು ಮುಗಿಬೀಳುತ್ತಿದ್ದಾರೆ. ಅಷ್ಟೇ ಅಲ್ಲದೆ ಸೆಲ್ಫಿ ತೆಗೆದುಕೊಂಡು ಖುಷಿ ಪಡುತ್ತಿದ್ದಾರೆ.
ಆಗಸ್ಟ್ 31ರ ತನಕ ಯಾರು ಸಹ ಮಡಿಕೇರಿ ಪ್ರವಾಸಿ ತಾಣಗಳ ವೀಕ್ಷಣೆಗೆ ಬರಬೇಡಿ ಅಂತ ಜಿಲ್ಲಾಧಿಕಾರಿಗಳು ತಿಳಿಸಿದ್ದರು. ಆದರೂ ಕೂಡ ಜನರು ಮಾತ್ರ ಕೇಳುತ್ತಿರಲಿಲ್ಲ. ಪೊಲೀಸರ ಕಣ್ಣು ತಪ್ಪಿಸಿ ಈ ದುರಂತ ಸ್ಥಳಗಳಿಗೆ ಭೇಟಿ ನೀಡುತ್ತಿದ್ದಾರೆ. ಅಷ್ಟೆ ಅಲ್ಲದೆ ಇವರ ಸೆಲ್ಫಿ ಕ್ರೇಜ್ ಎಷ್ಟರ ಮಟ್ಟಿಗೆ ಇದೆ ಅಂದರೆ ಸ್ವಲ್ಪ ಎಚ್ಚರ ತಪ್ಪಿದರೂ ಪ್ರಾಣಕ್ಕೆ ಅಪಾಯ ಕಟ್ಟಿಟ್ಟ ಬುತ್ತಿ ಅಂತ ಪ್ರವಾಸಿಗರೊಬ್ಬರು ಹೇಳಿದ್ದಾರೆ.
ಮಡಿಕೇರಿ: ಪ್ರವಾಹ ಪೀಡಿತ ಕೊಡಗಿಗೆ ಕೆಲವು ದಿನಗಳ ಕಾಲ ತಪ್ಪಿದ್ದ ವರುಣನ ಕಾಟ ಮತ್ತೆ ಶುರುವಾಗಲಿದ್ದು, ಇತ್ತ ಕರ್ನಾಟಕ ಕಾಶ್ಮೀರಕ್ಕೆ ಪ್ರವಾಸಿಗರಿಗೆ ಆಗಸ್ಟ್ 31ರವರೆಗೆ ನಿರ್ಬಂಧ ಹಾಕಲಾಗಿದೆ.
ಕೊಡಗು, ಕರಾವಳಿಯಲ್ಲಿ ಮತ್ತೆ ನಾಲ್ಕು ದಿನಗಳ ಕಾಲ ಭಾರೀ ಮಳೆಯಾಗಲಿದೆ ಅಂತ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಆದ್ದರಿಂದ ಮುಂಜಾಗೃತ ಕ್ರಮವಾಗಿ ದಕ್ಷಿಣ ಒಳನಾಡು ಮತ್ತು ಕರಾವಳಿಯಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ. ಇತ್ತ ಮಳೆ, ಪ್ರವಾಹ ಹಿನ್ನೆಲೆಯಲ್ಲಿ ಕೊಡಗಿಗೆ ಆಗಸ್ಟ್ 31ರವರೆಗೆ ಪ್ರವಾಸಿಗರಿಗೂ ನಿರ್ಬಂಧ ವಿಧಿಸಲಾಗಿದೆ.
ಮುಂದಿನ ನಾಲ್ಕು ದಿನಗಳ ಕಾಲ ಮಳೆಯಾಗುವ ಸಾಧ್ಯತೆ ಇರುವುದರಿಂದ ಆಗಸ್ಟ್ 31ರವರೆಗೆ ಕೊಡಗು ಪ್ರವಾಸಕ್ಕೆ ಬರಬೇಡಿ ಎಂದು ಜಿಲ್ಲಾಧಿಕಾರಿ ಶ್ರೀವಿದ್ಯಾ ಆದೇಶ ಹೊರಡಿಸಿದ್ದಾರೆ. ಒಂದು ವೇಳೆ ಅಧಿಕಾರಗಳ ಆದೇಶವನ್ನು ನಿರಾಕರಿಸಿ ಪ್ರವಾಸಿಗರ ವಾಸ್ತವ್ಯಕ್ಕೆ ಅನುವು ಮಾಡಿಕೊಡುವ ಹೋಟೆಲ್ ರೆಸಾರ್ಟ್ ಮತ್ತು ಹೋಂಸ್ಟೇಗಳ ಮೇಲು ಕೇಸ್ ಹಾಕುವಂತೆ ಪೊಲೀಸ್ ಅಧಿಕಾರಿಗಳಿಗೆ ಜಿಲ್ಲಾಧಿಕಾರಿಗಳು ಸೂಚನೆ ನೀಡಿದ್ದಾರೆ.
ಕೊಡಗಿಗೆ ಹೆಚ್ಚಿನ ಪ್ರವಾಸಿಗರು ಬಂದರೆ ರಸ್ತೆ ರಿಪೇರಿ ಕಷ್ಟವಾಗುತ್ತದೆ. ಅಷ್ಟೇ ಅಲ್ಲದೇ ಕಾರ್ಯಾಚರಣೆಗೂ ತೊಂದರೆ ಆಗುತ್ತದೆ. ಆದ್ದರಿಂದ ಯಾರು ಕೊಡಗು ಪ್ರವಾಸಕ್ಕೆ ಸ್ವಲ್ಪ ದಿನ ಬರಬೇಡಿ ಅಂತ ಡಿಸಿ ಮನವಿ ಮಾಡಿದ್ದಾರೆ. ಆದರೆ ಈ ಆದೇಶಕ್ಕೆ ಕೊಡಗು ಹೋಟೆಲ್ ಮತ್ತು ರೆಸಾರ್ಟ್ ಮಾಲೀಕರ ಸಂಘ ವಿರೋಧ ವ್ಯಕ್ತಪಡಿಸಿದೆ. ಕೊಡಗಿನ ಜೀವನಾಡಿಯ ಪ್ರವಾಸೋದ್ಯಮ. ಇದನ್ನ ನಿಲ್ಲಿಸಿದರೆ ಕೊಡಗು ಹೇಗೆ ಚೇತರಿಸಿಕೊಳ್ಳುವುದು. ಆದ್ದರಿಂದ ಕೂಡಲೇ ಆದೇಶ ಹಿಂಪಡೆಯಿರಿ ಎಂದು ಸಂಘ ಡಿ.ಸಿಗೆ ಮನವಿ ಮಾಡಿದ್ದಾರೆ.
ಮಡಿಕೇರಿ: ಮಡಿಕೇರಿ ಹಾಗೂ ರಾಜ್ಯದಲ್ಲಿ ಮಳೆಬಾಧಿತ ಪ್ರದೇಶಗಳ ಶನಿವಾರ ಭೇಟಿ ನೀಡಿದ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ನಾಳೆಯೂ ಪ್ರವಾಸವನ್ನು ಮುಂದುವರಿಸಿದ್ದಾರೆ. ಕೊಡಗಿಗೆ ನೆರವು ನೀಡುವಲ್ಲಿ ರಾಜ್ಯದ ಜನತೆ ಮುಂದಾಗಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ.
ಸಿಎಂ ಕುಮಾರಸ್ವಾಮಿ ಆಗಸ್ಟ್ 19 ರಂದು ಚಿಕ್ಕಮಗಳೂರು, ಶಿವಮೊಗ್ಗ ಜಿಲ್ಲೆಯ ಪ್ರವಾಸಕ್ಕೆ ನಿರ್ಧರಿಸಿದ್ದರು. ಆದರೆ ಅದನ್ನು ರದ್ದು ಪಡಿಸಿ ಕೊಡಗು ಜಿಲ್ಲೆಯ ಪ್ರವಾಸ ಮುಂದುವರೆಸಲಿದ್ದಾರೆ. ವೈಮಾನಿಕ ಸಮೀಕ್ಷೆ ನಡೆಸಿದ ನಂತರ ರಸ್ತೆ ಮೂಲಕ ಮಡಿಕೇರಿಗೆ ತೆರಳಿದ ಕುಮಾರಸ್ವಾಮಿ, ಅಲ್ಲಿನ ಗಂಜಿ ಕೇಂದ್ರವೊಂದಕ್ಕೆ ತೆರಳಿ ಸಂತ್ರಸ್ತರೊಂದಿಗೆ ಮಾತುಕತೆ ನಡೆಸಿದರು. ಮಡಿಕೇರಿಯ ಗುಡ್ಡ ಕುಸಿದ ಸ್ಥಳಕ್ಕೆ ಭೇಟಿ ನೀಡಿದರು. ಭೂಕುಸಿತದಿಂದ ಸಿಲುಕಿಕೊಂಡಿರುವ ಸುಮಾರು 60 ಜನರನ್ನು ರಕ್ಷಿಸಲು ಸಿಎಂ ಪ್ರಯಾಣಿಸಿದ ಹೆಲಿಕಾಪ್ಟರ್ ಬಳಸಲಾಗುತ್ತಿದೆ. ಹೀಗಾಗಿ ಇಂದು ರಾತ್ರಿ ಮೈಸೂರಿನಲ್ಲಿ ವಾಸ್ತವ್ಯ ಹೂಡಿ, ನಾಳೆಯೂ ಕೊಡಗು ಜಿಲ್ಲೆಯ ಪ್ರವಾಸಕ್ಕೆ ನಿರ್ಧರಿಸಿದ್ದಾರೆ. ಜೊತೆಗೆ ರಕ್ಷಣಾ ಕಾರ್ಯಾಚರಣೆಯನ್ನು ಪರಿಶೀಲಿಸುವ ಉದ್ದೇಶವಿದೆ ಎಂದು ತಿಳಿಸಿದ್ದಾರೆ.
ಕೊಡಗಿನಲ್ಲಿ ದೊಡ್ಡ ಪ್ರಮಾಣದ ನಷ್ಟವಾಗಿದ್ದು, ವಾಸಿಸಲು ಅಸಾಧ್ಯವಾದ ಪರಿಸ್ಥಿತಿ ಎದುರಾಗಿದೆ. ಇತ್ತ ಸಂತ್ರಸ್ತರ ರಕ್ಷಣಾ ಕಾರ್ಯಾಚರಣೆ ಸಮರೋಪಾದಿಯಲ್ಲಿ ನಡೆಯುತ್ತಿದೆ. ವೈಮಾನಿಕ ಸಮೀಕ್ಷೆ ನಡೆಸುವಂತೆ ಪ್ರಧಾನಿ ನರೇಂದ್ರ ಮೋದಿಗೆ ಮನವಿ ಸಲ್ಲಿಸುವುದಾಗಿ ಸಿಎಂ ಹೇಳಿದ್ದಾರೆ.
ರಾಜ್ಯದ ವಿವಿಧೆಡೆ ಭಾರೀ ಪ್ರಮಾಣದ ಹಾನಿಯಾಗಿದ್ದು, ಉದಾರವಾಗಿ ನೆರವು ನೀಡುವಂತೆ ನಾಡಿನ ಜನರಿಗೆ ಮನವಿ ಮಾಡಿಕೊಂಡರು. ಕೊಡಗು, ಚಿಕ್ಕಮಗಳೂರು ಜಿಲ್ಲೆಯಲ್ಲಿ ಅಡಿಕೆ, ಕಾಫಿ, ಬೆಳೆ ನಷ್ಟವಾಗಿದೆ. ಬೆಳೆ ನಷ್ಟ ಮಾಹಿತಿಯ ವರದಿಯನ್ನು ನೀಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಇತ್ತ ಕಾಫಿ ಬೋರ್ಡ್ ಅಧಿಕಾರಿಗಳಿಗೂ ಸೂಚಿಸಿದ್ದೇವೆ ಎಂದು ಕುಮಾರಸ್ವಾಮಿ ತಿಳಿಸಿದರು.
ಸಭೆಯ ಮುಖ್ಯಾಂಶಗಳು:
ಭಾರೀ ಮಳೆಯಿಂದಾಗಿ ರಾಜ್ಯದಲ್ಲಿ ಏಪ್ರಿಲ್‍ನಿಂದ ಇಲ್ಲಿವರೆಗೆ 153 ಮಂದಿ ಮೃತಪಟ್ಟಿದ್ದಾರೆ. 11,427 ಮನೆಗಳು ನಾಶವಾದರೆ, 700ಕ್ಕೂ ಹೆಚ್ಚು ಜಾನುವಾರು ಸಾವನ್ನಪ್ಪಿವೆ. ಕೊಡಗಿನಲ್ಲಿ 7 ಜನ ಮೃತಪ್ಪಿದ್ದಾರೆ ಹಾಗೂ 800ಕ್ಕೂ ಹೆಚ್ಚು ಮನೆ ನಾಶವಾಗಿವೆ. ಮೃತರ ಕುಟುಂಬಗಳಿಗೆ 5 ಲಕ್ಷ ರೂ. ಪರಿಹಾರ ಘೋಷಿಸಿ ಕುಮಾರಸ್ವಾಮಿ ಕೊಡಗು ಜಿಲ್ಲೆಯ ಅಭಿವೃದ್ಧಿಗೆ 100 ಕೋಟಿ ರೂ. ಪರಿಹಾರ ಘೋಷಣೆಯಾಗಿದ್ದು, ಇದರಲ್ಲಿ 30 ಕೋಟಿ ರೂ.ವನ್ನು ಈಗಾಗಲೇ ಬಿಡುಗಡೆ ಮಾಡಲಾಗಿದೆ. ಇನ್ನು ಮನೆ ಕಳೆದುಕೊಂಡವರಿಗೆ 2 ರಿಂದ 2.50 ಲಕ್ಷ ರೂ. ಪರಿಹಾರ ನೀಡಲಾಗುವುದು ಎಂದು ಘೋಷಿಸಿದರು.
ಬೆಂಗಳೂರು: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಇವತ್ತಿನಿಂದ ಆಗಸ್ಟ್ 16 ರವರೆಗೆ ಬಿಜೆಪಿ ನಾಯಕರು ರಾಜ್ಯಾದ್ಯಂತ ಪ್ರವಾಸ ಮಾಡಲಿದ್ದಾರೆ.
ಇದೇ ಆಗಸ್ಟ್ 13 ರಂದು ಬೀದರ್ ನಲ್ಲಿ ಜನಧ್ವನಿ ಸಮಾವೇಶದಲ್ಲಿ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಲೋಕಸಭಾ ಚುನಾವಣೆ ಪ್ರಚಾರಕ್ಕೆ ಅಧಿಕೃತವಾಗಿ ಚಾಲನೆ ಕೊಡಲಿದ್ದಾರೆ. ಅದಕ್ಕೂ ಮೊದಲೇ ಇವತ್ತಿನಿಂದ 3 ತಂಡಗಳಲ್ಲಿ ಬಿಜೆಪಿ ನಾಯಕರು ರಾಜ್ಯ ಪ್ರವಾಸವನ್ನು ಆರಂಭಿಸಲಿದ್ದಾರೆ. ಇದನ್ನೂ ಓದಿ: ಲೋಕಸಭೆ ಚುನಾವಣೆ ಸಿದ್ಧತೆ- 3 ತಂಡಗಳಲ್ಲಿ ಬಿಜೆಪಿ ನಡೆಸಲಿದೆ ರಾಜ್ಯ ಪ್ರವಾಸ
ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ, ಮಾಜಿ ಸಿಎಂ ಜಗದೀಶ್ ಶೆಟ್ಟರ್ ಹಾಗೂ ಮಾಜಿ ಡಿಸಿಎಂ ಕೆ ಎಸ್ ಈಶ್ವರಪ್ಪ ನೇತೃತ್ವದ ಪ್ರತ್ಯೇಕ ಮೂರು ತಂಡಗಗಳು 8 ದಿನಗಳ ಕಾಲ ರಾಜ್ಯಾದ್ಯಂತ ಪ್ರವಾಸ ಮಾಡಲಿವೆ. ಪ್ರವಾಸದ ವೇಳೆ ಆಯಾ ಜಿಲ್ಲೆಯ ಕೋರ್ ಕಮಿಟಿ ಮೀಟಿಂಗ್, ಸ್ಥಳಿಯ ಸಂಸ್ಥೆ ಚುನಾವಣೆ ಮತ್ತು ಲೋಕಸಭೆ ಚುನಾವಣೆ ತಯಾರಿ ಬಗ್ಗೆ ಚರ್ಚೆ ಮಾಡಲಿದ್ದಾರೆ. ಜೊತೆಗೆ ಪ್ರತಿ ಜಿಲ್ಲೆಯಲ್ಲಿ ಶಕ್ತಿ ಕೇಂದ್ರದ ಸದಸ್ಯರ ಮೇಲ್ಪಟ್ಟವರ ಸಭೆಯೂ ನಡೆಯಲಿದೆ.
ಸಭೆಯಲ್ಲಿ 1000 ಸದಸ್ಯರು ಭಾಗಿಯಾಗುತ್ತಾರೆ. ಅಷ್ಟೇ ಅಲ್ಲದೇ ಪ್ರತಿ ಜಿಲ್ಲೆಯಲ್ಲಿ ಪತ್ರಿಕಾಗೋಷ್ಠಿ ನಡೆಸಲಿದ್ದಾರೆ. ಬೀದರ್ ನಿಂದ ಯಡಿಯೂರಪ್ಪ ಇಂದು ಪ್ರವಾಸಕ್ಕೆ ಚಾಲನೆ ನೀಡಲಿದ್ದು, ಉತ್ತರ ಕರ್ನಾಟಕದ 13 ಜಿಲ್ಲೆಗಳಲ್ಲಿ ಯಡಿಯೂರಪ್ಪ ಪ್ರವಾಸ ನಡೆಸಲಿದ್ದಾರೆ. ಮಧ್ಯ ಕರ್ನಾಟಕದಲ್ಲಿ ಜಗದೀಶ್ ಶೆಟ್ಟರ್, ಮೈಸೂರು ಭಾಗದಲ್ಲಿ ಈಶ್ವರಪ್ಪರ ತಂಡ ಪ್ರವಾಸ ಕೈಗೊಳ್ಳಲಿದೆ.
ಬೆಂಗಳೂರು: ಸ್ಯಾಂಡಲ್ ವುಡ್ ನ ನಟಿ ಅಮೂಲ್ಯ ತನ್ನ ಪತಿ ಜೊತೆ ಪ್ಯಾರಿಸ್ ನಲ್ಲಿ ಎಂಜಾಯ್ ಮಾಡುತ್ತಿದ್ದಾರೆ.
ಅಮೂಲ್ಯ ಅವರು ತನ್ನ ಪತಿ ಜಗದೀಶ್ ಮತ್ತು ಸ್ನೇಹಿತರ ಜೊತೆ ಪ್ಯಾರಿಸ್ ಗೆ ಪ್ರವಾಸಕ್ಕೆ ತೆರಳಿದ್ದಾರೆ. ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆಯ ವೇಳೆ ಮಾವನ ಪರ ಭರ್ಜರಿ ಪ್ರಚಾರದಲ್ಲಿ ತೊಡಗಿ ಬ್ಯುಸಿಯಾಗಿದ್ದ ಅಮೂಲ್ಯ ಅವರು ಇದೀಗ ರಿಲ್ಯಾಕ್ಸ್ ಗಾಗಿ ಪ್ಯಾರಿಸ್ ನಲ್ಲಿ ಸುತ್ತಾಡುತ್ತಿದ್ದಾರೆ.
ಅಮೂಲ್ಯ ಪ್ಯಾರಿಸ್ ನಲ್ಲಿ ಪತಿ ಮತ್ತು ಸ್ನೇಹಿತರ ಜೊತೆ ಭೇಟಿ ನೀಡಿದ ಸ್ಥಳಗಳ ಫೋಟೋಗಳನ್ನು ತಮ್ಮ ಇನ್ಸ್ ಸ್ಟಾಗ್ರಾಂನಲ್ಲಿ ಹಾಕಿಕೊಂಡಿದ್ದಾರೆ. ಅಮೂಲ್ಯ ಪ್ಯಾರೀಸ್ ನ ಐಫೆಲ್ ಟವರ್ ಬಳಿ ನಿಂತು ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ. ಮಾತ್ರವಲ್ಲದೇ ಐಫೆಲ್ ಟವರ್ ಗೆ ಕಿಸ್ ಕೊಡುವ ರೀತಿಯಲ್ಲಿಯೇ ಫೋಟೋ ತೆಗೆಸಿಕೊಂಡಿದ್ದಾರೆ. ಪತಿ ಜಗದೀಶ್ ಮತ್ತು ಸ್ನೇಹಿತರ ಜೊತೆ ಕಳೆದ ಕೆಲವು ಕ್ಷಣಗಳನ್ನು ಫೋಟೋಗಳಲ್ಲಿ ಸೆರೆ ಹಿಡಿದು ತಮ್ಮ ಸಂತಸವನ್ನು ಹಂಚಿಕೊಂಡಿದ್ದಾರೆ.
ಜಗದೀಶ್ ಅವರು ಕೂಡ ಐಫೆಲ್ ಟವರ್ ಬಳಿ ಫೆರಾರಿ ಕಾರಿನಲ್ಲಿ ಜಾಲಿ ರೈಡ್ ಹೋಗಿದ್ದಾರೆ. ಆ ವಿಡಿಯೋವನ್ನು ಇನ್ಸ್ ಸ್ಟಾಗ್ರಾಂನಲ್ಲಿ ಹಾಕಿ, ಇದು ಒಳ್ಳೆಯ ಅನುಭವ ಕೊಟ್ಟಿದೆ ಎಂದು ಬರೆದುಕೊಂಡಿದ್ದಾರೆ.
ಇತ್ತೀಚೆಗೆ ಸಿನಿಮಾರಂಗದಲ್ಲಿ ಬ್ಯುಸಿಯಾಗಿದ್ದ ನಟ-ನಟಿಯರು ವಿದೇಶ ಪ್ರಯಾಣ ಹೋಗುತ್ತಿದ್ದು, ನಟಿ ಹರ್ಷಿಕಾ ಪೂಣಚ್ಚ ಕೂಡ ಆಮ್ ಸ್ಟರ್ ಡ್ಯಾಮಿಗೆ ಹೋಗಿ ಸುತ್ತಾಟ ಮಾಡುತ್ತಿದ್ದಾರೆ.