Tag: Tour

  • ಆಗಸದಲ್ಲಿ ಅಪ್ಪು ರೋಚಕ ಸಾಹಸಯಾನ!

    ಆಗಸದಲ್ಲಿ ಅಪ್ಪು ರೋಚಕ ಸಾಹಸಯಾನ!

    ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅವರು ಇಲ್ಲಿ ಆಗಸದಲ್ಲಿ ಸಾಹಸ ಮಾಡಿದ್ದಾರೆ.

    ಸದ್ಯ ದಕ್ಷಿಣ ಅಮೆರಿಕದಲ್ಲಿ ಕುಟುಂಬಸ್ಥರೊಂದಿಗೆ ಪುನಿತ್ ರಾಜ್‍ಕುಮಾರ್ ಬೇಸಿಗೆ ರಜೆ ಕಳೆಯುತ್ತಿದ್ದಾರೆ. ಈ ವೇಳೆ ದಕ್ಷಿಣ ಅಮೇರಿಕಾದ ಪ್ರಸಿದ್ಧ ಪ್ರವಾಸಿ ತಾಣಗಳನ್ನು ನೋಡುತ್ತಾ ಹಾಲಿಡೇ ಸಂಭ್ರಮದಲ್ಲಿದ್ದಾರೆ.

    ಈ ಪ್ರವಾಸದ ವೇಳೆ ಪುನೀತ್ ರಾಜ್‍ಕುಮಾರ್ ಸ್ಕೈ ಡೈವಿಂಗ್ ಮಾಡಿದ್ದು, ಈ ರೋಮಾಂಚನ ಸಾಹಸದ ದೃಶ್ಯಗಳನ್ನು ಪಿಆರ್‌ಕೆ ಸ್ಟೂಡಿಯೋ ಅಧಿಕೃತ ಯೂ ಟ್ಯೂಬ್ ಚಾನೆಲಿನಲ್ಲಿ ಅಪ್ಲೋಡ್ ಆಗಿದೆ.

    ಪುನೀತ್ ಸ್ಕೈ ಡೈವಿಂಗ್ ದೃಶ್ಯಗಳು, ಬೋಟಿಂಗ್, ಜಲಪಾತ, ದಕ್ಷಿಣ ಅಮೇರಿಕದ ಸುಂದರ ಪ್ರಕೃತಿಯ ಚಿತ್ರಣಗಳು ಸೆರೆಯಾಗಿದೆ.

    ದಕ್ಷಿಣ ಅಮೇರಿಕಾದ ಭೇಟಿಯ ಕೆಲವು ಅತ್ಯುತ್ತಮ ಕ್ಷಣಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ನಾನು ಇಷ್ಟಪಡುತ್ತೇನೆ. ಈ ವಿಡಿಯೋ ವೀಕ್ಷಿಸಿ ಮತ್ತು ಆನಂದಿಸಿ ಎಂದು ಕ್ಯಾಪ್ಷನ್ ಕೂಡ ಹಾಕಲಾಗಿದೆ.

  • ಮತದಾನ ಮಾಡದೇ ಪ್ರವಾಸಕ್ಕೆ ಬಂದ್ರೆ ಹುಷಾರ್!

    ಮತದಾನ ಮಾಡದೇ ಪ್ರವಾಸಕ್ಕೆ ಬಂದ್ರೆ ಹುಷಾರ್!

    – ಚಿಕ್ಕಮಗ್ಳೂರು ಯುವಕರಿಂದ ಎಚ್ಚರಿಕೆ

    ಬೆಂಗಳೂರು: ಲೋಕಸಭಾ ಚುನಾವಣೆಯಲ್ಲಿ ಮತದಾನ ಮಾಡದೇ ಪ್ರವಾಸಕ್ಕೆ ಬಂದರೆ ನಿಮ್ಮ ವಾಹನವನ್ನು ಪಂಚರ್ ಮಾಡುತ್ತೇವೆ ಎಂದು ಯುವಕರು ಎಚ್ಚರಿಕೆ ನೀಡಿದ್ದಾರೆ.

    ಚಿಕ್ಕಮಗಳೂರು, ಮಡಿಕೇರಿ ಮತ್ತು ಮೈಸೂರು ಯುವಕರು ಈ ಎಚ್ಚರಿಕೆಯನ್ನು ನೀಡಿದ್ದಾರೆ. ಮತದಾನದ ದಿನ ಯುವಕ- ಯುವತಿಯರು ಮೋಜು-ಮಸ್ತಿಗೆ ಎಂದು ಚಿಕ್ಕಮಗಳೂರು, ಮಡಿಕೇರಿ ಮತ್ತು ಮೈಸೂರಿಗೆ ಎಂದು ತೆರಳುತ್ತಾರೆ.

    ಮತದಾನ ದಿನದ ಮೋಜು ಮಾಡುವ ಯುವಕರ ಪ್ಲಾನ್‍ಗೆ ಬ್ರೇಕ್ ಹಾಕಲು ವಾಟ್ಸಾಪ್‍ನಲ್ಲಿ ಎಚ್ಚರಿಕೆಯ ಸಂದೇಶ ರವಾನೆ ಆಗುತ್ತಿದೆ. ಏಪ್ರಿಲ್ 18 ಮತ್ತು 23 ರಂದು ಮತದಾನ ಮಾಡಿ. ವೋಟ್ ಹಾಕದೆ ಪ್ರವಾಸಕ್ಕೆ ಬಂದರೆ ತೊಂದರೆ ಕೊಡುತ್ತೇವೆ ಎಂದು ಚಿಕ್ಕಮಗಳೂರು, ಮಡಿಕೇರಿ ಹಾಗೂ ಮೈಸೂರಿನ ಯುವಕರು ಎಚ್ಚರಿಗೆ ನೀಡುತ್ತಿದ್ದಾರೆ.

    ವಾಟ್ಸಾಪ್‍ಗಳಲ್ಲಿ ವಿಶೇಷವಾಗಿ ಬೆಂಗಳೂರಿನ ಜನರನ್ನು ಯುವಕರು ಎಚ್ಚರಿಕೆ ನೀಡುತ್ತಿದ್ದಾರೆ.

  • ಲೋಕಸಭಾ ಚುನಾವಣೆ ಅಖಾಡಕ್ಕೆ ಅಮಿತ್ ಶಾ ಅದ್ಧೂರಿ ಎಂಟ್ರಿ

    ಲೋಕಸಭಾ ಚುನಾವಣೆ ಅಖಾಡಕ್ಕೆ ಅಮಿತ್ ಶಾ ಅದ್ಧೂರಿ ಎಂಟ್ರಿ

    ಬೆಂಗಳೂರು: ಲೋಕಸಭಾ ಚುನಾವಣೆಯ ಅಖಾಡಕ್ಕೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಇಂದು ಅದ್ಧೂರಿ ಎಂಟ್ರಿ ಕೊಡುತ್ತಿದ್ದಾರೆ.

    ಅಮಿತ್ ಶಾ ಆಂಧ್ರ ಪ್ರದೇಶ, ಕರ್ನಾಟಕ ಹಾಗು ತಮಿಳುನಾಡಿಗೆ ಎರಡು ದಿನಗಳ ಪ್ರವಾಸ ಕೈಗೊಂಡಿದ್ದು, ಇಂದು ಬೆಂಗಳೂರಿಗೆ ಬರುತ್ತಿದ್ದಾರೆ. ಚಾಣಾಕ್ಯನ ಭೇಟಿಯಿಂದಾಗಿ ರಾಜ್ಯ ಬಿಜೆಪಿ ಪಾಳಯದಲ್ಲಿನ ರಾಜಕೀಯ ಚಟುವಟಿಕೆ ಗರಿಗೆದರಿದೆ.

    ದೇವನಹಳ್ಳಿ, ಬೆಂಗಳೂರು ಹೊರವಲಯದ ರೆಸಾರ್ಟ್‍ನಲ್ಲಿ ಶಕ್ತಿಕೇಂದ್ರದ ಸಮಾವೇಶ, ಶಾಸಕರು, ಸಂಸದರ ಜೊತೆ ಸಭೆ, ಪ್ರಭಾರಿಗಳ ಜೊತೆ ಸಭೆಯಲ್ಲಿ ಭಾಗವಹಿಸಲಿದ್ದು, ಇಡೀ ದಿನ ಕ್ಲಾಸ್ ತೆಗೆದುಕೊಳ್ಳಲಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

    ಈ ನಡುವೆ ಇಂದು ರಾತ್ರಿಯೇ ಬೆಂಗಳೂರಿನ ಹೊರ ವಲಯದ ರೆಸಾರ್ಟ್‍ನಲ್ಲಿ ರಾಜ್ಯ ಬಿಜೆಪಿ ಕೋರ್ ಕಮಿಟಿ ಸಭೆ ನಡೆಯಲಿದ್ದು, ಆಪರೇಷನ್ ಡೀಲ್ ಆಡಿಯೋ ಆರೋಪದಿಂದಾದ ಡ್ಯಾಮೇಜ್ ಕಂಟ್ರೋಲ್ ಮಾಡುವ ಬಗ್ಗೆ, ಲೋಕಸಭೆ ಚುನಾವಣೆ ಟಿಕೆಟ್ ಹಂಚಿಕೆಯ ಬಗ್ಗೆ ವಿಸ್ತೃತವಾದ ಚರ್ಚೆ ನಡೆಯಲಿದೆ.

    ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಮಧ್ಯಾಹ್ನ 3 ಗಂಟೆಗೆ ಆಗಮಿಸಲಿದ್ದಾರೆ. ಮಧ್ಯಾಹ್ನ 3.40ಕ್ಕೆ ದೇವನಹಳ್ಳಿಯ ಅವತಿಯ ಸಾಯಿ ಗಾರ್ಡನ್ ನಲ್ಲಿರುವ ಶಕ್ತಿಕೇಂದ್ರದ ಸಮಾವೇಶದಲ್ಲಿ ಭಾಗವಹಿಸಿ, ಸಂಜೆ 5.45ಕ್ಕೆ ಯಲಹಂಕದಲ್ಲಿರುವ ರೆಸಾರ್ಟ್‍ನಲ್ಲಿ ಶಾಸಕರು, ಸಂಸದರ ಸಭೆ ನಡೆಸಲಿದ್ದಾರೆ.

    ಸಂಜೆ 7.15 ಕ್ಕೆ ಲೋಕಸಭಾ ಪ್ರಭಾರಿಗಳು, ಸಂಚಾಲಕರು, ವಿಸ್ತಾರಕರು, ರಾಜ್ಯ ಪದಾಧಿಕಾರಿಗಳು, ಜಿಲ್ಲಾ ಅಧ್ಯಕ್ಷರ ಸಭೆ ನಡೆಸಲಿದ್ದು, ರೆಸಾರ್ಟ್‍ನಲ್ಲಿಯೇ ರಾತ್ರಿ 9 ಗಂಟೆಗೆ ರಾಜ್ಯ ಬಿಜೆಪಿ ಕೋರ್ ಕಮಿಟಿ ಸಭೆ, ರೆಸಾರ್ಟ್‍ನಲ್ಲಿಯೇ ವಾಸ್ತವ್ಯ ಹೂಡಲಿದ್ದಾರೆ. ಫೆ.22 ರಂದು ಬೆಳಗ್ಗೆ 9.30ಕ್ಕೆ ತಮಿಳುನಾಡಿನ ಮಧುರೈಗೆ ಪ್ರವಾಸ ಕೈಗೊಳ್ಳಲಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಯೋಧ ಗುರುವಿನ ಕೊನೆ ಕ್ಷಣದ ಪ್ರವಾಸ – ಫೋಟೋ, ವಿಡಿಯೋ ನೋಡಿ

    ಯೋಧ ಗುರುವಿನ ಕೊನೆ ಕ್ಷಣದ ಪ್ರವಾಸ – ಫೋಟೋ, ವಿಡಿಯೋ ನೋಡಿ

    ಮಂಡ್ಯ: ಜಮ್ಮು-ಕಾಶ್ಮೀರದ ಪುಲ್ವಾಮಾದಲ್ಲಿ ಉಗ್ರನ ಆತ್ಮಾಹುತಿ ದಾಳಿಯಲ್ಲಿ ಮಂಡ್ಯದ ಯೋಧ ಗುರು ಹುತಾತ್ಮರಾಗಿದ್ದು, ಎಲ್ಲೆಡೆ ಉಗ್ರರನ್ನು ಸಂಹಾರ ಮಾಡಬೇಕೆಂದು ಪ್ರತಿಭಟನೆ ಮಾಡುತ್ತಿದ್ದಾರೆ. ಆದರೆ ಇತ್ತ ಯೋಧ ಗುರು ಅವರು ಕೊನೆಯಲ್ಲಿ ಪ್ರವಾಸಕ್ಕೆ ಹೋಗಿದ್ದ ಫೋಟೋ, ವಿಡಿಯೋ ಲಭ್ಯವಾಗಿದೆ.

    ಹುತಾತ್ಮ ಯೋಧ ರಜೆಯ ಹಿನ್ನೆಲೆಯಲ್ಲಿ ಊರಿಗೆ ಬಂದಿದ್ದರು. ಆಗ ಭಾನುವಾರ ಆರ್ಮಿಗೆ ತೆರಳುವ ಮುನ್ನ ಸ್ನೇಹಿತ ನಾಗೇಶ್ ಜೊತೆಗೆ ಮೈಸೂರಿನ ಹಿನ್ನೀರಿಗೆ ಪ್ರವಾಸಕ್ಕೆ ಹೋಗಿದ್ದರು. ಸ್ನೇಹಿತ ಮಾತ್ರವಲ್ಲದೇ ತಮ್ಮ ಪತ್ನಿ ಕಲಾವತಿ ಅವರನ್ನು ಜೊತೆಗೆ ಕರೆದುಕೊಂಡು ಹೋಗಿದ್ದರು. ಅವರ ಸ್ನೇಹಿತ ಕೂಡ ತಮ್ಮ ಪತ್ನಿ ಮತ್ತು ಮಗುವಿನ ಜೊತೆ ಬಂದಿದ್ದರು. ಎಲ್ಲರೂ ಒಟ್ಟಿಗೆ ಇದ್ದಾಗ ತೆಗೆದಿದ್ದ ಫೋಟೋ ಹಾಗೂ ವಿಡಿಯೋ ವೈರಲ್ ಆಗುತ್ತಿದೆ. ಸ್ನೇಹಿತ ಹಾಗೂ ಪತ್ನಿಯ ಜೊತೆ ಸೆಲ್ಫಿ ತೆಗೆದುಕೊಂಡಿದ್ದು, ಬಳಿಕ ಎಲ್ಲರೂ ಒಟ್ಟಿಗೆ ಹಿನ್ನೀರಿನಲ್ಲಿ ಬೋಟಿಂಗ್ ಮಾಡುತ್ತಿದ್ದಾಗ ವಿಡಿಯೋ ಮಾಡಿದ್ದಾರೆ. ಇದನ್ನೂ ಓದಿ: ಗುರು ಕಳುಹಿಸಿದ್ದ ಸೆಲ್ಫಿ ವಿಡಿಯೋ ನೋಡಿ ಭಾವುಕರಾದ ಗೆಳೆಯರು, ಕುಟುಂಬಸ್ಥರು

    ಇತ್ತೀಚೆಗಷ್ಟೆ ಹುತಾತ್ಮ ಯೋಧ ಗುರು ಅವರು ತಮ್ಮ ಸ್ನೇಹಿತರಿಗೆ ಹಾಗೂ ಕುಟುಂಬದವರಿಗೆ ಒಂದು ಸೆಲ್ಫಿ ವಿಡಿಯೋವನ್ನು ವಾಟ್ಸಾಪ್ ಮೂಲಕ ಕಳುಹಿಸಿದ್ದರು. ಆ ವಿಡಿಯೋದಲ್ಲಿ ಅವರು ಇಬ್ಬನಿಯಲ್ಲಿ ಕಾಶ್ಮೀರ್ ಎಂದು ಬರೆದು ಅಲ್ಲಿ ನಿಂತು ಹಾಯ್ ಮಾಡಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv 

  • ಮೈಸೂರು ನಗರವನ್ನು ಡಬಲ್ ಡೆಕ್ಕರ್ ಬಸ್ಸಿನಲ್ಲಿ ಸುತ್ತಿ: ಪ್ರವಾಸೋದ್ಯಮಕ್ಕೆ ಸಿಕ್ಕಿದ್ದು ಏನು?

    ಮೈಸೂರು ನಗರವನ್ನು ಡಬಲ್ ಡೆಕ್ಕರ್ ಬಸ್ಸಿನಲ್ಲಿ ಸುತ್ತಿ: ಪ್ರವಾಸೋದ್ಯಮಕ್ಕೆ ಸಿಕ್ಕಿದ್ದು ಏನು?

    ಬೆಂಗಳೂರು: ವಿಶ್ವ ವಿಖ್ಯಾತ ಮೈಸೂರಿನ ಪ್ರವಾಸಿ ತಾಣಗಳನ್ನು ಇನ್ನು ಮುಂದೆ ಡಬಲ್ ಡೆಕ್ಕರ್ ಬಸ್ಸಿನಲ್ಲಿ ವೀಕ್ಷಣೆ ಮಾಡಬಹುದು. ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ(ಕೆಎಸ್‍ಟಿಡಿಸಿ) ವತಿಯಿಂದ ಮೈಸೂರಿನಲ್ಲಿ ಲಂಡನ್ ಬಿಗ್ ಬಸ್ ಮಾದರಿಯ 6 ಡಬಲ್ ಡೆಕ್ಕರ್ ತೆರೆದ ಬಸ್ ಸೇವೆ ಆರಂಭಿಸಲು 5 ಕೋಟಿ ರೂ. ಅನುದಾನವನ್ನು ಸಿಎಂ ಬಜೆಟ್ ನಲ್ಲಿ ಘೋಷಿಸಿದ್ದಾರೆ.

    ಪ್ರವಾಸೋದ್ಯಮಕ್ಕೆ ಸಿಕ್ಕಿದ್ದು ಏನು?
    ಬಾದಾಮಿಯನ್ನು ವಿಶ್ವವಿಖ್ಯಾತ ಪ್ರವಾಸಿ ತಾಣವನ್ನಾಗಿ ಮತ್ತು ಕರಕುಶಲ ಮಾರುಕಟ್ಟೆಯನ್ನಾಗಿ ಅಭಿವೃದ್ಧಿ ಪಡಿಸಲು 25 ಕೋಟಿ ರೂ. ಅನುದಾನ.

    ಪ್ರವಾಸಿಗರನ್ನು ಆಕರ್ಷಿಸಲು ‘ಕರ್ನಾಟಕ ಅಂತರಾಷ್ಟ್ರೀಯ ಪ್ರವಾಸೋದ್ಯಮ ಪ್ರದರ್ಶನ’ ಆಯೋಜನೆಗೆ 2 ಕೋಟಿ ರೂ. ಅನುದಾನ. ಹಂಪಿಯಲ್ಲಿ ‘ಹಂಪಿ ವ್ಯಾಖ್ಯಾನ ಕೇಂದ್ರ’ ಹಾಗೂ ವಿಜಯಪುರದಲ್ಲಿ ‘ವಿಜಯಪುರ ಪ್ರವಾಸೋದ್ಯಮ ವ್ಯಾಖ್ಯಾನ ಕೇಂದ್ರ ವನ್ನು ಸ್ಥಾಪಿಸಲು ತಲಾ 1 ಕೋಟಿ ರೂ. ಅನುದಾನ.

    ಪಣಂಬೂರು ಮತ್ತು ಸಸಿಹಿತ್ಲುವಿನಲ್ಲಿ ಕಡಲ ತೀರದ ಪ್ರವಾಸೋದ್ಯಮ ಅಭಿವೃದ್ಧಿಗೆ 7 ಕೋಟಿ ರೂ. ಅನುದಾನ. ಇಲಾಖೆಯ ಒಟ್ಟು 834 ಸಂರಕ್ಷಿತ ಸ್ಮಾರಕಗಳಲ್ಲಿ, 600 ಸ್ಮಾರಕಗಳ ಸಮೀಕ್ಷೆ ಹಾಗೂ ಸಂರಕ್ಷಣೆಗೆ ಕ್ರಮ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಪ್ರವಾಸಕ್ಕೆ ಬಂದಿದ್ದ ಖಾಸಗಿ ಬಸ್ ಅಪಘಾತ- ವಿದ್ಯಾರ್ಥಿ ದುರ್ಮರಣ

    ಪ್ರವಾಸಕ್ಕೆ ಬಂದಿದ್ದ ಖಾಸಗಿ ಬಸ್ ಅಪಘಾತ- ವಿದ್ಯಾರ್ಥಿ ದುರ್ಮರಣ

    ಮಡಿಕೇರಿ: ಪ್ರವಾಸಕ್ಕೆ ಬಂದಿದ್ದ ಖಾಸಗಿ ಬಸ್ ಅಪಘಾತಕ್ಕೀಡಾದ ಘಟನೆ ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಸುಂಟಿಕೊಪ್ಪ ಸಮೀಪದ ಶಾಂತಿಗೇರಿ ತಿರುವಿನಲ್ಲಿ ನಡೆದಿದೆ.

    ಈ ಘಟನೆ ಇಂದು ನಸುಕಿನ ಜಾವ 2.30ರ ಸುಮಾರಿಗೆ ನಡೆದಿದೆ. ಬಳ್ಳಾರಿ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳನ್ನು ಹೊತ್ತ ಖಾಸಗಿ ಬಸ್ ಮಡಿಕೇರಿ ಪ್ರವಾಸಕ್ಕೆ ಬಂದಿದ್ದ ವೇಳೆ ಈ ಅವಘಡ ಸಂಭವಿಸಿದೆ.

    ಅಪಘಾತದಲ್ಲಿ ಹತ್ತನೇ ತರಗತಿ ವಿದ್ಯಾರ್ಥಿ ಬಸವರಾಜು ಮೃತಪಟ್ಟಿದ್ದಾನೆ. ಘಟನೆಯಲ್ಲಿ ಕೆಲ ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ. ಕೂಡಲೇ ಗಾಯಳುಗಳನ್ನು ಮಡಿಕೇರಿ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಬಸ್ಸಿನ ಚಾಲಕ ಹಾಗೂ ಅಡುಗೆ ಸಿಬ್ಬಂದಿಯನ್ನು ಮಂಗಳೂರಿಗೆ ರವಾನೆ ಮಾಡಲಾಗಿದೆ.

    ಅಪಾಯದಿಂದ ಪಾರಾದ ವಿದ್ಯಾರ್ಥಿಗಳಿಗೆ ಸುಂಟಿಕೊಪ್ಪ ರಾಮ ಮಂದಿರದಲ್ಲಿ ವಾಸ್ತವ್ಯಕ್ಕೆ ಅವಕಾಶ ಮಾಡಿಕೊಡಲಾಗಿದೆ. ಸ್ಥಳಕ್ಕೆ ಕೊಡಗು ಎಸ್ ಪಿ ಸುಮಾನ್ ಪನ್ನೇಕರ್ ಡಿವೈಎಸ್‍ಪಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

    ಹೇಗೆ ಅಪಘಾತಕ್ಕೀಡಾಯ್ತು? ಅಪಘಾತಕ್ಕೆ ಕಾರಣವೇನು ಎಂಬುದಾಗಿ ತಿಳೀದುಬಂದಿಲ್ಲ. ಸುಂಟಿಕೊಪ್ಪ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲು ಮಾಡಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಕಲುಷಿತಗೊಂಡಿದೆ ಮಾಣಿಕ್ಯಧಾರ ನೀರು- ಪವಿತ್ರ ನೀರಿನಲ್ಲಿ ಸೇರುತ್ತಿದೆ ಪ್ರವಾಸಿಗರ ಮಲ, ಮೂತ್ರ

    ಕಲುಷಿತಗೊಂಡಿದೆ ಮಾಣಿಕ್ಯಧಾರ ನೀರು- ಪವಿತ್ರ ನೀರಿನಲ್ಲಿ ಸೇರುತ್ತಿದೆ ಪ್ರವಾಸಿಗರ ಮಲ, ಮೂತ್ರ

    ಚಿಕ್ಕಮಗಳೂರು: ಪ್ರವಾಸಿಗರ ಸ್ವರ್ಗವೆನಿಸಿಕೊಂಡಿರುವ ಚಿಕ್ಕಮಗಳೂರಲ್ಲಿ ಹತ್ತಾರು ಪ್ರವಾಸಿ ತಾಣಗಳಿದ್ದು, ಅದರಲ್ಲೂ ಚಂದ್ರದ್ರೋಣ ಪರ್ವತ ಶ್ರೇಣಿಯ ಮಾಣಿಕ್ಯಧಾರ ಜಲಪಾತ ಪ್ರವಾಸಿಗರ ಫೆವರೇಟ್ ಸ್ಪಾಟ್ ಆಗಿದೆ. ನಿತ್ಯವೂ ಆಗಮಿಸುವ ನೂರಾರು ಪ್ರವಾಸಿಗರು ಇಲ್ಲಿನ ಜಲಧಾರೆಯಲ್ಲಿ ಮಿಂದೆದ್ದು, ಈ ನೀರನ್ನು ಕುಡಿದು ಪಾವನರಾಗುತ್ತೀವಿ ಎಂದುಕೊಂಡಿದ್ದಾರೆ. ಆದರೆ ಈ ನೀರು ಕುಡಿಯೋಕಲ್ಲ, ಸ್ನಾನಕ್ಕೂ ಯೋಗ್ಯವಲ್ಲದಷ್ಟು ಮಲೀನವಾಗಿದೆ.

    ಕಾಫಿನಾಡು ಚಿಕ್ಕಮಗಳೂರಿನ ಬಾಬಬುಡನ್‍ಗಿರಿಯ ಸೊಬಗನ್ನು ನೋಡುವುದಕ್ಕೆ ಪ್ರತಿದಿನ ಸಾವಿರಾರು ಪ್ರವಾಸಿಗರು ಬರುತ್ತಾರೆ. ಇಲ್ಲಿ ಇರುವ ಚಿಕ್ಕ ತೊರೆಯೇ ಮಾಣಿಕ್ಯಧಾರ. ಈ ನೀರನ್ನು ಕುಡಿದು ಅದರಲ್ಲಿ ಸ್ನಾನ ಮಾಡಿದರೆ, ಜೀವನ ಪಾವನವಾಗುತ್ತೆ ಎಂದು ಅದರಲ್ಲಿ ಸ್ನಾನ ಮಾಡುತ್ತಾರೆ. ಆದರೆ ಆ ನೀರು ಈಗ ಪವಿತ್ರವಾಗಿಲ್ಲ. ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಈ ಜಲಪಾತದ ನೀರನ್ನು ಸಂಶೋಧನೆಗೆ ಒಳಪಡಿಸಿದಾಗ, ನೀರಿನಲ್ಲಿ ಮನುಷ್ಯರ ಮಲ, ಮೂತ್ರದಂಶದ ಎಫ್-ಕೊಲಿಫಾರಂ ಪತ್ತೆಯಾಗಿದ್ದು, ಕುಡಿಯಲು ಯೋಗ್ಯವಲ್ಲ ಅಂತಾ ಹೇಳಿದೆ.

    ಈ ಮಾಣಿಕ್ಯಧಾರಕ್ಕೆ ಬರುವ ಪ್ರವಾಸಿಗರು, ಜಲಪಾತ ಹುಟ್ಟೋ ಜಾಗದಲ್ಲಿಯೇ ಮಲಮೂತ್ರ ವಿಸರ್ಜನೆ ಮಾಡುತ್ತಿದ್ದು, ಹಾಗಾಗಿ ನೀರಿನಲ್ಲಿ ಎಫ್-ಕೊಲಿಫಾರಂ ಬ್ಯಾಕ್ಟೀರಿಯಾ ಇರುವುದು ಪತ್ತೆಯಾಗಿದೆ. ಪ್ರತಿನಿತ್ಯ ಸಾವಿರಾರು ಪ್ರವಾಸಿಗರು ಶ್ಯಾಂಪು, ಸೋಪು ಇತ್ಯಾದಿ ರಾಸಾಯನಿಕಗಳನ್ನು ಬಳಸಿ ಸ್ನಾನ ಮಾಡೋದರ ಜೊತೆಗೆ ಬಟ್ಟೆಯನ್ನು ಬಿಸಾಡಿ ಹೋಗುವುದರಿಂದ, ನೀರು ಕಲುಷಿತಗೊಳ್ಳೋದರ ಜೊತೆ ಪರಿಸರವೂ ಹಾಳಾಗುತ್ತಿದೆ. ಈ ಬಗ್ಗೆ ಜಿಲ್ಲಾಡಳಿತದ ಗಮನಕ್ಕೆ ತಂದ್ರೂ ಯಾವುದೇ ಪ್ರಯೋಜನವಾಗಿಲ್ಲ ಅಂತ ಸ್ಥಳೀಯರು ಹೇಳಿದ್ದಾರೆ.

    ಪ್ರವಾಸಿಗರ ನೆಚ್ಚಿನ ತಾಣವಾಗಿದ್ದ ಮಾಣಿಕ್ಯಧಾರ ಇದೀಗ ಮಾಲಿನ್ಯ ಭರಿತವಾಗಿರೋದು ಜನರಲ್ಲಿ ಆತಂಕ ಮೂಡಿಸಿದೆ. ಇನ್ನಾದರೂ ಜಿಲ್ಲಾಡಳಿತ ಇತ್ತ ಗಮನ ಹರಿಸಿ ಮಾಣಿಕ್ಯಧಾರದಲ್ಲಿ ಸ್ವಚ್ಛತೆಯನ್ನು ಕಾಪಾಡುವ ಜೊತೆಗೆ ಪಾವಿತ್ರ್ಯತೆಯನ್ನು ಉಳಿಸಲು ಕ್ರಮಕೈಗೊಳ್ಳಬೇಕಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ಆಸ್ಟ್ರೇಲಿಯಾಗೆ ಹೊರಟ ಟೀಂ ಇಂಡಿಯಾ ಮಾಡುತ್ತಾ ಕಮಾಲ್?

    ಆಸ್ಟ್ರೇಲಿಯಾಗೆ ಹೊರಟ ಟೀಂ ಇಂಡಿಯಾ ಮಾಡುತ್ತಾ ಕಮಾಲ್?

    ಮುಂಬೈ: ಮುಂಬರುವ ಆಸೀಸ್ ಪ್ರವಾಸದ ಸಿದ್ಧತೆಯಲ್ಲಿದ್ದ ಕೊಹ್ಲಿ ನಾಯಕತ್ವದ ಟೀಂ ಇಂಡಿಯಾ ಆಟಗಾರರು ಇಂದು ಆಸ್ಟ್ರೇಲಿಯಾದತ್ತ ಪ್ರಯಾಣ ಬೆಳೆಸಿದರು. ಪ್ರಯಾಣದ ಆರಂಭಕ್ಕೂ ಮುನ್ನ ಹಲವು ಆಟಗಾರರು ಸಾಮಾಜಿಕ ಜಾಲತಾಣದಲ್ಲಿ ಫೋಟೋ ಪೋಸ್ಟ್ ಮಾಡಿದ್ದಾರೆ.

    ಆಸೀಸ್ ಪ್ರವಾಸದಲ್ಲಿ ಟೀಂ ಇಂಡಿಯಾ ತಲಾ ಮೂರು ಟಿ20, ಏಕದಿನ ಹಾಗೂ 4 ಟೆಸ್ಟ್ ಪಂದ್ಯಗಳನ್ನು ಆಡಲಿದೆ. ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದ ಟೀಂ ಇಂಡಿಯಾ ಮುಖ್ಯ ಕೋಚ್ ರವಿಶಾಸ್ತ್ರಿ, ಮುಂದಿನ ವಿಶ್ವಕಪ್ ಟೂರ್ನಿಗೆ ಕೇವಲ 13 ಪಂದ್ಯಗಳು ಮಾತ್ರ ಉಳಿದಿದೆ. ಆದ್ದರಿಂದ ಏಕದಿನ ತಂಡದಲ್ಲಿ ಹೆಚ್ಚಿನ ಬದಲಾವಣೆ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದರು.

    ಆಸೀಸ್ ನೆಲದಲ್ಲಿ ಇದುವರೆಗೂ ಒಮ್ಮೆಯೂ ಟೆಸ್ಟ್ ಸರಣಿಯಲ್ಲಿ ಗೆಲುವು ಪಡೆಯದ ಟೀಂ ಇಂಡಿಯಾ ಈ ಬಾರಿ ಆತ್ಮವಿಶ್ವಾಸದಿಂದಿದೆ. ಆಸೀಸ್ ಸರಣಿಗೂ ಮುನ್ನ ಟೀಂ ಇಂಡಿಯಾ ತವರು ನೆಲದಲ್ಲಿ ವೆಸ್ಟ್ ಇಂಡೀಸ್ ತಂಡವನ್ನು ಎದುರಿಸಿತ್ತು. ಅಲ್ಲದೇ ಟೆಸ್ಟ್ ಸರಣಿಯನ್ನು 2-0, ಏಕದಿನ ಸರಣಿಯನ್ನು 3-1 ಹಾಗೂ ಟಿ20 ಸರಣಿಯನ್ನು 3-0 ಅಂತದಲ್ಲಿ ಗೆದ್ದು ಸಂಭ್ರಮಿಸಿತ್ತು. ಆದರೆ ಇದಕ್ಕೂ ಮುನ್ನ ದಕ್ಷಿಣ ಆಫ್ರಿಕಾ ಹಾಗೂ ಇಂಗ್ಲೆಂಡ್ ಪ್ರವಾಸ ಕೈಗೊಂಡಿದ್ದ ಟೀಂ ಇಂಡಿಯಾ ಟೆಸ್ಟ್ ಸರಣಿಯಲ್ಲಿ ಕ್ರಮವಾಗಿ 2-1, 4-1 ಅಂತರದಲ್ಲಿ ಸೋಲುಂಡಿತ್ತು.

    ಆಸೀಸ್ ಸರಣಿಯಲ್ಲಿ ಮೊದಲು ಟಿ20 ಪಂದ್ಯಗಳು ಆರಂಭವಾಗಲಿದ್ದು, ನ.21ರಂದು ಮೊದಲ ಪಂದ್ಯ ನಡೆಯಲಿದೆ. ಬಳಿಕ ಟೆಸ್ಟ್ ಹಾಗೂ ಏಕದಿನ ಪಂದ್ಯಗಳು ನಿಗದಿಯಾಗಿದೆ. ಆಸೀಸ್ ತಂಡದ ಪ್ರಮುಖ ಆಟಗಾರರಾದ ಡೇವಿಡ್ ವಾರ್ನರ್ ಹಾಗೂ ಸ್ಟೀವ್ ಸ್ಮಿತ್ ತಂಡದಿಂದ ಹೊರಗುಳಿದಿರುವುದು ಟೀಂ ಇಂಡಿಯಾಗೆ ಆಸೀಸ್ ನೆಲದಲ್ಲಿ ಟೆಸ್ಟ್ ಸರಣಿ ಜಯಗಳಿಸುವ ಉತ್ತಮ ಅವಕಾಶ ಎಂದು ಹಲವು ಕ್ರಿಕೆಟ್ ವಿಶ್ಲೇಷಕರು ಹಾಗೂ ಹಿರಿಯ ಆಟಗಾರರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

     

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

  • ಪ್ರವಾಸಕ್ಕೆ ಬಂದಿದ್ದ ವಿದ್ಯಾರ್ಥಿ ನೀರಿನಲ್ಲಿ ಮುಳುಗಿ ಸಾವು!

    ಪ್ರವಾಸಕ್ಕೆ ಬಂದಿದ್ದ ವಿದ್ಯಾರ್ಥಿ ನೀರಿನಲ್ಲಿ ಮುಳುಗಿ ಸಾವು!

    ಚಿಕ್ಕಮಗಳೂರು: ಪ್ರವಾಸಕ್ಕೆ ಬಂದಿದ್ದ ವಿದ್ಯಾರ್ಥಿಯೊಬ್ಬ ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಚಿಕ್ಕಮಗಳೂರು ಜಿಲ್ಲೆ ಶೃಂಗೇರಿ ತಾಲೂಕಿನ ತುಂಗಾ ನದಿಯಲ್ಲಿ ನಡೆದಿದೆ.

    ರಾಮನಗರ ಜಿಲ್ಲೆಯ ಕನಕಪುರ ತಾಲೂಕಿನ ಹಲಸೂರು ಪ್ರಿಯದರ್ಶಿನಿ ಪ್ರೌಢಶಾಲೆಯ 9ನೇ ತರಗತಿ ಓದುತ್ತಿದ್ದ ತರುಣ್ ಗೌಡ ಮೃತ ವಿದ್ಯಾರ್ಥಿ. ಶಾಲೆಯಿಂದ ಸುಮಾರು 60 ವಿದ್ಯಾರ್ಥಿಗಳು ಬಸ್ ಮಾಡಿಕೊಂಡು ಶೃಂಗೇರಿಗೆ ಪ್ರವಾಸಕ್ಕೆಂದು ಬಂದಿದ್ದರು. ಈ ವೇಳೆ ಮಕ್ಕಳು ಸ್ನಾನಕ್ಕೆ ಬಂದಾಗ ಶೌಚಗೃಹದವರು ಒಬ್ಬರಿಗೆ 20 ರೂಪಾಯಿ ಎಂದಿದ್ದಾರೆ.

    20 ರೂ. ಜಾಸ್ತಿಯಾಗುತ್ತದೆ ಎಂದು ತಿಳಿದು ಮಕ್ಕಳು ಸ್ನಾನ ಮಾಡಲು ತುಂಗಾ ನದಿಗೆ ಇಳಿದಿದ್ದಾರೆ. ಈ ವೇಳೆ ಈ ದುರ್ಘಟನೆ ಸಂಭವಿಸಿದೆ.

    ಸ್ಥಳೀಯರು ಹಾಗೂ ಪೊಲೀಸರ ಸಹಕಾರದಿಂದ ಸುಮಾರು ಒಂದು ಗಂಟೆಯ ಬಳಿಕ ವಿದ್ಯಾರ್ಥಿಯ ಮೃತದೇಹವನ್ನ ನೀರಿನಿಂದ ಮೇಲೆತ್ತಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ಶೃಂಗೇರಿ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

    ಮಕ್ಕಳು ಪ್ರವಾಸಕ್ಕೆ ಖರ್ಚಿಗೆಂದು ಹೆಚ್ಚಿನ ಹಣ ತಂದಿರಲಿಲ್ಲ. ಒಬ್ಬರಿಗೆ 20 ರೂ. ಆಗುತ್ತದೆ ಎಂದು ಹೇಳಿದ ಹಿನ್ನೆಲೆಯಲ್ಲಿ ಎಲ್ಲ ವಿದ್ಯಾರ್ಥಿಗಳು ನದಿಯಲ್ಲೇ ಸ್ನಾನ ಮಾಡಲು ಇಳಿದಿದ್ದರು ಎನ್ನುವ ವಿಚಾರ ತಿಳಿದು ಬಂದಿದೆ.

     

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಆಸೀಸ್ ಟೂರ್ನಿ- ಟೀಂ ಇಂಡಿಯಾ ಬೆನ್ನಿಗೆ ನಿಂತ ಎಬಿಡಿ

    ಆಸೀಸ್ ಟೂರ್ನಿ- ಟೀಂ ಇಂಡಿಯಾ ಬೆನ್ನಿಗೆ ನಿಂತ ಎಬಿಡಿ

    ಮುಂಬೈ: ಆಸೀಸ್ ಪ್ರವಾಸ ಕೈಗೊಳ್ಳಲಿರುವ ಟೀಂ ಇಂಡಿಯಾ ತಂಡ ಉತ್ತಮವಾಗಿದ್ದು, ಆಸ್ಟ್ರೇಲಿಯಾಗೆ ತನ್ನದೇ ನೆಲದಲ್ಲಿ ಸೋಲುಣಿಸುವ ಸಾಮರ್ಥ್ಯವನ್ನು ಹೊಂದಿದೆ ಎಂದು ದಕ್ಷಿಣ ಆಫ್ರಿಕಾ ಮಾಜಿ ಆಟಗಾರ ಎಬಿಡಿ ವಿಲಿಯರ್ಸ್ ಅಭಿಪ್ರಾಯ ಪಟ್ಟಿದ್ದಾರೆ.

    ಈ ಹಿಂದಿನ ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿ ಟೀಂ ಇಂಡಿಯಾ ಉತ್ತಮ ಪ್ರದರ್ಶನ ನೀಡಿದ್ದು, ಸದ್ಯ ತಂಡ ಮತ್ತೊಂದು ಉತ್ತಮ ಅವಕಾಶ ಹೊಂದಿದೆ. ಆದರೆ ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ ಸೋಲುಂಡರೂ ದಿಟ್ಟ ಪ್ರದರ್ಶನವನ್ನೇ ಟೀಂ ಇಂಡಿಯಾ ನೀಡಿದೆ. ಅದರಲ್ಲೂ ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ರೋಚಕ ಸೋಲುಂಡಿತ್ತು. ಒಂದೊಮ್ಮೆ ಆ ಪಂದ್ಯವನ್ನು ಗೆದ್ದಿದ್ದರೆ, ಟೂರ್ನಿಯ ಫಲಿತಾಂಶವೇ ಬೇರೆಯಾಗುತಿತ್ತು ಎಂದು ಅಭಿಪ್ರಾಯ ಪಟ್ಟಿದ್ದಾರೆ.

    ಬುಮ್ರಾ ಹಾಗೂ ಭುನೇಶ್ವರ್ ಕುಮಾರ್ ಇಂಗ್ಲೆಂಡ್ ಟೂರ್ನಿಗೆ ಸಿದ್ಧರಾಗಿರಲಿಲ್ಲ. ಆದರೆ ಅವರು ಸದ್ಯ ಉತ್ತಮ ಫಾರ್ಮ್ ನಲ್ಲಿದ್ದು, ವಿಶ್ವ ಕ್ರಿಕೆಟ್ ಬೆಸ್ಟ್ ಬೌಲಿಂಗ್ ಪಡೆಯನ್ನು ತಂಡ ಹೊಂದಿದೆ. ಅಲ್ಲದೇ ಬ್ಯಾಟಿಂಗ್ ಕ್ರಮಾಂಕವೂ ಉತ್ತಮವಾಗುತ್ತಿದ್ದು, ಆಸೀಸ್ ವಿರುದ್ಧದ ಗೆಲ್ಲುವ ಅವಕಾಶವನ್ನು ಕೈಚೆಲ್ಲುವುದಿಲ್ಲ ಎಂಬ ವಿಶ್ವಾಸವಿದೆ ಎಂದರು.

    ನಮ್ಮಿಬ್ಬರ ಯೋಚನಾ ಶೈಲಿ ಒಂದೇ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹಾಗೂ ಎಬಿಡಿ ವಿಲಿಯರ್ಸ್ ಮಧ್ಯೆ ಉತ್ತಮ ಸ್ನೇಹ ಹೊಂದಿರುವುದು ಎಲ್ಲರಿಗೂ ತಿಳಿದ ಸಂಗತಿ. ತಮ್ಮ ಸಂದರ್ಶನದಲ್ಲಿ ಕೊಹ್ಲಿ ಕುರಿತು ಮಾತನಾಡಿರುವ ಎಬಿಡಿ, ಇಬ್ಬರು ಒಂದೇ ರೀತಿಯ ಯೋಚನಾ ದಾಟಿಯನ್ನು ಹೊಂದಿದ್ದು, ಮೈದಾನದಲ್ಲೂ ಹಾಗೆಯೇ ಆಟವನ್ನು ಎಂಜಯ್ ಮಾಡುತ್ತೇವೆ. ಅಭಿಮಾನಿಗಳು ನಮ್ಮನ್ನು ಫುಟ್ಬಾಲ್ ದಿಗ್ಗಜರಾದ ಮೆಸ್ಸಿ, ರೋನಾಲ್ಡೋ ಅವರಿಗೆ ಹೋಲಿಕೆ ಮಾಡುತ್ತಾರೆ. ಅದನ್ನು ಕೇಳಲು ಇಷ್ಟವಾಗುತ್ತದೆ ಎಂದು ಪ್ರತಿಕ್ರಿಯಿಸಿದರು

    ಇದೇ ವೇಳೆ ಕೊಹ್ಲಿಯನ್ನು ಹಾಡಿ ಹೊಗಳಿದ ಎಬಿಡಿ, ಕೊಹ್ಲಿ ತಂಡದ ನಾಯಕರಾಗಿ ತಮ್ಮ ತಪ್ಪುಗಳಿಂದಲೇ ಎಲ್ಲವನ್ನು ಕಲಿಯುತ್ತಾರೆ. ಕೊಹ್ಲಿ ಒಬ್ಬ ಅತ್ಯುತ್ತಮ ನಾಯಕ ಹಾಗೂ ಬ್ಯಾಟ್ಸ್‍ಮನ್ ಆಗಿರುವುದು ಎದುರಾಳಿಗಳಿಗೆ ಭಯ ಹುಟ್ಟಿಸುವ ಅಂಶವಾಗಿದೆ ಎಂದು ಹೇಳಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv