Tag: Tour

  • ಬೇಸಿಗೆಯಲ್ಲಿ ಪುಟ್ಟಗೌರಿ ಮತ್ತಷ್ಟು ಹಾಟ್: ಕೂರ್ಗಿನಲ್ಲಿ ಸಾನ್ಯಾ ಅಯ್ಯರ್

    ಬೇಸಿಗೆಯಲ್ಲಿ ಪುಟ್ಟಗೌರಿ ಮತ್ತಷ್ಟು ಹಾಟ್: ಕೂರ್ಗಿನಲ್ಲಿ ಸಾನ್ಯಾ ಅಯ್ಯರ್

    ಸಾನ್ಯಾ  ಅಯ್ಯರ್ ತಮ್ಮ ಚೊಚ್ಚಲು ಸಿನಿಮಾ ‘ಗೌರಿ’ ಶೂಟಿಂಗ್ ಮುಗಿಸಿದ್ದಾರೆ. ಡಬ್ಬಿಂಗ್ (Dubbing) ಕೂಡ ಮಾಡಿದ್ದಾರೆ. ಡಬ್ಬಿಂಗ್ ಮಾಡುತ್ತಿರುವ ಫೋಟೋವನ್ನು ಸೋಷಿಯಲ್ ಮೀಡಿಯಾದಲ್ಲಿ ಅವರು ಈ ಹಿಂದೆ ಪೋಸ್ಟ್ ಮಾಡಿದ್ದರು. ಇದೀಗ ಸಮ್ಮರ್ ಹಾಲಿಡೇ ಕಳೆಯಲ್ಲಿ ತಾಯಿ ಜೊತೆ ಕೂರ್ಗಿಗೆ ಹೋಗಿದ್ದಾರೆ. ಅಲ್ಲಿ ಫೋಟೋಗೆ ಸಖತ್ ಪೋಸ್ ಕೂಡ ಕೊಟ್ಟಿದ್ದಾರೆ.

    ‘ಗೌರಿ’ (Gauri) ಸಿನಿಮಾದಲ್ಲಿ ನಾಯಕಿಯಾಗಿ ನಟಿಸುತ್ತಿದ್ದಂತೆಯೇ ಕಿರುತೆರೆಯ ಪುಟ್ಟಗೌರಿ ಸಾಕಷ್ಟು ಬದಲಾವಣೆ ಕಾಣುತ್ತಿದ್ದಾರೆ. ಸಖತ್ ಹಾಟ್ ಹಾಟ್ ಆಗಿ ಫೋಟೋಶೂಟ್ ಮಾಡಿಸಿಕೊಂಡಿದ್ದ ಸಾನ್ಯಾ ಅಯ್ಯರ್ (Sanya Iyer), ಈ ಚಿತ್ರಕ್ಕಾಗಿ ಮತ್ತೊಂದು ಫೋಟೋ ಶೂಟ್ (Photoshoot) ನಲ್ಲಿ ಭಾಗಿಯಾಗಿದ್ದರು.

    ಬ್ಲೌಸ್ ಇಲ್ಲದೇ ಕೇವಲ ಸೀರೆ ಉಟ್ಟುಕೊಂಡು ಫೋಟೋ ಶೂಟ್ ಮಾಡಿಸಿಕೊಂಡಿರುವ ಸಾನ್ಯಾ ಅಯ್ಯರ್. ಆ ಫೋಟೋದಲ್ಲಿ ಸಖತ್ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದರು. ಬ್ಯಾಕ್ ಲೆಸ್ ಪೋಸ್ ಕೂಡ ನೀಡಿದ್ದರು. ಆ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಕೂಡ ಆಗಿದ್ದವು.

    ಈ ಹಿಂದೆಯೂ ಸಾನ್ಯಾ ಬಿಕಿನಿ ಫೋಟೋಶೂಟ್‌ನಲ್ಲಿ ಬೋಲ್ಡ್ ಆಗಿ ಕಾಣಿಸಿಕೊಳ್ಳುವ ಮೂಲಕ ಸೋಶಿಯಲ್ ಮೀಡಿಯಾದಲ್ಲಿ ಸೆನ್ಸೇಷನ್ ಕ್ರಿಯೇಟ್ ಮಾಡಿದ್ದರು. ಗೌರಿ ಚಿತ್ರಕ್ಕಾಗಿ ಹೊಸ ಲುಕ್‌ನಲ್ಲಿ ಸ್ಟೈಲೀಶ್ ಗೆಟಪ್‌ನಲ್ಲಿ ಕ್ಯಾಮೆರಾ ಕಣ್ಣಿಗೆ ನಟಿ ಪೋಸ್ ನೀಡಿದ್ದರು.

     

    ಗೌರಿ ಸಿನಿಮಾ ಚಿಕ್ಕಮಗಳೂರು ಸೇರಿದಂತೆ ನಾನಾ ಸ್ಥಳಗಳಲ್ಲಿ ಶೂಟ್ ಆಗಿದೆ. ರವಿವರ್ಮ ಅವರ ಸಾಹಸ ನಿರ್ದೇಶನದಲ್ಲಿ ಸಾಹಸ ದೃಶ್ಯಗಳು ಅದ್ಭುತವಾಗಿ ಮೂಡಿಬಂದಿದೆ. ಸಮರ್ಜಿತ್ ನಾನು ಅಂದುಕೊಂಡದಕ್ಕಿಂತ ಚೆನ್ನಾಗಿ ಅಭಿನಯಿಸಿದ್ದಾರೆ. ಸಾನ್ಯ ಅವರು ಕೂಡ. ಮುಖ್ಯಮಂತ್ರಿ ಚಂದ್ರು, ಸಿಹಿಕಹಿ ಚಂದ್ರು, ಮಾನಸಿ ಸುಧೀರ್, ಎಸ್ತರ್ ನರೋನ ಮುಂತಾದವರು ಚಿತ್ರದಲ್ಲಿ ನಟಿಸಿದ್ದಾರೆ.

  • ವರಂಗವನ್ನೇ ಹೋಲುವ ಕಾರ್ಕಳದ ಆನೆಕೆರೆ ಬಸದಿ ವಿಶೇಷತೆ ಏನು?

    ವರಂಗವನ್ನೇ ಹೋಲುವ ಕಾರ್ಕಳದ ಆನೆಕೆರೆ ಬಸದಿ ವಿಶೇಷತೆ ಏನು?

    ಜೈನ ಧರ್ಮವು ಈ ಪ್ರದೇಶದಲ್ಲಿ ಪ್ರಮುಖ ಧರ್ಮವಾಗಿರುವುದರಿಂದ ಕಾರ್ಕಳವು ಅನೇಕ ಬಸದಿಗಳಿಂದ ಕೂಡಿದೆ. ಅವುಗಳಲ್ಲಿ ಸಾವಿರ ಕಂಬ ಬಸದಿ, ವರಂಗ ಫೇಮಸ್. ಇದೀಗ ಈ ಪಟ್ಟಿಗೆ ಕಾರ್ಕಳದ ಆನೆಕೆರೆ ಬಸದಿ ಕೂಡ ಸೇರಿದೆ.

    ಹೌದು.. ಕೆರೆ ಬಸದಿ ಎಂದಾಗ ಥಟ್ಟನೆ ನೆನಪಾಗೋದು ಉಡುಪಿಯ ಹೆಬ್ರಿ ತಾಲೂಕಿನಲ್ಲಿರುವ ವರಂಗ. ಇದು ಅನೇಕ ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದೆ. ಜೊತೆಗೆ ಇತ್ತೀಚಿನ ದಿನಗಳಲ್ಲಿ ಫೋಟೋಶೂಟ್‌ ಮಾಡಲು ಉತ್ತಮ ಸ್ಥಳ ಕೂಡ ಆಗಿದೆ. ಅದರಲ್ಲೂ ಕೆಲವು ತಿಂಗಳ ಹಿಂದೆ ಆನಂದ್‌ ಮಹೀಂದ್ರಾ ಅವರು ಮಳೆಗಾಲದ 10 ಪ್ರೇಕ್ಷಣೀಯ ಸ್ಥಳಗಳಲ್ಲಿ ವರಂಗದ ಕೆರೆ ಬಸದಿಯನ್ನೂ ಪಟ್ಟಿ ಮಾಡಿದ್ದರು. ಆ ಬಳಿಕ ವರಂಗದ ಕೆರೆ ಬಸದಿಗೆ ಆಗಮಿಸುವ ಪ್ರವಾಸಿಗರ ಸಂಖ್ಯೆಯೂ ಜಾಸ್ತಿಯಾಗಿದೆ. ಆದರೆ ಉಡುಪಿ ಜಿಲ್ಲೆಯಲ್ಲಿ ವರಂಗವನ್ನೇ ಹೋಲುವ ಇನ್ನೊಂದು ಜೈನ ಬಸದಿ (Jaina Basadi) ಇದೆ. ಈ ಬಗ್ಗೆ ಹೆಚ್ಚಿನವರಿಗೆ ತಿಳಿದಿಲ್ಲ. ಅದುವೇ ಕಾರ್ಕಳ ತಾಲೂಕಿನ ಆನೆಕೆರೆ ಚತುರ್ಮುಖ ಬಸದಿ. ಇದು ಕಾರ್ಕಳದ 18 ಜೈನಬಸದಿಗಳಲ್ಲಿ ಒಂದಾಗಿದೆ.

    ಕೆರೆ ಮಧ್ಯೆ ಬಸದಿ: ಕೆರೆ ಬಸದಿಯು ಅದರ ಸ್ಥಳದಿಂದ ತನ್ನ ಹೆಸರನ್ನು ಪಡೆದುಕೊಂಡಿದೆ. ಕ್ರಿ.ಶ 1545ರಲ್ಲಿ ಕಾರ್ಕಳ ನಗರದಲ್ಲಿ ಸುಮಾರು 24.66 ಎಕ್ರೆ ವಿಸ್ತೀರ್ಣದ ಆನೆಕೆರೆಯ (Anekere Basadi) ಮಧ್ಯೆ ನಿರ್ಮಿಸಿರುವ ಬಸದಿಯು “ಚತುರ್ಮುಖ ಬಸದಿ” ಎಂದೇ ಪ್ರಸಿದ್ಧಿ ಪಡೆದಿದೆ. ಈ ಬಸದಿಯು ಸರ್ವಧರ್ಮೀಯರ ಪುಣ್ಯಕ್ಷೇತ್ರವಾಗಿದೆ. ಈ ಬಸದಿಗೆ ನಾಲ್ಕು ಕಡೆಯಿಂದಲೂ ಬಾಗಿಲುಗಳಿದ್ದು, ಪ್ರತಿಯೊಂದು ಬಾಗಿಲುಗಳು ಕೂಡ ಗರ್ಭಗುಡಿಯನ್ನು ಸೇರುತ್ತದೆ. ಬಸದಿಯ ಮೇಲಿನ ನೆಲೆಯಲ್ಲಿ ಪಾರ್ಶ್ವನಾಥ ಸ್ವಾಮಿಯನ್ನು ಪ್ರತಿಷ್ಠಾಪನೆ ಮಾಡಿ, ಆದಿನಾಥ ಸ್ವಾಮಿ, ಮಹಾವೀರ ಸ್ವಾಮಿ, ಚಂದ್ರನಾಥ ಸ್ವಾಮಿ ಮತ್ತು ಶಾಂತಿನಾಥ ಸ್ವಾಮಿಯನ್ನು ಕೆಳ ನೆಲೆಯಲ್ಲಿ ಪೂಜಿಸಲಾಗುತ್ತದೆ.

    ಈ ಕೆರೆ ಬಸದಿಯನ್ನು ಭೈರವ ಅರಸು ವಂಶದ ಪಾಂಡ್ಯನಾಥ ಪಾಂಡ್ಯಪ್ಪೆಡೆಯ ಕಟ್ಟಿಸಿದ ಎಂಬ ಇತಿಹಾಸವಿದೆ. ಆನೆಕೆರೆಯನ್ನು 1262ರಲ್ಲಿ ಭೈರರಸ ಸಾಮ್ರಾಜ್ಯದ ದೊರೆ ರಾಜ ಪಾಂಡ್ಯದೇವನು ಸಣ್ಣದಾದ ಹೊಂಡದ ರೀತಿಯಲ್ಲಿ ನಿರ್ಮಿಸಿದ್ದನು ಎನ್ನಲಾಗಿದೆ. ಮುಂದೆ ಈ ಕೆರೆಯು 25 ಎಕರೆವರೆಗೂ ವಿಸ್ತರಿಸಿಕೊಂಡಿತ್ತು. ಆದರೆ ಈಗ ಕಾರ್ಕಳ ನಗರದಿಂದ ಕೇವಲ 1 ಕಿಲೋ ಮೀಟರ್‌ ದೂರದಲ್ಲಿರುವ ಆನೆಕೆರೆಯು 7 ಎಕರೆ ಜಾಗದಲ್ಲಿದ್ದು, ಸ್ಥಳೀಯ ನೀರಿನ ಮೂಲವಾಗಿಯೂ, ಆಕರ್ಷಕವಾಗಿಯೂ ಗಮನ ಸೆಳೆಯುತ್ತಿದೆ.

    ಸರ್ಕಾರಿ ದಾಖಲೆಗಳ ಪ್ರಕಾರ, ಇದು ಆರಂಭದಲ್ಲಿ 25 ಎಕರೆ ಪ್ರದೇಶದಲ್ಲಿ ಹರಡಿತ್ತು. ನಂತರ ಈ ಪ್ರದೇಶಕ್ಕೆ ಕುಡಿಯುವ ನೀರನ್ನು ಪೂರೈಸಲು ಬಳಸಲಾಯಿತು. 8 ಶತಮಾನಗಳಿಗೂ ಹೆಚ್ಚು ಕಾಲ ನಗರಕ್ಕೆ ಕುಡಿಯುವ ನೀರಿನ ಪ್ರಾಥಮಿಕ ಮೂಲ ಆನೆಕೆರೆ ಕೆರೆ ಆಗಿತ್ತು. ಇದನ್ನೂ ಓದಿ: ಆಗುಂಬೆ ಘಾಟ್- ಒಂದು ಬಾರಿ ಹೋದ್ರೆ ಮತ್ತೆ ಮತ್ತೆ ಸೆಳೆಯುವ ಏಕೈಕ ಸ್ಥಳ

    ಹೆಸರು ಬಂದಿದ್ದು ಹೇಗೆ?: ರಾಜನ ಆನೆಗಳಿಗೆ ಸ್ನಾನ ಮಾಡಲು, ನೀರು ಕುಡಿಯಲು ಹಾಗೂ ಹಾಯಾಗಿರಲು ಬಸದಿಯ ಸುತ್ತ ಬೃಹದಾಕಾರದ ಕೆರೆಯನ್ನು ನಿರ್ಮಾಣ ಮಾಡಲಾಯಿತು. ಬಳಿಕದಿಂದ ಆನೆಕೆರೆ ಬಸದಿ ಎಂಬ ಖ್ಯಾತಿ ಪಡೆಯಿತು. ಹೊಯ್ಸಳ ಮತ್ತು ಗಂಗರ ಶೈಲಿಯಲ್ಲಿ ಬಸದಿಯನ್ನು ನಿರ್ಮಿಸಲಾಗಿದೆ. ಗಜ ಕಟಾಂಜನ, ಸಿಂಹ ಕಟಾಂಜನವಿರುವ ಕಲ್ಲಿನ ಕಂಬಗಳು ಇಲ್ಲಿವೆ.

    ಸುತ್ತಲೂ ಉದ್ಯಾನವನ, ವಾಕಿಂಗ್ ಟ್ರ್ಯಾಕ್ ಗಳನ್ನು ನಿರ್ಮಿಸಿರುವ ಕಾರಣ ಧಾರ್ಮಿಕತೆ ಜೊತೆಗೆ ಪ್ರವಾಸೋದ್ಯಮಕ್ಕೂ ಈಗ ಒತ್ತುಕೊಡಲಾಗಿದೆ. ಆನೆಕೆರೆ ಪಕ್ಷಿಧಾಮವಾಗಿ ಅಭಿವೃದ್ಧಿಗೊಳ್ಳಬೇಕು. ಬೋಟಿಂಗ್‌ ವ್ಯವಸ್ಥೆ ಕಲ್ಪಿಸಿ, ಇಲ್ಲಿಗಾಗಮಿಸುವ ಭಕ್ತರು ಮತ್ತು ಪ್ರವಾಸಿಗರು ಸಂಭ್ರಮಿಸುವಂತೆ ಆಹ್ಲಾದಕರ ವಾತಾವರಣ ನಿರ್ಮಿಸಿಕೊಡಬೇಕೆಂಬುದು ಹಲವು ದಶಕಗಳ ಬೇಡಿಕೆಯಾಗಿದೆ.

    ವರಂಗದ ವಿಶೇಷ ಏನು..?: ವರಂಗ ಎಂಬುದು ಜೈನ ಧರ್ಮೀಯರ ಅತ್ಯಂತ ಪವಿತ್ರವಾದ ಸ್ಥಳ. ವರಂಗ ರಾಜನ ಆಡಳಿತಕ್ಕೆ ಒಳಪಟ್ಟ ಪ್ರದೇಶವಾಗಿದ್ದ ಹಿನ್ನೆಲೆಯಲ್ಲಿ ಈ ಸ್ಥಳಕ್ಕೆ ವರಂಗವೆಂಬ ಹೆಸರು ಬಂದಿದೆ. ಇಲ್ಲಿ ವಿಶೇಷವಾಗಿ ಮೂರು ಬಸದಿಗಳು ಇವೆ. ಈ ಮೂರು ಬಸದಿಗಳಾದ ನೇಮಿನಾಥ ಬಸದಿ, ಚಂದ್ರನಾಥ ಬಸದಿ ಮತ್ತು ಈ ಕೆರೆ ಬಸದಿ ಕೂಡ ಆಕರ್ಷಣೆಯ ಕೇಂದ್ರ ಬಿಂದುವಾಗಿದೆ.

    ಕಾರ್ಕಳದಿಂದ ಹೆಬ್ರಿಗೆ ತೆರಳುವ ದಾರಿ ಮಧ್ಯೆ ವರಂಗ ಸಿಗುತ್ತವೆ. ಪ್ರಕೃತಿಯ ನಡುವೆ ಇಂದಿಗೂ ಹಳ್ಳಿ ಸೊಗಡನ್ನ ಹಾಗೆಯೇ ಪಸರಿಸುತ್ತಾ ತಲೆ ಎತ್ತಿ ನಿಂತಿದೆ. ಸುತ್ತಲೂ ನೀರು ಅದರ ಮಧ್ಯೆ ಇರುವ ಬಸದಿಗೆ ದೋಣಿಯ ಮೂಲಕ ಸಾಗಿ ಅಲ್ಲಿನ ಪ್ರಕೃತಿ ವೀಕ್ಷಣೆ ಮಾಡಿದರೆ ಒಂದು ಅದ್ಭುತ ಅನುಭವವನ್ನು ನೀಡುತ್ತದೆ.

    ವರಂಗಕ್ಕೂ, ಇಲ್ಲಿಗೂ ವ್ಯತ್ಯಾಸವೇನು?: ಹೌದು ಪ್ರಸಿದ್ಧ ಪ್ರವಾಸಿ ತಾಣವಾಗಿರುವ ವರಂಗಕ್ಕೂ ಇಲ್ಲಿಗೂ ಸ್ವಲ್ಪ ವ್ಯತ್ಯಾಸವಿದೆ. ನೋಡೋದಕ್ಕೇನೋ ವರಂಗವನ್ನೇ ಹೋಲುವ ಕಾರ್ಕಳದ ಆನೆಕೆರೆ ಚತುರ್ಮುಖ ಬಸದಿ ಹಾಗೂ ವರಂಗ ಕೆರೆ ಬಸದಿ ನಡುವೆ ಸಣ್ಣ ವ್ಯತ್ಯಾಸಗಳಷ್ಟೇ ಕಾಣಬಹುದು. ವರಂಗದಲ್ಲಿ ಬಸದಿಗೆ ತಲುಪಬೇಕಿದ್ದರೆ ದೋಣಿ ಆಶ್ರಯ ಪಡರಯಬೇಕಾಗುತ್ತದೆ. ಆದರೆ ಇಲ್ಲಿ ಕೆರೆ ಮಧ್ಯೆ ಬಸದಿ ತನಕ ವಾಕಿಂಗ್‌ ಟ್ರ್ಯಾಕ್‌ ಇದೆ.

    ಹೋಗುವುದು ಹೇಗೆ..?: ಆನೆಕೆರೆ ಬಸದಿಗೆ ಹೋಗಬೇಕಾದರೆ ಮೊದಲು ಕಾರ್ಕಳಕ್ಕೆ ಹೋಗಬೇಕಾಗುತ್ತದೆ. ಕಾರ್ಕಳವು ಬೆಂಗಳೂರಿನಿಂದ 360 ಕಿ.ಮೀ ಹಾಗೂ ಮಂಗಳೂರಿನಿಂದ 55 ಕಿ.ಮೀ ದೂರದಲ್ಲಿದೆ. ಕಾರ್ಕಳ ನಗರದಿಂದ ಕೇವಲ 1 ಕಿ.ಮೀ ದೂರದಲ್ಲಿ ಆನೆಕೆರೆ ಬಸದಿ ಇದೆ.

    ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣವು ಆನೆಕೆರೆ ಕೆರೆಯಿಂದ 42 ಕಿಮೀ ದೂರದಲ್ಲಿದೆ. ನೀವು ವಿಮಾನ ನಿಲ್ದಾಣದಿಂದ ಟ್ಯಾಕ್ಸಿ ತೆಗೆದುಕೊಳ್ಳಬಹುದು. ರೈಲಿನ ಮೂಲಕವಾದರೆ ಉಡುಪಿ ರೈಲು ನಿಲ್ದಾಣವು ಆನೆಕೆರೆ ಕೆರೆಗೆ ಸಮೀಪವಿರುವ ರೈಲು ನಿಲ್ದಾಣವಾಗಿದೆ. 36 ಕಿಮೀ ದೂರವನ್ನು ಖಾಸಗಿ ಅಥವಾ ಸಾರ್ವಜನಿಕ ಸಾರಿಗೆಯಿಂದ ಕ್ರಮಿಸಬಹುದು.

    ಇದು ಕಾರ್ಕಳ-ಮಂಗಳೂರು ಪ್ರಮುಖ ಹೆದ್ದಾರಿಗೆ ಸಮೀಪವೇ ಇದೆ. ರಸ್ತೆ ಬದಿ ಪಾರ್ಕ್‌ ಇದೆ. ಈ ಪಾರ್ಕಿನಲ್ಲಿ ಕುಳಿತುಕೊಂಡು ಕೆರೆ ಹಾಗೂ ಚತುರ್ಮುಖ ಬಸದಿಯನ್ನು ಕಣ್ತುಂಬಿಕೊಳ್ಳಬಹುದಾಗಿದೆ. ಜೊತೆಗೆ ನೀವು ಇನ್ನೊಂದು ಸ್ಥಳಕ್ಕೂ ಭೇಟಿ ಕೊಡಬಹುದು. ಅದು ಯಾವುದೆಂದರೆ ಈ ಬಸದಿಯಿಂದ ಸುಮಾರು ಒಂದೂವರೆ ಕಿಲೋ ಮೀಟರ್‌ ಸಾಗಿದರೆ ಪ್ರಸಿದ್ಧ ಕಾರ್ಕಳದ ಗೊಮ್ಮಟೇಶ್ವರನ ಪ್ರತಿಮೆಯನ್ನು ನೋಡಬಹುದು. ಅದು ಕೂಡಾ ಅತ್ಯುತ್ತಮ ಪ್ರೇಕ್ಷಣೀಯ ಸ್ಥಳಗಳಲ್ಲಿ ಒಂದಾಗಿದೆ.

    ಒಟ್ಟಿನಲ್ಲಿ ಐದು ಶತಮಾನಗಳಷ್ಟು ಪ್ರಾಚೀನ ಹಾಗೂ ಐವರು ತೀರ್ಥಂಕರರ ದಿವ್ಯ ಬಿಂಬಗಳಿಂದ ಕೂಡಿರುವ ಆನೆಕೆರೆ ಬಸದಿಯ ಜೀರ್ಣೋದ್ಧಾರ ಕಾರ್ಯ ಇತ್ತೀಚೆಗೆ ಬಹುತೇಕ ಮುಗಿದಿದೆ. ಸುಮಾರು 2.50 ಕೋ.ರೂ. ವೆಚ್ಚದಲ್ಲಿ ಆನೆಕೆರೆ ಬಸದಿ ಅಭಿವೃದ್ಧಿಗೊಳಿಸಲಾಗಿದೆ. ಆನೆಕೆರೆ ಸುತ್ತ 2.60 ಕೋಟಿ ರೂ. ವೆಚ್ಚದಲ್ಲಿ ಸುತ್ತುಪೌಳಿ ಕಾಮಗಾರಿ, ಇಂಟರ್‌ಲಾಕ್‌ ಅಳವಡಿಸಲಾಗಿದೆ.

  • ಗೋಕರ್ಣ ಪ್ರವಾಸಕ್ಕೆ ಬಂದಿದ್ದ ಜಪಾನ್ ಮೂಲದ ಮಹಿಳೆ ನಾಪತ್ತೆ

    ಗೋಕರ್ಣ ಪ್ರವಾಸಕ್ಕೆ ಬಂದಿದ್ದ ಜಪಾನ್ ಮೂಲದ ಮಹಿಳೆ ನಾಪತ್ತೆ

    ಕಾರವಾರ: ಪ್ರವಾಸಕ್ಕೆಂದು (Tour) ಆಗಮಿಸಿದ್ದ ಜಪಾನ್ (Japan) ಮೂಲದ ಮಹಿಳೆ (Woman) ನಾಪತ್ತೆಯಾದ ಘಟನೆ ಗೋಕರ್ಣದಲ್ಲಿ (Gokarna) ನಡೆದಿದೆ.

    ಎಮಿ ಯಮಾಝಕಿ (40) ನಾಪತ್ತೆಯಾದ ಜಪಾನ್ ಮೂಲದ ಮಹಿಳೆ. ಫೆಬ್ರವರಿ 05 ರಂದು ಮಹಿಳೆ ತನ್ನ ಪತಿಯೊಂದಿಗೆ ಗೋಕರ್ಣದ ಬಂಗ್ಲೆಗುಡ್ಡದ ನೇಚರ್ ಕ್ಯಾಂಪಸ್‌ನಲ್ಲಿ ತಂಗಿದ್ದರು. ಮರುದಿನ ಮುಂಜಾನೆ 10:30ರ ಸುಮಾರಿಗೆ ನೇಚರ್ ಕ್ಯಾಂಪಸ್‌ನಿಂದ ಹೊರಹೋಗಿದ್ದ ಮಹಿಳೆ ನಾಪತ್ತೆಯಾಗಿದ್ದಾರೆ. ಇದನ್ನೂ ಓದಿ: ಪಾಕ್‌ನ ಸ್ವತಂತ್ರ ಅಭ್ಯರ್ಥಿಯ ಕಚೇರಿಯ ಹೊರಗೆ ಬಾಂಬ್‌ ಸ್ಫೋಟ: 26 ಮಂದಿ ಸಾವು

    ನಾಪತ್ತೆ ಹಿನ್ನೆಲೆ ಮಹಿಳೆಯ ಪತಿ ದೈ ಯಮಾಝಕಿ ಗೋಕರ್ಣ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಈ ಕುರಿತು ಗೋಕರ್ಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಓದಿನ ಕಡೆ ಗಮನಕೊಡುವಂತೆ ಹೇಳಿದ್ದಕ್ಕೆ ಫುಟ್ಬಾಲ್ ಪ್ಲೇಯರ್ ಸೂಸೈಡ್

  • 3 ದಿನ ಮುಳ್ಳಯ್ಯನಗಿರಿ, ದತ್ತಪೀಠ ಭಾಗಕ್ಕೆ ಪ್ರವಾಸಿಗರಿಗೆ ನಿಷೇಧ

    3 ದಿನ ಮುಳ್ಳಯ್ಯನಗಿರಿ, ದತ್ತಪೀಠ ಭಾಗಕ್ಕೆ ಪ್ರವಾಸಿಗರಿಗೆ ನಿಷೇಧ

    ಚಿಕ್ಕಮಗಳೂರು: ಕಾಫಿನಾಡ ಪ್ರವಾಸಿ ತಾಣ ಮುಳ್ಳಯ್ಯನಗಿರಿ (Mullayanagiri), ದತ್ತಪೀಠ (Duttapeeta) ಭಾಗಕ್ಕೆ 3 ದಿನಗಳ ಕಾಲ ಪ್ರವಾಸಿಗರನ್ನು ನಿಷೇಧಿಸಲಾಗಿದೆ.

    ದತ್ತಮಾಲಾ ಅಭಿಯಾನದ ಹಿನ್ನೆಲೆ ಪ್ರವಾಸಿಗರಿಗೆ 3 ದಿನ ಗಿರಿ ಭಾಗ ಬಂದ್ ಮಾಡಲಾಗಿದೆ. ನವೆಂಬರ್ 4 ಬೆಳಗ್ಗೆ 6 ಗಂಟೆಯಿಂದ ನವೆಂಬರ್ 6ರ ಬೆಳಗ್ಗೆ 10 ಗಂಟೆಯವರೆಗೆ ಪ್ರವಾಸಿಗರನ್ನು ನಿಷೇಧಿಸಲಾಗಿದೆ. ದತ್ತಪೀಠ, ಸೀತಾಳಯ್ಯನಗಿರಿ, ಮುಳ್ಳಯ್ಯನಗಿರಿ, ಹೊನ್ನಮ್ಮನಹಳ್ಳ, ಮಾಣಿಕ್ಯಾಧಾರ, ಗಾಳಿಕೆರೆಗೂ ಪ್ರವಾಸ ನಿಷೇಧಿಸಲಾಗಿದೆ. ಇದನ್ನೂ ಓದಿ: ಹುಲಿ ಉಗುರು ಪ್ರಕರಣ – ಸ್ಯಾಂಡಲ್‌ವುಡ್ ನಟರ ಬಳಿಕ ರಾಜಕಾರಣಿಗಳಿಗೂ ಸಂಕಷ್ಟ

    ಅಕ್ಟೋಬರ್ 30 ರಿಂದ ನವೆಂಬರ್ 5 ರವರೆಗೆ ಮುಳ್ಳಯ್ಯನಗಿರಿ ಭಾಗದಲ್ಲಿ ದತ್ತಮಾಲಾ ಅಭಿಯಾನ ನಡೆಯಲಿದೆ. ಈ ಹಿನ್ನೆಲೆ ಮುಂಜಾಗ್ರತಾ ಕ್ರಮವಾಗಿ ಜಿಲ್ಲಾಡಳಿತದಿಂದ ಮುಳ್ಳಯ್ಯನಗಿರಿಗೆ ಪ್ರವಾಸಿಗರ ನಿಷೇಧ ಹೇರಲಾಗಿದೆ. ದತ್ತಪೀಠಕ್ಕೆ ಡಿಸಿ, ಎಸ್‌ಪಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇದನ್ನೂ ಓದಿ: ವಿಜಯದಶಮಿ ವೇಳೆ ಪಲ್ಲಕ್ಕಿ ತಡೆದು ಅಲ್ಲಾ ಹು ಅಕ್ಬರ್ ಘೋಷಣೆ ಕೂಗಿದ ಕಿಡಿಗೇಡಿಗಳು

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ತಮಿಳುನಾಡು ಸೌಂದರ್ಯವನ್ನು ಹಾಡಿ ಹೊಗಳಿದ ರಾಜಮೌಳಿ

    ತಮಿಳುನಾಡು ಸೌಂದರ್ಯವನ್ನು ಹಾಡಿ ಹೊಗಳಿದ ರಾಜಮೌಳಿ

    ಕೆಲವು ತಿಂಗಳು ವಿದೇಶ ಪ್ರವಾಸದಲ್ಲಿದ್ದ ಖ್ಯಾತ ನಿರ್ದೇಶಕ ರಾಜಮೌಳಿ (Rajamouli), ಅಲ್ಲಿಂದ ವಾಪಸ್ಸಾದ ಮೇಲೆ ಸ್ವದೇಶಿ ಪ್ರವಾಸ (Tour) ಮಾಡಿದ್ದಾರೆ. ಅದರಲ್ಲೂ ಹಲವು ದಿನಗಳ ಕಾಲ ತಮಿಳು ನಾಡು (Tamil Nadu) ಸುತ್ತಿ ಬಂದಿದ್ದಾರೆ. ಆ ವೇಳೆಯ ಅನುಭವವನ್ನು ಅವರು ಸಣ್ಣದೊಂದು ವಿಡಿಯೋ (Video) ಮೂಲಕ ಜಗತ್ತಿಗೆ ಪರಿಚಯಿಸಿದ್ದಾರೆ.

    ಜೂನ್ ವೇಳೆಯಲ್ಲಿ ಅವರು ಕುಟುಂಬ ಸಮೇತ ತಮಿಳು ನಾಡು ಸುತ್ತಿದ್ದಾರೆ. ಈ ಟೂರ್ ಪಕ್ಕಾ ಪ್ಲ್ಯಾನ್ ಮಾಡಿದ್ದು ಅವರ ಮಗಳಂತೆ. ಹಾಗಾಗಿ ಇಂಥದ್ದೊಂದು ಪ್ರವಾಸವನ್ನು ಮಾಡಿಸಿದ್ದಕ್ಕಾಗಿ ಮಗಳಿಗೆ ಧನ್ಯವಾದಗಳನ್ನು ಹೇಳಿದ್ದಾರೆ ರಾಜಮೌಳಿ. ಅಚ್ಚರಿಯ ಸಂಗತಿ ಅಂದರೆ, ಅವರು ತಮಿಳು ನಾಡು ಪ್ರವಾಸಿ ತಾಣಗಳನ್ನು ನೋಡಿದ್ದು ಬೇರೆ ರೀತಿ ಎನ್ನುವುದು ವಿಶೇಷ. ಇದನ್ನೂ ಓದಿ:ತಮನ್ನಾ ಭಾರತೀಯ ಚಿತ್ರರಂಗದ ಶಕೀರಾ: ಸೆಕ್ಸಿ ಸ್ಟೆಪ್ ಹಾಕಿದ್ದಕ್ಕೆ ಬಿರುದು

    ತಮಿಳು ನಾಡಿನ ಪ್ರಸಿದ್ಧ ಪ್ರವಾಸಿ ಮತ್ತು ಧಾರ್ಮಿಕ ಸ್ಥಳಗಳಿಗೆ ರಾಜಮೌಳಿ ಅಂಡ್ ಟೀಮ್ ಭೇಟಿ ಮಾಡಿದೆ. ರಾಮೇಶ್ವರಂ, ಶ್ರೀರಂಗಂ, ಮಧುರೈ, ದಾರಾಸುರಂ, ಕೋಯಿಲ್, ಕನಾಡುಕಥನ್, ದಾರಾಸುರಂ, ತೂತುಕುಡಿ ಸೇರಿದಂತೆ ಹಲವು ಪ್ರವಾಸಿ ಸ್ಥಳಗಳಿಗೆ ರಾಜಮೌಳಿ ಭೇಟಿ ನೀಡಿದ್ದಾರೆ.

    ಚೋಳರು, ಪಾಂಡ್ಯರು ಹಾಗೂ ಇತರ ರಾಜರುಗಳ ವಾಸ್ತುಶಿಲ್ಪಗೆ ರಾಜಮೌಳಿ ಫಿದಾ ಆಗಿದ್ದಾರೆ. ಬರೀ ಸೌಂದರ್ಯದ  ಕುರಿತು ಮಾತ್ರ ಅವರು ಹೇಳಿಕೊಂಡಿಲ್ಲ, ಅಲ್ಲಿನ ಆಹಾರ ಪದ್ಧತಿ ಮತ್ತು ರುಚಿಯ ಬಗ್ಗೆಯೂ ವಿಡಿಯೋದಲ್ಲಿ ಮಾತನಾಡಿದ್ದಾರೆ. ಕುಂಭಕೋಣಂ ಹಾಗೂ ಮುರುಗನ್ ಮೆಸ್ ಹೀಗೆ ಎಲ್ಲದರ ಬಗ್ಗೆಯೂ ಮಾತನಾಡಿದ್ದಾರೆ. ಅಲ್ಲಿನ ಊಟದಿಂದಾಗಿ ಒಂದೇ ವಾರದಲ್ಲಿ ಎರಡ್ಮೂರು ಕೇಜಿ ತೂಕ ಹೆಚ್ಚಿಸಿಕೊಂಡಿರಬಹುದು ಎಂದಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಅಮೆರಿಕಕ್ಕೆ ಹಾರಲಿದ್ದಾರೆ ರಾಹುಲ್ – 10 ದಿನ ಪ್ರವಾಸ

    ಅಮೆರಿಕಕ್ಕೆ ಹಾರಲಿದ್ದಾರೆ ರಾಹುಲ್ – 10 ದಿನ ಪ್ರವಾಸ

    ನವದೆಹಲಿ: ಕಾಂಗ್ರೆಸ್ (Congress) ನಾಯಕ ರಾಹುಲ್ ಗಾಂಧಿ (Rahul Gandhi) ಅವರು ಮೇ 31ರಂದು ಅಮೆರಿಕಕ್ಕೆ (America) ಭೇಟಿ ನೀಡಲಿದ್ದು, 10 ದಿನಗಳ ಕಾಲ ದೇಶಾದ್ಯಂತ ಪ್ರವಾಸ ಕೈಗೊಳ್ಳಲಿದ್ದಾರೆ ಎಂದು ವರದಿಯಾಗಿದೆ.

    ಮೂಲಗಳ ಪ್ರಕಾರ ರಾಹುಲ್ ಗಾಂಧಿ ಜೂನ್ 4 ರಂದು ನ್ಯೂಯಾರ್ಕ್‌ನ ಮ್ಯಾಡಿಸನ್ ಸ್ಕ್ವೇರ್ ಗಾರ್ಡನ್‌ನಲ್ಲಿ ಸುಮಾರು 5,000 ಅನುವಾಸಿ ಭಾರತೀಯರ (NRI) ಉದ್ದೇಶಿಸಿ ಮಾತನಾಡಲಿದ್ದಾರೆ. ವಾಷಿಂಗ್ಟನ್ ಮತ್ತು ಕ್ಯಾಲಿಫೋರ್ನಿಯಾದಲ್ಲಿ ಸ್ಟ್ಯಾನ್‌ಫೋರ್ಡ್ ವಿಶ್ವವಿದ್ಯಾಲಯಗಳಲ್ಲಿ ಚರ್ಚೆ ಮತ್ತು ಭಾಷಣ ನಡೆಸಲಿದ್ದಾರೆ. ಮಾತ್ರವಲ್ಲದೆ ರಾಜಕಾರಣಿಗಳು ಹಾಗೂ ಉದ್ಯಮಿಗಳನ್ನೂ ಭೇಟಿಯಾಗಲಿದ್ದಾರೆ ಎನ್ನಲಾಗಿದೆ.

    ಕಳೆದ ಬಾರಿ ರಾಹುಲ್ ಗಾಂಧಿ ಲಂಡನ್‌ಗೆ ತೆರಳಿ ಕೇಂಬ್ರಿಡ್ಜ್ ವಿಶ್ವವಿದ್ಯಾಲಯದಲ್ಲಿ ಭಾಷಣ ನೀಡಿದ್ದರು. ಆ ಸಮಯ ಅವರು ಭಾರತ ಸರ್ಕಾರವನ್ನು ಟೀಕಿಸಿದ್ದರು. ಎಲ್ಲರಿಗೂ ತಿಳಿದಿರುವಂತೆ ಭಾರತೀಯ ಪ್ರಜಾಪ್ರಭುತ್ವ ಒತ್ತಡದಲ್ಲಿ ಹಾಗೂ ಆಕ್ರಮಣದಲ್ಲಿದೆ ಎಂಬುದು ಸಾಕಷ್ಟು ಸುದ್ದಿಯಲ್ಲಿದೆ. ನಾನು ಭಾರತದಲ್ಲಿ ವಿರೋಧ ಪಕ್ಷದ ನಾಯಕನಾಗಿದ್ದು, ಆ ಜಾಗದಲ್ಲಿ ಸರಿ ದಾರಿಗೆ ತರುವಂತಹ ಕೆಲಸ ಮಾಡುತ್ತಿದ್ದೇನೆ ಎಂದಿದ್ದರು. ಇದನ್ನೂ ಓದಿ: ಸಿಎಂ ರೇಸ್‌ ಫೈಟ್‌ – ಹೈಕಮಾಂಡ್‌ ನಾಯಕರಲ್ಲಿ ಯಾರು ಯಾರ ಪರ?

    ಪ್ರಜಾಸತ್ತಾತ್ಮಕ ಸಂಸತ್ತಿಗೆ ಅಗತ್ಯವಿರುವ ಸಾಂಸ್ಥಿಕ ಚೌಕಟ್ಟು, ಮುಕ್ತ ಪತ್ರಿಕಾ, ನ್ಯಾಯಾಂಗ, ಕೇವಲ ಸಜ್ಜುಗೊಳಿಸುವ ಕಲ್ಪನೆ, ಎಲ್ಲವನ್ನೂ ಸುತ್ತುವ ಮೂಲಕ ನಿರ್ಬಂಧಿತವಾಗುತ್ತಿವೆ. ಹೀಗಾಗಿ ನಾವು ಭಾರತೀಯ ಪ್ರಜಾಪ್ರಭುತ್ವದ ಮೂಲ ರಚನೆಯ ಮೇಲೆ ಹೊಡೆತವನ್ನು ಎದುರಿಸುತ್ತಿದ್ದೇವೆ ಎಂದು ಹೇಳಿದ್ದರು. ರಾಹುಲ್ ಗಾಂಧಿಯ ಈ ಹೇಳಿಕೆ ಆಡಳಿತಾರೂಢ ಬಿಜೆಪಿಗೆ ದೊಡ್ಡ ಪೆಟ್ಟು ಬಿದ್ದಂತಾಗಿದ್ದು, ಬಳಿಕ ರಾಹುಲ್ ಕ್ಷಮೆ ಯಾಚಿಸಬೇಕೆಂದು ಒತ್ತಾಯಿಸಲಾಗಿತ್ತು. ಇದನ್ನೂ ಓದಿ: ಲಕ್ನೋ ಸೂಪರ್‌ ಜೈಂಟ್ಸ್‌ಗೆ 5 ರನ್‌ ರೋಚಕ ಜಯ – RCBಗೆ ಮತ್ತೆ ಕಂಟಕವಾದ ಲಕ್ನೋ

  • ಥೈಲ್ಯಾಂಡ್ ಪ್ರವಾಸದ ಅನುಭವ ಬಿಚ್ಚಿಟ್ಟ ಸಂಯುಕ್ತ ಹೆಗ್ಡೆ

    ಥೈಲ್ಯಾಂಡ್ ಪ್ರವಾಸದ ಅನುಭವ ಬಿಚ್ಚಿಟ್ಟ ಸಂಯುಕ್ತ ಹೆಗ್ಡೆ

    ಕಿರಿಕ್ ಪಾರ್ಟಿ (Kirik Party) ಮೂಲಕ ಸಿನಿಮಾ ರಂಗಕ್ಕೆ ಎಂಟ್ರಿ ಆಗಿರುವ ಸಂಯುಕ್ತ ಹೆಗ್ಡೆ (Samyukta Hegde) ಆನಂತರ ಹೇಳಿಕೊಳ್ಳುವಂತಹ ಅವಕಾಶಗಳು ಬಾರದೇ ಇದ್ದರೂ, ಸಿಕ್ಕಿರುವ ಅವಕಾಶವನ್ನೇ ಸದುಪಯೋಗ ಪಡಿಸಿಕೊಂಡು, ಜೀವನವನ್ನು ಜಾಲಿಯಾಗಿಟ್ಟಿದ್ದಾರೆ. ರಿಯಾಲಿಟಿ ಶೋ ಮೂಲಕ ಫೇಮಸ್ ಆದ ಸಂಯುಕ್ತ, ಕಿರಿಕ್ ಪಾರ್ಟಿಯಲ್ಲಿ ಮಹತ್ವದ ಪಾತ್ರವನ್ನು ನಿರ್ವಹಿಸಿದ್ದರು. ಅಲ್ಲಿಂದ ಇವರನ್ನು ಕಿರಿಕ್ ಹುಡುಗಿ ಅಂತಾನೇ ಅಭಿಮಾನಿಗಳು ಕರೆಯುತ್ತಾರೆ.

    ಕನ್ನಡ, ತಮಿಳು ಹಾಗೂ ತೆಲುಗಿನಲ್ಲಿ ಹಲವು ಸಿನಿಮಾಗಳನ್ನು ಮಾಡಿರುವ ಸಂಯುಕ್ತ, ಬಿಡುವು ಮಾಡಿಕೊಂಡು ಆಗಾಗ್ಗೆ ಪ್ರವಾಸಗಳನ್ನು ಮಾಡುತ್ತಲೇ ಇರುತ್ತಾರೆ. ಈ ಬಾರಿ ಅವರು ಥೈಲ್ಯಾಂಡ್ (Thailand) ಪ್ರವಾಸ ಕೈಗೊಂಡಿದ್ದು, ಆ ಪ್ರವಾಸದ ಅನುಭವಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಜೊತೆಗೆ ಹಾಟ್ ಹಾಟ್ ಆಗಿರುವಂತಹ ಫೋಟೋಗಳನ್ನೂ ಅವರು ಪೋಸ್ಟ್ ಮಾಡಿದ್ದಾರೆ. ಇದನ್ನೂ ಓದಿ: ಸಾನ್ಯ ಎಲಿಮಿನೇಷನ್ ನಂತರ ರೂಪೇಶ್ ಶೆಟ್ಟಿ ಎನರ್ಜಿ ಡಬಲ್ ಆಯ್ತು: ಅನುಪಮಾ

    ಥೈಲ್ಯಾಂಡ್ ಪ್ರವಾಸವನ್ನು ಎಂಜಾಯ್ ಮಾಡುತ್ತಿರುವ ಅವರು, ಸಮುದ್ರದ ನೂರು ಅಡಿ ಆಳಕ್ಕೆ ಇಳಿದು, ಅಲ್ಲಿನ ಸೌಂದರ್ಯವನ್ನು ಸವಿದಿದ್ದಾರೆ. ನನ್ನ ಜೀವನದಲ್ಲಿ ಇದು ಮರೆಯೋಕೆ ಆಗದೇ ಇರುವಂತಹ ಅನುಭವ ಎಂದು ಹಂಚಿಕೊಂಡಿದ್ದಾರೆ. ಆ ಅನುಭವವನ್ನು ಅಲ್ಲಿಗೆ ಹೋಗಿಯೇ ಅನುಭವಿಸಬೇಕು. ಪದಗಳಿಂದ ವರ್ಣಿಸುವುದಕ್ಕೆ ಆಗುವುದಿಲ್ಲ ಎಂದು ಬರೆದುಕೊಂಡಿದ್ದಾರೆ.

    ಎರಡ್ಮೂರು ತಿಂಗಳ ಹಿಂದೆಯಷ್ಟೇ ಅವರು ಚಿತ್ರೀಕರಣದಲ್ಲಿ ಇದ್ದಾಗ ಕಾಲಿಗೆ ಏಟು ಮಾಡಿಕೊಂಡಿದ್ದರು. ಕೆಲ ತಿಂಗಳ ಕಾಲ ಮನೆಯಲ್ಲೇ ವಿಶ್ರಾಂತಿ ತಗೆದುಕೊಳ್ಳಬೇಕು ಎಂದು ವೈದ್ಯರು ಸೂಚಿಸಿದ್ದರು. ಸಣ್ಣ ಶಸ್ತ್ರಚಿಕಿತ್ಸೆ ಕೂಡ ಮಾಡಲಾಗಿತ್ತು. ಕಾಲು ಸರಿಯಾಗಿ, ನಡೆದಾಡುವುದಕ್ಕೆ ಆಗುತ್ತಿದ್ದಂತೆಯೇ ಥೈಲ್ಯಾಂಡ್ ವಿಮಾನ ಏರಿದ್ದಾರೆ. ಇದೊಂದು ಸೋಲೋ ಟ್ರಿಪ್ ಆಗಿದೆ ಎಂದು ಅವರು ಹೇಳಿಕೊಂಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಟರ್ಕಿಯಲ್ಲಿ ರಜಾಮಜಾ ಮಾಡುತ್ತಿರೋ ಬ್ಯೂಟಿಫುಲ್‌ ಗರ್ಲ್ ಕಾರುಣ್ಯ ರಾಮ್

    ಟರ್ಕಿಯಲ್ಲಿ ರಜಾಮಜಾ ಮಾಡುತ್ತಿರೋ ಬ್ಯೂಟಿಫುಲ್‌ ಗರ್ಲ್ ಕಾರುಣ್ಯ ರಾಮ್

    ಬೇಸಿಗೆ ರಜೆ ಬಂದರೆ ಸೆಲೆಬ್ರೆಟಿಗಳು ದೇಶ ಸುತ್ತುವುದು ಕಾಮನ್. ಅದರಲ್ಲೂ ನಟಿ ಕಾರುಣ್ಯ ರಾಮ್ ವರ್ಷಕ್ಕೆ ಎರಡು ಬಾರಿಯಾದರೂ ಬೇರೆ ಬೇರೆ ದೇಶಗಳಿಗೆ ಭೇಟಿ ನೀಡುತ್ತಲೇ ಇರುತ್ತಾರೆ. ಈ ಬಾರಿ ಅವರು ಟರ್ಕಿ ದೇಶಕ್ಕೆ ಸಹೋದರಿಯ ಜತೆ ಪ್ರಯಾಣ ಬೆಳೆಸಿದ್ದಾರೆ. ಟರ್ಕಿಯಿಂದಲೇ ಪಬ್ಲಿಕ್ ಟವಿ ಡಿಜಿಟಲ್ ಜತೆ ಮಾತನಾಡಿರುವ ಅವರು ಪ್ರವಾಸದ ಅನುಭವಗಳನ್ನು ಹಂಚಿಕೊಂಡಿದ್ದಾರೆ. ಇದನ್ನೂ ಓದಿ : ತಾಳಿಕಟ್ಟಿ ಹೆಂಡತಿಯನ್ನು ಎತ್ತಿಕೊಂಡ ರಣಬೀರ್ ಕಪೂರ್

    ಸಾಮಾನ್ಯವಾಗಿ ಯಾವುದೇ ದೇಶಕ್ಕೆ ಹೋದರೂ, ವಾರದ ಪ್ರವಾಸ ಆಗಿರುತ್ತದೆ. ಈ ಬಾರಿ ನಾವು ದೀರ್ಘ ಪ್ರವಾಸವನ್ನು ಟರ್ಕಿಯಲ್ಲಿ ಮಾಡುತ್ತಿದ್ದೇವೆ. ಈಗಾಗಲೇ ಟರ್ಕಿಯ ಏಳೆಂಟು ಸಿಟಿಯನ್ನು ನೋಡಿಕೊಂಡು, ಮತ್ತಷ್ಟು ಸ್ಥಳಗಳಿಗೆ ಗೊತ್ತು ಮಾಡಿದ್ದೇವೆ. ಟರ್ಕಿ ಶೇ.60ರಷ್ಟು ಪ್ರದೇಶವನ್ನು ನಾವು ನೋಡಿದ್ದೇವೆ. ಅದೊಂದು ಸುಂದರ ದೇಶ ಎಂದಿದ್ದಾರೆ ಕಾರುಣ್ಯ ರಾಮ್. ಇದನ್ನೂ ಓದಿ: ‘BOSS’ ಪಟ್ಟ ಅಲಂಕರಿಸಿದ ಯಶ್ : ಟ್ವಿಟರ್ ಟ್ರೆಂಡಿಂಗ್ ನಲ್ಲಿ #YASHBOSS

    ಸಹೋದರಿ ಜತೆ ಟರ್ಕಿಯ ಇಸ್ತಾನ್ ಬುಲ್, ಇಜ್ಮಿರ್, ಅಂತಲ್ಯಾ, ಅಂಕಾರಾ, ಬುರ್ಸಾ, ಕೈಸೆರಿ, ಕಪ್ಪಡೋಕಿಯಾ ಹೀಗೆ ನಾನಾ ಸ್ಥಳಗಳಿಗೆ ಭೇಟಿ ನೀಡಿದ್ದಾರೆ. ಒಂದಕ್ಕೊಂದು ಸುಂದರವಾದ ಸಿಟಿಗಳಿವು ಎಂದು ಪ್ರವಾಸ ಕಥನವನ್ನು ಬಿಚ್ಚಿಡುತ್ತಾರೆ ಕಾರುಣ್ಯ. ಇದನ್ನೂ ಓದಿ:ಬೀಸ್ಟ್ ಸಿನಿಮಾಕ್ಕೆ ಸೆಡ್ಡು ಹೊಡೆದ ಕೆಜಿಎಫ್-2 – ಕೇರಳ, ತಮಿಳುನಾಡಿನಲ್ಲೂ ರಾಕಿಭಾಯ್ ಹವಾ

    ಟರ್ಕಿಯ ಇತಿಹಾಸ ಭವ್ಯವಾಗಿದೆ. ಅತೀ ಸುಂದರ ದೇಶಗಳಲ್ಲಿ ಇದು ಒಂದು. ಪ್ರವಾಸಿಗರಿಗೆ ಹೇಳಿ ಮಾಡಿಸಿದ ಜಾಗ. ಊಟ, ಉಪಚಾರ ಎಲ್ಲವೂ ಅಚ್ಚುಕಟ್ಟು. ಒಂದು ರೀತಿಯಲ್ಲಿ ದಣಿವರಿಯದ ಸ್ಥಳಗಳು ಇಲ್ಲಿವೆ. ಪ್ರವಾಸಿಗರು ಯಾವುದೇ ರೀತಿಯಲ್ಲಿ ತೊಂದರೆ ಆಗದಂತಹ ವ್ಯವಸ್ಥೆಯನ್ನು ಅಲ್ಲಿನ ಸರಕಾರ ಮಾಡಿದೆ. ನಿರಾತಂಕವಾಗಿ ಟರ್ಕಿಯಲ್ಲಿ ಒಬ್ಬರೇ ಸುತ್ತಬಹುದು ಎನ್ನುವುದು ಕಾರುಣ್ಯ ಮಾತು. ಇದನ್ನೂ ಓದಿ:ಬಾಲಿವುಡ್‌ನಲ್ಲೂ `ಕೆಜಿಎಫ್ ಚಾಪ್ಟರ್ 2′ ಹವಾ: ಹಿಂದಿಯಲ್ಲೂ ನಂಬರ್ ಒನ್

    ಸದ್ಯ ಕಾರುಣ್ಯ ಹಲವು ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ನೀನಾಸಂ ಸತೀಶ್ ಜತೆ ಪೆಟ್ರೊಮ್ಯಾಕ್ಸ್ ಸಿನಿಮಾದಲ್ಲೂ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ. ವಿಜಯ ಪ್ರಸಾದ್ ನಿರ್ದೇಶನದಲ್ಲಿ ಮೂಡಿ ಬಂದಿರುವ ಈ ಸಿನಿಮಾದಲ್ಲಿ ಹರಿಪ್ರಿಯಾ, ಅರುಣ್ ಸೇರಿದಂತೆ ಹಲವು ಕಲಾವಿದರು ತಾರಾಗಣದಲ್ಲಿ ಇದ್ದಾರೆ.

  • ಸಾಂಸ್ಕೃತಿಕ ನಗರಿ ಬೆಳಗಾವಿಗೆ ಭೇಟಿ ನೀಡಿದ ರಾಜ್ಯಪಾಲರು

    ಸಾಂಸ್ಕೃತಿಕ ನಗರಿ ಬೆಳಗಾವಿಗೆ ಭೇಟಿ ನೀಡಿದ ರಾಜ್ಯಪಾಲರು

    ಬೆಳಗಾವಿ: ಶ್ರೀಮಂತ ಸಾಂಸ್ಕೃತಿಕ ನಗರ ಬೆಳಗಾವಿಗೆ ಮೂರು ದಿನಗಳ ಕಾಲ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಪ್ರವಾಸ ಕೈಗೊಂಡಿದ್ದಾರೆ.

    ಬೆಳಗಾವಿ ವಿಮಾನ ನಿಲ್ದಾಣದಲ್ಲಿ ಇಂದು ಆಗಮಿಸಿದ ಥಾವರ್ ಚಂದ್ ಗೆಹ್ಲೋಟ್ ಅವರನ್ನು ಜಿಲ್ಲಾಧಿಕಾರಿ ಎಂ. ಜಿ ಹಿರೇಮಠ ಅವರು ಹೂಗುಚ್ಚ ನೀಡುವ ಮೂಲಕ ಆತ್ಮೀಯವಾಗಿ ಬರಮಾಡಿಕೊಂಡರು. ನಾಳೆ ರಾಣಿಚೆನ್ನಮ್ಮ ವಿಶ್ವವಿದ್ಯಾಲಯದ 9ನೇ ಘಟಿಕೋತ್ಸವ ಹಾಗೂ ನಾಡಿದು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ 21ನೇ ಘಟಿಕೋತ್ಸವದಲ್ಲಿ ಭಾಗಿಯಾಗಲಿದ್ದಾರೆ. ಇದನ್ನೂ ಓದಿ: ಏಕಾಂಗಿಯಾಗಿ ಉಕ್ರೇನ್ ಗಡಿಗೆ ಪ್ರಯಾಣಿಸಿದ 11 ವರ್ಷದ ಬಾಲಕ

    ಇದೇ ವೇಳೆ ಜಿಲ್ಲಾ ನಗರ ಪೊಲೀಸ್ ಆಯುಕ್ತ ಡಾ. ಎಂ.ಬಿ ಬೋರಲಿಂಗಯ್ಯ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ್ ನಿಂಬರಗಿ, ಬೆಳಗಾವಿ ಅಭಿವೃದ್ಧಿ ಪ್ರಾಧಿಕಾರದ ಆಯುಕ್ತರಾದ ಪ್ರೀತಂ ನಸಲಾಪುರೆ, ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ.ಕರಿಸಿದ್ದಪ್ಪ, ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ.ರಾಮಚಂದ್ರೇಗೌಡ ಮುಂತಾದ ಗಣ್ಯರು ಉಪಸ್ಥಿತರಿದ್ದರು. ಇದನ್ನೂ ಓದಿ: ಬಿಹಾರ ವರನ ಕೈ ಹಿಡಿದ ಜರ್ಮನಿ ಮಹಿಳೆ

  • ನಿಮ್ಮಿಂದ ಸ್ವಲ್ಪ ದೂರ ಹೋಗ್ತಿದ್ದೇನೆ, ಆದ್ರೆ ಬೇಗ ವಾಪಸ್ಸಾಗ್ತೀನಿ- ವಿದೇಶಕ್ಕೆ ಹಾರಿದ ರಶ್ಮಿಕಾ

    ನಿಮ್ಮಿಂದ ಸ್ವಲ್ಪ ದೂರ ಹೋಗ್ತಿದ್ದೇನೆ, ಆದ್ರೆ ಬೇಗ ವಾಪಸ್ಸಾಗ್ತೀನಿ- ವಿದೇಶಕ್ಕೆ ಹಾರಿದ ರಶ್ಮಿಕಾ

    ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ನಟಿಯರಲ್ಲಿ ರಶ್ಮಿಕಾ ಮಂದಣ್ಣ ಕೂಡ ಒಬ್ಬರು. ಸದ್ಯ ಮೂರು ಸಿನಿಮಾಗಳಲ್ಲಿ ಅವರು ಬ್ಯುಸಿಯಾಗಿದ್ದಾರೆ. ಇದರ ಮಧ್ಯೆಯೂ ಸಿನಿಮಾ ಕೆಲಸಗಳಿಂದ ಬ್ರೇಕ್‌ ಪಡೆದು ವಿದೇಶಕ್ಕೆ ಹಾರಿದ್ದಾರೆ.

    ತಾನು ವಿದೇಶಕ್ಕೆ ತೆರಳುತ್ತಿರುವುದಕ್ಕೆ ಸಂಬಂಧಿಸಿದಂತೆ ಪಾಸ್‌ಪೋರ್ಟ್‌ ಇರುವ ಫೋಟೊವೊಂದನ್ನು ಇನ್‌ಸ್ಟಾಗ್ರಾಂನಲ್ಲಿ ನಟಿ ರಶ್ಮಿಕಾ ಪೋಸ್ಟ್‌ ಹಾಕಿದ್ದಾರೆ. “ನಾನು ಎಲ್ಲಿಗೆ ಹೋಗುತ್ತಿದ್ದೇನೆ ಊಹಿಸಿ” ಎಂದು ಅಭಿಮಾನಿಗಳನ್ನು ಪ್ರಶ್ನಿಸುವ ಮೂಲಕ ಕುತೂಹಲ ಮೂಡಿಸಿದ್ದಾರೆ. ಇದನ್ನೂ ಓದಿ: ನಾವು ನಿಮ್ಮನ್ನು ಹತ್ಯೆ ಮಾಡುತ್ತೇವೆ – ಗಂಭೀರ್‌ಗೆ ಐಸಿಸ್ ಕಾಶ್ಮೀರದಿಂದ ಜೀವ ಬೆದರಿಕೆ

    ಅಷ್ಟೇ ಅಲ್ಲದೇ “ಈ ಬಾರಿ ನಿಮ್ಮಿಂದ ದೂರ ಹೋಗುತ್ತಿದ್ದೇನೆ. ಆದರೆ ಬೇಗನೇ ವಾಪಸ್ಸಾಗುತ್ತೇನೆ” ಎಂದು ತಾವು ವಿದೇಶಕ್ಕೆ ಹೋಗುತ್ತಿರುವ ಬಗ್ಗೆ ಹೇಳಿಕೊಂಡಿದ್ದಾರೆ.

    ರಶ್ಮಿಕಾ ಅವರು ಅಮೆರಿಕಗೆ ತೆರಳುತ್ತಿರುವ ಬಗ್ಗೆ ವರದಿಯಾಗಿದೆ. ಅವರ ಸಹ ನಟ ವಿಜಯ್‌ ದೇವರ ಕೊಂಡ ಅವರು ಸದ್ಯ ಅಮೆರಿಕದಲ್ಲಿ ʼಲೈಗರ್‌ʼ ಸಿನಿಮಾ ಶೂಟಿಂಗ್‌ನಲ್ಲಿದ್ದಾರೆ. ಅವರನ್ನು ಭೇಟಿಯಾಗಲು ರಶ್ಮಿಕಾ ತೆರಳುತ್ತಿದ್ದಾರೆ ಎನ್ನಲಾಗಿದೆ. ಇದನ್ನೂ ಓದಿ: ಮದುವೆಗೆ ವರ ಗೈರು – ಮನೆ ಮುಂದೆ ಧರಣಿ ಕುಳಿತ ವಧು

    ರಶ್ಮಿಕಾ ಮಂದಣ್ಣ ಹಾಗೂ ವಿಜಯ ದೇವರಕೊಂಡ ಇಬ್ಬರೂ ಗೀತಾ ಗೋವಿಂದಮ್‌, ಡಿಯರ್‌ ಕಾಮ್ರೆಡ್‌ ಸಿನಿಮಾಗಳಲ್ಲಿ ಅಭಿನಯಿಸಿದ್ದು, ನಂತರ ಆತ್ಮೀಯ ಸ್ನೇಹಿತರಾಗಿದ್ದಾರೆ. ಅವರ ಒಡನಾಟದ ಬಗ್ಗೆ ಸಾಕಷ್ಟು ಊಹಾಪೋಹಗಳು ಇದ್ದವು. ಆದರೆ ನಾವಿಬ್ಬರೂ ಸ್ನೇಹಿತರಷ್ಟೇ ಬೇರೆನು ಇಲ್ಲ ಎಂದು ಅವರಿಬ್ಬರು ಸ್ಪಷ್ಟನೆ ನೀಡಿದ್ದರು.

    ರಶ್ಮಿಕಾ ನಟನೆಯ ಪುಷ್ಪ ಸಿನಿಮಾ ಡಿ.17ರಂದು ತೆರೆ ಕಾಣಲಿದೆ. ಹಿಂದಿ ಭಾಷೆಯ ಮಿಷನ್‌ ಮಜ್ನು ಹಾಗೂ ಗುಡ್‌ ಬೈ ಸಿನಿಮಾ ಕೆಲಸಗಳು ಕೂಡ ಬಹುತೇಕ ಪೂರ್ಣಗೊಂಡಿವೆ. ಇದರ ಮಧ್ಯೆಯೇ ರಶ್ಮಿಕಾ ಅವರು ವಿದೇಶಕ್ಕೆ ಹಾರಿದ್ದಾರೆ.