Tag: tour package

  • ಇಂದಿನಿಂದ ಬಿಎಂಟಿಸಿಯ `ದಿವ್ಯ ದರ್ಶನ’ ವಿಶೇಷ ಟೂರ್ ಪ್ಯಾಕೇಜ್ ಆರಂಭ

    ಇಂದಿನಿಂದ ಬಿಎಂಟಿಸಿಯ `ದಿವ್ಯ ದರ್ಶನ’ ವಿಶೇಷ ಟೂರ್ ಪ್ಯಾಕೇಜ್ ಆರಂಭ

    – ಮೊದಲ ದಿನವೇ ಬೆಂಗಳೂರಿಗರಿಂದ ಭರ್ಜರಿ ರೆಸ್ಪಾನ್ಸ್

    ಬೆಂಗಳೂರು: ಬಿಎಂಟಿಸಿಯ ವಿಶೇಷ ಟೂರ್ ಪ್ಯಾಕೇಜ್ ದಿವ್ಯ ದರ್ಶನ (Divya Darshana) ಇಂದಿನಿಂದ ಆರಂಭವಾಗಿದೆ. ಈ ವಿಶೇಷ ಪ್ಯಾಕೇಜ್‌ಗೆ ಮೊದಲ ದಿನವೇ ಬೆಂಗಳೂರಿಗರಿಂದ (Bengaluru) ಭರ್ಜರಿ ರೆಸ್ಪಾನ್ಸ್ ದೊರೆತ್ತಿದ್ದು, ಬಿಎಂಟಿಸಿಯ 3 ಎಸಿ ಬಸ್‌ಗಳಲ್ಲಿ 200ಕ್ಕೂ ಹೆಚ್ಚು ಜನ ಬೆಂಗಳೂರಿನ ಪ್ರಸಿದ್ಧ ದೇವಾಲಯಗಳ ದರ್ಶನ ಪಡೆಯುತ್ತಿದ್ದಾರೆ.

    ಶನಿವಾರ ಬೆಳಗ್ಗೆ 8.30ಕ್ಕೆ ಮೆಜೆಸ್ಟಿಕ್‌ನಿಂದ (Majestic) ಬಸ್ ಹೊರಟಿದ್ದು, ಬಸ್‌ಗಳ ಸಿಬ್ಬಂದಿ, ಪ್ರಯಾಣಿಕರಿಗೆ ನಗರದ 8 ದೇವಾಲಯಗಳಲ್ಲಿ ನೇರ ದರ್ಶನ ಮಾಡಿಸಲಿದ್ದಾರೆ. ಪ್ರಮುಖವಾಗಿ ಗಾಳಿ ಆಂಜನೇಯ ಸ್ವಾಮಿ ದೇವಸ್ಥಾನ, ರಾಜರಾಜೇಶ್ವರಿ ದೇವಸ್ಥಾನ, ಶೃಂಗಗಿರಿ ಷಣ್ಮುಖ ದೇವಸ್ಥಾನ, ಕುರುಮಾರಿ ಅಮ್ಮ ದೇವಾಲಯ, ಓಂಕಾರ ಹೀಲ್ಸ್, ಇಸ್ಕಾನ್ ವೈಕುಂಠ ದೇವಾಲಯ, ಆರ್ಟ್ ಆಫ್ ಲಿವಿಂಗ್, ಬನಶಂಕರಿ ದೇವಾಲಯದ ವೀಕ್ಷಣೆ ಮಾಡಬಹುದಾಗಿದೆ. ಇದನ್ನೂ ಓದಿ: ಸಾರ್ವಜನಿಕ ಸ್ಥಳಗಳಲ್ಲಿ ತಂಬಾಕು/ಗುಟ್ಕಾ ಉಗುಳಿದ್ರೆ 1,000 ರೂ. ದಂಡ: ರಾಜ್ಯ ಸರ್ಕಾರದಿಂದ ಗೆಜೆಟ್ ಆದೇಶ

    ಪ್ರತೀ ವಾರಾಂತ್ಯದಲ್ಲಿ ಹಾಗೂ ರಜಾ ದಿನಗಳಲ್ಲಿ ಬಿಎಂಟಿಸಿಯಿಂದ (BMTC) ಟೆಂಪಲ್ ಟೂರ್ ನಡೆಯಲಿದ್ದು, ವಯಸ್ಕರಿಗೆ 450 ರೂ., ಮಕ್ಕಳಿಗೆ 350 ರೂ. ಟಿಕೆಟ್ ದರವನ್ನು ನಿಗದಿ ಮಾಡಲಾಗಿದೆ. ಭಾನುವಾರ ಟೂರ್ ಪ್ಯಾಕೇಜ್‌ನ ಸೀಟ್‌ಗಳು ಸಹ ಬಹುತೇಕ ಬುಕ್ ಆಗಿವೆ. ಶನಿವಾರ ಬಿಎಂಟಿಸಿಯ ದಿವ್ಯದರ್ಶನ ಬಸ್‌ನಲ್ಲಿ ಪ್ರಯಾಣಿಸಿದ ಪ್ರಯಾಣಿಕರು ಟೂರ್ ಪ್ಯಾಕೇಜ್ ಬಗ್ಗೆ ಸಂತಸ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಮೈಸೂರು | ಹತ್ತೇ ದಿನಗಳಲ್ಲಿ ಕಬಿನಿ ಜಲಾಶಯ ಬಹುತೇಕ ಭರ್ತಿ

  • Bengaluru| ಕುಂಭಮೇಳ ಟೂರ್ ಪ್ಯಾಕೇಜ್ ನೆಪದಲ್ಲಿ 70 ಲಕ್ಷ ವಂಚನೆ – ಆರೋಪಿ ಅರೆಸ್ಟ್

    Bengaluru| ಕುಂಭಮೇಳ ಟೂರ್ ಪ್ಯಾಕೇಜ್ ನೆಪದಲ್ಲಿ 70 ಲಕ್ಷ ವಂಚನೆ – ಆರೋಪಿ ಅರೆಸ್ಟ್

    ಬೆಂಗಳೂರು: ಕುಂಭಮೇಳ ಟೂರ್ ಪ್ಯಾಕೇಜ್  (Kumbha Mela  Tour Package) ನೆಪದಲ್ಲಿ ಜನರಿಗೆ 70 ಲಕ್ಷ ರೂ. ವಂಚಿಸಿದ್ದ ಆರೋಪಿಯನ್ನು ಗೋವಿಂದರಾಜನಗರ (Govindarajanagar)  ಪೊಲೀಸರು ಬಂಧಿಸಿದ್ದಾರೆ.

    ರಾಘವೇಂದ್ರ ರಾವ್ ಬಂಧಿತ ಆರೋಪಿ. ಈತ ಪಾಂಚಜನ್ಯ ಟೂರ್ಸ್ ಅಂಡ್ ಟ್ರಾವೆಲ್ಸ್ ಹೆಸರಲ್ಲಿ ಜಾಹೀರಾತು ನೀಡಿದ್ದ. ಜಾಹೀರಾತಿನಲ್ಲಿ ಅಯೋಧ್ಯೆ, ಕಾಶಿ, ಪ್ರಯಾಗ್‌ರಾಜ್ ಟೂರ್ ಪ್ಯಾಕೇಜ್ ಬಗ್ಗೆ ತಿಳಿಸಿ 7 ದಿನಗಳ ಪ್ಯಾಕೇಜ್‌ಗೆ ತಲಾ 49,000 ರೂ. ಪಡೆದು ಜನರಿಗೆ ವಂಚಿಸಿದ್ದ. ಇದನ್ನೂ ಓದಿ: 7ನೇ ತರಗತಿ ವಿದ್ಯಾರ್ಥಿನಿಗೆ ಬಾಲ್ಯವಿವಾಹ – ಬರಲ್ಲ ಅಂತ ಕಿರುಚಾಡಿದ್ರೂ ಹೊತ್ತೊಯ್ದ ಪಾಪಿಗಳು

    ರಾಘವೇಂದ್ರ ಸುಮಾರು ಇಪ್ಪತ್ತು ಜನರ ಬಳಿ ಹಣ ಪಡೆದು 70 ಲಕ್ಷ ರೂ. ವಂಚನೆ ಮಾಡಿದ್ದ. ಈ ಸಂಬಂಧ ಗೋವಿಂದರಾಜನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಸದ್ಯ ಆರೋಪಿಯನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ‘ರೋಹಿತ್‌ ಶರ್ಮಾ ದಪ್ಪಗಿದ್ದಾರೆ’ ಅಂತ ಟೀಕಿಸಿದ್ದ ಕಾಂಗ್ರೆಸ್‌ ನಾಯಕಿಯಿಂದಲೇ ಈಗ ಟೀಂ ಇಂಡಿಯಾಗೆ ಅಭಿನಂದನೆ

  • ಟೂರ್ ಅಂತ ಕರ್ಕೋಂಡೋಗಿ ಬಾಗ್ದಾದ್‍ನಲ್ಲೇ ಬಿಟ್ಟು ಬಂದ ಭೂಪ

    ಟೂರ್ ಅಂತ ಕರ್ಕೋಂಡೋಗಿ ಬಾಗ್ದಾದ್‍ನಲ್ಲೇ ಬಿಟ್ಟು ಬಂದ ಭೂಪ

    ಬೆಂಗಳೂರು: ದೇವರ ಹೆಸರಲ್ಲಿ ಜನರಿಗೆ ಟೂರ್ಸ್ ಆ್ಯಂಡ್ ಟ್ರಾವೆಲ್ಸ್ ಮಾಲೀಕ ವಂಚನೆ ಮಾಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

    ಆಲ್ ಫಜೀಲ್ ಟೂರ್ಸ್ ಆ್ಯಂಡ್ ಟ್ರಾವೆಲ್ಸ್ ಮಾಲೀಕ ಫಹಿಮ್ ಪಾಷಾ ದೇವರ ಹೆಸರಲ್ಲಿ ದೂರದ ಬಾಗ್ದಾದ್‍ಗೆ ಕರೆದುಕೊಂಡು ಹೋಗಿ ಇರಾಕ್‍ನಲ್ಲೇ ಬಿಟ್ಟು ಬಂದಿದ್ದಾರೆಂದು ಹಲಸೂರುಗೇಟ್ ಪೊಲೀಸ್ ಠಾಣೆಯಲ್ಲಿ ಮಾಲೀಕನ ವಿರುದ್ಧ ಪ್ರಕರಣ ದಾಖಲಾಗಿದೆ.

    ನಿವೃತ್ತ ಎಸಿಬಿ ಹಾಗೂ ಕರ್ನಾಟಕ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷ ಅಬ್ದುಲ್ ಅಜೀಮ್ ಫಹೀಮ್ ಪಾಷಾ ವಿರುದ್ದ ಕೇಸ್ ದಾಖಲಿಸಿದ್ದಾರೆ. ಆರೋಪಿ ಫಹೀಮ್ ಪಾಷಾ ಬಾಗ್ದಾದ್ ಹಾಗೂ ಇರಾಕ್ ನಲ್ಲಿರುವ ದರ್ಗಾಗಳನ್ನ ವಿಕ್ಷಣೆಗೆ 15 ಪ್ಯಾಕೇಜ್ ಟೂರ್ ಕರೆದುಕೊಂಡು ಹೋಗಿದ್ದಾರೆ. ಆರೋಪಿ ಪಾಷಾ ಪ್ಯಾಕೇಜ್ ಟೂರ್ ಅಂತ ಪ್ರತಿಯೊಬ್ಬರಿಂದ 65 ಸಾವಿರದಂತೆ 10 ಲಕ್ಷಕ್ಕೂ ಹೆಚ್ಚು ಹಣ ಕಲೆಕ್ಟ್ ಮಾಡಿಕೊಂಡಿದ್ದಾರೆ.

    ಬೆಂಗಳೂರಿಂದ ಬಾಗ್ದಾದ್ ಗೆ ಹೋಗೋದಕ್ಕೆ ವಿಮಾನ ಟಿಕೆಟ್ ಬುಕ್ ಮಾಡಿ ಕಳುಹಿಸಿಕೊಟ್ಟಿದ್ದಾನೆ. ಬಾಗ್ದಾದ್ ನಿಂದ ಭಕ್ತಾದಿಗಳು ಮರಳಿ ಬೆಂಗಳೂರಿಗೆ ಬರೋದಕ್ಕೆ ಆರೋಪಿ ಪಾಷಾ ಟಿಕೆಟ್ ಬುಕ್ ಮಾಡಿಸದೇ ಇರುವುದರಿಂದ ಭಕ್ತಾದಿಗಳು ದೂರದ ಬಾಗ್ದಾದ್ ಹಾಗೂ ಇರಾಕ್ ನಲ್ಲಿಯೇ ಅನ್ನ ನೀರು ಇಲ್ಲದೇ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.