Tag: Totapuri

  • ಈ ವಾರ ಕಾಂತಾರ ಜೊತೆ ತೋತಾಪುರಿ ರುಚಿ: ಮಣಿರತ್ನಂ ಸಿನಿಮಾನೂ ರಿಲೀಸ್

    ಈ ವಾರ ಕಾಂತಾರ ಜೊತೆ ತೋತಾಪುರಿ ರುಚಿ: ಮಣಿರತ್ನಂ ಸಿನಿಮಾನೂ ರಿಲೀಸ್

    ನಿರೀಕ್ಷೆ ಮೂಡಿಸಿರುವಂತಹ ನಾಲ್ಕು ಚಿತ್ರಗಳು ನಾಳೆ ಕರ್ನಾಟಕದಲ್ಲಿ ರಿಲೀಸ್ ಆಗುತ್ತಿವೆ. ಈ ನಾಲ್ಕು ಸಿನಿಮಾಗಳಲ್ಲಿ ಮೂರು ಚಿತ್ರಗಳು ತಮ್ಮದೇ ಆದ ಕಾರಣಗಳಿಂದಾಗಿ ನಿರೀಕ್ಷೆ ಮೂಡಿಸಿವೆ. ದಸರಾ ಹಬ್ಬದ ಈ ಹೊತ್ತಿನಲ್ಲಿ ಸ್ಯಾಂಡಲ್ ವುಡ್ ಪ್ರೇಕ್ಷಕರು ಯಾವೆಲ್ಲ ಸಿನಿಮಾಗಳನ್ನು ನೋಡಲಿದ್ದಾರೆ ಮತ್ತು ಬಾಕ್ಸ್ ಆಫೀಸಿನಲ್ಲಿ ಯಾವ ಚಿತ್ರಗಳು ಗೆಲ್ಲುತ್ತವೆ ಎನ್ನುವುದು ಇದೀಗ ಚರ್ಚೆಗೆ ಕಾರಣವಾಗಿದೆ. ಇದನ್ನೂ ಓದಿ:ಗನ್ ಹಿಡಿದು ಫೀಲ್ಡಿಗಿಳಿದ ರಾಕಿಭಾಯ್: ಮುಂದಿನ ಸಿನಿಮಾಗೆ ಯಶ್ ತಯಾರಿ

    ಮೇಕಿಂಗ್ ವಿಡಿಯೋ ಮತ್ತು ಕಥೆಯ ಕಾರಣದಿಂದಾಗಿ ರಿಷಭ್ ಶೆಟ್ಟಿ ನಟಿಸಿ, (Rishabh Shetty) ನಿರ್ದೇಶನ ಮಾಡಿರುವ ಕಾಂತಾರ (Kantara) ಸಿನಿಮಾ ನಾಳೆ ಬಿಡುಗಡೆ ಆಗುತ್ತಿದೆ. ನೂರಾರು ಚಿತ್ರಮಂದಿರಗಳಲ್ಲಿ ಈ ಸಿನಿಮಾ ರಿಲೀಸ್ ಆಗುತ್ತಿದ್ದು, ಮಂಗಳೂರು ನೆಲದ ದೇಸಿ ಕಥೆಯನ್ನು ಈ ಸಿನಿಮಾದಲ್ಲಿ ಹೇಳುತ್ತಿದ್ದಾರಂತೆ ರಿಷಭ್. ಕಾಡು ಮತ್ತು ಮನುಷ್ಯನ ನಡುವಿನ ಸಂಘರ್ಷವನ್ನು ಸೂಕ್ಷ್ಮವಾಗಿ ಈ ಸಿನಿಮಾದಲ್ಲಿ ಹೇಳುತ್ತಿದ್ದು, ಕಿಶೋರ್ ಸೇರಿದಂತೆ ಹಲವು ಕಲಾವಿದರು ಈ ಸಿನಿಮಾದ ತಾರಾಗಣದಲ್ಲಿ ಇದ್ದಾರೆ. ಹೊಂಬಾಳೆ ಫಿಲ್ಮ್ಸ್ ಬ್ಯಾನರ್ ನಲ್ಲಿ ಈ ಸಿನಿಮಾ ಮೂಡಿ ಬಂದಿದೆ.

    ಭಾವೈಕ್ಯತೆಯ ಸಂದೇಶ ಸಾರುವ  ಕಥಾಹಂದರ ಇರುವ ಚಿತ್ರ ತೋತಾಪುರಿ (Totapuri) ಈವಾರ ರಾಜ್ಯಾದ್ಯಂತ ತೆರೆ ಕಾಣುತ್ತಿದೆ. ಕೆ.ಎ.ಸುರೇಶ್ ಈ ಚಿತ್ರವನ್ನು ನಿರ್ಮಾಣ ಮಾಡಿದ್ದು, ನವರಸನಾಯಕ ಜಗ್ಗೇಶ್ (Jaggesh) ಹಾಗೂ ಅದಿತಿ ಪ್ರಭುದೇವಾ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿರುವ ಈ ಚಿತ್ರಕ್ಕೆ ವಿಜಯ್‌ ಪ್ರಸಾದ್ ಅವರ ನಿರ್ದೇಶನವಿದೆ.  ಕಾನ್‌ಸ್ಟಿಟ್ಯೂಷನ್ ಅಡಿಯಲ್ಲಿ ಬದುಕುತ್ತಿರುವ ನಾವೆಲ್ಲರೂ  ಅಣ್ಣ ತಮ್ಮಂದಿರು ಎಂಬ ಅದ್ಭುತವಾದ ಸಂದೇಶ ಇರುವ ತೋತಾಪುರಿಯಲ್ಲಿ  ಉಪ್ಪು, ಹುಳಿ, ಖಾರ ಎಲ್ಲದರ ಸಮನಾದ ಮಿಶ್ರಣವಿದೆ ಚಿತ್ರದಲ್ಲಿ ಒಬ್ಬ ಮುಸ್ಲಿಂ ಯುವತಿಯಾಗಿ ನಾಯಕಿ ಅದಿತಿ ಪ್ರಭುದೇವಾ ಕಾಣಿಸಿಕೊಂಡಿದ್ದಾರೆ. ಡಾಲಿ ಧನಂಜಯ್, ಸುಮನ್ ರಂಗನಾಥ್, ವೀಣಾಸುಂದರ್, ಹೇಮಾದತ್, ದತ್ತಣ್ಣ ಸೇರಿದಂತೆ ಅನೇಕ ಕಲಾವಿದರು  ನಟಿಸಿದ್ದಾರೆ.

    ಮಣಿರತ್ನಂ  (Mani Ratnam) ನಿರ್ದೇಶನದಲ್ಲಿ ಮೂಡಿ ಬಂದಿರುವ ಪೊನ್ನಿಯಿನ್ ಸೆಲ್ವನ್ (Ponniyin Selvan) ಕೂಡ ನಾಳೆ ರಿಲೀಸ್ ಆಗುತ್ತಿದೆ. ತಮಿಳು, ತೆಲುಗು ಮತ್ತು ಕನ್ನಡ ಮೂರು ಭಾಷೆಗಳಲ್ಲಿ ಈ ಸಿನಿಮಾ ಬಿಡುಗಡೆ ಆಗುತ್ತಿದ್ದು, ಇದೊಂದು ಭಾರೀ ಬಜೆಟ್ ಸಿನಿಮಾ ಕೂಡ ಆಗಿದೆ. ಇದೊಂದು ಕಾದಂಬರಿ ಆಧರಿಸಿದ ಸಿನಿಮಾವಾಗಿದ್ದು, 1955 ಚೋಳರ ಆಳ್ವಿಕೆಯ ಸುತ್ತ ಹೆಣೆದ ಕಥೆಯನ್ನು ಸಿನಿಮಾ ಮಾಡಿದ್ದಾರೆ ನಿರ್ದೇಶಕರು. ನೈಜ ಘಟನೆಯ ಜೊತೆಗೆ ಫ್ಯಾಂಟಸಿ ಕೂಡ ಮಿಕ್ಸ್ ಆಗಿರುವುದು ಸಿನಿಮಾದ ವಿಶೇಷಗಳಲ್ಲಿ ಒಂದು. ವಿಕ್ರಮ್, ಐಶ್ವರ್ಯ ರೈ ಸೇರಿದಂತೆ ಹಲವು ಕಲಾವಿದರು ಈ ಸಿನಿಮಾದಲ್ಲಿ ಇದ್ದಾರೆ.

    ಈ ಸಿನಿಮಾಗಳ ಜೊತೆಗೆ ವಿಕ್ರಮ್ ವೇದ (Vikram Veda) ಕೂಡ ನಾಳೆಯೇ ಬಿಡುಗಡೆ ಆಗುತ್ತಿದೆ. ಹೀಗಾಗಿ ಸಹಜವಾಗಿಯೇ ಸ್ಯಾಂಡಲ್ ವುಡ್ ನಲ್ಲಿ ಸಂಭ್ರಮ ಮನೆ ಮಾಡಿದೆ. ಬಹುತೇಕ ಚಿತ್ರಗಳು ನಿರೀಕ್ಷೆ ಮೂಡಿಸಿರುವುದರಿಂದ ಯಾರೆಲ್ಲ ಯಾವ ಸಿನಿಮಾಗಳನ್ನು ನೋಡಲಿದ್ದಾರೆ ಮತ್ತು ಬಾಕ್ಸ್ ಆಫೀಸಿನಲ್ಲಿ ಯಾವ ಚಿತ್ರಗಳಿಗೆ ಗೆಲುವು ಸಿಗಲಿದೆ ಎಂದು ಕಾದು ನೋಡಬೇಕಿದೆ.

    Live Tv
    [brid partner=56869869 player=32851 video=960834 autoplay=true]

  • ಈ ವರ್ಷದ ಹಿಟ್ ಸಾಂಗ್‌ ಆಗಿ ದಾಖಲಾಯ್ತು ತೋತಾಪುರಿ ಹಾಡು!

    ಈ ವರ್ಷದ ಹಿಟ್ ಸಾಂಗ್‌ ಆಗಿ ದಾಖಲಾಯ್ತು ತೋತಾಪುರಿ ಹಾಡು!

    ಹಾಡು ಹಿಟ್ ಆದರೆ ಸಿನಿಮಾ ರಿಲೀಸ್‍ಗೂ ಮುನ್ನವೇ ಅರ್ಧ ಗೆದ್ದಂತೆ. ಅಂಥದ್ದೊಂದು ಖುಷಿಯಲ್ಲಿ ತೇಲುತ್ತಿರುವುದು ತೋತಾಪುರಿ ಸಿನಿಮಾ. ತಿಂಗಳ ಹಿಂದೆ ಬಿಡುಗಡೆಯಾಗಿದ್ದ ಬಾಗ್ಲು ತೆಗಿ ಮೇರಿ ಜಾನ್ ಎಂಬ ಹಾಡೀಗ ಎಲ್ಲೆಡೆ ಹಬ್ಬಿಕೊಂಡಿದೆ.

    ರೀಲ್ಸ್ ಸೇರಿದಂತೆ ನಾನಾ ರೂಪಾಂತರಗಳ ಮೂಲಕ ಜನರ ಮನಸು ಗೆದ್ದಿದೆ. ಸಿನಿಮಾವೊಂದು ಅನೌನ್ಸ್ ಆದಾಗಿನಿಂದಲೂ ತೋತಾಪುರಿ ಬಗ್ಗೆ ಇರುವ ನಿರೀಕ್ಷೆ ಬಹಳ ದೊಡ್ಡ ಮಟ್ಟದ್ದು. ಹಾಗಂತ ವರ್ಷಾನುಗಟ್ಟಲೇ ಮಂದಿ ಕಾಯುವುದಕ್ಕೂ ಸ್ವಲ್ಪ ಕಷ್ಟವೇ. ಆದರೆ ತೋತಾಪುರಿಯ ವಿಚಾರದಲ್ಲಿ ಕಾಯುವಿಕೆಯನ್ನು ಕೂಡಾ ರೋಮಾಂಚಕವಾಗಿಸಿರೋದರಲ್ಲಿ ಬಾಗ್ಲು ತೆಗಿ ಮೇರಿ ಜಾನ್ ಹಾಡಿನ ಪಾತ್ರ ದೊಡ್ಡದಿದೆ. ಇಂಥಾ ಅಗಾಧ ಪ್ರಚಾರದ ಪ್ರಭೆಯಲ್ಲಿ ತೋತಾಪುರಿ ಚಿತ್ರ ಸೆ. 30ರಂದು ಬಿಡುಗಡೆಗೊಳ್ಳಲಿದೆ.

    Totapuri

    ಜಗ್ಗೇಶ್ ಇದ್ದ ಕಡೆ ನಗುವಿಗೇನು ಬರವಿಲ್ಲ. ಹಾಗೇ ವಿಜಯ್ ಪ್ರಸಾದ್ ಇದ್ದ ಕಡೆ ಚೇಷ್ಟೆಗೇನು ಬರವಿಲ್ಲ. ಹಾಸ್ಯ ಮತ್ತು ಚೇಷ್ಟೆ ಒಂದಾದಾಗ ಬರಪೂರ ಮನರಂಜನೆ ಪಕ್ಕಾ ಅನ್ನೋದು ಫಿಕ್ಸ್ ಮಾಡಿಕೊಳ್ಳಬೇಕು. ಈಗಾಗಲೇ ನೀರ್‌ದೋಸೆ ಎಂಬ ಹಿಟ್ ಸಿನಿಮಾ ಕೊಟ್ಟಿರುವ ವಿಜಯ್ ಪ್ರಸಾದ್ ಮತ್ತು ಜಗ್ಗೇಶ್ ಜೋಡಿ ಮತ್ತೆ ಒಂದಾಗಿರುವುದು ಒಂದಷ್ಟು ನಿರೀಕ್ಷೆಗಳನ್ನು ಹೆಚ್ಚಿಸಲು ಕಾರಣವಾಗಿದೆ. ಜೊತೆಗೆ ಸಿನಿಮಾ ಬಗೆಗಿನ ಆಸಕ್ತಿ ಎಲ್ಲಿಯೂ ಕುಂದದಂತೆ ನೋಡಿಕೊಳ್ಳುತ್ತಿದೆ ಟೀಂ. ಆಗಾಗ ಸಿನಿಮಾದ ಸಣ್ಣ ಝಲಕ್‍ಗಳನ್ನು ತೋರಿಸುತ್ತಾ, ಸಿನಿಮಾ ರಿಲೀಸ್‍ಗಾಗಿ ಕಾಯುವಂತೆ ಮಾಡುತ್ತಿದೆ. ಅದಕ್ಕೊಂದು ಉದಾಹರಣೆ ವಿಜಯ್ ಪ್ರಸಾದ್ ಈಗಾಗಲೇ ಸಾಂಗ್ಸ್‌ಗಳ ರುಚಿ ತೋರಿಸಿರುವುದು.

    ತೋತಾಪುರಿ ಸಿನಿಮಾದ ಸ್ಪೆಷಲ್ ನ್ಯೂಸ್ ಹಾಗೂ ಸಿಕ್ಕಾಪಟ್ಟೆ ಖುಷಿಯಾಗುವಂತ ನ್ಯೂಸ್ ಎಂದರೆ ಇದೇ ಸಾಂಗ್ ವಿಚಾರ. ಬಾಗ್ಲು ತೆಗಿ ಮೇರಿ ಜಾನ್ ಹಾಡು ನಿರೀಕ್ಷೆಯನ್ನು ಮೀರಿ ಎಲ್ಲರ ಮನಸ್ಸನ್ನು ಗೆದ್ದಿದೆ. ಮಿಲಿಯಾಂತರ ಮನಸ್ಸುಗಳಿಗೆ ಈ ಸಾಂಗ್ ಹತ್ತಿರವಾಗಿದೆ. ಅಷ್ಟೇ ಯಾಕೆ ಈ ಹಾಡನ್ನು ತಮ್ಮ ಹ್ಯಾಪಿ ಮೂಮೆಂಟ್‍ನಲ್ಲಿ ಬಳಸಿಕೊಳ್ಳುತ್ತಿದ್ದಾರೆ.

    ಡ್ಯಾನ್ಸ್ ಮಾಡುವಾಗ, ರೀಲ್ಸ್ ಮಾಡುವಾಗಲೂ ಸಾಂಗ್‍ಗಳ ಸರ್ಚಿಂಗ್‍ನಲ್ಲಿ ಮುಂದೆ ಇದೆ. ವಿದೇಶದಲ್ಲೂ ಇದರ ಹಾವಳಿ ಹೆಚ್ಚಾಗಿಯೇ ಇದೆ ಎಂದರೆ ಖುಷಿ ಪಡುವುದಕ್ಕೆ ಬೇರೆ ಕಾರಣ ಬೇಕೆ..? ಈಗಾಗಲೇ ಎಲ್ಲರಿಗೂ ತಿಳಿದಿರುವಂತೆ ತೋತಾಪುರಿ ಸಿನಿಮಾ ಪ್ಯಾನ್ ಇಂಡಿಯಾ ಲೆವೆಲ್‍ನಲ್ಲಿ ರಿಲೀಸ್ ಆಗುತ್ತಿದೆ. ಕಾಮಿಡಿ ಜಾನರ್‌ನಲ್ಲಿ ಆರಂಭವಾದ ಮೊದಲ ಸಿನಿಮಾ ಪ್ಯಾನ್ ಇಂಡಿಯಾ ಲೆವೆಲ್‍ನಲ್ಲಿ ರಿಲೀಸ್ ಆಗುತ್ತಿರುವುದು. ಆ ಖುಷಿ ಒಂದು ಕಡೆಯಾದರೆ, ಈಗ ದೇಶಾದ್ಯಂತ ಹಾಡುಗಳಿಗೆ ಬರುತ್ತಿರುವ ರೆಸ್ಪಾನ್ಸ್ ಮತ್ತಷ್ಟು ಖುಷಿ ನೀಡಿದೆ. ಇದನ್ನೂ ಓದಿ: ಸಿನಿಮಾ ಆಗಲಿದೆ ಸೋನು ಶ್ರೀನಿವಾಸ್ ಗೌಡ ಲೈಫ್ ಸ್ಟೋರಿ: ಯಾರಾಗಲಿದ್ದಾರೆ ಹೀರೋಯಿನ್?

    ಈ ಖುಷಿಯನ್ನು ಚಿತ್ರತಂಡ ವ್ಯಕ್ತಪಡಿಸಿದೆ. ಹಾಡಿಗೆ ಬಂದ ರೆಸ್ಪಾನ್ಸ್ ಕಂಡು ಥ್ರಿಲ್ ಆಗಿದೆ. ಇನ್ನು ಬಾಗ್ಲು ತೆಗಿ ಮೆರಿ ಜಾನ್ ಹಾಡಿಗೆ ವಿಜಯ್ ಪ್ರಸಾದ್ ಅವರೇ ಸಾಹಿತ್ಯ ಬರೆದಿದ್ದಾರೆ. ಡೈರೆಕ್ಷನ್‍ನಲ್ಲಿಯೂ ಸಿಕ್ಕಾಪಟ್ಟೆ ಮನಸ್ಸುಗಳನ್ನು ಕದಿಯುವ ಚಾಣಾಕ್ಷ್ಯತನ ಹೊಂದಿದ್ದ ವಿಜಯ್ ಪ್ರಸಾದ್ ಇದೀಗ ಸಾಹಿತ್ಯದಲ್ಲೂ ಮನಸ್ಸು ಗೆದ್ದಿದ್ದಾರೆ. ಅನೂಪ್ ಸೀಳಿನ್ ಸಂಗೀತ ನೀಡಿದ್ದು, ವ್ಯಾಸರಾಜ ಸೋಸಲೆ ಹಾಗೂ ಅನನ್ಯಾ ಭಟ್ ಕಂಠಸಿರಿಯಲ್ಲಿ ಈ ಹಾಡು ಮೂಡಿಬಂದಿದೆ. ಉಳಿದಂತೆ ಸಿನಿಮಾದಲ್ಲಿ ಡಾಲಿ ಧನಂಜಯ್, ಅದಿತಿ ಪ್ರಭುದೇವ, ವೀಣಾ ಸುಂದರ್, ಸುಮನ್ ರಂಗನಾಥ್, ದತ್ತಣ್ಣ ಸೇರಿದಂತೆ ನಗಿಸುವ ಬಳಗ ದೊಡ್ಡದೇ ಇದೆ. ಇದನ್ನೂ ಓದಿ: ಅನಿರುದ್ಧ ಅವರನ್ನು ತುಳಿಯುವ ಪ್ರಯತ್ನ ಮಾಡಲಾಗುತ್ತಿದೆ: ಗರಂ ಆದ ಮಹಿಳಾ ಅಭಿಮಾನಿಗಳು

    Live Tv
    [brid partner=56869869 player=32851 video=960834 autoplay=true]

  • ‘ತೋತಾಪುರಿ’ ಟ್ರೇಲರ್ ಕಮಾಲ್: ಕಾಶ್ಮೀರಿ ಫೈಲ್ಸ್‌ಗಿಂತ ಕಮ್ಮಿಯಿಲ್ಲ ನಮ್ ದೇಸಿ ಫೈಲ್ಸ್

    ‘ತೋತಾಪುರಿ’ ಟ್ರೇಲರ್ ಕಮಾಲ್: ಕಾಶ್ಮೀರಿ ಫೈಲ್ಸ್‌ಗಿಂತ ಕಮ್ಮಿಯಿಲ್ಲ ನಮ್ ದೇಸಿ ಫೈಲ್ಸ್

    ವರಸ ನಾಯಕ ಜಗ್ಗೇಶ್ ಮತ್ತು ನಿರ್ದೇಶಕ ವಿಜಯಪ್ರಸಾದ್ ಕಾಂಬಿನೇಶನ್‌ನಲ್ಲಿ ಬರ್ತಿರುವ ಹೈವೋಲ್ಟೇಜ್ ಚಿತ್ರ ‘ತೋತಾಪುರಿ’. ಈಗಾಗಲೇ ‘ತೋತಾಪುರಿ’ ಅಂಗಳದಿಂದ ಬಂದಿರುವ ʻಬಾಗ್ಲು ತೆಗಿ ಮೇರಿ ಜಾನ್ʼ ಹಾಡು ದೊಡ್ಡ ಮಟ್ಟದಲ್ಲಿ ದೇಶ ವಿದೇಶಗಳಲ್ಲೂ ವೈರಲ್ ಆಗಿರೋದನ್ನು ಬಿಡಿಸಿ ಹೇಳಬೇಕಿಲ್ಲ. ತೋತಾಪುರಿಯ ಬಝ್ ಸೋಶಿಯಲ್ ಮೀಡಿಯಾ ಅಂಗಳದಲ್ಲಿ ಪೀಕ್ ಲೆವೆಲ್‌ನಲ್ಲಿದೆ. ಇದೀಗ ಬಿಡುಗಡೆಯಾಗಿರುವ ಟ್ರೇಲರ್ ಆ ಬಝ್ ನೆಕ್ಸ್ಟ್ ಲೆವೆಲ್‌ಗೆ ಕೊಂಡೊಯ್ದಿದೆ. ಯೂಟ್ಯೂಬ್‌ನಲ್ಲೂ ಮಿಲಿಯನ್‌ಗಟ್ಟಲೆ ವೀವ್ಸ್ ತನ್ನದಾಗಿಸಿಕೊಂಡಿದೆ.

    ಎಸ್.. ‘ತೋತಾಪುರಿ’ ಚಿತ್ರದ ಟ್ರೇಲರ್ ಕಿಚ್ಚ ಸುದೀಪ್ ಅವರಿಂದ ಅನಾವರಣವಾಗಿದೆ. ತೋತಾಪುರಿಯ ಕಲರ್‌ಫುಲ್ ಪ್ರಪಂಚ ತೆರೆದುಕೊಂಡಿದೆ. ಸೆಂಟಿಮೆಂಟ್, ಡಬಲ್ ಮೀನಿಂಗ್ ಡೈಲಾಗ್, ಫಿಲಾಸಫಿ, ಕ್ಯೂರಿಯಾಸಿಟಿ ಒಳಗೊಂಡ ಟ್ರೇಲರ್ ಸಿನಿಮಾ ಬೇರೆಯದ್ದೇನನ್ನೋ ಹೇಳಹೊರಟಿದೆ ಅನ್ನೋದನ್ನು ಕೂಡ ಮನದಟ್ಟು ಮಾಡಿದೆ. ವಿಜಯಪ್ರಸಾದ್ ಸಿನಿಮಾ ಅಂದ್ರೆ ಅಲ್ಲಿ ಸಂಭಾಷಣೆಗಳದ್ದೇ ಕಾರುಬಾರು. ಅದು ಇಲ್ಲೂ ಮುಂದುವರಿದಿದೆ. ರಿಯಲ್ ತೋತಾಪುರಿಯಲ್ಲಿ ಸಿಗೋ ರುಚಿ ಹಾಗೆ ಸಿನಿಮಾದಲ್ಲೂ ಯಾವ ಎಲಿಮೆಂಟ್‌ಗಳಿಗೂ ಬರವಿಲ್ಲ ಅನ್ನೋದು ಟ್ರೇಲರ್ ತುಣುಕು ಕನ್ಫರ್ಮ್ ಮಾಡಿದೆ. ಪ್ರತಿ ಪಾತ್ರಗಳು ಹೊಸ ಅವತಾರ ತಾಳಿದ್ದು, ಹಂಡ್ರೆಡ್ ಪರ್ಸೆಂಟ್ ಎಂಟಟೈನ್ಮೆಂಟ್‌ಗೇನು ಮೋಸ ಇಲ್ಲ ಅನ್ನೋದು ಟ್ರೇಲರ್ ನೋಡಿದವರ ಕಾಮನ್ ಟಾಕ್. ಇದನ್ನೂ ಓದಿ: `ಕೆಜಿಎಫ್ 2′ ಮುಂದೆ ನಡೆಯಲಿಲ್ಲ `ಜೆರ್ಸಿ’ ಅಬ್ಬರ: ಶಾಹಿದ್ ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆ

    ಕೇವಲ ಕರ್ನಾಟಕ ಮಾತ್ರವಲ್ಲ ಅಕ್ಕಪಕ್ಕದ ರಾಜ್ಯ ಅಷ್ಟೇ ಏಕೆ ಅಮೆರಿಕಾ, ಆಸ್ಟ್ರೇಲಿಯಾ, ದುಬೈ, ಲಂಡನ್, ಉಗಾಂಡ, ಫಿಲಿಪೈನ್ಸ್ ಸೇರಿದಂತೆ ಹಲವು ದೇಶಗಳಲ್ಲಿರುವ ಅಭಿಮಾನಿಗಳು ಟ್ರೇಲರ್ ನೋಡಿ ಇದು ದೇಸಿ ಫೈಲ್ಸ್ ಎಂದು ಗುಣಗಾನ ಮಾಡ್ತಿದ್ದಾರೆ. ಅಷ್ಟರಮಟ್ಟಿಗೆ ಟ್ರೇಲರ್ ಎಲ್ಲರಿಗೂ ಹಿಡಿಸಿಬಿಟ್ಟಿದೆ. ಅದಕ್ಕೆ ಸಾಕ್ಷಿ ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ಟ್ರೇಲರ್ ಎರಡು ಮಿಲಿಯನ್‌ಗೂ ಅಧಿಕ ವೀವ್ಸ್ ಪಡೆದುಕೊಂಡಿರೋದು.

    ಸುರೇಶ್ ಆರ್ಟ್ಸ್ ಮತ್ತು ಮೋನಿಪ್ಲಿಕ್ಸ್ ಆಡಿಯೋಸ್ ಬ್ಯಾನರ್‌ನಡಿ ಕೆ.ಎ.ಸುರೇಶ್ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಎರಡು ಭಾಗವಾಗಿ ತೆರೆ ಕಾಣುತ್ತಿರುವ ಕಾಮಿಡಿ ಎಂಟಟೈನ್ಮೆಂಟ್ ಸಿನಿಮಾದಲ್ಲಿ ಅದಿತಿ ಪ್ರಭುದೇವ ನಾಯಕ ನಟಿಯಾಗಿ ಮಿಂಚಿದ್ದಾರೆ. ದತ್ತಣ್ಣ, ಸುಮನ ರಂಗನಾಥ್, ಡಾಲಿ ಧನಂಜಯ್, ವೀಣಾ ಸುಂದರ್, ಹೇಮಾದತ್ ಒಳಗೊಂಡ ದೊಡ್ಡ ತಾರಾ ಬಳಗವಿದೆ. ಚಿತ್ರಕ್ಕೆ ಅನೂಪ್ ಸೀಳಿನ್ ಸಂಗೀತ ನಿರ್ದೇಶನ, ನಿರಂಜನ್ ಬಾಬು ಕ್ಯಾಮೆರಾ ವರ್ಕ್, ಸುರೇಶ್ ಅರಸ್ ಸಂಕಲನವಿದೆ. ಇದನ್ನೂ ಓದಿ: ನಟ ಧನಂಜಯ್ ರಾಜಕೀಯ ಪ್ರವೇಶ: ನಡೀರಿ ಏನಾರ ಒಂದಿಷ್ಟು ಒಳ್ಳೆ ಕೆಲಸ ಮಾಡೋಣ ಅಂದ ಡಾಲಿ

  • ‘ತೋತಾಪುರಿ’ ಸಾಂಗ್ ಟೀಸರ್ ಕಂಡು ಗರಂ ಆದ ಪ್ರೇಕ್ಷಕರು

    ‘ತೋತಾಪುರಿ’ ಸಾಂಗ್ ಟೀಸರ್ ಕಂಡು ಗರಂ ಆದ ಪ್ರೇಕ್ಷಕರು

    ನಿರ್ದೇಶಕ ವಿಜಯಪ್ರಸಾದ್, ನವರಸ ನಾಯಕ ಜಗ್ಗೇಶ್ ಹಿಟ್ ಕಾಂಬಿನೇಶನಲ್ಲಿ ಬರುತ್ತಿರುವ ‘ತೋತಾಪುರಿ’ ಸಿನಿಮಾ ಸ್ಯಾಂಡಲ್‍ವುಡ್ ಅಂಗಳದಲ್ಲಿ ಅಪಾರ ನಿರೀಕ್ಷೆ ಮೂಡಿಸಿದೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಿಡುಗಡೆಯಾಗುತ್ತಿರುವ ಈ ಚಿತ್ರ ನೀರ್ ದೋಸೆ ಜೋಡಿಗೆ ಮತ್ತೊಂದು ಸೂಪರ್ ಸಕ್ಸಸ್ ತಂದು ಕೊಡಲಿದೆ ಎಂಬ ಭವಿಷ್ಯವಾಣಿ ಈಗಾಗಲೇ ಗಾಂಧಿನಗರದಲ್ಲಿ ಕೇಳಿ ಬರುತ್ತಿದೆ. ಸೆಟ್ಟೇರಿದ ದಿನದಿಂದ ಇಂತಹ ಮಾತುಗಳನ್ನು ಕೇಳಿಸಿಕೊಂಡು ಬಂದಿದ್ದ ಚಿತ್ರತಂಡಕ್ಕೆ ಈಗ ಅದೇ ಪ್ರೇಕ್ಷಕರು ಛೀಮಾರಿ ಹಾಕುತ್ತಿದ್ದಾರೆ. ಅಂತಹದ್ದೊಂದು ದೊಡ್ಡ ಪ್ರಮಾದವಾವನ್ನು ಚಿತ್ರತಂಡ ಮಾಡಿದೆ.

    ಹೌದು, ತೋತಾಪುರಿ ಚಿತ್ರತಂಡ ಇಂದು ಸಾಂಗ್ ಟೀಸರ್ ಬಿಡುಗಡೆ ಮಾಡುವುದಾಗಿ ಹೇಳಿಕೊಂಡಿತ್ತು. ಚಿತ್ರದ ಬಗ್ಗೆ ಯಾವುದೇ ಅಪ್‍ಡೇಟ್ ಸಿಗದೇ ಕಾದಿದ್ದ ಸಿನಿರಸಿಕರಿಗೆ ಈ ಸುದ್ದಿ ಸಖತ್ ಸಂತಸ ನೀಡಿತ್ತು. ಆದರೆ ಇಂದು ಬಿಡುಗಡೆಯಾದ ಸಾಂಗ್ ಟೀಸರ್ ಆ ಸಂತಸವನ್ನು ಕೋಪವನ್ನಾಗಿಸಿದೆ. ಇದಕ್ಕೆ ಕಾರಣ ಸಾಂಗ್ ಟೀಸರ್‌ನಲ್ಲಿರುವ ಹಿಂದಿ ಸಾಹಿತ್ಯ. ಸಣ್ಣದಾದ ಹಾಡಿನ ಝಲಕ್‍ನಲ್ಲಿ ಹಿಂದಿ ಹಾಗೂ ಉರ್ದು ಭಾಷೆಯಲ್ಲಿರುವ ಸಾಹಿತ್ಯ ಕಂಡು ನೋಡುಗರು ಚಿತ್ರತಂಡದ ಮೇಲೆ ಕೋಪಗೊಂಡಿದ್ದಾರೆ. ಕನ್ನಡ ಸಿನಿಮಾದಲ್ಲಿ ಹಿಂದಿ ಹಾಡು ಯಾಕೆ ಎಂದು ಪ್ರಶ್ನಿಸುತ್ತಿದ್ದಾರೆ. ಅಷ್ಟೇ ಅಲ್ಲ ಕನ್ನಡ ನಾಡು, ನುಡಿ ಎನ್ನುವ ನವರಸ ನಾಯಕ ಜಗ್ಗೇಶ್ ಈ ಹಾಡು ಮಾಡಲು ಒಪ್ಪಿಕೊಂಡ್ರಾ, ಇದು ಅವರ ಅರಿವಿಗೆ ಬರಲಿಲ್ವಾ? ಅದರಲ್ಲೂ ಹಿಂದಿ ಭಾಷೆ ಹೇರಿಕೆ ಬಗ್ಗೆ ಚರ್ಚೆ ನಡೆಯುತ್ತಿರುವ ಇಂತಹ ಸಂದರ್ಭದಲ್ಲಿ ಅಪ್ಪಟ ಕನ್ನಡ ಸಿನಿಮಾವೊಂದು ಈ ರೀತಿಯ ಉದ್ಧಟತನ ತೋರಿರುವುದು ಯಾಕೆ ಎಂದು ಚಿತ್ರತಂಡದ ವಿರುದ್ಧ ಗುಡುಗುತ್ತಿದ್ದಾರೆ.

    ತೋತಾಪುರಿ ಪ್ಯಾನ್ ಇಂಡಿಯಾ ಸಿನಿಮಾವಾಗಿ ಬಿಡುಗಡೆಯಾಗಲು ಸಜ್ಜಾಗಿದ್ದು ಒಂದು ವೇಳೆ ಚಿತ್ರತಂಡ ಹಿಂದಿ ಹಾಡಿನ ಟೀಸರ್ ಬಿಡಿಗಡೆ ಮಾಡಿರಬಹುದಾ ಎಂಬ ಗೊಂದಲವೂ ಎಲ್ಲರನ್ನೂ ಕಾಡುತ್ತಿದೆ. ಆದರೆ ಇಷ್ಟೆಲ್ಲಾ ಚರ್ಚೆ ಆಗುತ್ತಿದ್ದರು ಕೂಡ ಚಿತ್ರತಂಡ ಇಲ್ಲಿವರೆಗೂ ಯಾವುದೇ ಸ್ಪಷ್ಟತೆಯನ್ನು ನೀಡಿಲ್ಲ. ಈ ಗೊಂದಲವನ್ನು ಚಿತ್ರತಂಡ ಅಂದಹಾಗೆ ಪರಿಹರಿಸುತ್ತದೆ ಅನ್ನುವುದನ್ನ ಕಾದು ನೋಡಬೇಕಿದೆ. ಇದನ್ನೂ ಓದಿ: ಎರಡೂ ಡೋಸ್‌ ಲಸಿಕೆ ಪಡೆದ ಪ್ರಯಾಣಿಕರಿಗೆ ಕೋವಿಡ್‌ ಪರೀಕ್ಷೆ ಕಡ್ಡಾಯವಲ್ಲ: ಬ್ರಿಟನ್‌ ಪ್ರಧಾನಿ

    ಅಂದಹಾಗೆ ಚಿತ್ರದಲ್ಲಿ ಜಗ್ಗೇಶ್ ಜೋಡಿಯಾಗಿ ಅದಿತಿ ಪ್ರಭುದೇವ ನಟಿಸುತ್ತಿದ್ದು, ಡಾಲಿ ಧನಂಜಯ್, ಸುಮನ್ ರಂಗನಾಥ್, ದತ್ತಣ್ಣ, ವೀಣಾ ಸುಂದರ್, ಹೇಮಾ ದತ್ ಒಳಗೊಂಡ ಕಲಾವಿದರ ಬಳಗ ಚಿತ್ರದಲ್ಲಿದೆ. ಮೋನಿಫ್ಲಿಕ್ಸ್ ಸ್ಟುಡಿಯೋಸ್, ಸುರೇಶ್ ಆರ್ಟ್ಸ್ ಬ್ಯಾನರ್ ನಡಿ ಕೆ.ಎ ಸುರೇಶ್ ನಿರ್ಮಿಸುತ್ತಿರುವ ಈ ಚಿತ್ರಕ್ಕೆ ಅನೂಪ್ ಸೀಳಿನ್ ಸಂಗೀತ ನಿರ್ದೇಶನವಿದೆ. ಇದನ್ನೂ ಓದಿ: ಉತ್ತರಾಖಂಡ ಚುನಾವಣೆ: ರಾಮನಗರದಿಂದ ಮಾಜಿ ಸಿಎಂ ಹರೀಶ್ ರಾವತ್ ಕಣಕ್ಕೆ

  • ‘ತೋತಾಪುರಿ’ ಚಿತ್ರತಂಡದಿಂದ ಪ್ರೇಕ್ಷಕರಿಗೆ ಸಿಕ್ತು ಸಿಹಿಸುದ್ದಿ- ಜನವರಿ 24ಕ್ಕೆ ಆಡಿಯೋ ಟೀಸರ್ ರಿಲೀಸ್

    ‘ತೋತಾಪುರಿ’ ಚಿತ್ರತಂಡದಿಂದ ಪ್ರೇಕ್ಷಕರಿಗೆ ಸಿಕ್ತು ಸಿಹಿಸುದ್ದಿ- ಜನವರಿ 24ಕ್ಕೆ ಆಡಿಯೋ ಟೀಸರ್ ರಿಲೀಸ್

    ನೀರ್ ದೋಸೆ ಸಿನಿಮಾ ಮೂಲಕ ಕಮಾಲ್ ಮಾಡಿರುವ ಜೋಡಿ ನವರಸ ನಾಯಕ ಜಗ್ಗೇಶ್ ಹಾಗೂ ನಿರ್ದೇಶಕ ವಿಜಯಪ್ರಸಾದ್. ‘ತೋತಾಪುರಿ’ ಮೂಲಕ ಮಗದೊಮ್ಮೆ ಪ್ರೇಕ್ಷಕರನ್ನು ಮನರಂಜಿಸಲು ಈ ಜೋಡಿ ಒಂದಾಗಿದ್ದು ಚಿತ್ರೀಕರಣವನ್ನು ಕಂಪ್ಲೀಟ್ ಮಾಡಿರೋದು ಗೊತ್ತೇ ಇದೆ. ಟೈಟಲ್, ಟ್ಯಾಗ್ ಲೈನ್, ನವರಸ ನಾಯಕ ಜಗ್ಗೇಶ್ ಹೊಸ ಅವತಾರ ಕಂಡಿರುವ ಸಿನಿರಸಿಕರು ಸಿನಿಮಾ ಮೇಲೆ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಇದೀಗ ಚಿತ್ರತಂಡ ಹೊಸ ಅಪ್ಡೇಟ್ ನೀಡಿದೆ. ಅದುವೇ ‘ತೋತಾಪುರಿ’ ಚಿತ್ರದ ಮೊದಲ ಝಲಕ್.

    ಹೌದು, ಫಸ್ಟ್ ಲುಕ್ ಮೂಲಕ ಸುದ್ದಿಯಲ್ಲಿದ್ದ ‘ತೋತಾಪುರಿ’ ಚಿತ್ರತಂಡ ಈಗ ಚಿತ್ರದ ಆಡಿಯೋ ಟೀಸರ್ ಬಿಡುಗಡೆ ಮಾಡಲು ಸಜ್ಜಾಗಿದೆ. ಅದಕ್ಕೆ ಡೇಟ್ ಕೂಡ ಫಿಕ್ಸ್ ಆಗಿದೆ. ಜನವರಿ 24ರಂದು ಆಡಿಯೋ ಟೀಸರ್ ಬಿಡುಗಡೆ ಮಾಡಲು ಚಿತ್ರತಂಡ ಪ್ಲ್ಯಾನ್ ಮಾಡಿಕೊಂಡಿದ್ದು ಆ ಮೂಲಕ ಸಿನಿಮಾದ ಫಸ್ಟ್ ಝಲಕ್ ಚಿತ್ರರಸಿಕರ ಮುಂದಿಡಲಿದೆ ಟೀಂ ತೋತಾಪುರಿ. ಇದನ್ನೂ ಓದಿ: ಕಾಮಿಡಿ ವೀಡಿಯೋ ಝಲಕ್ ಬಿಡುಗಡೆ ಮೂಲಕ ಪ್ರಚಾರಕ್ಕೆ ಮುನ್ನುಡಿ ಬರೆದ ‘ತೋತಾಪುರಿ’ ಚಿತ್ರತಂಡ

    ಸೆಟ್ಟೇರಿದ ದಿನದಿಂದ ಕುತೂಹಲ ಹುಟ್ಟುಹಾಕುತ್ತಾ ಬಂದಿರುವ ಈ ಚಿತ್ರದ ಮೇಲೆ ಪ್ರೇಕ್ಷಕರು ಹಾಗೂ ಚಿತ್ರರಂಗದ ಮಂದಿಯಲ್ಲೂ ಅಪಾರ ನಿರೀಕ್ಷೆ ಇದೆ. ತೋತಾಪುರಿ ಸಿನಿಮಾ ಎರಡು ಸೀಕ್ವೆಲ್ ನಲ್ಲಿ ತೆರೆ ಕಾಣುತ್ತಿರುವ ವಿಚಾರವನ್ನು ಚಿತ್ರತಂಡ ಈಗಾಗಲೇ ಬಹಿರಂಗ ಪಡಿಸಿದೆ. ಜೊತೆಗೆ ಎರಡು ಭಾಗದ ಚಿತ್ರೀಕರಣವನ್ನು ಮುಗಿಸಿ ಚಿತ್ರೀಕರಣಕ್ಕೂ ಕುಂಬಳಕಾಯಿ ಒಡೆದಿದೆ. ಇನ್ನೊಂದು ಇಂಟ್ರಸ್ಟಿಂಗ್ ವಿಚಾರ ಅಂದ್ರೆ ಪ್ಯಾನ್ ಇಂಡಿಯಾ ಲೆವೆಲ್ ನಲ್ಲಿ ಚಿತ್ರವನ್ನು ಬಿಡುಗಡೆ ಮಾಡಲು ಚಿತ್ರತಂಡ ಪ್ಲ್ಯಾನ್ ಮಾಡಿದೆ. ಆ ಮೂಲಕ ‘ತೋತಾಪುರಿ’ ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲೂ ಸೌಂಡ್ ಮಾಡಲಿದೆ. ಇದೆಲ್ಲವೂ ಚಿತ್ರದ ಮೇಲೆ ಸಹಜವಾಗಿಯೇ ಹೆಚ್ಚಿನ ನಿರೀಕ್ಷೆಯನ್ನು ಹುಟ್ಟುಹಾಕಿದೆ. ಸದ್ಯ ಸಿನಿಮಾ ಬಿಡುಗಡೆ ಮಾಡಲು ಸಕಲ ತಯಾರಿ ಮಾಡಿಕೊಳ್ಳುತ್ತಿದ್ದ ಚಿತ್ರತಂಡಕ್ಕೆ ಕೊರೊನಾ ಮೂರನೇ ಅಲೆ ಬ್ರೇಕ್ ನೀಡಿದೆ. ಇದನ್ನೂ ಓದಿ: ತೋತಾಪುರಿ ಸವಿಯಲು ಸಿದ್ಧರಾಗಿ: ಜಗ್ಗೇಶ್

    ಚಿತ್ರದಲ್ಲಿ ರೈತನ ಪಾತ್ರದಲ್ಲಿ ಮಿಂಚಿರುವ ನವರಸ ನಾಯಕ ಜಗ್ಗೇಶ್ ಜೋಡಿಯಾಗಿ ನಟಿ ಅದಿತಿ ಪ್ರಭುದೇವ ತೆರೆ ಹಂಚಿಕೊಂಡಿದ್ದಾರೆ. ತಾರಾಬಳಗವೂ ಅಷ್ಟೇ ಕಲರ್ ಫುಲ್ ಆಗಿದ್ದು, ಡಾಲಿ ಧನಂಜಯ್, ಸುಮನ್ ರಂಗನಾಥ್, ದತ್ತಣ್ಣ, ವೀಣಾ ಸುಂದರ್, ಹೇಮಾ ದತ್, ರೋಹಿತ್ ಪದಕಿ ಒಳಗೊಂಡ ಹಲವು ಅನುಭವಿ ಕಲಾವಿದರು ಚಿತ್ರದಲ್ಲಿ ಅಭಿನಯಿಸಿದ್ದಾರೆ. ಇದನ್ನೂ ಓದಿ: ಭಿನ್ನ-ವಿಭಿನ್ನತೆಯಿಂದ ಕೂಡಿದೆ ‘ತೋತಾಪುರಿ’

    ಗೋವಿಂದಾಯ ನಮಃ, ಆರ್ ಎಕ್ಸ್ ಸೂರಿ, ಶಿವಲಿಂಗ ಸಿನಿಮಾಗಳನ್ನು ನಿರ್ಮಿಸಿರುವ ಕೆ.ಎ.ಸುರೇಶ್ ‘ಮೋನಿಫ್ಲಿಕ್ಸ್ ಸ್ಟುಡಿಯೋಸ್’ ಬ್ಯಾನರ್ ಅಡಿಯಲ್ಲಿ ‘ತೋತಾಪುರಿ’ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಅನೂಪ್ ಸೀಳಿನ್ ಸಂಗೀತ, ವಿಜಯಪ್ರಸಾದ್ ಸಾಹಿತ್ಯ, ನಿರಂಜನ್ ಬಾಬು ಛಾಯಾಗ್ರಹಣ ಹಾಗೂ ಸುರೇಶ್ ಅರಸ್ ಸಂಕಲನ ಈ ಚಿತ್ರಕ್ಕಿದೆ. ಇದನ್ನೂ ಓದಿ: ತೋತಾಪುರಿಗೆ 100 ಡೇಸ್ ಶೂಟಿಂಗ್!

  • ಕಾಮಿಡಿ ವೀಡಿಯೋ ಝಲಕ್ ಬಿಡುಗಡೆ ಮೂಲಕ ಪ್ರಚಾರಕ್ಕೆ ಮುನ್ನುಡಿ ಬರೆದ ‘ತೋತಾಪುರಿ’ ಚಿತ್ರತಂಡ

    ಕಾಮಿಡಿ ವೀಡಿಯೋ ಝಲಕ್ ಬಿಡುಗಡೆ ಮೂಲಕ ಪ್ರಚಾರಕ್ಕೆ ಮುನ್ನುಡಿ ಬರೆದ ‘ತೋತಾಪುರಿ’ ಚಿತ್ರತಂಡ

    ಹಿಟ್ ಕಾಂಬಿನೇಷನ್ ವಿಜಯಪ್ರಸಾದ್, ನವರಸ ನಾಯಕ ಜಗ್ಗೇಶ್ ಒಂದಾಗಿ ನಕ್ಕು ನಗಿಸಲು ಬರ್ತಿರೊ ಸಿನಿಮಾ ‘ತೋತಾಪುರಿ’. ನಾಲ್ಕು ವರ್ಷದ ನಂತರ ಒಂದಾಗಿರುವ ‘ನೀರ್ ದೋಸೆ’ ಜೋಡಿ ಮೇಲೆ ಸಿಕ್ಕಾಪಟ್ಟೆ ನಿರೀಕ್ಷೆ ಸಿನಿಪ್ರಿಯರಿಗಿದೆ. ಮತ್ತೊಂದು ಹೈವೋಲ್ಟೇಜ್ ಕಾಮಿಡಿ ರಸದೌತಣವನ್ನು ತೆರೆ ಮೇಲೆ ಸವಿಯಲು ಎಲ್ಲರೂ ಕಾತರದಿಂದ ಕಾಯುತ್ತಿದ್ದಾರೆ. ಸದ್ಯ ಚಿತ್ರೀಕರಣಕ್ಕೆ ಕುಂಬಳಕಾಯಿ ಒಡೆದು ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ಬ್ಯುಸಿಯಾಗಿರುವ ಚಿತ್ರತಂಡ ಪ್ರಚಾರ ಕಾರ್ಯಕ್ಕೆ ಸಿದ್ಧತೆ ನಡೆಸುತ್ತಿದೆ. ಇದೀಗ ಪ್ರಚಾರ ಕಾರ್ಯದ ಮುನ್ನುಡಿ ಎಂಬಂತೆ ಪುಟ್ಟದಾದ ವೀಡಿಯೋ ಝಲಕ್ ಬಿಡುಗಡೆ ಮಾಡಿ ಎಲ್ಲರ ಗಮನ ತನ್ನತ್ತ ಸೆಳೆದಿದೆ.

    ಚಿತ್ರದ ಪ್ರಚಾರ ಕಾರ್ಯಕ್ಕೆಂದೇ ವಿಶೇಷವಾಗಿ ಚಿತ್ರೀಕರಿಸಿದ ವೀಡಿಯೋ ತುಣುಕು ಇದಾಗಿದೆ. ಸೋಶಿಯಲ್ ಮೀಡಿಯಾದಲ್ಲಿ ಜಗ್ಗೇಶ್ ಹಾಗೂ ನಿರ್ದೇಶಕ ವಿಜಯಪ್ರಸಾದ್ ಸಂಭಾಷಣೆ ವೈರಲ್ ಆಗುತ್ತಿದ್ದು. ನೋಡುಗರಿಗೆ ಸಖತ್ ಮಜಾ ನೀಡುತ್ತಿದೆ. ಚಿತ್ರತಂಡದ ವಿಶೇಷ ರೀತಿಯ ಪ್ರಚಾರ ಕಾರ್ಯ ಸದ್ಯ ಎಲ್ಲರ ಗಮನ ಸೆಳೆದಿದೆ. ಇಂಟ್ರಸ್ಟಿಂಗ್ ಆಗಿರೋ ಈ ವೀಡಿಯೋ ಮೂಲಕ ಸದ್ಯದಲ್ಲೇ ಟೀಸರ್ ಬಿಡುಗಡೆ ಮಾಡುವ ಸೂಚನೆ ಕೂಡ ಚಿತ್ರತಂಡ ನೀಡಿದೆ. ಇದನ್ನೂ ಓದಿ: ನಟ ಅಮಿತಾಬ್ ಬಚ್ಚನ್‍ರಿಂದ ಖರೀದಿ ಮಾಡಿದ್ದ ಐಷಾರಾಮಿ ಕಾರು ರಿಲೀಸ್

    ಚಿತ್ರದಲ್ಲಿ ಜಗ್ಗೇಶ್ ರೈತನ ಪಾತ್ರದಲ್ಲಿ ರಂಜಿಸಲಿದ್ದು, ಮುಸ್ಲಿಂ ಯುವತಿ ಪಾತ್ರದಲ್ಲಿ ನಾಯಕಿಯಾಗಿ ಅದಿತಿ ಪ್ರಭುದೇವ ಮಿಂಚಿದ್ದಾರೆ. ‘ತೋತಾಪುರಿ’ ಮೆರುಗು ಹೆಚ್ಚಿಸಲು ಖ್ಯಾತ ಕಲಾವಿದರ ದಂಡು ಚಿತ್ರದಲ್ಲಿದ್ದು, ಡಾಲಿ ಧನಂಜಯ್, ಸುಮನ್ ರಂಗನಾಥ್, ವೀಣಾ ಸುಂದರ್, ದತ್ತಣ್ಣ ತಾರಾಬಳಗದಲ್ಲಿದ್ದಾರೆ. ‘ತೋತಾಪುರಿ’ ಚಿತ್ರ ಎರಡು ಸೀಕ್ವೆಲ್ ನಲ್ಲಿ ತೆರೆಗೆ ಬರುತ್ತಿದ್ದು, ಬಿಡುಗಡೆಗೂ ಮೊದಲೇ ಎರಡೂ ಸೀಕ್ವೆಲ್ ಚಿತ್ರೀಕರಣ ಮುಗಿಸಿ ಈಗಾಗಲೇ ಹೊಸ ದಾಖಲೆಯನ್ನೂ ಈ ಚಿತ್ರ ತನ್ನ ಖಾತೆಗೆ ಹಾಕಿಕೊಂಡಿದೆ. ಅನೂಪ್ ಸೀಳಿನ್ ಸಂಗೀತ ಸಂಯೋಜನೆ, ನಿರಂಜನ್ ಬಾಬು ಕ್ಯಾಮೆರಾ ಕೈಚಳಕವಿರುವ ಈ ಚಿತ್ರವನ್ನು ಸುರೇಶ್ ಆಟ್ರ್ಸ್ ಬ್ಯಾನರ್ ನಲ್ಲಿ ಶಿವಲಿಂಗ ಖ್ಯಾತಿಯ ನಿರ್ಮಾಪಕ ಸುರೇಶ್ ನಿರ್ಮಾಣ ಮಾಡಿದ್ದಾರೆ. ಇದನ್ನೂ ಓದಿ:1.5 ಕೋಟಿ ಆದಾಯ ಗಳಿಸುತ್ತಿದ್ದ ಆರೋಪದಡಿ ಬಿಗ್‍ಬಿ ಬಾಡಿ ಗಾರ್ಡ್ ವರ್ಗಾವಣೆ

  • ತೋತಾಪುರಿ ಸವಿಯಲು ಸಿದ್ಧರಾಗಿ: ಜಗ್ಗೇಶ್

    ತೋತಾಪುರಿ ಸವಿಯಲು ಸಿದ್ಧರಾಗಿ: ಜಗ್ಗೇಶ್

    ಬೆಂಗಳೂರು: ಬಹುನಿರೀಕ್ಷಿತ ಸಿನಿಮಾ ತೋತಾಪುರಿ ತೆರೆಮೇಲೆ ಬರಲು ಸಿದ್ಧವಾಗಿದೆ ಎನ್ನುವ ವಿಚಾರವನ್ನು ಸ್ಯಾಂಡಲ್‍ವುಡ್ ನಟ ಜಗ್ಗೇಶ್ ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

    ಲಾಕ್‍ಡೌನ್ ತೆರವುಗೊಂಡ ನಂತರ ಅಂದರೆ ಈಗ ಈ ಸಿನಿಮಾದ ಡಬ್ಬಿಂಗ್ ಮತ್ತೆ ಆರಂಭವಾಗಿದೆ. ತೋತಾಪುರಿ ಸಿನಿಮಾ ಅತಿಶೀಘ್ರದಲ್ಲಿ ನಿಮ್ಮ ಮುಂದೆ ಬರಲು ಸಿದ್ಧತೆ ನಡೆದಿದೆ. ನೀರ್ ದೋಸೆ ನಿರ್ದೇಶಕ ವಿಜಯ್ ಜೊತೆ ಎರಡನೇ ಚಿತ್ರಪಯಣ ನಗುವಿನ ರಸದೌತಣ ಎಂದು ಜಗ್ಗೇಶ್ ಇನ್‍ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ.

    ಚಿತ್ರದ ಚಿತ್ರೀಕರಣದ ಕೆಲವು ಫೋಟೋಗಳನ್ನು ನೋಡುತ್ತಿದ್ದರೆ ತೋತಾಪುರಿ ಅಂತರ್ ಧರ್ಮೀಯ ಪ್ರೇಮ ಕತೆ ಇರಬಹುದಾ ಎಂಬ ಅನುಮಾನ ಮೂಡಿಸುತ್ತದೆ. ಯಾಕೆಂದರೆ, ನಾಯಕ ಜಗ್ಗೇಶ್ ಹಣೆಗೆ ಕುಂಕುಮ ಇಟ್ಟುಕೊಂಡಿದ್ದರೆ, ನಾಯಕಿ ಅದಿತಿ ಬುರ್ಖಾ ಧರಿಸಿ ಮುಸ್ಲಿಂ ಹುಡುಗಿಯಾಗಿ ಹಾಗೂ ಸುಮನ್ ರಂಗನಾಥ್ ಕ್ರೈಸ್ತ ಸಿಸ್ಟರ್ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಚಿತ್ರ ತೆರೆಯ ಮೇಲೆ ಬಂದರೆ ಚಿತ್ರದ ಕಥಾಹಂದರವೇನು ಎಂಬುದನ್ನು ತಿಳಿಯ ಬಹುದಾಗಿದೆ.

    ನೀರ್ ದೋಸೆ ಚಿತ್ರದ ಬಳಿಕ ನಿರ್ದೇಶಕ ವಿಜಯ ಪ್ರಸಾದ್ ತೋತಾಪುರಿ ಸಿನಿಮಾ ಮೂಲಕವಾಗಿ ಮತ್ತೊಮ್ಮೆ ನವರಸನಾಯಕನಿಗೆ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಈ ಸಿನಿಮಾದಲ್ಲಿ ಧನಂಜಯ್, ಅಧಿತಿ ಪ್ರಭುದೇವ, ಸುಮನ್ ರಂಗನಾಥ್ ಸೇರಿದಂತೆ ದೊಡ್ಡ ತಾರಾಗಣವೇ ಇದೆ. ಈ ಸಿನಿಮಾ ಇನ್ನೇನು ತೆರೆಗಪ್ಪಳಿಸಲಿದೆ. ಈ ಕುರಿತಾಗಿಯೇ ಸಿಹಿ ಸುದ್ದಿ ಕೊಟ್ಟಿದ್ದಾರೆ ನವರಸ ನಾಯಕ ಜಗ್ಗೇಶ್ ನೀಡಿದ್ದಾರೆ.

    ವಿಶೇಷ ಅಂದರೆ ಡಾಲಿ ಧನಂಜಯ ಕೂಡ ಚಿತ್ರದಲ್ಲಿ ಪ್ರಮುಖ ಪಾತ್ರವೊಂದರಲ್ಲಿ ನಟಿಸಿದ್ದಾರೆ. ವಿಜಯ ಪ್ರಸಾದ್ ನಿರ್ದೇಶಿಸಿದ್ದ ಸಿದ್ಲಿಂಗು ಹಾಗೂ ನೀರ್ ದೋಸೆ ಚಿತ್ರಗಳನ್ನು ನೋಡಿ ಇಷ್ಟಪಟ್ಟಿದ್ದ ಧನಂಜಯ, ನವರಸ ನಾಯಕ ಜಗ್ಗೇಶ್ ಅವರ ಜತೆ ನಟಿಸುವ ಅವಕಾಶ ಸಿಕ್ಕಿದ್ದೇ ಸಂಭ್ರಮಿಸಿದ್ದರು.

  • ರಿಲೀಸ್‍ಗೂ ಮೊದಲೇ ನೂತನ ದಾಖಲೆ ಬರೆದ ‘ತೋತಾಪುರಿ’ ಚಿತ್ರ

    ರಿಲೀಸ್‍ಗೂ ಮೊದಲೇ ನೂತನ ದಾಖಲೆ ಬರೆದ ‘ತೋತಾಪುರಿ’ ಚಿತ್ರ

    – ನವರಸ ನಾಯಕನಿಗೆ ಶುಭಕೋರಿದ ಚಿತ್ರತಂಡ

    ಬೆಂಗಳೂರು: ಕನ್ನಡ ಚಿತ್ರರಂಗದ ನವರಸ ನಾಯಕ, ನಗಿಸುತ್ತಲೇ ರಂಜಿಸಿ ಕನ್ನಡ ಸಿನಿರಸಿಕರ ಮನಗೆದ್ದು, ಜನಮನದಲ್ಲಿ ನೆಲೆಸಿರುವ ಜಗೇಶ್ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ನವರಸ ನಾಯಕ ಜಗ್ಗೇಶ್ ಹುಟ್ಟುಹಬ್ಬಕ್ಕೆ ತೋತಾಪುರಿ ಚಿತ್ರತಂಡ ಶುಭ ಕೋರಿದೆ. ‘ತೋತಾಪುರಿ’ ಚಿತ್ರದಲ್ಲಿ ಜಗ್ಗೇಶ್ ಈ ಹಿಂದೆ ಮಾಡದ ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳುವ ಮೂಲಕ ಸಿನಿರಸಿಕರಿಗೆ ಹೊಟ್ಟೆ ಹುಣ್ಣಾಗಿಸುವಷ್ಟು ನಗಿಸಲು ಸಿದ್ಧರಾಗಿದ್ದಾರೆ.

    ನೀರ್ ದೋಸೆ ಖ್ಯಾತಿಯ ನಿರ್ದೇಶಕ ವಿಜಯ್ ಪ್ರಸಾದ್ ನಿರ್ದೇಶನದಲ್ಲಿ ಮೂಡಿ ಬರ್ತಿರೋ ತೋತಾಪುರಿ ಚಿತ್ರದಲ್ಲಿ ಅಧಿತಿ ಪ್ರಭುದೇವ ಚಿತ್ರದ ನಾಯಕಿಯಾಗಿ ಬಣ್ಣ ಹಚ್ಚಿದ್ದಾರೆ. ಇಂಟ್ರಸ್ಟಿಂಗ್ ವಿಚಾರ ಅಂದ್ರೆ ಬಿಡುಗಡೆಗೂ ಮುನ್ನವೇ ‘ತೋತಾಪುರಿ’ ಚಿತ್ರ ನೂತನ ದಾಖಲೆಯನ್ನು ಸೃಷ್ಟಿಸಿದೆ. ಸಾಮಾನ್ಯವಾಗಿ ಮೊದಲ ಭಾಗ ಬಿಡುಗಡೆಯಾದ ಮೇಲೆ ಎರಡನೇ ಭಾಗದ ಚಿತ್ರೀಕರಣ ಮಾಡಲಾಗುತ್ತದೆ. ಆದರೆ ‘ತೋತಾಪುರಿ’ ಚಿತ್ರ ಸಿನಿಮಾ ಬಿಡುಗಡೆಗೂ ಮುನ್ನವೇ ಎರಡೂ ಭಾಗದ ಚಿತ್ರೀಕರಣ ಮಾಡುತ್ತಿದ್ದು, ಇದು ಭಾರತೀಯ ಚಿತ್ರರಂಗದಲ್ಲಿ ಮೊದಲು.

    ಏಕಕಾಲದಲ್ಲಿ ತೋತಾಪುರಿ ಚಿತ್ರದ ಚಾಪ್ಟರ್-1 ಹಾಗೂ ಚಾಪ್ಟರ್-2 ಚಿತ್ರೀಕರಣ ನಡೆಯುತ್ತಿದೆ. ಈಗಾಗಲೇ ‘ತೋತಾಪುರಿ’ ಚಾಪ್ಟರ್-1 ಭಾಗದ ಚಿತ್ರೀಕರಣ ಕಂಪ್ಲೀಟ್ ಮಾಡಿರುವ ಚಿತ್ರತಂಡ ಚಾಪ್ಟರ್-2 ಚಿತ್ರೀಕರಣವನ್ನು ಭರದಿಂದ ನಡೆಸುತ್ತಿದೆ. ಈ ಮೂಲಕ ಬಿಡುಗಡೆಗೂ ಮುನ್ನವೇ ತೋತಾಪುರಿ ಚಿತ್ರ ಹೊಸ ದಾಖಲೆ ಬರೆದಿದೆ. ಡಾಲಿ ಧನಂಜಯ್, ಸುಮನ್ ರಂಗನಾಥ್, ವೀಣಾ ಸೇರಿದಂತೆ ಸ್ಟಾರ್ ಕಲಾವಿದರ ದಂಡು ‘ತೋತಾಪುರಿ’ ಚಿತ್ರದಲ್ಲಿದ್ದು, ಶಿವಲಿಂಗ ಖ್ಯಾತಿಯ ನಿರ್ಮಾಪಕ ಸುರೇಶ್ ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.

  • ತೋತಾಪುರಿಗೆ 100 ಡೇಸ್ ಶೂಟಿಂಗ್!

    ತೋತಾಪುರಿಗೆ 100 ಡೇಸ್ ಶೂಟಿಂಗ್!

    ಬೆಂಗಳೂರು: ಕೆ.ಎ.ಸುರೇಶ್ ಆರ್ಟ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣಗೊಳ್ಳುತ್ತಿರುವ ಬಹು ನಿರೀಕ್ಷಿತ ಸಿನಿಮಾ `ತೋತಾಪುರಿ’. ನೀರ್ ದೋಸೆ ಚಿತ್ರದ ಯಶಸ್ವೀ ತಂಡ ಮತ್ತೊಮ್ಮೆ `ತೋತಾಪುರಿ’ಯ ಮೂಲಕ ಒಂದಾಗಿರೋದು ವಿಶೇಷ. ನಿರ್ದೇಶಕ ವಿಜಯಪ್ರಸಾದ್ ಅವರ ಈ ಚಿತ್ರದಲ್ಲಿ ನವರಸ ನಾಯಕ ಜಗ್ಗೇಶ್, ದತ್ತಣ್ಣ, ಸುಮನ್ ರಂಗನಾಥ್ ಮತ್ತೆ ಒಂದಾಗಿದ್ದಾರೆ. ಇದಲ್ಲದೆ ಉದ್ಯಮಿಯ ಪಾತ್ರದಲ್ಲಿ ಡಾಲಿ ಧನಂಜಯ ಮತ್ತು ನಾಯಕಿಯಾಗಿ ಅದಿತಿ ಪ್ರಭುದೇವ ನಟಿಸುತಿದ್ದಾರೆ.

    ನಿರ್ಮಾಪಕ ಕೆ ಎ ಸುರೇಶ್ ಅವರ ಹಿಂದಿನ ಸಿನಿಮಾಗಳಿಗಿಂತ ಹೆಚ್ಚಿನ ಭರವಸೆ ಈ ಚಿತ್ರ ಮೂಡಿಸಿದೆ. ಮಾರುಕಟ್ಟೆಯಲ್ಲಿ ಈ ತಂಡದ ಬಗ್ಗೆಯೇ ದೊಡ್ಡ ನಿರೀಕ್ಷೆ ಉದ್ಭವವಾಗಿದೆ. ಕನ್ನಡ ಚಿತ್ರ ರಂಗದಲ್ಲಿ ಯಶಸ್ಸನ್ನು ಬೆನ್ನಿಗೆ ಕಟ್ಟಿಕೊಂಡಿರುವ ನಿರ್ಮಾಪಕ ಕೆ ಎ ಸುರೇಶ್ `ತೋತಾಪುರಿ’. ಚಿತ್ರದಲ್ಲಿ ಮೊದಲ ಬಾರಿಗೆ ಡಾಲಿ ಧನಂಜಯ್ ಜಗ್ಗೇಶ್ ಜೊತೆಯಾಗಿದ್ದಾರೆ. ನಾಯಕಿ ಅದಿತಿ ಪ್ರಭುದೇವ ಮುಸ್ಲಿಂ ಹುಡುಗಿ, ಸುಮನ್ ರಂಗನಾಥ್ ಕ್ರಿಶ್ಚಿಯನ್ ಹೆಣ್ಣುಮಗಳಾಗಿ ಅಭಿನಯಿಸಿದ್ದಾರೆ.

    ನವರಸ ನಾಯಕ ಜಗ್ಗೇಶ್ ಅವರ ಚಿತ್ರಜೀವನದಲ್ಲಿ ಇದೇ ಮೊದಲ ಬಾರಿಗೆ 100 ದಿವಸಗಳ ಕಾಲ ಚಿತ್ರೀಕರಣ ನಡೆಸಲಾಗಿದೆ. ನಿರ್ಮಾಪಕ ಕೆ ಎ ಸುರೇಶ್ `ರಾಜು ಕನ್ನಡ ಮೀಡಿಯಂ’ ಚಿತ್ರದ ಯಶಸ್ಸಿನ ನಂತರ ಒಂದು ಭರವಸೆ ಮೂಡಿಸುವ ತಂಡದ ಜೊತೆ ಹಣ ಹೂಡುತ್ತಿದ್ದಾರೆ. ವಿಜಯಪ್ರಸಾದ್ `ಸಿದ್ಲಿಂಗು’ ಸಿನಿಮಾದಲ್ಲಿ ಟೀಚರ್ ಆಗಿದ್ದ ಸುಮನ್ ರಂಗನಾಥ್ ಈ ಚಿತ್ರದಲ್ಲೂ ಪ್ರಮುಖ ಪಾತ್ರ ಗಿಟ್ಟಿಸಿಕೊಂಡಿದ್ದಾರೆ. ಅನೂಪ್ ಸೀಳಿನ್ ಸಂಗೀತ, ನಂಜೇಶ್ ಬಾಬು ಛಾಯಾಗ್ರಹಣ ಮಾಡಿದ್ದಾರೆ. ಮೈಸೂರು, ಶ್ರೀರಂಗಪಟ್ಟಣ, ಕೊಡಗಿನಲ್ಲಿ ಚಿತ್ರೀಕರಣ ಮಾಡಲಾಗಿದೆ.

    `ಎರಡನೇ ಮದುವೆ’, `ಗೋವಿಂದಾಯ ನಮಃ’, ಶ್ರಾವಣಿ ಸುಬ್ರಮಣಿ, ಆರ್ ಎಕ್ಸ್ ಸೂರಿ, ಶಿವಲಿಂಗ ಮತ್ತು ರಾಜು ಕನ್ನಡ ಮೀಡಿಯಂ ನಂತರ ಈ `ತೋತಾಪುರಿ’ಯನ್ನು ನಿರ್ಮಿಸಿರುವ ನಿರ್ಮಾಪಕ ಸುರೇಶ್ ಈ ಚಿತ್ರವನ್ನು ಮಾವಿನ ಹಣ್ಣಿನ ಸೀಸನ್ನಿನಲ್ಲೇ ಬಿಡುಗಡೆ ಮಾಡುವ ಇರಾದೆ ಇಟ್ಟುಕೊಂಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv