Tag: Total lunar Eclipse

  • ಸೆ.7 ರಕ್ತಚಂದ್ರಗ್ರಹಣ – ಗರ್ಭಿಣಿಯರು ಏನು ಮಾಡಬೇಕು? ತಜ್ಞ ವೈದ್ಯರ ಸಲಹೆಗಳೇನು?

    ಸೆ.7 ರಕ್ತಚಂದ್ರಗ್ರಹಣ – ಗರ್ಭಿಣಿಯರು ಏನು ಮಾಡಬೇಕು? ತಜ್ಞ ವೈದ್ಯರ ಸಲಹೆಗಳೇನು?

    ಬೆಂಗಳೂರು: ನಾಳೆ ರಾತ್ರಿ ನಭೋ ಮಂಡಲದಲ್ಲಿ ಕೌತುಕದ ರಕ್ತ ಚಂದನ ಚಂದ್ರಗ್ರಹಣ (Chandra Grahan) ಸಂಭವಿಸಲಿದೆ. ಸುದೀರ್ಘ 3 ಗಂಟೆ 28 ನಿಮಿಷಗಳ ಕಾಲ ನಡೆಯುವ ಭೂಮಿ, ಸೂರ್ಯ ಹಾಗೂ ಚಂದ್ರನ ನಡುವಿನ ನೆರಳಿನಾಟಕ್ಕೆ ಭಾರತ ಕೂಡ ಸಾಕ್ಷಿಯಾಗಲಿದೆ. ಗ್ರಹಣದ ವೇಳೆ ನಮ್ಮಲ್ಲಿ ಗ್ರಹಗತಿಗಳ ಬದಲಾವಣೆ ಆಗುತ್ತೆ ಅನ್ನೋ ನಂಬಿಕೆ ದಟ್ಟವಾಗಿದ್ದು, ಅದರಲ್ಲೂ ಗರ್ಭಿಣಿಯರು (Pregnant Womens) ಮೇಲೆ ಹೆಚ್ಚಿನ ಪ್ರಭಾವ ಬೀರುತ್ತೆ ಅನ್ನೋ ನಂಬಿಕೆ ಕೂಡ ಇದೆ.

    ಹೌದು, ನಾಳೆ ರಾತ್ರಿ ವರ್ಷದ ಎರಡನೇ ಮತ್ತು ಕೊನೆಯ ಚಂದ್ರಗ್ರಹಣ ಸಂಭವಿಸಲಿದೆ. ಹುಣ್ಣಿಮೆಯ ಚಂದ್ರ ರಕ್ತಚಂದನದ ರೀತಿ ಗೋಚರಿಸಲಿದ್ದಾನೆ. ಗ್ರಹಣ ಅಂದ್ರೆ ಒಂದು ರೀತಿಯಲ್ಲಿ ಭಯದ ಭಾವನೆ ಇನ್ನೂ ಜನರಲ್ಲಿದೆ. ಗ್ರಹಣದ ವೇಳೆ ಊಟ ಮಾಡಬಾರದು, ಗ್ರಹಣದ ವೇಳೆ ಹೊರಗೆ ಬರಬಾರದು ಅನ್ನೋ ನಿಯಮಗಳನ್ನೂ ಕೂಡ ಮಾಡಿಕೊಂಡು ಬರಲಾಗಿದೆ. ಅದ್ರೆ ವೈಜ್ಞಾನಿಕವಾಗಿ ನೋಡಿದಾಗ ಇದು ಆಕಾಶದಲ್ಲಿ ನಡೆಯುವ ಒಂದು ಸಹಜ ಪ್ರಕ್ರಿಯೆ. ಚಂದ್ರಗ್ರಹಣದಿಂದ ಸೂಸುವ ಕಿರಣಗಳಿಂದ ಅಷ್ಟಾಗಿ ಯಾವುದೇ ಪರಿಣಾಮ ಬೀರೋದಿಲ್ಲ. ಇದನ್ನೂ ಓದಿ: ಭಾರತ ಇನ್ನೆರಡು ತಿಂಗಳಲ್ಲಿ ಟ್ರಂಪ್‌ ಕ್ಷಮೆಯಾಚಿಸುತ್ತೆ: ಅಮೆರಿಕ ವಾಣಿಜ್ಯ ಕಾರ್ಯದರ್ಶಿ

     ಇನ್ನೂ ಗ್ರಹಣದ ವೇಳೆ ಗರ್ಭಿಣಿಯರ ಮೇಲೆ ಹೆಚ್ಚು ಪರಿಣಾಮ ಪ್ರಭಾವ ಬೀರುತ್ತೆ ಅಂತಾ ಜ್ಯೋತಿಷಿಗಳು ಹೇಳ್ತಾರೆ. ಆದ್ರೆ ವೈಜ್ಞಾನಿಕವಾಗಿ ನೋಡಿದ್ರೆ ಅತಂಹ ಯಾವುದೇ ಪರಿಣಾಮ ಬೀರಲ್ಲ ಎಂದು ಸ್ತ್ರೀ ರೋಗ ತಜ್ಞರು ಹೇಳುತ್ತಾರೆ. ಆದ್ರೆ ಗ್ರಹಣದ ಕಾರಣದಿಂದ ನಾರ್ಮಲ್ ಡೆಲಿವರಿಯನ್ನ ತಡೆಯಲು ಸಾಧ್ಯವಿಲ್ಲ. ಸಿ ಸೆಕ್ಷನ್ ಮಾಡಿಸಿಕೊಳ್ಳುವವರು ಗ್ರಹಣದ ದಿನ ಬೇಡ ಆಪರೇಷನ್ ಮುಂದಕ್ಕೆ ಹಾಕಿ ಅಂತಾ ಸಾಕಷ್ಟು ಗರ್ಭಿಣಿಯರು ಕೇಳಿದ್ದಾರೆ ಎಂದು ಸ್ತ್ರೀ ರೋಗ ತಜ್ಞರು ಹೇಳಿದ್ದಾರೆ. ಇದನ್ನೂ ಓದಿ: ಸೆಮಿಕಂಡಕ್ಟರ್‌ ವಲಯದಲ್ಲಿ ಭಾರತ ‘ವಿಕ್ರಮ’; ಏನಿದು ದೇಶೀಯ ವಿಕ್ರಮ್‌-32 ಚಿಪ್‌ – ಅಮೆರಿಕ, ಚೀನಾಗೆ ಟಕ್ಕರ್?

    ಗ್ರಹಣ ಆಚರಣೆ ಅಂತಾ ಗರ್ಭಿಣಿಯರು ಹೆಚ್ಚು ಕಾಲ ಉಪವಾಸ ಮಾಡಿದ್ರೆ ಮಗುವಿಗೆ ಸಮಸ್ಯೆ ಆಗಲಿದೆ. ಮಗುವಿಗೆ ಗ್ಲೂಕೋಸ್ ಕಡಿಮೆಯಾಗಿ ತಾಯಿ-ಮಗುವಿಗೆ ಸಮಸ್ಯೆ ಆಗುವ ಸಾಧ್ಯತೆ ಇದೆ. ಉಪವಾಸ ಮಾಡುವ ಅಗತ್ಯ ಇರೋದಿಲ್ಲ. ಗರ್ಭಿಣಿಯರು ಎಂದಿನಂತೆ ಇರುವ ಹಾಗೆ ಗ್ರಹಣದ ದಿನವೂ ಇದ್ದರೆ ಉತ್ತಮ ಎಂದು ವೈದ್ಯರು ಹೇಳುತ್ತಾರೆ.

    ಭಾನುವಾರ ಸಂಭವಿಸುತ್ತಿರೋ ರಕ್ತಚಂದನ ಚಂದ್ರಗ್ರಹಣ ಆಗಸದಲ್ಲಿ ಹೊಸ ಚಿತ್ತಾರ ಮೂಡಿಸಲಿದೆ. ಗರ್ಭಿಣಿಯರು ಆತಂಕ ಬಿಟ್ಟು ಸಹಜವಾಗಿರಿ. ಮಾನಸಿಕ ಗೊಂದಲಕ್ಕೆ ಒಳಗಾಗಿ ಸಮಸ್ಯೆ ಮಾಡಿಕೊಂಡು ಇದು ಗ್ರಹಣದ ಪರಿಣಾಮ ಎಂದೆಲ್ಲ ಅಂದುಕೊಳ್ಳಬೇಡಿ ಎಂದು ವೈದ್ಯರು ಸಲಹೆ ನೀಡಿದ್ದಾರೆ.

  • ಸೆಪ್ಟೆಂಬರ್ 7, 8 ರಂದು ಸಂಭವಿಸಲಿದೆ ಚಂದ್ರಗ್ರಹಣ

    ಸೆಪ್ಟೆಂಬರ್ 7, 8 ರಂದು ಸಂಭವಿಸಲಿದೆ ಚಂದ್ರಗ್ರಹಣ

    – ಭಾರತದಲ್ಲಿ ರಕ್ತ ಚಂದ್ರಗ್ರಹಣ ಗೋಚರ; ಯಾವ ರಾಶಿಗೆ ಶುಭ, ಅಶುಭ?

    ಬೆಂಗಳೂರು: ಸುದೀರ್ಘ ಅವಧಿಯ ಅಪರೂಪದ ಚಂದ್ರಗ್ರಹಣ (Chandra Grahan) ಭಾರತದಾದ್ಯಂತ ಗೋಚರಿಸಲಿದೆ. ಸೆ.7 ಮತ್ತು 8 ರಂದು ಚಂದ್ರಗ್ರಹಣ ಸಂಭವಿಸಲಿದೆ. ವಿಜ್ಞಾನಿಗಳು ಹಾಗೂ ಜ್ಯೋತಿಷ್ಯರು ಈ ಗ್ರಹಣದ ಬಗ್ಗೆ ಹೇಳೋದೇನು?

    ಸೆ.7 ಮತ್ತು 8 ರಂದು ಗ್ರಹಣ ಸಂಭವಿಸಲಿದೆ. ಸೆ.7ರ ರಾತ್ರಿ 9:57ರ ರಾತ್ರಿ ಸ್ಪರ್ಶಕಾಲ ಹಾಗೂ ಸೆ.8ರ ಮಧ್ಯರಾತ್ರಿ 1:26ಕ್ಕೆ ಮೋಕ್ಷಕಾಲ ಸಂಭವಿಸಲಿದೆ. ಚಂದ್ರಗ್ರಹಣದ ಪೂರ್ಣ ಪ್ರಭಾವದ ಆರಂಭವು ಮಧ್ಯರಾತ್ರಿ 12:28 ರಿಂದ 1:56 ರ ವರೆಗೆ ಇರಲಿದೆ. ಸುದೀರ್ಘ ಅವಧಿ ಅಂದರೆ ಮೂರು ಗಂಟೆಗಳ ಕಾಲ ಸಂಭವಿಸಲಿದೆ. ಭಾರತದಲ್ಲಿ ಎಲ್ಲೆಡೆ ಗ್ರಹಣ ಗೋಚರವಾಗಲಿದೆ. ರಕ್ತವರ್ಣದಲ್ಲಿ ಚಂದಿರ ಗೋಚರಿಸಲಿದ್ದಾನೆ. ಇದನ್ನೂ ಓದಿ: ಧರ್ಮಸ್ಥಳ ಕೇಸನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದೇವೆ, ಕ್ಯಾಬಿನೆಟ್‌ನಲ್ಲಿ ಚರ್ಚಿಸಿ ನಿರ್ಧಾರ: ಅಮಿತ್ ಶಾ ಪ್ರತಿಕ್ರಿಯೆ

    ಇದು ಪೂರ್ಣ ಚಂದ್ರಗ್ರಹಣ (Lunar Eclipse). ಇಡೀ ಚಂದ್ರ ಭೂಮಿಯ ದಟ್ಟವಾದ ನೆರಳನ್ನು ಪ್ರವೇಶಿಸುತ್ತದೆ. ಇದೊಂದು ಅಪರೂಪದ ವಿದ್ಯಮಾನ. ಖಗೋಳ ವಿಸ್ಮಯ ಎಂದು ನೆಹರೂ ತಾರಾಲಯದ ನಿರ್ದೇಶಕ ಗುರುಪ್ರಸಾದ್‌ ತಿಳಿಸಿದ್ದಾರೆ.

    ಚಂದ್ರಗ್ರಹಣ ಅಂದರೆ ಸಾಮಾನ್ಯವಾಗಿ ಕೆಡುಕು ಎನ್ನುವ ಭಾವನೆಯೇ ಹೆಚ್ಚು. ರಾಜಕೀಯ ವಿಪ್ಲವ ಪ್ರಾಕೃತಿಕ ಅವಘಡ ಸಂಭವಿಸುತ್ತದೆ. ಸಂಬಂಧಗಳ ಮಧ್ಯೆಯೂ ಚಂದ್ರಗ್ರಹಣ ಬಿರುಕು ಮೂಡಿಸಬಹುದು. ಚಂದ್ರಗ್ರಹಣ 12 ರಾಶಿಯ ಮೇಲೂ ಪ್ರಭಾವ ಬೀರಲಿದೆ. ಕೆಲ ರಾಶಿಗೆ ಅದೃಷ್ಟ ಕೆಲ ರಾಶಿಗೆ ಸಂಕಷ್ಟ ಹಾಗೂ ಕೆಲ ರಾಶಿಗೆ ಮಿಶ್ರಫಲವನ್ನು ಈ ಗ್ರಹಣ ತರಲಿದೆ ಎನ್ನುತ್ತಾರೆ ಜ್ಯೋತಿಷಿಗಳು.

    ಯಾವ ರಾಶಿಗೆ ಏನು ಫಲ?
    ಶುಭಫಲ: ಧನು, ಕನ್ಯಾ, ಮೇಷ, ವೃಷಭ

    ಮಿಶ್ರಫಲ: ಮಕರ, ಸಿಂಹ, ಮಿಥುನ, ತುಲಾ

    ಅಶುಭ ಫಲ: ಕುಂಭ, ವೃಶ್ಚಿಕ, ಕರ್ಕ, ಮೀನ

    ರಕ್ತ ಚಂದ್ರಗ್ರಹಣ ಆರಂಭ ಯಾವಾಗ?
    ಸ್ಪರ್ಶಕಾಲ: 8.58 ನಿಮಿಷ
    ಮಧ್ಯಮ: 9.57 (ಚಂದ್ರನ ಗೋಲದ ಒಂದು ಪಾರ್ಶ್ವ ನಿಧಾನವಾಗಿ ಬಣ್ಣ ಬದಲಾಯಿಸುವ ಪ್ರಕ್ರಿಯೆ ಆರಂಭ)
    ರಾತ್ರಿ 11 ಗಂಟೆಯಿಂದ 12:22 ನಿಮಿಷದ ವರೆಗೆ ಸಂಪೂರ್ಣ ಚಂದ್ರಗ್ರಹಣದ ದೃಶ್ಯ ಗೋಚರವಾಗಲಿದೆ.

    ಗ್ರಹಣ ಮೋಕ್ಷ
    ಸೆಪ್ಟೆಂಬರ್ 8 ರಂದು ಮಧ್ಯರಾತ್ರಿ 2:25 ನಿಮಿಷಕ್ಕೆ
    5 ಗಂಟೆ 27 ನಿಮಿಷಗಳ ಕಾಲ ಸುದೀರ್ಘ ಗ್ರಹಣ ಇರಲಿದೆ. ಬರಿ ಕಣ್ಣಿನಿಂದಲೇ ಈ ವಿದ್ಯಮಾನ ನೋಡಬಹುದು. ಭಾರತದಾದ್ಯಂತ ಚಂದ್ರಗ್ರಹಣ ಗೋಚರಿಸಲಿದೆ.