Tag: Toshakhana

  • ನನ್ನನ್ನು ಕೋರ್ಟ್‌ನಲ್ಲೂ ಕೊಲ್ಬೋದು – ಪಾಕ್ ನ್ಯಾಯಮೂರ್ತಿಗೆ ಪತ್ರ ಬರೆದ ಇಮ್ರಾನ್ ಖಾನ್

    ನನ್ನನ್ನು ಕೋರ್ಟ್‌ನಲ್ಲೂ ಕೊಲ್ಬೋದು – ಪಾಕ್ ನ್ಯಾಯಮೂರ್ತಿಗೆ ಪತ್ರ ಬರೆದ ಇಮ್ರಾನ್ ಖಾನ್

    ಇಸ್ಲಾಮಾಬಾದ್: ಪಾಕಿಸ್ತಾನದ (Pakistan) ಮಾಜಿ ಪ್ರಧಾನಿ ಇಮ್ರಾನ್ ಖಾನ್ (Imran Khan) ಅವರು 100ಕ್ಕೂ ಹೆಚ್ಚು ಪ್ರಕರಣಗಳನ್ನು ಎದುರಿಸುತ್ತಿದ್ದು, ಈ ಹಿನ್ನೆಲೆ ವಿಚಾರಣೆಗಾಗಿ ನ್ಯಾಯಾಲಯಕ್ಕೆ ಹಾಜರಾಗುವ ವೇಳೆಯೂ ತಮ್ಮನ್ನು ಯಾರಾದರೂ ಕೊಲ್ಲಬಹುದು ಎಂದು ಹೇಳಿಕೊಂಡಿದ್ದಾರೆ. ವೀಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆಯನ್ನು ನಡೆಸಲು ಅವಕಾಶ ನೀಡುವಂತೆ ನ್ಯಾಯಮೂರ್ತಿಗಳಿಗೆ ಮನವಿ ಮಾಡಿದ್ದಾರೆ.

    ಪಾಕಿಸ್ತಾನ ತೆಹ್ರಿಕ್-ಇ-ಇನ್ಸಾಫ್ (PTI) ಅಧ್ಯಕ್ಷ ತೋಷಾಖಾನ ಪ್ರಕರಣದಲ್ಲಿ ಶನಿವಾರ ವಿಚಾರಣೆಗಾಗಿ ಫೆಡರಲ್ ನ್ಯಾಯಾಂಗ ಸಂಕೀರ್ಣಕ್ಕೆ (FJC) ತೆರಳಿದ್ದರು. ಈ ವೇಳೆ ಅಲ್ಲಿ ತಮ್ಮನ್ನು ಕೊಲ್ಲಲು ದೊಡ್ಡ ಸಂಚು ರೂಪಿಸಲಾಗಿತ್ತು ಎಂದು ಸೋಮವಾರ ಆರೋಪಿಸಿದ್ದಾರೆ.

    ಎಫ್‌ಜೆಸಿ ಹೊರಗಡೆ ತನ್ನನ್ನು ಕೊಲ್ಲಲು ಸುಮಾರು 20 ಜನ ಅಪರಿಚಿತ ವ್ಯಕ್ತಿಗಳು ಕಾದು ಕುಳಿತಿದ್ದರು ಎಂದು ಇಮ್ರಾನ್ ಖಾನ್ ತಿಳಿಸಿದ್ದು, ಈ ಬಗ್ಗೆ ಪಾಕಿಸ್ತಾನದ ಮುಖ್ಯ ನ್ಯಾಯಮೂರ್ತಿ ಉಮರ್ ಅಟ್ಟಾ ಬಂಡಿಯಲ್ ಅವರಿಗೆ ಪತ್ರ ಬರೆದಿದ್ದಾರೆ. ವರ್ಚುವಲ್ ಆಗಿ ವಿಚಾರಣೆ ನಡೆಸಲು ಅವಕಾಶ ನೀಡುವಂತೆ ಮನವಿ ಮಾಡಿಕೊಂಡಿದ್ದಾರೆ. ಹಾಗೂ ತಮ್ಮ ಮೇಲೆ ದಾಖಲಾಗಿರುವ ಎಲ್ಲಾ ಪ್ರಕರಣಗಳನ್ನು ಒಟ್ಟುಗೂಡಿಸುವಂತೆ ಕೋರಿಕೊಂಡಿದ್ದಾರೆ. ಇದನ್ನೂ ಓದಿ:  92ನೇ ವಯಸ್ಸಿನಲ್ಲಿ 5ನೇ ಮದುವೆ – ಇದು ಕೊನೆಯದ್ದು ಎಂದ ಮುರ್ಡೋಕ್‌

    ಇಮ್ರಾನ್ ಖಾನ್ ಅವರು ತೋಷಾಖಾನ ಎಂಬ ರಾಜ್ಯದ ಖಜಾನೆಯಿಂದ ರಿಯಾಯಿತಿ ದರದಲ್ಲಿ ಉಡುಗೊರೆಯಾಗಿ ಬಂದ ವಸ್ತುಗಳನ್ನು ಪಡೆದುಕೊಂಡಿದ್ದಾರೆ. ಅವುಗಳಲ್ಲಿ ದುಬಾರಿ ಕೈಗಡಿಯಾರಗಳೂ ಸೇರಿವೆ. ಅವುಗಳನ್ನು ಲಾಭಕ್ಕಾಗಿ ಹೆಚ್ಚಿನ ದರಕ್ಕೆ ಮಾರಾಟ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಇದಕ್ಕೆ ಸಂಬಂಧಿಸಿದಂತೆ ವಿವರಗಳನ್ನು ಬಹಿರಂಗಪಡಿಸದೇ ಹೋಗಿದ್ದಕ್ಕೆ ಪಾಕಿಸ್ತಾನದ ಚುನಾವಣಾ ಆಯೋಗ ಅವರನ್ನು ಅನರ್ಹಗೊಳಿಸಿತ್ತು. ಕ್ರಿಮಿನಲ್ ಕಾನೂನುಗಳ ಅಡಿಯಲ್ಲಿ ಅವರನ್ನು ಶಿಕ್ಷಿಸಲು ದೂರುಗಳನ್ನೂ ದಾಖಲಿಸಲಾಗಿತ್ತು. ಇದನ್ನೂ ಓದಿ: ರೆಡ್‌ ಕಾರ್ನರ್‌ ನೋಟಿಸ್‌ ಪಟ್ಟಿಯಿಂದ ಔಟ್‌- ಇನ್ನು ಮುಂದೆ ವಿಶ್ವದೆಲ್ಲೆಡೆ ವಂಚಕ ಮೆಹುಲ್‌ ಚೋಕ್ಸಿ ಸಂಚರಿಸಬಹುದು

  • ಕೋರ್ಟ್‌ನತ್ತ ತೆರಳಿದ ಪಾಕ್ ಮಾಜಿ ಪ್ರಧಾನಿ – ಇಮ್ರಾನ್ ಮನೆಗೆ ನುಗ್ಗಿದ ಪೊಲೀಸರು

    ಕೋರ್ಟ್‌ನತ್ತ ತೆರಳಿದ ಪಾಕ್ ಮಾಜಿ ಪ್ರಧಾನಿ – ಇಮ್ರಾನ್ ಮನೆಗೆ ನುಗ್ಗಿದ ಪೊಲೀಸರು

    ಇಸ್ಲಾಮಾಬಾದ್: ತೋಶಾಖಾನ (Toshakhana) ಪ್ರಕರಣದ ಆರೋಪ ಎದುರಿಸುತ್ತಿರುವ ಮಾಜಿ ಪ್ರಧಾನಿ ಇಮ್ರಾನ್ ಖಾನ್ (Imran Khan) ಕೋರ್ಟ್‌ನತ್ತ ತೆರಳುತ್ತಿದ್ದಂತೆ ಇತ್ತ ಅವರ ಮನೆಗೆ ಪೊಲೀಸರು ನುಗ್ಗಿದ್ದಾರೆ.

    ಮನೆಯಲ್ಲಿ ಇಮ್ರಾನ್ ಖಾನ್ ಪತ್ನಿ ಬುಶ್ರಾ ಬೇಗಂ (Bushra Begum) ಇದ್ದರು. ಮನೆ ಹೊರಗೆ ಇರಿಸಿದ್ದ ಬ್ಯಾರಿಕೇಡ್‌ಗಳನ್ನು ತೆಗೆದು ಪೊಲೀಸರು ಖಾನ್ ಮನೆಗೆ ನುಗ್ಗಿದ್ದಾರೆ. ಈ ವೇಳೆ ತಡೆಯಲು ಮುಂದಾದ ಇಮ್ರಾನ್ ಖಾನ್ ಬೆಂಬಲಿಗರ ಮೇಲೆ ಲಾಠಿ ಪ್ರಹಾರ ನಡೆಸಿದ್ದಾರೆ. ಈ ಸಂಬಂಧದ ವೀಡಿಯೋ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಇದನ್ನೂ ಓದಿ: ಗಿಫ್ಟ್‌ ಆಗಿ ಬಂದ ನೆಕ್ಲೆಸ್‌ನ್ನು 18 ಕೋಟಿಗೆ ಮಾರಿದ್ದಕ್ಕೆ ಇಮ್ರಾನ್‌ ಖಾನ್‌ ವಿರುದ್ಧ ತನಿಖೆ 

    ಪೊಲೀಸರ ವರ್ತನೆಗೆ ಕಿಡಿಕಾರಿ ಇಮ್ರಾನ್ ಖಾನ್ ಟ್ವೀಟ್ (Tweet) ಮಾಡಿದ್ದಾರೆ. ನನ್ನ ಪತ್ನಿ ಒಬ್ಬಳೇ ಇರುವ ಸಂದರ್ಭದಲ್ಲಿ ಪೊಲೀಸರು ನನ್ನ ಮನೆಯ ಮೇಲೆ ದಾಳಿ ಮಾಡಿದ್ದಾರೆ. ಯಾವ ಕಾನೂನಿನ ಅಡಿಯಲ್ಲಿ ಅವರು ಈ ರೀತಿ ಮಾಡುತ್ತಿದ್ದಾರೆ? ಎಂದು ಟ್ವೀಟ್ ಮಾಡಿ ಬೇಸರ ವ್ಯಕ್ತಪಡಿಸಿದ್ದಾರೆ.

    ಚುನಾವಣಾ ಆಯೋಗವು (Election Commission) ಸಲ್ಲಿಸಿದ್ದ ದೂರಿನ ವಿಚಾರಣೆಗೆ ಹಾಜರಾಗಲು ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಜಾಫರ್ ಇಕ್ಬಾಲ್ ಅವರು ನ್ಯಾಯಾಲಯಕ್ಕೆ ಹಾಜರಾಗುವಂತೆ ಪಾಕಿಸ್ತಾನದ ತೇಹ್ರಿಕ್-ಇ-ಇನ್ಸಾಫ್ (ಪಿಟಿಐ) ಪಕ್ಷದ ಮುಖ್ಯಸ್ಥರಾಗಿರುವ ಇಮ್ರಾನ್ ಖಾನ್ ಅವರಿಗೆ ತಿಳಿಸಿದ್ದಾರೆ. ಇದನ್ನೂ ಓದಿ: ಪಾಕ್‌ ಮಾಜಿ ಪ್ರಧಾನಿ ಇಮ್ರಾನ್‌ ಖಾನ್‌ ವಿರುದ್ಧ ಅರೆಸ್ಟ್‌ ವಾರೆಂಟ್‌ 

    ಬೆಂಗಾವಲು ಪಡೆಯೊಂದಿಗೆ ಇಮ್ರಾನ್ ಖಾನ್ ಲಾಹೋರ್‌ನ (Lahore) ಜಮಾನ್ ಪಾರ್ಕ್‌ನಲ್ಲಿರುವ ತಮ್ಮ ನಿವಾಸದಿಂದ ಇಸ್ಲಾಮಾಬಾದ್ (Islamabad) ತೆರಳಲಿದ್ದಾರೆ ಎಂದು ವರದಿಗಳು ತಿಳಿಸಿವೆ. ಇಸ್ಲಾಮಾಬಾದ್ ಜಿ-11ನಲ್ಲಿರುವ ನ್ಯಾಯಾಲಯ ಸಂಕೀರ್ಣದ ಹೊರಗೆ ಕಟ್ಟುನಿಟ್ಟಾದ ಭದ್ರತಾ ಕ್ರಮಗಳನ್ನು ಕೈಗೊಂಡಿದ್ದು, ಮಧ್ಯಾಹ್ನದ ವೇಳೆಗೆ ಇಮ್ರಾನ್ ಖಾನ್ ಆಗಮಿಸುವ ನಿರೀಕ್ಷೆಯಿದೆ. ಇವರಿಗೆ ಭದ್ರತೆಯನ್ನು ಒದಗಿಸಲು ದೊಡ್ಡ ಪ್ರಮಾಣದ ಪೊಲೀಸರನ್ನು ನಿಯೋಜಿಸಲಾಗಿದೆ. ಇದನ್ನೂ ಓದಿ: ಪಾಕ್‌ ಮಾಜಿ ಪ್ರಧಾನಿ ಇಮ್ರಾನ್‌ ಖಾನ್‌ ಬಂಧನಕ್ಕೆ ಮನೆಗೆ ಪೊಲೀಸರ ದಂಡು 

    ಇಸ್ಲಾಮಾಬಾದ್ ಆಡಳಿತವು ಶುಕ್ರವಾರ ರಾತ್ರಿ ರಾಜಧಾನಿಯಲ್ಲಿ ಸೆಕ್ಷನ್ 144 ಜಾರಿಗೊಳಿಸಿತ್ತು. ಅಲ್ಲದೇ ಖಾಸಗಿ ಕಂಪನಿಗಳು, ಭದ್ರತಾ ಸಿಬ್ಬಂದಿಗಳು ಶಸ್ತ್ರಾಸ್ತ್ರ ಸಾಗಿಸುವುದನ್ನು ನಿಷೇಧಿಸಿತ್ತು. ಅದರೊಂದಿಗೆ ಚಾಲಕರು ತಮ್ಮ ನೋಂದಣಿ ದಾಖಲೆಗಳನ್ನು ತೆಗೆದುಕೊಂಡು ಹೋಗುವಂತೆ ಸೂಚಿಸಿತ್ತು. ಇದನ್ನೂ ಓದಿ: ಪಾಕ್‌ ಮಾಜಿ ಪ್ರಧಾನಿ ಇಮ್ರಾನ್‌ ಖಾನ್‌ ವಿರುದ್ಧ ಅರೆಸ್ಟ್‌ ವಾರೆಂಟ್‌

  • ಇಮ್ರಾನ್ ಖಾನ್ ಅರೆಸ್ಟ್ ಮಾಡಲು ಮನೆಗೆ ಹೋದ ಪೊಲೀಸರು – ಎಷ್ಟು ಹುಡುಕಿದ್ರೂ ಪತ್ತೆಯಾಗ್ಲಿಲ್ಲ ಪಾಕ್ ಮಾಜಿ ಪಿಎಂ

    ಇಮ್ರಾನ್ ಖಾನ್ ಅರೆಸ್ಟ್ ಮಾಡಲು ಮನೆಗೆ ಹೋದ ಪೊಲೀಸರು – ಎಷ್ಟು ಹುಡುಕಿದ್ರೂ ಪತ್ತೆಯಾಗ್ಲಿಲ್ಲ ಪಾಕ್ ಮಾಜಿ ಪಿಎಂ

    ಇಸ್ಲಾಮಾಬಾದ್: ತೋಶಾಖಾನ (ರಾಜ್ಯ ಉಡುಗೊರೆ ಭಂಡಾರ) ಪ್ರಕರಣದಡಿ ಪಾಕಿಸ್ತಾನ ಮಾಜಿ ಪ್ರಧಾನಿ ಇಮ್ರಾನ್ ಖಾನ್ (Imran Khan) ಅವರನ್ನು ಬಂಧಿಸಲು ಅವರ ಮನೆಗೆ ಪೊಲೀಸರು ಹೋಗಿ ಪೇಚಿಗೆ ಸಿಲುಕಿದ್ದಾರೆ. ಮನೆಯಲ್ಲಿ ಎಷ್ಟು ಹುಡುಕಿದರೂ ಇಮ್ರಾನ್ ಖಾನ್ ಸಿಗದೇ ಇರುವುದು ಪೊಲೀಸರಿಗೆ ತಲೆನೋವಾಗಿ ಪರಿಣಮಿಸಿದೆ. ಪಾಕ್ ಮಾಜಿ ಪ್ರಧಾನಿ ಬಂಧನದ ಹೈಡ್ರಾಮಾ ಭಾನುವಾರ ನಡೆಯಿತು.

     

    ಇಸ್ಲಾಮಾಬಾದ್ (Islamabad) ಪೊಲೀಸರು ಇಮ್ರಾನ್ ಖಾನ್ ಅವರನ್ನು ಬಂಧಿಸಲು ಅವರ ಮನೆಗೆ ತೆರಳಿದ ಸಂದರ್ಭ ಅನೇಕ ಪ್ರತಿಭಟನಾಕಾರರು ಅವರನ್ನು ತಡೆದರು. ಇಮ್ರಾನ್ ಖಾನ್ ಅವರನ್ನು ಬಂಧಿಸಿದರೆ ದೇಶದಾದ್ಯಂತ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದರು. ಇಮ್ರಾನ್ ಖಾನ್ ಅವರು ಗಾಯಗೊಂಡ ಕಾರಣ ತೋಶಾಖಾನ (Toshakhana) ವಿಚಾರಣೆಗೆ ಹಾಜರಾಗಿರಲಿಲ್ಲ. ವಿಚಾರಣೆಗೆ ಗೈರಾದ ಕಾರಣ ಸೆಷನ್ಸ್ ನ್ಯಾಯಾಲದ ನ್ಯಾಯಾಧೀಶರು ಜಾಮೀನು ರಹಿತ ಬಂಧನ ವಾರೆಂಟ್ ಹೊರಡಿಸಿದ್ದರು. ಇದನ್ನೂ ಓದಿ: ಬಿಗ್ ಬಾಸ್ ಸ್ಪರ್ಧಿ ಗಂಗವ್ವಗೆ ಮನೆ ಕಟ್ಟಲು ಸಹಾಯ ಮಾಡಿದ ನಟ ನಾಗಾರ್ಜುನ

    ಇಮ್ರಾನ್ ಖಾನ್ ಅವರನ್ನು ಬಂಧಿಸುವ ಸಲುವಾಗಿ ಎಸ್‌ಪಿ (SP) ಅವರ ಕೊಠಡಿಗೆ ತೆರಳಿದಾಗ ಅವರು ಅಲ್ಲಿ ಇರಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

    ಈ ಕುರಿತು ಸಂಜೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಇಮ್ರಾನ್ ಖಾನ್, ತೋಶಾಖಾನ ಪ್ರಕರಣದಲ್ಲಿ ಸಾರ್ವಜನಿಕ ವಿಚಾರಣೆಗಾಗಿ ತಮ್ಮ ಕಾರ್ಯಕರ್ತರ ತಂಡವು ಮುಖ್ಯ ನ್ಯಾಯಾಧೀಶರಿಗೆ ಪತ್ರ ಬರೆಯಲಿದೆ. ನನ್ನ ವಿರುದ್ಧ ಇರುವ ಕೇಸ್‌ಗಳೆಲ್ಲವೂ ಸುಳ್ಳು ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಹಿಂಸೆಗೆ ಪ್ರಚೋದನೆ – ತಮಿಳುನಾಡು ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ವಿರುದ್ಧ ಪ್ರಕರಣ ದಾಖಲು

    ಏನಿದು ತೋಶಾಖಾನ ಪ್ರಕರಣ?
    ಪಾಕಿಸ್ತಾನದ (Pakistan) ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರ ಅಧಿಕಾರವಧಿಯಲ್ಲಿ ದುಬಾರಿ ಮೌಲ್ಯದ ನೆಕ್ಲೆಸ್ ಉಡುಗೊರೆಯಾಗಿ ಬಂದಿತ್ತು. ಆದರೆ ಅವರು ಅದನ್ನು ರಾಜ್ಯದ ಉಡುಗೊರೆ ಭಂಡಾರಕ್ಕೆ ಠೇವಣಿ ಇಡದೇ ವ್ಯಾಪಾರಿಯೊಬ್ಬರಿಗೆ 18 ಕೋಟಿ ರೂ.ಗೆ ಮಾರಾಟ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಈ ಸಂಬಂಧ ಫೆಡರಲ್ ಇನ್ವೆಸ್ಟಿಗೇಷನ್ ಏಜೆನ್ಸಿ (ಎಫ್‌ಐಎ) ತನಿಖೆ ನಡೆಸುತ್ತಿದೆ. ಖಾನ್ ಉಡುಗೊರೆಯಾಗಿ ಪಡೆದ ನೆಕ್ಲೆಸ್ ಅನ್ನು ತೋಶಾಖಾನಾಕ್ಕೆ (ರಾಜ್ಯ ಉಡುಗೊರೆ ಭಂಡಾರ) ಕಳುಹಿಸಿಲ್ಲ. ಆದರೆ ಮಾಜಿ ವಿಶೇಷ ಸಹಾಯಕ ಜುಲ್ಫಿಕರ್ ಬುಖಾರಿಗೆ ನೀಡಿದ್ದರು. ಜುಲ್ಪಿಕರ್ ಅದನ್ನು ಲಾಹೋರ್‌ನ (Lahore) ಆಭರಣ ವ್ಯಾಪಾರಿಗೆ 18 ಕೋಟಿ ರೂ.ಗೆ ಮಾರಾಟ ಮಾಡಿದ್ದರು ಎನ್ನಲಾಗಿತ್ತು. ಇದನ್ನೂ ಓದಿ: ತಮಿಳಿನ ಈ ಹೀರೋಗೆ 100 ಕೋಟಿ ವೆಚ್ಚದಲ್ಲಿ ಚಿತ್ರ ನಿರ್ಮಾಣ ಮಾಡ್ತಾರೆ ಕಮಲ್ ಹಾಸನ್

  • ಪಾಕ್ ಮಾಜಿ ಪ್ರಧಾನಿ ಇಮ್ರಾನ್ ಖಾನ್ ವಿರುದ್ಧ ಕೊಲೆ ಯತ್ನ ಪ್ರಕರಣ ದಾಖಲು

    ಪಾಕ್ ಮಾಜಿ ಪ್ರಧಾನಿ ಇಮ್ರಾನ್ ಖಾನ್ ವಿರುದ್ಧ ಕೊಲೆ ಯತ್ನ ಪ್ರಕರಣ ದಾಖಲು

    ಇಸ್ಲಾಮಾಬಾದ್: ಪಿಟಿಐ (PTI) ಅಧ್ಯಕ್ಷ, ಪಾಕಿಸ್ತಾನದ (Pakistan) ಮಾಜಿ ಪ್ರಧಾನಿ ಇಮ್ರಾನ್ ಖಾನ್ (Imran Khan) ವಿರುದ್ಧ ಇಸ್ಲಾಮಾಬಾದ್‌ನಲ್ಲಿ (Islamabad) ಕೊಲೆ ಯತ್ನ ಪ್ರಕರಣ ದಾಖಲಾಗಿದೆ.

    ಪಾಕಿಸ್ತಾನ್ ಮುಸ್ಲಿಂ ಲೀಗ್-ನವಾಜ್ (PML-N) ನಾಯಕ ಹಾಗೂ ರಾಷ್ಟ್ರೀಯ ಅಸೆಂಬ್ಲಿಯ ಸದಸ್ಯ ಮೊಹ್ಸಿನ್ ಶಾನವಾಜ್ ರಂಝಾ ಅವರು ಶನಿವಾರ ಇಸ್ಲಾಮಾಬಾದ್‌ನ ಸೆಕ್ರೆಟರಿಯೇಟ್ ಪೊಲೀಸ್ ಠಾಣೆಯಲ್ಲಿ ಇಮ್ರಾನ್ ಖಾನ್ ವಿರುದ್ಧ ಕೊಲೆ ಯತ್ನ ಆರೋಪವನ್ನು ಮಾಡಿದ್ದಾರೆ.

    ಇಮ್ರಾನ್ ಖಾನ್ ಅವರು ಸರ್ಕಾರಿ ಉಡುಗೊರೆಗಳನ್ನು ದುಬಾರಿ ಬೆಲೆಗೆ ಮಾರಾಟ ಮಾಡಿರುವ ಆರೋಪದ ಮೇಲೆ ಪಾಕಿಸ್ತಾನದ ಚುನಾವನಾ ಆಯೋಗದಿಂದ (ECP) ಅವರನ್ನು ಅನರ್ಹಗೊಳಿಸಲಾಗಿತ್ತು. ಈ ಹಿನ್ನೆಲೆ ಆಕ್ರೋಶಗೊಂಡಿದ್ದ ಇಮ್ರಾನ್ ಖಾನ್ ಬೆಂಬಲಿಗರು ರಂಝಾ ಅವರ ಮೇಲೆ ಹಲ್ಲೆ ನಡೆಸಿರುವುದಾಗಿ ವರದಿಯಾಗಿದೆ. ಇದನ್ನೂ ಓದಿ: ಕಮ್ಯುನಿಸ್ಟ್ ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿ ಚೀನಾದ ಅಧ್ಯಕ್ಷ ಜಿನ್‌ಪಿಂಗ್ 3ನೇ ಅವಧಿಗೆ ಮರು ಆಯ್ಕೆ

    ಇಮ್ರಾನ್ ಖಾನ್ ವಿರುದ್ಧದ ತೋಷಾಖಾನಾ ಪ್ರಕರಣಕ್ಕೆ ಸಂಬಂಧಿಸಿದಂತೆ ಆಯೋಗದ ಮುಂದೆ ಫಿರ್ಯಾದಿಯಾಗಿ ಹಾಜರಾಗಿದ್ದ ರಾಂಝಾ ತಮ್ಮ ಮೇಲೆ ದಾಳಿ ನಡೆಸಲಾಗಿದೆ ಎಂದು ದೂರು ನೀಡಿದ್ದಾರೆ. ತಮ್ಮ ಕಾರಿನ ಗಾಜನ್ನೂ ಒಡೆಯಲಾಗಿದ್ದು, ಕೊಲೆಯ ಯತ್ನ ಮಾಡಲಾಗಿದೆ ಎಂದು ರಂಝಾ ಹೇಳಿದ್ದಾರೆ.

    ವರದಿಗಳ ಪ್ರಕಾರ ಇಮ್ರಾನ್ ಖಾನ್ ಅವರು ಪ್ರಧಾನಿಯಾಗಿದ್ದ ಸಂದರ್ಭದಲ್ಲಿ ಅಧಿಕೃತ ಭೇಟಿಗಳ ವೇಳೆ ಅರಬ್ ಆಡಳಿತಗಾರರಿಂದ ದುಬಾರಿ ಉಡುಗೊರೆಗಳನ್ನು ಪಡೆದಿದ್ದರು. ಅವುಗಳನ್ನು ತೋಷಾಖಾನಾದಲ್ಲಿ ಠೇವಣಿ ಇಡಲಾಗುತ್ತಿದ್ದು, ನಂತರ ಅದನ್ನು ಸಂಬಂಧಿತ ಕಾನೂನುಗಳ ಪ್ರಕಾರ ರಿಯಾಯಿತಿ ದರದಲ್ಲಿ ಖರೀದಿಸಿದ್ದರು. ಮಾತ್ರವಲ್ಲದೇ ದುಬಾರಿ ಬೆಲೆಗೆ ಅವುಗಳನ್ನು ಮಾರಾಟ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಇದನ್ನೂ ಓದಿ: ದೀಪಾವಳಿ ಆಚರಿಸಿದ ಅಮೆರಿಕದ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್

    ಈ ಪ್ರಕರಣದ ವಿಚಾರಣೆ ನಡೆಸಿದ ಬಳಿಕ ಇಸಿಪಿ ಶುಕ್ರವಾರ ಇಮ್ರಾನ್ ಖಾನ್ ಇನ್ನು ಮುಂದೆ ರಾಷ್ಟ್ರೀಯ ಅಸೆಂಬ್ಲಿಯ ಸದಸ್ಯರಲ್ಲ ಎಂದಿದೆ. ಈ ಬಗ್ಗೆ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಆಯೋಗ ನಿರ್ಧರಿಸಿದೆ.

    Live Tv
    [brid partner=56869869 player=32851 video=960834 autoplay=true]