Tag: tortoise

  • ಕೃಷಿ ಇಲಾಖೆ ಅಧಿಕಾರಿಗಳ ಮನೆ ಮೇಲೆ ಲೋಕಾಯುಕ್ತ ರೇಡ್ – 2 ಆಮೆಗಳು ಪತ್ತೆ

    ಕೃಷಿ ಇಲಾಖೆ ಅಧಿಕಾರಿಗಳ ಮನೆ ಮೇಲೆ ಲೋಕಾಯುಕ್ತ ರೇಡ್ – 2 ಆಮೆಗಳು ಪತ್ತೆ

    ಬಾಗಲಕೋಟೆ: ಇಲ್ಲಿನ ಕೃಷಿ ಇಲಾಖೆ ಅಧಿಕಾರಿಗಳ (Agriculture Department) ಮನೆ ಮೇಲೆ ಲೋಕಾಯುಕ್ತ ಅಧಿಕಾರಿಗಳಿಂದ ದಾಳಿ ನಡೆದಿದ್ದು, ಎರಡು ಸಾಕು ಆಮೆಗಳು (Tortoise) ಪತ್ತೆಯಾಗಿವೆ.

    ಬಾಗಲಕೋಟೆಯ ಕೃಷಿ ಇಲಾಖೆ ಜಂಟಿ ನಿರ್ದೇಶಕಿ ಚೇತನಾ ಪಾಟೀಲ್ ಹಾಗೂ ಸಹಾಯಕ ನಿರ್ದೇಶಕ ಕೃಷ್ಣಾ ಶಿರೂರು ಅವರ ಮನೆಗಳ ಮೇಲೆ ಲೋಕಾಯುಕ್ತ (Karnataka Lokayukta) ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ನಾನು ಜೈಲಿಗೆ ಹೋಗೋವಾಗ ದುಡ್ಡು ಹೊಡೆದು ಹೋದೆ ಅಂತ ಜೊತೆಯಲ್ಲಿದ್ದವರೇ ಹೇಳಿದ್ರು: ಡಿಕೆಶಿ

    ವಿದ್ಯಾಗಿರಿಯ ಅಕ್ಕಿಮರಡಿ ಬಡಾವಣೆಯಲ್ಲಿರುವ ಚೇತನಾ ಪಾಟೀಲ್ ಹಾಗೂ ವಿದ್ಯಾಗಿರಿಯ 18ನೇ ಕ್ರಾಸ್‌ನಲ್ಲಿರುವ ಕೃಷ್ಣಾ ಶಿರೂರು ಅವರ ಮನೆಗಳ ಮೇಲೆ ಲೋಕಾಯುಕ್ತ ಡಿಎಸ್ಪಿ ಪುಷ್ಪಲತಾ ನೇತೃತ್ವದ ತಂಡ ದಾಳಿ ನಡೆಸಿದೆ. ಇದನ್ನೂ ಓದಿ: ಬೆಂಗಳೂರು ಸೇರಿ ರಾಜ್ಯದ ಹಲವೆಡೆ ಬೆಳ್ಳಂಬೆಳಗ್ಗೆ ಅಧಿಕಾರಿಗಳಿಗೆ ಲೋಕಾಯುಕ್ತ ಶಾಕ್‌

    ಈ ವೇಳೆ ಚೇತನಾ ಪಾಟೀಲ್ ಅವರ ಮನೆಯಲ್ಲಿ 2 ಸಾಕು ಆಮೆಗಳು ಪತ್ತೆಯಾಗಿವೆ. ಆಮೆಗಳನ್ನ ಮನೆಯಲ್ಲಿ ಸಾಕಿದ್ದೇಕೆ ಎಂಬ ಕುತೂಹಲ ವ್ಯಕ್ತಪಡಿಸಿರುವ ಅಧಿಕಾರಿಗಳು ಅರಣ್ಯ ಇಲಾಖೆ ಅಧಿಕಾರಿಗಳನ್ನೂ ಕರೆಸಿ ಪರಿಶೀಲಿಸಲಾಗುತ್ತಿದೆ. ಇದೇ ವೇಳೆ ಆಸ್ತಿಗೆ ಸಂಬಂಧಿಸಿದ ಮಹತ್ವದ ದಾಖಲೆಗಳು ಪತ್ತೆಯಾಗಿವೆ. ಬಾಗಲಕೋಟೆ ವಿದ್ಯಾಗಿರಿಯ ಅಕ್ಕಿಮರಡಿ ಬಡಾವಣೆಯಲ್ಲಿರುವ ಮನೆಯಲ್ಲಿ ಶೋಧ ಮುಂದುವರಿದಿದ್ದು, ಅಧಿಕಾರಿಗಳು ಮಾಹಿತಿ ಕಲೆಹಾಕುತ್ತಿದ್ದಾರೆ.

    ರಾಜ್ಯ ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಬುಧವಾರ ಬೆಳ್ಳಂಬೆಳಗ್ಗೆ ಸರ್ಕಾರಿ ಅಧಿಕಾರಿಗಳಿಗೆ ಲೋಕಾಯುಕ್ತ ಅಧಿಕಾರಿಗಳು ಶಾಕ್‌ ನೀಡಿದ್ದಾರೆ. ಬೆಂಗಳೂರಿನ ಕೆಆರ್‌ಪುರಂ ತಹಶೀಲ್ದಾರ್‌ ಅಜಿತ್‌ ರೈ ಮನೆ ಸೇರಿ 10 ಕಡೆ ಲೋಕಾಯುಕ್ತ ದಾಳಿ ನಡೆಸಿತು. ಅಕ್ರಮ ಆಸ್ತಿ ಗಳಿಕೆ ಆರೋಪದ ಮೇಲೆ ಮನೆ, ಕಚೇರಿ ಸೇರಿದಂತೆ 10 ಕಡೆ ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಮನೆಯಲ್ಲಿದ್ದ 40 ಲಕ್ಷ ರೂ. ನಗದು ಸೇರಿದಂತೆ ಅನೇಕ ಮಹತ್ವದ ದಾಖಲೆಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಇನ್ನೂ ಹಲವೆಡೆ ದಾಳಿ ನಡೆದಿದ್ದು, ಅಧಿಕಾರಿಗಳಿಂದ ಶೋಧ ಮುಂದುವರಿದಿದೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_title” view=”carousel” /]

  • 190 ವರ್ಷದ ಆಮೆ- ಗಿನ್ನಿಸ್ ಪುಟಕ್ಕೆ ಸೇರ್ಪಡೆ

    190 ವರ್ಷದ ಆಮೆ- ಗಿನ್ನಿಸ್ ಪುಟಕ್ಕೆ ಸೇರ್ಪಡೆ

    ಜೊನಾಥನ್ ಹೆಸರಿನ ಆಮೆಯೊಂದು 190ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದು, ಅತ್ಯಂತ ಹಳೆಯ ಆಮೆ ಎಂದು ಗಿನ್ನೆಸ್ ವರ್ಲ್ಡ್ ರೆಕಾರ್ಡ್ ಸೇರಿದೆ.

    1832ರಲ್ಲಿ ಜನಿಸಿದ ಜೊನಾಥನ್ ಆಮೆ ಜನಿಸಿದೆ ಎಂದು ಹೇಳಲಾಗುತ್ತದೆ. ಸಾಗರೋತ್ತರ ಪ್ರದೇಶವಾದ ಸೇಂಟ್ ಹೆಲೆನಾ ದ್ವೀಪದಲ್ಲಿರುವ ಜೊನಾಥನ್ ಆಮೆ 190ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದೆ. ವಿಶ್ವದ ಅತ್ಯಂತ ಹಳೆಯ ಆಮೆ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದೆ. ಇದನ್ನೂ ಓದಿ: ಐತಿಹಾಸಿಕ ಕೌತುಕಕ್ಕೆ ಸಾಕ್ಷಿಯಾದ ಗವಿ ಗಂಗಾಧರೇಶ್ವರ ದೇಗುಲ – ಶಿವಲಿಂಗಕ್ಕೆ ಸೂರ್ಯ ರಶ್ಮಿ ಸ್ಪರ್ಶ

    ಸೇಂಟ್ ಹೆಲೆನಾ ಸರ್ಕಾರದ ಪ್ರಕಾರ ಜೊನಾಥನ್ ಚಳಿಗಾಲದ ಕಾರಣ ಬಳಲಿದ್ದು, ಚೆನ್ನಾಗಿ ತಿನ್ನುತ್ತದೆ. ಜೊನಾಥ್ ಜೀವನದ ಬಹುಪಾಲು ಸಮಯವನ್ನು ಸೇಂಟ್ ಹೆಲೆನಾದ ಗವರ್ನರ್ ಅವರ ಮನೆಯಲ್ಲಿ ಕಳೆದಿದ್ದು, ಅಲ್ಲಿ ಅದು ಡೇವಿಡ್, ಎಮ್ಮಾ ಫ್ರೆಡ್ ಎನ್ನುವ ದೈತ್ಯಾಕಾರದ ಆಮೆಗಳೊಮದಿಗೆ ವಾಸಿಸುತ್ತದೆ. ಎಲೆಕೋಸು, ಸೌತೆಕಾಯಿ, ಕ್ಯಾರೆಟ್, ಸೇಬುಹಣ್ಣುಗಳನ್ನು ಸೇವಿಸುತ್ತದೆ ಪಶುವೈದ್ಯರೊಬ್ಬರು ಹೇಳಿದ್ದಾರೆ. ಇದನ್ನೂ ಓದಿ: ಆರೋಪಿಗಳ ರಕ್ಷಣೆಗೆ ಲಂಚ – ರವಿ ಡಿ.ಚನ್ನಣ್ಣನವರ್ ಅಮಾನತಿಗೆ AAP ಆಗ್ರಹ

    ತುಯಿ ಮಲಿಲಾ ಅತ್ಯಂತ ಹಳೆಯ ಆಮೆಯಾಗಿದೆ. ಇದು 188 ವರ್ಷ ಜೀವಿಸಿತ್ತು. 177ರಲ್ಲಿ ಟೋಂಗಾ ರಾಜಮನೆತನಕ್ಕೆ ದಾನ ಮಾಡಲಾಗಿತ್ತು. ಜೊನಾಥನ್ ಆಮೆ 1882ರಲ್ಲಿ ಸೇಶೆಲ್ಸ್‌ನಿಂದ ಸೇಂಟ್ ಹೆಲೆನಾಗೆ ಬಂದಾಗ ಆಮೆ ಸಂಪೂರ್ಣವಾಗಿ ಪ್ರಬುದ್ಧವಾಗಿತ್ತು. ಕನಿಷ್ಠ 50 ವರ್ಷವಾಗಿತ್ತು ಎಂಬ ಅಂಶದ ಆಧಾರದ ಮೇಳೆ ಜೊನಾಥನ್ ವಿಶ್ವ ದಾಖಲೆ ಬರೆದಿದೆ.

  • ಆಮೆ, ಲ್ಯಾಬ್ರಡಾರ್ ಶ್ವಾನ- ವರದಕ್ಷಿಣೆ ಕೇಳಿದ ವರ

    ಆಮೆ, ಲ್ಯಾಬ್ರಡಾರ್ ಶ್ವಾನ- ವರದಕ್ಷಿಣೆ ಕೇಳಿದ ವರ

    ಮುಂಬೈ: ಮದುವೆಗೆ ಹಣ, ಕಾರು ,ಮನೆ ವರದಕ್ಷಿಣೆ ಕೇಳುವವರ ಮಧ್ಯೆ ಇಲ್ಲೊಬ್ಬ ವರ ಕೇಳಿರುವ ವರದಕ್ಷಿಣೆಯನ್ನು ಕೇಳಿದರೆ ಖಂಡಿತವಾಗಿಯೂ ನೀವು ಆಶ್ಚರ್ಯವಾಗುತ್ತೀರ.

    ನಿಮ್ಮ ಮಗಳನ್ನು ಮದುವೆ ಮಾಡಿಕೊಳ್ಳಬೇಕಾದರೆ ನನಗೆ ಬೆನ್ಜ್ ಕಾರ್ ಕೊಡಿ ಎನ್ನುವ ಈ ಕಾಲದಲ್ಲಿ ವರ ಮಾತ್ರ 21 ಕಾಲು ಬೆರಳು ಇರುವ ಆಮೆ ಹಾಗೂ ಲ್ಯಾಬ್ರಡಾರ್ ಜಾತಿಯ ಶ್ವಾನವನ್ನು ಕೇಳಿದ್ದಾನೆ. ಇದನ್ನೂ ಓದಿ: ಆಷಾಢ ಮಾಸ – 1000 ಕೆ.ಜಿ ಮೀನು, 10 ಕುರಿ ಮಗಳಿಗೆ ಗಿಫ್ಟ್ ಕೊಟ್ಟ ತಂದೆ

    ಜೌರಂಗಾಬಾದ್‍ನಲ್ಲಿ ನೆಲೆಸಿರುವ ವರನ ತಂದೆ, ತಾಯಿ ಇಂಥವೊಂದು ಬೇಡಿಕೆಯನ್ನು ಹುಡುಗಿ ಮನೆಯವರ ಮುಂದೆ ಇಟ್ಟಿದ್ದಾರೆ. ಫೆಬ್ರವರಿಯಲ್ಲಿ ಎಂಗೆಜ್‍ಮೆಂಟ್ ಮಾಡಿಕೊಂಡಿದ್ದಾರೆ. ಆಗಲೇ 2ಲಕ್ಷ ನಗದು ಹಾಗೂ 10 ಗ್ರಾಮ್ ಚಿನ್ನಾಭರಣವನ್ನು ಹುಡುಗಿ ಮನೆಯವರು ವರನಿಗೆ ಕೊಟ್ಟಿದ್ದಾರೆ. ಆದರೆ ಇದೀಗ ಮದುವೆಗೆ 21 ಕಾಲು ಬೆರಳು ಇರುವ ಆಮೆ, ಮತ್ತೆ ಲ್ಯಾಬ್ರಡಾರ್ ನಾಯಿ, ಬುದ್ಧ ವಿಗ್ರಹ ಕೊಡುವಂತೆ ಕೇಳಿದ್ದಾರೆ. ಇದನ್ನೂ ಓದಿ:  ಕುಟುಂಬ ಸಮೇತರಾಗಿ ಈ ಸಿನಿಮಾ ನೋಡಿ: ಶಿಲ್ಪಾ ಶೆಟ್ಟಿ

    21 ಕಾಲು ಬೆರಳು ಇರುವ ಆಮೆ ಮನೆಗೆ ಅದೃಷ್ಟವನ್ನು ತರುತ್ತದೆ ಹೀಗಾಗಿ ಅದನ್ನು ಕೇಳಿದ್ದಾರೆ. ಈ ಆಮೆಯ ಬೆಲೆ ಬರೋಬ್ಬರಿ 5 ರಿಂದ 10 ಲಕ್ಷರೂಪಾಯಿ ಆಗಿದೆ. ಎಷ್ಟು ಹುಡುಕಿದರೂ ಈ ಆಮೆ ಸಿಗದ ಕಾರಣ ಹುಡುಗಿ ಮನೆಯವರು ವರನ ಮನೆಯವರ ಮೇಲೆ ವರದಕ್ಷಿಣೆ ಕೇಸ್ ಹಾಕಿದ್ದಾರೆ. ವರನ ಮೇಲೆ ಐಪಿಸಿ ಸೆಕ್ಷನ್ 420 ಅಡಿಯಲ್ಲಿ ಎಫ್‍ಐಆರ್ ದಾಖಲಾಗಿದೆ. ಇದೀಗ ಮದುವೆಯೂ ಕ್ಯಾನ್ಸಲ್ ಆಗಿದೆ.