Tag: Toronto

  • ಲ್ಯಾಂಡಿಂಗ್‌ ವೇಳೆ ರನ್‌ ವೇಯಲ್ಲಿ ಪಲ್ಟಿಯಾಗಿ ಹೊತ್ತಿ ಉರಿದ ವಿಮಾನ!

    ಲ್ಯಾಂಡಿಂಗ್‌ ವೇಳೆ ರನ್‌ ವೇಯಲ್ಲಿ ಪಲ್ಟಿಯಾಗಿ ಹೊತ್ತಿ ಉರಿದ ವಿಮಾನ!

    ಟೊರೊಂಟೋ: ಲ್ಯಾಂಡ್‌ ಆಗಿ ರನ್‌ ವೇಯಲ್ಲಿ ಸಾಗುವಾಗ ವಿಮಾನ ಪಲ್ಟಿಯಾಗಿ ಹೊತ್ತಿ ಉರಿದ (Plane Crash) ಘಟನೆ ಕೆನಡಾದ (Canada) ರಾಜಧಾನಿ ಟೊರೊಂಟೋದಲ್ಲಿ (Toronto) ನಡೆದಿದೆ.

    80 ಜನರನ್ನು ಹೊತ್ತಿದ್ದ ಡೆಲ್ಟಾ ಏರ್ ಲೈನ್ಸ್ ವಿಮಾನ ಲ್ಯಾಂಡ್‌ ಆಗಿ ರನ್‌ವೇಯಲ್ಲಿ ಮುಂದಕ್ಕೆ ಬರುತ್ತಿತ್ತು. ಈ ವೇಳೆ ಅವಘಡ ಸಂಭವಿಸಿದೆ. ವಿಮಾನ ದುರಂತದಲ್ಲಿ ಕನಿಷ್ಠ 18 ಜನರಿಗೆ ಗಾಯಗಳಾಗಿವೆ. ಇದರಲ್ಲಿ ಒಂದು ಮಗು ಸೇರಿದಂತೆ, ಓರ್ವ ವ್ಯಕ್ತಿ ಹಾಗೂ ಮಹಿಳೆಯೊಬ್ಬರ ಸ್ಥಿತಿ ಗಂಭೀರವಾಗಿದೆ. ಘಟನೆಯಲ್ಲಿ ಯಾವುದೇ ಸಾವು ಸಂಭವಿಸಿಲ್ಲ. ವಿಮಾನ ಅಪಘಾತಕ್ಕೆ ನಿಖರ ಕಾರಣ ತಿಳಿದು ಬಂದಿಲ್ಲ. ಇದನ್ನೂ ಓದಿ: ಬಿಜೆಪಿ ಸಿಎಂಗಳು ಸಿಟಿ ರೌಂಡ್ ಮಾಡಿದ್ದು ಫೋಟೋಶೂಟಿಗಾ? – ಡಿಕೆಶಿ ಫುಲ್‌ ಗರಂ

    76 ಪ್ರಯಾಣಿಕರು ಮತ್ತು ನಾಲ್ವರು ಸಿಬ್ಬಂದಿ ಇದ್ದ ವಿಮಾನ ಅಮೆರಿಕದ ಮಿನ್ನೇಸೋಟದ ಮಿನ್ನಿಯಾಪೋಲಿಸ್‌ನಿಂದ ಕೆನಡಾದ ಅತಿದೊಡ್ಡ ಮಹಾನಗರ ಟೊರೊಂಟೊಕ್ಕೆ ಬಂದಿತ್ತು ಎಂದು ವಿಮಾನಯಾನ ಸಂಸ್ಥೆ ತಿಳಿಸಿದೆ.

    ವಿಮಾನ ಪಲ್ಟಿಯಾಗುತ್ತಿದ್ದಂತೆ ನಿಲ್ದಾಣದಲ್ಲಿದ್ದ ಸಿಬ್ಬಂದಿ ಕೂಡಲೇ ಬೆಂಕಿ ನಂದಿಸಿ, ರಕ್ಷಣಾ ಕಾರ್ಯಾಚರಣೆ ನಡೆಸಿದ್ದಾರೆ. ಬಳಿಕ ಗಾಯಗಳುಗಳನ್ನು ಹೆಲಿಕಾಪ್ಟರ್ ಮೂಲಕ ಆಸ್ಪತ್ರೆಗಳಿಗೆ ಕರೆದೊಯ್ಯಲಾಯಿತು. ಘಟನೆಯ ನಂತರ ವಿಮಾನ ನಿಲ್ದಾಣದಲ್ಲಿ ವಿಮಾನಗಳ ಹಾರಾಟವನ್ನು ಸ್ಥಗಿತಗೊಳಿಸಲಾಗಿತ್ತು. ಸುಮಾರು ಎರಡು ಗಂಟೆಗಳ ಬಳಿಕ ವಿಮಾನ ನಿಲ್ದಾಣದಿಂದ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಇತ್ತೀಚೆಗೆ ಉತ್ತರ ಅಮೆರಿಕದಲ್ಲಿ ವಾಷಿಂಗ್ಟನ್‌ನಲ್ಲಿ ಯುಎಸ್ ಸೇನಾ ಹೆಲಿಕಾಪ್ಟರ್ ಮತ್ತು ಪ್ಯಾಸೆಂಜರ್ ಜೆಟ್ ನಡುವೆ ಆಕಾಶದಲ್ಲಿ ಡಿಕ್ಕಿ ಸಂಭವಿಸಿ 67 ಜನರು ಸಾವನ್ನಪ್ಪಿದ್ದರು. ಇದನ್ನೂ ಓದಿ: ಮುಖ್ಯ ಚುನಾವಣಾ ಆಯುಕ್ತರಾಗಿ ಜ್ಞಾನೇಶ್ ಕುಮಾರ್ ನೇಮಕ

  • ನಟಿ ರಂಭಾ ಕಾರು ಭೀಕರ ಅಪಘಾತ : ರಂಭಾ ಪುತ್ರಿಗೆ ತೀವ್ರ ಗಾಯ

    ನಟಿ ರಂಭಾ ಕಾರು ಭೀಕರ ಅಪಘಾತ : ರಂಭಾ ಪುತ್ರಿಗೆ ತೀವ್ರ ಗಾಯ

    ನ್ನಡವೂ ಸೇರಿದಂತೆ ನಾನಾ ಭಾಷೆಗಳಲ್ಲಿ ನಟಿಸಿರುವ ನಟಿ ರಂಭಾ (Rambha) ಅವರ ಕಾರಿಗೆ ಭೀಕರ ಅಪಘಾತವಾಗಿದ್ದು (Car Accident)  ರಂಭಾ ಪುತ್ರಿ ಸಾಶಾ (Sasha) ತೀವ್ರ ಗಾಯಗೊಂಡಿದ್ದಾರೆ. ಅವರಿಗೆ ಚಿಕಿತ್ಸೆ ನೀಡಲಾಗುತ್ತಿದ್ದು, ರಂಭಾಗೆ ಚಿಕ್ಕಪುಟ್ಟ ಗಾಯಗಳಾಗಿದ್ದು, ಚಿಕಿತ್ಸೆಯ ನಂತರ ಅವರು ಮನೆಗೆ ವಾಪಸ್ಸಾಗಿದ್ದಾರೆ. ಆದರೆ, ಮಗಳಿಗೆ ಮಾತ್ರ ಇನ್ನೂ ಆಸ್ಪತ್ರೆಯಲ್ಲೇ ಚಿಕಿತ್ಸೆ ನೀಡಲಾಗುತ್ತಿದೆ.

    ರಂಭಾ ಮತ್ತು ಪತಿ ಇಂದ್ರಕುಮಾರ್ ಪದ್ಮನಾಥನ್ (Indrakumar Padmanathan) ಕೆನಡಾದ ಒಂಟಾರಿಯೊ ಪ್ರಾಂತ್ಯದ ರಾಜಧಾನಿ ಟೊರೊಂಟೊ (Toronto)ದಲ್ಲಿ ನೆಲೆಸಿದ್ದಾರೆ.  ಈ ದಂಪತಿಗೆ ಇಬ್ಬರು ಪುತ್ರಿಯರಿದ್ದು, ಓರ್ವ ಪುತ್ರನಿದ್ದಾನೆ. ಟೊರೊಂಟೊದಲ್ಲೇ ಅವರು ಮಕ್ಕಳಿಗೆ ಶಿಕ್ಷಣ ಕೂಡ ಕೊಡಿಸುತ್ತಿದ್ದಾರೆ. ಶಾಲೆ ಮುಗಿಸಿಕೊಂಡು ಮಕ್ಕಳನ್ನು ಕರೆತರುವಾಗ ಕಾರು ಅಪಘಾತಕ್ಕೀಡಾಗಿದೆ. ರಂಭಾ ಚಲಾಯಿಸುತ್ತಿದ್ದ ಕಾರು ಬಲ ಬದಿಯಿಂದ ಬಂದ ಕಾರಿಗೆ ಡಿಕ್ಕಿ ಹೊಡೆದಿದೆ ಎಂದು ಹೇಳಲಾಗುತ್ತಿದೆ. ಇದನ್ನೂ ಓದಿ:ಹಿಂದಿಯಲ್ಲಿ 50 ಕೋಟಿ ಗಳಿಸಿದ ‘ಕಾಂತಾರ’ ಸಿನಿಮಾ

    ರಂಭಾ ಚಲಾಯಿಸುತ್ತಿದ್ದ ಕಾರಿನಲ್ಲಿ ಇಬ್ಬರು ಮಕ್ಕಳು ಮತ್ತು ಮಕ್ಕಳನ್ನು ನೋಡಿಕೊಳ್ಳುತ್ತಿರುವ ಕೆಲಸದಾಕೆ ಇದ್ದರು ಎಂದು ಹೇಳಲಾಗುತ್ತಿದ್ದು, ಕಿರಿಯ ಪುತ್ರಿ ಸಾಶಾಗೆ ತೀವ್ರ ಗಾಯಗಳಾಗಿದ್ದು, ಉಳಿದಂತೆ ಎಲ್ಲರಿಗೂ ಸಣ್ಣಪುಟ್ಟ ಗಾಯಗಳಾಗಿವೆ. ಎಲ್ಲರಿಗೂ ಚಿಕಿತ್ಸೆ ನೀಡಲಾಗಿದೆ. ಈ ಎಲ್ಲ ವಿವರಗಳನ್ನು ಸ್ವತಃ ರಂಭಾ ಅವರೇ ಸೋಷಿಯಲ್ ಮೀಡಿಯಾ ಮೂಲಕ ಹಂಚಿಕೊಂಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಕೆನಡಾದಲ್ಲಿ ಹಿಂದೂ ದೇವಾಲಯ ವಿರೂಪ – ಭಾರತ ವಿರೋಧಿ ಬರಹದ ಮೂಲಕ ದ್ವೇಷ ಬಿತ್ತನೆ

    ಕೆನಡಾದಲ್ಲಿ ಹಿಂದೂ ದೇವಾಲಯ ವಿರೂಪ – ಭಾರತ ವಿರೋಧಿ ಬರಹದ ಮೂಲಕ ದ್ವೇಷ ಬಿತ್ತನೆ

    ಒಟ್ಟೋವಾ: ಕೆನಡಾದ (Canada) ಖಲಿಸ್ತಾನ ತೀವ್ರವಾದಿಗಳ ಗುಂಪೊಂದು ಟೊರೊಂಟೊದಲ್ಲಿರುವ (Toronto) ಹಿಂದೂ ದೇವಾಲಯವನ್ನು (Hindu Temple) ವಿರೂಪಗೊಳಿಸಿರುವ ಘಟನೆ ನಡೆದಿದ್ದು, ಆರೋಪಿಗಳ ವಿರುದ್ಧ ಕ್ರಮಕ್ಕೆ ಒತ್ತಾಯ ಕೇಳಿಬಂದಿದೆ.

    ಟೊರೊಂಟೊದ ಬಿಎಪಿಎಸ್ ಸ್ವಾಮಿನಾರಾಯಣ ಮಂದಿರದಲ್ಲಿ ಈ ಘಟನೆ ನಡೆದಿದೆ. ಭಾರತ-ವಿರೋಧಿ ಗೀಚುಬರಹದ ಮೂಲಕ ಪ್ರಮುಖ ಹಿಂದೂ ದೇವಾಲಯವನ್ನು ವಿರೂಪಗೊಳಿಸಲಾಗಿದೆ. ಇದನ್ನು ಭಾರತೀಯ ಮಿಷನ್‌ ಖಂಡಿಸಿದ್ದು, ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹಿಸಿದೆ. ಇದನ್ನೂ ಓದಿ: ಜಮ್ಮು-ಕಾಶ್ಮೀರದಲ್ಲಿ ಎನ್‌ಕೌಂಟರ್‌; ಇಬ್ಬರು ಉಗ್ರರು ಹತ್ಯೆ

    ಭಾರತೀಯ ಹೈಕಮಿಷನ್ ಬುಧವಾರ ಟ್ವೀಟ್ ಮಾಡಿ ಖಂಡನೆ ವ್ಯಕ್ತಪಡಿಸಿದೆ. ಭಾರತ ವಿರೋಧಿ ಗೀಚುಬರಹದ ಮೂಲಕ BAPS ಸ್ವಾಮಿನಾರಾಯಣ ಮಂದಿರ ವಿರೂಪಗೊಳಿಸುವುದನ್ನು ನಾವು ಬಲವಾಗಿ ಖಂಡಿಸುತ್ತೇವೆ. ಘಟನೆಯ ಬಗ್ಗೆ ತನಿಖೆ ನಡೆಸಲು ಮತ್ತು ಅಪರಾಧಿಗಳ ಮೇಲೆ ತ್ವರಿತ ಕ್ರಮ ಕೈಗೊಳ್ಳಲು ಕೆನಡಾದ ಅಧಿಕಾರಿಗಳಿಗೆ ವಿನಂತಿಸಿದ್ದೇವೆ ಎಂದು ತಿಳಿಸಿದೆ.

    ಕೆನಡಾದ ಸಂಸತ್ ಸದಸ್ಯ ಚಂದ್ರ ಆರ್ಯ (Chandra Arya) ಟ್ವೀಟ್ ಮಾಡಿ, ಕೆನಡಾದ ಖಲಿಸ್ತಾನಿ ತೀವ್ರವಾದಿಗಳಿಂದ ಟೊರೊಂಟೊ ಬಿಎಪಿಎಸ್ ಸ್ವಾಮಿನಾರಾಯಣ ಮಂದಿರ ವಿರೂಪಗೊಳಿಸಿರುವುದನ್ನು ಎಲ್ಲರೂ ಖಂಡಿಸಬೇಕು. ಇದು ಕೇವಲ ಒಂದು ಘಟನೆಯಲ್ಲ. ಕೆನಡಾದ ಹಿಂದೂ ದೇವಾಲಯಗಳು ಇತ್ತೀಚಿನ ದಿನಗಳಲ್ಲಿ ಈ ರೀತಿಯ ದಾಳಿಗೆ ಗುರಿಯಾಗುತ್ತಿವೆ ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ: ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ ಸಂಚರಿಸುತ್ತಿದ್ದ ಕಾರು ಅಪಘಾತ

    Live Tv
    [brid partner=56869869 player=32851 video=960834 autoplay=true]

  • ಕೆನಡಾ ತುಂಬಾ ಸೇಫ್ ಎನ್ನುತ್ತಿದ್ದ ಭಾರತದ ವಿದ್ಯಾರ್ಥಿ ಗುಂಡೇಟಿಗೆ ಬಲಿ

    ಕೆನಡಾ ತುಂಬಾ ಸೇಫ್ ಎನ್ನುತ್ತಿದ್ದ ಭಾರತದ ವಿದ್ಯಾರ್ಥಿ ಗುಂಡೇಟಿಗೆ ಬಲಿ

    ಟೊರಂಟೊ: ಭಾರತೀಯ ಮೂಲದ ವಿದ್ಯಾರ್ಥಿಯನ್ನು ದುಷ್ಕರ್ಮಿಯೊಬ್ಬ ಗುಂಡಿಟ್ಟು ಬರ್ಬರವಾಗಿ ಕೊಂದ ಘಟನೆ ಕೆನಡಾದ ಟೊರಂಟೊದಲ್ಲಿ ನಡೆದಿದೆ.

    ಉತ್ತರ ಪ್ರದೇಶದ ಗಾಜಿಯಾಬಾದ್ ನಿವಾಸಿಯಾದ ಕಾರ್ತಿಕ್ ವಾಸುದೇವ್ ಮೃತ ವಿದ್ಯಾರ್ಥಿ. ಕಾರ್ತಿಕ್ ಅವರು ಶುಕ್ರವಾರ ಸಂಜೆ ಟೊರಂಟೊದ ಶೆನ್ ಬಾರ್ನೆ ಸಬ್ ವೇ ರೈಲು ನಿಲ್ದಾಣದ ಬಳಿ ತೆರಳುತ್ತಿದ್ದಾಗ ದುಷ್ಕರ್ಮಿಯೊಬ್ಬ ಮುಸುಕು ಹಾಕಿಕೊಂಡು ಬಂದಿದ್ದು, ವಿದ್ಯಾರ್ಥಿ ಮೇಲೆ ಮನಬಂದತೆ ಗುಂಡು ಹಾರಿಸಿದ್ದಾನೆ.

    ಈ ವೇಳೆ ರೈಲ್ವೇ ನಿಲ್ದಾಣದ ಸಿಬ್ಬಂದಿ ಕಾರ್ತಿಕ್ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಫಲಕಾರಿಯಾಗದೆ ಅವರು ಆಸ್ಪತ್ರೆಯಲ್ಲಿಯೇ ಸಾವನ್ನಪ್ಪಿದ್ದಾರೆ. ಮೃತ ವಿದ್ಯಾರ್ಥಿಯು ಟೊರಂಟೋದ ಸೆನೆಕಾ ಕಾಲೇಜಿನಲ್ಲಿ ಎಮ್‍ಬಿಎ ವ್ಯಾಸಂಗ ಮಾಡುತ್ತಿದ್ದರು. ಕಾರ್ತಿಕ್ ಅವರ ನಿಧನಕ್ಕೆ ಕೆನಡಾದಲ್ಲಿನ ಭಾರತೀಯ ರಾಯಭಾರ ಕಚೇರಿ ಹಾಗೂ ಸೆನೆಕಾ ಕಾಲೇಜಿನ ಸಿಬ್ಬಂದಿ ವರ್ಗವೂ ಸಂತಾಪ ವ್ಯಕ್ತಪಡಿಸಿವೆ. ಇದನ್ನೂ ಓದಿ: ಮದ್ಯ ಸೇವನೆಗೆ ಹಣಕೊಡಲಿಲ್ಲವೆಂದು ತಂದೆಯನ್ನೆ ಕೊಂದ ಪಾಪಿ

    ಘಟನೆ ಕುರಿತು ಪ್ರತಿಕ್ರಿಯಿಸಿದ ವಿದೇಶಾಂಗ ಸಚಿವ ಎಸ್ ಜೈಶಂಕರ್, ಈ ದುರಂತ ಘಟನೆಯಿಂದ ನಾನು ದುಃಖಿತನಾಗಿದ್ದೇನೆ ಎಂದು ಟ್ವೀಟ್ ಮಾಡಿ ಆಘಾತ ವ್ಯಕ್ತಪಡಿಸಿದ್ದಾರೆ.

    ಮೃತ ವಿದ್ಯಾರ್ಥಿಯ ತಂದೆಯು ಮಗನ ಸಾವಿನ ಕುರಿತು ಪ್ರತಿಕ್ರಿಯಿಸಿದ್ದು, ಕೆನಡಾ ತುಂಬಾ ಸುರಕ್ಷಿತವಾಗಿದೆ. ನನ್ನ ಬಗ್ಗೆ ಚಿಂತಸಬೇಡಿ ಅಂತ ನನ್ನ ಮಗ ಯಾವಾಗಲೂ ಹೇಳುತ್ತಿದ್ದ ಎಂದು ನೆನಪಿಸಿಕೊಂಡಿದ್ದಾರೆ. ಇದನ್ನೂ ಓದಿ: ದೆಹಲಿಯಲ್ಲಿ ಬೆಳ್ಳಂಬೆಳಗ್ಗೆಯೇ ಅಗ್ನಿ ದುರಂತ: 5 ಅಂಗಡಿಗಳು ಭಸ್ಮ

    ಕಾರ್ತಿಕ್ ಕುಟುಂಬಕ್ಕೆ ಅಗತ್ಯ ನೆರವು ನೀಡಲಾಗುವುದು ಎಂದು ರಾಯಭಾರ ಕಚೇರಿ ತಿಳಿಸಿದೆ. ಹಂತಕನ ಉದ್ದೇಶ ಏನಿತ್ತೇಂಬುವುದು ಇನ್ನೂ ತಿಳಿದು ಬಂದಿಲ್ಲ. ಆರೋಪಿ ಬಂಧನಕ್ಕೆ ಟೊರಂಟೋ ಪೊಲೀಸರು ಬಲೆ ಬಿಸಿದ್ದಾರೆ.

    /p>

  • ಕೆನಡಾ ಗ್ಲೋಬಲ್ ಟಿ20 ಲೀಗ್‍- ‘ದುಡ್ಡು ಕೊಟ್ಟರೆ ಮಾತ್ರ ಆಡುತ್ತೇವೆ’

    ಕೆನಡಾ ಗ್ಲೋಬಲ್ ಟಿ20 ಲೀಗ್‍- ‘ದುಡ್ಡು ಕೊಟ್ಟರೆ ಮಾತ್ರ ಆಡುತ್ತೇವೆ’

    ಟೊರೆಂಟೊ: ಕ್ರಿಕೆಟ್ ಜನಪ್ರಿಯತೆಯನ್ನ ಹೆಚ್ಚಿಸಲು ಇತ್ತೀಚೆಗೆ ಕ್ರಿಕೆಟ್ ಲೀಗ್‍ಗಳನ್ನು ಆಯೋಜಿಸುವ ಪ್ರವೃತ್ತಿ ಹೆಚ್ಚಾಗುತ್ತಿದೆ. ಆದರೆ ಕೆನಡಾದಲ್ಲಿ ನಡೆಯುತ್ತಿರುವ ಗ್ಲೋಬಲ್ ಟಿ20 ಟೂರ್ನಿ ಇಂತಹ ಟೂರ್ನಿಗಳ ಮತ್ತೊಂದು ಮುಖವನ್ನು ತೋರಿಸಿದೆ.

    ವಿಶ್ವ ಕ್ರಿಕೆಟ್‍ನ ಪ್ರಮುಖ ಕ್ರಿಕೆಟಿಗರು ಭಾಗವಹಿಸಿದ್ದ ಕೆನಡಾ ಗ್ಲೋಬಲ್ ಟಿ20 ಕ್ರಿಕೆಟ್ ಟೂರ್ನಿಯ ಭಾಗವಾಗಿ ಬುಧವಾರ ನಡೆಯಬೇಕಿದ್ದ ಪಂದ್ಯದಲ್ಲಿ ಯಾರು ಊಹೆ ಮಾಡದ ಘಟನೆಯೊಂದು ನಡೆದಿದೆ. ನಿಗದಿತ ವೇಳಾಪಟ್ಟಿ ಅನ್ವಯ ಮಾಂಟ್ರಿಯಲ್ ಟೈಗರ್ಸ್ ಮತ್ತು ಟೊರೆಂಟೊ ನ್ಯಾಷನಲ್ ತಂಡಗಳು ಬುಧವಾರ ಪಂದ್ಯವಾಡಬೇಕಿತ್ತು. ಆದರೆ ಆಟಗಾರರು ಪಂದ್ಯಕ್ಕೆ ಸಮಯವಾಗುತ್ತಿದಂತೆ ತಮ್ಮ ಬೇಡಿಕೆ ಮುಂದಿಟ್ಟು ಮೈದಾನಕ್ಕೆ ತೆರಳದೆ ಹೋಟೆಲ್ ನಲ್ಲೇ ಉಳಿದುಕೊಂಡಿದ್ದರು.

    ಭಾರತದ ಕಾಲಮಾನದ ಅನ್ವಯ ಬುಧವಾರದ ಪಂದ್ಯ ರಾತ್ರಿ 10 ಗಂಟೆಗೆ ಆರಂಭವಾಗಬೇಕಿತ್ತು. ಆದರೆ ಆಟಗಾರರು ತಮಗೆ ಟೂರ್ನಿ ಆಯೋಜಕರು ಭಾರೀ ಮೊತ್ತವನ್ನು ಬಾಕಿ ಉಳಿಸಿಕೊಂಡಿದ್ದಾರೆ. ತಮ್ಮ ಹಣವನ್ನು ನೀಡಿದರೆ ಮಾತ್ರ ಆಡುವುದಾಗಿ ಪಟ್ಟು ಹಿಡಿದಿದ್ದರು ಎಂದು ಮಾಧ್ಯಮವೊಂದು ವರದಿ ಮಾಡಿದೆ. ಆಟಗಾರರ ನಿರ್ಧಾರದ ಪರಿಣಾಮ ನಿಗದಿತ ಸಮಯವಾದರು ಪಂದ್ಯ ಆರಂಭಗೊಂಡಿರಲಿಲ್ಲ.

    ಇತ್ತ ಪಂದ್ಯವನ್ನು ಪ್ರಸಾರ ಮಾಡಬೇಕಿದ್ದ ವಾಹಿನಿಗಳು ಕಾರಣಾಂತರಗಳಿಂದ ಪಂದ್ಯ ತಡವಾಗುತ್ತಿದೆ ಎಂಬ ಸ್ಕ್ರೋಲಿಂಗ್ ನೀಡಿ ಹಳೆ ಪಂದ್ಯವನ್ನೇ ಮರು ಪ್ರಸಾರ ಮಾಡಿದ್ದವು. ಇತ್ತ ಟೂರ್ನಿಯ ಆಯೋಜಕರು ಆಟಗಾರರ ಮನವೊಲಿಕೆಗೆ ಮುಂದಾಗಿದ್ದರು. ಸರಿಸುಮಾರು 2 ಗಂಟೆಗಳು ತಡವಾಗಿ ಪಂದ್ಯ ಆರಂಭವಾಗಿತ್ತು. ಯುವರಾಜ್ ಸಿಂಗ್ ನಾಯಕತ್ವದ ಟೊರೆಂಟೊ ನ್ಯಾಷನಲ್ಸ್ ತಂಡದಲ್ಲಿ ಬ್ರೆಂಡನ್ ಮೆಕಲಮ್, ಪೋಲಾರ್ಡ್ ರಂತಹ ಖ್ಯಾತ ಆಟಗಾರರು ಇದ್ದು, ಮಾಂಟ್ರಿಯಲ್ ಟೈಗರ್ಸ್ ಪರ ಸುನಿಲ್ ನರೇನ್, ತಿಸಾರ ಪೆರೆರಾ ಸೇರಿದಂತೆ ಹಲವು ಆಟಗಾರರು ಆಡುತ್ತಿದ್ದಾರೆ. ತಡವಾಗಿ ಆರಂಭವಾದ ಈ ಪಂದ್ಯದಲ್ಲಿ ಮೊದಲು ಯುವಿ ನೇತೃತ್ವದ ತಂಡ ಮೊದಲು ಬ್ಯಾಟ್ ಮಾಡಿ 5 ವಿಕೆಟ್ ನಷ್ಟಕ್ಕೆ 189 ರನ್ ಗಳಿಸಿತ್ತು. ಅ ಬಳಿಕ ಗುರಿ ಬೆನ್ನತ್ತಿದ ಟೈಗರ್ಸ್ ತಂಡ 19.3 ಓವರ್ ಗಳಲ್ಲಿ 154 ರನ್ ಗಳಿಸಿ ಅಲೌಟ್ ಆಯ್ತು. ಪಂದ್ಯದಲ್ಲಿ 35 ರನ್ ಗೆಲುವು ಪಡೆದ ಟೊರೆಂಟೊ ನ್ಯಾಷನಲ್ಸ್ ತಂಡ ಟೂರ್ನಿಯಲ್ಲಿ ಪ್ಲೇ ಆಫ್‍ಗೆ ಆರ್ಹತೆ ಪಡೆಯಿತು.

  • ಪ್ರೇಮಿಗಳ ನಡುವೆ ಮಧ್ಯ ಪ್ರವೇಶಿಸಿದ ಯುವರಾಜ್ ಸಿಂಗ್

    ಪ್ರೇಮಿಗಳ ನಡುವೆ ಮಧ್ಯ ಪ್ರವೇಶಿಸಿದ ಯುವರಾಜ್ ಸಿಂಗ್

    ಟೊರೆಂಟೊ: ಅಂತರಾಷ್ಟ್ರೀಯ ಕ್ರಿಕೆಟ್‍ಗೆ ವಿದಾಯ ಹೇಳಿರುವ ಯುವರಾಜ್ ಸಿಂಗ್ ಗ್ಲೋಬಲ್ ಟಿ20 ಕೆನಡಾ ಲೀಗ್‍ನಲ್ಲಿ ಆಡುತ್ತಿದ್ದಾರೆ. ಲೀಗ್ ನಲ್ಲಿ ಟೊರೆಂಟೊ ನ್ಯಾಷನಲ್ಸ್ ಪರ ಆಡುತ್ತಿರುವ ಯುವಿ ಶನಿವಾರ ನಡೆದ ಪಂದ್ಯದ ಸಂದರ್ಭದಲ್ಲಿ ವಿಶೇಷ ಘಟನೆಗೆ ಕಾರಣರಾದರು.

    ಟೊರೆಂಟೊ ಮತ್ತು ಎಡ್ಮಂಟನ್ ರಾಯಲ್ಸ್ ತಂಡಗಳ ನಡುವಿನ ಪಂದ್ಯದ ಸಂದರ್ಭದಲ್ಲಿ ಮಳೆ ಅಡ್ಡಿಯಾದ ಹಿನ್ನೆಲೆಯಲ್ಲಿ ಕೆಲ ಸಮಯ ಆಟ ಸ್ಥಗಿತಗೊಂಡಿತ್ತು. ಇದರಿಂದ ಯುವಿ ಇತರೆ ಆಟಗಾರರೊಂದಿಗೆ ಸಮಯ ಕಳೆಯುತ್ತಿದ್ದರು. ಈ ಸಂದರ್ಭದಲ್ಲಿ ಎಡ್ಮಂಟನ್ ರಾಯಲ್ಸ್ ತಂಡದ ಪರ ಆಡುತ್ತಿದ್ದ ಆಸೀಸ್ ಆಟಗಾರ ಬೆನ್ ಕಟಿಂಗ್‍ರನ್ನು ನ್ಯೂಸ್ ಪ್ರೆಸೆಂಟರ್ ಎರನ್ ಹಾಲೆಂಡ್ ಸಂದರ್ಶನ ಮಾಡುತ್ತಿದ್ದರು. ಇದನ್ನು ಗಮನಿಸಿದ್ದ ಯುವಿ ಇಬ್ಬರ ನಡುವೆ ಮಧ್ಯ ಪ್ರವೇಶ ಮಾಡಿ, ನಿಮ್ಮ ಮದುವೆ ಯಾವಾಗ ಎಂದು ಪ್ರಶ್ನೆ ಮಾಡಿದ್ದಾರೆ.

    ಯುವಿ ಎಂಟ್ರಿ ಕೊಟ್ಟು ಪ್ರಶ್ನೆ ಮಾಡುತ್ತಿದಂತೆ ಕ್ಷಣ ಕಾಲ ಅಚ್ಚರಿಗೊಂಡಂತೆ ಕಂಡ ಎರನ್ ಹಾಲೆಂಡ್, ಯುವಿ ಪ್ರಶ್ನೆಗೆ ಉತ್ತರಿಸಲು ಪ್ರಯತ್ನ ನಡೆಸಿದರು. ಆದರೆ ಅಷ್ಟರಲ್ಲೇ ಯುವಿ ಜಾಗ ಖಾಲಿ ಮಾಡಿದ್ದರು. ಅಂದಹಾಗೇ ಎರನ್ ಹಾಲೆಂಡ್ ಮತ್ತು ಬೆನ್ ಕಟಿಂಗ್ ಇಬ್ಬರು ಕಳೆದ ನಾಲ್ಕು ವರ್ಷಗಳಿಂದ ಡೇಟಿಂಗ್ ನಲ್ಲಿದ್ದು, ಇತ್ತೀಚೆಗಷ್ಟೇ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಶೀಘ್ರದಲ್ಲೇ ಇಬ್ಬರ ಮದುವೆಯೂ ನಡೆಯಲಿದೆ. ಇದರ ನಡುವೆಯೇ ಮಧ್ಯ ಪ್ರವೇಶ ಮಾಡಿದ ಯುವಿ ಪ್ರೀತಿಯಿಂದ ಇಬ್ಬರ ಕಾಲೆಳೆಯಲು ಪ್ರಯತ್ನ ನಡೆಸಿದ್ದಾರೆ.

     

  • ಕೆನಡಾದಲ್ಲೂ ಕೆಜಿಎಫ್ ಹವಾ – ರಾಕಿಂಗ್ ಸ್ಟಾರ್ ಅಭಿನಯಕ್ಕೆ ಫುಲ್ ಫಿದಾ!

    ಕೆನಡಾದಲ್ಲೂ ಕೆಜಿಎಫ್ ಹವಾ – ರಾಕಿಂಗ್ ಸ್ಟಾರ್ ಅಭಿನಯಕ್ಕೆ ಫುಲ್ ಫಿದಾ!

    ಟೊರೆಂಟೋ: ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಚಿತ್ರ ವಿಶ್ವಾದ್ಯಂತ ಸದ್ದು ಮಾಡುತ್ತಿದ್ದು, ಕೆನಡಾದ ಟೊರೆಂಟೋ ದಲ್ಲಿ ಚಿತ್ರ ವೀಕ್ಷಿಸಲು ಕನ್ನಡಿಗರ ದಂಡೇ ಹರಿದು ಬರುತ್ತಿದೆ.

    ಕೆಜಿಎಫ್ ಚಿತ್ರ ಇಡೀ ಭಾರತ ಮಾತ್ರವಲ್ಲದೇ ವಿದೇಶಗಳಲ್ಲಿಯೂ ತನ್ನ ಛಾಪನ್ನು ಮೂಡಿಸಿ, ಪ್ರೇಕ್ಷಕರನ್ನು ತನ್ನತ್ತ ಸೆಳೆಯುವಲ್ಲಿ ಯಶಸ್ವಿಯಾಗಿದೆ. ಕೆನಡಾದ ಟೊರೆಂಟೋದಲ್ಲಿ ಕೆಜಿಎಫ್ ಚಿತ್ರ ನೋಡಲು ಮಾರಿಷಸ್ ಸೇರಿದಂತೆ ಸುತ್ತ ಮುತ್ತಲ ದೇಶಗಳಿಂದ ಕನ್ನಡಿಗರು ಮುಗಿಬಿದ್ದಿದ್ದಾರೆ.

    ಟೊರೆಂಟೋದ ಅಲ್ಬಿಯನ್ ಸಿನಿಮಾಸ್‍ನಲ್ಲಿ ಕ್ಯೂ ನಿಂತಿರುವ ವಿಡಿಯೋವನ್ನು ಯಶ್ ಅಭಿಮಾನಿ ಕಿರಣ್ ಎಂಬವರು ಪಬ್ಲಿಕ್ ಟಿವಿಗೆ ಕಳುಹಿಸಿಕೊಟ್ಟಿದ್ದಾರೆ. ವಿಡಿಯೋದಲ್ಲಿ ಅಭಿಮಾನಿಗಳು ಫುಲ್ ಎಕ್ಸೈಟ್ ಆಗಿದ್ದು, ಚಿತ್ರದ ಬಗ್ಗೆ ಭರಪೂರ ಹೊಗಳಿಕೆಗಳ ಸುರಿಮಳೆಯನ್ನೇ ಸುರಿಸಿದ್ದಾರೆ. ಕೆಜಿಎಫ್ ಚಿತ್ರ ದಿನಕ್ಕೆ ಎರಡು ಶೋ ಪ್ರದರ್ಶನವಾಗ್ತಿದ್ದು, ಹೌಸ್‍ಫುಲ್ ಪ್ರದರ್ಶನ ಕಾಣುತ್ತಿದೆ.

    ಕೆಜಿಎಫ್ ಸಿನಿಮಾ ಒಟ್ಟು 5 ಭಾಷೆಯಲ್ಲಿ ಶುಕ್ರವಾರ ಬರೋಬ್ಬರಿ 2,000 ಕ್ಕೂ ಅಧಿಕ ಚಿತ್ರ ಮಂದಿರಗಳಲ್ಲಿ ತೆರೆಕಂಡಿದ್ದು, ಎಲ್ಲೆಡೆ ಸದ್ದು ಮಾಡುತ್ತಿದೆ. ಬಿಡುಗಡೆಯಾದ ಮೊದಲ ದಿನವೇ ಬರೋಬ್ಬರಿ ಸುಮಾರು 30 ಕೋಟಿ ಹಣವನ್ನು ಬಾಕ್ಸ್ ಆಫೀಸ್‍ನಲ್ಲಿ ತುಂಬಿಸಿಕೊಂಡಿದ್ದು, ಕೇವಲ ಮೂರು ದಿನದಲ್ಲಿ 60 ಕೋಟಿ ಗೂ ಹೆಚ್ಚು ಕಲೆಕ್ಷನ್ ಮಾಡಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಪಾಠ ಮಾಡ್ತಿದ್ದಾಗ 500 ವಿದ್ಯಾರ್ಥಿಗಳ ಮುಂದೆಯೇ ಫ್ಲೇ ಆಯ್ತು ಪೋರ್ನ್ ವಿಡಿಯೋ!

    ಪಾಠ ಮಾಡ್ತಿದ್ದಾಗ 500 ವಿದ್ಯಾರ್ಥಿಗಳ ಮುಂದೆಯೇ ಫ್ಲೇ ಆಯ್ತು ಪೋರ್ನ್ ವಿಡಿಯೋ!

    ಟೊರೊಂಟೊ: ಮನೋವಿಜ್ಞಾನಿ ಪ್ರೊಫೆಸರ್ ಒಬ್ಬರು ವಿದ್ಯಾರ್ಥಿಗಳಿಗೆ ವಿಡಿಯೋ ಮೂಲಕ ಪಾಠ ಹೇಳಿಕೊಡುತ್ತಿದ್ದ ಸಂದರ್ಭದಲ್ಲಿ ಇದ್ದಕ್ಕಿದ್ದಂತೆ ಪೋರ್ನ್ ವಿಡಿಯೋ ಪ್ರಸಾರವಾಗಿರುವ ಘಟನೆ ಕೆನಡಾದ ಟೊರೊಂಟೊದಲ್ಲಿ ನಡೆದಿದೆ.

    ಟೊರಂಟೊ ಸ್ಕಾರ್ಬರೊ ವಿಶ್ವವಿದ್ಯಾನಿಲಯದಲ್ಲಿ ಈ ಘಟನೆ ನಡೆದಿದ್ದು, ಪ್ರೊಫೆಸರ್ ಡಾ. ಸ್ಟೀವ್ ಜೋರ್ಡಾನ್ಸ್ ಪಾಠ ಮಾಡುವಾಗ ಈ ರೀತಿ ವಿಡಿಯೋ ಪ್ಲೇ ಆಗಿದೆ. ಈ ತರಗತಿಯಲ್ಲಿ ಸುಮಾರು 500 ವಿದ್ಯಾರ್ಥಿಗಳಿದ್ದರು ಎಂದು ವದರಿಯಾಗಿದೆ.

    ಪ್ರೋ. ಜೋರ್ಡಾನ್ಸ್ ಕ್ಲಾಸ್ ರೂಮಿನಲ್ಲಿ ಜೈವಿಕ ಮತ್ತು ಅರಿವಿನ ಮನೋವಿಜ್ಞಾನದ ಬಗ್ಗೆ ತಿಳಿಸಲು ತಮ್ಮ ಮೊಬೈಲನ್ನು ಲ್ಯಾಪ್‍ಟಾಪಿಗೆ ಸಂಪರ್ಕಿಸಿ ದೊಡ್ಡ ಸ್ರ್ಕೀನ್ ಮೂಲಕ ಪಾಠ ಮಾಡುತ್ತಿದ್ದರು. ಈ ವೇಳೆ ಇದ್ದಕ್ಕಿದಂತೆ ಪೋರ್ನ್ ವಿಡಿಯೋ 500 ವಿದ್ಯಾರ್ಥಿಗಳ ಮುಂದೆ ಪ್ರಸಾರವಾಗಿದೆ. ವಿಡಿಯೋ ಪ್ರಸಾರವಾಗುತ್ತಿದ್ದಂತೆ ವಿದ್ಯಾರ್ಥಿಗಳು ಶಾಕ್ ಆಗಿದ್ದು, ನಂತರ ನಗಲಾರಂಭಿಸಿದ್ದಾರೆ.

    ಈ ವೇಳೆ ಕೆಲ ವಿದ್ಯಾರ್ಥಿಗಳು ಇದನ್ನು ತಮ್ಮ ಮೊಬೈಲಿನಲ್ಲಿ ರೆಕಾರ್ಡ್ ಮಾಡಿಕೊಂಡಿದ್ದು, ಬಳಿಕ ಅವರು ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋವನ್ನು ಅಪ್ಲೋಡ್ ಮಾಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ಬಗ್ಗೆ ಅನೇಕ ರೀತಿಯ ಕಮೆಂಟ್ ಗಳನ್ನು ಮಾಡಿದ್ದಾರೆ. ನಾನು ಪೋರ್ನ್ ವಿಡಿಯೋ ನೋಡಿದಾಗ ನನಗೆ ಆಶ್ಚರ್ಯವಾಯಿತು. ಆದರೆ ತರಗತಿಯಲ್ಲಿದ್ದ ಬಹಳಷ್ಟು ಜನರು ನಗುತ್ತಿದ್ದರು ಎಂದು ವಿದ್ಯಾರ್ಥಿಯೊಬ್ಬ ಕಮೆಂಟ್ ಮಾಡಿದ್ದಾನೆ.

    ಪ್ರತಿಯೊಬ್ಬರೂ ತಪ್ಪು ಮಾಡುತ್ತಾರೆ. ಆದ್ದರಿಂದ ನಾನು ಅವರನ್ನು ದೂಷಿಸುವುದಿಲ್ಲ. ಈ ಸಂದರ್ಭದಲ್ಲಿ ಎಲ್ಲರೂ ನಕ್ಕು ಸುಮ್ಮನಾಗಿದ್ದಾರೆ ಎಂದು ವಿದ್ಯಾರ್ಥಿಯೊಬ್ಬ ಹೇಳಿದ್ದಾನೆ.

    ಇದು ಖಾಸಗಿ ವಿಚಾರವಾಗಿದ್ದು, ಸೂಕ್ತ ವಿಚಾರಣೆ ನಡೆಸುವುದಾಗಿ ವಿಶ್ವವಿದ್ಯಾನಿಲಯದ ಮುಖ್ಯಸ್ಥರು ಹೇಳಿದ್ದಾರೆ. ಇತ್ತ ಈ ಬಗ್ಗೆ ಪ್ರಾಧ್ಯಾಪಕ ಜೊರ್ಡೆನ್ಸ್ ಅವರು ತಮ್ಮ ತಪ್ಪಿಗಾಗಿ ವಿದ್ಯಾರ್ಥಿಗಳು ಮತ್ತು ಸಹೋದ್ಯೋಗಿಗಳ ಮುಂದೆ ಕ್ಷಮೆಯಾಚಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಅಮೆರಿಕಾದಲ್ಲಿ ಮುಂದುವರಿದ ಗುಂಡಿನ ದಾಳಿ: ಮಹಿಳೆ ಸಾವು, 14 ಮಂದಿಗೆ ಗಾಯ!

    ಅಮೆರಿಕಾದಲ್ಲಿ ಮುಂದುವರಿದ ಗುಂಡಿನ ದಾಳಿ: ಮಹಿಳೆ ಸಾವು, 14 ಮಂದಿಗೆ ಗಾಯ!

    ವಾಷಿಂಗ್ಟನ್: ಅಮೆರಿಕಾದ ಟೊರಾಂಟೋದಲ್ಲಿ ಮತ್ತೆ ಶೂಟೌಟ್ ದಾಳಿ ಮುಂದುವರಿದಿದ್ದು, ಭಾನುವಾರ ರಾತ್ರಿ ಸುಮಾರು 10ಕ್ಕೆ ದುಷ್ಕರ್ಮಿಯೋರ್ವ ಗುಂಡಿನ ದಾಳಿ ನಡೆಸಿದ ಪರಿಣಾಮ ಮಹಿಳೆ ಸಾವನ್ನಪ್ಪಿ, 14 ಮಂದಿ ಗಾಯಗೊಂಡಿದ್ದಾರೆ.

    ಟೊರಾಂಟೋದ ಯಾಂಗ್ ಸ್ಟ್ರೀಟ್ ನಲ್ಲಿರುವ ಖ್ಯಾತ ರೆಸ್ಟೋರೆಂಟ್ ವೊಂದರಲ್ಲಿ ಈ ದಾಳಿ ನಡೆದಿದ್ದು, ರಾತ್ರಿ 10 ಗಂಟೆ ಸುಮಾರಿನಲ್ಲಿ ದುಷ್ಕರ್ಮಿಯೋರ್ವ ದಿಢೀರ್ ಗುಂಡಿನ ದಾಳಿ ನಡೆಸಿದ್ದಾನೆ. ಸುಮಾರು 20 ಕ್ಕೂ ಹೆಚ್ಚು ಬಾರಿ ದಾಳಿಕೋರ ಗುಂಡು ಹಾರಿಸಿದ್ದು, ಈ ವೇಳೆ ಹಲವರಿಗೆ ಗುಂಡೇಟು ತಗುಲಿದೆ. ಪರಿಣಾಮ ಮಹಿಳೆ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಇನ್ನು ಘಟನೆಯಲ್ಲಿ 14 ಮಂದಿ ಗಾಯಗೊಂಡಿದ್ದಾರೆ. ಗಾಯಗೊಂಡವರಲ್ಲಿ ಬಾಲಕಿಯೊಬ್ಬಳ ಸ್ಥಿತಿ ಚಿಂತಾಜನಕವಾಗಿದೆ ಎಂದು ವರದಿಯಾಗಿದೆ.

    ಘಟನೆ ಕುರಿತು ಟೊರಾಂಟೋ ಪೊಲೀಸರು ಟ್ವೀಟ್ ಮಾಡಿದ್ದು, `ಗುಂಡಿನ ದಾಳಿಯಿಂದಾಗಿ 14 ಮಂದಿ ಗಾಯಗೊಂಡಿದ್ದು, ಮಹಿಳೆ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಅಲ್ಲದೇ ಬಾಲಕಿಯ ಸ್ಥಿತಿ ಚಿಂತಾಜನಕವಾಗಿದೆ. ದುಷ್ಕರ್ಮಿ ಸ್ವತಃ ಗುಂಡಿಕ್ಕಿ ಹತ್ಯೆ ಮಾಡಿಕೊಂಡಿದ್ದಾನೆ. ಗಾಯಾಳುಗಳನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಬರೆದುಕೊಂಡಿದ್ದಾರೆ.

    ಪ್ರಸ್ತುತ ದಾಳಿಗೀಡಾಗಿರುವ ರೆಸ್ಟೋರೆಂಟ್ ಅನ್ನು ಪೊಲೀಸರು ವಶಕ್ಕೆ ಪಡೆದಿದ್ದು, ವಿಚಾರಣೆ ನಡೆಸುತ್ತಿದ್ದಾರೆ.

    ಇದೇ ಜುಲೈ 6 ರಂದು ಅಮೇರಿಕಾದ ಕನ್ಸಾಸ್ ನಗರದಲ್ಲಿ ಗುಂಡಿನ ದಾಳಿಯಿಂದಾಗಿ ಹೈದರಾಬಾದ್ ನ ಟೆಕ್ಕಿ ಶರತ್ ಕೊಪ್ಪು ಎಂಬವರು ಮೃತಪಟ್ಟಿದ್ದರು. ಅಲ್ಲದೇ ಅಮೇರಿಕಾದಲ್ಲಿ ಪದೇ ಪದೇ ಇಂತಹ ಗುಂಡಿನ ದಾಳಿ ನಡೆಯುತ್ತಿರುವುದು ಸಾಮಾನ್ಯವಾಗಿದೆ.