Tag: torcher

  • ಮಂಗಳಮುಖಿಗೆ ಫೋನ್ ಮಾಡಿ ಕಿರುಕುಳ – ಖಾಸಗಿ ಬಸ್ ಚಾಲಕನಿಗೆ ಬಿತ್ತು ಧರ್ಮದೇಟು

    ಮಂಗಳಮುಖಿಗೆ ಫೋನ್ ಮಾಡಿ ಕಿರುಕುಳ – ಖಾಸಗಿ ಬಸ್ ಚಾಲಕನಿಗೆ ಬಿತ್ತು ಧರ್ಮದೇಟು

    – ಮಂಗಳಮುಖಿ ಕಾಲಿಗೆ ಬಿದ್ದು ಕ್ಷಮೆ ಕೇಳಿದ ಚಾಲಕ

    ಯಾದಗಿರಿ: ಮಂಗಳಮುಖಿಗೆ ಫೋನ್ ಮಾಡಿ ಕಿರುಕುಳ ನೀಡುತ್ತಿದ್ದ ಖಾಸಗಿ ಬಸ್ ಚಾಲಕನಿಗೆ ಹಿಗ್ಗಾಮುಗ್ಗ ಥಳಿಸಿದ ಘಟನೆ ಯಾದಗಿರಿಯಲ್ಲಿ ನಡೆದಿದೆ.

    ಯಾದಗಿರಿ ಕೇಂದ್ರಿಯ ಬಸ್ ನಿಲ್ದಾಣದ ಬಳಿ ಈ ಘಟನೆ ನಡೆದಿದೆ. ಓರ್ವ ಖಾಸಗಿ ಬಸ್ ಚಾಲಕ ಮಂಗಳಮುಖಿಯ ನಂಬರ್ ಪಡೆದುಕೊಂಡು ನಿತ್ಯ ಕರೆ ಮಾಡಿ ಅಸಭ್ಯವಾಗಿ ಮಾತನಾಡಿ, ಲೈಂಗಿಕ ಕಿರುಕುಳ ನೀಡುತ್ತಿದ್ದ. ಚಾಲಕನಿಗೆ ಮಂಗಳಮುಖಿ ಎಷ್ಟು ತಿಳಿಸಿ ಹೇಳಿದರು, ಚಾಲಕ ಮಾತ್ರ ತನ್ನ ಚಾಳಿ ಮುಂದುವರಿಸಿದ್ದ. ಇದನ್ನೂ ಓದಿ: ಅಪ್ಪನಂತೆ ನಾನೂ ವಾಯುಪಡೆ ಸೇರ್ತೀನಿ: ಹೆಲಿಕಾಪ್ಟರ್ ದುರಂತದಲ್ಲಿ ಮಡಿದ ವಿಂಗ್ ಕಮಾಂಡರ್ ಪುತ್ರಿ ಆಸೆ

    ಕಳೆದ ಎರಡು ತಿಂಗಳುಗಳಿಂದ ಇದೇ ಕಿರುಕುಳವನ್ನು ಚಾಲಕ ನೀಡ್ತಾಯಿದ್ದ. ಇದರಿಂದಾಗಿ ಕೋಪಗೊಂಡ ಮಂಗಳಮುಖಿ ಚಾಲಕನಿಗೆ ಫೋನ್ ಮಾಡಿ ಬಸ್ ನಿಲ್ದಾಣಕ್ಕೆ ಕರೆದು ತನ್ನ ಸ್ನೇಹಿತರಿಂದ ಬಿಸಿಬಿಸಿ ಕಜ್ಜಾಯ ನೀಡಿಸಿದ್ದಾಳೆ. ಧರ್ಮದೇಟು ತಿಂದ ಬಳಿಕ ಚಾಲಕ ಮಂಗಮುಖಿ ಕಾಲಿಗೆ ಬಿದ್ದ ಕ್ಷಮೆ ಕೇಳಿದ್ದಾನೆ. ಇದನ್ನೂ ಓದಿ: ಮಾಜಿ ಶಾಸಕ ಎನ್.ಎಚ್ ಕೋನರೆಡ್ಡಿ ನಾಳೆ ಕಾಂಗ್ರೆಸ್‍ಗೆ ಸೇರ್ಪಡೆ

  • ನಿಧಿಗಾಗಿ ಪತ್ನಿಗೆ ಮಿತ ಆಹಾರ ಕೊಟ್ಟು ಹಿಂಸಿಸಿದ ಪತಿರಾಯ

    ನಿಧಿಗಾಗಿ ಪತ್ನಿಗೆ ಮಿತ ಆಹಾರ ಕೊಟ್ಟು ಹಿಂಸಿಸಿದ ಪತಿರಾಯ

    ಮುಂಬೈ: ನಿಧಿಯ ಆಸೆಯಿಂದ ಪತಿಯೊಬ್ಬ ತನ್ನ ಪತ್ನಿಗೆ ಬರೋಬ್ಬರಿ 50 ದಿನಗಳ ಕಾಲ ಸರಿಯಾಗಿ ಊಟ ನೀಡದೆ ಹಿಂಸಿಸುವ ಮೂಲಕ ಅಮಾನುಷವಾಗಿ ನಡೆಸಿಕೊಂಡ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ.

    ನೆರೆ ರಾಜ್ಯದ ಚಂದ್ರಾಪುರ ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ನಿಧಿಯನ್ನು ಹೇಗೆ ವಶಪಡಿಸಿಕೊಳ್ಳಬೇಕು ಎಂದು ಸ್ವಘೋಷಿತ ದೇವಮಾನವನೊಬ್ಬ ತೋರಿಸಿದ ಆಸೆಗೆ ಪತಿರಾಯ, 50 ದಿನಗಳ ಕಾಲ ಪತ್ನಿಗೆ ಮಿತ ಆಹಾರ ನೀಡಿ ದೈಹಿಕ ಹಾಗೂ ಮಾನಸಿಕವಾಗಿ ಹಿಂಸಿಸಿದ್ದಾನೆ.

    2018ರಲ್ಲಿ ಶೆಗಾಂವ್ ಗ್ರಾಮದಲ್ಲಿ ದಂಪತಿ ವಿವಾಹವಾಗಿತ್ತು. ಪತಿ ಹಾಗೂ ಕುಟುಂಬಸ್ಥರಿಗೆ ಸ್ವ-ಘೋಷಿತ ದೇವಮಾನವನೊಬ್ಬ ಗೌಪ್ಯ ನಿಧಿಯೊಂದಿದೆ, ಅದನ್ನ ನೀವು ಪಡೆಯಬಹುದು ಎಂದು ಆಸೆ ತೋರಿಸಿದ್ದನು. ನಿಧಿ ದೊರೆಯಬೇಕೆಂದರೆ ಕೆಲವು ಪೂಜೆಗಳನ್ನು ಮಾಡಬೇಕಾಗುತ್ತದೆ. ಅದಕ್ಕೆ ಮನೆಯಲ್ಲಿದ್ದ ನೂತನ ಸೊಸೆ ಮಿತ ಆಹಾರ ಸೇವನೆ ಮಾಡಿ ಪೂಜೆ ಮಾಡಬೇಕಾಗುತ್ತದೆ ಎಂದು ಷರತ್ತು ವಿಧಿಸಿದ್ದನು. ಈ ಮಾತಿಗೆ ಮರುಳಾದ ಪತಿ ಹಾಗೂ ಆತನ ಕುಟುಂಬಸ್ಥರು ನಿಧಿಯ ಆಸೆಯಿಂದ ಆಮೆಯೊಂದನ್ನು ಸೊಸೆಗೆ ನೀಡಿ, ಪೂಜೆ ಸಲ್ಲಿಸುವಂತೆ ಸದಾ ಹಿಂಸಿಸುತ್ತಿದ್ದರು.

    ಪತಿ ಕೂಡ ಆ ವ್ಯಕ್ತಿಯ ಮಾತು ಕೇಳಿ ಪತ್ನಿಗೆ 50 ದಿನಗಳಿಂದ ಸರಿಯಾದ ಆಹಾರ ನೀಡದೆ ಮಾನಸಿಕ ಹಾಗೂ ದೈಹಿಕವಾಗಿ ಚಿತ್ರಹಿಂಸೆ ನೀಡುತ್ತಿದ್ದನು. ಅಷ್ಟೇ ಅಲ್ಲದೆ ಪತ್ನಿಯ ಮೊಬೈಲನ್ನು ಕೂಡ ಪತಿ ಕಸಿದು ತನ್ನ ಬಳಿಯೇ ಇಟ್ಟುಕೊಂಡಿದ್ದನು. ಈ ಹಿನ್ನೆಲೆ ಹಲವು ದಿನಗಳು ಕಳೆದರೂ ಮಗಳು ಫೋನ್ ಮಾಡಲಿಲ್ಲ ಎಂದು ಮಹಿಳೆಯ ಪೋಷಕರು ಆತಂಕಕ್ಕೆ ಒಳಗಾಗಿದ್ದರು. ಹೀಗಾಗಿ ಮಗಳ ಮನೆಗೆ ಹೋಗಿ ವಿಚಾರಿಸಿಕೊಂಡು ಬರೋಣ ಎಂದು ಪೋಷಕರು ಹೋದಾಗ ಮಗಳ ಸ್ಥಿತಿ ಏನಾಗಿದೆ ಎನ್ನುವ ಬಗ್ಗೆ ತಿಳಿದಿದೆ. ನಂತರ ಕೂಡಲೇ ಪೋಷಕರು ಪೊಲೀಸರಿಗೆ ಈ ಬಗ್ಗೆ ದೂರು ನೀಡಿದ್ದಾರೆ.

    ನಸುಕಿನ 2.45ರಿಂದ ರಾತ್ರಿವರೆಗೂ ಪತ್ನಿಗೆ ಸದಾ ಪೂಜೆ ಮಾಡುತ್ತಿರುವಂತೆ ಪತಿ ಹಿಂಸೆ ನೀಡುತ್ತಿದ್ದ. ಈ ನಡುವೆ ಏನಾದರೂ ತಪ್ಪಾದರೆ ಕುಟುಂಬಸ್ಥರೆಲ್ಲರೂ ಸೇರಿ ಆಕೆಗೆ ಹೊಡೆದು ಚಿತ್ರಹಿಂಸೆ ನೀಡುತ್ತಿದ್ದರು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಅಷ್ಟೇ ಅಲ್ಲದೆ ಮಾನವ ಬಲಿ ಹಾಗೂ ಅಮಾನವೀಯ ಅಂಧಶ್ರದ್ಧೆಗಳ ನಿರ್ಮೂಲನೆ ಹಾಗೂ ತಡೆ ಕಾಯ್ದೆ ಅನ್ವಯ ಕೂಡ ಕುಟುಂಬಸ್ಥರ ವಿರುದ್ಧ ಪ್ರಕರಣ ದಾಖಲಾಗಿದೆ.

    ಹಾಗೆಯೇ ಮೂಢನಂಬಿಕೆಗಳನ್ನು ಬಂಡವಾಳವಾಗಿ ಮಾಡಿಕೊಂಡು ಜನರಿಗೆ ಮೋಸ ಮಾಡಿದ ಸ್ವ-ಘೋಷಿತ ದೇವಮಾನವನನ್ನು ಕೂಡ ಪೊಲೀಸರು ಬಂಧಿಸಿದ್ದು, ಗುರುವಾರಂದು ಸ್ಥಳೀಯ ಕೋರ್ಟ್ ಗೆ ಹಾಜರುಪಡಿಸಿದ್ದರು. ಸದ್ಯ ಈ ಬಗ್ಗೆ ವಿಚಾರಣೆ ಮುಂದುವರಿದಿದೆ.

  • ಸ್ಥಳೀಯ ಪತ್ರಕರ್ತರ ಕಿರುಕುಳಕ್ಕೆ ಬೇಸತ್ತಿದ್ದ ವಾರ್ಡನ್ ಹೆಚ್ಚು ಮದ್ಯ ಸೇವಿಸಿ ಸಾವು!

    ಸ್ಥಳೀಯ ಪತ್ರಕರ್ತರ ಕಿರುಕುಳಕ್ಕೆ ಬೇಸತ್ತಿದ್ದ ವಾರ್ಡನ್ ಹೆಚ್ಚು ಮದ್ಯ ಸೇವಿಸಿ ಸಾವು!

    ಬೆಂಗಳೂರು: ಕೆಲವು ಸ್ಥಳೀಯ ಪತ್ರಕರ್ತರ ಕಿರುಕುಳಕ್ಕೆ ಬೇಸತ್ತಿದ್ದ ಹಾಸ್ಟೆಲ್ ವಾರ್ಡನ್‍ರೊಬ್ಬರು ಹೆಚ್ಚು ಮದ್ಯಪಾನ ಮಾಡಿ ಸಾವನ್ನಪ್ಪಿರುವ ಘಟನೆ ಸಿಲಿಕಾನ್ ಸಿಟಿಯ ಹೊರವಲಯ ಆನೇಕಲ್‍ನಲ್ಲಿ ನಡೆದಿದೆ.

    ಆನೇಕಲ್ ತಾಲೂಕಿನ ಹಾಸ್ಟೆಲ್ ವಾರ್ಡನ್ ಆಗಿದ್ದ ದೇವೇಂದ್ರಪ್ಪ ಮದ್ಯ ಸೇವಿಸಿ ಮೃತಪಟ್ಟಿದ್ದಾರೆ. ಸಮಾಜ ಕಲ್ಯಾಣ ಇಲಾಖೆಯ ಹಾಸ್ಟಲ್‍ನಲ್ಲಿ ಭ್ರಷ್ಟಾಚಾರ ನಡೆದಿರುವ ಬಗ್ಗೆ ಮಾಹಿತಿ ತಿಳಿದಿದ್ದ ಕೆಲವು ಸ್ಥಳೀಯ ಪರ್ತಕರ್ತರು ದೇವೇಂದ್ರಪ್ಪಗೆ ಧಮ್ಕಿ ಹಾಕುತ್ತಿದ್ದರು ಎನ್ನುವ ಆರೋಪ ಕೇಳಿಬಂದಿದೆ.

    ನಕಲಿ ದಾಖಲೆಗಳನ್ನು ಸೃಷ್ಟಿಸಿ ಭ್ರಷ್ಟಾಚಾರ ನಡೆಸಿದ್ದಾರೆಂದು ಹಣಕ್ಕಾಗಿ ಮನೆಯ ಬಳಿ ಹೋಗಿ ದೇವೇಂದ್ರಪ್ಪಗೆ ಕಿರುಕುಳ ನೀಡುತ್ತಿದ್ದರು. ಅಲ್ಲದೆ ಹಣ ನೀಡದಿದ್ದರೆ ಲೋಕಾಯುಕ್ತಗೆ ಪತ್ರ ಬರೆದು ಕೆಲಸದಿಂದ ವಜಾ ಮಾಡಿಸುತ್ತೇವೆಂದು ಧಮ್ಕಿ ಹಾಕುತ್ತಿದ್ದರು.

    ಹದಿನೈದು ವರ್ಷಗಳಿಂದ ಸಮಾಜ ಕಲ್ಯಾಣ ಇಲಾಖೆಯ ಹಾಸ್ಟೆಲ್ ವಾರ್ಡನ್ ಆಗಿ ಆನೇಕಲ್ ತಾಲೂಕಿನಲ್ಲಿ ದೇವೇಂದ್ರಪ್ಪ ಕೆಲಸ ನಿರ್ವಹಿಸುತ್ತಿದ್ದರು. ಈ ಕಿರುಕುಳದ ಬಗ್ಗೆ ದೇವೇಂದ್ರಪ್ಪ ಸ್ನೇಹಿತರು ಹಾಗು ಪತ್ನಿಯ ಬಳಿ ಹೇಳಿಕೊಂಡಿದ್ದರು. ಅಷ್ಟೇ ಅಲ್ಲದೆ ಪ್ರತಿದಿನ ಪತ್ರಕರ್ತರು ನೀಡುತ್ತಿದ್ದ ಕಿರುಕುಳಕ್ಕೆ ನೊಂದಿದ್ದ ವಾರ್ಡನ್ ಹೆಚ್ಚು ಮದ್ಯ ಸೇವಿಸಿ ಕೊನೆ ಉಸಿರೆಳೆದಿದ್ದಾರೆ.

    ಸ್ಥಳೀಯ ಪತ್ರಕರ್ತರ ಕಿರುಕುಳದಿಂದ ನೊಂದು ಸಾವನ್ನಪ್ಪಿದ್ದಾರೆಂದು ಹಾಸ್ಟೆಲ್‍ನ ಹಳೆಯ ವಿದ್ಯಾರ್ಥಿಗಳು ಹಾಗೂ ಸ್ನೇಹಿತರಿಂದ ಆರೋಪ ಕೇಳಿಬರುತ್ತಿದೆ. ಹಾಗೆಯೇ ದೇವೇಂದ್ರಪ್ಪ ಅವರ ಸಾವಿಗೆ ಕಾರಣರಾದವರಿಗೆ ಶಿಕ್ಷೆಯಾಗಬೇಕೆಂದು ಒತ್ತಾಯಿಸಿದ ಕುಟುಂಬದವರು, ಈ ಬಗ್ಗೆ ಸಮಾಜ ಕಲ್ಯಾಣ ಇಲಾಖೆಯ ಮೇಲಾಧಿಕಾರಿಗಳು ಹಾಗೂ ಪೋಲಿಸ್ ಇಲಾಖೆ ತನಿಖೆ ನಡೆಸಬೇಕೆಂದು ಆಗ್ರಹಿಸಿದ್ದಾರೆ.

  • ಲವ್ ರಿಜೆಕ್ಟ್ ಮಾಡಿದ್ದಕ್ಕೆ ವಿದ್ಯಾರ್ಥಿನಿ ಮೇಲೆ ಕಾರು ಹರಿಸಲು ಯತ್ನಿಸಿದ ವಿವಾಹಿತ!

    ಲವ್ ರಿಜೆಕ್ಟ್ ಮಾಡಿದ್ದಕ್ಕೆ ವಿದ್ಯಾರ್ಥಿನಿ ಮೇಲೆ ಕಾರು ಹರಿಸಲು ಯತ್ನಿಸಿದ ವಿವಾಹಿತ!

    ಬೆಂಗಳೂರು: ಲವ್ ಪ್ರಪೊಸ್ ರಿಜೆಕ್ಟ್ ಮಾಡಿದ್ದಕ್ಕೆ ವಿದ್ಯಾರ್ಥಿಯೊಬ್ಬಳ ಮೇಲೆ ವಿವಾಹಿತ ವ್ಯಕ್ತಿಯೊಬ್ಬ ಕಾರು ಹರಿಸಲು ಮುಂದಾದ ಘಟನೆ ಸಿಲಿಕಾನ್ ಸಿಟಿಯ ಯಲಹಂಕದ ಗಾಂಧಿನಗರದಲ್ಲಿ ನಡೆದಿದೆ.

    ಗಾಂಧಿನಗರದ ನಿವಾಸಿ ಶಶಾಂಕ್ ಎಂಬಾತನೇ ವಿದ್ಯಾರ್ಥಿನಿ ಕಾರು ಹತ್ತಿಸಲು ಯತ್ನಿಸಿದ ವ್ಯಕ್ತಿ. ಬಹಳಷ್ಟು ದಿನದಿಂದ ವಿದ್ಯಾರ್ಥಿನಿಗೆ ಪ್ರೇಮಿಸುವಂತೆ ಶಶಾಂಕ್ ಕಿರುಕುಳ ನೀಡುತ್ತಿದ್ದ. ಅಲ್ಲದೇ ಫೆಬ್ರವರಿ 14ರ ಪ್ರೇಮಿಗಳ ದಿನದಂದು ಯುವತಿಗೆ ಪ್ರಪೋಸ್ ಮಾಡಿದ್ದಾನೆ. ಆದ್ರೆ ಶಶಾಂಕ್ ಪ್ರೀತಿಯನ್ನು ಯುವತಿ ಒಪ್ಪದಿದ್ದಾಗ ಕೋಪಗೊಂಡು ಆಕೆಯ ಮೇಲೆ ಕಾರು ಹರಿಸಲು ಮುಂದಾಗಿದ್ದಾನೆ.

    ಘಟನೆಯಲ್ಲಿ ಯುವತಿಯ ಕೈ ಹಾಗೂ ತಲೆಗೆ ಪೆಟ್ಟುಬಿದ್ದಿದ್ದು, ಗಾಯಗೊಂಡ ಯುವತಿಗೆ ಯಲಹಂಕದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಗುರುವಾರ ಸಂಜೆ ಕಾಲೇಜಿನಿಂದ ಬರೋ ವೇಳೆ ಯುವತಿಯನ್ನ ಹಿಂಬಾಲಿಸಿದ್ದಾನೆ. ನಂತರ ಯಲಹಂಕದ ಬಳಿ ಯುವತಿಯನ್ನ ಅಡ್ಡಗಟ್ಟಿ ಪ್ರೇಮ ನಿವೇದನೆ ಮಾಡಿದ್ದಾನೆ. ಈಗಾಗಲೇ ಒಂದು ಮದುವೆಯಾಗಿ ಹೆಂಡತಿಯನ್ನ ಬಿಟ್ಟಿರೋ ಶಶಾಂಕ್ ಹೀಗೆ ಪ್ರೀತಿಯನ್ನ ನಿರಾಕರಿಸಿದ್ದಕ್ಕೆ ಕೋಪಗೊಂಡ, ಯುವತಿ ಹಿಂದಿರುಗುವ ವೇಳೆ ತನ್ನ ಕಾರನ್ನ ಆಕೆಯ ಮೇಲೆ ಹರಿಸಲು ಯತ್ನಿಸಿದ್ದಾನೆ.

    ಸದ್ಯ ಯಲಹಂಕ ಪೊಲೀಸ್ ಠಾಣೆಯಲ್ಲಿ ಘಟನೆ ಕುರಿತು ಪ್ರಕರಣ ದಾಖಲಾಗಿದ್ದು, ದೂರು ದಾಖಲಾಗ್ತಿದ್ದಂತೆ ಪಾಗಲ್ ಪ್ರೇಮಿ ಎಸ್ಕೇಪ್ ಆಗಿದ್ದಾನೆ. ಆರೋಪಿಗಾಗಿ ಪೊಲೀಸರ ಹುಡುಕಾಟ ನಡೆಸುತ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv 

  • ವರದಕ್ಷಿಣೆ ಕಿರುಕುಳ ತಾಳಲಾರದೇ ಗೃಹಿಣಿ ನೇಣಿಗೆ ಶರಣು

    ವರದಕ್ಷಿಣೆ ಕಿರುಕುಳ ತಾಳಲಾರದೇ ಗೃಹಿಣಿ ನೇಣಿಗೆ ಶರಣು

    ಕಲಬುರಗಿ: ವರದಕ್ಷಿಣೆ ಕಿರುಕುಳ ತಾಳಲಾರದೇ ಗೃಹಿಣಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಿಲ್ಲೆಯ ಕಮಲಾಪುರ ತಾಲೂಕಿನ ಸೊಂತ ಗ್ರಾಮದಲ್ಲಿ ಸೋಮವಾರದಂದು ನಡೆದಿದೆ.

    ದೀಪಾಲಿ (27) ಆತ್ಮಹತ್ಯೆ ಮಾಡಿಕೊಂಡ ಗೃಹಿಣಿ. ಏಳು ವರ್ಷದ ಹಿಂದೆ ಶ್ರೀಕಾಂತ್ ಮಾಲದಾರ ಎಂಬವನ ಜೊತೆ ದೀಪಾಲಿ ಮದುವೆಯಾಗಿತ್ತು. ಮದುವೆ ಆದಾಗಿನಿಂದಲೂ ಗಂಡನ ಮನೆಯವರು ದೀಪಾಲಿಗೆ ತವರಿಂದ ವರದಕ್ಷಿಣೆ ತರುವಂತೆ ಕಿರುಕುಳ ನೀಡುತ್ತಿದ್ದರು. ಇದೆಲ್ಲವನ್ನು ಸಹಿಸಿಕೊಂಡು ದೀಪಾಲಿ ಶ್ರೀಕಾಂತ್ ಜೊತೆ ಜೀವನ ನಡೆಸುತ್ತಿದ್ದರು. ಆದರೆ ಕಳೆದ ಹಲವು ದಿನಗಳಿಂದ ಗಂಡ ಹಾಗೂ ಅವನ ಮನೆಯವರು ಗೃಹಿಣಿಗೆ ಕೊಡಬಾರದ ಚಿತ್ರಹಿಂಸೆ ಕೊಟ್ಟಿದ್ದಾರೆ. ಇದರಿಂದ ಬೇಸತ್ತಿದ್ದ ದೀಪಾಲಿ ಮನನೊಂದು ಸೋಮವಾರದಂದು ನೇಣಿಗೆ ಶರಣಾಗಿದ್ದಾರೆ.

    ಪತಿ, ಅತ್ತೆ ವಂದನಾ, ಮಾವ ರಮೇಶ ಸೇರಿದಂತೆ ಏಳು ಜನರ ವಿರುದ್ಧ ದೀಪಾಲಿ ಕುಟುಂಬಸ್ಥರು ಕಮಲಾಪುರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಆರೋಪಿಗಳ ವಿರುದ್ಧ ಪ್ರಕರಣ ದಾಖಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • `ದಯವಿಟ್ಟು ಹುಡ್ಕೋ ಪ್ರಯತ್ನ ಮಾಡ್ಬೇಡಿ ಮಮ್ಮಿ’- ವಿಡಿಯೋ ಕಾಲ್ ಮಾಡಿ ಮಗುವಿನೊಂದಿಗೆ ಗೃಹಿಣಿ ನಾಪತ್ತೆ!

    `ದಯವಿಟ್ಟು ಹುಡ್ಕೋ ಪ್ರಯತ್ನ ಮಾಡ್ಬೇಡಿ ಮಮ್ಮಿ’- ವಿಡಿಯೋ ಕಾಲ್ ಮಾಡಿ ಮಗುವಿನೊಂದಿಗೆ ಗೃಹಿಣಿ ನಾಪತ್ತೆ!

    ಮೈಸೂರು: ಗಂಡನ ಕಿರುಕುಳಕ್ಕೆ ಬೇಸತ್ತ ಗೃಹಿಣಿ ಮಗನ ಜೊತೆ ನಾಪತ್ತೆಯಾಗಿರೋ ಘಟನೆಯೊಂದು ಜಿಲ್ಲೆಯಲ್ಲಿ ನಡೆದಿರೋ ಬಗ್ಗೆ ಬೆಳಕಿಗೆ ಬಂದಿದೆ.

    ಮೈಸೂರು ನಗರದ ವಿಜಯನಗರ ಪೊಲೀಸ್ ಠಾಣಾ ವ್ಯಾಪ್ತಿಯ ಹೂಟಗಳ್ಳಿಯಲ್ಲಿ ಈ ಘಟನೆ ನಡೆದಿದೆ. ಗೃಹಿಣಿ ಲಿಖಿತ (24) ಮಗ ಧ್ರುವ (2) ನಾಪತ್ತೆಯಾದವರು.

    ನಾಪತ್ತೆಯಾಗೋದಕ್ಕೂ ಮೊದಲು ಲಿಖಿತ ತನ್ನ ತಾಯಿ ಪಂಕಜಾ ಅವರಿಗೆ ವೀಡಿಯೋ ಕಾಲ್ ಮಾಡಿ ಅದರಲ್ಲಿ, ತಾನು ನಾಪತ್ತೆ ಆಗುತ್ತಿರುವುದಾಗಿ ಹೇಳಿದ್ದಾರೆ. ಅಲ್ಲದೇ ಗಂಡ ಕಿರುಕುಳ ನೀಡುತ್ತಿರುವುದಾಗಿ ಕೂಡ ದೂರಿದ್ದಾರೆ.

    ಆ ಬಳಿಕ ಹೂಟಗಳ್ಳಿಯಲ್ಲಿರುವ ಗಂಡ ಮಂಜುನಾಥ್ ಮನೆಯಿಂದ ಲಿಖಿತ ಮಗುವಿನ ಸಮೇತ ನಾಪತ್ತೆಯಾಗಿದ್ದಾರೆ. ಈ ಬಗ್ಗೆ ವಿಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    https://www.youtube.com/watch?v=-CQL0kx4Nlc&feature=youtu.be