Tag: Topless

  • ಅರೆಬೆತ್ತಲೆಯಾಗಿ ಹೋಳಿ ಆಡಿದ ನಟಿ ಆಕಾಂಕ್ಷಾ ಪುರಿ

    ಅರೆಬೆತ್ತಲೆಯಾಗಿ ಹೋಳಿ ಆಡಿದ ನಟಿ ಆಕಾಂಕ್ಷಾ ಪುರಿ

    ಟಿ ಆಕಾಂಕ್ಷಾ ಪುರಿ ತಮ್ಮ ಇನ್ಸ್ಟಾದಲ್ಲಿ ಅರೆಬೆತ್ತಲೆಯ ಫೋಟೋ ಹಂಚಿಕೊಂಡಿದ್ದಾರೆ. ಟಾಪ್ ಲೆಸ್ (Topless) ಆಗಿ ಹೋಳಿ ಆಡಿರುವಂತಹ ಫೋಟೋ ಹಂಚಿಕೊಂಡು, ಹೋಳಿ ಹಬ್ಬದ ಶುಭಾಶಯಗಳನ್ನು ಕೋರಿದ್ದಾರೆ. ಈ ಫೋಟೋಗೆ ಪರ ಮತ್ತು ವಿರೋಧದ ಕಾಮೆಂಟ್ ಗಳು ಹರಿದು ಬಂದಿವೆ. ಸದಾ ವಿವಾದದ ಮೂಲಕವೇ ಸದ್ದು ಮಾಡುವ ನಟಿ ಈಕೆ.

    ಈ ಹಿಂದೆ ಹಿಂದಿ (Hindi)  ಓಟಿಟಿಯಲ್ಲಿ (OTT) ಪ್ರಸಾರವಾಗುತ್ತಿದ್ದ ಬಿಗ್ ಬಾಸ್ ಶೋನಲ್ಲಿ ನಟಿ ಆಕಾಂಕ್ಷಾ ಪುರಿ ಮತ್ತು ಮಾಡೆಲ್ ಜದ್ ಹದೀದ್ (Jad Hadid) ಲಿಪ್ ಲಾಕ್ ಮಾಡಿಕೊಂಡ ವಿಚಾರ ಭಾರೀ ಸದ್ದು ಮಾಡಿತ್ತು. ಮೂವತ್ತು ಸೆಕೆಂಡ್ ಗಳ ಕಾಲ ಇಬ್ಬರೂ ಲಿಪ್ ಲಾಕ್ (Lip Lock) ಮಾಡಿಕೊಂಡಿದ್ದರು. ಆ ವಿಡಿಯೋ ಕೂಡ ವೈರಲ್ ಆಗಿತ್ತು. ನಂತರ ಈ ವಿಚಾರವಾಗಿ ಸಲ್ಮಾನ್ ಖಾನ್ ಕೂಡ ಬೇಸರ ವ್ಯಕ್ತಪಡಿಸಿದ್ದರು. ಇದೊಂದು ಫ್ಯಾಮಿಲಿ ಶೋ ಎಲ್ಲೆ ಮೀರದಂತೆ ನಡೆದುಕೊಳ್ಳಿ ಎಂದು ಕಿವಿಮಾತು ಹೇಳಿದ್ದರು.

    ಲಿಪ್ ಲಾಕ್ ವಿಡಿಯೋ ವೈರಲ್ ಆದ ಬೆನ್ನಲ್ಲೇ ಬಿಗ್ ಬಾಸ್ (Bigg Boss)  ಮನೆಯಿಂದ ಆಕಾಂಕ್ಷಾ ಪುರಿ (Akanksha Puri) ಹೊರ ಬಂದಿದ್ದರು. ದೊಡ್ಮನೆಯಲ್ಲಿ ಚೆನ್ನಾಗಿ ಆಟ ಆಡದೇ ಇರುವ ಕಾರಣಕ್ಕಾಗಿ ಅವರನ್ನು ಎಲಿಮಿನೇಟ್ ಮಾಡಲಾಗಿತ್ತು. ಬಿಗ್ ಬಾಸ್ ಮನೆಯಿಂದ ಆಕಾಂಕ್ಷಾ ಆಚೆ ಬರುತ್ತಿದ್ದಂತೆಯೇ ಲಿಪ್ ಲಾಪ್ ಬಗ್ಗೆಯೇ ಮಾಧ್ಯಮಗಳು ಪ್ರಶ್ನೆ ಮಾಡಿದ್ದವು. ಅವತ್ತು ಬೋಲ್ಡ್ ಆಗಿಯೇ ಉತ್ತರ ಕೊಟ್ಟಿದ್ದರು ನಟಿ.

    ಮಾಧ್ಯಮಗಳೊಂದಿಗೆ ಮಾತನಾಡಿದ್ದ ಆಕಾಂಕ್ಷಾ, ‘ಲಿಪ್ ಲಾಕ್ ಮಾಡಿಕೊಂಡಿದ್ದಕ್ಕೆ ನನಗೆ ಯಾವುದೇ ಬೇಸರವಿಲ್ಲ. ಅದೊಂದು ಟಾಸ್ಕ್ ಆಗಿತ್ತು. ಅದನ್ನು ಟಾಸ್ಕ್ ಅಂದುಕೊಂಡೆ ನಾನು ಅದಕ್ಕೆ ಸಮ್ಮತಿಸಿದ್ದೆ ಮತ್ತು ಮಾಡಿದ್ದೆ. ಈ ಕುರಿತು ಯಾವುದೇ ಬೇಸರ ನನಗಿಲ್ಲ’ ಎಂದಿದ್ದು ಅಚ್ಚರಿ ಮೂಡಿಸಿದ್ದರು.

     

    ಲಿಪ್ ಲಾಕ್ ಮಾಡಬೇಕು ಎನ್ನುವುದು ಟಾಸ್ಕ್ ಅಲ್ಲದೇ ಇದ್ದರೂ, ಮನೆಯಲ್ಲಿದ್ದವರು ಪ್ರಚೋದಿಸಿದರು ಎನ್ನುವ ಕಾರಣಕ್ಕಾಗಿ ನಡೆದ ಘಟನೆ ಅದಾಗಿದ್ದರೂ ಆಕಾಂಕ್ಷಾ ಮಾತ್ರ ಅದೊಂದು ಟಾಸ್ಕ್ ಎಂದು ಸಮರ್ಥಿಸಿದ್ದರು. ಆ ಟಾಸ್ಕ್ ಅನ್ನು ನಾನು ಮಾಡಲೇಬೇಕಿತ್ತು ಎಂದು ಹೇಳಿಕೊಂಡಿದ್ದರು.

  • ಈ ನಟಿ ಮೈಮೇಲೆ ಬಟ್ಟೆ ನಿಲ್ಲೋದೇ ಇಲ್ವಂತೆ- ಫೋಟೋ ವೈರಲ್

    ಈ ನಟಿ ಮೈಮೇಲೆ ಬಟ್ಟೆ ನಿಲ್ಲೋದೇ ಇಲ್ವಂತೆ- ಫೋಟೋ ವೈರಲ್

    ಮುಂಬೈ: ಮೈ ಮೇಲೆ ಬಟ್ಟೆ ಧರಿಸದೆ ಫೋಟೋಗೆ ಪೋಸು ನೀಡುತ್ತಿರುವ ಬಾಲಿವುಡ್ ಟೀನಾ ದತ್ತಾ ಅವರ ಫೋಟೋ ವೈರಲ್ ಆಗಿದೆ.

    ನಟಿ ಟೀನಾ ದತ್ತಾ ಮತ್ತೊಮ್ಮೆ ಪಡ್ಡೆಗಳ ನಿದ್ದೆ ಕದ್ದಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಹಾಟ್ ಫೋಟೋ ಹಂಚಿಕೊಳ್ಳುವ ಮೂಲಕ ತನ್ನತ್ತ ಸೆಳೆಯವಂತೆ ಮಾಡಿದ್ದಾರೆ. ಇದನ್ನೂ ಓದಿ: ಸುಳ್ಳು ಸುದ್ದಿಗಳಿಗೆ ಬ್ರೇಕ್ ಹಾಕಿದ ನಟಿ ಪ್ರೇಮಾ

    ಹೊಸ ತಿಂಗಳು ಬದಲಾವಣೆಗೆ ಅರ್ಹವಾಗಿದೆ ಎಂದು ನಾವು ಭಾವಿಸಿದ್ದೇವೆ. ಇದು ಎಡಿಟ್ ಮಾಡಿದ ಚಿತ್ರವಾಗಿದೆ. ನಿಮ್ಮ ಚರ್ಮ ಸರಿಯಾಗಿದ್ದರೆ ನೀವು ಆರಾಮದಾಯಕವಾಗಿರುತ್ತೀರಿ ಎಂದು ಭಾವಿಸುತ್ತೇನೆ. ಇತರರು ನಿಮ್ಮ ಚರ್ಮದ ಬಗ್ಗೆ ಏನು ಯೋಚಿಸುತ್ತಾರೆ ಎಂಬ ಚಿಂತೆಯನ್ನು ತೆಗೆದುಹಾಕಿ ಎಂದು ನಟಿ ಬರೆದುಕೊಂಡು ಕೆಲವು  ಹಾಟ್ ಫೋಟೋವನ್ನು ಇನ್‍ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.

    ಉತ್ತರನ್ ಖ್ಯಾತಿಯ ನಟಿ ಟೀನಾ ಅವರು ನಟನೆ ಮಾತ್ರವಲ್ಲದೆ ಇದೀಗ ಮೈಮಾಟದಿಂದಳೂ ಯುವಕರ ನಿದ್ದೆ ಕೆಡಿಸುವ ಕೆಲಸ ಮಾಡಿದ್ದಾರೆ. ಸಾಕಷ್ಟು ಜನರು ಆಕೆಯ ಫೋಟೋಗೆ ಲೈಕ್ಸ್ ಮಾಡಿದ್ದಾರೆ. ಕಮೆಂಟ್ ಸೆಕ್ಷನ್ ಬ್ಲಾಕ್ ಮಾಡಿದ್ದರೂ ಸಾಮಾಜಿಕ ಜಾಲತಣದಲ್ಲಿ ಜನ ಕಮೆಂಟ್ ಮಾಡಿ ಈ ಫೋಟೋ ಅಪ್ಲೋಡ್ ಮಾಡುತ್ತಿದ್ದಾರೆ.

  • ಅರೆಬೆತ್ತಲಾಗಿ ಟ್ರೋಲ್ ಆದ ಕೊಹ್ಲಿ

    ಅರೆಬೆತ್ತಲಾಗಿ ಟ್ರೋಲ್ ಆದ ಕೊಹ್ಲಿ

    ನವದೆದೆಹಲಿ: ಭಾರತದ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಗುರವಾರ ಟ್ವಿಟ್ಟರ್‍ ನಲ್ಲಿ ತಮ್ಮ ಅರೆಬೆತ್ತಲಾಗಿ ಫೋಟೋವೊಂದನ್ನು ಹಾಕಿದ್ದಾರೆ.

    ಈ ಫೋಟೋವನ್ನು ಇಟ್ಟುಕೊಂಡು ಕೊಹ್ಲಿಯ ಕಾಲೆಳೆಯುತ್ತಿರುವ ನೆಟ್ಟಿಗರು ಸಂಚಾರಿ ನಿಯಮ ಪಾಲಿಸದೆ ಕೊಹ್ಲಿ ಅವರು ಈಗ ತಾನೇ ದಂಡ ಕಟ್ಟಿಬಂದು ಕುಳಿತಿದ್ದಾರೆ ಎಂದು ಕಾಮೆಂಟ್ ಮಾಡುವ ಮೂಲಕ ಟ್ರೋಲ್ ಮಾಡುತ್ತಿದ್ದಾರೆ.

    https://twitter.com/imVkohli/status/1169540309648166913

    ಮಂಗಳವಾರ ದೆಹಲಿಯಲ್ಲಿ ಹೆಲ್ಮೆಟ್ ಹಾಕದ ದಿನೇಶ್ ಮದನ್ ಎಂಬುವರಿಗೆ ಗುರುಗ್ರಾಮ ಸಂಚಾರಿ ಪೊಲೀಸರು ಬರೋಬ್ಬರಿ 23,000 ರೂ ದಂಡ ಹಾಕಿದ್ದರು. ಇದು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿತ್ತು. ಈಗ ಇದನ್ನೇ ಮುಂದೆ ಇಟ್ಟುಕೊಂಡು ಕೊಹ್ಲಿಯನ್ನು ಟ್ರೋಲ್ ಮಾಡಿರುವ ನೆಟ್ಟಿಗರು, ಕೊಹ್ಲಿ ಸಂಚಾರಿ ಪೊಲೀಸರಿಗೆ ಫೈನ್ ಕಟ್ಟಿ ಬಂದು ಈ ರೀತಿ ಕುಳಿತ್ತಿದ್ದಾರೆ ಎಂದು ಕಾಲೆಳೆದಿದ್ದಾರೆ.

    ತನ್ನ ಶರ್ಟ್ ಲೆಸ್ ಫೋಟೋವನ್ನು ಟ್ವಿಟ್ಟರ್‍ ನಲ್ಲಿ ಅಪ್ಲೋಡ್ ಮಾಡಿರುವ ವಿರಾಟ್ ಕೊಹ್ಲಿ, ನಾವು ಎಲ್ಲಿಯವರಿಗೆ ನಮ್ಮನ್ನು ನಾವು ನೋಡಿ ತಿಳಿದುಕೊಳ್ಳುವುದಿಲ್ಲವೋ ಅಲ್ಲಿಯ ತನಕ ನಾವು ಹೊರ ಪ್ರಪಂಚವನ್ನು ಅರಿಯಲು ಸಾಧ್ಯವಿಲ್ಲ ಎಂದು ಬರೆದು ಪೋಸ್ಟ್ ಮಾಡಿದ್ದಾರೆ.

    https://twitter.com/imVkohli/status/1169540309648166913

    ಇದಕ್ಕೆ ಕೆಲ ನೆಟ್ಟಿಗರು ಕಾಮೆಂಟ್ ಮಾಡಿದ್ದು, ಈ ಮೇಲಿನ ಮಾತುಗಳನ್ನು ಬಟ್ಟೆ ಹಾಕಿಕೊಂಡೇ ಹೇಳಬಹುದು. ಈ ಮಾತನ್ನು ಹೇಳಲು ಬಟ್ಟೆ ಬಿಚ್ಚಬೇಕಾ ಎಂದಿದ್ದಾರೆ. ಇನ್ನೂ ಕೆಲವರು ಅನುಷ್ಕಾ ಮತ್ತು ವಿರಾಟ್ ಫೋಟೋ ಕೊಲಾಜ್ ಮಾಡಿ ವ್ಯಂಗ್ಯವಾಗಿ ಕಾಮೆಂಟ್ ಮಾಡಿದ್ದಾರೆ. ಇನ್ನೂ ಕೆಲವರು ನೀವು ಕುಳಿತಿರುವ ಸ್ಥಳ ಯಾವುದೋ ಟ್ರಾಫಿಕ್ ಸಿಗ್ನಲ್ ರೀತಿಯಲ್ಲಿ ಇದೇ ಎಂದು ಹೇಳಿದ್ದಾರೆ.

    ಪ್ರಸ್ತುತ ವಿಂಡೀಸ್ ಪ್ರವಾಸದಲ್ಲಿರುವ ಕೊಹ್ಲಿ ಟೆಸ್ಟ್ ಸರಣಿಯನ್ನು ಕ್ಲೀನ್ ಸ್ವೀಪ್ ಮಾಡುವುದರ ಜತೆಗೆ ಭಾರತ ಅತ್ಯಂತ ಯಶಸ್ವಿ ಟೆಸ್ಟ್ ನಾಯಕ ಎನ್ನುವ ದಾಖಲೆ ಬರೆದಿದ್ದಾರೆ. ಇದರ ಜೊತೆಗೆ ವೆಸ್ಟ್ ಇಂಡೀಸ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದ ಎರಡನೇ ಇನಿಂಗ್ಸ್‍ನಲ್ಲಿ ಶೂನ್ಯಕ್ಕೆ ಔಟ್ ಆಗುವ ಮೂಲಕ ಟೆಸ್ಟ್ ಶ್ರೇಯಾಂಕದಲ್ಲಿ ಎರಡನೇ ಸ್ಥಾನಕ್ಕೆ ಜಾರಿದ್ದಾರೆ. ಭರ್ಜರಿ ಫಾಮ್‍ನಲ್ಲಿರುವ ಆಸ್ಟ್ರೇಲಿಯಾ ಕ್ರಿಕೆಟಿಗ ಸ್ಟೀವ್ ಸ್ಮಿತ್ ಮೊದಲ ಸ್ಥಾನಕ್ಕೇರಿದ್ದಾರೆ.

    https://twitter.com/erbmjha/status/1169545581636702208

  • ಕಲ್ಲಂಗಡಿ ಹಣ್ಣಿನಂತೆ ಹುಡುಗಿಯರ ಎದೆ: ಪ್ರೊಫೆಸರ್ ವಿರುದ್ಧ ಯುವತಿಯರಿಂದ ಟಾಪ್‍ಲೆಸ್ ಪ್ರತಿಭಟನೆ

    ಕಲ್ಲಂಗಡಿ ಹಣ್ಣಿನಂತೆ ಹುಡುಗಿಯರ ಎದೆ: ಪ್ರೊಫೆಸರ್ ವಿರುದ್ಧ ಯುವತಿಯರಿಂದ ಟಾಪ್‍ಲೆಸ್ ಪ್ರತಿಭಟನೆ

    ತಿರುವನಂತಪುರಂ: ಕಾಲೇಜಿನಲ್ಲಿ ಪ್ರೊಫೆಸರ್ ಒಬ್ಬರು ಮಹಿಳೆಯರ ಸ್ತನವನ್ನು ಕಲ್ಲಂಗಡಿಗೆ ಹೊಲಿಸಿದ್ದಕ್ಕೆ ಯುವತಿಯರು ಫೇಸ್‍ಬುಕ್‍ನಲ್ಲಿ ಟಾಪ್‍ಲೆಸ್ ಪ್ರತಿಭಟನೆ ಮಾಡಿದ್ದಾರೆ.

    ಕ್ಯಾಲಿಕಟ್‍ನಲ್ಲಿರುವ ಫಾರೂಕ್ ಕಾಲೇಜಿನ ಅಸಿಸ್ಟೆಂಟ್ ಪ್ರೊಫೆಸರ್ ಭಾಷಣ ಮಾಡುವಾಗ ಕಾಲೇಜಿನ ಯುವತಿಯರ ಸ್ತನ ಕಲ್ಲಂಗಡಿ ಹಣ್ಣಿನ ರೀತಿ ಇರುತ್ತದೆ ಎಂದು ಹೇಳಿದ್ದರು.

    ಪ್ರೊಫೆಸರ್ ಭಾಷಣದಲ್ಲಿ, “ನಾನು ಒಬ್ಬ ಶಿಕ್ಷಕನಾಗಿದ್ದು, ನನ್ನ ಕಾಲೇಜಿನಲ್ಲಿ 80% ವಿದ್ಯಾರ್ಥಿಗಳು ಯುವತಿಯರೇ. ಅದರಲ್ಲಿ ಮುಸ್ಲಿಂ ವಿದ್ಯಾರ್ಥಿನಿಯರು ಜಾಸ್ತಿ. ಇವರು ಸಂಪ್ರದಾಯಕ್ಕೆ ತಕ್ಕಂತೆ ಉಡುಪು ಧರಿಸುತ್ತಿಲ್ಲ. ಅವರು ತಮ್ಮ ಸ್ತನವನ್ನು ಹಿಜಾಬ್ ನಲ್ಲಿ ಸರಿಯಾಗಿ ಮುಚ್ಚಿಕೊಳ್ಳುವುದಿಲ್ಲ. ಇದು ತುಂಡರಿಸಿದ ಕಲ್ಲಂಗಡಿ ಹಣ್ಣನ್ನು ಪ್ರದರ್ಶನಕ್ಕೆ ಇಟ್ಟಂತೆ ಕಾಣುತ್ತದೆ” ಎಂದು ಹೇಳಿದ್ದರು.

    ಇದ್ದರಿಂದ ರೊಚ್ಚಿಗೆದ್ದ ಯುವತಿಯರು ಪ್ರೊಫೆಸರ್ ವಿರುದ್ಧ ಫೇಸ್‍ಬುಕ್‍ನಲ್ಲಿ ಟಾಪ್‍ಲೆಸ್ ಪ್ರತಿಭಟನೆ ಮಾಡುತ್ತಿದ್ದಾರೆ. ವಿಷ್ಣು ಎಂಬವರು ತನ್ನ ಗೆಳತಿ ಆರತಿ ಎಸ್‍ಎ ಅವರ ಟಾಪ್‍ಲೆಸ್ ಫೋಟೋವನ್ನು ಫೇಸ್‍ಬುಕ್‍ನಲ್ಲಿ ಶೇರ್ ಮಾಡಿದ್ದಾರೆ. ಇದಾದ ನಂತರ ತಿರುವನಂತಪುರಂ ಮೂಲದ ದಿಯಾ ಸನಾ ಎಂಬವವರು ಕೂಡ ತನ್ನ ಸ್ತನವನ್ನು ಕಲ್ಲಂಗಡಿ ಹಣ್ಣನಿಂದ ಮುಚ್ಚಿಕೊಂಡಿರುವ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ. ಸದ್ಯ ಈ ಎರಡೂ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ಈ ರೀತಿಯ ಫೋಟೋವನ್ನು ಶೇರ್ ಮಾಡಿದ ವ್ಯಕ್ತಿಗಳ ಖಾತೆಯನ್ನು ಫೇಸ್‍ಬುಕ್ ಬ್ಲಾಕ್ ಮಾಡಿದೆ ಎಂದು ವರದಿಯಾಗಿದೆ.