Tag: Tong

  • ಕಾಲೆಳೆದವರು ಕಾಲ್ ಶೀಟ್ ಕೇಳ್ತಿದ್ದಾರೆ: ಮಾತಿನಲ್ಲೇ ತಿವಿದ ಚಿಕ್ಕಣ್ಣ

    ಕಾಲೆಳೆದವರು ಕಾಲ್ ಶೀಟ್ ಕೇಳ್ತಿದ್ದಾರೆ: ಮಾತಿನಲ್ಲೇ ತಿವಿದ ಚಿಕ್ಕಣ್ಣ

    ಸ್ಮಿತಾ ಉಮಾಪತಿ ನಿರ್ಮಿಸಿರುವ, ಅನಿಲ್ ಕುಮಾರ್ ನಿರ್ದೇಶಿಸಿರುವ ಹಾಗೂ ನಟ ಚಿಕ್ಕಣ್ಣ (Chikkanna) ಮೊದಲ ಬಾರಿಗೆ ನಾಯಕನಾಗಿ ನಟಿಸಿರುವ  ‘ಉಪಾಧ್ಯಕ್ಷ’ (Upadyaksha) ಚಿತ್ರ ರಾಜ್ಯಾದ್ಯಂತ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಚಿತ್ರದ ಯಶಸ್ಸಿಗೆ ಕಾರಣ ರಾಜ್ಯಾದ್ಯಂತ ಪ್ರೇಕ್ಷಕರು ತೋರಿಸುತ್ತಿರುವ ಒಲವು. ಆ ಒಲವಿಗೆ ಧನ್ಯವಾದ ಹೇಳಲು ಚಿತ್ರತಂಡ ಸಕ್ಸಸ್ ಮೀಟ್ ಆಯೋಜಿಸಿತ್ತು.

    ಈ ಚಿತ್ರ ಆರಂಭವಾಗಿದ್ದು ಚಿಕ್ಕಣ್ಣ ಅವರ ಮನೆಯಿಂದ. ಅಲ್ಲೇ ನಿರ್ಮಾಪಕ ಉಮಾಪತಿ ಅವರು ಕಥೆ ಕೇಳಿದ್ದು. ಸ್ಕ್ರಿಪ್ಟ್ ಟೈಮ್ ನಲ್ಲಿ ಸಾಕಷ್ಟು ಜನ ನನಗೆ ಸಹಕಾರ ನೀಡಿದ್ದಾರೆ. ಜನರಿಗೆ ನಮ್ಮ ಸಿನಿಮಾ ಇಷ್ಟವಾಗಿದೆ. ಕುಟುಂಬ ಸಮೇತ ಬಂದು ನೋಡುತ್ತಿದ್ದಾರೆ. ಬಹಳ ಸಂತೋಷವಾಗಿದೆ ಎಂದರು ನಿರ್ದೇಶಕ ಅನಿಲ್ ಕುಮಾರ್.

    ಉಮಾಪತಿ ಫಿಲಂಸ್ ಲಾಂಛನದಲ್ಲಿ ಹೆಬ್ಬುಲಿ, ರಾಬರ್ಟ್, ಮದಗಜ ಚಿತ್ರಗಳನ್ನು ನಿರ್ಮಿಸಿದ್ದೇವೆ. ಡಿ.ಎನ್ ಪಿಕ್ಚರ್ಸ್ ಮೂಲಕ ನನ್ನ ಪತ್ನಿ ಸ್ಮಿತಾ ಉಮಾಪತಿ ಈ ಹಿಂದೆ ಒಂದಲ್ಲಾ ಎರಡಲ್ಲಾ ರಾಷ್ಟ್ರಪ್ರಶಸ್ತಿ ವಿಜೇತ ಚಿತ್ರ ನಿರ್ಮಿಸಿದ್ದರು. ಈಗ ಈ ಚಿತ್ರ ನಿರ್ಮಾಣ ಮಾಡಿದ್ದಾರೆ. ಅಂದುಕೊಂಡದಕ್ಕಿಂತ ಹೆಚ್ಚಿನ ಯಶಸ್ಸು ಸಿಕ್ಕಿದೆ. ಈ ಯಶಸ್ಸು ನನ್ನ ತಂಡದ್ದು. ಮುಖ್ಯವಾಗಿ ಚಿಕ್ಕಣ್ಣ ಅವರದು. ಬಿಡಗಡೆಗೂ ಮುನ್ನ ಚಿಕ್ಕಣ್ಣ ತುಂಬಾ ಒತ್ತಡದಲ್ಲಿದ್ದರು. ಈ ಗೆಲುವು ಅವರಿಗೆ ಬೇಕಿತ್ತು. ಇನ್ನು ರಾಜ್ಯಾದ್ಯಂತ ನಮ್ಮ ಚಿತ್ರ ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿದೆ. ಎರಡನೇ ವಾರದಲ್ಲಿ ಚಿತ್ರಮಂದಿರಗಳ ಸಂಖ್ಯೆ ಹೆಚ್ಚಾಗಿದೆ ಎಂದು ಉಮಾಪತಿ ಶ್ರೀನಿವಾಸಗೌಡ ತಿಳಿಸಿದರು. ನಿರ್ಮಾಪಕಿ‌ ಸ್ಮಿತಾ ಉಮಾಪತಿ ಎಲ್ಲರಿಗೂ ಧನ್ಯವಾದ ತಿಳಿಸಿದರು.

    ನಾನು ನಾಯಕನಾಗುತ್ತಿದ್ದೇನೆ ಎಂದಾಗ ಕಾಲೆಳೆದವರೆ ಜಾಸ್ತಿ ಎಂದು ಮಾತನಾಡಿದ ನಾಯಕ ಚಿಕ್ಕಣ್ಣ, ಕಾಲೆಳೆದವರೆ ಈಗ ಕಾಲ್ ಶೀಟ್ ಕೇಳುತ್ತಿದ್ದಾರೆ. ಕರ್ನಾಟಕದ ಜನ ನಮ್ಮ ಸಿನಿಮಾವನ್ನು ಗೆಲ್ಲಿಸಿದ್ದಾರೆ. ಅವರಿಗೆ ಇಲ್ಲಿಂದಲೇ ಶರಣು. ಇನ್ನು ನನ್ನ ನಂಬಿ ದುಡ್ಡು ಹಾಕಿರುವ ನಿರ್ಮಾಪಕರಿಗೆ, ಒಳ್ಳೆಯ ಚಿತ್ರಕೊಟ್ಟ ನಿರ್ದೇಶಕರಿಗೆ ಹಾಗೂ ಇಡೀ ತಂಡಕ್ಕೆ ನನ್ನ ಧನ್ಯವಾದ. ಇನ್ನು ನಾನು ನಾಯಕನಾಗಿ ನಟಿಸುತ್ತಿರುವ ಮೊದಲ ಚಿತ್ರಕ್ಕೆ ನನಗೆ ಶಿವರಾಜಕುಮಾರ್, ದರ್ಶನ್, ಸುದೀಪ್, ಯಶ್, ಧ್ರುವ ಸರ್ಜಾ, ಪ್ರಜ್ವಲ್ ದೇವರಾಜ್, ಅಭಿಷೇಕ್ ಅಂಬರೀಶ್, ಧನ್ವೀರ್, ಸೂರ್ಯ ಸೇರಿದಂತೆ ಸಾಕಷ್ಟು ನಾಯಕರು ಪ್ರೋತ್ಸಾಹ ನೀಡಿದ್ದಾರೆ ಅವರಿಗೆಲ್ಲಾ ವಿಶೇಷ ಧನ್ಯವಾದ ಎಂದರು.  ಸಹಾಯ ನೀಡಿದವರನ್ನು ನೆನೆಯಲು ಹೆಸರಿನ ಪಟ್ಟಿಯನ್ನೇ ಸಿದ್ದ ಮಾಡಿಕೊಂಡು ಬಂದಿದ್ದ ಚಿಕ್ಕಣ್ಣ ಪ್ರತಿಯೊಬ್ಬರಿಗೂ ಕೃತಜ್ಞತೆ ತಿಳಿಸಿದರು.

    ಚಿತ್ರ ಆರಂಭವಾದಾಗ ನಾನು ಕೆಲವು ಮಾತುಗಳನ್ನು ಕೇಳಿದ್ದೆ. ಈ ಗೆಲುವು ಅದನೆಲ್ಲಾ ಮರೆಸಿದೆ. ಆಡಿದವರಿಗೆ ತಕ್ಕ ಉತ್ತರ ಸಿಕ್ಕಿದೆ. ಯಶಸ್ಸಿಗೆ ಕಾರಣರಾದ ಪ್ರತಿಯೊಬ್ಬರಿಗೂ ಧನ್ಯವಾದ ಎಂದರು ನಾಯಕಿ ಮಲೈಕ.‌ ನಟ ಧರ್ಮಣ್ಣ ಸಹ ಚಿತ್ರದ ಕುರಿತು ಮಾತನಾಡಿದರು.

  • ಮಾಜಿ ಫ್ರೆಂಡ್ ಗೆ ನಟನೆ ಬರಲ್ಲ: ವಿವಾದದ ಕಿಡಿ ಹೊತ್ತಿಸಿದ ಕಂಗನಾ ರಣಾವತ್

    ಮಾಜಿ ಫ್ರೆಂಡ್ ಗೆ ನಟನೆ ಬರಲ್ಲ: ವಿವಾದದ ಕಿಡಿ ಹೊತ್ತಿಸಿದ ಕಂಗನಾ ರಣಾವತ್

    ಬಾಲಿವುಡ್ ಹೆಸರಾಂತ ನಟ ಹೃತಿಕ್ ರೋಷನ್ (Hrithik Roshan) ಮತ್ತು ನಟಿ ಕಂಗನಾ ರಣಾವತ್ (Kangana Ranaut) ಡೇಟಿಂಗ್ ವಿಚಾರ ಗುಟ್ಟಾಗೇನೂ ಉಳಿದಿರಲಿಲ್ಲ. ಇಬ್ಬರೂ ಪರಸ್ಪರ ಅರ್ಥ ಮಾಡಿಕೊಂಡು ಡೇಟಿಂಗ್ ಮಾಡುತ್ತಿದ್ದಾರೆ ಎಂಬೆಲ್ಲ ಸುದ್ದಿ ಬಿಟೌನ್ ನಲ್ಲಿ ಕೇಳಿ ಬಂದಿತ್ತು. ಇಬ್ಬರೂ ಹೊಸ ಬದುಕು ಕಟ್ಟಿಕೊಳ್ಳಲಿದ್ದಾರೆ ಎನ್ನುವಲ್ಲಿಗೆ ಅವರ ಫ್ರೆಂಡ್ ಶಿಪ್ ವಿಸ್ತರಿಸಿತ್ತು. ಆದರೆ, ಈ ಜೋಡಿ ಅದನ್ನು ಮುಂದುವರೆಸಲಿಲ್ಲ. ಬ್ರೇಕ್ ಅಪ್ ಎಂದು ಹೇಳುವ ಮೂಲಕ ದೂರ ದೂರವಾದರು.

    ಇಬ್ಬರೂ ದೂರವಾದ ನಂತರ ಕಂಗನಾ ಸುಮ್ಮನೆ ಕೂರಲಿಲ್ಲ. ಹೃತಿಕ್ ಬಗ್ಗೆ ಪರೋಕ್ಷ ಮತ್ತು ಪ್ರತ್ಯೆಕ್ಷವಾಗಿಯೇ ಹಲವು ಆರೋಪಗಳನ್ನು ಮಾಡಿದರು. ಹೃತಿಕ್ ಬಗ್ಗೆ ಸಲ್ಲದ ಮಾತುಗಳನ್ನೂ ಆಡಿದರು. ಹೀಗಾಗಿ ಫ್ರೆಂಡ್ ಶಿಪ್ ಶಾಶ್ವತವಾಗಿ ಮುರಿದು ಬಿತ್ತು. ಹಲವು ದಿನಗಳ ನಂತರ ಮತ್ತೆ ಹೃತಿಕ್ ಬಗ್ಗೆ ಕಂಗನಾ ಮಾತನಾಡಿದ್ದಾರೆ. ಅಭಿಮಾನಿಯೊಬ್ಬ ಕೇಳಿದ ಪ್ರಶ್ನೆಗೆ ಅವರು ಟಾಂಗ್ ನೀಡುವಂತೆ ಉತ್ತರಿಸಿದ್ದಾರೆ. ಇದನ್ನೂ ಓದಿ: 150 ಕೋಟಿ ಮೌಲ್ಯದ ಹೊಸ ಮನೆಯನ್ನು ಪೋಷಕರಿಗೆ ಗಿಫ್ಟ್ ನೀಡಿದ ಧನುಷ್

    ಸಾಮಾಜಿಕ ಜಾಲತಾಣದಲ್ಲಿ ಆಗಾಗ್ಗೆ ಅಭಿಮಾನಿಗಳ ಜೊತೆ ಸಂವಾದಿಸುತ್ತಲೇ ಇರುತ್ತಾರೆ ಕಂಗನಾ. ಅಭಿಮಾನಿಗಳು ಕೇಳಿದ ಪ್ರಶ್ನೆಗೆ ತಮ್ಮದೇ ಆದ ರೀತಿಯಲ್ಲಿ ಅವರು ಉತ್ತರಿಸುತ್ತಾರೆ. ಈ ಬಾರಿ ಅಭಿಮಾನಿಯೊಬ್ಬ ಕೇಳಿದ್ದ ಪ್ರಶ್ನೆಗೆ ವಿಚಿತ್ರ ಹಾಗೂ ವಿವಾದ (Controversy) ಎನ್ನುವ ರೀತಿಯಲ್ಲಿ ಅವರು ಉತ್ತರಿಸಿದ್ದಾರೆ. ಈ ಉತ್ತರ ಹೃತಿಕ್ ಅಭಿಮಾನಿಗಳನ್ನು ಕೆಣಕಿದೆ.

    ಅಭಿಮಾನಿಯೊಬ್ಬರು ‘ನಿಮಗೆ ಹೃತಿಕ್ ರೋಷನ್ ಮತ್ತು ದಿಲ್ಜಿತ್ ದೋಸಾಂಜ್ ಇವರಿಬ್ಬರಲ್ಲಿ ಯಾರು ಇಷ್ಟ, ಯಾರು ಉತ್ತಮ ನಟ’ ಎಂದು ಪ್ರಶ್ನೆ ಮಾಡಿದ್ದಾರೆ. ಅದಕ್ಕೆ ವಿಭಿನ್ನವಾದ ರೀತಿಯಲ್ಲಿ ಉತ್ತರಿಸಿರುವ ಕಂಗನಾ, ‘ಒಬ್ಬರೇ ಕೇವಲ ಆ್ಯಕ್ಷನ್ ಮಾಡ್ತಾರೆ, ಮತ್ತೊಬ್ಬರು ವಿಡಿಯೋ ಸಾಂಗ್ ನಲ್ಲೇ ಕಳೆದು ಹೋಗಿದ್ದಾರೆ. ಇವರಲ್ಲಿ ಒಬ್ಬರನ್ನು ನಾನು ನಟಿಸಿದ್ದೇನೆ ನೋಡಿಲ್ಲ. ನೀವು ನೋಡಿದ್ದರೆ ತಿಳಿಸಿ’ ಎಂದು ಪರೋಕ್ಷವಾಗಿ ಹೃತಿಕ್ ಗೆ ಟಾಂಗ್ ಕೊಟ್ಟಿದ್ದಾರೆ ಕಂಗನಾ.

    LIVE TV
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಸೋನಿಯಾ ಗಾಂಧಿ ಬಗ್ಗೆ ಟ್ವೀಟ್‌ ಮಾಡಿ ಕುತೂಹಲ ಮೂಡಿಸಿದ ಮೋಹಕ ತಾರೆ ರಮ್ಯಾ

    ಸೋನಿಯಾ ಗಾಂಧಿ ಬಗ್ಗೆ ಟ್ವೀಟ್‌ ಮಾಡಿ ಕುತೂಹಲ ಮೂಡಿಸಿದ ಮೋಹಕ ತಾರೆ ರಮ್ಯಾ

    ಸ್ಯಾಂಡಲ್ ವುಡ್ ಕ್ವೀನ್ ಎಂದೇ ಖ್ಯಾತರಾಗಿರುವ ರಮ್ಯಾ (Ramya,) ನಡೆ ಕ್ಷಣ ಕ್ಷಣಕ್ಕೂ ಕುತೂಹಲ ಮೂಡಿಸುತ್ತಿದೆ. ಸಿನಿಮಾದಿಂದ (Cinema) ರಾಜಕೀಯಕ್ಕೆ ಹೋಗಿ, ರಾಜಕೀಯದಿಂದ ಮತ್ತೆ ಸಿನಿಮಾ ರಂಗಕ್ಕೆ ಬಂದಿರುವ ರಮ್ಯಾ, ಇತ್ತೀಚಿನ ದಿನಗಳಲ್ಲಿ ಪಾಲಿಟಿಕ್ಸ್ ನಿಂದ ದೂರವೇ ಸರಿದಿದ್ದರು. ಅವರ ಸೋಷಿಯಲ್ ಮೀಡಿಯಾ ಖಾತೆಗಳಲ್ಲಿ ಕೇವಲ ಸಿನಿಮಾ ಸುದ್ದಿಗಳು ಮಾತ್ರ ಕಾಣುತ್ತಿದ್ದವು. ಇದೀಗ ಮತ್ತೆ ರಾಜಕೀಯ ನಡೆ ಕುರಿತು ರಮ್ಯಾ ಟ್ವೀಟ್ ಮಾಡುತ್ತಿದ್ದಾರೆ.

    ಮಂಡ್ಯದಲ್ಲಿ ರಮ್ಯಾ ಸೋತ ನಂತರ ರಾಜಕೀಯ ಕ್ಷೇತ್ರದಿಂದ ಒಂದೊಂದೆ ಹೆಜ್ಜೆಯನ್ನು ಹಿಂದಿಡುತ್ತಾ ಬಂದರು. ಅದರಲ್ಲೂ ಇತ್ತೀಚಿನ ತಿಂಗಳಲ್ಲಿ ಅವರು ಯಾವತ್ತೂ ರಾಜಕೀಯ ಮಾತನಾಡಲಿಲ್ಲ. ಮತ್ತೆ ಸಿನಿಮಾ ರಂಗಕ್ಕೆ ಬರುವ ಸುಳಿವು ಕೊಟ್ಟ ತಕ್ಷಣವೇ, ಸಿನಿಮಾ ರಂಗದ ಸಾಕಷ್ಟು ಚಟುವಟಿಕೆಗಳಲ್ಲಿ ಅವರು ಭಾಗಿಯಾದರು. ನಿರ್ಮಾಣ ಸಂಸ್ಥೆ ತೆರೆದು, ಸಿನಿಮಾದಲ್ಲೂ ನಟಿಸುವ ಕುರಿತು ಮಾತನಾಡಿದರು. ಈಗ ಮತ್ತೆ ರಾಜಕೀಯದತ್ತ ಮುಖ ಮಾಡುವಂತೆ ಕಾಣುತ್ತಿದೆ. ಇದನ್ನೂ ಓದಿ:ದೇಶ-ವಿದೇಶದಲ್ಲಿ ಮಾರ್ದನಿಸ್ತಿರೋ ಗಗ್ಗರ ಶಬ್ಧ- ಅಮೆರಿಕಾದಲ್ಲಿ ಎಂಟೂವರೆ ಕೋಟಿ ಬಾಚಿದ ಕಾಂತಾರ

    ರಾಜ್ ಬಿ ಶೆಟ್ಟಿ ಸಿನಿಮಾದಲ್ಲಿ ರಮ್ಯಾ ನಾಯಕಿಯಾಗಿ ನಟಿಸಲಿದ್ದಾರೆ ಎಂದು ಹೇಳಲಾಗಿತ್ತು. ಆದರೆ ಈ ಸಿನಿಮಾಗೆ ಬೇರೊಬ್ಬ ನಾಯಕಿ ಬಂದಾಗಿದೆ. ರಮ್ಯಾ ಕೇವಲ ನಿರ್ಮಾಪಕಿಯಾಗಿ ಮಾತ್ರ ಉಳಿದುಕೊಂಡಿದ್ದಾರೆ. ಈ ಸಿನಿಮಾದಲ್ಲಿ ನಟಿಸದೇ ಇರುವುದಕ್ಕೆ ಕಾರಣ, ಮತ್ತೆ ರಾಜಕಾರಣದಲ್ಲಿ ರಮ್ಯಾ ಸಕ್ರಿಯರಾಗಲಿದ್ದಾರೆ ಎನ್ನಲಾಗುತ್ತಿದೆ.

    ಮೊನ್ನೆಯಷ್ಟೇ ರಾಹುಲ್ ಗಾಂಧಿ (Rahul Gandhi) ಜೊತೆ ಭಾರತ್ ಜೋಡೋ (Bharat Jodo) ಯಾತ್ರೆಯಲ್ಲಿ ರಮ್ಯಾ ಪಾಲ್ಗೊಂಡು ಅಚ್ಚರಿ ಮೂಡಿಸಿದ್ದರು. ಇದೀಗ ಸೋನಿಯಾ ಗಾಂಧಿ (Sonia Gandhi) ಪರ ಬ್ಯಾಟ್ ಬೀಸುವಂತಹ ಟ್ವೀಟ್‌ವೊಂದನ್ನು ರಮ್ಯಾ ಮಾಡಿದ್ದಾರೆ. ಸೋನಿಯಾ ಗಾಂಧಿ ಅವರು ಇಟಲಿಯವರೇ ಆಗಿರಬಹುದು. ಆದರೆ ಸಾಕಷ್ಟು ಭಾರತೀಯರಿಗಿಂತ ಇವರು ನೈಜ ಭಾರತೀಯರಾಗಿದ್ದಾರೆ. ಅದು ಸತ್ಯ’ ಎಂದು ವಿರೋಧಿಗಳಿಗೆ ಟಾಂಗ್ ಕೊಟ್ಟಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಬಿಗ್ ಬಾಸ್ ಮನೆಯಲ್ಲಿ ರೂಪೇಶ್ ರಾಜಣ್ಣ ಮೇಲೆ ಪ್ರಶಾಂತ್ ಸಂಬರ್ಗಿ ವಾಗ್ದಾಳಿ

    ಬಿಗ್ ಬಾಸ್ ಮನೆಯಲ್ಲಿ ರೂಪೇಶ್ ರಾಜಣ್ಣ ಮೇಲೆ ಪ್ರಶಾಂತ್ ಸಂಬರ್ಗಿ ವಾಗ್ದಾಳಿ

    ದೊಡ್ಮನೆಗೆ ಎಂಟ್ರಿ ಕೊಟ್ಟ ದಿನದಿಂದ ರೂಪೇಶ್ ರಾಜಣ್ಣ (Rupesh Rajanna) ಮತ್ತು ಪ್ರಶಾಂತ್ ಸಂಬರ್ಗಿಗೂ ಮಾತಿನ ಜಟಾಪಟಿ ನಡೆಯುತ್ತಲೇ ಇದೆ. ಇತ್ತೀಚೆಗೆ ಕನ್ನಡದ ವಿಷ್ಯವಾಗಿ ಇಬ್ಬರ ನಡುವೆ ವಾಗ್ದಾಳಿ ನಡೆದಿತ್ತು. ಈಗ ಮತ್ತೆ ಬಿಗ್ ಬಾಸ್ ಮನೆಯಲ್ಲಿ ಇಬ್ಬರ ನಡುವೆ ಕಿತ್ತಾಟ ನಡೆದಿದೆ.

    ಬಿಗ್ ಬಾಸ್ (Bigg Boss Season 9) ಮನೆಯಲ್ಲಿ ಸಾಕಷ್ಟು ವಿಷ್ಯವಾಗಿ ಸಂಬರ್ಗಿ, ರೂಪೇಶ್ ರಾಜಣ್ಣ ಹೈಲೆಟ್ ಆಗಿದ್ದಾರೆ.  ಆಗಾಗ ಇಬ್ಬರ ಮಾತಿನ ವಾಗ್ದಾಳಿ ತಾರಕಕ್ಕೆ ಏರುತ್ತಿದೆ. ಇದೀಗ ಮತ್ತೆ ಅದೇ ರೀತಿಯ ಘಟನೆವೊಂದು‌ ನಡೆದಿದೆ. ವಾರದ ಕ್ಯಾಪ್ಟೆನ್ಸಿ ವಿಷ್ಯವಾಗಿ ಬಿಗ್ ಬಾಸ್ ಮನೆಯಲ್ಲಿ ನಿಧಿ ಶೋಧ ಟಾಸ್ಕ್ ನೀಡಲಾಗಿದೆ. ಬಜರ್ ಆದಾಗ ಟಾರ್ಚ್ ಹಿಡಿದುಕೊಂಡು ನಿಧಿ ಶೋಧಕ್ಕೆ ಹೋಗಬೇಕು. ನಂತರ ಚಿನ್ನಕ್ಕಾಗಿ ಡೀಲಿಂಗ್ ಕೂಡ ಮಾಡಬೇಕು. ಈ ಸಂದರ್ಭದಲ್ಲಿ ಪ್ರಶಾಂತ್ ಸಂಬರ್ಗಿ ಅವರಿಂದ ಮೋಸ ಆಗಿದೆ ಎಂದು ಆರೋಪಿಸಿದರು ರೂಪೇಶ್ ರಾಜಣ್ಣ. ಈ ವಿಚಾರಕ್ಕೆ ಕಿತ್ತಾಟ ನಡೆದೇ ಇತ್ತು.

    ನಿಮ್ಮ ರೀತಿ ಚಿಲ್ರೆ ಆಟ ಆಡಲ್ಲ. ಬಾಯಿಂದ ಮಾತುಗಳು ಬರ್ತಿವೆ, ಹೇಗೋ ತಡ್ಕೊಂಡಿದೀನಿ. ನಾನು ಏನಿದ್ದರೂ ನೇರವಾಗಿ ಡೀಲ್ ಮಾಡ್ತೀನಿ. ನಿಮ್ಮ ರೀತಿ ಹೇಡಿ ರೀತಿ ಮಾಡಲ್ಲ. ಮೊದಲ ದಿನ ನಿಮಗೆ ಕುತಂತ್ರಿ ಎಂದು ಹೇಳಿದ್ದಾರೆ. ಅದು ಸರಿಯಾಗಿಯೇ ಇದೆ’ ಎಂದರು ರೂಪೇಶ್ ರಾಜಣ್ಣ. ಇದಕ್ಕೆ ಪ್ರಶಾಂತ್ ಸಂಬರ್ಗಿ (Prashant Sambargi) ಟೀಕೆ ಮಾಡಿದರು. ಯಾರ ವಂಶ ಕುತಂತ್ರಿ ಅಂತ ಗೊತ್ತು’ ಎಂದು ಪ್ರಶಾಂತ್ ಹೇಳಿದರು. ಇದಕ್ಕೆ ರೂಪೇಶ್ ಸಿಟ್ಟಾದರು. ಇದನ್ನೂ ಓದಿ:ತಮಿಳು ಬಿಗ್ ಬಾಸ್‌ಗೆ ಕಾಲಿಟ್ಟ ಕನ್ನಡತಿ ರಚಿತಾ ಮಹಾಲಕ್ಷ್ಮಿ

    ಇಷ್ಟಕ್ಕೆ ನಿಲ್ಲದ ಇವರ ಜಟಾಪಟಿ, ಆಯ್ತು ರಾಜಹುಲಿ ಅವರೇ ಬಿಡಿ ಎಂದಿದ್ದಾರೆ ಸಂಬರ್ಗಿ, ಅದಕ್ಕೆ ಪ್ರತಿಯುತ್ತರವಾಗಿ ನೀವು ಇಲಿ ನಾ ಎಂದು ಸಂಬರ್ಗಿಗೆ ರೂಪೇಶ್ ರಾಜಣ್ಣ ಟಾಂಗ್ (Tong) ಕೊಟ್ಟಿದ್ದಾರೆ. ಮಾಸ್ಟರ್ ಮೈಂಡ್ ಸಂಬರ್ಗಿ ಆಟಕ್ಕೆ ಮನೆಮಂದಿ ಕೂಡ ಗಪ್ ಚುಪ್ ಆಗಿದ್ದಾರೆ.

    Live Tv
    [brid partner=56869869 player=32851 video=960834 autoplay=true]