Tag: tometo

  • ಗಗನಕ್ಕೆ ಏರಿದ ತರಕಾರಿ ಬೆಲೆ- 1ಕೆ.ಜಿ ಟೊಮೆಟೊಗೆ 500ರೂ, ನಿಂಬೆಹಣ್ಣಿಗೆ ಕೆ.ಜಿಗೆ 400 ರೂ.

    ಗಗನಕ್ಕೆ ಏರಿದ ತರಕಾರಿ ಬೆಲೆ- 1ಕೆ.ಜಿ ಟೊಮೆಟೊಗೆ 500ರೂ, ನಿಂಬೆಹಣ್ಣಿಗೆ ಕೆ.ಜಿಗೆ 400 ರೂ.

    ಇಸ್ಲಾಮಾಬಾದ್: ಪಾಕಿಸ್ತಾನದಲ್ಲಿ ಭಾರೀ ಮಳೆಯಿಂದಾಗಿ ತರಕಾರಿ ಬೆಲೆಗಳು ಗಗನಕ್ಕೆರಿದ್ದು, ಟೊಮೆಟೊ 1 ಕೆ.ಜಿಗೆ 500ರೂ. ಆಗಿದೆ.

    ಪಾಕಿಸ್ತಾನದಲ್ಲಿ ರಾಷ್ಟ್ರವ್ಯಾಪಿ ಭಾರೀ ಮಳೆಯಿಂದಾಗಿ ಪ್ರವಾಹ ಉಂಟಾಗಿದೆ. ಈ ಹಿನ್ನೆಲೆಯಲ್ಲಿ ಬೆಳೆಗಳಿಗೂ ಹಾನಿಯಾಗಿ ತರಕಾರಿ ಬೆಲೆಗಳೆಲ್ಲವೂ ಗಗನಕ್ಕೆರಿವೆ. ಟೊಮೆಟೊ ಬೆಲೆ 1 ಕೆಜಿಗೆ 500 ರೂ. ಆಗಿದ್ದರೆ, ಈರುಳ್ಳಿ ಕೆಜಿಗೆ 300 ರೂ., ನಿಂಬೆಹಣ್ಣು ಕೆ.ಜಿಗೆ 400 ರೂ.ಗೆ ಮಾರಾಟವಾಗುತ್ತಿದೆ.

    ಟೊಮೆಟೊ ಬೆಲೆಯು ಪ್ರತಿ ಕೆಜಿಗೆ 80 ರೂ. ಇತ್ತು. ಇದೀಗ ಆ ಬೆಲೆಗಿಂತ ಕನಿಷ್ಠ 6 ಪಟ್ಟು ಏರಿಕೆಯಾಗಿದೆ. ಆದರೆ ಈರುಳ್ಳಿ ಕೆ.ಜಿಗೆ ಅಧಿಕೃತ ದರ 61 ರೂ. ಇತ್ತು. ಅದಕ್ಕಿಂತ 5 ಪಟ್ಟು ಅಧಿಕವಾಗಿ ಮಾರಾಟವಾಗುತ್ತಿದೆ.

    ಈ ಮೂರು ತರಕಾರಿಗಳ ಜೊತೆಗೆ ಶುಂಠಿ, ಬೆಳ್ಳುಳ್ಳಿ ಬೆಲೆಯೂ ಏರಿಕೆಯಾಗಿದೆ. ಈ ಬಗ್ಗೆ ಖರೀದಾರರೊಬ್ಬರು ಮಾತನಾಡಿದ್ದು, ಈಗ ಬಡವರು ಟೊಮೆಟೊವನ್ನು ನೋಡಬಹುದು, ಆದರೆ ಖರೀದಿಸಲು ಸಾಧ್ಯವಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಮನೆಯಲ್ಲಿ ಸಾಮೂಹಿಕ ನಮಾಜ್ – 26 ಮಂದಿಯ ವಿರುದ್ಧ ಪ್ರಕರಣ ದಾಖಲು

    ಪಾಕಿಸ್ತಾನದಲ್ಲಿ ಸತತವಾಗಿ ಬರುತ್ತಿರುವ ಮಳೆಯಿಂದಾಗಿ ಎಕ್ಕಾ ನದಿಗಳು ಉಕ್ಕಿ ಹರಿಯುತ್ತಿದೆ. ಇದರಿಂದಾಗಿ ಪ್ರವಾಹದ ಪರಿಸ್ಥಿತಿ ಉಂಟಾಗಿದ್ದು, 5.5 ಶತಕೋಟಿ ಡಾಲರ್‌ಗಿಂತಲೂ ಅಧಿಕ ಮೌಲ್ಯದಲ್ಲಿ ಹಾನಿಯಾಗಿವೆ. ಇದನ್ನೂ ಓದಿ: ನಮಗೂ ಈದ್ಗಾ ಮೈದಾನದಲ್ಲಿ ಪ್ರಾರ್ಥನೆ ಸಲ್ಲಿಸಲು ಅನುಮತಿ ನೀಡಿ: ಕ್ರೈಸ್ತ ಸಮುದಾಯ

    Live Tv
    [brid partner=56869869 player=32851 video=960834 autoplay=true]

  • ಚರ್ಮದ ಆರೋಗ್ಯಕ್ಕಾಗಿ ಈ ಆಹಾರವನ್ನು ಸೇವಿಸಿ

    ಚರ್ಮದ ಆರೋಗ್ಯಕ್ಕಾಗಿ ಈ ಆಹಾರವನ್ನು ಸೇವಿಸಿ

    ಇಂದಿನ ಮಾಲಿನ್ಯ, ಆಹಾರ ಸೇವೆನೆಯಲ್ಲಿ ವ್ಯತ್ಯಾಸಗಳು ಉಂಟಾಗಿ ಚಿಕ್ಕ ವಯಸ್ಸಿನಲ್ಲೇ ಅನೇಕ ಮಂದಿಯ ಚರ್ಮವು ಸುಕ್ಕುಗಟ್ಟಿ ವಯಸ್ಸಾದ ರೀತಿಯಲ್ಲಿ ಕಾಣುತ್ತದೆ. ಅದನ್ನು ಹೋಗಲಾಡಿಸಲು ಪ್ರತಿನಿತ್ಯ ಒಂದಿಷ್ಟು ಆರೋಗ್ಯಕರ ಆಹಾರವನ್ನು ಸೇವಿಸಿ.

    * ಸೂರ್ಯನ ಶಾಖದ ತಡೆಗೆ ಟೋಮೆಟೋ ಸೇವಿಸಿ
    ಟೋಮೆಟೋಗಳನ್ನು ಸಲಾಡ್ ಮಾಡಿಕೊಂಡು ತಿನ್ನುವುದರಿಂದ ನಿಮ್ಮ ದೇಹವನ್ನು ಆರೋಗ್ಯಕರವಾಗಿಡಲು ಹೆಚ್ಚು ಸಹಕಾರಿಯಾಗಿದೆ. ಟೊಮೆಟೋದಲ್ಲಿ ಹೆಚ್ಚು ಪೋಷಕಾಂಶಗಳಿವೆ. ಇದರಿಂದ ನಿಮ್ಮ ಚರ್ಮ ಹಾನಿಗೊಳಾಗುವುದನ್ನು ತಪ್ಪಿಸಲು ಸಹಾಯ ಮಾಡುತ್ತದೆ. ಆಲಿವ್ ಎಣ್ಣೆಯಲ್ಲಿ ಬೇಯಿಸಿದ 2 ಟೋಮೆಟೋವನ್ನು ದಿನನಿತ್ಯ ಸೇವಿಸುವುದರಿಂದ ಸೂರ್ಯನ ಶಾಖದಿಂದ ನಿಮ್ಮ ಚರ್ಮವನ್ನು ರಕ್ಷಿಸಲು ಸಹಾಯ ಮಾಡುತ್ತದೆ.

    * ಮೀನು ಸೇವನೆಯಿಂದ ಚರ್ಮ, ಕೂದಲು, ಕಣ್ಣಿಗೆ ಹೆಚ್ಚು ಉಪಯುಕ್ತ
    ಮೀನುಗಳನ್ನು ಸೇವನೆಯಿಂದ ಕೂದಲು, ಚರ್ಮ ಮತ್ತು ಕಣ್ಣುಗಳ ಆರೋಗ್ಯ ಹೆಚ್ಚುತ್ತದೆ. ಇದು ಕೊಬ್ಬಿನಾಮ್ಲಗಳ ಸಮೃದ್ಧ ಮೂಲವಾಗಿದೆ. ಇದರಿಂದ ಚರ್ಮಕ್ಕೆ ಸಂಬಂಧಿಸಿದ ರೋಗಗಳನ್ನು ಹೋಗಲಾಡಿಸಲು ಇದು ಸಹಾಯಕವಾಗಿದೆ. ಪೊಷಕಾಂಶಭರಿತ ಮೀನಿನ ಸೇವನೆಯಿಂದ ಚರ್ಮದ ಹೊಳಪನ್ನು ಸುಧಾರಿಸಲು ಸಹಾಯ ಮಾಡುವ ಕಾಲಜನ್ ಮತ್ತು ಎಲಾಸ್ಟಿನ್ ರಚನೆಗೆ ಸಹಾಯಕವಾಗಿದೆ. ಇದನ್ನೂ ಓದಿ: ಚಳಿಗಾಲದಲ್ಲಿ ಈ ತರಕಾರಿ ಸೇವಿಸಿ ಆರೋಗ್ಯ ಕಾಪಾಡಿಕೊಳ್ಳಿ

    * ಸುಕ್ಕುಗಟ್ಟಿದ ಚರ್ಮಕ್ಕೆ ಆಲಿವ್ ಎಣ್ಣೆ
    ಆಲಿವ್ ಎಣ್ಣೆಂಯಲ್ಲಿ ಕೊಬ್ಬಿನಾಮ್ಲಗಳ ಹೆಚ್ಚಿರುತ್ತವೆ. ಈ ಎಣ್ಣೆಯಲ್ಲಿ ಆಹಾರವನ್ನು ಬೇಯಿಸಿ ತಿನ್ನುವುದರಿಂದ ಸುಕ್ಕು ಕಟ್ಟಿದ ಚರ್ಮ ಸೇರಿದಂತೆ ವಯಸ್ಸಾದ ಲಕ್ಷಣವನ್ನು ಕಡಿಮೆ ಮಾಡುತ್ತದೆ. ಜೊತೆಗೆ ಸೂರ್ಯ ಕಿರಣದಿಂದ ಉಂಟಾದ ಹಾನಿಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಉತ್ಕರ್ಷಣ ನಿರೋಧಕಗಳು ಆಕ್ಸಿಡೇಟಿವ್ ಒತ್ತಡವನ್ನು ಬಿಡುಗಡೆ ಮಾಡಲು ಸಹಾಯ ಮಾಡುತ್ತದೆ. ಇದನ್ನೂ ಓದಿ: ಖರ್ಜೂರ ತಿಂದು ಆರೋಗ್ಯವಾಗಿರಿ – ಪ್ರತಿದಿನ ಒಂದೊಂದು ತಿಂದರೂ ನೀವು ಗಟ್ಟಿಯಾಗ್ತೀರಿ

    * ಮೇಧುಮೇಹಿಗಳಿಗೆ ಒಣ ದ್ರಾಕ್ಷಿ ಉತ್ತಮ ಮನೆಮದ್ದು
    ಪ್ರತಿನಿತ್ಯ ಒಣದ್ರಾಕ್ಷಿ ಸೇವಿಸುವುದರಿಂದ ಮಧುಮೇಹ ರೋಗಿಗಳಲ್ಲಿ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಉತ್ತಮ ಮಟ್ಟದಲ್ಲಿ ನಿರ್ವಹಣೆ ಮಾಡುತ್ತದೆ. ಜೊತೆಗೆ ಸದೃಢ ಮೂಳೆ ಆರೋಗ್ಯಕ್ಕೂ ಸಹಕಾರಿಯಾಗಿದೆ. ಪೊಟ್ಯಾಷಿಯಂ, ಬೋರಾನ್ ಮತ್ತು ವಿಟಮಿನ್ ಕೆಗಳು ಒಣ ದ್ರಾಕ್ಷಿಯಲ್ಲಿ ಸದೃಢವಾಗಿದೆ. ದಿನಕ್ಕೆ ಐದರಿಂದ ಆರು ಒಣದ್ರಾಕ್ಷಿಗಳನ್ನು ಸೇವಿಸುವುದರಿಂದ ನಿಮ್ಮ ಮೂಳೆಗಳನ್ನು ಬಲಪಡಿಸಬಹುದು.

  • ಟೊಮೆಟೋ ದೋಸೆ ಮಾಡುವುದು ಹೇಗೆ ಗೊತ್ತಾ?

    ಟೊಮೆಟೋ ದೋಸೆ ಮಾಡುವುದು ಹೇಗೆ ಗೊತ್ತಾ?

    ದೋಸೆ ಎಲ್ಲರಿಗೂ ಇಷ್ಟ. ದೋಸೆಯಲ್ಲಿಯೇ ಹಲವಾರು ವಿಧಗಳನ್ನು ಮಾಡಲಾಗುತ್ತದೆ. ಪುದೀನಾ ದೋಸೆ, ಸೆಟ್ ದೋಸೆ, ಈರುಳ್ಳಿ ದೋಸೆ, ಖಾಲಿ ದೋಸೆ, ಗ್ರೀನ್ ಪೀಸ್ ದೋಸೆ ಹೀಗೆ ಇದರ ಪಟ್ಟಿ ಬೆಳೆಯುತ್ತದೆ. ಇವುಗಳಲ್ಲಿಯೇ ವಿಶೇಷವಾದದ್ದು ಟೊಮೆಟೋ ದೋಸೆಯಾಗಿದೆ.

    ಬೇಕಾಗುವ ಸಾಮಗ್ರಿಗಳು:
    * ಟೊಮೆಟೋ-2
    * ಕೆಂಪು ಮೆಣಸು-4
    * ಶುಂಠಿ- ಸ್ವಲ್ಪ
    * ರವೆ- ಅರ್ಧ ಕಪ್
    * ಗೋಧಿ ಹಿಟ್ಟು- ಸರ್ಧ ಕಪ್
    * ಈರುಳ್ಳಿ- 1
    * ದನಿಯಾ- ಸ್ವಲ್ಪ
    * ಜೀರಿಗೆ- 1ಚಮಚ
    * ರುಚಿಗೆ ತಕ್ಕಷ್ಟು ಉಪ್ಪು
    * ಅಡುಗೆ ಎಣ್ಣೆ- ಅರ್ಧ ಕಪ್

    ಮಾಡುವ ವಿಧಾನ:
    * ಮೊದಲು ಮಿಕ್ಸರ್ ನಲ್ಲಿ ಟೊಮೆಟೋ, ಕೆಂಪು ಮೆಣಸಿನಕಾಯಿ ಶುಂಠಿಯನ್ನು ನೀರನ್ನು ಸೇರಿಸದೇ ರುಬ್ಬಿಕೊಳ್ಳಿ.

    * ಈಗ 4 ಕಪ್ ರವಾ, 4 ಕಪ್ ಅಕ್ಕಿ ಹಿಟ್ಟು ಮತ್ತು ¼ ಕಪ್ ಗೋಧಿ ಹಿಟ್ಟು ಸೇರಿಸಿ ಮಿಶ್ರಣ ಮಾಡಿ.

    * ನಂತರ 2 ಮಿಶ್ರಣಗಳನ್ನು ಒಂದು ಪಾತ್ರೆಗೆ ಹಾಕಿ ಈರುಳ್ಳಿ, ದನಿಯಾ ಪುಡಿ, ಜೀರಿಗೆ, ಉಪ್ಪು ಹಾಗೂ ಅಗತ್ಯವಿದ್ದಷ್ಟು ನೀರನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಬೇಕು. ಇದನ್ನೂ ಓದಿ: ಚಳಿಗೆ ಬಿಸಿ ಬಿಸಿಯಾದ ಇಡ್ಲಿ ಮಂಚೂರಿ ಸಖತ್ ಟೇಸ್ಟ್

    * ಈಗ ದೋಸೆ ಕಾವಲಿಯನ್ನು ಬಿಸಿಮಾಡಲು ಇಟ್ಟು ಅಡುಗೆ ಎಣ್ಣೆಯನ್ನು ಹಚ್ಚಿ, ದೋಸೆ ಹಾಕಿದರೆ ರುಚಿಯಾದ ಟೊಮೆಟೋ ದೋಸೆ ಸವಿಯಲು ಸಿದ್ಧವಾಗುತ್ತದೆ. ಇದನ್ನೂ ಓದಿ:  ಕುಚ್ಚಲಕ್ಕಿ ದೋಸೆ ಸಖತ್ ಟೇಸ್ಟ್ – ನೀವೂ ಒಮ್ಮೆ ಟ್ರೈ ಮಾಡಿ