Tag: Tomb

  • ಪುರೋಹಿತರ ಮಾತಿಗೆ ಮರುಳಾಗಿ ಸಮಾಧಿಯಾಗಿದ್ದವನ ರಕ್ಷಿಸಿದ ಪೊಲೀಸರು

    ಪುರೋಹಿತರ ಮಾತಿಗೆ ಮರುಳಾಗಿ ಸಮಾಧಿಯಾಗಿದ್ದವನ ರಕ್ಷಿಸಿದ ಪೊಲೀಸರು

    ಲಕ್ನೋ: ನವರಾತ್ರಿ ಹಬ್ಬ ಆರಂಭವಾಗುವ ಮುನ್ನ ಸಮಾಧಿ ತೋಡಿಕೊಂಡರೆ ಜ್ಞಾನೋದಯವಾಗುತ್ತದೆ ಎಂದು ಪುರೋಹಿತರೊಬ್ಬರು ಹೇಳಿದರು ಎಂಬ ಕಾರಣಕ್ಕೆ ಆರು ಅಡಿ ಆಳದಲ್ಲಿ ಹೂತಿದ್ದ ವ್ಯಕ್ತಿಯನ್ನು ಉತ್ತರಪ್ರದೇಶ ಪೊಲೀಸರು ರಕ್ಷಿಸಿದ್ದಾರೆ.

    ಲಕ್ನೋದಿಂದ 45 ಕಿ.ಮೀ ದೂರದಲ್ಲಿರುವ ಉನ್ನಾವೋ ಜಿಲ್ಲೆಯ ತಾಜ್‍ಪುರ ಗ್ರಾಮದ ಮೂವರು ಪುರೋಹಿತರು ಹಣ ಗಳಿಸುವ ದುರುದ್ದೇಶದಿಂದ ಯುವಕನೊಬ್ಬನಿಗೆ ಐಕ್ಯವಾಗುವಂತೆ ತಿಳಿಸಿದ್ದಾರೆ. ಈ ವಿಚಾರ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿದ ಪೊಲೀಸರು ಯುವಕನನ್ನು ಸಮಾಧಿಯಿಂದ ಹೊರ ಕರೆತಂದಿದ್ದಾರೆ. ವೀಡಿಯೋದಲ್ಲಿ ವ್ಯಕ್ತಿಯನ್ನು ಸಮಾಧಿ ಮಾಡಿರುವ ಮಣ್ಣು ಮತ್ತು ಬಿದಿರಿನ ಹೊದಿಕೆಯನ್ನು ತೆಗೆದುಹಾಕುವುದನ್ನು ಕಾಣಬಹುದಾಗಿದೆ.

    ಹಿಂದೂಗಳು ಆಚರಿಸುವ ಅದ್ದೂರಿ ಹಬ್ಬಗಳಲ್ಲಿ ನವರಾತ್ರಿ ಹಬ್ಬ ಕೂಡ ಒಂದು. ಈ ಹಬ್ಬದ ಸಮಯದಲ್ಲಿ ಹಣ ಗಳಿಸುವ ದುರಾಸೆಯಿಂದ ಈ ರೀತಿಯ ಸಂಚುಗಳನ್ನು ರೂಪಿಸಲಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಇದೀಗ ಸಮಾಧಿಯಾಗಿದ್ದ ಯುವಕ ಸೇರಿದಂತೆ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ.  ಇದನ್ನೂ ಓದಿ: ಜಪಾನ್ ಮಾಜಿ ಪ್ರಧಾನಿ ಶಿಂಜೋ ಅಬೆ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದ ಪ್ರಧಾನಿ ಮೋದಿ

    POLICE JEEP

    ಆರು ಅಡಿ ಆಳದ ಹೊಂಡದಲ್ಲಿ ಸಮಾಧಿಯಾಗಿದ್ದ ಅಸಿವಾನ್ ಪೊಲೀಸ್ ಠಾಣೆ ವ್ಯಾಪ್ತಿಯ ತಾಜ್‍ಪುರ ಗ್ರಾಮದ ನಿವಾಸಿ ಶುಭಂ ಗೋಸ್ವಾಮಿಯನ್ನು ಇದೀಗ ಪೊಲೀಸರು ಹೊರ ಕರೆತಂದಿದ್ದಾರೆ. ಗೋಸ್ವಾಮಿ ಅವರ ತಂದೆ ವಿನೀತ್ ಗೋಸ್ವಾಮಿ ಕೂಡ ಈ ಕೃತ್ಯದಲ್ಲಿ ಪಾಲುದಾರರಾಗಿದ್ದಾರೆ. ಇದನ್ನೂ ಓದಿ : ರಾಜ್ಯದಲ್ಲಿ ಧಾರ್ಮಿಕ ಗುರುಗಳು, ಉಲೇಮಾಗಳು ದಾಳಿ ಬಗ್ಗೆ ಅಪಸ್ವರ ಎತ್ತಿಲ್ಲ: ಖಾದರ್

    ಸುಮಾರು ಐದು ವರ್ಷಗಳಿಂದ ಗ್ರಾಮದ ಹೊರಗಿದ್ದ ಗುಡಿಸಲಿನಲ್ಲಿ ಶುಭಂ ಗೋಸ್ವಾಮಿ ವಾಸವಾಗಿದ್ದ. ನಂತರ ಪುರೋಹಿತರೊಂದಿಗೆ ಸಂಪರ್ಕ ಬೆಳೆದ ಬಳಿಕ ತಮ್ಮನ್ನು ಧಾರ್ಮಿಕ ಆಚರಣೆಗಳಲ್ಲಿ ತೊಡಗಿಸಿಕೊಳ್ಳಲು ಪ್ರಾರಂಭಿಸಿದರು. ಆದರೆ ಶುಭಂ ಗೋಸ್ವಾಮಿ ನಂಬಿಕೆಯನ್ನೇ ಬಂಡವಾಳವಾಗಿಸಿಕೊಂಡು ಪುರೋಹಿತರಾದ ಮುನ್ನಾಲಾಲ್ ಮತ್ತು ಶಿವಕೇಶ್ ದೀಕ್ಷಿತ್ ಹಣ ಗಳಿಸಲು ಪ್ರಯತ್ನಿಸಿದರು. ಹೀಗಾಗಿ ಭೂ ಸಮಾಧಿ ಮಾಡಿಕೊಳ್ಳುವಂತೆ ತಿಳಿಸಿದರು.

    ಹೀಗಾಗಿ ಭಾನುವಾರ ಸಂಜೆ 6 ಅಡಿ ಸಮಾಧಿಗೆ ಶುಭಂ ಗೋಸ್ವಾಮಿ ಪ್ರವೇಶಿಸಿದರು. ಈ ವಿಚಾರ ತಿಳಿಯುತ್ತಿದ್ದಂತೆ ಗ್ರಾಮದ ಜನ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಇದರಿಂದ ಗಾಬರಿಗೊಂಡ ಪೊಲೀಸರು ಸ್ಥಳಕ್ಕೆ ಆಗಮಿಸಿ ಸಮಾಧಿಯಿಂದ ವ್ಯಕ್ತಿಯನ್ನು ಹೊರ ಕರೆ ತಂದಿದ್ದಾರೆ. ನಂತರ ಈ ವಿಚಾರವಾಗಿ ಯುವಕನನ್ನು ವಿಚಾರಣೆ ನಡೆಸಿದ ಬಳಿಕ ಆರ್ಚಕರ ಕೃತ್ಯ ಬೆಳಕಿಗೆ ಬಂದಿದೆ.

    Live Tv
    [brid partner=56869869 player=32851 video=960834 autoplay=true]

  • ಅಪ್ಪು ಸದಾ ನಮ್ಮ ಹೃದಯದಲ್ಲಿ ನಗುತ್ತಿರುತ್ತಾರೆ – ಪುನೀತ್ ನೆನೆದು ಬಿಕ್ಕಿ, ಬಿಕ್ಕಿ ಅತ್ತ ಸೂರ್ಯ

    ಅಪ್ಪು ಸದಾ ನಮ್ಮ ಹೃದಯದಲ್ಲಿ ನಗುತ್ತಿರುತ್ತಾರೆ – ಪುನೀತ್ ನೆನೆದು ಬಿಕ್ಕಿ, ಬಿಕ್ಕಿ ಅತ್ತ ಸೂರ್ಯ

    ಬೆಂಗಳೂರು: ಕಾಲಿವುಡ್ ಖ್ಯಾತ ನಟ ಸೂರ್ಯ ಅವರು ಇಂದು ಅಪ್ಪು ಸಮಾಧಿಗೆ ಭೇಟಿ ನೀಡಿ ನಮನ ಸಲ್ಲಿಸಿದರು.

    surya

    ಬೆಂಗಳೂರಿನ ಕಂಠೀರವ ಸ್ಟುಡಿಯೋಗೆ ಭೇಟಿ ಕೊಟ್ಟ ತಮಿಳಿನ ನಟ ಸೂರ್ಯ ಆತ್ಮೀಯ ಗೆಳೆಯ ಪುನೀತ್ ಜೊತೆಗೆ ಕಳೆದ ಸಿಹಿ ಕ್ಷಣಗಳನ್ನು ನೆನಪಿಸಿಕೊಂಡು ಸಮಾಧಿ ಎದುರು ನಿಂತು ಬಿಕ್ಕಿಬಿಕ್ಕಿ ಕಣ್ಣೀರು ಹಾಕಿದರು.

    ಇದೇ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಇದು ಬಹಳ ಅನ್ಯಾಯ. ಈ ರೀತಿ ಆಗಬಾರದಿತ್ತು. ಏನು ಜರುಗಿದೆ ಅದನ್ನು ಈಗಲೂ ಒಪ್ಪಿಕೊಳ್ಳಲು ಸಾಧ್ಯವಾಗುತ್ತಿಲ್ಲ. ನಮ್ಮ ಹಾಗೂ ಡಾ. ರಾಜ್ ಕುಮಾರ್ ಅವರ ಕುಟುಂಬ ಬಹಳ ಆತ್ಮೀಯತೆ ಮತ್ತು ಉತ್ತಮ ಬಾಂಧವ್ಯ ಹೊಂದಿದ್ದೇವೆ. ಅಪ್ಪ ಅವರ ಫ್ಯಾಮಿಲಿ ಜೊತೆ ಕಳೆದಂತಹ ಬಹಳಷ್ಟು ಸಮಯಗಳು ಸದಾ ನೆನಪಾಗುತ್ತಿರುತ್ತದೆ. ನನಗೆ 4 ತಿಂಗಳು ಆಗಿದ್ದಾಗ ಅಪ್ಪುಗೆ 7 ತಿಂಗಳಾಗಿತ್ತು ಎಂದು ಅಮ್ಮ ಹೇಳುತ್ತಿದ್ದ ಮಾತು ನನಗೆ ಈಗಲೂ ಕೂಡ ನೆನಪಿನಲ್ಲಿದೆ. ಅಪ್ಪ, ಅಮ್ಮನ ಯಾವುದೇ ಫೋಟೋ ಅಥವಾ ವೀಡಿಯೋ ನೋಡಿದರೂ ಇಬ್ಬರು ಸದಾ ನಗುತ್ತಲೇ ಇರುವುದನ್ನೇ ಕಾಣುತ್ತೇವೆ.  ಇದನ್ನೂ ಓದಿ: ನನಗೆ ಅರ್ಥ ಮಾಡಿಕೊಳ್ಳಲು, ಈ ಸತ್ಯವನ್ನ ಅರಗಿಸಿಕೊಳ್ಳಲು ಆಗ್ತಿಲ್ಲ: ರಾಮ್ ಚರಣ್ ತೇಜಾ

    ಸಮಾಜಕ್ಕೆ ಪುನೀತ್ ಅದ್ಭುತವಾದಂತಹ ಕೆಲಸಗಳನ್ನೇ ಮಾಡಿದ್ದಾರೆ. ಯಾರು ಪುನೀತ್‍ರನ್ನು ನಿಜವಾಗಿಯೂ ಪ್ರೀತಿಸುತ್ತಾರೆ ಅವರ ನೆನಪುಗಳನ್ನು ಸದಾ ಮನದಲ್ಲಿಟ್ಟುಕೊಂಡಿರುತ್ತಾರೆ. ಅಪ್ಪು ಯಾವಾಗಲೂ ನಮ್ಮ ಹೃದಯದಲ್ಲಿ ನಗುತ್ತಲೇ ಇರುತ್ತಾರೆ. ನಾನು ಪುನೀತ್‍ರನ್ನು ಬಹಳ ಮಿಸ್ ಮಾಡಿಕೊಳ್ಳುತ್ತೇನೆ. ದೇವರು ಅವರ ಪತ್ನಿ, ಮಕ್ಕಳು ಮತ್ತು ಕುಟುಂಬಕ್ಕೆ ದುಃಖವನ್ನು ಸಹಿಸಿಕೊಳ್ಳುವ ಶಕ್ತಿ ನೀಡಲಿ. ಪುನೀತ್ ಆತ್ಮಕ್ಕೆ ಶಾಂತಿ ಸಿಗಲಿ ಅಂತ ಪ್ರಾರ್ಥಿಸುತ್ತೇನೆ ಎಂದು ಭಾವುಕರಾಗಿ ಹೇಳಿದರು. ಇದೇ ವೇಳೆ ಸೂರ್ಯ ಅವರಿಗೆ ಶಿವರಾಜ್ ಕುಮಾರ್  ಸಾಥ್ ನೀಡಿದರು. ಇದನ್ನೂ ಓದಿ: ಪುನೀತ್ ಭೇಟಿಯಾಗುವ ಸೌಭಾಗ್ಯ ನನಗೆ ಸಿಕ್ಕಿಲ್ಲ: ವಿಜಯ್ ಸೇತುಪತಿ

  • ಪುನೀತ್ ಭೇಟಿಯಾಗುವ ಸೌಭಾಗ್ಯ ನನಗೆ ಸಿಕ್ಕಿಲ್ಲ: ವಿಜಯ್ ಸೇತುಪತಿ

    ಪುನೀತ್ ಭೇಟಿಯಾಗುವ ಸೌಭಾಗ್ಯ ನನಗೆ ಸಿಕ್ಕಿಲ್ಲ: ವಿಜಯ್ ಸೇತುಪತಿ

    ಬೆಂಗಳೂರು: ಸ್ಯಾಂಡಲ್‍ವುಡ್ ನಟ ದಿವಂಗತ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಸಮಾಧಿಗೆ ಕಾಲಿವುಡ್ ಸ್ಟಾರ್ ನಟ ವಿಜಯ್ ಸೇತುಪತಿ ನಮನ ಸಲ್ಲಿಸಿದರು.

    ಪುನೀತ್ ರಾಜ್‍ಕುಮಾರ್ ಅಗಲಿ ಇಂದಿಗೆ 7 ದಿನಕಳೆದಿದ್ದು, ಬುಧವಾರ ತಮಿಳಿನ ಖ್ಯಾತ ನಟ ವಿಜಯ್ ಸೇತುಪತಿ ಬೆಂಗಳೂರಿನ ಕಂಠೀರವ ಸ್ಟೇಡಿಯಂಗೆ ಭೇಟಿ ನೀಡಿ ಪುನೀತ್ ಸಮಾಧಿ ದರ್ಶನ ಪಡೆದರು. ಇದೇ ವೇಳೆ ಪುನೀತ್ ಸಾವಿನ ಬಗ್ಗೆ ನೋವು ತೋಡಿಕೊಂಡರು. ಇದನ್ನೂ ಓದಿ: ಶಿರವಾಳ ಗ್ರಾಮದ ವೃತ್ತಕ್ಕೆ ಪುನೀತ್ ಹೆಸರು ನಾಮಕರಣ

    ಪುನೀತ್ ರಾಜ್‍ಕುಮಾರ್ ಫ್ಯಾನ್ ನಾನು. ಅವರನ್ನು ಇದುವರೆಗೆ ಭೇಟಿ ಆಗಿಲ್ಲ. ಆ ಸೌಭಾಗ್ಯ ನನಗೆ ಸಿಕ್ಕಿಲ್ಲ. ಆದರೆ ನನ್ನ ಸಿನಿಮಾ ನೋಡಿ ಒಂದು ಸಲ ಫೋನ್ ಮಾಡಿದ್ದರು. ಆಗ ಬಹಳ ಪ್ರೀತಿಯಿಂದ ಮಾತಾಡಿದರು. ಅವರಿಲ್ಲ ಎನ್ನುವುದನ್ನು ಅರಗಿಸಿಕೊಳ್ಳೋಕೆ ಆಗುತ್ತಿಲ್ಲ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಸಂತಾಪ ಸೂಚಿಸಿದರು. ಇದನ್ನೂ ಓದಿ: ನನಗೆ ಅರ್ಥ ಮಾಡಿಕೊಳ್ಳಲು, ಈ ಸತ್ಯವನ್ನ ಅರಗಿಸಿಕೊಳ್ಳಲು ಆಗ್ತಿಲ್ಲ: ರಾಮ್ ಚರಣ್ ತೇಜಾ

    ಬುಧವಾರ ಟಾಲಿವುಡ್ ನಟ ರಾಮ್‍ಚರಣ್ ತೇಜ ಅವರು ಶಿವರಾಜ್ ಕುಮಾರ್ ಅವರ ಮನೆಗೆ ಭೇಟಿ ನೀಡಿ ಸಾಂತ್ವಾನ ಹೇಳಿದರು. ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನನಗೆ ತುಂಬಾ ದುಃಖವಾಗುತ್ತಿದೆ. ನನಗೆ ಅರ್ಥ ಮಾಡಿಕೊಳ್ಳಲು ಆಗುತ್ತಿಲ್ಲ, ಈ ಸತ್ಯವನ್ನ ಅರಗಿಸಿಕೊಳ್ಳಲು ಆಗುತ್ತಿಲ್ಲ. ಯಾರಿಗೆ ಏನಾದರೂ ಆದರೆ ನಮಗೆ ಅರ್ಥವಾಗುತ್ತೆ. ಆದರೆ ಪುನೀತ್ ಅವರಿಗೆ ಈ ರೀತಿಯಾಗಿದ್ದು, ನನಗೆ ನಿಜವಾಗಿಯೂ ತುಂಬಾ ದುಃಖ ತಂದಿದೆ ಎಂದು ಸಂತಾಪ ಸೂಚಿಸಿದರು.

  • ನಾದಿನಿಯ ಮೇಲೆ ಅತ್ಯಾಚಾರಕ್ಕೆ ಯತ್ನ- ಪತಿಯನ್ನೇ ಕೊಂದ ತುಂಬು ಗರ್ಭಿಣಿ

    ನಾದಿನಿಯ ಮೇಲೆ ಅತ್ಯಾಚಾರಕ್ಕೆ ಯತ್ನ- ಪತಿಯನ್ನೇ ಕೊಂದ ತುಂಬು ಗರ್ಭಿಣಿ

    – ಮೃತದೇಹವನ್ನ ಹಗ್ಗದಿಂದ ಕಟ್ಟಿ ಎಳೆದ್ಕೊಂಡು ಹೋದ್ಲು
    – ಮನೆ ಹಿಂದೆ ಸಮಾಧಿ ಮಾಡಿ, ಪೊಲೀಸರಿಗೆ ಶರಣು

    ಜೈಪುರ: ತನ್ನ ಸಹೋದರಿಯನ್ನ ಅತ್ಯಾಚಾರ ಮಾಡಲು ಯತ್ನಿಸಿದ ಪತಿಯನ್ನು ತುಂಬು ಗರ್ಭಿಣಿಯೊಬ್ಬಳು ಭೀಕರವಾಗಿ ಕೊಲೆ ಮಾಡಿರುವ ಘಟನೆ ರಾಜಸ್ಥಾನದ ಸಿಕಾರ್ ಜಿಲ್ಲೆಯ ನಡೆದಿದೆ.

    ಮಹಾವೀರ್ ಬಾಲೈ (30) ಮೃತ ಪತಿ. ಆರೋಪಿ ಸರೋಜಾ (27) ಪತ್ನಿಯನ್ನು ಕೊಂದು ಮನೆಯ ಹಿಂದೆ ಸಮಾಧಿ ಮಾಡಿದ್ದಾಳೆ. ನಂತರ ತಾನೇ ಪೊಲೀಸ್ ಠಾಣೆಗೆ ಹೋಗಿ ಪತಿಯನ್ನು ಕೊಲೆ ಮಾಡಿರುವ ಬಗ್ಗೆ ಪೊಲೀಸರಿಗೆ ತಿಳಿಸಿದ್ದಾಳೆ. ಸದ್ಯಕ್ಕೆ ಪೊಲೀಸರು ಆರೋಪಿಯನ್ನು ವಿಚಾರಣೆ ಮಾಡುತ್ತಿದ್ದಾರೆ.

    ಏನಿದು ಪ್ರಕರಣ?
    ಭೈರಂಪುರ ಜಾಗೀರ್ ಗ್ರಾಮದ ನಿವಾಸಿ ಸರೋಜಾ ತುಂಬು ಗರ್ಭಿಣಿಯಾಗಿದ್ದರು. ಆದರೆ ಮೃತ ಪತಿ ಮಹಾವೀರ್ ಪತ್ನಿಯ ಸೋದರಿ ಅಂದರೆ ನಾದಿನಿಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ. ಆಗ ಸಹೋದರಿಯ ಕಿರುಚಾಟ ಕೇಳಿ ಪತ್ನಿ ಮನೆಗೆ ಬಂದು ನೋಡಿದ್ದಾಳೆ. ಇದರಿಂದ ಕೋಪಗೊಂಡ ಸರೋಜಾ ಕೊಡಲಿಯಿಂದ ಪತಿಯನ್ನು ಕೊಲೆ ಮಾಡಿದ್ದಾಳೆ. ನಂತರ ಪತಿಯ ಮೃತದೇಹವನ್ನು ಹಗ್ಗದಿಂದ ಕಟ್ಟಿ ಅದನ್ನು ಮನೆ ಹಿಂದೆ ಎಳೆದುಕೊಂಡು ಹೋಗಿದ್ದಾಳೆ. ಬಳಿಕ ತಾನೇ ಆತನನ್ನು ಸಮಾಧಿ ಮಾಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.

    ಮರುದಿನ ಆರೋಪಿ ಸರೋಜಾ ಪೊಲೀಸ್ ಠಾಣೆಗೆ ಹೋಗಿ ಪತಿಯನ್ನು ಹತ್ಯೆ ಮಾಡಿರುವ ಬಗ್ಗೆ ಪೊಲೀಸರಿಗೆ ತಿಳಿಸಿದ್ದಾಳೆ. ಮಾಹಿತಿ ತಿಳಿದ ಪೊಲೀಸರು ಘಟನೆ ನಡೆದ ಸ್ಥಳಕ್ಕೆ ಬಂದು ಸಮಾಧಿ ಮಾಡಿದ್ದ ಮಹಾವೀರ್ ಮೃತದೇಹವನ್ನು ಹೊರತೆಗೆದು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಿದ್ದಾರೆ.

    ಗರ್ಭಿಣಿ ಸರೋಜಾ ಪತಿ ಮಹಾವೀರ್ ನನ್ನು ಕೊಡಲಿಯಿಂದ ಕೊಂದಿದ್ದು, ಪತಿಯ ಮೃತದೇಹವನ್ನು ಮನೆಯ ಹಿಂದೆ ಸಮಾಧಿ ಮಾಡಿದ್ದಾಳೆ. ನಂತರ ಆಕೆಯೇ ಬಂದು ಪೊಲೀಸರಿಗೆ ಶರಣಾಗಿದ್ದಾಳೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಗಗನ್‍ದೀಪ್ ಸಿಂಗ್ ಹೇಳಿದ್ದಾರೆ.

    ಆರೋಪಿ ಸರೋಜಾ ತುಂಬು ಗರ್ಭಿಣಿಯಾಗಿದ್ದು, ತನ್ನ ಸಹಾಯಕ್ಕಾಗಿ ಕೆಲವು ದಿನಗಳ ಹಿಂದೆ ಸಹೋದರಿಯನ್ನು ತನ್ನ ಮನೆಗೆ ಕರೆದುಕೊಂಡು ಬಂದಿದ್ದಳು. ಆದರೆ ಈ ವೇಳೆ ಆಕೆಯ ಪತಿ ನಾದಿನಿ ಜೊತೆ ಅಕ್ರಮ ಸಂಬಂಧ ಹೊಂದಿದ್ದನು. ಪತಿಯ ಅಕ್ರಮ ಸಂಬಂಧದ ಬಗ್ಗೆ ತಿಳಿದ ಸರೋಜಾ ಕೋಪಗೊಂಡು ಕೊಲೆ ಮಾಡಿದ್ದಾಳೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ. ಸದ್ಯಕ್ಕೆ ಈ ಕುರಿತು ತನಿಖೆ ನಡೆಯುತ್ತಿದೆ ಎಂದು ಪೊಲೀಸ್ ಅಧಿಕಾರಿ ಅಮಿತ್ ಕುಮಾರ್ ಹೇಳಿದ್ದಾರೆ.

  • ಸಾಹಸ ಸಿಂಹನಿಗೆ ಪೂಜೆ ಸಲ್ಲಿಸಿದ ಅಭಿಮಾನಿಗಳು – ಸ್ಮಾರಕ ನಿರ್ಮಾಣಕ್ಕೆ ಶಂಕು ಸ್ಥಾಪನೆ

    ಸಾಹಸ ಸಿಂಹನಿಗೆ ಪೂಜೆ ಸಲ್ಲಿಸಿದ ಅಭಿಮಾನಿಗಳು – ಸ್ಮಾರಕ ನಿರ್ಮಾಣಕ್ಕೆ ಶಂಕು ಸ್ಥಾಪನೆ

    ಮೈಸೂರು: ಜಿಲ್ಲೆಯ ಎಚ್.ಡಿ ಕೋಟೆ ರಸ್ತೆಯಲ್ಲಿನ ಹಾಲಾಳು ಗ್ರಾಮದ ಬಳಿ ವಿಷ್ಣುವರ್ಧನ್ ಸ್ಮಾರಕ ನಿರ್ಮಿಸಲು ಗುರುತಿಸಲಾಗಿದ್ದ ವಿವಾದಿತ ಜಾಗದಲ್ಲಿ ಮಂಡ್ಯದ ವಿಷ್ಣು ಸೇನಾ ಸಂಘದ ಕಾರ್ಯಕರ್ತರು ಪೂಜೆ ಸಲ್ಲಿಸಿದ್ದಾರೆ.

    ಭಾನುವಾರ ಸಂಜೆ ಮಂಡ್ಯದಿಂದ ಬಂದ ವಿಷ್ಣು ಸೇನಾ ಸಂಘದ ಕಾರ್ಯಕರ್ತರು ವಿವಾದಿತ ಜಾಗದಲ್ಲೇ ಸಾಹಸ ಸಿಂಹ ವಿಷ್ಣುವರ್ಧನ್ ಅವರ ಸ್ಮಾರಕ ನಿರ್ಮಾಣ ಮಾಡಬೇಕೆಂದು ಆಗ್ರಹಿಸಿದ್ದಾರೆ. ಅಲ್ಲದೆ ಸ್ಥಳದಲ್ಲಿ ಸ್ಮಾರಕ ನಿರ್ಮಾಣಕ್ಕೆ ಶಂಕು ಸ್ಥಾಪನೆ ಕೂಡ ನೆರವೇರಿಸಿ ಪೂಜೆ ಸಲ್ಲಿಸಿದ್ದಾರೆ.

    ಸರ್ಕಾರವು ಹಾಲಾಳು ಗ್ರಾಮದ ಬಳಿ ವಿಷ್ಣುವರ್ಧನ್ ಅವರ ಸ್ಮಾರಕ ನಿರ್ಮಾಣ ಮಾಡಲು ಜಾಗ ನೀಡಿತ್ತು. ಆದರೆ ಸ್ಥಳೀಯ ರೈತರು ಈ ಜಾಗ ತಮ್ಮದು ಎಂದು ನ್ಯಾಯಾಲಯದಲ್ಲಿ ದಾವೆ ಹೂಡಿದ್ದಾರೆ. ಹೀಗಾಗಿ ಸ್ಮಾರಕ ನಿರ್ಮಾಣ ಕಾರ್ಯಕ್ಕೆ ತಡೆ ಬಿದ್ದಿತ್ತು. ಈಗ ಇದೇ ಸ್ಥಳಕ್ಕೆ ಬಂದ ಮಂಡ್ಯದ ವಿಷ್ಣುಸೇನಾ ಸಂಘಟನೆ ಕಾರ್ಯಕರ್ತರು ವಿವಾದಿತ ಜಾಗವನ್ನು ಶುಚಿಗೊಳಿಸಿ ಬಾಳೆ ಕಂಬ, ಹೂ, ಇಟ್ಟಿಗೆ ಇಟ್ಟು ತಮ್ಮ ನೆಚ್ಚಿನ ನಟನಿಗೆ ಪೂಜೆ ಸಲ್ಲಿಸಿ ಅಭಿಮಾನ ತೋರಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಲಿಂಗಸುಗೂರಿನಲ್ಲಿ ಉಸಿರಾಡುತ್ತಿದೆ ಧರ್ಮಗುರುಗಳ ಗೋರಿಗಳು: ತಂಡೋಪತಂಡವಾಗಿ ಬರ್ತಿದ್ದಾರೆ ಜನ!

    ಲಿಂಗಸುಗೂರಿನಲ್ಲಿ ಉಸಿರಾಡುತ್ತಿದೆ ಧರ್ಮಗುರುಗಳ ಗೋರಿಗಳು: ತಂಡೋಪತಂಡವಾಗಿ ಬರ್ತಿದ್ದಾರೆ ಜನ!

    ರಾಯಚೂರು: ನೂರಾರು ವರ್ಷಗಳ ಧರ್ಮಗುರುಗಳ ಗೋರಿಗಳು ಈಗ ಉಸಿರಾಡುತ್ತಿವೆಯಂತೆ. ತೀರಾ ಕುತೂಹಲಕ್ಕೆ ಕಾರಣವಾಗಿರುವ ಈ ಘಟನೆ ಜಿಲ್ಲೆಯ ಲಿಂಗಸುಗೂರು ತಾಲೂಕಿನ ಆನೆಹೊಸೂರು ಗ್ರಾಮದಲ್ಲಿ ನಡೆದಿದೆ.

    ಇಲ್ಲಿನ ಶರಣರಬಾವಿ ದರ್ಗಾ ಶರೀಫ್ ನಲ್ಲಿರುವ ಮಜಾರಗಳು ಉಸಿರಾಡುವುದನ್ನು ಸಾರ್ವಜನಿಕರೆಲ್ಲಾ ನೋಡಿದ್ದಾರೆ. ಹಜರತ್ ಸೈಯದ್ ಶಾ ನಸರುದ್ದೀನ್ ನಬಿರಾ ಖಾದ್ರಿ ಉರುಸ್ ವೇಳೆ ಈ ಅಚ್ಚರಿ ನಡೆದಿದೆ.

    ಇಲ್ಲಿನ ಐದು ಗೋರಿಗಳಿಗೆ ಹೂವಿನ ಅಲಂಕಾರ ಮಾಡಲಾಗಿತ್ತು. ಆದರೆ ಗೋರಿಗಳ ಉಸಿರಾಟದಿಂದ ಹೂವುಗಳು ಮೇಲಕ್ಕೆ ಪುಟಿಯುತ್ತಿದ್ದವು. ಹಿಂದೆದೂ ನಡೆಯದ ಈ ಅಚ್ಚರಿಯನ್ನು ಕಂಡು ಜನರು ಬೆರಗಾಗಿದ್ದಾರೆ. ಆನೆಹೊಸುರು ಜಾಗೀರದಾರ್ ವಂಶಸ್ಥರ ಗೋರಿಗಳಲ್ಲಿ ಈ ವಿಚಿತ್ರ ಘಟನೆ ಕಂಡುಬಂದಿದೆ. ಸೋಮವಾರ ಸಂಜೆಯಿಂದ ಬೆಳಗಿನ ಜಾವದವರೆಗೂ ಗೋರಿಗಳು ಉಸಿರಾಡುವುದನ್ನು ನಾವು ನೋಡಿದ್ದೇವೆ ಜನ ಹೇಳಿದ್ದಾರೆ.

    ಗೋರಿಗಳಲ್ಲಿ ಈ ರೀತಿ ನಡೆದಿರುವುದಕ್ಕೆ ಇದುವರೆಗೂ ವೈಜ್ಞಾನಿಕ ಕಾರಣ ತಿಳಿದುಬಂದಿಲ್ಲ. ಗೋರಿಗಳು ಉಸಿರಾಡುತ್ತಿವೆ ಅಂತಲೇ ಭಕ್ತರು ರಾತ್ರಿಯಿಡಿ ಕುರಾನ್ ಪಠಣ ಮಾಡಿದ್ದಾರೆ.

    https://www.youtube.com/watch?v=B_rWI21WEfY