Tag: Tomato Rice

  • ಘಮ ಘಮಿಸುವ ಟೊಮೆಟೋ ಬಾತ್ ಸಖತ್ ಟೇಸ್ಟ್ – ನೀವೂ ಒಮ್ಮೆ ಟ್ರೈ ಮಾಡಿ

    ಘಮ ಘಮಿಸುವ ಟೊಮೆಟೋ ಬಾತ್ ಸಖತ್ ಟೇಸ್ಟ್ – ನೀವೂ ಒಮ್ಮೆ ಟ್ರೈ ಮಾಡಿ

    ಬೆಳಗ್ಗೆ, ಸಂಜೆ  ಹೊತ್ತಿನಲ್ಲಿ  ಸವಿಯಬಹುದಾದ ರೆಸಿಪಿ ಹುಡುಕುತ್ತಿದ್ದೀರಾ?  ತಿನ್ನಲು ರುಚಿಕರವಾಗಿರುವ ಮತ್ತು ಮಕ್ಕಳಿಗೆ ತುಂಬಾನೇ ಇಷ್ಟವಾಗುವ ಅಡುಗೆ ಎಂದರೆ ಟೊಮೆಟೋ ಬಾತ್. ಈ ಅಡುಗೆಯನ್ನು ಮಾಡುವುದು ತುಂಬಾ ಸುಲಭ ಮತ್ತು ನಾಲಿಗೆಗೆ ರುಚಿ ನೀಡುವ ಅಡುಗೆಯಾಗಿದೆ.  ರುಚಿ ರುಚಿಯಾದ ಟೊಮೆಟೋ ಬಾತ್ ಮಾಡೋದು ಹೇಗೆ ಎಂಬುದು ಇಲ್ಲಿದೆ
    ಬೇಕಾಗುವ ಸಾಮಗ್ರಿಗಳು:
    * ಬೇಕಾಗುವ ಸಾಮಾಗ್ರಿಗಳು :
    * ತುಪ್ಪ- ಅರ್ಧ ಕಪ್
    * ಪುಲಾವ್ ಎಲೆ- 2
    * ಚಕ್ಕೆ – 2
    * ಲವಂಗ – 4
    * ಏಲಕ್ಕಿ – 2
    * ಶುಂಠಿ -ಬೆಳ್ಳುಳ್ಳಿ ಪೇಸ್ಟ್ – ಅರ್ಧ ಚಮಚ
    * ನೆನೆಸಿದ ಒಣ ಬಟಾಣಿ -ಅರ್ಧ ಕಪ್
    * ಗೋಡಂಬಿ – ಸ್ವಲ್ಪ
    * ಹಸಿ ಮೆಣಸಿನ ಕಾಯಿ – 2
    * ಟೊಮೆಟೋ – 2
    * ಅರಿಶಿನ ಪುಡಿ – ಸ್ವಲ್ಪ
    * ರುಚಿಗೆ ತಕ್ಕಷ್ಟು ಉಪ್ಪು
    * ಅಚ್ಚ ಖಾರದ ಪುಡಿ – ಅರ್ಧ ಚಮಚ
    * ಪುದಿನ ಎಲೆ – 5 ಎಲೆಗಳು
    * ಕೊತ್ತಂಬರಿ ಸೊಪ್ಪು – 3 ದೊಡ್ಡ ಚಮಚ
    * ಅಕ್ಕಿ – 2 ಕಪ್ ಇದನ್ನೂ ಓದಿ:  ಬಿಸ್ಕೆಟ್ ನಿಂದ ತಯಾರಿಸಿ ಸಿಹಿಯಾದ ಬರ್ಫಿ

    ಮಾಡುವ ವಿಧಾನ:
    * ಒಂದು ಕಪ್ ಅಕ್ಕಿಯನ್ನು ಕೆಲ ನಿಮಿಷಗಳ ಕಾಲ ತೊಳೆದು ನೀರಿನಲ್ಲಿ ನೆನೆಸಿಡಿ.
    * ನಂತರ ಪ್ರೆಶರ್ ಕುಕ್ಕರ್‍ನಲ್ಲಿ 2 ಚಮಚ ತುಪ್ಪವನ್ನು ಹಾಕಿ ಬಿಸಿ ಮಾಡಿ ಅದಕ್ಕೆ 2 ಪಲಾವ್ ಎಲೆ, ಚಕ್ಕೆ, ಏಲಕ್ಕಿ ಮತ್ತು 2 ಲವಂಗ ಸೇರಿಸಿ ಹುರಿದುಕೊಳ್ಳಿ. ಇದನ್ನೂ ಓದಿ:  ನಾಲಿಗೆ ಚಪ್ಪರಿಸಿ ತಿನ್ನುವ ಶುಂಠಿ ಉಪ್ಪಿನಕಾಯಿ ಮಾಡುವ ವಿಧಾನ

    * ನಂತರ ಹಸಿ ಬಟಾಣಿ, ಶುಂಠಿ ಮತ್ತು ಬೆಳ್ಳುಳ್ಳಿ ಪೇಸ್ಟ್, ಈರುಳ್ಳಿ ಸೇರಿಸಿ ಹಸಿ ವಾಸನೆ ಹೋಗುವವರೆಗೂ ಚನ್ನಾಗಿ ಹುರಿಯಬೇಕು.
    * ಈಗ 2 ಚಮಚ ಗೋಡಂಬಿ ಬೀಜ, ಹಸಿ ಮೆಣಸಿನ ಕಾಯಿ, ಟೊಮೆಟೋ ಸೇರಿಸಿ ಮಧ್ಯಮ ಉರಿಯಲ್ಲಿ ಚನ್ನಾಗಿ ಹುರಿಯಿರಿ. ಇದನ್ನೂ ಓದಿ: ಮಂಗಳೂರು ಸ್ಟೈಲ್ ಚಿಕನ್ ಸುಕ್ಕಾ ಮಾಡೋ ಸುಲಭ ವಿಧಾನ

    * ಈಗ ಮೆಣಸಿನ ಪುಡಿ, ಉಪ್ಪು, 5 ಕತ್ತರಿಸಿದ ಪುದಿನ ಎಲೆಗಳು, 3 ಚಮಚ ಸಣ್ಣಗೆ ಕತ್ತರಿಸಿದ ಕೊತ್ತಂಬರಿ ಸೊಪ್ಪು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ನಂ ತರ 2 ಕಪ್ ನೀರನ್ನು ಹಾಕಿ ಚನ್ನಾಗಿ ಕುದಿಸಿ, ನೀರು ಕುದಿಯಲು ಪ್ರಾರಂಭಿಸಿದ ನಂತರ ಅದಕ್ಕೆ ನೆನೆಸಿದ ಅಕ್ಕಿಯನ್ನು ಹಾಕಿ ಚನ್ನಾಗಿ ಮಿಶ್ರಣ ಮಾಡಿ. ಇದನ್ನೂ ಓದಿ: ಅಕ್ಕಿ ರೊಟ್ಟಿಗೆ ಕಾಂಬಿನೇಷನ್ ಖಾರವಾದ ಚಿಕನ್ ಮಸಾಲ

    * ಒಂದೆರಡು ವಿಷಲ್ ಬರುವವರೆಗೆ ದೊಡ್ಡ ಉರಿಯಲ್ಲಿ ಬೇಯಿಸಿದರೆ ರುಚಿಯಾ ಟೊಮೆಟೋ ಬಾತ್ ಸವಿಯಲು ಸಿದ್ಧವಾಗುತ್ತದೆ.

  • ಕನ್ನಡ ರಾಜ್ಯೋತ್ಸವಕ್ಕಾಗಿ ಸಿಂಪಲ್ ಆಗಿ ಟೊಮೆಟೋ, ಲೆಮನ್ ರೈಸ್ ಮಾಡಿ

    ಕನ್ನಡ ರಾಜ್ಯೋತ್ಸವಕ್ಕಾಗಿ ಸಿಂಪಲ್ ಆಗಿ ಟೊಮೆಟೋ, ಲೆಮನ್ ರೈಸ್ ಮಾಡಿ

    ವೆಂಬರ್ 1 ಕರ್ನಾಟಕದಾದ್ಯಂತ ಕನ್ನಡ ರಾಜ್ಯೋತ್ಸವನ್ನು ಅದ್ಧೂರಿಯಾಗಿ ಆಚರಣೆ ಮಾಡಲಾಗುತ್ತದೆ. ನಮ್ಮ ಹೆಮ್ಮೆಯ ಬಾವುಟವನ್ನು ಹಾರಿಸುವ ಮೂಲಕ ಕನ್ನಡಿಗರು ರಾಜ್ಯೋತ್ಸವನ್ನು ಸಂಭ್ರಮಿಸುತ್ತಾರೆ. ಎಲ್ಲೆಲ್ಲೂ ಅರಿಶಿಣ-ಕೆಂಪು ಬಣ್ಣವೇ ರಾರಾಜಿಸುತ್ತಿರುತ್ತದೆ. ಆದ್ದರಿಂದ ನಿಮಗಾಗಿ ಎರಡು ಬಣ್ಣದ ರೈಸ್ ಗಳನ್ನು ಸುಲಭವಾಗಿ ಮಾಡುವ ವಿದಾನ ಇಲ್ಲಿದೆ.

    ಲೆಮನ್ ರೈಸ್
    ಬೇಕಾಗುವ ಸಾಮಾಗ್ರಿಗಳು
    1. ಎಣ್ಣೆ – 2 ಚಮಚ
    2. ನಿಂಬೆ ಹಣ್ಣು – 1 (ಸಣ್ಣದಿದ್ದರೆ ಎರಡು ತೆಗೆದುಕೊಳ್ಳಿ)
    3. ಕರಿಬೇವು – ಸ್ವಲ್ಪ
    4. ಸಾಸಿವೆ – 1/2 ಚಮಚ
    5. ಅರಿಶಿಣ ಪುಡಿ – 1/4
    6. ಕೊತ್ತಂಬರಿ ಸೊಪ್ಪು – ಸ್ವಲ್ಪ
    7. ಶೇಂಗಾ(ಕಡ್ಲೆ ಬೀಜ) – 2 ಚಮಚ
    8. ಉದ್ದಿನ ಬೇಳೆ – 1 ಚಮಚ
    9. ಕಡ್ಲೇ ಬೇಳೆ – 1 ಚಮಚ
    10. ಉಪ್ಪು ರುಚಿಗೆ ತಕ್ಕಷ್ಟು
    11. ಹಸಿ ಮೆಣಸಿನಕಾಯಿ- 2-3

    ಮಾಡುವ ವಿಧಾನ
    * ಎರಡು ಕಪ್ ಅಕ್ಕಿಯಲ್ಲಿ ಉದುರು-ಉದುರಾಗಿ ಅನ್ನ ಮಾಡಿ ಇಟ್ಟುಕೊಳ್ಳಿ.
    * ಈಗ ಒಂದು ಬಾಣಲೆಗೆ ಎಣ್ಣೆ ಹಾಕಿ, ಎಣ್ಣೆ ಬಿಸಿಯಾದ ಮೇಲೆ ಸಾಸಿವೆ, ಉದ್ದಿನ ಬೇಳೆ, ಕಡ್ಲೆ ಬೇಳೆ, ಹಾಕಿ ಫ್ರೈ ಮಾಡಿ. (ಕಡಿಮೆ ಉರಿಯಲ್ಲಿ)
    * ನಂತರ ಹಸಿ ಮೆಣಸಿನ ಕಾಯಿ, ಶೇಂಗಾ, ಕರಿಬೇವು, ಅರಿಶಿಣ ಹಾಕಿ ಫ್ರೈ ಮಾಡಿ.
    * ಸ್ಟೌವ್ ಆಫ್ ಮಾಡಿ, ಅದು ತಣ್ಣಗಾದ ಮೇಲೆ ನಿಂಬೆರಸ, ರುಚಿಕೆ ತಕ್ಕಷ್ಟು ಉಪ್ಪು ಹಾಕಿ ಮಿಕ್ಸ್ ಮಾಡಿ.
    * ಈಗ ರೆಡಿ ಮಾಡಿಕೊಂಡಿದ್ದ ರೈಸ್ ಹಾಕಿ ಮಿಕ್ಸ್ ಮಾಡಿ.
    * ಈಗ ಸಣ್ಣಗೆ ಕಟ್ ಮಾಡಿದ್ದ ಕೊತ್ತಂಬರಿ ಸೊಪ್ಪು ಹಾಕಿ ಮಿಕ್ಸ್ ಮಾಡಿದರೆ ಲೆಮನ್ ರೈಸ್ ಸವಿಯಲು ಸಿದ್ಧ.

    ಟೊಮೆಟೋ ರೈಸ್
    ಬೇಕಾಗುವ ಸಾಮಾಗ್ರಿಗಳು
    1. ಟೊಮೆಟೋ -5
    2. ಈರುಳ್ಳಿ – 2
    3. ಹಸಿ ಮೆಣಸಿನ ಕಾಯಿ – 4-5
    4. ಕೊತ್ತಂಬರಿ ಸೊಪ್ಪು – ಅರ್ಧ ಕಪ್
    5. ಪುದೀನ – ಸ್ವಲ್ಪ
    6. ಖಾರದ ಪುಡಿ – 2 ಚಮಚ
    7. ಉಪ್ಪು – ರುಚಿಗೆ ತಕ್ಕಷ್ಟು
    8. ಬಟಾಣಿ -1/4 ಕಪ್(ನೆನೆಸಿರುವುದು)
    9. ಎಣ್ಣೆ – 3 ಚಮಚ
    10. ಶುಂಠಿ-ಬೆಳ್ಳುಳ್ಳಿ ಪೇಸ್ಟ್ – 2 ಚಮಚ

    ಒಗ್ಗರಣೆಗೆ
    1. ಸಾಸಿವೆ – 1 ಚಮಚ
    2. ಜೀರಿಗೆ – 1 ಚಮಚ
    3. ಅರಿಶಿಣ – ಚಿಟಿಕೆ
    4. ಚಕ್ಕೆ, ಲವಂಗ, ಏಲಕ್ಕಿ – 2

    ಮಾಡುವ ವಿಧಾನ
    * ಮೊದಲಿಗೆ ಒಂದು ಲೋಟ ಅಕ್ಕಿ ತೆಗೆದುಕೊಂಡು ನೆನೆಸಿಕೊಳ್ಳಿ.
    * ಕುಕ್ಕರಿಗೆ ಎಣ್ಣೆ ಹಾಕಿ, ಚಕ್ಕೆ, ಲವಂಗ, ಏಲಕ್ಕಿ ಹಾಕಿ ಫೈ ಮಾಡಿ.
    * ಬಳಿಕ ಬಟಾಣಿ, ಶುಂಠಿ, ಬೆಳ್ಳುಳ್ಳಿ ಪೇಸ್ಟ್ ಹಾಕಿ ಫ್ರೈ ಮಾಡಿ.
    * ಹಸಿ ಮೆಣಸಿನಕಾಯಿ, ಈರುಳ್ಳಿ(ಮೀಡಿಯಮ್ ಆಗಿ ಕಟ್ ಮಾಡಿರಬೇಕು) ಹಾಕಿ ಫ್ರೈ ಮಾಡಿ.
    * ಈರುಳ್ಳಿ ಬ್ರೌನ್ ಬಣ್ಣ ಬಂದ ಮೇಲೆ ಟೊಮೆಟೋ, ಖಾರದ ಪುಡಿ, ಚಿಟಿಕೆ ಅರಿಶಿಣ ಹಾಕಿ ಚೆನ್ನಾಗಿ ಫ್ರೈ ಮಾಡಿ.
    * ಈಗ ರುಚಿಗೆ ತಕ್ಕಷ್ಟು ಉಪ್ಪು, ಪುದೀನ, ಕೊತ್ತಂಬರಿ ಸೊಪ್ಪು ಹಾಕಿ ಫ್ರೈ ಮಾಡಿ.
    * ಒಂದು ಲೋಟ ಅಕ್ಕಿಗೆ ಎರಡು ಲೋಟ ನೀರು ಹಾಕಿ ಕುದಿಸಿರಿ.
    * ಈಗ ನೆನೆಸಿದ ಅಕ್ಕಿ ಹಾಕಿ ಕ್ಯಾಪ್ ಹಾಕಿ.
    * ಕುಕ್ಕರಿನಲ್ಲಿ ಎರಡು ವಿಶಲ್ ಕೂಗಿಸಿದರೆ ಸಿಂಪಲ್ ಆಗಿ ಟೊಮೆಟೋ ರೈಸ್ ರೆಡಿ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv