Tag: Tomato Fever

  • ಟೊಮೆಟೋ ಜ್ವರ ಎಂದರೇನು? ರೋಗಲಕ್ಷಣ ಹಾಗೂ ಚಿಕಿತ್ಸೆ ಹೇಗೆ?

    ಟೊಮೆಟೋ ಜ್ವರ ಎಂದರೇನು? ರೋಗಲಕ್ಷಣ ಹಾಗೂ ಚಿಕಿತ್ಸೆ ಹೇಗೆ?

    ನವದೆಹಲಿ: ಕೇರಳದಲ್ಲಿ ಮೇ 6 ರಂದು ಟೊಮೆಟೋ ಜ್ವರ ಪತ್ತೆಯಾಗಿದೆ. ಭಾರತದಲ್ಲಿಯೇ ಮೊದಲ ಬಾರಿಗೆ ಈ ಜ್ವರ ಕಂಡು ಬಂದಿದ್ದು, ದೇಶದಲ್ಲಿ ಈಗ ಟೊಮೆಟೋ ವೈರಸ್ ತನ್ನ ಆರ್ಭಟ ಶುರುಮಾಡಿದೆ. ಇಲ್ಲಿಯವರೆಗೂ 82 ಪ್ರಕರಣಗಳು ದಾಖಲಾಗಿವೆ. ಇದೀಗ ದೇಶದಲ್ಲಿ ವೈದ್ಯರು ಟೊಮೆಟೋ ವೈರಸ್ ವಿರುದ್ಧ ಹೋರಾಟ ನಡೆಸುತ್ತಿದ್ದಾರೆ.

    ಅಧ್ಯಯನಗಳ ಪ್ರಕಾರ ಒಂದರಿಂದ ಐದು ವರ್ಷ ವಯಸ್ಸಿನ ಮಕ್ಕಳಲ್ಲಿ ಮತ್ತು ರೋಗನಿರೋಧಕ ಶಕ್ತಿ ಕಡಿಮೆ ಇರುವ ವಯಸ್ಕರಲ್ಲಿ ಟೊಮೆಟೋ ಜ್ವರ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದೆ. ಇದು ಕೈ, ಕಾಲು ಮತ್ತು ಬಾಯಿ ಮೂಲಕ ಹರಡುವ ಕಾಯಿಲೆಯಾಗಿದೆ.

    TOMATO

    ಮೊದಲ ಬಾರಿಗೆ ಟೊಮೆಟೋ ಜ್ವರ 2022ರ ಮೇ 6ರಂದು ಕೇರಳದ ಕೊಲ್ಲಂ ಜಿಲ್ಲೆಯಲ್ಲಿ ಪತ್ತೆಯಾಯಿತು. ಟೊಮೆಟೋ ಜ್ವರ ಕೋವಿಡ್ ರೀತಿಯೇ ರೋಗಲಕ್ಷಣಗಳನ್ನು ಹೊಂದಿದೆ. ಆದರೆ ಕೋವಿಡ್-19ಗೂ ಟೊಮೆಟೋ ಜ್ವರಕ್ಕೂ ಯಾವುದೇ ಸಂಬಂಧವಿಲ್ಲ. ಟೊಮೆಟೊ ಜ್ವರವು ಮಕ್ಕಳಲ್ಲಿ ಚಿಕೂನ್‍ಗುನ್ಯಾ ಅಥವಾ ಡೆಂಗ್ಯೂ ಜ್ವರದಷ್ಟೇ ಪರಿಣಾಮ ಬೀರುತ್ತದೆ ಎಂದು ಅಧ್ಯಯನಗಳ ಮೂಲಕ ತಿಳಿದು ಬಂದಿದೆ.

    Tomato

    ದೇಹದ ಹಲವು ಭಾಗಗಳಲ್ಲಿ ಉಂಟಾಗುವ ಗುಳ್ಳೆಗಳು ಕೆಂಪು ಬಣ್ಣದ ದುಂಡಗಿನ ಆಕಾರದಲ್ಲಿ ಇರುವುತ್ತದೆ. ಇದನ್ನು ಟೊಮೆಟೋ ಜ್ವರ ಎಂಬ ಹೆಸರಿನಲ್ಲಿ ಕರೆಯಲಾಗುತ್ತಿದೆ. ಕಾಲಕ್ರಮೇಣ ದೇಹದ ಮೇಲಿನ ಗುಳ್ಳೆಗಳು ಟೊಮೆಟೋ ಗಾತ್ರದಷ್ಟು ದೊಡ್ಡದಾಗುತ್ತದೆ.

    ಲಕ್ಷಣಗಳೇನು?
    ಟೊಮೆಟೊ ಜ್ವರ ಹೊಂದಿರುವ ಮಕ್ಕಳಲ್ಲಿ ಕಂಡುಬರುವ ಪ್ರಾಥಮಿಕ ರೋಗಲಕ್ಷಣಗಳು ಚಿಕುನ್‍ಗುನ್ಯಾದಂತೆಯೇ ಇರುತ್ತವೆ. ಇದರಲ್ಲಿ ಜ್ವರ ಹೆಚ್ಚಿರುತ್ತದೆ. ಕೀಲುಗಳಲ್ಲಿ ತೀವ್ರವಾದ ನೋವು ಬರುತ್ತದೆ. ಮೈ-ಕೈ ನೋವು, ಜ್ವರ ಮತ್ತು ಆಯಾಸದಂತಹ ಕೆಲವು ರೋಗಲಕ್ಷಣಗಳು ಕೋವಿಡ್-19 ವೈರಸ್‍ನಂತೆಯೇ ಇರುತ್ತವೆ. ಇತರ ರೋಗಲಕ್ಷಣಗಳೆಂದರೆ ಕೀಲು ಊತ, ವಾಕರಿಕೆ, ಅತಿಸಾರ, ನಿರ್ಜಲೀಕರಣ, ಕೀಲು ನೋವು ಮತ್ತು ಅಧಿಕ ಜ್ವರ. ಕೆಲವು ವೇಳೆ ರೋಗಿಗಳ ಚರ್ಮದ ಮೇಲೆ ಗುಳ್ಳೆಗಳ ಬೆಳವಣಿಗೆ ಸಹ ಕಂಡು ಬರುತ್ತದೆ.

    ಚಿಕಿತ್ಸೆ
    ಟೊಮೆಟೊ ಜ್ವರದ ಚಿಕಿತ್ಸೆಯು ಚಿಕೂನ್‍ಗುನ್ಯಾ, ಡೆಂಗ್ಯೂ ಮತ್ತು ಕೈ, ಕಾಲು ಮತ್ತು ಬಾಯಿ ಕಾಯಿಲೆಯ ಚಿಕಿತ್ಸೆಯಂತೆಯೇ ಇರುತ್ತದೆ. ಕಿರಿಕಿರಿ ಮತ್ತು ಗುಳ್ಳೆಗಳ ಪರಿಹಾರಕ್ಕಾಗಿ ಶುಚಿತ್ವ ಮತ್ತು ನೈರ್ಮಲ್ಯತೆಯನ್ನು ಕಾಪಾಡಿಕೊಳ್ಳಬೇಕು. ಸೋಂಕಿತ ಮಕ್ಕಳಿಗೆ ಹೆಚ್ಚು ಕುದಿಸಿ ಆರಿಸಿದ ನೀರನ್ನು ಕುಡಿಸುವ ಮೂಲಕ ನೀರಿನಂಶವನ್ನು ಕಾಪಾಡಿಕೊಳ್ಳಬೇಕು. ನಿಮ್ಮ ಮಗುವಿನಲ್ಲಿ ರೋಗದ ಲಕ್ಷಣಗಳು ಕಂಡು ಬರುತ್ತಿದ್ದಂತೆ ವೈದ್ಯರನ್ನು ಸಂಪರ್ಕಿಸಬೇಕು. ಗುಳ್ಳೆಗಳು ತುರಿಸುವುದು ಅಥವಾ ಒಡೆದುಕೊಳ್ಳದಂತೆ ನೋಡಿಕೊಳ್ಳಬೇಕು. ಬಿಸಿ ನೀರಿನಲ್ಲಿಯೇ ಸ್ನಾನ ಮಾಡುವುದು, ಜ್ವರದ ದೀರ್ಘಕಾಲೀನ ಪರಿಣಾಮಗಳನ್ನು ತಪ್ಪಿಸಲು ಸರಿಯಾಗಿ ವಿಶ್ರಾಂತಿ ತೆಗೆದುಕೊಳ್ಳಬೇಕಾಗುತ್ತದೆ.

    Live Tv
    [brid partner=56869869 player=32851 video=960834 autoplay=true]

  • ಟೊಮ್ಯಾಟೋ ಜ್ವರ ಆತಂಕ, ಮೂಲೆಹೊಳೆ ಗಡಿಯಲ್ಲಿ ಕಟ್ಟೆಚ್ಚರ: ಡಿಎಚ್‌ಒ ಡಾ. ವಿಶ್ವೇಶ್ವರಯ್ಯ

    ಟೊಮ್ಯಾಟೋ ಜ್ವರ ಆತಂಕ, ಮೂಲೆಹೊಳೆ ಗಡಿಯಲ್ಲಿ ಕಟ್ಟೆಚ್ಚರ: ಡಿಎಚ್‌ಒ ಡಾ. ವಿಶ್ವೇಶ್ವರಯ್ಯ

    ಚಾಮರಾಜನಗರ: ಕೇರಳದಲ್ಲಿ ಟೊಮ್ಯಾಟೋ ಜ್ವರ ಹಿನ್ನಲೆ ಗಡಿ ಜಿಲ್ಲೆ ಚಾಮರಾಜನಗರದಲ್ಲಿ ಕಟ್ಟೆಚ್ಚರ ವಹಿಸಲಾಗಿದೆ.

    ಈ ಕುರಿತಂತೆ ಮಾಧ್ಯಮದವರೊಂದಿಗೆ ಪ್ರತಿಕ್ರಿಯಿಸಿದ ಚಾಮರಾಜನಗರ ಡಿಎಚ್‍ಒ ಡಾ.ವಿಶ್ವೇಶ್ವರಯ್ಯ ಅವರು, ನಿತ್ಯ ನೂರಾರು ಪ್ರಯಾಣಿಕರು ಸಂಚರಿಸುವ ಹಿನ್ನಲೆ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಗಡಿಭಾಗದ ಬಂಡೀಪುರ ಮೂಲೆಹೊಳೆ ಚೆಕ್ ಪೋಸ್ಟ್‌ನಲ್ಲಿ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಲಾಗಿದೆ. ಕೇರಳದಿಂದ ಬರುವ ಪ್ರಯಾಣಿಕರ ತಪಾಸಣೆಗೆ ಇಂದಿನಿಂದಲೇ ವೈದ್ಯಕೀಯ ಸಿಬ್ಬಂದಿ ನಿಯೋಜನೆ ಮಾಡುತ್ತೇವೆ. ಟೊಮ್ಯಾಟೊ ಜ್ವರದ ಲಕ್ಷಣ ಇರುವ ಮಕ್ಕಳು ಕಂಡು ಬಂದಲ್ಲಿ ತಕ್ಷಣ ಚಿಕಿತ್ಸೆಗೆ ಕ್ರಮವಹಿಸಲಾಗುವುದು ಎಂದಿದ್ದಾರೆ. ಇದನ್ನೂ ಓದಿ: ಮಹಿಳೆ ಕತ್ತು ಹಿಸುಕಿ ಸಮಾಧಿ ಮಾಡಲು ಹೋಗಿ ತಾನೇ ಸತ್ತ

    ಜಿಲ್ಲೆಯಲ್ಲಿ 5 ವರ್ಷದ ಒಳಗಿನ 67 ಸಾವಿರ ಮಕ್ಕಳಿದ್ದಾರೆ. ಆಶಾ ಕಾರ್ಯಕರ್ತೆಯರು ಹಾಗೂ ಆರೋಗ್ಯ ಸಿಬ್ಬಂದಿ ಜಿಲ್ಲೆಯ ಪ್ರತಿ ಮನೆಗೂ ಭೇಟಿ ನೀಡಿ ಪರಿಶೀಲಿಸಲು ಸೂಚನೆ ಕೊಡಲಾಗಿದೆ. ಮಕ್ಕಳಿಗೆ ಟೊಮ್ಯಾಟೊ ಜ್ವರದ ಲಕ್ಷಣ ಕಂಡು ಬಂದಲ್ಲಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆಗೆ ಕ್ರಮವಹಿಸುತ್ತೇವೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: 80ಕ್ಕೂ ಹೆಚ್ಚು ಮಕ್ಕಳನ್ನ ಕಾಡುತ್ತಿದೆ ಟೊಮೆಟೊ ಜ್ವರ – ಏನಿದರ ಲಕ್ಷಣ? 

  • 80ಕ್ಕೂ ಹೆಚ್ಚು ಮಕ್ಕಳನ್ನ ಕಾಡುತ್ತಿದೆ ಟೊಮೆಟೊ ಜ್ವರ – ಏನಿದರ ಲಕ್ಷಣ?

    80ಕ್ಕೂ ಹೆಚ್ಚು ಮಕ್ಕಳನ್ನ ಕಾಡುತ್ತಿದೆ ಟೊಮೆಟೊ ಜ್ವರ – ಏನಿದರ ಲಕ್ಷಣ?

    ತಿರುವನಂತಪುರಂ: 2 ವರ್ಷಗಳಿಂದ ಕೊರೊನಾ ಸೋಂಕು ಬಂದು ಇಡೀ ವಿಶ್ವವನ್ನೆ ಬೆಚ್ಚಿ ಬೀಳಿಸಿತ್ತು. ಈ ಸೋಂಕು ಇಡೀ ವಿಶ್ವದಿಂದ ಸಂಪೂರ್ಣವಾಗಿ ಹೋಗಿಯೇ ಇಲ್ಲ. ಈ ನಡುವೆಯೇ ಹೊಸ ಸೋಂಕು ಕೇರಳದಲ್ಲಿ ಕಾಣಿಸಿಕೊಂಡಿದ್ದು, ಆತಂಕ ಮೂಡಿಸಿದೆ. ಈ ಸೋಂಕನ್ನು ‘ಟೊಮೆಟೊ ಜ್ವರ’ ಎಂದು ತಜ್ಞರು ಕರೆದಿದ್ದಾರೆ.

    ಇತ್ತೀಚೆಗೆ ವಿಷಾಹಾರ ಸೇವನೆಯಿಂದ 58 ಮಂದಿ ಸಾವಿಗೀಡಾಗಿ ಆಸ್ಪತ್ರೆಗೆ ದಾಖಲಾದ ಹಿನ್ನೆಲೆಯಲ್ಲಿ ಆಘಾತಕ್ಕೊಳಗಾಗಿರುವ ಕೇರಳ ಇದೀಗ ಮತ್ತೊಂದು ನಿಗೂಢ ಕಾಯಿಲೆಗೆ ತುತ್ತಾಗುತ್ತಿದೆ. ಇದನ್ನು ತಜ್ಞರು ‘ಟೊಮೆಟೋ ಜ್ವರ’ ಎಂದು ಕರೆಯುತ್ತಿದ್ದಾರೆ. ಈಗಾಗಲೇ ಸೋಂಕಿಗೆ 80 ಕ್ಕೂ ಹೆಚ್ಚು ಮಕ್ಕಳು ತುತ್ತಾಗಿದ್ದಾರೆ. ಪ್ರಸ್ತುತ ಈ ಎಲ್ಲ ಪ್ರಕರಣಗಳು ಕೊಲ್ಲಂನಲ್ಲಿ ದಾಖಲಾಗಿದೆ. ಇದನ್ನೂ ಓದಿ: ಎರಡೇ ದಿನದಲ್ಲಿ ಸಿಕ್ಸ್ ಪ್ಯಾಕ್ – ವೀಡಿಯೋ ನೋಡಿ ಶಾಕ್ ಆದ ನೆಟ್ಟಿಗರು

    What Is Tomato Flu Infecting Young Children In Kerala? Check Symptoms, Treatment, Precautions

    ಟೊಮೆಟೊ ಜ್ವರ ಎಂದರೇನು?
    ಇದು ಅಪರೂಪದ ವೈರಲ್ ಕಾಯಿಲೆಯಾಗಿದೆ. ಈ ಕಾಯಿಲೆ ಬಂದಾಗ ಕೆಂಪು-ಬಣ್ಣದ ದದ್ದುಗಳು, ಚರ್ಮದಲ್ಲಿ ಕಿರಿಕಿರಿ ಉಂಟುಮಾಡುತ್ತದೆ. ಈ ಕಾಯಿಲೆ ಬಂದರೆ ಟೊಮೆಟೊಗಳಂತೆ ಗುಳ್ಳೆಗಳು ಬರುತ್ತೆ. ಅದಕ್ಕೆ ಇದನ್ನು ಟೊಮೆಟೊ ಜ್ವರ ಎಂದು ಕರೆಯಲಾಗಿದೆ. ಈ ಟೊಮೆಟೊ ಜ್ವರ ಕೇರಳದಲ್ಲಿ ಐದು ವರ್ಷದೊಳಗಿನ ಮಕ್ಕಳ ಮೇಲೆ ಹೆಚ್ಚು ಪರಿಣಾಮ ಬೀರುತ್ತಿದೆ.

    ರೋಗದ ಲಕ್ಷಣಗಳು
    ಈ ಕಾಯಿಲೆ ಬಂದಾಗ ಟೊಮೆಟೊ ಗಾತ್ರದ ಗುಳ್ಳೆಗಳು ಬಂದು ಅವು ಕೆಂಪು ಬಣ್ಣಕ್ಕೆ ತಿರುಗುತ್ತೆ. ಇತರ ರೋಗಲಕ್ಷಣಗಳೆಂದರೆ ಅಧಿಕ ಜ್ವರ, ದೇಹದಲ್ಲಿ ನೋವು, ಕೀಲು ಊತ ಮತ್ತು ಆಯಾಸ ಇರುತ್ತೆ. ಈ ಕಾಯಿಲೆ ಚಿಕೂನ್‍ಗುನ್ಯಾದಂತೆಯೇ ಇರುತ್ತದೆ. ಆರ್ಯಂಕಾವು, ಅಂಚಲ್ ಮತ್ತು ನೆಡುವತ್ತೂರ್‌ನಲ್ಲೂ ಈ ಪ್ರಕರಣಗಳು ದಾಖಲಾಗಿದೆ. ಇದನ್ನೂ ಓದಿ:  ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾದ ಎಂಪಿ ಶಿಕ್ಷಣ ಸಚಿವರ ಸೊಸೆ

    ತಮಿಳುನಾಡು-ಕೇರಳ ಗಡಿಯಲ್ಲಿ ಕಣ್ಗಾವಲು
    ಕೇರಳ ಜಿಲ್ಲೆಯೊಂದರಲ್ಲಿ ‘ಟೊಮೆಟೊ ಜ್ವರ’ ಹರಡುತ್ತಿರುವ ಹಿನ್ನೆಲೆ ತಮಿಳುನಾಡು-ಕೇರಳ ಗಡಿಯಲ್ಲಿರುವ ವಾಳಯಾರ್‍ನಲ್ಲಿ ಕಣ್ಗಾವಲು ಕಾಯಲಾಗುತ್ತಿದೆ. ಕೇರಳದಿಂದ ಕೊಯಮತ್ತೂರ್‌ಗೆ ಬರುವವರಿಗೆ ವೈದ್ಯಕೀಯ ತಂಡ ಪರೀಕ್ಷೆಗಳನ್ನು ನಡೆಸುತ್ತಿದೆ.

    ಎಲ್ಲ ವಾಹನಗಳ ಪ್ರಯಾಣಿಕರನ್ನು, ವಿಶೇಷವಾಗಿ ಮಕ್ಕಳನ್ನು ಪರೀಕ್ಷಿಸಲು ಇಬ್ಬರು ವೈದ್ಯಕೀಯ ಅಧಿಕಾರಿಗಳ ತಂಡವನ್ನು ನಿಗದಿಪಡಿಸಲಾಗಿದೆ. ಅಂಗನವಾಡಿಗಳಲ್ಲಿ ಐದು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳನ್ನು ಪರೀಕ್ಷಿಸಲು 24 ಸದಸ್ಯರ ತಂಡವನ್ನು ಸಹ ರಚಿಸಲಾಗಿದೆ ಎಂದು ವರದಿ ಮೂಲಕ ತಿಳಿದುಬಂದಿದೆ.

    ಕರ್ನಾಟಕವು ಈ ಸೋಂಕಿನಿಂದ ಎಚ್ಚೆತ್ತುಕೊಳ್ಳುವುದು ತುಂಬಾ ಮುಖ್ಯ. ಏಕೆಂದರೆ ಕೇರಳ ಗಡಿ ಕರ್ನಾಟಕಕ್ಕೂ ಅಂಟಿಕೊಂಡಿದೆ. ಈ ಹಿನ್ನೆಲೆ ಕೇರಳದಿಂದ ಬಂದವರನ್ನು, ಅದರಲ್ಲಿಯೂ ಮಕ್ಕಳನ್ನು ಸರಿಯಾಗಿ ವೈದ್ಯಕೀಯ ಪರೀಕ್ಷೆ ಮಾಡಿಸುವುದು ತುಂಬಾ ಅವಶ್ಯಕ. ಇಲ್ಲದೇ ಹೋದರೆ ಸೋಂಕು ಕರ್ನಾಟಕದಲ್ಲಿಯೂ ಹರಡಿಕೊಳ್ಳಬಹುದು.