Tag: tomato biryani

  • ಟೊಮೆಟೊ ಬಿರಿಯಾನಿ ಒಂದ್ಸಲ ಮಾಡಿ ನೋಡಿ

    ಟೊಮೆಟೊ ಬಿರಿಯಾನಿ ಒಂದ್ಸಲ ಮಾಡಿ ನೋಡಿ

    ಬಿರಿಯಾನಿ ತಿನ್ನಬೇಕು ಅಂತ ಹಲವರಿಗೆ ಆಗಾಗ ಅನ್ನಿಸುತ್ತಲೇ ಇರುತ್ತೆ. ಆದರೆ ಕೆಲವೊಮ್ಮೆ ನಾನ್‌ವೆಜ್ ತಿನ್ನಲು ಸಾಧ್ಯವಾಗದಂತಹ ಸಂದರ್ಭದಲ್ಲಿ ಬಿರಿಯಾನಿ ಮಾಡಲು ವೆಜ್ ಆಯ್ಕೆಯನ್ನೇ ಮಾಡಿಕೊಳ್ಳಬೇಕಾಗುತ್ತದೆ. ಈ ಸಂದರ್ಭ ಮಶ್ರೂಮ್, ಪನೀರ್ ನಿಮ್ಮ ತಲೆಯಲ್ಲಿ ಹೊಳೆಯಬಹುದು. ಆದರೆ ಅದಾವುದೂ ನಿಮ್ಮ ಮನೆಯಲ್ಲಿ ಇಲ್ಲದೇ ಹೋದಾಗ ಟೊಮೆಟೊ ಬಳಸಿಯೇ ಬಿರಿಯಾನಿ ಮಾಡಿ ನೋಡಿ. ಟೊಮೆಟೊ ಬಿರಿಯಾನಿ ಮಾಡುವ ಸುಲಭ ವಿಧಾನ ಇಲ್ಲಿದೆ.

    ಬೇಕಾಗುವ ಪದಾರ್ಥಗಳು:
    ತುಪ್ಪ – 1 ಟೀಸ್ಪೂನ್
    ಲವಂಗ – 5
    ದಾಲ್ಚಿನ್ನಿ – 1 ಇಂಚು
    ಏಲಕ್ಕಿ – 2
    ಜೀರಿಗೆ – 1 ಟೀಸ್ಪೂನ್
    ಸೋಂಪು – ಅರ್ಧ ಟೀಸ್ಪೂನ್
    ಸಣ್ಣಗೆ ಕತ್ತರಿಸಿದ ಈರುಳ್ಳಿ – 1
    ಶುಂಠಿ ಬೆಳ್ಳುಳ್ಳಿ ಪೇಸ್ಟ್ – 1 ಟೀಸ್ಪೂನ್
    ಅರಿಶಿನ – ಕಾಲು ಟೀಸ್ಪೂನ್
    ಹಸಿರು ಮೆಣಸಿನಕಾಯಿ – 1
    ಟೊಮೆಟೊ ಪ್ಯೂರಿ – 1 ಕಪ್
    ಕಾಶ್ಮೀರಿ ಕೆಂಪು ಮೆಣಸಿನ ಪುಡಿ – ಅರ್ಧ ಟೀಸ್ಪೂನ್
    ಬಿರಿಯಾನಿ ಮಸಾಲಾ – 1 ಟೀಸ್ಪೂನ್
    ಉಪ್ಪು – ರುಚಿಗೆ ತಕ್ಕಷ್ಟು
    ಕತ್ತರಿಸಿದ ಕ್ಯಾರೆಟ್ – ಅರ್ಧ
    ಬಟಾಣಿ – 2 ಟೀಸ್ಪೂನ್
    ಸಣ್ಣಗೆ ಕತ್ತರಿಸಿದ ಕೊತ್ತಂಬರಿ ಸೊಪ್ಪು – 1 ಟೀಸ್ಪೂನ್
    ತೆಂಗಿನ ಹಾಲು – 1 ಕಪ್
    ಸಣ್ಣಗೆ ಕತ್ತರಿಸಿದ ಪುದಿನಾ – 2 ಟೀಸ್ಪೂನ್
    ನೀರು – 1 ಕಪ್
    ಬಾಸ್ಮತಿ ಅಕ್ಕಿ – 1 ಕಪ್ (20 ನಿಮಿಷ ನೀರಿನಲ್ಲಿ ನೆನೆಸಿಡಿ)

    ಮಾಡುವ ವಿಧಾನ:
    * ಮೊದಲಿಗೆ ಪ್ರೆಶರ್ ಕುಕ್ಕರ್‌ನಲ್ಲಿ ತುಪ್ಪ ಬಿಸಿ ಮಾಡಿ, ಅದರಲ್ಲಿ ದಾಲ್ಚಿನ್ನಿ, ಲವಂಗ, ಏಲಕ್ಕಿ, ಜೀರಿಗೆ ಮತ್ತು ಸೋಂಪು ಹಾಕಿ ಹುರಿಯಿರಿ.
    * ಬಳಿಕ ಈರುಳ್ಳಿಯನ್ನು ಸೇರಿಸಿ ಚೆನ್ನಾಗಿ ಹುರಿಯಿರಿ, ಶುಂಠಿ ಬೆಳ್ಳುಳ್ಳಿ ಪೇಸ್ಟ್ ಮತ್ತು ಭಾಗ ಮಾಡಿದ ಹಸಿರು ಮೆಣಸಿನಕಾಯಿಯನ್ನು ಸೇರಿಸಿ.
    * ಈಗ ಟೊಮೆಟೊ ಪ್ಯೂರಿಯನ್ನು ಸೇರಿಸಿ, ಅದು ದಪ್ಪವಾಗುವವರೆಗೆ ಮಧ್ಯಮ ಉರಿಯಲ್ಲಿ ಬೇಯಿಸಿ.
    * ಬಳಿಕ ಅರಿಶಿನ, ಮೆಣಸಿನ ಪುಡಿ, ಬಿರಿಯಾನಿ ಮಸಾಲಾ ಮತ್ತು ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ, ಮಸಾಲೆಗಳು ಸಂಪೂರ್ಣವಾಗಿ ಬೇಯುವವರೆಗೆ ಹುರಿಯಿರಿ.
    * ಹೆಚ್ಚುವರಿಯಾಗಿ ಕ್ಯಾರೆಟ್, ಬಟಾಣಿ, ಪುದಿನಾ ಮತ್ತು ಕೊತ್ತಂಬರಿ ಸೊಪ್ಪು ಸೇರಿಸಿ, ಒಂದು ನಿಮಿಷ ಹುರಿಯಿರಿ.
    * ಈಗ ತೆಂಗಿನ ಹಾಲು ಮತ್ತು ನೀರನ್ನು ಸೇರಿಸಿ, ಚೆನ್ನಾಗಿ ಬೆರೆಸಿ.
    * 20 ನಿಮಿಷ ನೆನೆಸಿದ ಬಾಸ್ಮತಿ ಅಕ್ಕಿ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.
    * ಪ್ರೆಶರ್ ಕುಕ್ಕರ್ ಮುಚ್ಚಳವನ್ನು ಮುಚ್ಚಿ, ಮಧ್ಯಮ ಉರಿಯಲ್ಲಿ 2 ಸೀಟಿ ಹೊಡೆಯುವವರೆಗೆ ಬೇಯಿಸಿ.
    * ಇದೀಗ ಟೊಮೆಟೊ ಬಿರಿಯಾನಿ ರೆಡಿಯಾಗಿದ್ದು, ಈರುಳ್ಳಿ ಟೊಮೆಟೊ ರಾಯಿತದೊಂದಿಗೆ ಬಡಿಸಿದರೆ ಸೂಪರ್ ಟೇಸ್ಟ್ ನೀಡುತ್ತದೆ.

    Live Tv
    [brid partner=56869869 player=32851 video=960834 autoplay=true]

  • ರುಚಿಕರವಾದ ಟೊಮೆಟೊ ಬಿರಿಯಾನಿ ಮಾಡುವ ವಿಧಾನ ನಿಮಗಾಗಿ

    ರುಚಿಕರವಾದ ಟೊಮೆಟೊ ಬಿರಿಯಾನಿ ಮಾಡುವ ವಿಧಾನ ನಿಮಗಾಗಿ

    ಹೋಟೆಲ್ ಅಥವಾ ರೆಸ್ಟೋರೆಂಟ್‍ಗಳಲ್ಲಿ ಸಿಗುವ ರುಚಿ ಮನೆಯಲ್ಲಿ ಮಾಡಿದಾಗ ಸಿಗಲ್ಲ ಅಂತಾರೆ. ಈ ಬಗ್ಗೆ ಚಿಂತೆ ಬೇಡ. ನಾವು ತಿಳಿಸಿದ ಸಾಮಾಗ್ರಿಗಳನ್ನು ಬಳಸಿ ಬಿರಿಯಾನಿ ಮಾಡಿದರೆ ಸಿಗುವ ರುಚಿ ಯಾವ ರೆಸ್ಟೋರೆಂಟ್‍ಗಳಿಗೂ ಕಡಿಮೆ ಇರಲ್ಲ. ನಿಮಗೆ ಪ್ರತಿನಿತ್ಯ ಒಂದೇ ತರಹದ ರೈಸ್ ಬಾತ್ ತಿಂದು ಬೇಸರವಾಗಿರುತ್ತದೆ. ಇಂದು ಸ್ವಲ್ಪ ಭಿನ್ನವಾಗಿ ಈ ಟೊಮೆಟೊ ಬಿರಿಯಾನಿ ಮಾಡಿ ನೋಡಿ.

    ಬೇಕಾಗುವ ಸಾಮಾಗ್ರಿಗಳು:
    * 1 ಟೇಸ್ಪೂನ್ ತುಪ್ಪ
    * 5 ಲವಂಗ
    * 1 ಇಂಚು ದಾಲ್ಚಿನ್ನಿ
    * 2 ಪಾಡ್ಗಳು ಏಲಕ್ಕಿ
    * 1 ಟೀಸ್ಪೂನ್ ಜೀರಿಗೆ
    * 1/2 ಟೀಸ್ಪೂನ್ ಸೋಂಪು
    * 1 ಈರುಳ್ಳಿ
    * 1 ಟೀಸ್ಪೂನ್ ಶುಂಠಿ ಬೆಳ್ಳುಳ್ಳಿ ಪೇಸ್ಟ್
    * 1/4 ಟೀಸ್ಪೂನ್ ಅರಿಶಿನ
    * 1 ಹಸಿರು ಮೆಣಸಿನಕಾಯಿ
    * 1 ಕಪ್ ಟೊಮೆಟೊ ಪ್ಯೂರಿ
    * 1/4 ಟೀಸ್ಪೂನ್ ಕಾಶ್ಮೀರಿ ಕೆಂಪು ಮೆಣಸಿನ ಪುಡಿ
    * 1 ಟೀಸ್ಪೂನ್ ಬಿರಿಯಾನಿ ಮಸಾಲಾ
    * 1 ಟೀಸ್ಪೂನ್ ಉಪ್ಪು
    * 1/2 ಕ್ಯಾರೆಟ್
    * 2 ಟೇಬಲ್‍ಸ್ಪೂನ್ ಬಟಾಣಿ
    * 1 ಟೇಬಲ್ಸ್ಪೂನ್ ಕೊತ್ತಂಬರಿ ಸೊಪ್ಪು
    * 1 ಕಪ್ ತೆಂಗಿನ ಹಾಲು
    * 2 ಟೇಬಲ್ ಸ್ಪೂನ್ ಪುದಿನಾ
    * 1 ಕಪ್ ನೀರು
    * 1 ಕಪ್ ಬಾಸ್ಮತಿ ಅಕ್ಕಿ

    ಮಾಡುವ ವಿಧಾನ:

    * ಮೊದಲಿಗೆ, ಪ್ರೆಶರ್ ಕುಕ್ಕರ್‍ನಲ್ಲಿ ತುಪ್ಪ ಬಿಸಿ ಮಾಡಿ ಮತ್ತು ಅದರಲ್ಲಿ 1-ಇಂಚಿನ ದಾಲ್ಚಿನ್ನಿ, 5 ಲವಂಗ, 2 ಪಾಡ್ಗಳು ಏಲಕ್ಕಿ, 1 ಟೀಸ್ಪೂನ್ ಜೀರಿಗೆ ಮತ್ತು 1/2 ಟೀಸ್ಪೂನ್ ಸೋಂಪು ಹಾಕಿ ಹುರಿಯಿರಿ.

    * ಅದಕ್ಕೆ 1 ಈರುಳ್ಳಿಯನ್ನು ಸೇರಿಸಿ ಚೆನ್ನಾಗಿ ಹುರಿಯಿರಿ, ನಂತರ 1 ಟೀಸ್ಪೂನ್ ಶುಂಠಿ ಬೆಳ್ಳುಳ್ಳಿ ಪೇಸ್ಟ್ ಮತ್ತು 1 ಹಸಿರು ಮೆಣಸಿನಕಾಯಿಯನ್ನು ಸೇರಿಸಿ.

    * ನಂತರ 1ಕಪ್ ಟೊಮೆಟೊ ಪ್ಯೂರಿಯನ್ನು ಸೇರಿಸಿ (3ದೊಡ್ಡ ಟೊಮೆಟೊಗಳನ್ನು ನಯವಾದ ಪೇಸ್ಟ್ ಗೆ ಬ್ಲೆಂಡ್ ಮಾಡುವ ಮೂಲಕ ಟೊಮೆಟೊ ಪ್ಯೂರಿಯನ್ನು ತಯಾರಿಸಲಾಗುತ್ತದೆ). ನಂತರ ಟೊಮೆಟೊ ಪೇಸ್ಟ್ ದಪ್ಪವಾಗುವವರೆಗೆ ಬೇಯಿಸಿ.

    * ಇದಕ್ಕೆ 1/4 ಟೀಸ್ಪೂನ್ ಅರಿಶಿನ, 1/2 ಟೀಸ್ಪೂನ್ ಮೆಣಸಿನ ಪುಡಿ, 1 ಟೀಸ್ಪೂನ್ ಬಿರಿಯಾನಿ ಮಸಾಲಾ ಮತ್ತು 1 ಟೀಸ್ಪೂನ್ ಉಪ್ಪು ಸೇರಿಸಿ ಅದೆಲ್ಲವನ್ನು ಚೆನ್ನಾಗಿ ಹುರಿಯಿರಿ. ಇದನ್ನೂ ಓದಿ: ಸಿಹಿ ಪ್ರಿಯರು ಸುಲಭವಾಗಿ ಮಾಡಿ ‘ಹಾಲು ಬರ್ಫಿ’

    * ಅದಕ್ಕೆ 1/2 ಕ್ಯಾರೆಟ್, 2 ಟೇಬಲ್‍ಸ್ಪೂನ್ ಬಟಾಣಿ, 2 ಟೇಬಲ್‍ಸ್ಪೂನ್ ಪುದಿನಾ ಮತ್ತು 1 ಟೇಬಲ್‍ಸ್ಪೂನ್ ಕೊತ್ತಂಬರಿ ಸೊಪ್ಪು ಸೇರಿಸಿ. ಒಂದು ನಿಮಿಷ ಹುರಿಯಿರಿ.

    * ನಂತರ 1 ಕಪ್ ತೆಂಗಿನ ಹಾಲು ಮತ್ತು 1 ಕಪ್ ನೀರನ್ನು ಸೇರಿಸಿ. ಚೆನ್ನಾಗಿ ಬೆರೆಸಿ. ಇದಾ ಬಳಿಕ 20ನಿಮಿಷ ನೆನೆಸಿಟ್ಟ ಅಕ್ಕಿಯನ್ನು ಯನ್ನುನ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ಇದನ್ನೂ ಓದಿ: ತುಪ್ಪದಲ್ಲಿ ಮಾಡಿ ಸವಿಯಿರಿ ರವೆ ಉಂಡೆ

    * ನಂತರ ಅಕ್ಕಿ ಸಂಪೂರ್ಣವಾಗಿ ಬೇಯುವವರೆಗೆ ಮುಚ್ಚಿ ಮತ್ತು ಪ್ರೆಶರ್ ಕುಕ್ ಮಾಡಿದರೆ ಟೊಮೆಟೊ ಬಿರಿಯಾನಿ ಸವಿಯಲು ಸಿದ್ಧ.