Tag: Tom Latham

  • 23ನೇ ವಯಸ್ಸಿಗೆ ಸಚಿನ್‌ ದಾಖಲೆ ಸರಿಗಟ್ಟಿದ ಬೆಂಗಳೂರು ಯುವಕ ರಚಿನ್‌

    23ನೇ ವಯಸ್ಸಿಗೆ ಸಚಿನ್‌ ದಾಖಲೆ ಸರಿಗಟ್ಟಿದ ಬೆಂಗಳೂರು ಯುವಕ ರಚಿನ್‌

    – ಕಿಂಗ್‌ ಕೊಹ್ಲಿಯನ್ನೇ ಹಿಂದಿಕ್ಕಿದ ರಚಿನ್‌ ರವೀಂದ್ರ

    ಧರ್ಮಶಾಲಾ: ಸದ್ಯ ಟೀಂ ಇಂಡಿಯಾ ಸ್ಟಾರ್‌ ಪ್ಲೇಯರ್‌ ವಿರಾಟ್‌ ಕೊಹ್ಲಿ (Virat Kohli), ಕ್ರಿಕೆಟ್‌ ದಂತಕಥೆ ಸಚಿನ್‌ ತೆಂಡೂಲ್ಕರ್‌ (Sachin Tendulkar) ಅವರ ಶತಕ ದಾಖಲೆಯನ್ನು ಸರಿಗಟ್ಟುತ್ತಾರೆ ಎಂಬುದು ಚರ್ಚೆಯಲ್ಲಿರುವ ವಿಷಯ. ಈ ನಡುವೆ ಕಿವೀಸ್‌ ತಂಡದಲ್ಲಿ ಆಡುತ್ತಿರುವ ಬೆಂಗಳೂರು ಮೂಲದ ಯುವಕ ತಾನು ಪ್ರವೇಶಿಸಿದ ಚೊಚ್ಚಲ ವಿಶ್ವಕಪ್‌ ಆವೃತ್ತಿಯಲ್ಲೇ ಸಚಿನ್‌ ತೆಂಡೂಲ್ಕರ್‌ ಅವರ ದಾಖಲೆಯನ್ನ ಸರಿಗಟ್ಟಿದ್ದಾರೆ.

    ಶನಿವಾರ (ಅ.28) ಧರ್ಮಶಾಲಾದ HPCA ಕ್ರೀಡಾಂಗಣದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಆಸ್ಟ್ರೇಲಿಯಾದ ತಂಡವು 49.2 ಓವರ್‌ಗಳಿಗೆ 388 ರನ್‌ಗಳಿಗೆ ಆಲೌಟ್‌ ಆಯಿತು. ಬೃಹತ್‌ ಮೊತ್ತದ ಗುರಿ ಬೆನ್ನತ್ತಿದ ನ್ಯೂಜಿಲೆಂಡ್‌ (New Zealand) 50 ಓವರ್‌ಗಳಲ್ಲಿ 9 ವಿಕೆಟ್‌ ನಷ್ಟಕ್ಕೆ 383 ರನ್‌ ಗಳಿಸಿ ವಿರೋಚಿತ ಸೋಲಿಗೆ ತುತ್ತಾಯಿತು. ಇದನ್ನೂ ಓದಿ: World Cup 2023: ಸಿಕ್ಸರ್‌, ಬೌಂಡರಿಗಳ ಸುರಿಮಳೆ – ಭಾರತದ ನೆಲದಲ್ಲಿ ಇತಿಹಾಸ ಸೃಷ್ಟಿಸಿದ ಆಸೀಸ್‌

    ಈ ಪಂದ್ಯದಲ್ಲಿ ಆಸೀಸ್‌ ಬೌಲರ್‌ಗಳನ್ನ ಬೆಂಡೆತ್ತಿದ್ದ ಕಿವೀಸ್‌ ಆಟಗಾರ ರಚಿನ್‌ ರವೀಂದ್ರ 77 ಎಸೆತಗಳಲ್ಲೇ 5 ಸಿಕ್ಸರ್‌, 7 ಬೌಂಡರಿಗಳ ನೆರವಿನೊಂದಿಗೆ ಶತಕ ಸಿಡಿಸಿ ಮಿಂಚಿದರು. ಒಟ್ಟು 89 ಎಸೆತಗಳನ್ನು ಎದುರಿಸಿದ ರವೀಂದ್ರ (Rachin Ravindra) 116 ರನ್‌ (9 ಬೌಂಡರಿ, 5 ಸಿಕ್ಸರ್‌) ಬಾರಿಸುವ ಮೂಲಕ ಸ್ಪೋಟಕ ಪ್ರದರ್ಶನ ನೀಡಿ ಗಮನ ಸೆಳೆದರು. ಈ ಶತಕದೊಂದಿಗೆ ಭಾರತದ ಲೆಜೆಂಡ್ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಅವರ ವಿಶೇಷ ದಾಖಲೆಯೊಂದನ್ನೂ ಸರಿಗಟ್ಟಿದರು.

    24 ವರ್ಷಕ್ಕಿಂತ ಕಡಿಮೆ ವಯಸ್ಸಿನವರು ಏಕದಿನ ವಿಶ್ವಕಪ್‌ ಇತಿಹಾಸದಲ್ಲಿ 2 ಶತಕಗಳನ್ನು ಗಳಿಸಿದವರಲ್ಲಿ ಸಚಿನ್‌ ತೆಂಡೂಲ್ಕರ್‌ ಮೊದಲಿಗರಾಗಿದ್ದರು. ಸಚಿನ್‌ 23 ವರ್ಷದವರಾಗಿದ್ದಾಗ 1996ರ ವಿಶ್ವಕಪ್‌ನಲ್ಲಿ (World Cup) 2 ಶತಕ ಸಿಡಿಸಿದ್ದರು. ಇದೀಗ 23 ವರ್ಷ ವಯಸ್ಸಿನ ರಚಿನ್‌ ರವೀಂದ್ರ 2023ರ ವಿಶ್ವಕಪ್‌ ಟೂರ್ನಿಯಲ್ಲಿ 2 ಶತಕ ಸಿಡಿಸಿ ಸಚಿನ್‌ ದಾಖಲೆಯನ್ನ ಸರಿಗಟ್ಟಿದ್ದಾರೆ. ಇದನ್ನೂ ಓದಿ: World Cup 2023: ರೋಚಕ ಪಂದ್ಯದಲ್ಲಿ ಆಸೀಸ್‌ಗೆ 5 ರನ್‌ಗಳ ಜಯ – ಹೋರಾಡಿ ಸೋತ ಕಿವೀಸ್‌  

    ರಚಿನ್‌ ರವೀಂದ್ರ ಅವರು ನ್ಯೂಜಿಲೆಂಡ್‌ನ ವೆಲ್ಲಿಂಗ್ಟನ್‌ನಲ್ಲಿ ಜನಿಸಿದ್ದರೂ ಅವರ ಅಪ್ಪ-ಅಮ್ಮ ಮೂಲತಃ ಬೆಂಗಳೂರಿನವರು. ತಂದೆ ರವಿ ಕೃಷ್ಣಮೂರ್ತಿ ಹಾಗೂ ತಾಯಿ ದೀಪಾ ಕೃಷ್ಣಮೂರ್ತಿ ಅವರು ಸಾಫ್ಟ್‌ವೇರ್‌ ಎಂಜಿನಿಯರ್‌ಗಳಾಗಿದ್ದು, ಉದ್ಯೋಗ ಅರಸಿ 1990ರ ದಶಕದಲ್ಲಿ ಬೆಂಗಳೂರಿನಿಂದ ನ್ಯೂಜಿಲೆಂಡ್‌ಗೆ ತೆರಳಿದ್ದರು. ರಚಿನ್‌ ರವೀಂದ್ರ ಅವರ ತಂದೆ, ಸಾಫ್ಟ್‌ವೇರ್‌ ಎಂಜಿನಿಯರ್‌ ಆಗಿದ್ದರೂ ಅಪ್ಪಟ ಕ್ರಿಕೆಟ್‌ ಅಭಿಮಾನಿ. ಅದರಲ್ಲೂ ರವಿ ಕೃಷ್ಣಮೂರ್ತಿ ಅವರು ಭಾರತೀಯ ಕ್ರಿಕೆಟ್‌ ದಿಗ್ಗಜರಾದ ಸಚಿನ್‌ ತೆಂಡೂಲ್ಕರ್‌ ಹಾಗೂ ರಾಹುಲ್‌ ದ್ರಾವಿಡ್‌ ಅವರ ಪಕ್ಕಾ ಫ್ಯಾನ್‌. ಈ ಕಾರಣದಿಂದಾಗಿ ರಾಹುಲ್‌ ದ್ರಾವಿಡ್‌ (Rahul Dravid) ಹೆಸರಿನಿಂದ ʻರʼ ಮತ್ತು ಸಚಿನ್‌ ತೆಂಡೂಲ್ಕರ್‌ (Sachin Tendulkar) ಹೆಸರಿನಿಂದ ʻಚಿನ್‌ʼ ಅಕ್ಷರಗಳನ್ನು ತೆಗೆದುಕೊಂಡು ತಮ್ಮ ಪುತ್ರನಿಗೆ ರಚಿನ್‌ ಎಂದು ಹೆಸರಿಟ್ಟಿದ್ದರು ಎಂಬುದು ವಿಶೇಷ. ಇದನ್ನೂ ಓದಿ: IND vs ENG: 2019 ರ ವಿಶ್ವಕಪ್ ಪಂದ್ಯದಲ್ಲಿ ಭಾರತ ಕೊನೆ ಬಾರಿಗೆ ಇಂಗ್ಲೆಂಡ್ ವಿರುದ್ಧ ಕಣಕ್ಕಿಳಿದಾಗ ಏನಾಗಿತ್ತು?

    ಕೊಹ್ಲಿ ಹಿಂದಿಕ್ಕಿದ ರವೀಂದ್ರ: ಪ್ರಸ್ತುತ ವಿಶ್ವಕಪ್‌ ಕ್ರಿಕೆಟ್‌ನಲ್ಲಿ 354 ರನ್‌ ಗಳಿಸಿದ್ದ ಕಿಂಗ್‌ ಕೊಹ್ಲಿ ಅತಿಹೆಚ್ಚು ರನ್‌ ಗಳಿಸಿದ 4ನೇ ಬ್ಯಾಟರ್‌ ಎನಿಸಿಕೊಂಡಿದ್ದರು. ಆದ್ರೆ ಆಸೀಸ್‌ ವಿರುದ್ಧ ಸ್ಫೋಟಕ ಶತಕ ಸಿಡಿಸುವ ಮೂಲಕ 6 ಪಂದ್ಯಗಳಲ್ಲಿ 2 ಶತಕ ಸೇರಿ 406 ರನ್‌ ಗಳಿಸಿರುವ ರಚಿನ್‌ ರವೀಂದ್ರ ಕೊಹ್ಲಿಯನ್ನು ಹಿಂದಿಕ್ಕಿ 3ನೇ ಸ್ಥಾನಕ್ಕೆ ಜಿಗಿದಿದ್ದಾರೆ. 431 ರನ್‌ ಗಳಿಸಿರುವ ಕ್ವಿಂಟನ್‌ ಡಿಕಾಕ್‌ ಮೊದಲ ಸ್ಥಾನದಲ್ಲಿ, 413 ರನ್‌ ಗಳಿಸಿರುವ ಡೇವಿಡ್‌ ವಾರ್ನರ್‌ 2ನೇ ಸ್ಥಾನದಲ್ಲಿ ಹಾಗೂ 356 ರನ್‌ ಗಳಿಸಿರುವ ಏಡನ್‌ ಮಾರ್ಕ್ರಮ್‌ 4ನೇ ಸ್ಥಾನದಲ್ಲಿದ್ದರೆ, 354 ರನ್‌ ಗಳಿಸಿರುವ ಕೊಹ್ಲಿ 5ನೇ ಸ್ಥಾನಕ್ಕೆ ಕುಸಿದಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • World Cup 2023: ಸಿಕ್ಸರ್‌, ಬೌಂಡರಿಗಳ ಸುರಿಮಳೆ – ಭಾರತದ ನೆಲದಲ್ಲಿ ಇತಿಹಾಸ ಸೃಷ್ಟಿಸಿದ ಆಸೀಸ್‌

    World Cup 2023: ಸಿಕ್ಸರ್‌, ಬೌಂಡರಿಗಳ ಸುರಿಮಳೆ – ಭಾರತದ ನೆಲದಲ್ಲಿ ಇತಿಹಾಸ ಸೃಷ್ಟಿಸಿದ ಆಸೀಸ್‌

    ಧರ್ಮಶಾಲಾ: ಇಲ್ಲಿನ ಹಿಮಾಚಲ ಪ್ರದೇಶ ಕ್ರಿಕೆಟ್ ಅಸೋಸಿಯೇಷನ್ ಕ್ರೀಡಾಂಗಣದಲ್ಲಿ ಆಸ್ಟ್ರೇಲಿಯಾ (Australia) ತಂಡವು ನ್ಯೂಜಿಲೆಂಡ್‌ (New Zealand) ವಿರುದ್ಧ 388 ರನ್‌ ಸಿಡಿಸುವ ಮೂಲಕ ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್‌ನಲ್ಲಿ (ODI Cricket) ಹೊಸ ಇತಿಹಾಸ ಸೃಷ್ಟಿಸಿದೆ.

    ಏಕದಿನ ವಿಶ್ವಕಪ್‌ ಟೂರ್ನಿಯಲ್ಲಿ 5 ಬಾರಿ ಚಾಂಪಿಯನ್‌ ಆಗಿರುವ ಆಸೀಸ್‌, ಸತತ 3 ಪಂದ್ಯಗಳಲ್ಲೂ 350ಕ್ಕೂ ಹೆಚ್ಚು ರನ್‌ಗಳಿಸಿದ ಮೊದಲ ತಂಡವಾಗಿ ಹೊರಹೊಮ್ಮಿದೆ. ಧರ್ಮಶಾಲಾ ಕ್ರೀಡಾಂಗಣದಲ್ಲಿ ನ್ಯೂಜಿಲೆಂಡ್‌ ವಿರುದ್ಧ 388 ರನ್‌ಗಳನ್ನು ಸಿಡಿಸಿದ ಬಳಿಕ ಆಸೀಸ್‌ ತಂಡ ಈ ದಾಖಲೆ ಬರೆದಿದೆ. ಇದನ್ನೂ ಓದಿ: ಪಾಕ್‌ ವಿರುದ್ಧ ಗೆಲುವನ್ನು ಹನುಮಾನ್‌ಗೆ ಅರ್ಪಿಸಿದ ಮಹರಾಜ್‌ – ಜೈ ಶ್ರೀ ಹನುಮಾನ್‌ ಫುಲ್‌ ಟ್ರೆಂಡ್‌

    ಪ್ರಸಕ್ತ ವಿಶ್ವಕಪ್‌ ಟೂರ್ನಿಯಲ್ಲಿ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ (Chinnaswamy Stadium) ಪಾಕಿಸ್ತಾನ (Pakistan) ವಿರುದ್ಧದ ಪಂದ್ಯದಲ್ಲಿ 9 ವಿಕೆಟ್‌ ನಷ್ಟಕ್ಕೆ 367 ರನ್‌, ದೆಹಲಿಯ ಅರುಣ್‌ ಜೇಟ್ಲಿ ಕ್ರೀಡಾಂಗಣದಲ್ಲಿ ನೆದರ್ಲೆಂಡ್ಸ್‌ ವಿರುದ್ಧದ ಪಂದ್ಯದಲ್ಲಿ 8 ವಿಕೆಟ್‌ ನಷ್ಟಕ್ಕೆ 399 ರನ್‌ ನಂತರ ನ್ಯೂಜಿಲೆಂಡ್‌ ವಿರುದ್ಧ ಧರ್ಮಶಾಲಾ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ 388 ರನ್‌ ಸಿಡಿಸುವ ಮೂಲಕ ಆಸ್ಟ್ರೇಲಿಯಾ ತಂಡ ಈ ವಿಶೇಷ ಸಾಧನೆ ಮಾಡಿತು.

    ಅಲ್ಲದೇ ವಿಶ್ವಕಪ್‌ ಟೂರ್ನಿಯಲ್ಲಿ ಇತ್ತಂಡಗಳಿಂದ ಒಟ್ಟು 771 ರನ್‌ ದಾಖಲಾಗಿದ್ದು, ಇದು ಟೂರ್ನಿಯಲ್ಲಿ ಗರಿಷ್ಠ ಸ್ಕೋರ್‌ ಆಗಿದೆ. ದಕ್ಷಿಣ ಆಫ್ರಿಕಾ ಮತ್ತು ಶ್ರೀಲಂಕಾ ನಡುವೆ ದೆಹಲಿಯ ಅರುಣ್‌ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಒಟ್ಟು 754 ರನ್‌ ದಾಖಲಾಗಿರುವುದು 2ನೇ ಗರಿಷ್ಠ ಸ್ಕೋರ್‌ ಆಗಿದೆ. ಕಿವೀಸ್‌ ಮತ್ತು ಆಸೀಸ್‌ ನಡುವಿನ ಪಂದ್ಯದಲ್ಲಿ ಒಟ್ಟು 32 ಸಿಕ್ಸರ್‌ ಹಾಗೂ 65 ಬೌಂಡರಿಗಳು ಸಿಡಿದಿವೆ. ಆಸೀಸ್‌ ಪರ 20 ಸಿಕ್ಸರ್‌, 32 ಬೌಂಡರಿ ದಾಖಲಾದರೆ, ಕಿವೀಸ್‌ ಪರ 33 ಬೌಂಡರಿ ಹಾಗೂ 12 ಸಿಕ್ಸರ್‌ಗಳು ಮಾತ್ರ ದಾಖಲಾಗಿರುವುದು ವಿಶೇಷ. ಇದನ್ನೂ ಓದಿ: World Cup 2023: ರೋಚಕ ಪಂದ್ಯದಲ್ಲಿ ಆಸೀಸ್‌ಗೆ 5 ರನ್‌ಗಳ ಜಯ – ಹೋರಾಡಿ ಸೋತ ಕಿವೀಸ್‌

    ಇನ್ನೂ ಶನಿವಾರ ನಡೆದ ಜಿದ್ದಾಜಿದ್ದಿ ಕಣದಲ್ಲಿ ನ್ಯೂಜಿಲೆಂಡ್‌ ಆಸೀಸ್‌ ವಿರುದ್ಧ ಚೇಸಿಂಗ್‌ನಲ್ಲಿ 383 ರನ್‌ ಗಳಿಸಿತು. ಇದು ವಿಶ್ವಕಪ್‌ ಟೂರ್ನಿಯಲ್ಲಿ ಅತ್ಯಧಿಕ ಚೇಸಿಂಗ್‌ ರನ್‌ ಎನ್ನುವ ಜೊತೆಗೆ ಆಸ್ಟ್ರೇಲಿಯಾ ವಿರುದ್ಧ ವಿಶ್ವಕಪ್‌ ಟೂರ್ನಿಯಲ್ಲಿ ಯಾವುದೇ ತಂಡದಿಂದ ದಾಖಲಾದ ಗರಿಷ್ಠ ಸ್ಕೋರ್‌ ಸಹ ಆಗಿದೆ. 2019ರ ವಿಶ್ವಕಪ್‌ ಟೂರ್ನಿಯಲ್ಲಿ ಭಾರತ ಆಸ್ಟ್ರೇಲಿಯಾ ವಿರುದ್ಧ 352 ರನ್‌ ಸಿಡಿಸಿದ್ದು, ಇದುವರೆಗಿನ ಗರಿಷ್ಠ ಸ್ಕೋರ್‌ ಆಗಿತ್ತು. ಆದ್ರೆ 2015ರ ವಿಶ್ವಕಪ್‌ ಟೂರ್ನಿಯಲ್ಲಿ ನ್ಯೂಜಿಲೆಂಡ್‌ ವೆಸ್ಟ್‌ ಇಂಡೀಸ್‌ ವಿರುದ್ಧ 393 ರನ್‌ ಗಳಿಸಿದ್ದು, ಈವರೆಗಿನ ತಂಡದ ಗರಿಷ್ಠ ಸ್ಕೋರ್‌ ಆಗಿದೆ. ಇದನ್ನೂ ಓದಿ: IND vs ENG: 2019 ರ ವಿಶ್ವಕಪ್ ಪಂದ್ಯದಲ್ಲಿ ಭಾರತ ಕೊನೆ ಬಾರಿಗೆ ಇಂಗ್ಲೆಂಡ್ ವಿರುದ್ಧ ಕಣಕ್ಕಿಳಿದಾಗ ಏನಾಗಿತ್ತು?

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • World Cup 2023: ರೋಚಕ ಪಂದ್ಯದಲ್ಲಿ ಆಸೀಸ್‌ಗೆ 5 ರನ್‌ಗಳ ಜಯ – ಹೋರಾಡಿ ಸೋತ ಕಿವೀಸ್‌

    World Cup 2023: ರೋಚಕ ಪಂದ್ಯದಲ್ಲಿ ಆಸೀಸ್‌ಗೆ 5 ರನ್‌ಗಳ ಜಯ – ಹೋರಾಡಿ ಸೋತ ಕಿವೀಸ್‌

    ಧರ್ಮಶಾಲಾ: ಕೊನೇ ಕ್ಷಣದವರೆಗೂ ಜಿದ್ದಾಜಿದ್ದಿಯಿಂದ ಕೂಡಿದ್ದ ರೋಚಕ ಪಂದ್ಯದಲ್ಲಿ ಆಸ್ಟ್ರೇಲಿಯಾ (Australia) ತಂಡವು ನ್ಯೂಜಿಲೆಂಡ್‌ (New Zealand) ವಿರುದ್ಧ 5 ರನ್‌ಗಳ ರೋಚಕ ಜಯ ಸಾಧಿಸಿದೆ. ಪಾಯಿಂಟ್ಸ್‌ ಪಟ್ಟಿಯಲ್ಲಿ ಟಾಪ್‌-4ರಲ್ಲಿರುವ ಬಲಿಷ್ಠ ತಂಡಗಳ ಕಾದಾಟದಲ್ಲಿ ಆಸೀಸ್‌ಗೆ ಜಯ ಸಿಕ್ಕಿದೆ. ಇನ್ನೂ ವಿಶ್ವಕಪ್‌ ಟೂರ್ನಿಯಲ್ಲೇ ಅತಿಹೆಚ್ಚು ರನ್‌ ಚೇಸ್‌ ಮಾಡಿದ ಖ್ಯಾತಿ ಗಳಿಸಿದರೂ ಕಿವೀಸ್‌ ವಿರೋಚಿತ ಸೋಲನುಭವಿಸಿದೆ.

    ಕೊನೆಯ 6 ಎಸೆತಗಳಲ್ಲಿ ಕಿವೀಸ್‌ ಗೆಲುವಿಗೆ 19 ರನ್‌ ಬೇಕಿತ್ತು. ಮಿಚೆಲ್‌ ಸ್ಟಾರ್ಕ್‌ ಬೌಲಿಂಗ್‌ನಲ್ಲಿ ಟ್ರೆಂಟ್‌ ಬೌಲ್ಟ್‌ ಕ್ರೀಸ್‌ನಲ್ಲಿದ್ದರು. ಮೊದಲ ಎಸೆತವನ್ನು ಜೇಮ್ಸ್‌ ನೀಶಮ್‌ಗೆ (James Neesham) ಸಿಂಗಲ್ಸ್‌ ತಂದುಕೊಟ್ಟರು. ಆದ್ರೆ 2ನೇ ಎಸೆತದಲ್ಲೇ ಸ್ಟಾರ್ಕ್‌ ವೈಡ್‌ನೊಂದಿಗೆ ಬೌಂಡರಿ ಸೇರಿ 5 ರನ್‌ ಬಿಟ್ಟುಕೊಟ್ಟರು. ಮುಂದಿನ ಮೂರು ಎಸೆತಗಳಲ್ಲೂ ಕಿವೀಸ್‌ ತಂಡಕ್ಕೆ ತಲಾ 2 ರನ್‌ ಸೇರ್ಪಡೆಯಾಯಿತು. 5ನೇ ಎಸೆತದಲ್ಲಿ ಜೇಮ್ಸ್‌ ಎರಡು ರನ್‌ ಖದಿಯಲು ಯತ್ನಿಸಿ 1 ರನ್‌ ಕಲೆಹಾಕಿದರು. 2ನೇ ರನ್‌ ಖದಿಯಲು ಯತ್ನಿಸಿದ ಜೇಮ್ಸ್‌ ರನೌಟ್‌ಗೆ ತುತ್ತಾದರು. ಕೊನೆಯ ಎಸೆತದಲ್ಲಿ ಯಾವುದೇ ರನ್‌ ಬಾರದ ಕಾರಣ ಕಿವೀಸ್‌ ವಿರೋಚಿತ ಸೋಲನುಭವಿಸಿತು.

    ಶನಿವಾರ (ಅಕ್ಟೋಬರ್ 28) ಧರ್ಮಶಾಲಾದ ಹಿಮಾಚಲ ಪ್ರದೇಶ ಕ್ರಿಕೆಟ್ ಅಸೋಸಿಯೇಷನ್ ಕ್ರೀಡಾಂಗಣದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಆಸ್ಟ್ರೇಲಿಯಾದ ತಂಡವು 49.2 ಓವರ್‌ಗಳಿಗೆ 388 ರನ್‌ಗಳಿಗೆ ಆಲೌಟ್‌ ಆಯಿತು. ಬೃಹತ್‌ ಮೊತ್ತದ ಗುರಿ ಬೆನ್ನತ್ತಿದ ನ್ಯೂಜಿಲೆಂಡ್‌ 50 ಓವರ್‌ಗಳಲ್ಲಿ 9 ವಿಕೆಟ್‌ ನಷ್ಟಕ್ಕೆ 383 ರನ್‌ ಗಳಿಸಿ ವಿರೋಚಿತ ಸೋಲಿಗೆ ತುತ್ತಾಯಿತು. ವಿಶ್ವಕಪ್‌ ಟೂರ್ನಿಯಲ್ಲಿ ಪಾಕಿಸ್ತಾನ ತಂಡ 345 ರನ್‌ ಚೇಸ್‌ ಮಾಡಿದ್ದು, ಇದುವರೆಗಿನ ದಾಖಲೆಯಾಗಿತ್ತು. ಆದ್ರೆ ಕಿವೀಸ್‌ 383 ರನ್‌ವರೆಗೂ ಚೇಸ್‌ ಮಾಡಿದ್ದು, ದಾಖಲೆಯಾಗಿದೆ.

    ಚೇಸಿಂಗ್‌ ಆರಂಭಿಸಿದ ಕಿವೀಸ್‌ ಉತ್ತಮ ಆರಂಭ ಪಡೆಯುವಲ್ಲಿ ವಿಫಲವಾದರೂ 3ನೇ ವಿಕೆಟ್‌ಗೆ ಡೇರಿಲ್ ಮಿಚೆಲ್ (Daryl Mitchell) ಹಾಗೂ ರಚಿನ್‌ ರವೀಂದ್ರ (Rachin Ravindra) ಬ್ಯಾಟಿಂಗ್‌ ನೆರವಿನಿಂದ ಚೇತರಿಸಿಕೊಂಡಿತ್ತು. 3ನೇ ವಿಕೆಟ್‌ಗೆ ಡೇರಿಲ್‌ ಮಿಚೆಲ್‌ ಹಾಗೂ ರವೀಂದ್ರ ಜೋಡಿ 6 ಎಸೆತಗಳಲ್ಲಿ 96 ರನ್‌ಗಳ ಜೊತೆಯಾಟ ನೀಡಿತ್ತು. ಆ ನಂತರ ಲಾಥಮ್‌ ಹಾಗೂ ರವೀಂದ್ರ ಜೋಡಿ 44 ಎಸೆತಗಳಲ್ಲಿ 54 ರನ್‌, ಫಿಲಿಪ್ಸ್‌ ಹಾಗೂ ರವೀಂದ್ರ ಜೋಡಿ 34 ಎಸೆತಗಳಲ್ಲಿ 43 ರನ್‌ಗಳ ಜೊತೆಯಾಟ ನೀಡಿದರು. ಒಂದೆಡೆ ರನ್‌ ಕಲೆಹಾಕುತ್ತಿದ್ದ ಕಿವೀಸ್‌ ಮತ್ತೊಂದೆಡೆ ವಿಕೆಟ್‌ ಕಳೆದುಕೊಳ್ಳುತ್ತಾ ಸಾಗಿತು, ಇದು ತಂಡದ ಸೋಲಿಗೆ ಕಾರಣವಾಯಿತು.

    ಕಿವೀಸ್‌ ಪರ ಡಿವೋನ್‌ ಕಾನ್ವೆ 28 ರನ್‌, ವಿಲ್‌ ಯಂಗ್‌ 32 ರನ್‌ ಗಳಿಸಿದ್ರೆ, ರಚಿನ್‌ ರವೀಂದ್ರ 116 ರನ್‌ (89 ಎಸೆತ, 5 ಸಿಕ್ಸರ್‌, 9 ಬೌಂಡರಿ) ಸಿಡಿಸಿ ಮಿಂಚಿದರು. ಈ ಮೂಲಕ ವಿಶ್ವಕಪ್‌ ಒಂದೇ ಟೂರ್ನಿಯಲ್ಲಿ ಕಿವೀಸ್‌ ಪರ ಎರಡು ಶತಕ ಸಿಡಿಸಿದ ದಿಗ್ಗಜರ ಎಲೈಟ್‌ ಪಟ್ಟಿ ಸೇರಿದರು. ಮಧ್ಯಮ ಕ್ರಮಾಂಕದಲ್ಲಿ ಡೇರಿಲ್‌ ಮಿಚೆಲ್‌ 51 ಎಸೆತಗಳಲ್ಲಿ 54 ರನ್‌ (1 ಸಿಕ್ಸರ್‌, 6 ಬೌಂಡರಿ) ಚಚ್ಚಿ ಔಟಾದರು. ಆ ನಂತ್ರ ಟಾಮ್‌ ಲಾಥಮ್‌ 21 ರನ್‌, ಗ್ಲೇನ್‌ ಫಿಲಿಪ್ಸ್‌ 12 ರನ್‌, ಮಿಚೆಲ್‌ ಸ್ಯಾಂಟ್ನರ್‌ 17 ರನ್‌, ಮ್ಯಾಟ್‌ ಹೆನ್ರಿ 9 ರನ್‌ ಗಳಿಸಿದ್ರೆ, ಜೇಮ್ಸ್‌ ನೀಶಮ್‌ 39 ಎಸೆತಗಳಲ್ಲಿ 51 ರನ್‌ (3 ಸಿಕ್ಸರ್‌, 3 ಬೌಂಡರಿ) ಗಳಿಸಿದರೆ, ಟ್ರೆಂಟ್‌ ಬೌಲ್ಟ್‌ 10 ರನ್‌ ಗಳಿಸಿ ಕ್ರೀಸ್‌ನಲ್ಲಿ ಉಳಿದರು.

    ಇದಕ್ಕೂ ಮುನ್ನ ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಆಸೀಸ್‌ ಪರ ಡೇವಿಡ್‌ ವಾರ್ನರ್‌ ಹಾಗೂ ಟ್ರಾವಿಸ್‌ ಹೆಡ್‌ ಮೊದಲ ವಿಕೆಟ್‌ಗೆ 19.1 ಓವರ್‌ಗಳಲ್ಲೇ 175 ರನ್‌ಗಳ ಜೊತೆಯಾಟ ನೀಡಿದರು.

    ಡೇವಿಡ್ ವಾರ್ನರ್ ಹಾಗೂ ಟ್ರಾವಿಸ್ ಹೆಡ್ ಜಿದ್ದಾಜಿದ್ದಿಗೆ ಬಿದ್ದವರಂತೆ ರನ್ ಗಳಿಸಿದರು. ವಿಶ್ವಕಪ್ ಪದಾರ್ಪಣೆ ಪಂದ್ಯದಲ್ಲೇ 59 ಎಸೆತಗಳಲ್ಲೇ ಸ್ಫೋಟಕ ಶತಕ ಸಿಡಿಸಿ ದಾಖಲೆ ನಿರ್ಮಿಸಿದ ಟ್ರಾವಿಸ್ ಹೆಡ್, ಮೊದಲ ವಿಕೆಟ್‌ಗೆ ಡೇವಿಡ್ ವಾರ್ನರ್ ಜೊತೆಗೂಡಿ 175 ರನ್‌ಗಳ ದಾಖಲೆ ಜೊತೆಯಾಟವನ್ನೂ ಆಡಿದರು. ಮೊದಲ 10 ಓವರ್‌ಗಳಲ್ಲೇ 118 ರನ್ ಕಲೆ ಹಾಕಿದ್ದ ವಾರ್ನರ್- ಹೆಡ್ ಜೋಡಿಯು ವಿಶ್ವದಾಖಲೆ ನಿರ್ಮಿಸಿತು. ವಾರ್ನರ್ ಹಾಗೂ ಹೆಡ್ ಸಿಡಿಲಬ್ಬರದ ಆಟದ ನೆರವಿನಿಂದ ಆಸ್ಟ್ರೇಲಿಯಾ, ನ್ಯೂಜಿಲೆಂಡ್‌ಗೆ 389 ರನ್‌ಗಳ ಕಠಿಣ ಗುರಿ ನೀಡಿತು.

    ಒಟ್ಟು 67 ಎಸೆತಗಳನ್ನು ಎದುರಿಸಿದ ಟ್ರಾವಿಸ್‌ ಹೆಡ್‌ 109 ರನ್‌ (7 ಸಿಕ್ಸರ್‌, 10 ಬೌಂಡರಿ) ಗಳಿಸಿದರೆ, ಡೇವಿಡ್‌ ವಾರ್ನರ್‌ 65 ಎಸೆತಗಳಲ್ಲಿ 81 ರನ್‌ (6 ಸಿಕ್ಸರ್‌, 5 ಬೌಂಡರಿ) ಗಳಿಸಿದರು. ನಂತರ ಕಣಕ್ಕಿಳಿದ ಮಿಚೆಲ್‌ ಮಾರ್ಷ್‌ 36 ರನ್‌, ಸ್ಟೀವ್‌ ಸ್ಮಿತ್‌ ಹಾಗೂ ಮಾರ್ನಸ್‌ ಲಾಬುಶೇನ್‌ ತಲಾ 18 ರನ್‌, ಗ್ಲೇನ್‌ ಮ್ಯಾಕ್ಸ್‌ವೆಲ್‌ 41 ರನ್‌ (24 ಎಸೆತ, 2 ಸಿಕ್ಸರ್‌, 5 ಬೌಂಡರಿ), ಜಾಸ್‌ ಇಂಗ್ಲಿಸ್‌ 38 ರನ್‌, ಪ್ಯಾಟ್‌ ಕಮ್ಮಿನ್ಸ್‌ 37 ರನ್‌, ಮಿಚೆಲ್‌ ಸ್ಟಾರ್ಕ್‌ ಕೇವಲ ಒಂದು ರನ್‌ ಗಳಿಸಿದ್ರೆ, ಆಡಂ ಝಂಪಾ ಶೂನ್ಯಕ್ಕೆ ನಿರ್ಗಮಿಸಿದರು.

    ಕಿವೀಸ್‌ ಪರ ಟ್ರೆಂಟ್‌ ಬೌಲ್ಟ್‌, ಗ್ಲೇನ್‌ ಫಿಲಿಪ್ಸ್‌ ತಲಾ 3 ವಿಕೆಟ್‌ ಕಿತ್ತರೆ, ಮಿಚೆಲ್‌ ಸ್ಯಾಂಟ್ನರ್‌ 2 ವಿಕೆಟ್‌, ಮ್ಯಾಟ್ ಹೆನ್ರಿ ಹಾಗೂ ಜೇಮ್ಸ್‌ ನೀಶಾಮ್‌ ತಲಾ ಒಂದೊಂದು ವಿಕೆಟ್‌ ಕಿತ್ತರು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಕಿವೀಸ್ ಟೆಸ್ಟ್ ನಾಯಕತ್ವಕ್ಕೆ ಕೇನ್ ವಿಲಿಯಮ್ಸನ್ ಗುಡ್‌ಬೈ

    ಕಿವೀಸ್ ಟೆಸ್ಟ್ ನಾಯಕತ್ವಕ್ಕೆ ಕೇನ್ ವಿಲಿಯಮ್ಸನ್ ಗುಡ್‌ಬೈ

    ವೆಲ್ಲಿಂಗ್ಟನ್: ನ್ಯೂಜಿಲೆಂಡ್ (New Zealand) ತಂಡದ ನಾಯಕ ಕೇನ್ ವಿಲಿಯಮ್ಸನ್ (Kane Williamson) ಟೆಸ್ಟ್ ತಂಡದ ನಾಯಕತ್ವಕ್ಕೆ ಹಠಾತ್ ಗುಡ್‌ಬೈ ಹೇಳಿದ್ದಾರೆ.

    ಇದರಿಂದ ನ್ಯೂಜಿಲೆಂಡ್ (NewZealand) ಟೆಸ್ಟ್ ತಂಡದ (Test Cricket) ನಾಯಕತ್ವಕ್ಕೆ ಹಿರಿಯ ವೇಗಿ ಟಿಮ್ ಸೌಥಿ (Tim Southee) ಅವರನ್ನು ನೇಮಿಸಿದೆ. ಟಾಮ್ ಲ್ಯಾಥಮ್ (Tom Latham) ಅವರನ್ನ ಟೆಸ್ಟ್ ಉಪನಾಯಕನನ್ನಾಗಿ ಮಾಡಿದೆ. ಇದನ್ನೂ ಓದಿ: ತಂದೆಯ ಸಾಧನೆ ಸರಿಗಟ್ಟಿದ ಮಗ – ಮೊದಲ ರಣಜಿ ಪಂದ್ಯದಲ್ಲೇ ಅರ್ಜುನ್‌ ತೆಂಡೂಲ್ಕರ್‌ ಶತಕ

    ಕೇನ್ ವಿಲಿಯಮ್ಸನ್ (Kane Williamson) ಈವರೆಗೆ ಮುನ್ನಡೆಸಿದ ಅಂತಾರಾಷ್ಟ್ರೀಯ 38 ಟೆಸ್ಟ್ ಪಂದ್ಯಗಳ ಪೈಕಿ 22 ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ. 10ರಲ್ಲಿ ಸೋಲು ಕಂಡಿದೆ. ಇನ್ನುಳಿದ 8 ಪಂದ್ಯಗಳು ಡ್ರಾನಲ್ಲಿ ಅಂತ್ಯವಾಗಿವೆ. 2021ರಲ್ಲಿ ಕೇನ್ ವಿಲಿಯಮ್ಸನ್ ನಾಯಕತ್ವದಲ್ಲಿ ನ್ಯೂಜಿಲೆಂಡ್ ತಂಡ, ಉದ್ಘಾಟನಾ ಆವೃತ್ತಿಯ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ (Test Worldcup) ಫೈನಲ್ ಪಂದ್ಯದಲ್ಲಿ ಭಾರತ ತಂಡವನ್ನು (Team India) ಮಣಿಸಿ ಚೊಚ್ಚಲ ಪ್ರಶಸ್ತಿ ಮುಡಿಗೇರಿಸಿಕೊಂಡಿತ್ತು. ಶೇ.44 ರಷ್ಟು ಯಶಸ್ವಿಯಾಗಿರುವ ಕೇನ್ ವಿಲಿಯಮ್ಸನ್ ಟೆಸ್ಟ್‌ ಯಶಸ್ವಿನಾಯಕ ಎನ್ನಿಸಿಕೊಂಡಿದ್ದಾರೆ. 216ರಲ್ಲಿ ಬ್ರೆಂಡನ್ ಮೆಕಲಮ್ (Brendon McCullum) ಟೆಸ್ಟ್ ತಂಡದ ನಾಯಕರಾಗಿದ್ದರು. ಇದನ್ನೂ ಓದಿ: ನಾವು ಬಾಬರ್ ಅಜಮ್‍ಗಿಂತ ಹೆಚ್ಚಾಗಿ ನಿಮ್ಮನ್ನು ಪ್ರೀತಿಸುತ್ತೇವೆ – ಪಾಕ್ ಅಭಿಮಾನಿಗಳಿಂದ ಕೊಹ್ಲಿಗೆ ಸಂದೇಶ

    ಈ ಕುರಿತು ಮಾತನಾಡಿರುವ ಕೇನ್, `ಇದು ನನ್ನ ವೃತ್ತಿ ಜೀವನದ ಅತ್ಯಂತ ಮಹತ್ವದ ಹಂತವಾಗಿದೆ. ಇನ್ನುಮುಂದೆ ಮೈದಾನದ ಹೊರಗೂ ನನ್ನ ಕಾರ್ಯಭಾರ ಜವಾಬ್ದಾರಿ ಹೆಚ್ಚಾಗಲಿದೆ. ಹಾಗಾಗಿ ಈ ನಿರ್ಧಾರ ಸೂಕ್ತವೆನ್ನಿಸಿದೆ. ಇನ್ನು ನ್ಯೂಜಿಲೆಂಡ್ ಕ್ರಿಕೆಟ್ ಮಂಡಳಿ ಜೊತೆ ಚರ್ಚೆ ನಡೆಸಿದ ಬಳಿಕ, ವೈಟ್ ಬಾಲ್ ತಂಡಗಳ ನಾಯಕತ್ವದಲ್ಲಿ ಮುಂದುವರಿಯುತ್ತೇನೆ ಹಾಗೂ ಮುಂದಿನ ಎರಡು ವಿಶ್ವಕಪ್ ಟೂರ್ನಿಗಳಲ್ಲಿ ತಂಡವನ್ನು ಮುನ್ನಡೆಸುತ್ತೇನೆ’ ಎಂದು ಭಾವುಕರಾಗಿ ಹೇಳಿಕೊಂಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಲ್ಯಾಥಮ್‌ ಭರ್ಜರಿ ಶತಕ – ಕೀವಿಸ್‌ ಗೆ 7 ವಿಕೆಟ್‌ಗಳ ಜಯ

    ಲ್ಯಾಥಮ್‌ ಭರ್ಜರಿ ಶತಕ – ಕೀವಿಸ್‌ ಗೆ 7 ವಿಕೆಟ್‌ಗಳ ಜಯ

    ವೆಲ್ಲಿಂಗ್ಟನ್‌: ಟಾಮ್‌ಲ್ಯಾಥಮ್‌ (Tom Latham) ಭರ್ಜರಿ ಶತಕ ಹಾಗೂ ನಾಯಕ ಕೇನ್‌ ವಿಲಿಯಮ್ಸನ್‌ (Kane Williamson) ಅರ್ಧಶತಕದ ನೆರವಿನಿಂದ ಕಿವೀಸ್‌ ಪಡೆ ಟೀಂ ಇಂಡಿಯಾ (Team India) ವಿರುದ್ಧ 7 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದೆ.

    ಆಕ್ಲೆಂಡ್‌ನ ಈಡನ್ ಪಾರ್ಕ್‌ನಲ್ಲಿ ಭಾರತ ಮತ್ತು ನ್ಯೂಜಿಲೆಂಡ್ (New Zealand) ನಡುವಿನ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ಟಾಸ್‌ ಸೋತು ಕ್ರೀಸ್‌ಗಿಳಿದ ಟೀಂ ಇಂಡಿಯಾ ನಿಗದಿತ 50 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 306 ರನ್ ಗಳಿಸಿತ್ತು. 307 ರನ್‌ ಗುರಿ ಬೆನ್ನತ್ತಿದ ಆತಿಥೇಯ ನ್ಯೂಜಿಲೆಂಡ್ ತಂಡ 47.1 ಓವರ್‌ಗಳಲ್ಲಿ ಕೇವಲ 3 ವಿಕೆಟ್‌ ನಷ್ಟಕ್ಕೆ 309 ರನ್‌ ಗಳಿಸಿ ಗೆಲುವು ಸಾಧಿಸಿತು.

    ಕಿವೀಸ್‌ಗೆ ಆರಂಭಿಕ ಆಘಾತ:
    ಕಿವೀಸ್‌ ಪಡೆಗೆ ಆರಂಭದಲ್ಲೇ ಆಘಾತ ಎದುರಾಗಿತ್ತು. ಆರಂಭಿಕರಾಗಿ ಕಣಕ್ಕಿಳಿದ ಡಿವೋನ್‌ ಕಾನ್ವೆ ಮತ್ತು ಫಿನ್ ಅಲೆನ್ ಅತೀ ಬೇಗನೆ ಪೆವಿಲಿಯನ್‌ ಸೇರಿದರು. 7.3 ಓವರ್‌ನಲ್ಲಿ ಮೊದಲ ವಿಕೆಟ್‌ ಜೊತೆಯಾಟಕ್ಕೆ ಕೇವಲ 35 ರನ್‌ ದಾಖಲಿಸಿತ್ತು. ಫಿನ್‌ ಅಲೆನ್‌ 25 ಎಸೆತಗಳಲ್ಲಿ 25 ರನ್‌ ಗಳಿಸಿದ್ರೆ, ಡಿವೋನ್‌ ಕಾನ್ವೆ 42 ಎಸೆತಗಳಲ್ಲಿ 24 ರನ್‌ ಗಳಿಸಿ ಔಟಾದರು.

    ಈ ವೇಳೆ ನಾಯಕ ಕೇನ್‌ ವಿಲಿಯಮ್ಸನ್‌ ತಂಡಕ್ಕೆ ಆಸರೆಯಾದರು. ನಿಧಾನಗತಿಯಲ್ಲೇ ಬ್ಯಾಟಿಂಗ್‌ ಆರಂಭಿಸಿ ಜವಾಬ್ದಾರಿಯುತ ಅರ್ಧ ಶತಕ ಸಿಡಿಸಿದ್ರು. ಅವರೊಂದಿಗೆ ಜೊತೆಯಾದ ಟಾಮ್ ಲ್ಯಾಥಮ್ ಭರ್ಜರಿ ಬ್ಯಾಟಿಂಗ್‌ ಮೂಲಕ ಟೀಂ ಇಂಡಿಯಾ ಬೌಲರ್‌ಗಳ ದಾಳಿಯನ್ನ ಧೂಳಿಪಟ ಮಾಡಿ, ಕಿವೀಸ್‌ ಪಡೆಗೆ ಗೆಲುವು ತಂದುಕೊಟ್ಟರು.

    ಶತಕ ವಂಚಿತ ನಾಯಕ, ಲ್ಯಾಥಮ್‌ ಬ್ಯಾಟಿಂಗ್‌ ಮಿಂಚಿಂಗ್‌:
    2ನೇ ಕ್ರಮಾಂಕದಲ್ಲಿ ಕಣಕ್ಕಿಳಿದು ಕೊನೆಯವರೆಗೂ ಹೋರಾಡಿದ ಕೇನ್‌ ವಿಲಿಯಮ್ಸನ್‌ ಕೊನೆಗೂ ಶತಕ ವಂಚಿತರಾದರು. 98 ಎಸೆತಗಳಲ್ಲಿ 94 ರನ್‌ (7 ಬೌಂಡರಿ, 1 ಸಿಕ್ಸರ್)‌ ಸಿಡಿಸಿ ಜಯದ ಹಾದಿಗೆ ತಲುಪಿಸಿದ್ರು. ಮತ್ತೊಂದೆಡೆ ಸ್ಫೋಟಕ ಬ್ಯಾಟಿಂಗ್‌ ಮಾಡಿದ ಟಾಮ್‌ಲ್ಯಾಥಮ್‌ 104 ಎಸೆತಗಳಲ್ಲಿ 145 ಎನ್‌ ಪೇರಿಸಿ, ಟೀಂ ಇಂಡಿಯಾ ಬೌಲರ್‌ಗಳನ್ನು ಬೆಂಡೆತ್ತಿದರು. ಬರೋಬ್ಬರಿ 19 ಬೌಂಡರಿ, 5 ಸಿಕ್ಸರ್‌ ಸಿಡಿಸಿ ತಂಡಕ್ಕೆ ಆಸರೆಯಾದರು. ಪರಿಣಾಮ ಕಿವೀಸ್‌ ಪಡೆ 7 ವಿಕೆಟ್‌ಗಳ ಅಂತರದಿಂದ ಭರ್ಜರಿ ಜಯ ಸಾಧಿಸಿತು.

    ಟೀಂ ಇಂಡಿಯಾ ಪರ ಉಮ್ರಾನ್‌ ಮಲಿಕ್‌ 2 ವಿಕೆಟ್‌ ಪಡೆದರೆ, ಶಾರ್ದೂಲ್‌ ಠಾಕೂರ್‌ 1 ವಿಕೆಟ್‌ಗೆ ತೃಪ್ತಿಪಟ್ಟುಕೊಂಡರು.

    ಆಕ್ಲೆಂಡ್‌ನ ಈಡನ್ ಪಾರ್ಕ್‌ನಲ್ಲಿ ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ಟೀಂ ಇಂಡಿಯಾ ಉತ್ತಮ ಸವಾಲಿನ ಗುರಿ ನೀಡಿತ್ತು. ಆರಂಭಿಕ ಆಟಗಾರರಾದ ಶಿಖರ್ ಧವನ್ ಮತ್ತು ಶುಭಮನ್ ಗಿಲ್ ಮೊದಲ ವಿಕೆಟ್ ಜೊತೆಯಾಟಕ್ಕೆ 23.1 ಓವರ್‌ಗಳಲ್ಲಿ 124 ರನ್ ಗಳಿಸಿದರು.

    ಶಿಖರ್‌, ಗಿಲ್‌, ಅಯ್ಯರ್‌ ಹೋರಾಟ ವ್ಯರ್ಥ:
    ಶಿಖರ್‌ ಧವನ್‌ (ShikharDhawan) 77 ಎಸೆತಗಳಲ್ಲಿ 13 ಬೌಂಡರಿಗಳೊಂದಿಗೆ 72 ರನ್‌ ಸಿಡಿಸಿದರೆ, ಗಿಲ್‌ 65 ಎಸೆತಗಳಲ್ಲಿ 50 ರನ್‌(1 ಬೌಂಡರಿ, 3 ಸಿಕ್ಸರ್)‌ ಗಳಿಸಿ, ಲಾಕಿ ಫರ್ಗುಸನ್‌ಗೆ ವಿಕೆಟ್ ಒಪ್ಪಿಸಿದರು. ನಂತರ ಕ್ರೀಸ್‌ಗಿಳಿದ ರಿಷಭ್‌ ಪಂತ್‌ 23 ಎಸೆತಗಳಲ್ಲಿ ಕೇವಲ 15 ರನ್‌ ಗಳಿಸಿ ಪೆವಿಲಿಯನ್‌ಗೆ ಮರಳಿದರು. ಇನ್ನೂ ಈ ಪಂದ್ಯದಲ್ಲಿ ಭಾರಿ ನಿರೀಕ್ಷೆ ಮೂಡಿಸಿದ್ದ ಟಿ20 ಸ್ಪೆಷಲಿಸ್ಟ್‌ ಸೂರ್ಯಕುಮಾರ್ ಯಾದವ್ (Suryakumar Yadav) ಕೇವಲ 4 ರನ್ ಬಾರಿಸಿ ಲಾಕಿ ಫರ್ಗುಸನ್‌ಗೆ ವಿಕೆಟ್ ಒಪ್ಪಿಸಿದರು. ಶಾರ್ದುಲ್‌ ಠಾಕುರ್‌ 1 ರನ್‌ ಗಳಿಸಿದರು.

    ಶ್ರೇಯಸ್‌ ಭರ್ಜರಿ ಬ್ಯಾಟಿಂಗ್‌:
    ಒಂದೆಡೆ ವಿಕೆಟ್ ಉರುಳುತ್ತಿದ್ದರೂ, ಮಿಂಚಿನ ದಾಳಿ ನಡೆಸಿದ ಶ್ರೇಯಸ್‌ ಅಯ್ಯರ್‌ (Shreyas Iyer) ಕಿವೀಸ್‌ ಪಡೆಯ ಬೌಲರ್‌ಗಳನ್ನು ಬೆಂಡೆತ್ತಿದರು. ಈ ವೇಳೆ ಸಂಜು ಸ್ಯಾಮ್ಸನ್‌ ಸಹ ಜೊತೆಯಾಗಿ, 94 ರನ್‌ಗಳ ಜೊತೆಯಾಟ ನೀಡಿದರು. ಶ್ರೇಯಸ್‌ 76 ಎಸೆತಗಳಲ್ಲಿ 80 ರನ್‌ (4 ಬೌಂಡರಿ, 4 ಸಿಕ್ಸರ್)‌ ಚಚ್ಚಿದರೆ, ಸ್ಯಾಮ್ಸನ್‌ 36 ರನ್‌ಗಳಿಸಿದರು. ತಂಡದ ಮೊತ್ತ 254 ರನ್‌ಗಳಾಗಿದ್ದಾಗ 36 ರನ್ ಗಳಿಸಿ ಆಡುತ್ತಿದ್ದ ಸಂಜು ಸ್ಯಾಮ್ಸನ್ ಸಿಕ್ಸ್‌ ಸಿಡಿಸುವ ಬರದಲ್ಲಿ ಕ್ಯಾಚ್‌ ನೀಡಿ ಔಟಾದರು.

    ಕೊನೆಯಲ್ಲಿ ವಾಷಿಂಗ್ಟನ್‌ ಅಬ್ಬರ:
    ಕೊನೆಯಲ್ಲಿ ಕಣಕ್ಕಿಳಿದ ಆಲ್‌ರೌಂಡರ್ ವಾಷಿಂಗ್ಟನ್ ಸುಂದರ್ ಸ್ಫೋಟಕ ಬ್ಯಾಟಿಂಗ್‌ ಮೂಲಕ ಸಿಕ್ಸ್‌, ಬೌಂಡರಿ ಸಿಡಿಸಿದ್ರು. ಕೇವಲ 16 ಎಸೆತಗಳಲ್ಲಿ 37 ರನ್‌ (3 ಸಿಕ್ಸರ್‌, 3 ಬೌಂಡರಿ) ಚಚ್ಚಿದರು. ಕೊನೆಗೆ ಭಾರತ 7 ವಿಕೆಟ್ ನಷ್ಟಕ್ಕೆ 306 ರನ್ ಕಲೆಹಾಕಿತು.

    ನ್ಯೂಜಿಲೆಂಡ್ ಪರ ಲಾಕಿ ಫರ್ಗುಸನ್ ಮತ್ತು ಟಿಮ್ ಸೌಥಿ ತಲಾ 3 ವಿಕೆಟ್ ಪಡೆದು ಮಿಂಚಿದರೆ, ಆಡಮ್ ಮಿಲ್ನೆ 1 ವಿಕೆಟ್‌ಗೆ ತೃಪ್ತಿಪಟ್ಟುಕೊಂಡರು.

    Live Tv
    [brid partner=56869869 player=32851 video=960834 autoplay=true]