Tag: Tom Latham

  • 24 ವರ್ಷಗಳ ಬಳಿಕ ತವರಿನಲ್ಲಿ ಭಾರತ ವೈಟ್‌ವಾಶ್‌ – ಸರಣಿ ಗೆದ್ದು ಇತಿಹಾಸ ಸೃಷ್ಟಿಸಿದ ಕಿವೀಸ್‌

    24 ವರ್ಷಗಳ ಬಳಿಕ ತವರಿನಲ್ಲಿ ಭಾರತ ವೈಟ್‌ವಾಶ್‌ – ಸರಣಿ ಗೆದ್ದು ಇತಿಹಾಸ ಸೃಷ್ಟಿಸಿದ ಕಿವೀಸ್‌

    ಮುಂಬೈ: ನ್ಯೂಜಿಲೆಂಡ್‌ ವಿರುದ್ಧ ನಡೆದ ಮೂರು ಪಂದ್ಯಗಳ ಟೆಸ್ಟ್‌ ಸರಣಿಯಲ್ಲಿ ಟೀಂ ಇಂಡಿಯಾ ಹೀನಾಯ ಸೋಲು ಕಂಡಿದೆ. ಈ ಸೋಲಿನೊಂದಿಗೆ 24 ವರ್ಷಗಳ ಬಳಿಕ ತವರಿನಲ್ಲಿ ಸರಣಿ ಸೋತ ಅಪಖ್ಯಾತಿಯನ್ನು ಹೆಗಲಿಗೇರಿಸಿಕೊಂಡಿದೆ. ಕೊನೆಯದ್ದಾಗಿ ಭಾರತ 2000 ಇಸವಿಯಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ನಡೆದ 2 ಪಂದ್ಯಗಳ ಟೆಸ್ಟ್‌ ಸರಣಿಯಲ್ಲಿ ವೈಟ್‌ವಾಶ್‌ ಆಗಿತ್ತು.

    ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ 3ನೇ ಟೆಸ್ಟ್‌ ಪಂದ್ಯದಲ್ಲಿ ಕಿವೀಸ್‌ ಭಾರತದ ವಿರುದ್ಧ 26 ರನ್‌ಗಳ ಅಮೋಘ ಜಯ ಸಾಧಿಸಿ, ಮೂರು ಪಂದ್ಯಗಳ ಟೆಸ್ಟ್‌ ಸರಣಿಯನ್ನು ಕ್ಲೀನ್‌ಸ್ವೀಪ್ ಮಾಡಿದೆ. ಈ ಮೂಲಕ ಭಾರತದಲ್ಲಿ 3 ಅಥವಾ ಅದಕ್ಕಿಂತ ಹೆಚ್ಚಿನ ಪಂದ್ಯಗಳ ಟೆಸ್ಟ್‌ ಸರಣಿಯಲ್ಲಿ ಭಾರತ ತಂಡವನ್ನು ವೈಟ್‌ವಾಶ್‌ ಮಾಡಿದ ಮೊದಲ ತಂಡ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

    147 ರನ್‌ಗಳ ಗುರಿ ಬೆನ್ನಟ್ಟಿದ ಭಾರತ ಆರಂಭದಲ್ಲೇ ಪ್ರಮುಖ ವಿಕೆಟ್‌ ಕಳೆದುಕೊಂಡು ಹಿನ್ನಡೆ ಅನುಭವಿಸಿತು. ನಾಯಕ ರೋಹಿತ್‌ ಶರ್ಮಾ, ಯಶಸ್ವಿ ಜೈಸ್ವಾಲ್‌, ಶುಭಮನ್‌ ಗಿಲ್‌, ವಿರಾಟ್‌ ಕೊಹ್ಲಿ ಅಲ್ಪಮೊತ್ತಕ್ಕೆ ಔಟಾಗಿ ಪೆವಿಲಿಯನ್‌ ಪರೇಡ್‌ ನಡೆಸಿದರು. ಅಗ್ರ ಕ್ರಮಾಂಕದ ಬ್ಯಾಟರ್‌ಗಳು ಅಲ್ಪಮೊತ್ತಕ್ಕೆ ಔಟಾಗಿದ್ದು ತಂಡಕ್ಕೆ ಭಾರಿ ಆಘಾತ ನೀಡಿತು.

    ಪಂತ್‌ ಬಳಿಕ ಟೀಂ ಇಂಡಿಯಾ ಪಥನ:
    ಪ್ರಮುಖ ವಿಕೆಟ್‌ ಕಳೆದುಕೊಂಡು ಸಂಕಷ್ಟದಲ್ಲಿದ್ದ ಟೀಂ ಇಂಡಿಯಾಗೆ ರಿಷಭ್‌ ಪಂತ್‌ ಆಸರೆಯಾದರು. ಕ್ರೀಸ್‌ನಲ್ಲಿ ಭದ್ರವಾಗಿ ನೆಲೆಯೂರಿದ ಪಂತ್‌ 57 ಎಸೆತಗಳಲ್ಲಿ 64 ರನ್‌ (9 ಬೌಂಡರಿ, 1 ಸಿಕ್ಸರ್‌) ಗಳಿಸಿದ್ದರು. ಈ ವೇಳೆ ಸುಲಭವಾಗಿ ಕೀಪರ್‌ ಕ್ಯಾಚ್‌ಗೆ ತುತ್ತಾದರು. ಪಂತ್‌ ಔಟಾದ ಬೆನ್ನಲ್ಲೇ ಅಶ್ವಿನ್‌, ಆಕಾಶ್‌ ದೀಪ್‌, ವಾಷಿಂಗ್ಟನ್‌ ಸುಂದರ್‌ ಬ್ಯಾಕ್‌ ಟು ಬ್ಯಾಕ್‌ ವಿಕೆಟ್‌ ಒಪ್ಪಿಸಿದರು. ಇದರೊಂದಿಗೆ ಟೀಂ ಇಂಡಿಯಾ 121 ರನ್‌ಗಳಿಗೆ ಸರ್ವಪತನ ಕಂಡಿತು.

    ಆಜಾಜ್ ಪಟೇಲ್ ಸ್ಪಿನ್‌ ದಾಳಿಗೆ ತತ್ತರ:
    ಭಾರತೀಯ ಬ್ಯಾಟರ್‌ಗಳ ಎದುರು ಬಿಗಿ ಹಿಡಿತ ಸಾಧಿಸಿದ ಎಡಗೈ ಸ್ಪಿನ್ನರ್‌ ಆಜಾಜ್‌ ಪಟೇಲ್‌ 14.1 ಓವರ್‌ಗಳಲ್ಲಿ 57 ರನ್‌ ಬಿಟ್ಟುಕೊಟ್ಟು 6 ವಿಕೆಟ್‌ ಪಡೆದು ಮಿಂಚಿದರು. ಇದರೊಂದಿಗೆ ಗ್ಲೆನ್‌ ಫಿಲಿಪ್ಸ್‌ 3 ವಿಕೆಟ್‌ ಹಾಗೂ ಮ್ಯಾಟ್‌ ಹೆನ್ರಿ 1 ವಿಕೆಟ್‌ ಕಿತ್ತರು.

    147 ರನ್‌ ಗುರಿ ನೀಡಿದ್ದ ಕಿವೀಸ್‌:
    2ನೇ ದಿನದ ಅಂತ್ಯಕ್ಕೆ ದ್ವಿತೀಯ ಇನ್ನಿಂಗ್ಸ್‌ನಲ್ಲಿ ಕಿವೀಸ್‌ 9 ವಿಕೆಟ್‌ಗೆ 171 ರನ್‌ಗಳಿಸಿತ್ತು. 3ನೇ ದಿನ 143 ರನ್‌ಗಳ ಮುನ್ನಡೆಯೊಂದಿಗೆ ಕ್ರೀಸ್‌ ಆರಂಭಿಸಿದ್ದ ನ್ಯೂಜಿಲೆಂಡ್‌ 2ನೇ ಇನ್ನಿಂಗ್ಸ್‌ನಲ್ಲಿ 174 ರನ್‌ಗಳಿಗೆ ಆಲೌಟ್‌ ಆಯಿತು. ಈ ಮೂಲಕ ಭಾರತಕ್ಕೆ 147 ರನ್‌ಗಳ ಗುರಿ ನೀಡಿತ್ತು.

    2ನೇ ಇನ್ನಿಂಗ್ಸ್‌ನಲ್ಲಿ ಟೀಂ ಇಂಡಿಯಾ ಪರ ರವೀಂದ್ರ ಜಡೇಜಾ 5 ವಿಕೆಟ್‌, ಅಶ್ವಿನ್‌ 3 ವಿಕೆಟ್‌, ಆಕಾಶ್‌ ದೀಪ್‌ ಮತ್ತು ವಾಷಿಂಗ್ಟನ್‌ ಸುಂದರ್‌ ತಲಾ ಒಂದೊಂದು ವಿಕೆಟ್‌ ಪಡೆದರು.

    ಸಂಕ್ಷಿಪ್ತ ಸ್ಕೋರ್‌:
    ಮೊದಲ ಇನ್ನಿಂಗ್ಸ್‌
    ನ್ಯೂಜಿಲೆಂಡ್‌ – 235/10, ಭಾರತ – 236/10

    2ನೇ ಇನ್ನಿಂಗ್ಸ್‌
    ನ್ಯೂಜಿಲೆಂಡ್‌ – 174/10, ಭಾರತ – 121/10 

  • ಇತಿಹಾಸ ಸೃಷ್ಟಿಸಿದ ಕಿವೀಸ್ – 12 ವರ್ಷಗಳ ಬಳಿಕ ಭಾರತದಲ್ಲಿ ಟೆಸ್ಟ್ ಸರಣಿ ಗೆಲುವು

    ಇತಿಹಾಸ ಸೃಷ್ಟಿಸಿದ ಕಿವೀಸ್ – 12 ವರ್ಷಗಳ ಬಳಿಕ ಭಾರತದಲ್ಲಿ ಟೆಸ್ಟ್ ಸರಣಿ ಗೆಲುವು

    – ಕಳಪೆ ಬ್ಯಾಟಿಂಗ್‌ನಿಂದ ಬೆಲೆತೆತ್ತ ಭಾರತ

    ಪುಣೆ: ಅಗ್ರ ಕ್ರಮಾಂಕದ ಬ್ಯಾಟರ್‌ಗಳ ಕಳಪೆ ಪ್ರದರ್ಶನದಿಂದಾಗಿ ಭಾರತ ತಂಡ (Team India) ಬೆಲೆತೆತ್ತಿದೆ. 2ನೇ ಟೆಸ್ಟ್ ಪಂದ್ಯದಲ್ಲೂ ಭಾರತಕ್ಕೆ ಹೀನಾಯ ಸೋಲಾಗಿದ್ದು, ಕಿವೀಸ್ 113 ರನ್‌ಗಳ ಭರ್ಜರಿ ಗೆಲುವು ಸಾಧಿಸಿದೆ. ಇದರೊಂದಿಗೆ 12 ವರ್ಷಗಳ ಬಳಿಕ ಭಾರತದಲ್ಲಿ ಟೆಸ್ಟ್ ಸರಣಿ (Test series) ಗೆದ್ದ ತಂಡ ಎಂಬ ಹೆಗ್ಗಳಿಕೆಗೆ ಕಿವೀಸ್ ಪಾತ್ರವಾಗಿದೆ.

    ಪುಣೆ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ 2ನೇ ಟೆಸ್ಟ್ ಪಂದ್ಯದಲ್ಲಿ 359 ರನ್‌ಗಳ ಗುರಿ ಬೆನ್ನಟ್ಟಿದ ಟೀಂ ಇಂಡಿಯಾ 245 ರನ್‌ಗಳಿಗೆ ಸರ್ವಪತನ ಕಂಡು ಸೋಲೊಪ್ಪಿಕೊಂಡಿದೆ. ಈ ಮೂಲಕ 1983ರ ಬಳಿಕ ಒಂದೇ ವರ್ಷದಲ್ಲಿ 3 ಟೆಸ್ಟ್ ಪಂದ್ಯ ಸೋತ ಅಪಖ್ಯಾತಿ ಪಡೆದಿದೆ. 1969ರಲ್ಲಿ ಒಂದೇ ವರ್ಷದಲ್ಲಿ 4 ಟೆಸ್ಟ್ ಹಾಗೂ 1983ರಲ್ಲಿ 3 ಟೆಸ್ಟ್ ಸೋತಿದ್ದ ಭಾರತ, 2024ರಲ್ಲಿ 3 ಟೆಸ್ಟ್ ಕಳೆದುಕೊಂಡಿದೆ. ಇದನ್ನೂ ಓದಿ: ಲಕ್ನೋ ತಂಡದಿಂದ ಕೆ.ಎಲ್ ರಾಹುಲ್ ರಿಲೀಸ್ – ಆರ್‌ಸಿಬಿ ಸೇರ್ತಾರಾ ಕನ್ನಡಿಗ?

    301 ರನ್‌ಗಳ ಮುನ್ನಡೆಯೊಂದಿಗೆ ಮೂರನೇ ದಿನದ ಆಟ ಆರಂಭಿಸಿದ ಕಿವೀಸ್ 2ನೇ ಇನ್ನಿಂಗ್ಸ್‌ನಲ್ಲಿ 255 ರನ್ ಗಳಿಸಿ, ಭಾರತಕ್ಕೆ 359 ರನ್‌ಗಳ ಗುರಿ ನೀಡಿತ್ತು. ಬೃಹತ್ ಮೊತ್ತದ ಗುರಿ ಬೆನ್ನಟಿದ ಭಾರತ ಕಿವೀಸ್ ಸ್ಪಿನ್ ದಾಳಿಗೆ ಮಕಾಡೆ ಮಲಗಿತು. ಕಿವೀಸ್ ಸ್ಪಿನ್ ಮಾಂತ್ರಿಕ ಮಿಚೆಲ್ ಸ್ಯಾಂಟ್ನರ್, ಗ್ಲೆನ್ ಫಿಲಿಪ್ಸ್ ಅವರ ದಾಳಿಗೆ ತತ್ತರಿಸಿ ರನ್ ಕದಿಯಲು ತಿಣುಕಾಡಿತ್ತು. ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್ ಹೊರತುಪಡಿಸಿ ಉಳಿದ ಅಗ್ರ ಕ್ರಮಾಂಕದ ಬ್ಯಾಟರ್‌ಗಳು ಅಲ್ಪಮೊತ್ತಕ್ಕೆ ಪೆವಿಲಿಯನ್ ಸೇರಿಕೊಂಡರು. ಇದು ಟೀಂ ಇಂಡಿಯಾ ಸೋಲಿಗೆ ಕಾರಣವಾಯಿತು.

    ಭಾರತದ ಪರ ಯಶಸ್ವಿ ಜೈಸ್ವಾಲ್ 77 ರನ್ (65 ಎಸೆತ, 3 ಸಿಕ್ಸರ್, 9 ಬೌಂಡರಿ), ಶುಭಮನ್ ಗಿಲ್ 23 ರನ್, ವಿರಾಟ್ ಕೊಹ್ಲಿ 17 ರನ್, ವಾಷಿಂಗ್ಟನ್ ಸುಂದರ್ 21 ರನ್, ಸರ್ಫರಾಜ್ ಖಾನ್ 9 ರನ್, ರವಿಚಂದ್ರನ್ ಅಶ್ವಿನ್ 18 ರನ್, ನಾಯಕ ರೋಹಿತ್ ಶರ್ಮಾ (Rohit Sharma) 8 ರನ್ ಗಳಿಸಿ ಪೆವಿಲಿಯನ್‌ಗೆ ಮರಳಿದರು. ಕೊನೆಯವರೆಗೂ ಏಕಾಂಗಿ ಹೋರಾಟ ನಡೆಸಿದ ರವೀಂದ್ರ ಜಡೇಜಾ 84 ಎಸೆತಗಳಲ್ಲಿ 42 ರನ್‌ ಗಳಿಸಿದ್ದರು. ಆದ್ರೆ ಸಿಕ್ಸರ್‌ ಸಿಡಿಸುವ ಭರದಲ್ಲಿ ಬೌಂಡರಿ ಲೈನ್‌ಬಳಿ ಕ್ಯಾಚ್‌ಗೆ ತುತ್ತಾದರು. ಇದನ್ನೂ ಓದಿ: ನಾನು ಅವರ ಹಾಸಿಗೆಯ ಮೇಲೆ ಕುಳಿತಿದ್ದೆ – ಬ್ರಿಜ್ ಭೂಷಣ್ ಸಿಂಗ್ ವಿರುದ್ಧ ಮತ್ತೆ ಸಾಕ್ಷಿ ಮಲಿಕ್‌ ಆರೋಪ

    ಮಿಂಚಿದ ಮಿಚೆಲ್
    ಮೊದಲ ಇನ್ನಿಂಗ್ಸ್ನಲ್ಲಿ ಟೀಂ ಇಂಡಿಯಾ ವಿರುದ್ಧ 19.3 ಓವರ್‌ಗಳಲ್ಲಿ 53 ರನ್ ಬಿಟ್ಟುಕೊಟ್ಟು 7 ವಿಕೆಟ್ ಕಬಳಿಸಿದ್ದ ಸ್ಪಿನ್ನರ್ ಮಿಚೆಲ್ ಸ್ಯಾಂಟ್ನರ್ 2ನೇ ಇನ್ನಿಂಗ್ಸ್ನಲ್ಲೂ ಭಾರತದ ಬ್ಯಾಟರ್‌ಗಳ ಮೇಲೆ ಹಿಡಿತ ಸಾಧಿಸಿದರು. 29. ಓವರ್‌ಗಳಲ್ಲಿ 104 ರನ್ ಬಿಟ್ಟುಕೊಟ್ಟು 6 ವಿಕೆಟ್ ಪಡೆದು ಮಿಂಚಿದರು. ಇದರೊಂದಿಗೆ ಅಜಾಝ್ ಪಟೇಲ್ 2 ವಿಕೆಟ್, ಗ್ಲೆನ್ ಫಿಲಿಪ್ಸ್ 1 ವಿಕೆಟ್ ಪಡೆದರು.

    2ನೇ ಇನ್ನಿಂಗ್ಸ್‌ನಲ್ಲಿ ಕಿವೀಸ್ ಸವಾಲಿನ ಮೊತ್ತ:
    ದ್ವಿತೀಯ ಇನ್ನಿಂಗ್ಸ್‌ನಲ್ಲಿ ಆರಂಭಿಕ ಸಂಕಷ್ಟದ ಹೊರತಾಗಿಯೂ ಕಿವೀಸ್ 255 ರನ್‌ಗಳ ಸವಾಲಿನ ಮೊತ್ತ ಪೇರಿಸಿತ್ತು. ನಾಯಕ ಲಾಥಮ್ 86 ರನ್ (133 ಎಸೆತ, 10 ಬೌಂಡರಿ) ಗಳಿಸಿದ್ರೆ, ವಿಲ್ ಯಂಗ್ 23 ರನ್, ಡೆವೋನ್ ಕಾನ್ವೆ 17 ರನ್, ಡೇರಿಲ್ ಮಿಚೆಲ್ 18 ರನ್ ಹಾಗೂ ರಚಿನ್ ರವೀಂದ್ರ 9 ರನ್, ಟಾಮ್ ಬ್ಲಂಡೆಲ್ 41 ರನ್, ಗ್ಲೆನ್ ಫಿಲಿಪ್ಸ್ 48 ರನ್‌ಗಳ ಕೊಡುಗೆ ನೀಡಿದರು.

    ಸುಂದರ್ ಸೂಪರ್:
    ಮೊದಲ ಇನ್ನಿಂಗ್ಸ್‌ನಲ್ಲಿ 7 ವಿಕೆಟ್ ಕಬಳಿಸಿ ಟೀಂ ಇಂಡಿಯಾಕ್ಕೆ ಆಧಾರವಾಗಿದ್ದ ಆಫ್ ಸ್ಪಿನ್ನರ್ ವಾಷಿಂಗ್ಟನ್ ಸುಂದರ್ 2ನೇ ಇನ್ನಿಂಗ್ಸ್‌ನಲ್ಲೂ ತಮ್ಮ ಬೌಲಿಂಗ್ ದಾಳಿಯಲ್ಲಿ ಹಿಡಿತ ಸಾಧಿಸಿದರು. 19. ಓವರ್‌ಗಳಲ್ಲಿ 56 ರನ್ ಬಿಟ್ಟುಕೊಟ್ಟು 4 ವಿಕೆಟ್ ಪಡೆದರು, ಒದರೊಂದಿಗೆ ರವೀಂದ್ರ ಜಡೇಜಾ 3 ವಿಕೆಟ್ ಹಾಗೂ ಅಶ್ವಿನ್ 1 ವಿಕೆಟ್ ಪಡೆದರು. ಇದನ್ನೂ ಓದಿ: IPLನಲ್ಲಿ ಡೆಲ್ಲಿ ಟೀಂ ಬಿಟ್ಟು ಬೇರೆ ತಂಡದ ಕ್ಯಾಪ್ಟನ್ ಆಗ್ತಾರಾ ರಿಷಬ್ ಪಂತ್?

    ಮೊದಲ ಇನ್ನಿಂಗ್ಸ್‌ನಲ್ಲೂ ಭಾರತ ಕಳಪೆ ಬ್ಯಾಟಿಂಗ್:
    ಮೊದಲ ಇನ್ನಿಂಗ್ಸ್‌ನಲ್ಲಿ ಕಿವೀಸ್ ಸ್ಪಿನ್ನರ್ ಮಿಚೆಲ್ ಸ್ಯಾಂಟ್ನರ್ ದಾಳಿಗೆ ತತ್ತರಿಸಿದ ಭಾರತದ ಬ್ಯಾರ್ಟ್ಗಳು ರನ್ ಕದಿಯಲು ತಿಣುಕಾಡಿದರು. ಯಶಸ್ವಿ ಜೈಸ್ವಾಲ್, ಶುಭಮನ್ ಗಿಲ್ ತಲಾ 30 ರನ್ ಗಳಿಸಿದ್ರೆ ರವೀಂದ್ರ ಜಡೇಜಾ 38 ರನ್ ಗಳಿಸಿದ್ರು. ಇನ್ನುಳಿದಂತೆ ರಿಷಭ್ ಪಂತ್ 18 ರನ್, ಸರ್ಫರಾಜ್ ಖಾನ್ 11 ರನ್, ರವಿಚಂದ್ರನ್ ಅಶ್ವಿನ್ 4 ರನ್, ಆಕಾಶ್ ದೀಪ್ 6 ರನ್ ಗಳಿಸಿದ್ರೆ, ವಾಷಿಂಗ್ಟನ್ ಸುಂದರ್ 18 ರನ್ ಗಳಿಸಿ ಅಜೇಯರಾಗುಳಿದರು. ನಾಯಕ ರೋಹಿತ್ ಶರ್ಮಾ, ಜಸ್ಪ್ರೀತ್ ಬುಮ್ರಾ ಶೂನ್ಯ ಸುತ್ತಿದರು.

  • ಒಂದೇ ದಿನ 14 ವಿಕೆಟ್‌ ಉಡೀಸ್‌ – ಭಾರತದ ವಿರುದ್ಧ ಕಿವೀಸ್‌ಗೆ 301 ರನ್‌ಗಳ ಭರ್ಜರಿ ಮುನ್ನಡೆ

    ಒಂದೇ ದಿನ 14 ವಿಕೆಟ್‌ ಉಡೀಸ್‌ – ಭಾರತದ ವಿರುದ್ಧ ಕಿವೀಸ್‌ಗೆ 301 ರನ್‌ಗಳ ಭರ್ಜರಿ ಮುನ್ನಡೆ

    – ಮಿಚೆಲ್‌ ಸ್ಯಾಂಟ್ನರ್‌, ಸುಂದರ್‌ ಸೂಪರ್‌

    ಪುಣೆ: ಇಲ್ಲಿನ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ನ್ಯೂಜಿಲೆಂಡ್ (Newzealand) ವಿರುದ್ಧದ 2ನೇ ಟೆಸ್ಟ್ ಪಂದ್ಯದ 2ನೇ ದಿನದಾಟದಲ್ಲಿ ಸ್ಪಿನ್ನರ್‌ಗಳ ಆರ್ಭಟವೇ ಮುಂದುವರಿದಿದ್ದು, ಉಭಯ ತಂಡಗಳ ಒಟ್ಟು 14 ವಿಕೆಟ್‌ ಪತನಗೊಂಡಿದೆ. ಭಾರತದ (Team India) ವಿರುದ್ಧ ತನ್ನ 2ನೇ ಇನ್ನಿಂಗ್ಸ್‌ ಆರಂಭಿಸಿರುವ ನ್ಯೂಜಿಲೆಂಡ್‌ ತಂಡ 2ನೇ ದಿನದ ಅಂತ್ಯಕ್ಕೆ 5 ವಿಕೆಟ್‌ ನಷ್ಟಕ್ಕೆ 198 ರನ್‌ ಗಳಿಸಿದ್ದು, 301 ರನ್‌ಗಳ ಭರ್ಜರಿ ಮುನ್ನಡೆ ಕಾಯ್ದುಕೊಂಡಿದೆ.

    243 ರನ್‌ಗಳ ಹಿನ್ನಡೆಯೊಂದಿಗೆ ಕ್ರೀಸ್‌ ಆರಂಭಿಸಿದ ಟೀಂ ಇಂಡಿಯಾ ಬ್ಯಾಟರ್‌ಗಳ ವೈಫಲ್ಯದಿಂದಾಗಿ ಕೇವಲ 156 ರನ್‌ಗಳಿಗೆ ಆಲೌಟ್‌ ಆಯಿತು. ಬಳಿಕ ಇನ್ನಿಂಗ್ಸ್‌ ಆರಂಭಿಸಿದ ನ್ಯೂಜಿಲೆಂಡ್‌ ಆರಂಭದಲ್ಲೇ ಪ್ರಮುಖ ವಿಕೆಟ್‌ಗಳನ್ನು ಕಳೆದುಕೊಂಡಿತು. ಇದರ ಹೊರತಾಗಿಯೂ ನಾಯಕ ಟಾಮ್‌ ಲಾಥಮ್‌ (Tom Latham) ಅವರ ಅಮೋಘ ಅರ್ಧಶತಕದೊಂದಿಗೆ 200 ರನ್‌ಗಳ ಗಡಿ ಸಮೀಪಿಸುವಲ್ಲಿ ಯಶಸ್ವಿಯಾಯಿತು. ಇದನ್ನೂ ಓದಿ: ಲಕ್ನೋ ತಂಡದಿಂದ ಕೆ.ಎಲ್ ರಾಹುಲ್ ರಿಲೀಸ್ – ಆರ್‌ಸಿಬಿ ಸೇರ್ತಾರಾ ಕನ್ನಡಿಗ?

    ದ್ವಿತೀಯ ಇನ್ನಿಂಗ್ಸ್‌ನಲ್ಲಿ ಲಾಥಮ್‌ 86 ರನ್‌ (133 ಎಸೆತ, 10 ಬೌಂಡರಿ) ಗಳಿಸಿದ್ರೆ, ವಿಲ್‌ ಯಂಗ್‌ 23 ರನ್‌, ಡೆವೋನ್‌ ಕಾನ್ವೆ 17 ರನ್‌, ಡೇರಿಲ್‌ ಮಿಚೆಲ್‌ 18 ರನ್‌ ಹಾಗೂ ರಚಿನ್‌ ರವೀಂದ್ರ 9 ರನ್‌ ಗಳಿಸಿ ಪೆವಿಲಿಯನ್‌ ಸೇರಿದರು. ಇನ್ನೂ ಟಾಮ್‌ ಬ್ಲಂಡೆಲ್‌ 30 ರನ್‌ (70 ಎಸೆತ, 2 ಬೌಂಡರಿ), ಗ್ಲೆನ್‌ ಫಿಲಿಪ್ಸ್‌ 9 ರನ್‌ ಗಳಿಸಿ ಅಜೇಯರಾಗುಳಿದಿದ್ದಾರೆ. ಶನಿವಾರ 3ನೇ ದಿನದಾಟ ಆರಂಭಿಸಲಿದ್ದಾರೆ.

    ಸೂಪರ್‌ ʻಸುಂದರ್‌ʼ:
    ಮೊದಲ ಇನ್ನಿಂಗ್ಸ್‌ನಲ್ಲಿ 7 ವಿಕೆಟ್‌ ಕಬಳಿಸಿ ಟೀಂ ಇಂಡಿಯಾಕ್ಕೆ ಆಧಾರವಾಗಿದ್ದ ಆಫ್‌ ಸ್ಪಿನ್ನರ್‌ ವಾಷಿಂಗ್ಟನ್‌ ಸುಂದರ್‌ (Washington Sundar) 2ನೇ ದಿನದಾಟದಲ್ಲೂ 4 ವಿಕೆಟ್‌ ಪಡೆಯುವ ಮೂಲಕ ಭರ್ಜರಿ ಕಮಾಲ್‌ ಮಾಡಿದ್ದಾರೆ. ಇದರೊಂದಿಗೆ ಸಾಥ್‌ ನೀಡಿರುವ ರವಿಚಂದ್ರನ್‌ ಅಶ್ವಿನ್‌ 1 ವಿಕೆಟ್‌ ಪಡೆದಿದ್ದಾರೆ. ಇದನ್ನೂ ಓದಿ: IPLನಲ್ಲಿ ಡೆಲ್ಲಿ ಟೀಂ ಬಿಟ್ಟು ಬೇರೆ ತಂಡದ ಕ್ಯಾಪ್ಟನ್ ಆಗ್ತಾರಾ ರಿಷಬ್ ಪಂತ್?

    ಫ್ಲಾಪ್‌ ಆದ ಬ್ಯಾಟರ್ಸ್‌:
    ಮೊದಲ ಇನ್ನಿಂಗ್ಸ್‌ನಲ್ಲಿ ಕಿವೀಸ್‌ ಸ್ಪಿನ್ನರ್‌ ಮಿಚೆಲ್‌ ಸ್ಯಾಂಟ್ನರ್‌ ದಾಳಿಗೆ ತತ್ತರಿಸಿದ ಭಾರತದ ಬ್ಯಾರ್ಟ್‌ಗಳು ರನ್‌ ಕದಿಯಲು ತಿಣುಕಾಡಿದರು. ಯಶಸ್ವಿ ಜೈಸ್ವಾಲ್‌, ಶುಭಮನ್‌ ಗಿಲ್‌ ತಲಾ 30 ರನ್‌ ಗಳಿಸಿದ್ರೆ ರವೀಂದ್ರ ಜಡೇಜಾ 38 ರನ್‌ ಗಳಿಸಿದ್ರು. ಇನ್ನುಳಿದಂತೆ ರಿಷಭ್‌ ಪಂತ್‌ 18 ರನ್‌, ಸರ್ಫರಾಜ್‌ ಖಾನ್‌ 11 ರನ್‌, ರವಿಚಂದ್ರನ್‌ ಅಶ್ವಿನ್‌ 4 ರನ್‌, ಆಕಾಶ್‌ ದೀಪ್‌ 6 ರನ್‌ ಗಳಿಸಿದ್ರೆ, ವಾಷಿಂಗ್ಟನ್‌ ಸುಂದರ್‌ 18 ರನ್‌ ಗಳಿಸಿ ಅಜೇಯರಾಗುಳಿದರು. ನಾಯಕ ರೋಹಿತ್‌ ಶರ್ಮಾ, ಜಸ್ಪ್ರೀತ್‌ ಬುಮ್ರಾ ಶೂನ್ಯ ಸುತ್ತಿದರು.

    ಸ್ಯಾಂಟ್ನರ್‌ ಸ್ಪಿನ್‌ ಮಿಂಚು:
    ಕಿವೀಸ್‌ ಪರ ಮೊದಲ ಇನ್ನಿಂಗ್ಸ್‌ನಲ್ಲಿ ಮಿಚೆಲ್‌ ಸ್ಯಾಂಟ್ನರ್‌ 19.3 ಓವರ್‌ಗಳಲ್ಲಿ 53 ರನ್‌ ಬಿಟ್ಟುಕೊಟ್ಟು 7 ವಿಕೆಟ್‌ ಕಿತ್ತರೆ, ಗ್ಲೆನ್‌ ಫಿಲಿಪ್ಸ್‌ 2 ವಿಕೆಟ್‌ ಹಾಗೂ ಟಿಮ್‌ ಸೌಥಿ 1 ವಿಕೆಟ್‌ ಕಿತ್ತರು. ಇದನ್ನೂ ಓದಿ: ಮೊದಲ ದಿನ ಸ್ಪಿನ್ನರ್‌ಗಳ ಆಟ – ವಾಷಿಂಗ್ಟನ್‌, ಅಶ್ವಿನ್‌ ಶೈನ್‌; ಕಿವೀಸ್‌ 259ಕ್ಕೆ ಆಲೌಟ್‌

  • ಮೊದಲ ದಿನ ಸ್ಪಿನ್ನರ್‌ಗಳ ಆಟ – ವಾಷಿಂಗ್ಟನ್‌, ಅಶ್ವಿನ್‌ ಶೈನ್‌; ಕಿವೀಸ್‌ 259ಕ್ಕೆ ಆಲೌಟ್‌

    ಮೊದಲ ದಿನ ಸ್ಪಿನ್ನರ್‌ಗಳ ಆಟ – ವಾಷಿಂಗ್ಟನ್‌, ಅಶ್ವಿನ್‌ ಶೈನ್‌; ಕಿವೀಸ್‌ 259ಕ್ಕೆ ಆಲೌಟ್‌

    ಪುಣೆ:‌ ಇಲ್ಲಿನ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ನ್ಯೂಜಿಲೆಂಡ್‌ ವಿರುದ್ಧದ 2ನೇ ಟೆಸ್ಟ್‌ ಪಂದ್ಯದ ಮೊದಲ ದಿನದಾಟದಲ್ಲಿ ಭಾರತೀಯ ಸ್ಪಿನ್ನರ್‌ಗಳಾದ ವಾಷಿಂಗ್ಟನ್‌ ಸುಂದರ್‌ (Washington Sundar) ಹಾಗೂ ರವಿಚಂದ್ರನ್‌ ಅಶ್ವಿನ್‌ ಭರ್ಜರಿ ಕಮಾಲ್‌ ಮಾಡಿದ್ದಾರೆ.

    45 ತಿಂಗಳ ಬಳಿಕ ಟೆಸ್ಟ್‌ ಕ್ರಿಕೆಟ್‌ ಅಖಾಡಕ್ಕಿಳಿದ ವಾಷಿಂಗ್ಟನ್‌ ಸುಂದರ್‌ 23.1 ಓವರ್‌ಗಳಲ್ಲಿ 59 ರನ್‌ ಬಿಟ್ಟುಕೊಟ್ಟು ಪ್ರಮುಖ 7 ವಿಕೆಟ್‌ ಕಬಳಿಸುವ ಮೂಲಕ ಕಿವೀಸ್‌ ತಂಡವನ್ನು ಅಲ್ಪಮೊತ್ತಕ್ಕೆ ಕಟ್ಟಿಹಾಕಲು ಸಹಕಾರಿಯಾಗಿದ್ದಾರೆ. ಇದರೊಂದಿಗೆ ಸ್ಪಿನ್‌ ಮಾಂತ್ರಿಕ ಆರ್‌. ಅಶ್ವಿನ್‌ (Ravichandran Ashwin) 3 ವಿಕೆಟ್‌ ಪಡೆದು, ಮೊದಲ ದಿನದಾಟದಲ್ಲಿ ಸ್ಪಿನ್ನರ್‌ಗಳೇ ಮೇಲುಗೈ ಸಾಧಿಸಿದ್ದಾರೆ.

    ಭಾರತದ (Team India) ವಿರುದ್ಧ ನಡೆಯುತ್ತಿರುವ 2ನೇ ಟೆಸ್ಟ್‌ ಪಂದ್ಯದಲ್ಲಿ ಮೊದಲ ದಿನವೇ ಕಿವೀಸ್‌ (Newzealand) 79.1 ಓವರ್‌ಗಳಲ್ಲಿ 259 ರನ್‌ಗಳಿಗೆ ಆಲೌಟ್‌ ಆಗಿದೆ. ಬಳಿಕ ತನ್ನ ಸರದಿಯ ಮೊದಲ ಇನ್ನಿಂಗ್ಸ್‌ ಆರಂಭಿಸಿರುವ ಟೀಂ ಇಂಡಿಯಾ 11 ಓವರ್‌ಗಳಲ್ಲಿ 16 ರನ್‌ಗಳಿಗೆ ಒಂದು ವಿಕೆಟ್‌ ಕಳೆದುಕೊಂಡಿದೆ. ಈ ಮೂಲಕ 243 ರನ್‌ ಹಿನ್ನಡೆಯಲ್ಲಿದೆ. ರೋಹಿತ್‌ ಶರ್ಮಾ (Rohit Sharma) ಡಕೌಟ್‌ ಆಗಿ ಪೆವಿಲಿಯನ್‌ಗೆ ಮರಳಿದ್ದಾರೆ. ಇನ್ನೂ ಯಶಸ್ವಿ ಜೈಸ್ವಾಲ್‌ (6 ರನ್‌), ಶುಭಮನ್‌ ಗಿಲ್‌ (10 ರನ್‌) ಗಳಿಸಿ ಕ್ರೀಸ್‌ನಲ್ಲಿದ್ದು, ಶುಕ್ರವಾರ 2ನೇ ದಿನದ ಇನ್ನಿಂಗ್ಸ್‌ ಆರಂಭಿಸಲಿದ್ದಾರೆ.

    ಸ್ಪಿನ್ನರ್‌ಗಳ ಆಟಕ್ಕೆ ನೆಲಕಚ್ಚಿದ ಕಿವೀಸ್‌:
    ಮೊದಲ ಟೆಸ್ಟ್‌ ಪಂದ್ಯದಲ್ಲಿ ಅಬ್ಬರಿಸಿದ್ದ ಕಿವೀಸ್‌ ಬ್ಯಾಟರ್‌ಗಳು 2ನೇ ಟೆಸ್ಟ್‌ ಪಂದ್ಯದಲ್ಲಿ ನೆಲ ಕಚ್ಚಿದರು. ಡಿವೋನ್‌ ಕಾನ್ವೆ, ರಚಿನ್‌ ರವೀಂದ್ರ, ಮಿಚೆಲ್‌ ಸ್ಯಾಂಟ್ನರ್‌ ಹೊರತುಪಡಿಸಿದ್ರೆ, ಉಳಿದ ಅಗ್ರ ಕ್ರಮಾಂಕದ ಬ್ಯಾರಟ್‌ಗಳು ಅಲ್ಪಮೊತ್ತಕ್ಕೆ ಪೆವಿಲಿಯನ್‌ಗೆ ಮರಳಿದರು.

    ಕಿವೀಸ್‌ ಪರ ಡಿವೋನ್‌ ಕಾನ್ವೆ 76 ರನ್‌ (141 ಎಸೆತ, 11 ಬೌಂಡರಿ), ರಚಿನ್‌ ರವೀಂದ್ರ 65 ರನ್‌ (105 ಎಸೆತ, 5 ಬೌಂಡರಿ, 1 ಸಿಕ್ಸರ್)‌ ಗಳಿಸಿದ್ರೆ, ಮಿಚೆಲ್‌ ಸ್ಯಾಂಟ್ನರ್‌ 33 ರನ್‌, ಟಾಮ್‌ ಲಾಥಮ್‌ 15 ರನ್‌, ವಿಲ್‌ ಯಂಗ್‌, ಡೇರಿಲ್‌ ಮಿಚೆಲ್‌ ತಲಾ 18 ರನ್‌, ಟಾಮ್‌ ಬ್ಲಂಡೆಲ್‌ 3 ರನ್‌, ಗ್ಲೆನ್‌ ಫಿಲಿಪ್ಸ್‌ 9 ರನ್‌, ಟಿಮ್‌ ಸೌಥಿ 5 ರನ್‌ ಆಜಾಝ್‌ ಪಟೇಲ್‌ 4 ರನ್‌ ಗಳಿಸಿ ಔಟಾದರು. ವಿಲಿಯಂ ಒ ರೂರ್ಕಿ ಒಂದು ಎಸೆತವನ್ನೂ ಎದುರಿಸದೇ ಅಜೇಯರಾಗುಳಿದರು.

  • 36 ವರ್ಷಗಳ ಬಳಿಕ ಭಾರತದ ನೆಲದಲ್ಲಿ ಟೆಸ್ಟ್‌ ಗೆದ್ದ ಕಿವೀಸ್‌ – ಟೀಂ ಇಂಡಿಯಾ ಸೋಲಿಗೆ ಕಾರಣಗಳೇನು?

    36 ವರ್ಷಗಳ ಬಳಿಕ ಭಾರತದ ನೆಲದಲ್ಲಿ ಟೆಸ್ಟ್‌ ಗೆದ್ದ ಕಿವೀಸ್‌ – ಟೀಂ ಇಂಡಿಯಾ ಸೋಲಿಗೆ ಕಾರಣಗಳೇನು?

    ಬೆಂಗಳೂರು: 1988ರ ಬಳಿಕ ಟೀಂ ಇಂಡಿಯಾ (Team India) ವಿರುದ್ಧ ಭಾರತದ ನೆಲದಲ್ಲಿ ಟೆಸ್ಟ್‌ ಗೆದ್ದು ಕಿವೀಸ್‌ ಪಡೆ ನಿಟ್ಚುಸಿರು ಬಿಟ್ಟಿದೆ. ಬರೋಬ್ಬರಿ 36 ವರ್ಷಗಳ ಬಳಿಕ ನ್ಯೂಜಿಲೆಂಡ್ (New zealand)) ತಂಡ ಟೆಸ್ಟ್ ಪಂದ್ಯ ಗೆದ್ದು ಬೀಗಿದೆ.

    ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ (Chinnaswamy Stadium) ಆತಿಥೇಯ ಭಾರತದ ವಿರುದ್ಧ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ 8 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿದೆ. ಮೊದಲ ಇನ್ನಿಂಗ್ಸ್‌ನಲ್ಲಿ ಶತಕ ಬಾರಿಸಿ ಮಿಂಚಿದ್ದ ರಚಿನ್ ರವೀಂದ್ರ ಅವರೇ ಎರಡನೇ ಇನ್ನಿಂಗ್ಸ್‌ನಲ್ಲಿ ವಿಲ್‌ ಯಂಗ್ ಅವರೊಂದಿಗೆ ನಿಂತು ತಂಡವನ್ನು ಗೆಲುವಿನ ದಡ ಸೇರಿಸಿದರು. ಇದನ್ನೂ ಓದಿ: ಆರ್‌ಸಿಬಿ ಸೇರುವಂತೆ ರೋಹಿತ್‌ಗೆ ಆಫರ್‌ – ಹಿಟ್‌ಮ್ಯಾನ್‌ಗೆ ಆಫರ್‌ ಕೊಟ್ಟಿದ್ಯಾರು?

    ಭಾನುವಾರ ಕೊನೆಯ ದಿನದಾಟದಲ್ಲಿ ಗೆಲುವಿಗೆ 107 ರನ್ ಗಳಿಸಿದ್ದ ಕಿವೀಸ್‌ಗೆ ಆರಂಭದಲ್ಲೇ ಟೀಂ ಇಂಡಿಯಾ ಆಘಾತ ನೀಡಿತ್ತು. ಬೌಲರ್‌ಗಳಿಗೆ ಪೂರಕವಾಗಿದ್ದ ವಾತಾವರಣದಲ್ಲಿ ಮೊದಲನೇ ಓವರ್ ನಲ್ಲೇ ವಿಕೆಟ್‌ ಪಡೆಯುವ ಮೂಲಕ ಜಸ್ಪ್ರೀತ್‌ ಬುಮ್ರಾ ಸಂತಸದ ಅಲೆ ಸೃಷ್ಟಿಸಿದ್ದರು. ಬಳಿಕ ವಿಕೆಟ್‌ ಬಿಟ್ಟುಕೊಡದ ರಚಿನ್‌ ಹಾಗೂ ವಿಲ್‌ ಯಂಗ್‌ ತಂಡವನ್ನು ಗೆಲುವಿನ ದಡ ಸೇರಿಸುವಲ್ಲಿ ಯಶಸ್ವಿಯಾದರು. ಇದನ್ನೂ ಓದಿ: ಜಿಯೋದಲ್ಲಿ ಐಪಿಎಲ್‌ ಬರಲ್ಲ, ಇನ್ನು ಮುಂದೆ ಹಾಟ್‌ಸ್ಟಾರ್‌ನಲ್ಲಿ ನೇರಪ್ರಸಾರ!

    ಸಂಕ್ಷಿಪ್ತ ಸ್ಲೋರ್‌:
    ಮೊದಲ ಇನ್ನಿಂಗ್ಸ್‌
    ಭಾರತ – 46/10, ನ್ಯೂಜಿಲೆಂಡ್‌ – 402/10

    2ನೇ ಇನ್ನಿಂಗ್ಸ್‌
    ಭಾರತ – 462/10, ನ್ಯೂಜಿಲೆಂಡ್‌ – 107/2

    ಭಾರತದ ಸೋಲಿಗೆ ಪ್ರಮುಖ ಕಾರಣಗಳೇನು?
    * ಸತತ ಮಳೆಯಿಂದ ಕೂಡಿದ್ದ ವಾತಾವರಣದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡು ನಾಯಕ ರೋಹಿತ್ ಶರ್ಮಾ ಯಡವಟ್ಟು ಮಾಡಿಕೊಂಡರು. ಮೊದಲನೇ ದಿನ ಮಳೆಯಿಂದಾಗಿ ಒಂದು ಎಸೆತವನ್ನೂ ಆಡಲಾಗಿರಲಿಲ್ಲ. ಹೀಗಾಗಿ ಪಿಚ್‌ ಬ್ಯಾಟಿಂಗ್‌ಗೆ ಪೂರಕವಾಗಿ ಇರಲಿಲ್ಲ. ಅಲ್ಲದೇ ವಿಲ್‌ ಒ ರೂರ್ಕಿ ಬೌಲಿಂಗ್‌ ಟೀಂ ಇಂಡಿಯಾ ಆಟಗಾರರಿಗೆ ಹೊಸದಾಗಿತ್ತು. ಪಿಚ್‌ ತೇವಾಂಶದಲ್ಲಿದ್ದ ಕಾರಣ ಚೆಂಡನ್ನು ಗುರುತಿಸುವುದು ಕಷ್ಟಸಾಧ್ಯವಾಗಿತ್ತು. ಹೀಗಾಗಿ ಭಾರತ 2ನೇ ದಿನದಾಟದಲ್ಲಿ 46 ರನ್‌ಗಳಿಗೆ ಆಲೌಟ್‌ ಆಯಿತು.

    * ಭಾರತದ ಪ್ರಥಮ ಇನ್ನಿಂಗ್ಸ್ ನಲ್ಲಿ ವೇಗಿಗಳಾದ ಮ್ಯಾಟ್‌ ಹೆನ್ರಿ, ವಿಲ್‌ ಒ ರೂರ್ಕಿ ಮಾರಕ ಬೌಲಿಂಗ್ ನಿಂದಾಗಿ 46 ರನ್‌ ಗಳಿಗೆ ಆಲೌಟ್ ಆಯಿತು. ಇದೇ ಇಡೀ ಪಂದ್ಯದ ಫಲಿತಾಂಶಕ್ಕೆ ಕಾರಣವಾಯಿತು. ಇದನ್ನೂ ಓದಿ:  IND vs NZ 1st Test: ತವರು ನೆಲದಲ್ಲೇ ಟೀಂ ಇಂಡಿಯಾಗೆ ಸೋಲುಣಿಸಿದ ನ್ಯೂಜಿಲೆಂಡ್‌

    * ರಚಿನ್ ರವೀಂದ್ರ ಅಮೋಘ ಶತಕವೂ ಭಾರತದ ಸೋಲಿಗೆ ಕಾರಣವಾಯಿತು. ಪಂದ್ಯದಲ್ಲಿ ಎಲ್‌ಬಿಡಬ್ಲ್ಯೂ ಅಪೀಲ್‌ ಮಾಡಿದ ಹೊರತಾಗಿಯೂ ರಚಿನ್‌ ಅಪೈರ್ಸ್‌ಕಾಲ್‌ನಿಂದ ಪಾರಾದರು. ಇದು ಟೀಂ ಇಂಡಿಯಾದ ಫಲಿತಾಂಶದ ಮೇಲೆ ಪ್ರಭಾವ ಬೀರಿತು.

    * 3ನೇ ದಿನದಾಟದಲ್ಲಿ ರಚಿನ್ – ಸೌಥಿ ಜೊತೆಯಾಟವೂ ಭಾರತದ ಹಿನ್ನೆಡೆಗೆ ಕಾರಣವಾಯಿತು. ಭಾರತ ನ್ಯೂಜಿಲೆಂಡ್‌ನ 7 ವಿಕೆಟ್ ಗಳನ್ನು 233 ರನ್ ಗಳಿಗೆ ಕಬಳಿಸಿತ್ತು. ಆದರೆ ಅಪರೂಪಕ್ಕೆ ಬ್ಯಾಟ್ ಬೀಸುವ ಸೌಥಿ ಅವರು ರಚಿನ್ ಜೊತೆ ಇನ್ನಿಂಗ್ಸ್ ಬೆಳೆಸಿದ್ದರಿಂದ ನ್ಯೂಜಿಲೆಂಡ್ 400ರ ಗಡಿ ದಾಟುವಂತಾಯಿತು.

    * 2ನೇ ಇನ್ನಿಂಗ್ಸ್‌ನಲ್ಲಿ ಆಡುವ ವೇಳೆ ಮಧ್ಯಮ ಕ್ರಮಾಂಕದ ಬ್ಯಾಟರ್‌ಗಳು ನಿರೀಕ್ಷೆಗೂ ಮೀರಿದ ಪ್ರದರ್ಶನ ನೀಡಿದರು. ಸಫ್ರಾಜ್ ಖಾನ್ ಮತ್ತು ರಿಷಬ್ ಪಂತ್ ಬಲ ತಂದುಕೊಟ್ಟಿದ್ದರು. ಆದರೆ ಕೆ.ಎಲ್ ರಾಹುಲ್, ರವೀಂದ್ರ ಜಡೇಜಾ ಮತ್ತು ಆರ್.ಅಶ್ವಿನ್ ಸಣ್ಣ ಮೊತ್ತಕ್ಕೆ ಔಟಾಗಿ ನಿರಾಸೆ ಮೂಡಿಸಿದರು.

    * 5ನೇ ದಿನದಲ್ಲಿ ಕಿವೀಸ್‌ಗೆ ಅಲ್ಪಮೊತ್ತದ ಗುರಿ ನೀಡಿದ್ದರಿಂದ ಭಾರತ ಸುಲಭ ತುತ್ತಾಯಿತು.

  • IND vs NZ Test | 4ನೇ ದಿನವೂ ಮಳೆಯಾಟ – ಸೋಲಿನ ಸುಳಿಯಲ್ಲಿ ಭಾರತ

    IND vs NZ Test | 4ನೇ ದಿನವೂ ಮಳೆಯಾಟ – ಸೋಲಿನ ಸುಳಿಯಲ್ಲಿ ಭಾರತ

    ಬೆಂಗಳೂರು: ರಿಷಭ್ ‌ಪಂತ್‌, ಸರ್ಫರಾಜ್‌ ಖಾನ್‌ (Sarfaraz Khan) ಅವರ ಅಮೋಘ ಬ್ಯಾಟಿಂಗ್‌ನೊಂದಿಗೆ 2ನೇ ಇನ್ನಿಂಗ್ಸ್‌ನಲ್ಲಿ ಭಾರತ ತಂಡ (Team India) ಉತ್ತಮ ಪ್ರದರ್ಶನ ನೀಡಿದರೂ ಸೋಲಿನ ಸುಳಿಗೆ ಸಿಲುಕಿದೆ.

    125 ರನ್‌ಗಳ ಹಿನ್ನಡೆಯೊಂದಿಗೆ ಕ್ರೀಸ್‌ ಆರಂಭಿಸಿದ ಟೀಂ ಇಂಡಿಯಾ 4ನೇ ದಿನದಾಟದಲ್ಲಿ ಒಟ್ಟು 99.3 ಓವರ್‌ಗಳಲ್ಲಿ 462 ರನ್‌ ಗಳಿಸುವ ಮೂಲಕ ಕಿವೀಸ್‌ ವಿರುದ್ಧ 107 ರನ್‌ಗಳ ಅಲ್ಪ ಮುನ್ನಡೆ ಕಾಯ್ದುಕೊಂಡಿದೆ. ಇದನ್ನೂ ಓದಿ: ಟೀಕೆಗಳಿಗೆ ತಕ್ಕ ಉತ್ತರ – 1,338 ದಿನಗಳ ಬಳಿಕ ತವರಿನಲ್ಲಿ ಟೆಸ್ಟ್‌ ಪಂದ್ಯ ಗೆದ್ದ ಪಾಕ್‌

    ಇಲ್ಲಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ (Chinnaswamy Stadium) ನಡೆಯುತ್ತಿರುವ ಮೊದಲ ಟೆಸ್ಟ್‌ ಪಂದ್ಯದ 4ನೇ ದಿನದಾಟ ಮುಕ್ತಾಯಗೊಂಡಿದೆ. 2ನೇ ಇನ್ನಿಂಗ್ಸ್‌ ಆರಂಭಿಸಿದ ಕಿವೀಸ್‌ 4 ಎಸೆತಗಳನ್ನು ಎದುರಿಸುತ್ತಿದ್ದಂತೆ ಮಂದ ಬೆಳಕು ಕಾರಣ ನೀಡಿ ಪಂದ್ಯವನ್ನು ಮೊಟಕುಗೊಳಿಸಲಾಯಿತು. ಈ ವೇಳೆ ಟೀಂ ಇಂಡಿಯಾ ಆಟಗಾರರು ಅಂಪೈರ್‌ ಜೊತೆಗೆ ವಾಗ್ವಾದಕ್ಕಿಳಿದರೂ ಪ್ರಯೋಜನವಾಗಲಿಲ್ಲ. ಇದಾದ ಕೆಲವೇ ಕ್ಷಣಗಳಲ್ಲಿ ಮಳೆ ಆವರಿಸಿದ್ದರಿಂದ ಪಂದ್ಯವನ್ನು ನಿಗದಿತ ಸಮಯಕ್ಕಿಂತ ಮುಂಚಿತವಾಗಿಯೇ ಮೊಟಕುಗೊಳಿಸಲಾಯಿತು. ಇದನ್ನೂ ಓದಿ: ಜಿಯೋದಲ್ಲಿ ಐಪಿಎಲ್‌ ಬರಲ್ಲ, ಇನ್ನು ಮುಂದೆ ಹಾಟ್‌ಸ್ಟಾರ್‌ನಲ್ಲಿ ನೇರಪ್ರಸಾರ!

    ಪಂತ್‌ ಬಳಿಕ ಟೀಂ ಇಂಡಿಯಾ ಪತನ:
    4ನೇ ದಿನ ಕ್ರೀಸ್‌ ಆರಂಭಿಸಿದ ರಿಷಭ್‌ ಪಂತ್‌ (Rishabh Pant) ಹಾಗೂ ಸರ್ಫರಾಜ್‌ ಜೋಡಿ ಉತ್ತಮ ಬ್ಯಾಟಿಂಗ್‌ ಪ್ರದರ್ಶನ ನೀಡಿತ್ತು. 211 ಎಸೆತಗಳಲ್ಲಿ ಈ ಜೋಡಿ 177 ರನ್‌ ಕಲೆಹಾಕಿತ್ತು. ಕಿವೀಸ್‌ ಬೌಲರ್‌ಗಳನ್ನು ಹಿಗ್ಗಾಮುಗ್ಗಾ ಬೆಂಡೆತ್ತಿದ್ದ ಸರ್ಫರಾಜ್‌ ಖಾನ್‌ ಭರ್ಜರಿ 150 ರನ್‌ (195 ಎಸೆತ, 3 ಸಿಕ್ಸರ್‌, 18 ಬೌಂಡರಿ) ಸಿಡಿಸಿ ಪೆವಿಲಿಯನ್‌ಗೆ ಮರಳಿದರು. ಈ ಬೆನ್ನಲ್ಲೇ ಶತಕ ಸಿಡಿಸುವ ಉತ್ಸಾಹದಲ್ಲಿದ್ದ ರಿಷಭ್‌ ಪಂತ್‌ 99 ರನ್‌ (105 ಎಸೆತ, 9 ಬೌಂಡರಿ, 5 ಸಿಕ್ಸರ್)‌ ಸಿಡಿಸಿ ವಿಕೆಟ್‌ ಒಪ್ಪಿಸಿದರು. ಪಂತ್‌ ಔಟಾಗುತ್ತಿದ್ದಂತೆ ಟೀಂ ಇಂಡಿಯಾದ ಪತನ ಶುರುವಾಯಿತು. ನಂತರ ಕಣಕ್ಕಿಳಿದ ಯಾವೊಬ್ಬ ಆಟಗಾರರು ಕ್ರೀಸ್‌ನಲ್ಲಿ ಭದ್ರವಾಗಿ ನೆಲೆಯೂರದ ಕಾರಣ ಮುಂದಿನ 38 ರನ್‌ ಗಳಿಸುವಷ್ಟರಲ್ಲಿ ಉಳಿದ 5 ವಿಕೆಟ್‌ಗಳೂ ಪತನಗೊಂಡಿತು. ಇದರಿಂದ 2ನೇ ಇನ್ನಿಂಗ್ಸ್‌ನಲ್ಲಿ 462 ರನ್‌ ಗಳಿಸಿದ ಭಾರತ 107 ರನ್‌ಗಳ ಅಲ್ಪ ಮುನ್ನಡೆ ಕಾಯ್ದುಕೊಂಡಿತು.

    ಭಾರತ ಪರ 2ನೇ ಇನ್ನಿಂಗ್ಸ್‌ನಲ್ಲಿ ಯಶಸ್ವಿ ಜೈಸ್ವಾಲ್ 52 ಎಸೆತಗಳಲ್ಲಿ 35 ರನ್, ರೋಹಿತ್ ಶರ್ಮಾ 52 ರನ್ (63 ಎಸೆತ, 1 ಸಿಕ್ಸರ್‌, 8 ಬೌಂಡರಿ), ಕೊಹ್ಲಿ 70 ರನ್ (102 ಎಸೆತ, 1 ಸಿಕ್ಸರ್‌, 8 ಬೌಂಡರಿ), ಕೆ.ಎಲ್‌ ರಾಹುಲ್‌ 12 ರನ್‌, ಅಶ್ವಿನ್‌ 15 ರನ್‌ ಗಳಿಸಿದ್ರೆ, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್‌ ಸಿರಾಜ್‌‌ ಶೂನ್ಯ ಸುತ್ತಿದರು. ಕುಲ್ದೀಪ್‌ ಯಾದವ್‌ 5 ರನ್‌ ಗಳಿಸಿ ಅಜೇಯರಾಗುಳಿದರು.

    ಕಿವೀಸ್‌ ಪರ ವೇಗಿ ಮ್ಯಾಟ್‌ ಹೆನ್ರಿ, ವಿಲ್‌ ಒ ರೂರ್ಕಿ ತಲಾ ಮೂರು ವಿಕೆಟ್‌ ಕಿತ್ತರೆ, ಆಝ್‌ ಪಟೇಲ್‌ 2 ವಿಕೆಟ್‌, ಟಿಮ್‌ ಸೌಥಿ ಮತ್ತು ಗ್ಲೆನ್‌ ಫಿಲಿಪ್ಸ್‌ ತಲಾ ಒಂದು ವಿಕೆಟ್‌ ಕಿತ್ತರು. ಇದನ್ನೂ ಓದಿ: ನಂಬಿಕೆ ಇಲ್ಲದಿದ್ರೆ ಪ್ರತಿ ಪಂದ್ಯ ಮುಗಿದ ಬಳಿಕ ಭಾರತಕ್ಕೆ ಮರಳಬಹುದು: ಬಿಸಿಸಿಐಗೆ ಪಾಕ್‌ ಹೊಸ ಆಫರ್‌

    ಮೊದಲ ಇನ್ನಿಂಗ್ಸ್‌ನಲ್ಲಿ ರಚಿನ್‌ ಭರ್ಜರಿ ಶತಕ:
    ಮೊದಲ ಇನ್ನಿಂಗ್ಸ್‌ನಲ್ಲಿ ಕಿವೀಸ್‌ ಪರ ರಚಿನ್‌ ರವೀಂದ್ರ ಭರ್ಜರಿ 137 ರನ್‌ (157 ಎಸೆತ, 13 ಬೌಂಡರಿ, 4 ಸಿಕ್ಸರ್)‌ ಚಚ್ಚಿದರು. ಇನ್ನುಳಿದಂತೆ ಡಿವೋನ್‌ ಕಾನ್ವೆ 91 ರನ್‌ (105 ಎಸೆತ, 3 ಸಿಕ್ಸರ್‌, 11 ಬೌಂಡರಿ), ಟಿಮ್‌ ಸೌಥಿ 65 ರನ್‌ (73 ಎಸೆತ, 5 ಬೌಂಡರಿ, 4 ಸಿಕ್ಸರ್)‌, ವಿಲ್‌ ಯಂಗ್‌ 33 ರನ್‌, ಟಾಮ್‌ ಲಾಥಮ್‌ 15 ರನ್‌, ಡೇರಿಲ್‌ ಮಿಚೆಲ್‌ 18 ರನ್‌, ಗ್ಲೆನ್‌ ಫಿಲಿಪ್ಸ್‌ 14 ರನ್‌, ಮ್ಯಾಟ್‌ ಹೆನ್ರಿ 8 ರನ್‌, ಆಜಾಜ್‌ ಪಟೇಲ್‌ 4 ರನ್‌, ಟಾಮ್‌ ಬ್ಲಂಡೆಲ್‌ 5 ರನ್‌ ಗಳಿಸಿದ್ದರು. 91.3 ಓವರ್‌ಗಳಲ್ಲಿ 402 ರನ್‌ ಗಳಿಸಿದ್ದ ಕಿವೀಸ್‌ ಟೀಂ ಇಂಡಿಯಾ ವಿರುದ್ಧ 356 ರನ್‌ಗಳ ಭರ್ಜರಿ ಮುನ್ನಡೆ ಕಾಯ್ದುಕೊಂಡಿತ್ತು.

    46ಕ್ಕೆ ನೆಲಕಚ್ಚಿದ್ದ ಭಾರತ:
    ಇದಕ್ಕೂ ಮುನ್ನ ಬ್ಯಾಟಿಂಗ್‌ ಮಾಡಿದ್ದ ಟೀಂ ಇಂಡಿಯಾ ಮೊದಲ ಇನ್ನಿಂಗ್ಸ್‌ನಲ್ಲಿ 46 ರನ್‌ ಗಳಿಗೆ ಆಲೌಟ್‌ ಆಗಿತ್ತು. ಈ ಮೂಲಕ ತವರಿನಲ್ಲಿ ನಡೆದ ಟೆಸ್ಟ್‌ ಕ್ರಿಕೆಟ್‌ನಲ್ಲಿ 3ನೇ ಅತೀ ಕಡಿಮೆ ರನ್‌ ಗಳಿಸಿದ ಕೆಟ್ಟ ದಾಖಲೆಯನ್ನೂ ಹೆಗಲಿಗೇರಿಸಿಕೊಂಡಿತು.

    ಟೀಂ ಇಂಡಿಯಾ ಕಳಪೆ ರನ್‌ ಗಳಿಸಿದ ಪಂದ್ಯಗಳು
    * 36 ರನ್‌ – ಆಸ್ಟ್ರೇಲಿಯಾ ವಿರುದ್ಧ – ಡಿಲೇಡ್‌ ಮೈದಾನ (2020)
    * 42 ರನ್‌ – ಇಂಗ್ಲೆಂಡ್‌ ವಿರುದ್ಧ – ಲಾರ್ಡ್ಸ್‌ ಮೈದಾನ (1974
    * 46 ರನ್‌ – ನ್ಯೂಜಿಲೆಂಡ್‌ ವಿರುದ್ಧ – ಚಿನ್ನಸ್ವಾಮಿ ಕ್ರೀಡಾಂಗಣ (2024)
    * 58 ರನ್‌ – ಆಸ್ಟ್ರೇಲಿಯಾ ವಿರುದ್ಧ – ಮ್ಯಾಂಚೆಸ್ಟರ್‌(1952)
    * 66 ರನ್‌ – ದಕ್ಷಿಣ ಆಫ್ರಿಕಾ ವಿರುದ್ಧ – ಡರ್ಬನ್‌ ಮೈದಾನ (1996)

    ಸಂಕ್ಷಿಪ್ತ ಸ್ಲೋರ್‌:
    ಮೊದಲ ಇನ್ನಿಂಗ್ಸ್‌
    ಭಾರತ – 46/10
    ನ್ಯೂಜಿಲೆಂಡ್‌ – 402/10

    2ನೇ ಇನ್ನಿಂಗ್ಸ್‌
    ಭಾರತ – 462/10

  • ರಚಿನ್‌ ಅಮೋಘ ಶತಕ, ಇತಿಹಾಸ ನಿರ್ಮಿಸಿದ ಕಿವೀಸ್‌; ಭಾರತದ ವಿರುದ್ಧ 356 ರನ್‌ಗಳ ಭರ್ಜರಿ ಮುನ್ನಡೆ

    ರಚಿನ್‌ ಅಮೋಘ ಶತಕ, ಇತಿಹಾಸ ನಿರ್ಮಿಸಿದ ಕಿವೀಸ್‌; ಭಾರತದ ವಿರುದ್ಧ 356 ರನ್‌ಗಳ ಭರ್ಜರಿ ಮುನ್ನಡೆ

    ಬೆಂಗಳೂರು: ರಚಿನ್‌ ರವೀಂದ್ರ (Rachin Ravindra) ಭರ್ಜರಿ ಶತಕ ಹಾಗೂ ಟಿಮ್‌ ಸೌಥಿ (Tim Southee) ಅರ್ಧಶತಕದ ನೆರವಿನಿಂದ ನ್ಯೂಜಿಲೆಂಡ್‌ ಮೊದಲ ಇನ್ನಿಂಗ್ಸ್‌ನಲ್ಲಿ 402 ರನ್‌ ಗಳಿಸಿದ್ದು, ಭಾರತದ ವಿರುದ್ಧ 356 ರನ್‌ ಮುನ್ನಡೆ ಕಾಯ್ದುಕೊಂಡಿದೆ. ಈ ಮೂಲಕ ಟೆಸ್ಟ್‌ ಕ್ರಿಕೆಟ್‌ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ನ್ಯೂಜಿಲೆಂಡ್‌ (New zealand) ತಂಡವು ಭಾರತದ ವಿರುದ್ಧ ಮೊದಲ ಇನ್ನಿಂಗ್ಸ್‌ನಲ್ಲಿ 350ಕ್ಕೂ ಅಧಿಕ ರನ್‌ಗಳ ಮುನ್ನಡೆ ಕಾಯ್ದುಕೊಂಡ ವಿಶೇಷ ಸಾಧನೆ ಮಾಡಿದೆ.

    ಇಲ್ಲಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಕಿವೀಸ್‌ 3ನೇ ದಿನ ಅದ್ಭುತ ಪ್ರದರ್ಶನ ನೀಡಿದೆ. 134 ರನ್‌ಗಳ ಮುನ್ನಡೆಯೊಂದಿಗೆ ಕ್ರೀಸ್‌ ಆರಂಭಿಸಿದ್ದ ಕಿವೀಸ್‌ ಮುಂದಿನ 99 ರನ್‌ ಗಳಿಸುವಷ್ಟರಲ್ಲಿ ಪ್ರಮುಖ 4 ವಿಕೆಟ್‌ ಕಳೆದುಕೊಂಡಿತ್ತು. ಈ ವೇಳೆ ಕ್ರೀಸ್‌ನಲ್ಲಿ ಭದ್ರವಾಗಿ ನೆಲೆಯೂರಿದ ರಚಿನ್‌ ರವೀಂದ್ರ ಹಾಗೂ ಟಿಮ್‌ ಸೌಥಿ ಜೋಡಿ ಸ್ಪೋಟಕ ಪ್ರದರ್ಶನ ನೀಡಿತು. ಇದನ್ನೂ ಓದಿ: IND vs NZ Test | 134 ರನ್‌ಗಳ ಮುನ್ನಡೆ ಸಾಧಿಸಿದ ನ್ಯೂಜಿಲೆಂಡ್‌

    132 ಎಸೆತಗಳಲ್ಲಿ ಈ ಜೋಡಿ 137 ರನ್‌ ಸಿಡಿಸಿತ್ತು. ಬಳಿಕ ವೇಗಿ ಮೊಹಮ್ಮದ್‌ ಸಿರಾಜ್‌ ಟಿಮ್‌ ಸೌಥಿ ಅವರನ್ನು ಪೆವಿಲಿಯನ್‌ಗಟ್ಟುವ ಮೂಲಕ ಇವರಿಬ್ಬರ ಆರ್ಭಟಕ್ಕೆ ಬ್ರೇಕ್‌ ಹಾಕಿದರು. ಆದ್ರೆ ಕೊನೆಯವರೆಗೂ ಹೋರಾಡಿದ ರಚಿನ್‌ ರವೀಂದ್ರ ಶತಕ ಸಿಡಿಸಿ ತಂಡದ ಮೊತ್ತ ಹೆಚ್ಚಿಸಲು ಸಹಕಾರಿಯಾದರು. ಇದನ್ನೂ ಓದಿ: ಟ್ರೋಫಿ ಗೆಲ್ಲಲು ಮಾಸ್ಟರ್‌ ಪ್ಲ್ಯಾನ್‌ – ನೂತನ ಮುಖ್ಯಕೋಚ್‌ ಆಗಿ ಹೇಮಂಗ್‌ ಬದಾನಿ ನೇಮಕ

    ಮೊದಲ ಇನ್ನಿಂಗ್ಸ್‌ನಲ್ಲಿ ಕಿವೀಸ್‌ ಪರ ರಚಿನ್‌ ರವೀಂದ್ರ ಭರ್ಜರಿ 137 ರನ್‌ (157 ಎಸೆತ, 13 ಬೌಂಡರಿ, 4 ಸಿಕ್ಸರ್)‌ ಚಚ್ಚಿದರು. ಇನ್ನುಳಿದಂತೆ ಡಿವೋನ್‌ ಕಾನ್ವೆ 91 ರನ್‌ (105 ಎಸೆತ, 3 ಸಿಕ್ಸರ್‌, 11 ಬೌಂಡರಿ), ಟಿಮ್‌ ಸೌಥಿ 65 ರನ್‌ (73 ಎಸೆತ, 5 ಬೌಂಡರಿ, 4 ಸಿಕ್ಸರ್)‌, ವಿಲ್‌ ಯಂಗ್‌ 33 ರನ್‌, ಟಾಮ್‌ ಲಾಥಮ್‌ 15 ರನ್‌, ಡೇರಿಲ್‌ ಮಿಚೆಲ್‌ 18 ರನ್‌, ಗ್ಲೆನ್‌ ಫಿಲಿಪ್ಸ್‌ 14 ರನ್‌, ಮ್ಯಾಟ್‌ ಹೆನ್ರಿ 8 ರನ್‌, ಆಜಾಜ್‌ ಪಟೇಲ್‌ 4 ರನ್‌, ಟಾಮ್‌ ಬ್ಲಂಡೆಲ್‌ 5 ರನ್‌ ಗಳಿಸಿದ್ರೆ, ವಿಲಿಯಂ ಒ ರೂರ್ಕಿ ರನ್‌ ಗಳಿಸದೇ ಕ್ರೀಸ್‌ನಲ್ಲಿ ಉಳಿದರು.

    46ಕ್ಕೆ ನೆಲಕಚ್ಚಿದ್ದ ಭಾರತ:
    ಇದಕ್ಕೂ ಮುನ್ನ ಬ್ಯಾಟಿಂಗ್‌ ಮಾಡಿದ್ದ ಟೀಂ ಇಂಡಿಯಾ ಮೊದಲ ಇನ್ನಿಂಗ್ಸ್‌ನಲ್ಲಿ 46 ರನ್‌ ಗಳಿಗೆ ಆಲೌಟ್‌ ಆಗಿತ್ತು. ಈ ಮೂಲಕ ತವರಿನಲ್ಲಿ ನಡೆದ ಟೆಸ್ಟ್‌ ಕ್ರಿಕೆಟ್‌ನಲ್ಲಿ 3ನೇ ಅತೀ ಕಡಿಮೆ ರನ್‌ ಗಳಿಸಿದ ಕೆಟ್ಟ ದಾಖಲೆಯನ್ನೂ ಹೆಗಲಿಗೇರಿಸಿಕೊಂಡಿತು. ಇದನ್ನೂ ಓದಿ: ಕಿವೀಸ್‌ ವೇಗಿಗಳ ಆರ್ಭಟ; 46ಕ್ಕೆ ಭಾರತ ಆಲೌಟ್‌ – ಕೆಟ್ಟ ದಾಖಲೆ ಹೆಗಲಿಗೇರಿಸಿಕೊಂಡ ಟೀಂ ಇಂಡಿಯಾ

    ಟೀಂ ಇಂಡಿಯಾ ಕಳಪೆ ರನ್‌ ಗಳಿಸಿದ ಪಂದ್ಯಗಳು
    * 36 ರನ್‌ – ಆಸ್ಟ್ರೇಲಿಯಾ ವಿರುದ್ಧ – ಡಿಲೇಡ್‌ ಮೈದಾನ (2020)
    * 42 ರನ್‌ – ಇಂಗ್ಲೆಂಡ್‌ ವಿರುದ್ಧ – ಲಾರ್ಡ್ಸ್‌ ಮೈದಾನ (1974
    * 46 ರನ್‌ – ನ್ಯೂಜಿಲೆಂಡ್‌ ವಿರುದ್ಧ – ಚಿನ್ನಸ್ವಾಮಿ ಕ್ರೀಡಾಂಗಣ (2024)
    * 58 ರನ್‌ – ಆಸ್ಟ್ರೇಲಿಯಾ ವಿರುದ್ಧ – ಮ್ಯಾಂಚೆಸ್ಟರ್‌(1952)
    * 66 ರನ್‌ – ದಕ್ಷಿಣ ಆಫ್ರಿಕಾ ವಿರುದ್ಧ – ಡರ್ಬನ್‌ ಮೈದಾನ (1996)

    ಸಂಕ್ಷಿಪ್ತ ಸ್ಲೋರ್‌:
    ಮೊದಲ ಇನ್ನಿಂಗ್ಸ್‌
    ಭಾರತ – 46/10
    ನ್ಯೂಜಿಲೆಂಡ್‌ – 402/10

  • 49th Century – ಸಚಿನ್ & ಕೊಹ್ಲಿ: ಯಾವ ತಂಡದ ವಿರುದ್ಧ ಎಷ್ಟು ಶತಕ..?

    49th Century – ಸಚಿನ್ & ಕೊಹ್ಲಿ: ಯಾವ ತಂಡದ ವಿರುದ್ಧ ಎಷ್ಟು ಶತಕ..?

    ಬೆಂಗಳೂರು: 49 ಶತಕಗಳ ಮೂಲಕ ಸಚಿನ್ (Sachin) ದಾಖಲೆ ಸರಿಗಟ್ಟಿರುವ ಕೊಹ್ಲಿ (Virat Kohli) ತಮ್ಮ 35ನೇ ಹುಟ್ಟುಹಬ್ಬವನ್ನು ಭರ್ಜರಿಯಾಗಿ ಆಚರಿಸಿಕೊಂಡರು. 49 ಶತಕ ಬಾರಿಸಿದ್ದೇನೋ ಸರಿ, ಆದು ಯಾವ ತಂಡದ ವಿರುದ್ಧ ಎಂದು ಗೊತ್ತಾಗಬೇಕಲ್ಲ. ಅದಕ್ಕೆ ಈ ಎಲ್ಲ ಅಂಕಿ ಅಂಶಗಳನ್ನು ನಿಮ್ಮ ಮುಂದಿಡುತ್ತಿದ್ದೇವೆ.

    ಶತಕ ಬಾರಿಸುವುದೆಂದರೆ ಸಚಿನ್ ಹಾಗೂ ಕೊಹ್ಲಿಗೆ ಆಸ್ಟ್ರೇಲಿಯಾ, ನ್ಯೂಜಿಲೆಂಡ್ ಹಾಗೂ ಶ್ರೀಲಂಕಾ ಎಂದರೆ ಅಚ್ಚುಮೆಚ್ಚು. ಸಚಿನ್ ಆಸ್ಟ್ರೇಲಿಯಾ ವಿರುದ್ಧ 9 ಶತಕ ದಾಖಲಿಸಿದ್ದರೆ, ಕೊಹ್ಲಿ 8 ಶತಕ ದಾಖಲಿಸಿದ್ದಾರೆ. ನ್ಯೂಜಿಲೆಂಡ್ ವಿರುದ್ಧ ಇಬ್ಬರೂ ತಲಾ 5 ಶತಕ ದಾಖಲಿಸಿದ್ದಾರೆ.

    ಆ `49 ಶತಕ’ಗಳು ಯಾರ ವಿರುದ್ಧ..?

    ಆಸ್ಟ್ರೇಲಿಯಾ ವಿರುದ್ಧ ಸಚಿನ್ 9, ಕೊಹ್ಲಿ 8 ಶತಕ
    ಬಾಂಗ್ಲಾದೇಶದ ವಿರುದ್ಧ ಸಚಿನ್ 1, ವಿರಾಟ್ ಕೊಹ್ಲಿ 5 ಶತಕ
    ಇಂಗ್ಲೆಂಡ್ ವಿರುದ್ಧ ಸಚಿನ್ 2, ವಿರಾಟ್ 3 ಶತಕ
    ನ್ಯೂಜಿಲೆಂಡ್ ವಿರುದ್ಧ ಸಚಿನ್ ಹಾಗೂ ವಿರಾಟ್ ತಲಾ 5 ಶತಕ
    ಪಾಕಿಸ್ತಾನ ವಿರುದ್ಧ ಸಚಿನ್ 5 ಶತಕ, ವಿರಾಟ್ 3 ಶತಕ
    ದಕ್ಷಿಣ ಆಫ್ರಿಕಾ ವಿರುದ್ಧ ಸಚಿನ್ ಹಾಗೂ ವಿರಾಟ್ ತಲಾ 5 ಶತಕ
    ಶ್ರೀಲಂಕಾ ವಿರುದ್ಧ ಸಚಿನ್ 8 ಹಾಗೂ ವಿರಾಟ್ 10 ಶತಕ
    ವೆಸ್ಟ್ ಇಂಡೀಸ್ ವಿರುದ್ಧ ಸಚಿನ್ 4, ವಿರಾಟ್ 9 ಶತಕ
    ಜಿಂಬಾಬ್ವೆ ವಿರುದ್ಧ ಸಚಿನ್ 5, ವಿರಾಟ್ 1 ಶತಕ
    ಕೀನ್ಯಾ ವಿರುದ್ಧ ಸಚಿನ್ 4 ಶತಕ ಬಾರಿಸಿದರೆ, ಕೊಹ್ಲಿ ಯಾವುದೇ ಪಂದ್ಯವನ್ನು ಆಡಿಲ್ಲ
    ನಮೀಬಿಯಾ ವಿರುದ್ಧ ಸಚಿನ್ 1 ಶತಕ ಬಾರಿಸಿದರೆ, ಕೊಹ್ಲಿ ಯಾವುದೇ ಪಂದ್ಯವನ್ನು ಆಡಿಲ್ಲ.

  • Virat Kohli – ಬರ್ತ್ ಡೇಯಂದೇ ಸೆಂಚುರಿ ಬಾರಿಸಿದ 7ನೇ ಆಟಗಾರ..!

    Virat Kohli – ಬರ್ತ್ ಡೇಯಂದೇ ಸೆಂಚುರಿ ಬಾರಿಸಿದ 7ನೇ ಆಟಗಾರ..!

    – ವಿಶ್ವಕಪ್‌ನಲ್ಲಿ ಜನ್ಮದಿನದಂದೇ ಭಾರತದ ಪರ ಮೊದಲ ಸೆಂಚುರಿ

    ಕೋಲ್ಕತ್ತಾ: ಕಿಂಗ್ ಕೊಹ್ಲಿ (Virat Kohli) ಈ ಬಾರಿಯ ವಿಶ್ವಕಪ್ ಪಂದ್ಯಾವಳಿಯಲ್ಲಿ ಹೊಸ ದಾಖಲೆಯೊಂದನ್ನ ತನ್ನ ಹೆಸರಿಗೆ ಬರೆದುಕೊಂಡಿದ್ದಾರೆ. ವಿಶ್ವಕಪ್ (W0rld Cup) ಪಂದ್ಯದಲ್ಲಿ ಬರ್ತ್ ಡೇಯಂದೇ ಶತಕ ದಾಖಲಿಸಿದ ಭಾರತದ ಮೊದಲ ಆಟಗಾರ ಎನಿಸಿಕೊಂಡಿದ್ದಾರೆ.

    ದಕ್ಷಿಣ ಆಫ್ರಿಕಾ (South Africa) ವಿರುದ್ಧ ಕೋಲ್ಕತ್ತಾದ ಈಡನ್ ಗಾರ್ಡನ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟೀಂ ಇಂಡಿಯಾದ ವಿರಾಟ್ ಕೊಹ್ಲಿ ತನ್ನ ವೃತ್ತಿ ಬದುಕಿನ 49ನೇ ಏಕದಿನ ಶತಕ ದಾಖಲಿಸಿದರು. 101 ರನ್ ಗಳಿಸಿದ ಕೊಹ್ಲಿ ಅಜೇಯರಾಗಿಯೇ ಉಳಿದರು. ಅಲ್ಲದೆ ವಿಶ್ವಕಪ್‌ನಲ್ಲಿ 4ನೇ ಸೆಂಚುರಿ ಬಾರಿಸಿದರು. ಈ ಮೂಲಕ 49 ಶತಕ ಬಾರಿಸಿದ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ (Sachin Tendulkar) ಅವರ 49 ಶತಕಗಳ ದಾಖಲೆಯನ್ನು ಸರಿಗಟ್ಟಿದರು.

    ಇನ್ನಿಂಗ್ಸ್ ಮಧ್ಯೆ ಬ್ರೇಕ್‌ನಲ್ಲಿ ಬರ್ತ್ ಡೇ ದಿನದ ಶತಕ ಹೇಗನ್ನಿಸ್ತು? ಎಂಬ ವೀಕ್ಷಕ ವಿವರಣೆಗಾರರ ಪ್ರಶ್ನೆಗೆ ಉತ್ತರಿಸಿದ ವಿರಾಟ್ ಕೊಹ್ಲಿ, ಭಾರತಕ್ಕಾಗಿ ಆಡುವುದು ನನಗೆ ಹೆಮ್ಮೆ. ಇಷ್ಟೊಂದು ಅಭಿಮಾನಿಗಳ ಮುಂದೆ ಈ ಸಾಧನೆ ನೀಡಿರುವುದು ಖುಷಿ ತಂದಿದೆ ಎಂದರು.

    ಏಕದಿನ ಕ್ರಿಕೆಟ್‌ನ ಇತಿಹಾಸದಲ್ಲಿ ಇದುವರೆಗೆ 7 ಆಟಗಾರರು ಬರ್ತ್ ಡೇಯಂದೇ ಶತಕ ಬಾರಿಸಿದ್ದಾರೆ.

    1. ವಿನೋದ್ ಕಾಂಬ್ಳಿ, ಭಾರತ 21ನೇ ಶತಕ, ಇಂಗ್ಲೆಂಡ್ ವಿರುದ್ಧ ಅಜೇಯ 100 ರನ್, ಜೈಪುರ, 1993

    ಇಂಗ್ಲೆಂಡ್ ವಿರುದ್ಧ ಜೈಪುರದಲ್ಲಿ ನಡೆದ ಪಂದ್ಯದಲ್ಲಿ 149 ಎಸೆತಗಳಲ್ಲಿ ಶತಕ ಬಾರಿಸಿದ ವಿನೋದ್ ಕಾಂಬ್ಳಿ (Vinod Kambli) ಅಜೇಯರಾಗಿ ಉಳಿದರು. 9 ಬೌಂಡರಿ ಹಾಗೂ ಒಂದು ಸಿಕ್ಸ್ ಒಳಗೊಂಡ ಶತಕ ಕಾಂಬ್ಳಿ ಬಾರಿಸಿದರೂ ಭಾರತ ಈ ಪಂದ್ಯವನ್ನು 4 ವಿಕೆಟ್‌ಗಳಿಂದ ಸೋತಿತ್ತು.

    2. ಸಚಿನ್ ತೆಂಡೂಲ್ಕರ್, ಭಾರತ, 25ನೇ ಶತಕ, ಆಸ್ಟ್ರೇಲಿಯಾ ವಿರುದ್ಧ 134, ಶಾರ್ಜಾ, 1998

    1998ರಲ್ಲಿ ಶಾರ್ಜಾದಲ್ಲಿ ಆಸ್ಟ್ರೇಲಿಯಾದಲ್ಲಿ ನಡೆದ ಒನ್‌ಡೇ ಮ್ಯಾಚ್ ದಿನ 25ನೇ ಬರ್ತ್ಡೇ ಆಚರಿಸಿದ ಸಚಿನ್ (Sachin Tendulkar) ತಮ್ಮ 25ನೇ ಶತಕವನ್ನು ಅರ್ಥಪೂರ್ಣವಾಗಿ ಬಾರಿಸಿದರು. 131 ಎಸೆತಗಳಲ್ಲಿ 12 ಬೌಂಡರಿ ಹಾಘೂ 3 ಸಿಕ್ಸರ್ ಒಳಗೊಂಡ 134 ರನ್ ಬಾರಿಸಿದರು. ಈ ಪಂದ್ಯವನ್ನು ಭಾರತ ಆರು ವಿಕೆಟ್‌ಗಳಿಂದ ಗೆದ್ದಿತ್ತು.

    3. ಸನತ್ ಜಯಸೂರ್ಯ, ಶ್ರೀಲಂಕಾ, 39ನೇ ಬರ್ತ್ಡೇ, ಬಾಂಗ್ಲಾದೇಶದ ವಿರುದ್ಧ 130 ರನ್, ಕರಾಚಿ, 2008

    2008ರಲ್ಲಿ 39ನೇ ಬರ್ತ್ಡೇ ದಿನ ಬಾಂಗ್ಲಾದೇಶದ ವಿರುದ್ಧ ಪಾಕಿಸ್ತಾನದ ಕರಾಚಿಯಲ್ಲಿ ನಡೆದ ಪಂದ್ಯಲ್ಲಿ ಸನತ್ ಜಯಸೂರ್ಯ ಶತಕ ಬಾರಿಸಿದರು. 88 ಎಸೆತಗಳಲ್ಲಿ 16 ಬೌಂಡರಿ ಹಾಗೂ 6 ಸಿಕ್ಸರ್ ಒಳಗೊಂಡ ಇನ್ನಿಂಗ್ಸ್ನಲ್ಲಿ ಜಯಸೂರ್ಯ 130 ರನ್ ಗಳಿಸಿರು. ಈ ಪಂದ್ಯದಲ್ಲಿ ಶ್ರೀಲಂಕಾ 158 ರನ್ ಅಂತರದಿಂದ ಬಾಂಗ್ಲಾದೇಶ ವಿರುದ್ಧ ಗೆಲುವು ಸಾಧಿಸಿತ್ತು.

    4. ರಾಸ್ ಟೇಲರ್, ನ್ಯೂಜಿಲೆಂಡ್, 27ನೇ ಬರ್ತ್ಡೇ, ಪಾಕಿಸ್ತಾನ ವಿರುದ್ಧ ಅಜೇಯ 131 ರನ್, ಪಲ್ಲೆಕೆಲೆ, 2011

    ವಿಶ್ವಕಪ್ ಪಂದ್ಯಾವಳಿಯಲ್ಲಿ ಬರ್ತ್ಡೇ ಆಚರಿಸಿಕೊಂಡ ಮೊದಲ ಆಟಗಾರ ರಾಸ್ ಟೇಲರ್ (Ross Taylor). ಶತಕದ ಜೊತೆ 27ನೇ ಬರ್ತ್ಡೇ ಆಚರಿಸಿಕೊಂಡರು. ಪಾಕಿಸ್ತಾನ ವಿರುದ್ಧದ ಪಂದ್ಯಲ್ಲಿ 124 ಎಸೆತಗಳಲ್ಲಿ 8 ಬೌಂಡರಿ ಹಾಗೂ 7 ಸಿಕ್ಸ್ ಜೊತೆ 131 ರನ್ ಬಾರಿಸಿದ್ದರು. ಈ ಪಂದ್ಯವನ್ನು ನ್ಯೂಜಿಲೆಂಡ್ 110 ರನ್ ಗಳಿಂದ ಗೆದ್ದಿತ್ತು.

    5. ಟಾಮ್ ಲ್ಯಾಥಮ್, ನ್ಯೂಜಿಲೆಂಡ್, 30ನೇ ಶತಕ, ನೆದರ್ಲೆಂಡ್ ವಿರುದ್ಧ ಅಜೇಯ 140 ರನ್, ಹ್ಯಾಮಿಲ್ಟನ್, 2022

    ನೆದರ್ಲೆಂಡ್ ವಿರುದ್ಧದ ಹ್ಯಾಮಿಲ್ಟನ್‌ನಲ್ಲಿ 2022ರಲ್ಲಿ ನಡೆದ 123 ಎಸೆತಗಳಲ್ಲಿ 140 ರನ್ ಗಳಿಸಿ ಟಾಮ್ ಲ್ಯಾಥಮ್ ಅಜೇಯರಾಗಿ ಉಳಿದರು. ಈ ಇನ್ನಿಂಗ್ಸ್ 10 ಬೌಂಡರಿ ಹಾಘೂ 5 ಸಿಕ್ಸರ್ ಗಳನ್ನೊಳಗೊಂಡಿತ್ತು. ನ್ಯೂಜಿಲೆಂಡ್ ಈ ಪಂದ್ಯವನ್ನು 118 ರನ್ ಅಂತರದಿಂದ ಗೆದ್ದಿತ್ತು.

    6. ಮಿಚೆಲ್‌ ಮಾರ್ಷ್‌, ಆಸ್ಟ್ರೇಲಿಯಾ, 32ನೇ ಬರ್ತ್ಡೇ, ಪಾಕಿಸ್ತಾನ ವಿರುದ್ಧ 121, ಬೆಂಗಳೂರು 2023

    ಈ ಬಾರಿಯ ವಿಶ್ವಕಪ್‌ನಲ್ಲಿ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಆಸ್ಟ್ರೇಲಿಯಾದ ಆಲ್ ರೌಂಡರ್ ಮಿಚೆಲ್‌ ಮಾರ್ಷ್‌ ಬರ್ತ್ಡೇ ದಿನವೇ ಸೆಂಚುರಿ ಬಾರಿಸಿದರು. 108 ಬಾಲಲ್ಲಿ 121 ರನ್ ಗಳಿಸಿದರು. 10 ಫೋರ್ ಹಾಗೂ 9 ಸಿಕ್ಸರ್ ಒಳಗೊಂಡ ಇನ್ನಿಂಗ್ಸ್ ಇದಾಗಿತ್ತು.

    7. ವಿರಾಟ್ ಕೊಹ್ಲಿ, ಭಾರತ, 35ನೇ ಬರ್ತ್ಡೇ, ದಕ್ಷಿಣ ಆಫ್ರಿಕಾ ವಿರುದ್ಧ ಅಜೇಯ 101 ರನ್, ಕೋಲ್ಕತ್ತಾ, 2023

    ನವೆಂಬರ್ 5ರಂದು ಕೋಲ್ಕತ್ತಾದ ಈಡನ್ ಗಾರ್ಡನ್‌ನಲ್ಲಿ ನಡೆದ ಪಂದ್ಯಾವಳಿಯಲ್ಲಿ ವಿರಾಟ್ ಕೊಹ್ಲಿ ಭಾರತದ ಪರ ಬರ್ತ್ಡೇ ದಿನ ವಿಶ್ವಕಪ್‌ನಲ್ಲಿ ಶತಕ ಬಾರಿಸಿದ ಮೊದಲ ಆಟಗಾರ ಎಂಬ ಹಿರಿಮೆಗೆ ಪಾತ್ರರಾದರು. 121 ಎಸೆತಗಳಲ್ಲಿ ಕೊಹ್ಲಿ 10 ಬೌಂಡರಿಗಳ ಸಹಿತ 101 ರನ್ ಬಾರಿಸಿದರು. ಅಲ್ಲದೇ ಇದೇ ಪಂದ್ಯದಲ್ಲಿ ಸಚಿನ್ ತೆಂಡೂಲ್ಕರ್ ಅವರ 49 ಏಕದಿನ ಶತಕಗಳ ದಾಖಲೆಗೆ ತಮ್ಮ ಹೆಸರನ್ನೂ ಸೇರಿಸಿಕೊಂಡರು.

  • World Cup 2023: ನಾನು 100% ಕಿವೀಸ್‌ ಎಂದ ಬೆಂಗಳೂರು ಯುವಕ ರಚಿನ್‌ ರವೀಂದ್ರ

    World Cup 2023: ನಾನು 100% ಕಿವೀಸ್‌ ಎಂದ ಬೆಂಗಳೂರು ಯುವಕ ರಚಿನ್‌ ರವೀಂದ್ರ

    ಧರ್ಮಶಾಲಾ: ಆಸ್ಟ್ರೇಲಿಯಾ (Australia) ವಿರುದ್ಧ ಇಲ್ಲಿನ HPCA ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಆಸೀಸ್‌ ಬೌಲರ್‌ಗಳನ್ನ ಬೆಂಡೆತ್ತಿದ್ದ ಕಿವೀಸ್ ಆಟಗಾರ ರಚಿನ್ ರವೀಂದ್ರ (Rachin Ravindra) 77 ಎಸೆತಗಳಲ್ಲೇ 5 ಸಿಕ್ಸರ್, 7 ಬೌಂಡರಿಗಳ ನೆರವಿನೊಂದಿಗೆ ಶತಕ ಸಿಡಿಸಿ ಮಿಂಚಿದರು. ಒಟ್ಟು 89 ಎಸೆತಗಳನ್ನು ಎದುರಿಸಿದ ರವೀಂದ್ರ 116 ರನ್ (9 ಬೌಂಡರಿ, 5 ಸಿಕ್ಸರ್) ಬಾರಿಸುವ ಮೂಲಕ ಸ್ಫೋಟಕ ಪ್ರದರ್ಶನ ನೀಡಿ ಗಮನ ಸೆಳೆದರು.

    ಈ ಶತಕದೊಂದಿಗೆ 23ನೇ ವಯಸ್ಸಿಗೆ ವಿಶ್ವಕಪ್‌ (World Cup) ಇತಿಹಾಸದಲ್ಲಿ 2 ಶತಕ ಸಿಡಿಸುವ ಮೂಲಕ ಭಾರತದ ಲೆಜೆಂಡ್ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ (Sachin Tendulkar) ಅವರ ವಿಶೇಷ ದಾಖಲೆಯನ್ನೂ ಸರಿಗಟ್ಟಿದರು. ಪಂದ್ಯ ಮುಗಿದ ಬಳಿಕ ಪೋಸ್ಟ್‌ ಪ್ರೆಸೆಂಟೇಷನ್‌ನಲ್ಲಿ, ಭಾರತೀಯ ಮೂಲದವನಾಗಿ ಭಾರತದಲ್ಲಿ ಪ್ರದರ್ಶನ ನೀಡುತ್ತಿರುವ ಒತ್ತಡದ ಬಗ್ಗೆ ಕೇಳಲಾಯಿತು. ಇದನ್ನೂ ಓದಿ: 23ನೇ ವಯಸ್ಸಿಗೆ ಸಚಿನ್‌ ದಾಖಲೆ ಸರಿಗಟ್ಟಿದ ಬೆಂಗಳೂರು ಯುವಕ ರಚಿನ್‌

    ಇದಕ್ಕೆ ಪ್ರತಿಕ್ರಿಯಿಸಿದ ರಚಿನ್‌, ನನಗೆ ಈ ಬಗ್ಗೆ ಸಾಕಷ್ಟುಬಾರಿ ಕೇಳಿದ್ದಾರೆ. ನಾನು 100% ಕಿವೀಸ್‌ ಅಟಗಾರನೇ ಎಂದು ಭಾವಿಸುತ್ತೇನೆ. ಆದ್ರೆ ನನ್ನ ಭಾರತೀಯ ಪರಂಪರೆ ಬಗ್ಗೆ ತುಂಬಾ ಹೆಮ್ಮೆಪಡುತ್ತೇನೆ. ನನ್ನ ಹೆತ್ತವರು ಹುಟ್ಟಿಬೆಳೆದ ದೇಶ ಇದು, ನನ್ನ ಕುಟುಂಬದ ಬಹಳಷ್ಟು ಮಂದಿ ಇಲ್ಲಿದ್ದಾರೆ. ಇಲ್ಲಿನ ಪರಿಸ್ಥಿತಿ ಬ್ಯಾಟಿಂಗ್‌ಗೆ ಉತ್ತಮವಾಗಿದೆ. ಮುಂದಿನ ದಿನಗಳಲ್ಲಿ ಭಾರತದ ಪ್ರವಾಸಕ್ಕೆ ಬರಲು ಇದೆಲ್ಲವೂ ನೆರವಾಗುತ್ತದೆ. ನನ್ನ ಆಟ ಪರ್ಫೆಕ್ಟ್‌ ಆಗಿ ಇರಬೇಕು ಎಂದು ನಾನು ಬಯಸುವುದಿಲ್ಲ, ಆದ್ರೆ ಉತ್ತಮ ಪ್ರದರ್ಶನ ನೀಡಬೇಕೆಂದು ಪ್ರಯತ್ನಿಸುತ್ತೇನೆ ಎಂದು ಹೇಳಿಕೊಂಡಿದ್ದಾರೆ.

    ನಂತರ ಧರ್ಮಶಾಲಾ ಕ್ರೀಡಾಂಗಣದಲ್ಲಿ ಪ್ರೇಕ್ಷಕರಿಂದ ಸಿಕ್ಕ ಬೆಂಬಲದ ಬಗ್ಗೆ ಮಾತನಾಡಿದ ರಚಿನ್‌, ಖಂಡಿತವಾಗಿಯೂ ಪ್ರೇಕ್ಷಕರಿಂದ ಉತ್ತಮ ಬೆಂಬಲ ಸಿಕ್ಕಿದೆ. ಭಾರತದಲ್ಲಿ ಆಡಿದ ಪಂದ್ಯಗಳ ಪೈಕಿ ಹೆಚ್ಚಿನ ಜನ ಪ್ರೇಕ್ಷಕರನ್ನು ಒಳಗೊಂಡ ಪಂದ್ಯಗಳಲ್ಲಿ ಇದೂ ಒಂದಾಗಿದೆ. ಅಭಿಮಾನಿಗಳು ಸ್ಪಂದಿಸುತ್ತಿದ್ದ ರೀತಿ ತುಂಬಾ ಖುಷಿ ಕೊಟ್ಟಿದೆ. ಚಿಕ್ಕಮಕ್ಕಳಾಗಿದ್ದಾಗ ಸಾವಿರಾರು ಜನ ನಮ್ಮ ಹೆಸರು ಹೇಳಬೇಕೆಂದು ಬಯಸುತ್ತೇವೆ. ಆ ಕನಸು ಈಗ ನನಸಾಗಿದೆ. ಆ ಕ್ಷಣವನ್ನು ಕಣ್ತುಂಬಿಕೊಳ್ಳುವುದು ಆನಂದವಾಗಿತ್ತು, ಅದನ್ನು ಎಂದಿಗೂ ಮರೆಯುವುದಿಲ್ಲ ಎಂದು ಹೇಳಿಕೊಂಡಿದ್ದಾರೆ. ಇದನ್ನೂ ಓದಿ: ಧರ್ಮಶಾಲಾ ಅಂಗಳದಲ್ಲಿ ವಂದೇ ಮಾತರಂ ಝೇಂಕಾರ – ಅದ್ಭುತ ವೀಡಿಯೋ ನೀವೇ ನೋಡಿ

    ಕೊಹ್ಲಿ ಹಿಂದಿಕ್ಕಿದ ರವೀಂದ್ರ: ಪ್ರಸ್ತುತ ವಿಶ್ವಕಪ್ ಕ್ರಿಕೆಟ್‌ನಲ್ಲಿ 354 ರನ್ ಗಳಿಸಿದ್ದ ಕಿಂಗ್ ಕೊಹ್ಲಿ ಅತಿಹೆಚ್ಚು ರನ್ ಗಳಿಸಿದ 4ನೇ ಬ್ಯಾಟರ್ ಎನಿಸಿಕೊಂಡಿದ್ದರು. ಆದ್ರೆ ಆಸೀಸ್ ವಿರುದ್ಧ ಸ್ಫೋಟಕ ಶತಕ ಸಿಡಿಸುವ ಮೂಲಕ 6 ಪಂದ್ಯಗಳಲ್ಲಿ 2 ಶತಕ ಸೇರಿ 406 ರನ್ ಗಳಿಸಿರುವ ರಚಿನ್ ರವೀಂದ್ರ ಕೊಹ್ಲಿಯನ್ನು ಹಿಂದಿಕ್ಕಿ 3ನೇ ಸ್ಥಾನಕ್ಕೆ ಜಿಗಿದಿದ್ದಾರೆ. 431 ರನ್ ಗಳಿಸಿರುವ ಕ್ವಿಂಟನ್ ಡಿಕಾಕ್ ಮೊದಲ ಸ್ಥಾನದಲ್ಲಿ, 413 ರನ್ ಗಳಿಸಿರುವ ಡೇವಿಡ್ ವಾರ್ನರ್ 2ನೇ ಸ್ಥಾನ, 356 ರನ್ ಗಳಿಸಿರುವ ಏಡನ್ ಮಾರ್ಕ್ರಮ್ 4ನೇ ಸ್ಥಾನದಲ್ಲಿದ್ದಾರೆ. ಭಾನುವಾರ ಇಂಗ್ಲೆಂಡ್‌ ವಿರುದ್ಧದ ಪಂದ್ಯದಲ್ಲೂ ಕೊಹ್ಲಿ ಶೂನ್ಯಕ್ಕೆ ಔಟಾಗಿದ್ದು, 6 ಪಂದ್ಯಗಳಿಂದ 354 ರನ್‌ ಗಳಿಸಿ 5ನೇ ಸ್ಥಾನದಲ್ಲೇ ಮುಂದುವರಿದಿದ್ದಾರೆ. ಇದನ್ನೂ ಓದಿ: World Cup 2023: ಸಿಕ್ಸರ್‌, ಬೌಂಡರಿಗಳ ಸುರಿಮಳೆ – ಭಾರತದ ನೆಲದಲ್ಲಿ ಇತಿಹಾಸ ಸೃಷ್ಟಿಸಿದ ಆಸೀಸ್‌

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]