Tag: Toll Plaza

  • ಅಕ್ರಮ ಮರಳು ಸಾಗಣೆ- ಟೋಲ್ ಗೇಟನ್ನು ಮುರಿದ 13 ಟ್ರ್ಯಾಕ್ಟರ್‌ಗಳು

    ಅಕ್ರಮ ಮರಳು ಸಾಗಣೆ- ಟೋಲ್ ಗೇಟನ್ನು ಮುರಿದ 13 ಟ್ರ್ಯಾಕ್ಟರ್‌ಗಳು

    ಲಕ್ನೋ: ವೇಗವಾಗಿ ಬಂದ 13 ಮರಳು ತುಂಬಿದ ಟ್ರ್ಯಾಕ್ಟರ್‌ಗಳು ಉತ್ತರ ಪ್ರದೇಶದ ಆಗ್ರಾದ ಟೋಲ್ ಗೇಟ್‍ನ್ನು ಮುರಿದ ಘಟನೆ ನಡೆದಿದೆ.

    ಈ 13 ಟ್ರ್ಯಾಕ್ಟರ್‌ಗಳಿಗೆ ಅಕ್ರಮ ಮರಳನ್ನು ತುಂಬಲಾಗಿತ್ತು. ಇದರಿಂದಾಗಿ ಟ್ರ್ಯಾಕ್ಟರ್‌ನಲ್ಲಿದ್ದ ಚಾಲಕರು ಟೋಲ್ ಟ್ಯಾಕ್ಸ್ ಅನ್ನು ಪಾವತಿಸಲು ನಿಲ್ಲಿಸದೇ, ಆ ಗೇಟ್‍ನ್ನೇ ಮುರಿದುಕೊಂಡು ಹೋಗಿದ್ದಾರೆ. ಟ್ರ್ಯಾಕ್ಟರ್‌ಗಳು ಅತಿವೇಗದಲ್ಲಿ ಹಾದು ಹೋಗುವುದರಿಂದ ಗೇಟ್ ಮುರಿದಿದೆ. ಟೋಲ್ ಟ್ಯಾಕ್ಸ್ ಸಿಬ್ಬಂದಿ ಲಾಠಿ ಬೀಸಿ ವಾಹನಗಳನ್ನು ನಿಲ್ಲಿಸಲು ಪ್ರಯತ್ನಿಸಿದರೂ ಆ 13 ಟ್ರ್ಯಾಕ್ಟರ್ ನಿಲ್ಲಲಿಲ್ಲ. ಸದ್ಯ ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ವೈರಲ್ ಆಗುತ್ತಿರುವ ಈ ವೀಡಿಯೋ 53 ಸೆಕೆಂಡ್‍ಗಳಿವೆ. ಈ ವೀಡಿಯೋವನ್ನು ಹಂಚಿಕೊಂಡ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಟ್ವೀಟ್ ಮಾಡಿದ್ದು, ಬಿಜೆಪಿಯ ಡಬಲ್ ಇಂಜಿನ್‍ನ ಸರ್ಕಾರ ಮರಳು ಮಾಫಿಯಾದಲ್ಲಿ ಧೈರ್ಯವನ್ನು ತೋರಿಸುತ್ತಿವೆ. ಬಿಜೆಪಿಯ ಅಡೆತಡೆಗಳು ಅವುಗಳಂತೆಯೇ ನಕಲಿಯಾಗಿದೆ ಎಂದು ಟೀಕಿಸಿದ್ದಾರೆ. ಇದನ್ನೂ ಓದಿ: ತಮ್ಮ ಅವಧಿಯಲ್ಲಿ ಭ್ರಷ್ಟಾಚಾರ ನಡೆದಿಲ್ಲ ಅಂತ ಚಾಮುಂಡೇಶ್ವರಿ ಮೇಲೆ ಆಣೆ ಮಾಡಲಿ – ಸಿದ್ದರಾಮಯ್ಯಗೆ ಈಶ್ವರಪ್ಪ ಸವಾಲ್

    ಘಟನೆಗೆ ಸಂಬಂಧಿಸಿದಂತೆ ಪ್ರಕರಣವನ್ನು ದಾಖಲಿಸಿಕೊಂಡ ಪೊಲೀಸರು ಟ್ರ್ಯಾಕ್ಟರ್‌ನ ಕೆಲವು ಚಾಲಕನ್ನು ಬಂಧಿಸಿದ್ದಾರೆ. ಆರೋಪಿಗಳೆಲ್ಲರೂ ಧೋಲ್‍ಪುರ್(ರಾಜಸ್ಥಾನ)ಕ್ಕೆ ಸೇರಿದವರಾಗಿದ್ದಾರೆ. ಇದನ್ನೂ ಓದಿ: ಗಣೇಶಮೂರ್ತಿ ಸ್ಥಾಪಿಸಿದ ಬಿಜೆಪಿ ನಾಯಕಿ ರೂಬಿಖಾನ್‌ಗೆ ಮುಸ್ಲಿಂ ಧರ್ಮಗುರುಗಳಿಂದ ಕೊಲೆ ಬೆದರಿಕೆ

    Live Tv
    [brid partner=56869869 player=32851 video=960834 autoplay=true]

  • ಟೋಲ್‌ಬೂತ್‌ನಲ್ಲಿದ್ದ ಮಹಿಳಾ ಉದ್ಯೋಗಿಗೆ ಕಪಾಳಮೋಕ್ಷ ಮಾಡಿದ ವಾಹನ ಸವಾರ

    ಟೋಲ್‌ಬೂತ್‌ನಲ್ಲಿದ್ದ ಮಹಿಳಾ ಉದ್ಯೋಗಿಗೆ ಕಪಾಳಮೋಕ್ಷ ಮಾಡಿದ ವಾಹನ ಸವಾರ

    ಭೋಪಾಲ್: ಟೋಲ್ ನೀಡದಿದ್ದಕ್ಕೆ ವಾಹನ ಬಿಡಲಿಲ್ಲವೆಂದು ವ್ಯಕ್ತಿಯೊಬ್ಬ ಟೋಲ್‌ಬೂತ್‌ನಲ್ಲಿದ್ದ ಮಹಿಳಾ ಉದ್ಯೋಗಿಗೆ ಕಪಾಳಮೋಕ್ಷ ಮಾಡಿರುವ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.

    ಇಲ್ಲಿನ ರಾಜಗಢ-ಭೋಪಾಲ್ ರಸ್ತೆಯಲ್ಲಿರುವ ಕಚ್ನಾರಿಯಾ ಟೋಲ್ ಪ್ಲಾಜಾದಲ್ಲಿ ಘಟನೆ ನಡೆದಿದೆ. ಸ್ಥಳೀಯ ವ್ಯಕ್ತಿಯೇ ಟೋಲ್‌ಬೂತ್‌ನಲ್ಲಿದ್ದ ಮಹಿಳಾ ಸಿಬ್ಬಂದಿಗೆ ಕಪಾಳಮೋಕ್ಷ ಮಾಡಿದ್ದಾನೆ. ಬಳಿಕ ಮಹಿಳೆ ಚಪ್ಪಲಿ ಹಿಡಿದು ಪ್ರತಿದಾಳಿ ನಡೆಸಿದ್ದಾರೆ. ಸಿಸಿಟಿವಿಯಲ್ಲಿ ಸೆರೆಯಾಗಿದ್ದ ಈ ದೃಶ್ಯಾವಳಿಗಳು ಈಗ ಜಾಲತಾಣದಲ್ಲಿ ಹರಿದಾಡುತ್ತಿವೆ.

    ಸ್ಥಳೀಯ ನಿವಾಸಿ ರಾಜ್‌ಕುಮಾರ್ ಗುರ್ಜರ್ ಎಂಬ ವ್ಯಕ್ತಿಯ ಕಾರಿಗೆ ಟೋಲ್ ಪಾವತಿಸಲು ಫಾಸ್ಟ್‌ಟ್ಯಾಗ್‌ ಎಲೆಕ್ಟ್ರಾನಿಕ್‌ ಪಾವತಿ ವ್ಯವಸ್ಥೆಯನ್ನು ಒಳಗೊಂಡಿರಲಿಲ್ಲ. ಆದರೆ ಮಹಿಳೆ ಟೋಲ್ ಪಾವತಿಸದೇ ವಾಹನ ಹೋಗಲು ಬಿಡುವುದಿಲ್ಲ ಎಂದಿದ್ದಾರೆ. ಇದರಿಂದ ವಾಗ್ವಾದಕ್ಕಿಳಿದ ವ್ಯಕ್ತಿ ತಾನು ಸ್ಥಳೀಯನಾಗಿದ್ದು ಟೋಲ್‌ನಿಂದ ವಿನಾಯ್ತಿ ನೀಡಬೇಕು ಎಂದು ಹೇಳಿದ್ದಾನೆ. ಆದರೆ ಸ್ಥಳೀಯನೆಂದು ಗುರುತಿಸಲು ಯಾವುದೇ ದಾಖಲೆಗಳೂ ಇರಲಿಲ್ಲ. ಮಾತಿನ ಚಕಮಕಿ ನಡೆಯುತ್ತಲೇ ಮಹಿಳೆ ಮೇಲೆ ದಾಳಿಗೆ ಮುಂದಾಗಿದ್ದಾನೆ.ಇದನ್ನೂ ಓದಿ: ವೈದ್ಯನ ಮೇಲೆ ಹಲ್ಲೆ ನಡೆಸಿದ ಮಿಜೋರಾಂ ಸಿಎಂ ಪುತ್ರಿ – ತಂದೆಯಿಂದಲೇ ಸಾರ್ವಜನಿಕವಾಗಿ ಕ್ಷಮೆ

    ಈ ಕುರಿತು ಪ್ರತಿಕ್ರಿಯೆ ನೀಡಿದ ಮಹಿಳೆ ಅನುರಾಧಾ ಡಂಗಿ, ಅವನು ಸ್ಥಳೀಯನೆಂದು ಹೇಳಿದ. ಆದರೆ ನನಗೆ ಆತನ ಪರಿಚಯವೇ ಇರಲಿಲ್ಲ. ನಂತರ ನನ್ನ ಮೇಲ್ವಿಚಾರಕರಿಗೆ ಈ ವಿಷಯ ತಿಳಿಸಿ, ಆತ ಪರಿಚಯವಿಲ್ಲವೆಂದೂ ಹೇಳಿದೆ. ಅವನು ವಾಹನದಿಂದ ಇಳಿದು ನಿಂದನೆ ಮಾಡಲು ಶುರು ಮಾಡಿದ. ಮಾತಿಗೆ ಮಾತು ನೀಡುತ್ತಾ ಕಪಾಳಕ್ಕೆ ಹೊಡೆದ. ನಾನು ಚಪ್ಪಲಿ ಹಿಡಿದು ಪ್ರತಿದಾಳಿ ಮಾಡಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಪುಟಿನ್‌ ಬ್ರೈನ್‌ ಎಂದೇ ಹೆಸರಾಗಿದ್ದ ರಷ್ಯಾ ನಾಯಕನ ಪುತ್ರಿ ಕಾರ್‌ ಬಾಂಬ್‌ ಸ್ಫೋಟದಿಂದ ಸಾವು

    ಘಟನೆ ಸಂಬಂಧ ಟೋಲ್ ಪ್ಲಾಸಾದ ಮಹಿಳೆಯರು ಸಮೀಪದ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಅಲ್ಲದೇ ಹಲ್ಲೆಗೊಳಗಾದ ಮಹಿಳೆ ಅನುರಾಧಾ, ವ್ಯಕ್ತಿ ವಿರುದ್ಧ ಲಿಖಿತ ದೂರು ಸಲ್ಲಿಸಿದ್ದಾರೆ. ಆರೋಪಿ ವಿರುದ್ಧ ಐಪಿಸಿ ಸೆಕ್ಷನ್ 354, 323, 506 ಹಾಗೂ ಸಾರ್ವಜನಿಕ ಆಸ್ತಿ ಹಾನಿ ತಡೆ ಕಾಯ್ದೆ ಸೆಕ್ಷನ್ – 3ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಆರೋಪಿ ಬಂಧನಕ್ಕಾಗಿ ಬಲೆ ಬೀಸಲಾಗಿದೆ ಎಂದು ಪೊಲೀಸ್ ಅಧಿಕಾರಿ ರಾಮಕುಮಾರ್ ರಘುವಂಶಿ ಹೇಳಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಟೋಲ್ ಪ್ಲಾಜಾ ನೌಕರರ ಮೇಲೆ ಬಿಜೆಪಿ ಮುಖಂಡನ ಗೂಂಡಾ ವರ್ತನೆ

    ಟೋಲ್ ಪ್ಲಾಜಾ ನೌಕರರ ಮೇಲೆ ಬಿಜೆಪಿ ಮುಖಂಡನ ಗೂಂಡಾ ವರ್ತನೆ

    ಭೋಪಾಲ್: ಟೋಲ್ ಪ್ಲಾಜಾ ಬಳಿ ಶಾಜಾದಪುರದ ಬಿಜೆಪಿ ಜಿಲ್ಲಾಧ್ಯಕ್ಷ ಅಂಬರಂ ಕರಡ ಗೂಂಡಾಗಿರಿ ಮೆರೆದಿದ್ದು, ಅವರ ಬೆಂಬಲಿಗರು ಟೋಲ್ ಪ್ಲಾಜಾದ ನೌಕರರನ್ನು ಥಳಿಸಿದ್ದಾರೆ ಎಂದು ಆರೋಪಿಸಲಾಗಿದೆ.

    ಘಟನೆಯ ಕುರಿತ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಸೆಹೋರ್‌ನ ಪಟೇರಿಯಾ ಗೋಯಲ್ ರಾಷ್ಟ್ರೀಯ ಹೆದ್ದಾರಿಯ ಟೋಲ್ ಪ್ಲಾಜಾದ ಪ್ರಕರಣ ಇದಾಗಿದ್ದು, ಬಿಜೆಪಿ ಕಾರ್ಯಕರ್ತರು ಟೋಲ್ ಪ್ಲಾಜಾ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.

    ಜಿಲ್ಲಾಧ್ಯಕ್ಷರು ಸ್ಥಳದಲ್ಲೇ ಇದ್ದು, ಜಗಳ ನಿಲ್ಲಿಸುವ ಬದಲು ಪ್ರಚಾರ ಮಾಡುತ್ತಿರುವಂತಿದೆ ಎಂದು ದೂರು ಕೇಳಿಬರುತ್ತಿದೆ. ಸ್ಥಳೀಯ ವ್ಯಕ್ತಿಯೊಬ್ಬರು ಸಿಬ್ಬಂದಿ ಮೇಲೆ ಹಲ್ಲೆ ಎಸಗುತ್ತಿರುವ ದೃಶ್ಯಾವಳಿಗಳನ್ನು ತಮ್ಮ ಮೊಬೈಲ್‍ನಲ್ಲಿ ಸೆರೆ ಹಿಡಿದಿದ್ದಾರೆ. ಬಿಜೆಪಿ ಕಾರ್ಯಕರ್ತರ ದಬ್ಬಾಳಿಕೆ ಮುಂದೆ ಟೋಲ್ ಕಾರ್ಮಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

  • ಫಾಸ್ಟ್‌ಟ್ಯಾಗ್ ಇಲ್ಲದಿದ್ದರೆ ಇಂದಿನಿಂದ ದುಪ್ಪಟ್ಟು ಟೋಲ್ ಕಟ್ಟಿ

    ಫಾಸ್ಟ್‌ಟ್ಯಾಗ್ ಇಲ್ಲದಿದ್ದರೆ ಇಂದಿನಿಂದ ದುಪ್ಪಟ್ಟು ಟೋಲ್ ಕಟ್ಟಿ

    – ಟೋಲ್‍ಗಳಲ್ಲಿ ನೋ ಫಾಸ್ಟ್‌ಟ್ಯಾಗ್, ನೋ ಎಂಟ್ರಿ ಬೋರ್ಡ್

    ಬೆಂಗಳೂರು: ಇವತ್ತಿನಿಂದ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಫಾಸ್ಟ್‌ಟ್ಯಾಗ್ ಕಡ್ಡಾಯವಾಗಿದ್ದು, ಫಾಸ್ಟ್‌ಟ್ಯಾಗ್ ಇಲ್ಲವಾದರೆ ಟೋಲ್‍ಗಳಲ್ಲಿ ಪ್ರವೇಶವೇ ಇಲ್ಲ. ಇಲ್ಲವೇ 2 ಪಟ್ಟು ಟೋಲ್ ಕಟ್ಟಿ ಪ್ರಯಾಣಿಸಬೇಕಿದೆ.

    ಫಾಸ್ಟ್‌ಟ್ಯಾಗ್ ಕಡ್ಡಾಯ ಹಿನ್ನೆಲೆ ಎಲ್ಲ ಟೋಲ್‍ಗಳಲ್ಲಿ `ನೋ ಫಾಸ್ಟ್‌ಟ್ಯಾಗ್, ನೋ ಎಂಟ್ರಿ’ ಬೋರ್ಡ್ ಹಾಕಲಾಗಿದ್ದು, ಫಾಸ್ಟ್‌ಟ್ಯಾಗ್ ಇಲ್ಲವಾದರೆ ಟೋಲ್‍ನ 2 ಪಟ್ಟು ಹಣ ಕಟ್ಟಬೇಕು. ಇಂದು ಮಧ್ಯ ರಾತ್ರಿಯಿಂದ ಫಾಸ್ಟ್‌ಟ್ಯಾಗ್ ಕಡ್ಡಾಯಗೊಳಿಸಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ.

    ಒಂದೆಡೆ ಫಾಸ್ಟ್‌ಟ್ಯಾಗ್ ಪಡೆಯುವುದು ಸಮಸ್ಯೆಯಾದರೆ, ಮತ್ತೊಂದೆಡೆ ಫಾಸ್ಟ್‌ಟ್ಯಾಗ್ ನಲ್ಲಿ ಹಣ ಇದ್ದರೂ ಸ್ಕ್ಯಾನ್ ಆಗ್ತಿಲ್ಲ. ಹೀಗಾಗಿ ದುಪ್ಪಟ್ಟು ಟೋಲ್ ವಸೂಲಿ ಮಾಡಲಾಗುತ್ತಿದ್ದು, ವಾಹನ ಸವಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಟೋಲ್ ಸಿಬ್ಬಂದಿ ಜೊತೆಗೆ ವಾಹನ ಸವಾರರು ಕಿರಿಕ್ ಮಾಡಿಕೊಳ್ಳುತ್ತಿದ್ದಾರೆ. ಮಧ್ಯರಾತ್ರಿಯಿಂದಲೇ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಫಾಸ್ಟ್‌ಟ್ಯಾಗ್ ಕಡ್ಡಾಯವಾಗಿದೆ. ಫಾಸ್ಟ್‌ಟ್ಯಾಗ್ ಇಲ್ಲದವರ ಬಳಿ ಡಬಲ್ ಚಾರ್ಜ್ ಕಟ್ಟಿಸಿಕೊಳ್ಳಲಾಗುತ್ತಿದೆ.

    ಏರ್ ಪೋರ್ಟ್ ಟೋಲ್ ಪ್ಲಾಜಾ ಬಳಿ ವಾಹನ ಸವಾರರು ಕಿರಿಕ್ ಮಾಡಿಕೊಳ್ಳುತ್ತಿದ್ದು, ಫಾಸ್ಟ್‌ಟ್ಯಾಗ್ ಮಾಡುವ ಸ್ಥಳದಲ್ಲಿ ಹಗ್ಗಜಗ್ಗಾಟ ಶುರುವಾಗಿದೆ. ಟೋಲ್ ಸಿಬ್ಬಂದಿ ಮತ್ತು ವಾಹನ ಸವಾರರ ನಡುವೆ ಕಿರಿಕ್ ಶುರುವಾಗಿದೆ. ಮತ್ತೊಂದೆಡೆ ಟೋಲ್ ಪ್ಲಾಜಾ ಬಳಿಯೇ ಫಾಸ್ಟ್‌ಟ್ಯಾಗ್ ಅಳವಡಿಕೆ ನಡೆದಿದೆ.

    ತೀವ್ರಗೊಂಡ ವಾಗ್ವಾದ
    ಹೊಸಕೋಟೆ ಟೋಲ್ ನಲ್ಲಿ ಸ್ಟೋರ್ ಸಿಬ್ಬಂದಿ ಮತ್ತು ವಾಹನ ಸವಾರರ ಮಧ್ಯೆ ಮಾತಿನ ಚಕಮಕಿ ನಡೆದಿದ್ದು, ಫಾಸ್ಟ್‌ಟ್ಯಾಗ್ ಮಾಡಿಸದಿದ್ದರೆ ದುಪ್ಪಟ್ಟು ಹಣದ ಬರೆ. ಎಲ್‍ಸಿವಿ ವಾಹನಗಳಿಗೆ 30 ರೂ. ಇದ್ದ ಟೋಲ್ ದರ 60 ರೂ. ಆಗಿದೆ. ಬಸ್, ಲಾರಿಗಳಿಗೆ ಇದ್ದ 65 ರೂ. ಇದೀಗ 135 ರೂ. ಆಗಿದೆ. ಫಾಸ್ಟ್‌ಟ್ಯಾಗ್ ಮಾಡಿಸಿದವರಿಗೆ ಮಾತ್ರ ದುಪ್ಪಟ್ಟು ಹಣ ಪಡೆಯುತ್ತಿಲ್ಲ. ಫೆ.15 ರಿಂದ ಫಾಸ್ಟ್‌ಟ್ಯಾಗ್ ಕಡ್ಡಾಯ ಮಾಡಲಾಗಿದೆ.

    ದುಪ್ಪಟ್ಟು ಹಣ ಕೇಳುತ್ತಿದ್ದಂತೆ ಕೆಲವು ಕಾರುಗಳು ಹಿಂದಕ್ಕೆ ಹೋಗುತ್ತಿವೆ. ದುಪ್ಪಟ್ಟು ಹಣ ವಸೂಲಿ ಹಿನ್ನೆಲೆ ಫಾಸ್ಟ್‌ಟ್ಯಾಗ್ ಇಲ್ಲದ ವಾಹನಗಳು ನಿನ್ನೆಯಿಂದಲೇ ಟೋಲ್ ರಸ್ತೆಗೆ ಹೋಗುತ್ತಿಲ್ಲ. ಅಲ್ಲದೆ ಫಾಸ್ಟ್‌ಟ್ಯಾಗ್ ಇಲ್ಲದ ವಾಹನಗಳಿಗೆ ಟೋಲ್ ಬಳಿಯೇ ಮಾಡಲು ವ್ಯವಸ್ಥೆ ಕಲ್ಪಿಸಲಾಗಿದೆ. ಕೆಲ ವಾಹನ ಮಾಲೀಕರು ದುಪ್ಪಟ್ಟು ಹಣ ಯಾಕೆ ಕೊಡಬೇಕು ಎಂದು ಪ್ರಶ್ನಿಸುತ್ತಿದ್ದಾರೆ. ಫಾಸ್ಟ್‌ಟ್ಯಾಗ್ ಕಡ್ಡಾಯ ಮಾಡಿರುವುದು ಕೆಲ ವಾಹನಗಳ ಮಾಲೀಕರಿಗೆ ಗೊತ್ತಿಲ್ಲ.

  • ಬೆಂಬಲಿಗರ ವಾಹನಗಳಿಗೆ ಸಿಗದ ಫ್ರೀ ಎಂಟ್ರಿ- ಟೋಲ್ ಸಿಬ್ಬಂದಿ ಮೇಲೆ ಬಿಜೆಪಿ ಶಾಸಕನಿಂದ ಹಲ್ಲೆ

    ಬೆಂಬಲಿಗರ ವಾಹನಗಳಿಗೆ ಸಿಗದ ಫ್ರೀ ಎಂಟ್ರಿ- ಟೋಲ್ ಸಿಬ್ಬಂದಿ ಮೇಲೆ ಬಿಜೆಪಿ ಶಾಸಕನಿಂದ ಹಲ್ಲೆ

    – ಸೋಶಿಯಲ್ ಮೀಡಿಯಾದಲ್ಲಿ ಶಾಸಕನ ದರ್ಪ ಸೆರೆ

    ಲಕ್ನೋ: ಬೆಂಬಲಿಗರ 200 ವಾಹನಗಳಿಗೆ ಫ್ರೀ ಎಂಟ್ರಿ ನೀಡದ ಟೋಲ್ ಸಿಬ್ಬಂದಿ ಮೇಲೆ ಬಿಜೆಪಿ ಶಾಸಕ ನರೇಶ್ ರಾವತ್ ಹಲ್ಲೆ ನಡೆಸಿರುವ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಶಾಸಕರ ವಿರುದ್ಧ ಟೋಲ್ ಪ್ಲಾಜಾ ಮ್ಯಾನೇಜರ್ ಲಕ್ನೋ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

    ಉತ್ತರ ಪ್ರದೇಶದ ರಾಯಬರೇಲಿ ಜಿಲ್ಲೆಯ ಲಕ್ನೋ ಮಾರ್ಗದಲ್ಲಿರುವ ಟೋಲ್ ಪ್ಲಾಜಾದಲ್ಲಿ ಈ ಘಟನೆ ನಡೆದಿದೆ. ಇಂದು ಮಧ್ಯಾಹ್ನ ಎನ್‍ಹೆಚ್-30 ಮಾರ್ಗವಾಗಿ ಬಂದ ಶಾಸಕರ ವಾಹನಗಳನ್ನ ಟೋಲ್ ಸಿಬ್ಬಂದಿ ತಡೆದು ಶುಲ್ಕ ಪಾವತಿಸುವಂತೆ ಸೂಚಿಸಿದ್ದರು. ಇದಕ್ಕೆ ಕೋಪಗೊಂಡ ಶಾಸಕ ಟೋಲ್ ಪ್ಲಾಜಾ ಕಚೇರಿಯೊಳಗೆ ನುಗ್ಗಿ ದರ್ಪ ಮರೆದಿದ್ದಾರೆ.

    ಟೋಲ್ ಸಿಬ್ಬಂದಿ ಅನುಮತಿ ನೀಡದ ಹಿನ್ನೆಲೆ ಶಾಸಕ ತಮ್ಮ ಬೆಂಬಲಿಗರ ಜತೆ ಸೇರಿ ರೌಡಿಯಂತೆ ವರ್ತಿಸಿದ್ದಾರೆ. ಈ ಎಲ್ಲ ದೃಶ್ಯಗಳು ಕಚೇರಿಯಲ್ಲಿದ್ದ ಸಿಸಿಟಿವಿಯಲ್ಲಿ ಸೆರೆಯಾಗಿವೆ.

    ಶಾಸಕರು ಪ್ರತಿದಿನ ಈ ಮಾರ್ಗವಾಗಿ ಸಂಚರಿಸುತ್ತಾರೆ. ಶಾಸಕರ ಹಿಂದೆ ಬರುವ ವಾಹನಗಳಿಗೆ ಟೋಲ್ ಫ್ರೀ ನೀಡಬೇಕೆಂದು ನಮ್ಮ ಮೇಲೆ ಒತ್ತಡ ಹಾಕುತ್ತಾರೆ. ಪ್ರವೇಶ ನೀಡದಕ್ಕೆ ಕಚೇರಿಯೊಳಗೆ ನುಗ್ಗೆ ಹಲ್ಲೆ ನಡೆಸಿದ್ದಾರೆ ಎಂದು ಟೋಲ್ ಪ್ಲಾಜಾ ಮ್ಯಾನೇಜರ್ ಆರೋಪಿಸಿದ್ದಾರೆ.

  • ಫಾಸ್ಟ್ ಟ್ಯಾಗ್ ಅಳವಡಿಸಿಕೊಳ್ಳಲು ಐದು ದಿನ ಬಾಕಿ

    ಫಾಸ್ಟ್ ಟ್ಯಾಗ್ ಅಳವಡಿಸಿಕೊಳ್ಳಲು ಐದು ದಿನ ಬಾಕಿ

    ಬೆಂಗಳೂರು: ಫಾಸ್ಟ್ ಟ್ಯಾಗ್ ಅಳವಡಿಸಲು ಕೇವಲ ಐದೇ ದಿನ ಬಾಕಿಯಿದೆ.

    ರಾಜ್ಯದ ರಾಷ್ಟ್ರೀಯ ಹೆದ್ದಾರಿಗಳ ಟೋಲ್ ಪ್ಲಾಜಾಗಳಲ್ಲಿ ಸಂಚರಿಸುವ ಶೇ. 60ರಷ್ಟು ವಾಹನಗಳು ಫಾಸ್ಟ್ ಟ್ಯಾಗ್ ಅಳವಡಿಸಿಕೊಂಡಿದ್ದು, ಅಂತಿಮ ಗಡುವಿಗೆ  ಬಾಕಿ ಉಳಿದ ಐದು ದಿನಗಳಲ್ಲಿ ಶೇ.25ರಷ್ಟು ವಾಹನಗಳು ಫಾಸ್ಟ್ ಟ್ಯಾಗ್ ಅಳವಡಿಸಿಕೊಳ್ಳುವುದು ಬಾಕಿಯಿದೆ.

    ಕೇಂದ್ರ ಸರ್ಕಾರ ಫಾಸ್ಟ್ ಟ್ಯಾಗ್ ಅಳವಡಿಕೆ ನೀಡಿದ್ದ ಗಡುವು ವಿಸ್ತರಣೆ ಐದು ದಿನಗಳಲ್ಲಿ (ಜ.15) ಮುಕ್ತಾಯವಾಗಲಿದೆ. ಈ ಅವಧಿಯಲ್ಲಿ ಫಾಸ್ಟ್ ಟ್ಯಾಗ್ ಅಳವಡಿಸಿಕೊಳ್ಳದಿದ್ದರೆ ಕ್ಯಾಶ್ ಲೈನ್ ನಲ್ಲಿ ಮಾತ್ರ ಸಂಚರಿಸಬೇಕು.

    ರಾಜ್ಯದಲ್ಲಿ ಫಾಸ್ಟ್ ಟ್ಯಾಗ್‍ಗೆ ಬೇಡಿಕೆ ಕಡಿಮೆಯಾಗಿದೆ. ಟೋಲ್ ಪ್ಲಾಜಾಗಳಲ್ಲಿ ತೆರೆದಿರುವ ಫಾಸ್ಟ್ ಟ್ಯಾಗ್ ಸೆಂಟರ್ ಗಳು, ಬ್ಯಾಂಕ್‍ಗಳು, ಆನ್‍ಲೈನ್ ಮಾರ್ಕೆಟ್‍ನಲ್ಲಿ ಫಾಸ್ಟ್ ಟ್ಯಾಗ್ ಗೆ ಬೇಡಿಕೆ ಇಳಿಮುಖವಾಗಿದೆ. ಡಿಸೆಂಬರ್ 15ರ ವೇಳೆಗೆ ರಾಜ್ಯದಲ್ಲಿ ಶೇ.40ರಷ್ಟಿದ್ದ ಫಾಸ್ಟ್ ಟ್ಯಾಗ್ ಅಳವಡಿಕೆ ಪ್ರಮಾಣ ಕಳೆದ 25 ದಿನಗಳಲ್ಲಿ ಶೇ. 20ರಷ್ಟು ಹೆಚ್ಚಾಗಿದೆ. ಅಂದರೆ ಇವರೆಗೆ ರಾಜ್ಯದಲ್ಲಿ ಒಟ್ಟು ಶೇ.60ರಷ್ಟು ಫಾಸ್ಟ್ ಟ್ಯಾಗ್ ಅಳವಡಿಕೆಯಾಗಿದೆ.

    ವಾಹನಗಳಿಗೆ ಫಾಸ್ಟ್ ಟ್ಯಾಗ್ ಸ್ಟಿಕರ್ ಅಳವಡಿಕೆ ನಿರೀಕ್ಷಿತ ಮಟ್ಟಕ್ಕೆ ಮುಟ್ಟಿಲ್ಲ. ಆದರೂ ಇನ್ನೈದು ದಿನಗಳಲ್ಲಿ ಫಾಸ್ಟ್ ಟ್ಯಾಗ್ ವಾಹನಗಳ ಸಂಖ್ಯೆ ಶೇ.80ಕ್ಕೆ ಏರಿಕೆಯಾಗಲಿದೆ ಎಂದು ಅಧಿಕಾರಿಗಳು ಭರವಸೆ ವ್ಯಕ್ತಪಡಿಸಿದ್ದಾರೆ. ಫಾಸ್ಟ್ ಟ್ಯಾಗ್ ಇಲ್ಲದ ವಾಹನಗಳ ಸಂಚಾರಕ್ಕೆ ಟೋಲ್ ಪ್ಲಾಜಾಗಳಲ್ಲಿ ಒಂದು ಪಥ ಮೀಸಲಿಡಲು ಹೆದ್ದಾರಿ ಪ್ರಾಧಿಕಾರ ಚಿಂತನೆ ನಡೆಸಿದೆ.

  • ಫಾಸ್ಟ್ ಟ್ಯಾಗ್‍ನಿಂದ ಆದಾಯ ಸೋರಿಕೆಗೆ ಬಿತ್ತು ಕತ್ತರಿ- ಶೇ.15ರಷ್ಟು ಹೆಚ್ಚಳವಾಯ್ತು ಟೋಲ್ ಸಂಗ್ರಹ

    ಫಾಸ್ಟ್ ಟ್ಯಾಗ್‍ನಿಂದ ಆದಾಯ ಸೋರಿಕೆಗೆ ಬಿತ್ತು ಕತ್ತರಿ- ಶೇ.15ರಷ್ಟು ಹೆಚ್ಚಳವಾಯ್ತು ಟೋಲ್ ಸಂಗ್ರಹ

    ನವದೆಹಲಿ: ಟೋಲ್ ಪಾವತಿಸಲು ಫಾಸ್ಟ್ ಟ್ಯಾಗ್ ಕಡ್ಡಾಯ ಬಳಕೆಯನ್ನು ಕೇಂದ್ರ ಸರ್ಕಾರ ಮುಂದೂಡಿದ್ದರೂ, ರಾಷ್ಟ್ರೀಯ ಹೆದ್ದಾರಿಯಲ್ಲಿ ಟೋಲ್ ಸಂಗ್ರಹ ಪ್ರಮಾಣ ಶೇ.15 ರಷ್ಟು ಹೆಚ್ಚಾಗಿದೆ.

    ಮೂಲಗಳ ಮಾಹಿತಿಯ ಅನ್ವಯ ಎನ್‍ಎಚ್‍ಎಐ ಟೋಲ್ ಆದಾಯ 80 ಕೋಟಿ ರೂ. ದಾಟಿದ್ದು, ಇದಕ್ಕೂ ಮುನ್ನ ಸರಾಸರಿ 65 ರಿಂದ 68 ಕೋಟಿ ರೂ. ಜುಲೈ ಮತ್ತು ಆಗಸ್ಟ್ ತಿಂಗಳಿನಲ್ಲಿ ಸಂಗ್ರಹವಾಗಿತ್ತು. ಫಾಸ್ಟ್ ಟ್ಯಾಗ್ ಅಳವಡಿಕೆಯಿಂದ ಆದಾಯ ಹೆಚ್ಚಳವಾಗಿದ್ದು, ಮುಂದಿನ ದಿನಗಳಲ್ಲಿ ಟೋಲ್‍ಗಳಲ್ಲಿ ಸೋರಿಕೆಯಾಗುತ್ತಿದ್ದ ಆದಾಯಕ್ಕೆ ಪೂರ್ಣವಿರಾಮ ಬೀಳುವ ಸಾಧ್ಯತೆಯಿದೆ.

    ಇದುವರೆಗೂ ದೇಶದಲ್ಲಿರುವ 530 ಟೋಲ್ ಪ್ಲಾಜಾಗಳಲ್ಲಿ 40 ರಿಂದ 45 ಪ್ಲಾಜಾಗಳಲ್ಲಿನ ‘ಟೋಲ್ ಟೈಮ್ ಝೀರೋ’ ಟೈಮ್ ದಾಖಲಾಗಿದೆ. ಕಳೆದ ವರ್ಷ 488 ಟೋಲ್ ಪ್ಲಾಜಾ ಗಳಲ್ಲಿ ಸರಾಸರಿ ಕಾಯುವ ಸಮಯ ಭಾನುವಾರ 12 ನಿಮಿಷವಾಗಿತ್ತು. ಉಳಿದಂತೆ ಇತರೇ ದಿನಗಳಲ್ಲಿ ಸರಾಸರಿ 10.04 ನಿಮಿಷ ಬೇಕಾಗಿತ್ತು.

    ಈಗಲೂ ಮಾಹಿತಿಯ ಕೊರತೆಯಿಂದಾಗಿ ವಾಹನಗಳು ಮಾಲೀಕರು ಫಾಸ್ಟ್ ಟ್ಯಾಗ್ ಅಳವಡಿಕೆ ಮಾಡದೇ ಇದ್ದರೂ ಟೋಲ್ ಪ್ಲಾಜಾಗಳಲ್ಲಿ ಫಾಸ್ಟ್ ಟ್ಯಾಗ್ ಲೇನ್‍ಗಳಿಗೆ ಪ್ರವೇಶ ಮಾಡುತ್ತಿದ್ದರಿಂದ ಕೆಲ ಸಮಸ್ಯೆ ಆಗುತ್ತಿದೆ. ಈ ವೇಳೆ ಡಬಲ್ ಚಾರ್ಜ್ ಪಾವತಿ ಮಾಡಲು ನಿರಾಕರಿಸುತ್ತಿದ್ದಾರೆ. ಅಲ್ಲದೇ ಕೆಲ ಪ್ಲಾಜಾಗಳಲ್ಲಿ ತಾಂತ್ರಿಕ ಸಮಸ್ಯೆ ಕಾಣಿಸಿಕೊಂಡಿದ್ದು, ಅಂತಹ ಸ್ಥಳಗಳಲ್ಲಿ ವಾಹನ ಸವಾರರು ಸಾಕಷ್ಟು ಬ್ಯಾಲೆನ್ಸ್ ಇದ್ದರೆ ಉಚಿತ ಪ್ರವೇಶ ನೀಡಲಾಗುತ್ತಿದೆ ಎಂದು ಟೋಲ್ ಸಿಬ್ಬಂದಿ ಹೇಳಿದ್ದಾರೆ.

    ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳು ನೀಡಿರುವ ಮಾಹಿತಿ ಅನ್ವಯ, ದೇಶದ 245 ಪ್ಲಾಜಾಗಳಲ್ಲಿ ಫಾಸ್ಟ್ ಟ್ಯಾಗ್ ತೃಪ್ತಿದಾಯಕವಾಗಿದ್ದು, ಎಲ್ಲಾ ಪ್ಲಾಜಾಗಳಲ್ಲಿ ನೇರ ನಗದು ಸ್ವೀಕರಿಸುವ ಒಂದು ಲೇನ್ ಮಾತ್ರ ತೆರೆಯಲಾಗಿದೆ ಎಂದು ತಿಳಿಸಿದ್ದಾರೆ. ಉಳಿದ 242 ಪ್ಲಾಜಾಗಳಲ್ಲಿ ಶೇ.25 ರಷ್ಟು ಲೇನ್‍ಗಳಲ್ಲಿ ನಗದು ಸ್ವೀಕರಿಸಲಾಗುತ್ತಿದೆ. ಇನ್ನು 40-42 ಪ್ಲಾಜಾಗಳಲ್ಲಿ ನಿರೀಕ್ಷಿತ 25% ರಷ್ಟು ಪ್ರಮಾಣದಲ್ಲಿ ಫಾಸ್ಟ್ ಟ್ಯಾಗ್ ಬಳಕೆ ಸಾಧ್ಯವಾಗಿಲ್ಲ ಎಂಬ ಮಾಹಿತಿ ಲಭಿಸಿದೆ.

  • ಟ್ರಕ್‍ನಿಂದ ಕೆಳಗೆ ಬಿದ್ದವು ರಾಶಿ ರಾಶಿ ಬಿಯರ್ ಬಾಟಲ್‍ಗಳು- ವಿಡಿಯೋ ನೋಡಿ

    ಟ್ರಕ್‍ನಿಂದ ಕೆಳಗೆ ಬಿದ್ದವು ರಾಶಿ ರಾಶಿ ಬಿಯರ್ ಬಾಟಲ್‍ಗಳು- ವಿಡಿಯೋ ನೋಡಿ

    ಜೈಪುರ್: ಟೋಲ್ ಗೇಟ್ ಕೌಂಟರ್ ಬಳಿಯ ರೋಡ್ ಡಿವೈಡರ್ ಗೆ ಟ್ರಕ್‍ವೊಂದು ಡಿಕ್ಕಿ ಹೊಡೆದ ಪರಿಣಾಮ ಅದರಲ್ಲಿದ್ದ ಬಿಯರ್ ಬಾಟಲ್‍ಗಳು ರಾಶಿ ರಾಶಿಯಾಗಿ ಕೆಳಗೆ ಬಿದ್ದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ರಾಜಸ್ಥಾನದ ಜೈಪುರ್-ಅಜ್ಮಿರ್ ರಾಷ್ಟ್ರೀಯ ಹೆದ್ದಾರಿಯ ಕಿಶನ್‍ಗಂಜ್ ಟೋಲ್ ಗೇಟ್‍ನಲ್ಲಿ ಶುಕ್ರವಾರ ಘಟನೆ ನಡೆದಿದೆ. ಬಿಯರ್ ಬಾಟಲ್‍ಗಳು ಬಿದ್ದ ಪರಿಣಾಮ ವ್ಯಕ್ತಿಯೊಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಈ ಎಲ್ಲ ದೃಶ್ಯ ಸ್ಥಳದಲ್ಲಿಯೇ ಇದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ವಿಡಿಯೋದಲ್ಲಿ ಏನಿದೆ?
    ವೇಗವಾಗಿ ಬಂದ ಟ್ರಕ್ ಕಿಶನ್‍ಗಂಜ್ ಟೋಲ್ ಗೇಟ್ ಕೌಂಟರ್ ಸಮೀಪದ ರೋಡ್ ಡಿವೈಡರ್ ಗೆ ಡಿಕ್ಕಿ ಹೊಡೆದಿದ್ದು, ರಭಸಕ್ಕೆ ಟ್ರಕ್‍ನಲ್ಲಿದ್ದ ಬಿಯರ್ ಬಾಟಲ್‍ಗಳು ಮುಂದೆ ಇದ್ದ ಕೌಂಟರ್, ಕಾರು ಸೇರಿದಂತೆ ಕೆಲ ವಾಹಗಳ ಮೇಲೆ ಬಿದ್ದಿವೆ. ಬಾಟಲ್‍ಗಳು ಗೋಡೆ ಹಾಗೂ ವಾಹಗಳಿಗೆ ತಾಕಿ ಒಡೆದಿದ್ದು, ಬಿಯರ್ ಹೊಳೆಯೇ ಹರಿದಿದೆ. ಟ್ರಕ್ ಮುಂದಿದ್ದ ಕಾರು ಹಾಗೂ ಜೀಪ್‍ಗಳ ಗಾಜು ಒಡೆದಿವೆ. ಕಾರಿನಲ್ಲಿದ್ದ ಅದರಲ್ಲಿದ್ದ ಚಾಲಕನಿಗೆ ಗಾಜಿನ ಚೂರುಗಳು ಚುಚ್ಚಿ ಗಂಭೀರವಾಗಿ ಗಾಯಗೊಂಡಿದ್ದಾನೆ.

    ವೇಗವಾಗಿ ರೋಡ್ ಡಿವೈಡರ್ ಗೆ ಡಿಕ್ಕಿ ಹೊಡೆದಿದ್ದ ಟ್ರಕ್ ಕೂಡಾ ಜಖಂಗೊಂಡಿದ್ದು, ರಸ್ತೆ ಹಾಗೂ ಟೋಲ್ ಗೇಟ್ ಹಣ ಪಡೆಯುವ ಕೌಂಟರ್ ನಲ್ಲಿ ಬೀಯಲ್ ಹೊಳೆ ಹರೆದಿದೆ. ಮಾಹಿತಿ ಪಡೆಯುತ್ತಿದ್ದಂತೆ ಸ್ಥಳಕ್ಕೆ ಬಂದ ಪೊಲೀಸರು, ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ ಎಂದು ವರದಿಯಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv 

  • ಟೋಲ್‍ನಲ್ಲಿ ನ್ಯಾಯಾಧೀಶರು ಹಾಗೂ ಗಣ್ಯರಿಗೆ ಪ್ರತ್ಯೇಕವಾದ ಲೇನ್ ನಿರ್ಮಿಸಿ: ಮದ್ರಾಸ್ ಹೈಕೋರ್ಟ್

    ಟೋಲ್‍ನಲ್ಲಿ ನ್ಯಾಯಾಧೀಶರು ಹಾಗೂ ಗಣ್ಯರಿಗೆ ಪ್ರತ್ಯೇಕವಾದ ಲೇನ್ ನಿರ್ಮಿಸಿ: ಮದ್ರಾಸ್ ಹೈಕೋರ್ಟ್

    ಚೆನ್ನೈ: ನ್ಯಾಯಾಧೀಶರು ಸೇರಿದಂತೆ ಗಣ್ಯರು ಹಾಗೂ ಅತೀ ಗಣ್ಯರಿಗೆ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಪ್ರತ್ಯೇಕ ಟೋಲ್ ಬೂತ್‍ಗಳನ್ನು ನಿರ್ಮಿಸುವಂತೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಮದ್ರಾಸ್ ಹೈಕೋರ್ಟ್ ಆದೇಶ ನೀಡಿದ್ದು, ಸಾಕಷ್ಟು ಚರ್ಚೆಗೆ ಕಾರಣವಾಗಿದೆ.

    ಟೋಲ್ ಬಳಿ ನ್ಯಾಯಾಧೀಶರು ಹಾಗೂ ಗಣ್ಯ ವ್ಯಕ್ತಿಗಳು ಗಂಟೆಗಟ್ಟಲೇ ಕಾಯುವುದಲ್ಲದೇ, ತಮ್ಮ ದಾಖಲೆಗಳನ್ನು ತೋರಿಸುವುದರಿಂದ ಮುಜುಗರಕ್ಕಿಡಾಗುತ್ತದೆ. ಆದ್ದರಿಂದ ಎಲ್ಲಾ ನ್ಯಾಯಾಧೀಶರು ಹಾಗೂ ಗಣ್ಯ ವ್ಯಕ್ತಿಗಳಿಗಾಗಿಯೇ ಪ್ರತ್ಯೇಕವಾದ ಟೋಲ್ ಪ್ಲಾಜಾಗಳನ್ನು ನಿರ್ಮಿಸುವಂತೆ ಮದ್ರಾಸ್ ಹೈಕೋರ್ಟಿನ ನ್ಯಾಯಾಧೀಶರಾದ ಹುಲುವಾಡಿ ಜಿ ರಮೇಶ್ ಮತ್ತು ಎಂ.ವಿ.ಮುರಳೀಧರ ಅವರ ದ್ವಿಸದಸ್ಯ ಪೀಠ ಆದೇಶಿಸಿದೆ.

    ಈ ಸಂಬಂಧ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಈ ಸಮಸ್ಯೆಯನ್ನು ಶೀಘ್ರವೇ ಬಗೆಹರಿಸಬೇಕು. ಇಲ್ಲವಾದಲ್ಲಿ ಪ್ರಾಧಿಕಾರಕ್ಕೆ ನೋಟಿಸ್ ನೀಡುವುದಾಗಿಯೂ ಪೀಠ ತಿಳಿಸಿದೆ.

    ಈ ಆದೇಶವನ್ನು ದೇಶಾದ್ಯಂತ ಜಾರಿಗೊಳಿಸುವಂತೆ ಕೇಂದ್ರ ಸರ್ಕಾರ ಹಾಗೂ ರಾಷ್ಟ್ರೀಯ ಪ್ರಾಧಿಕಾರಕ್ಕೆ ಮದ್ರಾಸ್ ಹೈಕೋರ್ಟ್ ಸುತ್ತೋಲೆ ಹೊರಡಿಸಿದೆ.

    ಮದ್ರಾಸ್ ಹೈಕೋರ್ಟ್ ಆದೇಶವು ದೇಶಾದ್ಯಂತ ಚರ್ಚೆಗೆ ಕಾರಣವಾಗಿದ್ದು, ಈ ಸಂಬಂಧ ಕೇಂದ್ರ ಸರ್ಕಾರ ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಯಾವ ರೀತಿ ನಿರ್ಣಯವನ್ನು ತೆಗೆದುಕೊಳ್ಳುತ್ತದೆ ಎನ್ನುವುದು ಸದ್ಯದ ಕುತೂಹಲವಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

     

     

  • ಟೋಲ್ ಕೇಳಿದ್ದಕ್ಕೆ ಗೇಟ್ ಮುರಿದ ಶಾಸಕ: ದರ್ಪದ ವಿಡಿಯೋ ನೋಡಿ

    ಟೋಲ್ ಕೇಳಿದ್ದಕ್ಕೆ ಗೇಟ್ ಮುರಿದ ಶಾಸಕ: ದರ್ಪದ ವಿಡಿಯೋ ನೋಡಿ

    ತಿರುವನಂತಪುರಂ: ಟೋಲ್ ಶುಲ್ಕ ಕಟ್ಟಿ ಎಂದು ಹೇಳಿದ್ದಕ್ಕೆ ಕೇರಳದ ಶಾಸಕರೊಬ್ಬರು ಪ್ಲಾಜಾದಲ್ಲೇ ಗುಂಡಾವರ್ತನೆ ತೋರಿದ್ದು ವಿಡಿಯೋ ವೈರಲ್ ಆಗಿದೆ.

    ಕೇರಳದ ಪಕ್ಷೇತರ ಶಾಸಕ ಪಿ.ಸಿ.ಜಾರ್ಜ್ ಮತ್ತು ಸಹಚಚರು ತ್ರಿಶ್ಯೂರ್ ನಲ್ಲಿರುವ ಟೋಲ್ ಪ್ಲಾಜಾದ ಶುಲ್ಕ ನೀಡಲು ನಿರಾರಿಸಿ, ಸಿಬ್ಬಂದಿಯ ಮಾತನ್ನು ಕೇಳದೇ ಸ್ವಯಂ ಚಾಲಿತ ಗೇಟ್ ಮುರಿದು ದರ್ಪ ಮೆರೆದಿದ್ದಾರೆ.

    ವಿಡಿಯೋದಲ್ಲಿ ಏನಿದೆ?
    ಟೋಲ್ ಪ್ಲಾಜಾ ಸಿಬ್ಬಂದಿ ಪ್ರತಿ ವಾಹನ ತಡೆದು ಶುಲ್ಕ ಪಡೆಯುವಂತೆ ಮಂಗಳವಾರ ರಾತ್ರಿ ಕಾರನ್ನು ತಡೆದಿದ್ದಾರೆ. ಕಾರನ್ನು ನಿಲ್ಲಿಸಿದ್ದಕ್ಕೆ ಇಳಿದು ಬಂದ ಶಾಸಕ ಪಿ.ಸಿ.ಜಾರ್ಜ್ ತಡೆ ಹಾಕುವ ಸ್ವಯಂ ಚಾಲಿತ ಗೇಟ್ ಮುರಿದು ಹಣ ಕೇಳಿದ ಟೋಲ್ ಗೇಟ್ ಸಿಬ್ಬಂದಿಯನ್ನು ಹೆದರಿಸಿದ್ದಾರೆ. ಅಷ್ಟೇ ಅಲ್ಲದೇ ಅರ್ಧ ಸ್ವಯಂ ಚಾಲಿತ ಗೇಟನ್ನು ಮುರಿದಿದ್ದಾರೆ.

    ಅರ್ಧ ತುಂಡಾಗಿದ್ದರಿಂದ ಕಾರು ಮುಂದಕ್ಕೆ ಹೋಗಲು ಅಡ್ಡಿಯಾಗುತಿತ್ತು. ಈ ವೇಳೆ ಸಹಚರರು ಸ್ವಯಂ ಚಾಲಿತ ಗೇಟ್ ಮೇಲೆತ್ತಲು ಹೇಳಿದ್ದರು. ಇದಕ್ಕೆ ಒಪ್ಪದ ಸಿಬ್ಬಂದಿಗೆ ಶಾಸಕರ ಸಹಚರರು ಬೆದರಿಕೆ ಹಾಕಿ, ಗೇಟ್ ಅನ್ನು ಸಂಪೂರ್ಣವಾಗಿ ಮುರಿದಿದ್ದಾರೆ. ಕೊನೆಗೂ ಹಣ ನೀಡದೇ ಶಾಸಕ ಹಾಗೂ ಆತನ ಸಹಚರರು ಕಾರನ್ನು ಚಾಲನೆ ಮಾಡಿಕೊಂಡು ಹೋಗಿದ್ದಾರೆ.