Tag: Toll Pass

  • ವರ್ಷಕ್ಕೆ 5 ಸಾವಿರ ಉಳಿತಾಯ – ವಾರ್ಷಿಕ ಟೋಲ್‌ ಪಾಸ್‌ | ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ

    ವರ್ಷಕ್ಕೆ 5 ಸಾವಿರ ಉಳಿತಾಯ – ವಾರ್ಷಿಕ ಟೋಲ್‌ ಪಾಸ್‌ | ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ

    ಖಾಸಗಿ ಕಾರು, ಜೀಪ್‌, ವ್ಯಾನ್‌ ಹೊಂದ್ದಿದ್ದೀರಾ? ಹಾಗಾದ್ರೆ ನಿಮಗೆ ಸಿಹಿಸುದ್ದಿ. 3 ಸಾವಿರ ರೂ. ವಾರ್ಷಿಕ ಟೋಲ್‌ ಪಾಸ್‌ (Annual Toll Pass) ಬಿಡುಗಡೆಯಾಗಿದೆ. ಈ ಪಾಸ್‌ ಬಿಡುಗಡೆಯಾದ ಬೆನ್ನಲ್ಲೇ ಹಲವು ಪ್ರಶ್ನೆಗಳು ನಿಮಗೆ ಬರಬಹುದು. ಹೀಗಾಗಿ ನೀವು ಕೇಳಬಹುದಾದ ಎಲ್ಲಾ ಪ್ರಶ್ನೆ, ಅನುಮಾನಗಳಿಗೆ ಇಲ್ಲಿ ಉತ್ತರ ನೀಡಲಾಗಿದೆ.

    ಫಾಸ್ಟ್‌ಟ್ಯಾಗ್ ವಾರ್ಷಿಕ ಪಾಸ್ ಎಂದರೇನು?
    ಕಾರುಗಳು, ಜೀಪ್‌ಗಳು ಮತ್ತು ವ್ಯಾನ್‌ಗಳಂತಹ ವಾಣಿಜ್ಯೇತರ ಖಾಸಗಿ ವಾಹನಗಳಿಗೆ ಮಾತ್ರ ಈ ಪ್ರಿಪೇಯ್ಡ್ ಪಾಸ್ ಅನ್ವಯವಾಗುತ್ತದೆ. ಈಗ ಟೋಲ್‌ ಪಾವತಿಗಳಿಗಾಗಿ ಫಾಸ್ಟ್‌ಟ್ಯಾಗ್ ಕಾರ್ಡ್‌ಗಳಲ್ಲಿರುವ ಹಣ ಖಾಲಿಯಾದರೆ ಪದೇ ಪದೇ ರೀಚಾರ್ಜ್ ಮಾಡಬೇಕಾಗುತ್ತದೆ. ಆದರೆ ಈ ಪಾಸ್‌ ತಗೆದುಕೊಂಡರೆ ಪದೇ ಪದೇ ರಿಚಾರ್ಜ್‌ ಮಾಡುವ ಅಗತ್ಯವಿಲ್ಲ. ರಾಷ್ಟ್ರೀಯ ಹೆದ್ದಾರಿಗಳಲ್ಲಿ ಸುಗಮ ಪ್ರಯಾಣವನ್ನು ಅನುಮತಿಸುತ್ತದೆ.

    ವಾರ್ಷಿಕ ಪಾಸ್ ಎಲ್ಲಿ ಬಳಸಬಹುದು?
    ಇದು ರಾಷ್ಟ್ರೀಯ ಹೆದ್ದಾರಿ (NH) ಮತ್ತು ರಾಷ್ಟ್ರೀಯ ಎಕ್ಸ್‌ಪ್ರೆಸ್‌ವೇ (NE) ಟೋಲ್‌ ಪ್ಲಾಜಾಗಳಲ್ಲಿ ಮಾತ್ರ ಮಾನ್ಯವಾಗಿರುತ್ತದೆ. ರಾಜ್ಯ ಸರ್ಕಾರದ ನಿರ್ಮಿಸಿದ ಎಕ್ಸ್‌ಪ್ರೆಸ್‌ವೇ ಅಥವಾ ಖಾಸಗಿಯಾಗಿ ನಿರ್ಮಿಸಿದ ರಸ್ತೆಯಲ್ಲಿ(ಉದಾಹರಣೆ ಬೆಂಗಳೂರಿನ ನೈಸ್‌ ರಸ್ತೆ) ವಾರ್ಷಿಕ ಫಾಸ್ಟ್‌ಟ್ಯಾಗ್ ಪಾಸ್‌ನೊಂದಿಗೆ ಉಚಿತ ಪ್ರವೇಶವನ್ನು ಪಡೆಯಲು ಸಾಧ್ಯವಿಲ್ಲ.

    ಎಲ್ಲಿ ಖರೀದಿಸಬಹುದು?
    ವಾರ್ಷಿಕ ಪಾಸ್ ಅನ್ನು ಸಕ್ರಿಯಗೊಳಿಸಲು ಮೀಸಲಾದ ಲಿಂಕ್ ರಾಜಮಾರ್ಗ್ ಯಾತ್ರಾ ಅಪ್ಲಿಕೇಶನ್‌ ಅಥವಾ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ವೆಬ್‌ಸೈಟ್‌ಗಳಲ್ಲಿಯೂ ಲಭ್ಯವಿದೆ.

    ಪಾಸ್ ಹೇಗೆ ಸಕ್ರಿಯವಾಗುತ್ತದೆ?
    ಪಾಸ್ ಅನ್ನು ಸಕ್ರಿಯಗೊಳಿಸಲು ವಾಹನ ಮತ್ತು FASTag ಅನ್ನು ಪರಿಶೀಲಿಸಲಾಗುತ್ತದೆ. ಎಲ್ಲಾ ದಾಖಲೆಗಳು ಸರಿಯಾಗಿದ್ದರೆ 3,000 ರೂ. ಪಾವತಿಸಬಹುದು. ಪಾವತಿಯ ನಂತರ ಎರಡು ಗಂಟೆಗಳಲ್ಲಿ ಪಾಸ್‌ ಸಕ್ರಿಯವಾಗುತ್ತದೆ. ಒಂದು ವೇಳೆ ಫಾಸ್ಟ್‌ಟ್ಯಾಗ್‌ ಬ್ಲ್ಯಾಕ್‌ ಲಿಸ್ಟ್‌ಗೆ ಸೇರ್ಪಡೆಯಾಗಿದ್ದರೆ ವಾರ್ಷಿಕ ಪಾಸ್‌ ಸಿಗುವುದಿಲ್ಲ

    ಅಸ್ತಿತ್ವದಲ್ಲಿರುವ ಬಳಕೆದಾರರು ಹೊಸ FASTag ಅನ್ನು ಖರೀದಿಸಬೇಕೇ?
    ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದ ಪ್ರಕಾರ, ಈಗಾಗಲೇ ತಮ್ಮ ವಾಹನಗಳಲ್ಲಿ FASTag ಹೊಂದಿರುವವರು ಹೊಸ FASTag ಅನ್ನು ಖರೀದಿಸುವ ಅಗತ್ಯವಿಲ್ಲ. ಈ ಪಾಸ್ ಅನ್ನು ನಿಮ್ಮ ಅಸ್ತಿತ್ವದಲ್ಲಿರುವ ಒಂದರಲ್ಲಿ ಸಕ್ರಿಯಗೊಳಿಸಲಾಗುತ್ತದೆ. ಹೀಗಿದ್ದರೂ ವಾರ್ಷಿಕ ಪಾಸ್ ಪಡೆಯಲು FASTag ನ KYC ಅತ್ಯಗತ್ಯ.

    ಎಷ್ಟು ಟ್ರಿಪ್‌ಗಳನ್ನು ಮಾಡಬಹುದು?
    FASTag ವಾರ್ಷಿಕ ಪಾಸ್ ಒಂದು ವರ್ಷದವರೆಗೆ ಮಾನ್ಯವಾಗಿರುತ್ತದೆ ಅಥವಾ 200 ಟ್ರಿಪ್‌ಗಳನ್ನು ಅನುಮತಿಸುತ್ತದೆ. ಒಂದು ವರ್ಷ ಅಥವಾ 200 ಟ್ರಿಪ್‌ಗಳನ್ನು ಪೂರ್ಣಗೊಳಿಸಿದ ನಂತರ ಅದು ಹಿಂದಿನಂತೆ ಕಾರ್ಯನಿರ್ವಹಿಸಲು ಪ್ರಾರಂಭಿಸುತ್ತದೆ.  ಇದನ್ನೂ ಓದಿ: ಸತತ 12ನೇ ಧ್ವಜಾರೋಹಣ, 103 ನಿಮಿಷ ಸುದೀರ್ಘ ಭಾಷಣ ಇಂದಿರಾ ಗಾಂಧಿ ದಾಖಲೆ ಮುರಿದ ಮೋದಿ

    ಹೇಗೆ ಲೆಕ್ಕ ಹಾಕಲಾಗುತ್ತದೆ?
    ಒಂದು ಟೋಲ್‌ ದಾಟಿದರೆ ಒಂದು ಟ್ರಿಪ್‌ ಎಂದು ಎಣಿಕೆ ಮಾಡಲಾಗುತ್ತದೆ. ಮತ್ತೊಮ್ಮೆ ಅದೇ ಟೋಲ್‌ ಬಳಸಿ ಮರಳಿದರೆ ಎರಡು ಟ್ರಿಪ್‌ ಎಂದು ಪರಿಗಣಿಸಲಾಗುತ್ತದೆ.

    ಯಾವ ವಾಹನಗಳಿಗೆ ಸಿಗುತ್ತೆ?
    VAHAN ಡೇಟಾಬೇಸ್ ಮೂಲಕ ಪರಿಶೀಲಿಸಿದ ಬಳಿಕ ಖಾಸಗಿ ವಾಣಿಜ್ಯೇತರ ಕಾರು/ಜೀಪ್/ವ್ಯಾನ್‌ಗಳಿಗೆ ಮಾತ್ರ ವಾರ್ಷಿಕ ಪಾಸ್ ಅನ್ವಯಿಸುತ್ತದೆ. ಯಾವುದೇ ವಾಣಿಜ್ಯ ವಾಹನದಲ್ಲಿ ಬಳಸಿದರೆ ಸೂಚನೆ ಇಲ್ಲದೆ ತಕ್ಷಣ ನಿಷ್ಕ್ರಿಯಗೊಳಿಸಲಾಗುತ್ತದೆ.

    ಪಾಸ್‌ಗೆ ಯಾರು ಅರ್ಹರಲ್ಲ?
    ಚಾಸಿಸ್ ಸಂಖ್ಯೆಯನ್ನು ಬಳಸಿಕೊಂಡು FASTag ನೋಂದಾಯಿಸಿದ್ದರೆ ನಿಮಗೆ ಪಾಸ್‌ ಸಿಗುವುದಿಲ್ಲ. ಇದಕ್ಕಾಗಿ ನೀವು ವಾಹನ ನೋಂದಣಿ ಸಂಖ್ಯೆಯನ್ನು (VRN) ನವೀಕರಿಸಬೇಕಾಗುತ್ತದೆ. ಅಲ್ಲದೇ ಮೊಬೈಲ್ ಸಂಖ್ಯೆಯನ್ನು ನವೀಕರಿಸಬೇಕು.

    ಪ್ರಯೋಜನಗಳೇನು?
    ಟೋಲ್ ತೆರಿಗೆಯಲ್ಲಿ ಒಬ್ಬರು 5,000 ರಿಂದ 7,000 ರೂ.ಗಳನ್ನು ಉಳಿಸಬಹುದು. ಇದಲ್ಲದೆ ಪ್ರಯಾಣದ ಮಧ್ಯದಲ್ಲಿ ರೀಚಾರ್ಜ್ ಖಾಲಿಯಾಗುವ ಚಿಂತೆ ಇರುವುದಿಲ್ಲ.

    ಮತ್ತೊಂದು ವಾಹನಕ್ಕೆ ವರ್ಗಾಯಿಸಬಹುದೇ?
    ಇಲ್ಲ. ಹಾಗೆ ಮಾಡಿದ್ದರೆ ನಿಮ್ಮ ಪಾಸ್ ಅನ್ನು ಕಪ್ಪುಪಟ್ಟಿಗೆ ಸೇರಿಸಲಾಗುತ್ತದೆ.

    ವಾರ್ಷಿಕ ಪಾಸ್‌ಗೆ ಸಂಬಂಧಿಸಿದಂತೆ ಎಸ್‌ಎಂಎಸ್‌ ಬರುತ್ತಾ?
    ಪಾಸ್ ಸಕ್ರಿಯಗೊಳಿಸಿದ ಕೂಡಲೇ ನೊಂದಾಯಿಸಿದ ಮೊಬೈಲ್‌ ಸಂಖ್ಯೆಗೆ ಸಂದೇಶ ಬರುತ್ತದೆ.

    ವಾರ್ಷಿಕ ಪಾಸ್ ಕಡ್ಡಾಯವೇ?
    ವಾರ್ಷಿಕ ಪಾಸ್ ಕಡ್ಡಾಯವಿಲ್ಲ. ಒಂದು ವೇಳೆ ವಾರ್ಷಿಕ ಪಾಸ್‌ ಪಡೆಯದವರು ಈಗ ಇರುವಂತೆ ಫಾಸ್ಟ್‌ಟ್ಯಾಗ್‌ ಬಳಸಿ ಟೋಲ್‌ ದಾಟಬಹುದು.

  • ಜನರಿಗೆ ಗುಡ್ ನ್ಯೂಸ್ – 3 ಸಾವಿರಕ್ಕೆ ವಾರ್ಷಿಕ ಟೋಲ್‌ ಪಾಸ್‌!

    ಜನರಿಗೆ ಗುಡ್ ನ್ಯೂಸ್ – 3 ಸಾವಿರಕ್ಕೆ ವಾರ್ಷಿಕ ಟೋಲ್‌ ಪಾಸ್‌!

    – ಟೋಲ್ ಕಿರಿಕ್‌ಗೆ ಬ್ರೇಕ್ ಹಾಕಲು ಜಾರಿ
    – ಆಗಸ್ಟ್ 15 ರಿಂದ ಜಾರಿ ಎಂದ ಗಡ್ಕರಿ

    ನವದೆಹಲಿ: ಟೋಲ್ (Toll) ಕಿರಿ ಕಿರಿಗೆ ಬ್ರೇಕ್ ಹಾಕಲು ಫಾಸ್ಟ್ ಟ್ಯಾಗ್ (FASTag) ಆಧಾರಿತ ಪಾಸ್‌ ಅನ್ನು ಜಾರಿ ಮಾಡಲು ಕೇಂದ್ರ ಸರ್ಕಾರ ಮುಂದಾಗಿದೆ.

    3 ಸಾವಿರ ರೂಪಾಯಿಗೆ ವಾರ್ಷಿಕ ಟೋಲ್‌ ಪಾಸ್‌ (Toll Pass) ನೀಡಲು ಸರ್ಕಾರ ಮುಂದಾಗಿದ್ದು, ಆಗಸ್ಟ್ 15 ರಿಂದ ಜಾರಿಗೆ ಬರಲಿದೆ ಎಂದು ಕೇಂದ್ರ ಹೆದ್ದಾರಿ ಖಾತೆಯ ಸಚಿವ ನಿತಿನ್‌ ಗಡ್ಕರಿ (Nitin Gadkari) ಘೋಷಿಸಿದ್ದಾರೆ.

    ನಿತಿನ್‌ ಗಡ್ಕರಿ ಅವರು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಈ ಫಾಸ್ಟ್‌ ಟ್ಯಾಗ್‌ ಆಧರಿತ ವಾರ್ಷಿಕ ಪಾಸ್‌ ಬಗ್ಗೆ ವಿವರವನ್ನು ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ಬಿಗ್‌ಬಾಸ್ ಖ್ಯಾತಿಯ ಗೋಲ್ಡ್ ಸುರೇಶ್ ವಿರುದ್ಧ ಲಕ್ಷ ಲಕ್ಷ ಹಣ ವಂಚನೆ ಆರೋಪ

    ಗಡ್ಕರಿ ಹೇಳಿದ್ದೇನು?
    ನಾವು 3 ಸಾವಿರ ರೂ.ಗೆ ಫಾಸ್ಟ್‌ಟ್ಯಾಗ್ ಆಧಾರಿತ ವಾರ್ಷಿಕ ಪಾಸ್ ಅನ್ನು ಪರಿಚಯಿಸುತ್ತಿದ್ದು ಆಗಸ್ಟ್ 15, 2025 ರಿಂದ ಜಾರಿಗೆ ಬರುತ್ತದೆ. ಸಕ್ರಿಯಗೊಳಿಸಿದ ದಿನಾಂಕದಿಂದ ಒಂದು ವರ್ಷ ಅಥವಾ 200 ಟ್ರಿಪ್‌ಗಳವರೆಗೆ ಮಾನ್ಯವಾಗಿರುತ್ತದೆ. ಇದನ್ನೂ ಓದಿ: ಇರಾನಿನ ಪರಮಾಣು ಘಟಕದ ಮೇಲೆ ಅಮೆರಿಕ 14 ಸಾವಿರ ಕೆಜಿ ತೂಕದ ಬಾಂಬ್‌ ಹಾಕುತ್ತಾ?

    ಈ ಪಾಸ್ ಅನ್ನು ಕಾರುಗಳು, ಜೀಪ್‌ಗಳು ಮತ್ತು ವ್ಯಾನ್‌ಗಳಂತಹ ವಾಣಿಜ್ಯೇತರ ಖಾಸಗಿ ವಾಹನಗಳಿಗೆ ಪ್ರತ್ಯೇಕವಾಗಿ ವಿನ್ಯಾಸಗೊಳಿಸಲಾಗಿದೆ. ನವೀಕರಣಕ್ಕಾಗಿ ಮೀಸಲಾದ ಲಿಂಕ್ ಅನ್ನು ಶೀಘ್ರದಲ್ಲೇ ರಾಜ್‌ಮಾರ್ಗ್ ಯಾತ್ರಾ ಅಪ್ಲಿಕೇಶನ್‌ನಲ್ಲಿ ಹಾಗೂ NHAI ಮತ್ತು MoRTH ನ ಅಧಿಕೃತ ವೆಬ್‌ಸೈಟ್‌ಗಳಲ್ಲಿ ಲಭ್ಯವಾಗುವಂತೆ ಮಾಡಲಾಗುತ್ತದೆ.

    ಈ ಪಾಸ್‌ನಿಂದ 60 ಕಿ.ಮೀ ವ್ಯಾಪ್ತಿಯೊಳಗೆ ಇರುವ ಟೋಲ್ ಪ್ಲಾಜಾಗಳಿಗೆ ಸಂಬಂಧಿಸಿದ ದೀರ್ಘಕಾಲದ ಸಮಸ್ಯೆಗಳು ಪರಿಹಾರವಾಗಲಿದೆ. ಟೋಲ್‌ಗಳಲ್ಲಿ ಕಾಯುವ ಸಮಯ ಮತ್ತು ದಟ್ಟಣೆ ಕಡಿಮೆ ಯಾಗಲಿದೆ.

    ಟೋಲ್ ಪ್ಲಾಜಾಗಳಲ್ಲಿ ವಿವಾದಗಳು ಕಡಿಮೆಯಾಗಲಿದ್ದು ಲಕ್ಷಾಂತರ ಖಾಸಗಿ ವಾಹನ ಮಾಲೀಕರಿಗೆ ಸುಗಮ ಪ್ರಯಾಣದ ಅನುಭವವನ್ನು ವಾರ್ಷಿಕ ಪಾಸ್ ನೀಡಲಿದೆ.

  • ಹೆದ್ದಾರಿಗಳ ಟೋಲ್‌ನಲ್ಲಿ ಖಾಸಗಿ ವಾಹನಗಳಿಗೆ ಮಾಸಿಕ, ವಾರ್ಷಿಕ ಟೋಲ್ ಪಾಸ್‌: ಗಡ್ಕರಿ

    ಹೆದ್ದಾರಿಗಳ ಟೋಲ್‌ನಲ್ಲಿ ಖಾಸಗಿ ವಾಹನಗಳಿಗೆ ಮಾಸಿಕ, ವಾರ್ಷಿಕ ಟೋಲ್ ಪಾಸ್‌: ಗಡ್ಕರಿ

    ನವದೆಹಲಿ: ರಾಷ್ಟ್ರೀಯ ಹೆದ್ದಾರಿಗಳಲ್ಲಿ ಖಾಸಗಿ ವಾಹನಗಳಿಗೆ ಟೋಲ್ ಸಂಗ್ರಹದ ಬದಲು ಮಾಸಿಕ ಮತ್ತು ವಾರ್ಷಿಕ ಪಾಸ್‌ಗಳನ್ನು ನೀಡುವ ಬಗ್ಗೆ ಸರ್ಕಾರ ಚಿಂತನೆ ನಡೆಸುತ್ತಿದೆ ಎಂದು ಕೇಂದ್ರ ಸಚಿವ ನಿತಿನ್‌ ಗಡ್ಕರಿ (Nitin Gadkari) ತಿಳಿಸಿದ್ದಾರೆ.

    ಕಾರ್ಯಕ್ರಮವೊಂದರಲ್ಲಿ ಮಾತನಾಡಿ ಅವರು, ಖಾಸಗಿ ವಾಹನಗಳು ಒಟ್ಟು ಟೋಲ್ ಸಂಗ್ರಹದಲ್ಲಿ ಕೇವಲ ಶೇ. 26 ರಷ್ಟಿವೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಮುಂಬೈನಲ್ಲಿ ಇಸ್ಕಾನ್‌ ದೇವಾಲಯ ಉದ್ಘಾಟಿಸಿದ ಪ್ರಧಾನಿ ಮೋದಿ

    ಗ್ರಾಮಸ್ಥರ ಸಂಚಾರಕ್ಕೆ ತೊಂದರೆಯಾಗದಂತೆ ಹಳ್ಳಿಗಳ ಹೊರಗೆ ಟೋಲ್ ಸಂಗ್ರಹಣಾ ಕೇಂದ್ರವನ್ನು ಸ್ಥಾಪಿಸಲಾಗುವುದು ಎಂದು ಮಾಹಿತಿ ನೀಡಿದ್ದಾರೆ.

    ಟೋಲ್ ಆದಾಯದ ಶೇ.74 ರಷ್ಟು ವಾಣಿಜ್ಯ ವಾಹನಗಳಿಂದ ಬರುತ್ತದೆ. ಖಾಸಗಿ ವಾಹನಗಳಿಗೆ ಮಾಸಿಕ ಅಥವಾ ವಾರ್ಷಿಕ ಪಾಸ್‌ಗಳನ್ನು ಪರಿಚಯಿಸುವ ಬಗ್ಗೆ ನಾವು ಪರಿಗಣಿಸುತ್ತಿದ್ದೇವೆ ಎಂದು ಸಚಿವರು ತಿಳಿಸಿದ್ದಾರೆ. ಇದನ್ನೂ ಓದಿ: ಮಹಾ ಕುಂಭಮೇಳದಲ್ಲಿ ಆರೂವರೆ ಕೋಟಿ ಭಕ್ತರ ಪುಣ್ಯಸ್ನಾನ

    ಒಟ್ಟು ಟೋಲ್ ಸಂಗ್ರಹದಲ್ಲಿ ಖಾಸಗಿ ವಾಹನಗಳು ಕೇವಲ ಶೇ.26 ರಷ್ಟಿದ್ದು, ಸರ್ಕಾರಕ್ಕೆ ಯಾವುದೇ ನಷ್ಟವಾಗುವುದಿಲ್ಲ. ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು ಆರಂಭದಲ್ಲಿ ರಾಷ್ಟ್ರೀಯ ಹೆದ್ದಾರಿಗಳಲ್ಲಿ ತಡೆರಹಿತ ಜಾಗತಿಕ ಸಂಚರಣೆ ಉಪಗ್ರಹ ವ್ಯವಸ್ಥೆ (GNSS) ಆಧಾರಿತ ಟೋಲ್ ಸಂಗ್ರಹ ವ್ಯವಸ್ಥೆಯನ್ನು FASTag ಜೊತೆಗೆ ಹೆಚ್ಚುವರಿ ಸೌಲಭ್ಯವಾಗಿ ಜಾರಿಗೆ ತರಲು ನಿರ್ಧರಿಸಿದೆ ಎಂದಿದ್ದಾರೆ.

    ಜಾಗತಿಕ ಸಂಚರಣೆ ಉಪಗ್ರಹ ವ್ಯವಸ್ಥೆ (GNSS) ಆಧಾರಿತ ಟೋಲ್ ಸಂಗ್ರಹ ವ್ಯವಸ್ಥೆಯು ಪ್ರಸ್ತುತ ಟೋಲ್ ಸಂಗ್ರಹ ವ್ಯವಸ್ಥೆಗಿಂತ ಉತ್ತಮವಾಗಿರುತ್ತದೆ. ಕಳೆದ ವರ್ಷ ಜುಲೈನಲ್ಲಿ, ಕರ್ನಾಟಕದ NH-275 ರ ಬೆಂಗಳೂರು-ಮೈಸೂರು ವಿಭಾಗ ಮತ್ತು ಹರಿಯಾಣದ NH-709 ರ ಪಾಣಿಪತ್-ಹಿಸಾರ್ ವಿಭಾಗದಲ್ಲಿ GNSS ಆಧಾರಿತ ಬಳಕೆದಾರ ಶುಲ್ಕ ಸಂಗ್ರಹ ವ್ಯವಸ್ಥೆಗೆ ಸಂಬಂಧಿಸಿದಂತೆ ಪ್ರಾಯೋಗಿಕ ಅಧ್ಯಯನವನ್ನು ಮಾಡಲಾಗಿದೆ ಎಂದು ತಿಳಿಸಿದ್ದಾರೆ.