Tag: Toll Booth

  • Mumbai | ಲಘು ಮೋಟರ್ ವಾಹನಗಳಿಗೆ ಟೋಲ್ ಫ್ರೀ ಪ್ರವೇಶ: ಸಿಎಂ ಶಿಂಧೆ

    Mumbai | ಲಘು ಮೋಟರ್ ವಾಹನಗಳಿಗೆ ಟೋಲ್ ಫ್ರೀ ಪ್ರವೇಶ: ಸಿಎಂ ಶಿಂಧೆ

    – ಅ.14 ಮಧ್ಯರಾತ್ರಿಯಿಂದ ಐದು ಟೋಲ್‌ಗಳ ಮೂಲಕ ಉಚಿತ ಪ್ರವೇಶ

    ಮುಂಬೈ: ಇಂದು (ಅ.14) ಮಧ್ಯರಾತ್ರಿಯಿಂದ ಲಘು ಮೋಟಾರು ವಾಹನಗಳ ಮೂಲಕ ಮುಂಬೈಗೆ ಉಚಿತ ಟೋಲ್ ಪ್ರವೇಶವನ್ನು ಪಡೆಯಬಹುದು ಎಂದು ಮಹಾರಾಷ್ಟ್ರ (Maharashtra) ಮುಖ್ಯಮಂತ್ರಿ ಏಕನಾಥ್ ಶಿಂಧೆ (Eknath Shinde) ಘೋಷಿಸಿದರು.

    ವಿಧಾನಸಭೆ ಚುನಾವಣೆಗೂ ಮುನ್ನ ನಡೆದ ಮಹಾರಾಷ್ಟ್ರ ಸರ್ಕಾರದ ಕೊನೆಯ ಸಂಪುಟ ಸಭೆಯಲ್ಲಿ ಈ ಕುರಿತು ನಿರ್ಧರಿಸಿದ್ದು, ಸೋಮವಾರ ಸಚಿವ ಸಂಪುಟ ಸಭೆಯಲ್ಲಿ ರಾಜ್ಯ ಸರ್ಕಾರವು ನಿರ್ಧಾರ ಕೈಗೊಂಡಿದೆ. ಮುಂಬೈ ಟೋಲ್ ನಾಕಾಗಳ ಪೈಕಿ 5 ಟೋಲ್ ನಾಕಾಗಳಲ್ಲಿ ಖಾಸಗಿ ಲಘು ವಾಹನಗಳಿಂದ ಟೋಲ್ ಸಂಗ್ರಹಿಸುವುದನ್ನು ನಿಲ್ಲಿಸುತ್ತೇವೆ. ಸೋಮವಾರ ರಾತ್ರಿಯಿಂದಲೇ ಈ ನಿಯಮ ಜಾರಿಯಾಗಲಿದ್ದು, ಐದು ಟೋಲ್‌ಗಳ ನಾಕಾಗಳ ಮೂಲಕ ಲಘು ವಾಹನಗಳು ಟೋಲ್ ಮುಕ್ತವಾಗಿ ಪ್ರವೇಶಿಸಬಹುದು.ಇದನ್ನೂ ಓದಿ:5 ವರ್ಷ ಸಿಎಂ ಆಗಿರುತ್ತಾರೆ ಎಂದು ಖರ್ಗೆ ಅವರಿಂದ ಹೇಳಿಸಿ ನೋಡೋಣ: ಬಿವೈವಿ

    ಲಘು ವಾಹನಗಳ ವರ್ಗದಲ್ಲಿ ಕಾರುಗಳು (ಹ್ಯಾಚ್‌ಬ್ಯಾಕ್‌ಗಳು, ಸೆಡಾನ್‌ಗಳು ಮತ್ತು ಎಸ್‌ಯುವಿಗಳು), ಜೀಪ್‌ಗಳು, ವ್ಯಾನ್‌ಗಳು, ಆಟೋ-ರಿಕ್ಷಾಗಳು, ಟ್ಯಾಕ್ಸಿಗಳು, ಡೆಲಿವರಿ ವ್ಯಾನ್‌ಗಳು ಮತ್ತು ಸಣ್ಣ ಟ್ರಕ್‌ಗಳು ಸೇರಿವೆ. ಪ್ರತಿನಿತ್ಯ ಆರು ಲಕ್ಷಕ್ಕೂ ಹೆಚ್ಚು ವಾಹನಗಳು ಮುಂಬೈ ದಾಟುತ್ತಿದ್ದು, ಅದರಲ್ಲಿ ಶೇ.80ರಷ್ಟು ಲಘು ಮೋಟಾರು ವಾಹನಗಳಾಗಿವೆ ಎಂದು ಸರ್ಕಾರ ಹೇಳಿದೆ.

    ಐದು ಟೋಲ್ ನಾಕಾಗಳಾದ ದಹಿಸರ್, ಮುಲುಂಡ್, ವಾಶಿ, ಐರೋಲಿ ಮತ್ತು ತಿನ್ಹಾಂತ್ ನಾಕಾದಿಂದ ಟೋಲ್ ಪಾವತಿಸದೇ ಲಘು ವಾಹನಗಳು ಪ್ರವೇಶಿಸಬಹುದು. ಇನ್ನುಳಿದ ಟೋಲ್ ನಾಕಾಗಳಿಂದ 45 ರೂ.ಯನ್ನು ಪಾವತಿಸಬೇಕು.

    ಲಘು ವಾಹನಗಳ ಮೂಲಕ ದಿನನಿತ್ಯ ಮುಂಬೈ (Mumbai) ನಗರಕ್ಕೆ ಪ್ರವೇಶಿಸುವ ಜನರಿಗೆ ಇದು ಪ್ರಯೋಜನಕಾರಿ ಹಾಗೂ ಇನ್ನುಳಿದ ಟೋಲ್ ನಾಕಾಗಳಲ್ಲಿ ಟೋಲ್ ಶುಲ್ಕದಲ್ಲಿ ವಿನಾಯಿತಿಯನ್ನು ಪಡೆಯುತ್ತಾರೆ. ಇಲ್ಲಿನ ಟೋಲ್ ನಾಕಾಗಳು ಮುಂಬೈನ ರಸ್ತೆ ಮೂಲಸೌಕರ್ಯದ ಮಹತ್ವದ ಭಾಗವಾಗಿದ್ದು, ಪ್ರತಿದಿನ ಸಾವಿರಾರು ವಾಹನಗಳಿಗೆ ಸೇವೆ ಸಲ್ಲಿಸುತ್ತಿವೆ.

    ಇದಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರ ನಮನಿರ್ಮಾಣ ಸೇನೆಯ ಮುಖ್ಯಸ್ಥ ರಾಜ್ ಠಾಕ್ರೆ ತಮ್ಮ ಎಕ್ಸ್ ಖಾತೆಯಲ್ಲಿ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ನಿರ್ಧಾರದ ಕುರಿತು ಸಂತೋಷವನ್ನು ವ್ಯಕ್ತಪಡಿಸಿದ ಅವರು, ಅ.14 ಮಧ್ಯರಾತ್ರಿಯಿಂದ ಮುಂಬೈಗೆ ಪ್ರವೇಶಿಸುವ ಎಲ್ಲಾ ಐದು ಟೋಲ್ ಗೇಟ್‌ಗಳಲ್ಲಿ ಲಘು ವಾಹನಗಳು ಟೋಲ್ ಮುಕ್ತವಾಗಿರುತ್ತವೆ. ಮುಂಬೈನಲ್ಲಿ ವಾಸಿಸುವ ಎಲ್ಲಾ ನಾಗರಿಕರಿಗೆ ಅಭಿನಂದನೆಗಳನ್ನು ತಿಳಿಸಿದ್ದಾರೆ.ಇದನ್ನೂ ಓದಿ:ಗದಗ, ಧಾರವಾಡದಲ್ಲಿ ಧಾರಾಕಾರ ಮಳೆ- ರಸ್ತೆ ಸಂಪರ್ಕ ಸಂಪೂರ್ಣ ಬಂದ್

  • ಡೀಸೆಲ್ ಟ್ಯಾಂಕರ್, ಲಾರಿ ಡಿಕ್ಕಿ – ಇಬ್ಬರು ಟೋಲ್ ಸಿಬ್ಬಂದಿ ಸೇರಿ ಮೂವರಿಗೆ ಗಂಭೀರ ಗಾಯ

    ಡೀಸೆಲ್ ಟ್ಯಾಂಕರ್, ಲಾರಿ ಡಿಕ್ಕಿ – ಇಬ್ಬರು ಟೋಲ್ ಸಿಬ್ಬಂದಿ ಸೇರಿ ಮೂವರಿಗೆ ಗಂಭೀರ ಗಾಯ

    – ಡೀಸೆಲ್ ತುಂಬಿಕೊಳ್ಳಲು ಮುಗಿಬಿದ್ದ ಸ್ಥಳೀಯರು

    ತುಮಕೂರು: ಡೀಸೆಲ್ ಟ್ಯಾಂಕರ್ ಮತ್ತು ಲಾರಿ ಮುಖಾಮುಖಿ ಡಿಕ್ಕಿ ಹೊಡೆದು ಮೂವರು ಗಂಭೀರ ಗಾಯಗೊಂಡಿರುವ ಘಟನೆ ತುಮಕೂರು (Tumakuru) ಜಿಲ್ಲೆಯಲ್ಲಿ ನಡೆದಿದೆ.

    ಕುಣಿಗಲ್ (Kunigal) ತಾಲ್ಲೂಕಿನ ಹುಲಿಯೂರುದುರ್ಗ ಬಳಿಯ ರಾಜ್ಯ ಹೆದ್ದಾರಿ 33ರಲ್ಲಿರುವ ದೊಡ್ಡಮಾವತ್ತೂರು ಟೋಲ್ ಬಳಿ ಅಪಘಾತ ಸಂಭವಿಸಿದೆ. ಕುಣಿಗಲ್ ಕಡೆಯಿಂದ ಮದ್ದೂರು ಕಡೆಗೆ ತೆರಳುತ್ತಿದ್ದ ಟೈಲ್ಸ್ ತುಂಬಿದ್ದ ಲಾರಿ ಚಾಲಕನ ನಿಯಂತ್ರಣ ತಪ್ಪಿ ಮದ್ದೂರು ಕಡೆಯಿಂದ ಕುಣಿಗಲ್ ಕಡೆಗೆ ಬರುತ್ತಿದ್ದ ಡೀಸೆಲ್ ತುಂಬಿದ್ದ ಟ್ಯಾಂಕರ್‌ಗೆ ಡಿಕ್ಕಿ ಹೊಡೆದಿದೆ. ಪರಿಣಾಮ ದೊಡ್ಡಮಾವತ್ತೂರು ಟೋಲ್‌ಗೆ ಗುದ್ದಿ ಸಿಬ್ಬಂದಿ ವಿಶ್ರಾಂತಿ ಕೊಠಡಿಗೆ ಲಾರಿ ನುಗ್ಗಿದ್ದು, ಟೋಲ್ ಸಂಪೂರ್ಣ ಜಖಂ ಆಗಿದೆ. ಇದನ್ನೂ ಓದಿ: ಮುಖ್ಯಮಂತ್ರಿ ಸ್ಥಾನಕ್ಕೆ ಅರವಿಂದ್ ಕೇಜ್ರಿವಾಲ್ ರಾಜೀನಾಮೆ

    ಇಂದು (ಮಂಗಳವಾರ) ಬೆಳಗ್ಗಿನ ಜಾವ 3 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ. ಡಿಸೆಲ್ ತುಂಬಿಕೊಳ್ಳಲು ಸ್ಥಳೀಯರು ಮುಗಿಬಿದ್ದಿದ್ದು, ಬಕೆಟ್, ಬಿಂದಿಗೆಗಳಲ್ಲಿ ಡೀಸೆಲ್ ತುಂಬಿಕೊಂಡು ಹೋಗಿದ್ದಾರೆ. ಇದನ್ನೂ ಓದಿ: ಮೆಟ್ರೋ ಟ್ರ‍್ಯಾಕ್‌ಗೆ ಹಾರಿ ಆತ್ಮಹತ್ಯೆಗೆ ಯತ್ನ – ಪ್ರಾಣಾಪಾಯದಿಂದ ಯುವಕ ಪಾರು

    ಡೀಸೆಲ್ ಟ್ಯಾಂಕರ್ ಚಾಲಕ ಹಾಗೂ ಇಬ್ಬರು ಟೋಲ್ ಸಿಬ್ಬಂದಿಗೆ ಗಂಭೀರ ಗಾಯವಾಗಿದೆ. ಘಟನೆ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಅಮೃತೂರು ಪೊಲೀಸರು, ಹುಲಿಯೂರುದುರ್ಗ ಪೊಲೀಸರು, ಹಾಗೂ ಅಗ್ನಿಶಾಮಕ ದಳದ ಅಧಿಕಾರಿಗಳು ಸಿಬ್ಬಂದಿಗಳು ಧಾವಿಸಿದ್ದಾರೆ. ಇದನ್ನೂ ಓದಿ: ರಾಜ್ಯದಲ್ಲಿ ಅಪರಾಧಿಗಳ ಮೇಲುಗೈ, ರಾಜ್ಯ ಪೊಲೀಸರಿಗೆ ಸತ್ವ ಇಲ್ಲ: ಶೋಭಾ ಕರಂದ್ಲಾಜೆ

    ಡಿಸೇಲ್ ತುಂಬಿದ್ದ ಟ್ಯಾಂಕರ್ ಅನಾಹುತ ಆಗದಂತೆ ನೋಡಿಕೊಂಡಿದ್ದಾರೆ. ಮೂರು ಕ್ರೇನ್‌ಗಳ ಮೂಲಕ ವಾಹನಗಳನ್ನು ಮೇಲೆತ್ತಿದ್ದು, ವಾಹನಗಳ ಓಡಾಟಕ್ಕೆ ಪೊಲೀಸರು ಅವಕಾಶ ಮಾಡಿಕೊಟ್ಟಿದ್ದಾರೆ. ಗಾಯಾಳುಗಳು ಕುಣಿಗಲ್ ತಾಲ್ಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದನ್ನೂ ಓದಿ: ಯಾದಗಿರಿ| ಮಾಜಿ ಶಾಸಕ ವೆಂಕಟರೆಡ್ಡಿ ಮುದ್ನಾಳ ನಿಧನ

  • ಟೋಲ್ ಬೂತ್ ಸಿಬ್ಬಂದಿಗೆ ಕಪಾಳಮೋಕ್ಷ – ಎಎಪಿ ನಾಯಕನ ವಿರುದ್ಧ FIR

    ಟೋಲ್ ಬೂತ್ ಸಿಬ್ಬಂದಿಗೆ ಕಪಾಳಮೋಕ್ಷ – ಎಎಪಿ ನಾಯಕನ ವಿರುದ್ಧ FIR

    ಗಾಂಧೀನಗರ: ಟೋಲ್ ಬೂತ್ ಸಿಬ್ಬಂದಿಗೆ (Toll Booth Worker) ಕಪಾಳಮೋಕ್ಷ ಮಾಡಿದ ಆರೋಪದಡಿ ಆಮ್ ಆದ್ಮಿ ಪಕ್ಷದ ಗುಜರಾತ್ (Gujarat) ವಿಭಾಗದ ಉಪಾಧ್ಯಕ್ಷ ಮತ್ತು ಸೋಮನಾಥ್ ಕ್ಷೇತ್ರದ (Somnath constituency) ಪಕ್ಷದ ಅಭ್ಯರ್ಥಿ ಜಗ್ಮಲ್ ವಾಲಾ (Jagmal Val) ಅವರ ಮೇಲೆ ಪ್ರಕರಣ ದಾಖಲಾಗಿದೆ.

    ಬುಧವಾರ ರಾತ್ರಿ ವೆರಾವಲ್ (Veraval) ಬಳಿಯ ದರಿ ಟೋಲ್ ಪ್ಲಾಜಾದಲ್ಲಿ ಎಎಪಿ ನಾಯಕ ಟೋಲ್ ಪ್ಲಾಜಾ ಮೂಲಕ ಹಾದುಹೋಗುವ ವೇಳೆ ಘಟನೆ ನಡೆದಿದೆ. ಪಕ್ಷದ ಇತರ ಕಾರ್ಯಕರ್ತರೊಂದಿಗೆ ಜಗ್ಮಲ್ ವಾಲಾ ಅವರು ಮೂರು ಕಾರುಗಳಲ್ಲಿ ಪ್ರಯಾಣಿಸುತ್ತಿದ್ದರು. ಕೆಲವು ಕಾರಣಗಳಿಂದ ಕೋಪಗೊಂಡ ಜಗ್ಮಲ್ ವಾಲಾ ಟೋಲ್ ಬೂತ್ ನೌಕರನಿಗೆ ಕಪಾಳಮೋಕ್ಷ ಮಾಡಿ, ಗಲಾಟೆ ಮಾಡಿದ್ದಾರೆ. ಈ ಘಟನೆಯ ದೃಶ್ಯ ಪ್ಲಾಜಾದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಇದೀಗ ಟೋಲ್ ಬೂತ್ ಸಿಬ್ಬಂದಿ ಜಗ್ಮಲ್ ವಾಲಾ ವಿರುದ್ಧ ದೂರು ನೀಡಿದ್ದು, ಪ್ರಭಾಸ್ ಪಟಾನ್ ಪೊಲೀಸರು ಎಫ್‍ಐಆರ್ ದಾಖಲಿಸಿಕೊಂಡಿದ್ದಾರೆ. ಇದನ್ನೂ ಓದಿ: ಗ್ರಾಹಕರ ಸೋಗಿನಲ್ಲಿ ಬಂದ ಕಳ್ಳರು – ಅಂಗಡಿಯಲ್ಲಿದ್ದ ವೃದ್ಧೆಯ ಚಿನ್ನದ ಸರ ಕಿತ್ತು ಎಸ್ಕೇಪ್

    ಈಗಾಗಲೇ ಈ ಹಿಂದೆ ತಮ್ಮ ಕಚೇರಿಯಲ್ಲಿಯೇ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗೆ ಬೆದರಿಕೆಯೊಡ್ಡಿ, ಥಳಿಸಿದ ಪ್ರಕರಣದಡಿ ಜಗ್ಮಲ್ ವಾಲಾ ಜೈಲು ಪಾಲಾಗಿದ್ದರು. ಡಿಸೆಂಬರ್ ಮೊದಲ ವಾರದಲ್ಲಿ ನಡೆಯಲಿರುವ ಗುಜರಾತ್ ವಿಧಾನಸಭಾ ಚುನಾವಣೆಗೂ ಮುನ್ನವೇ ಈ ಘಟನೆ ನಡೆದಿದ್ದು, ಇದು ಜಗ್ಮಲ್ ವಾಲಾ ವರ್ಚಸ್ಸಿಗೆ ಧಕ್ಕೆಯುಂಟು ಮಾಡಬಹುದು ಎಂದು ಹೇಳಲಾಗುತ್ತಿದೆ. ಇದನ್ನೂ ಓದಿ: 45 ವರ್ಷಗಳಲ್ಲಿಯೇ ಮೊದಲ ಬಾರಿಗೆ ರಾಮ್‌ಪುರ ಚುನಾವಣೆಯಿಂದ ದೂರ ಉಳಿದ ಅಜಂ ಖಾನ್ ಕುಟುಂಬ

    Live Tv
    [brid partner=56869869 player=32851 video=960834 autoplay=true]

  • ನಟಿ ನಿರೂಷಾ ಅವರ ನಾಯಿಯನ್ನು ವಾಪಸ್ಸು ಬಿಟ್ಟು ಹೋದ ಕಳ್ಳರು

    ನಟಿ ನಿರೂಷಾ ಅವರ ನಾಯಿಯನ್ನು ವಾಪಸ್ಸು ಬಿಟ್ಟು ಹೋದ ಕಳ್ಳರು

    ನ್ನಡದ ನಟಿ ನಿರೂಷಾ ಅವರ ಮುದ್ದಿನ ನಾಯಿಯನ್ನು ಎರಡು ದಿನಗಳ ಹಿಂದೆ ಕಳ್ಳರು ಕದ್ದೊಯ್ದಿದ್ದರು. ತಮ್ಮ ನಾಯಿ ಕಳ್ಳತನವಾಗಿದೆ ಎಂದು ತಿಳಿಯುತ್ತಿದ್ದಂತೆಯೇ ನಿರೂಷಾ ಅಕ್ಷರಶಃ ಕಣ್ಣೀರು ಹಾಕಿದ್ದರು. ತಮ್ಮ ನಾಯಿ ಕಳ್ಳತನವಾಗಿದೆ, ಕಳ್ಳರನ್ನು ಹುಡುಕಿ ಕೊಡಿ ಎಂದು ವಿಡಿಯೋ ಮಾಡಿ ಸೋಷಿಯಲ್ ಮೀಡಿಯಾದಲ್ಲಿ ಹಾಕಿದ್ದರು.

    ನೆಚ್ಚಿನ ನಾಯಿಗಾಗಿ ನಿರೂಷಾ ಹಾಕಿದ ಕಣ್ಣೀರು, ಎಲ್ಲರ ಮನಸ್ಸು ಕಲುಕಿತ್ತು. ಯಾರಾದರೂ, ಅವರ ನಾಯಿಯನ್ನು ಕಂಡರೆ ಅವರಿಗೆ ಮಾಹಿತಿ ಕೊಡಿ ಎಂದು ಅದೆಷ್ಟೋ ಅಭಿಮಾನಿಗಳು ಸ್ವಯಂ ಪ್ರೇರಿತರಾಗಿ ಆ ವಿಡಿಯೋವನ್ನು ಹಂಚಿಕೊಂಡಿದ್ದರು. ಕೊನೆಗೂ ಅವರ ಕಣ್ಣೀರು ಫಲಕೊಟ್ಟಿದೆ. ಇದೀಗ ತಮ್ಮ ನಾಯಿ ಸಿಕ್ಕಿರುವುದಾಗಿ ನಿರೂಷಾ ಮತ್ತೊಂದು ವಿಡಿಯೋ ಹಂಚಿಕೊಂಡಿದ್ದಾರೆ. ಅದು ಹೇಗೆ ಸಿಕ್ಕಿತು ಎನ್ನುವ ಕುರಿತು ಅವರು ಹೇಳಿದ್ದಾರೆ. ಇದನ್ನೂ ಓದಿ:ಕಿಚ್ಚ ಸುದೀಪ್ ಅವರನ್ನು ವಿಶ್ವದ ಬಾಕ್ಸ್ ಆಫೀಸಿಗೆ ಹೋಲಿಸಿದ ಉಪೇಂದ್ರ

    ನಿರೂಷಾ ನಾಯಿ ಸುಂಕದಕಟ್ಟೆ ಟೆಲಿಕಾಂ ಲೇಔಟ್ ನಿಂದ ಕಳ್ಳತನವಾಗಿತ್ತು. ಕಳ್ಳರು ಅವರ ಮನೆಯ ಸಮೀಪದಲ್ಲೇ ಇರುವ ಗಣೇಶ್ ದೇವಸ್ಥಾನ ಬಳಿ ನಾಯಿಯನ್ನು ತಂದುಬಿಟ್ಟು, ಅವರ ತಾಯಿಗೆ ಕಾಲ್ ಮಾಡಿ ಹೇಳಿದ್ದಾರಂತೆ. ಆ ಅಪರಿಚಿತ ಕರೆಯಿಂದ ಬಂದ ಸಿಹಿ ಸುದ್ದಿಯು ನಿರೂಷಾಗೂ ತಲುಪಿ, ನೆಮ್ಮದಿಯ ನಿಟ್ಟುಸಿರು ಇಟ್ಟಿದ್ದಾರೆ. ತಮ್ಮ ನಾಯಿ ಕೊನೆಗೂ ಸಿಕ್ಕಿರುವ ಖುಷಿಯನ್ನು ಅವರು ಅಭಿಮಾನಿಗಳ ಜೊತೆ ಹಂಚಿಕೊಂಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ರಾಷ್ಟ್ರೀಯ ಹೆದ್ದಾರಿಗಳಲ್ಲಿ ಟೋಲ್ ಬೂತ್ ರದ್ದು?

    ರಾಷ್ಟ್ರೀಯ ಹೆದ್ದಾರಿಗಳಲ್ಲಿ ಟೋಲ್ ಬೂತ್ ರದ್ದು?

    ನವದೆಹಲಿ: ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆಯುತ್ತಿರುವ ಪ್ರಯೋಗವೊಂದು ಯಶಸ್ವಿಯಾದರೆ ದೇಶದಲ್ಲಿರುವ ಟೋಲ್ ಬೂತ್‍ಗಳು ರದ್ದಾಗುವ ಸಾಧ್ಯತೆಯಿದೆ.

    ಹೈವೇಗಳ ಟೋಲ್ ಬೂತ್‍ಗಳಲ್ಲಿ ಸರತಿ ಸಾಲಿನಲ್ಲಿ ನಿಂತು ಪ್ರಯಾಣಿಕರ ಸಮಯ ಹಾಳಾಗುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಸರ್ಕಾರ ಈಗ ಟೋಲ್ ಸಂಗ್ರಹಕ್ಕೆ ವಾಹನದಲ್ಲೇ ಸಾಧನವೊಂದನ್ನು ಅಳವಡಿಸಲು ಮುಂದಾಗಿದೆ.

     

    ಹೇಗೆ ಕೆಲಸ ಮಾಡುತ್ತೆ?
    ವಾಹನಗಳ ಮ್ಯೂಸಿಕ್ ಸಿಸ್ಟಂ ಬಳಿ ಈ ಸಾಧನ ಇರಲಿದೆ. ಈ ಸಾಧನ ವಾಹನ ಮಾಲೀಕರ ಬ್ಯಾಂಕ್ ಖಾತೆಗೆ ಜೋಡಣೆ ಆಗಿರುತ್ತದೆ. ವಾಹನ ಸವಾರ ಒಂದು ನಿರ್ದಿಷ್ಟ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸಿದರೆ ಅದಕ್ಕೆ ತಗುಲುವ ಶುಲ್ಕ ನೇರವಾಗಿ ಆತ/ಆಕೆಯ ಬ್ಯಾಂಕ್ ಖಾತೆಯಿಂದ ಕಡಿತಗೊಳ್ಳುತ್ತದೆ.

    ಈಗ ದೆಹಲಿ- ಮುಂಬೈ ರಾಷ್ಟ್ರೀಯ ಹೆದ್ದಾರಿಯಲ್ಲಿ ಈ ಉಪಕರಣದ ಪ್ರಯೋಗ ನಡೆಯುತ್ತಿದ್ದು, ಈ ಪ್ರಯೋಗ ಯಶಸ್ವಿಯಾದರೆ ದೇಶಾದ್ಯಂತ ವಿಸ್ತರಿಸಲು ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಅಧಿಸೂಚನೆ ಹೊರಡಿಸಲಿದೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.

    ಈಗಾಗಲೇ ಟೋಲ್‍ಗಳಲ್ಲಿ ವಾಹನಗಳು ನಿಮಿಷಗಟ್ಟಲೇ ಕಾಯುವುದನ್ನು ತಡೆಯಲು ಫಾಸ್ಟ್ ಟ್ಯಾಗ್ ಅನ್ನು ಸರ್ಕಾರ ಪರಿಚಯಿಸಿದೆ. ಇದನ್ನೂ ಓದಿ: ಎಷ್ಟು ದೂರ ಹೋಗ್ತಿರೋ ಅಷ್ಟಕ್ಕೆ ಮಾತ್ರ ಟೋಲ್ ಕಟ್ಟಿ – ಮೋದಿ ಸರ್ಕಾರದಿಂದ ಮಹ್ವತದ ಪ್ರಯೋಗ ಜಾರಿ!

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv