Tag: Tokyo Olympics

  • ಒಲಿಂಪಿಕ್ಸ್‌ ಪದಕ ವಿಜೇತ ಕುಸ್ತಿಪಟುಗೆ ಶಾಕ್‌ – ಬಜರಂಗ್‌ ಪುನಿಯಾ 4 ವರ್ಷ ಬ್ಯಾನ್‌

    ಒಲಿಂಪಿಕ್ಸ್‌ ಪದಕ ವಿಜೇತ ಕುಸ್ತಿಪಟುಗೆ ಶಾಕ್‌ – ಬಜರಂಗ್‌ ಪುನಿಯಾ 4 ವರ್ಷ ಬ್ಯಾನ್‌

    ನವದೆಹಲಿ: ರಾಷ್ಟ್ರೀಯ ಉದ್ದೀಪನ ಮದ್ದು ತಡೆ ಸಂಸ್ಥೆ (NADA) ಕುಸ್ತಿಪಟು ಬಜರಂಗ್ ಪುನಿಯಾ (Wrestler Bajrang Punia) ಅವರನ್ನ ನಾಲ್ಕು ವರ್ಷಗಳ ಕಾಲ ಬ್ಯಾನ್‌ ಮಾಡಿದೆ.

    ಮಾರ್ಚ್ 10 ರಂದು ಸೋನೆಪತ್‌ನಲ್ಲಿ ನಡೆದ ರಾಷ್ಟ್ರೀಯ ತಂಡದ ಆಯ್ಕೆಗೆ ನಡೆದ ಟ್ರಯಲ್ಸ್‌ನಲ್ಲಿ ಆಯ್ಕೆಯಾದ ನಂತರ ಪುನಿಯಾ ಮೂತ್ರದ ಮಾದರಿಯನ್ನು (Urine Sample) ಪರೀಕ್ಷೆಗೆ ನೀಡಲಿ ನಿರಾಕರಿಸಿದರು. ಇದನ್ನು ನಿಯಮ ಬಾಹಿರ ಎಂದು ಪರಿಗಣಿಸಿರುವ ನಾಡಾ ಪೂನಿಯಾರನ್ನ ನಾಲ್ಕು ವರ್ಷಗಳ ಕಾಲ ಬ್ಯಾನ್‌ ಮಾಡಿದೆ. ಕಳೆದ ಏಪ್ರಿಲ್‌ 23ರಂದು ಪುನಿಯಾರನ್ನ ನಾಡಾ ಮೊದಲಬಾರಿಗೆ ಅಮಾನತುಗೊಳಿಸಿತ್ತು. ನಂತರ ವಿಶ್ವ ಕುಸ್ತಿ ಆಡಳಿತ ಮಂಡಳಿ (UWW) ಸಹ ಅವರನ್ನ ಅಮಾನತುಗೊಳಿಸಿತ್ತು. ಇದರ ವಿರುದ್ಧ ಪುನಿಯಾ ಮೇಲ್ಮನವಿ ಸಲ್ಲಿಸಿದ್ದರು. ಆದ್ರೆ ನಾಡಾದ ಆಂಟಿ-ಡಿಸಿಪ್ಲಿನರಿ ಡೋಪಿಂಗ್ ಪ್ಯಾನೆಲ್ (ADDP) ಮುಂದಿನ ಸೂಚನೆ ನೀಡುವವರೆಗೆ ಮೇಲ್ಮನವಿಯನ್ನು ರದ್ದುಗೊಳಿಸಿತ್ತು. ಇದನ್ನೂ ಓದಿ: 1,000 ಕೋಟಿಗೆ RCB ಫ್ರಾಂಚೈಸಿ ಖರೀದಿಸಲು ಪ್ಲ್ಯಾನ್‌; ಮಂಡ್ಯದಲ್ಲಿ ಸದ್ದು ಮಾಡ್ತಿದೆ ಫ್ಯಾನ್ಸ್‌ ಪೋಸ್ಟರ್‌

    ನಾಡಾಗೆ ಮೂತ್ರ ಮಾದರಿಯನ್ನು ನೀಡದೇ ಇದ್ದದ್ದು ಯಾಕೆ? ಎಂದು ಜೂನ್‌ 23 ರಂದು ಕುಸ್ತಿಪಟುಗೆ ನೋಟಿಸ್‌ ನೀಡಿತ್ತು. ಸೆಪ್ಟೆಂಬರ್ 20 ಮತ್ತು ಅಕ್ಟೋಬರ್ 4 ರಂದು ವಿಚಾರಣೆ ನಡೆಸಲಾಗಿತ್ತು. ಇದೀಗ ಆದೇಶ ಪ್ರಕಟಿಸಿರುವ ಎಡಿಡಿಪಿ, ಕಲಂ 10.3.1 ರ ಅಡಿಯಲ್ಲಿ ನಿರ್ಬಂಧಗಳಿಗೆ ಅಥ್ಲೀಟ್ ಹೊಣೆಗಾರನಾಗಿರುತ್ತಾನೆ ಮತ್ತು 4 ವರ್ಷಗಳ ಅವಧಿಗೆ ಅನರ್ಹತೆಗೆ ಹೊಣೆಗಾರನಾಗಿರುತ್ತಾನೆ ಎಂದು ಹೇಳಿದೆ. ಈ ಸಂದರ್ಭದಲ್ಲಿ ಬಜರಂಗ್ ಪುನಿಯಾ ಸ್ಪರ್ಧಾತ್ಮಕ ಕುಸ್ತಿಗೆ ಮರಳಲು ಮತ್ತು ವಿದೇಶದಲ್ಲಿ ಕೋಚಿಂಗ್‌ ಕೆಲಸಕ್ಕೆ ಅರ್ಜಿ ಸಲ್ಲಿಸಲು ಸಾಧ್ಯವಾಗುವುದಿಲ್ಲ ಎಂದು ಸಹ ತನ್ನ ಆದೇಶದಲ್ಲಿ ತಿಳಿದಿದೆ. ಇದನ್ನೂ ಓದಿ: Keep Distance – ಇದು ನಮ್ಮ ನಿಮ್ಮ ನೆಮ್ಮದಿಯ ವಿಷಯ!

    ಕೆಲ ದಿನಗಳ ಹಿಂದೆಯಷ್ಟೇ ವಿನೇಶ್ ಫೋಗಟ್, ಬಜರಂಗ್ ಪುನಿಯಾ ಕಾಂಗ್ರೆಸ್‌ ಸೇರ್ಪಡೆಯಾದರು. ಆನಂತರ ಪೂನಿಯಾ ಅವರನ್ನ ಅಖಿಲ ಭಾರತ ಕಿಸಾನ್ ಕಾಂಗ್ರೆಸ್‌ನ (Indian Kisan Congress) ಕಾರ್ಯಾಧ್ಯಕ್ಷರನ್ನಾಗಿ ನೇಮಿಸಲಾಯಿತು. ಇದಕ್ಕೂ ಮುನ್ನ ಅವರು ರೈಲ್ವೆ ಉದ್ಯೋಗಕ್ಕೆ ರಾಜೀನಾಮೆ ನೀಡಿದ್ದರು. ಇದನ್ನೂ ಓದಿ: 2026ರ ವೇಳೆಗೆ ದುಬೈನಲ್ಲಿ ವಿಶ್ವದ ಮೊದಲ ಡ್ರೋನ್‌ ಏರ್‌ ಟ್ಯಾಕ್ಸಿ ಹಾರಾಟ- ಹೇಗಿರಲಿದೆ ಟ್ಯಾಕ್ಸಿ?

  • ಪಾವೊ ನೂರ್ಮಿ ಗೇಮ್ಸ್‌ನಿಂದ ಚಿನ್ನದ ಹುಡುಗ ನೀರಜ್ ಚೋಪ್ರಾ ಔಟ್

    ಪಾವೊ ನೂರ್ಮಿ ಗೇಮ್ಸ್‌ನಿಂದ ಚಿನ್ನದ ಹುಡುಗ ನೀರಜ್ ಚೋಪ್ರಾ ಔಟ್

    ಹೆಲ್ಸಿಂಕಿ/ನವದೆಹಲಿ: ಇದೇ ಜೂನ್ 13 ರಂದು ಫಿನ್‌ಲ್ಯಾಂಡ್‌ನಲ್ಲಿ ನಡೆಯಲಿರುವ ಪಾವೊ ನೂರ್ಮಿ ಗೇಮ್ಸ್-2023 (Paavo Nurmi Games 2023) ರಿಂದ ಭಾರತದ ಜಾವೆಲಿನ್ ಥ್ರೋ ಸ್ಪರ್ಧಿ ನೀರಜ್ ಚೋಪ್ರಾ (Neeraj Chopra) ಹೊರಗುಳಿಸಿದ್ದಾರೆ. ಅಲ್ಲದೆ, ಮಾಜಿ ವಿಶ್ವ ಚಾಂಪಿಯನ್ ಜರ್ಮನಿಯ ಜೊಹಾನ್ಸ್ ವೆಟರ್ (Johannes Vetter) ಕೂಡ ಈ ಟೂರ್ನಿಯಿಂದ ಹಿಂದೆ ಸರಿದಿದ್ದಾರೆ.

    ನೀರಜ್ ಚೋಪ್ರಾ ಅವರು ಕಳೆದ ತಿಂಗಳು ತರಬೇತಿ ಸಮಯದಲ್ಲಿ ಅನುಭವಿಸಿದ ಸ್ನಾಯು ಸೆಳೆತದ ಸಮಸ್ಯೆಯಿಂದಾಗಿ ಜೂನ್ 4ರಂದು ನೆದರ್‌ಲೆಂಡ್‌ನಲ್ಲಿ ನಡೆದ FBK ಗೇಮ್ಸ್‌ನಿಂದಲೂ ಹೊರಗುಳಿದಿದ್ದರು. ಇದನ್ನೂ ಓದಿ: ಮತ್ತೊಂದು ಇತಿಹಾಸ – ಡೈಮಂಡ್‌ ಟ್ರೋಫಿ ಗೆದ್ದ ನೀರಜ್‌ ಚೋಪ್ರಾ

    NEERAJ

    ಪಾವೊ ನೂರ್ಮಿ ಗೇಮ್ಸ್ 1957 ರಿಂದ ಟುರ್ಕ್‌ನಲ್ಲಿ ನಡೆಯುವ ವಾರ್ಷಿಕ ಫಿನ್ನಿಷ್ ಅಥ್ಲೆಟಿಕ್ಸ್ ಕೂಟವಾಗಿದೆ. ಈ ಸ್ಪರ್ಧೆಯು ವಿಶ್ವ ಅಥ್ಲೆಟಿಕ್ಸ್ ಕಾಂಟಿನೆಂಟಲ್ ಟೂರ್ ಗೋಲ್ಡ್ ಕಾರ್ಯಕ್ರಮ ಎಂದೇ ಹೆಸರುವಾಸಿಯಾಗಿದೆ.

    ನೀರಜ್ ಚೋಪ್ರಾ ಕಳೆದ ವರ್ಷ ಫಿನ್‌ಲ್ಯಾಂಡ್ ಟೂರ್ನಿಯಲ್ಲಿ 89.30 ಮೀಟರ್ ಜಾವೆಲಿನ್ ಎಸೆಯುವ ಮೂಲಕ ಬೆಳ್ಳಿ ಪದಕ ಬಾಚಿಕೊಂಡಿದ್ದರು. ಇದನ್ನೂ ಓದಿ: ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಚಿನ್ನ ಗೆದ್ದ ನೀರಜ್‌ ಚೋಪ್ರಾಗೆ ಪರಮ ವಿಶಿಷ್ಟ ಸೇವಾ ಪದಕ

    NEERAJ

    ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಗೆದ್ದಿದ್ದ ಭಾರತದ ಜಾವೆಲಿನ್ ಥ್ರೋ ಸ್ಪರ್ಧಿ ನೀರಜ್ ಚೋಪ್ರಾ ಅವರು ಲಾಸನ್‌ನಲ್ಲಿ ನಡೆದ ಡೈಮಂಡ್ ಲೀಗ್ ಗೆಲ್ಲುವ ಮೂಲಕ ಇತಿಹಾಸ ಸೃಷ್ಟಿಸಿದ್ದರು. 89.04 ಮೀ. ಜಾವೆಲಿನ್ ಎಸೆಯುವ ಮೂಲಕ ಮೊದಲ ಸ್ಥಾನ ಪಡೆದು, ಈ ವಿಶಿಷ್ಟ ಸಾಧನೆ ಮಾಡಿದ ಭಾರತದ ಮೊದಲ ಅಥ್ಲೀಟ್ ಎಂಬ ಗೌರವಕ್ಕೆ ನೀರಜ್ ಪಾತ್ರರಾಗಿದ್ದರು.

  • ಚಿನ್ನದ ಹುಡುಗ ನೀರಜ್ ಚೋಪ್ರಾ ಕೊರಳಿಗೆ ಮತ್ತೊಂದು ಚಿನ್ನ

    ಚಿನ್ನದ ಹುಡುಗ ನೀರಜ್ ಚೋಪ್ರಾ ಕೊರಳಿಗೆ ಮತ್ತೊಂದು ಚಿನ್ನ

    ಹೆಲ್ಸಿಂಕಿ: ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಗೆದ್ದಿದ್ದ ಭಾರತದ ಕ್ರೀಡಾತಾರೆ ನೀರಜ್ ಚೋಪ್ರಾ ಫಿನ್‌ಲ್ಯಾಂಡ್‌ನಲ್ಲಿ ನಡೆದ ಕುರ್ಟೇನ್ ಗೇಮ್ಸ್‌ನಲ್ಲಿ ಗೆಲುವು ಸಾಧಿಸುವ ಮೂಲಕ ಮತ್ತೊಂದು ಚಿನ್ನದ ಪದಕಕ್ಕೆ ಕೊರಳೊಡ್ಡಿದ್ದಾರೆ.

    ಚೋಪ್ರಾ ತಮ್ಮ ಮೊದಲ ಪ್ರಯತ್ನದಲ್ಲೇ 86.69 ಮೀ. ದೂರ ಜಾವೆಲಿನ್ ಎಸೆಯುವ ಮೂಲಕ ಚಿನ್ನದ ಪದಕ ತಮ್ಮದಾಗಿಸಿಕೊಂಡಿದ್ದಾರೆ. ಇದನ್ನೂ ಓದಿ: ವಿಶ್ವದ ದುಬಾರಿ ಕ್ರೀಡೆಯಾಗಿ ಹೊರಹೊಮ್ಮಿದ IPL

    ಫಿನ್‌ಲ್ಯಾಂಡ್‌ನಲ್ಲಿ ಈ ವಾರದ ಆರಂಭದಲ್ಲಿ ನಡೆದ ಪಾವೊ ನೂರ್ಮಿ ಗೇಮ್ಸ್‌ನಲ್ಲಿ ನೀರಜ್ ಚೋಪ್ರಾ 89.30 ಮೀಟರ್ ಜಾವೆಲಿನ್ ಎಸೆಯುವ ಮೂಲಕ ಬೆಳ್ಳಿ ಪದಕ ಗೆದ್ದಿದ್ದರು, ಈ ಮೂಲಕ ತಮ್ಮದೇ ದಾಖಲೆ ಮುರಿದಿದ್ದರು. ಇದನ್ನೂ ಓದಿ: ಒಲಿಂಪಿಕ್ಸ್‌ನಲ್ಲಿ ಚಿನ್ನಗೆದ್ದಿದ್ದ ಭಾರತದ ನೀರಜ್ ಚೋಪ್ರಾರಿಂದ ಮತ್ತೊಂದು ದಾಖಲೆ

    ನೀರಜ್ ಚೋಪ್ರಾ ಟ್ರಿನಿಡಾಡ್ ಮತ್ತು ಟೊಬಾಗೋದ ಕೆಶೋರ್ನ್ ವಾಲ್ಕಾಟ್ ಮತ್ತು ಗ್ರೆನಡಾದ ವಿಶ್ವ ಚಾಂಪಿಯನ್ ಆ್ಯಂಡರ್ಸನ್ ಪೀಟರ್ಸ್‌ಗಿಂತ ಮೊದಲು ಗುರಿ ತಲುಪಿದರು.

    ಚೋಪ್ರಾ ಅಥ್ಲೆಟಿಕ್ಸ್‌ನಲ್ಲಿ ಚಿನ್ನದ ಪದಕ ಗೆದ್ದ ಮೊದಲ ಭಾರತೀಯರಾದರು. ಕೆಶೋರ್ನ್ ವಾಲ್ಕಾಟ್ 86.64 ಮೀ. ಜಾವೆಲಿನ್ ಎಸೆದು 2ನೇ ಸ್ಥಾನ ಪಡೆದರೆ, ಆ್ಯಂಡರ್ಸನ್ ಪೀಟರ್ಸ್ 84.75 ಮೀಟರ್ ಎಸೆಯುವ ಉತ್ತಮ ಪ್ರಯತ್ನದೊಂದಿಗೆ 3ನೇ ಸ್ಥಾನ ಪಡೆದರು.

    Live Tv

  • ಯತಿರಾಜ್‌ಗೆ ಕರ್ನಾಟಕ ಸರ್ಕಾರದಿಂದ ಸನ್ಮಾನ

    ಯತಿರಾಜ್‌ಗೆ ಕರ್ನಾಟಕ ಸರ್ಕಾರದಿಂದ ಸನ್ಮಾನ

    ಬೆಂಗಳೂರು: ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ವತಿಯಿಂದ ರಾಜಭವನದಲ್ಲಿ ಆಯೋಜಿಸಿದ್ದ ಟೋಕಿಯೋ ಒಲಂಪಿಕ್ಸ್ ಮತ್ತು ಪ್ಯಾರಾಲಂಪಿಕ್ಸ್‌ನಲ್ಲಿ ಭಾಗವಹಿಸಿದ್ದ ಕ್ರೀಡಾಪಟುಗಳು ಮತ್ತು ತರಬೇತುದಾರನ್ನು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ತಲಾ ಒಂದು ಲಕ್ಷ ರೂ. ನೀಡಿ ಸನ್ಮಾನಿಸಿದರು.

    Rajabhavana

    ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, ರೇಷ್ಮೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಚಿವರಾದ ಡಾ. ಕೆಸಿ ನಾರಾಯಣ ಗೌಡ ಅವರು, ಕರ್ನಾಟಕ ಒಲಂಪಿಕ್ಸ್‌  ಸಂಸ್ಥೆ ಅಧ್ಯಕ್ಷರು, ಪರಿಷತ್ ಸದಸ್ಯರಾದ ಗೋವಿಂದರಾಜು ಸೇರಿದಂತೆ ಇಲಾಖೆಯ ಅಧಿಕಾರಿಗಳು ಭಾಗವಹಿಸಿದ್ದರು. ಇದನ್ನೂ ಓದಿ: ಪಕ್ಷದ ವರಿಷ್ಠರು ಒಪ್ಪಿದರೆ ರಾಜ್ಯ ರಾಜಕಾರಣಕ್ಕೆ ಪ್ರವೇಶಿಸುತ್ತೇನೆ: ಬಿ.ವೈ ರಾಘವೇಂದ್ರ

  • ಮೊದಲ ಬಾರಿಗೆ ತಂದೆ-ತಾಯಿಯನ್ನ ವಿಮಾನದಲ್ಲಿ ಕರೆದೊಯ್ದ ಚಿನ್ನದ ಹುಡುಗ

    ಮೊದಲ ಬಾರಿಗೆ ತಂದೆ-ತಾಯಿಯನ್ನ ವಿಮಾನದಲ್ಲಿ ಕರೆದೊಯ್ದ ಚಿನ್ನದ ಹುಡುಗ

    – ಚಿಕ್ಕ ಕನಸು ನನಸಾಯ್ತು ಅಂದ್ರು ನೀರಜ್ ಚೋಪ್ರಾ

    ನವದೆಹಲಿ: ಟೋಕಿಯೋ ಒಲಿಂಪಿಕ್ಸ್ ನಲ್ಲಿ ಚಿನ್ನದ ಪದಕ ಗೆದ್ದು ದೇಶದ ಪತಾಕೆ ಹಾರಿಸಿರುವ ನೀರಜ್ ಚೋಪ್ರಾ ಅವರು ಇಂದು ತಮ್ಮ ತಂದೆ-ತಾಯಿಯನ್ನು ಮೊದಲ ಬಾರಿಗೆ ವಿಮಾನ ಪ್ರಯಾಣ ಮಾಡಿಸಿದ್ದಾರೆ. ಈ ಮೂಲಕ ತಮ್ಮ ಸಣ್ಣ ಕನಸೊಂದನ್ನು ನನಸು ಮಾಡಿದ್ದಾರೆ.

    ಹೌದು. ತಮ್ಮ ತಂದೆ-ತಾಯಿಯನ್ನು ಜೀವನದಲ್ಲಿ ಒಮ್ಮೆಯಾದರೂ ವಿಮಾನ ಪ್ರಯಾಣ ಮಾಡಿಸಬೇಕು ಎಂದು ನೀರಜ್ ಕನಸು ಕಂಡಿದ್ದರು. ಇದೀಗ ಅವರ ಬಹುದಿನಗಳ ಜನಸು ಈಡೇರಿದ್ದು, ಈ ಕುರಿತು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ನನ್ನದೊಂದು ಸಣ್ಣ ಕನಸು ಈಗ ನನಸಾಗಿದೆ. ನನ್ನ ಹೆತ್ತವರನ್ನು ಮೊದಲ ಬಾರಿಗೆ ವಿಮಾನದಲ್ಲಿ ಕರೆದುಕೊಂಡು ಹೋಗುವಲ್ಲಿ ಯಶಸ್ವಿಯಾಗಿದ್ದೇನೆ ಎಮದು ಬರೆದುಕೊಂಡು ಅಪ್ಪ- ಅಮ್ಮನ ಜೊತೆ ವಿಮಾನದೊಳಗೆ ತೆಗೆದುಕೊಂಡಿರುವ ಫೋಟೋವನ್ನು ಪೋಸ್ಟ್ ಮಾಡಿದ್ದಾರೆ. ಇದನ್ನೂ ಓದಿ: ಕನ್ನಡಿಗ ಗುರುವಿಗೆ ಅಭಿನಂದನೆ ಸಲ್ಲಿಸಿದ ಚಿನ್ನದ ಹುಡುಗ ನೀರಜ್ ಚೋಪ್ರಾ

    ನೀರಜ್ ಟ್ವಿಟ್ಟರ್ ನಲ್ಲಿ ಈ ರೀತಿ ಪೋಸ್ಟ್ ಮಾಡುತ್ತಿದ್ದಂತೆಯೇ ಅವರ ಈ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆದವು. ಅಲ್ಲದೆ ಅಭಿಮಾನಿಗಳು ಮೆಚ್ಚುಗೆ ಸೂಚಿಸಿದ್ದಾರೆ. ಇದನ್ನೂ ಓದಿ: ನೀರಜ್‌ ಚೋಪ್ರಾ ತರಬೇತಿಗಾಗಿ 7 ಕೋಟಿ ರೂ. ಖರ್ಚು ಮಾಡಿದ್ದ ಸರ್ಕಾರ

    ಟೋಕಿಯೋ ಒಲಿಂಪಿಕ್ಸ್ ನ ಜಾವೆಲಿನ್ ಥ್ರೋ ವಿಭಾಗದಲ್ಲಿ ನೀರಜ್ ಚೋಪ್ರಾ ಚಿನ್ನ ಗೆದ್ದಿದ್ದಾರೆ. ನೀರಜ್ ಅವರ ಈ ಸಾಧನೆಯನ್ನು ಇಡೀ ಭಾರತ ಕೊಂಡಾಡಿದೆ. ಬರೋಬ್ಬರಿ 120 ವರ್ಷಗಳ ಬಳಿಕ ಅಥ್ಲೆಟಿಕ್ ನಲ್ಲಿ ಭಾರತಕ್ಕೆ ಚಿನ್ನ ತಂದುಕೊಡುವ ಮೂಲಕ 23 ವರ್ಷದ ನೀರಜ್ ಚೋಪ್ರಾ ಹೀರೋ ಆಗಿ ಮಿಂಚಿದ್ದಾರೆ. ನೀರಜ್ ಅವರ ಈ ಗೆಲುವನ್ನು ಅನೇಕ ಮಂದಿ ವಿವಿಧ ರೀತಿಯಲ್ಲಿ ಆಚರಿಸಿ ಸಂಭ್ರಮಿಸಿದ್ದರು. ಇದನ್ನೂ ಓದಿ: ನಾನು ಸಿಂಗಲ್, ಆಟದ ಮೇಲೆ ಮಾತ್ರ ನನ್ನ ಗಮನ: ನೀರಜ್ ಚೋಪ್ರಾ

  • ಯೋಗಿ ಆದಿತ್ಯನಾಥ್‍ರಿಂದ ಕೊಡಗಿನ ಅಂಕಿತಾ ಸುರೇಶ್‍ಗೆ 10 ಲಕ್ಷ ರೂ. ಪುರಸ್ಕಾರ

    ಯೋಗಿ ಆದಿತ್ಯನಾಥ್‍ರಿಂದ ಕೊಡಗಿನ ಅಂಕಿತಾ ಸುರೇಶ್‍ಗೆ 10 ಲಕ್ಷ ರೂ. ಪುರಸ್ಕಾರ

    ಮಡಿಕೇರಿ: ಟೋಕಿಯೋ ಒಲಿಂಪಿಕ್ಸ್ ಹಾಕಿಯಲ್ಲಿ ಭಾರತ ಮಹಿಳಾ ತಂಡದ ಅಪ್ರತಿಮ ಸಾಧನೆಗೆ ಕಾರಣಕರ್ತರಾದ ಭಾರತೀಯ ಮಹಿಳಾ ಹಾಕಿ ತಂಡದ ಸಹಾಯಕ ತರಬೇತುದಾರರಾದ ಕೊಡಗಿನ ಕಂಬಿಬಾಣೆಯ ಅಂಕಿತಾ ಸುರೇಶ್ ಅವರನ್ನು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸನ್ಮಾನಿಸಿ, 10 ಲಕ್ಷ ರೂ. ಪುರಸ್ಕಾರ ನೀಡಿ ಗೌರವಿಸಿದ್ದಾರೆ.

    ಅಂಕಿತಾ ಅವರಿಗೆ 10 ಲಕ್ಷ ರೂ.ಗಳ ಕೊಡುಗೆಯನ್ನು ಯೋಗಿ ಆದಿತ್ಯನಾಥ್ ನೀಡಿ ಪುರಸ್ಕರಿಸಿದ ಬಳಿಕ ಒಡಿಶಾದ ಮುಖ್ಯಮಂತ್ರಿ ಬಿಜು ಪಟ್ನಾಯಕ್ ಕೂಡ ಅಂಕಿತಾ ಸುರೇಶ್ ಹಾಗೂ ಭಾರತೀಯ ಮಹಿಳಾ ಹಾಕಿ ತಂಡದ ಆಟಗಾರ್ತಿಯರನ್ನು ರಾಜ್ಯದ ಪರವಾಗಿ ಸನ್ಮಾನಿಸಿ ಗೌರವಿಸಿದರು. ಇದನ್ನೂ ಓದಿ: ಹಾಕಿಯಲ್ಲಿ ಸಾಧನೆ – ಕೊಡಗಿನಲ್ಲಿ ಅಂಕಿತಾ ಸುರೇಶ್‍ಗೆ ಅದ್ಧೂರಿ ಸ್ವಾಗತ

    ಪ್ರೋತ್ಸಾಹ  ಧನ ಕೊಡುಗೆ ಘೋಷಿಸಿದ ರಾಜ್ಯಪಾಲರು
    ಟೋಕಿಯೋ ಒಲಿಂಪಿಕ್ಸ್ ನಲ್ಲಿ ಭಾರತ ಮಹಿಳಾ ಹಾಕಿ ತಂಡದ ಸಹಾಯಕ ತರಬೇತುದಾರರಾಗಿದ್ದ ಅಂಕಿತಾ ಸುರೇಶ್ ಸೇರಿದಂತೆ ಕರ್ನಾಟಕದ ನಾಲ್ವರು ಕ್ರೀಡಾಪಟುಗಳಿಗೆ ಕರ್ನಾಟಕ ರಾಜ್ಯಪಾಲರಾದ ತಾವರ್ ಚಂದ್ ಗೆಹ್ಲೋಟ್ ತಲಾ ಒಂದು ಲಕ್ಷ ರೂ. ಪ್ರೋತ್ಸಾಹ ಧನ ಘೋಷಿಸಿದ್ದಾರೆ. ಜೊತೆಗೆ ನಾಲ್ವರಿಗೆ ಶೀಘ್ರದಲ್ಲೇ ರಾಜ ಭವನದಲ್ಲಿ ಗೌರವ ಸನ್ಮಾನ ನೀಡುವುದಾಗಿ ರಾಜ್ಯಪಾಲರು ತಿಳಿಸಿದ್ದಾರೆ. ಇದನ್ನೂ ಓದಿ: ಟೋಕಿಯೋ ಒಲಿಂಪಿಕ್ಸ್ ಹಾಕಿ ಕೋಚ್ ಅಂಕಿತಾರನ್ನು ಸನ್ಮಾನಿಸಿದ ಬೊಮ್ಮಾಯಿ

  • ಕೊಟ್ಟ ಮಾತಿನಂತೆ ಸಿಂಧು ಜೊತೆ ಐಸ್‍ಕ್ರೀಂ ಸವಿದ ಮೋದಿ

    ಕೊಟ್ಟ ಮಾತಿನಂತೆ ಸಿಂಧು ಜೊತೆ ಐಸ್‍ಕ್ರೀಂ ಸವಿದ ಮೋದಿ

    ನವದೆಹಲಿ: ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಭಾಗವಹಿಸಿ ಬಂದ ನಂತರ ನಿಮ್ಮೊಂದಿಗೆ ಐಸ್‍ಕ್ರೀಂ ಸೇವಿಸುವುದಾಗಿ ಪ್ರಧಾನಿ ನರೇಂದ್ರ ಮೋದಿ ಬ್ಯಾಡ್ಮಿಂಟನ್ ಆಟಗಾರ್ತಿ ಪಿ.ವಿ ಸಿಂಧು ಅವರಿಗೆ ಮಾತುಕೊಟ್ಟಿದ್ದರು. ಇದೀಗ ಪಿ.ವಿ ಸಿಂಧು ಜೊತೆ ಐಸ್‍ಕ್ರೀಂ ಸವಿಯುವ ಮೂಲಕ ಮೋದಿ ತಮ್ಮ ಮಾತನ್ನು ಉಳಿಸಿಕೊಂಡಿದ್ದಾರೆ.

    ಮೋದಿ ತಮ್ಮ ನಿವಾಸದಲ್ಲಿ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಭಾಗವಹಿಸಿದ ಭಾರತೀಯ ಕ್ರೀಡಾಪಟುಗಳಿಗೆ ಔತಣಕೂಟ ಏರ್ಪಡಿಸಿದ್ದರು. ಈ ವೇಳೆ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಗೆದ್ದ ಸಿಂಧು ಜೊತೆ ಕೂತು ಐಸ್‍ಕ್ರೀಂ ಸೇವಿಸುತ್ತ ಕೆಲಹೊತ್ತು ಮಾತುಕತೆ ನಡೆಸಿದ್ದಾರೆ. ಇದನ್ನೂ ಓದಿ: ಫೋಟೋ ಹಂಚಿಕೊಂಡು ಧನ್ಯವಾದ ಸಲ್ಲಿಸಿದ ಚಿನ್ನದ ಹುಡುಗ ನೀರಜ್ ಚೋಪ್ರಾ

    ಔತಣಕೂಟದಲ್ಲಿ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಭಾಗವಹಿಸಿದ ಕ್ರೀಡಾಪಟುಗಳೆಲ್ಲರೂ ಭಾಗವಹಿಸಿದ್ದರು. ಅವರೆಲ್ಲರೊಂದಿಗೆ ಮೋದಿ ಮಾತುಕತೆ ನಡೆಸಿ ಫೋಟೋಗೆ ಫೋಸ್ ನೀಡಿದ್ದಾರೆ. ಮೋದಿ ವಿಶೇಷವಾಗಿ ಚಿನ್ನದ ಹುಡುಗ ನೀರಜ್ ಚೋಪ್ರಾ ಅವರ ಮೆಚ್ಚಿನ ಚೂರ್ಮಾ ಮಾಡಿಸಿ ಊಟ ಬಡಿಸಿದ್ದಾರೆ. ಭಾರತದ ಕುಸ್ತಿಪಟುಗಳ ಮತ್ತು ಹಾಕಿ ತಂಡದ ಎಲ್ಲ ಆಟಗಾರರೊಂದಿಗೂ ಕೂಡ ಮೋದಿ ಕುಶಲೋಪರಿ ವಿಚಾರಿಸಿ ಅವರ ಸಾಧನೆಯನ್ನು ಮನಸಾರೆ ಕೊಂಡಾಡಿದರು.

  • ನೀರಜ್‌ ಚೋಪ್ರಾ ತರಬೇತಿಗಾಗಿ 7 ಕೋಟಿ ರೂ. ಖರ್ಚು ಮಾಡಿದ್ದ ಸರ್ಕಾರ

    ನೀರಜ್‌ ಚೋಪ್ರಾ ತರಬೇತಿಗಾಗಿ 7 ಕೋಟಿ ರೂ. ಖರ್ಚು ಮಾಡಿದ್ದ ಸರ್ಕಾರ

    ನವದೆಹಲಿ: ಒಲಿಂಪಿಕ್ಸ್‌ನಲ್ಲಿ ಚಿನ್ನ ಗೆದ್ದ ನೀರಜ್‌ ಚೋಪ್ರಾ ಅವರಿಗೆ ತರಬೇತಿ ನೀಡಲೆಂದು ಭಾರತ ಸರ್ಕಾರ 7 ಕೋಟಿ ರೂ. ಖರ್ಚು ಮಾಡಿದೆ.

    ನೀರಜ್‌ ಚೋಪ್ರಾ ಭಾರತದಲ್ಲಿ ಮತ್ತು ವಿದೇಶದಲ್ಲಿ ಜಾವೆಲಿನ್‌ ತರಬೇತಿ ಪಡೆದಿದ್ದರು. ಹೀಗಾಗಿ ಸರ್ಕಾರ ತರಬೇತಿ ನೀಡಲು ಎಷ್ಟು ಖರ್ಚು ಮಾಡಿತ್ತು ಎಂಬ ಪ್ರಶ್ನೆಯನ್ನು ಜನ ಸಾಮಾಜಿಕ ಜಾಲತಾಣದಲ್ಲಿ ಕೇಳುತ್ತಿದ್ದರು.

    ಈ ಪ್ರಶ್ನೆಗೆ ಭಾರತೀಯ ಕ್ರೀಡಾ ಪ್ರಾಧಿಕಾರ ಉತ್ತರ ನೀಡಿದೆ. ಟ್ವೀಟ್‌ ಮಾಡಿ ಒಟ್ಟು 7 ಕೋಟಿ ರೂ. ಹಣವನ್ನು ಸರ್ಕಾರ ಖರ್ಚು ಮಾಡಿದೆ ಎಂದು ಟ್ವಿಟ್ಟರ್‌ನಲ್ಲಿ ಹೇಳಿದೆ.

    ನೀರಜ್‌ ಚೋಪ್ರಾ 450 ದಿನ ವಿದೇಶದಲ್ಲಿ, 1,167 ದಿನ ಪಟಿಯಾಲಯದಲ್ಲಿ ತರಬೇತಿ ಪಡೆದಿದ್ದಾರೆ. ಒಟ್ಟು 177 ಜಾವೆಲಿನ್‌ಗಳನ್ನು ಸರ್ಕಾರ ಖರೀದಿಸಿದೆ. ಜಾವೆಲಿನ್‌ ಜೊತೆಗೆ 74.28 ರೂ. ಮೌಲ್ಯದ ಜಾವೆಲಿನ್‌ ಎಸೆಯುವ ಯಂತ್ರವನ್ನು ಖರೀದಿ ಮಾಡಿದೆ ಎಂದು ತಿಳಿಸಿದೆ. ಇದನ್ನೂ ಓದಿ: ನಾನು ಸಿಂಗಲ್, ಆಟದ ಮೇಲೆ ಮಾತ್ರ ನನ್ನ ಗಮನ: ನೀರಜ್ ಚೋಪ್ರಾ

    ನೀರಜ್‌ ಚೋಪ್ರಾ ಒಲಿಂಪಿಕ್ಸ್‌ ಕ್ರೀಡಾಕೂಟದಲ್ಲಿ ಎರಡನೇ ಪ್ರಯತ್ನದಲ್ಲಿ 87.58 ಮೀಟರ್ ದೂರಕ್ಕೆ ಜಾವೆಲಿನ್ ಎಸೆಯುವ ಮೂಲಕ ಚಿನ್ನಕ್ಕೆ ಗುರಿಯಿಟ್ಟರು. ಇಲ್ಲಿಯವರೆಗೆ ಅಥ್ಲೆಟಿಕ್ಸ್ ವಿಭಾಗದಲ್ಲಿ ಭಾರತ ಯಾವುದೇ ಪದಕ ಗೆದ್ದಿರಲಿಲ್ಲ. ಈಗ ನೀರಜ್‌ ಚೋಪ್ರಾ ಚಿನ್ನದ ಪದಕ ಗೆಲ್ಲುವ ಮೂಲಕ ಇತಿಹಾಸ ನಿರ್ಮಿಸಿದ್ದಾರೆ‌.

  • ಟೋಕಿಯೋ ಒಲಿಂಪಿಕ್ಸ್ ಹಾಕಿ ಕೋಚ್ ಅಂಕಿತಾರನ್ನು ಸನ್ಮಾನಿಸಿದ ಬೊಮ್ಮಾಯಿ

    ಟೋಕಿಯೋ ಒಲಿಂಪಿಕ್ಸ್ ಹಾಕಿ ಕೋಚ್ ಅಂಕಿತಾರನ್ನು ಸನ್ಮಾನಿಸಿದ ಬೊಮ್ಮಾಯಿ

    ಬೆಂಗಳೂರು: ಟೋಕಿಯೋ ಒಲಿಂಪಿಕ್ಸ್ ನಲ್ಲಿ ಭಾರತವನ್ನು ಪ್ರತಿನಿಧಿಸಿದ ಮಹಿಳಾ ಹಾಕಿ ತಂಡದ ತರಬೇತುದಾರರಲ್ಲಿ ಒಬ್ಬರಾದ ಕು. ಅಂಕಿತಾ ಸುರೇಶ್ ಅವರನ್ನು ಸಿಎಂ ಬಸವರಾಜ ಬೊಮ್ಮಾಯಿ ಅವರು ಸನ್ಮಾನಿಸಿದ್ದಾರೆ.

    ಟೋಕಿಯೋ ಒಲಂಪಿಕ್ಸ್ ಕ್ರೀಡಾಕೂಟದಲ್ಲಿ ಭಾರತ ಮಹಿಳಾ ಹಾಕಿ ತಂಡ ಅತ್ಯುತ್ತಮ ಪ್ರದರ್ಶನ ತೋರಿದೆ. ಪದಕ ಗೆಲ್ಲಲು ಸಾಧ್ಯವಾಗದಿದ್ದರೂ ಭಾರತೀಯರ ಮನಸ್ಸನ್ನು ಮಹಿಳಾ ತಂಡ ಗೆದ್ದಿದ್ದು, ತಂಡದ ತರಬೇತಿದಾರರಿಗೆ ತುಂಬು ಹೃದಯದ ಧನ್ಯವಾದಗಳು. ಕನ್ನಡದ ಯುವತಿ ಭಾರತ ತಂಡದ ಕೋಚ್ ಆಗಿರುವುದು ನಮ್ಮೆಲ್ಲರಿಗೂ ಹೆಮ್ಮೆಯ ಸಂಗತಿ ಎಂದು ಬೊಮ್ಮಾಯಿ, ಅಂಕಿತಾ ಅವರಿಗೆ ಅಭಿನಂದನೆ ಸಲ್ಲಿಸಿದರು. ಇದನ್ನೂ ಓದಿ: ಹಾಕಿಯಲ್ಲಿ ಸಾಧನೆ – ಕೊಡಗಿನಲ್ಲಿ ಅಂಕಿತಾ ಸುರೇಶ್‍ಗೆ ಅದ್ಧೂರಿ ಸ್ವಾಗತ

    ಅಂಕಿತಾ ಅವರು ಮಡಿಕೇರಿ ಮೂಲದವರಾಗಿದ್ದು, ಇವರ ತರಬೇತಿಯಲ್ಲಿ ಪಳಗಿದ ದೇಶದ ಮಹಿಳಾ ಹಾಕಿ ತಂಡ ಬಲಿಷ್ಠವಾಗಿದೆ. ಕಳೆದ ಎರಡು ವರ್ಷಗಳಿಂದ ಭಾರತೀಯ ಮಹಿಳಾ ಹಾಕಿ ತಂಡಕ್ಕೆ ಅಂಕಿತಾ ತರಬೇತಿ ನೀಡುತ್ತಿದ್ದಾರೆ. ಪ್ರಥಮ ಬಾರಿಗೆ ಒಲಂಪಿಕ್ಸ್ ನಲ್ಲಿ ಮಹಿಳಾ ತಂಡ ಸೆಮಿಫೈನಲ್ ಹಂತಕ್ಕೆ ತೇರ್ಗಡೆಗೊಂಡು ಅಮೋಘ ಸಾಧನೆ ಮಾಡಿದ್ದು ಅವರಿಗೆ ಹಾಗೂ ಭಾರತೀಯ ಮಹಿಳಾ ಹಾಕಿ ತಂಡಕ್ಕೆ ಅಭಿನಂದನೆಗಳನ್ನು ಸಲ್ಲಿಸಿ ಸಿಎಂ ಸಂತಸ ವ್ಯಕ್ತಪಡಿಸಿದರು.

  • ಹಾಕಿಯಲ್ಲಿ ಸಾಧನೆ – ಕೊಡಗಿನಲ್ಲಿ ಅಂಕಿತಾ ಸುರೇಶ್‍ಗೆ ಅದ್ಧೂರಿ ಸ್ವಾಗತ

    ಹಾಕಿಯಲ್ಲಿ ಸಾಧನೆ – ಕೊಡಗಿನಲ್ಲಿ ಅಂಕಿತಾ ಸುರೇಶ್‍ಗೆ ಅದ್ಧೂರಿ ಸ್ವಾಗತ

    ಮಡಿಕೇರಿ: ಭಾರತದ ಮಹಿಳಾ ಹಾಕಿ ತಂಡದ ಸಹಾಯಕ ಕೋಚ್ ಅಂಕಿತಾ ಸುರೇಶ್ ಅವರನ್ನು ಅದ್ಧೂರಿಯಾಗಿ ಜನತೆ ಸ್ವಾಗತಿಸಿದ್ದಾರೆ.

    ಟೋಕಿಯೋ ಒಲಿಂಪಿಕ್ಸ್ ನಲ್ಲಿ ಉತ್ತಮವಾಗಿ ಆಡಿ ಭಾರತ ತಂಡ ನಾಲ್ಕನೇಯ ಸ್ಥಾನ ಪಡೆಯುವ ಮೂಲಕ ವಿಶೇಷ ಸಾಧನೆ ಮಾಡಿದೆ. ಈ ಸಾಧನೆಯ ಹಿಂದೆ ಸಹಾಯಕ ಕೋಚ್ ಆಗಿ ಕಾರ್ಯ ನಿರ್ವಹಿಸಿದ ಅಂಕಿತಾ ಸುರೇಶ್ ಅವರ ಹಾಕಿ ಕೈಚಳಕ ಕೂಡ ಪ್ರಮುಖ ಪಾತ್ರವಹಿಸಿದೆ.

    ಈ ಹಿನ್ನೆಲೆಯಲ್ಲಿ ಅಂಕಿತಾ ನಮ್ಮ ಮನೆಯ ಮಗಳೆಂಬ ಅಭಿಮಾನದಿಂದ ಕುಶಾಲನಗರ ಸುಂಟಿಕೊಪ್ಪ ಕಂಬಿಬಾಣೆ ನಾಗರಿಕರು ಇಂದು ಒಲಿಂಪಿಕ್ಸ್ ಕ್ರೀಡಾಕೂಟದಿಂದ ತವರಿಗೆ ಹಿಂತಿರುಗಿದ ಅಂಕಿತಾ ಸುರೇಶ್ ಹಾಗೂ ಅವರ ಪತಿ ಸುರೇಶ್ ಅವರನ್ನು ಅದ್ಧೂರಿಯಾಗಿ ಸ್ವಾಗತಿಸಿ ಆತ್ಮೀಯವಾಗಿ ಬರಮಾಡಿಕೊಂಡರು.  ಇದನ್ನೂ ಓದಿ: ಕ್ರೀಡೆಯಲ್ಲಿ ಅಲ್ಲ, ಒಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಮತ್ತೊಂದು ‘ಚಿನ್ನ’

    ಈ ವೇಳೆ ಮಾತಾನಾಡಿದ ಅಂಕಿತಾ ಸುರೇಶ್ ಅವರು, ಹಾಕಿ ತಂಡಕ್ಕೆ ಆಯ್ಕೆಯಾಗಿದ್ದು ಒಮ್ಮೆಲೇ ಆಶ್ಚರ್ಯಗೊಂಡಿತ್ತು. ಹಾಕಿಯಲ್ಲಿ ಬಲಿಷ್ಠ ಎಂಬುದನ್ನು ಇಡೀ ಪ್ರಪಂಚಕ್ಕೆ ಭಾರತ ತೋರಿಸಿಕೊಟ್ಟಿದೆ ಎಂದರು.

    ಕ್ರೀಡಾಪಟುಗಳಿಗೆ ಪ್ರಧಾನಿ ನರೇಂದ್ರಮೋದಿ ಅವರು ಕರೆ ಮಾಡಿ ಪ್ರೋತ್ಸಾಹಿಸಿದ್ದು ತಂಡಕ್ಕೆ ಇನ್ನಷ್ಟು ಹುಮ್ಮಸ್ಸು ತುಂಬಿತು. ಪದಕ ಗೆಲ್ಲಲು ಸಾಧ್ಯವಾಗದೇ ಇದ್ದರೂ ರಾಷ್ಟ್ರದ ಹೆಸರನ್ನು ಉಳಿಸಿದ ಹೆಮ್ಮೆ ನಮಗಿದೆ. ಕೊಡಗಿನ ಹೆಬ್ಬಾಗಿಲಿನಿಂದ ಸುಂಟಿಕೊಪ್ಪದವರೆಗೆ ಅದ್ಧೂರಿ ಸ್ವಾಗತ ಕೋರಿರುವುದು ಮರೆಯಲಾರದ ಕ್ಷಣ. ಅಷ್ಟೇ ಅಲ್ಲದೇ ಸಣ್ಣ ವಯಸ್ಸಿನಿಂದ ಕಷ್ಟ ಪಟ್ಟು ಬೆಳೆದು ಈಗ ಈ ಸ್ಥಾನಕ್ಕೆ ಹೋಗಿ ಬಂದಿರುವುದು ನಿಜವಾಗಿಯೂ ಸಂತೋಷದ ವಿಷಯ ಎಂದು ಸಂತಸ ಹಂಚಿಕೊಡರು.