Tag: tokyo olympic

  • ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಚಿನ್ನ ಗೆದ್ದ ನೀರಜ್‌ ಚೋಪ್ರಾಗೆ ಪರಮ ವಿಶಿಷ್ಟ ಸೇವಾ ಪದಕ

    ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಚಿನ್ನ ಗೆದ್ದ ನೀರಜ್‌ ಚೋಪ್ರಾಗೆ ಪರಮ ವಿಶಿಷ್ಟ ಸೇವಾ ಪದಕ

    ನವದೆಹಲಿ: ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಜಾವೆಲಿನ್‌ ಎಸೆತದಲ್ಲಿ ಚಿನ್ನದ ಪದಕ ಜಯಿಸಿದ್ದ ನೀರಜ್‌ ಚೋಪ್ರಾ ಅವರು ಪರಮ ವಿಶಿಷ್ಟ ಸೇವಾ ಪದಕಕ್ಕೆ ಭಾಜನರಾಗಿದ್ದಾರೆ.

    NEERAJ

    ಗಣರಾಜ್ಯೋತ್ಸವ ದಿನದಂದು ರಾಷ್ಟ್ರಪತಿ ಭವನದಲ್ಲಿ ರಾಮನಾಥ್‌ ಕೋವಿಂದ್‌ ಅವರು ಪದಕ ಪ್ರದಾನ ಮಾಡಲಿದ್ದಾರೆ. ಇದೇ ವೇಳೆ 384 ರಕ್ಷಣಾ ಸಿಬ್ಬಂದಿಗೆ ಶೌರ್ಯ ಪ್ರಶಸ್ತಿ ಹಾಗೂ ವಿವಿಧ ಪ್ರಶಸ್ತಿಗಳನ್ನು ನೀಡಲಿದ್ದಾರೆ. ಇದನ್ನೂ ಓದಿ: ಭಾರತದ ಇಬ್ಬರು ಆಟಗಾರರನ್ನು ಹೊರತು ಪಡಿಸಿದರೆ ಉಳಿದವರ ಬಗ್ಗೆ ಪಾಕಿಸ್ತಾನ ತಲೆಕೆಡಿಸಿಕೊಳ್ಳಲ್ಲ: ಹಫೀಜ್

    ಕಳೆದ ವರ್ಷ ನಡೆದ ಟೋಕಿಯೊ ಒಲಿಂಪಿಕ್ಸ್‌ನಲ್ಲಿ 87.58 ಮೀಟರ್‌ ದೂರ ಜಾವೆಲಿನ್‌ ಎಸೆಯುವ ಮೂಲಕ ನೀರಜ್‌ ಚೋಪ್ರಾ ಚಿನ್ನದ ಪದಕ ಜಯಿಸಿ ಇತಿಹಾಸ ನಿರ್ಮಿಸಿದ್ದರು.

    NEERAJ

    ಐತಿಹಾಸಿಕ ಸಾಧನೆಗಾಗಿ ನೀರಜ್‌ ಚೋಪ್ರಾ ಅವರಿಗೆ ಕ್ರೀಡಾ ಕ್ಷೇತ್ರದ ಅತ್ಯುತ್ತಮ ಪ್ರಶಸ್ತಿಯಾದ ಮೇಜರ್‌ ಧ್ಯಾನ್‌ಚಂದ್‌ ಖೇಲ್‌ ರತ್ನಾ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿತ್ತು. ಇದನ್ನೂ ಓದಿ: ಪ್ರೊ ಕಬಡ್ಡಿಗೆ ಕೊರೊನಾ ಅಡ್ಡಿ – ಇಂದಿನಿಂದ ಜ.28ರ ವರೆಗೆ ಪ್ರತಿದಿನ 1 ಪಂದ್ಯ

  • ರೈಲ್ವೆ ಉದ್ಯೋಗ ತೊರೆದು ಪೊಲೀಸ್‌ ಇಲಾಖೆ ಸೇರಿದ ಟೋಕಿಯೊ ಒಲಿಂಪಿಕ್ಸ್‌ ಬೆಳ್ಳಿ ವಿಜೇತೆ

    ರೈಲ್ವೆ ಉದ್ಯೋಗ ತೊರೆದು ಪೊಲೀಸ್‌ ಇಲಾಖೆ ಸೇರಿದ ಟೋಕಿಯೊ ಒಲಿಂಪಿಕ್ಸ್‌ ಬೆಳ್ಳಿ ವಿಜೇತೆ

    ಇಂಪಾಲ್: ಟೋಕಿಯೊ ಒಲಿಂಪಿಕ್ಸ್‌ನಲ್ಲಿ ವೇಟ್‌ಲಿಫ್ಟಿಂಗ್‌ ವಿಭಾಗದಲ್ಲಿ ಭಾರತಕ್ಕೆ ಬೆಳ್ಳಿ ಪದಕ ಗೆದ್ದುಕೊಟ್ಟ ಮೀರಾಬಾಯಿ ಚಾನು ಅವರು ಈಗ ಮಣಿಪುರ ಪೊಲೀಸ್‌ ಇಲಾಖೆಯಲ್ಲಿ ಅಡಿಷನಲ್‌ ಸೂಪರಿಂಟೆಂಡೆಂಟ್‌ ಆಫ್‌ ಪೊಲೀಸ್‌ (ಎಎಸ್‌ಪಿ) ಆಗಿ ಅಧಿಕಾರ ವಹಿಸಿಕೊಂಡಿದ್ದಾರೆ.

    ಟೋಕಿಯೊ ಒಲಿಂಪಿಕ್ಸ್‌ನಲ್ಲಿ 49 ಕೆಜಿ ವೇಟ್‌ಲಿಫ್ಟಿಂಗ್‌ ವಿಭಾಗದಲ್ಲಿ ಮೀರಾಬಾಯಿ ಬೆಳ್ಳಿ ಪದಕ ಜಯಿಸಿದ್ದರು. ಈ ಒಲಿಂಪಿಕ್ಸ್‌ನಲ್ಲಿ ಮೀರಾಬಾಯಿ ಅವರದ್ದೇ ಮೊದಲ ಪದಕವಾಗಿತ್ತು. ಇದನ್ನೂ ಓದಿ: ಟೀಂ ಇಂಡಿಯಾದ ಟೆಸ್ಟ್ ನಾಯಕತ್ವ ತೊರೆದ ವಿರಾಟ್ ಕೊಹ್ಲಿ

    ಮೀರಾ ಭಾರತಕ್ಕೆ ಪದಕ ತಂದುಕೊಟ್ಟ ಸಾಧನೆಗಾಗಿ ಅವರಿಗೆ ಎಎಸ್‌ಪಿ ಹುದ್ದೆ ನೀಡುವುದಾಗಿ ಮಣಿಪುರ ಸರ್ಕಾರ ಘೋಷಿಸಿತ್ತು. ಆಗಾಗಲೇ ಮೀರಾಬಾಯಿ ರೈಲ್ವೆ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದರು. ಆ ವೃತ್ತಿಯನ್ನು ತೊರೆದು ಪೊಲೀಸ್‌ ಇಲಾಖೆಗೆ ಸೇರುವಂತೆ ಸಿಎಂ ಬಿರೇನ್‌ ಸಿಂಗ್‌ ಸಲಹೆ ನೀಡಿದ್ದರು.

    ಒಲಿಂಪಿಕ್ಸ್‌ ಕ್ರೀಡಾಕೂಟದಲ್ಲಿ 21 ವರ್ಷಗಳ ಬಳಿಕ ವೇಟ್‌ಲಿಫ್ಟಿಂಗ್ ವಿಭಾಗದಲ್ಲಿ ಭಾರತಕ್ಕೆ ಪದಕ ತಂದುಕೊಟ್ಟು ಮೀರಾಬಾಯಿ ಸಾಧನೆ ಮಾಡಿದರು. ಇದನ್ನೂ ಓದಿ: ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಕಂಚು ಗೆದ್ದಿದ್ದ ಬಾಕ್ಸರ್ ಲವ್ಲಿನಾ ಈಗ ಡಿಎಸ್‌ಪಿ

  • ಯತಿರಾಜ್‌ಗೆ ಕರ್ನಾಟಕ ಸರ್ಕಾರದಿಂದ ಸನ್ಮಾನ

    ಯತಿರಾಜ್‌ಗೆ ಕರ್ನಾಟಕ ಸರ್ಕಾರದಿಂದ ಸನ್ಮಾನ

    ಬೆಂಗಳೂರು: ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ವತಿಯಿಂದ ರಾಜಭವನದಲ್ಲಿ ಆಯೋಜಿಸಿದ್ದ ಟೋಕಿಯೋ ಒಲಂಪಿಕ್ಸ್ ಮತ್ತು ಪ್ಯಾರಾಲಂಪಿಕ್ಸ್‌ನಲ್ಲಿ ಭಾಗವಹಿಸಿದ್ದ ಕ್ರೀಡಾಪಟುಗಳು ಮತ್ತು ತರಬೇತುದಾರನ್ನು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ತಲಾ ಒಂದು ಲಕ್ಷ ರೂ. ನೀಡಿ ಸನ್ಮಾನಿಸಿದರು.

    Rajabhavana

    ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, ರೇಷ್ಮೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಚಿವರಾದ ಡಾ. ಕೆಸಿ ನಾರಾಯಣ ಗೌಡ ಅವರು, ಕರ್ನಾಟಕ ಒಲಂಪಿಕ್ಸ್‌  ಸಂಸ್ಥೆ ಅಧ್ಯಕ್ಷರು, ಪರಿಷತ್ ಸದಸ್ಯರಾದ ಗೋವಿಂದರಾಜು ಸೇರಿದಂತೆ ಇಲಾಖೆಯ ಅಧಿಕಾರಿಗಳು ಭಾಗವಹಿಸಿದ್ದರು. ಇದನ್ನೂ ಓದಿ: ಪಕ್ಷದ ವರಿಷ್ಠರು ಒಪ್ಪಿದರೆ ರಾಜ್ಯ ರಾಜಕಾರಣಕ್ಕೆ ಪ್ರವೇಶಿಸುತ್ತೇನೆ: ಬಿ.ವೈ ರಾಘವೇಂದ್ರ

  • ಟೋಕಿಯೋ ಒಲಿಂಪಿಕ್​ನಲ್ಲಿರುವ ಜೋಡಿ ಹಕ್ಕಿಗಳಿವರು

    ಟೋಕಿಯೋ ಒಲಿಂಪಿಕ್​ನಲ್ಲಿರುವ ಜೋಡಿ ಹಕ್ಕಿಗಳಿವರು

    ಟೋಕಿಯೋ: ವಿಶ್ವದ ಕ್ರೀಡಾ ಹಬ್ಬ ಒಲಿಂಪಿಕ್ಸ್ ಈ ಬಾರಿ ಜಪಾನ್‍ನ ಟೋಕಿಯೋದಲ್ಲಿ ನಡೆಯುತ್ತಿದೆ. ಇಲ್ಲಿ ಭಾರತದ ದಂಪತಿ ಸಹಿತ ಕೆಲ ಜೋಡಿಗಳು ಸ್ಪರ್ಧಿಗಳಾಗಿ ತಮ್ಮ ತಮ್ಮ ದೇಶವನ್ನು ಪ್ರತಿನಿಧಿಸುತ್ತಿದ್ದಾರೆ.

    ಒಲಿಂಪಿಕ್ಸ್ ನಲ್ಲಿ ತಮ್ಮ ದೇಶಕ್ಕಾಗಿ ಪದಕ ಬೇಟೆಗೆ ಸಿದ್ಧವಾಗಿರುವ ಕ್ರೀಡಾಪಟುಗಳಲ್ಲಿ ಕೆಲ ದಂಪತಿ ಒಟ್ಟಿಗೆ ಸ್ಪರ್ಧೆ ಮಾಡುತ್ತಿದ್ದಾರೆ. ಇವರಲ್ಲಿ ಕೆಲವರು ಈಗಾಗಲೇ ಮದುವೆ ಆಗಿದ್ದರೆ, ಕೆಲವರು ಡೆಟಿಂಗ್‍ನಲ್ಲಿದ್ದಾರೆ. ಕೆಲವರು ಎಂಗೆಂಜ್ ಆದವರು ಕೂಡ ಇದ್ದಾರೆ.

    ಟೋಕಿಯೋ ಒಲಿಂಪಿಕ್ಸ್ ಭಾಗವಹಿಸಿದ ಭಾರತದ ಹೆಮ್ಮೆಯ ಆರ್ಚರಿ ಪಟುಗಳಾದ ದೀಪಿಕಾ ಕುಮಾರಿ ಮತ್ತು ಅತನುದಾಸ್ ಮೊದಲನೇ ಜೋಡಿ ಹಕ್ಕಿ ಇವರು ಒಲಿಂಪಿಕ್ಸ್ ಭಾಗವಹಿಸುವ ಕೆಲ ತಿಂಗಳ ಹಿಂದೆ ಮದುವೆಯಾಗಿದ್ದರು. ಇದೀಗ ಒಟ್ಟಿಗೆ ಟೋಕಿಯೋ ಒಲಿಂಪಿಕ್ಸ್‍ನಲ್ಲಿ ಆರ್ಚರಿ ಸ್ಪರ್ಧೆಯಲ್ಲಿ ಭಾಗವಹಿಸುತ್ತಿದ್ದಾರೆ. ಇದನ್ನೂ ಓದಿ: ಡಿಸ್ಕಸ್ ಥ್ರೋನಲ್ಲಿ ಕಮಲ್‍ಪ್ರೀತ್ ಅಚ್ಚರಿ- ಫೈನಲ್‍ಗೆ ಲಗ್ಗೆ

    ಎರಡನೇ ಜೋಡಿ ಅಮೆರಿಕದ ತಾರಾ ಡೇವಿಸ್ ಮತ್ತು ಹಂಟರ್ ವುಡ್ಹಾಲ್ ಆಗಿದ್ದು, ಇವರಿಬ್ಬರೂ ಕೂಡ ಟ್ರ್ಯಾಕ್ ಆ್ಯಂಡ್ ಫೀಲ್ಡ್ ವಿಭಾಗದಲ್ಲಿ ಸ್ಪರ್ಧಿಸುತ್ತಿದ್ದಾರೆ. ಇಬ್ಬರೂ ಕೂಡ ಪದಕ ಗೆಲ್ಲುವ ನಿರೀಕ್ಷೆ ಹೊಂದಿದ್ದಾರೆ.

    ಮೂರನೇ ಜೋಡಿ ಇಂಗ್ಲೆಂಡ್‍ನ ಲಾರಾ ಮತ್ತು ಜೇಸನ್ ಕೆನ್ನಿ ಇವರಿಬ್ಬರು ಕೂಡ ತಮ್ಮ ದೇಶದ ಪರವಾಗಿ ಸೈಕ್ಲಿಂಗ್ ಸ್ಪರ್ಧೆಯಲ್ಲಿ ಭಾಗವಹಿಸುತ್ತಿದ್ದಾರೆ. ಜೊತೆಯಾಗಿ ಸ್ಪರ್ಧಿಸುವ ದಂಪತಿ ಈ ಹಿಂದಿನ ಕ್ರೀಡಾಕೂಟಗಳಲ್ಲಿ ಹತ್ತಕ್ಕೂ ಹೆಚ್ಚು ಚಿನ್ನದ ಪದಕವನ್ನು ಗೆದ್ದಿದ್ದಾರೆ.

    ಸ್ಯಾಂಡಿ ಮೋರಿಸ್ ಅಮೆರಿಕ ಪರ ಟ್ರ್ಯಾಕ್ ಆ್ಯಂಡ್ ಫೀಲ್ಡ್ ವಿಭಾಗದಲ್ಲಿ ಸ್ಪರ್ಧಿಸಿದರೆ, ಗಂಡ ಟೈರೋನ್ ಸ್ಮಿತ್ ಅಮೆರಿಕ ಪರ ಲಾಂಕ್ ಜಂಪ್ ಸ್ಪರ್ಧಿಯಾಗಿದ್ದಾರೆ. ಇವರಿಬ್ಬರೂ ಕೂಡ 2019ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಇದೀಗ ಒಲಿಂಪಿಕ್ಸ್‍ನಲ್ಲಿ ತಮ್ಮ ದೇಶದ ಪರ ಆಡುತ್ತಿದ್ದಾರೆ.

    ಷಾರ್ಲೆಟ್ ಕಾಸ್ಲಿಕ್ ಮತ್ತು ಲೂಯಿಸ್ ಹಾಲೆಂಡ್ ಆಸ್ಟ್ರೇಲಿಯಾದ ಜೋಡಿ ಹಕ್ಕಿಗಳಾಗಿದ್ದು, ಇವರಿಬ್ಬರು ಕೂಡ ಆಸ್ಟ್ರೇಲಿಯಾದ ಪುರುಷ ಮತ್ತು ಮಹಿಳಾ ತಂಡದ ರಗ್ಬಿ ತಂಡದಲ್ಲಿದ್ದಾರೆ. ಕಳೆದ ವರ್ಷ ಇವರಿಬ್ಬರಿಗೆ ಮದುವೆ ನಿಶ್ಚಯವಾಗಿತ್ತು. ಆ ಬಳಿಕ ಕೋವಿಡ್‍ನಿಂದಾಗಿ ಮುಂದೂಡಲ್ಪಟ್ಟಿತ್ತು.

    ಗರೆಕ್ ಮೈನ್‍ಹಾರ್ಡ್ ಮತ್ತು ಲೀ ಕೀಫರ್ ದಂಪತಿ ಅಮೆರಿಕ ಪರ ಫೆನ್ನಿಂಗ್ ಸ್ಪರ್ಧೆಯಲ್ಲಿ ಭಾಗವಹಿಸುತ್ತಿದ್ದು, ಈ ಬಾರಿ ಪದಕ ಗೆಲ್ಲುವ ನೆಚ್ಚಿನ ಜೋಡಿಯಲ್ಲಿ ಒಂದಾಗಿದೆ. ತಮ್ಮ ತಮ್ಮ ದೇಶಕ್ಕಾಗಿ ಕ್ರೀಡೆಯಲ್ಲಿ ಭಾಗವಹಿಸುತ್ತಿರುವ ಈ ಜೋಡಿ ಹಕ್ಕಿಗಳು ಆಟದೊಂದಿಗೆ ಟೋಕಿಯೋದಲ್ಲಿ ಕಂಗೊಳಿಸುತ್ತಿದ್ದು, ಯಾವ ಜೋಡಿ ಪದಕಗಳಿಗೆ ಕೊರಳೊಡ್ಡಿ ಸಿಹಿ ಅನುಭವಿಸುತ್ತದೆ ಎಂಬುದನ್ನು ಕಾದು ನೋಡಬೇಕಿದೆ.

  • ನಾಳೆ ಭಾರತಕ್ಕೆ ಹಿಂದಿರುಗಲಿದ್ದಾರೆ ಮೀರಾಬಾಯಿ ಚಾನು

    ನಾಳೆ ಭಾರತಕ್ಕೆ ಹಿಂದಿರುಗಲಿದ್ದಾರೆ ಮೀರಾಬಾಯಿ ಚಾನು

    ಟೋಕಿಯೋ: ಒಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಮೊದಲ ಪದಕ ಗೆದ್ದು ಕೊಟ್ಟ ವೇಟ್‍ಲಿಫ್ಟರ್ ಮೀರಾಬಾಯಿ ಚಾನು ಜುಲೈ 26ಕ್ಕೆ ಭಾರತಕ್ಕೆ ಹಿಂದಿರುಗಲಿದ್ದಾರೆ.

    ಟೋಕಿಯೋ ಒಲಿಂಪಿಕ್ಸ್‌ನಲ್ಲಿ 49 ಕೆ.ಜಿ ವಿಭಾಗದ ವೇಟ್‍ಲಿಫ್ಟಿಂಗ್‍ನಲ್ಲಿ 26 ವರ್ಷದ ಮೀರಾಬಾಯಿ ಚಾನು ಬೆಳ್ಳಿ ಪದಕ ಗೆದ್ದಿದ್ದರು. ಈ ಮೂಲಕ ಯಶಸ್ವಿಯಾಗಿ ತನ್ನ ಸ್ಪರ್ಧೆ ಮುಗಿಸಿರುವ ಮೀರಾಬಾಯಿ ಚಾನು ನಾಳೆ ನವದೆಹಲಿಯ ಇಂದಿರಾ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಜೆ ವೇಳೆಗೆ ಬಂದಿಳಿಯಲಿದ್ದಾರೆ ಎಂದು ವರದಿಯಾಗಿದೆ. ಇದನ್ನೂ ಓದಿ: ಬೆಳ್ಳಿ ಪದಕ ಗೆದ್ದ ಮೀರಾಬಾಯಿಗೆ ಡೊಮಿನೊಸ್ ಕಡೆಯಿಂದ ಜೀವನ ಪೂರ್ತಿ ಪಿಜ್ಜಾ

    49 ಕೆಜಿ ವಿಭಾಗದ ಭಾರ ಎತ್ತುವ ಸ್ಪರ್ಧೆಯಲ್ಲಿ ಮೀರಾಬಾಯಿ ಚಾನು ಬೆಳ್ಳಿ ಪದಕ ಗೆದ್ದು ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಮೊದಲ ಪದಕ ಗಳಿಸಿ ಕೊಟ್ಟ ಕೀರ್ತಿಗೆ ಭಾಜನರಾಗಿದ್ದಾರೆ. ಚೀನಾದ ಹೊ ಜಿಹೂಹು ಒಟ್ಟು 210 ಕೆಜಿ (94+116 ಕೆಜಿ) ಭಾರ ಎತ್ತಿ ಚಿನ್ನದ ಪದಕ ಬೇಟೆಯಾಡಿದರೆ, ಮೀರಾಬಾಯಿ ಚಾನು 202 ಕೆಜಿ (87+115 ಕೆಜಿ) ಭಾರ ಎತ್ತಿ ಬೆಳ್ಳಿ ಪದಕವನ್ನು ತಮ್ಮದಾಗಿಸಿಕೊಂಡರು. ಇಂಡೋನೇಷ್ಯಾದ ಐಸಾಹ್ ವಿಂಡಿ ಕಾಂಟಿಕಾ ವಿಂಡಿ 194 ಕೆಜಿ (84+110ಕೆಜಿ) ಕಂಚಿನ ಪದಕ ಪಡೆದರು.

    84 ಕೆಜಿ ಮತ್ತು 87 ಕೆಜಿ ಭಾರವನ್ನು ಯಶಸ್ವಿಯಾಗಿ ಎತ್ತಿದ ಮಿರಾಬಾಯ್ ಚಾನು 89 ಕೆಜಿ ಭಾರ ಎತ್ತುವಲ್ಲಿ ವಿಫಲರಾದರು. ಆದರೆ ಚೀನಾದ ಸ್ಪರ್ಧಿ ಜಿಹೂಹು 94 ಕೆಜಿ ಭಾರ ಎತ್ತಿ ಒಲಿಂಪಿಕ್ ದಾಖಲೆ ಬರೆದರು. ಇದು ಒಲಿಂಪಿಕ್ಸ್‍ನಲ್ಲಿ ಭಾರ ಎತ್ತುವ ಸ್ಪರ್ಧೆಯಲ್ಲಿ ಭಾರತದ ಶ್ರೇಷ್ಠ ಸಾಧನೆಯಾಗಿದೆ. ಈ ಹಿಂದೆ ಸಿಡ್ನಿ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಕರ್ಣಂ ಮಲ್ಲೇಶ್ವರಿ ಕಂಚಿನ ಪದಕ ಗೆದ್ದು ಸಾಧನೆ ಮಾಡಿದ್ದರು. 69 ಕೆಜಿ ವಿಭಾಗದಲ್ಲಿ ಕರ್ಣಂ ಮಲ್ಲೇಶ್ವರಿ ಅವರು ಕಂಚಿನ ಪದಕ ಗಳಿಸಿದ್ದರು.

  • ಒಲಿಂಪಿಕ್ಸ್‌ನಲ್ಲಿ ಪದಕ ಗೆದ್ರೆ ಕೋಚ್, ಕ್ರೀಡಾಪಟುವಿಗೆ ಸಿಗಲಿದೆ ನಗದು ಬಹುಮಾನ

    ಒಲಿಂಪಿಕ್ಸ್‌ನಲ್ಲಿ ಪದಕ ಗೆದ್ರೆ ಕೋಚ್, ಕ್ರೀಡಾಪಟುವಿಗೆ ಸಿಗಲಿದೆ ನಗದು ಬಹುಮಾನ

    ಟೋಕಿಯೋ: ಜಪಾನ್‍ನಲ್ಲಿ ನಡೆಯುತ್ತಿರುವ ಟೋಕಿಯೋ  ಒಲಿಂಪಿಕ್ಸ್‌ನಲ್ಲಿ ಪದಕ ಗೆಲ್ಲುವ ಕ್ರೀಡಾಪಟುಗಳಿಗೆ ಮತ್ತು ಅವರ ತರಬೇತುದಾರರಿಗೆ ಭಾರೀ ಮೊತ್ತದ ನಗದು ಬಹುಮಾನವನ್ನು ಭಾರತೀಯ ಒಲಿಂಪಿಕ್ಸ್ ಅಸೋಸಿಯೇಷನ್(ಐಒಎ) ಘೋಷಿಸಿದೆ.

    ಒಲಿಂಪಿಕ್ಸ್‍ನಲ್ಲಿ ಭಾಗವಹಿಸಿರು ಭಾರತೀಯ ಕ್ರೀಡಾಪಟುಗಳು ಚಿನ್ನ, ಬೆಳ್ಳಿ, ಕಂಚು ಯಾವುದೇ ಪದಕ ಗೆದ್ದರೂ ಕೂಡ ನಗದು ಬಹುಮಾನ ಘೋಷಿಸಿದ್ದ ಐಒಎ ಇದೀಗ ಅಥ್ಲೀಟ್ಸ್ ಜೊತೆ ಅವರ ಕೋಚ್‍ಗಳಿಗೂ ಕೂಡ ನಗದು ಬಹುಮಾನವನ್ನು ಘೋಷಿಸಿದೆ.

    ಟೋಕಿಯೋ ಒಲಿಂಪಿಕ್ಸ್‌ನ ಮಹಿಳೆಯರ 49 ಕೆಜಿ ವಿಭಾಗದ ವೇಟ್‍ಲಿಫ್ಟಿಂಗ್‍ನಲ್ಲಿ ಬೆಳ್ಳಿ ಪದಕ ಗೆದ್ದು ಭಾರತಕ್ಕೆ ಮೊದಲ ಪದಕ ತಂದುಕೊಟ್ಟ ಮೀರಾಬಾಯಿ ಚಾನು ಅವರ ಕೋಚ್ ವಿಜಯ್ ಶರ್ಮಾ ಅವರಿಗೆ 10ಲಕ್ಷ ರೂಪಾಯಿ ನಗದು ಬಹುಮಾನ ಘೋಷಿಸಿದೆ. ಇದನ್ನೂ ಓದಿ: ನನ್ನ ದೇಶಕ್ಕಾಗಿ ಬೆಳ್ಳಿ ಪದಕ ಗೆದ್ದಿದ್ದು ಅತೀವ ಆನಂದ ನೀಡಿದೆ: ಮೀರಾಬಾಯಿ ಚಾನು

    ಇದಲ್ಲದೆ ಇನ್ನೂ ಮುಂದೆ ಚಿನ್ನದ ಪದಕ ಗೆದ್ದ ಕ್ರೀಡಾಪಟುಗಳ ಕೋಚ್‍ಗಳಿಗೆ 12.5 ಲಕ್ಷ ರೂಪಾಯಿ, ಬೆಳ್ಳಿ ಗೆದ್ದರೆ 10 ಲಕ್ಷ ರೂಪಾಯಿ ಮತ್ತು ಕಂಚು ಗೆದ್ದರೆ 7.5 ಲಕ್ಷ ರೂಪಾಯಿ ಕೊಡುವುದಾಗಿ ಐಒಎ ತಿಳಿಸಿದೆ.

    ಈ ಕುರಿತು ಮಾತನಾಡಿದ ಐಒಎನ ಪ್ರಧಾನ ಕಾರ್ಯದರ್ಶಿ ರಾಜೀವ್ ಮೆಹ್ತಾ ಅವರು, ಪದಕ ಗೆಲ್ಲುವ ಕ್ರೀಡಾಪಟುಗಳೊಂದಿಗೆ ಅವರ ಕೋಚ್‍ಗಳಿಗೂ ನಗದು ಬಹುಮಾನವನ್ನು ಘೋಷಿಸಲಾಗಿದ್ದು, ಪ್ರತಿದಿನ ಕ್ರೀಡಾಪಟುಗಳೊಂದಿಗೆ ಅವರ ಕೋಚ್‍ಗಳು ಕೂಡ ಶ್ರಮ ವಹಿಸುತ್ತಾರೆ. ಹಾಗಾಗಿ ಅವರಿಗೂ ಕೂಡ ಗೌರವಿಸಲು ನಿರ್ಧರಿಸಿದ್ದೇವೆ ಎಂದರು.

    ಈ ಹಿಂದೆ ರಾಷ್ಟ್ರೀಯ ಫೆಡರೇಶನ್(ಎನ್‍ಎಸ್‍ಎಫ್) ಚಿನ್ನದ ಪದಕ ಗೆಲ್ಲುವ ಕ್ರೀಡಾಪಟುವಿಗೆ 25 ಲಕ್ಷ ರೂಪಾಯಿ ಬೋನಸ್ ಜೊತೆ 75 ಲಕ್ಷ ರೂಪಾಯಿ ನಗದು, ಬೆಳ್ಳಿ ಪದಕ ಗೆದ್ದವರಿಗೆ 40 ಲಕ್ಷ ರೂಪಾಯಿ ಮತ್ತು ಕಂಚಿನ ಪದಕ ಗೆದ್ದವರಿಗೆ 25 ಲಕ್ಷ ರೂಪಾಯಿ ನಗದು ಬಹುಮಾನ ಘೋಷಿಸಿತ್ತು. ಈ ಮೂಲಕ ಭಾರತದ ಪದಕ ವಿಜೇತರಿಗೆ ಇನ್ನಷ್ಟು ಹುರುಪನ್ನು ಮೂಡಿಸಿದೆ.

  • 62 ಲಕ್ಷ  ಫೋನ್‍ಗಳಿಂದ ಒಲಿಂಪಿಕ್ಸ್ ಪದಕ ತಯಾರಿ

    62 ಲಕ್ಷ ಫೋನ್‍ಗಳಿಂದ ಒಲಿಂಪಿಕ್ಸ್ ಪದಕ ತಯಾರಿ

    ಟೋಕಿಯೋ: ಮುಂದಿನ ವರ್ಷ ಜಪಾನಿನಲ್ಲಿ ನಡೆಯಲಿರುವ ಒಲಿಂಪಿಕ್ಸ್ ಕ್ರೀಡಾಕೂಟದ ಪರಿಸರ ಸ್ನೇಹಿ ಪದಕಗಳನ್ನು ಅನಾವರಣಗೊಳಿಸಲಾಗಿದೆ. 1976ರಲ್ಲಿ ಒಲಿಂಪಿಕ್ ಕೂಟದ  ಕತ್ತಿವರಸೆ(ಫೆನ್ಸಿಂಗ್​) ಸ್ಪರ್ಧೆಯಲ್ಲಿ ಚಿನ್ನದ ಪದಕ ಜಯಿಸಿದ್ದ ಜರ್ಮನಿಯ ಕ್ರೀಡಾಪಟು ಹಾಗೂ ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿ ಅಧ್ಯಕ್ಷ ಥಾಮಸ್ ಬಚ್ ಪದಕಗಳನ್ನು ಅನಾವರಣಗೊಳಿಸಿದರು.

    ಎಲೆಕ್ಟ್ರಾನಿಕ್ಸ್ ತ್ಯಾಜ್ಯಗಳನ್ನು ಬಳಸಿ ಪದಕಗಳನ್ನು ತಯಾರಿಸಿದ್ದು ಟೋಕಿಯೋ ಒಲಿಂಪಿಕ್ಸ್  ವಿಶೇಷತೆಗಳಲ್ಲಿ ಒಂದು. 1 ವರ್ಷದ ಮೊದಲೇ ಪಂದ್ಯದ ಆಯೋಜಕರ ಸಮಿತಿ ಪದಕಗಳ ವಿನ್ಯಾಸವನ್ನು ಬಿಡುಗಡೆಗೊಳಿಸಿತ್ತು. ಅದೇ ವಿನ್ಯಾಸದಲ್ಲಿ ಪದಕಗಳನ್ನು 62 ಲಕ್ಷದ  ಹಳೆಯ ಎಲೆಕ್ಟ್ರಾನಿಕ್ಸ್ ವಸ್ತುಗಳಿಂದ (ಮೊಬೈಲ್ ಮತ್ತು ಟ್ಯಾಬ್ಲೆಟ್ಸ್) ತಯಾರಿಸಲಾಗಿದೆ.

    2017 ಏಪ್ರಿಲ್ ನಲ್ಲಿ ಟೋಕಿಯೋ ಒಲಿಂಪಿಕ್ ಆಯೋಜಕ ಸಮಿತಿ ಹಳೆಯ ಇಲೆಕ್ಟ್ರಾನಿಕ್ ಉತ್ಪನ್ನಗಳ ಸಂಗ್ರಹಣೆಯ ಅಭಿಯಾನವನ್ನು ಆರಂಭಿಸಿತ್ತು. ಈ ವಿಶೇಷ ಅಭಿಯಾನದಲ್ಲಿ ಸಮಿತಿಗೆ 78,895 ಟನ್ ಹಳೆಯ ಎಲೆಕ್ಟ್ರಾನಿಕ್ಸ್ ತ್ಯಾಜ್ಯಗಳು  ಸಿಕ್ಕಿತ್ತು. ಇವುಗಳಲ್ಲಿ 62.1 ಲಕ್ಷ ಮೊಬೈಲ್ ಫೋನ್ ಒಳಗೊಂಡಿದ್ದವು. ವಿಶೇಷ ಅಭಿಯಾನದಲ್ಲಿ ಲಭ್ಯವಾದ ಲೋಹಗಳಿಂದಲೇ ಒಲಿಂಪಿಕ್ ಪಂದ್ಯದಲ್ಲಿ ವಿಜೇತರಿಗೆ ನೀಡಲಾಗುವ ಪದಕಗಳ ತಯಾರಿಕೆಗೆ ಸಮಿತಿ ಸೂಚಿಸಿತ್ತು.

    ಈ ಹಳೆಯ ಎಲೆಕ್ಟ್ರಾನಿಕ್ಸ್ ಉತ್ಪನ್ನಗಳಲ್ಲಿ 32 ಕೆಜಿ ಬಂಗಾರ, 3,500 ಕೆಜಿ ಬೆಳ್ಳಿ ಮತ್ತು 2,200 ಕೆಜಿ ಕಂಚು ಲಭ್ಯವಾಗಿತ್ತು. ಶುದ್ಧ ಬೆಳ್ಳಿಗೆ 6 ಗ್ರಾಂಗಿಂತ ಹೆಚ್ಚಿನ ಚಿನ್ನದ ಲೇಪನವನ್ನು ಬಳಸಿ ಚಿನ್ನದ ಪದಕವನ್ನು ತಯಾರಿಸಲಾಗಿದ್ದರೆ, ಬೆಳ್ಳಿ ಪದಕವನ್ನು ಶುದ್ಧ ಬೆಳ್ಳಿಯಿಂದ ತಯಾರಿಸಲಾಗಿದೆ. ಶೇ.95ರಷ್ಟು ತಾಮ್ರ ಹಾಗೂ ಶೇ.5ರಷ್ಟು ಸತುವನ್ನು ಬಳಸಿ ಕಂಚಿನ ಪದಕ ತಯಾರಿಸಲಾಗಿದೆ.

    ಪದಕದ ವಿನ್ಯಾಸ:
    ಅಂತರರಾಷ್ಟ್ರೀಯ ಒಲಿಂಪಿಕ್ಸ್‌ ಸಮಿತಿ(ಐಒಸಿ) ನಿಯಮಾವಳಿಯಲ್ಲಿ ಇರುವಂತೆ ಪದಕದ ಮುಂಭಾಗದಲ್ಲಿ ಒಲಿಂಪಿಕ್ ಲಾಂಛನವಾದ ಐದು ರಿಂಗ್​ಗಳು, ಗೇಮ್ಸ್​ನ ಅಧಿಕೃತ ಹೆಸರು ಹಾಗೂ ಪಂಥಾನಿಯಕ್ ಸ್ಟೇಡಿಯಂನ ಮುಂಭಾಗದಲ್ಲಿರುವ ಗ್ರೀಕ್ ವಿಜಯ ದೇವತೆ, ಪದಕದ ಹಿಂಭಾಗದಲ್ಲಿ ಟೋಕಿಯೊ ಒಲಿಂಪಿಕ್ಸ್​ನ ಲಾಂಛನವಿದೆ. ಹೊಸ ವಿನ್ಯಾಸಕ್ಕಾಗಿ ಕರೆದ ಸ್ಪರ್ಧೆಯಲ್ಲಿ 400 ವೃತ್ತಿಪರರು ಮತ್ತು ವಿದ್ಯಾರ್ಥಿಗಳು ಹೊಸ ಹೊಸ ಡಿಸೈನ್ ಸಮಿತಿಗೆ ನೀಡಿದ್ದರು. ಇವುಗಳಲ್ಲಿ ಜುನಿಚಿ ಕಾವಾನಿಶಿ ಅವರ ವಿನ್ಯಾಸವನ್ನು ಪಂದ್ಯದ ಆಯೋಜಕ ಸಮಿತಿ ಅಂತಿಮಗೊಳಿಸಿದೆ.

     85 ಎಂಎಂ ಸುತ್ತಳತೆಯಲ್ಲಿರುವ ಪದಕದ ಅತ್ಯಂತ ತೆಳವಾದ ಭಾಗ 7.7ಎಂಎಂ ಇದ್ದು, ಗರಿಷ್ಠ ದಪ್ಪ 12.1 ಎಂಎಂ ಇದೆ. ಬ್ರೆಜಿಲ್ ದೇಶದ ರಿಯೋ ಡಿ ಜನೈರೋದಲ್ಲಿ ಕಳೆದ ಬಾರಿ ನಡೆದ ಒಲಿಂಪಿಕ್ಸ್ ಕ್ರೀಡಾಕೂಟದಲ್ಲೂ  ಮರು ಬಳಕೆಯಾದ ಲೋಹವನ್ನು ಬಳಸಿ ಪದಕಗಳನ್ನು ತಯಾರಿಸಲಾಗಿತ್ತು. ಟೋಕಿಯೋ ಒಲಿಂಪಿಕ್ ಕ್ರೀಡಾಕೂಟ 2020ರ ಜುಲೈ 24 ರಿಂದ ಆರಂಭವಾಗಿ ಆಗಸ್ಟ್ 9 ರವರೆಗೆ ನಡೆಯಲಿವೆ.