ಬೆಂಗಳೂರು: ನಗರದ ಪ್ರತಿಷ್ಠಿತ ಎಂಜಿನಿಯರಿಂಗ್ (Engineering) ಕಾಲೇಜಿನ ಶೌಚಾಲಯದಲ್ಲಿ (Toilet) ತನ್ನ ಸಹಪಾಠಿಯ ಮೇಲೆ 21 ವರ್ಷದ ಎಂಜಿನಿಯರಿಂಗ್ ವಿದ್ಯಾರ್ಥಿ ಅತ್ಯಾಚಾರ (Rape) ಎಸಗಿದ್ದಾನೆ.
ಅ.10 ರಂದು ಕೃತ್ಯ ನಡೆದಿದ್ದು ಸಂತ್ರಸ್ತೆ 5 ದಿನಗಳ ನಂತರ ದೂರು ನೀಡಿದ ಬಳಿಕ ಪ್ರಕರಣ ಬೆಳಕಿಗೆ ಬಂದಿದೆ. ಹನಮಂತನಗರ ಪೊಲೀಸರು ಈಗ ವಿದ್ಯಾರ್ಥಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಘಟನೆ ಹೇಗಾಯ್ತು?
ಆರೋಪಿ 6ನೇ ಸೆಮಿಸ್ಟರ್ ವಿದ್ಯಾರ್ಥಿಯಾಗಿದ್ದರೆ ಸಂತ್ರಸ್ತೆ ಏಳನೇ ಸೆಮಿಸ್ಟರ್ ವಿದ್ಯಾರ್ಥಿನಿಯಾಗಿದ್ದಾಳೆ. ಇವರಿಬ್ಬರು ಮೊದಲು ಒಂದೇ ತರಗತಿಯಲ್ಲಿ ಓದುತ್ತಿದ್ದರು. ಆದರೆ ಆರೋಪಿ ಒಂದು ಸೆಮಿಸ್ಟರ್‌ನಲ್ಲಿ ಫೇಲ್ ಆಗಿದ್ದ.
ಕಾಲೇಜಿನ ಊಟದ ವಿರಾಮದ ಸಮಯದಲ್ಲಿ ಆರೋಪಿ ಹಲವು ಬಾರಿ ಕರೆ ಮಾಡಿ ಏಳನೇ ಮಹಡಿಯಲ್ಲಿರುವ ಆರ್ಕಿಟೆಕ್ಚರ್ ಬ್ಲಾಕ್ ಬಳಿ ತನ್ನನ್ನು ಭೇಟಿಯಾಗುವಂತೆ ಕೇಳಿಕೊಂಡಿದ್ದಾನೆ. ಆಕೆ ಬಂದಾಗ ಬಲವಂತವಾಗಿ ಚುಂಬಿಸಲು ಪ್ರಯತ್ನಿಸಿದ್ದಾನೆ. ನಂತರ ಆಕೆ ಲಿಫ್ಟ್ ಬಳಸಿ ಹೊರಡಲು ಮುಂದಾದಾಗ ಆರನೇ ಮಹಡಿವರೆಗೆ ಆಕೆಯನ್ನು ಹಿಂಬಾಲಿಸಿ ಪುರುಷರ ಶೌಚಾಲಯಕ್ಕೆ ಎಳೆದುಕೊಂಡು ಹೋಗಿ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ.
ಶೌಚಾಲಯದ ಬಾಗಿಲನ್ನು ಲಾಕ್ ಮಾಡಿ ಕೃತ್ಯ ಎಸಗಿದ್ದಾನೆ. ಈ ವೇಳೆ ಸಂತ್ರಸ್ತೆಯ ಮೊಬೈಲಿಗೆ ಕರೆ ಬಂದಾಗ ಫೋನ್ ವಶಪಡಿಸಿಕೊಂಡಿದ್ದಾನೆ. ಮಧ್ಯಾಹ್ನ 1:30 ರಿಂದ 1:50 ರ ನಡುವೆ ಈ ಕೃತ್ಯ ಎಸಗಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಬೆಳಕಿಗೆ ಬಂದಿದ್ದು ಹೇಗೆ?
ಘಟನೆಯ ನಂತರ ವಿದ್ಯಾರ್ಥಿನಿ ತನ್ನ ಇಬ್ಬರು ಸ್ನೇಹಿತರಿಗೆ ಈ ವಿಚಾರವನ್ನು ತಿಳಿಸಿದ್ದಾಳೆ. ಅಷ್ಟೇ ಅಲ್ಲದೇ ಆರೋಪಿ ಕರೆ ಮಾಡಿ ಮಾತ್ರೆ ಬೇಕೇ ಎಂದು ಕೇಳಿದ್ದಾನೆ.
ಈ ಕೃತ್ಯದಿಂದ ಶಾಕ್‌ಗೆ ಒಳಗಾಗಿದ್ದ ವಿದ್ಯಾರ್ಥಿನಿ ಆರಂಭದಲ್ಲಿ ದೂರು ನೀಡಲು ಹಿಂದೇಟು ಹಾಕಿದ್ದಳು. ನಂತರ ಧೈರ್ಯ ಮಾಡಿ ಪೋಷಕರಿಗೆ ತಿಳಿಸಿದ ಬಳಿಕ ಹನುಮಂತನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ.
ಘಟನೆ ನಡೆದ ಸ್ಥಳದಲ್ಲಿ ಯಾವುದೇ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಿಲ್ಲ. ಪೊಲೀಸರು ಈಗ ವಿಧಿವಿಜ್ಞಾನ ಮತ್ತು ಡಿಜಿಟಲ್ ಪುರಾವೆಗಳನ್ನು ಪರಿಶೀಲಿಸುತ್ತಿದ್ದಾರೆ.
A video showing a man attending Gujarat High Court virtual proceedings while seated on a toilet and apparently relieving himself has gone viral on the social media.
ನ್ಯಾಯಮೂರ್ತಿ ನಿರ್ಜಾರ್ ದೇಸಾಯಿ ಅವರು ಅರ್ಜಿ ವಿಚಾರಣೆ ನಡೆಸಿದ್ದರು. ಯೂಟ್ಯೂಬ್‌ನಲ್ಲಿನ ವೀಡಿಯೊ ಲಿಂಕ್ ಮೂಲಕ ಹಾಜರಾದ ಸಮದ್, ಈ ಸಂದರ್ಭದಲ್ಲಿ ಶೌಚಾಲಯವನ್ನು ಬಳಸುತ್ತಿರುವುದು ಕಂಡುಬಂತು. ಈ ವೀಡಿಯೊ ವೈರಲ್ ಆಗಿದೆ.
ಪ್ರಕರಣದ ಹಿನ್ನೆಲೆ
ಕಿಮ್ ರೈಲ್ವೆ ನಿಲ್ದಾಣದ ಬಳಿಯ ಜುಮ್ಮಾ ಮಸೀದಿಗೆ ಪ್ರಾರ್ಥನೆಗಾಗಿ ಸಮದ್ ಹೋಗಿದ್ದರು. ಮಸೀದಿಯ ಬಾಗಿಲು ತೆರೆದಾಗ ಆಕಸ್ಮಿಕವಾಗಿ ಮತ್ತೊಬ್ಬರಿಗೆ ಡಿಕ್ಕಿ ಹೊಡೆದಿದೆ. ಇದು ಪರಸ್ಪರರ ನಡುವೆ ವಾಗ್ವಾದಕ್ಕೆ ಕಾರಣವಾಯಿತು. ಆರೋಪಿ ಮತ್ತು ಆತನ ಸಹೋದರ, ಸಮದ್‌ನನ್ನು ನಿಂದಿಸಿ ಹಲ್ಲೆ ನಡೆಸಿದ್ದರು. ಬಳಿಕ ಮಸೀದಿಗೆ ಬರಬಾರದೆಂದು ಬೆದರಿಕೆ ಹಾಕಿದ್ದರು. ಈ ಸಂಬಂಧ ಸೂರತ್‌ನ ಕಿಮ್ ಪೊಲೀಸ್ ಠಾಣೆಯಲ್ಲಿ ಸಮದ್ ದೂರು ದಾಖಲಿಸಿದ್ದರು. ಇದನ್ನೂ ಓದಿ: Bengaluru | ಬ್ರೇಕ್ ಫೇಲ್ ಆಗಿ ಡಿವೈಡರ್‌ಗೆ KSRTC ಬಸ್ ಡಿಕ್ಕಿ
ಕಳೆದ ಮಾರ್ಚ್‌ನಲ್ಲಿ ಕೂಡ ಗುಜರಾತ್ ಹೈಕೋರ್ಟ್‌ನಲ್ಲಿ ಇದೇ ರೀತಿ ಘಟನೆ ನಡೆದಿತ್ತು. ಆ ವ್ಯಕ್ತಿಗೆ ಕೋರ್ಟ್ 2 ಲಕ್ಷ ರೂ. ದಂಡ ವಿಧಿಸಿತ್ತು.
ಬೆಂಗಳೂರು: ಶಾಲಾ ಮಕ್ಕಳಿಂದ (Students) ಶೌಚಾಲಯ ಸ್ವಚ್ಛಗೊಳಿಸಿದರೆ ಶಿಕ್ಷಕರ (Teachers) ಮೇಲೆಯೇ ಎಫ್‌ಐಆರ್ (FIR) ದಾಖಲಿಸಲಾಗುವುದು ಶಿಕ್ಷಣ ಇಲಾಖೆ ಮತ್ತೆ ಎಚ್ಚರಿಕೆ ನೀಡಿದೆ.
ಶಾಲಾ ಮಕ್ಕಳು ಶೌಚಾಲಯ ಸ್ವಚ್ಛಗೊಳಿಸುವಂತಿಲ್ಲ (Toilet Clenaing) ಎಂದು ಈ ಹಿಂದೆಯೇ ಶಿಕ್ಷಣ ಇಲಾಖೆ ಆದೇಶ ಹೊರಡಿಸಿತ್ತು. ಹೀಗಿದ್ದರೂ ರಾಜ್ಯದ ಕೆಲ ಶಾಲೆಗಳಲ್ಲಿ ಪ್ರಕರಣ ವರದಿಯಾದ ಬೆನ್ನಲ್ಲೇ ಮತ್ತೊಮ್ಮೆ ಶಿಕ್ಷಣ ಇಲಾಖೆ ಆದೇಶ ಪ್ರಕಟಿಸಿದೆ.
ಆದೇಶದಲ್ಲಿ ಏನಿದೆ?
ರಾಜ್ಯದ ಎಲ್ಲಾ ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳಿಂದ ಶೌಚಾಲಯಗಳ ಸ್ವಚ್ಛತೆಯನ್ನು ಕಡ್ಡಾಯವಾಗಿ ಮಾಡಿಸಬಾರದೆಂದು ಸಂಬಂಧಿಸಿದ ಶಾಲಾ ಶಿಕ್ಷಣ ಇಲಾಖಾಧಿಕಾರಿಗಳು ಮತ್ತು ಸರ್ಕಾರಿ ಪ್ರಾಥಮಿಕ/ಪ್ರೌಢಶಾಲಾ ಮುಖ್ಯ ಶಿಕ್ಷಕರುಗಳಿಗೆ ಈಗಾಗಲೇ ಉಲ್ಲೇಖಿತ ಸುತ್ತೋಲೆಯ ಮೂಲಕ ತಿಳಿಸಲಾಗಿದ್ದರೂ ಸಹ ವಿದ್ಯಾರ್ಥಿಗಳಿಂದ ಶೌಚಾಲಯಗಳ ಸ್ವಚ್ಛತೆಯಲ್ಲಿ ತೊಡಗಿಸಿಕೊಳ್ಳುತ್ತಿರುವ ಬಗ್ಗೆ ಇತ್ತೀಚೆಗೆ ಕೆಲವು ಪ್ರಕರಣಗಳು ಬೆಳಕಿಗೆ ಬಂದಿರುವುದನ್ನು ಇಲಾಖೆಯು ಗಮನಿಸಿದೆ. ಇದನ್ನೂ ಓದಿ: ಅಮೆರಿಕಕ್ಕೆ ಭಾರತದಿಂದ 5 ವಿಮಾನ ಭರ್ತಿ ಐಫೋನ್ ಕಳುಹಿಸಿದ ಆಪಲ್
ಸರ್ಕಾರದಿಂದ ಮತ್ತು ಇಲಾಖೆಯಿಂದ ಕಾಲ-ಕಾಲಕ್ಕೆ ಹೊರಡಿಸಲಾಗುವ ಸೂಚನೆಗಳನ್ನು ಮತ್ತು ನಿರ್ದೇಶನಗಳನ್ನು ಚಾಚೂ ತಪ್ಪದೇ ಪಾಲಿಸುವಂತೆ ಸೂಚನೆಗಳನ್ನು ನೀಡಲಾಗುತ್ತಿದ್ದರೂ ಸಹ ಇಂತಹ ಸೂಚನೆಗಳನ್ನು ಉಲ್ಲಂಘಿಸುತ್ತಿರುವುದು ಗಂಭೀರವಾಗಿ ಪರಿಗಣಿಸಿ ಆಕ್ಷೇಪಿಸಿದೆ.
ಈ ಹಿನ್ನೆಲೆಯಲ್ಲಿ ಮತ್ತೆ ಇಂತಹ ಘಟನೆಗಳು ಮರುಕಳಿಸಿದ್ದಲ್ಲಿ ಅಂತವರ ವಿರುದ್ಧ ಇಲಾಖಾ ವತಿಯಿಂದ ನಿಯಮಾನುಸಾರ ಕಠಿಣ ಶಿಸ್ತು ಕ್ರಮಗಳನ್ನು ಜರುಗಿಸಲಾಗುವುದು ಅಲ್ಲದೆ ಪ್ರಥಮ ವರ್ತಮಾನ ವರದಿ (FIR) ದಾಖಲಿಸಲಾಗುವುದು ಮತ್ತು ಸಂಬಂಧಿಸಿದ ಶಾಲಾ ಶಿಕ್ಷಣ ಇಲಾಖಾಧಿಕಾರಿಗಳು ಮತ್ತು ಸರ್ಕಾರಿ ಪ್ರಾಥಮಿಕ/ಪ್ರೌಢ ಶಾಲಾ ಮುಖ್ಯ ಶಿಕ್ಷಕರನ್ನೇ ನೇರ ಹೊಣೆಗಾರರನ್ನಾಗಿ ಮಾಡಿ ಶಿಸ್ತು ಕ್ರಮಕ್ಕೆ ಶಿಫಾರಸ್ಸು ಮಾಡಲಾಗುವುದು. ಉಲ್ಲೇಖಿತ ಪತ್ರದಲ್ಲಿ ಶೌಚಾಲಯ ಸ್ವಚ್ಛತೆಯನ್ನು ನಿರ್ಹಿಸುವ ಕುರಿತು ತಿಳಿಸಿರುವ ಅಂಶಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಮತ್ತೊಮ್ಮೆ ಎಚ್ಚರಿಸಲಾಗಿದೆ.
ಬಾಗಲಕೋಟೆ: ವಿದ್ಯಾಗಿರಿಯಲ್ಲಿ ಒಳಚರಂಡಿ ನಿರ್ವಹಣೆಯನ್ನು ಬಾಗಲಕೋಟೆ (Bagalkote) ಪಟ್ಟಣ ಅಭಿವೃದ್ಧಿ ಪ್ರಾಧಿಕಾರ (BTDA) ಬಿಟಿಡಿಎ ಕೈ ಬಿಟ್ಟಿದೆ. ಪರಿಣಾಮ ರಸ್ತೆಗಳಲ್ಲಿ ಶೌಚಗುಂಡಿಗಳು, ಒಳಚರಂಡಿ ತುಂಬಿ ಹರಿಯುತ್ತಿದ್ದು ಕೊಳಚೆ ನೀರು ಮನೆಗಳಿಗೆ ನುಗ್ಗುತ್ತಿದೆ.
ದಿಢೀರ್ ನಿರ್ಮಾಣವಾಗಿರುವ ಈ ಸ್ಥಿತಿಯಿಂದ ನಗರಸಭೆ ಸಿಬ್ಬಂದಿಯೂ ಅಸಹಾಯಕರಾಗಿದ್ದಾರೆ. ವಿದ್ಯಾಗಿರಿ ನಗರಸಭೆ ನಿರ್ವಹಣೆಗೆ ಒಳಪಟ್ಟರೂ ಈವರೆಗೆ ಇಲ್ಲಿನ ಒಳಚರಂಡಿಯನ್ನು (Drainage) ಬಿಟಿಡಿಎಯಿಂದ ನಿರ್ವಹಿಸಲಾಗುತ್ತಿತ್ತು. ಆದರೆ ಲೆಕ್ಕಪರಿಶೋಧಕರಿಂದ ಆಕ್ಷೇಪ ವ್ಯಕ್ತವಾದ ಹಿನ್ನೆಲೆಯಲ್ಲಿ ಇನ್ನು ಮುಂದೆ ನಿರ್ವಹಣೆ ಸಾಧ್ಯವಿಲ್ಲ ಎಂದು ಬಿಟಿಡಿಎ ಕೈ ತೊಳೆದುಕೊಂಡಿದೆ.
ಈ ಕುರಿತು ಮಾತನಾಡಿದ ನಗರಸಭೆ ಸದಸ್ಯ ವೀರಪ್ಪ ಶಿರಗಣ್ಣವರ ಪ್ರತಿಕ್ರಿಯಿಸಿ, ನಗರಸಭೆ ಬಳಿ ಇರುವ ಒಂದು ವಾಹನದಿಂದಲೇ ಎಲ್ಲವನ್ನು ಸ್ವಚ್ಛಗೊಳಿಸುವ ಪ್ರಯತ್ನ ನಡೆದಿದೆ. ಸಿಬ್ಬಂದಿ ಸಹಕಾರಿಯಾಗಿದ್ದಾರೆ ಎಂಬ ಕಾರಣಕ್ಕೆ ಎಷ್ಟೇ ಕೆಲಸ ಬಂದರೂ ಅವರು ಗೊಣಗದೇ ಕೆಲಸ ಮಾಡುತ್ತಿದ್ದಾರೆ. ಬಾಗಲಕೋಟೆಯ ಶಾಸಕರು ಬಿಟಿಡಿಎಗೆ ಸಭಾಪತಿಯಾಗಿದ್ದು, ಇಂಥ ಸಂದರ್ಭದಲ್ಲಿ ಜನಕ್ಕೆ ನೆರವಾಗುವ ಕೆಲಸ ಮಾಡಬೇಕಿದೆ ಎಂದರು.
ಬಿಟಿಡಿಎ-ನಗರಸಭೆ ಸಿಬ್ಬಂದಿಯನ್ನು ಕರೆದು ಬಗೆಹರಿಸುವ ಕೆಲಸವನ್ನಾದರೂ ಮಾಡಬೇಕು. ನಾವು ಸಾಧ್ಯವಾದಷ್ಟು ಜನರ ತೊಂದರೆಯನ್ನು ನಿವಾರಿಸುವ ಕೆಲಸ ಮಾಡುತ್ತಿದ್ದೇವೆ ಎಂದು ಹೇಳಿದರು.
ಈ ನಡುವೆ ವಿದ್ಯಾಗಿರಿಯ 20ನೇ ಕ್ರಾಸ್ ನಲ್ಲಿ ಹೊಸದಾಗಿ ರಸ್ತೆ ಡಾಂಬರೀಕರಣ ಮಾಡಲಾಗಿದ್ದು, ರಸ್ತೆ ಕೆಳಭಾಗದ ಪೈಪ್‌ಗಳು ಒಡೆದು ನಿರಂತರವಾಗಿ ನೀರು ಪೋಲಾಗುತ್ತಿದೆ. ಈ ಬಗ್ಗೆಯೂ ಸಾರ್ವಜನಿಕರು ದೂರು ನೀಡಿದರೂ ಯಾವುದೇ ಸ್ಪಂದನೆ ಸಿಕ್ಕಿಲ್ಲ.
ಬೆಂಗಳೂರು: ಯಶವಂತಪುರದ ಅಂದ್ರಹಳ್ಳಿ ಸರ್ಕಾರಿ ಶಾಲೆಯಲ್ಲಿ (Andrahalli School) ಮಕ್ಕಳಿಂದ ಶೌಚಾಲಯ ಸ್ವಚ್ಛಗೊಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಲೆಯ ಮುಖ್ಯಶಿಕ್ಷಕಿಯನ್ನ ಪೊಲೀಸರು ಬಂಧಿಸಿರುವ ಘಟನೆ ನಡೆದಿದೆ.
ʻಪಬ್ಲಿಕ್ ಟಿವಿʼ ವರದಿಯಿಂದ ಎಚ್ಚೆತ್ತುಕೊಂಡ BEO ಆಂಜಿನಪ್ಪ ಬ್ಯಾಡರಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ದೂರಿನ ಆಧಾರದ ಮೇಲೆ ಎಫ್‌ಐಆರ್ ದಾಖಲಿಸಿಕೊಂಡಿದ್ದ ಪೊಲೀಸರು ಶಾಲೆಯ ಮುಖ್ಯಶಿಕ್ಷಕಿ ಲಕ್ಷ್ಮಿದೇವಮ್ಮರನ್ನ ಬಂಧಿಸಿದ್ದಾರೆ. ತಡರಾತ್ರಿಯಿಂದಲೇ ಅವರನ್ನ ರಾಜ್ಯ ಮಹಿಳಾ ಸಾಂತ್ವನ ಕೇಂದ್ರದಲ್ಲಿ ಇರಿಸಲಾಗಿದ್ದು, ಶನಿವಾರ (ಇಂದು) ನ್ಯಾಯಾಧೀಶರ ಮುಂದೆ ಹಾಜರುಪಡಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ನಡೆದಿದ್ದೇನು..?:
ಕೋಲಾರ ಜಿಲ್ಲೆಯಲ್ಲಿ ಶೌಚಗುಂಡಿಗೆ ಮಕ್ಕಳನ್ನ ಇಳಿಸಿದ ಪ್ರಕರಣ ಮಾಸುವ ಬೆನ್ನೆಲ್ಲೇ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿತ್ತು. ಬೆಂಗಳೂರಿನ ಯಶವಂತಪುರ ವಿಧಾನಸಭಾ ಕ್ಷೇತ್ರದ ಸರ್ಕಾರಿ ಶಾಲೆಯಲ್ಲಿ ಮತ್ತೊಂದು ಘಟನೆ ನಡೆದಿದೆ. ಯಶವಂತಪುರ ವಿಧಾನಸಭಾ ಕ್ಷೇತ್ರದ ಅಂದ್ರಹಳ್ಳಿ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳ ಕೈಯಿಂದ ಟಾಯ್ಲೆಟ್ ಕ್ಲೀನಿಂಗ್ (Toilet Clean) ಮಾಡಿಸಿದ್ದರು. 6 ನೇ ತರಗತಿ ವಿದ್ಯಾರ್ಥಿಗಳು ಆಸಿಡ್ ಹಾಕಿ ಶೌಚಾಲಯ ಕ್ಲೀನ್ ಮಾಡಿದ್ದರು. ಈ ವಿಚಾರ ಪೋಷಕರಿಗೆ ಗೊತ್ತಾಗಿ ಅವರು ಶಾಲೆಯ ಮುಂದೆ ಪ್ರತಿಭಟನೆ ನಡೆಸಿದ್ದರು.
ಸದ್ಯ ಪ್ರಕರಣ ಸಂಬಂಧ ಶಾಲೆಯ ಹಿರಿಯ ಮುಖ್ಯ ಶಿಕ್ಷಕಿ ಲಕ್ಷ್ಮಿದೇವಮ್ಮ ಅವರನ್ನ ಶಿಕ್ಷಣ ಇಲಾಖೆ ಶುಕ್ರವಾರ ಅಮಾನತು ಮಾಡಿತ್ತು. ಬಿಇಓ ವರದಿ ಆಧರಿಸಿ ಪ್ರಕರಣದಲ್ಲಿ ಶಿಕ್ಷಕಿ ಲಕ್ಷ್ಮಿದೇವಮ್ಮ ಅವರ ತಪ್ಪು ಕಂಡು ಬಂದ ಹಿನ್ನಲೆಯಲ್ಲಿ ಬೆಂಗಳೂರು ಉತ್ತರ ಜಿಲ್ಲೆ ಡಿಡಿಪಿಐ ಲೋಕೇಶ್ವರ ರೆಡ್ಡಿ ಅಮಾನತು ಮಾಡಿ ಅದೇಶ ಹೊರಡಿಸಿದ್ದರು. ಬಳಿಕ ಬಿಇಒ ನೀಡಿದ ದೂರಿನ ಮೇರೆಗೆ ಬಂಧಿಸಲಾಗಿದೆ.
ಬೆಂಗಳೂರು: ಅಂದ್ರಹಳ್ಳಿಯ ಶಾಲೆಯಲ್ಲಿ ಮಕ್ಕಳಿಂದ ಶೌಚಾಲಯ ಸ್ವಚ್ಛಗೊಳಿಸಿದ ಪ್ರಕರಣ ತನಿಖೆ ಆಗಬೇಕು ಅಂತಾ ಗೃಹ ಸಚಿವ ಪರಮೇಶ್ವರ್ (G Parameshwar) ಹೇಳಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಅವರು, ಅಂದ್ರಹಳ್ಳಿ ಪ್ರಕರಣದ ಬಗ್ಗೆ ಶಿಕ್ಷಣ ಸಚಿವರ (Education Minister) ಗಮನಕ್ಕೆ ತರುತ್ತೇನೆ. ಖಂಡಿತವಾಗಿ ಈ ರೀತಿ ನಡೆಯಬಾರದು ಅಂತಾ ಖಂಡಿಸಿದ್ರು.
ಶಾಲೆಗಳಲ್ಲಿ ಈ ರೀತಿ ಘಟನೆ ನಡೆಯಬಾರದು, ಮಕ್ಕಳನ್ನ ಈ ರೀತಿಯ ಕೆಲಸಗಳಿಗೆ ಬಳಸಿಕೊಳ್ಳಬಾರದು. ಶಿಕ್ಷಣ ಇಲಾಖೆ ಜನರಲ್ ಆಗಿ ಸುತ್ತೋಲೆ ಹೊರಡಿಸಬೇಕು ಅಂತಾ ಸಲಹೆ ಕೊಟ್ಟರು. ಅಲ್ಲದೆ ಯಾವ ಉಪಾಧ್ಯಾಯರು ಮಕ್ಕಳ ಬಳಿ ಈ ಕೆಲಸ ಮಾಡಿಸಿದ್ದಾರೆ ಅವರ ಮೇಲೆ ಕ್ರಮ ಕೈಗೊಳ್ಳಲು ನಾನು ಸೂಚಿಸುತ್ತೇನೆ ಅಂತೇಳಿದ್ರು. ಇದನ್ನೂ ಓದಿ: INDIA ಒಕ್ಕೂಟದಲ್ಲಿ ಭಿನ್ನಮತ – ಖರ್ಗೆ, ಫರ್ಗೆ ಅಂದರೆ ಯಾರು ಎಂದ ಜೆಡಿಯು ಶಾಸಕ
ನಡೆದಿದ್ದೇನು..?: ಕೋಲಾರ ಜಿಲ್ಲೆಯಲ್ಲಿ ಶೌಚಗುಂಡಿಗೆ ಮಕ್ಕಳನ್ನ ಇಳಿಸಿದ ಪ್ರಕರಣ ಮಾಸುವ ಬೆನ್ನೆಲ್ಲೇ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿತ್ತು. ಬೆಂಗಳೂರಿನ ಯಶವಂತಪುರ ವಿಧಾನಸಭಾ ಕ್ಷೇತ್ರದ ಸರ್ಕಾರಿ ಶಾಲೆಯಲ್ಲಿ ಮತ್ತೊಂದು ಘಟನೆ ನಡೆದಿದೆ. ಯಶವಂತಪುರ ವಿಧಾನಸಭಾ ಕ್ಷೇತ್ರದ ಅಂದ್ರಹಳ್ಳಿ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳ ಕೈಯಿಂದ ಟಾಯ್ಲೆಟ್ ಕ್ಲೀನಿಂಗ್ (Toilet Clean) ಮಾಡಿಸಿದ್ದರು. 6 ನೇ ತರಗತಿ ವಿದ್ಯಾರ್ಥಿಗಳು ಆಸಿಡ್ ಹಾಕಿ ಶೌಚಾಲಯ ಕ್ಲೀನ್ ಮಾಡಿದ್ದರು. ಈ ವಿಚಾರ ಪೋಷಕರಿಗೆ ಗೊತ್ತಾಗಿ ಅವರು ಶಾಲೆಯ ಮುಂದೆ ಪ್ರತಿಭಟನೆ ನಡೆಸಿದ್ದರು.
ಮುಖ್ಯ ಶಿಕ್ಷಕಿ ಅಮಾನತು: ಸದ್ಯ ಪ್ರಕರಣ ಸಂಬಂಧ ಶಾಲೆಯ ಹಿರಿಯ ಮುಖ್ಯ ಶಿಕ್ಷಕಿ ಲಕ್ಷ್ಮಿದೇವಮ್ಮ ಅವರನ್ನ ಶಿಕ್ಷಣ ಇಲಾಖೆ ಅಮಾನತು ಮಾಡಿದೆ. ಬಿಇಓ ವರದಿ ಆಧರಿಸಿ ಪ್ರಕರಣದಲ್ಲಿ ಶಿಕ್ಷಕಿ ಲಕ್ಷ್ಮಿದೇವಮ್ಮ ಅವರ ತಪ್ಪು ಕಂಡು ಬಂದ ಹಿನ್ನಲೆಯಲ್ಲಿ ಬೆಂಗಳೂರು ಉತ್ತರ ಜಿಲ್ಲೆ ಡಿಡಿಪಿಐ ಲೋಕೇಶ್ವರ ರೆಡ್ಡಿ ಅಮಾನತು ಮಾಡಿ ಅದೇಶ ಹೊರಡಿಸಿದ್ದಾರೆ. ಇಲಾಖೆ ವಿಚಾರಣೆಗೆ ಆದೇಶ ಮಾಡಿ ತಕ್ಷಣದಿಂದಲೇ ಜಾರಿಗೆ ಬರುವಂತೆ ಶಿಕ್ಷಕಿ ಲಕ್ಷ್ಮಿದೇವಮ್ಮ ಅವರನ್ನ ಅಮಾನತು ಮಾಡಿ ಆದೇಶ ಹೊರಡಿಸಲಾಗಿದೆ.
ಗದಗ: ಚಾಲಕನ ನಿಯಂತ್ರಣ ತಪ್ಪಿ ಹೆದ್ದಾರಿ ಪಕ್ಕದ ಶೌಚಾಲಯಕ್ಕೆ (Toilet) ಕಾರ್ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಮತ್ತೋರ್ವ ಗಂಭೀರವಾಗಿ ಗಾಯಗೊಂಡ ಘಟನೆ ಗದಗ (Gadag) ನಗರದ ಹೊರವಲಯದಲ್ಲಿ ನಡೆದಿದೆ.
ಮೃತರು ಬೆಳಗಾವಿ (Belagavi) ಜಿಲ್ಲೆಯ ಸವದತ್ತಿ ತಾಲೂಕಿನವರು ಎನ್ನಲಾಗುತ್ತಿದೆ. ಘಟನೆಯಿಂದ ಸಿದ್ದಯ್ಯ ಪಾಟೀಲ್ ಹಾಗೂ ಬಾಬು ತಾರಿಹಾಳ ಎಂಬವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇನ್ನೋರ್ವ ಶಶಿ ಪಾಟೀಲ್ ಎಂಬವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುವನ್ನು ಗದಗ ಜಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಇದನ್ನೂ ಓದಿ: ಹುಬ್ಬಳ್ಳಿಯಲ್ಲಿ ವಿಶ್ವಕಪ್ ಫೈನಲ್ಸ್ ಬೆಟ್ಟಿಂಗ್ ಭರಾಟೆ – 15 ದಿನದಲ್ಲಿ 30 ಕೇಸ್, 42 ಮಂದಿ ಅರೆಸ್ಟ್
ಕಳಸಾಪೂರ ಕ್ರಾಸ್ ಬಳಿಯ ಹುಬ್ಬಳ್ಳಿ-ಹೊಸಪೇಟೆ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ಇರುವ ಶೌಚಾಲಯದ ಗೋಡೆಗೆ ಕಾರು ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಕಾರ್‌ನಲ್ಲಿರುವ ಏರ್‌ಬ್ಯಾಗ್ ಓಪನ್ ಆಗಿದ್ದರೂ ಇಬ್ಬರು ಮೃತಪಟ್ಟಿದ್ದಾರೆ. ಚಾಲಕನ ಅಜಾಗರೂಕತೆ ಹಾಗೂ ಅತಿಯಾದ ವೇಗವೇ ಘಟನೆಗೆ ಕಾರಣ ಎನ್ನಲಾಗುತ್ತಿದೆ. ಸ್ಥಳಕ್ಕೆ ಗ್ರಾಮೀಣ ಪೊಲೀಸ್ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಲಾಗಿದೆ. ಇದನ್ನೂ ಓದಿ: ಮಹಿಳೆಯಿಂದ ಬ್ಲ್ಯಾಕ್‌ಮೇಲ್ – ಎಂಪಿ ದೇವೇಂದ್ರಪ್ಪ ಪುತ್ರನಿಂದ ದೂರು, ಎಫ್‌ಐಆರ್ ದಾಖಲು
ಬೆಂಗಳೂರು: ಕಾಲೇಜುಗಳಲ್ಲಿ ಸ್ನೇಹಿತರ ನಡುವೆ ಕೆಲ ಘಟನೆಗಳು ನಡೆಯುತ್ತದೆ. ಅದನ್ನು ಎಲ್ಲಿಗೋ ತೆಗೆದುಕೊಂಡು ಹೋಗೋದಲ್ಲ. ಅದನ್ನು ಕಾಲೇಜು ಪ್ರಾಂಶುಪಾಲರಿಗೆ ಬಿಡಬೇಕು. ಅದನ್ನು ಮೀರಿದ ಘಟನೆ ಏನಾದ್ರೂ ಆದರೆ ನಾವು ಮುಂದೆ ಹೋಗಬೇಕು ಎಂದು ಗೃಹಸಚಿವ ಜಿ. ಪರಮೇಶ್ವರ್ (G Parameshwara) ಹೇಳಿಕೆ ನೀಡಿದ್ದಾರೆ.
ಉಡುಪಿ (Udupi) ಖಾಸಗಿ ಕಾಲೇಜಿನಲ್ಲಿ (College) ಮಹಿಳೆಯರ ಟಾಯ್ಲೆಟ್‌ನಲ್ಲಿ ವೀಡಿಯೋ ಚಿತ್ರೀಕರಣ (Video Shooting) ಮಾಡಿರುವ ಘಟನೆಗೆ ಸಂಬಂಧಿಸಿದಂತೆ ಪ್ರತಿಭಟನೆ ನಡೆಸುವ ವಿಚಾರವಾಗಿ ಮಾತನಾಡಿದ ಅವರು, ಈಗಾಗಲೇ ಘಟನೆ ನಡೆದ ಕಾಲೇಜಿನ ಆಡಳಿತ ವೀಡಿಯೋ ಚಿತ್ರೀಕರಣ ಮಾಡಿದ ವಿದ್ಯಾರ್ಥಿನಿಯರ ವಿರುದ್ಧ ಕ್ರಮ ಕೈಗೊಂಡಿದೆ. ಅವರನ್ನು ಸಸ್ಪೆಂಡ್ ಮಾಡಿದ್ದಾರೆ. ಯುನಿವರ್ಸಿಟಿ ಕಮಿಷನ್ ಆ್ಯಂಟಿ ರ‍್ಯಾಗಿಂಗ್ ಕಮಿಟಿ ಮಾಡಿದೆ. ನಾವು ಅಲ್ಲಿ ಹ್ಯಾಂಡಲ್ ಮಾಡಬಹುದು. ಯಾವಾಗ ಇದನ್ನು ಹೆಚ್ಚಿನ ರೀತಿಯಲ್ಲಿ ಬಿಂಬಿಸಲು ಹೊರಟ್ರು. ಪೊಲೀಸರು ಸತ್ಯಾಸತ್ಯತೆ ನೋಡೋದಾಗಿ ಹೇಳಿದ್ದಾರೆ. ನಾನು ಕೂಡಾ ಸತ್ಯಾಸತ್ಯತೆ ತಿಳಿಯಲು ಸೂಚಿಸಿದ್ದೇನೆ ಎಂದು ತಿಳಿಸಿದರು.
ನಾನು ಇದನ್ನು ಸಣ್ಣ ಘಟನೆ ಎಂದು ಹೇಳಿರುವ ಅರ್ಥ ಕಾಲೇಜಿನ ವಿಚಾರ ಎಂಬುದು. ಅದನ್ನು ಬೇರೆ ರೀತಿಯಲ್ಲಿ ಅರ್ಥೈಸುವ ಅಗತ್ಯವಿಲ್ಲ. ಇದು ಸಾಮಾನ್ಯವಾಗಿ ನಡೆದ ಘಟನೆ. ಯಾವುದೇ ಸಂಘ ಸಂಸ್ಥೆಗಳಾಗಬಹುದು. ವೈಯಕ್ತಿಕವಾಗಿ ಶಾಸಕರು, ಸಂಸದರು ಪತ್ರ ಕೊಟ್ಟಾಗ ಬಹಳಷ್ಟು ಅಮಾಯಕರಿದ್ದಾರೆ ಅವರ ಬಿಡುಗಡೆ ಆಗಬೇಕು ಎಂಬ ಮನವಿ ಬಂತು. ಅದನ್ನು ಏಕಾಏಕಿ ತೆಗೆಯಲು ಸಾಧ್ಯವಿಲ್ಲ ಎಂದು ತಿಳಿಸಿದರು.
ಕ್ಯಾಬಿನೆಟ್ ಸಬ್ ಕಮಿಟಿ ಮಾಡಲಾಗುತ್ತೆ. ಆ ಫೈಲ್ ಸರಿ ಇದೆ ಅಂದ್ರೆ ಸಬ್ ಕಮಿಟಿ ಮಾಡಿ ಕಲೆಕ್ಟ್ ಮಾಡಲಾಗುತ್ತೆ. ಫೈಲ್ ತಗೋಬೋದು, ಬಿಡಬಹುದು ಎಂಬುದು ಅಲ್ಲಿ ನಿರ್ಧಾರ ಆಗುತ್ತೆ. ನಂತರ ಕ್ಯಾಬಿನೆಟ್ ತೆಗೆದುಕೊಂಡು ಹೋಗಿ ಸರಿ ಇದೆ, ಇಲ್ಲ ಎಂದು ನಿರ್ಧರಿಸಲಾಗುತ್ತದೆ. ನಾವು ಹಿಂದೆ ಕೂಡ ಕೆಲ ಕೇಸ್ ವಾಪಸ್ ಪಡೆದಿದ್ದೇವೆ. ಬೊಮ್ಮಾಯಿ, ಆರಗ ಜ್ಞಾನೇಂದ್ರ ಕೂಡಾ ಗೃಹಸಚಿವರು ಆಗಿದ್ದವರು. ಅವರಿಗೆ ಪ್ರಕ್ರಿಯೆ ಗೊತ್ತಿಲ್ವಾ? ರಾಜಕಾರಣ ಮಾಡಲು ಹೀಗೆ ಮಾಡ್ತಿದ್ದಾರೆ ಎಂದು ಕಿಡಿಕಾರಿದರು. ಇದನ್ನೂ ಓದಿ: ಟಾಯ್ಲೆಟ್‌ನಲ್ಲಿ ವೀಡಿಯೋ ಶೂಟಿಂಗ್ ಯಾವ ರೀತಿ ಪ್ರ್ಯಾಂಕ್: ಸಾಮಾಜಿಕ ಕಾರ್ಯಕರ್ತೆ ರಶ್ಮಿ ಸಾಮಂತ್ ಪ್ರಶ್ನೆ
ಕಾಂಗ್ರೆಸ್ ಸರ್ಕಾರ ಆರೋಪಿಗಳ ರಕ್ಷಣೆಗೆ ನಿಂತಿದೆ ಎಂಬ ಬೊಮ್ಮಾಯಿ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ಈ ರಾಜ್ಯದ ಜನ ಪ್ರಜ್ಞಾವಂತರು. ನಮಗೆ ಕಾಂಗ್ರೆಸ್ ಸರ್ಕಾರ ಬೇಕು ಅಂತ ತಂದಿದ್ದಾರೆ. ಇವರಿಗೆ ಬೇಕಾದಂತೆ ವ್ಯಾಖ್ಯಾನ ಮಾಡಿದ್ರೆ ಸರಿಯಲ್ಲ. ಮಣಿಪುರ ಘಟನೆಗೂ ಉಡುಪಿಗೆ ಹೋಲಿಕೆ ವಿಚಾರವನ್ನು ನಾವು ಏನು ಅಂತ ಹೇಳಬೇಕು ಗೊತ್ತಿಲ್ಲ. ಅದಕ್ಕಾಗಿ ಕಮಿಷನ್ ಇದೆ. ಎರಡೂ ಘಟನೆ ಒಂದಕ್ಕೆ ತಳಕು ಹಾಕಲಾಗಲ್ಲ. ವರದಿ ಬರಲಿ ನಂತರ ನೋಡೋಣ. ತನಿಖೆ ನಡೆಯುತ್ತಿದೆ, ನೋಡೋಣ ಎಂದು ಪರಮೇಶ್ವರ್ ಹೇಳಿಕೆ ನೀಡಿದರು. ಇದನ್ನೂ ಓದಿ: ಉಡುಪಿ ಹೆಸರಿನಲ್ಲಿ ಹರಿದಾಡುತ್ತಿರುವ ಎಲ್ಲಾ ವಿಡಿಯೋಗಳು ಸುಳ್ಳು: ಖುಷ್ಬು ಸುಂದರ್
ಉಡುಪಿ: ರಾಜ್ಯ ಸರ್ಕಾರ ಈ ಪ್ರಕರಣವನ್ನು ಪ್ರ‍್ಯಾಂಕ್ ಎನ್ನುತ್ತಿದೆ. ಹುಡುಗಿಯರ ವಾಶ್‌ರೂಮ್‌ನಲ್ಲಿ ವೀಡಿಯೋ ಚಿತ್ರೀಕರಣ ಮಾಡಿರುವುದು ಯಾವ ರೀತಿಯ ಪ್ರ್ಯಾಂಕ್? ಇದೊಂದು ಗಂಭೀರವಾದ ವಿಚಾರ ಎಂದು ಸಾಮಾಜಿಕ ಕಾರ್ಯಕರ್ತೆ ರಶ್ಮಿ ಸಾಮಂತ್ (Rashmi Samant) ಹೇಳಿದ್ದಾರೆ.
ಜಿಲ್ಲೆಯ (Udupi) ಖಾಸಗಿ ಕಾಲೇಜೊಂದರಲ್ಲಿ (College) ಮಹಿಳಾ ಶೌಚಾಲಯದಲ್ಲಿ (Toilet) ವೀಡಿಯೋ (Video) ಚಿತ್ರೀಕರಣ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂತ್ರಸ್ತ ಯುವತಿಯರ ಪರವಾಗಿ ನಿಂತಿರುವ ರಶ್ಮಿ ಸಾಮಂತ್ ಪಬ್ಲಿಕ್ ಟಿವಿಯೊಂದಿಗೆ ದೂರವಾಣಿಯಲ್ಲಿ ಮಾತನಾಡಿದ್ದಾರೆ.
ಈಗ ಈ ಸುದ್ದಿ ಎಲ್ಲರಿಗೂ ತಲುಪಿದೆ. ಪತ್ರಿಕೆ, ಟಿವಿ ಚ್ಯಾನಲ್ ಎಲ್ಲದರಲ್ಲೂ ಈಗಾಗಲೇ ಸುದ್ದಿಯನ್ನು ರಿಲೀಸ್ ಮಾಡಿದ್ದಾರೆ. ಆದರೂ ಇದರ ಬಗ್ಗೆ ಯಾರೂ ಮಾತನಾಡುತ್ತಿರಲಿಲ್ಲ. ಇದೊಂದು ಗಂಭಿರವಾದ ಪ್ರಕರಣ. ನಮ್ಮ ಸಮಾಜದಲ್ಲಿ ಹೆಣ್ಣು ಮಕ್ಕಳ ಶೌಚಾಲಯದಲ್ಲಿ ಇಂತಹ ಕೃತ್ಯ ಮಾಡಿದ್ದಾರೆ ಎಂಬುದು ಗಂಭೀರ ವಿಚಾರ. ಇದರ ಬಗ್ಗೆ ಮಾತನಾಡಬೇಕು ಹಾಗೂ ಜನರಿಗೆ ಅರಿವು ನೀಡಬೇಕು ಎಂದು ಹೇಳಿದರು.
ಈ ರೀತಿ ಯಾವುದೂ ಆಗುತ್ತಿರಲಿಲ್ಲ. ಜನರಿಗೆ ಅರಿವಾಗಲಿ ಎಂಬ ಕಾರಣಕ್ಕೆ ಒಂದು ಟ್ವೀಟ್ ಮಾಡಿದ್ದೇನೆ. ಯಾರು ಕೂಡಾ ಇದರ ಬಗ್ಗೆ ಮಾತನಾಡುತ್ತಿಲ್ಲ ಎಂದು ಬರೆದಿದ್ದೇನೆ. ನಾನು ಟ್ವೀಟ್ ಮಾಡಿದ್ದು ಇದೊಂದೇ ಉದ್ದೇಶದಿಂದ. ಆದರೆ ಇದಾದ ಕೂಡಲೇ ಪೊಲೀಸರು ಬಂದರು. ಇದರ ಹಿಂದೆ ಯಾರು ಇದ್ದಾರೆ ಎಂಬ ತನಿಖೆ ಮಾಡುವ ಬದಲು ನನ್ನ ಹಿಂದೆ ಬಿದ್ದರು ಎಂದು ತಿಳಿಸಿದರು.
ರಾಜ್ಯ ಪೊಲೀಸರು ಏನು ಮಾಡುತ್ತಿದ್ದಾರೆ? ಅವರ ಉದ್ದೇಶ ಏನು? ಹೆಣ್ಣು ಮಕ್ಕಳಿಗೆ ಒಂದು ನ್ಯಾಯ ಆಗಲೇ ಬೇಕು. ನಾನು ಕೂಡಾ ಒಂದು ಹೆಣ್ಣು. ನಾನು ಕೂಡಾ ಕಾಲೇಜಿನಲ್ಲಿ ಕಲಿತವಳು. ನಾನು ಕೂಡಾ ಆ ಹೆಣ್ಣುಮಕ್ಕಳ ವಯಸ್ಸಿನವಳು. ನಾನು ಸ್ಟೂಡೆಂಟ್ ಯೂನಿಯನ್‌ನ ಲೀಡರ್ ಕೂಡಾ ಆಗಿದ್ದೆ. ನನಗೂ ಗೊತ್ತಿದೆ ಈ ತರ ಕಾಲೇಜು ಕ್ಯಾಂಪಸ್ ಅಲ್ಲಿ ಆದರೆ ಏನೆಲ್ಲಾ ಆಗುತ್ತೆ ಎಂದು ಸಿಡಿದರು.
ನನಗೂ ಗೊತ್ತಿದೆ ಹೆಣ್ಣು ಮಕ್ಕಳಿಗೆ ಎಷ್ಟು ಕಷ್ಟ ಇರುತ್ತದೆ ಎಂದು. ಮಹಿಳೆಯರು ಮುಂದೆ ಬಂದು ಹೇಳಿಕೆ ನೀಡುವುದಿಲ್ಲ. ಅವರ ಮದುವೆಗೆ, ಅವರ ಜೀವನಕ್ಕೆ ಎಷ್ಟು ಕಷ್ಟ ಆಗುತ್ತದೆ ಎಂಬ ಭಯ ಅವರಿಗೆ ಇರುತ್ತದೆ. ಮನೆಯವರು ಹೇಳುತ್ತಾರೆ, ಸಮಾಜದಲ್ಲಿ ಒಂದು ತರ ಮಾತನಾಡುತ್ತಾರೆ, ಕೆಲಸ ಸಿಗುವುದಿಲ್ಲ, ಹುಡುಗಿಯ ಲೈಫ್ ಹಾಳಾಗುತ್ತದೆ. ಇಂತಹ ಸೂಕ್ಷ್ಮ ವಿಚಾರಗಳು ಇದ್ದಾಗ ಅದನ್ನು ಅಷ್ಟೇ ಸೂಕ್ಷ್ಮವಾಗಿ ಡೀಲ್ ಮಾಡಬೇಕು ಎಂದರು. ಇದನ್ನೂ ಓದಿ: ವಿಡಿಯೋ ಚಿತ್ರೀಕರಣ ಏಳೆಂಟು ತಿಂಗಳಿಂದ ನಡೆಯುತ್ತಿದೆ, ಯುವಕರು ಭಾಗಿ: ಸುರೇಶ್ ನಾಯಕ್
ರಾಜ್ಯ ಸರ್ಕಾರ ಇದೊಂದು ಪ್ರ್ಯಾಂಕ್ ಎಂದು ಹೇಳುತ್ತಿದೆ. ಏನ್ರೀ ಪ್ರ್ಯಾಂಕ್ ಇದು? ವಾಶ್‌ರೂಮ್‌ನಲ್ಲಿ ಹುಡುಗಿಯರ ಶೂಟಿಂಗ್ ಮಾಡೋದು ಪ್ರ್ಯಾಂಕಾ? ಇದರನ್ನು ಗಂಭೀರವಾಗಿ ಪರಿಗಣಿಸಬೇಕು. ಇದೊಂದು ಗಂಭೀರ ವಿಚಾರ. ಸಮಾಜದಲ್ಲಿ ಹೀಗಾದಾಗ ನಾವು ಕಾಳಜಿ ತೆಗೆದುಕೊಳ್ಳಬೇಕು ಎಂದರು.
ಯಶ್ ಪಾಲ್ ಸುವರ್ಣ ಅವರು ನಮ್ಮ ಎಂಎಲ್‌ಎ. ಅದರ ಹಿಂದೆ ಕೂಡ ಒಂದು ಶಕ್ತಿ ಇರಬಹುದು. ಶಾಸಕರಿಗೆ ಒಂದು ನೆಟ್‌ವರ್ಕ್ ಇದೆ. ಹಲವಾರು ಮಾಹಿತಿ ಬರುತ್ತದೆ. ಅವರು ಜವಾಬ್ದಾರಿಯುತವಾಗಿ ಹೇಳಿಕೆ ಕೊಟ್ಟಿದ್ದಾರೆ. ಪ್ರಕರಣವನ್ನು ಬಹಳ ಜಾಗರೂಕವಾಗಿ ತನಿಖೆ ಮಾಡಬೇಕು. ನಮ್ಮ ಎಂಎಲ್‌ಎ ಕೂಡ ಹೀಗೆ ಹೇಳುತ್ತಿದ್ದಾರೆ ಎಂದರೆ ಸೂಕ್ಷ್ಮ ತನಿಖೆ ಮಾಡಬೇಕು. ಇಂತಹ ಷಡ್ಯಂತ್ರ ಇರುವ ಸಾಧ್ಯತೆ ಇದೆ. ಎಂಎಲ್‌ಎ ಅವರು ಹೀಗೆ ಸುಮ್ಮನೆ ಸುಮ್ಮನೆ ಏನೇನೋ ಹೇಳಲು ಸಾಧ್ಯವಿಲ್ಲ ಎಂದು ತಿಳಿಸಿದರು.
ಪೊಲೀಸರು ನನ್ನ ಪೋಷಕರನ್ನು ವಿಚಾರಣೆ ಮಾಡಿದಾಗ ಅವರು ಭಯಪಟ್ಟಿಲ್ಲ. ಏಕೆಂದರೆ ನಾನು ಇಂತಹ ಹಲವಾರು ಪರಿಸ್ಥಿತಿಗಳನ್ನು ಎದುರಿಸಿದ್ದೇನೆ. ಇದೆಲ್ಲಾ ನನ್ನ ಮನೆಯವರಿಗೂ ತಿಳಿದಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲೂ ನಾನು ಇಂತಹ ವಿಚಾರಗಳ ಬಗ್ಗೆ ಧ್ವನಿ ಎತ್ತಿದ್ದೇನೆ. ಆ ಸಂದರ್ಭದಲ್ಲೂ ಇದೇ ರೀತಿ ಆಗಿದೆ. ನನ್ನದು ವಿದ್ಯಾವಂತ ಕುಟುಂಬ. ಹೀಗಾಗಿ ನಾವು ಭಯಪಟ್ಟಿಲ್ಲ. ಅದೇ ಒಂದು ಪಾಪದ ಕುಟುಂಬವಾಗಿದ್ದರೆ ಅವರು ಏನೆಲ್ಲಾ ಮಾಡಬಹುದಾಗಿತ್ತು? ನಮ್ಮ ಜೊತೆ ಈ ರೀತಿಯೆಲ್ಲಾ ಮಾಡಿದ್ದಾರೆ, ಇನ್ನು ಬೇರೆಯವರೊಂದಿಗೆ ಏನು ಮಾಡಬಹುದು? ಎಂದು ಪ್ರಶ್ನಿಸಿದರು. ಇದನ್ನೂ ಓದಿ: ಉಡುಪಿ ವಿಡಿಯೋ ಚಿತ್ರೀಕರಣ ಕೇಸ್ – ವಿದ್ಯಾರ್ಥಿನಿಯರು, ಕಾಲೇಜ್ ವಿರುದ್ಧ ಎಫ್‌ಐಆರ್ ದಾಖಲು
ರಾಜ್ಯ ಸರ್ಕಾರ, ಪೊಲೀಸರು ಈ ಸಮಸ್ಯೆ ಬಗ್ಗೆ ಮಾತನಾಡುವವರ ಹಿಂದೆ ಹೋಗಬಾರದು. ಸಮಸ್ಯೆ ಆಗಿರುವುದನ್ನು ತನಿಖೆ ಮಾಡಬೇಕು. ಮಾತನಾಡುವವರ ಹಿಂದೆ ಹೋಗುವುದು ಸರಿ ಅಲ್ಲ. ಪ್ರಕರಣದ ಹಿಂದೆ ಇರುವ ಕಾಣದ ಕೈಗಳನ್ನು ಬಂಧಿಸಬೇಕು ಎಂದು ಮನವಿ ಮಾಡಿದರು.
ಸಂತ್ರಸ್ತ ವಿದ್ಯಾರ್ಥಿಗಳು ಮುಂದೆ ಬಂದು ದೂರು ಕೊಡಬೇಕು ಎನ್ನುವುದು ಸರಿಯಲ್ಲ. ಅವರೊಂದಿಗೆ ಎಷ್ಟು ದೊಡ್ಡ ಅನ್ಯಾಯ ಆಗಿದೆ. ಸರ್ಕಾರ ತನ್ನ ಜವಾಬ್ದಾರಿಯನ್ನು ನಿರ್ವಹಣೆ ಮಾಡಬೇಕು. ಅವರು ಮುಂದೆ ಬರಬೇಕು, ಅವರು ಮುಂದೆ ಬಂದು ದೂರು ಕೊಡಬೇಕು ಯಾಕೆ? ಅವರು ತಮ್ಮ ಭವಿಷ್ಯವನ್ನು ಹಾಳು ಮಾಡಿಕೊಳ್ಳಬೇಕು ಯಾಕೆ? ಸಂತ್ರಸ್ತೆಯರು ದೂರು ಕೊಡಬೇಕು ಎಂಬುದು ಸರಿಯಲ್ಲ. ವಿಚಾರ ತಿಳಿದು ತನಿಖೆ ಮಾಡಬೇಕು. ಈಗಾಗಲೇ ದೌರ್ಜನ್ಯ ಅನುಭವಿಸಿದವರನ್ನು ಕರೆದು ಅವರಿಗೆ ಮಾನಸಿಕ ಒತ್ತಡ ಹಾಕಬಾರದು ಎಂದು ರಶ್ಮಿ ಮನವಿ ಮಾಡಿದರು.
ಉಡುಪಿ: ಜಿಲ್ಲೆಯ ಖಾಸಗಿ ಕಾಲೇಜೊಂದರಲ್ಲಿ ಮೂವರು ವಿದ್ಯಾರ್ಥಿನಿಯರು (Students) ಮಹಿಳೆಯರ ಶೌಚಾಲಯದಲ್ಲಿ (Toilet) ಮೊಬೈಲ್ ಕ್ಯಾಮೆರಾವನ್ನು ಇರಿಸಿ ಇತರ ವಿದ್ಯಾರ್ಥಿನಿಯರ ಖಾಸಗಿ ವೀಡಿಯೋಗಳನ್ನು ಚಿತ್ರೀಕರಿಸಿರುವ ಘಟನೆ ನಡೆದಿತ್ತು. ಕಾಲೇಜು ಆಡಳಿತ ಮಂಡಳಿ ಆ ಮೂವರು ವಿದ್ಯಾರ್ಥಿನಿಯರನ್ನು ಅಮಾನತುಗೊಳಿಸಿ ಪೊಲೀಸರಿಗೆ ದೂರು ನೀಡದೇ ಇತ್ಯರ್ಥಗೊಳಿಸಲು ಮುಂದಾಗಿತ್ತು. ಆದರೆ ಈ ಬಗ್ಗೆ ಧ್ವನಿ ಎತ್ತಲು ಮುಂದಾಗಿದ್ದ ಯುವತಿಯೊಬ್ಬರಿಗೆ ಪೊಲೀಸರು ಕಿರುಕುಳ ನೀಡಿರುವ ಆರೋಪ ಕೇಳಿ ಬಂದಿದೆ.
ಶೌಚಾಲಯದಲ್ಲಿ ವಿದ್ಯಾರ್ಥಿನಿಯರು ಹಿಂದೂ ಯುವತಿಯರ ವೀಡಿಯೋ ಮಾಡಿರುವ ವಿಚಾರಕ್ಕೆ ಸಂಬಂಧಿಸಿದಂತೆ ಲಂಡನ್‌ನ ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದ ಮಾಜಿ ವಿದ್ಯಾರ್ಥಿ ನಾಯಕಿ ರಶ್ಮಿ ಸಾಮಂತ್ ಟ್ವೀಟ್ ಮಾಡಿದ್ದರು. ನಾನು ಉಡುಪಿ ಮೂಲದವಳಾಗಿದ್ದು ಉಡುಪಿಯಲ್ಲಿ ನಡೆದ ಈ ಘಟನೆಯ ಬಗ್ಗೆ ಯಾರು ಮಾತನಾಡುತ್ತಿಲ್ಲ ಯಾಕೆ? ಎಂದು ಬೇಸರ ಹೊರಹಾಕಿದ್ದರು. ಮೂವರು ವಿದ್ಯಾರ್ಥಿನಿಯರು ಕಾಲೇಜು ಟಾಯ್ಲೆಟ್‌ನಲ್ಲಿ ಕ್ಯಾಮೆರಾ ಇರಿಸಿದ್ದಾರೆ. ಹಿಂದೂ ಹುಡುಗಿಯರ ವೀಡಿಯೋ ಮಾಡಲು ಕ್ಯಾಮೆರಾ ಇರಿಸಿದ್ದಾರೆ. ಬಳಿಕ ವೀಡಿಯೋಗಳನ್ನು ತಮ್ಮ ಸಮುದಾಯದಲ್ಲಿ ಹಂಚಿಕೊಂಡಿದ್ದಾರೆ ಎಂದು ಆರೋಪಿಸಿ ಟ್ವೀಟ್ ಮಾಡಿದ್ದಾರೆ.
I’m from Udupi and nobody is talking about Alimatul Shaifa, Shabanaz and Aliya who placed cameras in female toilets of their college to record hundreds of unsuspecting Hindu girls. Videos and phots that were then circulated in community WhatsApp groups by the perpetrators.
ಈ ಟ್ವೀಟ್ ಬಳಿಕ ವೈರಲ್ ಆಗಿದ್ದು, ಟ್ವೀಟ್‌ನ ಸತ್ಯಾಸತ್ಯತೆಯ ಬಗ್ಗೆ ತಿಳಿಯಲು ಮಲ್ಪೆ ಮಣಿಪಾಲ ಪೊಲೀಸರು ಆಕೆಯ ಮನೆಗೆ ತೆರಳಿ ತಂದೆ ತಾಯಿಯ ವಿಚಾರಣೆ ನಡೆಸಿದ್ದಾರೆ. ಇದೀಗ ಪೊಲೀಸರ ನಡೆಗೆ ತೀವ್ರ ಆಕ್ಷೇಪ ವ್ಯಕ್ತವಾಗಿದ್ದು, ಆಕೆಗೆ ಹಾಗೂ ಆಕೆಯ ಪೋಷಕರಿಗೆ ಪೊಲೀಸರಿಂದ ಕಿರುಕುಳ ನೀಡಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ. ಇದನ್ನೂ ಓದಿ: ಅನುಚಿತ ವರ್ತನೆ ತೋರಿದ್ದೇ ಮುಳುವಾಯ್ತಾ? – ಹರ್ಮನ್‌ಪ್ರೀತ್ ಕೌರ್‌ಗೆ ನಿಷೇಧದ ಭೀತಿ
ಘಟನೆಯೇನು?
ಉಡುಪಿ (Udupi) ಖಾಸಗಿ ನೇತ್ರ ಕಾಲೇಜಿನ (College) ಮಹಿಳಾ ಶೌಚಾಲಯದಲ್ಲಿ ಮೊಬೈಲ್ ಅನ್ನು ಅಡಗಿಸಿಟ್ಟು ಮೂವರು ವಿದ್ಯಾರ್ಥಿನಿಯರು ಇತರ ವಿದ್ಯಾರ್ಥಿನಿಯರ ಖಾಸಗಿ ವೀಡಿಯೋಗಳನ್ನು ಶೂಟ್ ಮಾಡಿದ್ದರು. ಈ ಕೃತ್ಯ ಅರಿವಿಗೆ ಬರುತ್ತಲೇ ಹಿಂದೂ ವಿದ್ಯಾರ್ಥಿನಿಯರು ತರಾಟೆಗೆ ತೆಗೆದುಕೊಂಡಿದ್ದರು. ವೀಡಿಯೋ ಶೂಟ್ ಮಾಡಿದ್ದ ಮೂವರು ವಿದ್ಯಾರ್ಥಿನಿಯರ ಜೊತೆ ಕಾಲೇಜಿನಲ್ಲಿ ವಾಗ್ವಾದ ಮಾಡಿದ್ದರು. ಬಳಿಕ ಮಧ್ಯ ಪ್ರವೇಶಿಸಿದ ಕಾಲೇಜು ಆಡಳಿತ ಮಂಡಳಿ ಮೂವರು ವಿದ್ಯಾರ್ಥಿನಿಯರ ಮೇಲೆ ಕ್ರಮ ತೆಗೆದುಕೊಂಡು ಕಾಲೇಜಿನಿಂದ ಅಮಾನತು ಮಾಡಿದೆ.
ಮಹಿಳೆಯರ ಶೌಚಾಲಯದಲ್ಲಿ ವೀಡಿಯೋ ಶೂಟ್ ಮಾಡಿದ ವಿಚಾರ ಬೆಳಕಿಗೆ ಬರುತ್ತಲೇ ಹಿಂದೂ ಸಂಘಟನೆಗಳು ಸೂಕ್ತ ಕ್ರಮಕ್ಕೆ ಆಗ್ರಹಿಸಿವೆ. ಈ ವಿಚಾರವಾಗಿ ಪ್ರಕರಣ ದಾಖಲಿಸುವಂತೆ ಕಾಲೇಜು ಆಡಳಿತ ಮಂಡಳಿಯನ್ನು ಒತ್ತಾಯಿಸಿವೆ. ಆದರೆ ಇದುವರೆಗೂ ಕಾಲೇಜು ಆಡಳಿತ ಮಂಡಳಿ ಪ್ರಕರಣವನ್ನು ದಾಖಲಿಸಿಲ್ಲ. ಘಟನೆ ಮಲ್ಪೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಇದನ್ನೂ ಓದಿ: ಗೃಹಲಕ್ಷ್ಮಿ ಯೋಜನೆಗೆ ಹಣ ಪಡೆದರೆ ಕ್ರಿಮಿನಲ್ ಮೊಕದ್ದಮೆ – ಸಿಎಂ ಎಚ್ಚರಿಕೆ