Tag: toby film

  • ‘ಟೋಬಿ’ ನಟಿಗೆ ಬೇಡಿಕೆ- ಸೌತ್‌ ಸಿನಿಮಾಗಳಲ್ಲಿ ಚೈತ್ರಾ ಆಚಾರ್‌ ಬ್ಯುಸಿ

    ‘ಟೋಬಿ’ ನಟಿಗೆ ಬೇಡಿಕೆ- ಸೌತ್‌ ಸಿನಿಮಾಗಳಲ್ಲಿ ಚೈತ್ರಾ ಆಚಾರ್‌ ಬ್ಯುಸಿ

    ನ್ನಡದ ನಟಿಯರಾದ ರಶ್ಮಿಕಾ ಮಂದಣ್ಣ(Rashmika Mandanna), ಶ್ರೀಲೀಲಾ, ರುಕ್ಮಿಣಿ ವಸಂತ್ ಅವರಂತೆ ಚೈತ್ರಾ ಆಚಾರ್ (Chaithra Achar) ಕೂಡ ಸೌತ್‌ನತ್ತ ಮುಖ ಮಾಡಿದ್ದಾರೆ. ಕನ್ನಡದ ಜೊತೆಗೆ ದಕ್ಷಿಣದ ಸಿನಿಮಾದಲ್ಲೂ ಮಿಂಚಲು ಅವರು ರೆಡಿಯಾಗಿದ್ದಾರೆ.

    ಟೋಬಿ, ಸಪ್ತಸಾಗರದಾಚೆ ಎಲ್ಲೋ ಸೈಡ್ ಬಿ ಚಿತ್ರಗಳಲ್ಲಿ ಗುರುತಿಸಿಕೊಂಡ್ಮೇಲೆ ತಮಿಳಿನಿಂದ ಚೈತ್ರಾಗೆ ಉತ್ತಮ ಅವಕಾಶಗಳು ಅರಸಿ ಬಂದಿವೆ. ಬ್ಯಾಕ್ ಟು ಬ್ಯಾಕ್ ಚಿತ್ರಗಳಲ್ಲಿ ನಟಿ ಬ್ಯುಸಿಯಾಗಿದ್ದಾರೆ. ಇದನ್ನೂ ಓದಿ:ಫಾರ್ಮ್‌ಹೌಸ್‌ನಲ್ಲಿ ದರ್ಶನ್‌ ಪತ್ನಿ ರಿಲ್ಯಾಕ್ಸ್‌- ಕುದುರೆ ಜೊತೆ ವಿಜಯಲಕ್ಷ್ಮಿ ಪೋಸ್

    ಶಿವಣ್ಣ, ಡಾಲಿ, ಭಾವನಾ ಮೆನನ್, ಐಶ್ವರ್ಯಾ ರಾಜೇಶ್ ನಟನೆಯ ‘ಉತ್ತರಕಾಂಡ’ ಚಿತ್ರದಲ್ಲಿ ಚೈತ್ರಾ ಕೂಡ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಸದ್ಯದಲ್ಲೇ ಈ ಚಿತ್ರದ ರಿಲೀಸ್ ಬಗ್ಗೆ ಮಾಹಿತಿ ಸಿಗಲಿದೆ. ಇದನ್ನೂ ಓದಿ:ಚಿರಂಜೀವಿ ಜೊತೆ ನಟಿಸಲು ಅಬ್ಬಬ್ಬಾ 18 ಕೋಟಿ ಡಿಮ್ಯಾಂಡ್ ಮಾಡಿದ್ರಾ ನಯನತಾರಾ?

    ಪ್ರತಿಭಾನ್ವಿತ ನಟ ರಾಜ್ ಬಿ ಶೆಟ್ಟಿ ಹೊಸ ಚಿತ್ರಕ್ಕೂ ಚೈತ್ರಾ ನಾಯಕಿಯಾಗಿದ್ದಾರೆ. ಟೋಬಿ ಬಳಿಕ ಮತ್ತೆ ಈ ಜೋಡಿ ಜೊತೆಯಾಗಿ ನಟಿಸಲಿದ್ದಾರೆ. ಒಂದಿಷ್ಟು ಚಿತ್ರಗಳ ಮಾತುಕತೆ ನಡೆಯುತ್ತಿದೆ.

    ತಮಿಳು ನಟ ಸಿದ್ಧಾರ್ಥ್ ನಟನೆಯ ‘3BHK’ ಚಿತ್ರಕ್ಕೆ ಚೈತ್ರಾ ನಾಯಕಿಯಾಗಿದ್ದಾರೆ. ಈ ಸಿನಿಮಾದ ಶೂಟಿಂಗ್ ಭರದಿಂದ ನಡೆಯುತ್ತಿದೆ. ಇವರೊಂದಿಗೆ ಶರತ್‌ ಕುಮಾರ್‌, ದೇವಯಾನಿ ಸೇರಿದಂತೆ ಅನೇಕರು ನಟಿಸುತ್ತಿದ್ದಾರೆ. ಇದರ ಜೊತೆ ತಮಿಳಿನ ನಟ ಶಶಿಕುಮಾರ್ ಜೊತೆಗೂ ಅವರು ತೆರೆಹಂಚಿಕೊಂಡಿದ್ದಾರೆ. ಮತ್ತೊಂದು ಹೆಸರಿಡದ ಹೊಸ ಚಿತ್ರಕ್ಕೂ ಅವರು ಆಯ್ಕೆ ಆಗಿದ್ದಾರೆ.

    ಒಟ್ನಲ್ಲಿ ಕನ್ನಡದ ಜೊತೆ ತಮಿಳಿನಲ್ಲೂ ಮಿಂಚಲು ‘ಟೋಬಿ’ ಬೆಡಗಿ ರೆಡಿಯಾಗಿದ್ದಾರೆ. ರಶ್ಮಿಕಾ, ಶ್ರೀಲೀಲಾರಂತೆಯೇ (Sreeleela) ಸೌತ್‌ನಲ್ಲಿ ಚೈತ್ರಾ ಮೋಡಿ ಮಾಡ್ತಾರಾ? ಎಂದು ಕಾದುನೋಡಬೇಕಿದೆ.

  • ಅಪರ್ಣಾ ಬಾಲಮುರಳಿ ಜೊತೆ ರಾಜ್ ಬಿ ಶೆಟ್ಟಿ ಮತ್ತೊಂದು ಮಲಯಾಳಂ ಸಿನಿಮಾ

    ಅಪರ್ಣಾ ಬಾಲಮುರಳಿ ಜೊತೆ ರಾಜ್ ಬಿ ಶೆಟ್ಟಿ ಮತ್ತೊಂದು ಮಲಯಾಳಂ ಸಿನಿಮಾ

    ನ್ನಡದ ನಟ ರಾಜ್ ಬಿ ಶೆಟ್ಟಿ (Raj B Shetty) ಅವರು ಮಮ್ಮುಟ್ಟಿಗೆ ವಿಲನ್ ಆಗಿ ನಟಿಸಿ ಗೆದ್ಮೇಲೆ ಇದೀಗ ಮತ್ತೊಂದು ಮಲಯಾಳಂ ಸಿನಿಮಾವನ್ನು ಒಪ್ಪಿಕೊಂಡಿದ್ದಾರೆ. ರಾಷ್ಟ್ರ ಪ್ರಶಸ್ತಿ ವಿಜೇತ ನಟಿ ಅಪರ್ಣಾ (Aparna Balamurali) ಜೊತೆ ‘ರುಧಿರಂ’ (Rudhiram) ಸಿನಿಮಾದಲ್ಲಿ ರಾಜ್ ಬಿ ಶೆಟ್ಟಿ ನಟಿಸಿದ್ದಾರೆ.

    ಬಹುಭಾಷೆಗಳಲ್ಲಿ ಮೂಡಿ ಬರಲಿರುವ ‘ರುಧಿರಂ’ ಸಿನಿಮಾದ ಟೀಸರ್ ರಿಲೀಸ್ ಆಗಿದೆ. ಜೇನು ಸಾಕಾಣಿಕೆ ವ್ಯಕ್ತಿಯಾಗಿ ರಾಜ್ ಬಿ ಶೆಟ್ಟಿ ಕಾಣಿಸಿಕೊಂಡಿದ್ದಾರೆ. ಅದಷ್ಟೇ ಅಲ್ಲ, ಹಲವು ಶೇಡ್‌ಗಳಲ್ಲಿ ನಟ ಕಾಣಿಸಿಕೊಂಡಿದ್ದು, ಚಿತ್ರದಲ್ಲಿ ಹೀರೋನಾ? ವಿಲನ್ ಪಾತ್ರನಾ? ಎಂಬ ಕುತೂಹೂಲ ನೋಡುಗರಿಗೆ ಮೂಡಿದೆ.

     

    View this post on Instagram

     

    A post shared by Rudhiram (@rudhiramthemovie)

    ಇಡೀ ಟೀಸರ್‌ನಲ್ಲಿ ರಾಜ್ ಬಿ ಶೆಟ್ಟಿ, ಅಪರ್ಣಾ ಮತ್ತು ಒಂದು ನಾಯಿ ಮಾತ್ರ ತೋರಿಸಲಾಗಿದೆ. ಅಲ್ಲಲ್ಲಿ ರಕ್ತ, ಕೆಲವು ಆಯುಧಗಳು, ಬಂದೂಕುಗಳು ಸಹ ಕಾಣಿಸಿಕೊಳ್ಳುತ್ತದೆ. ಇದೊಂದು ಪಕ್ಕಾ ಥ್ರಿಲ್ಲರ್ ಸಿನಿಮಾ ಆಗಿದೆ. ಇನ್ನೂ ‘ರುಧಿರಂ’ ಚಿತ್ರವನ್ನು ಜಿಶೋ ಲೋನ್ ಆಂಟನಿ ನಿರ್ದೇಶನ ಮಾಡಿದ್ದಾರೆ. ಸದ್ಯದಲ್ಲೇ ಸಿನಿಮಾ ರಿಲೀಸ್ ಆಗಲಿದೆ. ಇದನ್ನೂ ಓದಿ:ರಾಷ್ಟ್ರ ಪ್ರಶಸ್ತಿ ವಿಜೇತ ಸಿನಿಮಾ ನಿರ್ಮಾಪಕ ಅರುಣ್ ರೈ ವಿರುದ್ಧ ಎಫ್‌ಐಆರ್

    ಇನ್ನೂ ‘ಟೋಬಿ’ ನಟ ರಾಜ್ ಬಿ ಶೆಟ್ಟಿಗೆ ಬಾಲಿವುಡ್‌ನಿಂದಲೂ ಬುಲಾವ್ ಬಂದಿದೆ. ನಿರ್ದೇಶಕ ಅನುರಾಗ್ ಕಶ್ಯಪ್ ಸಿನಿಮಾದಲ್ಲಿಯೂ ನಟಿಸುತ್ತಿದ್ದಾರೆ.

  • ಮತ್ತೆ ಹಾಟ್ ಅವತಾರ ತಾಳಿದ ‘ಟೋಬಿ’ ಬೆಡಗಿ ಚೈತ್ರಾ

    ಮತ್ತೆ ಹಾಟ್ ಅವತಾರ ತಾಳಿದ ‘ಟೋಬಿ’ ಬೆಡಗಿ ಚೈತ್ರಾ

    ‘ಟೋಬಿ’ (Toby) ಬ್ಯೂಟಿ ಚೈತ್ರಾ ಆಚಾರ್ (Chaithra Achar) ಸದಾ ಒಂದಲ್ಲಾ ಒಂದು ಫೋಟೋಶೂಟ್ ಮೂಲಕ ಸದ್ದು ಮಾಡುತ್ತಲೇ ಇರುತ್ತಾರೆ. ಇದೀಗ ಮತ್ತೆ ಹಾಟ್ ಅವತಾರ ತಾಳಿರೋದು ಪಡ್ಡೆಹುಡುಗರ ನಿದ್ದೆ ಕೆಡಿಸಿದೆ. ಸಖತ್ ಬೋಲ್ಡ್ ಆಗಿರೋ ಫೋಟೋಶೂಟ್‌ವೊಂದನ್ನು ನಟಿ ಹಂಚಿಕೊಂಡಿದ್ದಾರೆ.

    ಕಪ್ಪು ಬಣ್ಣದ ಲಾಂಗ್ ಡ್ರೆಸ್‌ನಲ್ಲಿ ನಟಿ ಹಾಟ್ ಆಗಿ ಕ್ಯಾಮೆರಾ ಕಣ್ಣಿಗೆ ಪೋಸ್ ನೀಡಿದ್ದಾರೆ. ವಿವಿಧ ಭಂಗಿಯಲ್ಲಿ ನಟಿ ನಿಂತಿರುವ ಲುಕ್ ನೋಡಿ ಪಡ್ಡೆಹುಡುಗರು ಸೈಕ್ ಆಗಿದ್ದಾರೆ. ನಟಿಯ ಅವತಾರಕ್ಕೆ ಹಾಟ್, ಸೆಕ್ಸಿ, ಬ್ಯೂಟಿಫುಲ್ ಎಂದೆಲ್ಲಾ ಬಗೆ ಬಗೆಯ ಕಾಮೆಂಟ್‌ಗಳು ಹರಿದು ಬರುತ್ತಿವೆ.

    ಈ ಹಿಂದೆ ಕೂಡ ನಟಿ ರವಿಕೆ ಧರಿಸಿದೇ ಸೀರೆಯುಟ್ಟ ಫೋಟೋವೊಂದನ್ನು ಹಂಚಿಕೊಂಡು ಇಂಟರ್‌ನೆಟ್‌ಗೆ ಬೆಂಕಿ ಹಚ್ಚಿದ್ದರು. ಆ ಫೋಟೋಶೂಟ್ ಸೋಶಿಯಲ್ ಮೀಡಿಯಾದಲ್ಲಿ ಭಾರೀ ಸದ್ದು ಮಾಡಿತ್ತು. ಇವರನ್ನು ಕನ್ನಡದ ಆಲಿಯಾ ಭಟ್‌ ಎಂದು ಫ್ಯಾನ್ಸ್‌ ಬಣ್ಣಿಸಿದ್ದಾರೆ. ಇದನ್ನೂ ಓದಿ:ಕಿಯಾರಾ ಜೊತೆ ರಾಮ್ ಚರಣ್ ರೊಮ್ಯಾನ್ಸ್- ‘ಗೇಮ್ ಚೇಂಜರ್’ ಸಾಂಗ್ ಔಟ್

    ಇನ್ನೂ ಕನ್ನಡತಿ ಚೈತ್ರಾ ತಮಿಳಿನ ಎರಡು ಬಂಪರ್ ಆಫರ್‌ಗಳನ್ನು ಬಾಚಿಕೊಂಡಿದ್ದಾರೆ. ಸ್ಟಾರ್ ನಟ ಸಿದ್ಧಾರ್ಥ್‌ಗೆ ನಾಯಕಿಯಾಗಿ ಚೈತ್ರಾ ನಟಿಸುತ್ತಿದ್ದಾರೆ. ಕನ್ನಡದ ಜೊತೆಗೆ ಪರಭಾಷೆಗಳಿಂದ ನಟಿಗೆ ಅವಕಾಶಗಳು ಅರಸಿ ಬರುತ್ತಿವೆ.

    ಸಪ್ತಸಾಗರದಾಚೆ ಎಲ್ಲೋ, ‘ಟೋಬಿ’ ಸಿನಿಮಾದಲ್ಲಿ ನಟಿಸಿದ ಮೇಲೆ ಚೈತ್ರಾ ಆಚಾರ್‌ಗೆ ಬೇಡಿಕೆ ಜಾಸ್ತಿಯಾಗಿದೆ. ರಕ್ಷಿತ್ ಶೆಟ್ಟಿ ಮತ್ತು ರಾಜ್ ಬಿ ಶೆಟ್ಟಿಗೆ ನಾಯಕಿಯಾಗಿ ಅದ್ಭುತವಾಗಿ ನಟಿಸಿದರು.

    2019ರಲ್ಲಿ `ಮಹಿರಾ’ ಸಿನಿಮಾದ ಮೂಲಕ ಚೈತ್ರಾ ಆಚಾರ್ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು. ಇದಾದ ಬಳಿಕ ಕನ್ನಡದ ಹಲವು ಸಿನಿಮಾಗಳಲ್ಲಿ ನಟಿಸಿದರು.

  • ಮಾದಕ ಲುಕ್‌ನಲ್ಲಿ ಪಡ್ಡೆಹುಡುಗರ ನಿದ್ದೆ ಕದ್ದ ಚೈತ್ರಾ ಆಚಾರ್

    ಮಾದಕ ಲುಕ್‌ನಲ್ಲಿ ಪಡ್ಡೆಹುಡುಗರ ನಿದ್ದೆ ಕದ್ದ ಚೈತ್ರಾ ಆಚಾರ್

    ಸ್ಯಾಂಡಲ್‌ವುಡ್ ನಟಿ ಚೈತ್ರಾ ಆಚಾರ್ (Chaithra Achar) ಮಾದಕ ಲುಕ್‌ನಲ್ಲಿ ಫೋಟೋಶೂಟ್ ಮಾಡಿಸಿದ್ದಾರೆ. ನಟಿಯ ಸೆಕ್ಸಿ ಪೋಸ್‌ಗೆ ಪಡ್ಡೆಹುಡುಗರು ಫಿದಾ ಆಗಿದ್ದಾರೆ. ಸದ್ಯ ‘ಟೋಬಿ’ (Toby) ನಟಿಯ ಸ್ಟೈಲೀಶ್ ಲುಕ್ ಸೋಷಿಯಲ್ ಮೀಡಿಯಾದಲ್ಲಿ ಹಲ್‌ಚಲ್ ಎಬ್ಬಿಸಿದೆ. ಇದನ್ನೂ ಓದಿ:ಬ್ರೇಕ್ ಬಳಿಕ ಮತ್ತೆ ಸಿನಿಮಾಗಳಲ್ಲಿ ಶ್ರೀಲೀಲಾ ಬ್ಯುಸಿ

    ದಿನದಿಂದ ದಿನಕ್ಕೆ ನಟಿ ಮತ್ತಷ್ಟು ಬೋಲ್ಡ್ ಆಗಿ ಫೋಟೋಶೂಟ್ ಮಾಡಿಸುವ ಮೂಲಕ ಕೆಲವರ ಕೆಂಗಣ್ಣಿಗೆ ಗುರಿಯಾದ್ರೆ, ಇತ್ತ ಪಡ್ಡೆಹುಡುಗರ ಕನಸಿನ ಕಣ್ಮಣಿಯಾಗಿ ಗಟ್ಟಿ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ.

    ಇದೀಗ ವೈಟ್ ಮತ್ತು ಪಿಂಕ್ ಬಣ್ಣದ ಗೌನ್ ಧರಿಸಿ ಸಖತ್ ಹಾಟ್ ಆಗಿ ಪೋಸ್ ಕೊಟ್ಟಿದ್ದಾರೆ. ಹಂಚಿಕೊಂಡಿರುವ ಕೆಲ ಫೋಟೋಗಳು ಬ್ಯಾಕ್‌ಲೆಸ್ ಆಗಿದೆ. ವಿವಿಧ ಭಂಗಿಯಲ್ಲಿ ಮಾದಕ ಲುಕ್‌ನಲ್ಲಿ ನಟಿ ಕಾಣಿಸಿಕೊಂಡಿದ್ದಾರೆ.

    ‘ಟೋಬಿ’ ನಟಿ ಚೈತ್ರಾ ಅದ್ಭುತ ಕಲಾವಿದೆ ಎಂಬುದನ್ನು ಇತ್ತೀಚಿನ ಸಿನಿಮಾಗಳಲ್ಲಿ ಪ್ರೂವ್ ಮಾಡಿದ್ದಾರೆ. ಇದೀಗ ತಮಿಳಿನಿಂದಲೂ (Tamil Films) ನಟಿಗೆ ಬುಲಾವ್ ಸಿಕ್ಕಿದೆ.

    ‘ಸಪ್ತಸಾಗರದಾಚೆ ಎಲ್ಲೋ’, ಟೋಬಿ ಸಿನಿಮಾದಲ್ಲಿ ನಟಿಸಿದ ಮೇಲೆ ಚೈತ್ರಾ ಆಚಾರ್‌ಗೆ ಬೇಡಿಕೆ ಜಾಸ್ತಿಯಾಗಿದೆ. ರಕ್ಷಿತ್‌ ಶೆಟ್ಟಿ ಮತ್ತು ರಾಜ್‌ ಬಿ ಶೆಟ್ಟಿಗೆ ನಾಯಕಿಯಾಗಿ ಅದ್ಭುತವಾಗಿ ನಟಿಸಿದರು. ಇದನ್ನೂ ಓದಿ:ಮತ್ತೆ ಒಂದೇ ಸಿನಿಮಾದಲ್ಲಿ ನಟಿಸಲಿದ್ದಾರೆ ‘ಸೀತಾರಾಮಂ’ ಜೋಡಿ

    ಸದ್ಯ ಚೈತ್ರಾ ಆಚಾರ್ ಕೈಯಲ್ಲಿ ಹ್ಯಾಪಿ ಬರ್ತ್‌ಡೇ ಟು ಮಿ, ಸೇರಿದಂತೆ ಕನ್ನಡ ಮತ್ತು ತಮಿಳು ಸಿನಿಮಾಗಳಿವೆ. ಮಲಯಾಳಂ, ತೆಲುಗಿನಲ್ಲಿಯೂ ಹೊಸ ಸಿನಿಮಾ ಕೇಳ್ತಿದ್ದಾರೆ.

  • ತಮಿಳಿನಲ್ಲಿ ಬಿಗ್‌ ಚಾನ್ಸ್‌ ಗಿಟ್ಟಿಸಿಕೊಂಡ ಕನ್ನಡದ ಆಲಿಯಾ ಭಟ್

    ತಮಿಳಿನಲ್ಲಿ ಬಿಗ್‌ ಚಾನ್ಸ್‌ ಗಿಟ್ಟಿಸಿಕೊಂಡ ಕನ್ನಡದ ಆಲಿಯಾ ಭಟ್

    ನ್ನಡದ ಆಲಿಯಾ ಭಟ್ (Alia Bhatt) ಎಂದೇ ಕರೆಯಲಾಗುವ ‘ಟೋಬಿ’ (Toby)  ನಟಿ ಚೈತ್ರಾ ಆಚಾರ್ (Chaithra Achar) ಇದೀಗ ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ. ಕನ್ನಡದ ಜೊತೆ ತಮಿಳಿನಲ್ಲಿಯೂ ನಟಿಸುವ ಅವಕಾಶವನ್ನು ಚೈತ್ರಾ ಗಿಟ್ಟಿಸಿಕೊಂಡಿದ್ದಾರೆ.

    ರಾಜ್ ಬಿ ಶೆಟ್ಟಿ ಜೊತೆ ‘ಟೋಬಿ’, ರಕ್ಷಿತ್ ಶೆಟ್ಟಿ ಜೊತೆ ‘ಸಪ್ತಸಾಗರದಾಚೆ ಎಲ್ಲೋ ಸೈಡ್ ಬಿ’ ಸಿನಿಮಾ ರಿಲೀಸ್ ಬಳಿಕ ಚೈತ್ರಾ ಅಭಿನಯಕ್ಕೆ ಭಾರೀ ಮೆಚ್ಚುಗೆ ವ್ಯಕ್ತವಾಗಿತ್ತು. ಈ ಬೆನ್ನಲ್ಲೇ, ಅವರಿಗೆ ಉತ್ತಮ ಅವಕಾಶಗಳು ಅರಸಿ ಬರುತ್ತಿವೆ. ತಮಿಳಿನಲ್ಲಿ 2 ಸಿನಿಮಾಗಳನ್ನು ಚೈತ್ರಾ ಒಪ್ಪಿಕೊಂಡಿದ್ದಾರೆ. ಸಿನಿಮಾ ಕೆಲಸ ಕೂಡ ನಡೆಯುತ್ತಿದೆ. ಇದನ್ನೂ ಓದಿ:ಪವನ್‌ ಕಲ್ಯಾಣ್‌ ಜೊತೆಗಿನ ಫೋಟೋ ಶೇರ್‌ ಮಾಡಿ ಸಂಭ್ರಮಿಸಿದ ರಾಮ್‌ ಚರಣ್‌ ಪತ್ನಿ

    ಯಾವ ಪ್ರಾಜೆಕ್ಟ್? ಯಾರಿಗೆ ನಾಯಕಿಯಾಗಿ ತಮಿಳಿಗೆ (Tamil Films) ಕಾಲಿಡುತ್ತಿದ್ದಾರೆ ಎಂಬುದು ರಿವೀಲ್ ಆಗಿಲ್ಲ. ನಿರ್ಮಾಣ ಸಂಸ್ಥೆ ಅಧಿಕೃತವಾಗಿ ತಿಳಿಸುವವರೆಗೂ ಕಾಯಬೇಕಿದೆ. ಇದನ್ನೂ ಓದಿ:ಡಿವೋರ್ಸ್‌ ಕೋರಿ ದುನಿಯಾ ವಿಜಯ್ ಸಲ್ಲಿಸಿದ್ದ ಅರ್ಜಿ ವಜಾ

    ಈಗಾಗಲೇ ಕನ್ನಡದ ಸಿನಿಮಾಗಳಿಂದ ರಮ್ಯಾ, ರಶ್ಮಿಕಾ ಮಂದಣ್ಣ, ರುಕ್ಮಿಣಿ ವಸಂತ್‌, ಆಶಿಕಾ ರಂಗನಾಥ್‌ ಬಳಿಕ ಚೈತ್ರಾ ಕೂಡ ತಮಿಳಿನಲ್ಲಿ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ. ಕಾಲಿವುಡ್‌ನಲ್ಲಿ ಗೆಲ್ತಾರಾ ನಟಿ ಎಂದು ಕಾದುನೋಡಬೇಕಿದೆ.

    ಇನ್ನೂ ಕನ್ನಡದ ಹ್ಯಾಪಿ ಬರ್ತ್‌ಡೇ ಟು ಮಿ, ಉತ್ತರಕಾಂಡ ಸೇರಿದಂತೆ ಹಲವು ಸಿನಿಮಾಗಳು ಚೈತ್ರಾ ಕೈಯಲ್ಲಿವೆ.

  • ನೇರವಾಗಿ ಒಟಿಟಿಯಲ್ಲಿ ರಿಲೀಸ್ ಆಗುತ್ತಿದೆ ಚೈತ್ರಾ ಆಚಾರ್ ನಟನೆಯ ಸಿನಿಮಾ

    ನೇರವಾಗಿ ಒಟಿಟಿಯಲ್ಲಿ ರಿಲೀಸ್ ಆಗುತ್ತಿದೆ ಚೈತ್ರಾ ಆಚಾರ್ ನಟನೆಯ ಸಿನಿಮಾ

    ‘ಟೋಬಿ’, ‘ಸಪ್ತಸಾಗರದಾಚೆ ಎಲ್ಲೋ’ ಸಿನಿಮಾ ಮೂಲಕ ಮನಗೆದ್ದ ನಟಿ ಚೈತ್ರಾ ಆಚಾರ್ (Chaithra Achar) ನಟನೆಯ ಹೊಸ ಸಿನಿಮಾವೊಂದು ನೇರವಾಗಿ ಒಟಿಟಿ ಫ್ಲಾರ್ಟ್ ಫಾರಂನಲ್ಲಿ ರಿಲೀಸ್ ಆಗುತ್ತಿದೆ. ಡಿಫರೆಂಟ್ ಅವತಾರದಲ್ಲಿ ಬೋಲ್ಡ್ ಬೆಡಗಿ ಚೈತ್ರಾ ಕಾಣಿಸಿಕೊಳ್ತಿದ್ದಾರೆ. ಒಟಿಟಿಯಲ್ಲಿ ಡೇಟ್ ಕೂಡ ಫಿಕ್ಸ್ ಆಗಿದೆ. ಇದನ್ನೂ ಓದಿ:ಬ್ರೇಕಪ್ ಬಳಿಕ ಜೀವನ ಹೇಗಿದೆ ಎಂದು ಹಾಡಿದ ಶ್ರುತಿ ಹಾಸನ್

    ‘ಹ್ಯಾಪಿ ಬರ್ತ್‌ಡೇ ಟು ಮಿ’ (Happy Birthday To Me) ಎಂಬ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಟೋಬಿ ನಟಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರದಲ್ಲಿ ಸ್ಕೂಲ್ ಹುಡುಗಿಯಂತೆ ಕಾಣಿಸಿಕೊಂಡಿದ್ದಾರೆ. ಚೈತ್ರಾ ಪಾತ್ರದ ಸುತ್ತ ಹಲವು ಪಾತ್ರಗಳಿವೆ. ಅದು ಪೋಸ್ಟರ್‌ನಲ್ಲಿ ಹೈಲೆಟ್ ಆಗಿದೆ. ಇದೇ ಜೂನ್ 28ರಂದು ಒಟಿಟಿಯಲ್ಲಿ ಸಿನಿಮಾ ಬಿಡುಗಡೆಯಾಗಲಿದೆ.

     

    View this post on Instagram

     

    A post shared by Chaithra J Achar (@chaithra.j.achar)


    ಅಂದಹಾಗೆ, ಈ ಸಿನಿಮಾದಲ್ಲಿ ಸಿದ್ದು ಮೂಲಿಮನಿ, ಅರ್ಚನಾ ಕೊಟ್ಟಿಗೆ, ರಚನಾ ರೈ, ಗೋಪಾಲ ದೇಶಪಾಂಡೆ ಸೇರಿದಂತೆ ಹಲವರು ನಟಿಸಿದ್ದಾರೆ. ಇದನ್ನೂ ಓದಿ:ಪ್ರಿನ್ಸ್ ಫ್ಯಾನ್ಸ್‌ಗೆ ಸಿಹಿಸುದ್ದಿ- ರಾಜಮೌಳಿ ಜೊತೆಗಿನ ಮಹೇಶ್ ಬಾಬು ಚಿತ್ರಕ್ಕೆ ಮುಹೂರ್ತ ಫಿಕ್ಸ್

    ಇನ್ನೂ ಕನ್ನಡದ ಸಿನಿಮಾ ಜೊತೆಗೆ ತಮಿಳಿನಲ್ಲಿ ಹೊಸ ಸಿನಿಮಾ ಒಪ್ಪಿಕೊಂಡಿದ್ದಾರೆ. ನಿರ್ಮಾಣ ಸಂಸ್ಥೆಯ ಅಧಿಕೃತ ಘೋಷಣೆಗೆ ನಟಿ ಕಾಯ್ತಿದ್ದಾರೆ.

  • ಬೋಲ್ಡ್ ಆದ ‘ಟೋಬಿ’ ಸುಂದರಿ- ಕನ್ನಡದ ಆಲಿಯಾ ಭಟ್ ಎಂದ ಫ್ಯಾನ್ಸ್

    ಬೋಲ್ಡ್ ಆದ ‘ಟೋಬಿ’ ಸುಂದರಿ- ಕನ್ನಡದ ಆಲಿಯಾ ಭಟ್ ಎಂದ ಫ್ಯಾನ್ಸ್

    ಸ್ಯಾಂಡಲ್‌ವುಡ್ ನಟಿ ಚೈತ್ರಾ ಆಚಾರ್ (Chaithra Achar) ಮತ್ತೆ ಹೊಸ ಫೋಟೋಶೂಟ್ ಮೂಲಕ ಸುದ್ದಿಯಲ್ಲಿದ್ದಾರೆ. ಬೋಲ್ಡ್ ಆಗಿ ‘ಟೋಬಿ’ (Toby) ಸುಂದರಿ ಫೋಟೋಶೂಟ್ ಮಾಡಿಸಿದ್ದಾರೆ. ನಟಿಯ ನ್ಯೂ ಲುಕ್‌ಗೆ ಪಡ್ಡೆಹುಡುಗರು ಫಿದಾ ಆಗಿದ್ದಾರೆ.

    ಬಿಳಿ ಬಣ್ಣದ ಶರ್ಟ್‌- ಲೈಟ್ ಕಲರ್ ಸ್ಕರ್ಟ್ ಧರಿಸಿದ್ದಾರೆ ಚೈತ್ರಾ. ಮಾದಕ ನೋಟ ಬೀರುವ ಮೂಲಕ ಸಖತ್ ಬೋಲ್ಡ್ & ಬ್ಯೂಟಿಫುಲ್ ಆಗಿ ಚೈತ್ರಾ ಕ್ಯಾಮೆರಾಗೆ ಪೋಸ್ ನೀಡಿದ್ದಾರೆ. ಚೈತ್ರಾ ಫೋಟೋ ನೋಡ್ತಿದ್ದಂತೆ ಬಾಲಿವುಡ್ ನಟಿ ಆಲಿಯಾ ಭಟ್‌ಗೆ ಹೋಲಿಸಿ ಹೊಗಳಿದ್ದಾರೆ ಫ್ಯಾನ್ಸ್. ಕನ್ನಡದ ಆಲಿಯಾ ಭಟ್ ಎಂದು ಮೆಚ್ಚುಗೆ ಸೂಚಿಸಿದ್ದಾರೆ.

    ಇತ್ತೀಚೆಗೆ ಫೋಟೋಶೂಟ್‌ವೊಂದಕ್ಕೆ ನೆಗೆಟಿವ್ ಕಾಮೆಂಟ್ ಮತ್ತು ಟ್ರೋಲ್ ಆಗಿತ್ತು. ಅದಕ್ಕೆ ಖಡಕ್ ಆಗಿ ಚೈತ್ರಾ ರಿಯಾಕ್ಟ್ ಮಾಡಿದ್ದರು. ದೇವರ ಹಾಡು ಹಾಡ್ತಾರೆ ಆದರೆ ಹಾಕುವ ಬಟ್ಟೆ ಈ ತರಹ ಎಂದು ಕಾಮೆಂಟ್ ಮಾಡುವವರಿಗೆ ನಟಿ ತಕ್ಕ ಉತ್ತರ ನೀಡಿದ್ದರು.

    ಬೇರೇ ಮನೆ ಹೆಣ್ಣು ಮಗಳ ಮರ್ಯಾದೆ ತೆಗೆಯಬೇಕು ಎಂದು ಪಣ ತೊಟ್ಟವರಿಗೆ ಏನು ಹೇಳೋದು ಅಂತಾ ನಟಿ ಗರಂ ಆಗಿದ್ದರು. ನನಗೆ ಯಾವ ವಿಚಾರ ತಪ್ಪು ಅಥವಾ ಸರಿ. ಎಲ್ಲಿ ಯಾವ ತರಹ ಇರಬೇಕು ಅನ್ನೋದು ಚೆನ್ನಾಗಿ ಗೊತ್ತು. ನಾನು ಬೆಳೆದು ಹಾದಿಯಲ್ಲಿ ನನ್ನ ಪೋಷಕರು ಮತ್ತು ಶಿಕ್ಷಕರು ನನಗೆ ಕಲಿಸಿ ಕೊಟ್ಟಿದ್ದಾರೆ ಎಂದು ನಟಿ ಪ್ರತಿಯುತ್ತರ ನೀಡಿದ್ದರು.

     

    View this post on Instagram

     

    A post shared by Chaithra J Achar (@chaithra.j.achar)

    ನನ್ನ ಸಿನಿಮಾಗಳ ಮೂಲಕ ಜನಕ್ಕೆ ರೀಚ್ ಆಗುತ್ತೀದ್ದಿನಿ. ನಾನು ಏನೋ ಕೆಲಸ ಮಾಡಿದಾಗ ಒಳ್ಳೆತನದಿಂದ ಹಾರೈಸೋದು ತುಂಬಾ ಕಮ್ಮಿ. ಅವರನ್ನ ಕೆಳಗೆ ಇಳಿಸುವಂತಹ ಮನಸ್ಥಿತಿ ಇರೋರು. ಯಾವುದೇ ರೀತಿಯ ಪೋಸ್ಟ್ ಇದ್ದರು ಕೆಟ್ಟ ಕಾಮೆಂಟ್‌ಗಳನ್ನೇ ಮಾಡುತ್ತಾರೆ ಅಂತಹವರಿಗೆ ಏನು ಹೇಳೋದು ಎಂದು ಅಸಮಾಧಾನ ಹೊರಹಾಕಿದ್ದರು. ಇದನ್ನೂ ಓದಿ:ಸೆಲೆಬ್ರೇಶನ್ ಮೂಡ್‌ನಲ್ಲಿ ಸಿಂಹಪ್ರಿಯಾ ಜೋಡಿ- ಫ್ಯಾನ್ಸ್‌ಗೆ ಲವ್ಲಿ ವಿಶ್ಸ್

    2023ರಲ್ಲಿ ‘ಟೋಬಿ’ ಮತ್ತು ‘ಸಪ್ತಸಾಗರದಾಚೆ ಎಲ್ಲೋ’ ಪಾರ್ಟ್ 2 ಈ ಚಿತ್ರಗಳು ಚೈತ್ರಾ ಆಚಾರ್ ಕೆರಿಯರ್‌ಗೆ ಬಿಗ್ ಬ್ರೇಕ್ ನೀಡಿದೆ. ಇದೀಗ ದೀಕ್ಷಿತ್ ಶೆಟ್ಟಿ ಜೊತೆಗಿನ ‘ಬ್ಲಿಂಕ್’ ಸಿನಿಮಾ ಸೇರಿದಂತೆ ಹಲವು ಸಿನಿಮಾಗಳು ಚೈತ್ರಾ ಕೈಯಲ್ಲಿದೆ.

  • ಮಲಯಾಳಂನಲ್ಲಿ ರಾಜ್ ಬಿ ಶೆಟ್ಟಿ ನಟನೆಯ ‘ಟೋಬಿ’- ರಿಲೀಸ್ ಡೇಟ್ ಫಿಕ್ಸ್

    ಮಲಯಾಳಂನಲ್ಲಿ ರಾಜ್ ಬಿ ಶೆಟ್ಟಿ ನಟನೆಯ ‘ಟೋಬಿ’- ರಿಲೀಸ್ ಡೇಟ್ ಫಿಕ್ಸ್

    ಸ್ಯಾಂಡಲ್‌ವುಡ್ (Sandalwood) ಅಂಗಳದಲ್ಲಿ ರಾಜ್ ಬಿ ಶೆಟ್ಟಿ ನಟನೆಯ ‘ಟೋಬಿ’ (Toby Film) ಸಿನಿಮಾ ಗೆದ್ದು ಬೀಗಿದೆ. ಈ ಬೆನ್ನಲ್ಲೇ ಮಾಲಿವುಡ್‌ನಲ್ಲಿ ಅಬ್ಬರಿಸಲು ವೇದಿಕೆ ಸಜ್ಜಾಗಿದೆ. ಮಲಯಾಳಂನಲ್ಲೂ ‘ಟೋಬಿ’ ಸಿನಿಮಾಗೆ ಮುಹೂರ್ತ ಫಿಕ್ಸ್ ಆಗಿದೆ.

    ಆಗಸ್ಟ್ 25ರಂದು ನೈಜ ಕಥೆಯನ್ನ ಆಧರಿಸಿದ ‘ಟೋಬಿ’ ಸಿನಿಮಾ ತೆರೆ ಕಂಡಿತ್ತು. ರಾಜ್ ಬಿ ಶೆಟ್ಟಿ (Raj B Shetty) ನಟನೆಗೆ ಕರ್ನಾಟಕ ಜನತೆ ಮಾರು ಹೋಗಿತ್ತು. ರಾಜ್- ಚೈತ್ರಾ ಆಚಾರ್ ಕಾಂಬೋ ಮೋಡಿ ಮಾಡಿತ್ತು. ಈಗ ಮಲಯಾಳಂ ಭಾಷೆಯಲ್ಲೂ ಕೂಡ ಟೋಬಿ ಸಿನಿಮಾ ರಿಲೀಸ್ ಆಗುತ್ತಿದೆ. ಇದೇ ಸೆ.22ಕ್ಕೆ ಟೋಬಿ ಚಿತ್ರಮಂದಿರಕ್ಕೆ ಲಗ್ಗೆ ಇಡುತ್ತಿದೆ. ಇದನ್ನೂ ಓದಿ:ಲೋಕೇಶ್ ಕನಗರಾಜ್ ಜೊತೆ ರಜನಿಗೆ ಮುನಿಸಿಲ್ಲ : ಹೊಸ ಸಿನಿಮಾ ಘೋಷಣೆ

     

    View this post on Instagram

     

    A post shared by Raj B Shetty (@rajbshetty)

    ರಾಜ್ ಬಿ ಶೆಟ್ಟಿ ಮಾತು ಬರ ವ್ಯಕ್ತಿಯಾಗಿ ಸಿನಿಮಾದಲ್ಲಿ ಜೀವತುಂಬಿದ್ದಾರೆ. ಸಿನಿಮಾದಲ್ಲಿ ಅವರಿಗೆ ಡೈಲಾಗ್ ಇಲ್ಲ, ಆದರೆ ಅವರ ನಟನೆಯೇ ಮಾತನಾಡುವಂತೆ ಮಾಡಿದೆ.

    ‘ಟೋಬಿ’ಗೆ ನಾಯಕಿಯರಾಗಿ ಚೈತ್ರಾ ಆಚಾರ್‌ ಸೈ ಎನಿಸಿಕೊಂಡಿದ್ದಾರೆ. ಕನ್ನಡಿಗರ ಮನಗೆದ್ದ ಈ ಸಿನಿಮಾ, ಈಗ ಮಲಯಾಳಂ ಸಿನಿಮಾ ರಂಗಕ್ಕೆ ಎಂಟ್ರಿ ಕೊಡುತ್ತಿದೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ‘ಟೋಬಿ’ ಸಿನಿಮಾ ಬಗ್ಗೆ ಹಾಡಿ ಹೊಗಳಿದ ರಕ್ಷಿತ್ ಶೆಟ್ಟಿ

    ‘ಟೋಬಿ’ ಸಿನಿಮಾ ಬಗ್ಗೆ ಹಾಡಿ ಹೊಗಳಿದ ರಕ್ಷಿತ್ ಶೆಟ್ಟಿ

    ರಾಜ್ ಬಿ ಶೆಟ್ಟಿ, ಚೈತ್ರಾ ಆಚಾರ್ ನಟನೆಯ ‘ಟೋಬಿ’ (Toby) ಸಿನಿಮಾ ಇಂದು (ಆಗಸ್ಟ್ 25) ರಿಲೀಸ್ ಆಗಿದೆ. ರಾಜ್ಯದೆಲ್ಲೆಡೆ ಟೋಬಿ ಸಿನಿಮಾ ನೋಡಿ ಪ್ರೇಕ್ಷಕರು ಭೇಷ್ ಎನ್ನುತ್ತಿದ್ದಾರೆ. ಇದೀಗ ರಕ್ಷಿತ್ ಶೆಟ್ಟಿ(Raskshit Shetty) ಕೂಡ ಸಿನಿಮಾ ನೋಡಿದ್ದಾರೆ. ರಾಜ್ ಬಿ ಶೆಟ್ಟಿ ನಟನೆಯ ಬಗ್ಗೆ ಹಾಡಿ ಹೊಗಳಿದ್ದಾರೆ. ಇದನ್ನೂ ಓದಿ:ಧನ್ಯಾ, ಶರ್ಮಿಳಾ ಮಾಂಡ್ರೆ ಜೊತೆ ದಿಗಂತ್ ಡ್ಯುಯೇಟ್

    ‘ಟೋಬಿ’ ಸಿನಿಮಾ ನೋಡಿ ರಕ್ಷಿತ್ ಶೆಟ್ಟಿ ಮೆಚ್ಚುಗೆ ಸೂಚಿಸಿದ್ದು, ‘ಟೋಬಿ’ ಸಿನಿಮಾ ಸುಂದರವಾಗಿದೆ. ರಾಜ್ ಬಿ ಶೆಟ್ಟಿ- ನಾಯಕಿ ಚೈತ್ರಾ ಆಚಾರ್ ಅದ್ಭುತವಾಗಿ ನಟಿಸಿದ್ದಾರೆ. ಬರವಣಿಗೆ, ಸಿನಿಮಾಟೋಗ್ರಾಫಿ, ಸಂಗೀತ ಬಗ್ಗೆ ರಕ್ಷಿತ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ಸಿನಿಮಾವನ್ನ ಮಿಸ್ ಮಾಡಲೇಬೇಡಿ. ನಿಮ್ಮ ಟಿಕೆಟ್‌ನ್ನ ಬುಕ್ ಮಾಡಿ ಎಂದು ನಟ ಮನವಿ ಮಾಡಿದ್ದಾರೆ.

    ಮಾರಿ ರೂಪ ತಾಳಿರೋ ರಾಜ್ ಬಿ ಶೆಟ್ಟಿ(Raj B Shetty) ಅವತಾರಕ್ಕೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಚೈತ್ರಾ ಆಚಾರ್- ಸಂಯುಕ್ತಾ ಬೆಳವಾಡಿ ಪ್ರಮುಖ ಪಾತ್ರದಲ್ಲಿ ನಟಿಸುವ ಮೂಲಕ ಗಮನ ಸೆಳೆದಿದ್ದಾರೆ.

    ಈ ಚಿತ್ರವನ್ನು ಲೈಟರ್ ಬುದ್ಧ ಫಿಲ್ಮ್ಸ್‌ನಡಿ ನಿರ್ಮಾಣ ಮಾಡಿದ್ದರೆ, ಸಿನಿಮಾದ ಮೂಲ ಕಥೆಯನ್ನು ಟಿ.ಕೆ ದಯಾನಂದ್ ಬರೆದಿದ್ದಾರೆ. ರಾಜ್ ಬಿ ಶೆಟ್ಟಿ ನಟನೆಯ ಜೊತೆ ನಿರ್ದೇಶನ ಕೂಡ ಮಾಡಿದ್ದಾರೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಸ್ವಿಮ್ಮಿಂಗ್ ಪೂಲ್‌ನಲ್ಲಿ ಚೈತ್ರಾ ಹಾಟ್ ಲುಕ್- ಫ್ಲವರ್ ಅಲ್ಲ ಫೈಯರ್ ಎಂದು ಶೈನ್ ಶೆಟ್ಟಿ

    ಸ್ವಿಮ್ಮಿಂಗ್ ಪೂಲ್‌ನಲ್ಲಿ ಚೈತ್ರಾ ಹಾಟ್ ಲುಕ್- ಫ್ಲವರ್ ಅಲ್ಲ ಫೈಯರ್ ಎಂದು ಶೈನ್ ಶೆಟ್ಟಿ

    ಸ್ಯಾಂಡಲ್‌ವುಡ್ ನಟಿ ಚೈತ್ರಾ (Chaithra Achar) ಅವರು ಸದ್ಯ ‘ಟೋಬಿ’ ಸಿನಿಮಾದ ಬಿಡುಗಡೆಗೆ ಎದುರು ನೋಡ್ತಿದ್ದಾರೆ. ಇತ್ತೀಚಿಗೆ ನಟಿ, ತಮ್ಮ ಬೋಲ್ಡ್ ಫೋಟೋಶೂಟ್ ಬಗ್ಗೆ ಮಾತನಾಡಿದವರ ಬಗ್ಗೆ ತಕ್ಕ ಉತ್ತರ ಕೊಡುವ ಮೂಲಕ ಸುದ್ದಿಯಾಗಿದ್ರು. ಈಗ ಮತ್ತೊಮ್ಮೆ ಬೋಲ್ಡ್ & ಹಾಟ್ ಆಗಿ ಸ್ವಿಮ್ ಸೂಟ್ ಫೋಟೋಶೂಟ್ ಮಾಡಿಸಿದ್ದಾರೆ. ಈ ಮೂಲಕ ಟೀಕೆ ಮಾಡೋರಿಗೆ ಹೊಸ ಫೋಟೋಶೂಟ್‌ ಮೂಲಕ ಡೊಂಟ್ ಕೇರ್ ಎಂದಿದ್ದಾರೆ.

    ‘ಸಪ್ತಸಾಗರದಾಚೆ ಎಲ್ಲೋ’ ಸಿನಿಮಾದ ನಾಯಕಿ ಚೈತ್ರಾ ಸೋಷಿಯಲ್ ಮೀಡಿಯಾದ ಸೆನ್ಸೇಷನ್ ಅಂತಾ ಹೇಳಿದರೆ ತಪ್ಪಾಗಲಾರದು. ಸದಾ ತಮ್ಮ ಗಾಯನ, ಸಿನಿಮಾಗೆ ಸಂಬಂಧಿಸಿದ ಪೋಸ್ಟ್, ಬೋಲ್ಡ್ ಫೋಟೋಸ್ ಮೂಲಕ ಗಮನ ಸೆಳೆಯುತ್ತಲೇ ಇರುತ್ತಾರೆ. ರಕ್ಷಿತ್ ಶೆಟ್ಟಿ, ರಾಜ್ ಬಿ ಶೆಟ್ಟಿ ಜೊತೆಗಿನ ಸಿನಿಮಾಗಳು ನಟಿಯ ಕೈಯಲ್ಲಿದೆ.

    ನಟಿ ಚೈತ್ರಾ ಆಚಾರ್ ಸ್ವಿಮ್ಮಿಂಗ್ ಫೋಟೋಶೂಟ್‌ನಲ್ಲಿ ಮಸ್ತ್ ಆಗಿ ಕಾಣಿಸಿಕೊಂಡಿದ್ದಾರೆ. ಕಪ್ಪು ಬಣ್ಣದ ಉಡುಗೆಯಲ್ಲಿ ಹಾಟ್ ಆಗಿ ಪೋಸ್ ನೀಡಿದ್ದಾರೆ. ಸ್ವಿಮ್ಮಿಂಗ್ ಬರಲ್ಲ ನನಗೆ, ಆದರೆ ಪೋಸ್ ಕೊಡ್ತೀನಿ ಅಂತಾ ಹೇಳಿ ಕ್ಯಾಮೆರಾ ಕಣ್ಣಿಗೆ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ. ನಿತಿಶ್ ಅಶೋದ್ ಕ್ಯಾಮೆರಾ ಕಣ್ಣಲ್ಲಿ ಚೈತ್ರಾ ಲುಕ್ ಸೆರೆಯಾಗಿದೆ. ಇದನ್ನೂ ಓದಿ:ಕೋಮಲ್ ಹುಟ್ಟುಹಬ್ಬಕ್ಕೆ ‘ರೋಲೆಕ್ಸ್’ ಪೋಸ್ಟರ್

    ನಟಿಯ ನಯಾ ಲುಕ್ ನೋಡಿ ‘ಬಿಗ್ ಬಾಸ್’ ವಿನ್ನರ್ ಶೈನ್ ಶೆಟ್ಟಿ ಕೂಡ ರಿಯಾಕ್ಟ್ ಮಾಡಿದ್ದಾರೆ. ಚೈತ್ರಾ ಅಂದರೆ ಫ್ಲವರ್ ಅಲ್ಲ, ಫೈಯರ್ ಎಂದು ನಟ ಕಾಮೆಂಟ್ ಮಾಡಿದ್ದಾರೆ. ಶೈನ್ ರಿಯಾಕ್ಟ್ ಮಾಡ್ತಿದ್ದಂತೆ ಬಗೆ ಬಗೆಯ ಕಾಮೆಂಟ್‌ಗಳು ಚೈತ್ರಾ ಫೋಟೋಗೆ ಹರಿದು ಬರುತ್ತಿದೆ. ಒಟ್ನಲ್ಲಿ ಟೋಬಿ ನಾಯಕಿ ನಯಾ ಲುಕ್‌ಗೆ ಪಡ್ಡೆಹುಡುಗರು ಫಿದಾ ಆಗಿದ್ದಾರೆ.

    ಚೈತ್ರಾ ಆಚಾರ್ ಅವರು ಟೋಬಿ, ಸಪ್ತಸಾಗರದಾಚೆ ಎಲ್ಲೋ, ಬ್ಲಿಂಕ್, ಸೇರಿದಂತೆ ಹಲವು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಸದ್ಯದಲ್ಲೇ ಈ ಬಗ್ಗೆ ಅಪ್‌ಡೇಟ್ ನೀಡಿಲಿದ್ದಾರೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]