Tag: TNPL

  • ಒಂದೇ ಎಸೆತದಲ್ಲಿ 18 ರನ್ ಕೊಟ್ಟ ರಣಧೀರ – ಕ್ರಿಕೆಟ್ ಇತಿಹಾಸದಲ್ಲೇ ಕೆಟ್ಟ ದಾಖಲೆ ಬರೆದ ಟಿಎನ್‍ಪಿಎಲ್ ಆಟಗಾರ

    ಒಂದೇ ಎಸೆತದಲ್ಲಿ 18 ರನ್ ಕೊಟ್ಟ ರಣಧೀರ – ಕ್ರಿಕೆಟ್ ಇತಿಹಾಸದಲ್ಲೇ ಕೆಟ್ಟ ದಾಖಲೆ ಬರೆದ ಟಿಎನ್‍ಪಿಎಲ್ ಆಟಗಾರ

    ಚೆನ್ನೈ: ತಮಿಳುನಾಡು ಪ್ರೀಮಿಯರ್ ಲೀಗ್‍ನಲ್ಲಿ (Tamil Nadu Premier League) ಸೇಲಂ ಸ್ಪಾರ್ಟನ್ಸ್ ತಂಡದ ಬೌಲರ್ ಅಭಿಷೇಕ್ ತನ್ವರ್ (Abhishek Tanwar) ಒಂದೇ ಎಸೆತದಲ್ಲಿ 18 ರನ್ ಬಿಟ್ಟುಕೊಟ್ಟು ಅತ್ಯಂತ ಕೆಟ್ಟ ಸಾಧನೆ ಮಾಡಿದ್ದಾರೆ.

    ಹೌದು, ತಮಿಳುನಾಡು ಪ್ರೀಮಿಯರ್ ಲೀಗ್‍ನ (TNPL) 7ನೇ ಆವೃತ್ತಿ ಅದ್ಧೂರಿ ಆರಂಭ ಪಡೆದುಕೊಂಡಿದೆ. ಈ ಟೂರ್ನಿಯಲ್ಲಿ ಚೆಪಾಕ್ ಗಿಲ್ಲೀಸ್ ಹಾಗೂ ಸೇಲಂ ಸ್ಪಾರ್ಟನ್ಸ್ ತಂಡಗಳ ನಡುವಿನ 2ನೇ ಪಂದ್ಯದಲ್ಲಿ ಬೇಡದ ದಾಖಲೆಯೊಂದು ಸೃಷ್ಟಿಯಾಗಿದೆ. ಈ ಪಂದ್ಯದ ಮೊದಲ ಇನ್ನಿಂಗ್ಸ್‍ನ ಕೊನೆಯ ಎಸೆತದಲ್ಲಿ ಸೇಲಂ ಸ್ಪಾರ್ಟನ್ಸ್ ತಂಡದ ಬೌಲರ್ ಅಭಿಷೇಕ್ ತನ್ವರ್ 18 ರನ್ ಬಿಟ್ಟುಕೊಟ್ಟು ಕೆಟ್ಟ ದಾಖಲೆ ಬರೆದಿದ್ದಾರೆ. ಇದನ್ನೂ ಓದಿ: ಹೆಚ್.ಡಿ.ದೇವೇಗೌಡರ ಭೇಟಿಯಾದ ತೇಜಸ್ವಿ ಸೂರ್ಯ

    ಒಂದೇ ಎಸೆತದಲ್ಲಿ 18 ರನ್ ಬಂದಿದ್ದು ಹೇಗೆ?
    2ನೇ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ ಕೊನೆಯ ಓವರ್ ಬೌಲಿಂಗ್ ಮಾಡಲು ಕಣಕ್ಕಿಳಿದ ವೇಗಿ ಅಭಿಷೇಕ್ ಮೊದಲ 5 ಎಸೆತಗಳಲ್ಲಿ ಕೇವಲ 7 ರನ್‍ಗಳನ್ನು ಬಿಟ್ಟುಕೊಟ್ಟು ಉತ್ತಮವಾಗಿಯೇ ಬೌಲಿಂಗ್ ಮಾಡಿದ್ದರು. ಕೊನೆಯ ಎಸೆತವನ್ನ ಕೂಡ ಅಭಿಶೇಕ್ ಅದ್ಭುತ ಯಾರ್ಕರ್ ಎಸೆದು ಬ್ಯಾಟರ್ ಅನ್ನು ಬೌಲ್ಡ್ ಮಾಡಿದರು. ಆದರೆ ಅದು ನೋಬಾಲ್ ಎಂದು ಅಂಪೈರ್ ಘೋಷಿಸಿದರು. ನಂತರ ಮತ್ತೆ ಇನ್ನಿಂಗ್ಸ್‍ನ ಕೊನೆಯ ಎಸೆತವನ್ನು ಎಸೆದ ಅಭಿಷೇಕ್ ಎಸೆತವನ್ನು ಕ್ರೀಸ್‍ನಲ್ಲಿದ್ದ ಸಂಜಯ್ ಯಾದವ್ ಭರ್ಜರಿ ಸಿಕ್ಸರ್‌ಗೆ ಅಟ್ಟಿದರು. ಅದು ಕೂಡ ನೋಬಾಲ್ ಎಂದು ಅಂಫೈರ್ ಘೋಷಿಸಿದರು. ನಂತರ ಎಸೆತ ಕೂಡ ನೋಬಾಲ್. ಆಗ ಎರಡು ರನ್‍ಗಳು ಎದುರಾಳಿ ತಂಡದ ಖಾತೆಗೆ ದೊರೆಯಿತು. 4ನೇ ಬಾರಿಗೆ ಕೊನೆಯ ಎಸೆತವನ್ನು ಎಸೆದಾಗ ಅದು ವೈಡ್ ಆಗಿ ಮತ್ತೊಂದು ಹೆಚ್ಚುವರಿ ರನ್ ತಂಡಕ್ಕೆ ಸೇರ್ಪಡೆಯಾಯಿತು. ಮುಂದಿನ ಪ್ರಯತ್ನದಲ್ಲಿ ಕೊನೆಗೂ ಲೀಗಲ್ ಎಸೆತ ಎಸೆದರು. ಆದ್ರೆ ಆ ಬಾಲ್‍ನ್ನೂ ಕ್ರೀಸ್‍ನಲ್ಲಿದ್ದ ಸಂಜಯ್ ಯಾದವ್ ಸಿಕ್ಸರ್‌ಗೆ ಅಟ್ಟಿದರು.

    ಈ ಮೂಲಕ ಚೆಪಾಕ್ ಗಿಲ್ಲೀಸ್ ತಂಡ ಒಂದೇ ಎಸೆತದಲ್ಲಿ 18 ರನ್‍ಗಳನ್ನು ಕಲೆಹಾಕಿತು. ಈ ಕಾರಣದಿಂದಾಗಿ ನಿಗದಿತ 20 ಓವರ್‌ಗಳಲ್ಲಿ ಚೆಪಾಕ್ ತಂಡ 5 ವಿಕೆಟ್ ಕಳೆದುಕೊಂಡು 217 ರನ್‍ಗಳ ಬೃಹತ್ ಮೊತ್ತ ಕಲೆಹಾಕಲು ಯಶಸ್ವಿಯಾಯಿತು. ಸಂಜಯ್ ಯಾದವ್ ಕೇವಲ 12 ಎಸೆತಗಳಲ್ಲಿ 31 ರನ್‍ಗಳನ್ನು ಗಳಿಸಿದರೆ ಆರಂಭಿಕ ಆಟಗಾರ ಪ್ರದೋಶ್ ಪೌಲ್ 55 ಎಸೆತಗಳಲ್ಲಿ 88 ರನ್‍ಗಳನ್ನು ಬಾರಿಸಿ ಅಬ್ಬರಿಸಿದರು.

    ಇನ್ನು ಈ ಮೊತ್ತವನ್ನು ಬೆನ್ನಟ್ಟಿದ ಸೇಲಂ ಸ್ಪಾರ್ಟನ್ಸ್ ತಂಡ ನಿಗದಿತ 20 ಓವರ್‍ಗಳಲ್ಲಿ 9 ವಿಕೆಟ್ ಕಳೆದುಕೊಂಡು 165 ರನ್‍ಗಳನ್ನು ಮಾತ್ರವೇ ಗಳಿಸಲು ಶಕ್ತವಾಗಿ ಸೋಲೊಪ್ಪಿಕೊಂಡಿತು. ಮಹ್ಮದ್ ಅದ್ನಾನ್ ಖಾನ್ ಅಂತಿಮ ಹಂತದಲ್ಲಿ ಕೇವಲ 15 ಎಸೆತಗಳಲ್ಲಿ 47 ರನ್‍ಗಳಿಸಿದರಾದರೂ ಅದು ತಂಡದ ನೆರವಿಗೆ ಬರಲಿಲ್ಲ. ಉಳಿದ ಆಟಗಾರರು ನೀರಸ ಪ್ರದರ್ಶನ ನೀಡಿದ ಕಾರಣ ಚೆಪಾಕ್ ಗಿಲ್ಲೀಸ್ ವಿರುದ್ಧ ಸೋಲು ಅನುಭವಿಸಿತು. ಇದನ್ನೂ ಓದಿ: ಕೇಂದ್ರ ಸರ್ಕಾರ ಎಷ್ಟೇ ಷಡ್ಯಂತ್ರ ಮಾಡಿದರೂ ಅಕ್ಕಿ ಗ್ಯಾರಂಟಿ: ಸಿದ್ದರಾಮಯ್ಯ

  • TNPL ನಲ್ಲೂ ದುಡ್ಡೋ ದುಡ್ಡು – ದುಬಾರಿ ಬೆಲೆಗೆ ಹರಾಜಾದ IPL ಚಾಂಪಿಯನ್ಸ್ ತಂಡದ ಆಟಗಾರ

    TNPL ನಲ್ಲೂ ದುಡ್ಡೋ ದುಡ್ಡು – ದುಬಾರಿ ಬೆಲೆಗೆ ಹರಾಜಾದ IPL ಚಾಂಪಿಯನ್ಸ್ ತಂಡದ ಆಟಗಾರ

    ಚೆನ್ನೈ: ಐಪಿಎಲ್ (IPL) ಮಾದರಿಯಂತೆ ಇದೇ ಮೊದಲ ಬಾರಿಗೆ ತಮಿಳುನಾಡು ಪ್ರೀಮಿಯರ್ ಲೀಗ್ (TNPL)ಗೆ ಹರಾಜು ಪ್ರಕ್ರಿಯೆ ನಡೆಯಿತು.

    ಹರಾಜು ಪ್ರಕ್ರಿಯೆಯನ್ನು ಸ್ಟಾರ್‌ಸ್ಪೋರ್ಟ್ಸ್‌ನಲ್ಲಿ ನೇರ ಪ್ರಸಾರ ಮಾಡಲಾಯಿತು. 6 ಆವೃತ್ತಿಗಳನ್ನು ನಡೆಸಿರುವ ಟಿಎನ್‌ಪಿಎಲ್ ತನ್ನ 7ನೇ ಆವೃತ್ತಿಗೆ ಐಪಿಎಲ್ ಮಾದರಿಯಲ್ಲೇ ಹರಾಜು ಪ್ರಕ್ರಿಯೆ ನಡೆಸಿತು. ಹರಾಜು ಪ್ರಕ್ರಿಯೆಯಲ್ಲಿ ಟೀಂ ಇಂಡಿಯಾದ (Team India) ಆಲ್‌ರೌಂಡರ್ ಆರ್. ಅಶ್ವಿನ್ (R Ashwin) ಸಹ ಪಾಲ್ಗೊಂಡಿದ್ದು, ದಿಂಡಿಗಲ್ ಡ್ರ‍್ಯಾಗನ್ಸ್ ಫ್ರಾಂಚೈಸಿ ಪರವಾಗಿ ಬಿಡ್ಡಿಂಗ್ ಮಾಡಿದರು. ಇದೇ ಮೊದಲ ಬಾರಿಗೆ ನಡೆದ ಹರಾಜು ಪ್ರಕ್ರಿಯೆಲ್ಲಿ ಪ್ರಮುಖ ಆಟಗಾರರು ಲಕ್ಷ ಲಕ್ಷ ಬಾಚಿಕೊಂಡರು.

    ಟಿಎನ್‌ಪಿಎಲ್‌ನಲ್ಲಿ ದಿಂಡಿಗಲ್ ಡ್ರ‍್ಯಾಗನ್ಸ್, ಲೈಕಾ ಕೋವೈ ಕಿಂಗ್ಸ್ (Lyca Kovai Kings), ನೆಲ್ಲೈ ರಾಯಲ್ ಕಿಂಗ್ಸ್, ಐಡ್ರೀಮ್ ತಿರುಪ್ಪೂರ್ ತಮಿಳು ಸೇರಿದಂತೆ 8 ತಂಡಗಳಿಗಾಗಿ ಹರಾಜು ನಡೆಸಲಾಯಿತು. ಪ್ರತಿ ತಂಡಕ್ಕೆ ಹರಾಜಿನಲ್ಲಿ ಖರ್ಚು ಮಾಡಲು 60 ಲಕ್ಷ ರೂ. ನಿಗದಿ ಮಾಡಲಾಗಿತ್ತು. ಇದನ್ನೂ ಓದಿ: ಅಂದು ಧೋನಿ, ಇಂದು ಕೌರ್ – ವಿಶ್ವಕಪ್ ಕನಸು ಭಗ್ನಗೊಳಿಸಿದ ಆ ಒಂದು ರನೌಟ್

    ಈ ವೇಳೆ ಟಿಎನ್‌ಪಿಎಲ್‌ನಲ್ಲಿ ಐಪಿಎಲ್ (IPL) ಹಾಲಿ ಚಾಂಪಿಯನ್ಸ್ ಗುಜರಾತ್ ಟೈಟಾನ್ಸ್ (Gujarat Titans) ತಂಡದ ಆಟಗಾರ ಸಾಯಿ ಸುದರ್ಶನ್ (Sai Sudarshan) ದಾಖಲೆ ಮೊತ್ತಕ್ಕೆ ಬಿಕರಿಯಾದರು. ಲೈಕಾ ಕೋವೈ ಕಿಂಗ್ಸ್ ಸಾಯಿ ಸುದರ್ಶನ್ ಒಬ್ಬರಿಗೇ 21.6 ಲಕ್ಷ ರೂ. ಬಿಡ್ ಮಾಡುವ ಮೂಲಕ ಗಮನ ಸೆಳೆಯಿತು. ಎಡಗೈ ಬ್ಯಾಟರ್ ಆಗಿರುವ ಸುದರ್ಶನ್‌ಗೆ ಭಾರೀ ಪೈಪೋಟಿ ಉಂಟಾಗಿತ್ತು. ಅಂತಿಮವಾಗಿ ಲೈಕಾ ಕೋವೈ ಕಿಂಗ್ಸ್ 21.6 ಲಕ್ಷ ರೂ.ಗಳಿಗೆ ಬಿಡ್ ಮಾಡಿತು.

    ಸದ್ಯ ಸುದರ್ಶನ್ ಐಪಿಎಲ್ ಹಾಲಿ ಚಾಂಪಿಯನ್ಸ್ ಗುಜರಾತ್ ಟೈಟಾನ್ಸ್ ತಂಡದಲ್ಲಿ ಆಡಲಿದ್ದಾರೆ. ಕಳೆದ ಬಾರಿ 20 ಲಕ್ಷ ರೂ.ಗೆ ಐಪಿಎಲ್‌ಗೆ ಹರಾಜಾಗಿದ್ದ ಸುದರ್ಶನ್ ಇದೀಗ ಐಪಿಎಲ್‌ಗಿಂತಲೂ ದುಬಾರಿ ಮೊತ್ತಕ್ಕೆ ಟಿಎನ್‌ಪಿಎಲ್‌ಗೆ ಬಿಕರಿಯಾಗಿದ್ದಾರೆ. ಇದನ್ನೂ ಓದಿ: ನನ್ನ ದೇಶ ನನ್ನ ಕಣ್ಣೀರು ನೋಡಬಾರದು – ವಿಶ್ವಕಪ್ ಕನಸು ಭಗ್ನಗೊಂಡಿದ್ದಕ್ಕೆ ಕಣ್ಣೀರಿಟ್ಟ ಕೌರ್

    2021ರ ಐಪಿಎಲ್ ಮೆಗಾ ಹರಾಜಿನಲ್ಲಿ ಸಾಯಿ ಸುದರ್ಶನ್ ಗುಜರಾತ್ ಟೈಟಾನ್ಸ್ ತಂಡಕ್ಕೆ ಸೇರ್ಪಡೆಯಾಗಿದ್ದರು. ಕಳೆದ ಸೀಸನ್‌ನಲ್ಲಿ ಅವರು 5 ಪಂದ್ಯಗಳಲ್ಲಿ 145 ರನ್ ಗಳಿಸಿದ್ದರು. ನಿಯಮಿತವಾಗಿ ಸ್ಥಾನ ಪಡೆಯುವಲ್ಲಿ ವಿಫಲವಾಗಿದ್ದರೂ, 2023ರ ಐಪಿಎಲ್‌ನಲ್ಲಿ ಕೂಡ ಅವರು ತಂಡದಲ್ಲಿ ಉಳಿದುಕೊಂಡಿದ್ದಾರೆ.

    ಮೊದಲ ದಿನದ ಟಿಎನ್‌ಪಿಎಲ್ ಹರಾಜು ಪ್ರಕ್ರಿಯೆಯಲ್ಲಿ ಸುದರ್ಶನ್ ದುಬಾರಿ ಆಟಗಾರನಾಗಿ ಹೊರಹೊಮ್ಮಿದರು. ನಂತರದಲ್ಲಿ ಸಂಜಯ್ ಯಾದವ್ 17.60 ಲಕ್ಷ ರೂಗೆ ಚೆಪಾಕ್ ಸೂಪರ್ ಗಿಲ್ಲಿಸ್ ತಂಡಕ್ಕೆ ಖರೀದಿಯಾದರೆ, ಶಿವಂ ಸಿಂಗ್ 15.95 ಲಕ್ಷ ರೂ.ಗಳಿಗೆ ದಿಂಡಿಗಲ್ ಡ್ರ್ಯಾಗನ್ಸ್‌ಗೆ ಹರಾಜಾದರು. 2ನೇ ದಿನದ ಹರಾಜಿನಲ್ಲಿ 50 ಸಾವಿರ ಮೂಲ ಬೆಲೆಯ ಕಿರಣ್ ಆಕಾಶ್ ಅವರನ್ನ ಕೋವೈ ಕಿಂಗ್ಸ್ 6.40 ಲಕ್ಷ ರೂ.ಗೆ ಖರೀದಿ ಮಾಡಿತು.

    LIVE TV
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಔಟ್ ಮಾಡಿದ ಬೌಲರ್‌ಗೆ ಮಧ್ಯದ ಬೆರಳು ತೋರಿಸಿದ CSK ಆಟಗಾರ – ಟಿಎನ್‍ಪಿಎಲ್‍ನಲ್ಲಿ ಕಿರಿಕ್

    ಔಟ್ ಮಾಡಿದ ಬೌಲರ್‌ಗೆ ಮಧ್ಯದ ಬೆರಳು ತೋರಿಸಿದ CSK ಆಟಗಾರ – ಟಿಎನ್‍ಪಿಎಲ್‍ನಲ್ಲಿ ಕಿರಿಕ್

    ಚೆನ್ನೈ: ತಮಿಳುನಾಡು ಪ್ರೀಮಿಯರ್ ಲೀಗ್ (ಟಿಎನ್‍ಪಿಎಲ್) ಆರನೇ ಆವೃತ್ತಿ ಆರಂಭಗೊಂಡಿದ್ದು, ಚೆಪಾಕ್ ಸೂಪರ್ ಗಿಲ್ಲೀಸ್ ಮತ್ತು ನೆಲ್ಲೈ ರಾಯಲ್ ಕಿಂಗ್ಸ್ ತಂಡಗಳ ನಡುವೆ ಟೂರ್ನಿಯ ಮೊದಲ ಪಂದ್ಯ ನಡೆದಿದೆ. ಈ ಪಂದ್ಯದಲ್ಲಿ ಚೆನ್ನೈ ಸೂಪರ್ ಗಿಲ್ಲೀಸ್ ತಂಡದ ಆಟಗಾರ ಎನ್.ಜಗದೀಶನ್ ನೆಲ್ಲೈ ರಾಯಲ್ ಕಿಂಗ್ಸ್ ಬೌಲರ್ ಬಾಬಾ ಅಪರಾಜಿತ್ ಮಂಕಡ್ ಮೂಲಕ ಔಟ್ ಮಾಡಿದ್ದಕ್ಕೆ ಮಧ್ಯದ ಬೆರಳು ತೋರಿಸಿ ಅನುಚಿತ ವರ್ತನೆ ತೋರಿದ್ದಾರೆ.

    ಎನ್. ಜಗದೀಶನ್ ಚೆನ್ನೈ ಸೂಪರ್ ಗಿಲ್ಲೀಸ್ ಪರ ಆರಂಭಿಕನಾಗಿ ಕಣಕ್ಕಿಳಿದು 25 ರನ್ (15 ಎಸೆತ, 4 ಬೌಂಡರಿ) ಸಿಡಿಸಿ ಬ್ಯಾಟಿಂಗ್ ಮಾಡುತ್ತಿದ್ದ ವೇಳೆ ದಾಳಿಗಿಳಿದ ಬಾಬಾ ಅಪರಾಜಿತ್ ಮಂಕಡ್ ರನ್ ಔಟ್ ಮೂಲಕ ಜಗದೀಶನ್‍ರನ್ನು ಔಟ್ ಮಾಡಿದರು. ಇದರಿಂದ ತೀವ್ರ ಬೇಸರಕ್ಕೊಳಗಾದ ಜಗದೀಶನ್ ಡಗೌಟ್‍ಗೆ ತೆರಳುವ ಮುನ್ನ ಬೌಲರ್‌ಗೆ ಮಧ್ಯದ ಬೆರಳನ್ನು ತೋರಿಸಿ ಹತಾಶೆಯಿಂದ ಹೊರ ನಡೆದರು. ಇದನ್ನೂ ಓದಿ: ಮಂಕಡ್‌ಗೆ ಸಮ್ಮತಿ – ಬಾಲ್‌ ಎಸೆಯುವ ಮುನ್ನ ನಾನ್‍ಸ್ಟ್ರೈಕ್‍ ಬಿಟ್ಟರೆ ಉಳಿಗಾಲವಿಲ್ಲ

    ಕ್ರಿಕೆಟ್ ನಿಯಮದ ಪ್ರಕಾರ ಇದೀಗ ಮಂಕಡ್ ರನ್ ಔಟ್ ಅಧಿಕೃತವೆಂದು ಘೋಷಿಸಲಾಗಿದೆ. ಆದರೂ ಮಂಕಡ್ ರನ್ ಔಟ್‍ನಿಂದಾಗಿ ಹತಾಶರಾದ ಜಗದೀಶನ್ ಮೈದಾನದಲ್ಲೇ ದುರ್ವತನೆ ತೋರಿದ್ದಾರೆ. ಈ ವರ್ತನೆಗೆ ಕಂಡ ಕ್ರಿಕೆಟ್ ಪ್ರೇಮಿಗಳು ಕಿಡಿಕಾರುತ್ತಿದ್ದು, ಸಮಾಜಿಕ ಜಾಲತಾಣದಲ್ಲಿ ಜಗದೀಶನ್ ವಿರುದ್ಧ ಹರಿಹಾಯ್ದಿದ್ದಾರೆ. ಇದನ್ನೂ ಓದಿ: ಶಮಿ ಮಿಂಚಿನ ಬೌಲಿಂಗ್‌ಗೆ ಪೂಜಾರ ಡಕ್‌ಔಟ್ – ತಬ್ಬಿ ಸಂಭ್ರಮಿಸಿದ ಟೀಂ ಇಂಡಿಯಾ ವೇಗಿ

    ಈ ಪ್ರಸಂಗದ ಬಳಿಕ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಜಗದೀಶನ್, ನಿನ್ನೆಯ ಪಂದ್ಯದಲ್ಲಿ ನನ್ನ ವರ್ತನೆಯಿಂದ ನಿಮಗೆಲ್ಲರಿಗೂ ಬೇಸರವಾಗಿರಬಹುದು. ಈ ಬಗ್ಗೆ ನಾನು ಕ್ಷಮೆ ಕೇಳುತ್ತೇನೆ. ನಾನು ಯಾವಾಗಲೂ ಕ್ರಿಕೆಟ್‍ಗಾಗಿ ಬದುಕುತ್ತೇನೆ. ನನಗೆ ಕ್ರಿಕೆಟ್ ಮತ್ತು ಆಟಗಾರರ ಮೇಲೆ ಗೌರವವಿದೆ. ಆದರೆ ನಿನ್ನಯ ಪಂದ್ಯದಲ್ಲಿ ನಡೆದ ಆ ಘಟನೆಯಿಂದ ಕೋಪಗೊಂಡು ಈ ರೀತಿ ವರ್ತಿಸಿದ್ದೇನೆ ಕ್ಷಮಿಸಿ ಎಂದು ಕ್ಷಮಾಪಣೆ ಕೇಳಿದ್ದಾರೆ. ಇದನ್ನೂ ಓದಿ: ಐಪಿಎಲ್‍ನಿಂದ ಔಟ್ ಆಗಿದ್ದ ಅಂಪೈರ್ ಅಸಾದ್ ರೌಫ್ ಇದೀಗ ಪಾಕ್‍ನಲ್ಲಿ ಚಪ್ಪಲಿ ವ್ಯಾಪಾರಿ

    ಎನ್. ಜಗದೀಶನ್ ಐಪಿಎಲ್‍ನಲ್ಲಿ ಧೋನಿ ಸಾರಥ್ಯದ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪರ ಆಡುತ್ತಿದ್ದು, 15ನೇ ಆವೃತ್ತಿ ಐಪಿಎಲ್‍ನಲ್ಲಿ ಕೆಲ ಪಂದ್ಯಗಳಲ್ಲಿ ಜಗದೀಶನ್ ಆರಂಭಿಕರಾಗಿ ಕಣಕ್ಕಿಳಿದ್ದಿದ್ದರು.

    ಚೆಪಾಕ್ ಸೂಪರ್ ಗಿಲ್ಲೀಸ್ ಮತ್ತು ನೆಲ್ಲೈ ರಾಯಲ್ ಕಿಂಗ್ಸ್ ತಂಡಗಳ ನಡುವಿನ ಟೂರ್ನಿಯ ಮೊದಲ ಪಂದ್ಯವೇ ಸೂಪರ್ ಓವರ್ ರೋಚಕತೆಗೆ ಸಾಕ್ಷಿಯಾಯಿತು. ಮೊದಲು ಬ್ಯಾಟಿಂಗ್ ಮಾಡಿದ ನೆಲ್ಲೈ ರಾಯಲ್ ಕಿಂಗ್ಸ್ 20 ಓವರ್‍ಗಳಲ್ಲಿ 4 ವಿಕೆಟ್ ನಷ್ಟಕ್ಕೆ 184 ರನ್ ಕಲೆಹಾಕಿತು. ಬಳಿಕ 185 ರನ್‍ಗಳ ಗುರಿಯನ್ನು ಬೆನ್ನತ್ತಿದ ಚೆಪಾಕ್ ಸೂಪರ್ ಗಿಲ್ಲಿಸ್ 20 ಓವರ್‍ಗಳಲ್ಲಿ 7 ವಿಕೆಟ್ ನಷ್ಟಕ್ಕೆ 184 ರನ್ ಕಲೆಹಾಕಿ ಮ್ಯಾಚ್ ಟೈ ಮಾಡಿಕೊಂಡಿತು. ನಂತರ ನಡೆದ ಸೂಪರ್ ಓವರ್‌ನಲ್ಲಿ ಚೆನ್ನೈ ಸೂಪರ್ ಗಿಲ್ಲೀಸ್ ವಿರುದ್ಧ ನೆಲ್ಲೈ ರಾಯಲ್ ಕಿಂಗ್ಸ್ ಜಯ ಸಾಧಿಸಿತು.

    Live Tv

  • ವಿಚಿತ್ರ ಬೌಲಿಂಗ್‍ನಿಂದ ವಿಕೆಟ್ ಪಡೆದು ಪ್ರೇಕ್ಷಕರ ಹುಬ್ಬೇರಿಸಿದ ಅಶ್ವಿನ್!- ವಿಡಿಯೋ

    ವಿಚಿತ್ರ ಬೌಲಿಂಗ್‍ನಿಂದ ವಿಕೆಟ್ ಪಡೆದು ಪ್ರೇಕ್ಷಕರ ಹುಬ್ಬೇರಿಸಿದ ಅಶ್ವಿನ್!- ವಿಡಿಯೋ

    ತಿರುನೆಲ್ವೇಲಿ: ಟೀಂ ಇಂಡಿಯಾ ಸೀಮಿತ ಓವರ್ ಗಳ ತಂಡದಿಂದ ಹೊರಗುಳಿದಿರುವ ಅನುಭವಿ ಆಫ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಮತ್ತೆ ತಮ್ಮ ವಿಶಿಷ್ಟ ಶೈಲಿಯ ಬೌಲಿಂಗ್ ಮೂಲಕ ಪ್ರೇಕ್ಷಕರ ಹುಬ್ಬೇರಿಸಿದ್ದಾರೆ.

    ಆರ್.ಅಶ್ವಿನ್ ಸದ್ಯ ತಮಿಳುನಾಡು ಪ್ರೀಮಿಯರ್ ಲೀಗ್ (ಟಿಎನ್‍ಪಿಎಲ್)ನಲ್ಲಿ ದಿಂಡಿಗಲ್ ಡ್ರ್ಯಾಗನ್ಸ್ ಪರ ಆಡುತ್ತಿದ್ದಾರೆ. ಸೋಮವಾರ ನಡೆದ ಮಧುರೈ ಪ್ಯಾಂಥರ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ವಿಚಿತ್ರ ಬೌಲಿಂಗ್ ಮಾಡಿ ವಿಕೆಟ್ ಪಡೆದಿದ್ದಾರೆ. ಅಶ್ವಿನ್ ಅವರ ವಿಶಿಷ್ಟ ಬೌಲಿಂಗ್ ಶೈಲಿಯ ವಿಡಿಯೋ ಸಖತ್ ವೈರಲ್ ಆಗಿದ್ದು, ವ್ಯಾಪಕ ಟೀಕೆ ವ್ಯಕ್ತವಾಗಿದೆ.

    https://twitter.com/SriniMaama16/status/1153360508566659072

    ದಿಂಡಿಗಲ್ ಡ್ರ್ಯಾಗನ್ಸ್ ವಿರುದ್ಧ ಪಂದ್ಯದಲ್ಲಿ ಗೆಲುವು ಸಾಧಿಸಲು ಮಧುರೈ ತಂಡವು ಕೊನೆಯ ಓವರಿನಲ್ಲಿ 32 ರನ್‍ಗಳನ್ನು ಗಳಿಸಬೇಕಿತ್ತು. ಈ ವೇಳೆ ದಿಂಡಗಲ್ ಪರ ಕೊನೆಯ ಓವರ್ ಬೌಲಿಂಗ್ ಮಾಡಿದ ಆರ್.ಅಶ್ವಿನ್ ತಮ್ಮ ವಿಚಿತ್ರ ಬೌಲಿಂಗ್ ಪ್ರಯೋಗ ಮಾಡಿದ್ದಾರೆ. ಬ್ಯಾಟ್ಸ್ ಮ್ಯಾನಿಗೆ ಬಾಲ್ ಕಾಣಿಸದಂತೆ ಹಿಂದಕ್ಕೆ ಹಿಡಿದುಕೊಂಡು ಓಡಿಕೊಂಡು ಬಂದು ಬೌಲಿಂಗ್ ಮಾಡಿದ್ದಾರೆ. ಈ ಮೂಲಕ ಕೊನೆಯ ಓವರ್ ನಲ್ಲಿ ಕೇವಲ 2 ರನ್‍ಗಳನ್ನು ನೀಡಿ 2 ವಿಕೆಟ್ ಪಡೆದು ತಂಡಕ್ಕೆ ಗೆಲುವು ತಂದುಕೊಟ್ಟಿದ್ದಾರೆ.

    ಟಿಎನ್‍ಪಿಎಲ್‍ನಲ್ಲಿ ಶುಕ್ರವಾರ ನಡೆದ ಸೂಪರ್ ಗಲ್ಲಿಸ್ ವಿರುದ್ಧ ನಡೆದ ಪಂದ್ಯದಲ್ಲಿಯೂ ವಿಶಿಷ್ಟ ಶೈಲಿಯ ಬೌಲಿಂಗ್ ಮಾಡಿದ್ದರು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಚರ್ಚೆಗೆ ಕಾರಣವಾಗಿತ್ತು.

    ಆರ್.ಅಶ್ವಿನ್ ಪ್ರಸಕ್ತ ಸಾಲಿನಲ್ಲಿ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್‍ನಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ನಾಯಕರಾಗಿದ್ದರು. ಈ ವೇಳೆ ಮಂಕಡ್ ಶೈಲಿಯ ರನೌಟ್ ಮಾಡುವ ಮೂಲಕ ವ್ಯಾಪಕ ಟೀಕೆಗೆ ಗುರಿಯಾಗಿದ್ದರು.

    ಬಳಿಕ ಏಕದಿನ ವಿಶ್ವಕಪ್ ವೇಳೆಯಲ್ಲಿ ಇಂಗ್ಲೆಂಡ್‍ನಲ್ಲಿ ಕೌಂಟಿ ಕ್ರಿಕೆಟ್‍ನಲ್ಲಿ ಭಾಗವಹಿಸಿದ್ದರು. ಇದಾದ ಬಳಿಕ ಟಿಎನ್‍ಪಿಎಲ್ ಕ್ರಿಕೆಟ್‍ಗೆ ಮರಳಿದ್ದು, ತಮ್ಮ ಬೌಲಿಂಗ್ ಶೈಲಿಯ ಮೂಲಕ ಸುದ್ದಿಯಾಗುತ್ತಿದ್ದಾರೆ. ಸದ್ಯದಲ್ಲಿಯೇ ವೆಸ್ಟ್ ಇಂಡೀಸ್ ಪ್ರವಾಸ ಕೈಗೊಳ್ಳಲಿರುವ ಅಶ್ವಿನ್ ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಭಾರತದ ಪರ ಆಡಲಿದ್ದಾರೆ.

    https://twitter.com/lafdebaazz/status/1153371686152130561