Tag: TMC

  • ಅಮಿತ್ ಶಾ ತಲೆ ಕತ್ತರಿಸಿ ಪ್ರದರ್ಶನಕ್ಕಿಡಬೇಕು – TMC ಸಂಸದೆ ಮಹುವಾ ಮೊಯಿತ್ರಾ ಶಾಕಿಂಗ್ ಹೇಳಿಕೆ

    ಅಮಿತ್ ಶಾ ತಲೆ ಕತ್ತರಿಸಿ ಪ್ರದರ್ಶನಕ್ಕಿಡಬೇಕು – TMC ಸಂಸದೆ ಮಹುವಾ ಮೊಯಿತ್ರಾ ಶಾಕಿಂಗ್ ಹೇಳಿಕೆ

    – ಗಡಿ ಕಾಯುವಲ್ಲಿ, ನುಸುಳುವಿಕೆ ತಡೆಯುವಲ್ಲಿ ಶಾ ವಿಫಲ ಅಂತ ವಾಗ್ದಾಳಿ

    ಕೋಲ್ಕತ್ತಾ: ತೃಣಮೂಲ ಕಾಂಗ್ರೆಸ್ (TMC) ಸಂಸದೆ ಮಹುವಾ ಮೊಯಿತ್ರಾ (Mahua Moitra) ಅವರಿಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿ ಭಾರೀ ವಿವಾದಕ್ಕೆ ಕಾರಣರಾಗಿದ್ದಾರೆ.

    ಭಾರತಕ್ಕೆ ಬಾಂಗ್ಲಾ ಪ್ರದೇಶಗಳ ಒಳನುಸುಳುವಿಕೆ (Bangladeshi immigrants) ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಮಹುವಾ ಮೊಯಿತ್ರಾ, ಅಮಿತ್‌ ಶಾ ತಲೆಯನ್ನು ಕತ್ತರಿಸಿ, ಪ್ರದರ್ಶನಕ್ಕಾಗಿ ಟೇಬಲ್‌ ಮೇಲೆ ಇಡಬೇಕು ಎಂದು ನಾಲಿಗೆ ಹರಿಬಿಟ್ಟಿದ್ದಾರೆ. ಇದನ್ನೂ ಓದಿ: ರಾಷ್ಟ್ರಪತಿಗಳಿಗೆ ಬಂದ ರಹಸ್ಯ ಪತ್ರದಿಂದ ಭಾರತ, ಚೀನಾ ಸಂಬಂಧ ಸುಧಾರಣೆ!

    ಒಂದು ವೇಳೆ ಭಾರತದ ಗಡಿಯನ್ನ (Indian Border) ರಕ್ಷಣೆ ಮಾಡಲು ಸಾಧ್ಯವಾಗದಿದ್ರೆ, ನೂರಾರು ಸಂಖ್ಯೆಯಲ್ಲಿ ನುಸುಳುಕೋರರು ಒಳನುಸುಳುತ್ತಿದ್ದರೆ, ನಮ್ಮ ಮಹಿಳೆಯರನ್ನ ಅಗೌರವಿಸುತ್ತಿದ್ದರೆ ಅಥವಾ ನಮ್ಮ ಭೂಮಿಯನ್ನ ಅತಿಕ್ರಮಿಸಿಕೊಳ್ಳುತ್ತಿದ್ದರೆ? ಅಮಿತ್‌ ಶಾ (Amit Shah) ಅವರ ತಲೆ ಕತ್ತರಿಸಿ ಟೇಬಲ್‌ ಮೇಲೆ ಪ್ರದರ್ಶನಕ್ಕಿಡುವುದು ನಿಮ್ಮ ಕರ್ತವ್ಯ. ಏಕೆಂದರೆ ಗಡಿ ಕಾಯಲು, ನುಸುಳುವಿಕೆ ತಡೆಯಲು ಅಮಿತ್ ಶಾ ವಿಫಲರಾಗಿದ್ದಾರೆ ಎಂದು ಲೇವಡಿ ಮಾಡಿದರು.

    ಸ್ವಾತಂತ್ರ್ಯ ದಿನಾಚರಣೆ ವೇಳೆ ಪ್ರಧಾನಿ ಮೋದಿಯ ಕೆಂಪುಕೋಟೆ ಭಾಷಣ ಉಲ್ಲೇಖಿಸಿದ ಮಹುವಾ, ʻಮೋದಿ ಕೆಂಪು ಕೋಟೆಯಲ್ಲಿ ನಿಂತು ನುಸುಳುಕೋರು ಜನಸಂಖ್ಯಾ ಬದಲಾವಣೆ ಮಾಡುತ್ತಿದ್ದಾರೆ ಅಂತ ಹೇಳುತ್ತಿದ್ದರು. ಇದನ್ನ ಗಂಭೀರವಾಗಿ ಪರಿಗಣಿಸದೇ ಗೃಹಸಚಿವರು ಮುಂದಿನ ಸಾಲಿನಲ್ಲಿ ನಿಂತು ಚಪ್ಪಾಳೆ ತಟ್ಟುತ್ತಿದ್ದರು. ಗಡಿಯಲ್ಲಿ ಭದ್ರತಾ ಪಡೆಗಳಿದ್ದೂ ಒಳನುಸುಳುವಿಕೆ ಏಕೆ ಮುಂದುವರಿಯುತ್ತಿದೆ? ಅದರಲ್ಲೂ ಪಶ್ಚಿಮ ಬಂಗಾಳದ ಗಡಿಯಲ್ಲಿ ಅಕ್ರಮ ವಲಸಿಗರ ಸಂಖ್ಯೆ ಹೆಚ್ಚಾಗುತ್ತಿದೆ. ಇದನ್ನ ತಡೆಯುವಲ್ಲಿ ಶಾ ವಿಫಲರಾಗಿದ್ದಾರೆ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಜಿಎಸ್‌ಟಿ ಸರಳೀಕರಣದಿಂದ ರಾಜ್ಯಗಳ ಆದಾಯ 2.5 ಲಕ್ಷ ಕೋಟಿ ನಷ್ಟ ಸಾಧ್ಯತೆ: ಸಚಿವ ಕೃಷ್ಣ ಬೈರೇಗೌಡ ಕಳವಳ

    ಕೆರಳಿದ ಕೇಸರಿ ಪಡೆ
    ಇನ್ನೂ ಮಹುವಾ ಮೊಯಿತ್ರಾ ಅವರ ಹೇಳಿಕೆಯಿಂದ ಕೇಸರಿ ಪಡೆ ಕೆರಳಿ ಕೆಂಡವಾಗಿದೆ. ಮೊಯಿತ್ರಾ ಲಜ್ಜೆಗೆಟ್ಟ ಹೇಳಿಕೆ ನೀಡಿದ್ದಾರೆ. ಎಕ್ಸ್‌ನಲ್ಲಿ ಆಕ್ರೋಶ ಹೊರಹಾಕಿರುವ ಹಿರಿಯ ನಾಯಕ ಪ್ರದೀಪ್‌ ಭಂಡಾರಿ, ಇದು ರಾಜಕೀಯ ಮೀರಿದ ಅಪ್ಪಟ ದ್ವೇಷ ಭಾಷಣ, ಇದರಲ್ಲಿ ವಿಷ ತುಂಬಿದೆ ಎಂದು ಕಿಡಿ ಕಾರಿದ್ದಾರೆ. ಇದನ್ನೂ ಓದಿ: ಅಭಿಮಾನಿಗಳ ಹೃದಯ ಗೆದ್ದ ಮೆಗಾ ಸ್ಟಾರ್ – ಚಿರಂಜೀವಿ ರಿಯಲ್ ಹೀರೋ ಎಂದ ಫ್ಯಾನ್ಸ್

  • ಉಪಚುನಾವಣೆ ಫಲಿತಾಂಶ ಪ್ರಕಟ – ಎಎಪಿ 2, ಬಿಜೆಪಿ, ಕಾಂಗ್ರೆಸ್, ಟಿಎಂಸಿ ತಲಾ ಒಂದೊಂದು ಕ್ಷೇತ್ರಗಳಲ್ಲಿ ಗೆಲುವು

    ಉಪಚುನಾವಣೆ ಫಲಿತಾಂಶ ಪ್ರಕಟ – ಎಎಪಿ 2, ಬಿಜೆಪಿ, ಕಾಂಗ್ರೆಸ್, ಟಿಎಂಸಿ ತಲಾ ಒಂದೊಂದು ಕ್ಷೇತ್ರಗಳಲ್ಲಿ ಗೆಲುವು

    – ಹಿಂದೂಗಳಿಂದಲೇ ಹೆಚ್ಚು ಮತ ಪಡೆದಿದ್ದೇವೆ: ಟಿಎಂಸಿ ಅಭ್ಯರ್ಥಿ ಆಲಿಫಾ ಅಹ್ಮದ್‌
    – ಉಪಚುನಾವಣೆ ಫಲಿತಾಂಶದ ಬೆನ್ನಲ್ಲೇ ಕಚ್ಛಾ ಬಾಂಬ್ ಸ್ಫೋಟ; 9ರ ಬಾಲಕಿ ಸಾವು

    ನವದೆಹಲಿ: ದೇಶದ 5 ರಾಜ್ಯಗಳಲ್ಲಿ ನಡೆದ ಉಪಚುನಾವಣೆಯಲ್ಲಿ (Bypoll) 2 ಆಪ್, ಬಿಜೆಪಿ, ಕಾಂಗ್ರೆಸ್, ಟಿಎಂಸಿ (TMC) ತಲಾ ಒಂದೊಂದು ಕ್ಷೇತ್ರಗಳಲ್ಲಿ ಗೆದ್ದುಕೊಂಡಿವೆ.

    ದೆಹಲಿಯ (Delhi) ಸೋಲಿನ ನಂತರ ತನ್ನ ರಾಜಕೀಯ ಭವಿಷ್ಯದ ಬಗ್ಗೆ ಅನಿಶ್ಚಿತತೆ ಎದುರಿಸುತ್ತಿದ್ದ ಎಎಪಿ ಪಂಜಾಬ್‌ನ ಲೂಧಿಯಾನ ಪಶ್ಚಿಮ ಮತ್ತು ಗುಜರಾತ್‌ನ ವಿಸಾವದರ್ ಕ್ಷೇತ್ರಗಳಲ್ಲಿ ಜಯಿಸಿದೆ. ಕಾಂಗ್ರೆಸ್ ನೇತೃತ್ವದ ಯುಡಿಎಫ್ (UDF) ಕೇರಳದ ವಯನಾಡು ಜಿಲ್ಲೆಯ ನಿಲಂಬೂರ್‌ನಲ್ಲಿ ನಿರ್ಣಾಯಕ ಗೆಲುವು ಸಾಧಿಸಿದ್ದರೆ, ಎಲ್ಲಾ 5 ಕಡೆ ಸ್ಪರ್ಧಿಸಿದ್ದರೂ ಬಿಜೆಪಿ ಗುಜರಾತ್‌ನ ಕಾಡಿಯಲ್ಲಿ ಮಾತ್ರ ಗೆಲುವು ದಾಖಲಿಸಿದೆ. ಇದನ್ನೂ ಓದಿ: Israel-Iran tensions: ರಷ್ಯಾ, ಅಮೆರಿಕದಿಂದ ತೈಲ ಆಮದು ಹೆಚ್ಚಿಸಿದ ಭಾರತ

    ಮುಂದಿನ ವರ್ಷ ವಿಧಾನಸಭೆ ಚುನಾವಣೆ ಎದುರಿಸಲಿರುವ ಪಶ್ಚಿಮ ಬಂಗಾಳದ (West Bengal) ಕಾಲಿಗಂಜ್ ಕ್ಷೇತ್ರ ಉಳಿಸಿಕೊಳ್ಳುವಲ್ಲಿ ತೃಣಮೂಲ ಕಾಂಗ್ರೆಸ್ ಸಫಲವಾಗಿದೆ. ಇದನ್ನೂ ಓದಿ: 16ನೇ ಜನಗಣತಿ – 2027ರಲ್ಲಿ ನಡೆಯಲಿರುವ ಈ ಗಣತಿಯಲ್ಲಿ ಹೊಸದೇನು?

    ಗುಜರಾತ್‌ನಲ್ಲಿ ಬಿಜೆಪಿ, ಎಎಪಿಗೆ ತಲಾ ಒಂದು ಕ್ಷೇತ್ರ
    ಗುಜರಾತ್‌ನ 2 ಕ್ಷೇತ್ರಗಳಿಗೆ ನಡೆದ ಉಪಚುನಾವಣೆ ಎಎಪಿ, ಬಿಜೆಪಿ ತಲಾ ಒಂದೊಂದು ಕ್ಷೇತ್ರ ಗೆದ್ದುಕೊಂಡಿವೆ. ವಿಸಾವದರ ಕ್ಷೇತ್ರದಿಂದ ಎಎಪಿ ನಾಯಕ ಗೋಪಾಲ್‌ ಇಟಾಲಿಯಾ ಗೆಲುವು ಸಾಧಿಸಿದ್ರೆ, ಕಾಡಿ ಕ್ಷೇತ್ರದಲ್ಲಿ ಬಿಜೆಪಿ ರಾಜೇಂದ್ರ ಛಾವಡ ಜಯ ಕಂಡಿದ್ದಾರೆ.

    ಇಟಾಲಿಯಾ ಅವರು ಎಎಪಿ ಗುಜರಾತ್ ಘಟಕದ ಮಾಜಿ ಅಧ್ಯಕ್ಷರಾಗಿದ್ದಾರೆ. ಇವರು, ಪ್ರತಿಸ್ಪರ್ಧಿ ಬಿಜೆಪಿಯ ಕಿರಿಟ್ ಪಟೇಲ್ ಎದುರು 17,554 ಮತಗಳ ಅಂತರದಿಂದ ಗೆದ್ದಿದ್ದಾರೆ. ಇಟಾಲಿಯಾ 75,942 ಮತಗಳನ್ನು ಹಾಗೂ ಪಟೇಲ್ ಅವರು 58,388 ಮತಗಳನ್ನು ಪಡೆದುಕೊಂಡಿದ್ದರು. 21 ಸುತ್ತುಗಳಲ್ಲಿ ಮತ ಎಣಿಕೆ ನಡೆದಿದೆ ಎಂದು ಚುನಾವಣಾ ಆಯೋಗ ಮಾಹಿತಿ ಹಂಚಿಕೊಂಡಿದೆ. ಇದನ್ನೂ ಓದಿ: ನೀನು ಚಪ್ಪಲಿ ಹೊಲಿಯಲು ಯೋಗ್ಯ: ನಿಂದಿಸಿದ್ದ ಮೂವರು ಇಂಡಿಗೋ ಅಧಿಕಾರಿಗಳ ವಿರುದ್ಧ ಅಟ್ರಾಸಿಟಿ ಕೇಸ್‌

    ಎಸ್‌ಸಿ ಮೀಸಲು ಕ್ಷೇತ್ರ ಕಾಡಿಯಲ್ಲಿ ಬಿಜೆಪಿಯ ಅಭ್ಯರ್ಥಿ ರಾಜೇಂದ್ರ ಛಾವಡ ಅವರು ಎದುರಾಳಿಯಾಗಿದ್ದ ಕಾಂಗ್ರೆಸ್‌ನ ರಮೇಶ್ ಛಾವಡ ಅವರ ವಿರುದ್ಧ 39,452 ಮತಗಳ ಅಂತರದಿಂದ ಭರ್ಜರಿ ಜಯಗಳಿಸಿದ್ದಾರೆ. 22 ಸುತ್ತುಗಳ ಮತ ಎಣಿಕೆಯಲ್ಲಿ ರಾಜೇಂದ್ರ ಅವರು 99,742 ಹಾಗೂ ಕಾಂಗ್ರೆಸ್‌ನ ಮಾಜಿ ಸಂಸದರಾಗಿದ್ದ ರಮೇಶ್ ಅವರು 60,290 ಮತಗಳನ್ನು ಪಡೆದಿದ್ದಾರೆ. ಜೂನ್ 19ರಂದು ನಡೆದ ಉಪಚುನಾವಣೆಯಲ್ಲಿ ಕಾಡಿ ಕ್ಷೇತ್ರದಲ್ಲಿ ಶೇ.57.90 ಹಾಗೂ ವಿಸಾವದಾರ ಕ್ಷೇತ್ರದಲ್ಲಿ ಶೇ 56.89 ಮತದಾನವಾಗಿತ್ತು.

    ಬಂಗಾಳದಲ್ಲಿ ಟಿಎಂಸಿ ಪ್ರಾಬಲ್ಯ
    ಪಶ್ಚಿಮ ಬಂಗಾಳ ಕಾಲಿಗಂಜ್‌ ವಿಧಾನಸಭಾ ಕ್ಷೇತ್ರದಲ್ಲಿ ನಡೆದಿದ್ದ ಉಪಚುನಾವಣೆಯಲ್ಲಿ ತೃಣಮೂಲ ಕಾಂಗ್ರೆಸ್‌ ಅಭ್ಯರ್ಥಿ ಆಲಿಫಾ ಅಹ್ಮದ್‌ ಗೆಲುವು ಸಾಧಿಸಿದ್ದಾರೆ. ಸಮೀಪದ ಪ್ರತಿಸ್ಪರ್ಧಿ ಬಿಜೆಪಿಯ ಆಶಿಶ್ ಫೋಷ್ ಅವರ ವಿರುದ್ಧ ಅಲಿಫಾ ಅವರು 50,049 ಮತಗಳ ಅಂತರದಿಂದ ಜಯ ಸಾಧಿಸಿದ್ದಾರೆ. ಅಲಿಫಾ ಅವರು ಒಟ್ಟು 1,02,759 ಮತಗಳನ್ನು ಪಡೆದಿದ್ದು, ಫೋಷ್ ಅವರು 52,710 ಮತಗಳನ್ನು ಪಡೆದಿದ್ದಾರೆ. ಇದನ್ನೂ ಓದಿ: ಮದ್ವೆಯಾದ ಒಂದೇ ತಿಂಗಳಿಗೆ ಪತಿ ಶವವಾಗಿ ಪತ್ತೆ – ಬ್ಯಾಂಕ್ ಉದ್ಯೋಗಿ ಜೊತೆಗಿನ ಅಫೇರ್ ಕಾರಣ; ರಹಸ್ಯ ಬಯಲು

    ಎಡಪಂಥೀಯ ಬೆಂಬಲಿಗ ಕಾಂಗ್ರೆಸ್‌ನ ಕಾಬಿಲ್ ಉದ್ದೀನ್ ಶೇಖ್ 28,348 ಮತಗಳನ್ನು ಪಡೆದಿದ್ದಾರೆ. ಗೆಲುವಿನ ಬಳಿಕ ಪ್ರತಿಕ್ರಿಯಿಸಿರುವ ಅಲಿಫಾ ಹಿಂದೂಗಳು ನಮಗೆ ಮತ ಹಾಕಿಲ್ಲ ಎನ್ನುವುದನ್ನು ನಾನು ಒಪ್ಪುವುದಿಲ್ಲ. ಹಿಂದೂಗಳಿದ್ದ ಪ್ರದೇಶದಲ್ಲಿಯೂ ಹೆಚ್ಚು ಮತಗಳನ್ನು ಪಡೆದಿದ್ದೇವೆ. ಯಾವುದೇ ಒಂದು ಸಮುದಾಯದ ಮತಗಳನ್ನು ಗುರಿಯಾಗಿಸಿಕೊಂಡಿರಲಿಲ್ಲ, ಎಲ್ಲರ ಬಳಿಯೂ ಮತಯಾಚಿಸಿದ್ದೇವೆ. ಬಂಗಾಳದಲ್ಲಿ ಕೋಮು ವಿಭಜನೆ ಮಾಡುವ ಉದ್ದೇಶವನ್ನು ನಮ್ಮ ಪಕ್ಷ ಹೊಂದಿಲ್ಲ ಎನ್ನುವುದನ್ನು ಫಲಿತಾಂಶ ಸಾಬೀತುಪಡಿಸಿದೆ ಎಂದಿದ್ದಾರೆ.

    ಈ ಮಧ್ಯೆ ಮತ ಎಣಿಕೆ ವೇಳೆ ಕಚ್ಚಾಬಾಂಬ್ ಸ್ಫೋಟಗೊಂಡು 9 ವರ್ಷದ ಬಾಲಕಿಯೊಬ್ಬಳು ಸಾವನ್ನಪ್ಪಿದ್ದಾಳೆ. ಸಿಎಂ ಮಮತಾ ಬ್ಯಾನರ್ಜಿ ಕಠಿಣ ಕ್ರಮಕ್ಕೆ ಸೂಚಿಸಿದ್ದಾರೆ.

  • ಮಮತಾ ಬ್ಯಾನರ್ಜಿಯ ಟಿಎಂಸಿಯಲ್ಲಿ ನಾಯಕರ ತಿಕ್ಕಾಟ – ಟಿಎಂಸಿ ವಾಟ್ಸಪ್ ಚಾಟ್ ಬಹಿರಂಗಪಡಿಸಿದ ಬಿಜೆಪಿಯ ಅಮಿತ್ ಮಾಳವೀಯ

    ಮಮತಾ ಬ್ಯಾನರ್ಜಿಯ ಟಿಎಂಸಿಯಲ್ಲಿ ನಾಯಕರ ತಿಕ್ಕಾಟ – ಟಿಎಂಸಿ ವಾಟ್ಸಪ್ ಚಾಟ್ ಬಹಿರಂಗಪಡಿಸಿದ ಬಿಜೆಪಿಯ ಅಮಿತ್ ಮಾಳವೀಯ

    ಕೋಲ್ಕತ್ತಾ: ಸಿಎಂ ಮಮತಾ ಬ್ಯಾನರ್ಜಿಯ (Mamata Banergee) ಟಿಎಂಸಿಯಲ್ಲಿ ನಾಯಕರು ಪರಸ್ಪರ ಕಿತ್ತಾಡಿಕೊಂಡಿದ್ದಾರೆ. ನಾಯಕರ ಮಾತಿನ ಚಕಮಕಿಯ ವಾಟ್ಸಪ್‌ ಚಾಟ್‌ನ್ನು ಬಿಜೆಪಿಯ ಅಮಿತ್‌ ಮಾಳವೀಯ ಬಹಿರಂಗಪಡಿಸಿದ್ದಾರೆ.

    ಟಿಎಂಸಿ ಸಂಸದರಾದ ಕಲ್ಯಾಣ್ ಬ್ಯಾನರ್ಜಿ, ಕೀರ್ತಿ ಆಜಾದ್ ನಡುವಿನ ಮೆಸೇಜ್ ವೈರಲ್ ಆಗಿದೆ. ಮಹುವಾ ಮೊಯಿತ್ರಾ ಉಲ್ಲೇಖಿಸಿ ಕಲ್ಯಾಣ್‌ ಬ್ಯಾನರ್ಜಿ ಮೆಸೇಜ್ ಮಾಡಿದ್ದಾರೆ. ಇಬ್ಬರು ನಾಯಕರ ಕದನದಲ್ಲಿ ಮಮತಾ ಬ್ಯಾನರ್ಜಿ ಮಧ್ಯಪ್ರವೇಶ ಮಾಡಿದ್ದಾರೆ. ಮಾಧ್ಯಮಗಳಿಗೆ ಸಂದರ್ಶನ ನೀಡದಂತೆ ಸೂಚನೆ ನೀಡಿದ್ದಾರೆ. ಆದರೆ, ಟಿಎಂಸಿ ನಾಯಕರ ನಡುವಿನ ತಿಕ್ಕಾಟವನ್ನು ಹಿರಿಯ ಸಂಸದ ಸೌಗತಾ ರಾಯ್ ಖಚಿತಪಡಿಸಿದ್ದಾರೆ.

    ನಾನು ಕಳೆದ 40 ವರ್ಷಗಳಿಂದ ರಾಜಕೀಯದಲ್ಲಿದ್ದೇನೆ. ಈ ಮಹಿಳಾ ಸಂಸದೆ ಚುನಾವಣಾ ಆಯೋಗದ ಕಚೇರಿಯ ಹೊರಗೆ ಭದ್ರತಾ ಸಿಬ್ಬಂದಿಯನ್ನು ಸಂಪರ್ಕಿಸಿ ನನ್ನನ್ನು ಬಂಧಿಸುವಂತೆ ಕೇಳುತ್ತಿದ್ದರು. ನನ್ನನ್ನು ಜೈಲಿಗೆ ಕಳುಹಿಸಲು ಅವರು ಯಾರು? ಅವರು ನನ್ನ ಮೇಲೆ ನಿಂದನೆ ಮಾಡಿದ್ದಾರೆ. ಸಂಸತ್ತಿನಲ್ಲಿ ಹೋರಾಡುವುದು ನಾನೇ. ನಾನು ನಿರ್ದಿಷ್ಟ ಕೈಗಾರಿಕಾ ಸಂಸ್ಥೆಯ ಬಗ್ಗೆ ಮಾತ್ರ ಗೀಳು ಹೊಂದಿರುವ ವ್ಯಕ್ತಿಯಲ್ಲ ಎಂದು ಕಲ್ಯಾಣ್‌ ಬ್ಯಾನರ್ಜಿ ಪ್ರತಿಕ್ರಿಯೆ ನೀಡಿದ್ದಾರೆ.

    ಮಹಿಳಾ ಸಂಸದೆ ನಿರರ್ಗಳವಾಗಿ ಇಂಗ್ಲಿಷ್ ಮಾತನಾಡುತ್ತಾರೆ ಎಂದ ಮಾತ್ರಕ್ಕೆ ಅವರು ಯಾರನ್ನಾದರೂ ಅವಮಾನಿಸಬಹುದು ಎಂದರ್ಥವಲ್ಲ ಎಂದು ಬ್ಯಾನರ್ಜಿ ಅಸಮಾಧಾನ ಹೊರಹಾಕಿದ್ದಾರೆ.

  • ದಿಲ್ಲಿ ಗೆದ್ದಾಯ್ತು.. 2026ಕ್ಕೆ ಬಂಗಾಳ ಟಾರ್ಗೆಟ್‌: ಮಮತಾ ಬ್ಯಾನರ್ಜಿಗೆ ಬಿಜೆಪಿ ಎಚ್ಚರಿಕೆ

    ದಿಲ್ಲಿ ಗೆದ್ದಾಯ್ತು.. 2026ಕ್ಕೆ ಬಂಗಾಳ ಟಾರ್ಗೆಟ್‌: ಮಮತಾ ಬ್ಯಾನರ್ಜಿಗೆ ಬಿಜೆಪಿ ಎಚ್ಚರಿಕೆ

    ಕೋಲ್ಕತ್ತಾ: ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅದ್ಭುತ ಗೆಲುವಿನಿಂದ ಉತ್ತೇಜಿತರಾಗಿರುವ ಸುವೇಂದು ಅಧಿಕಾರಿ, ಪಶ್ಚಿಮ ಬಂಗಾಳ ಸಿಎಂಗೆ ಎಚ್ಚರಿಕೆ ಸಂದೇಶವೊಂದನ್ನು ರವಾನಿಸಿದ್ದಾರೆ. ‘ಎಚ್ಚರಿಕೆಯಿಂದ ಇರಿ.. ಮುಂದಿನ ಟಾರ್ಗೆಟ್‌ ನೀವೇ’ ಎಂದು ತಿಳಿಸಿದ್ದಾರೆ.

    ಬಿಜೆಪಿಯ ಗೆಲುವು ಖಚಿತವಾದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅಧಿಕಾರಿ, ‘ದೆಹಲಿ ಕಿ ಜೀತ್ ಹಮಾರಿ ಹೈ… 2026 ಮೇ ಬೆಂಗಾಲ್ ಕಿ ಬಾರಿ’ (ನಾವು ದೆಹಲಿಯನ್ನು ಗೆದ್ದಿದ್ದೇವೆ.. 2026 ಕ್ಕೆ ಬಂಗಾಳದ ಸರದಿ) ಎಂದು ಬ್ಯಾನರ್ಜಿಗೆ ಎಚ್ಚರಿಕೆ ನೀಡಿದ್ದಾರೆ.

    ಬಂಗಾಳದ ಮತ್ತೊಬ್ಬ ಹಿರಿಯ ಬಿಜೆಪಿ ನಾಯಕ ಸುಕಾಂತ ಮಜುಂದಾರ್ ಕೂಡ ಇದೇ ರೀತಿಯ ಎಚ್ಚರಿಕೆಯನ್ನು ನೀಡುತ್ತಾ, ‘ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಬಂಗಾಳದ ಜನರು ಕೂಡ ಬಿಜೆಪಿಗೆ ಮತ ಹಾಕುತ್ತಾರೆ’ ಎಂದು ಭರವಸೆ ವ್ಯಕ್ತಪಡಿಸಿದ್ದಾರೆ. ಬಿಜೆಪಿಯ ಗೆಲುವಿಗಾಗಿ ಇಬ್ಬರೂ ದೆಹಲಿಯ ಬಂಗಾಳಿ ಸಮುದಾಯಕ್ಕೆ ಧನ್ಯವಾದ ತಿಳಿಸಿದ್ದಾರೆ.

    ದೆಹಲಿಯ 70 ವಿಧಾನಸಭಾ ಸ್ಥಾನಗಳಲ್ಲಿ 48 ಕ್ಷೇತ್ರಗಳನ್ನು ಬಿಜೆಪಿ ಗೆದ್ದುಕೊಂಡಿದೆ. ಎಎಪಿ 22 ಸ್ಥಾನಗಳಿಗೆ ತೃಪ್ತಿ ಪಟ್ಟಿದೆ. ಕಾಂಗ್ರೆಸ್‌ ಸೊನ್ನೆ ಸುತ್ತಿದೆ.

    ಬಿಜೆಪಿ 2020 ರ ಚುನಾವಣೆಯಲ್ಲಿ 8 ಮತ್ತು 2015 ರಲ್ಲಿ ಮೂರು ಸ್ಥಾನಗಳನ್ನು ಗೆದ್ದಿತ್ತು. ಎಎಪಿಯಲ್ಲಿ ಕೇಜ್ರಿವಾಲ್‌, ಸಿಸೋಡಿಯಾ ಸೇರಿದಂತೆ ಅನೇಕ ಘಟಾನುಘಟಿ ನಾಯಕರೇ ಚುನಾವಣೆಯಲ್ಲಿ ಸೋತು ಮುಖಭಂಗ ಅನುಭವಿಸಿದ್ದಾರೆ.

  • ದೆಹಲಿ ಚುನಾವಣೆಗೆ ಆಪ್‌ಗೆ ಟಿಎಂಸಿ ಬೆಂಬಲ – ಧನ್ಯವಾದ ಎಂದ ಕೇಜ್ರಿವಾಲ್

    ದೆಹಲಿ ಚುನಾವಣೆಗೆ ಆಪ್‌ಗೆ ಟಿಎಂಸಿ ಬೆಂಬಲ – ಧನ್ಯವಾದ ಎಂದ ಕೇಜ್ರಿವಾಲ್

    ನವದೆಹಲಿ: ಮುಂಬರುವ ದೆಹಲಿ ಚುನಾವಣೆ ಹಿನ್ನೆಲೆ ಆಪ್‌ಗೆ ಟಿಎಂಸಿ ಬೆಂಬಲ ನೀಡಿದ್ದು, ಅರವಿಂದ್ ಕೇಜ್ರಿವಾಲ್ (Arvind Kejriwal) ಧನ್ಯವಾದ ತಿಳಿಸಿದ್ದಾರೆ.

    ಫೆ.5 ರಂದು ನಡೆಯಲಿರುವ ದೆಹಲಿ ವಿಧಾನಸಭೆ ಚುನಾವಣೆಗೆ (Delhi Assembly Election) ಇಂದು (ಜ.08) ಆಮ್ ಆದ್ಮಿ ಪಕ್ಷಕ್ಕೆ ಮಮತಾ ಬ್ಯಾನರ್ಜಿಯವರ ತೃಣಮೂಲ ಕಾಂಗ್ರೆಸ್ (Trinamool Congress) ಪಕ್ಷ ಬೆಂಬಲ ನೀಡಿದೆ.ಇದನ್ನೂ ಓದಿ: ಡಿನ್ನರ್ ಹೊಸತೇನು ಅಲ್ಲ, ಮುಸುಕಿನ ಗುದ್ದಾಟ ಏನಿಲ್ಲ: ಸಚಿವ ಸತೀಶ್ ಜಾರಕಿಹೊಳಿ

    ಇದಕ್ಕೆ ಪ್ರತಿಕ್ರಿಯಿಸಿ, ಎಎಪಿ ಮುಖ್ಯಸ್ಥ ಅರವಿಂದ್ ಕೇಜ್ರವಾಲ್ ಎಕ್ಸ್ನಲ್ಲಿ ಪೋಸ್ಟ್ ಹಂಚಿಕೊಂಡಿದ್ದು, ಆಮ್ ಆದ್ಮಿ ಪಕ್ಷಕ್ಕೆ ತಮ್ಮ ಬೆಂಬಲ ಸೂಚಿಸಿದ್ದಕ್ಕಾಗಿ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ (Mamata Banerjee) ಅವರಿಗೆ ವೈಯಕ್ತಿಕವಾಗಿ ಕೃತಜ್ಞರಾಗಿರುತ್ತೇನೆ ಎಂದು ಬರೆದುಕೊಂಡಿದ್ದಾರೆ.

    ಟ್ವೀಟ್‌ನಲ್ಲಿ ಏನಿದೆ?
    ದೆಹಲಿ ಚುನಾವಣೆಯಲ್ಲಿ ಎಎಪಿ ಪಕ್ಷಕ್ಕೆ ಟಿಎಂಸಿ ಬೆಂಬಲ ಘೋಷಿಸಿದೆ. ಮಮತಾ ದೀದಿ ಅವರಿಗೆ ಧನ್ಯವಾದಗಳು. ನಾನು ನಿಮಗೆ ವೈಯಕ್ತಿಕವಾಗಿ ಆಭಾರಿಯಾಗಿದ್ದೇನೆ. ನಮ್ಮ ಒಳ್ಳೆಯ ಮತ್ತು ಕೆಟ್ಟ ಸಮಯದಲ್ಲಿ ನೀವು ಯಾವಾಗಲೂ ನಮ್ಮನ್ನು ಬೆಂಬಲಿಸಿದ್ದೀರಿ ಮತ್ತು ಆಶೀರ್ವದಿಸಿದ್ದೀರಿ ಎಂದು ಉಲ್ಲೇಖಿಸಿದ್ದಾರೆ.

    ಆಡಳಿತಾರೂಢ ಎಎಪಿ 2015 ಹಾಗೂ 2020ರಲ್ಲಿ ಕ್ರಮವಾಗಿ 67 ಹಾಗೂ 62 ಸ್ಥಾನಗಳಲ್ಲಿ ಗೆಲುವು ಸಾಧಿಸಿತ್ತು. ಕಾಂಗ್ರೆಸ್, ಆಪ್ ಹಾಗೂ ಬಿಜೆಪಿ ಮಧ್ಯೆ ತ್ರಿಕೋನ ಸ್ಪರ್ಧೆ ಏರ್ಪಡಲಿದ್ದು, ಎಎಪಿ ಹ್ಯಾಟ್ರಿಕ್ ಗೆಲುವನ್ನು ಸಾಧಿಸುವ ಗುರಿಯನ್ನು ಹೊಂದಿದೆ. 2025ರ ದೆಹಲಿ ವಿಧಾನಸಭಾ ಚುನಾವಣೆಯು ಫೆ.05 ರಂದು ನಡೆಯಲಿದ್ದು, ಫೆ.08 ರಂದು ಮತ ಎಣಿಕೆ ನಡೆಯಲಿದೆ.ಇದನ್ನೂ ಓದಿ: Naxal Surrender | ಶಸ್ತ್ರ ತ್ಯಜಿಸಿ ಶರಣಾದ ನಕ್ಸಲರ ಬದುಕು ರೋಚಕ – ಇಲ್ಲಿದೆ ಕಂಪ್ಲೀಟ್‌ ವಿವರ!

  • ಇಂಡಿಯಾ ಒಕ್ಕೂಟದಲ್ಲಿ ಬಿರುಕು – ನಾಯಕತ್ವ ಬದಲಾವಣೆಗೆ ಆಂತರಿಕ ಕಲಹ

    ಇಂಡಿಯಾ ಒಕ್ಕೂಟದಲ್ಲಿ ಬಿರುಕು – ನಾಯಕತ್ವ ಬದಲಾವಣೆಗೆ ಆಂತರಿಕ ಕಲಹ

    ನವದೆಹಲಿ: ಹರಿಯಾಣ, ಮಹಾರಾಷ್ಟ್ರ ಚುನಾವಣೆಯಲ್ಲಿ ಸೋಲಿನ ಬಳಿಕ ಇಂಡಿಯಾ (INDIA) ಒಕ್ಕೂಟದಲ್ಲಿ ಬಿರುಕು ಮೂಡಿದೆ. ಇಂಡಿಯಾ ಒಕ್ಕೂಟದ ನಾಯಕತ್ವ ಬದಲಾಗಬೇಕು ಎಂದು ಸಮಾಜವಾದಿ ಪಕ್ಷ ಆಗ್ರಹಿಸಿದರೆ, ಕಾಂಗ್ರೆಸ್ (Congress) ಇದನ್ನು ವಿರೋಧಿಸಿದೆ. ಇತ್ತ ಒಕ್ಕೂಟದ ಶಿಲ್ಪಿ ನಾವು ಎಂದು ಆರ್‌ಜೆಡಿ (RJD) ಪ್ರತಿಪಾದಿಸಿದೆ.

    ಸಮಾಜವಾದಿ ಪಕ್ಷ ಮತ್ತು ಸಿಪಿಐ ಮೈತ್ರಿಕೂಟದಲ್ಲಿ ತಮ್ಮ ಪಾತ್ರ ಹೆಚ್ಚಿಸುವ ಹೇಳಿಕೆ ನೀಡಿದ ಬೆನ್ನಲ್ಲೇ ಈ ಹೇಳಿಕೆಗಳು ಬಂದಿವೆ. ಸಮಾಜವಾದಿ ಪಕ್ಷದ ರಾಷ್ಟ್ರೀಯ ವಕ್ತಾರ ಉದಯವೀರ್ ಸಿಂಗ್, ಇಂಡಿಯಾ ಬಣವು ಬ್ಯಾನರ್ಜಿಯವರ ಸಲಹೆಯನ್ನು ಚರ್ಚಿಸಬೇಕು ಮತ್ತು ಟಿಎಂಸಿ ವರಿಷ್ಠರಿಗೆ 100% ಬೆಂಬಲ ಮತ್ತು ಸಹಕಾರ ವಿಸ್ತರಿಸಬೇಕು ಎಂದು ಹೇಳಿದ್ದರು.ಇದನ್ನೂ ಓದಿ: ದೆಹಲಿಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಅಮಿತ್ ಶಾ ವಿಫಲವಾಗಿದ್ದಾರೆ: ಕೇಜ್ರಿವಾಲ್ ಆರೋಪ

    ಮಮತಾ ಬ್ಯಾನರ್ಜಿ ಅವರಿಗೆ ಒಕ್ಕೂಟ ಮುನ್ನಡೆಸುವ ಆಸೆ ವ್ಯಕ್ತಪಡಿಸಿದ್ದರೆ, ಮೈತ್ರಿಕೂಟದ ನಾಯಕರು ಅದನ್ನು ಪರಿಗಣಿಸಿ ಅವರಿಗೆ ಬೆಂಬಲ ನೀಡಬೇಕು. ಇದು ಮೈತ್ರಿಯನ್ನು ಬಲಪಡಿಸುತ್ತದೆ. ಬಂಗಾಳದಲ್ಲಿ ಬಿಜೆಪಿಯನ್ನು ನಿಲ್ಲಿಸುವಲ್ಲಿ ಮಮತಾ ಬ್ಯಾನರ್ಜಿ ಮುಂದಾಳತ್ವ ವಹಿಸಿದರು. ಅವರ ಬಗ್ಗೆ ನಮಗೆ ಗೌರವ ಇದೆ ಎಂದು ಉದಯವೀರ್ ಸಿಂಗ್ ಹೇಳಿದ್ದಾರೆ.

    ಹರಿಯಾಣ ಮತ್ತು ಮಹಾರಾಷ್ಟ್ರ ಚುನಾವಣೆಗಳಲ್ಲಿ ತನ್ನ ಮಿತ್ರಪಕ್ಷಗಳಿಗೆ ಅವಕಾಶ ನೀಡದ ಕಾಂಗ್ರೆಸ್‌ನ ವಿರುದ್ಧ ಸಿಪಿಐ ಪ್ರಧಾನ ಕಾರ್ಯದರ್ಶಿ ಡಿ ರಾಜಾ ಅಸಮಧಾನ ಹೊರಹಾಕಿದ್ದಾರೆ. ಕಾಂಗ್ರೆಸ್ ಆತ್ಮಾವಲೋಕನ ಮಾಡಿಕೊಳ್ಳಬೇಕು. ಹರಿಯಾಣ ಮತ್ತು ಮಹಾರಾಷ್ಟ್ರ ಚುನಾವಣೆಯಲ್ಲಿ ಮೈತ್ರಿಕೂಟದ ಪಾಲುದಾರರಿಗೆ ಅವಕಾಶ ನೀಡಲಿಲ್ಲ. ಕಾಂಗ್ರೆಸ್ ಇಂಡಿಯಾ ಬ್ಲಾಕ್ ಪಾಲುದಾರರನ್ನು ವಿಶ್ವಾಸಕ್ಕೆ ತೆಗೆದುಕೊಂಡಿದ್ದರೆ ಲೋಕಸಭೆ ಮತ್ತು ವಿಧಾನಸಭೆ ಚುನಾವಣೆಯಲ್ಲಿ ಫಲಿತಾಂಶಗಳು ವಿಭಿನ್ನವಾಗಿರುತ್ತಿದ್ದವು ಎಂದು ಹೇಳಿದರು.

    ಲಾಲು ಪ್ರಸಾದ್ ಯಾದವ್ ಅವರ ಉಪಕ್ರಮದ ಮೇರೆಗೆ ಪ್ರತಿಪಕ್ಷಗಳ ಮೈತ್ರಿಕೂಟದ ಮೊದಲ ಸಭೆ ಪಾಟ್ನಾದಲ್ಲಿ ನಡೆಯಿತು ಎಂದು ಆರ್‌ಜೆಡಿಯ ಮೃತ್ಯುಂಜಯ ತಿವಾರಿ ಪ್ರತಿಪಾದಿಸಿದರು. ಬಿಜೆಪಿ ವಿರುದ್ಧ ಪ್ರತಿಪಕ್ಷಗಳ ಮೈತ್ರಿಯ ನಿಜವಾದ ಶಿಲ್ಪಿ ಲಾಲು ಪ್ರಸಾದ್ ಯಾದವ್. ಎಲ್ಲರೂ ತಮ್ಮ ರಾಜ್ಯಗಳಲ್ಲಿ ಬಿಜೆಪಿ ವಿರುದ್ಧದ ಹೋರಾಟದಲ್ಲಿ ತೊಡಗಿದ್ದಾರೆ. ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ವಿರುದ್ಧ ಮಮತಾ ಬ್ಯಾನರ್ಜಿ ಪ್ರಬಲವಾಗಿ ಹೋರಾಡುತ್ತಿದ್ದಾರೆ. 2025ರಲ್ಲಿ ಬಿಹಾರದ ಸರದಿ ಎಂದರು.

    ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿಯೂ ಇಂಡಿಯಾ ಒಕ್ಕೂಟದಲ್ಲಿನ ಬಿರುಕು ಗೋಚರಿಸಿತು. ಗೌತಮ್ ಅದಾನಿ ಲಂಚ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ನಡೆಸುತ್ತಿರುವ ಪ್ರತಿಭಟನೆಯಿಂದ ಟಿಎಂಸಿ ಮತ್ತು ಸಮಾಜವಾದಿ ಪಕ್ಷಗಳು ದೂರವಿದ್ದವು. ಹೀಗಾಗೀ ಒಕ್ಕೂಟದಲ್ಲಿ ನಾಯಕತ್ವಕ್ಕಾಗಿ ಹೋರಾಟ ಶುರುವಾಗಿದೆ.ಇದನ್ನೂ ಓದಿ: Namma Metro | ಒಂದೇ ದಿನ ದಾಖಲೆಯ 9.20 ಲಕ್ಷಕ್ಕೂ ಅಧಿಕ ಪ್ರಯಾಣಿಕರು ಸಂಚಾರ

  • ಅದಾನಿ ವಿರುದ್ಧ ಸಂಸತ್‌ ಹೋರಾಟದಲ್ಲಿ ಬಿರುಕು – INDIA ಸಭೆಗೆ ಟಿಎಂಸಿ ಗೈರು

    ಅದಾನಿ ವಿರುದ್ಧ ಸಂಸತ್‌ ಹೋರಾಟದಲ್ಲಿ ಬಿರುಕು – INDIA ಸಭೆಗೆ ಟಿಎಂಸಿ ಗೈರು

    ನವದೆಹಲಿ: ಅದಾನಿ ವಿಚಾರವನ್ನು (Adani Case) ಇಟ್ಟುಕೊಂಡು ಸಂಸತ್‌ ಸದನದಲ್ಲಿ ಭಾರೀ ಪ್ರತಿಭಟನೆ ನಡೆಸುತ್ತಿರುವ ಕಾಂಗ್ರೆಸ್‌ ನಿರ್ಧಾರಕ್ಕೆ ಟಿಎಂಸಿ (TMC) ವಿರೋಧ ವ್ಯಕ್ತಪಡಿಸಿದೆ.

    ಇಂದು ಸದನ ನಡೆಯುತ್ತಿದ್ದಂತೆ ಕಾಂಗ್ರೆಸ್‌ ಸದಸ್ಯರು ಸೇರಿಂತೆ INDIA ಒಕ್ಕೂಟದ ಸದಸ್ಯರು ಅದಾನಿ ವಿರುದ್ಧ ಜಂಟಿ ಸಂಸದೀಯ ಸಮಿತಿಯಿಂದ ತನಿಖೆ ನಡೆಸಬೇಕೆಂದು ಆಗ್ರಹಿಸಿದರು. ಇದರ ಜೊತೆ ವಿವಿಧ ವಿಷಯಗಳನ್ನು ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದರು. ಕೊನೆಗೆ ಲೋಕಸಭೆ ಮತ್ತು ರಾಜ್ಯ ಸಭೆಯ ಕಲಾಪವನ್ನು ಮಂಗಳವಾರಕ್ಕೆ ಮುಂದೂಡಿದರು.

    ಸದನ ನಡೆಯುವ ಮೊದಲು ರಾಜ್ಯಸಭೆ ವಿಪಕ್ಷ ನಾಯಕ ಖರ್ಗೆ ಅವರ ಕಚೇರಿಯಲ್ಲಿ INDIA ಒಕ್ಕೂಟದ ಸದಸ್ಯರು ಸಭೆ ನಡೆಸಿದರು. ಈ ಸಭೆಗೆ ಟಿಎಂಸಿ ಸದಸ್ಯರು ಗೈರಾಗಿದ್ದರು.

    ಮೂಲಗಳ ಪ್ರಕಾರ ಬೆಲೆ ಏರಿಕೆ, ಮಣಿಪುರ ಘರ್ಷಣೆ, ನಿರುದ್ಯೋಗ ಇತ್ಯಾದಿ ವಿಚಾರಗಳ ಬಗ್ಗೆ ಸಂಸತ್ತಿನಲ್ಲಿ ಚರ್ಚಿಸಬೇಕು. ಆದರೆ ಕಾಂಗ್ರೆಸ್‌ ಕೇವಲ ಅದಾನಿ ವಿಚಾರವನ್ನು ಮುಂದಿಟ್ಟುಕೊಂಡು ಗದ್ದಲ ಎಬ್ಬಿಸುತ್ತಿದೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಅಸಮಾಧಾನಗೊಂಡ ಟಿಎಂಸಿ ಸದಸ್ಯರು ಸಭೆಗೆ ಹಾಜರಾಗಲಿಲ್ಲ ಎಂದು ವರದಿಯಾಗಿದೆ.  ಇದನ್ನೂ ಓದಿ: ನನ್ನ ಸೋಲಿಸೋಕೆ ದೇವೇಗೌಡ್ರು ವೀಲ್‍ಚೇರ್‌ನಲ್ಲಿ ಹಳ್ಳಿ ಹಳ್ಳಿಗೆ ಹೋಗಿದ್ರು: ಶಿವಲಿಂಗೇಗೌಡ

    ಕಳೆದ ಸೋಮವಾರದಿಂದ ಸಂಸತ್‌ ಅಧಿವೇಶನ ಆರಂಭವಾಗಿದೆ. ಪ್ರತಿ ದಿನವೂ ಕಾಂಗ್ರೆಸ್‌ ಅದಾನಿ ವಿಚಾರಕ್ಕೆ ಜೆಪಿಸಿ ತನಿಖೆ ನಡೆಸಬೇಕೆಂದು ಪಟ್ಟು ಹಿಡಿದಿದೆ. ಚಳಿಗಾಲದ ಅಧಿವೇಶನದ ಡಿ. 20ಕ್ಕೆ ಕೊನೆಯಾಗಲಿದೆ.

     

  • ನೀವು ಸಿದ್ದರಾಮಯ್ಯನವರ ರಾಜೀನಾಮೆ ಕೇಳ್ತೀರಾ – ರಾಹುಲ್‌ಗೆ ಟಿಎಂಸಿ ಪ್ರಶ್ನೆ

    ನೀವು ಸಿದ್ದರಾಮಯ್ಯನವರ ರಾಜೀನಾಮೆ ಕೇಳ್ತೀರಾ – ರಾಹುಲ್‌ಗೆ ಟಿಎಂಸಿ ಪ್ರಶ್ನೆ

    ಕೋಲ್ಕತ್ತಾ: ನೀವು ಸಿದ್ದರಾಮಯ್ಯನವರ (CM Siddaramaiah) ರಾಜೀನಾಮೆ ಕೇಳುತ್ತೀರಾ ಎಂದು ಟಿಎಂಸಿ ರಾಜ್ಯಸಭಾ ಸದಸ್ಯ ಕುನಾಲ್‌ ಘೋಷ್‌ (Kunal Ghosh) ಅವರು ರಾಹುಲ್‌ ಗಾಂಧಿ (Rahul Gandhi) ಅವರಿಗೆ ಪ್ರಶ್ನೆ ಕೇಳಿದ್ದಾರೆ.

    ಕೋಲ್ಕತ್ತಾದಲ್ಲಿ ಟ್ರೈನಿ ಡಾಕ್ಟರ್‌ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಮತಾ ಬ್ಯಾನರ್ಜಿ ರಾಜೀನಾಮೆಗೆ ರಾಹುಲ್‌ ಗಾಂಧಿ ಆಗ್ರಹಿಸಿದ್ದಾರೆ.

    ರಾಹುಲ್‌ ವಿರುದ್ಧ ಎಕ್ಸ್‌ನಲ್ಲಿ ಆಕ್ರೋಶ ವ್ಯಕ್ತಪಡಿಸಿದ ಕುನಾಲ್‌ ಘೋಷ್‌, ರಾಹುಲ್‌ ಗಾಂಧಿ ಅವರೇ ನಿಮ್ಮ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ರಾಜೀನಾಮೆ ನೀಡುವಂತೆ ಹೇಳುತ್ತೀರಾ? ಅವರ ವಿರುದ್ಧ ದೊಡ್ಡ ಭ್ರಷ್ಟಾಚಾರದ ಆರೋಪ ಕೇಳಿಬಂದಿದೆ. ಸರಿಯಾದ ಮಾಹಿತಿ ಇಲ್ಲದೇ, ಮಮತಾ ಬ್ಯಾನರ್ಜಿ ತೆಗೆದುಕೊಂಡ ಕ್ರಮಗಳನ್ನು ತಿಳಿಯದೇ ನೀವು ಸಾಮಾಜಿಕ ಮಾಧ್ಯಮದಲ್ಲಿ ಕಾಮೆಂಟ್ ಮಾಡಿದ್ದೀರಿ. ಈಗ ನೀವು ನಿಮ್ಮ ಸಿಎಂ ಬಗ್ಗೆ ದಯವಿಟ್ಟು ಕ್ರಮ ಕೈಗೊಳ್ಳುತ್ತೀರಾ ಎಂದು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ರಾಜ್ಯದಲ್ಲಿ ಏನಾದರೂ ಗಲಾಟೆಯಾದರೆ ಅದಕ್ಕೆ ರಾಜ್ಯಪಾಲರೇ ಹೊಣೆ – ಜಮೀರ್ ಅಹ್ಮದ್ ಎಚ್ಚರಿಕೆ

    ರಾಹುಲ್‌ ಹೇಳಿದ್ದೇನು?
    ವೈದ್ಯಕೀಯ ಕಾಲೇಜಿನಂತಹ ಸ್ಥಳದಲ್ಲಿ ವೈದ್ಯರು ಸುರಕ್ಷಿತವಾಗಿಲ್ಲದಿದ್ದರೆ, ಪೋಷಕರು ತಮ್ಮ ಹೆಣ್ಣುಮಕ್ಕಳನ್ನು ಓದಲು ಹೇಗೆ ಹೊರಗೆ ಕಳುಹಿಸುತ್ತಾರೆ? ನಿರ್ಭಯಾ ಪ್ರಕರಣದ ನಂತರ ಮಾಡಿದ ಕಟ್ಟುನಿಟ್ಟಿನ ಕಾನೂನುಗಳು ಇಂತಹ ಅಪರಾಧಗಳನ್ನು ತಡೆಗಟ್ಟುವಲ್ಲಿ ವಿಫಲವಾದವು ಏಕೆ? ಹತ್ರಾಸ್‌ನಿಂದ ಉನ್ನಾವ್‌ವರೆಗೆ ಮತ್ತು ಕಥುವಾದಿಂದ ಕೋಲ್ಕತ್ತಾದವರೆಗೆ ನಿರಂತರವಾಗಿ ಹೆಚ್ಚುತ್ತಿರುವ ಮಹಿಳೆಯರ ವಿರುದ್ಧದ ಘಟನೆಗಳ ಕುರಿತು ಪ್ರತಿ ಪಕ್ಷ, ಸಮಾಜದ ಪ್ರತಿಯೊಂದು ವರ್ಗವು ಗಂಭೀರ ಚರ್ಚೆಗಳನ್ನು ನಡೆಸಬೇಕು ಮತ್ತು ಕಠಿಣವಾದ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು  ರಾಹುಲ್‌ ಗಾಂಧಿ ಹೇಳಿದ್ದರು. ಇದನ್ನೂ ಓದಿ: ರಾಜ್ಯಪಾಲರ ವಿರುದ್ಧ ಸಿಡಿದೆದ್ದ ಸಾಹಿತಿಗಳು – ಪ್ರತಿಭಟನೆಗೆ ಕರೆ

    ನಡೆಯುತ್ತಿರುವ ವಿದ್ಯಮಾನಗಳನ್ನು ಗಮನಿಸಿದರೆ ಸಂತ್ರಸ್ತೆಗೆ ನ್ಯಾಯ ಒದಗಿಸುವ ಬದಲು ಆರೋಪಿಯನ್ನು ರಕ್ಷಿಸಲು ಆಸ್ಪತ್ರೆ ಮತ್ತು ಸ್ಥಳೀಯ ಆಡಳಿತ ಮುಂದಾಗಿದೆ ಎಂದು ಮಮತಾ ಬ್ಯಾನರ್ಜಿ ವಿರುದ್ಧವೇ ರಾಹುಲ್‌ ಕಿಡಿಕಾರಿದ್ದರು.

     

  • ನನಗೂ ಮಗಳಿದ್ದಾಳೆ: ಕೋಲ್ಕತ್ತಾ ವೈದ್ಯೆ ಅತ್ಯಾಚಾರ, ಕೊಲೆ ವಿರುದ್ಧ ಹೋರಾಟಕ್ಕೆ ಟಿಎಂಸಿ ಸಂಸದ ಬೆಂಬಲ

    ನನಗೂ ಮಗಳಿದ್ದಾಳೆ: ಕೋಲ್ಕತ್ತಾ ವೈದ್ಯೆ ಅತ್ಯಾಚಾರ, ಕೊಲೆ ವಿರುದ್ಧ ಹೋರಾಟಕ್ಕೆ ಟಿಎಂಸಿ ಸಂಸದ ಬೆಂಬಲ

    ಕೋಲ್ಕತ್ತಾ: ನನಗೂ ಮಗಳು, ಮೊಮ್ಮಗಳಿದ್ದಾಳೆ. ಕೋಲ್ಕತ್ತಾ ವೈದ್ಯೆ ಅತ್ಯಾಚಾರ, ಕೊಲೆ ವಿರುದ್ಧದ ಹೋರಾಟಕ್ಕೆ ಟಿಎಂಸಿ ರಾಜ್ಯಸಭಾ ಸಂಸದ ಸುಕೇಂದು ಶೇಖರ್‌ ರಾಯ್‌ ಬೆಂಬಲ ವ್ಯಕ್ತಪಡಿಸಿದ್ದಾರೆ.

    ನಾಳೆ ನಾನು ಪ್ರತಿಭಟನಾಕಾರರೊಂದಿಗೆ ಸೇರಲಿದ್ದೇನೆ. ಲಕ್ಷಾಂತರ ಬಂಗಾಳಿ ಕುಟುಂಬಗಳಂತೆ ನನಗೆ ಮಗಳು ಮತ್ತು ಪುಟ್ಟ ಮೊಮ್ಮಗಳು ಇದ್ದಾರೆ. ಮಹಿಳೆಯರ ವಿರುದ್ಧದ ಕ್ರೌರ್ಯ ಸಾಕು. ನಾವು ಒಟ್ಟಾಗಿ ವಿರೋಧಿಸೋಣ ಎಂದು ರಾಯ್‌ ಎಕ್ಸ್‌ನಲ್ಲಿ ಮಂಗಳವಾರ ಪೋಸ್ಟ್‌ ಹಾಕಿದ್ದರು.

    ಕೋಲ್ಕತ್ತಾದ ಆರ್‌ಜಿ ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಮಹಿಳಾ ವೈದ್ಯೆಯ ಬರ್ಬರ ಹತ್ಯೆ ಮತ್ತು ಅತ್ಯಾಚಾರದ ವಿರುದ್ಧ ದೇಶಾದ್ಯಂತ ವೈದ್ಯರು ತೀವ್ರ ಪ್ರತಿಭಟನೆಗಳನ್ನು ನಡೆಸುತ್ತಿದ್ದಾರೆ. ಮಹಿಳೆಯರ ಸುರಕ್ಷತೆಗಾಗಿ ಕಾನೂನು ಜಾರಿಗೆ ತರುವಂತೆ ಕೇಂದ್ರಕ್ಕೆ ಮನವಿ ಮಾಡಿದ್ದಾರೆ. ತಮ್ಮ ಬೇಡಿಕೆಗಳನ್ನು ಈಡೇರಿಸುವ ವರೆಗೆ ಪ್ರತಿಭಟನೆ ಹಿಂಪಡೆಯುವುದಿಲ್ಲ ಎಂದು ಪ್ರತಿಪಾದಿಸಿದ್ದಾರೆ.

    ತೀವ್ರ ಪ್ರತಿಭಟನೆಯ ಪರಿಣಾಮವಾಗಿ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಲಾಗಿದೆ. ಮಂಗಳವಾರ ಈ ಆದೇಶ ಹೊರಬಿದ್ದ ಬೆನ್ನಲ್ಲೇ ಕೇಂದ್ರ ತನಿಖಾ ಸಂಸ್ಥೆಯ ಅಧಿಕಾರಿಗಳು ತಲಾ ಪೊಲೀಸ್‌ ಠಾಣೆಗೆ ಆಗಮಿಸಿ ಮಾಹಿತಿ ಪಡೆದುಕೊಂಡಿದ್ದಾರೆ. ಪೊಲೀಸರು ಸಂಗ್ರಹಿಸಿರುವ ತನಿಖಾ ವರದಿಗಳು ಮತ್ತು ಸಿಸಿಟಿವಿ ದೃಶ್ಯಾವಳಿಗಳನ್ನು ಸಿಬಿಐಗೆ ಒಪ್ಪಿಸುವಂತೆ ಸೂಚಿಸಲಾಗಿದೆ.

  • Assembly Bypolls: 13 ಕ್ಷೇತ್ರಗಳ ಪೈಕಿ 10ರಲ್ಲಿ ಇಂಡಿಯಾ ಒಕ್ಕೂಟ ಜಯಭೇರಿ – 2ರಲ್ಲಿ ಬಿಜೆಪಿ ಗೆಲುವು!

    Assembly Bypolls: 13 ಕ್ಷೇತ್ರಗಳ ಪೈಕಿ 10ರಲ್ಲಿ ಇಂಡಿಯಾ ಒಕ್ಕೂಟ ಜಯಭೇರಿ – 2ರಲ್ಲಿ ಬಿಜೆಪಿ ಗೆಲುವು!

    ನವದೆಹಲಿ: ಏಳು ರಾಜ್ಯಗಳ 13 ವಿಧಾನಸಭಾ ಕ್ಷೇತ್ರಗಳಿಗೆ ನಡೆದ ಉಪಚುನಾವಣೆಯ ಫಲಿತಾಂಶ (Assembly Bypoll Result) ಪ್ರಕಟವಾಗಿದ್ದು, ಇಂಡಿಯಾ ಒಕ್ಕೂಟ (INDIA Alliance) 10 ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ. ಆದ್ರೆ ಆಡಳಿತ ಪಕ್ಷದ ಭಾಗವಾಗಿರುವ ಬಿಜೆಪಿ (BJP) ಕೇವಲ 2 ಸ್ಥಾನಗಳಲ್ಲಿ ಮಾತ್ರ ಗೆಲುವು ಸಾಧಿಸಿದೆ. ಒಂದು ಕ್ಷೇತ್ರ ಪಕ್ಷೇತರ ಅಭ್ಯರ್ಥಿಯ ಪಾಲಾಗಿದೆ.

    ಪಶ್ಚಿಮ ಬಂಗಾಳದ (West Bengal) 4, ಹಿಮಾಚಲ ಪ್ರದೇಶದ 3, ಉತ್ತರಾಖಂಡದ 2 ಹಾಗೂ ಪಂಜಾಬ್‌, ಮಧ್ಯಪ್ರದೇಶ, ಬಿಹಾರ ತಮಿಳುನಾಡಿನ ತಲಾ ಒಂದೊಂದು ಕ್ಷೇತ್ರಗಳಿಗೆ ಉಪಚುನಾವಣೆ ನಡೆದಿತ್ತು. ಈ ಪೈಕಿ ಇಂಡಿಯಾ ಒಕ್ಕೂಟ ಹಾಗೂ ಬಿಜೆಪಿ ನಡುವೆ ನೇರ ಹಣಾಹಣಿ ಏರ್ಪಟ್ಟಿತ್ತು. ಇಂಡಿಯಾ ಒಕ್ಕೂಟದಿಂದ ಕಾಂಗ್ರೆಸ್‌, ಟಿಎಂಸಿ, ಆಮ್‌ ಆದ್ಮಿ ಪಕ್ಷ ಹಾಗೂ ದ್ರಾವೀಡ ಮುನ್ನೇತ್ರ ಕಳಗಂ (DMK) ತಮ್ಮ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದವು.

    ಈ ಪೈಕಿ ಪಶ್ಚಿಮ ಬಂಗಾಳದ ನಾಲ್ಕು ಸ್ಥಾನಗಳು ಟಿಎಂಸಿ ಪಾಲಾಗಿವೆ. ಹಿಮಾಚಲ ಪ್ರದೇಶದ (Himachala Pradesh) ಮೂರು ಸ್ಥಾನಗಳ ಪೈಕಿ 2 ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಜಯಭೇರಿ ಬಾರಿಸಿದೆ. ಅಲ್ಲದೇ ಉತ್ತರಾಖಂಡದ ಎರಡೂ ಸ್ಥಾನಗಳನ್ನು ಗೆದ್ದುಕೊಂಡಿದೆ. ಪಂಜಾಬ್‌ ಕ್ಷೇತ್ರ ಎಎಪಿ ಪಾಲಾದರೆ, ತಮಿಳುನಾಡಿನ ಒಂದು ಕ್ಷೇತ್ರ ಡಿಎಂಕೆ ಗೆದ್ದುಕೊಂಡಿದೆ. ಇದನ್ನೂ ಓದಿ: ಅನಂತ್‌ ಅಂಬಾನಿ ಮದುವೆ ಸಮಾರಂಭದಲ್ಲಿ ದೀದಿ – ಹರಿದು ಬಂತು ರಾಜಕೀಯ ನಾಯಕರ ದಂಡು!

    ಬಿಜೆಪಿಗೆ 2 ಸ್ಥಾನ:
    2024ರ ಲೋಕಸಭಾ ಚುನಾವಣೆಯಲ್ಲಿ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದ ಬಿಜೆಪಿಗೆ ವಿಧಾನಸಭಾ ಉಪಚುನಾವಣೆಯಲ್ಲಿ ಕೇವಲ 2 ಕ್ಷೇತ್ರಗಳನ್ನು ಮಾತ್ರ ಗೆದ್ದುಕೊಂಡಿದೆ. ಹಿಮಾಚಲ ಪ್ರದೇಶ ಹಾಗೂ ಮಧ್ಯಪ್ರದೇಶದಲ್ಲಿ ತಲಾ ಒಂದೊಂದು ಸ್ಥಾನವನ್ನು ಗೆದ್ದುಕೊಂಡಿದೆ. ಇದನ್ನೂ ಓದಿ: 200 ಅಡಿ ಆಳದ ಕಮರಿಗೆ ಉರುಳಿದ ಬಸ್ – ಇಬ್ಬರು ಸಾವು, 25 ಮಂದಿಗೆ ಗಾಯ

    ತಮಿಳುನಾಡಿನಲ್ಲಿ ಡಿಎಂಕೆ ಜಯಭೇರಿ:
    ತಮಿಳುನಾಡಿನ ವಿಕ್ರವಾಂಡಿ ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದ ಡಿಎಂಕೆ ಪಕ್ಷದ ಅಣ್ಣಿಯೂರ್‌ ಶಿವ ಅವರು ಸುಮಾರು 60 ಸಾವಿರ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಇನ್ನೂ ಪಂಜಾಬ್‌ನಲ್ಲಿ ಆಪ್‌ನ ಮೊಹಿಂದರ್ ಭಗತ್ ಅವರು ಜಲಂಧರ್ ಪಶ್ಚಿಮ ಕ್ಷೇತ್ರದಲ್ಲಿ 23,000 ಮತಗಳ ಅಂತರದಿಂದ ಗೆದ್ದಿದ್ದರೆ, ಹಿಮಾಚಲ ಪ್ರದೇಶದ ಮುಖ್ಯಮಂತ್ರಿ ಸುಖವಿಂದರ್ ಸಿಂಗ್ ಸುಖು ಅವರ ಪತ್ನಿ ಕಮಲೇಶ್ ಠಾಕೂರ್ ಡೆಹ್ರಾ ಕ್ಷೇತ್ರದಿಂದ ಗೆಲುವು ಸಾಧಿಸಿದ್ದಾರೆ. ಇದನ್ನೂ ಓದಿ: ಗ್ರಾಮೀಣ ಭಾಗಗಳಲ್ಲಿ ಟೆಲಿಕಾಂ ಸಂಪರ್ಕ ಸುಧಾರಣೆಗೆ ‘ಡಿಜಿಟಲ್‌ ಭಾರತ್‌ ನಿಧಿ’ – ಏನಿದು ಯೋಜನೆ?