Tag: Tiwari

  • ಆಸ್ಕರ್ ಸ್ಪರ್ಧೆಗೆ ಆಯ್ಕೆಯಾದ ಗುಜರಾತಿ ಸಿನಿಮಾ ಭಾರತದ್ದಲ್ಲ: ವಿವಾದದಲ್ಲಿ ‘ಚೆಲ್ಲೋ ಶೋ’ ಸಿನಿಮಾ

    ಆಸ್ಕರ್ ಸ್ಪರ್ಧೆಗೆ ಆಯ್ಕೆಯಾದ ಗುಜರಾತಿ ಸಿನಿಮಾ ಭಾರತದ್ದಲ್ಲ: ವಿವಾದದಲ್ಲಿ ‘ಚೆಲ್ಲೋ ಶೋ’ ಸಿನಿಮಾ

    ಭಾರತದಿಂದ ಅಧಿಕೃತವಾಗಿ ಆಸ್ಕರ್ (Oscar) ಸ್ಪರ್ಧೆಗೆ ಕಳುಹಿಸಿರುವ ಚೆಲ್ಲೋ ಶೋ (Chello Show) ಸಿನಿಮಾ ಬಗ್ಗೆ ಆಕ್ಷೇಪವೊಂದು (Controversy) ಮೂಡಿದೆ. ಈ ಸಿನಿಮಾ ಭಾರತದ್ದೇ ಅಲ್ಲ, ಹೇಗೆ ಭಾರತದಿಂದ ಈ ಸಿನಿಮಾ ಸ್ಪರ್ಧೆ ಮಾಡುತ್ತದೆ ಎಂದು ಫೆಡರೇಶನ್ ಆಫ್ ವೆಸ್ಟರ್ನ್ ಸಿನಿಮಾ ಎಂಪ್ಲಾಯ್ಸ್ ಸಂಘವು ಆಕ್ಷೇಪಿಸಿದೆ. ಈ ಆಯ್ಕೆಯನ್ನು ಕೂಡಲೇ ತಡೆಹಿಡಿದು, ಬೇರೆ ಸಿನಿಮಾವನ್ನು ಆಯ್ಕೆ ಮಾಡುವಂತೆ ಸಂಘದ ಅಧ್ಯಕ್ಷ ಬಿ.ಎನ್. ತಿವಾರಿ (B.N. Tiwari)ಹೇಳಿದ್ದಾರೆ. ಈ ಕುರಿತು ಅವರು ಸಂಬಂಧಪಟ್ಟ ಮಂತ್ರಿಗಳಿಗೂ ಪತ್ರ ಬರೆಯುವುದಾಗಿ ಹೇಳಿದ್ದಾರೆ.

    ಚೆಲ್ಲೋ ಶೋ ಸಿನಿಮಾವನ್ನು ಭಾರತದ ಸಿನಿಮಾ (Cinema) ಎಂದು ಹೇಗೆ ಪರಿಗಣಿಸಿದರೋ ಗೊತ್ತಿಲ್ಲ. ಅದು ಭಾರತೀಯ ಸಿನಿಮಾವಲ್ಲ. ದಿ ಕಾಶ್ಮೀರ್ ಫೈಲ್ಸ್ (The Kashmir Files), ಆರ್.ಆರ್.ಆರ್ (RRR) ಸೇರಿದಂತೆ ಸಾಕಷ್ಟು ಸಿನಿಮಾಗಳು ರೇಸ್ ನಲ್ಲಿ ಇದ್ದವು. ಆದರೆ, ಚೆಲ್ಲೋ ಶೋ ಸಿನಿಮಾವನ್ನು ಯಾವ ಮಾನದಂಡದಿಂದ ಆಯ್ಕೆ ಮಾಡಲಾಗಿದೆ ಎನ್ನುವುದು ಗೊತ್ತಿಲ್ಲ. ಕೂಡಲೇ ಆಯ್ಕೆ ಸಮಿತಿ ಈ ಕುರಿತು ತಿಳಿಸಬೇಕು ಎಂದು ಆಗ್ರಹಿಸಿದ್ದಾರೆ ತಿವಾರಿ. ಅಪ್ಪಟ ಭಾರತೀಯ ಸಿನಿಮಾಗಳನ್ನು ಆಯ್ಕೆ ಮಾಡದೇ ಇರುವುದಕ್ಕೆ ದಿಗ್ಭ್ರಮೆಯನ್ನು ಅವರು ವ್ಯಕ್ತ ಪಡಿಸಿದ್ದಾರೆ. ಇದನ್ನೂ ಓದಿ: ಧ್ರುವ ಸರ್ಜಾ ಜೊತೆ ಸ್ಕ್ರೀನ್ ಶೇರ್ ಮಾಡ್ತಾರಾ ರವಿಮಾಮನ ಬೆಡಗಿ ಶಿಲ್ಪಾ ಶೆಟ್ಟಿ

    ಆಯ್ಕೆಯ ಸಮಿತಿಯ ಬಗ್ಗೆಯೂ ಆಕ್ಷೇಪ ವ್ಯಕ್ತ ಪಡಿಸಿರುವ ತಿವಾರಿ, ಪ್ರತಿ ವರ್ಷವೂ ಜ್ಯೂರಿ ಕಮಿಟಿಯಲ್ಲಿ ಇದ್ದವರೇ ಇರುತ್ತಾರೆ. ಅವರು ಸಿನಿಮಾವನ್ನು ನೋಡದೇ ಸುಮ್ಮನೆ ವೋಟು ಮಾಡುತ್ತಾರೆ. ಹೀಗಾಗಿ ಅಪ್ಪಟ ದೇಶಿಯ ಚಿತ್ರಗಳಿಗೆ ಮೋಸವಾಗಿದೆ. ಆಯ್ಕೆಯಾಗಿರುವ ಸಿನಿಮಾವನ್ನು ಕೂಡಲೇ ಹಿಂತೆಗೆದುಕೊಂಡು ಬೇರೆ ಸಿನಿಮಾವನ್ನು ಆಯ್ಕೆ ಮಾಡಬೇಕು ಎಂದು ಅವರು ಕೋರಿದ್ದಾರೆ. ಇಲ್ಲದಿದ್ದರೆ ಹೋರಾಟ ಮಾಡುವ ಎಚ್ಚರಿಕೆಯನ್ನೂ ಅವರು ಕೊಟ್ಟಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಯುಪಿ ಪೊಲೀಸರ ಗುಂಡೇಟಿಗೆ ಬಲಿಯಾದ ಆಪಲ್ ಉದ್ಯೋಗಿಯ ಪತ್ನಿಗೆ ಸರ್ಕಾರಿ ಉದ್ಯೋಗ!

    ಯುಪಿ ಪೊಲೀಸರ ಗುಂಡೇಟಿಗೆ ಬಲಿಯಾದ ಆಪಲ್ ಉದ್ಯೋಗಿಯ ಪತ್ನಿಗೆ ಸರ್ಕಾರಿ ಉದ್ಯೋಗ!

    ಲಕ್ನೋ: ಪೊಲೀಸ್ ಪೇದೆಯ ಗುಂಡಿನ ದಾಳಿಗೆ ಬಲಿಯಾದ ಆಪಲ್ ಕಂಪನಿಯ ಸೇಲ್ಸ್ ಮಾನೇಜರ್ ವಿವೇಕ್ ತಿವಾರಿ ಪತ್ನಿ ಕಲ್ಪನಾ ಅವರನ್ನು ಲಕ್ನೋ ಮಹಾನಗರ ಪಾಲಿಕೆಯ ವಿಶೇಷ ಅಧಿಕಾರಿಯನ್ನಾಗಿ ಉತ್ತರ ಪ್ರದೇಶ ಸರ್ಕಾರ ನೇಮಕ ಮಾಡಿದೆ.

    ಉತ್ತರ ಪ್ರದೇಶದ ಡಿಸಿಎಂ ದಿನೇಶ್ ಶರ್ಮಾ ಅವರು ಸರ್ಕಾರಿ ಕೆಲಸದ ನೇಮಕ ಪತ್ರವನ್ನು ಕಲ್ಪನಾ ತಿವಾರಿ ಅವರಿಗೆ ನೀಡಿದ್ದಾರೆ.

    ಈ ವಿಚಾರವಾಗಿ ಮಾತನಾಡಿದ ದಿನೇಶ್ ಶರ್ಮಾ, ಈ ದುರಂತ ಘಟನೆಯ ನಂತರ ತಿವಾರಿ ಅವರ ಕುಟುಂಬದೊಂದಿಗೆ ನಾನು ಸತತವಾಗಿ ಸಂಪರ್ಕದಲ್ಲಿ ಇದ್ದೇನೆ. ವಿವೇಕ್ ಅವರು ಶ್ರಮಜೀವಿ. ಈಗಾಗಲೇ ಅವರ ಕುಟುಂಬಕ್ಕೆ 25 ಲಕ್ಷ ರೂ. ಪರಿಹಾರ ನೀಡಿದ್ದು, ಇಬ್ಬರು ಮಕ್ಕಳು ಸೇರಿದಂತೆ ತಿವಾರಿ ಅವರ ತಾಯಿಗೆ ತಲಾ 5 ಲಕ್ಷ ರೂ ಕೊಟ್ಟಿದ್ದೇವೆ. ತಿವಾರಿ ಪತ್ನಿ ಕಲ್ಪನಾ ಅವರನ್ನು ಮಹಾನಗರ ಪಾಲಿಕೆಯ ವಿಶೇಷ ಅಧಿಕಾರಿಯಾಗಿ ನೇಮಕ ಮಾಡಿಕೊಂಡಿದ್ದೇವೆ” ಎಂದು ಹೇಳಿದರು. ಇದನ್ನು ಓದಿ: `ನನ್ನ ಎಲ್ಲ ಬೇಡಿಕೆಯನ್ನು ಆದಿತ್ಯನಾಥ್ ಒಪ್ಪಿಕೊಂಡಿದ್ದಾರೆ’- ಖಾಕಿಗಳ ಗುಂಡೇಟಿಗೆ ಬಲಿಯಾದ ಆಪಲ್ ಸಿಬ್ಬಂದಿಯ ಪತ್ನಿ

    ನೇಮಕಾತಿ ಪತ್ರವನ್ನ ಪಡೆದ ಕಲ್ವನಾ ತಿವಾರಿ ಮಾಧ್ಯಮಗಳೊಂದಿಗೆ ಮಾತನಾಡಿ, “ಡಿಸಿಎಂ ಅವರು ನನಗೆ ನೇಮಕಾತಿ ಪತ್ರವನ್ನ ಕೊಟ್ಟಿದ್ದಾರೆ. ಸರ್ಕಾರ ಮಾಡಿದ ಎಲ್ಲಾ ಭರವಸೆಗಳನ್ನ ಪೂರೈಸುವುದಾಗಿ ಮಾತುಕೊಟ್ಟಿದೆ. ತಮ್ಮ ನ್ಯಾಯಕ್ಕಾಗಿ ಎಲ್ಲಾ ರೀತಿಯ ತನಿಖೆಗಳನ್ನ ಸೂಕ್ತವಾಗಿ ನಡೆಸಲಾಗುತ್ತಿದೆ. ಇದರಲ್ಲಿ ನನಗೆ ಯಾವುದೇ ಅನುಮಾನವಿಲ್ಲ” ಎಂದು ಹೇಳಿದರು.

    ಆಪಲ್ ಕಂಪೆನಿಯ ಸೇಲ್ಸ್ ಮ್ಯಾನೇಜರ್ ವಿವೇಕ್ ತಿವಾರಿ ಮೇಲೆ ಪೊಲೀಸರು ಗುಂಡೇಟಿಗೆ ಬಲಿಯಾಗಿದ್ದರು. ಈ ಶೂಟೌಟ್ ಪ್ರಕರಣ ದೇಶಾದ್ಯಂತ ಸುದ್ದಿ ಮಾಡಿತ್ತು. ಈ ಘಟನೆ ಬಳಿಕ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಕಲ್ಪನಾ ಭೇಟಿ ಮಾಡಿದ್ದರು. ಈ ಸಂದರ್ಭಲ್ಲಿ ಯೋಗಿ ಆದಿತ್ಯನಾಥ್ ಮಕ್ಕಳ ಶಿಕ್ಷಣ, ಕುಟುಂಬ ನಿರ್ವಹಣೆಗೆ ಉದ್ಯೋಗ, ವಿವೇಕ್ ತಾಯಿಗೆ ಪರಿಹಾರ ನೀಡುವ ಭರವಸೆ ನೀಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv