Tag: title

  • ಜನಾರ್ದನ್ ರೆಡ್ಡಿ ಮಗನ ಸಿನಿಮಾ ಸೆಟ್ ಗೆ ಶಿವರಾಜ್ ಕುಮಾರ್ ಸರ್ಪ್ರೈಸ್ ವಿಸಿಟ್

    ಜನಾರ್ದನ್ ರೆಡ್ಡಿ ಮಗನ ಸಿನಿಮಾ ಸೆಟ್ ಗೆ ಶಿವರಾಜ್ ಕುಮಾರ್ ಸರ್ಪ್ರೈಸ್ ವಿಸಿಟ್

    ಮಾಜಿ ಮಂತ್ರಿ ಗಾಲಿ ಜನಾರ್ದನ್ ರೆಡ್ಡಿ ಪುತ್ರ, ನಟ ಕಿರೀಟಿ ಗಂಧದಗುಡಿ ಅಂಗಳಕ್ಕೆ ಗ್ರ್ಯಾಂಡ್ ಆಗಿ ಬಂದಾಗಿದೆ. ಇನ್ನೂ ಹೆಸರಿಡದ ಈ ಚಿತ್ರವನ್ನು ತೆಲುಗಿನ ಖ್ಯಾತ ನಿರ್ಮಾಣ ಸಂಸ್ಥೆ ವಾರಾಹಿ ಫಿಲ್ಮಂ ಪ್ರೊಡಕ್ಷನ್ ಕನ್ನಡ ಹಾಗೂ ತೆಲುಗು ಎರಡು ಭಾಷೆಯಲ್ಲಿ ಅದ್ಧೂರಿಯಾಗಿ ನಿರ್ಮಾಣ ಮಾಡುತ್ತಿದೆ. ರಾಧಾಕೃಷ್ಣ ರೆಡ್ಡಿ ಸಾರಥ್ಯದಲ್ಲಿ ತಯಾರಾಗುತ್ತಿರುವ ಈ ಚಿತ್ರ ಸಾಕಷ್ಟು ನಿರೀಕ್ಷೆಯನ್ನು ಹೆಚ್ಚಿಸಿದೆ. ಈಗಾಗಲೇ ರಿಲೀಸ್ ಆಗಿರುವ ಕಿರೀಟಿ ಇಂಟ್ರೂಡಕ್ಷನ್ ಟೀಸರ್ ಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿದ್ದು, ಇದೀಗ ಸಿನಿಮಾ ಅಂಗಳದಿಂದ ನಯಾ ಖಬರ್ ರಿವೀಲ್ ಆಗಿದೆ.

    ಅದ್ಧೂರಿಯಾಗಿ ಮುಹೂರ್ತ ನೆರವೇರಿಸಿಕೊಂಡು ಶೂಟಿಂಗ್ ಅಖಾಡಕ್ಕೆ ಧುಮುಕ್ಕಿದ್ದ ಚಿತ್ರತಂಡ ಬ್ರೇಕ್ ತೆಗೆದುಕೊಳ್ಳದೇ ನಿರಂತರವಾಗಿ ಚಿತ್ರೀಕರಣ ನಡೆಸುತ್ತಿದೆ. ಸದ್ಯ ಬೆಂಗಳೂರಿನ ನಾಗವಾರದ ಮಾನ್ಯತಾ ಟೆಕ್ ಪಾರ್ಕ್ ನಲ್ಲಿ ಚಿತ್ರದ ಶೂಟಿಂಗ್ ಭರದಿಂದ ಸಾಗುತ್ತಿದೆ. ಈ ಶೂಟಿಂಗ್ ಸೆಟ್ ಗೆ ದೊಡ್ಮನೆ ದೊರೆ ಶಿವಣ್ಣ ಸರ್ಪ್ರೈಸ್ ಆಗಿ ವಿಸಿಟ್ ಕೊಟ್ಟಿದ್ದಾರೆ. ಈ ಸಂದರ್ಭದಲ್ಲಿ ಕಿರೀಟಿ ಹಾಗೂ ಜೆನಿಲಿಯಾ ಭಾಗದ ಚಿತ್ರೀಕರಣ ನಡೆಯುತ್ತಿತ್ತು. ಈ ವೇಳೆ ಕೆಲಕಾಲ ಅಲ್ಲಿಯೇ ಸಮಯ ಕಳೆದ ಶಿವಣ್ಣ ಇಡೀ ತಂಡಕ್ಕೆ ಒಳ್ಳೆದಾಗಲಿ ಎಂದು ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಇಡೀ ತಂಡ ಹಾಗೂ ಜನಾರ್ದನ ರೆಡ್ಡಿ ಕೂಡ ಉಪಸ್ಥಿತರಿದ್ದರು. ಇದನ್ನೂ ಓದಿ: ಹುಟ್ಟುಹಬ್ಬಕ್ಕೆ ಅಭಿಮಾನಿಗಳಿಗೆ ಗಿಫ್ಟ್‌ ತನ್ನಿ ಎಂದ ರಿಯಲ್‌ ಸ್ಟಾರ್‌ ಉಪೇಂದ್ರ

    ಹೆಸರಿಡದ ಕಿರೀಟಿ ಚೊಚ್ಚಲ ಸಿನಿಮಾದ ಟೈಟಲ್ ಅನಾವರಣಕ್ಕೂ ಮುಹೂರ್ತ ಫಿಕ್ಸ್ ಆಗಿದೆ. ಇದೇ ತಿಂಗಳ 29ಕ್ಕೆ ಕಿರೀಟಿ ಹುಟ್ಟುಹಬ್ಬವಿದೆ. ಈ ದಿನದಂದೂ ಟೈಟಲ್ ರಿವೀಲ್ ವಿಡಿಯೋ ಝಲಕ್ ರಿಲೀಸ್ ಮಾಡಲು ಯೋಜನೆ ಹಾಕಿಕೊಂಡಿದೆ. ಸದ್ಯ ಬಹುತೇಕ ಭಾಗ ಸಿನಿಮಾದ ಶೂಟಿಂಗ್ ಕಂಪ್ಲೀಟ್ ಆಗಿದ್ದು, ಪ್ರೊಡಕ್ಷನ್ ಕೆಲಸಗಳು ಕೂಡ ಭರದಿಂದ ನಡೆಯುತ್ತಿವೆ. ಸಾಯಿ ಕೊರಪಾಠಿ ನಿರ್ಮಿಸಲಿರುವ ಚಿತ್ರಕ್ಕೆ ರಾಕ್‌ಸ್ಟಾರ್ ದೇವಿ ಶ್ರೀ ಪ್ರಸಾದ್ ಸಂಗೀತ ನೀಡುತ್ತಿದ್ದು, ಬಾಹುಬಲಿ ಸಿನಿಮಾದ ಕಣ್ಣು ಕೆ ಸೆಂಥಿಲ್ ಕುಮಾರ್ ಛಾಯಾಗ್ರಹಣ, ರವೀಂದರ್ ಕಲಾ ನಿರ್ದೇಶನ, ಭಾರತದ ಟಾಪ್ ಸ್ಟಂಟ್ ನಿರ್ದೇಶಕ ಪೀಟರ್ ಹೆನ್ ಆಕ್ಷನ್ ಚಿತ್ರಕ್ಕಿದೆ.

    Live Tv
    [brid partner=56869869 player=32851 video=960834 autoplay=true]

  • ರಕ್ಷಿತ್ ಶೆಟ್ಟಿ ನಿರ್ಮಾಣದ ಚಿತ್ರಕ್ಕೆ ‘ಇಬ್ಬನಿ ತಬ್ಬಿದ ಇಳೆಯಲಿ’ ಎಂಬ ಶೀರ್ಷಿಕೆ ಫಿಕ್ಸ್

    ರಕ್ಷಿತ್ ಶೆಟ್ಟಿ ನಿರ್ಮಾಣದ ಚಿತ್ರಕ್ಕೆ ‘ಇಬ್ಬನಿ ತಬ್ಬಿದ ಇಳೆಯಲಿ’ ಎಂಬ ಶೀರ್ಷಿಕೆ ಫಿಕ್ಸ್

    ಕ್ಷಿತ್ ಶೆಟ್ಟಿ ಅವರ ಪರಂವಃ ಸ್ಟುಡಿಯೋಸ್​ನಡಿ ರಕ್ಷಿತ್​ ಶೆಟ್ಟಿ ನಿರ್ಮಿಸುತ್ತಿರುವ ಹೊಸ ಚಿತ್ರವು ಕಳೆದ ತಿಂಗಳಷ್ಟೇ ಘೋಷಣೆಯಾಗಿತ್ತು. ವಿಹಾನ್​ ಗೌಡ ಮತ್ತು ಅಂಕಿತಾ ಅಮರ್​ ಅಭಿನಯದ ಈ ಚಿತ್ರದ ಹೆಸರನ್ನು ಚಿತ್ರತಂಡ ಹೇಳಿರಲಿಲ್ಲ. ಶನಿವಾರ ಸಂಜೆ ಚಿತ್ರದ ಹೆಸರು ಅಧಿಕೃತವಾಗಿ ಘೋಷಣೆಯಾಗಿದ್ದು, ಚಿತ್ರಕ್ಕೆ ‘ಇಬ್ಬನಿ ತಬ್ಬಿದ ಇಳೆಯಲಿ’ ಎಂಬ ಹೆಸರನ್ನು ಇಡಲಾಗಿದೆ.

    ಪ್ರೀತಿ ಎಂದರೆ ಏನು? ಹಳೆಯ ನೆನಪುಗಳಾ? ನಾಳೆ ಜತೆಯಾಗಿರಬೇಕು ಎಂಬ ಕನಸುಗಳಾ? ದೂರವಾದ ನಂತರದ ಚಡಪಡಿಕೆಯಾ? ಇದೆಲ್ಲದರ ಸಂಗಮವೇ ‘ಇಬ್ಬನಿ ತಬ್ಬಿದ ಇಳೆಯಲಿ’. ಇದೊಂದು ಕಾವ್ಯಾತ್ಮಕ ಪ್ರೇಮಕಥೆಯಾಗಿದ್ದು, ಬೇಷರತ್ತಾಗಿ ಪ್ರೀತಿಸುವುದನ್ನು ಸಂಭ್ರಮಿಸುವ ಚಿತ್ರ. ನಿನ್ನೆ, ಇಂದು ಮತ್ತು ನಾಳೆಯ ಪ್ರೀತಿಯನ್ನು ತೋರಿಸುವ ಚಿತ್ರ. ಪ್ರೇಕ್ಷಕರು ಚಿತ್ರವನ್ನು ನೋಡುತ್ತಾ, ಹಾಡುತ್ತಾ, ನಲಿಯುತ್ತಾ, ತಮ್ಮನ್ನೇ ತಾವು ಮರೆಯುವಂತಹ ಚಿತ್ರ. ಇದನ್ನೂ ಓದಿ:ತನ್ನನ್ನು ತಾನೇ ಮದುವೆಯಾದ ಕಿರುತೆರೆ ನಟಿ ಕಾನಿಷ್ಕಾ ಸೋನಿ

    ಕಾಲೇಜಿನಿಂದ ಪ್ರಾರಂಭವಾಗುವ ಈ ಕಥೆಯು ಪ್ರೌಡಾವಸ್ಥೆಯವಸ್ಥೆಯಲ್ಲಿ ಅಂತ್ಯವಾಗುತ್ತದೆ. ಹೀಗೆ ಒಂದು ದಶಕದ ವಿವಿಧ ಕಾಲಘಟ್ಟವನ್ನು ಈ ಚಿತ್ರವು ಸೂಕ್ಷ್ಮವಾಗಿ ತೋರಿಸಲಿದ್ದು, ಇಲ್ಲಿ ಹಸಿರು ಎಷ್ಟು ಮುಖ್ಯವೋ, ಆಧುನಿಕ ನಗರದೃಶ್ಯಗಳು ಸಹ ಅಷ್ಟೇ ಪ್ರಮುಖ ಪಾತ್ರವಹಿಸುತ್ತದೆ. ಅಷ್ಟೇ ಅಲ್ಲ, ಬೇಸಿಗೆಯ ಘಮ, ಚಳಿಗಾಲದ ಹಿತ ಮತ್ತು ಮಳೆಗಾಲದ ಮಾಧುರ್ಯವೂ ಈ ಚಿತ್ರದಲ್ಲಿರಲಿದೆ.

    ಈ ಹಿಂದೆ ರಕ್ಷಿತ್​ ಶೆಟ್ಟಿ ಅವರ ಸೆವೆನ್​ ಆಡ್ಸ್​ ಚಿತ್ರಕಥಾ ವಿಭಾಗದಲ್ಲಿ ಸಕ್ರಿಯವಾಗಿ ‘ಕಿರಿಕ್​ ಪಾರ್ಟಿ’ ಮತ್ತು ‘ಅವನೇ ಶ್ರೀಮನ್ನಾರಾಯಣ’ ಚಿತ್ರಗಳ ಚಿತ್ರಕಥೆಯಲ್ಲಿ ತೊಡಗಿಸಿಕೊಂಡಿದ್ದ ಮತ್ತು ‘ಕಥಾಸಂಗಮ’ ಚಿತ್ರದ ‘ರೇನ್​ಬೋ ಲ್ಯಾಂಡ್​’ ಕಿರುಚಿತ್ರವನ್ನು ನಿರ್ದೇಶಿಸಿದ್ದ ಚಂದ್ರಜಿತ್​ ಬೆಳ್ಳಿಯಪ್ಪ, ಈ ಚಿತ್ರದ ಮೂಲಕ ಸ್ವತಂತ್ರ ನಿರ್ದೇಶಕರಾಗುತ್ತಿದ್ದಾರೆ. ಈ ಚಿತ್ರದ ಕಥೆ ಹೊಸತನ ಕೇಳುವುದರಿಂದ, ಹೊಸ ಕಲಾವಿದರು ಮತ್ತು ತಂತ್ರಜ್ಞರನ್ನು ಆಯ್ಕೆ ಮಾಡಲಾಗಿದೆ. ಈಗಾಗಲೇ ನಾಯಕ-ನಾಯಕಿಯಾಗಿ ವಿಹಾನ್​ ಮತ್ತು ಅಂಕಿತಾ ಅಮರ್​ ಆಯ್ಕೆಯಾಗಿದ್ದು, ಸದ್ಯದಲ್ಲೇ ಎರಡನೆಯ ನಾಯಕಿಯ ಅಧಿಕೃತ  ಘೋಷಣೆಯಾಗಲಿದೆ.

    ಇದೊಂದು ಸಂಗೀತಮಯ ಪ್ರೇಮಕಥೆಯಾಗಿದ್ದು, ಗಗನ್​ ಬದೇರಿಯಾ ಸಂಗೀತ ಸಂಯೋಜಿಸುತ್ತಿದ್ದಾರೆ. ನ್ಯೂಯಾರ್ಕ್​ ಫಿಲಂ ಅಕಾಡೆಮಿಯಲ್ಲಿ ಕಲಿತು ಬಂದಿರುವ ಶ್ರೀವತ್ಸನ್​ ಸೆಲ್ವರಾಜನ್​, ಈ ಚಿತ್ರಕ್ಕೆ ಛಾಯಾಗ್ರಾಹಕರಾಗಿ ಆಯ್ಕೆ ಆಗಿದ್ದಾರೆ. ಈ ಹಿಂದೆ ‘ಕಥಾಸಂಗಮ’ ಚಿತ್ರದ ‘ಗಿರ್​ಗಿಟ್ಲೆ’  ಕಥೆಯನ್ನು ನಿರ್ದೇಶಿಸದ್ದ ಶಶಿಕುಮಾರ್​, ಈ ಚಿತ್ರದ ಕಾರ್ಯಕಾರಿ ನಿರ್ಮಾಪಕರಾಗಿ ಕೆಲಸ ಮಾಡುತ್ತಿದ್ದಾರೆ. ‘ಇಬ್ಬನಿ ತಬ್ಬಿದ ಇಳೆಯಲಿ’ ಚಿತ್ರದ ಚಿತ್ರೀಕರಣ ಸೆಪ್ಟೆಂಬರ್​ ಮೊದಲ ವಾರದಲ್ಲಿ ಪ್ರಾರಂಭವಾಗಲಿದ್ದು, 2023ರ ಬೇಸಿಗೆಯಲ್ಲಿ ಬಿಡುಗಡೆಯಾಗಲಿದೆ.

    Live Tv
    [brid partner=56869869 player=32851 video=960834 autoplay=true]

  • ಬದಲಾಯಿತು ‘ಗೋಧ್ರಾ’ ಟೈಟಲ್ : ಡಿಯರ್ ವಿಕ್ರಂ ಆದ ನೀನಾಸಂ ಸತೀಶ್

    ಬದಲಾಯಿತು ‘ಗೋಧ್ರಾ’ ಟೈಟಲ್ : ಡಿಯರ್ ವಿಕ್ರಂ ಆದ ನೀನಾಸಂ ಸತೀಶ್

    ನ್ನಡದ ಹೆಸರಾಂತ ನಟ ಸತೀಶ್ ನೀನಾಂಸ ನಟನೆಯ ನಿರೀಕ್ಷಿತ ‘ಗೋಧ್ರಾ’ ಸಿನಿಮಾದ ಹೆಸರು ಬದಲಾಗಿದೆ. ಈ ಚಿತ್ರಕ್ಕೆ ಈಗ ‘ಡಿಯರ್ ವಿಕ್ರಂ’ ಎಂದು ಹೆಸರಿಡಲಾಗಿದೆ. ಶ್ರದ್ಧಾ ಶ್ರೀನಾಥ್ ಮತ್ತು ಸತೀಶ್ ಕಾಂಬಿನೇಷನ್ನ ಸಿನಿಮಾ ಇದಾಗಿದ್ದು, ನಂದೀಶ್ ನಿರ್ದೇಶನ ಮಾಡಿದ್ದಾರೆ. ನಿರ್ದೇಶಕರ ಚೊಚ್ಚಲ ಸಿನಿಮಾ ಇದಾಗಿದ್ದರೂ, ಈಗಾಗಲೇ ಟ್ರೇಲರ್ ನಿಂದಾಗಿ ಭಾರೀ ಸದ್ದು ಮಾಡಿದೆ.

    ಸಿನಿಮಾದ ಟೈಟಲ್ ಬದಲಾವಣೆ ಕುರಿತು ಸತೀಶ್ ಮಾತನಾಡಿದ್ದಾರೆ, “ಈ ಸಿನಿಮಾ ಕ್ರಾಂತಿ ಮತ್ತು ಪ್ರೀತಿಯ ಸುತ್ತಲೂ ಹೆಣೆದಿರುವ ಸುಂದರವಾದ ಕಥನ. ಸಿನಿಮಾದ ಪ್ರತಿ ಹೆಜ್ಜೆಯಲ್ಲೂ ಸಮಾಜದ ಹುಳುಕನ್ನು ತೀಕ್ಷ್ಣವಾಗಿ ಪ್ರಶ್ನಿಸುವ ಧೈರ್ಯ ಮಾಡಿದೆ. ಗೋಧ್ರಾ ಪ್ರಸ್ತುತ ರಾಜಕೀಯ ಅರಾಜಕತೆಗೆ ಹಿಡಿದ ಕೈ ಗನ್ನಡಿ ಆಗಿದೆ. ಆದರೀಗ ಸಿನಿಮಾದ ಟೈಟಲ್ ವಿಚಾರವಾಗಿ ಒಂದಷ್ಟು ಚರ್ಚೆ ಶುರುವಾಗಿದೆ. ನಿಜ ಹೇಳುವುದಾದರೇ ನಮ್ಮ ಸಿನಿಮಾ ಯಾವುದೇ ನೈಜ ಘಟನೆಗೆ, ಪ್ರದೇಶವನ್ನು ಆಧರಿಸಿದ ಸಿನಿಮಾವಲ್ಲ. ಹೀಗಾಗಿ ಜನರಲ್ಲಿ ಗೊಂದಲ ಮೂಡಿಸಬಾರದು ಅನ್ನೋ ಕಾರಣದಿಂದ ಸಿನಿಮಾ ಶೀರ್ಷಿಕೆಯನ್ನು ಬದಲಾಯಿಸಲು ಚಿತ್ರತಂಡ ಯೋಚಿಸಿದೆ. ಇಂದಿನಿಂದ ಗೋಧ್ರಾ.. ‘ಡಿಯರ್ ವಿಕ್ರಂ’ ಆಗಿ ಪ್ರೇಕ್ಷಕರೆದುರು ಬರಲಿದೆ” ಎಂದಿದ್ದಾರೆ.

    ಸತೀಶ್ ನೀನಾಸಂ ಮತ್ತು ಶ್ರದ್ಧಾ ಶ್ರೀನಾಥ್ ಸಿನಿಮಾದ ನಾಯಕ- ನಾಯಕಿಯಾಗಿ ನಟಿಸಿದ್ದು, ಅಚ್ಯುತ್ ಕುಮಾರ್, ವಸಿಷ್ಠ ಸಿಂಹ, ರಕ್ಷಾ ಸೋಮಶೇಖರ್, ಸೋನುಗೌಡ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಜೂಡಾ ಸ್ಯಾಂಡಿ ಸಂಗೀತ ನೀಡಿದ್ದು, KP ಹಿನ್ನೆಲೆ ಸಂಗೀತ ಪ್ರೇಕ್ಷಕರನ್ನು ಕಾಡಲಿದೆ. ಶಶಿಕುಮಾರ್ ಮತ್ತು ಜಾಕೆಬ್ ಕೆ. ಗಣೇಶ್ ಛಾಯಾಗ್ರಹಣದ ಜುಗಲ್ ಬಂಧಿ ಖಂಡಿತಾ ಇಷ್ಟವಾಗಲಿದೆ. ಈ ಸಿನಿಮಾ ಮೂಲಕ ನಂದೀಶ ಭರವಸೆಯ ನಿರ್ದೇಶಕನಾಗಿ ಚಂದನವನಕ್ಕೆ ಕಾಲಿಡುತ್ತಿದ್ದಾರೆ. ಇದನ್ನೂ ಓದಿ: ಶ್ರದ್ಧಾ ಶ್ರೀನಾಥ್ ಗುಡ್ ಬೈ ಹೇಳಿದ್ದು ಯಾಕೆ.?

    ಅಂದಹಾಗೆ ಈ ಸಿನಿಮಾ ಥಿಯೇಟರ್‌ನಲ್ಲಿ ರಿಲೀಸ್ ಆಗದೇ ನೇರವಾಗಿ VOOT Select OTT ವೇದಿಕೆಯಲ್ಲಿ ಬಿಡುಗಡೆ ಆಗಲಿದೆಯಂತೆ. ಯಾವತ್ತಿನಿಂದ ಈ ಸಿನಿಮಾ ನೋಡಬಹುದು ಎನ್ನುವ ಕುರಿತು ಇನ್ನೂ ಡೇಟ್ ಅನೌನ್ಸ್ ಆಗಿಲ್ಲ. ಆದರೆ, ಅತೀ ಶೀಘ್ರದಲ್ಲೇ ರಿಲೀಸ್ ಮಾಡುವ ಪ್ಲ್ಯಾನ್ ನಡೆದಿದೆ ಎನ್ನಲಾಗುತ್ತಿದೆ.

  • ಬಾಲ್ಯದಲ್ಲೇ ಉಪೇಂದ್ರ ನಿರ್ದೇಶನದ ಹೊಸ ಸಿನಿಮಾದ ಟೈಟಲ್ ರಿವಿಲ್ ಮಾಡಿದ್ದರು ಪುನೀತ್ ರಾಜ್ ಕುಮಾರ್? ವೈರಲ್ ಆಯಿತು ಅಪ್ಪು ಫೋಟೋ

    ಬಾಲ್ಯದಲ್ಲೇ ಉಪೇಂದ್ರ ನಿರ್ದೇಶನದ ಹೊಸ ಸಿನಿಮಾದ ಟೈಟಲ್ ರಿವಿಲ್ ಮಾಡಿದ್ದರು ಪುನೀತ್ ರಾಜ್ ಕುಮಾರ್? ವೈರಲ್ ಆಯಿತು ಅಪ್ಪು ಫೋಟೋ

    ಪೇಂದ್ರ ನಟಿಸಿ, ನಿರ್ದೇಶನ ಮಾಡುತ್ತಿರುವ ಹೊಸ ಸಿನಿಮಾದ ಟೈಟಲ್ ಬಗ್ಗೆ ಭಾರೀ ಚರ್ಚೆ ನಡೆಯುತ್ತಿದೆ. ಇಂದು ನಡೆದ ಸಿನಿಮಾ ಮುಹೂರ್ತ ಸಮಾರಂಭಕ್ಕೆ ನಿರ್ಮಾಪಕರಿಗೆ, ಹಿತೈಷಿಗಳಿಗೆ ಮತ್ತು ಸ್ವತಃ ತಾವು ಕೂಡ ತಮ್ಮ ಚಿತ್ರದ ಟೈಟಲ್ ಅನ್ನು ಹಣೆ ಮೇಲೆ ಹಾಕಿಕೊಂಡು ಬಂದಿದ್ದರು ಉಪೇಂದ್ರ. ಸಿನಿಮಾದ ಟೈಟಲ್ ಅದೊಂದು ಧಾರ್ಮಿಕ ಚಿಹ್ನೆಯಂತೆಯೂ ಭಾಸವಾಗುವುದರಿಂದ ವಿಪರೀತ ಕುತೂಹಲ ಕೂಡ ಮುಡಿಸಿತ್ತು. ಈಗ ಆ ಟೈಟಲ್ ಬಗ್ಗೆ ಮತ್ತೊಂದು ಸುದ್ದಿ ಸರಿದಾಡುತ್ತಿದೆ. ಇದನ್ನೂ ಓದಿ : ನಿತ್ಯಾನಂದ ಕುರಿತು ಸಾಕ್ಷ್ಯಚಿತ್ರ : ದೇವಮಾನವನ ನಿಜಬಣ್ಣ ಬಟಾಬಯಲು

    ತಮ್ಮ ಸಿನಿಮಾದ ಟೈಟಲ್ ಬಗ್ಗೆ ಉಪೇಂದ್ರ ಅವರು ನಿರ್ದಿಷ್ಟ ಅರ್ಥವನ್ನು ಹೇಳದೇ ಇದ್ದರೂ, ಸಿನಿಮಾ ನೋಡುಗರು ಮಾತ್ರ ಅದನ್ನು ಬೇರೆ ಬೇರೆ ರೀತಿಯಲ್ಲಿ ಕರೆಯುತ್ತಿದ್ದಾರೆ. ಒಬ್ಬರು ಯು ಮತ್ತು ಐ ಅಂದರೆ, ಇನ್ನೂ ಕೆಲವರು ದೇವರ ನಾಮ ಎಂದೂ ಹೇಳುತ್ತಾರೆ. ಇನ್ನೂ ಕೆಲವರು ಕುದುರೆ ಲಾಳ ಎಂದೂ ಬಣ್ಣಿಸುತ್ತಿದ್ದಾರೆ. ಈ ಟೈಟಲ್ ಅನ್ನು ಪುನೀತ್ ರಾಜ್ ಕುಮಾರ್ ಬಾಲ್ಯದಲ್ಲಿರುವಾಗಲೇ ರಿವಿಲ್ ಮಾಡಿದ್ದರು ಎನ್ನುವುದು ಅಪ್ಪು ಬಾಲ್ಯದ ಫೋಟೋ ನೆನಪಿಸುತ್ತಿದೆ ಮತ್ತು ಅದು ವೈರಲ್ ಆಗುತ್ತಿದೆ. ಇದನ್ನೂ ಓದಿ : ಉಪೇಂದ್ರ ನಿರ್ದೇಶಿಸಿ, ನಟಿಸಲಿರುವ ಸಿನಿಮಾಗೆ ಮುಹೂರ್ತ : ಹಣೆ ಮೇಲೆ ಟೈಟಲ್ ಹಾಕಿಕೊಂಡು ಬಂದ ಚಿತ್ರತಂಡ

    ಎರಡ್ಮೂರು ವರ್ಷ ಇರುವಾಗ ಪುನೀತ್ ರಾಜ್ ಕುಮಾರ್ ಅವರು ತಮ್ಮ ಹಣೆಯ ಮೇಲೆ ನಾಮವನ್ನು ಹಾಕಿಕೊಂಡಿದ್ದಾರೆ. ಆ ಫೋಟೋಗೂ ಮತ್ತು ಇವತ್ತು ಉಪೇಂದ್ರ ಕಾಣಿಸಿಕೊಂಡ ರೀತಿಗೂ ಹೋಲಿಕೆ ಆಗುವುದರಿಂದ ನಿಮಗಿಂತ ಮೊದಲೇ ಅಪ್ಪು ನಿಮ್ಮ ಸಿನಿಮಾದ ಟೈಟಲ್ ರಿವಿಲ್ ಮಾಡಿದ್ದಾರೆ ಎಂದು ಕಾಮೆಂಟ್ ಮಾಡಿದ್ದಾರೆ. ಇದೇ ಫೋಟೋವನ್ನು ನಿರ್ಮಾಪಕ ಕೆ.ಪಿ ಶ್ರೀಕಾಂತ್ ಕೂಡ ಟ್ವಿಟರ್ ನಲ್ಲಿ ಶೇರ್ ಮಾಡಿದ್ದು, ಅಪ್ಪು ನಮ್ಮೊಂದಿಗೆ ನೀವು ಯಾವಾಗಲೂ ಇರುತ್ತೀರಿ ಎಂದು ಬರೆದುಕೊಂಡಿದ್ದಾರೆ.

  • ಕನ್ನಡದ ‘ದಸರಾ’ ವರ್ಸಸ್ ತೆಲುಗಿನ ‘ದಸರಾ’: ಯಾರಿಗೆ ಸಿಗತ್ತೆ ದಸರಾ ಟೈಟಲ್?

    ಕನ್ನಡದ ‘ದಸರಾ’ ವರ್ಸಸ್ ತೆಲುಗಿನ ‘ದಸರಾ’: ಯಾರಿಗೆ ಸಿಗತ್ತೆ ದಸರಾ ಟೈಟಲ್?

    ಪ್ಯಾನ್ ಇಂಡಿಯಾ ಸಿನಿಮಾ ಅಂದಾಕ್ಷಣ ಏನೆಲ್ಲ ಸಮಸ್ಯೆಗಳು ಎದುರಾಗುತ್ತವೆ ಎನ್ನುವುದಕ್ಕೆ ಈ ಪೋಸ್ಟರ್ ಮೊದಲ ಬಾರಿಗೆ ಸಾಕ್ಷಿಯಾಗಿ ನಿಂತಿದೆ. ಒಂದು ತೆಲುಗಿನ ನಾನಿ ನಟನೆಯ ಚಿತ್ರ. ಇದಕ್ಕೆ ತೆಲುಗು ಸೇರಿದಂತೆ ಬೇರೆ ಬೇರೆ ಭಾಷೆಗಳಲ್ಲಿ ಇವರು ಇಟ್ಟಿರುವ ಹೆಸರು ‘ದಸರಾ’. ಮತ್ತೊಂದು ಅಪ್ಪಟ ಕನ್ನಡದ್ದೆ ಚಿತ್ರ. ನೀನಾಸಂ ಸತೀಶ್ ನಾಯಕನಾಗಿ ನಟಿಸುತ್ತಿರುವ ಚಿತ್ರ. ಈ ಸಿನಿಮಾಗೂ ‘ದಸರಾ’ ಎಂದೇ ಹೆಸರಿಡಲಾಗಿದೆ.

    ಎರಡೂ ಚಿತ್ರಗಳೂ ಹಲವು ಭಾಷೆಗಳಲ್ಲಿ ಬಿಡುಗಡೆ ಆಗಲಿವೆ. ಹೀಗಾಗಿ ಯಾರಿಗೆ ಈ ಟೈಟಲ್ ಉಳಿಯುತ್ತದೆ ಎನ್ನುವ ಚರ್ಚೆ ಶುರುವಾಗಿದೆ. ನೀನಾಸಂ ಸತೀಶ್ ನಟನೆಯ ‘ದಸರಾ’ ಸಿನಿಮಾದ ಶೂಟಿಂಗ್ ಈಗಾಗಲೇ ಕಂಪ್ಲಿಟ್ ಆಗಿದೆ. ತೆಲುಗಿನ ‘ದಸಾರ’ ಕೇವಲ ಫಸ್ಟ್ ಲುಕ್ ಮಾತ್ರ ಬಿಡುಗಡೆ ಮಾಡಿದೆ. ಹಾಗಾಗಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯು ಯಾರ ಪರವಾಗಿ ನಿಲ್ಲುತ್ತದೆ ಎನ್ನುವ ಪ್ರಶ್ನೆ ಎದ್ದಿದೆ. ಇದನ್ನೂ ಓದಿ : ಸುದೀಪ್, ಉಪ್ಪಿ ಕಾಂಬಿನೇಷನ್ ‘ಕಬ್ಜ’ ಚಿತ್ರಕ್ಕೆ ಇಬ್ಬರು ದಕ್ಷಿಣ ತಾರೆಯರ ಎಂಟ್ರಿ

    ಯಾರೇ ಸಿನಿಮಾ ಮಾಡಲಿ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಹೆಸರನ್ನು ನೋಂದಾಯಿಸಬೇಕು ಎನ್ನುವ ನಿಯಮವಿದೆ. ಯಾರು ಮೊದಲು ಹೆಸರನ್ನು ನೋಂದಾಯಿಸಿಕೊಳ್ಳುತ್ತಾರೋ ಅವರಿಗೆ ಶೀರ್ಷಿಕೆಗಳು ಸಿಗುತ್ತವೆ. ‘ದಸರಾ’ ಸಿನಿಮಾವನ್ನು ಈಗಾಗಲೇ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ನಿರ್ಮಾಪಕಿ, ನಟಿ ಶರ್ಮಿಳಾ ಮಾಂಡ್ರೆ ನೋಂದಾಯಿಸಿಕೊಂಡಿದ್ದಾರೆ. ಹೀಗಾಗಿ ನಿಯಮದ ಪ್ರಕಾರ ಇದೇ ತಂಡಕ್ಕೆ ‘ದಸರಾ’ ಟೈಟಲ್ ಬಳಸಿಕೊಳ್ಳುವ ಹಕ್ಕಿದೆ. ಇದನ್ನೂ ಓದಿ : ‘ದಿ ಕಾಶ್ಮೀರ್ ಫೈಲ್ಸ್’ ರಿಯಲ್ ಸ್ಟೋರಿ : ಅಕ್ಕಿ ಡ್ರಮ್ ನಲ್ಲಿ ಕೊಲ್ಲಲ್ಪಟ್ಟ ನಿಜವಾದ ಕಾಶ್ಮೀರಿ ಪಂಡಿತ ಇವರು

    ನಾನಿ ನಟನೆಯ ತೆಲುಗಿನ ಸಿನಿಮಾ ಡಬ್ ಆಗಿ ಕನ್ನಡದಲ್ಲೂ ರಿಲೀಸ್ ಆಗಲಿದೆ. ಹಾಗಾಗಿ ಕನ್ನಡದಲ್ಲಿ ತಮ್ಮ ಸಿನಿಮಾದ ಟೈಟಲ್ ಅನ್ನು ಬದಲಿಸುವುದು ಅನಿವಾರ್ಯವಾಗಬಹುದು. ಅದನ್ನು ಸಿನಿಮಾ ತಂಡ ಒಪ್ಪಿಕೊಳ್ಳುತ್ತಾ ಅಥವಾ ಕಾನೂನಿನಲ್ಲಿ ಮತ್ತೊಂದು ದಾರಿಯೂ ಇದೆ. ಅದನ್ನು ಬಳಸಿಕೊಳ್ಳುತ್ತಾ ಅನ್ನುವುದು ಸದ್ಯಕ್ಕಿರುವ ಪ್ರಶ್ನೆ. ಇದನ್ನೂ ಓದಿ : ಸರ್ರಂತ ಸುಡುವ ಜ್ವಾಲಾಗ್ನಿ ಆಗಿ ಬಂದ ಈ ತೂಫಾನ್: ಕೆಜಿಎಫ್ 2 ಫಸ್ಟ್ ಲಿರಿಕಲ್ ಹಾಡು ರಿಲೀಸ್

    ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ನೋಂದಾಯಿಸಿರುವ ಎಷ್ಟೋ ಶೀರ್ಷಿಕೆಯನ್ನು ಸೆನ್ಸಾರ್ ಮಂಡಳಿ ಒಪ್ಪಿಕೊಂಡಿಲ್ಲ. ಕೆಲವು ಬಾರಿ ಕೋರ್ಟಿಗೂ ಹೋಗಿ ತಮಗಿಷ್ಟದ ಟೈಟಲ್ ಪಡೆದುಕೊಂಡ ಉದಾಹರಣೆಯೂ ಇದೆ. ಯಾರ ಸಿನಿಮಾ ಮೊದಲು ಸೆನ್ಸಾರ್ ಆಗುತ್ತದೆಯೋ, ಆ ಟೈಟಲ್ ಗೆ ಮೊದಲ ಆದ್ಯತೆ ಎನ್ನುವ ಮತ್ತೊಂದು ನಿಯಮವಿದೆ. ಈ ಎಲ್ಲ ಗೊಂದಲಗಳ ಮಧ್ಯೆ ಯಾವ ಚಿತ್ರತಂಡಕ್ಕೆ ‘ದಸರಾ’ ಟೈಟಲ್ ಸಿಗುತ್ತದೆಯೋ ಕಾದು ನೋಡಬೇಕು.

  • ‘ರಾಧೆ, ಶ್ಯಾಮ್’ ಆದ ಪ್ರಭಾಸ್-ಪೂಜಾ

    ‘ರಾಧೆ, ಶ್ಯಾಮ್’ ಆದ ಪ್ರಭಾಸ್-ಪೂಜಾ

    ಹೈದರಾಬಾದ್: ಟಾಲಿವುಡ್ ನಟ ಪ್ರಭಾಸ್ ಅಭಿನಯದ ‘ಬಾಹುಬಲಿ’, ‘ಸಾಹೋ’ ಸಿನಿಮಾದ ಬಳಿಕ ಅಭಿಮಾನಿಗಳು ಅವರ ಮುಂದಿನ ಸಿನಿಮಾದ ಬಗ್ಗೆ ಭಾರೀ ಕುತೂಹಲ ಹೊಂದಿದ್ದರು. ಇದೀಗ ಪ್ರಭಾಸ್ ಮುಂದಿನ ಸಿನಿಮಾದ ಟೈಟಲ್ ಘೋಷಣೆಯಾಗಿದೆ.

    ನಟ ಪ್ರಭಾಸ್ ಅಭಿನಯದ 20ನೇ ಸಿನಿಮಾ ಇದಾಗಿದ್ದು, ಸಿನಿಮಾ ಸೆಟ್ಟೇರಿದಾಗಿನಿಂದ ಚಿತ್ರದ ಬಗ್ಗೆ ಯಾವುದೇ ಮಾಹಿತಿ ಬಿಟ್ಟುಕೊಟ್ಟಿರಲಿಲ್ಲ. ಅಲ್ಲದೇ ಸಿನಿಮಾ ಟೈಟಲ್ ಕೂಡ ರಿವೀಲ್ ಮಾಡಿರಲಿಲ್ಲ. ಆದರೆ ಇಂದು ಸ್ವತಃ ಪ್ರಭಾಸ್ ಸಿನಿಮಾದ ಟೈಟಲ್ ಮತ್ತು ಫಸ್ಟ್ ಲುಕ್ ರಿಲೀಸ್ ಮಾಡುವ ಮೂಲಕ ಅಭಿಮಾನಿಗಳು ಸರ್‌ಪ್ರೈಸ್ ನೀಡಿದ್ದಾರೆ.

    ಪ್ರಭಾಸ್ ಅಭಿನಯದ 20ನೇ ಸಿನಿಮಾಗೆ ‘ರಾಧೆ ಶ್ಯಾಮ್’ ಎಂದು ಟೈಟಲ್ ಇಡಲಾಗಿದೆ. ಜೊತೆಗೆ ಪ್ರಭಾಸ್ ಮತ್ತು ನಟಿ ಪೂಜಾ ಹೆಗ್ಡೆ ಜೊತೆಗಿರುವ ಒಂದು ಸುಂದರವಾದ ಫಸ್ಟ್‌ಲುಕ್ ಪೋಸ್ಟರ್ ಅನ್ನು ರಿಲೀಸ್ ಮಾಡಲಾಗಿದೆ. ಪೋಸ್ಟರಿನಲ್ಲಿ ಪೂಜಾ ಮತ್ತು ಪ್ರಭಾಸ್ ರೊಮ್ಯಾಂಟಿಕ್ ಲುಕ್‍ನಲ್ಲಿ ಪೋಸ್ ನೀಡಿದ್ದಾರೆ. ಅಲ್ಲದೇ ಅವರ ಬ್ಯಾಕ್ ಡ್ರಾಪ್ ಸಹ ಗಮನ ಸೆಳೆಯುತ್ತಿದೆ. ಪೋಸ್ಟರಿನಲ್ಲಿ ಪ್ರಭಾಸ್ ಮತ್ತು ಪೂಜಾ ರೊಮ್ಯಾಂಟಿಕ್ ಲುಕ್‍ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ.

    ಪ್ರಭಾಸ್ ಪಾಲಿಗೆ ಜುಲೈ 10 ಬಹಳ ವಿಶೇಷವಾದ ದಿನವಾಗಿದೆ. ಇಂದೇ ‘ಬಾಹುಬಲಿ’ ಸಿನಿಮಾ ತೆರೆಕಂಡಿತ್ತು. ಇದೀಗ ಈ ಸಿನಿಮಾ ರಿಲೀಸ್ ಆಗಿ ಐದು ವರ್ಷಗಳಾಗಿದೆ. ಈ ನೆನಪಿನಲ್ಲೇ ಪ್ರಭಾಸ್ ತಮ್ಮ ಮುಂದಿನ ಸಿನಿಮಾ ‘ರಾಧೆ ಶ್ಯಾಮ್’ನ ಟೈಟಲ್ ಮತ್ತು ಫಸ್ಟ್‌ಲುಕ್ ರಿಲೀಸ್ ಮಾಡಿದ್ದಾರೆ.

    ಪ್ರಭಾಸ್ ಆರಂಭದಿಂದಲೂ ಆ್ಯಕ್ಷನ್ ಸಿನಿಮಾಗಳಿಗೆ ಫೇಮಸ್ ಆದವರು. ಆದರೆ ‘ರಾಧೆ ಶ್ಯಾಮ್’ ಸಿನಿಮಾ ಪೋಸ್ಟರ್ ನೋಡಿದರೆ ಪ್ರಭಾಸ್ ಲವರ್ ಬಾಯ್ ಗೆಟಪ್‍ನಲ್ಲಿ ಮಿಂಚಲಿದ್ದಾರೆ ಎನ್ನಲಾಗಿದೆ. ಈ ಚಿತ್ರಕ್ಕೆ ರಾಧ ಕೃಷ್ಣ ಕುಮಾರ್ ನಿರ್ದೇಶನ ಮಾಡಿದ್ದಾರೆ. ನಾಯಕಿಯಾಗಿ ಪೂಜಾ ಹೆಗ್ಡೆ ನಟಿಸಿದ್ದಾರೆ.

    ‘ರಾಧೆ-ಶ್ಯಾಮ್ ಸಿನಿಮಾ ನಾಲ್ಕು ಭಾಷೆಯಲ್ಲಿ ತೆರೆಗೆ ಬರುತ್ತಿದೆ. ಈಗಾಗಲೇ ನಾಲ್ಕು ಭಾಷೆಯ ಪೋಸ್ಟರ್ ಕೂಡ ಬಿಡುಗಡೆಯಾಗಿದೆ. ತೆಲಗು, ತಮಿಳು, ಮಲಯಾಳಂ ಮತ್ತು ಹಿಂದಿ ಭಾಷೆಯಲ್ಲಿ ಬರಲಿದೆ. ಈ ಸಿನಿಮಾ ಪೋಸ್ಟರ್ ಶೇರ್ ಮಾಡಿ. ‘ಇದು ನಿಮಗಾಗಿ, ನೀವೆಲ್ಲರೂ ಇಷ್ಟಪಡುತ್ತೀರ ಎಂದು ಭಾವಿಸುತ್ತೇನೆ” ಎಂದು ಇನ್ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ.

    https://www.instagram.com/p/CCcr1VaH32n/?igshid=1c14hqi6enfek

  • ಸಲ್ಮಾನ್ ಖಾನ್ ‘ಭಾರತ್’ ಸಿನಿಮಾ ವಿರುದ್ಧ ದೂರು – ಟೈಟಲ್ ಬದಲಿಸುವಂತೆ ಮನವಿ

    ಸಲ್ಮಾನ್ ಖಾನ್ ‘ಭಾರತ್’ ಸಿನಿಮಾ ವಿರುದ್ಧ ದೂರು – ಟೈಟಲ್ ಬದಲಿಸುವಂತೆ ಮನವಿ

    ನವದೆಹಲಿ: ಬಾಲಿವುಡ್ ಭಾಯ್ ಜಾನ್ ಸಲ್ಮಾನ್ ಖಾನ್ ಅಭಿನಯಿಸಿ ಬಿಡುಗಡೆಗೆ ಸಿದ್ಧವಾಗಿರುವ ‘ಭಾರತ್’ ಸಿನಿಮಾಗೆ ಕಂಟಕವೊಂದು ಎದುರಾಗಿದೆ. ಈ ಸಿನಿಮಾದ ಶೀರ್ಷಿಕೆ ಬದಲಿಸಬೇಕು ಎಂದು ದೆಹಲಿ ಕೋರ್ಟ್ ನ ನ್ಯಾಯಾಧೀಶ ವಿಪಿನ್ ತ್ಯಾಗಿ ಎಂಬವರು ಅರ್ಜಿ ಸಲ್ಲಿಸಿದ್ದಾರೆ.

    ಈ ಅರ್ಜಿಯ ಪ್ರಕಾರ ಭಾರತ್ ಎಂಬ ಶೀರ್ಷಿಕೆ ಸಂವಿಧಾನದ ಸೆಕ್ಷನ್ 3ರ ಪ್ರಕಾರ ಕಾನೂನು ಬಾಹಿರವಾಗಿದೆ. ನಮ್ಮ ದೇಶದ ಲಾಂಛನಗಳನ್ನು ಮತ್ತು ಹೆಸರನ್ನು ವಾಣಿಜ್ಯ ಉದ್ದೇಶಗಳಿಗೆ ಬಳಸುವಂತಿಲ್ಲ. ಅಸಮರ್ಪಕ ಬಳಕೆಗಳನ್ನು ತಡೆಗಟ್ಟುವ ಕಾಯಿದೆ ಪ್ರಕಾರ ‘ಭಾರತ್’ ಎಂಬ ಹೆಸರನ್ನು ಸಿನಿಮಾ ಟೈಟಲ್ ಆಗಿ ಬಳಸುವುದು ತಪ್ಪು ಎಂದು ಹೇಳಲಾಗಿದೆ.

    ‘ಭಾರತ್’ ಎಂಬ ಹೆಸರನ್ನು ಬಳಸಿರುವ ಕಾರಣ ಕೆಲವು ಸಂಭಾಷಣೆಗಳನ್ನು ಬದಲಾಯಿಸಬೇಕು. ‘ಭಾರತ್’ ಎಂಬ ಪಾತ್ರಧಾರಿಯನ್ನು ದೇಶಕ್ಕೆ ಹೋಲಿಕೆ ಮಾಡಿದಾಗ ಅದೂ ದೇಶದ ಜನರ ದೇಶಭಕ್ತಿಯ ಭಾವನೆಗಳಿಗೆ ದಕ್ಕೆ ಉಂಟುಮಾಡುತ್ತದೆ ಎಂದು ನಮೂದಿಸಲಾಗಿದೆ.

    ಈ ಚಿತ್ರ ಕೊರಿಯಾನ್ ಸಿನಿಮಾವಾದ “ಆನ್ ಓಡ್ ಟು ಮೈ ಫಾದರ್”ನ ರೂಪಾಂತರಾವಾಗಿದ್ದೂ ಇದರಲ್ಲಿ ಸಲ್ಮಾನ್ ಖಾನ್ ಅವರು 5 ವಿಭಿನ್ನ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಸಿನಿಮಾವನ್ನು ಅಲಿ ಅಬ್ಬಾಸ್ ಜಾಫರ್ ಅವರು ನಿರ್ದೇಶನ ಮಾಡಿದ್ದು ಜೂನ್ 5ಕ್ಕೆ ಬಿಡುಗಡೆಗೆ ಸಿದ್ಧವಾಗಿತ್ತು.

  • ದರ್ಶನ್ ಚಾಲೆಂಜಿಂಗ್ ಸ್ಟಾರ್ ಆಗಿ 16 ವರ್ಷ

    ದರ್ಶನ್ ಚಾಲೆಂಜಿಂಗ್ ಸ್ಟಾರ್ ಆಗಿ 16 ವರ್ಷ

    ಬೆಂಗಳೂರು: ನಟ ದರ್ಶನ್ ಅವರಿಗೆ ಚಾಲೆಂಜಿಂಗ್ ಸ್ಟಾರ್ ಎಂಬ ಬಿರುದು ಸಿಕ್ಕಿ ಮೇ 23ಕ್ಕೆ 16 ವರ್ಷವಾಗಿದೆ.

    ಮೇ 23 ರಂದು ಚಾಲೆಂಜಿಂಗ್ ಸ್ಟಾರ್ ಬಿರುದು ಸಿಕ್ಕಿ 16 ವರ್ಷ ಆಗಿದಕ್ಕೆ ಹಾಗೂ ಮಂಡ್ಯ ಪಕ್ಷೇತರ ಅಭ್ಯರ್ಥಿ ಸುಮಲತಾ ಅವರು ಚುನಾವಣೆಯಲ್ಲಿ ಗೆಲುವು ಸಾಧಿಸಿದಕ್ಕೆ ಅಭಿಮಾನಿಗಳು ದರ್ಶನ್ ಅವರ ಮನೆ ಮುಂದೆ ಜಮಾಯಿಸಿದ್ದರು.

    2003ರಲ್ಲಿ ದರ್ಶನ್ ಅವರಿಗೆ ಚಾಲೆಂಜಿಂಗ್ ಸ್ಟಾರ್ ಎಂಬ ಬಿರುದು ಸಿಕ್ಕಿದೆ. ಇದಾದ ಬಳಿಕ ತಮ್ಮ ನೆಚ್ಚಿನ ನಟ ದರ್ಶನ್ ಅವರ ಅಭಿಮಾನಿಗಳು, ‘ಡಿ-ಬಾಸ್’, ‘ಬಾಕ್ಸ್ ಆಫೀಸ್ ಸುಲ್ತಾನ್’ ಎಂಬ ಅನೇಕ ಬಿರುದುಗಳನ್ನು ಅವರ ಅಭಿಮಾನಿಗಳು ನೀಡಿದ್ದಾರೆ.

    ದರ್ಶನ್ ಅವರು 2001ರಲ್ಲಿ ‘ಮೆಜೆಸ್ಟಿಕ್’ ಚಿತ್ರದ ಮೂಲಕ ಸ್ಯಾಂಡಲ್‍ವುಡ್‍ನಲ್ಲಿ ನಟನಾಗಿ ಎಂಟ್ರಿ ಕೊಟ್ಟಿದ್ದಾರೆ. ಬಳಿಕ ದರ್ಶನ್ ಅವರು ‘ಕರಿಯಾ’, ‘ನಮ್ಮ ಪ್ರೀತಿಯ ರಾಮು’ ಹಾಗೂ ‘ಕಲಾಸಿಪಾಳ್ಯ’ ಚಿತ್ರ ಸೇರಿದಂತೆ ಹಲವು ಸೂಪರ್ ಹಿಟ್ ಚಿತ್ರಗಳನ್ನು ನೀಡಿದ್ದಾರೆ.

    ದರ್ಶನ್ ಅವರು ಬಹುನಿರೀಕ್ಷಿತ 50ನೇ ಚಿತ್ರ ‘ಮುನಿರತ್ನ ಕುರುಕ್ಷೇತ್ರ’ ವರಮಹಾಲಕ್ಷ್ಮಿ ಹಬ್ಬಕ್ಕೆ ಚಿತ್ರ ರಿಲೀಸ್‍ಗೆ ಸಿದ್ಧವಾಗಿದೆ. ಕನ್ನಡ, ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿ ಭಾಷೆಯಲ್ಲಿ ವಿಶ್ವಾದ್ಯಂತ ತೆರೆಕಾಣುತ್ತಿದೆ.

  • ಕೃಷ್ಣಾವತಾರಿ ಅಜೇಯ್ ರಾವ್ ಪೊಲೀಸ್‍ಗಿರಿ! – 27ನೇ ಚಿತ್ರದ ಫಸ್ಟ್ ಲುಕ್ ಪೋಸ್ಟರ್!

    ಕೃಷ್ಣಾವತಾರಿ ಅಜೇಯ್ ರಾವ್ ಪೊಲೀಸ್‍ಗಿರಿ! – 27ನೇ ಚಿತ್ರದ ಫಸ್ಟ್ ಲುಕ್ ಪೋಸ್ಟರ್!

    ಬೆಂಗಳೂರು: ಇಂದು ಕೃಷ್ಣ ಅಜೇಯ್ ರಾವ್ ಜನ್ಮ ದಿನ. ತಾಯಿಗೆ ತಕ್ಕ ಮಗ ಚಿತ್ರದ ಯಶಸ್ಸಿನ ಅಲೆಯಲ್ಲಿರುವ ಅವರ ಮುಂದಿನ ಚಿತ್ರದ ಬಗೆಗಿನ ವಿವರಗಳೂ ಈ ಸಂದರ್ಭದಲ್ಲಿಯೇ ಜಾಹೀರಾಗಿವೆ. ಗುರುದೇಶಪಾಂಡೆ ನಿರ್ಮಾಣದಲ್ಲಿ ಮೂಡಿ ಬರಲಿರೋ ಅಜೇಯ್ ರಾವ್ ಇಪ್ಪತ್ತೇಳನೇ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆಯಾಗಿದೆ.

    ಈಗ ಬಿಡುಗಡೆಯಾಗಿರೋ ಫಸ್ಟ್ ಲುಕ್ ಪೋಸ್ಟರ್ ನಿಜಕ್ಕೂ ಆಕರ್ಷಕವಾಗಿದೆ. ಅಜೇಯ್ ರಾವ್ ಅರ್ಧ ಖಾಕಿ ಮತ್ತು ಮತ್ತರ್ಧ ಕೃಷ್ಣಾವತಾರದ ಗೆಟಪ್ಪಿನಲ್ಲಿರೋ ಈ ಪೋಸ್ಟರ್ ಅಭಿಮಾನಿಗಳನ್ನೂ ಖುಷಿಗೊಳಿಸಿದೆ. ಆದರೆ ಇದರ ಟೈಟಲ್ ಇನ್ನೂ ಬಿಡುಗಡೆಯಾಗಿಲ್ಲ.

    ಇದು ಗುರುದೇಶಪಾಂಡೆ ಪ್ರೊಡಕ್ಷನ್ಸ್ ಬ್ಯಾನರಿನ ಎರಡನೇ ಚಿತ್ರ. ಇದನ್ನು ರಾಜ್ ವರ್ಧನ್ ಶಂಕರ್ ನಿರ್ದೇಶನ ಮಾಡಲಿದ್ದಾರೆ. ಜಡೇಶ್ ಕುಮಾರ್ ಜೊತೆ ಸೇರಿ ಗುರುದೇಶಪಾಂಡೆಯವರೇ ಕಥೆ ಚಿತ್ರಕಥೆಯನ್ನೂ ರಚಿಸಿದ್ದಾರೆ. ಆರೂರು ಸುಧಾಕರ್ ಛಾಯಾಗ್ರಾಹಕರಾಗಿಯೂ ಆಯ್ಕೆಯಾಗಿದ್ದಾರೆ. ಉಳಿಕೆ ತಾರಾಗಣ, ತಾಂತ್ರಿಕ ವರ್ಗದ ಮಾಹಿತಿ ಟೈಟಲ್ ಲಾಂಚ್ ವೇಳೆಗೆ ಜಾಹೀರಾಗಲಿದೆ.

    ಆದಷ್ಟು ಬೇಗನೆ ಟೈಟಲ್ ಲಾಂಚ್ ಮಾಡಿ ಅದೇ ಸಂದರ್ಭದಲ್ಲಿ ಚಿತ್ರದ ಬಗೆಗಿನ ಉಳಿಕೆ ಮಾಹಿತಿ ಕೊಡುವ ಆಲೋಚನೆ ಗುರುದೇಶಪಾಂಡೆ ಅವರದ್ದು. ಅಂತೂ ಬೇಗನೆ ಈ ಚಿತ್ರದ ಚಿತ್ರೀಕರಣ ಚಾಲೂ ಆಗಲಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ‘RRR’ ಸಿನಿಮಾ ಟೈಟಲ್ ವಿಮರ್ಶೆ- ಈ ಹೆಸರು ಸೂಟ್ ಆಗುತ್ತಾ? ಅಭಿಪ್ರಾಯ ತಿಳಿಸಿ ಎಂದ ರಾಜಮೌಳಿ

    ‘RRR’ ಸಿನಿಮಾ ಟೈಟಲ್ ವಿಮರ್ಶೆ- ಈ ಹೆಸರು ಸೂಟ್ ಆಗುತ್ತಾ? ಅಭಿಪ್ರಾಯ ತಿಳಿಸಿ ಎಂದ ರಾಜಮೌಳಿ

    ಹೈದರಾಬಾದ್: ಕೆಲವು ದಿನಗಳ ಹಿಂದೆ ರಾಮ ಯಾರು, ರಾವಣ ಯಾರು ಅನ್ನೊ ಮಾತುಕಥೆ ಸ್ಯಾಂಡಲ್‍ವುಡ್‍ ನಲ್ಲೂ ಜೋರಾಗಿತ್ತು. ಈಗ ಇದೇ ಪ್ರಶ್ನೆ ಟಾಲಿವುಡ್‍ನಲ್ಲಿ ಶುರುವಾಗಿದೆ. ಅದಕ್ಕೆ ಕಾರಣ ರಾಜಮೌಳಿ ಸಾರಥ್ಯದ ಹೊಚ್ಚಹೊಸ ಸಿನಿಮಾವಾಗಿದೆ. ಚಿತ್ರತಂಡ ಆರ್ ಆರ್ ಆರ್ ಅಂತ ವರ್ಕಿಂಗ್ ಟೈಟಲ್ ಫಿಕ್ಸ್ ಮಾಡಿಕೊಂಡಿತ್ತು. ಈಗ ಈ ಸಿನಿಮಾ ಟೈಟಲ್ ಬಗ್ಗೆ ತೆಲುಗು ನಾಡಿನಲ್ಲಿ ಚರ್ಚೆ ಶುರುವಾಗಿದೆ.

    ರಾಜಮೌಳಿ ಅವರು ಸಿನಿಮಾ ಮುಹೂರ್ತ ಆಗುತ್ತಿದ್ದಂತೆ ಟೈಟಲ್ ಅನೌನ್ಸ್ ಮಾಡುತ್ತಿದ್ದರು. ಆದರೆ ಈಗ ಶೂಟಿಂಗ್ ಕಂಪ್ಲೀಟ್ ಆದ ಮೇಲೆ ಟೈಟಲ್ ಅನೌನ್ಸ್ ಮಾಡುತ್ತೇನೆ ಎಂದಿದ್ದಾರೆ. ಆದರೆ ಮೂಲಗಳ ಪ್ರಕಾರ ಒಂದಿಷ್ಟು ಹೆಸರುಗಳು ಟಾಲಿವುಡ್‍ನಲ್ಲಿ ಸೌಂಡ್ ಮಾಡುತ್ತಿವೆ. ಅದರಲ್ಲಿ ‘ರಾಮರಾವಣ ರಾಜ್ಯಂ’ ಪ್ರಮುಖವಾದ ಹೆಸರಾಗಿದೆ.

    ಥ್ರಿಬಲ್ ಆರ್ ಅನ್ನೊ ವರ್ಕಿಂಗ್ ಟೈಟಲ್‍ಗೆ ಮ್ಯಾಚ್ ಆಗುವಂತೆ ಹೊಸ ಸಿನಿಮಾದ ಹೆಸರನ್ನು ರಾಜಮೌಳಿ ಹುಡುಕುತ್ತಿದ್ದು,`ರಾಮರಾವಣ ರಾಜ್ಯಂ’ ಟೈಟಲ್ ಸೂಟ್ ಆಗುತ್ತಾ, ಒಮ್ಮೆ ನೋಡಿ ಅಂತ ಚಿತ್ರತಂಡದ ಸದಸ್ಯರಿಗೂ ಹೇಳಿದ್ದಾರಂತೆ. ಈ ಟೈಟಲ್ ಕೇಳಿದ ರಾಮ್‍ಚರಣ್ ಹಾಗೂ ಜೂನಿಯರ್ ಎನ್‍ಟಿಆರ್ ಅಭಿಮಾನಿಗಳು ಹಾಗಾದರೆ ರಾಮ ಯಾರು ರಾವಣ ಯಾರು ಅನ್ನೊದ್ರ ಬಗ್ಗೆ ಚರ್ಚೆ ಶುರು ಮಾಡಿಕೊಂಡಿದ್ದಾರೆ.

    ಇದೇ ಟೈಟಲ್ ಫೈನಲ್ ಆಗುತ್ತಾ ಇಲ್ವಾ ಅನ್ನೊದು ಕನ್ಫರ್ಮ್ ಆಗಬೇಕು ಎಂದರೆ ಸಂಕ್ರಾತಿ ಹಬ್ಬದವರೆಗೂ ಕಾಯಬೇಕು. ಯಾಕೆಂದರೆ ಚಿತ್ರತಂಡ ಸದ್ಯಕ್ಕೆ ಫಸ್ಟ್ ಶೆಡ್ಯೂಲ್ ಕಂಪ್ಲೀಟ್ ಮಾಡಿದ್ದು, ಹಬ್ಬ ಆದ ಮೇಲೆ ಸೆಕೆಂಡ್ ಶೆಡ್ಯೂಲ್ ಪ್ಲಾನ್ ಮಾಡಿದೆ. ಸೆಕೆಂಡ್ ಶೆಡ್ಯೂಲ್ ಶೂಟಿಂಗ್ ಕಂಪ್ಲೀಟ್ ಆದ ಮೇಲೆ ರಾಜ್‍ಮೌಳಿ ಅವರು ಟೈಟಲ್ ಅನೌನ್ಸ್ ಮಾಡುತ್ತಾರೆ.

    ಸದ್ಯಕ್ಕೆ ಈ `ರಾಮರಾವಣ ರಾಜ್ಯಂ’ ಜೊತೆ ರಾಜಸಿಂಹ ಅನ್ನೊ ಟೈಟಲ್ ಕೂಡ ಸೌಂಡ್ ಮಾಡುತ್ತಿದೆ. ರಾಜಮೌಳಿ ಅವರು ಯಾವ ಟೈಟಲ್ ಅನ್ನು ಫೈನಲ್ ಮಾಡುತ್ತಾರೋ ಅನ್ನೊದನ್ನ ಕಾದುನೋಡಬೇಕಿದೆ

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv