‘ಸುಪ್ರೀಂ ಹೀರೋ’ ಸಾಯಿಧರಮ್ ತೇಜ್ ಅಭಿನಯದ ಪ್ಯಾನ್-ಇಂಡಿಯಾ ಮಿಸ್ಟಿಕ್ ಥ್ರಿಲ್ಲರ್ ಚಿತ್ರಕ್ಕೆ ‘ವಿರೂಪಾಕ್ಷ’ ಎಂಬ ಹೆಸರಿಡಲಾಗಿದ್ದು, ಟೈಟಲ್ ಗ್ಲಿಂಪ್ಸ್ ಬಿಡುಗಡೆಯಾಗಿದೆ. ‘ವಿರೂಪಾಕ್ಷ’ ಚಿತ್ರವನ್ನು ಸುಕುಮಾರ್ ರೈಟಿಂಗ್ಸ್ ಸಹಯೋಗದಲ್ಲಿ ಶ್ರೀ ವೆಂಕಟೇಶ್ವರ ಸಿನಿ ಚಿತ್ರ ಎಲ್‌ಎಲ್‌ಪಿ ನಿರ್ಮಿಸುತ್ತಿದೆ. ಈ ಚಿತ್ರವನ್ನು ಖ್ಯಾತ ನಿರ್ಮಾಪಕ ಬಿ.ವಿ.ಎಸ್.ಎನ್. ಪ್ರಸಾದ್ ನಿರ್ಮಿಸಿದರೆ, ಬಾಪಿನೀಡು ಪ್ರಸ್ತುತಪಡಿಸಿದ್ದಾರೆ.
ಇದು 1990ರ ಕಾಲಘಟ್ಟದಲ್ಲಿ ನಡೆಯುವ ಕಥೆಯಾಗಿದ್ದು, ಕಾಡಿಗೆ ಅಂಟಿಕೊಂಡಿರುವ ಹಳ್ಳಿಯೊಂದರಲ್ಲಿ ಮೂಢನಂಬಿಕೆಗಳ ಹೆಸರಿನಲ್ಲಿ ನಡೆಯುವ ಕೆಲವು ವಿಲಕ್ಷಣ ಘಟನೆಗಳನ್ನು ನಾಯಕ ಹೇಗೆ ನಿಭಾಯಿಸುತ್ತಾನೆ ಎಂಬುದು ತೋರಿಸಲಾಗಿದೆ. ಇದನ್ನೂ ಓದಿ: ‘ಸೀತಾ ಸರ್ಕಲ್ ಶ್ರೀ ಕೃಷ್ಣನ್ ಮನೆ’ ಸಿನಿಮಾ ಫಸ್ಟ್ ಲುಕ್ ರಿಲೀಸ್
ಕಳೆದ ವರ್ಷ ಹೈದರಾಬಾದ್ನಲ್ಲಿ ನಡೆದ ಭೀಕರ ರಸ್ತೆ ಅಪಘಾತದಿಂದ ಚೇತರಿಸಿಕೊಂಡಿರುವ ಸಾಯಿಧರಮ್ ತೇಜ್ ಈ ಚಿತ್ರದಲ್ಲಿ ತಮ್ಮನ್ನು ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದು, ಹೊಸ ಅವತಾರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರವನ್ನು ಕಾರ್ತಿಕ್ ದಂಡು ನಿರ್ದೇಶಿಸಿದ್ದು, ಶ್ಯಾಮ್ ದತ್ ಅವರ ಛಾಯಾಗ್ರಹಣ ಮತ್ತು ಕನ್ನಡದ ಅಜನೀಶ್ ಲೋಕನಾಥ್ ಸಂಗೀತವಿದೆ. ‘ವಿರೂಪಾಕ್ಷ’ ಚಿತ್ರವು ಏಪ್ರಿಲ್ 21, 2023ರಂದು ತೆಲುಗು, ತಮಿಳು, ಕನ್ನಡ, ಹಿಂದಿ ಮತ್ತು ಮಲಯಾಳಂ ಭಾಷೆಗಳಲ್ಲಿ ಪ್ಯಾನ್ ಇಂಡಿಯಾ ಚಿತ್ರವಾಗಿ ವಿಶ್ವದಾದ್ಯಂತ ಬಿಡುಗಡೆಯಾಗಲಿದೆ.
Live Tv
[brid partner=56869869 player=32851 video=960834 autoplay=true]
ನಟಿ ರಮ್ಯಾ ಬ್ಯಾನರ್ ನಲ್ಲಿ ಮೂಡಿ ಬರುತ್ತಿರುವ ‘ಸ್ವಾತಿ ಮುತ್ತಿನ ಮಳೆ ಹನಿಯೇ’ ಸಿನಿಮಾದ ಟೈಟಲ್ ವಿವಾದಕ್ಕೆ ಗುರಿಯಾಗಿದೆ. ಈ ಟೈಟಲ್ ತಮ್ಮದೆಂದು, ಅದನ್ನು ಯಾರಿಗೂ ಕೊಡಬಾರದು ಎಂದು ಹಿರಿಯ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ತಮ್ಮ ಲಾಯರ್ ಮೂಲಕ ಪತ್ರವೊಂದನ್ನು ಕಳುಹಿಸಿದ್ದರು. ಅಲ್ಲದೇ, ತಾವು ಅದೇ ಹೆಸರಿನಲ್ಲಿ ಸಿನಿಮಾ ಮಾಡುತ್ತಿರುವುದಾಗಿ, ಅದು ಅರ್ಧಕ್ಕೆ ನಿಂತಿದೆ ಎಂದು ತಿಳಿಸಿದ್ದರು. ಅದರಿಂದಾಗಿ ಟೈಟಲ್ ಬಗ್ಗೆ ಗೊಂದಲ ಮೂಡಿತ್ತು.
ವಾಣಿಜ್ಯ ಮಂಡಳಿಗೆ ಪತ್ರ ಬರೆದ ಬೆನ್ನಲ್ಲೇ ಆ ಟೈಟಲ್ ಬಗ್ಗೆ ಪರಿಶೀಲಿಸಿದಾಗ ಅಸಲಿಯಾಗಿ ಅದು ರಾಜೇಂದ್ರ ಸಿಂಗ್ ಬಾಬು ಅವರ ಹೆಸರಿನಲ್ಲಿ ಇರಲಿಲ್ಲ ಎನ್ನುವುದು ಗೊತ್ತಾಗಿದೆ. ಧ್ರುವ ಸರ್ಜಾ ನಟನೆಯ ಪೊಗರು ಸಿನಿಮಾ ಮಾಡುತ್ತಿರುವ ಬಿ.ಕೆ.ಗಂಗಾಧರ್ ಅವರು ಈ ಟೈಟಲ್ ಅನ್ನು ವಾಣಿಜ್ಯ ಮಂಡಳಿಯಲ್ಲಿ ನೋಂದಾಯಿಸಿದ್ದಾರೆ. ಅಲ್ಲದೇ, ರಮ್ಯಾ ಸಿನಿಮಾ ಮಾಡುತ್ತೇನೆ ಎಂದಾಗ, ಅವರಿಗೆ ಆ ಟೈಟಲ್ ಅನ್ನು ವರ್ಗಾಯಿಸಿದ್ದಾರೆ ಎಂದು ಸ್ವತಃ ವಾಣಿಜ್ಯ ಮಂಡಳಿಯ ಅಧ್ಯಕ್ಷರೇ ತಿಳಿಸಿದ್ದಾರೆ. ಹಾಗಾಗಿ ರಮ್ಯಾಗೆ ಆ ಟೈಟಲ್ ಸಿಗಲಿದೆ.
ಬಿ.ಕೆ.ಗಂಗಾಧರ್ ಅವರು ರಮ್ಯಾ ಹೆಸರಿಗೆ ಆ ಟೈಟಲ್ ಅನ್ನು ವರ್ಗಾಯಿಸಿರುವುದರಿಂದ, ರಮ್ಯಾ ಅವರು ವಾಣಿಜ್ಯ ಮಂಡಳಿಗೆ ಪತ್ರ ಬರೆಯಬೇಕಿದೆ. ಗಂಗಾಧರ ಅವರು ನೀಡಿರುವ ಎನ್.ಓ.ಸಿ ಪತ್ರವನ್ನು ವಾಣಿಜ್ಯ ಮಂಡಳಿಗೆ ನೀಡಿದ ತಕ್ಷಣವೇ ಅದನ್ನು ರಮ್ಯಾ ಅವರ ನಿರ್ಮಾಣ ಸಂಸ್ಥೆಗೆ ವರ್ಗಾಯಿಸಲಾಗುವುದು ಎಂದು ಮಂಡಳಿಯ ಅಧ್ಯಕ್ಷರು ಮಾಧ್ಯಮಗಳಿಗೆ ತಿಳಿಸಿದ್ದಾರೆ. ಇದನ್ನೂ ಓದಿ: ಕೊನೆಗೂ ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ರು ರಾಮ್ ಚರಣ್ ದಂಪತಿ
ರಾಜೇಂದ್ರ ಸಿಂಗ್ ಬಾಬು ವಾಣಿಜ್ಯ ಮಂಡಳಿಗೆ ಬರೆದ ಪತ್ರದಲ್ಲಿ ‘ನನ್ನ ಕಕ್ಷಿದಾರರು ನಿರ್ಮಿಸುವ ಮೇಲ್ಕಂಡ ಸ್ವಾತಿ ಮುತ್ತಿನ ಮಳೆ ಹನಿಯೆ’ ಹೆಸರಿನ ಚಿತ್ರದ ತಾರಾಗಣದಲ್ಲಿ ಅಂಬರೀಶ್, ಸುಹಾಸಿನಿ ಮತ್ತು ಇತರ ಕಲಾವಿದರು ನಟಿಸಿದ್ದು. ಶೇಕಡಾ 80ರಷ್ಟು ಚಿತ್ರೀಕರಣ ಕೂಡ ಮುಗಿದಿದೆ. ಮೇಲ್ಕಂಡ ಚಿತ್ರದ ನಾಯಕ ನಟ ಅಂಬರೀಶ್ ನಿಧನ ಹೊಂದಿ ನಂತರ ಚಿತ್ರದ ಚಿತ್ರೀಕರಣವು ಕಾರಣಾಂತರಗಳಿಂದ ನಿಂತಿದೆ. ನನ್ನ ಕಕ್ಷಿದಾರರು ಹೇಳುವ ಹಾಗೆ ಮೇಲ್ಕಂಡ ಚಿತ್ರ ಶೀರ್ಷಿಕೆ ಅವರೇ ನಿರ್ದೇಶಿಸಿರುವ ಬಣ್ಣದ ಗೆಜ್ಜೆ ಚಿತ್ರದ ಹಾಡಿನ ಶೀರ್ಷಿಕೆಯಾಗಿರುತ್ತದೆ’ ಎಂದು ಸಿಂಗ್ ಬಾಬು ಪರ ವಕೀಲ ಎಸ್.ಆರ್. ಶ್ರೀನಿವಾಸ್ ಮೂರ್ತಿ ಪತ್ರ ಬರೆದಿದ್ದಾರೆ.
ಅಲ್ಲದೇ, ತಾವು ನಿರ್ಮಾಣ ಮಾಡುವ ಚಿತ್ರಕ್ಕೆ ಮೇಲ್ಕಂಡ ಶೀರ್ಷಿಕೆಯನ್ನು ಅಂದರೆ ಸ್ವಾತಿ ಮುತ್ತಿನ ಮಳೆ ಹನಿಯೇ ಶಿರ್ಷಿಕೆಯನ್ನಾಗಲಿ, ಹಾಡನ್ನಾಗಲು ಯಾವುದೇ ರೀತಿ ಉಪಯೋಗಿಸಲು ಅಥವಾ ನೋಂದಾಯಿಸಲು ನನ್ನ ಕಕ್ಷಿದಾರರ ವಿನಃ ಯಾರಿಗೂ ಯಾವುದೇ ವಿಧವಾದ ಹಕ್ಕು ಇರುವುದಿಲ್ಲ. ಒಂದು ವೇಳೆ ನಾನು ನೀಡಿರುವ ಈ ವಕೀಲರ ನೋಟಿಸಿನ ನಂತರವೂ ನೀವು ಬೇರೆ ನಿರ್ಮಾಪಕರಿಗೆ ಈ ಚಿತ್ರದ ಶೀರ್ಷಿಕೆಯನ್ನು ನೋಂದಾವಣೆ ಮಾಡಿಕೊಡಲು ಮತ್ತು ಚಿತ್ರ ನಿರ್ಮಾಣ ಮಾಡಲು ಅವಕಾಶ ಕೊಟ್ಟಿದ್ದೆ ಆದರೆ, ನನ್ನ ಕಕ್ಷಿದಾರರು ನೊಂದಾಣಿಕೆ ಮಾಡಿರುವ ಶೀರ್ಷಿಕೆಯ ಕೃತಿ ಚೌರ್ಯವಾಗುತ್ತದೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ.
Live Tv
[brid partner=56869869 player=32851 video=960834 autoplay=true]
ಮೂರು ದಿನಗಳ ಹಿಂದೆಯಷ್ಟೇ ಕನ್ನಡ ಸಿನಿಮಾ ರಂಗದ ಹಿರಿಯ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ‘ಸ್ವಾತಿ ಮುತ್ತಿನ ಮಳೆ ಹನಿಯೇ’ ಸಿನಿಮಾದ ಟೈಟಲ್ ತಮ್ಮ ಬಳಿ ಇದೆ. ಅದನ್ನು ಯಾರೂ ಬಳಸಬಾರದು ಎಂದು ತಮ್ಮ ವಕೀಲರ ಮೂಲಕ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ಪತ್ರವೊಂದನ್ನು ಕಳುಹಿಸಿದ್ದರು. ಈ ಪತ್ರವು ಸ್ಯಾಂಡಲ್ ವುಡ್ ಅಂಗಳದಲ್ಲಿ ಭಾರೀ ಸದ್ದು ಮಾಡಿತ್ತು. ಆದರೆ, ಅಸಲಿಯಾಗಿ ವಿಷಯವೇ ಬೇರೆ ಆಗಿದೆ. ಈ ಟೈಟಲ್ ರಾಜೇಂದ್ರ ಸಿಂಗ್ ಬಾಬು ಅವರ ಬಳಿಯೇ ಇಲ್ಲವೆಂದು ಗೊತ್ತಾಗಿದೆ.
ಸ್ವಾತಿ ಮುತ್ತಿನ ಮಳೆ ಹನಿಯೇ ಟೈಟಲ್ ಇರುವುದು ನಿರ್ಮಾಪಕ ಬಿ.ಕೆ. ಗಂಗಾಧರ್ ಅವರ ಬಳಿ. ಈಗಾಗಲೇ ರಮ್ಯಾ ಅವರು ಗಂಗಾಧರ್ ಅವರಿಂದ ಪತ್ರದ ಮೂಲಕ ಟೈಟಲ್ ಅನ್ನು ತಮಗೆ ವರ್ಗಾಯಿಸಿಕೊಂಡಿದ್ದಾರಂತೆ. ಗಂಗಾಧರ ಅವರು ಕೊಟ್ಟ ಪತ್ರವನ್ನು ವಾಣಿಜ್ಯ ಮಂಡಳಿಗೆ ಸಲ್ಲಿಸಿದರೆ, ಟೈಟಲ್ ರಮ್ಯಾ ಅವರ ಪಾಲಾಗಲಿದೆ. ಹಾಗಾಗಿ ಈ ಶೀರ್ಷಿಕೆಗೂ ಮತ್ತು ರಾಜೇಂದ್ರ ಸಿಂಗ್ ಬಾಬು ಅವರಿಗೂ ಯಾವುದೇ ಸಂಬಂಧವಿಲ್ಲವೆಂದು ಸ್ವತಃ ವಾಣಿಜ್ಯ ಮಂಡಳಿಯೇ ಹೇಳಿದೆ. ಇದನ್ನೂ ಓದಿ: ಮೊದಲ ಬಾರಿಗೆ ಮಗಳ ಮುಖ ಪರಿಚಯಿಸಿದ `ಯುವರತ್ನ’ ನಟಿ
ರಾಜೇಂದ್ರ ಸಿಂಗ್ ಬಾಬು ವಾಣಿಜ್ಯ ಮಂಡಳಿಗೆ ಬರೆದ ಪತ್ರದಲ್ಲಿ ‘ನನ್ನ ಕಕ್ಷಿದಾರರು ನಿರ್ಮಿಸುವ ಮೇಲ್ಕಂಡ ಸ್ವಾತಿ ಮುತ್ತಿನ ಮಳೆ ಹನಿಯೆ’ ಹೆಸರಿನ ಚಿತ್ರದ ತಾರಾಗಣದಲ್ಲಿ ಅಂಬರೀಶ್, ಸುಹಾಸಿನಿ ಮತ್ತು ಇತರ ಕಲಾವಿದರು ನಟಿಸಿದ್ದು. ಶೇಕಡಾ 80ರಷ್ಟು ಚಿತ್ರೀಕರಣ ಕೂಡ ಮುಗಿದಿದೆ. ಮೇಲ್ಕಂಡ ಚಿತ್ರದ ನಾಯಕ ನಟ ಅಂಬರೀಶ್ ನಿಧನ ಹೊಂದಿ ನಂತರ ಚಿತ್ರದ ಚಿತ್ರೀಕರಣವು ಕಾರಣಾಂತರಗಳಿಂದ ನಿಂತಿದೆ. ನನ್ನ ಕಕ್ಷಿದಾರರು ಹೇಳುವ ಹಾಗೆ ಮೇಲ್ಕಂಡ ಚಿತ್ರ ಶೀರ್ಷಿಕೆ ಅವರೇ ನಿರ್ದೇಶಿಸಿರುವ ಬಣ್ಣದ ಗೆಜ್ಜೆ ಚಿತ್ರದ ಹಾಡಿನ ಶೀರ್ಷಿಕೆಯಾಗಿರುತ್ತದೆ’ ಎಂದು ಸಿಂಗ್ ಬಾಬು ಪರ ವಕೀಲ ಎಸ್.ಆರ್. ಶ್ರೀನಿವಾಸ್ ಮೂರ್ತಿ ಪತ್ರ ಬರೆದಿದ್ದಾರೆ.
ಅಲ್ಲದೇ, ತಾವು ನಿರ್ಮಾಣ ಮಾಡುವ ಚಿತ್ರಕ್ಕೆ ಮೇಲ್ಕಂಡ ಶೀರ್ಷಿಕೆಯನ್ನು ಅಂದರೆ ಸ್ವಾತಿ ಮುತ್ತಿನ ಮಳೆ ಹನಿಯೇ ಶಿರ್ಷಿಕೆಯನ್ನಾಗಲಿ, ಹಾಡನ್ನಾಗಲು ಯಾವುದೇ ರೀತಿ ಉಪಯೋಗಿಸಲು ಅಥವಾ ನೋಂದಾಯಿಸಲು ನನ್ನ ಕಕ್ಷಿದಾರರ ವಿನಃ ಯಾರಿಗೂ ಯಾವುದೇ ವಿಧವಾದ ಹಕ್ಕು ಇರುವುದಿಲ್ಲ. ಒಂದು ವೇಳೆ ನಾನು ನೀಡಿರುವ ಈ ವಕೀಲರ ನೋಟಿಸಿನ ನಂತರವೂ ನೀವು ಬೇರೆ ನಿರ್ಮಾಪಕರಿಗೆ ಈ ಚಿತ್ರದ ಶೀರ್ಷಿಕೆಯನ್ನು ನೋಂದಾವಣೆ ಮಾಡಿಕೊಡಲು ಮತ್ತು ಚಿತ್ರ ನಿರ್ಮಾಣ ಮಾಡಲು ಅವಕಾಶ ಕೊಟ್ಟಿದ್ದೆ ಆದರೆ, ನನ್ನ ಕಕ್ಷಿದಾರರು ನೊಂದಾಣಿಕೆ ಮಾಡಿರುವ ಶೀರ್ಷಿಕೆಯ ಕೃತಿ ಚೌರ್ಯವಾಗುತ್ತದೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ.
Live Tv
[brid partner=56869869 player=32851 video=960834 autoplay=true]
ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ ‘ಸ್ವಾತಿ ಮುತ್ತಿನ ಮಳೆಹನಿಯೇ’ ಸಿನಿಮಾವನ್ನು ನಿರ್ಮಾಣ ಮಾಡುತ್ತಿರುವ ವಿಚಾರ ತಿಳಿದೇ ಇದೆ. ಈಗಾಗಲೇ ಬಹುತೇಕ ಚಿತ್ರೀಕರಣವನ್ನೂ ಮುಗಿಸಲಾಗಿದೆ. ಬಿಡುಗಡೆಗೂ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಈ ವೇಳೆಯಲ್ಲಿ ಚಿತ್ರದ ಶೀರ್ಷಿಕೆಯ ಸಲುವಾಗಿ ವಿಘ್ನವೊಂದು ಎದುರಾಗಿದೆ. ‘ಸ್ವಾತಿ ಮುತ್ತಿನ ಮಳೆ ಹನಿಯೇ’ ಸಿನಿಮಾ ಶೀರ್ಷಿಕೆ ನನ್ನದು. ನನ್ನ ಸಿನಿಮಾ ಅರ್ಧಕ್ಕೆ ನಿಂತಿದೆ. ಅದನ್ನು ಮುಂದುವರೆಸಬೇಕು. ಹಾಗಾಗಿ ಈ ಶೀರ್ಷಿಕೆಯನ್ನು ಯಾರೂ ಬಳಸದಂತೆ ಕ್ರಮ ತಗೆದುಕೊಳ್ಳಬೇಕೆಂದು ಹಿರಿಯ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು, ತಮ್ಮ ಲಾಯರ್ ಮೂಲಕ ವಾಣಿಜ್ಯ ಮಂಡಳಿಗೆ ಪತ್ರವೊಂದನ್ನು ಬರೆದಿದ್ದಾರೆ.
ವಾಣಿಜ್ಯ ಮಂಡಳಿಗೆ ಬರೆದ ಪತ್ರದಲ್ಲಿ ‘ನನ್ನ ಕಕ್ಷಿದಾರರು ನಿರ್ಮಿಸುವ ಮೇಲ್ಕಂಡ ಸ್ವಾತಿ ಮುತ್ತಿನ ಮಳೆ ಹನಿಯೆ’ ಹೆಸರಿನ ಚಿತ್ರದ ತಾರಾಗಣದಲ್ಲಿ ಅಂಬರೀಶ್, ಸುಹಾಸಿನಿ ಮತ್ತು ಇತರ ಕಲಾವಿದರು ನಟಿಸಿದ್ದು. ಶೇಕಡಾ 80ರಷ್ಟು ಚಿತ್ರೀಕರಣ ಕೂಡ ಮುಗಿದಿದೆ. ಮೇಲ್ಕಂಡ ಚಿತ್ರದ ನಾಯಕ ನಟ ಅಂಬರೀಶ್ ನಿಧನ ಹೊಂದಿ ನಂತರ ಚಿತ್ರದ ಚಿತ್ರೀಕರಣವು ಕಾರಣಾಂತರಗಳಿಂದ ನಿಂತಿದೆ. ನನ್ನ ಕಕ್ಷಿದಾರರು ಹೇಳುವ ಹಾಗೆ ಮೇಲ್ಕಂಡ ಚಿತ್ರ ಶೀರ್ಷಿಕೆ ಅವರೇ ನಿರ್ದೇಶಿಸಿರುವ ಬಣ್ಣದ ಗೆಜ್ಜೆ ಚಿತ್ರದ ಹಾಡಿನ ಶೀರ್ಷಿಕೆಯಾಗಿರುತ್ತದೆ’ ಎಂದು ಸಿಂಗ್ ಬಾಬು ಪರ ವಕೀಲ ಎಸ್.ಆರ್. ಶ್ರೀನಿವಾಸ್ ಮೂರ್ತಿ ಪತ್ರ ಬರೆದಿದ್ದಾರೆ. ಇದನ್ನೂ ಓದಿ: ರವಿಚಂದ್ರನ್ ಪುತ್ರ ವಿಕ್ರಮ್ ನಟನೆಯ ಎರಡನೇ ಸಿನಿಮಾಗೆ ಮುಹೂರ್ತ
ಅಲ್ಲದೇ, ತಾವು ನಿರ್ಮಾಣ ಮಾಡುವ ಚಿತ್ರಕ್ಕೆ ಮೇಲ್ಕಂಡ ಶೀರ್ಷಿಕೆಯನ್ನು ಅಂದರೆ ಸ್ವಾತಿ ಮುತ್ತಿನ ಮಳೆ ಹನಿಯೇ ಶಿರ್ಷಿಕೆಯನ್ನಾಗಲಿ, ಹಾಡನ್ನಾಗಲು ಯಾವುದೇ ರೀತಿ ಉಪಯೋಗಿಸಲು ಅಥವಾ ನೋಂದಾಯಿಸಲು ನನ್ನ ಕಕ್ಷಿದಾರರ ವಿನಃ ಯಾರಿಗೂ ಯಾವುದೇ ವಿಧವಾದ ಹಕ್ಕು ಇರುವುದಿಲ್ಲ. ಒಂದು ವೇಳೆ ನಾನು ನೀಡಿರುವ ಈ ವಕೀಲರ ನೋಟಿಸಿನ ನಂತರವೂ ನೀವು ಬೇರೆ ನಿರ್ಮಾಪಕರಿಗೆ ಈ ಚಿತ್ರದ ಶೀರ್ಷಿಕೆಯನ್ನು ನೋಂದಾವಣೆ ಮಾಡಿಕೊಡಲು ಮತ್ತು ಚಿತ್ರ ನಿರ್ಮಾಣ ಮಾಡಲು ಅವಕಾಶ ಕೊಟ್ಟಿದ್ದೆ ಆದರೆ, ನನ್ನ ಕಕ್ಷಿದಾರರು ನೊಂದಾಣಿಕೆ ಮಾಡಿರುವ ಶೀರ್ಷಿಕೆಯ ಕೃತಿ ಚೌರ್ಯವಾಗುತ್ತದೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ.
Live Tv
[brid partner=56869869 player=32851 video=960834 autoplay=true]
ತಾಜ್ ಮಹಲ್, ಕೃಷ್ಣ ಲೀಲಾ, ಕೃಷ್ಣ ರುಕ್ಮಿಣಿ ಖ್ಯಾತಿಯ ನಟ ಅಜಯ್ ರಾವ್ ಸ್ಯಾಂಡಲ್ ವುಡ್ ಯುವ ನಿರ್ದೇಶಕನೊಂದಿಗೆ ಹೊಸ ಸಿನಿಮಾ ಘೋಷಿಸಿದ್ದಾರೆ. ಚಿತ್ರದ ಟೈಟಲ್ ಟೀಸರ್ ಬಿಡುಗಡೆಯಾಗಿದ್ದು, ಚಿತ್ರಕ್ಕೆ ‘ಯುದ್ಧಕಾಂಡ’ ಎಂದು ಟೈಟಲ್ ಇಡಲಾಗಿದೆ. ಸಖತ್ ಇಂಟ್ರಸ್ಟಿಂಗ್ ಆಗಿರೋ ಟೈಟಲ್ ಟೀಸರ್ ಸಿನಿರಸಿಕರ ಗಮನ ಸೆಳೆಯುತ್ತಿದೆ.
ಈ ಚಿತ್ರವನ್ನು ಅಜಯ್ ರಾವ್ ತಮ್ಮದೇ ನಿರ್ಮಾಣ ಸಂಸ್ಥೆ ‘ಶ್ರೀಕೃಷ್ಣ ಆರ್ಟ್ಸ್ ಅಂಡ್ ಕ್ರಿಯೇಷನ್ಸ್’ ಮತ್ತು ‘ಅಜಯ್ ರಾವ್ ಪ್ರೊಡಕ್ಷನ್ಸ್’ ನಡಿ ನಿರ್ಮಾಣ ಮಾಡುತ್ತಿದ್ದಾರೆ. ಈ ಮೂಲಕ ಕೃಷ್ಣ ಲೀಲಾ ಸಿನಿಮಾ ನಂತರ ಮತ್ತೊಮ್ಮೆ ನಿರ್ಮಾಣ ಸಾಹಸಕ್ಕೆ ಮುಂದಾಗಿದ್ದಾರೆ. ಚಿತ್ರದಲ್ಲಿ ವಕೀಲರಾಗಿ ಕಾಣಿಸಿಕೊಳ್ಳುತ್ತಿರುವ ಅಜಯ್ ರಾವ್ ಸಿನಿಮಾವನ್ನು ವಕೀಲರಿಂದಲೇ ಲಾಂಚ್ ಮಾಡಿಸಿದ್ದು ವಿಶೇಷವಾಗಿತ್ತು. ಇದನ್ನೂ ಓದಿ: ಮದುವೆ ಬಗ್ಗೆ ವೈಷ್ಣವಿ ತುಂಬಾ ಕನಸು ಕಂಡಿದ್ದಳು: ತಂದೆ ರವಿಕುಮಾರ್
‘ಯುದ್ಧಕಾಂಡ’ ಎಂದಾಗ ಎಲ್ಲರಿಗೂ ನೆನಪಾಗೋದು ಲೆಜೆಂಡರಿ ರವಿ ಸರ್ ಸಿನಿಮಾ. ಆ ಸಿನಿಮಾದ ನಿರ್ದೇಶಕರಾದ ಕೆ. ವಿ ರಾಜು ಸರ್ ಜೊತೆ ನಾನು ಅಸಿಸ್ಟೆಂಟ್ ಡೈರೆಕ್ಟರ್ ಆಗಿ ಕೆಲಸ ಮಾಡಿದ್ದೇನೆ ಅದು ನನ್ನ ಅದೃಷ್ಟ. ಈ ಸಿನಿಮಾ ಲಾಂಚ್ ಮಾಡೋವಾಗ ಮೊದಲು ರವಿ ಸರ್ ಭೇಟಿ ಮಾಡಿ ಆಶೀರ್ವಾದ ತೆಗೆದುಕೊಂಡು ಬಂದೆ. ಒಳ್ಳೆದಾಗ್ಲಿ ಎಂದು ಆಶೀರ್ವಾದ ಮಾಡಿದ್ರು. ಆದ್ರೆ ಆಗ ಬಂದ ‘ಯುದ್ಧಕಾಂಡ’ ಚಿತ್ರಕ್ಕೂ ಈ ಚಿತ್ರಕ್ಕೂ ಯಾವುದೇ ಸಂಬಂಧ ಇಲ್ಲ. ಇದು ರಿಮೇಕ್ ಸಿನಿಮಾ ಕೂಡ ಅಲ್ಲ ಎಂದು ಅಜಯ್ ರಾವ್ ಮಾಹಿತಿ ಹಂಚಿಕೊಂಡ್ರು.
ಚಿತ್ರರಂಗಕ್ಕೆ ಎಂಟ್ರಿ ಕೊಟ್ಟು 20 ವರ್ಷ ಆಯ್ತು. ನಟನಾಗಿ ಯಶಸ್ಸು, ಸೋಲು ಎರಡನ್ನು ನೋಡಿದ್ದೇನೆ. ಕೇವಲ ನಟನಾಗಿ ಉಳಿಯದೇ ಸಿನಿಮಾದ ಎಲ್ಲಾ ಕ್ಷೇತ್ರದಲ್ಲಿ ಪ್ರಯೋಗ ಮಾಡಬೇಕು ಎಂದುಕೊಂಡು ಬೆಂಗಳೂರಿಗೆ ಬಂದವನು ನಾನು. ಹೀರೋ ಆಗಿದ್ದವನು ಕ್ಯಾರೆಕ್ಟರ್ ಆರ್ಟಿಸ್ಟ್ ಆಗಿಯೂ ಮಾಡಿದ್ದೇನೆ. ಕೃಷ್ಣ ಲೀಲಾ ಸಿನಿಮಾ ಮೂಲಕ ನಿರ್ಮಾಪಕನೂ ಆಗಿದ್ದೇನೆ. ಇದೀಗ ಏಳು ವರ್ಷದ ನಂತರ ಎರಡನೇ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದೇನೆ ಎಂದು ಚಿತ್ರರಂಗದ ಜರ್ನಿಯನ್ನು ಮೆಲುಕು ಹಾಕಿದ್ರು ಅಜಯ್ ರಾವ್.
‘ಯುದ್ಧಕಾಂಡ’ ಸಿನಿಮಾವನ್ನು ಕಟಿಂಗ್ ಶಾಪ್ ಸಿನಿಮಾ ಖ್ಯಾತಿಯ ಪವನ್ ಭಟ್ ನಿರ್ದೇಶಿಸುತ್ತಿದ್ದಾರೆ. ಕಾರ್ತಿಕ್ ಶರ್ಮಾ ಕ್ಯಾಮೆರಾ ವರ್ಕ್, ಕೆ.ಬಿ.ಪ್ರವೀಣ್ ಸಂಗೀತ ನಿರ್ದೇಶನ ಈ ಚಿತ್ರಕ್ಕಿದೆ. ಸದ್ಯದಲ್ಲೇ ಸಿನಿಮಾ ಬಗ್ಗೆ ಹೆಚ್ಚಿನ ಮಾಹಿತಿ ಹಂಚಿಕೊಳ್ಳಲಿದೆ ‘ಯುದ್ಧಕಾಂಡ’ ಚಿತ್ರತಂಡ.
Live Tv
[brid partner=56869869 player=32851 video=960834 autoplay=true]
‘ಸ್ಟಾಕರ್’ ಚಿತ್ರ ನಿರ್ಮಾಣ ಮಾಡಿದ್ದ ಎಸ್‌ಎಂಎಲ್ ಪ್ರೊಡಕ್ಷನ್ ಸಂಸ್ಥೆಯು ’ಪ್ರೊಡಕ್ಷನ್ ನಂ.2’ ಹೆಸರಿನಲ್ಲಿ ಹೊಸ ಚಿತ್ರವನ್ನು ಶುರು ಮಾಡಲು ಸಜ್ಜಾಗಿತ್ತು. ಸೂಕ್ತ ಶೀರ್ಷಿಕೆ (Title) ನೀಡಿದವರಿಗೆ ಇಪ್ಪತ್ತೊಂದು ಸಾವಿರ ಬಹುಮಾನ ನೀಡುವುದಾಗಿ ಹೇಳಿಕೊಂಡಿತ್ತು. ಇದಕ್ಕಾಗಿ ಫಸ್ಟ್ ಲುಕ್ ಪೋಸ್ಟರ್ ಹಾಗೂ ಟೀಸರ್‌ನ್ನು ಬಿಡುಗಡೆ ಮಾಡಿದ್ದರು. ಅದರಂತೆ ನೂರಾರು ಸಿನಿರಸಿಕರು ಹೆಸರುಗಳನ್ನು ನೀಡಿದ್ದಾರೆ.
ಪ್ರೇಕ್ಷಕರು ನೀಡಿದ ಟೈಟಲ್ ನಲ್ಲೇ ಕೊನೆಗೊಂದು ಆಯ್ಕೆ ಮಾಡಿಕೊಂಡಿದ್ದು, ಬೆಂಗಳೂರಿನ ಸುರೇಶ್ (Suresh) ಎಂಬುವರು ನೀಡಿದ ಟೈಟಲ್ ಆಯ್ಕೆಯಾಗಿದೆ. ’ರುದ್ರಪ್ಪ’ (Rudrappa) ಎಂಬ ಟೈಟಲ್ ನೀಡುವ ಮೂಲಕ ಸುರೇಶ್ ಬಹುಮಾನ ಪಡೆದಿದ್ದಾರೆ. ರಮೇಶ್ (Ramesh) ನಾಯಕನಾಗಿ ಎರಡನೇ ಅನುಭವ. ಇದನ್ನೂ ಓದಿ:ದೇಶ-ವಿದೇಶದಲ್ಲಿ ಮಾರ್ದನಿಸ್ತಿರೋ ಗಗ್ಗರ ಶಬ್ಧ- ಅಮೆರಿಕಾದಲ್ಲಿ ಎಂಟೂವರೆ ಕೋಟಿ ಬಾಚಿದ ಕಾಂತಾರ
ಹೇಮಂತ್ (Hemant) ನಿರ್ದೇಶನದಲ್ಲಿ ಭರತ್.ಹೆಚ್.ಎಸ್ ಸಂಗೀತ ಮತ್ತು ಸುಧೀರ್ ಛಾಯಾಗ್ರಹಣ ಇರಲಿದೆ. ನಾಯಕಿ, ಮಿಕ್ಕಂತೆ ಕಲಾವಿದರುಗಳನ್ನು ಅಡಿಷನ್ ಮೂಲಕ ಆಯ್ಕೆ ಮಾಡಲಿದ್ದು, ಪ್ರಕ್ರಿಯೆ ಶುರುವಾಗಿದೆ. ಇನ್ನರೆಡು ತಿಂಗಳಲ್ಲಿ ಶೂಟಿಂಗ್ ಪ್ರಾರಂಭಿಸಲು ತಂಡವು ಯೋಜನೆ ರೂಪಿಸಿಕೊಂಡಿದೆ.
Live Tv
[brid partner=56869869 player=32851 video=960834 autoplay=true]
ಚಿಯಾನ್ ವಿಕ್ರಮ್ (Vikram) ಅಭಿನಯದ, ಪ. ರಂಜಿತ್ (P. Ranjith) ನಿರ್ದೇಶನದ ಹೊಸ ಚಿತ್ರಕ್ಕೆ ಕೊನೆಗೂ ಟೈಟಲ್ ಸಿಕ್ಕಿದೆ. ಈ ಚಿತ್ರಕ್ಕೆ ‘ತಂಗಲಾನ್’ ಎಂದು ನಾಮಕರಣ ಮಾಡಲಾಗಿದ್ದು, ಚಿತ್ರದ ಮೊದಲ ಪೋಸ್ಟರ್ ಬಿಡುಗಡೆಯಾಗಿದೆ. ಈ ಹಿಂದೆ ರಜನಿಕಾಂತ್ ಅಭಿನಯದ ಕಬಾಲಿ, ಕಾಲ ಮುಂತಾದ ಚಿತ್ರಗಳನ್ನು ನಿರ್ದೇಶಿಸಿದ್ದ ಪ. ರಂಜಿತ್, ವಿಕ್ರಮ್ ಅಭಿನಯದಲ್ಲಿ ಕೋಲಾರ ಗೋಲ್ಡ್ ಫೀಲ್ಡ್ ಹಿನ್ನೆಲೆಯಲ್ಲಿ ಒಂದು ಚಿತ್ರ ಮಾಡುತ್ತಾರೆ ಎಂಬ ಸುದ್ದಿ ಇತ್ತು. ಈ ಚಿತ್ರ ಈಗ ಅಧಿಕೃತವಾಗಿರುವುದಷ್ಟೇ ಅಲ್ಲ, ಸೋಮವಾರ ದೀಪಾವಳಿ ಹಬ್ಬದ ಪ್ರಯುಕ್ತ ಚಿತ್ರದ ಟೈಟಲ್ (Title) ಟೀಸರ್ ಸಹ ಅನಾವರಣಗೊಂಡಿದೆ.
‘ತಂಗಲಾನ್’ (Tangalan) ಚಿತ್ರದಲ್ಲಿ ವಿಕ್ರಮ್ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು, ಹಬ್ಬದ ದಿನ ಅವರ ಚಿತ್ರವೊಂದರ ಟೀಸರ್ ಬಿಡುಗಡೆಯಾಗಿದ್ದು ಅಭಿಮಾನಿಗಳಲ್ಲಿ ಸಂತಸ ತಂದಿದೆ. ಈ ಚಿತ್ರದಲ್ಲಿ ವಿಕ್ರಮ್ ಜೊತೆಗೆ ಪಾರ್ವತಿ, ಮಾಳವಿಕಾ ಮೋಹನನ್, ಪಶುಪತಿ, ಹರಿಕೃಷ್ಣನ್, ಅನ್ಬುದುರೈ ಮುಂತಾದ ಪ್ರತಿಭಾವಂತ ಕಲಾವಿದರ ದಂಡೇ ಇದೆ. ಈ ಚಿತ್ರಕ್ಕೆ ಎ. ಕಿಶೋರ್ ಛಾಯಾಗ್ರಹಣ ಮಾಡುತ್ತಿದ್ದು, ಜಿ.ವಿ. ಪ್ರಕಾಶ್ ಕುಮಾರ್ ಸಂಗೀತ ಸಂಯೋಜಿಸುತ್ತಿದ್ದಾರೆ. ಪ. ರಂಜಿತ್ ಅವರೇ ಈ ಚಿತ್ರಕ್ಕೆ ಕಥೆ-ಚಿತ್ರಕಥೆ ಬರೆದಿದ್ದು ಅವರಿಗೆ ಬರವಣಿಗೆಯಲ್ಲಿ ತಮಿಳ್ ಪ್ರಭಾ ಸಹಾಯ ಮಾಡಿದ್ದಾರೆ. ಎಸ್.ಎಸ್. ಮೂರ್ತಿ ಕಲಾನಿರ್ದೇಶನ ಮತ್ತು ಆರ್.ಕೆ. ಸೆಲ್ವಾ ಅವರ ಸಂಕಲನವಿದೆ. ಇದನ್ನೂ ಓದಿ: ಹಿಂದುತ್ವದಲ್ಲೇ ಬ್ರಾಹ್ಮಣತ್ವವಿದೆ; ಪಬ್ಲಿಸಿಟಿಗೋಸ್ಕರ ನಟ ಚೇತನ್ ವಿವಾದಿತ ಹೇಳಿಕೆ – ಪೇಜಾವರ ಶ್ರೀ
ಕೆಜಿಎಫ್ ಹಿನ್ನೆಲೆಯಲ್ಲಿ ಸಾಗುವ ಈ ಆಕ್ಷನ್ ಚಿತ್ರವನ್ನು ಸ್ಟುಡಿಯೋ ಗ್ರೀನ್ ಸಂಸ್ಥೆಯಡಿ ಕೆ.ಇ. ಜ್ನಾನವೇಲ್ ರಾಜ ನಿರ್ಮಿಸುತ್ತಿದ್ದಾರೆ. ದೊಡ್ಡ ಬಜೆಟ್ನಲ್ಲಿ ಈ ಚಿತ್ರ ತಯಾರಾಗುತ್ತಿದ್ದು, ನಿರ್ಮಾಣದಲ್ಲಿ ಪ. ರಂಜಿತ್ ಅವರ ನೀಲಂ ಪ್ರೊಡಕ್ಷನ್ಸ್ ಸಹ ಕೈಜೋಡಿಸಿದೆ.
Live Tv
[brid partner=56869869 player=32851 video=960834 autoplay=true]
ನಟ ಧ್ರುವ ಸರ್ಜಾ (Dhruva Sarja) ಮತ್ತು ನಿರ್ದೇಶಕ ‘ಜೋಗಿ’ ಪ್ರೇಮ್ (Jogi Prem) ಕಾಂಬಿನೇಷನ್‌ನಲ್ಲಿ ಘೋಷಣೆ ಆಗಿದ್ದ ಸಿನಿಮಾಕ್ಕೆ ‘ಕೆ ಡಿ’ ಎಂದು ನಾಮಕರಣ ಮಾಡಲಾಗಿದೆ. ಬೆಂಗಳೂರಿನಲ್ಲಿ ಅದ್ದೂರಿಯಾಗಿ ಟೈಟಲ್ ಟೀಸರ್ ರಿಲೀಸ್ ಮಾಡಿ, ಚಿತ್ರತಂಡ ಈ ವಿಚಾರವನ್ನು ಹಂಚಿಕೊಂಡಿದೆ. ಬಾಲಿವುಡ್ ನಟ ಸಂಜಯ್ ದತ್ ಅವರು ಈ ಸಿನಿಮಾದಲ್ಲಿ ನಟಿಸಲಿದ್ದಾರೆ. ಟೈಟಲ್ (Title) ಟೀಸರ್ ರಿಲೀಸ್ ಆಗಮಿಸಿದ್ದ ಅವರು, ಚಿತ್ರತಂಡಕ್ಕೆ ಶುಭ ಕೋರಿದ್ದಾರೆ. ‘ಕೆಜಿಎಫ್ 2’ ಚಿತ್ರದಲ್ಲಿ ಅಧೀರ ಪಾತ್ರ ಮಾಡಿದ್ದ ಸಂಜಯ್ ದತ್, ಇಲ್ಲಿ ಮತ್ತೊಂದು ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ.
ಈ ಸಿನಿಮಾವು 1970ರಲ್ಲಿ ನಡೆದ ನೈಜ ಘಟನೆಗಳಿಂದ ಸ್ಫೂರ್ತಿ ಪಡೆದ ಕಥೆಯನ್ನು ಹೊಂದಿದೆ. ಬೆಂಗಳೂರಿನಲ್ಲಿ ನಡೆದ ಈ ಕಥೆ ರೋಚಕವಾಗಿದ್ದು, ನೈಜವಾಗಿ ತೆರೆಮೇಲೆ ತರುವ ಪ್ರಯತ್ನ ಮಾಡಲಿದ್ದೇನೆ. ಸದ್ಯ ‘ಕೆಡಿ’ (KD) ಎಂದು ಟೈಟಲ್ ಅನೌನ್ಸ್ ಮಾಡಲಾಗಿದೆ. ಇದೊಂದು ಪ್ಯಾನ್ ಇಂಡಿಯಾ ಸಿನಿಮಾ. ಹಾಗಾಗಿ, ಪರಭಾಷೆಯ ಕಲಾವಿದರು ಕೂಡ ಇರಲಿದ್ದಾರೆ. ಪಾತ್ರಕ್ಕೆ ಹೊಂದಿಕೆ ಆಗುವುದರಿಂದ ಅವರನ್ನು ಆಯ್ಕೆ ಮಾಡಲಿದ್ದೇವೆ. ಆ ಬಗ್ಗೆ ಮುಂದಿನ ದಿನಗಳಲ್ಲಿ ಅವರೆಲ್ಲ ಯಾರು ಎಂಬುದನ್ನು ಹೇಳಲಿದ್ದೇವೆ ಎಂದು ನಿರ್ದೇಶಕ ಪ್ರೇಮ್ ಹೇಳಿದರು. ಇದನ್ನೂ ಓದಿ:ಆಮದು ಮಾಡಿಕೊಂಡ ಧರ್ಮಗಳು ಎಂದು ಚೇತನ್ ಮತ್ತೆ ಕಿಡಿ
ಮಚ್ಚು ಹಿಡಿದು ಖಡಕ್ ಆಗಿ ಪೋಸ್ ನೀಡಿರುವ ನಟ ಧ್ರುವ ಸರ್ಜಾ, ಪಾತ್ರಕ್ಕಾಗಿ ತುಂಬ ತಯಾರಿ ಮಾಡಿಕೊಂಡಿದ್ದಾರಂತೆ. ಈಗಾಗಲೇ ಅವರು 7 ಕೆಜಿ ತೂಕ ಕಡಿಮೆ ಮಾಡಿಕೊಂಡಿದ್ದಾರೆ. ಧ್ರುವ ರೆಟ್ರೋ ಶೈಲಿ ಉಡುಪಿನಲ್ಲಿ ಕಾಣಿಸಿಕೊಂಡಿದ್ದು, ಇದೊಂದು ಮಾಸ್ ಆಕ್ಷನ್ ಥ್ರಿಲ್ಲರ್ ಕಥೆಯನ್ನು ಹೊಂದಿದೆ. ಈ ಸಿನಿಮಾದಲ್ಲಿ ಕಾಳಿದಾಸ ಎಂಬ ಪಾತ್ರದಲ್ಲಿ ಅವರು ಕಾಣಿಸಿಕೊಳ್ಳಲಿದ್ದಾರೆ. ಪರಭಾಷೆಯ ಪತ್ರಕರ್ತರ ಎದುರು ತಮ್ಮ ಪರಿಚಯ ಮಾಡಿಕೊಂಡ ಧ್ರುವ, ಇದು ನಾನಿನ್ನೂ ಕೇವಲ 5 ಸಿನಿಮಾ ಮಾಡಿರುವ ನಟ. ಇದು ನನ್ನ 6ನೇ ಸಿನಿಮಾ. ನಾನು ಹುಟ್ಟಿದ್ದು, ಆರನೇ ತಾರೀಖು. ನನ್ನ ಲಕ್ಕಿ ನಂಬರ್ ಆರು. ಹಾಗೆಯೇ ಇದು ನನ್ನ 6ನೇ ಚಿತ್ರ. ಇದಿನ್ನೂ ಆರಂಭ ಅಷ್ಟೇ. ಚಿತ್ರೀಕರಣಕ್ಕಾಗಿ ಕಾಯುತ್ತಿದ್ದೇನೆ’ ಎಂದು ಧ್ರುವ ಸರ್ಜಾ ಹೇಳಿದರು.
ಕೆ ಡಿ ಚಿತ್ರ ಕನ್ನಡ, ತೆಲುಗು, ತಮಿಳು, ಮಲಯಾಳಂ ಮತ್ತು ಹಿಂದಿ ಭಾಷೆಗಳಲ್ಲಿ ಬಿಡುಗಡೆಯಾಗಲಿದೆ. ತಮಿಳು ಟೈಟಲ್ ಟೀಸರ್‌ಗೆ ವಿಜಯ್ ಸೇತುಪತಿ ಧ್ವನಿ ನೀಡಿದ್ದಾರೆ. ಮಲಯಾಳಂ ಟೈಟಲ್ ಟೀಸರ್‌ಗೆ ಮೋಹನ್‌ಲಾಲ್ ಹಾಗೂ ಹಿಂದಿ ಟೈಟಲ್ ಟೀಸರ್‌ಗೆ ಸಂಜಯ್ ದತ್ (Sanjay Dutt) ಅವರು ಧ್ವನಿ ನೀಡಿದ್ದಾರೆ. ಕೆವಿನ್ ಪ್ರೊಡಕ್ಷನ್‌ನಲ್ಲಿ ಮೂಡಿಬರುತ್ತಿರುವ ನಾಲ್ಕನೇ ಸಿನಿಮಾ ಇದಾಗಿದೆ. ಪ್ರೇಮ್ ಅವರ 9ನೇ ಸಿನಿಮಾ ಈ ಕೆಡಿ. ಈ ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ನೀಡಲಿದ್ದು, ವಿಕ್ರಾಂತ್ ರೋಣ ಖ್ಯಾತಿಯ ವಿಲಿಯಂ ಡೇವಿಡ್ ಛಾಯಾಗ್ರಹಣ ಮಾಡಲಿದ್ದಾರೆ. ಬಹುತೇಕ ಸೆಟ್‌ನಲ್ಲಿ ಚಿತ್ರೀಕರಣ ನಡೆಯಲಿದೆ. ಅದಕ್ಕಾಗಿ ದೊಡ್ಡ ದೊಡ್ಡ ಸೆಟ್‌ಗಳನ್ನು ಹಾಕಲಾಗುತ್ತಿದೆ.
Live Tv
[brid partner=56869869 player=32851 video=960834 autoplay=true]
ಸದಭಿರುಚಿ ಚಿತ್ರಗಳನ್ನು ನಿರ್ದೇಶಿಸಿ ಕನ್ನಡಿಗರ. ಮನಗೆದ್ದಿರುವ ನಿರ್ದೇಶಕ ಶಶಾಂಕ್ (Shashank) ಹಾಗೂ ತಮ್ಮ ಅಭಿನಯದ ಮೂಲಕ ಜನಪ್ರಿಯರಾಗಿರುವ ಡಾರ್ಲಿಂಗ್ ಕೃಷ್ಣ ಕಾಂಬಿನೇಶನ್ ನಲ್ಲಿ ಬರುತ್ತಿರುವ ಚಿತ್ರಕ್ಕೆ “ಕೌಸಲ್ಯಾ ಸುಪ್ರಜಾ ರಾಮ” (Kausalya Supraja Rama) ಎಂಬ ಸುಂದರ ಶೀರ್ಷಿಕೆ ಇಡಲಾಗಿದೆ. ಇತ್ತೀಚಿಗೆ ಈ ಚಿತ್ರದ ಶೀರ್ಷಿಕೆ ಅನಾವರಣ ಸಮಾರಂಭ ನಡೆಯಿತು. ಒಂದು ವಿಭಿನ್ನ ವಿಡಿಯೋ ಮೂಲಕ ಶಶಾಂಕ್ ತಮ್ಮ ಚಿತ್ರದ ಟೈಟಲ್ ಬಿಡುಗಡೆ ಮಾಡಿರುವುದು ವಿಶೇಷ.
ಕೌಸಲ್ಯಾ ಸುಪ್ರಜಾ ರಾಮ” ನಾವು ದಿನ ಬೆಳಗ್ಗೆ ಕೇಳುವ ಸುಮಧುರ ಸುಪ್ರಭಾತದ ಮೊದಲ ಸಾಲು. ಹೆಸರೆ ಹೇಳುವಂತೆ ಇದೊಂದು ತಾಯಿ ಮಗನ ಭಾವನಾತ್ಮಕ ಸನ್ನಿವೇಶಗಳನ್ನೊಳಗೊಂಡಿರುವ ಚಿತ್ರ. ಹಾಗಂತ ನಮ್ಮ ಚಿತ್ರದಲ್ಲಿ ಮನೋರಂಜನೆಗೆ ಕೊರತೆಯಿಲ್ಲ. ಉತ್ತಮ ಮನೋರಂಜನೆ ಹಾಗೂ ಸೆಂಟಿಮೆಂಟ್ ಎರಡು ಇರುವ, ಕುಟುಂಬ ಸಮೇತ ನೋಡಬಹುದಾದ ಸುಂದರ ಕೌಟುಂಬಿಕ ಚಿತ್ರ. ಈ ಚಿತ್ರದ ನಾಯಕರಾಗಿ ಡಾರ್ಲಿಂಗ್ ಕೃಷ್ಣ (Darling Krishna)ನಟಿಸುತ್ತಿದ್ದು, ಅವರ ತಾಯಿ – ತಂದೆ ಪಾತ್ರದಲ್ಲಿ ಸುಧಾ ಬೆಳವಾಡಿ, ರಂಗಾಯಣ ರಘು ಅಭಿನಯಿಸುತ್ತಿದ್ದಾರೆ. ಅಚ್ಯತಕುಮಾರ್, ಗಿರಿರಾಜ್ ಸಹ ತಾರಾಬಳಗದಲ್ಲಿದ್ದಾರೆ. ಇಬ್ಬರು ನಾಯಕಿಯರಿರುತ್ತಾರೆ. ಅದರಲ್ಲಿ ಒಬ್ಬರು ಹೊಸಬರು.
“ಈಗಾಗಲೇ ಬೆಂಗಳೂರಿನಲ್ಲಿ ಚಿತ್ರೀಕರಣ ನಡೆಯುತ್ತಿದೆ. ಐದು ಹಾಡುಗಳಿದೆ. ಅರ್ಜುನ್ ಜನ್ಯ ಸಂಗೀತ ನೀಡುತ್ತಿದ್ದಾರೆ. ಸುಜ್ಞಾನ್ ಈ ಚಿತ್ರದ ಛಾಯಾಗ್ರಾಹಕರು. ನಮ್ಮ ಶಶಾಂಕ್ ಸಿನಿಮಾಸ್ ಹಾಗೂ ಬಿ.ಸಿ.ಪಾಟೀಲ್ ಅವರ ಕೌರವ ಪ್ರೊಡಕ್ಷನ್ ಹೌಸ್ ಜಂಟಿಯಾಗಿ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದೆ. ನಾನು ಬಿ.ಸಿ.ಪಾಟೀಲ್ ಅಭಿನಯದ “ಕೌರವ” ಚಿತ್ರದಲ್ಲಿ ಎಸ್ ಮಹೇಂದರ್ ಅವರ ಬಳಿ ಕೆಲಸ ಮಾಡಿದ್ದೆ. ಆಗಿನಿಂದಲೂ ಬಿ.ಸಿ.ಪಾಟೀಲ್ ಅವರು ಪರಿಚಯ. ಈಗ ಅವರ ಜೊತೆ ನಿರ್ಮಾಣ ಮಾಡುತ್ತಿರುವುದು ಸಂತಸ ತಂದಿದೆ ಎನ್ನುತ್ತಾರೆ ಶಶಾಂಕ್. ಇದನ್ನೂ ಓದಿ:ಬಿಗ್ ಬಾಸ್ ವಿರುದ್ಧ ಮ್ಯಾಚ್ ಫಿಕ್ಸಿಂಗ್ ಆರೋಪ: ಗುರೂಜಿ ಮೇಲೆ ಕಿಚ್ಚ ಕೆಂಡಾಮಂಡಲ
ಸದಭಿರುಚಿ ಚಿತ್ರಗಳ ನಿರ್ದೇಶಕ ಶಶಾಂಕ್ ಅವರ ನಿರ್ದೇಶನದಲ್ಲಿ ನಟಿಸಬೇಕೆಂಬ ಆಸೆ ಈಗ ಈಡೇರಿದೆ. “ಕೌಸಲ್ಯಾ ಸುಪ್ರಜಾ ರಾಮ” ಸುಂದರ ಶೀರ್ಷಿಕೆ. “ಲವ್ ಮಾಕ್ಟೇಲ್”, ” ಲಕ್ಕಿ ಮ್ಯಾನ್” ಸೇರಿದಂತೆ ನನ್ನ ಅನೇಕ ಚಿತ್ರಗಳ ಶೀರ್ಷಿಕೆ ಇಂಗ್ಲಿಷ್ ನಲ್ಲಿದೆ. ಈಗ ಇಂಗ್ಲಿಷ್ ಇಲ್ಲದ ಶೀರ್ಷಿಕೆ ಸಿಕ್ಕಿದೆ. ಕಥೆ ಹಾಗೂ ನನ್ನ ಪಾತ್ರ ತುಂಬಾ ಚೆನ್ನಾಗಿದೆ ಎಂದರು ನಾಯಕ ಡಾರ್ಲಿಂಗ್ ಕೃಷ್ಣ.ನಾನು ಶಶಾಂಕ್ ಅವರನ್ನು ಬಹಳ ದಿನಗಳಿಂದ ನಿಮ್ಮ ಚಿತ್ರದಲ್ಲಿ ನಟಿಸಬೇಕೆಂಬೆದು ಕೇಳುತ್ತಿದೆ. ಈಗ ಅವಕಾಶ ಕೊಟ್ಟಿದ್ದಾರೆ ಎಂದರು ನಿರ್ದೇಶಕ ಹಾಗೂ ನಟ ಗಿರಿರಾಜ್ (Giriraj).
ಸಹ ನಿರ್ಮಾಪಕ ಹನುಮಂತ ರಾವ್, ಛಾಯಾಗ್ರಾಹಕ ಸುಜ್ಞಾನ್, ಶಶಾಂಕ್ ಅವರೊಂದಿಗೆ ರೈಟರ್ ಆಗಿ ಕಾರ್ಯ ನಿರ್ವಹಿಸುತ್ತಿರುವ ಯದುನಂದನ್ ಹಾಗೂ ಟೈಟಲ್ ಅನಿಮೇಷನ್ ಮಾಡಿರುವ ಸಂತೋಷ್ ರಾಧಾಕೃಷ್ಣನ್ ಈ ಚಿತ್ರದ ಬಗ್ಗೆ ತಮ್ಮ ಅಭಿಪ್ರಾಯ ಹಂಚಿಕೊಂಡರು. ಗಿರಿ ಮಹೇಶ್ ಈ ಚಿತ್ರದ ಸಂಕಲನಕಾರರು.
Live Tv
[brid partner=56869869 player=32851 video=960834 autoplay=true]
ಜನಾರ್ದನ ರೆಡ್ಡಿ (Janardhan Reddy) ಪುತ್ರ ಕಿರೀಟಿ ಗ್ರ್ಯಾಂಡ್ ಎಂಟ್ರಿ ಕೊಟ್ಟಿದ್ದಾಗಿದೆ. ಅದ್ಧೂರಿಯಾಗಿ ನಡೆದ ಚಿತ್ರದ ಮುಹೂರ್ತ ಕಾರ್ಯಕ್ರಮದಲ್ಲಿ ಎಸ್ ಎಸ್ ರಾಜಮೌಳಿ ಕಿರೀಟಿಗೆ ಸಾಥ್ ನೀಡಿ ಪ್ರೋತ್ಸಾಹಿಸಿದ್ದು ಗೊತ್ತೇ ಇದೆ. ಇಂಟ್ರಡಕ್ಷನ್ ಟೀಸರ್ ಮೂಲಕ ಗಮನ ಸೆಳೆದಿರೋ ಕಿರೀಟಿ ಒಂದೇ ನೋಟಕ್ಕೆ ಎಲ್ಲರನ್ನು ಸೆಳೆದಿದ್ದಾರೆ. ಸ್ಯಾಂಡಲ್ ವುಡ್ ಅಂಗಳಕ್ಕೆ ಭರವಸೆಯ ನಾಯಕ ನಟನಾಗುತ್ತಾನೆ ಎಂಬ ಭವಿಷ್ಯ ವಾಣಿಯೂ ಕೇಳಿ ಬಂದಿವೆ. ಎಲ್ಲರ ಪ್ರೋತ್ಸಾಹದ ನುಡಿಗಳೊಂದಿಗೆ ಯಂಗ್ ಅಂಡ್ ಎನರ್ಜಿಟಿಕ್ ಕಿರೀಟಿ ಮೊದಲ ಚಿತ್ರದ ಚಿತ್ರೀಕರಣದಲ್ಲಿ ಫುಲ್ ಬ್ಯುಸಿಯಾಗಿದ್ದಾರೆ. ಸದ್ಯ ಕಿರೀಟಿ ಮೊದಲ ಚಿತ್ರದಿಂದ ಲೇಟೆಸ್ಟ್ ಅಪ್ ಡೇಟ್ ಹೊರಬಿದ್ದಿದೆ. ಅದುವೇ ಚಿತ್ರದ ಟೈಟಲ್.
ಎಸ್. ಕಿರೀಟಿ (Kiriti) ಗ್ರ್ಯಾಂಡ್ ಆಗಿ ಎಂಟ್ರಿ ಕೊಟ್ಟು ಚಿತ್ರೀಕರಣದಲ್ಲಿ ತೊಡಗಿದ್ರು ಕೂಡ ಇಲ್ಲಿವರೆಗೂ ಸಿನಿಮಾದ ಟೈಟಲ್ ಅನಾವರಣ ಆಗಿರಲಿಲ್ಲ. ಫೈನಲಿ ಸಿನಿಮಾ ತಂಡ ಟೈಟಲ್ (Title) ರಿವೀಲ್ ಮಾಡಲು ಪ್ಲ್ಯಾನ್ ಮಾಡಿಕೊಂಡಿದೆ. ಅದು ಒಂದು ವಿಶೇಷ ದಿನದಂದೂ. ಆ ವಿಶೇಷ ದಿನ ಏನು ಅನ್ನೋದನ್ನ ಮಾತ್ರ ಚಿತ್ರತಂಡ ಇಲ್ಲಿವರೆಗೂ ರಿವೀಲ್ ಮಾಡಿಲ್ಲ. ಸದ್ಯಕ್ಕಿರುವ ಮಾಹಿತಿ ಪ್ರಕಾರ ಕಿರೀಟಿ ಅವರ ಹುಟ್ಟು ಹಬ್ಬಕ್ಕಾಗಿ ಸೆಪ್ಟೆಂಬರ್ 29ಕ್ಕೆ ಸಂಜೆ 6.39ಕ್ಕೆ ವಾರಾಹಿ ಚಲನಚಿತ್ರ ಯೂಟ್ಯೂಬ್ ಚಾನೆಲ್ ನಲ್ಲಿ ಕಿರೀಟಿ ಮೊದಲ ಚಿತ್ರದ ಟೈಟಲ್ ಲಾಂಚ್ ವೀಡಿಯೋ ಬಿಡುಗಡೆಯಾಗೋದು ಫಿಕ್ಸ್ ಆಗಿದೆ. ಇದನ್ನೂ ಓದಿ: ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಆಸ್ಪತ್ರೆ ದಾಖಲು: ಅಭಿಮಾನಿಗಳಿಗೆ ಹೆಚ್ಚಿದೆ ಆತಂಕ
ರಾಧಾಕೃಷ್ಣ ರೆಡ್ಡಿ (Radhakrishna Reddy) ನಿರ್ದೇಶನ ಸಾರಥ್ಯದಲ್ಲಿ ಮೂಡಿ ಬರ್ತಿರುವ ಈ ಚಿತ್ರಕ್ಕೆ ತೆಲುಗಿನ ಖ್ಯಾತ ನಿರ್ಮಾಣ ಸಂಸ್ಥೆ ವಾರಾಹಿ ಫಿಲ್ಮಂ ಪ್ರೊಡಕ್ಷನ್ ಬಂಡವಾಳ ಹೂಡಿ ನಿರ್ಮಾಣ ಮಾಡುತ್ತಿದೆ. ಇದು ವಾರಾಹಿ ಸಂಸ್ಥೆಯ 15ನೇ ಸಿನಿಮಾ ಕೂಡ ಆಗಿದ್ದು ಅಷ್ಟೇ ಅದ್ದೂರಿಯಾಗಿ ಸಿನಿಮಾವನ್ನು ನಿರ್ಮಾಣ ಮಾಡಲಾಗುತ್ತಿದೆ. ಕನ್ನಡ ಮತ್ತು ತೆಲುಗು ಎರಡೂ ಭಾಷೆಯಲ್ಲಿ ನಿರ್ಮಾಣವಾಗುತ್ತಿರೋ ಈ ಚಿತ್ರದ ಮೂಲಕ ಕಿರೀಟಿ ಕನ್ನಡ ಮತ್ತು ತೆಲುಗು ಎರಡೂ ಇಂಡಸ್ಟ್ರಿಗೆ ಏಕಕಾಲದಲ್ಲಿ ಹೀರೋ ಆಗಿ ಲಾಂಚ್ ಆಗ್ತಿದ್ದಾರೆ.
ಚಿತ್ರದಲ್ಲಿ ರವಿಚಂದ್ರನ್ (Ravichandran), ಜೆನಿಲಿಯಾ ರಿತೇಶ್ ದೇಶ್ ಮುಖ್, ಶ್ರೀಲೀಲಾ ಸೇರಿದಂತೆ ದೊಡ್ಡ ತಾರಾಬಳಗವೇ ಇದೆ. ಚಿತ್ರದ ತಾಂತ್ರಿಕ ವರ್ಗ ಕೂಡ ಶ್ರೀಮಂತವಾಗಿದ್ದು ರಾಕ್ ಸ್ಟಾರ್ ದೇವಿಶ್ರೀ ಪ್ರಸಾದ್ ಸಂಗೀತ, ಬಾಹುಬಲಿ ಸಿನಿಮಾದ ಕಣ್ಣು ಕೆ ಸೆಂಥಿಲ್ ಕುಮಾರ್ ಛಾಯಾಗ್ರಹಣ, ರವೀಂದರ್ ಕಲಾ ನಿರ್ದೇಶನ, ಭಾರತದ ಟಾಪ್ ಸ್ಟಂಟ್ ಡೈರೆಕ್ಟರ್ ಪೀಟರ್ ಹೆನ್ ಆಕ್ಷನ್ ಚಿತ್ರಕ್ಕಿದೆ.
Live Tv
[brid partner=56869869 player=32851 video=960834 autoplay=true]