Tag: title

  • ಹೊಸ ಚಿತ್ರಕ್ಕೆ ‘ಟೋಬಿ’ ಎಂದು ಹೆಸರಿಟ್ಟು ರಿಲೀಸ್ ಡೇಟ್ ಅನೌನ್ಸ್ ಮಾಡಿದ ರಾಜ್ ಬಿ ಶೆಟ್ಟಿ

    ಹೊಸ ಚಿತ್ರಕ್ಕೆ ‘ಟೋಬಿ’ ಎಂದು ಹೆಸರಿಟ್ಟು ರಿಲೀಸ್ ಡೇಟ್ ಅನೌನ್ಸ್ ಮಾಡಿದ ರಾಜ್ ಬಿ ಶೆಟ್ಟಿ

    ವಿಭಿನ್ನ ಸಿನಿಮಾಗಳ ಮೂಲಕ ಗುರುತಿಸಿಕೊಂಡಿರುವ, ಒಂದು ಮೊಟ್ಟೆಯ ಕಥೆ’ ಸಿನಿಮಾ ಮೂಲಕ ನಟ ಕಮ್ ನಿರ್ದೇಶಕನಾಗಿ ಚಿತ್ರರಂಗಕ್ಕೆ ಕಾಲಿಟ್ಟ ದೈತ್ಯ ಪ್ರತಿಭೆ ರಾಜ್ ಬಿ ಶೆಟ್ಟಿ (Raj B Shetty) ಮೊನ್ನೆಯಷ್ಟೇ ತಮ್ಮ ಅಭಿಮಾನಿಗಳಿಗೆ ಸಿಹಿಸುದ್ದಿ ನೀಡಿದ್ದರು. ‘ಗರುಡ ಗಮನ ವೃಷಭ ವಾಹನ’ (Garuda Gamana Vrushaba Vahana) ಸಿನಿಮಾ ನೋಡಿ ಇಷ್ಟಪಟ್ಟಿದ್ದ ಪ್ರೇಕ್ಷಕರಿಗೆ ಈ ತಂಡದ ಕಡೆಯಿಂದ ಮುಂದಿನ ಚಿತ್ರದ ಬಗ್ಗೆ ಬಿಗ್ ಅಪ್‌ಡೇಟ್ ತಿಳಿಸೋದಾಗಿ ಹೇಳಿದ್ದರು. ಇದೀಗ ಅಂದುಕೊಂಡಂತೆ ನಡೆದಿದ್ದಾರೆ.

    ತಾವು ಹೇಳಿದ ದಿನಾಂಕ ಮತ್ತು ಸಮಯಕ್ಕೆ ಹೊಸ ಸಿನಿಮಾದ ಅಪ್ ಡೇಟ್ ನೀಡಿದ್ದು, ಈ ಚಿತ್ರಕ್ಕೆ ‘ಟೋಬಿ’ (Toby) ಎಂದು ಹೆಸರಿಟಿದ್ದಾರೆ. ಅದರ ಜೊತೆಗೆ ಈ ಸಿನಿಮಾ ಇದೇ ಆಗಸ್ಟ್ 25 ರಂದು ರಿಲೀಸ್ ಮಾಡುವುದಾಗಿಯೂ ತಿಳಿಸಿದ್ದಾರೆ. ಈ ಕುರಿತು ಪೋಸ್ಟ್ ಮಾಡಿರುವ ರಾಜ್ ಬಿ ಶೆಟ್ಟಿ, ‘ಮಾರಿ.. ಮಾರಿ.. ಮಾರಿಗೆ ದಾರಿ. ಟೋಬಿ.. ಆಗಸ್ಟ್ 25ರಂದು ನಿಮ್ಮ ಮುಂದೆ’ ಎಂದು ಬರೆದುಕೊಂಡಿದ್ದಾರೆ. ಇದನ್ನೂ ಓದಿ:ಬಾಲಿವುಡ್ ನಟನ ಜೊತೆಗಿನ ಡೇಟಿಂಗ್ ಒಪ್ಪಿಕೊಂಡ ನಟಿ ತಮನ್ನಾ

    ರಾಜ್ ಬಿ ಶೆಟ್ಟಿ ಬಹುಮುಖ ಪ್ರತಿಭೆ. ನಟ- ನಿರ್ದೇಶಕ, ಬರಹಗಾರನಾಗಿ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದಾರೆ. ‘ಒಂದು ಮೊಟ್ಟೆಯ ಕಥೆ’, ‘ಗರುಡ ಗಮನ ವೃಷಭ ವಾಹನ’ ಸಿನಿಮಾಗಳಿಗೆ  ನಿರ್ದೇಶನ ಮಾಡಿ ಸೈ ಎನಿಸಿಕೊಂಡಿದ್ದಾರೆ. ರಾಜ್ ಬಿ ಶೆಟ್ಟಿ ನೇತೃತ್ವದ Lighters Buddha Film ಅಡಿಯಲ್ಲಿ ವಚನ್ ಶೆಟ್ಟಿ, ರವಿ ರೈ ನಿರ್ಮಾಣ ಮಾಡಿದ್ದರು. ಇವರ ಜೊತೆ Agastya Films ಜಂಟಿಯಾಗಿ ಬರುತ್ತಿದ್ದಾರೆ. ಇವರಿಬ್ಬರ ಕಾಂಬೋದಲ್ಲಿ ಹೊಸ ಸಿನಿಮಾ ಮೂಡಿ ಬಂದಿದೆ.

     

    ರಾಜ್ ಬಿ ಶೆಟ್ಟಿ ಅವರ ಕೈಯಲ್ಲಿ ಟೋಬಿ, ನಟಿ ರಮ್ಯಾ ನಿರ್ಮಾಣದ ‘ಸ್ವಾತಿ ಮುತ್ತಿನ ಮಳೆ ಹನಿಯೇ’, ರಾಮನ ಅವತಾರ, ಸೇರಿದಂತೆ ಹಲವು ಚಿತ್ರಗಳು ಕೈಯಲ್ಲಿದೆ. ಇನ್ನೂ ‘ಗರುಡ ಗಮನ ವೃಷಭ ವಾಹನ’ ಚಿತ್ರದ ಕಂಟೆಂಟ್ ಭಿನ್ನವಾಗಿತ್ತು. ಈ ಚಿತ್ರವನ್ನ ಫ್ಯಾನ್ಸ್ ನೋಡಿ ಇಷ್ಟಪಟ್ಟಿದ್ದರು. ಇದೀಗ ತಂಡದ ಕಡೆಯಿಂದ ಮತ್ತೊಂದು ಸಿನಿಮಾ ಅಂದಾಕ್ಷಣ ಸಿನಿಮಾ ಮೇಲಿನ ನಿರೀಕ್ಷೆ ಬೆಟ್ಟದಷ್ಟಿದೆ.

  • ಮಗನ ಚಿತ್ರಕ್ಕೆ ‘ಮುಧೋಳ’ ಎಂದು ಟೈಟಲ್ ಇಟ್ಟ ರವಿಚಂದ್ರನ್

    ಮಗನ ಚಿತ್ರಕ್ಕೆ ‘ಮುಧೋಳ’ ಎಂದು ಟೈಟಲ್ ಇಟ್ಟ ರವಿಚಂದ್ರನ್

    ಕ್ರೇಜಿಸ್ಟಾರ್ ರವಿಚಂದ್ರನ್ (Ravichandran) ಪುತ್ರ ವಿಕ್ರಮ್ (Vikram) ಇದೀಗ ಮತ್ತೊಂದು ಸಿನಿಮಾ ಒಪ್ಪಿಕೊಂಡಿದ್ದಾರೆ. ಈ ಸಿನಿಮಾಗೆ ಮುಧೋಳ (Mudhola) ಎಂದು ಹೆಸರಿಟ್ಟಿದ್ದು, ಈ ಟೈಟಲ್ (Title) ಆಯ್ಕೆ ಮಾಡಿದ್ದು ಸ್ವತಃ ರವಿಚಂದ್ರನ್ ಎಂದು ಚಿತ್ರತಂಡ ಹೇಳಿಕೊಂಡಿದೆ. ಮುಧೋಳ ಎನ್ನುವುದು ಉತ್ತರ ಕರ್ನಾಟಕದ ಊರು. ಈ ಊರು ಮುಧೋಳ ನಾಯಿಗೆ ಫೇಮಸ್. ಅಲ್ಲದೇ, ಹೀರೋ ಹೆಸರು ಕೂಡ ಮುಧೋಳ ಎಂದೇ ಇದೆಯಂತೆ. ಈ ಎಲ್ಲ ಕಾರಣಕ್ಕಾಗಿ ಈ ಟೈಟಲ್ ಆಯ್ಕೆಯಾಗಿದೆ.

    ಮುಧೋಳ ಸಿನಿಮಾ ಬಗ್ಗೆ ಮಾಹಿತಿ ಹಂಚಿಕೊಂಡ ವಿಕ್ರಮ್ ರವಿಚಂದ್ರನ್, ತ್ರಿವಿಕ್ರಮ ರಿಲೀಸ್ ಆಗಿದ್ದು ಜೂನ್ 24, ಅದು ಆದ್ಮೇಲೆ ಏಪ್ರಿಲ್ 26 ಅಂದ್ರೆ ಇವತ್ತು ನನ್ನ ಎರಡನೇ ಸಿನಿಮಾದ ಟೈಟಲ್ ಲಾಂಚ್ ಮಾಡುತ್ತಿದ್ದೇವೆ. ತುಂಬಾ ಜನ ವಿಕೆಆರ್ ಅಂದ್ರೇನು ಅಂತಾ ಕೇಳುತ್ತಿದ್ರು. ವಿಕೆಆರ್ ವಿಕ್ರಮ್ ರವಿಚಂದ್ರನ್ ಅನ್ನೋದು ತುಂಬಾ ಜನಕ್ಕೆ ಗೊತ್ತಿದೆ. ವಿಕೆಆರ್ ಕೆ ಬ್ರ್ಯಾಂಡ್ ಶುರು ಮಾಡೋಣಾ ಅಂತಾ. ವಿಕೆಆರ್ ವಿಕ್ರಮ್ ರವಿಚಂದ್ರನ್ ಬರುತ್ತದೆ. ವೀರಸ್ವಾಮಿ ರವಿಚಂದ್ರನ್ ಬರುತ್ತೇ. ನೆಕ್ಸ್ಟ್ ನಿಮ್ಮ ಫೇವರೇಟ್ ಡಾ. ವಿ ರವಿಚಂದ್ರನ್ ಹೆಸರು ಬರುತ್ತದೆ. ಇದರ ಮಧ್ಯೆ ಕನ್ನಡ ಬರುತ್ತದೆ. ಪ್ರಯತ್ನ ಅನ್ನೋದು ನಿರಂತರ. ಪ್ರಯತ್ನ ಮಾಡಿ ಜೀವನದಲ್ಲಿ ಗೆಲುವುದು ಮುಖ್ಯವಲ್ಲ. ಜೀವನವನ್ನೇ ಗೆಲ್ಲಬಹುದು. ಆ ರೀತಿ ಒಂದು ತಂಡ ನಿಮ್ಮ ಮುಂದೆ. ನನ್ನ ಎರಡನೇ ಹೆಜ್ಜೆ..ನಿಮ್ಮ ಪ್ರೀತಿ ಹಾರೈಕೆ ಹೀಗೆ ಇರಲಿ ಎಂದರು.

    ನಿರ್ದೇಶಕ ಕಾರ್ತಿಕ್ ರಾಜನ್ (Karthik Rajan) ಮಾತನಾಡಿ, ಮುಧೋಳಗಾಗಿ ತುಂಬಾ ಕಡೆ ಹುಡುಕಾಡಿದೆವು. ನಮ್ಮ ಮ್ಯಾನೇಜರ್ ಹತ್ತಿರ ಹೇಳಿದೆ. ತ್ಯಾಗರಾಜ್ ಎಂಬುವವರು ಆ ಶ್ವಾನ ಟ್ರೈನ್ ಮಾಡಿದ್ದಾರೆ. ಟೈಟಲ್ ಟೀಸರ್ ನಲ್ಲಿ ಶ್ವಾನ ಚಾಕು ಕಚ್ಚಿಕೊಂಡು ಬರುವ ದೃಶ್ಯಕ್ಕಾಗಿ 23 ಟೇಕ್ ತೆಗೆದುಕೊಂಡಿದ್ದೇವೆ ಎಂದು ತಿಳಿಸಿದರು. ಇದನ್ನೂ ಓದಿ:ಪತಿ ಜೊತೆ ವಿದೇಶಕ್ಕೆ ಹಾರಿದ ‘ಬಿಗ್ ಬಾಸ್’ ಬೆಡಗಿ ಅಕ್ಷತಾ ಕುಕಿ

    ಸಂಭಾಷಣೆಗಾರ ಮಾಸ್ತಿ ಮಾತನಾಡಿ, ಈಶ್ವರಿ ಕಂಬೈನ್ಸ್ ಅನ್ನೋದು ಲೆಗೆಸಿ. ಹೀರೋಯಿನ್ಸ್ ಗಳು ರವಿಚಂದ್ರನ್ ಸರ್ ಜೊತೆ ಕೆಲಸ ಮಾಡ್ಬೇಕು ಎಂದುಕೊಳ್ತಿದ್ರು. ಅದೇ ರೀತಿ ರೈಟರ್ಸ್ ಆ ಸಂಸ್ಥೆ ಜೊತೆ ಕೆಲಸ ಮಾಡಬೇಕು ಎಂದುಕೊಳ್ತಿದ್ರು. ಈಶ್ವರಿ ಕಂಬೈನ್ಸ್ ಅನ್ನೋದು ಪರಂಪರೆ. ಆ ಸಂಸ್ಥೆಯ ಜೊತೆ ವಿಕ್ರಮ್ ಸರ್ ಜೊತೆ ಕೆಲಸ ಮಾಡುತ್ತಿರುವುದು ಖುಷಿ ಎಂದರು.

    ತಮಿಳು, ತೆಲುಗು ಚಿತ್ರರಂಗದಲ್ಲಿ ಸಹ ನಿರ್ದೇಶಕನಾಗಿ, ಸಿನಿಮಾ ಬರಹಗಾರನಾಗಿ ಗುರುತಿಸಿಕೊಂಡಿರುವ ಕಾರ್ತಿಕ್ ರಾಜನ್ ಮುಧೋಳ ಸಿನಿಮಾಗೆ ಆಕ್ಷನ್ ಕಟ್ ಹೇಳಿದ್ದು, ಇದು ಇವರ ಚೊಚ್ಚಲ ಹೆಜ್ಜೆ. ಎಸ್.ತಮನ್ ಜೊತೆ ಕೆಲಸ ಮಾಡಿ ಅನುಭವ ಇರುವ ಯುವರಾಜ್ ಚಂದ್ರನ್ ಚಿತ್ರಕ್ಕೆ ಸಂಗೀತ ನಿರ್ದೇಶನ ನೀಡುತ್ತಿದ್ದು, ಟಗರು, ಸಲಗ ಸಿನಿಮಾ ಖ್ಯಾತಿ ಮಾಸ್ತಿ ಸಂಭಾಷಣೆ, ಸಂದೀಪ್ ವಲ್ಲೂರಿ ಛಾಯಾಗ್ರಹಣ, ಡಾ.ಕೆ.ರವಿವರ್ಮಾ ಆಕ್ಷನ್ ಚಿತ್ರಕ್ಕಿದೆ. ತಂಡವ್ ಸ್ಟುಡಿಯೋಸ್ ಬ್ಯಾನರ್ ನಡಿ ರಕ್ಷಾ ವಿಜಯಕುಮಾರ್ ಹಾಗೂ ಸಿಲ್ಜು ಕಣ್ಣನ್ ನಿರ್ಮಾಣ ಮಾಡ್ತಿರುವ ಮಧೋಳ್ ಚಿತ್ರದಲ್ಲಿ ಲವ್ ಮಾಕ್ಟೇಲ್ ಖ್ಯಾತಿ ಅಭಿಲಾಶ್, ರಘು ಮ್ಯೂಟಂಟ್ ಸೇರಿದಂತೆ ಹಲವರು ನಟಿಸುತ್ತಿದ್ದಾರೆ. ಈಗಾಗ್ಲೇ 30 ದಿನ ಚಿತ್ರೀಕರಣ ಕಂಪ್ಲೀಟ್ ಮಾಡಿರುವ ಚಿತ್ರತಂಡ ಮತ್ತಷ್ಟು ಕಲಾವಿದರ ಬಗ್ಗೆ ಶೀರ್ಘದಲ್ಲಿಯೇ ಮಾಹಿತಿ ನೀಡಲಿದೆ.

  • ಗ್ಯಾಂಗ್ ಸ್ಟರ್ ಅವತಾರದಲ್ಲಿ ಕ್ರೇಜಿಸ್ಟಾರ್ ಪುತ್ರ ವಿಕ್ರಮ್

    ಗ್ಯಾಂಗ್ ಸ್ಟರ್ ಅವತಾರದಲ್ಲಿ ಕ್ರೇಜಿಸ್ಟಾರ್ ಪುತ್ರ ವಿಕ್ರಮ್

    ಸ್ಯಾಂಡಲ್ ವುಡ್ ಕನಸುಗಾರ ಡಾ.ವಿ ರವಿಚಂದ್ರನ್ ದ್ವಿತೀಯ ಪುತ್ರ ಮರಿ ರಣಧೀರ ವಿಕ್ರಮ್ ರವಿಚಂದ್ರನ್ (Vikram Ravichandran) ಎರಡನೇ ಕನಸಿಗೆ ಮಧೋಳ್ (Mudhola) ಎಂಬ ಕ್ಯಾಚಿ ಟೈಟಲ್ (Title) ಇಡಲಾಗಿದೆ. ಬೆಂಗಳೂರಿನ ನವರಂಗ್ ಚಿತ್ರಮಂದಿರದಲ್ಲಿ ಅಭಿಮಾನಿಗಳ ನಡುವೆ ವಿಕ್ಕಿ ಹೊಸ ಚಿತ್ರದ ಶೀರ್ಷಿಕೆ ಅನಾವರಣ ಮಾಡಲಾಯಿತು. ಟೈಟಲ್ ಟೀಸರ್ ಮೂಲಕ ಎಂಟ್ರಿ ಕೊಟ್ಟ ವಿಕ್ರಮ್ ರವಿಚಂದ್ರನ್ ಕಂಪ್ಲೀಟ್ ಗ್ಯಾಂಗ್ ಸ್ಟಾರ್ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಅಷ್ಟಕ್ಕೂ ಕ್ರೇಜಿಸ್ಟಾರ್ ಪುತ್ರನ ಚಿತ್ರಕ್ಕೆ ಮುಧೋಳ್ ಎಂಬ ಟೈಟಲ್ ಕೊಟ್ಟಿದ್ದೇ ವಿ. ರವಿಚಂದ್ರನ್..ತ್ರಿವಿಕ್ರಮ್ ಸಿನಿಮಾ ಮೂಲಕ ಸ್ಯಾಂಡಲ್ ವುಡ್ ಗೆ ಅಡಿ ಇಟ್ಟಿದ ವಿಕ್ಕಿ ಈ ಬಾರಿ ರಾ ಹಾಗೂ ಗ್ಯಾಂಗ್ ಸ್ಟಾರ್ ಸಬ್ಜೆಕ್ಟ್ ಮೂಲಕ ಸಿನಿರಸಿಕರನ್ನು ರಂಜಿಸಲು ಬರ್ತಿದ್ದಾರೆ.

    ಮುಧೋಳ್ ಸಿನಿಮಾ ಬಗ್ಗೆ ಮಾಹಿತಿ ಹಂಚಿಕೊಂಡ ವಿಕ್ರಮ್ ರವಿಚಂದ್ರನ್, ತ್ರಿವಿಕ್ರಮ ರಿಲೀಸ್ ಆಗಿದ್ದು ಜೂನ್ 24, ಅದು ಆದ್ಮೇಲೆ ಏಪ್ರಿಲ್ 26 ಅಂದ್ರೆ ಇವತ್ತು ನನ್ನ ಎರಡನೇ ಸಿನಿಮಾದ ಟೈಟಲ್ ಲಾಂಚ್ ಮಾಡುತ್ತಿದ್ದೇವೆ. ತುಂಬಾ ಜನ ವಿಕೆಆರ್ ಅಂದ್ರೇನು ಅಂತಾ ಕೇಳುತ್ತಿದ್ರು. ವಿಕೆಆರ್ ವಿಕ್ರಮ್ ರವಿಚಂದ್ರನ್ ಅನ್ನೋದು ತುಂಬಾ ಜನಕ್ಕೆ ಗೊತ್ತಿದೆ. ವಿಕೆಆರ್ ಕೆ ಬ್ರ್ಯಾಂಡ್ ಶುರು ಮಾಡೋಣಾ ಅಂತಾ. ವಿಕೆಆರ್ ವಿಕ್ರಮ್ ರವಿಚಂದ್ರನ್ ಬರುತ್ತದೆ. ವೀರಸ್ವಾಮಿ ರವಿಚಂದ್ರನ್ ಬರುತ್ತೇ. ನೆಕ್ಸ್ಟ್ ನಿಮ್ಮ ಫೇವರೇಟ್ ಡಾ. ವಿ ರವಿಚಂದ್ರನ್ ಹೆಸರು ಬರುತ್ತದೆ. ಇದರ ಮಧ್ಯೆ ಕನ್ನಡ ಬರುತ್ತದೆ. ಪ್ರಯತ್ನ ಅನ್ನೋದು ನಿರಂತರ. ಪ್ರಯತ್ನ ಮಾಡಿ ಜೀವನದಲ್ಲಿ ಗೆಲುವುದು ಮುಖ್ಯವಲ್ಲ. ಜೀವನವನ್ನೇ ಗೆಲ್ಲಬಹುದು. ಆ ರೀತಿ ಒಂದು ತಂಡ ನಿಮ್ಮ ಮುಂದೆ. ನನ್ನ ಎರಡನೇ ಹೆಜ್ಜೆ..ನಿಮ್ಮ ಪ್ರೀತಿ ಹಾರೈಕೆ ಹೀಗೆ ಇರಲಿ ಎಂದರು.

    ನಿರ್ದೇಶಕ ಕಾರ್ತಿಕ್ ರಾಜನ್ (Karthik Rajan) ಮಾತನಾಡಿ, ಮುಧೋಳ್ ಗಾಗಿ ತುಂಬಾ ಕಡೆ ಹುಡುಗಾಡಿದೆವು. ನಮ್ಮ ಮ್ಯಾನೇಜರ್ ಹತ್ತಿರಹೇಳಿದೆ. ತ್ಯಾಗರಾಜ್ ಎಂಬುವವರು ಆ ಶ್ವಾನ ಟ್ರೈನ್ ಮಾಡಿದ್ದಾರೆ. ಟೈಟಲ್ ಟೀಸರ್ ನಲ್ಲಿ ಶ್ವಾನ ಚಾಕು ಕಚ್ಚಿಕೊಂಡು ಬರುವ ದೃಶ್ಯಕ್ಕಾಗಿ 23 ಟೇಕ್ ತೆಗೆದುಕೊಂಡಿದ್ದೇವೆ ಎಂದು ತಿಳಿಸಿದರು. ಇದನ್ನೂ ಓದಿ:ಮತ್ತೆ ಕಿರುತೆರೆಯತ್ತ ದೀಪಿಕಾ ದಾಸ್

    ಸಂಭಾಷಣೆಗಾರ ಮಾಸ್ತಿ ಮಾತನಾಡಿ, ಈಶ್ವರಿ ಕಂಬೈನ್ಸ್ ಅನ್ನೋದು ಲೆಗೆಸಿ. ಹೀರೋಯಿನ್ಸ್ ಗಳು ರವಿಚಂದ್ರನ್ ಸರ್ ಜೊತೆ ಕೆಲಸ ಮಾಡ್ಬೇಕು ಎಂದುಕೊಳ್ತಿದ್ರು. ಅದೇ ರೀತಿ ರೈಟರ್ಸ್ ಆ ಸಂಸ್ಥೆ ಜೊತೆ ಕೆಲಸ ಮಾಡಬೇಕು ಎಂದುಕೊಳ್ತಿದ್ರು. ಈಶ್ವರಿ ಕಂಬೈನ್ಸ್ ಅನ್ನೋದು ಪರಂಪರೆ. ಆ ಸಂಸ್ಥೆಯ ಜೊತೆ ವಿಕ್ರಮ್ ಸರ್ ಜೊತೆ ಕೆಲಸ ಮಾಡುತ್ತಿರುವುದು ಖುಷಿ ಎಂದರು.

    ತಮಿಳು, ತೆಲುಗು ಚಿತ್ರರಂಗದಲ್ಲಿ ಸಹ ನಿರ್ದೇಶಕನಾಗಿ, ಸಿನಿಮಾ ಬರಹಗಾರನಾಗಿ ಗುರುತಿಸಿಕೊಂಡಿರುವ ಕಾರ್ತಿಕ್ ರಾಜನ್ ಮುಧೋಳ್ ಸಿನಿಮಾಗೆ ಆಕ್ಷನ್ ಕಟ್ ಹೇಳಿದ್ದು, ಇದು ಇವರ ಚೊಚ್ಚಲ ಹೆಜ್ಜೆ. ಎಸ್.ತಮನ್ ಜೊತೆ ಕೆಲಸ ಮಾಡಿ ಅನುಭವ ಇರುವ ಯುವರಾಜ್ ಚಂದ್ರನ್ ಚಿತ್ರಕ್ಕೆ ಸಂಗೀತ ನಿರ್ದೇಶನ ನೀಡುತ್ತಿದ್ದು, ಟಗರು, ಸಲಗ ಸಿನಿಮಾ ಖ್ಯಾತಿ ಮಾಸ್ತಿ ಸಂಭಾಷಣೆ, ಸಂದೀಪ್ ವಲ್ಲೂರಿ ಛಾಯಾಗ್ರಹಣ, ಡಾ.ಕೆ.ರವಿವರ್ಮಾ ಆಕ್ಷನ್ ಚಿತ್ರಕ್ಕಿದೆ. ತಂಡವ್ ಸ್ಟುಡಿಯೋಸ್ ಬ್ಯಾನರ್ ನಡಿ ರಕ್ಷಾ ವಿಜಯಕುಮಾರ್ ಹಾಗೂ ಸಿಲ್ಜು ಕಣ್ಣನ್ ನಿರ್ಮಾಣ ಮಾಡ್ತಿರುವ ಮಧೋಳ್ ಚಿತ್ರದಲ್ಲಿ ಲವ್ ಮಾಕ್ಟೇಲ್ ಖ್ಯಾತಿ ಅಭಿಲಾಶ್, ರಘು ಮ್ಯೂಟಂಟ್ ಸೇರಿದಂತೆ ಹಲವರು ನಟಿಸುತ್ತಿದ್ದಾರೆ. ಈಗಾಗ್ಲೇ 30 ದಿನ ಚಿತ್ರೀಕರಣ ಕಂಪ್ಲೀಟ್ ಮಾಡಿರುವ ಚಿತ್ರತಂಡ ಮತ್ತಷ್ಟು ಕಲಾವಿದರ ಬಗ್ಗೆ ಶೀರ್ಘದಲ್ಲಿಯೇ ಮಾಹಿತಿ ನೀಡಲಿದೆ.

  • ವೈಭವ್ ಪ್ರಶಾಂತ್ ಸಿನಿಮಾಗೆ ಟೈಟಲ್ ಫಿಕ್ಸ್: ಸಂಗೀತಾ ಭಟ್ ನಾಯಕಿ

    ವೈಭವ್ ಪ್ರಶಾಂತ್ ಸಿನಿಮಾಗೆ ಟೈಟಲ್ ಫಿಕ್ಸ್: ಸಂಗೀತಾ ಭಟ್ ನಾಯಕಿ

    ನ್ನಡದಲ್ಲೀಗ ಹೊಸ ಬಗೆಯ ಶೀರ್ಷಿಕೆ ಸಿನಿಮಾಗಳು ಬಹಳಷ್ಟು ಸದ್ದು ಮಾಡುತ್ತಿವೆ. ಈ ಪಟ್ಟಿಗೀಗ ಹೊಸ ಸೇರ್ಪಡೆ ಕ್ಲಾಂತ. ಈ ಹಿಂದೆ ರಂಗನ್ ಸ್ಟೈಲ್, ದಗಲು ಬಾಜಿಲು ಸೇರಿದಂತೆ ಬೇರೆ ಬಗೆಯ ಜಾನರ್ ಚಿತ್ರ ನಿರ್ದೇಶಿರುವ ವೈಭವ್ ಪ್ರಶಾಂತ್ (Vaibhav Prashant) ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಇಂದು ಕ್ಲಾಂತ (Klanta) ಸಿನಿಮಾದ ಟೈಟಲ್ (Title) ಹಾಗೂ ಫಸ್ಟ್ ಲುಕ್ (First Look) ಪೋಸ್ಟರ್ ಅನಾವರಣ ಮಾಡಲಾಗಿತ್ತು. ಈ ಬಗ್ಗೆ ಚಿತ್ರತಂಡ ಮಾಧ್ಯಮದವರೊಂದಿಗೆ ಮಾಹಿತಿ ಹಂಚಿಕೊಂಡಿತು.

    ನಿರ್ದೇಶಕ ವೈಭವ್  ಪ್ರಶಾಂತ್ ಮಾತನಾಡಿ, ಇದು ನನ್ನ ನಾಲ್ಕನೇ ಸಿನಿಮಾ. ಯುವಜನತೆಗೆ ಒಳ್ಳೆ ಸಂದೇಶ ಕೊಡುವ ಚಿತ್ರವಾಗಿದ್ದು, ಅಪ್ಪ ಅಮ್ಮನಿಗೆ ಸುಳ್ಳು ಹೇಳಿ ತಪ್ಪು ದಾರಿ ಇಡಬೇಡಿ ಎಂಬ ಕಂಟೆಂಟ್ ಸುತ್ತ ಸಿನಿಮಾ ಮಾಡಲಾಗುತ್ತಿದೆ. ಶೂಟಿಂಗ್ ಕಂಪ್ಲೀಟ್ ಆಗಿದ್ದು, ಪೋಸ್ಟ್ ಪ್ರೊಡಕ್ಷನ್ ಕೆಲಸ ಮುಗಿದಿದೆ ಎಂದು ತಿಳಿಸಿದರು. ಇದನ್ನೂ ಓದಿ:ಮಂಗಳೂರಿನ ಕಾಡಿನಲ್ಲಿ ನಟಿ ಪೂಜಾ ಹೆಗ್ಡೆ ಸುತ್ತಾಟ

    ‘ನನಗೆ ಈ ಸಿನಿಮಾ ತುಂಬಾ ಸ್ಪೆಷಲ್. ತುಂಬಾ ವರ್ಷದಿಂದ ಸಿನಿಮಾದಿಂದ ದೂರ ಇದ್ದೆ. ನಾನು ಕಂಬ್ಯಾಕ್ ಮಾಡಿದಾಗ ಸೈನ್ ಮಾಡಿದ ಮೊದಲ ಚಿತ್ರವಿದು. ಟೀನೇಜ್ ಹುಡುಗಿ ದಾಟಿ ಈಗ ತಾನೇ ಕೆಲಸ ಮಾಡುವ ಪಾತ್ರ ನನ್ನದು. ಹೆಚ್ಚಾಗಿ ಕಾಡಿನಲ್ಲಿ ಶೂಟ್ ಮಾಡಲಾಗಿದ್ದು, ಒಂದೊಳ್ಳೆ ಅನುಭವ. ಇಲ್ಲಿ ನನ್ನ ಪಾತ್ರಕ್ಕೆ ಬೇಕಾದ ಫಿಟ್ನೆಸ್, ಎಕ್ಸ್ ಪ್ರೆಸ್ ಬದಲಾಯಿಸಿದ್ದೇನೆ. ಫೈಟ್ ಸೀಕ್ವೆನ್ಸ್ ಮಾಡಿದ್ದು, ಖುಷಿಕೊಟ್ಟಿದೆ ಎಂದರು.  ನಾಯಕ ವಿಘ್ನೇಶ್ ಮಾತನಾಡಿ ತುಂಬಾ ಖುಷಿಯಾಗುತ್ತಿದೆ. ಕನ್ನಡದಲ್ಲಿ ಇದು ಮೊದಲ ಸಿನೆಮಾ . ತುಳುವಿನಲ್ಲಿ ಪ್ರಶಾಂತ್ ಸರ್ ಜೊತೆ ಸಿನಿಮಾ ಮಾಡಿದ್ದೇನೆ. ಆ ಚಿತ್ರಕ್ಕೆ ಒಳ್ಳೆ ರೆಸ್ಪಾನ್ಸ್ ಸಿಕ್ಕಿದೆ. ಈ ಚಿತ್ರಕ್ಕೂ ನಿಮ್ಮ ಬೆಂಬಲ ಇರಲಿ’ ಎಂದರು ಸಂಗೀತಾ ಭಟ್.

    ಕ್ಲಾಂತ ಸಸ್ಪೆನ್ಸ್ ಥ್ರಿಲ್ಲರ್ ಜಾನರ್ ಚಿತ್ರವಾಗಿದ್ದು, ಈಗಾಗಲೇ ಶೂಟಿಂಗ್ ಮುಗಿಸಿ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ. ಎಂ ವಿಘ್ನೇಶ್ ನಾಯಕನಾಗಿ, ಸಂಗೀತ ಭಟ್ ನಾಯಕಿಯಾಗಿ ನಟಿಸುತ್ತಿದ್ದು, ಉಳಿದಂತೆ ಶೋಭ್ ರಾಜ್, ವೀಣಾ ಸಂಗೀತ , ಕಾಮಿಡಿ‌ ಕಿಲಾಡಿಯ ದೀಪಿಕಾ, ಪ್ರವೀಣ್ ಜೈನ್, ಯುವ ಹಾಗೂ ಸ್ವಪ್ನ, ತಿಮ್ಮಪ್ಪ ಕುಲಾಲ್  ನಟಿಸುತ್ತಿದ್ದಾರೆ. ಎಸ್ ಪಿ ಚಂದ್ರಕಾಂತ್ ಸಂಗೀತ, ಪಿಆರ್ ಸೌಂದರ್ ರಾಜ್ ಸಂಕಲನ, ಮೋಹನ್ ಲೋಕನಾಥ್ ಛಾಯಾಗ್ರಹಣ ಚಿತ್ರಕ್ಕಿದೆ.

    ಸಂತೋಷ್ ನಾಯ್ಕ್, ವರಾಹ ರೂಪಂ ಖ್ಯಾತಿಯ ಶಶಿರಾಜ್ ಕಾವೂರ್, ವೈಭವ್ ಪ್ರಶಾಂತ್ ಸಾಹಿತ್ಯ ಹಾಡುಗಳಿಗಿದ್ದು, ವಿನೋದ್ ಸ್ಟಂಟ್, ಮಹೇಶ್ ದೇವ್ ಸಂಭಾಷಣೆ ಸಿನಿಮಾಕ್ಕಿದೆ. ಎರಡು ಹಾಡುಗಳಿಗೆ ರಘು ಅವರ ನೃತ್ಯ ಸಂಯೋಜನೆ ಇದೆ . ಅನುಗ್ರಹ ಪವರ್ ಮೀಡಿಯಾ ಬ್ಯಾನರ್ ನಡಿ ಉದಯ್ ಅಮ್ಮಣ್ಣಾಯ ಬಂಡವಾಳ ಹೂಡಿದ್ದು, ಅರುಣ್ ಗೌಡ, ಪ್ರದೀಪ್ ಗೌಡ ಸಹ ನಿರ್ಮಾಪಕರಾಗಿ  ಆಗಿ ಕೆಲಸ ನಿರ್ವಹಿಸಿದ್ದಾರೆ.

  • ರೋಸಿ ಟೈಟಲ್ ವಿವಾದ : ಶಿವರಾಜ್ ಕುಮಾರ್ ಗೆ ಮನವಿ ಮಾಡಿದ ಯೋಗಿ

    ರೋಸಿ ಟೈಟಲ್ ವಿವಾದ : ಶಿವರಾಜ್ ಕುಮಾರ್ ಗೆ ಮನವಿ ಮಾಡಿದ ಯೋಗಿ

    ದುನಿಯಾ ಸಿನಿಮಾದ ಮೂಲಕ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಟ್ಟ ಲೂಸ್ ಮಾದ ಯೋಗಿ (Loose Mada Yogeesh) ಇದೀಗ ಐವತ್ತನೇ ಸಿನಿಮಾ ಪೂರೈಸಿದ್ದಾರೆ. ಮೊನ್ನೆಯಷ್ಟೇ ಅವರ 50ನೇ ಸಿನಿಮಾದ ಮುಹೂರ್ತ ಕೂಡ ಆಗಿದೆ. ಈ ಚಿತ್ರಕ್ಕೆ ರೋಸಿ ಎಂದು ಹೆಸರಿಡಲಾಗಿತ್ತು. ಈ ಟೈಟಲ್ ಸಮಸ್ಯೆಯೊಂದನ್ನು ಸೃಷ್ಟಿ ಮಾಡಿದೆ.

    ಈಗಾಗಲೇ ಇದೇ ಹೆಸರಿನಲ್ಲೇ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ‍ಘೋಷಣೆ ಮಾಡಿದ್ದಾರೆ. ಯೋಗಿಗೆ ರೋಸಿ ಸಿನಿಮಾ ಐವತ್ತನೇ ಚಿತ್ರವಾದರೆ, ಅರ್ಜುನ್ ಅವರಿಗೆ ಮೊದಲನೇ ಸಿನಿಮಾ. ಹಾಗಾಗಿ ಇಬ್ಬರಿಗೂ ಈ ಟೈಟಲ್ ಬಗ್ಗೆ ಭಾವನಾತ್ಮಕ ಸಂಬಂಧ ಹೊಂದಿದೆ. ಹೀಗಾಗಿ ಇಬ್ಬರೂ ಟೈಟಲ್ ಬಿಟ್ಟು ಕೊಡಲು ತಯಾರಿಲ್ಲ. ಹಾಗಾಗಿ ಅನಿವಾರ್ಯವಾಗಿ ಶಿವರಾಜ್ ಕುಮಾರ್ ಮಧ್ಯ ಪ್ರವೇಶ ಮಾಡಬೇಕಾಗಿ ಬಂದಿದೆ. ಇದನ್ನೂ ಓದಿ:ಲಿಫ್ಟ್‌ನಲ್ಲಿ ಪತಿ ನಿಕ್ ಜೋನಸ್ ಜೊತೆ ಪ್ರಿಯಾಂಕಾ ಚೋಪ್ರಾ ರೊಮ್ಯಾನ್ಸ್

    ಅರ್ಜುನ್ ಜನ್ಯ ನಿರ್ದೇಶನದ ಸಿನಿಮಾದಲ್ಲಿ ಶಿವರಾಜ್ ಕುಮಾರ್ (Shivaraj Kumar)ಕೂಡ ನಾಯಕನಾಗಿ ನಟಿಸುತ್ತಿದ್ದಾರೆ. ಹಾಗಾಗಿ ಶಿವಣ್ಣನಿಗೆ ಯೋಗಿ ಮನವಿ ಮಾಡಿಕೊಂಡಿದ್ದಾರೆ. ಇದು ತಮ್ಮ ಐವತ್ತನೇ ಚಿತ್ರವಾಗಿದ್ದರಿಂದ ಟೀಮ್ ಜೊತೆ ಮಾತಾಡಿ ರೋಸಿ ಟೈಟಲ್ ಅನ್ನು ನಮಗೆ ಬಿಟ್ಟು ಕೊಡಿ ಎಂದು ಕೇಳಿಕೊಂಡಿದ್ದಾರೆ. ಟೀಮ್ ಜೊತೆ ಮಾತನಾಡುವುದಾಗಿ ಶಿವರಾಜ್ ಕುಮಾರ್ ಹೇಳಿದ್ದಾರಂತೆ.

    ಅರ್ಜುನ್ ಜನ್ಯ (Arjun Janya) ಚೊಚ್ಚಲ  ನಿರ್ದೇಶನದ, ಸೂರಜ್ ಪ್ರೊಡಕ್ಷನ್ಸ್ ಲಾಂಛನದ ಮೂಲಕ ‘ರೋಸಿ 45’ (Rosy 45) ಶೀರ್ಷಿಕೆಯನ್ನು  ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳೀಯಲ್ಲಿ ನೋಂದಾಯಿಸಲಾಗಿದೆ. ಈಗ ಯೋಗಿ ನಟನೆಯ ಡಿ.ವೈ.ಪ್ರೊಡಕ್ಷನ್ಸ್ ಲಾಂಛನದಲ್ಲಿ ನಿರ್ಮಾಣವಾಗುತ್ತಿರುವ ಚಿತ್ರಕ್ಕೂ ‘ರೋಸಿ’ ಎಂದು ಶೀರ್ಷಿಕೆ ಇಡಲಾಗಿದೆ. ಈ ವಿಷಯವನ್ನು ಕರ್ನಾಟಕ ವಾಣಿಜ್ಯ ಮಂಡಳಿ ಗಮನಕ್ಕೆ ತರಲಾಗಿತ್ತು.

    ಕರ್ನಾಟಕ ಚಲನಚಿತ್ರ ವಾಣಿಜ್ಯ ‌ಮಂಡಳಿಯಲ್ಲಿ ಮೊದಲು ಶೀರ್ಷಿಕೆ ನೋಂದಾಯಿಸಿದವರು ಮಾತ್ರ ಶೀರ್ಷಿಕೆ ಬಳಸಿಕೊಳ್ಳಬಹುದು ಎಂದು ವಾಣಿಜ್ಯ ಮಂಡಳಿ ಹೇಳಿದೆ. ಹಾಗಾಗಿ ಸೂರಜ್ ಪ್ರೊಡಕ್ಷನ್ಸ್ ಗೆ ರೋಸಿ 45(Rosy 45) ಶೀರ್ಷಿಕೆ ಸೇರಿದೆ. ಇನ್ನು‌ ಮುಂದೆ ಯಾರು ಕೂಡ ‘ರೋಸಿ’ ಶೀರ್ಷಿಕೆ ಬಳಸುವ ಹಾಗಿಲ್ಲ ಹಾಗೂ ಶೀರ್ಷಿಕೆ ಪಕ್ಕದಲ್ಲಿ ಬೇರೆ ಪದ ಹಾಗೂ ನಂಬರ್ ಗಳನ್ನಾಗಲಿ ಸೇರಿಸಿಕೊಂಡು ಸಹ ಬಳಸುವ ಹಾಗಿಲ್ಲ ಎಂದು ರೋಸಿ 45 ಚಿತ್ರದ ನಿರ್ಮಾಪಕ ರಮೇಶ್ ರೆಡ್ಡಿ (Ramesh Reddy) ಹಾಗೂ ನಿರ್ದೇಶಕ ಅರ್ಜುನ್ ಜನ್ಯ ತಿಳಿಸಿದ್ದಾರೆ. ಮುಂದೇನಾಗತ್ತೋ ಕಾದು ನೋಡಬೇಕು.

  • ಲೂಸ್ ಮಾದ ಯೋಗಿ 50ನೇ ಚಿತ್ರಕ್ಕೆ ಸಿಗಲಿಲ್ಲ ‘ರೋಸಿ’ ಟೈಟಲ್?

    ಲೂಸ್ ಮಾದ ಯೋಗಿ 50ನೇ ಚಿತ್ರಕ್ಕೆ ಸಿಗಲಿಲ್ಲ ‘ರೋಸಿ’ ಟೈಟಲ್?

    ದುನಿಯಾ ಸಿನಿಮಾದ ಮೂಲಕ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಟ್ಟ ಲೂಸ್ ಮಾದ ಯೋಗಿ (Loose Mada Yogeesh) ಇದೀಗ ಐವತ್ತನೇ ಸಿನಿಮಾ ಪೂರೈಸಿದ್ದಾರೆ. ಮೊನ್ನೆಯಷ್ಟೇ ಅವರ 50ನೇ ಸಿನಿಮಾದ ಮುಹೂರ್ತ ಕೂಡ ಆಗಿದೆ. ಈ ಚಿತ್ರಕ್ಕೆ ರೋಸಿ ಎಂದು ಹೆಸರಿಡಲಾಗಿತ್ತು. ಆದರೆ, ಈ ಟೈಟಲ್ ಸಿಗುವುದು ಬಹುತೇಕ ಕಷ್ಟ ಎನ್ನಲಾಗುತ್ತಿದೆ. ಇದೇ ಹೆಸರಿನಲ್ಲಿ ಮತ್ತೊಂದು ಸಿನಿಮಾ ಘೋಷಣೆಯಾಗಿದ್ದು, ಅವರು ಚಿತ್ರದ ಟೈಟಲ್ ಅನ್ನು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ನೋಂದಾಯಿಸಿದ್ದಾರೆ.

    ಅರ್ಜುನ್ ಜನ್ಯ (Arjun Janya) ಚೊಚ್ಚಲ  ನಿರ್ದೇಶನದ, ಸೂರಜ್ ಪ್ರೊಡಕ್ಷನ್ಸ್ ಲಾಂಛನದ ಮೂಲಕ ‘ರೋಸಿ 45’ (Rosy 45) ಶೀರ್ಷಿಕೆಯನ್ನು  ನೋಂದಾಯಿಸಲಾಗಿತ್ತು. ಈಗ ಯೋಗಿ ನಟನೆಯ ಡಿ.ವೈ.ಪ್ರೊಡಕ್ಷನ್ಸ್ ಲಾಂಛನದಲ್ಲಿ ನಿರ್ಮಾಣವಾಗುತ್ತಿರುವ ಚಿತ್ರಕ್ಕೂ ‘ರೋಸಿ’ ಎಂದು ಶೀರ್ಷಿಕೆ ಇಡಲಾಗಿತ್ತು. ಈ ವಿಷಯವನ್ನು ಕರ್ನಾಟಕ ವಾಣಿಜ್ಯ ಮಂಡಳಿ ಗಮನಕ್ಕೆ ತರಲಾಗಿತ್ತು. ಇದನ್ನೂ ಓದಿ: ನಟ ಚೇತನ್‌ ಭಾರತದ ವೀಸಾ ರದ್ದು

    ಕರ್ನಾಟಕ ಚಲನಚಿತ್ರ ವಾಣಿಜ್ಯ ‌ಮಂಡಳಿಯಲ್ಲಿ ಮೊದಲು ಶೀರ್ಷಿಕೆ ನೋಂದಾಯಿಸಿದವರು ಮಾತ್ರ ಶೀರ್ಷಿಕೆ ಬಳಸಿಕೊಳ್ಳಬಹುದು ಎಂದು ವಾಣಿಜ್ಯ ಮಂಡಳಿ ಹೇಳಿದೆ. ಹಾಗಾಗಿ ಸೂರಜ್ ಪ್ರೊಡಕ್ಷನ್ಸ್ ಗೆ ರೋಸಿ 45(Rosy 45) ಶೀರ್ಷಿಕೆ ಸೇರಿದೆ.

    ಇನ್ನು‌ ಮುಂದೆ ಯಾರು ಕೂಡ ‘ರೋಸಿ’ ಶೀರ್ಷಿಕೆ ಬಳಸುವ ಹಾಗಿಲ್ಲ ಹಾಗೂ ಶೀರ್ಷಿಕೆ ಪಕ್ಕದಲ್ಲಿ ಬೇರೆ ಪದ ಹಾಗೂ ನಂಬರ್ ಗಳನ್ನಾಗಲಿ ಸೇರಿಸಿಕೊಂಡು ಸಹ ಬಳಸುವ ಹಾಗಿಲ್ಲ ಎಂದು ರೋಸಿ 45 ಚಿತ್ರದ ನಿರ್ಮಾಪಕ ರಮೇಶ್ ರೆಡ್ಡಿ (Ramesh Reddy) ಹಾಗೂ ನಿರ್ದೇಶಕ ಅರ್ಜುನ್ ಜನ್ಯ ತಿಳಿಸಿದ್ದಾರೆ.

  • ಅರ್ಜುನ್ ಜನ್ಯ ಚೊಚ್ಚಲ ನಿರ್ದೇಶನದ ಚಿತ್ರದ ಟೈಟಲ್ ಯಾರ ಪಾಲಾಯ್ತು?

    ಅರ್ಜುನ್ ಜನ್ಯ ಚೊಚ್ಚಲ ನಿರ್ದೇಶನದ ಚಿತ್ರದ ಟೈಟಲ್ ಯಾರ ಪಾಲಾಯ್ತು?

    ಸಂಗೀತ ನಿರ್ದೇಶಕ ಅರ್ಜುನ್ ಜನ್ಯ (Arjun Janya) ಚೊಚ್ಚಲ ನಿರ್ದೇಶನದ ಸಿನಿಮಾದ ಟೈಟಲ್ (Title) ಬಗ್ಗೆ ಗೊಂದಲ ಮೂಡಿತ್ತು. ಇದೀಗ ಗೊಂದಲಕ್ಕೆ ತೆರೆ ಎಳೆದಿದೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ. ಈ ಕುರಿತು ನಿರ್ಮಾಣ ಸಂಸ್ಥೆಗೆ ಅಧಿಕೃತ ಪತ್ರವೊಂದನ್ನು ನೀಡಿದೆ.

    ಸೂರಜ್ ಪ್ರೊಡಕ್ಷನ್ಸ್ ಲಾಂಛನದ ಮೂಲಕ ‘ರೋಸಿ 45’ (Rosy 45) ಶೀರ್ಷಿಕೆಯನ್ನು  ನೊಂದಾಯಿಸಲಾಗಿತ್ತು. ಈಗ ಡಿ.ವೈ.ಪ್ರೊಡಕ್ಷನ್ಸ್ ಲಾಂಛನದಲ್ಲಿ ನಿರ್ಮಾಣವಾಗುತ್ತಿರುವ ಚಿತ್ರಕ್ಕೂ ‘ರೋಸಿ’ ಎಂದು ಶೀರ್ಷಿಕೆ ಇಡಲಾಗಿತ್ತು. ಈ ವಿಷಯವನ್ನು ಕರ್ನಾಟಕ ವಾಣಿಜ್ಯ ಮಂಡಳಿ ಗಮನಕ್ಕೆ ತರಲಾಗಿತ್ತು.  ಇದನ್ನೂ ಓದಿ:ಸಲ್ಮಾನ್ ಖಾನ್ ನಂಬರ್ ಬ್ಲಾಕ್ ಮಾಡಿದ್ದರಂತೆ ಸಿದ್ಧಾರ್ಥ್ ಶುಕ್ಲಾ ಪ್ರೇಯಸಿ!

    ಕರ್ನಾಟಕ ಚಲನಚಿತ್ರ ವಾಣಿಜ್ಯ ‌ಮಂಡಳಿಯಲ್ಲಿ ಮೊದಲು ಶೀರ್ಷಿಕೆ ನೊಂದಾಯಿಸಿದವರು ಮಾತ್ರ ಶೀರ್ಷಿಕೆ ಬಳಸಿಕೊಳ್ಳಬಹುದು ಎಂದು ವಾಣಿಜ್ಯ ಮಂಡಳಿ ಹೇಳಿದೆ. ಹಾಗಾಗಿ ಸೂರಜ್ ಪ್ರೊಡಕ್ಷನ್ಸ್ ಗೆ ರೋಸಿ 45(Rosy 45) ಶೀರ್ಷಿಕೆ ಸೇರಿದೆ.

    ಇನ್ನು‌ ಮುಂದೆ ಯಾರು ಕೂಡ ‘ರೋಸಿ’ ಶೀರ್ಷಿಕೆ ಬಳಸುವ ಹಾಗಿಲ್ಲ ಹಾಗೂ ಶೀರ್ಷಿಕೆ ಪಕ್ಕದಲ್ಲಿ ಬೇರೆ ಪದ ಹಾಗೂ ನಂಬರ್ ಗಳನ್ನಾಗಲಿ ಸೇರಿಸಿಕೊಂಡು ಸಹ ಬಳಸುವ ಹಾಗಿಲ್ಲ ಎಂದು ರೋಸಿ 45 ಚಿತ್ರದ ನಿರ್ಮಾಪಕ ರಮೇಶ್ ರೆಡ್ಡಿ (Ramesh Reddy) ಹಾಗೂ ನಿರ್ದೇಶಕ ಅರ್ಜುನ್ ಜನ್ಯ ತಿಳಿಸಿದ್ದಾರೆ.

  • ಟೈಟಲ್ ವಿವಾದ : ನಟಿ ರಮ್ಯಾ ಪರವಾಗಿ ಕೋರ್ಟ್ ತೀರ್ಪು

    ಟೈಟಲ್ ವಿವಾದ : ನಟಿ ರಮ್ಯಾ ಪರವಾಗಿ ಕೋರ್ಟ್ ತೀರ್ಪು

    ಸ್ವಾತಿ ಮುತ್ತಿನ ಮಳೆ ಹನಿಯೇ (Swati Muthina Male Haniye) ಸಿನಿಮಾದ ಟೈಟಲ್ (Title) ತಮ್ಮದೆಂದು ಹಿರಿಯ ನಿರ್ದೇಶಕ ರಾಜೇಂದ್ರ ಸಿಂಗ್ (Rajendra Singh Babu) ಬಾಬು ಸಿಟಿ ಸಿವಿಲ್ ಕೋರ್ಟ್ (Cour) ಗೆ ಅರ್ಜಿ ಸಲ್ಲಿಸಿದ್ದರು. ತಾವು ಇದೇ ಹೆಸರಿನ ಟೈಟಲ್ ನಲ್ಲಿ ಸಿನಿಮಾ ಮಾಡುತ್ತಿರುವ ಮತ್ತು ಈ ಶೀರ್ಷಿಕೆಯನ್ನು ಬೇರೆಯೊಬ್ಬರು ಬಳಸುತ್ತಿದ್ದು, ಅದನ್ನು ತಡೆಯಬೇಕು ಎಂದು ಅವರು ಮನವಿ ಮಾಡಿಕೊಂಡಿದ್ದರು. ಆ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ಸಿಟಿ ಸಿವಿಲ್ ಕೋರ್ಟ್ ಆದೇಶ ನೀಡಿದ್ದು, ರಾಜೇಂದ್ರ ಸಿಂಗ್ ಬಾಬು ಸಲ್ಲಿಸಿದ್ದ ಅರ್ಜಿಯನ್ನು ವಜಾ ಮಾಡಿದೆ.

    ಏನಿದು ವಿವಾದ?
    ನಟಿ ರಮ್ಯಾ (Ramya) ಬ್ಯಾನರ್ ನಲ್ಲಿ ಮೂಡಿ ಬರುತ್ತಿರುವ ‘ಸ್ವಾತಿ ಮುತ್ತಿನ ಮಳೆ ಹನಿಯೇ’ ಸಿನಿಮಾದ ಟೈಟಲ್ ವಿವಾದಕ್ಕೆ ಗುರಿಯಾಗಿತ್ತು. ಈ ಟೈಟಲ್ ತಮ್ಮದೆಂದು, ಅದನ್ನು ಯಾರಿಗೂ ಕೊಡಬಾರದು ಎಂದು ಹಿರಿಯ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ತಮ್ಮ ಲಾಯರ್ ಮೂಲಕ ಪತ್ರವೊಂದನ್ನು ಕಳುಹಿಸಿದ್ದರು. ಅಲ್ಲದೇ, ತಾವು ಅದೇ ಹೆಸರಿನಲ್ಲಿ ಸಿನಿಮಾ ಮಾಡುತ್ತಿರುವುದಾಗಿ, ಅದು ಅರ್ಧಕ್ಕೆ ನಿಂತಿದೆ ಎಂದು ತಿಳಿಸಿದ್ದರು. ನಂತರ ಕೋರ್ಟ್ ಮೆಟ್ಟಿಲು ಕೂಡ ಏರಿದ್ದರು.

     

    ವಾಣಿಜ್ಯ ಮಂಡಳಿಗೆ ಪತ್ರ ಬರೆದ ಬೆನ್ನಲ್ಲೇ ಆ ಟೈಟಲ್ ಬಗ್ಗೆ ಪರಿಶೀಲಿಸಿದಾಗ ಅಸಲಿಯಾಗಿ ಅದು ರಾಜೇಂದ್ರ ಸಿಂಗ್ ಬಾಬು ಅವರ ಹೆಸರಿನಲ್ಲಿ ಇರಲಿಲ್ಲ ಎನ್ನುವುದು ಗೊತ್ತಾಗಿತ್ತು. ಧ್ರುವ ಸರ್ಜಾ ನಟನೆಯ ಪೊಗರು ಸಿನಿಮಾ ಮಾಡುತ್ತಿರುವ ಬಿ.ಕೆ.ಗಂಗಾಧರ್ ಅವರು ಈ ಟೈಟಲ್ ಅನ್ನು ವಾಣಿಜ್ಯ ಮಂಡಳಿಯಲ್ಲಿ ನೋಂದಾಯಿಸಿದ್ದಾರೆ. ಅಲ್ಲದೇ, ರಮ್ಯಾ ಸಿನಿಮಾ ಮಾಡುತ್ತೇನೆ ಎಂದಾಗ, ಅವರಿಗೆ ಆ ಟೈಟಲ್ ಅನ್ನು ವರ್ಗಾಯಿಸಿದ್ದಾರೆ ಎಂದು ಸ್ವತಃ ವಾಣಿಜ್ಯ ಮಂಡಳಿಯ  ಅಧ್ಯಕ್ಷರೇ ತಿಳಿಸಿದ್ದರು.

    ಬಿ.ಕೆ.ಗಂಗಾಧರ್ ಅವರು ರಮ್ಯಾ ಹೆಸರಿಗೆ ಆ ಟೈಟಲ್ ಅನ್ನು ವರ್ಗಾಯಿಸಿರುವುದರಿಂದ, ರಮ್ಯಾ ಅವರು ವಾಣಿಜ್ಯ ಮಂಡಳಿಗೆ ಪತ್ರ ಬರೆಯಬೇಕಿದೆ. ಗಂಗಾಧರ  ಅವರು ನೀಡಿರುವ ಎನ್.ಓ.ಸಿ ಪತ್ರವನ್ನು ವಾಣಿಜ್ಯ ಮಂಡಳಿಗೆ ನೀಡಿದ ತಕ್ಷಣವೇ ಅದನ್ನು ರಮ್ಯಾ ಅವರ ನಿರ್ಮಾಣ ಸಂಸ್ಥೆಗೆ ವರ್ಗಾಯಿಸಲಾಗುವುದು ಎಂದು ಮಂಡಳಿಯ ಅಧ್ಯಕ್ಷರು ಮಾಧ್ಯಮಗಳಿಗೆ ತಿಳಿಸಿದ್ದರು.

    ರಾಜೇಂದ್ರ ಸಿಂಗ್ ಬಾಬು ವಾಣಿಜ್ಯ ಮಂಡಳಿಗೆ ಬರೆದ ಪತ್ರದಲ್ಲಿ ‘ನನ್ನ ಕಕ್ಷಿದಾರರು ನಿರ್ಮಿಸುವ ಮೇಲ್ಕಂಡ ಸ್ವಾತಿ ಮುತ್ತಿನ ಮಳೆ ಹನಿಯೆ’ ಹೆಸರಿನ ಚಿತ್ರದ ತಾರಾಗಣದಲ್ಲಿ ಅಂಬರೀಶ್, ಸುಹಾಸಿನಿ ಮತ್ತು ಇತರ ಕಲಾವಿದರು ನಟಿಸಿದ್ದು. ಶೇಕಡಾ 80ರಷ್ಟು ಚಿತ್ರೀಕರಣ ಕೂಡ ಮುಗಿದಿದೆ. ಮೇಲ್ಕಂಡ ಚಿತ್ರದ ನಾಯಕ ನಟ ಅಂಬರೀಶ್ ನಿಧನ ಹೊಂದಿ ನಂತರ ಚಿತ್ರದ ಚಿತ್ರೀಕರಣವು ಕಾರಣಾಂತರಗಳಿಂದ ನಿಂತಿದೆ. ನನ್ನ ಕಕ್ಷಿದಾರರು ಹೇಳುವ ಹಾಗೆ ಮೇಲ್ಕಂಡ ಚಿತ್ರ ಶೀರ್ಷಿಕೆ ಅವರೇ ನಿರ್ದೇಶಿಸಿರುವ ಬಣ್ಣದ ಗೆಜ್ಜೆ ಚಿತ್ರದ ಹಾಡಿನ ಶೀರ್ಷಿಕೆಯಾಗಿರುತ್ತದೆ’ ಎಂದು ಸಿಂಗ್ ಬಾಬು ಪರ ವಕೀಲ ಎಸ್.ಆರ್. ಶ್ರೀನಿವಾಸ್ ಮೂರ್ತಿ ಕೂಡ ಪತ್ರ ಬರೆದಿದ್ದರು.

    ಅಲ್ಲದೇ, ತಾವು ನಿರ್ಮಾಣ ಮಾಡುವ ಚಿತ್ರಕ್ಕೆ ಮೇಲ್ಕಂಡ ಶೀರ್ಷಿಕೆಯನ್ನು ಅಂದರೆ ಸ್ವಾತಿ ಮುತ್ತಿನ ಮಳೆ ಹನಿಯೇ ಶಿರ್ಷಿಕೆಯನ್ನಾಗಲಿ, ಹಾಡನ್ನಾಗಲು ಯಾವುದೇ ರೀತಿ ಉಪಯೋಗಿಸಲು ಅಥವಾ ನೋಂದಾಯಿಸಲು ನನ್ನ ಕಕ್ಷಿದಾರರ ವಿನಃ ಯಾರಿಗೂ ಯಾವುದೇ ವಿಧವಾದ ಹಕ್ಕು ಇರುವುದಿಲ್ಲ. ಒಂದು ವೇಳೆ ನಾನು ನೀಡಿರುವ ಈ ವಕೀಲರ ನೋಟಿಸಿನ ನಂತರವೂ ನೀವು ಬೇರೆ ನಿರ್ಮಾಪಕರಿಗೆ ಈ ಚಿತ್ರದ ಶೀರ್ಷಿಕೆಯನ್ನು ನೋಂದಾವಣೆ ಮಾಡಿಕೊಡಲು ಮತ್ತು ಚಿತ್ರ ನಿರ್ಮಾಣ ಮಾಡಲು ಅವಕಾಶ ಕೊಟ್ಟಿದ್ದೆ ಆದರೆ, ನನ್ನ ಕಕ್ಷಿದಾರರು ನೊಂದಾಣಿಕೆ ಮಾಡಿರುವ ಶೀರ್ಷಿಕೆಯ ಕೃತಿ ಚೌರ್ಯವಾಗುತ್ತದೆ ಎಂದು ಪತ್ರದಲ್ಲಿ ತಿಳಿಸಿದ್ದರು.

  • Special- ಕರ್ನಾಟಕದಲ್ಲಿ 4 ಫಿಲ್ಮ್ ಚೇಂಬರ್ : ‘ಹೊಯ್ಸಳ’ ಚಿತ್ರಕ್ಕೆ ತಂದಿಟ್ಟ ಸಂಕಷ್ಟ

    Special- ಕರ್ನಾಟಕದಲ್ಲಿ 4 ಫಿಲ್ಮ್ ಚೇಂಬರ್ : ‘ಹೊಯ್ಸಳ’ ಚಿತ್ರಕ್ಕೆ ತಂದಿಟ್ಟ ಸಂಕಷ್ಟ

    ನ್ನಡ ಸಿನಿಮಾ ರಂಗವನ್ನು ಮದ್ರಾಸ್ ಬಂಧನದಿಂದ ಬಿಡಿಸಿಕೊಂಡು, ಸ್ವತಂತ್ರವಾಗಿ ಚಿತ್ರೋದ್ಯಮ ಕಟ್ಟುವಲ್ಲಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ (Film Chamber) ಪಾತ್ರ ದೊಡ್ಡದಿದೆ. ಕನ್ನಡ ಚಿತ್ರೋದ್ಯಮ ಕಟ್ಟಿದ ಮಹಾನ್ ವ್ಯಕ್ತಿಗಳು ವಾಣಿಜ್ಯ ಮಂಡಳಿಯ ಆಡಳಿತ ಚುಕ್ಕಾಣೆ ಹಿಡಿದು ಚಿತ್ರೋದ್ಯಮವನ್ನು ಸರಿದಾರಿಗೆ ತರುವಲ್ಲಿ ಶ್ರಮಿಸಿದ್ದಾರೆ. ಆದರೆ, ಕಳೆದ ಕೆಲವು ವರ್ಷಗಳಿಂದ ದಿಕ್ಕು ತಪ್ಪಿದ ಹಡಗಿನಂತಾಗಿದೆ ವಾಣಿಜ್ಯ ಮಂಡಳಿ. ಪರಿಣಾಮ ಕರ್ನಾಟಕದಲ್ಲೇ ನಾಲ್ಕು ಚಲನಚಿತ್ರ ವಾಣಿಜ್ಯ ಮಂಡಳಿಗಳು ಹುಟ್ಟಿಕೊಂಡಿವೆ. ಇದರಿಂದಾಗಿ ನಿರ್ಮಾಪಕರು ಸಂಕಷ್ಟಕ್ಕೆ ಸಿಲುಕುವಂತಾಗಿದೆ.

    ಶಿವಾನಂದ ಸರ್ಕಲ್ ಬಳಿ ಇರುವ, ಚಿತ್ರೋದ್ಯಮದ ಮಾತೃಸಂಸ್ಥೆ ಎಂದೇ ಕರೆಯಲ್ಪಡುವ ಚಲನಚಿತ್ರ ವಾಣಿಜ್ಯ ಮಂಡಳಿಯು ಸಿನಿಮಾಗೆ ಸಂಬಂಧಿಸಿದಂತೆ ಶೀರ್ಷಿಕೆ ನೋದಂಣಿ, ನಿರ್ಮಾಣ ಸಂಸ್ಥೆಗಳಿಗೆ ಸದಸ್ಯತ್ವ ನೀಡುವುದು ಹೀಗೆ ನಾನಾ ಕೆಲಸಗಳನ್ನು ಮಾಡುತ್ತಿತ್ತು. ಆಗ ಸಿನಿಮಾ ತಂಡಗಳಿಗೆ ಟೈಟಲ್ ವಿಷಯದಲ್ಲಿ ಯಾವುದೇ ಗೊಂದಲ ಇರುತ್ತಿರಲಿಲ್ಲ. ಇದೀಗ ನಾಲ್ಕು ವಾಣಿಜ್ಯ ಮಂಡಳಿಗಳು ಇರುವುದರಿಂದ ನಾಲ್ಕೂ ಕಡೆ ಈ ಎಲ್ಲ ಪ್ರಕ್ರಿಯೆಗಳು ನಡೆಯುತ್ತಿವೆ. ಅದರಲ್ಲೂ ಟೈಟಲ್ ವಿಷಯದಲ್ಲಿ ಭಾರೀ ಗೊಂದಲ ಶುರುವಾಗಿದೆ. ಇದನ್ನೂ ಓದಿ:ಹಾಲಿವುಡ್ ಎಂಟ್ರಿ ಬಗ್ಗೆ ಶಾರುಖ್‌ಗೆ ತಿರುಗೇಟು ಕೊಟ್ಟ ಪ್ರಿಯಾಂಕಾ ಚೋಪ್ರಾ

    ಈ ಹಿಂದೆ ರಮ್ಯಾ ನಿರ್ಮಾಣದ ಚಿತ್ರದ ಟೈಟಲ್ ವಿಚಾರವೂ ಹೀಗೆಯೇ ಆಗಿದ್ದು. ರಾಜೇಂದ್ರ ಸಿಂಗ್ ಬಾಬು ಅವರು ಒಂದು ಮಂಡಳಿಯಲ್ಲಿ ಟೈಟಲ್ ನೋಂದಾಯಿಸಿದ್ದರೆ ಮತ್ತೊಂದು ಮಂಡಳಿಯಲ್ಲಿ ರಮ್ಯಾ ನೋಂದಾಯಿಸಿದ್ದರು. ಈ ಪ್ರಕರಣ ಕೋರ್ಟ್ ಮೆಟ್ಟಿಲು ಏರಿದೆ. ಸದ್ಯ ಡಾಲಿ ಧನಂಜಯ್ (Dolly Dhananjay) ನಟನೆಯ ಹೊಯ್ಸಳ (Hoysala) ಚಿತ್ರಕ್ಕೂ ಇಂಥದ್ದೊಂದು ತೊಂದರೆ ಅನುಭವಿಸುವಂತಾಗಿದೆ.

    ಕೆ.ಆರ್.ಜಿ ಸ್ಟುಡಿಯೋ ಬ್ಯಾನರ್ ನಲ್ಲಿ ನಿರ್ಮಾಣವಾಗಿದ್ದ ‘ಹೊಯ್ಸಳ’ ಸಿನಿಮಾ ಟೀಮ್, ಅದೇ ಹೆಸರಿನಲ್ಲಿ ಭಾರೀ ಪ್ರಚಾರ ಮಾಡಿತ್ತು. ಕೊನೆಗೆ ಸೆನ್ಸಾರ್ (Censor) ಸಮಯದಲ್ಲಿ ಇದೇ ಹೆಸರಿನ ಸಿನಿಮಾ ಈಗಾಗಲೇ ಸೆನ್ಸಾರ್ ಆಗಿರುವ ವಿಚಾರ ಗಮನಕ್ಕೆ ಬಂತು. ಈಗ ಆ ಸಿನಿಮಾದ ಟೈಟಲ್ ಅನ್ನು ಗುರುದೇವ ಹೊಯ್ಸಳ ಎಂದು ಮರುನಾಮಕರಣ ಮಾಡಲಾಗಿದೆ. ಈ ವೇಳೆ ಚಿತ್ರತಂಡ ಹಲವು ರೀತಿಯ ತೊಂದರೆಗಳನ್ನು ಎದುರಿಸಿದೆ.

  • Exclusive Details- ಯುವರಾಜ್ ಸಿನಿಮಾಗೆ ಮೂರು ಟೈಟಲ್: ‘ಯುವ’ ಫಿಕ್ಸ್ ಆಗಿದ್ದು ಯಾಕೆ?

    Exclusive Details- ಯುವರಾಜ್ ಸಿನಿಮಾಗೆ ಮೂರು ಟೈಟಲ್: ‘ಯುವ’ ಫಿಕ್ಸ್ ಆಗಿದ್ದು ಯಾಕೆ?

    ಡಾ.ರಾಜ್ ಕುಟುಂಬದ ಮತ್ತೊಂದು ಕುಡಿ ನಿನ್ನೆ ಸಿನಿಮಾ ರಂಗಕ್ಕೆ ಅಧಿಕೃತ ಪ್ರವೇಶ ಮಾಡಿದೆ. ಪುನೀತ್ ರಾಜ್ ಕುಮಾರ್ (Puneeth Rajkumar) ಉತ್ತರಾಧಿಕಾರಿ ಎಂದು ಬಿಂಬಿತರಾಗಿರುವ ಯುವರಾಜ್ ಕುಮಾರ್ (Yuvaraj Kumar) ನಟನೆಯ ಚೊಚ್ಚಲು ಸಿನಿಮಾದ ಟೈಟಲ್ ಟೀಸರ್ ಬಿಡುಗಡೆ ಹಾಗೂ ಸಿನಿಮಾದ ಮುಹೂರ್ತ ಕೂಡ ನಡೆದಿದೆ. ಯುವರಾಜ್ ನಟನೆಯ ಮೊದಲ ಸಿನಿಮಾಗೆ ಶೀರ್ಷಿಕೆ ಏನಿರಬಹುದು ಎನ್ನುವ ಕುತೂಹಲ ಹಲವು ದಿನಗಳಿಂದ ಇತ್ತು. ಅದಕ್ಕೂ ತೆರೆ ಬಿದ್ದಿದೆ. ಆದರೆ, ಈ ಟೈಟಲ್ ಆಯ್ಕೆಯ ಹಿಂದೆ ಹಲವು ಲೆಕ್ಕಾಚಾರಗಳು ಇರುವುದು ಸುಳ್ಳಲ್ಲ.

    ಚಿತ್ರರಂಗಕ್ಕೆ ಯುವರಾಜ್ ಕುಮಾರ್ ಅವರನ್ನು ಲಾಂಚ್ ಮಾಡಲು ಮತ್ತು ಸಿನಿಮಾದ ಶೀರ್ಷಿಕೆ ಇಡಲು ಹಲವು ರೀತಿಯಲ್ಲಿ ಯೋಚನೆ ಮತ್ತು ಯೋಜನೆಯನ್ನು ಸಿದ್ಧ ಮಾಡಿತ್ತು ಹೊಂಬಾಳೆ ಫಿಲ್ಮ್ಸ್. ಇದರ ಭಾಗವಾಗಿ ಮೂರು ಸಿನಿಮಾ ಶೀರ್ಷಿಕೆಗಳನ್ನೂ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ನೋಂದಾಯಿಸಿತ್ತು. ಡಾ.ರಾಜ್ ನಟನೆಯ ಜ್ವಾಲಾಮುಖಿ ಮತ್ತು ಅಶ್ವಮೇಧ ಚಿತ್ರಗಳ ಶೀರ್ಷಿಕೆಯನ್ನೂ ಆಯ್ಕೆ ಮಾಡಿತ್ತು. ಆದರೆ, ಕೊನೆಯ ಬದಲಾವಣೆ ಎನ್ನುವಂತೆ ‘ಯುವ’ (Yuva) ಟೈಟಲ್ ಅನ್ನು ಅಂತಿಮಗೊಳಿಸಿದೆ. ಇದನ್ನೂ ಓದಿ: Breaking:ಸ್ಯಾಂಡಲ್‌ವುಡ್‌ನಲ್ಲಿ ಯುವ ಪರ್ವ ಆರಂಭ

    ಈಗಾಗಲೇ ಚಿತ್ರೋದ್ಯಮದಲ್ಲಿ ಯುವರಾಜ್ ಕುಮಾರ್, ‘ಯುವ’ ಹೆಸರಿನಲ್ಲಿ ಬ್ರ್ಯಾಂಡ್ ಆಗಿದ್ದಾರೆ. ಅಲ್ಲದೇ, ಪುನೀತ್ ರಾಜ್ ಕುಮಾರ್ ಮೊದಲ ಸಿನಿಮಾ ‘ಅಪ್ಪು’ (Appu) ಕೂಡ ಹೀಗೆಯೇ ಆಯ್ಕೆಯಾಗಿದ್ದು. ಈ ಎಲ್ಲವನ್ನೂ ಅಳೆದು ತೂಗಿ ಕೊನೆಗೂ ‘ಯುವ’ ಟೈಟಲ್ ಅನ್ನೇ ನಿರ್ದೇಶಕರು ಮತ್ತು ನಿರ್ಮಾಣ ಸಂಸ್ಥೆ ಅಂತಿಮಗೊಳಿಸಿದ್ದಾರೆ. ಮೊದಲ ಚಿತ್ರದಲ್ಲೇ ಪುನೀತ್ ರಾಜ್ ಕುಮಾರ್ ‘ಅಪ್ಪು’ ಆಗಿ ಫೇಮಸ್ ಆದರು. ಯುವರಾಜ್ ಕುಮಾರ್ ಕೂಡ ‘ಯುವ’ ಹೆಸರಿನಿಂದಲೇ ಮುಂದುವರೆಯಲಿ ಎನ್ನುವ ಗುರಿಯೂ ಈ ಟೈಟಲ್ ಹಿಂದಿದೆ.

    ಈಗಾಗಲೇ ಯುವ ಟೈಟಲ್ ಅನ್ನು ಎಲ್ಲರೂ ಮೆಚ್ಚಿದ್ದಾರೆ. ನಿನ್ನೆ ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡ್ ಕೂಡ ಆಗಿದೆ. ಇದು ಸೂಕ್ತ ಟೈಟಲ್ ಎನ್ನುವ ಅಭಿಪ್ರಾಯ ಕೂಡ ವ್ಯಕ್ತವಾಗಿದೆ. ಸಿನಿಮಾದ ಕಥೆಯಲ್ಲೂ ನಾಯಕನ ಪಾತ್ರ ಯುವ ಹೆಸರಿನಿಂದಲೇ ಇರುವುದು ಪಕ್ಕಾ ಆಗಿದೆ. ಸಂತೋಷ್ ಆನಂದ್ ರಾಮ್ ಹೊಸ ರೀತಿಯಲ್ಲಿ ಕಥೆ ಬರೆದುಕೊಂಡು ಯುವರಾಜ್ ಕುಮಾರ್ ಅವರನ್ನು ಲಾಂಚ್ ಮಾಡುತ್ತಿದ್ದಾರೆ. ಇದೇ ತಿಂಗಳಿನಿಂದ ಚಿತ್ರೀಕರಣ ಕೂಡ ಶುರುವಾಗಲಿದೆ.