Tag: title

  • ರಜನಿಕಾಂತ್ ನಟನೆಯ ಜೈಲರ್ ಚಿತ್ರಕ್ಕೆ ‘ಟೈಟಲ್’ ಕಂಟಕ

    ರಜನಿಕಾಂತ್ ನಟನೆಯ ಜೈಲರ್ ಚಿತ್ರಕ್ಕೆ ‘ಟೈಟಲ್’ ಕಂಟಕ

    ಮಿಳಿನ ಸೂಪರ್ ಸ್ಟಾರ್ ರಜನಿಕಾಂತ್ ಮತ್ತು ಕನ್ನಡದ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಕಾಂಬಿನೇಷನ್ ನ ಜೈಲರ್ ಸಿನಿಮಾ ಬಿಡುಗಡೆಗೆ ಸಿದ್ದತೆ ಮಾಡಿಕೊಳ್ಳುತ್ತಿದೆ. ಈ ಸಂದರ್ಭದಲ್ಲಿ ಚಿತ್ರಕ್ಕೆ ಟೈಟಲ್ (Title) ಸಂಕಷ್ಟ ಎದುರಾಗಿದೆ. ಈ ಸಿನಿಮಾ ಮೂರು ಭಾಷೆಗಳಲ್ಲಿ ಬಿಡುಗಡೆ ಆಗುತ್ತಿದೆ. ಈ ಸಂದರ್ಭದಲ್ಲಿ ಮಲಯಾಳಂ (Malayalam) ನಿರ್ದೇಶಕರೊಬ್ಬರು ಟೈಟಲ್ ವಿರುದ್ಧ ಕೋರ್ಟ್ ಮೆಟ್ಟಿಲು ಏರಿದ್ದಾರೆ.

    ಮಲಯಾಳಂನಲ್ಲಿ ಈಗಾಗಲೇ ನಿರ್ದೇಶಕ ಸಕ್ಕಿರ್ ಮಡತ್ತಿಲ್ಲ (Sakkir Madattilla) ‘ಜೈಲರ್’ ಹೆಸರಿನಲ್ಲಿ ಸಿನಿಮಾ ಮಾಡಿದ್ದಾರೆ. ಅದು ಇನ್ನಷ್ಟೇ ಬಿಡುಗಡೆ ಆಗಬೇಕಿದೆ. ಮಲಯಾಳಂನಲ್ಲಿ ರಜನಿ ಜೈಲರ್ ಸಿನಿಮಾ ಕೂಡ ಬಿಡುಗಡೆ ಆಗುತ್ತಿರುವುದರಿಂದ, ಮಲಯಾಳಂನಲ್ಲಿ ಟೈಟಲ್ ಬದಲಾಯಿಸಿ ರಿಲೀಸ್ ಮಾಡುವಂತೆ ಅವರು ಮನವಿ ಮಾಡಿಕೊಂಡಿದ್ದರು. ಆದರೆ, ಅದು ಆಗುವುದಿಲ್ಲ ಎಂದು ಸನ್ ಪಿಕ್ಚರ್ ನಿರ್ಮಾಣ ಸಂಸ್ಥೆ ಉತ್ತರ ಬರದಿತ್ತು.

    ಈಗ ಸಕ್ಕಿರ್ ಮಡತ್ತಿಲ್ಲ ತಮಿಳಿನ ಜೈಲರ್ ಸಿನಿಮಾದ ವಿರುದ್ಧ ಕೋರ್ಟ್ ಮೆಟ್ಟಿಲು ಏರಿದ್ದಾರೆ. ಮೊದಲು ಜೈಲರ್ ಹೆಸರಿನಲ್ಲಿ ತಾವು ಸಿನಿಮಾ ಮಾಡಿದ್ದರಿಂದ ಮತ್ತು ಮಲಯಾಳಂನಲ್ಲಿ ತಮಗೆ ರಜನಿ ಸಿನಿಮಾದಿಂದ ತೊಂದರೆ ಆಗುವುದರಿಂದ, ಟೈಟಲ್ ಬದಲಾಯಿಸುವಂತೆ ಅವರು ಕೋರ್ಟ್ ಗೆ ಮೊರೆ ಹೋಗಿದ್ದಾರೆ.

    ಮೂರು ಭಾಷೆಗಳಲ್ಲಿ ಜೈಲರ್

    ಸೂಪರ್‌ಸ್ಟಾರ್ ರಜನಿಕಾಂತ್ (Rajinikanth) ನಟನೆಯ ‘ಜೈಲರ್’ (Jailer) ಈ ವರ್ಷದ ಬಹುನಿರೀಕ್ಷಿತ ಸಿನಿಮಾಗಳಲ್ಲಿ ಒಂದು. ತಲೈವ ವೃತ್ತಿ ಬದುಕಿನ ವಿಶೇಷ ಚಿತ್ರ‌ ಇದಾಗಿದ್ದು, ದಕ್ಷಿಣ ಭಾರತ ಹಾಗೂ ಬಾಲಿವುಡ್‌ ದಿಗ್ಗಜರು‌ ಜೈಲರ್ ಸಿನಿಮಾದ ಭಾಗವಾಗಿದ್ದಾರೆ. ಸದ್ಯ ಕಾವಾಲಾಯ್ಯ ಹಾಡಿನ ಮೂಲಕ ಭಾರೀ ಸೆನ್ಸೇಷನ್ ಸೃಷ್ಟಿಸುತ್ತಿರುವ ಈ ಚಿತ್ರ ಆಗಸ್ಟ್ 10ಕ್ಕೆ ಕನ್ನಡ, ತಮಿಳು ಹಾಗೂ ತೆಲುಗು ಭಾಷೆಯಲ್ಲಿ ಬೆಳ್ಳಿತೆರೆಗೆ ಎಂಟ್ರಿ ಕೊಡುತ್ತಿದೆ.

    ಸನ್ ಪಿಕ್ಚರ್ ನಿರ್ಮಾಣ ಮಾಡಿರುವ ಈ ಸಿನಿಮಾವನ್ನು ನೆಲ್ಸನ್ ದಿಲೀಪ್ ಕುಮಾರ್ (Nelson Dilip Kumar) ನಿರ್ದೇಶಿಸಿದ್ದಾರೆ. ಇದೇ ಮೊದಲ ಬಾರಿಗೆ ರಜನಿಕಾಂತ್ ಜೊತೆ ಶಿವರಾಜ್‌ಕುಮಾರ್ (Shivaraj Kumar) ವಿಶೇಷ ಪಾತ್ರದಲ್ಲಿ ನಟಿಸಿರೋದು ಕುತೂಹಲ ಕೆರಳಿಸಿದೆ. ಇನ್ನು ಬಾಲಿವುಡ್‌ ನಟ ಜಾಕಿ ಶ್ರಾಫ್, ಮಲಯಾಳಂ ಸೂಪರ್‌ಸ್ಟಾರ್ ಮೋಹನ್‌ಲಾಲ್ (Mohanlal), ಟಾಲಿವುಡ್ ನಟ ಸುನಿಲ್, ನಾಗಬಾಬು, ನಟಿ ರಮ್ಯಾ ಕೃಷ್ಣ, ತಮನ್ನಾ ಭಾಟಿಯಾ ನಟಿಸಿದ್ದು, ಸಿನಿಪ್ರಿಯರಿಗೆ ಇವರೆಲ್ಲರನ್ನೂ ಒಂದೇ ಸಿನಿಮಾದಲ್ಲಿ ನೋಡುವ ಭಾಗ್ಯ ಸಿಗಲಿದೆ. ಇದನ್ನೂ ಓದಿ:ಹಾಟ್ ಆಗಿ ಕಾಣಿಸಿಕೊಂಡ ‘ಕಾಂಚನ 3’ ನಟಿ ನಿಕ್ಕಿ

    ಅಣ್ಣಾತ್ತೆ ಬಳಿಕ ರಜನಿ ನಟಿಸಿರುವ 169ನೇ ಸಿನಿಮಾ ಜೈಲರ್. ತಲೈವ ಹೊಸ ಸಿನಿಮಾ ಎಂಟ್ರಿಗೆ ಕಾದು‌ ಕುಳಿತಿರುವ ಅಭಿಮಾನಿಗಳು ಹಬ್ಬ ಮಾಡಲು ಸಜ್ಜಾಗಿದ್ದಾರೆ. ರಾಕ್ ಸ್ಟಾರ್ ಅನಿರುದ್ಧ್ ರವಿಚಂದರ್ ಸಂಗೀತ‌ ನಿರ್ದೇಶನದ ಜೈಲರ್ ಸಿನಿಮಾವನ್ನೂ ಚೆನ್ನೈ, ಮಂಗಳೂರು, ಹೈದರಾಬಾದ್, ಕೇರಳ ಸೇರಿದಂತೆ ಹಲವೆಡೆ ಶೂಟಿಂಗ್ ನಡೆಸಲಾಗಿದೆ. ಸ್ಯಾಂಪಲ್ಸ್ ಮೂಲಕ ಭಾರಿ ಕ್ರೇಜ್ ಹೆಚ್ಚಿಸಿರುವ ರಜನಿಕಾಂತ್ ಸಿನಿಮಾ ಆಗಸ್ಟ್ 10ಕ್ಕೆ ಥಿಯೇಟರ್ ಗೆ ಎಂಟ್ರಿ ಕೊಡಲಿದೆ.

     

    ಒಟ್ಟು ಮೂರು ಭಾಷೆಗಳಲ್ಲಿ ಏಕಕಾಲಕ್ಕೆ ಈ ಸಿನಿಮಾ ರಿಲೀಸ್ ಆಗುತ್ತಿದ್ದು, ಮೂರು ಭಾಷೆಯ ಕಲಾವಿದರು ಚಿತ್ರದಲ್ಲಿದ್ದಾರೆ. ಇದೇ ಮೊದಲ ಬಾರಿಗೆ ಕನ್ನಡದ ಶಿವರಾಜ್ ಕುಮಾರ್, ತಮಿಳಿನ ಸೂಪರ್ ಸ್ಟಾರ್ ಜೊತೆ ತೆರೆ ಹಂಚಿಕೊಂಡಿರುವುದು ಸಹಜವಾಗಿಯೇ ಅವರ ಅಭಿಮಾನಿಗಳಿಗೆ ಸಂಭ್ರಮ ತಂದಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ನಾನಿ 30ನೇ ಸಿನಿಮಾಗೆ ಟೈಟಲ್ ಫಿಕ್ಸ್: ಮೃಣಾಲ್ ನಾಯಕಿ

    ನಾನಿ 30ನೇ ಸಿನಿಮಾಗೆ ಟೈಟಲ್ ಫಿಕ್ಸ್: ಮೃಣಾಲ್ ನಾಯಕಿ

    ಸರಾ ಸಿನಿಮಾ ಮೂಲಕ ಬ್ಲಾಕ್ ಬಸ್ಟರ್ ಹಿಟ್ ಬಳಿಕ ನ್ಯಾಚುರಲ್ ಸ್ಟಾರ್ ನಾನಿ ನಟಿಸುತ್ತಿರುವ 30ನೇ ಸಿನಿಮಾಗೆ ಟೈಟಲ್ ಫಿಕ್ಸ್ ಮಾಡಲಾಗಿದೆ. ಸಣ್ಣದೊಂದು ಝಲಕ್ ಮೂಲಕ ಚಿತ್ರತಂಡ ಶೀರ್ಷಿಕೆಯನ್ನು ಘೋಷಿಸಿದೆ. ನಾನಿ 30 ಚಿತ್ರಕ್ಕೆ ‘ಹಾಯ್ ನಾನ್ನ’ ಎಂಬ ಶೀರ್ಷಿಕೆಯನ್ನು ಇಡಲಾಗಿದೆ.

    ಹಾಯ್ ನಾನ್ನ ಎಂಬ ತೆಲುಗು ಸಾಲಿನ ಅರ್ಥ ‘ಹಾಯ್ ಅಪ್ಪ’ ಎಂಬುದಾಗಿದೆ. ಸೌತ್ ಭಾಷೆಯಲ್ಲಿ ಒಂದೇ ಟೈಟಲ್ ಇರಲಿ ಎಂಬ ಉದ್ದೇಶದಿಂದ ಚಿತ್ರತಂಡ ಕನ್ನಡ, ತಮಿಳು, ಮಲಯಾಳಂ ಭಾಷೆಯಲ್ಲಿಯೂ ಹಾಯ್ ನಾನ್ನ ಎಂದೇ ಶೀರ್ಷಿಕೆ ಫಿಕ್ಸ್ ಮಾಡಿದೆ. ಇದನ್ನೂ ಓದಿ:ಗಂಡು ಮಗುವಿಗೆ ಜನ್ಮ ನೀಡಿದ ರಾಧಿಕಾ ರಾವ್

    ಮೆಗಾಸ್ಟಾರ್ ಚಿರಂಜೀವಿ ಆಶೀರ್ವಾದೊಂದಿಗೆ ಕಿಕ್ ಸ್ಟಾರ್ಟ್ ಸಿಕ್ಕಿರುವ ನಾನಿ 30ನೇ ಸಿನಿಮಾವನ್ನು, ಶೌರ್ಯುವ್ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ನಿರ್ದೇಶಕನಾಗಿ ಇದು ಇವರ ಮೊದಲ ಸಿನಿಮಾವಾಗಿದೆ. ಎಮೋಶನಲ್ ಫ್ಯಾಮಿಲಿ ಎಂಟರ್ ಟೇನ್ಮೆಂಟ್ ಸಬ್ಜೆಕ್ಟ್ ಒಳಗೊಂಡ ಈ ಚಿತ್ರ ಅಪ್ಪ-ಮಗಳ ಬಾಂದವ್ಯದ ಸುತ್ತ ಹೆಣೆಯಲಾದ ವಿಭಿನ್ನ ಕಥಾಹಂದರ ಒಳಗೊಂಡಿದೆ. ನಾನಿ ಜೋಡಿಯಾಗಿ ‘ಸೀತಾ ರಾಮಂ’ ಖ್ಯಾತಿಯ ಮೃಣಾಲ್ ಠಾಕೂರ್ ತೆರೆ ಹಂಚಿಕೊಳ್ಳುತ್ತಿದ್ದಾರೆ.

    ವೈರ ಎಂಟಟೈನ್ಮೆಂಟ್ಸ್ ಬ್ಯಾನರ್ ನಡಿ ಮೋಹನ್ ಚೆರುಕುರಿ, ಡಾ.ವಿಜೇಂದ್ರ ರೆಡ್ಡಿ ಹಾಗೂ ಮೂರ್ತಿ ಕಲಗಾರ ಚಿತ್ರಕ್ಕೆ ಬಂಡವಾಳ ಹೂಡುತ್ತಿದ್ದಾರೆ. ಸಾನು ಜಾನ್ ವರ್ಗೀಸ್ ISC ಕ್ಯಾಮೆರಾ ವರ್ಕ್ ಚಿತ್ರಕ್ಕಿರಲಿದ್ದು, ‘ಹೃದಯಂ’ ಸಿನಿಮಾ ಖ್ಯಾತಿಯ ಹೇಶಮ್ ಅಬ್ದುಲ್ ವಹಾಬ್ ಸಂಗೀತ ನಿರ್ದೇಶನ, ಪ್ರವೀಣ್ ಆಂಥೋನಿ ಸಂಕಲನ ಚಿತ್ರಕ್ಕಿರಲಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ‘ಗಿಣಿರಾಮ’ ಹೀರೋ ಸಿನಿಮಾಗೆ ‘ಉತ್ಸವ’ ಟೈಟಲ್ ಫಿಕ್ಸ್

    ‘ಗಿಣಿರಾಮ’ ಹೀರೋ ಸಿನಿಮಾಗೆ ‘ಉತ್ಸವ’ ಟೈಟಲ್ ಫಿಕ್ಸ್

    ನ್ನಡ ಚಿತ್ರರಂಗದಲ್ಲಿ ಹೊಸಬರ ಆಗಮನದಿಂದ ಹೊಸತನವೆದ್ದಿದೆ. ಭಿನ್ನ-ವಿಭಿನ್ನ ಹಾಗೂ  ಪ್ರಯೋಗಾತ್ಮಕ ಕಥೆಗಳಿಂದ ಚಿತ್ರರಂಗಕ್ಕೆ ಹೊಸ ಮೆರಗು ಸಿಗುತ್ತಿದೆ. ಅಂಥದ್ದೇ‌ ಆವೇಗದಲ್ಲಿ ರೂಪಗೊಂಡಿರುವ ಹೊಸಬರ ಸಿನಿಮಾಗೆ ‘ಉತ್ಸವ’ (Utsav) ಎಂಬ ಟೈಟಲ್ (Title) ಇಡಲಾಗಿದೆ. ಈ ಚಿತ್ರದ ಮೂಲಕ ಯುವ ನಿರ್ದೇಶಕರ ಆಗಮನವಾಗುತ್ತಿದೆ.

    ನಾಗೇಂದ್ರ ಅರಸ್ ಸೇರಿದಂತೆ ಹಲವು ನಿರ್ದೇಶಕ ಗರಡಿಯಲ್ಲಿ ಸಹಾಯಕ ಹಾಗೂ ಸಹ ನಿರ್ದೇಶಕರಾಗಿ ಕೆಲಸ ಮಾಡಿರುವ ಅರುಣ್ ಸೂರ್ಯ (Arun Surya) ನಿರ್ದೇಶಕರಾಗಿ ಮೊದಲ ಹೆಜ್ಜೆ ಇಟ್ಟಿದ್ದಾರೆ. ಸದ್ದಿಲ್ಲದೆ ಶೂಟಿಂಗ್ ಮುಗಿಸಿರುವ ಉತ್ಸವ ಸಿನಿಮಾದಲ್ಲಿ ಗಿಣಿರಾಮ ಸೀರಿಯಲ್ ಖ್ಯಾತಿಯ ರಿತ್ವಿಕ್ ಮಠದ್ (Ritwik Mathad) ನಾಯಕನಾಗಿ ನಟಿಸಿದ್ದು, ಈ ಹಿಂದೆ ಆ ಎರಡು ವರ್ಷಗಳು, ಗಿಫ್ಟ್ ಬಾಕ್ಸ್ ಚಿತ್ರದಲ್ಲಿ ನಟಿಸಿದ್ದ ಇವರಿಗೆ ಇದು ಮೂರನೇ ಸಿನಿಮಾವಾಗಿದೆ. ಇದನ್ನೂ ಓದಿ:ಜುಲೈ 12ಕ್ಕೆ ಸೆಂಚುರಿ ಸ್ಟಾರ್ ಬರ್ತ್‌ಡೇಗೆ ಸಿದ್ಧತೆ ಹೇಗಿದೆ ಗೊತ್ತಾ?

    ಫೇಸ್ಟು ಪೇಸ್ ಸಿನಿಮಾ ಖ್ಯಾತಿಯ ಪೂರ್ವಿ ಜೋಷಿ (Purvi Joshi) ನಾಯಕಿಯಾಗಿ ಬಣ್ಣ ಹಚ್ಚಿದ್ದಾರೆ. ಉಳಿದಂತೆ ನಾಗೇಂದ್ರ ಅರಸ್, ಪ್ರಕಾಶ್ ತುಮ್ಮಿನಾಡ್ ತಾರಾಬಳಗದಲ್ಲಿದ್ದಾರೆ. ಪ್ರೇಮಕಥಾ ಹಂದರ ಹೊಂದಿರುವ ಉತ್ಸವ ಸಿನಿಮಾವನ್ನು ಅರಸ ಪ್ರೊಡಕ್ಷನ್ ನಡಿ ಉಷಾ ಶ್ರೀನಿವಾಸ ನಿರ್ಮಾಣ ಮಾಡಿದ್ದಾರೆ.

    ಜಯಂತ್ ಕಾಯ್ಕಿಣಿ ಹಾಡುಗಳಿಗೆ ಎಮಿನಲ್ ಮಹಮ್ಮದ್ ಸಂಗೀತ ಒದಗಿಸಿದ್ದು, ಜಾವೀದ್ ಆಲಿ ಹಾಗೂ ಅಕಿಂತಾ ಕುಂಡು ಧ್ವನಿಯಾಗಿದ್ದಾರೆ. ಶಿವರಾಜ್ ಮೆಹೋ ಸಂಕಲನ, ಗೌತಮ್ ಮನು ಛಾಯಾಗ್ರಹಣ ಚಿತ್ರಕ್ಕಿದೆ. ಮನಾಲಿ ಹಾಗೂ ಗೋವಾದಲ್ಲಿ ಉತ್ಸವ ಶೂಟಿಂಗ್ ನಡೆಸಲಾಗಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ’ಸ್ಕಂದ’ನಾದ ಉಸ್ತಾದ್ ರಾಮ್ ಪೋತಿನೇನಿ

    ’ಸ್ಕಂದ’ನಾದ ಉಸ್ತಾದ್ ರಾಮ್ ಪೋತಿನೇನಿ

    ಸ್ತಾದ್ ರಾಮ್ ಪೋತಿನೇನಿ (Ustad Ram Pothineni) ಹಾಗೂ ಬೋಯಾಪಾಟಿ ಶ್ರೀನು (Boyapati Srinu) ಕಾಂಬಿನೇಷನ್ ನ  ಬಹುನಿರೀಕ್ಷಿತ ಪ್ಯಾನ್ ಇಂಡಿಯಾ ಸಿನಿಮಾಗೆ ಟೈಟಲ್ ಫಿಕ್ಸ್ ಆಗಿದೆ. ಈ ಚಿತ್ರಕ್ಕೆ ‘ಸ್ಕಂದ’  (Skanda) ಎಂದು ಹೆಸರಿಡಲಾಗಿದೆ. ಸ್ಕಂದನಾಗಿ ರಾಮ್ ಗ್ರ್ಯಾಂಡ್ ಎಂಟ್ರಿ ಕೊಟ್ಟಿದ್ದಾರೆ. ಸಣ್ಣ ಗ್ಲಿಂಪ್ಸ್ ಮೂಲಕ ಚಿತ್ರತಂಡ ಪವರ್ ಫುಲ್ ಟೈಟಲ್ (Title) ರಿವೀಲ್ ಮಾಡಿದೆ.

    ಕಾರ್ತಿಕೇಯ ಹಾಗೂ ಸುಬ್ರಹ್ಮಣ್ಯ ಸ್ವಾಮಿಯ ಇನ್ನೊಂದು ಹೆಸರೇ ಸ್ಕಂದ. ಪಂಚಿಂಗ್ ಡೈಲಾಗ್ ಮೂಲಕ ಮಾಸ್ ಅವತಾರದಲ್ಲಿ ರಾಮ್ ಪೋತಿನೇನಿ ಧಗಧಗಿಸಿದ್ದಾರೆ.  ದಸರಾಗೆ ಸ್ಕಂದ ಸಿನಿಮಾ ರಿಲೀಸ್ ಮಾಡಲು ಚಿತ್ರತಂಡ ಪ್ಲಾನ್ ಹಾಕಿಕೊಂಡಿತ್ತು. ಆದರೆ ನಿಗದಿತ ಸಮಯಕ್ಕಿಂತಲೂ ಒಂದು ತಿಂಗಳು ಮುಂಚಿತವಾಗಿಯೇ ಸಿನಿಮಾ ಬಿಡುಗಡೆ ಮಾಡುವುದಾಗಿ ಘೋಷಣೆ ಮಾಡಲಾಗಿದೆ. ಇದನ್ನೂ ಓದಿ:ಕೊನೆಗೂ ತನ್ನ ಮಗುವಿನ ತಂದೆ ಬಗ್ಗೆ ಗುಟ್ಟು ರಟ್ಟು ಮಾಡಿದ ಇಲಿಯಾನಾ

    ಸೆಪ್ಟಂಬರ್ 15ರಂದು ತೆಲುಗು, ಕನ್ನಡ, ಹಿಂದಿ, ಮಲಯಾಳಂ ಹಾಗೂ ತಮಿಳು ಭಾಷೆಯಲ್ಲಿ ಸ್ಕಂದ ಸಿನಿಮಾ ವಿಶ್ವಾದ್ಯಂತ ರಿಲೀಸ್ ಆಗಲಿದೆ. ಲವರ್ ಬಾಯ್ ಆಗಿ ಮಿಂಚುತ್ತಿದ್ದ ರಾಮ್ ಪೋತಿನೇನಿ ಮೊದಲ ಬಾರಿಗೆ ಸ್ಕಂದ ಸಿನಿಮಾದಲ್ಲಿ ಮಾಸ್ ಅವತಾರದಲ್ಲಿ ನಟಿಸಿದ್ದಾರೆ. ಕನ್ನಡತಿ ಶ್ರೀಲೀಲಾ (Srileela) ರಾಮ್ ಗೆ ಜೋಡಿಯಾಗಿ ನಟಿಸಿದ್ದಾರೆ.

     

    ಸಂತೋಷ್ ಡಿಟೇಕ್ ಕ್ಯಾಮೆರಾ ವರ್ಕ್, ತಮನ್ ಎಸ್ ಎಸ್ ಮ್ಯೂಸಿಕ್ ಕಿಕ್ ಚಿತ್ರಕ್ಕಿದೆ. ಈ ಚಿತ್ರವನ್ನು ಶ್ರೀನಿವಾಸ್ ಸಿಲ್ವರ್ ಸ್ಕ್ರೀನ್ ಬ್ಯಾನರ್ ನಡಿ ಶ್ರೀನಿವಾಸ್ ಚಿತ್ತೂರಿ ನಿರ್ಮಾಣ ಮಾಡಿದ್ದಾರೆ. ಜೀ ಸ್ಟುಡಿಯೋಸ್ ಸೌತ್ ಹಾಗೂ ಪವನ್ ಕುಮಾರ್ ಅರ್ಪಿಸುತ್ತಿರುವ ಸ್ಕಂದ ಸಿನಿಮಾ ಪ್ಯಾನ್ ಇಂಡಿಯಾ ಲೆವೆಲ್ನಲ್ಲಿ ಅದ್ಧೂರಿಯಾಗಿ ನಿರ್ಮಾಣ ಮಾಡಲಾಗಿದೆ. ಮಾಸ್ ಅವತಾರ, ಪವರ್ ಫುಲ್ ಟೈಟಲ್ ಸ್ಕಂದ ಅಬ್ಬರ ಜೋರಾಗಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಗಣೇಶ್ ಹುಟ್ಟು ಹಬ್ಬಕ್ಕೆ ಹೊಸ ಸಿನಿಮಾದ ಟೈಟಲ್ ಲಾಂಚ್

    ಗಣೇಶ್ ಹುಟ್ಟು ಹಬ್ಬಕ್ಕೆ ಹೊಸ ಸಿನಿಮಾದ ಟೈಟಲ್ ಲಾಂಚ್

    ನಾಳೆ ಗೋಲ್ಡನ್ ಸ್ಟಾರ್ ಗಣೇಶ್ (Ganesh) ಅವರು ಹುಟ್ಟು ಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಹುಟ್ಟು ಹಬ್ಬಕ್ಕೆ ಮುನ್ನಾ ದಿನ ಇಂದು ಅವರ ಹೊಸ ಸಿನಿಮಾದ ಟೈಟಲ್ (Title) ಲಾಂಚ್ ಆಗಿದೆ. ದಂಡುಪಾಳ್ಯ ಖ್ಯಾತಿಯ ಶ್ರೀನಿವಾಸ್ ರಾಜು ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಈ ಚಿತ್ರಕ್ಕೆ ‘ಕೃಷ್ಣಂ ಪ್ರಣಯ ಸಖಿ’ (Krishnam Pranaya Sakhi) ಎಂದು ಹೆಸರಿಡಲಾಗಿದೆ.

    ಗಣೇಶ್ ನಾಯಕರಾಗಿ ನಟಿಸುತ್ತಿರುವ 41 ನೇ ಚಿತ್ರ ಇದಾಗಿದ್ದು, ಕನ್ನಡದ ಹಲವು ಜನಪ್ರಿಯ ಚಿತ್ರಗಳನ್ನು ನಿರ್ದೇಶಿಸಿರುವ ಶ್ರೀನಿವಾಸರಾಜು (Srinivas Raju) ಇದೇ ಮೊದಲ ಬಾರಿಗೆ ಗಣೇಶ್ ಜೊತೆ ಕೆಲಸ ಮಾಡುತ್ತಿದ್ದಾರೆ. ಕೌಟುಂಬಿಕ ಕಥಾಹಂದರ ಹೊಂದಿರುವ ಈ ಚಿತ್ರಕ್ಕೆ ಬೆಂಗಳೂರಿನಲ್ಲಿ ಬಿರುಸಿನ ಚಿತ್ರೀಕರಣ ನಡೆಯುತ್ತಿದೆ. ಮುಂದಿನ ದಿನಗಳಲ್ಲಿ ಮೈಸೂರು, ರಾಜಸ್ಥಾನ ಹಾಗೂ ಯುರೋಪ್ ನಲ್ಲಿ ಚಿತ್ರೀಕರಣ ನಡೆಯಲಿದೆ. ಇದನ್ನೂ ಓದಿ:ಕಾರವಾರದಲ್ಲಿ ಬದುಕಿದ್ದ ವಿಲಕ್ಷಣ ವ್ಯಕ್ತಿಯ ಕಥೆಯೇ ‘ಟೋಬಿ’ : ಗುಟ್ಟು ರಟ್ಟು

    ಜುಲೈ 2ರಂದು ಗಣೇಶ್ ಅವರ ಹುಟ್ಟುಹಬ್ಬ. ಈ ಸಂದರ್ಭದಲ್ಲಿ ಫಸ್ಟ್ ಲುಕ್ ಬಿಡುಗಡೆ ಮಾಡುವ ಮೂಲಕ ಚಿತ್ರತಂಡ ಗಣೇಶ್ ಅವರಿಗೆ ಹುಟ್ಟುಹಬ್ಬದ ಶುಭಾಶಯ ತಿಳಿಸಿದೆ. ತ್ರಿಶೂಲ್ ಎಂಟರ್ಟೈನ್ಮೆಂಟ್ ಲಾಂಛನದಲ್ಲಿ ಪ್ರಶಾಂತ್ ಜಿ ರುದ್ರಪ್ಪ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಈ ಸಂಸ್ಥೆಯಿಂದ ನಿರ್ಮಾಣವಾಗುತ್ತಿರುವ ಮೂರನೇ ಚಿತ್ರವಿದು. ಅರ್ಜುನ್ ಜನ್ಯ ಈ ಚಿತ್ರದ ಸಂಗೀತ ನಿರ್ದೇಶಕರು.

    ಗಣೇಶ್ ಅವರಿಗೆ ನಾಯಕಿಯಾಗಿ ಮಾಳವಿಕ ನಾಯರ್ ನಟಿಸುತ್ತಿದ್ದಾರೆ. ಸಾಧುಕೋಕಿಲ, ರಂಗಾಯಣ ರಘು, ಶಶಿಕುಮಾರ್, ಶ್ರುತಿ, ಸುಧಾರಾಣಿ, ಶ್ರೀನಿವಾಸಮೂರ್ತಿ, ಶಿವಧ್ವಜ್ ಶೆಟ್ಟಿ, ಬೆನಕ ಗಿರಿ ಮುಂತಾದ ಕಲಾವಿದರು ಕೃಷ್ಣಂ ಪ್ರಣಯ ಸಖಿ ಚಿತ್ರದಲ್ಲಿ ನಟಿಸಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಅಳಿಯನ ಚಿತ್ರಕ್ಕೆ ‘ಜಿಮ್ಮಿ’ ಟೈಟಲ್ ಕೊಟ್ಟವರ ಹೆಸರು ಬಹಿರಂಗ ಪಡಿಸಿದ ಕಿಚ್ಚ

    ಅಳಿಯನ ಚಿತ್ರಕ್ಕೆ ‘ಜಿಮ್ಮಿ’ ಟೈಟಲ್ ಕೊಟ್ಟವರ ಹೆಸರು ಬಹಿರಂಗ ಪಡಿಸಿದ ಕಿಚ್ಚ

    ಕಿಚ್ಚ ಸುದೀಪ್ ಅವರ ಸಹೋದರಿ ಮಗ ಸಂಚಿತ್ ಸಂಜೀವ್ (Sanchit Sanjeev)  ಅವರ ಹೊಸ ಸಿನಿಮಾದ ಟೈಟಲ್ (Title) ಲಾಂಚ್ ಕಾರ್ಯಕ್ರಮ ನಿನ್ನೆಯಷ್ಟೇ ನಡೆದಿದೆ. ‘ಜಿಮ್ಮಿ’ ಎನ್ನುವ ಟೈಟಲ್ ಬಗ್ಗೆ ಎಲ್ಲರೂ ಮೆಚ್ಚುಗೆಯ ಮಾತುಗಳನ್ನು ಆಡಿದ್ದಾರೆ. ಅಷ್ಟಕ್ಕೂ ಜಿಮ್ಮಿ ಎಂದರೇನು? ಇಂಥದ್ದೊಂದು ಟೈಟಲ್ ಇಡುವುದಕ್ಕೆ ಕಾರಣವೇನು? ಯಾರು ಈ ಟೈಟಲ್ ಅನ್ನು ಸಜೆಸ್ಟ್ ಮಾಡಿದ್ದು ಎನ್ನುವ ಕುರಿತು ಕುತೂಹಲ ಮೂಡಿತ್ತು. ಅದೆಲ್ಲದಕ್ಕೂ ಉತ್ತರ ನೀಡಿದ್ದಾರೆ ಕಿಚ್ಚ ಸುದೀಪ್.

    ಸಂಚಿತ್ ಸಂಜೀವ್ ನಿರ್ದೇಶಿಸಿ, ನಟಿಸುತ್ತಿರುವ ಜಿಮ್ಮಿ ಚಿತ್ರದ ಟೈಟಲ್ ಅನ್ನು ಕೊಟ್ಟಿದ್ದು ಖ್ಯಾತ ನಿರ್ದೇಶಕ ಅನೂಪ್ ಭಂಡಾರಿ (Anoop Bhandari) ಎನ್ನುವುದನ್ನು ಸ್ವತಃ ಸುದೀಪ್ ಅವರೇ ಬಹಿರಂಗ ಪಡಿಸಿದ್ದಾರೆ. ಕಥೆಗೂ, ಚಿತ್ರದ ಹೀರೋಗೂ ಮತ್ತು ಜಿಮ್ಮಿ ಟೈಟಲ್ ಗೂ ಒಂದಕ್ಕೊಂದು ಸಂಬಂಧವಿದೆಯಂತೆ. ಅದೇನು ಅನ್ನುವುದನ್ನು ಸಿನಿಮಾದಲ್ಲೇ ನೋಡಬೇಕು. ಇದನ್ನೂ ಓದಿ: ಹೃದಯ ಕಿತ್ತು ಎದೆಗೆ ಹಚ್ಚಿಕೊಂಡು ಪಾರ್ಟಿಗೆ ಬಂದ ಉರ್ಫಿ ಜಾವೇದ್

    ಕನ್ನಡ ಚಿತ್ರರಂಗಕ್ಕೆ ಕಾಲಿಡುತ್ತಿರುವ ಅಳಿಯನಿಗೆ ನಟ ಕಿಚ್ಚ ಸುದೀಪ್ (Kichcha Sudeep) ಕಿವಿಮಾತು ಹೇಳಿದ್ದಾರೆ. ಹಿರಿಯರು ನಡೆಸಿಕೊಂಡು ಬಂದ ದೊಡ್ಡ ಕೋಟೆ ಸ್ಯಾಂಡಲ್‍ವುಡ್ (Sandalwood) ಅದಕ್ಕೆ ನೀವು ಕಾಲಿಡುತ್ತಿದ್ದೀರಿ. ಬೆಳೆಸಲಾಗದಿದ್ರೂ ಕಾಪಾಡಿಕೊಂಡು ಹೋಗಿ ಎಂದು ಅಳಿಯ ಸಂಚಿತ್‌ಗೆ ಹೇಳಿದ್ದಾರೆ.

    ಸುದೀಪ್ ಸಹೋದರಿಯ ಮಗ ಸಂಚಿತ್ ಸಂಜೀವ್ ‘ಜಿಮ್ಮಿ’ (Jimmy) ಯಾಗಿ ಚಂದನವನದ ಅಡ್ಡಾಗೆ ಎಂಟ್ರಿ ಕೊಡುತ್ತಿದ್ದಾರೆ. ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ಭಾನುವಾರ ಸಂಜೆ ಟೈಟಲ್ ಲಾಂಚ್ ಕಾರ್ಯಕ್ರಮ ಅದ್ದೂರಿಯಾಗಿ ನಡೆಯಿತು. ಈ ವೇಳೆ ಮಾತನಾಡಿದ ಸುದೀಪ್, ಚಿತ್ರರಂಗದ ನಿಮ್ಮ ಸಮಕಾಲೀನ ನಟರೆಲ್ಲರ ಜೊತೆ ಚೆನ್ನಾಗಿರಿ, ಸ್ನೇಹ ಬೆಳೆಸಿಕೊಳ್ಳಿ ಎಂದು ಸಲಹೆ ಕೊಟ್ಟಿದ್ದಾರೆ.

    ಜಿಮ್ಮಿ ಚಿತ್ರದಲ್ಲಿ ಪುತ್ರಿ ಸಾನ್ವಿ ಹಿನ್ನೆಲೆ ಗಾಯನ ಮಾಡಲಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿದ ಕಿಚ್ಚ, ಮಗಳು ಹಾಡಿದ್ದು ಖುಷಿಯಾಯ್ತು. ನನ್ನ ಮಗಳು ಚೆನ್ನಾಗಿ ಹಾಡ್ತಾಳೆ ಅಂತ ಗೊತ್ತಿತ್ತು. ಇಷ್ಟು ಚೆನ್ನಾಗಿ ಅಂತ ಇವತ್ತೇ ಗೊತ್ತಾಗಿದ್ದು. ವಾಸುಕಿ ವೈಭವ್ ಧ್ವನಿಯನ್ನ ಇನ್ನೂ ತಿದ್ದಿ ಇಂಪಾಗಿ ಹಾಡುವಂತಾಯ್ತು ಎಂದರು.

     

    ಇದೇ ವೇಳೆ ನಟ ಸಂಚಿತ್ ಸಂಜೀವ್ ಮಾತನಾಡಿ, ಮಾತು ಬರ್ತಿಲ್ಲ. ಒಂದ್ಕಡೆ ಭಯ, ನರ್ವಸ್ ಇದೆ. ಹಾಗೆಯೇ ಎಕ್ಸೈಟ್ಮೆಂಟ್ ಕೂಡ ಇದೆ. ಒಂದು ಮಾತು ಹೇಳಬೇಕಂದರೆ ನಿಮ್ಮ ನಂಬಿಕೆ ಉಳಿಸಿಕೊಳ್ತೀನಿ. ಸುದೀಪ್ ಮಾಮರಿಂದ ಬಹಳ ಕಲಿತಿದ್ದೇನೆ. ಅವರ ಶ್ರಮ, ಪ್ರೀತಿ ನೋಡಿದ್ದೀನಿ. ಏನೇ ಮಾಡಿದ್ರೂ 100% ಎಫರ್ಟ್ ಹಾಕಬೇಕು ಅನ್ನೋದನ್ನು ಮಾಮ ಹೇಳುತ್ತಿರುತ್ತಾರೆ. ಜಿಮ್ಮಿ ಯಾರಿಗೂ ಇಲ್ಲ ಕಮ್ಮಿ ಎಂದು ಹೇಳಿದರು.

  • ‘ನಸಾಬ್’ ಶೀರ್ಷಿಕೆ ಅನಾವರಣ: ಜೀವನಾಧಾರಿತ ಕೃತಿಗೆ ಸಿನಿಮಾ ರೂಪ

    ‘ನಸಾಬ್’ ಶೀರ್ಷಿಕೆ ಅನಾವರಣ: ಜೀವನಾಧಾರಿತ ಕೃತಿಗೆ ಸಿನಿಮಾ ರೂಪ

    ಹುತೇಕ ಹೊಸ ಪ್ರತಿಭೆಗಳೇ ಸೇರಿ ನಿರ್ಮಿಸುತ್ತಿರುವ ‘ನಸಾಬ್’ (Nasab) ಸಿನಿಮಾದ ಶೀರ್ಷಿಕೆ (title) ಇತ್ತೀಚೆಗೆ ಬಿಡುಗಡೆಯಾಯಿತು. ಬೆಂಗಳೂರಿನ ಮಹಾರಾಣಿ ಕಾಲೇಜು ಆವರಣದ ಸ್ಕೌಟ್ಸ್ ಆ್ಯಂಡ್ ಗೈಡ್ಸ್ ಕೊಂಡಜ್ಜಿ ಸಭಾಂಗಣದಲ್ಲಿ ನಡೆದ ಸಮಾರಂಭದಲ್ಲಿ ಶ್ರೀಜಂಬುನಾಥ ಸ್ವಾಮಿ ಎಸ್. ಮಳಿಮಠ, ಬಂಜಾರ ಶಕ್ತಿಪೀಠದ ಕುಮಾರ ಮಹಾರಾಜ ಸ್ವಾಮೀಜಿ, ಮಾಜಿ ವಿಧಾನ ಪರಿಷತ್ ಸದಸ್ಯ ಪುಟ್ಟಣ್ಣ, ವಿಷ್ಣುವರ್ಧನ್ ಅಭಿಮಾನಿಗಳ ಸಂಘದ ಅಧ್ಯಕ್ಷ ವೀರಕಪುತ್ರ ಶ್ರೀನಿವಾಸ್, ಬುಕ್ ಬ್ರಹ್ಮ ಸಂಪಾದಕ ದೇವು ಪತ್ತಾರ್, ಬೆಂಗಳೂರು ನಗರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎಂ. ಪ್ರಕಾಶ ಮೂರ್ತಿ ಸೇರಿದಂತೆ ವಿವಿಧ ಕ್ಷೇತ್ರಗಳ ಹಲವು ಗಣ್ಯರು ಹಾಜರಿದ್ದು ‘ನಸಾಬ್’ ಚಿತ್ರದ ಟೈಟಲ್ ಬಿಡುಗಡೆಗೊಳಿಸಿ ಚಿತ್ರತಂಡಕ್ಕೆ ಶುಭ ಹಾರೈಸಿದರು.

    ಕಾಲೇಜು ಶಿಕ್ಷಣ ಇಲಾಖೆಯ ಆಯುಕ್ತರ ಆಪ್ತ ಸಹಾಯಕರಾದ ಕೆ. ಕಿಶೋರ್ ಕುಮಾರ್  (Kishore Kumar) ಅವರ ಆತ್ಮಕಥೆಯನ್ನು ಆಧರಿಸಿ ತಯಾರಾಗುತ್ತಿರುವ ‘ನಸಾಬ್’ ಸಿನಿಮಾದಲ್ಲಿ ಯುವನಟ ಕೀರ್ತಿ ಕುಮಾರ್ (Keerthi Kumar) ನಾಯಕನಾಗಿ ಅಭಿನಯಿಸುತ್ತಿದ್ದಾರೆ. ಬಂಜಾರ ಭಾಷೆಯಲ್ಲಿ ‘ನಸಾಬ್’ ಎಂದರೆ ಸರ್ವೋಚ್ಚ ನಾಯಕ ಎಂಬ ಅರ್ಥವಿದೆ. ಸಾಮಾನ್ಯ ಹುಡುಗನೊಬ್ಬ ಹೇಗೆ ‘ನಸಾಬ್’ ಆಗಿ ಬೆಳೆಯುತ್ತಾನೆ ಎಂಬುದರ ಸುತ್ತ ಇಡೀ ಸಿನಿಮಾದ ಕಥೆ ಸಾಗುತ್ತದೆ. ಇದನ್ನೂ ಓದಿ: ಮಂಡ್ಯದಲ್ಲಿ ಟೀ ಕುಡಿದ ಅಭಿಷೇಕ್: ಥೇಟ್ ಅಪ್ಪನಂತೆ ಮಗ ಎಂದ ಫ್ಯಾನ್ಸ್

    ‘ಕೀರ್ತಿ ಕ್ರಿಯೇಶನ್ಸ್’ ಬ್ಯಾನರಿನಲ್ಲಿ ಸುಜಾತ ಕೆ. ನಿರ್ಮಿಸುತ್ತಿರುವ ‘ನಸಾಬ್’ ಸಿನಿಮಾಕ್ಕೆ ರಾಗಂ ಚಿತ್ರಕಥೆ, ಸಂಭಾಷಣೆ, ಸಾಹಿತ್ಯ ಬರೆದು ಸಂಗೀತ ಸಂಯೋಜಿಸುತ್ತಿದ್ದಾರೆ. ‘ನಸಾಬ್’ ಸಿನಿಮಾದಲ್ಲಿ ಕೀರ್ತಿ ಕುಮಾರ್ ಅವರೊಂದಿಗೆ ಅಮೃತಾ, ಜಯಶ್ರೀ, ಹೇಮಂತ್, ಪದ್ಮವಾಸಂತಿ, ವಿಜಯಕಾಶಿ ಮೊದಲಾದವರು ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಚಿತ್ರಕ್ಕೆ ಮಹಮ್ಮದ್ ಹಸೀಬ್ ಛಾಯಾಗ್ರಹಣವಿದ್ದು, ಶಿಜ (Shija) ನಿರ್ದೇಶನವಿದೆ.

     

    ಪಟ್ಟದಕಲ್ಲು, ಐಹೊಳೆ, ಅಮಿನಘಡ ಸುತ್ತಮುತ್ತ ಸಿನಿಮಾದ ಬಹುತೇಕ ಚಿತ್ರೀಕರಣ ನಡೆಸಲಾಗಿದೆ. ಸದ್ಯ ‘ನಸಾಬ್’ ಸಿನಿಮಾದ ಬಹುತೇಕ ಚಿತ್ರೀಕರಣ ಪೂರ್ಣಗೊಳಿಸಿರುವ ಚಿತ್ರತಂಡ, ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದ್ದು, ಶೀಘ್ರದಲ್ಲಿಯೇ ಸಿನಿಮಾವನ್ನು ತೆರೆಗೆ ತರುವ ಯೋಚನೆಯಲ್ಲಿದೆ.

  • ನಿವೇದಿತಾ ಶಿವರಾಜ್ ಕುಮಾರ್ ನಿರ್ಮಾಣದ ಚಿತ್ರಕ್ಕೆ ಟೈಟಲ್ ಫಿಕ್ಸ್

    ನಿವೇದಿತಾ ಶಿವರಾಜ್ ಕುಮಾರ್ ನಿರ್ಮಾಣದ ಚಿತ್ರಕ್ಕೆ ಟೈಟಲ್ ಫಿಕ್ಸ್

    ವಿರಾಗಿ ಶುರುವಾದ ಕಥೆಗೆ ಹೆಸರೊಂದು ಮೂಡಿದೆ. ಹೆಸರ ಜೊತೆಗೆ ಬರುವೆವು ಎಂದು ಚಿತ್ರತಂಡ ಶೀರ್ಷಿಕೆ ಅನಾವರಣ ಮಾಡುವುದಾಗಿ ತಿಳಿಸಿತ್ತು. ಅದರಂತೆ ಇಂದು ಟೈಟಲ್ (Title) ರಿವೀಲ್ ಮಾಡಿದೆ. ನಿವೇದಿತಾ  (Nivedita) ಮೊದಲ ಹೆಜ್ಜೆಗೆ ‘ಫೈರ್ ಫ್ಲೈ’ (Fire fly) ಎಂಬ ಕ್ಯಾಚಿ ಟೈಟಲ್ ಇಡಲಾಗಿದೆ. ಅಂದಹಾಗೇ ಈ ಚಿತ್ರಕ್ಕೆ ವಂಶಿ (Vamshi) ಹೀರೋ. ನಿರ್ದೇಶನ ಕೂಡ ಅವರದ್ದೇ.

    ‘ಪಿ.ಆರ್.ಕೆ ಪ್ರೊಡಕ್ಷನ್ಸ್’ ನಿರ್ಮಾಣದ ‘ಮಯಾಬಜಾರ್’ ಸಿನಿಮಾದಲ್ಲಿ ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡಿದ್ದ ಅವರು,  ಇತ್ತೀಚೆಗೆ ಬಂದ ‘ಪೆಂಟಗನ್’ ಚಿತ್ರದಲ್ಲೂ ಪ್ರಮುಖ ಪಾತ್ರವೊಂದರಲ್ಲಿ ನಟಿಸಿದ್ದರು. ಇದನ್ನೂ ಓದಿ:ಸುದೀಪ್ ಮನೆಯಿಂದ ಮತ್ತೊಬ್ಬ ಸ್ಟಾರ್: ಸಂಚಿತ್ ಚಿತ್ರಕ್ಕೆ ಮುಹೂರ್ತ

    ನಿವೇದಿತಾ ಬಂಡವಾಳ ಹೂಡುತ್ತಿರುವ ಮೊದಲ ಚಿತ್ರಕ್ಕೆ ನಿರ್ದೇಶನ ಮಾಡುವ ಮೂಲಕ ವಂಶಿ ಸ್ವತಂತ್ರ ನಿರ್ದೇಶಕರಾಗಿ ಮತ್ತು ಪೂರ್ಣಪ್ರಮಾಣದ ಹೀರೋ ಆಗಿ ಚಿತ್ರರಂಗದಲ್ಲಿ ಹೊಸ ಜರ್ನಿ ಆರಂಭಿಸುತ್ತಿದ್ದಾರೆ. ಜಯ್ ರಾಮ್ ಸಹ-ನಿರ್ದೇಶಕರಾಗಿ ಕೆಲಸ ಮಾಡುತ್ತಿದ್ದಾರೆ. ಅಭಿಲಾಷ್ ಕಲ್ಲಟ್ಟಿ ಛಾಯಾಗ್ರಹಣ, ಚರಣ್ ರಾಜ್ ಸಂಗೀತ ನಿರ್ದೇಶನ ಹಾಗೂ ರಘು ನಿಡುವಳ್ಳಿ ಅವರು ಸಂಭಾಷಣೆಯ ಜವಾಬ್ದಾರಿ ನಿಭಾಯಿಸುತ್ತಿದ್ದಾರೆ.

    ಶಿವರಾಜ್ ಕುಮಾರ್ (Shivaraj Kumar) ಯಾವಾಗಲೂ ಹೊಸಬರಿಗೆ ಪ್ರೋತ್ಸಾಹ ನೀಡುತ್ತಾ ಬಂದಿದ್ದಾರೆ. ಅದೇ ರೀತಿ ಅಪ್ಪನ ಹಾದಿಯಲ್ಲೇ ನಿವೇದಿತಾ ಕೂಡ ಹೊಸ ಪ್ರತಿಭೆಗಳಿಗೆ ವೇದಿಕೆ ಒದಗಿಸಿಕೊಡುತ್ತಿದ್ದಾರೆ. ‘ಶ್ರೀ ಮುತ್ತು ಸಿನಿ ಸರ್ವೀಸ್’ ಸಂಸ್ಥೆಯು ಅವರ ಕನಸಿನ ಕೂಸು. ಯುವ ಪ್ರತಿಭೆಗಳಿಗೆ ಮತ್ತು ಹೊಸ ಆಲೋಚನೆಗಳಿಗೆ ಅವಕಾಶ ನೀಡಲು ಈ ಸಂಸ್ಥೆ ಮುಡಿಪಾಗಿದೆ.

  • ಕನ್ನಡದಲ್ಲೂ ಫೈಲ್ಸ್ ಮೇನಿಯಾ: ‘ದಿ ಭವಾನಿ ಫೈಲ್ಸ್’ ಗೆ ದೊಡ್ಮನೆ ಸೊಸೆ ಸಾಥ್

    ಕನ್ನಡದಲ್ಲೂ ಫೈಲ್ಸ್ ಮೇನಿಯಾ: ‘ದಿ ಭವಾನಿ ಫೈಲ್ಸ್’ ಗೆ ದೊಡ್ಮನೆ ಸೊಸೆ ಸಾಥ್

    ದಿ ಕಾಶ್ಮೀರ್ ಫೈಲ್ಸ್ ಸಿನಿಮಾದ ಯಶಸ್ಸಿನ ನಂತರ ಇಂಥದ್ದೇ ಮಾದರಿಯ ಚಿತ್ರಗಳು ಭಾರತೀಯ ಸಿನಿಮಾ ರಂಗದಲ್ಲಿ ಸದ್ದು ಮಾಡುತ್ತಿವೆ. ಅದರಲ್ಲೂ ‘ಫೈಲ್ಸ್’ ಹೆಸರಿನಲ್ಲಿ ನಾನಾ ಭಾಷೆಗಳಲ್ಲಿ ಚಿತ್ರಗಳು ತಯಾರಾಗುತ್ತಿವೆ. ಅದಕ್ಕೆ ಹೊಸ ಸೇರ್ಪಡೆ ‘ದಿ ಭವಾನಿ ಫೈಲ್ಸ್’ (The Bhavani Files) ಕನ್ನಡದಲ್ಲೂ ಫೈಲ್ಸ್ ಮಾದರಿಯ ಚಿತ್ರವೊಂದು ತಯಾರಾಗುತ್ತಿದ್ದು, ಈ ಚಿತ್ರಕ್ಕೆ ಈಗಾಗಲೇ ಚಾಲನೆ ಕೂಡ ಸಿಕ್ಕಿದೆ.

    ನೂರು ಜನ್ಮಕ್ಕೂ, ಡಿಯರ್ ಸತ್ಯ ಸಿನಿಮಾಗಳ ಮೂಲಕ ಭರವಸೆ ಮೂಡಿಸಿರುವ ಪ್ರತಿಭಾನ್ವಿತ ನಾಯಕ ಆರ್ಯನ್ (Aryan). ಇದೀಗ ಆರ್ಯನ್ ದಿ ಭವಾನಿ ಫೈಲ್ಸ್ ಎಂಬ ಹೊಸ ಸಿನಿಮಾ ಘೋಷಿಸಿದ್ದು, ಈ ಚಿತ್ರದಲ್ಲಿ ನಟನೆ ಜೊತೆಗೆ ಕ್ರಿಯೇಟಿವ್ ಡೈರೆಕ್ಟರ್ ಆಗಿಯೂ ಜವಾಬ್ದಾರಿ ಹೊತ್ತುಕೊಂಡಿದ್ದಾರೆ.  ಈ ಚಿತ್ರಕ್ಕೆ ದೊಡ್ಮನೆ ಸೊಸೆ ಸಾಥ್ ಕೊಟ್ಟಿದ್ದಾರೆ. ಇದನ್ನೂ ಓದಿ:ರಶ್ಮಿಕಾ ಮಂದಣ್ಣಗೆ ಸೆಡ್ಡು ಹೊಡೆದ ನಟಿ- ಐಕಾನ್ ಸ್ಟಾರ್‌ಗೆ ಶ್ರೀಲೀಲಾ ನಾಯಕಿ

    ದಿ ಭವಾನಿ ಫೈಲ್ಸ್ ಸಿನಿಮಾದ ಟೈಟಲ್  (Title)ಲಾಂಚ್ ಮಾಡಿ ಅಶ್ವಿನಿ ಪುನೀತ್ ರಾಜ್ ಕುಮಾರ್ (Ashwini Puneet Rajkumar) ಶುಭ ಹಾರೈಸಿದ್ದಾರೆ. ಸದ್ಯ ಸಿನಿಮಾದ ಪ್ರೀ ಪ್ರೊಡಕ್ಷನ್ ಕೆಲಸಗಳು ಭರದಿಂದ ಸಾಗುತ್ತಿದ್ದು, ಮುಂದಿನ ತಿಂಗಳು ಫಸ್ಟ್ ಲುಕ್ ಲಾಂಚ್ ಮಾಡಲು ಚಿತ್ರತಂಡ ಪ್ಲಾನ್ ಮಾಡಿಕೊಂಡಿದೆ. 14ನೇ ಶತಮಾನದ ಕಥೆಯನ್ನು ಆರ್ಯನ್ ತಮ್ಮ ಸ್ನೇಹಿತರ ಜೊತೆಗೂಡಿ ನಿರ್ದೇಶಿಸುತ್ತಿದ್ದಾರೆ.

     

    ಮೋಹನ್ ಮೆನನ್,  ಜೇಕಬ್ ವರ್ಗೀಸ್ ಹಾಗೂ ಆರ್ಯನ್ ಸಿನಿಮಾಗೆ ಚಿತ್ರಕಥೆ ಬರೆದಿದ್ದು, ಚೇತನ್ ಡಿಕ್ರೋಸ್ ಸ್ಟಂಟ್, ಜೋ ಕೋಸ್ಟ್ ಟ್ಯೂನ್ ಹಾಕಿದ್ದಾರೆ. ವೈಟ್ ಹಾರ್ಸ್ ಪ್ರೊಡಕ್ಷನ್ ಬ್ಯಾನರ್ ನಡಿ ನಿರ್ಮಾಣವಾಗುತ್ತಿರುವ ದಿ ಭವಾನಿ ಫೈಲ್ಸ್ ಸಿನಿಮಾವನ್ನು ವಿಂಟರ್ ಬ್ರಿಡ್ಜ್ ಸ್ಟುಡಿಯೋಸ್ ನಿರ್ಮಾಣದಲ್ಲಿ ಸಾಥ್ ಕೊಡಲಿದೆ. ಕಲ್ಟ್ ಜಾನರ್ ಈ ಸಿನಿಮಾದ ಉಳಿದ ಸ್ಟಾರ್ ಕಾಸ್ಟ್ ಹಾಗೂ ತಾಂತ್ರಿಕ ವರ್ಗದ ಬಗ್ಗೆ ಶೀಘ್ರದಲ್ಲೇ ಚಿತ್ರತಂಡ ಮಾಹಿತಿ ನೀಡಲಿದೆ.

  • ರವಿತೇಜ ಹೊಸ ಸಿನಿಮಾಗೆ ‘ಈಗಲ್’ ಟೈಟಲ್ ಫಿಕ್ಸ್

    ರವಿತೇಜ ಹೊಸ ಸಿನಿಮಾಗೆ ‘ಈಗಲ್’ ಟೈಟಲ್ ಫಿಕ್ಸ್

    ತೆಲುಗಿನ ಮಾಸ್ ಮಹಾರಾಜ ರವಿತೇಜ (Raviteja)  ನಟನೆಯ,‌ ಪೀಪಲ್ ಮೀಡಿಯಾ ಫ್ಯಾಕ್ಟರಿ ನಡಿ ಟಿಜೆ ವಿಶ್ವ ಪ್ರಸಾದ್‌ ‌ನಿರ್ಮಾಣದ ಧಮಾಕ ಸಿನಿಮಾ ಬಾಕ್ಸಾಫೀಸ್ ಶೇಕ್ ಮಾಡಿತ್ತು. ರವಿತೇಜ ಸಿನಿಕರಿಯರ್ ನ‌ ಬಿಗೆಸ್ಟ್ ಹಿಟ್ ಎನಿಸಿಕೊಂಡಿತ್ತು. ಧಮಾಕ ಸಕ್ಸಸ್ ಬೆನ್ನಲ್ಲೇ ಮಾಸ್ ಮಹಾರಾಜ ಮತ್ತೊಮ್ಮೆ ಪೀಪಲ್ಸ್ ಮೀಡಿಯಾ ಫ್ಯಾಕ್ಟರಿ ಜೊತೆ ಕೈ ಜೋಡಿಸಿದ್ದಾರೆ.

    ಛಾಯಾಗ್ರಹಕರಾಗಿದ್ದ ಕಾರ್ತಿಕ್ ಕಟ್ಟಿಮನೆ (Karthik Kattimane) ಡೈರೆಕ್ಟರ್ ಕ್ಯಾಪ್ ತೊಟ್ಟು ಆಕ್ಷನ್ ಕಟ್ ಹೇಳಿರುವ ಸಿನಿಮಾಗೆ ‘ಈಗಲ್’ (Eagle) ಎಂಬ ಕ್ಯಾಚಿ ಟೈಟಲ್ (Title) ಇಡಲಾಗಿದೆ. ಸಣ್ಣ ಗ್ಲಿಂಪ್ಸ್ ಮೂಲಕ ಈಗಲ್ ಲೋಕವನ್ನು ಪರಿಚಯ ಮಾಡಿಕೊಡಲಾಗಿದೆ. ರವಿತೇಜ ಮೋಸ್ಟ್ ವಾಂಟೆಡ್‌ ಪೇಂಟರ್ ಆಗಿ, ಹತ್ತಿ ಕೃಷಿನಾಗಿ, ನಾನಾ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಭಾಗಶಃ ಮಾತ್ರ ಅವರ ಮುಖವನ್ನು ಚಿತ್ರತಂಡ ತೋರಿಸಿ ಸಸ್ಪೆನ್ಸ್ ಕಾಯ್ದುಕೊಂಡಿದೆ.

    ಅನುಪಮಾ ಪರಮೇಶ್ವರನ್ (Anupama Parameswaran), ನವದೀಪ್, ಮಧುಬಾಲ, ಕಾವ್ಯ ಥಾಪರ್ ಟೈಟಲ್ ಝಲಕ್ ನಲ್ಲಿ ಕಾಣಿಸಿಕೊಂಡಿದ್ದಾರೆ.  ಭಾರೀ ಬಜೆಟ್ ನಲ್ಲಿ ನಿರ್ಮಾಣವಾಗುತ್ತಿರುವ ಈಗಲ್ ಸಿನಿಮಾಗೆ ಕಾರ್ತಿಕ್ ಗಟ್ಟಿಮನ್ನಿ ನಿರ್ದೇಶನದ ಜೊತೆಗೆ ಸಂಕಲನ ಹಾಗೂ ಛಾಯಾಗ್ರಹಣದ ಜವಾಬ್ದಾರಿ ಹೊತ್ತುಕೊಂಡಿದ್ದಾರೆ‌. ಮಣಿಬಾಬು ಕರಣಂ ಸಂಭಾಷಣೆ, ದಾವ್ಜಂಡ್ ಟ್ಯೂನ್ ಚಿತ್ರಕ್ಕಿದೆ. ಹೈದ್ರಾಬಾದ್ ಚಿತ್ರೀಕರಣ ಭರದಿಂದ ಸಾಗುತ್ತಿದ್ದು, 2024ರ ಸಂಕ್ರಾಂತಿ ಹಬ್ಬ ಸಿನಿಮಾ ತೆರೆಗೆ ಬರಲಿದೆ.