Tag: Title Track

  • ಲವ್ ಯು ಮುದ್ದು ಟೈಟಲ್ ಟ್ರ‍್ಯಾಕ್‌ಗೆ ಕುಣಿದ ಸಿದ್ದು, ರೇಷ್ಮಾ

    ಲವ್ ಯು ಮುದ್ದು ಟೈಟಲ್ ಟ್ರ‍್ಯಾಕ್‌ಗೆ ಕುಣಿದ ಸಿದ್ದು, ರೇಷ್ಮಾ

    ಲವ್‌ ಯೂ ಮುದ್ದು, ಸಿದ್ದು ಮೂಲಿಮನಿ, ರೇಷ್ಮಾ, Love U Muddu, Title Track, Siddhu Moolimani, Reshma ಕೆಮಿಸ್ಟ್ರಿ ಆಫ್ ಕರಿಯಪ್ಪ ಸಿನಿಮಾ ಖ್ಯಾತಿಯ ಕುಮಾರ್ ಸಾರಥ್ಯದ ಹೊಸ ಸಿನಿಮಾ ಲವ್ ಯು ಮುದ್ದು (Love U Muddu) ಈಗಾಗಲೇ ಟೈಟಲ್ ಮೂಲಕವೇ ನಿರೀಕ್ಷೆ ಹೆಚ್ಚಿಸಿದೆ. ಇದೀಗ ಈ ಚಿತ್ರದ ಟೈಟಲ್ ಟ್ರ‍್ಯಾಕ್ ಬಿಡುಗಡೆಯಾಗಿದೆ. ಎಂಟಿಆರ್ ಮ್ಯೂಸಿಕ್ ಯೂಟ್ಯೂಬ್ ನಲ್ಲಿ ಲವ್ ಯು ಮುದ್ದು ಚಿತ್ರದ ಮೆಲೋಡಿ ಗೀತೆ ರಿಲೀಸ್ ಆಗಿದೆ. ಅನಿರುದ್ಧ್ ಶಾಸ್ತ್ರೀ ಸಾಹಿತ್ಯ ಬರೆದು ಸಂಗೀತ ನೀಡಿರುವ ಹಾಡಿಗೆ ಸೋನು ನಿಗಮ್, ಐಶ್ವರ್ಯಾ ರಂಗರಾಜನ್ ಹಾಗೂ ಸುರಭಿ ಭಾರದ್ವಾಜ್ ಕಂಠ ಕುಣಿಸಿದ್ದಾರೆ. ಲವ್ ಯು ಮುದ್ದು ಅಂತಾ ನಾಯಕ ಸಿದ್ದು ಕುಣಿದಿದ್ದು, ನಾಯಕಿ ರೇಷ್ಮಾ ಹಾಡಿನಲ್ಲಿ ಮಿಂಚಿದ್ದಾರೆ.

    ಲವ್ ಯು ಮುದ್ದು ಮಹಾರಾಷ್ಟ್ರದಲ್ಲಿ ನಡೆದ ನೈಜ ಪ್ರೇಮ ಕಥಾ ಹಂದರ ಒಳಗೊಂಡಿದೆ. ಕಿರುತೆರೆ ಮತ್ತು ಅಜ್ಞಾತವಾಸಿ ಸಿನಿಮಾ ಖ್ಯಾತಿಯ ಸಿದ್ದು(Siddhu Moolimani) ನಾಯಕನಾಗಿ, ಯುವನಟಿ ರೇಷ್ಮಾ (Reshma) ನಾಯಕಿಯಾಗಿ ನಟಿಸಿದ್ದಾರೆ. ಇನ್ನುಳಿದಂತೆ ರಾಜೇಶ್ ನಟರಂಗ, ತಬಲಾ ನಾಣಿ, ಗಿರೀಶ್ ಶಿವಣ್ಣ, ಶ್ರೀವತ್ಸ ಮತ್ತು ಉಷಾ ಚಿತ್ರದಲ್ಲಿದ್ದಾರೆ. ಇದನ್ನೂ ಓದಿ: ನಾನು ಸತ್ತರೆ ನಂದಕಿಶೋರ್, ಸಾರಾ ಗೋವಿಂದು ಕಾರಣ ವೀಡಿಯೋ ಹರಿಬಿಟ್ಟ ಶಬರೀಶ್ ಶೆಟ್ಟಿ

     

    ಕಿಶನ್ ಎಂಟರ್ಟೈನ್ಮೆಂಟ್ ಬ್ಯಾನರ್‌ ಅಡಿ ಕಿಶನ್ ಟಿಎನ್ ಚಿತ್ರ ನಿರ್ಮಾಣ ಮಾಡಿದ್ದಾರೆ. ಕಾರ್ಯಕಾರಿ ನಿರ್ಮಾಪಕರಾಗಿ ಲಕ್ಷ್ಮಿಕಾಂತ್ ಟಿಎಸ್ ಜೊತೆಯಾಗಿ ನಿಂತಿದ್ದಾರೆ. ಕೃಷ್ಣ ದೀಪಕ್ ಛಾಯಾಗ್ರಹಣ, ಅನಿರುದ್ಧ್ ಶಾಸ್ತ್ರೀ ಸಂಗೀತ ನಿರ್ದೇಶನ ಹಾಗೂ ಸಿಎಸ್ ದೀಪು ಸಂಕಲನ ಚಿತ್ರಕ್ಕಿದೆ. ಇದನ್ನೂ ಓದಿ: ರೆಟ್ರೋ ಲುಕ್‌ನಲ್ಲಿ ಮಿಂಚಿದ ಶಿವಣ್ಣ, ಡಾಲಿ

    ಲವ್ ಯು ಮುದ್ದು ಚಿತ್ರದ ಚಿತ್ರೀಕರಣ ಮುಕ್ತಾಯಗೊಂಡಿದ್ದು, ಸದ್ಯ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿವೆ. ಕಾರ್ಕಳ, ಕುಮಟಾ, ಬೆಂಗಳೂರು ಸುತ್ತಮುತ್ತ 45 ದಿನಗಳ ಶೂಟಿಂಗ್ ನಡೆಸಲಾಗಿದೆ. ಕಮರ್ಷಿಯಲ್ ಜೊತೆಗೆ ಕಾಮಿಡಿ ಸಿನಿಮಾ ಮಾಡ್ತಿದ್ದ ಕುಮಾರ್ ಮೊದಲ ಬಾರಿಗೆ ಪ್ರೇಕ್ಷಕರ ಎದುರು ಪ್ರೇಮಕಥೆಯನ್ನು ಹೇಳೋದಿಕ್ಕೆ ಹೊರಟಿದ್ದಾರೆ.

  • ‘ಗರಡಿ’ ಟೈಟಲ್ ಟ್ರ್ಯಾಕ್ ರಿಲೀಸ್: ಯೋಗರಾಜ್ ಭಟ್ ಸಾಹಿತ್ಯ, ಹರಿಕೃಷ್ಣ ಸಂಗೀತ

    ‘ಗರಡಿ’ ಟೈಟಲ್ ಟ್ರ್ಯಾಕ್ ರಿಲೀಸ್: ಯೋಗರಾಜ್ ಭಟ್ ಸಾಹಿತ್ಯ, ಹರಿಕೃಷ್ಣ ಸಂಗೀತ

    ನಜಾ ಬಿ.ಸಿ ಪಾಟೀಲ್ ನಿರ್ಮಾಣದ ಹಾಗೂ ಯೋಗರಾಜ್ ಭಟ್ ನಿರ್ದೇಶನದ ‘ಗರಡಿ’  (Garadi) ಚಿತ್ರದ ಟೈಟಲ್ ಟ್ರ್ಯಾಕ್ (Title Track) ಇತ್ತೀಚೆಗೆ ಬಿಡುಗಡೆಯಾಗಿದೆ. ಯೋಗರಾಜ್ ಭಟ್ (Yogaraj Bhatt) ಅವರು ಬರೆದಿರುವ ‘ಲೋಕಾನೆ ಗರಡಿ.. ಬಾಳೇ ಅಖಾಡ’ ಎಂಬ ಅದ್ಭುತ ಹಾಗೂ ಅರ್ಥಗರ್ಭಿತ ಗೀತೆಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಚಿತ್ರಕ್ಕೆ ಸಂಗೀತ ಸಂಯೋಜಿಸಿರುವ ವಿ.ಹರಿಕೃಷ್ಣ ಅವರೇ ಮುಖ್ಯ ಗಾಯಕರಾಗಿ ಹಾಡನ್ನು ಹಾಡಿದ್ದಾರೆ. ಹರಿಕೃಷ್ಣ (Harikrishna) ಅವರ ಜೊತೆಗೆ ಸಾಕಷ್ಟು ಪ್ರತಿಭಾವಂತ ‌ಗಾಯಕರು ಸಹ ಈ ಹಾಡಿಗೆ ಧ್ವನಿಯಾಗಿದ್ದಾರೆ. ಇತ್ತೀಚೆಗೆ ನಡೆದ ಈ ಹಾಡಿನ ಬಿಡುಗಡೆ ಸಮಾರಂಭದಲ್ಲಿ ಚಿತ್ರತಂಡದ ಸದಸ್ಯರು ಚಿತ್ರದ ಬಗ್ಗೆ ಹೆಚ್ಚಿನ ಮಾಹಿತಿ ನೀಡಿದರು.

    ಗರಡಿ ಎಂದರೆ ಒಂದು ಊರನ್ನು ಕಾಯುವ ಪೊಲೀಸ್ ಠಾಣೆ ಇದ್ದ ಹಾಗೆ ಎಂದು ಮಾತು ಆರಂಭಿಸಿದ ನಿರ್ದೇಶಕ ಯೋಗರಾಜ್ ಭಟ್, ಹಿಂದೆ ಒಂದು ಊರಿನ ರಕ್ಷಣೆಗೆ ಗರಡಿ ಬಹು ಮುಖ್ಯವಾಗಿತ್ತು. ಊರಿನವರು ಸಹ ಗರಡಿ ಮನೆಯ ಕುಸ್ತಿಪಟುಗಳನ್ನು ತಮ್ಮ ಮನೆಯವರಂತೆಯೇ ನೋಡಿಕೊಳ್ಳುತ್ತಿದ್ದರು. ಅಂತಹ ಗರಡಿ ಸುತ್ತ ನಮ್ಮ ಚಿತ್ರದ ಕಥೆ ಸಾಗುತ್ತದೆ. ಗರಡಿ ಮನೆಯ ಯಜಮಾನನಾಗಿ ಬಿ.ಸಿ.ಪಾಟೀಲ್ (BC Patil) ಅಭಿನಯಿಸಿದ್ದಾರೆ. ಅವರ ಶಿಷ್ಯನಾಗಿ ಸೂರ್ಯ ಅಭಿನಯಿಸಿದ್ದಾರೆ. ಇದು ಒಂದು ರೀತಿ ದ್ರೋಣಾಚಾರ್ಯ ಹಾಗೂ ಏಕಲವ್ಯನ ಕಥೆ ಎನ್ನಬಹುದು. ಇನ್ನು ಇಂದು ಬಿಡುಗಡೆಯಾಗಿರುವ ಹಾಡನ್ನು ಹರಿಕೃಷ್ಣ ಅದ್ಭುತವಾಗಿ ಸಂಯೋಜಿಸಿ ಹಾಡಿದ್ದಾರೆ. ಚಿತ್ರ ನವೆಂಬರ್ 10ರಂದು ಬಿಡುಗಡೆಯಾಗುತ್ತಿದೆ. ಎಲ್ಲರೂ ನೋಡಿ ಹಾರೈಸಿ ಎಂದರು.

    ಗರಡಿ ಚಿತ್ರ ಆರಂಭವಾಗಿ ಈ ನವೆಂಬರ್ 14ಕ್ಕೆ ಎರಡು ವರ್ಷಗಳಾಗುತ್ತದೆ. ನನ್ನ ಹುಟ್ಟುಹಬ್ಬಕ್ಕೆ ಈ ಚಿತ್ರ ಆರಂಭವಾಗಿತ್ತು. ದರ್ಶನ್ ಅವರು ಶೀರ್ಷಿಕೆ ಅನಾವರಣ ಮಾಡಿದ್ದರು. ಈ ಬಾರಿಯ ಹುಟ್ಟುಹಬ್ಬದ ಸಂದರ್ಭದಲ್ಲಿ (ನವೆಂಬರ್ 10) ಚಿತ್ರ ಬಿಡುಗಡೆಯಾಗುತ್ತದೆ. ಯೋಗರಾಜ್ ಭಟ್ ಅವರು ಬಹಳ ಶ್ರಮವಹಿಸಿ ಚಿತ್ರವನ್ನು ಉತ್ತಮವಾಗಿ ನಿರ್ದೇಶನ ಮಾಡಿದ್ದಾರೆ. ನಾನು ಈಗಾಗಲೇ ಚಿತ್ರವನ್ನು ಸಾಕಷ್ಟು ಸಲ ನೋಡಿ ಖುಷಿ ಪಟ್ಟಿದ್ದೇನೆ. ನಿಮಗೂ ಚಿತ್ರ ಹಿಡಿಸಲಿದೆ ಎಂದರು ಹಿರಿಯ ನಟ ಬಿ.ಸಿ.ಪಾಟೀಲ್. ಇದನ್ನೂ ಓದಿ:‘ಲಿಯೋ’ ಬಿಡುಗಡೆಗೂ ಮುನ್ನ ಮತ್ತೊಂದು ಸಿನಿಮಾ ಘೋಷಿಸಿದ ವಿಜಯ್

    ಈ ಚಿತ್ರದಲ್ಲೂ ನನ್ನ ಹೆಸರು ಸೂರ್ಯ ಅಂತ. ಎಲ್ಲರೂ ಗರಡಿ ಸೂರಿ ಅಂತ ಕರೆಯುತ್ತಿರುತ್ತಾರೆ. ಈ ಚಿತ್ರದಲ್ಲಿ ನನಗೆ ಅವಕಾಶ ಸಿಗಲು ದರ್ಶನ್ ಅವರು ಕಾರಣ. ಅವರು ಸಹ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನು ಇಂದು ಬಿಡುಗಡೆಯಾಗಿರುವ ಟೈಟಲ್ ಸಾಂಗ್ ನಲ್ಲಿ ನಾನು ಸಖತ್ ಡ್ಯಾನ್ಸ್ ಮಾಡಿದ್ದೇನೆ. ಯೋಗರಾಜ್ ಭಟ್ ಅವರ ಸಾಹಿತ್ಯ ಹಾಗೂ ಹರಿಕೃಷ್ಣ ಅವರ ಸಂಗೀತದಲ್ಲಿ ಹಾಡು ಅದ್ಭುತವಾಗಿ ಮೂಡಿಬಂದಿದೆ ಎನ್ನುತ್ತಾರೆ ನಾಯಕ ಸೂರ್ಯ.

    ನಾಯಕಿ ಸೋನಾಲ್ ಮಾಂತೆರೊ, ಚಿತ್ರದಲ್ಲಿ ನಟಿಸಿರುವ ಸುಜಯ್, ಧರ್ಮಣ್ಣ, ರಾಘು, ಛಾಯಾಗ್ರಾಹಕ ನಿರಂಜನ್ ಬಾಬು, ನೃತ್ಯ ನಿರ್ದೇಶಕ ಧನಂಜಯ ಚಿತ್ರದ ಕುರಿತು ಮಾತನಾಡಿದರು. ನಿರ್ಮಾಪಕಿ ವನಜಾ ಪಾಟೀಲ್ ಎಲ್ಲರಿಗೂ ಧನ್ಯವಾದ ತಿಳಿಸಿದರು. ಕಾರ್ಯಕಾರಿ ನಿರ್ಮಾಪಕಿ ಸೃಷ್ಟಿ ಪಾಟೀಲ್ ಗರಡಿ ಚಿತ್ರ ಸಾಗಿಬಂದ ಬಗ್ಗೆ ವಿವರಣೆ ನೀಡಿದರು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ‘ಛೂಮಂತರ್’ ಸಿನಿಮಾದ ಟೈಟಲ್ ಟ್ರ್ಯಾಕ್ ರಿಲೀಸ್ ಮಾಡಿದ ರವಿಚಂದ್ರನ್

    ‘ಛೂಮಂತರ್’ ಸಿನಿಮಾದ ಟೈಟಲ್ ಟ್ರ್ಯಾಕ್ ರಿಲೀಸ್ ಮಾಡಿದ ರವಿಚಂದ್ರನ್

    ರುಣ್ ಸ್ಟುಡಿಯೋಸ್ ಲಾಂಛನದಲ್ಲಿ ತರುಣ್ ಶಿವಪ್ಪ (Tarun Shivappa) ಹಾಗೂ ಮಾನಸ ತರುಣ್ ನಿರ್ಮಿಸಿರುವ, ನವನೀತ್ ನಿರ್ದೇಶನದಲ್ಲಿ ಶರಣ್ (Sharan) ನಾಯಕರಾಗಿ ನಟಿಸಿರುವ ‘ಛೂ ಮಂತರ್’ (Choomantar) ಚಿತ್ರದ ಟೈಟಲ್ ಟ್ರ್ಯಾಕ್ ನಿನ್ನೆ ಅದ್ಧೂರಿ ಸಮಾರಂಭದಲ್ಲಿ ಬಿಡುಗಡೆಯಾಗಿದೆ. ಕ್ರೇಜಿ ಸ್ಟಾರ್ ವಿ.ರವಿಚಂದ್ರನ್ (Ravichandran)  ಅವರು ಟೈಟಲ್ ಟ್ರ್ಯಾಕ್ (Title Track) ಬಿಡುಗಡೆ ಮಾಡಿದರು.

    ಚಿತ್ರತಂಡದವರ ಮಾತು ಕೇಳಿದಾಗ ಈ ತಂಡದಿಂದ ಒಳ್ಳೆಯ ಚಿತ್ರ ಬರುವ ಎಲ್ಲಾ ಲಕ್ಷಣಗಳು ಇದೆ ಎಂದು ಮಾತು ಆರಂಭಿಸಿದ ಕ್ರೇಜಿಸ್ಟಾರ್ ರವಿಚಂದ್ರನ್, ಶರಣ್ ಒಬ್ಬ ಒಳ್ಳೆಯ ನಟ. ಆತನ ಚಿತ್ರದಲ್ಲಿ ಎರಡು ಹಾಡುಗಳು ಹಿಟ್ ಆಗೇ ಆಗುತ್ತದೆ. ಚಂದನ್ ಶೆಟ್ಟಿ ಸಂಗೀತದಲ್ಲಿ ಮೂಡಿ ಬಂದಿರುವ ಈ ಹಾಡು ಕೂಡ ಚೆನ್ನಾಗಿದೆ. ನಿರ್ಮಾಪಕ ತರುಣ್ ಸೇರಿದಂತೆ ಇಡೀ ಚಿತ್ರತಂಡಕ್ಕೆ ಒಳ್ಳೆಯದಾಗಲಿ. ಚಿತ್ರ ಯಶಸ್ವಿಯಾಗಲಿ ಎಂದು ಹಾರೈಸಿದರು.

    ನಾನು ನಾಯಕನಾಗಲು ರವಿಚಂದ್ರನ್ ಅವರೆ ಕಾರಣ. ನಾನು ಅವರೊಂದಿಗೆ ಹಠವಾದಿ ಚಿತ್ರದಲ್ಲಿ ಅಭಿನಯಿಸಬೇಕಾದರೆ, ನೀನು ಇನ್ನು ನಾಯಕನಾಗಿಲ್ವಾ? ಎಂದು ಕೇಳಿದರು. ಆಮೇಲೆ ನಾಯಕನಾಗಬೇಕು ಎಂದು ಯಾವತ್ತೂ ಅಂದುಕೊಂಡಿರದ ನಾನು, ಅವರು ಹೇಳಿದ ಎರಡು ವರ್ಷಗಳಲ್ಲೇ ನಾಯಕನಾದೆ. ಅಷ್ಟು ಒಳ್ಳೆಯ ಮನಸ್ಸು ರವಿ ಸರ್ ಅವರದು. ಇಂದು ನಮ್ಮ ಚಿತ್ರದ ಹಾಡನ್ನು ಅವರು ಬಿಡುಗಡೆ ಮಾಡಿದ್ದು ಖುಷಿಯಾಗಿದೆ. ಇನ್ನೂ ಇಂದು ಬಿಡುಗಡೆಯಾಗಿರುವ ಹಾಡಿನ ಬಗ್ಗೆ ಹೇಳಬೇಕಾದರೆ, ಚಂದನ್ ಶೆಟ್ಟಿ ಅಮೋಘವಾಗಿ ಸಂಗೀತ ನೀಡಿ ಹಾಡಿದ್ದಾರೆ‌. ವಿಜಯ್ ಈಶ್ವರ್ ಈ ಹಾಡನ್ನು ಬರೆದಿದ್ದು, ದರ್ಶಿನಿ ನೃತ್ಯ ಸಂಯೋಜನೆ ಮಾಡಿದ್ದಾರೆ. ನಾನು, ಚಿಕ್ಕಣ್ಣ ಹಾಗೂ ಅದಿತಿ ಪ್ರಭುದೇವ ಅಭಿನಯಿಸಿದ್ದೇವೆ‌ ಎಂದು ನಾಯಕ ಶರಣ್ ತಿಳಿಸಿದರು‌.

    ನಾನು, ರವಿ ಸರ್ ಅವರಿಗೆ ಕೆಲವು ದಿನಗಳ ಹಿಂದೆ ಟೀಸರ್ ತೋರಿಸಿದ್ದೆ. ಟೈಟಲ್ ಟ್ರ್ಯಾಕ್ ಅನ್ನು ನೀವೇ ಬಿಡುಗಡೆ ಮಾಡಿಕೊಡಬೇಕೆಂದು ಕೇಳಿಕೊಂಡಿದ್ದೆ. ಇಂದು ರವಿಚಂದ್ರನ್ ಸರ್ ಬಂದು ಈ ಹಾಡನ್ನು ಬಿಡುಗಡೆ ಮಾಡಿದ್ದಾರೆ.  ರವಿ ಸರ್ ಅವರಿಗೆ,  ಈ ಚಿತ್ರದ ಟೈಟಲ್ ನೀಡಿದ್ದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಿಗೆ ಹಾಗೂ ಕಥೆ ಮೆಚ್ಚಿ ಪ್ರೋತ್ಸಾಹ ನೀಡಿದ ತರುಣ್ ಸುಧೀರ್ ಅವರಿಗೆ ಈ ಸಂದರ್ಭದಲ್ಲಿ ನಾನು ಧನ್ಯವಾದ ತಿಳಿಸುತ್ತೇನೆ. ಇಂದು ಟೈಟಲ್ ಟ್ರ್ಯಾಕ್ ಬಿಡುಗಡೆ ಮಾಡಿದ್ದೇವೆ. ಸದ್ಯದಲ್ಲೇ ಟ್ರೇಲರ್ ಸಹ ಬರಲಿದೆ. ನಮ್ಮ ಚಿತ್ರಕ್ಕೆ ನಿಮ್ಮ ಪ್ರೋತ್ಸಾಹವಿರಲಿ ಎಂದರು ನಿರ್ಮಾಪಕ ತರುಣ್ ಶಿವಪ್ಪ.

    ಚಿತ್ರ ಚೆನ್ನಾಗಿ ಮೂಡಿಬರಲು ಸಹಕಾರ ನೀಡಿದ ಚಿತ್ರತಂಡಕ್ಕೆ ಹಾಗೂ ಆಗಮಿಸಿದ ಗಣ್ಯರಿಗೆ ನಿರ್ದೇಶಕ ನವನೀತ್ ಧನ್ಯವಾದ ತಿಳಿಸಿದರು‌. ಹಾಡಿ‌ನ ಬಗ್ಗೆ ಸಂಗೀತ ನಿರ್ದೇಶಕ ಹಾಗೂ ಗಾಯಕ ಚಂದನ್ ಶೆಟ್ಟಿ ಮಾಹಿತಿ ನೀಡಿದರು.

     

    ನಟಿಯರಾದ ‌ಅದಿತಿ ಪ್ರಭುದೇವ ಹಾಗೂ ಮೇಘನಾ ಗಾಂವ್ಕರ್ ತಮ್ಮ ಪಾತ್ರದ ಬಗ್ಗೆ ಮಾತನಾಡಿದರು. ಛಾಯಾಗ್ರಾಹಕ ಅನೂಪ್, ಹಾಡು ಬರೆದಿರುವ ವಿಜಯ್ ಈಶ್ವರ್, ನೃತ್ಯ ಸಂಯೋಜಕಿ ದರ್ಶಿನಿ ಮುಂತಾದವರು ಚಿತ್ರದ ಬಗ್ಗೆ ತಮ್ಮ ಅನುಭವ ಹಂಚಿಕೊಂಡರು. ಸಾಹಸ ಸಂಯೋಜಕ ರವಿವರ್ಮ, ನಿರ್ಮಾಪಕ ಸಂಜಯ್ ಗೌಡ ಸೇರಿದಂತೆ ಅನೇಕ ಗಣ್ಯರು ಹಾಡು ಬಿಡುಗಡೆ ಸಮಾರಂಭದಲ್ಲಿ ಹಾಜರಿದ್ದರು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ‘ಸಪ್ತ ಸಾಗರದಾಚೆ ಎಲ್ಲೋ’ ಟೈಟಲ್ ಟ್ರ್ಯಾಕ್ ಗೆ ಫ್ಯಾನ್ಸ್ ಫಿದಾ

    ‘ಸಪ್ತ ಸಾಗರದಾಚೆ ಎಲ್ಲೋ’ ಟೈಟಲ್ ಟ್ರ್ಯಾಕ್ ಗೆ ಫ್ಯಾನ್ಸ್ ಫಿದಾ

    ಕ್ಷಿತ್ ಶೆಟ್ಟಿ ನಾಯಕರಾಗಿ ನಟಿಸಿ, ನಿರ್ಮಾಣ ಮಾಡಿರುವ ‘ಸಪ್ತ ಸಾಗರದಾಚೆ ಎಲ್ಲೋ’ (Hemanth M Rao) ಚಿತ್ರದ ಟೈಟಲ್ ಟ್ರ್ಯಾಕ್ (Title Track) ಮೊನ್ನೆಯಷ್ಟೇ ಬಿಡುಗಡೆಯಾಗಿದೆ. ಚರಣ್ ರಾಜ್ ಸಂಗೀತ ಸಂಯೋಜಿಸಿರುವ ಹಾಗೂ ಧನಂಜಯ್ ರಂಜನ್ ಬರೆದಿರುವ ಈ ಶೀರ್ಷಿಕೆ ಗೀತೆಯನ್ನು ಕಪಿಲ್ ಕಪಿಲನ್ ಹಾಡಿದ್ದಾರೆ. ಹಾಡು ಬಿಡುಗಡೆಯಾದ ಕ್ಷಣದಿಂದಲೇ ಅಧಿಕ ಸಂಖ್ಯೆಯಲ್ಲಿ ವೀಕ್ಷಣೆಯಾಗುತ್ತಿದೆ. ಈ ಸುಮಧುರ ಹಾಡಿಗೆ ಅಭಿಮಾನಿಗಳು ಫಿದಾ ಆಗಿದ್ದಾರೆ.

    ಸಪ್ತ ಸಾಗರದಾಚೆ ಎಲ್ಲೋ (Sapta Saagaradache Elo) ಚಿತ್ರದ  ಸೈಡ್ 1 ಸೆಪ್ಟೆಂಬರ್ 1 ರಂದು ಬಿಡುಗಡೆಯಾಗಲಿದ್ದು, ಸೈಡ್ 2 ಅಕ್ಟೋಬರ್ 20ಕ್ಕೆ ತೆರೆ ಕಾಣಲಿದೆ. ಬಹು ನಿರೀಕ್ಷಿತ ಈ ಚಿತ್ರದ ಬಿಡುಗಡೆಗೆ ರಕ್ಷಿತ್ ಶೆಟ್ಟಿ (Rakshit Shetty) ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಇದನ್ನೂ ಓದಿ:ಸಿಕ್ಸ್ ಪ್ಯಾಕ್ ಅವತಾರದಲ್ಲಿ ಚಾರ್ಲಿ ಬೆಡಗಿ ಸಂಗೀತಾ

    ಹೇಮಂತ್ ಎಂ ರಾವ್ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ರಕ್ಷಿತ್ ಶೆಟ್ಟಿ ಹಾಗೂ ಹೇಮಂತ್ ಎಂ ರಾವ್ ಕಾಂಬಿನೇಶನ್ ನಲ್ಲಿ ಬರುತ್ತಿರುವ ಈ ಚಿತ್ರದ ಬಗ್ಗೆ ಸಾಕಷ್ಟು ನಿರೀಕ್ಷೆ ಇದೆ.  ರಕ್ಷಿತ್ ಶೆಟ್ಟಿ, ರುಕ್ಮಿಣಿ ವಸಂತ್, ಚೈತ್ರ ಜೆ ಆಚಾರ್, ಅವಿನಾಶ್, ಶರತ್ ಲೋಹಿತಾಶ್ವ, ಅಚ್ಯತಕುಮಾರ್, ಪವಿತ್ರ ಲೋಕೇಶ್, ರಮೇಶ್ ಇಂದಿರಾ, ಗೋಪಾಲಕೃಷ್ಣ ದೇಶಪಾಂಡೆ ಮುಂತಾದವರು ತಾರಾಬಳಗದಲ್ಲಿದ್ದಾರೆ.

    ಅದ್ವೈತ ಗುರುಮೂರ್ತಿ ಛಾಯಾಗ್ರಹಣ ಹಾಗೂ ಸುನೀಲ್ ಭಾರದ್ವಾಜ್ ಸಂಕಲನ “ಸಪ್ತ. ಸಾಗರದಾಚೆ ಎಲ್ಲೋ ಚಿತ್ರಕ್ಕಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಖ್ಯಾತ ಗಾಯಕ ನಕಾಶ್ ಅಜೀಜ್ ಕಂಠಸಿರಿಯಲ್ಲಿ ‘ಹೊಯ್ಸಳ’ ಟೈಟಲ್ ಟ್ರ್ಯಾಕ್

    ಖ್ಯಾತ ಗಾಯಕ ನಕಾಶ್ ಅಜೀಜ್ ಕಂಠಸಿರಿಯಲ್ಲಿ ‘ಹೊಯ್ಸಳ’ ಟೈಟಲ್ ಟ್ರ್ಯಾಕ್

    ಡಾಲಿ ಧನಂಜಯ (Dhananjay) ನಾಯಕರಾಗಿ ಅಭಿನಯಿಸಿರುವ ಬಹು ನಿರೀಕ್ಷಿತ ‘ಹೊಯ್ಸಳ’ (Hoysala) ಚಿತ್ರದ ಟೈಟಲ್ ಟ್ರ್ಯಾಕ್ ಬಿಡುಗಡೆಯಾಗಿದೆ‌‌. ತಮ್ಮ ಅಮೋಘ ಕಂಠದಿಂದ ಜನಪ್ರಿಯವಾಗಿರುವ ನಕಾಶ್ ಅಜೀಜ್ (Nakash Aziz) ಈ ಭರ್ಜರಿ ಮಾಸ್ ಸಾಂಗ್ ಅನ್ನು ಅಮೋಘವಾಗಿ ಹಾಡಿದ್ದಾರೆ. Rap ಗೆ ಯೋಗಿ ಬಿ ಧ್ವನಿಯಾಗಿದ್ದಾರೆ.

    ಸಂತೋಷ್ ಆನಂದರಾಮ್ ಈ ಹಾಡನ್ನು ಬರೆದಿದ್ದಾರೆ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕೆಸಿಸಿ ಪಂದ್ಯದ ವೇಳೆ ಈ ಹಾಡು ಪ್ಲೇ ಆಗಿದೆ. ಕ್ರೀಡಾಂಗಣದಲ್ಲಿದ್ದ ಗಣ್ಯರು ಹಾಗೂ ಪ್ರೇಕ್ಷಕರು ಹಾಡಿಗೆ ಮೆಚ್ಚುಗೆ ಸೂಚಿಸಿದ್ದಾರೆ. ಸಮಾಜಿಕ ತಾಣದಲ್ಲೂ ಹಾಡಿಗೆ ಭಾರೀ‌ ಪ್ರಶಂಸೆ ವ್ಯಕ್ತವಾಗುತ್ತಿದೆ. ಅಜನೀಶ್ ಲೋಕನಾಥ್ ಸಂಗೀತ ನೀಡಿದ್ದಾರೆ.

    ಬಿಡುಗಡೆಗೂ ಮುನ್ನವೇ ಸಾಕಷ್ಟು ನಿರೀಕ್ಷೆ ಮೂಡಿಸಿರುವ ಈ ಚಿತ್ರ ಮಾರ್ಚ್ 30, ಶ್ರೀರಾಮನವಮಿ ಶುಭದಿನದಂದು ತೆರೆಗೆ ಬರಲಿದೆ. ವಿಜಯ್ ಕಿರಗಂದೂರು ಅರ್ಪಿಸುವ, ಕೆ.ಆರ್.ಜಿ ಸ್ಟುಡಿಯೋಸ್ ಲಾಂಛನದಲ್ಲಿ ಕಾರ್ತೀಕ್ ಗೌಡ ಹಾಗೂ ಯೋಗಿ ಜಿ ರಾಜ್ ನಿರ್ಮಿಸಿದ್ದಾರೆ.

    ವಿಜಯ್ ನಾಗೇಂದ್ರ ನಿರ್ದೇಶನದ ಈ ಚಿತ್ರದಲ್ಲಿ ಧನಂಜಯ, ಜಯದೇವ ಹೊಯ್ಸಳ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅಮೃತ ಅಯ್ಯಂಗಾರ್ ಈ ಚಿತ್ರದ ನಾಯಕಿ.  ಅಚ್ಯುತಕುಮಾರ್, ಪ್ರತಾಪ್ ನಾರಾಯಣ್, ನವೀನ್ ಶಂಕರ್, ಅವಿನಾಶ್ ಕೆ.ಜಿ.ಎಫ್, ರಾಘು ಶಿವಮೊಗ್ಗ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

  • ಬುಕ್ ಮೈ ಶೋ, ಐಎಂಡಿಬಿಯಲ್ಲೂ ನನ್ನಪ್ರಕಾರದ್ದೇ ಹವಾ!

    ಬುಕ್ ಮೈ ಶೋ, ಐಎಂಡಿಬಿಯಲ್ಲೂ ನನ್ನಪ್ರಕಾರದ್ದೇ ಹವಾ!

    ಬೆಂಗಳೂರು:  ಪ್ರಿಯಾಮಣಿ, ಕಿಶೋರ್ ಮತ್ತು ಮಯೂರಿ ಮುಖ್ಯಭೂಮಿಕೆಯಲ್ಲಿ ನಟಿಸಿರುವ ನನ್ನಪ್ರಕಾರ ಚಿತ್ರ ಈ ವಾರ ತೆರೆಗಾಣುತ್ತಿದೆ. ಮೋಷನ್ ಪೋಸ್ಟರ್, ಹಾಡು ಮತ್ತು ಇತ್ತೀಚೆಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಬಿಡುಗಡೆಗೊಳಿಸಿರೋ ಟ್ರೇಲರ್‍ಗಳೆಲ್ಲವೂ ನನ್ನಪ್ರಕಾರವನ್ನು ಬಹುನಿರೀಕ್ಷಿತ ಚಿತ್ರವಾಗಿ ನೆಲೆಗಾಣಿಸಿದೆ. ಹೊಸಬರ ಚಿತ್ರಗಳು ಕನ್ನಡ ಚಿತ್ರರಂಗದ ಗೌಜು ಗದ್ದಲ ಮೀರಿಕೊಂಡು ಸದ್ದು ಮಾಡೋದೇ ಒಂದು ಸಾಹಸ. ಅಂಥಾದ್ದರಲ್ಲಿ ಈ ಚಿತ್ರ ದೇಶಮಟ್ಟದಲ್ಲಿ ಗಮನ ಸೆಳೆಯೋದರೊಂದಿಗೆ ಪ್ರತೀ ಪ್ರೇಕ್ಷಕರಲ್ಲೂ ನೋಡಲೇಬೇಕೆನ್ನುವ ಉತ್ಸಾಹ ಹೆಚ್ಚಿಸಿಬಿಟ್ಟಿದೆ.

    ವಿನಯ್ ಬಾಲಾಜಿ ನಿರ್ದೇಶನ ಮಾಡಿರೋ ನನ್ನ ಪ್ರಕಾರ ಚಿತ್ರ ಐಎಂಡಿಬಿಯಲ್ಲಿಯೂ ಮೂರನೇ ಸ್ಥಾನ ಪಡೆದುಕೊಳ್ಳುವ ಮೂಲಕ ಅಚ್ಚರಿಗೆ ಕಾರಣವಾಗಿತ್ತು. ಆ ಸಾಲಿನಲ್ಲಿ ಬಾಲಿವುಡ್ ಚಿತ್ರಗಳಿಗೇ ಪೈಪೋಟಿ ನೀಡಿದ್ದ ಈ ಕನ್ನಡ ಚಿತ್ರದ ಬಗ್ಗೆ ಪರಭಾಷಾ ಚಿತ್ರರಂಗದಲ್ಲಿಯೂ ಒಲವು ಹುಟ್ಟಿಕೊಂಡಿತ್ತು. ಇದೀಗ ಬಿಡುಗಡೆಯ ಕಡೇ ಕ್ಷಣಗಳಲ್ಲಿ ಬುಕ್ ಮೈ ಶೋನಲ್ಲಿಯೂ ಕೂಡಾ ಈ ಚಿತ್ರ ಟ್ರೆಂಡಿಂಗ್‍ನಲ್ಲಿದೆ. ಇದನ್ನು ನೋಡಲೇ ಬೇಕೆಂಬ ಪ್ರೇಕ್ಷಕರ ಉತ್ಸಾಹ ಎಂಥಾದ್ದಿದೆ ಅನ್ನೋದಕ್ಕೂ ಬುಕ್ ಮೈ ಶೋನಲ್ಲಿ ಸಾಕ್ಷಿಗಳಿವೆ.

    ಇನ್ನು ಎಲ್ಲ ವರ್ಗದ ಪ್ರೇಕ್ಷರನ್ನೂ ಕೂಡಾ ನನ್ನ ಪ್ರಕಾರ ಈಗಾಗಲೇ ಆವರಿಸಿಕೊಂಡಿದೆ. ಇತ್ತೀಚೆಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಬಲು ಪ್ರೀತಿಯಿಂದ ಇದರ ಟ್ರೇಲರ್ ಅನ್ನು ಲಾಂಚ್ ಮಾಡಿದ್ದರು. ಖುದ್ದು ದರ್ಶನ್ ಅವರೇ ಅದನ್ನು ನೋಡಿ ಥ್ರಿಲ್ ಆಗಿದ್ದರು. ಈ ಚಿತ್ರ ದೊಡ್ಡಮಟ್ಟದಲ್ಲಿ ಗೆಲುವು ಕಾಣಲಿದೆ ಅನ್ನೋದರ ಸಂಕೇತದಂಥಾ ಮಾತುಗಳನ್ನೂ ಆಡಿದ್ದರು. ಆ ನಂತರದಲ್ಲಿಯಂತೂ ನನ್ನ ಪ್ರಕಾರ ಯೂಟ್ಯೂಬ್‍ನಲ್ಲಿಯೂ ವ್ಯಾಪಕ ವೀಕ್ಷಣೆ ಪಡೆದುಕೊಂಡು ಮುನ್ನುಗ್ಗುತ್ತಿದೆ. ಒಟ್ಟಾರೆಯಾಗಿ ಇದೊಂದು ಹೊಸಾ ಅಲೆಯ, ಪ್ರಯೋಗಾತ್ಮಕ ಅಂಶಗಳಿರೋ ಸಸ್ಪೆನ್ಸ್ ಥ್ರಿಲ್ಲರ್ ಆಗಿ ಪ್ರೇಕ್ಷಕರನ್ನು ಥೇಟರಿನತ್ತ ಸಾಗಿ ಬರುವಂತೆ ಮಾಡಿದೆ.

  • ನನ್ನ ಪ್ರಕಾರ: ಏಳನೇ ತಾರೀಕು ಕಾದಿದೆಯೊಂದು ಅಚ್ಚರಿ!

    ನನ್ನ ಪ್ರಕಾರ: ಏಳನೇ ತಾರೀಕು ಕಾದಿದೆಯೊಂದು ಅಚ್ಚರಿ!

    ಬೆಂಗಳೂರು: ಯಶಸ್ವಿ ಚಿತ್ರವೊಂದು ಬಿಡುಗಡೆಗೂ ಮುನ್ನವೇ ಯಾವ್ಯಾವ ಥರದಲ್ಲಿ ಸುದ್ದಿಯಾಗಬಹುದೋ ಅಷ್ಟೆಲ್ಲ ರೀತಿಯಲ್ಲಿ ಸದ್ದು ಮಾಡುತ್ತಿರೋ ಚಿತ್ರ ನನ್ನ ಪ್ರಕಾರ. ವಿನಯ್ ಬಾಲಾಜಿ ನಿರ್ದೇಶನದಲ್ಲಿ ಮೂಡಿ ಬಂದಿರೋ ಈ ಚಿತ್ರದ ಮುಖ್ಯಭೂಮಿಕೆಯಲ್ಲಿ ಪ್ರಿಯಾಮಣಿ ನಟಿಸುತ್ತಿದ್ದಾರೆ. ಪ್ರತಿಭಾವಂತ ನಟ ಕಿಶೋರ್ ಕುಮಾರ್ ಕೂಡಾ ಪ್ರಧಾನ ಪಾತ್ರದಲ್ಲಿ ಮಿಂಚಲಣಿಯಾಗಿದ್ದಾರೆ. ಎಲ್ಲ ದಿಕ್ಕುಗಳಲ್ಲಿಯೂ ಕುತೂಹಲಕ್ಕೆ ಕಾರಣವಾಗಿರೋ ಈ ಚಿತ್ರ ಬಿಡುಗಡೆಯ ದಿನಾಂಕ ಹತ್ತಿರಾಗುತ್ತಿರೋ ಘಳಿಗೆಯಲ್ಲಿ ಮಹತ್ವದ ಟೈಟಲ್ ಸಾಂಗ್‍ವೊಂದನ್ನು ಲಾಂಚ್ ಮಾಡಲು ನಿರ್ಧರಿಸಿದೆ.

    ಟೈಟಲ್ ಟ್ರ್ಯಾಕ್ ಎಂದರೆ ಒಂದಷ್ಟು ಸಿದ್ಧಸೂತ್ರಗಳಿದ್ದಾವೆ. ಆದರೆ ಒಂದಿಡೀ ಚಿತ್ರವನ್ನೇ ಹೊಸತನದಲ್ಲಿ ರೂಪಿಸಿರೋ ಚಿತ್ರತಂಡ ಟೈಟಲ್ ಟ್ರ್ಯಾಕ್ ವಿಚಾರದಲ್ಲಿ ಸಿದ್ಧಸೂತ್ಗಳಿಗೆ ಬದ್ಧವಾಗಿ ಆಲೋಚಿಸೋದು ಖಂಡಿತಾ ಸಾಧ್ಯವಿಲ್ಲ. ವಿನಯ್ ಬಾಲಾಜಿ ಈ ನಂಬಿಕೆಗೆ ತಕ್ಕುದಾಗಿಯೇ ಸದರಿ ಟೈಟಲ್ ಟ್ರ್ಯಾಕ್ ಅನ್ನು ರೂಪಿಸಿದ್ದಾರೆ. ಇದು ಏಳನೇ ತಾರೀಕು ಬುಧವಾರ ಸಂಜೆ ಜೀó ಮ್ಯೂಸಿಕ್ ಯೂಟ್ಯೂಬ್ ಚಾನೆಲ್‍ನಲ್ಲಿ ಬಿಡುಗಡೆಯಾಗಲಿದೆ.

    ಈ ಟೈಟಲ್ ಟ್ರ್ಯಾಕಿಗೆ ಭರ್ಜರಿ ಚೇತನ್ ಸಾಹಿತ್ಯ ಬರೆದಿದ್ದಾರೆ. ಇದರ ಸಾಹಿತ್ಯ ರಚನೆಯೂ ಕೂಡಾ ಚೇತನ್ ಪಾಲಿಗೆ ಸವಾಲಾಗಿತ್ತು. ಯಾಕೆಂದರೆ ಅದು ಇಡೀ ಕಥೆಯ ಅಂಶಗಳನ್ನು ಹೇಳುತ್ತಲೇ, ಪ್ರೇಕ್ಷಕರ ಗೊಂದಲ ನಿವಾರಣೆ ಮಾಡಿ ಒಂದು ಕ್ಲೂವನ್ನು ಕೂಡಾ ಪ್ರೇಕ್ಷಕರತ್ತ ದಾಟಿಸುವಂತಿರಬೇಕಿತ್ತಂತೆ. ಆದರೆ ಇಂಥಾ ಸವಾಲು ಸ್ವೀಕರಿಸಿದ್ದ ಚೇತನ್ ತುಂಬಾ ಕಡಿಮೆ ಅವಧಿಯಲ್ಲಿಯೇ ಈ ಹಾಡು ಬರೆದು ಕೊಟ್ಟಿದ್ದರಂತೆ. ಅರ್ಜುನ್ ರಾಮು ಅದಕ್ಕೆ ಅದ್ಭುತವಾದ ಸಂಗೀತ ಸಂಯೋಜನೆ ಮಾಡಿದರೂ ಕೂಡಾ ಅದಕ್ಕೆ ನಿರ್ದೇಶಕರ ನಿರೀಕ್ಷೆಯಂತೆ ಧ್ವನಿಯಾಗೋ ಗಾಯಕ ಮಾತ್ರ ಸಿಕ್ಕಿರಲಿಲ್ಲವಂತೆ. ಕಡೆಗೂ ಸಿಕ್ಕವರು ತಮಿಳಿನ ಸೂಪರ್ ಹಿಟ್ ಮೂವಿ ವಿಕ್ರಂ ವೇದಾಗೆ ಟೈಟಲ್ ಟ್ಯ್ರಾಕ್ ಹಾಡಿದ್ದ ಶಿವಂ.

    ಶಿವಂರನ್ನು ಸಂಪರ್ಕಿಸಿ, ಕಥೆ ಮತ್ತು ಹಾಡಿನ ಭಾವಗಳನ್ನು ವಿವರಿಸಿ ಒಂದಷ್ಟು ಕನ್ನಡ ಕಲಿಸುವಲ್ಲಿಯೂ ನಿರ್ದೇಶಕರು ಯಶ ಕಂಡಿದ್ದರು. ಹಾಗೆ ಶಿವಂ ಈ ಅದ್ಭುತ ಹಾಡಿಗೆ ಅದರಂತೆಯೇ ಧ್ವನಿ ನೀಡಿದ್ದಾರಂತೆ. ಕಥೆಯ ಸಾರವನ್ನು ಹೇಳುತ್ತಾ, ಪ್ರೇಕ್ಷಕರ ಗೊಂದಲ ನಿವಾರಣೆ ಮಾಡುತ್ತಾ ಕ್ಲೈಮ್ಯಾಕ್ಸ್ ಹಂತದಲ್ಲಿ ಈ ಹಾಡು ಬರಲಿದೆ. ಇದುವೇ ಕ್ಲೈಮ್ಯಾಕ್ಸ್ ನಲ್ಲೇನಾಗಲಿದೆ ಎಂಬ ಸುಳಿವನ್ನೂ ಕೊಡಲಿದೆ. ಈ ವಿಶೇಷವಾದ ಹಾಡು ಇದೇ ಬುಧವಾರ ಸಂಜೆ ಅನಾವರಣಗೊಳ್ಳಲಿದೆ.