Tag: Title Launch

  • ‘ಪೆಂಟಗನ್’ ನಂತರ ಮತ್ತೊಂದು ಚಿತ್ರಕ್ಕೆ ನಟ ರಾಘು ಶಿವಮೊಗ್ಗ ಡೈರೆಕ್ಷನ್

    ‘ಪೆಂಟಗನ್’ ನಂತರ ಮತ್ತೊಂದು ಚಿತ್ರಕ್ಕೆ ನಟ ರಾಘು ಶಿವಮೊಗ್ಗ ಡೈರೆಕ್ಷನ್

    ಚೌಕಬಾರ, ಚೂರಿಕಟ್ಟೆ, ಪೆಂಟಗನ್ ರೀತಿಯ ಹೊಸ ಬಗೆಯ ಸಿನಿಮಾಗಳನ್ನು ನಿರ್ದೇಶನ ಮಾಡಿದ್ದ, ರಾಜ್ಯ ಪ್ರಶಸ್ತಿ ವಿಜೇತ ನಿರ್ದೇಶಕ, ನಟ ರಾಘು ಶಿವಮೊಗ್ಗ (Raghu Shivamogga) ಇದೀಗ ಮತ್ತೊಂದು ಚಿತ್ರಕ್ಕೆ ನಿರ್ದೇಶನ ಮಾಡಲು ಮುಂದಾಗಿದ್ದಾರೆ. ಪೆಂಟಗನ್ ನಲ್ಲಿ ಬೋಲ್ಡ್ ಸಬ್ಜೆಕ್ಟ್ ಅನ್ನು ಆಯ್ಕೆ ಮಾಡಿಕೊಂಡಿದ್ದ ಇವರು, ಮುಂದಿನ ಸಿನಿಮಾಗಾಗಿ (New Movie) ಯಾವ ರೀತಿಯ ಕಥೆಯನ್ನು ಆಯ್ಕೆ ಮಾಡಿಕೊಂಡಿರಬಹುದು ಎನ್ನುವ ಕುತೂಹಲ ಮೂಡಿದೆ.

    ಅವರ ಮುಂದಿನ ಚಿತ್ರದ ಬಗ್ಗೆ ಯಾವುದೇ ಮಾಹಿತಿಯನ್ನು ನೀಡದೇ ಹೋದರೂ, ಅವರ ಹೊಸ ಚಿತ್ರದ ಶೀರ್ಷಿಕೆ (Title Launch) ಅನಾವರಣವನ್ನು ದುನಿಯಾ ವಿಜಯ್ (Duniya Vijay), ನಾಳೆ ಸಂಜೆ 5.31ಕ್ಕೆ ಮಾಡಲಿದ್ದಾರೆ. ವಿಜಯ್ ಈ ಸಿನಿಮಾದ ಟೈಟಲ್ ಲಾಂಚ್ ಮಾಡುತ್ತಿರುವುದರಿಂದ ಇದೊಂದು ಸಾಹಸ ಪ್ರಧಾನ ಸಿನಿಮಾ ಇರಬಹುದಾ ಎನ್ನುವ ಪ್ರಶ್ನೆ ಕೂಡ ಮೂಡಿದೆ. ಆದರೆ, ನಾಳೆಯೇ ಒಂದಷ್ಟು ವಿಷಯಗಳನ್ನು ಬಹಿರಂಗವಾಗಬಹುದು. ಇದನ್ನೂ ಓದಿ:ಚಂದ್ರನನ್ನು ಮುಟ್ಟಿದ ಭಾರತ- ಇಸ್ರೋ ಸಾಧನೆಗೆ ಭೇಷ್‌ ಎಂದ ಸ್ಟಾರ್ಸ್

    ನಿರ್ದೇಶಕನ ಕನಸ್ಹೊತ್ತು ಚಿತ್ರೋದ್ಯಮಕ್ಕೆ ಬಂದಿದ್ದ ರಾಘು, ಮೊದಲು ಚೌಕಬಾರ ಹೆಸರಿನ ಕಿರುಚಿತ್ರ ಮಾಡಿದರು. ಆ ಸಿನಿಮಾವನ್ನು ಥಿಯೇಟರ್ ಗೆ ರಿಲೀಸ್ ಮಾಡಿ, ಹೊಸ ಸಂಪ್ರದಾಯಕ್ಕೆ ನಾಂದಿ ಹಾಡಿದರು. ಆನಂತರ ಚೂರಿಕಟ್ಟೆ ಸಿನಿಮಾಗೆ ಆಕ್ಷನ್ ಕಟ್ ಹೇಳಿದರು. ಈ ಸಿನಿಮಾ ವಿಮರ್ಶಕರ ಮೆಚ್ಚುಗೆಗೆ ಪಾತ್ರವಾಯಿತು. ಅವರಿಗೂ ಒಳ್ಳೆಯ ಹೆಸರು ಬಂತು. ನಂತರ ಆಕ್ಟ್ 1978 ಸಿನಿಮಾಗೆ ನಟರಾಗಿ ಪ್ರವೇಶ ಮಾಡಿದರು. ಈ ಸಿನಿಮಾದಲ್ಲಿನ ಪಾತ್ರ ಅವರನ್ನು ಬ್ಯುಸಿ ನಟನನ್ನಾಗಿ ಮಾಡಿತು. ಸಾಕಷ್ಟು ಸಿನಿಮಾಗಳಲ್ಲಿ ನಟನಾಗಿಯೇ ಬ್ಯುಸಿಯಾದರು. ಈಗ ಮತ್ತೆ ನಿರ್ದೇಶನದತ್ತ ಮುಖ ಮಾಡಿದ್ದಾರೆ.

     

    ಹೊಸ ಸಿನಿಮಾದ ನಟರು, ತಾಂತ್ರಿಕ ವರ್ಗ ಯಾವುದನ್ನೂ ರಾಘು ಶಿವಮೊಗ್ಗ ಅವರು ಬಿಟ್ಟುಕೊಟ್ಟಿಲ್ಲ. ಕೇವಲ ಟೈಟಲ್ ಶೀರ್ಷಿಕೆಯ ಕುರಿತಾಗಿ ಮಾತ್ರ ಮಾಹಿತಿ ನೀಡಿದ್ದಾರೆ. ಪದ್ಮಾ ಪಿಕ್ಚರ್ಸ್ ಮತ್ತು ಗೌರಿ ಟಾಕೀಸ್ ಜಂಟಿಯಾಗಿ ಈ ಸಿನಿಮಾವನ್ನು ನಿರ್ಮಾಣ ಮಾಡುತ್ತಿವೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಶಿವರಾಜ್ ಸಕ್ರೆ ನಿರ್ದೇಶನದ ಚಿತ್ರಕ್ಕೆ ಡಾರ್ಲಿಂಗ್ ಕೃಷ್ಣ ಸಾಥ್

    ಶಿವರಾಜ್ ಸಕ್ರೆ ನಿರ್ದೇಶನದ ಚಿತ್ರಕ್ಕೆ ಡಾರ್ಲಿಂಗ್ ಕೃಷ್ಣ ಸಾಥ್

    ಡುಂಬಾ’ ಸಿನಿಮಾ ಮೂಲಕ ಚಂದನವನದಲ್ಲಿ ಭರವಸೆ ಮೂಡಿಸಿರುವ ನಿರ್ದೇಶಕ ಶಿವರಾಜ್ ಸಕ್ರೆ (Shivaraj Sakre) ಹೊಸದೊಂದು ಸಬ್ಜೆಕ್ಟ್ ಹೊತ್ತು ನಿರ್ದೇಶನಕ್ಕೆ ರೆಡಿಯಾಗಿದ್ದಾರೆ. ಥ್ರಿಲ್ಲರ್ ಜಾನರ್ ಒಳಗೊಂಡ ಈ ಚಿತ್ರದ ಟೈಟಲ್ ಹೊಸ ವರ್ಷದಂದು ರಿವೀಲ್ ಆಗಿದೆ. ನಟ ಡಾರ್ಲಿಂಗ್ ಕೃಷ್ಣ (Darling Krishna) ಟೈಟಲ್ ರಿವೀಲ್ ಮಾಡುವ ಮೂಲಕ ಶಿವರಾಜ್ ಸಕ್ರೆ ಸೆಕೆಂಡ್ ವೆಂಚರ್ ಗೆ ಶುಭ ಹಾರೈಸಿದ್ದಾರೆ. ‘ಷಡಕ್ಷರಿ ಸನ್ ಆಫ್ ಪಂಚಾಕ್ಷರಿ’ (Shadakshari S/O Panchakshari) ಎಂದು ಚಿತ್ರಕ್ಕೆ ಟೈಟಲ್ ಇಡಲಾಗಿದೆ.

    ‘ಷಡಕ್ಷರಿ ಸನ್ ಆಫ್ ಪಂಚಾಕ್ಷರಿ’ ಚಿತ್ರ ಥ್ರಿಲ್ಲರ್ ಜಾನರ್ ಒಳಗೊಂಡಿದ್ದು, ಪಕ್ಕಾ ಕಮರ್ಶಿಯಲ್ ಹಾದಿಯಲ್ಲಿ ಚಿತ್ರವನ್ನು ಕಟ್ಟಿಕೊಡಲಾಗುತ್ತಿದೆ. ಉಡುಂಬಾ ಸಿನಿಮಾ ನಂತರ ಥ್ರಿಲ್ಲರ್ ಜಾನರ್ ಕಥೆ ಹೆಣೆದು ಒಂದಿಷ್ಟು ಹೊಸತನದೊಂದಿಗೆ ನಿರ್ದೇಶಕ ಶಿವರಾಜ್ ಸಕ್ರೆ ಕಂ ಬ್ಯಾಕ್ ಮಾಡ್ತಿದ್ದಾರೆ. ಕಥೆ, ಚಿತ್ರಕಥೆ, ಸಂಭಾಷಣೆ ಜವಾಬ್ದಾರಿಯನ್ನು ನಿಭಾಯಿಸಿ ನಿರ್ದೇಶನ ಮಾಡಲು ಸಜ್ಜಾಗಿದ್ದಾರೆ. ಚಿತ್ರದ ಪ್ರಿ ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿದ್ದು ಜನವರಿ 28ಕ್ಕೆ ಸಿನಿಮಾ ಸೆಟ್ಟೇರಲಿದೆ. ಇದನ್ನೂ ಓದಿ: ನಾನಿಲ್ಲಿ ಗೆದ್ದಿರುವಂಥದ್ದು ನಿಮ್ಮಿಂದ, ನೀವು ನನ್ನನ್ನು ಗೆಲ್ಲಿಸಿದ್ದೀರಿ: ರೂಪೇಶ್ ಶೆಟ್ಟಿ

    ಚಿತ್ರದಲ್ಲಿ ಕಿಶೋರ್ ನಾಯಕ ನಟನಾಗಿ ನಟಿಸುತ್ತಿದ್ದಾರೆ. ‘ಐ1’ ಸಿನಿಮಾದ ಮೂಲಕ ನಾಯಕನಾಗಿ ಎಂಟ್ರಿ ಕೊಟ್ಟ ಕಿಶೋರ್ ಗಿದು ಎರಡನೇ ಸಿನಿಮಾ. ಚಿತ್ರದಲ್ಲಿ ಇಬ್ಬರು ನಾಯಕಿಯರಿದ್ದು, ಸದ್ಯದಲ್ಲೇ ಚಿತ್ರತಂಡ ಆ ಬಗ್ಗೆ ಮಾಹಿತಿ ಹಂಚಿಕೊಳ್ಳಲಿದೆ. ರಂಗಾಯಣ ರಘು, ಸುಜಯ್ ಶಾಸ್ತ್ರಿ, ತೆಲುಗು ಹಾಗೂ ತಮಿಳು ಸಿನಿಮಾ ಖ್ಯಾತಿಯ ಮಧುಸೂದನ್ ಚಿತ್ರದ ತಾರಾಬಳಗದಲ್ಲಿದ್ದಾರೆ.

    ಝೀ ವಾಹಿನಿಯ ಸರಿಗಮಪ ಮೆಂಟರ್ ಸುಚೇತನ್ ರಂಗಸ್ವಾಮಿ ಸಂಗೀತ ನಿರ್ದೇಶನ, ಕಬ್ಜ, ಮಾರ್ಟಿನ್, ನಟ ಸಾರ್ವಭೌಮ ಖ್ಯಾತಿಯ ಮಹೇಶ್ ರೆಡ್ಡಿ ಸಂಕಲನ ಚಿತ್ರಕ್ಕಿದೆ. ಭರ್ಜರಿ ಚೇತನ್, ಜೋಗಿ ಪ್ರೇಮ್, ಅಲೆಮಾರಿ ಸಂತು ಹಾಗೂ ಹೊಸ ಪ್ರತಿಭೆ ಸಂತೋಷ್ ಸಾಹಿತ್ಯದಲ್ಲಿ ಚಿತ್ರದ ಹಾಡುಗಳು ಮೂಡಿ ಬರಲಿದ್ದು, ಬೆಂಗಳೂರು, ಮಂಗಳೂರು, ಮೈಸೂರು, ಉಡುಪಿಯಲ್ಲಿ ಚಿತ್ರೀಕರಣ ನಡೆಸಲು ಚಿತ್ರತಂಡ ಪ್ಲ್ಯಾನ್ ಮಾಡಿಕೊಂಡಿದೆ.  ಎಸ್. ಪಿ ಪಿಕ್ಚರ್ಸ್ ಬ್ಯಾನರ್ ನಡಿ ಶೈಲಜಾ ಪ್ರಕಾಶ್ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದು, ‘ಐ 1’, ‘ಮೃತ್ಯುಂಜಯ’ ಸಿನಿಮಾ ನಂತರ ಎಸ್ ಪಿ ಪಿಕ್ಚರ್ಸ್ ನಿರ್ಮಿಸುತ್ತಿರುವ ಐದನೇ ಸಿನಿಮಾ ಇದಾಗಿದೆ.

    Live Tv
    [brid partner=56869869 player=32851 video=960834 autoplay=true]

  • ರಕ್ತಸಿಕ್ತ ಅಧ್ಯಾಯಕ್ಕೆ ನಾಯಕನಾಗಲಿದ್ದಾರಾ ನೀನಾಸಂ ಸತೀಶ್?: 20 ಕೋಟಿ ಬಜೆಟ್, ಪ್ಯಾನ್ ಇಂಡಿಯಾ ಸಿನಿಮಾ

    ರಕ್ತಸಿಕ್ತ ಅಧ್ಯಾಯಕ್ಕೆ ನಾಯಕನಾಗಲಿದ್ದಾರಾ ನೀನಾಸಂ ಸತೀಶ್?: 20 ಕೋಟಿ ಬಜೆಟ್, ಪ್ಯಾನ್ ಇಂಡಿಯಾ ಸಿನಿಮಾ

    ನ್ನಡದ ಸೆನ್ಸಿಬಲ್ ನಾಯಕ ಎಂದೇ ಖ್ಯಾತರಾಗಿರುವ ಹೆಸರಾಂತ ನಟ ನೀನಾಸಂ ಸತೀಶ್, ಅಭಿಮಾನಿಗಳಿಗೆ ಹೊಸದೊಂದು ಸುದ್ದಿ ಕೊಟ್ಟಿದ್ದಾರೆ. ಇದೇ ಮೇ 15ರಂದು ಅವರು ಹೊಸ ಸಿನಿಮಾದ ಟೈಟಲ್ ಲಾಂಚ್ ಮಾಡಲು ಸಿದ್ಧತೆ ಮಾಡಿಕೊಂಡಿದ್ದಾರೆ. ಈ ಹೊಸ ಸಿನಿಮಾದ ಟೈಟಲ್ ಲಾಂಚ್ ಆಮಂತ್ರಣ ಪತ್ರಿಕೆಯಲ್ಲಿ ರಕ್ತದಲ್ಲಿ ಮಿಂದೆದ್ದ ಬ್ಲೇಡ್ ಅನ್ನು ಬಳಸಿಕೊಂಡಿದ್ದು, ಇದು ರಕ್ತಸಿಕ್ತ ಅಧ್ಯಾಯದ ಕುರುಹು ಇರಬಹುದಾ? ಎನ್ನುವ ಕುತೂಹಲ ಮೂಡಿಸಿದ್ದಾರೆ. ಇದನ್ನೂ ಓದಿ : ಲೇಡಿ ಸೂಪರ್ ಸ್ಟಾರ್ ನಯನತಾರಾ ಚಿತ್ರದ ಮೂಲಕ ಖ್ಯಾತ ಕ್ರಿಕೆಟಿಗೆ ಧೋನಿ ಸಿನಿ ರಂಗಕ್ಕೆ ಎಂಟ್ರಿ

    ಇದೇ ಪೋಸ್ಟರ್ ನಲ್ಲಿಯೇ ‘ಎಲ್ಲಾ ಯುದ್ಧಗಳು, ಯುದ್ಧ ಭೂಮಿಯಲ್ಲೇ ನಡೆಯೊಲ್ಲ’ ಎನ್ನುವ ಟ್ಯಾಗ್ ಲೈನ್ ಕೂಡ ಬರೆದಿದ್ದು, ಅದು ಮನುಕುಲದ ಮಧ್ಯ ನಡೆದ ಯುದ್ಧದ ಕಥೆಯಾ ಎಂಬ ಪ್ರಶ್ನೆ ಕೂಡ ಮೂಡುವಂತೆ ಮಾಡಿದ್ದಾರೆ. ಬ್ಲೇಡ್ ಮತ್ತು ರಕ್ತ ಹಾಗೂ ಯುದ್ಧ ಪದಗಳ ಬಳಕೆಯಿಂದಾಗಿ ಈ ಸಿನಿಮಾ ಯಾವುದರ ಸುತ್ತ ಹೆಣೆದಿರುವ ಕಥೆ ಎನ್ನುವುದು ಸದ್ಯಕ್ಕೆ ಸಸ್ಪೆನ್ಸ್. ಮೇ15 ರಂದು ನಡೆಯಲಿರುವ ಮುಹೂರ್ತ ಮತ್ತು ಟೈಟಲ್ ಲಾಂಚ್ ದಿನ ಈ ಕುರಿತು ಒಂದಷ್ಟು ಮಾಹಿತಿ ಸಿಗಬಹುದು. ಇದನ್ನೂ ಓದಿ : ಕಂಗನಾಗೆ ಹುಡುಗರನ್ನು ಕಂಡರೆ ಆಗಲ್ಲವಂತೆ: ಅದಕ್ಕೆ ಮದುವೆ ಆಗಿಲ್ಲವಂತೆ

    ಈ ಸಿನಿಮಾದ ವಿಶೇಷ ಅಂದರೆ, ವೃದ್ಧಿ ಕ್ರಿಯೇಷನ್ ಮತ್ತು ಸತೀಶ್ ಪಿಕ್ಚರ್ ಹೌಸ್ ಜಂಟಿಯಾಗಿ ಸಿನಿಮಾವನ್ನು ನಿರ್ಮಾಣ ಮಾಡುತ್ತಿದೆ. ಕಿರುತೆರೆಯಲ್ಲಿ ಸಾಕಷ್ಟು ಹೆಸರು ಮಾಡಿರುವ ವಿನೋದ್ ದೋಂಡಾಳೆ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದು, ಸತೀಶ್ ಯಾವ ರೀತಿಯ ಪಾತ್ರವನ್ನು ನಿರ್ವಹಿಸಲಿದ್ದಾರೆ ಎನ್ನುವುದು ಕುತೂಹಲ. ಇದನ್ನೂ ಓದಿ : ವಿಜಯ್ ದೇವರಕೊಂಡ ಹೊಸ ಗರ್ಲ್ ಫ್ರೆಂಡ್ ಅನನ್ಯ ಪಾಂಡೆ? : ಮುನಿಸಿಕೊಂಡ್ರಾ ರಶ್ಮಿಕಾ ಮಂದಣ್ಣ

    ಈ ಕುರಿತು ಪಬ್ಲಿಕ್ ಟಿವಿ ಡಿಜಿಟಲ್ ಜತೆ ಮಾತನಾಡಿದ ಸತೀಶ್, ‘ಸಿನಿಮಾದ ಟೈಟಲ್ ತುಂಬಾ ವಿಶೇಷವಾಗಿದೆ. ಅಲ್ಲದೇ, ನಮ್ಮದೇ ನೆಲದ ಕಥೆಯನ್ನು ಹೇಳುತ್ತಿದ್ದೇವೆ. ಈವರೆಗೂ ನಿರ್ವಹಿಸದೇ ಇರುವ ಪಾತ್ರ ಅದಾಗಿದೆ. ಈ ಸಿನಿಮಾಗಾಗಿ ಲುಕ್ ಕೂಡ ಬದಲಾಗಲಿದೆ. ಈಗಲೇ ಸಿನಿಮಾದ ಬಗ್ಗೆ ಮಾತನಾಡುವುದು ಸರಿಯಾದದ್ದು ಅಲ್ಲ. ತೆರೆಯ ಮೇಲೆಯೇ ಕಥೆ ಮತ್ತು ಪಾತ್ರಗಳು ಪರಿಚಯವಾಗಲಿ’ ಎಂದರು. ಇದನ್ನೂ ಓದಿ : ಕಾಂಗ್ರೆಸ್‍ನಿಂದಲೇ ಟ್ರೋಲ್‍ಗೆ ಕರೆ – ನನ್ನನ್ನು ನಾನೇ ಟ್ರೋಲ್ ಮಾಡ್ಕೋತಿನಿ ಎಂದ ರಮ್ಯಾ

    ಈವರೆಗೂ ಕನ್ನಡದಲ್ಲಿ ನಾನಾ ರೀತಿಯ ಕಥೆಗಳು ಬಂದಿವೆ. ಆದರೆ, ಇದೇ ಮೊದಲ ಬಾರಿಗೆ ಇಂಥದ್ದೊಂದು ಕಥೆಯು ಭಾರತೀಯ ಸಿನಿಮಾ ರಂಗದಲ್ಲಿ ಬರುತ್ತಿರುವುದು ಸಿನಿಮಾಗಳ ವಿಶೇಷಗಳಲ್ಲಿ ಒಂದು. ಆದಷ್ಟು ನೈಜತೆಗೆ ಹತ್ತಿರವಾಗುವಂತೆ ಕಥೆಯನ್ನು ಹೇಳುತ್ತಿರುವುದಾಗಿ ಸಿನಿಮಾ ತಂಡದಿಂದ ಬಂದ ಮಾಹಿತಿ. ಹಾಗಾಗಿ ಇದು ನೈಜ ಘಟನೆಯನ್ನು ಆಧರಿಸಿದ ಸಿನಿಮಾನಾ? ಎನ್ನುವುದಕ್ಕೆ ಚಿತ್ರತಂಡವೇ ಉತ್ತರ ಕೊಡಬೇಕಿದೆ.

    ಪ್ಯಾನ್ ಇಂಡಿಯಾ ಸಿನಿಮಾ?

    ಸಿನಿಮಾ ತಂಡದಿಂದ ಸಿಕ್ಕಿರುವ ಮಾಹಿತಿ ಪ್ರಕಾರ ಸುಮಾರು 20 ಕೋಟಿಗೂ ಅಧಿಕ ವೆಚ್ಚದಲ್ಲಿ ಈ ಸಿನಿಮಾ ಮೂಡಿ ಬರಲಿದೆಯಂತೆ. ಭಾರೀ ಬಜೆಟ್ ಬೇಡುವಂತಹ ದೃಶ್ಯಗಳು ಸಿನಿಮಾದಲ್ಲಿ ಇರಲಿದ್ದು, ಯುದ್ಧ ಸನ್ನಿವೇಶವನ್ನು ಕ್ರಿಯೇಟ್ ಮಾಡಲಾಗುತ್ತಿದೆ ಎನ್ನುವ ಮಾಹಿತಿ ಕೂಡ ಇದೆ.

  • ಅಭಿಮಾನಿಗಳ ಬಗ್ಗೆ ಕೆಟ್ಟದಾಗಿ ಮಾತಾಡಿದ್ರೆ ದೇವರು ಒಳ್ಳೆದು ಮಾಡಲ್ಲ: ಪುನೀತ್ ರಾಜ್‍ಕುಮಾರ್

    ಅಭಿಮಾನಿಗಳ ಬಗ್ಗೆ ಕೆಟ್ಟದಾಗಿ ಮಾತಾಡಿದ್ರೆ ದೇವರು ಒಳ್ಳೆದು ಮಾಡಲ್ಲ: ಪುನೀತ್ ರಾಜ್‍ಕುಮಾರ್

    – ಅಭಿಮಾನಿಗಳ ಪರ `ಯುವರತ್ನ’ ಬ್ಯಾಟಿಂಗ್

    ಬೆಂಗಳೂರು: ಎಂದಿಗೂ ನಾವು ಹಾಗೂ ಅಭಿಮಾನಿಗಳು ಒಂದೆ. ಅಭಿಮಾನಿಗಳ ಬಗ್ಗೆ ಕೆಟ್ಟದಾಗಿ ಮಾತನಾಡಿದರೆ ದೇವರು ಒಳ್ಳೆದು ಮಾಡಲ್ಲ ಎಂದು ನಟ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಹೇಳಿದ್ದಾರೆ.

    ನಗರದ ಕಾವೇರಿ ಸಿನಿಮಾ ಮಂದಿರದಲ್ಲಿ ಪುನೀತ್ ಅಭಿನಯದ 29ನೇ ಸಿನಿಮಾದ ಟೈಟಲ್ `ಯುವರತ್ನ’ ಬಿಡುಗಡೆ ಕಾರ್ಯಕ್ರಮ ನಡೆಯಿತು. ಈ ವೇಳೆ ಮಾತನಾಡಿದ ಅವರು, ನಮ್ಮನ್ನ ಪ್ರೀತಿಯಿಂದ ಈ ಮಟ್ಟಕ್ಕೆ ಕರೆದುಕೊಂಡು ಬಂದಿದ್ದೀರಿ. ಅಭಿಮಾನಿಗಳಿಗೆ ಸದಾ ಧನ್ಯವಾದಗಳನ್ನು ಹೇಳುತ್ತೇನೆ. ಅಭಿಮಾನಿಗಳನ್ನ ಎಂದಿಗೂ ಬೇರೆ ವಿಚಾರಕ್ಕೆ ಬಳಸಿಕೊಂಡಿಲ್ಲ, ಬಳಸಿಕೊಳ್ಳುವುದಿಲ್ಲ. ಅವರ ಬಗ್ಗೆ ಕೆಟ್ಟದಾಗಿ ಮಾತನಾಡಿದ್ರೆ ದೇವರು ಒಳ್ಳೆಯದು ಮಾಡಲ್ಲ. ನಮ್ಮ ಕುಟುಂಬಕ್ಕೆ 50 ವರ್ಷಗಳಿಂದ ಅಭಿಮಾನಿಗಳ ಪ್ರೀತಿ ಸಿಕ್ಕಿದೆ ಎಂದರು.

    ಅಭಿಮಾನಿಗಳ ಪ್ರೀತಿಗೆ ನಾವು ಇದುವರೆಗೂ ಏನನ್ನೂ ಮಾಡಲು ಸಾಧ್ಯವಾಗಿಲ್ಲ. ಆದ್ರು ನಮಗೆ ನೀವು ನೀಡುವ ಪ್ರೀತಿ ಮುಂದುವರಿಯುತ್ತದೆ. ಒಳ್ಳೆ ಸಿನಿಮಾ ಮಾಡುವ ಮೂಲಕ ನಿಮ್ಮನ್ನು ರಂಜಿಸಿ ನಿಮಗೆ ಸಂತೋಷ ಪಡಿಸುತ್ತೇವೆ. ನಮ್ಮಿಂದ ಸಾಧ್ಯವಾಗುವುದು ಇಷ್ಟೇ. ಒಂದು ವರ್ಷದ ಬಳಿಕ ರಾಜಕುಮಾರ ಸಿನಿಮಾ ಬಳಿಕ ಅದೇ ಜೋಡಿ ನಿಮ್ಮ ಮುಂದೆ ಬರುತ್ತಿದೆ. ಅದೇ ಪ್ರೊಡಕ್ಷನ್ ನಲ್ಲಿ ಮಾಡುತ್ತಿರುವುದು ಮತ್ತೊಂದು ಖುಷಿ ನೀಡಿದೆ. ಸಿನಿಮಾ ಟೈಟಲ್ ಬಗ್ಗೆ ಅವರೇ ಯೋಚನೆ ಮಾಡಿ `ಯುವರತ್ನ’ ಎಂದು ಇಟ್ಟಿದ್ದಾರೆ. ಈ ವೇಳೆ ಅಭಿಮಾನಿಗಳು ಕೂಡ ನಮಗೇ ಸಾಥ್ ನೀಡಿದ್ದಾರೆ ಎಂದರು. ನಗರದ ಕಾವೇರಿ ಸಿನಿಮಾ ಮಂದಿರದಲ್ಲಿ ಶೀರ್ಷಿಕೆ ಅನಾವರಣ ಮಾಡಲಾಯಿತು. ನಿಮ್ಮ ಬೆಂಬಲ ನಮಗೆ ಹೀಗೆ ಮುಂದುವರಿಯಲಿ ಎಂದು ಮನವಿ ಮಾಡಿದರು.

    ಪುನೀತ್ ಅವರು ಈ ಹೇಳಿಕೆ ಏಕೆ ನೀಡಿದ್ದಾರೆ ಎಂಬುವುದು ಸ್ಪಷ್ಟವಾಗಿಲ್ಲ. ಕೆಲ ದಿನಗಳ ಹಿಂದೆ ನಿರ್ದೇಶಕ ಪ್ರೇಮ್ ಅವರು ವಿಲನ್ ಚಿತ್ರದ ಕುರಿತು ಕೆಟ್ಟದಾಗಿ ಮಾತನಾಡಿದ ಸಿನಿ ಅಭಿಮಾನಿಗಳ ವಿರುದ್ಧ ಗರಂ ಆಗಿ ಪ್ರತಿಕ್ರಿಯೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಪುನೀತ್ ಪ್ರೇಮ್ ಅವರ ಈ ಮಾತಿಗೆ ಹೀಗೆ ಹೇಳಿದ್ದಾರಾ ಎನ್ನುವ ಚರ್ಚೆ ಈಗ ಆರಂಭವಾಗಿದೆ.

    ಅಂಧ ಅಭಿಮಾನಿಯಾದ ವಿನುತಾ ಹಾಗೂ ಮಹೇಶ್ ಅವರಿಂದ ಯವರತ್ನ ಟೈಟಲ್ ಲಾಂಚ್ ಮಾಡಿಸಿದ ಸಿನಿಮಾ ತಂಡ ಇದೇ ವೇಳೆ ಖುಷಿ ಹಂಚಿಕೊಂಡಿತು. ರಾಜನ ಮಗ ಯುವರಾಜ, ಹೀಗಾಗಿ ಯುವರತ್ನ ಎಂದು ಟೈಟಲ್ ನೀಡಿದ್ದೇವೆ. ಸಿನಿಮಾದಲ್ಲಿ ಅಪ್ಪು 16 ವರ್ಷದ ಬಳಿಕ ಚಿತ್ರದ ಕಾಲೇಜು ಹುಡುಗನ ಪಾತ್ರದಲ್ಲಿ ನಟಿಸಲಿದ್ದಾರೆ ಎಂದು ನಿರ್ದೇಶಕ ಸಂತೋಷ್ ಆನಂದ್ ರಾಮ್ ತಿಳಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

    https://twitter.com/PRK_Trends/status/1057928931712610307