Tag: title

  • ಯಶ್ ಶೆಟ್ಟಿ ಚಿತ್ರಕ್ಕೆ ಟೈಟಲ್ ಫಿಕ್ಸ್ : ಡೈರೆಕ್ಟರ್ ಸುನಿ ಅನಾವರಣ

    ಯಶ್ ಶೆಟ್ಟಿ ಚಿತ್ರಕ್ಕೆ ಟೈಟಲ್ ಫಿಕ್ಸ್ : ಡೈರೆಕ್ಟರ್ ಸುನಿ ಅನಾವರಣ

    ಮ್ಮ ಅಮೋಘ ಅಭಿನಯದ ಮೂಲಕ ಜನರಮನ ಗೆದ್ದಿರುವ ಯಶ್ ಶೆಟ್ಟಿ (Yash Shetty) ನಾಯಕರಾಗಿ ನಟಿಸಿರುವ ನೂತನ ಚಿತ್ರದ (Jungle Mangal) ಶೀರ್ಷಿಕೆಯನ್ನು ನಿರ್ದೇಶಕ ಸಿಂಪಲ್ ಸುನಿ ಅನಾವರಣ ಮಾಡಿದರು. ನಂತರ ಸುನಿ ಹಾಗೂ ಚಿತ್ರತಂಡದವರು ಮಾತನಾಡಿದರು.

    ಇದು ಅರೆ ಮಲೆನಾಡಿನ ಕಾಡಿನಲ್ಲಿ ನಡೆಯುವ ಕಥೆ. ಅರೆ ಮಲೆನಾಡು ಎಂದರೆ ಘಟ್ಟದ ಮೇಲೆ ಹಾಗೂ ಘಟ್ಟದ ಕೆಳಗೆ ಎರಡು ಸಂಧಿಸುವ ಊರು. ಅಲ್ಲಿ ವಿವಿಧ ಸಂಸ್ಕೃತಿಯ ಜನರು ಇರುತ್ತಾರೆ. ಅಲ್ಲೊಂದು ದಟ್ಟವಾದ ಕಾಡು. ಆ ಕಾಡಿನಲ್ಲಿ ನಡೆಯುವ ಪ್ರೇಮಕಥೆಯೂ ಈ ಚಿತ್ರದಲ್ಲಿದೆ‌. ಚಿತ್ರದ ಅರ್ಧಕ್ಕೂ ಹೆಚ್ಚಿನ ಭಾಗದ ಚಿತ್ರೀಕರಣ ಸುಬ್ರಹ್ಮಣ್ಯದ ಬಳಿಯ ಕಾಡಿನಲ್ಲೇ ನಡೆದಿದೆ. ಯಶ್ ಶೆಟ್ಟಿ ನಾಯಕನಾಗಿ, ಹರ್ಷಿತಾ ರಾಮಚಂದ್ರ ನಾಯಕಿಯಾಗಿ ಹಾಗೂ ಉಗ್ರಂ ಮಂಜು, ಬಲ ರಾಜವಾಡಿ ಮುಂತಾದವರು ಪ್ರಮುಖಪಾತ್ರದಲ್ಲಿದ್ದಾರೆ. ಸದ್ಯ ಚಿತ್ರದ ಚಿತ್ರೀಕರಣ ಮುಕ್ತಾಯವಾಗಿದ್ದು, ಇನ್ನೊಂದು ತಿಂಗಳಲ್ಲಿ ಚಿತ್ರ ತೆರೆಗೆ ಬರಲು ಸಿದ್ದವಾಗುತ್ತದೆ. ಇನ್ನು ನನಗೆ ಹತ್ತು ವರ್ಷಗಳಿಂದ ಚಿತ್ರರಂಗದೊಂದಿಗೆ ನಂಟು. ನನಗಿರುವ ನಿರ್ದೇಶನದ ಆಸೆಗೆ ನನ್ನ ಸ್ನೇಹಿತರು ಆಸರೆಯಾದರು. ಸಹ್ಯಾದ್ರಿ ಸ್ಟುಡಿಯೋಸ್ ಸಂಸ್ಥೆ ಮೂಲಕ ಈ ಚಿತ್ರ ನಿರ್ಮಾಣವಾಗಿದ್ದು, ಸಿಂಪಲ್ ಸುನಿ ನಮ್ಮ ಸಿನಿಮಾವನ್ನು ಅರ್ಪಿಸುತ್ತಿದ್ದಾರೆ ಎಂದರು ಪುತ್ತೂರು ಮೂಲದ ನಿರ್ದೇಶಕ ರಕ್ಷಿತ್ ಕುಮಾರ್.

    ಈ ಚಿತ್ರಕ್ಕೆ ಕಥೆಯೇ ನಿಜವಾದ ನಾಯಕ ಎಂದು ಮಾತನಾಡಿದ ಯಶ್ ಶೆಟ್ಟಿ, ನಿರ್ದೇಶಕರು ಮಾಡಿಕೊಂಡಿರುವ ಕಥೆ ಚೆನ್ನಾಗಿದೆ. ವಿಭಿನ್ನ ಕಥೆ ಎನ್ನಬಹುದು. ಮೊದಲು ಉಗ್ರಂ ಮಂಜು ಅವರ ಪಾತ್ರ ನಾನು ಮಾಡಬೇಕಿತ್ತು. ಆನಂತರ ಬದಲಾಗಿ ನಿರ್ದೇಶಕರು ಈ ಪಾತ್ರ ನೀಡಿದರು. ಪಾತ್ರ ಹಾಗೂ ಚಿತ್ರ ಎರಡು ಚೆನ್ನಾಗಿದೆ. ತಂಡಕ್ಕೆ ಸಹಕಾರ ನೀಡುತ್ತಿರುವ ಸುನಿ ಅವರಿಗೆ ಧನ್ಯವಾದ ಎಂದರು. ದಿವ್ಯ ಎಂಬ ಮಧ್ಯಮ ವರ್ಗದ ಜವಾಬ್ದಾರಿಯುತ ಕರಾವಳಿ ಹೆಣ್ಣುಮಗಳ ಪಾತ್ರ ನನ್ನದು. ಈ ಹುಡುಗಿಗೆ ಜವಾಬ್ದಾರಿ ಇಲ್ಲದ ಹುಡುಗನ ಜೊತೆ ಪ್ರೀತಿ. ಒಂದು ಕಡೆ ಕುಟುಂಬ, ಮತ್ತೊಂದು ಕಡೆ ಪ್ರೀತಿ. ಈ ಎರಡರಲ್ಲಿ ನನ್ನ ಆಯ್ಕೆ ಏನು? ಎಂಬುದನ್ನು ಚಿತ್ರದಲ್ಲೇ ನೋಡಬೇಕು ಎಂದರು ನಟಿ ಹರ್ಷಿತಾ ರಾಮಚಂದ್ರ.

    ನನ್ನ ಕೆಲವು ಚಿತ್ರಗಳಿಗೆ ಈ ಚಿತ್ರದ ಸಂಕಲನಕಾರ ಮಂಜು ಶೇಡ್ಗಾರ್ ಸಂಕಲನ ಮಾಡಿದ್ದಾರೆ. ಅವರಿಂದ ನನಗೆ ಈ ತಂಡದ ಪರಿಚಯವಾಯಿತು. ಈ ಚಿತ್ರಕ್ಕೆ ನಿಮ್ಮ ಸಹಕಾರವಿರಬೇಕು ಎಂದರು. ನಾನು ಸದಾ ನಿಮ್ಮ ಜೊತೆ ಇರುತ್ತೇನೆ ಎಂದೆ. ಚಿತ್ರ ಚೆನ್ನಾಗಿ ಮೂಡಿಬಂದಿದೆ ಎಂದು ಸಿಂಪಲ್ ಸುನಿ ತಿಳಿಸಿದರು. ಸಂಕಲನಕಾರ ಮನು ಶೇಡ್ಗಾರ್ ಹಾಗೂ ಬಂಡವಾಳ ಹೂಡಿರುವ ಪ್ರಜೀತ್ ಹೆಗಡೆ ಅವರು “ಜಂಗಲ್ ಮಂಗಲ್” ಚಿತ್ರವನ್ನು ಬೆಂಬಲಿಸುವಂತೆ ಕೇಳಿಕೊಂಡರು.

  • ಶಶಿಕುಮಾರ್ ಪುತ್ರನ ಹೊಸ ಚಿತ್ರಕ್ಕೆ ಟೈಟಲ್ ಫಿಕ್ಸ್ : ‘ರಾಶಿ’ಗೆ ಆದಿತ್ಯ ಹೀರೋ

    ಶಶಿಕುಮಾರ್ ಪುತ್ರನ ಹೊಸ ಚಿತ್ರಕ್ಕೆ ಟೈಟಲ್ ಫಿಕ್ಸ್ : ‘ರಾಶಿ’ಗೆ ಆದಿತ್ಯ ಹೀರೋ

    ಧುವನ್ ಫಿಲಂಸ್ ಲಾಂಛನದಲ್ಲಿ  ನಿರ್ಮಾಣವಾಗುತ್ತಿರುವ , ವಿಜಯ್ ಪಾಳೇಗಾರ್ ನಿರ್ದೇಶಿಸುತ್ತಿರುವ ಹಾಗೂ ಸುಪ್ರೀಂ ಹೀರೋ ಶಶಿಕುಮಾರ್ (Shasikumar) ಅವರ ಪುತ್ರ ಆದಿತ್ಯ (Aditya) ಶಶಿಕುಮಾರ್ ನಾಯಕನಾಗಿ ನಟಿಸುತ್ತಿರುವ ನೂತನ ಚಿತ್ರದ ಶೀರ್ಷಿಕೆ ಅನಾವರಣ ಸಮಾರಂಭ ಇತ್ತೀಚೆಗೆ ಅದ್ದೂರಿಯಾಗಿ ನೆರವೇರಿತು. ಈ ಸುಂದರ ಪ್ರೇಮ ಕಥಾನಕಕ್ಕೆ “ರಾಶಿ” (Rashi) ಎಂದು ಹೆಸರಿಡಲಾಗಿದೆ. ಆದಿತ್ಯ ಶಶಿಕುಮಾರ್ ಅವರ ಹುಟ್ಟುಹಬ್ಬದ ದಿನವೇ ಈ ಚಿತ್ರದ ಶೀರ್ಷಿಕೆ ಅನಾವರಣ ಮಾಡುವ ಮೂಲಕ ನಾಯಕನಿಗೆ ಚಿತ್ರತಂಡ ವಿಶೇಷ ಉಡುಗೊರೆ ನೀಡಿದೆ. ರಾಜ್ಯಸಭಾ ಸದಸ್ಯರು ಹಾಗೂ ಕರ್ನಾಟಕ ಪ್ರದೇಶ ಕಾಂಗ್ರೆಸ್ ಕಮಿಟಿಯ ಕಾರ್ಯಾಧ್ಯಕ್ಷರಾದ ಜಿ.ಎಸ್.ಚಂದ್ರಶೇಖರ್, ನಟ ಶಶಿಕುಮಾರ್, ಬೆಂಗಳೂರು ಪೊಲೀಸ್ ಉಪ ಆಯುಕ್ತರಾದ ಸಿದ್ದರಾಜು, ಮಂಡ್ಯ ಜಿಲ್ಲಾ ಕಾಂಗ್ರೆಸ್ ಕಾರ್ಯಾಧ್ಯಕ್ಷರಾದ ಎಸ್ ಚಿದಂಬರ್ ಸೇರಿದಂತೆ ಮುಂತಾದ ಗಣ್ಯರು ಈ ಚಿತ್ರದ ಶೀರ್ಷಿಕೆ ಅನಾವರಣ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದರು. ಆನಂತರ ಚಿತ್ರತಂಡದ ಸದಸ್ಯರು ಮಾತನಾಡಿದರು.

    ಇದು ನಾನು ನಾಯಕನಾಗಿ ನಟಿಸುತ್ತಿರುವ ಮೂರನೇ ಚಿತ್ರ‌ ಎಂದು ಮಾತನಾಡಿದ ನಾಯಕ ಆದಿತ್ಯ ಶಶಿಕುಮಾರ್, ಈ ಚಿತ್ರದ ಕಥೆ ಬಹಳ ಚೆನ್ನಾಗಿದೆ. ನನ್ನ ಹುಟ್ಟುಹಬ್ಬದ ದಿನ ಈ ಚಿತ್ರದ ಶೀರ್ಷಿಕೆ ಅನಾವರಣವಾಗಿದ್ದು ಖುಷಿಯಾಗಿದೆ. ಇಷ್ಟು ದಿನ ಅಕ್ಷಿತ್ ಶಶಿಕುಮಾರ್ ಆಗಿದ್ದ ನಾನು, ಈಗ ಆದಿತ್ಯ ಶಶಿಕುಮಾರ್ ಎಂದು ಹೆಸರು ಬದಲಿಸಿಕೊಂಡಿದ್ದೇನೆ. ಇನ್ನು ಮುಂದೆ ಎಲ್ಲರೂ ಆದಿತ್ಯ ಶಶಿಕುಮಾರ್ ಎಂದೇ ಕರೆಯಬೇಕೆಂದು ವಿನಂತಿಸುತ್ತೇನೆ ಎಂದರು.

    ಮಂತ್ರಾಲಯದಲ್ಲಿ ರಾಯರ ದರ್ಶನ ಮುಗಿಸಿಕೊಂಡು ಬರುವಾಗ ನಿರ್ಮಾಪಕ ಅಖಿಲೇಶ್ ಅವರು ನನ್ನನ್ನು ಕರೆದು ಈ ಚಿತ್ರವನ್ನು ನಿರ್ದೇಶಿಸಬೇಕೆಂದರು.  ಅಖಿಲೇಶ್ ಅವರೆ ಈ ಚಿತ್ರದ ಕಥೆ ಬರೆದಿದ್ದಾರೆ. ನಾನು ಚಿತ್ರಕಥೆ, ಬರೆದು, ಗೀತರಚನೆ ಮಾಡಿ, ಸಂಗೀತ ನಿರ್ದೇಶನದೊಂದಿಗೆ ನಿರ್ದೇಶನನ್ನು ಮಾಡುತ್ತಿದ್ದೇನೆ. “ಟ್ರಿಗರ್” ಚಿತ್ರದ ನಂತರ ನಾನು ನಿರ್ದೇಶಿಸುತ್ತಿರುವ ಎರಡನೇ ಚಿತ್ರವಿದು. ಇನ್ನು ಈ ಚಿತ್ರಕ್ಕೆ ಅಭಿನಂದನ್ ದೇಶಪ್ರಿಯ ಸಂಭಾಷಣೆ, ನವೀನ್ ಸೂರ್ಯ ಛಾಯಾಗ್ರಹಣ, ಕೆ.ಎಂ.ಪ್ರಕಾಶ್ ಸಂಕಲನ‌, ಮಂಜು ಮಹದೇವ್ ಹಿನ್ನೆಲೆ ಸಂಗೀತ ಹಾಗೂ ಬಂಡೆ ಚಂದ್ರು ಅವರ ಸಾಹಸ ನಿರ್ದೇಶನವಿದೆ. ಇತ್ತೀಚಿಗೆ ಪಂಚಮುಖಿ ಗಣಪತಿ ದೇವಸ್ಥಾನದಲ್ಲಿ ಮುಹೂರ್ತ ಸಮಾರಂಭ ನಡೆದಿದೆ. ಈ ಪ್ರೇಮ ಕಥಾನಕಕ್ಕೆ ಸದ್ಯದಲ್ಲೇ ಚಿತ್ರೀಕರಣ ಆರಂಭವಾಗಲಿದೆ ಎಂದು ನಿರ್ದೇಶಕ ವಿಜಯ್ ಪಾಳೇಗಾರ್ ತಿಳಿಸಿದರು.

    ಚಿತ್ರದ ನಾಯಕಿ ಸಮೀಕ್ಷ, ನಿರ್ಮಾಪಕ ಅಖಿಲೇಶ್,  ಕಲಾವಿದರಾದ ಕರಿಸುಬ್ಬು, ಉಗ್ರಂ ರವಿ, ಹುಲಿ ಕಾರ್ತಿಕ್ ಮುಂತಾದವರು “ರಾಶಿ” ಚಿತ್ರದ ಬಗ್ಗೆ ‌ಮಾತನಾಡಿದರು.

  • ಯೂ ಟರ್ನ್ 2 ನಿರ್ದೇಶಕನ ಹೊಸ ಸಿನಿಮಾ ‘ವೈಭೋಗ’ ಟೈಟಲ್ ರಿಲೀಸ್

    ಯೂ ಟರ್ನ್ 2 ನಿರ್ದೇಶಕನ ಹೊಸ ಸಿನಿಮಾ ‘ವೈಭೋಗ’ ಟೈಟಲ್ ರಿಲೀಸ್

    ಯೂ ಟರ್ನ್-2, ರಾಮು ಅಂಡ್ ರಾಮು ಹಾಗೂ ಕರಿಮಣಿ ಮಾಲೀಕ ಚಿತ್ರಗಳ ನಂತರ ನಿರ್ದೇಶಕ  ಚಂದ್ರು ಓಬಯ್ಯ (Chandru) ಇದೀಗ ನಾಲ್ಕನೇ ಚಿತ್ರವನ್ನು  ಕೈಗೆತ್ತಿಕೊಂಡಿದ್ದಾರೆ. ಅದುವೇ ‘ವೈಭೋಗ’ (Vaibhoga). ಚಿತ್ರದ ಶೀರ್ಷಿಕೆ ಬಿಡುಗಡೆ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು. ‘ಯೌವ್ವನದಲ್ಲಿ ಹುಟ್ಟೋ ಪ್ರೀತಿಗೋಸ್ಕರ ಹೆತ್ತವರನ್ನು ಮರೀಬೇಡ’ ಎಂಬ ಟ್ಯಾಗ್ ಲೈನ್ ಹೊಂದಿರುವ ಈ ಚಿತ್ರವನ್ನು ಚೇತನ್ ನಿಂಗೇಗೌಡ ಅವರು ನಿರ್ಮಿಸುತ್ತಿದ್ದಾರೆ. ಈ ಸಂದರ್ಭದಲ್ಲಿ ಮಾತನಾಡಿದ ಚಂದ್ರು ಓಬಯ್ಯ, ವೈಭೋಗ, ಒಂದು ಕಮರ್ಷಿಯಲ್ ಸಿನಿಮಾ, ಯೌವ್ವನಲ್ಲಿ ಹುಟ್ಟುವ ಪ್ರೀತಿಗೋಸ್ಕರ ಹೆತ್ತವರ ಮರಿಬೇಡ,  ಪ್ರೀತಿಯ ಜೊತೆಗೆ ಹೆತ್ತವರನ್ನು ಕಾಪಾಡಬೇಕು ಎಂದು ಚಿತ್ರದ ಮೂಲಕ ಹೇಳುವ ಪ್ರಯತ್ನ ಮಾಡುತ್ತಿದ್ದೇವೆ.  ನಿರ್ಮಾಪಕ  ಚೇತನ್ ಅವರು ಕಥೆಯನ್ನು ಇಷ್ಟಪಟ್ಟು ಚಿತ್ರ ನಿರ್ಮಾಣಕ್ಕೆ ಮುಂದಾಗಿದ್ದಾರೆ. ಶ್ರೇಯಸ್ ಮತ್ತು ಸಂಜನಾ ಕದಂ ನಾಯಕ,  ನಾಯಕಿಯರಾಗಿ ಕಾಣಿಸಿಕೊಳ್ಳುತ್ತಿದ್ದಾರೆ.

    ಈ ತಿಂಗಳ 20ರಿಂದ ಶೂಟಿಂಗ್ ಪ್ರಾರಂಭಿಸಿ ಚನ್ನಪಟ್ಟಣ, ಮೈಸೂರು ಸುತ್ತಮುತ್ತ 30 ದಿನಗಳ‌ ಕಾಲ‌ ಟಾಕಿ ಭಾಗ, ಅಲ್ಲದೆ  ಮಂಗಳೂರು ಸುತ್ತಮುತ್ತ 10 ದಿನದಲ್ಲಿ ಹಾಡು, ಪೈಟ್‍ಗಳನ್ನು ಚಿತ್ರೀಕರಣ ಮಾಡುವ ಉದ್ದೇಶವಿದೆ. ಈಗಾಗಲೇ  ರಾಮು ಅಂಡ್ ರಾಮು ಚಿತ್ರ ಸೆನ್ಸಾರ್ ಆಗಿದೆ. ಇನ್ನು ಕರೀಮಣಿ ಮಾಲಿಕ ಚಿತ್ರದ  ಚಿತ್ರೀಕರಣ ಮುಗಿದಿದೆ ಎಂದು ವಿವರಿಸಿದರು. ವರ್ಷಕ್ಕೆ ನಾಲ್ಕೈದು ಸಿನಿಮಾ ಮಾಡಿದರೆ ಒಂದಷ್ಟು ಜನರಿಗೆ ಉದ್ಯೋಗ ಸಿಗಲಿದೆ, ವಿಜಯದಶಮಿ ಹಬ್ಬಕ್ಕೆ  ಮತ್ತೊಂದು ಚಿತ್ರ ಆರಂಭಿಸಲಾಗುವುದು.  ಆದಾದ ನಂತರ ಒಂದು ವರ್ಷ ಯಾವುದೇ ಸಿನಿಮಾ ಕೈಗೆತ್ತಿಕೊಳ್ಳುವುದಿಲ್ಲ, ಮಾಡುತ್ತಿರುವ ಚಿತ್ರಗಳನ್ನು ಪೂರ್ಣಗೊಳಿಸುವ ಕಡೆಗೆ ಗಮನ ನೀಡಲಾಗುವುದು ಎಂದೂ ಅವರು ಹೇಳಿಕೊಂಡರು.

    ನಾಯಕ ಶ್ರೇಯಸ್ ಮಾತನಾಡಿ, ಇದೇ ಮೊದಲ ಬಾರಿಗೆ ನಾಯಕನಾಗಿ  ಕಾಣಿಸಿಕೊಳ್ಳುತ್ತಿದ್ದೇನೆ. ನಿರ್ದೇಶಕ ಓಬಯ್ಯ ಅವರು ನನಗಿನ್ನೂ  ಕಥೆ ಹೇಳಿಲ್ಲ. ಒಳ್ಳೆಯ ಚಿತ್ರವಾಗುವ ವಿಶ್ವಾಸವಿದೆ ಎಂದು ಹೇಳಿದರು. ನಾಯಕಿ ಸಂಜನಾ ಕದಂ (Sanjna) ಮಾತನಾಡಿ  ನಾನು ರಂಗಭೂಮಿ‌ ಕಲಾವಿದೆ. ಮೈಸೂರಿನ ಹುಡುಗಿ, ಮಂಡ್ಯ ರಮೇಶ್ ಅವರ  ನಟನಾದಲ್ಲಿ ಅಭಿನಯ ಕಲಿತಿದ್ದೇನೆ.  ಮೊದಲ ಬಾರಿಗೆ ನಾಯಕಿಯಾಗುವ ಅವಕಾಶ ಸಿಕ್ಕಿದೆ. ಅದನ್ನು ಸದುಪಯೋಗಪಡಿಸಿಕೊಳ್ಳುತ್ತೇನೆ ಎಂದರು.

     

    ಹಿರಿಯ ಕಲಾವಿದ ನಾಗೇಂದ್ರ ಅರಸ್ ಮಾತನಾಡಿ, ಕಿರಿತೆರೆಯಲ್ಲಿ ಬರುತ್ತಿರುವ ಬ್ರಹ್ಮಗಂಟು ಧಾರಾವಾಹಿಯಲ್ಲಿ ನಾಯಕಿಯ ಅಪ್ಪನ ಪಾತ್ರ ಮಾಡಿದ್ದೆ. ಈ ಚಿತ್ರದಲ್ಲಿ ನಾಯಕನ ಅಪ್ಪನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದೇನೆ. ಒಳ್ಳೆಯ ಪಾತ್ರ, ಚಿತ್ರದಲ್ಲಿ ನಟಿಸಲು ಎದುರು ನೋಡುತ್ತಿದ್ದೇನೆ. ಚಂದ್ರು ಓಬಯ್ಯ ಅವರ ಜೊತೆ ಈ ಹಿಂದೆಯೂ ಕೆಲಸ ಮಾಡಿದ್ದೆ ಎಂದರು. ನಿರ್ಮಾಪಕ ಡಾ. ಚೇತನ್ ನಿಂಗೇಗೌಡ ಮಾತನಾಡಿ ಒಳ್ಳೆಯ ಕಥೆಯನ್ನು ಚಂದ್ರು ಓಬಯ್ಯ ತಂದಿದ್ದರು. ಅಪ್ಪ, ಅಮ್ಮ, ಅಲ್ಲದೆ ಅವಿಭಕ್ತ ಕುಟುಂಬದ ಮಹತ್ವ ಹೇಳುವ ಪ್ರಯತ್ನ  ನಮ್ಮ ಚಿತ್ರದಲ್ಲಿದೆ ಎಂದು ತಿಳಿಸಿದರು. ಹಿರಿಯ ಕಲಾವಿದ ಮೂಗು ಸುರೇಶ್ ಮಾತನಾಡಿ, ನಿರ್ದೇಶಕರು ಹಿರಿಯರಾಗಿರಲಿ, ಕಿರಿಯರಾಗಿರಲಿ ಕ್ಯಾಮರಾ ಮುಂದೆ ನಿಂತಾಗ ನಾನೊಬ್ಬ ಕಲಾವಿದ. ಅವರು ಹೇಳಿದಂತೆ ಮಾಡುವುದು ನನ್ನ ಕೆಲಸ. ನಿರ್ದೇಶಕರ ವಿಷಯದಲ್ಲಿ ಮೂಗು ತೂರಿಸಲ್ಲ. ಚಂದ್ರು ಓಬಯ್ಯ ಅವರ ಹಿಂದಿನ ಚಿತ್ರದಲ್ಲಿಯೂ ನಟಿಸಿದ್ದೇನೆ. ಅದರಲ್ಲಿ ನನ್ನ ಮತ್ತು ರೇಖಾದಾಸ್ ಕಾಂಬಿನೇಷನ್ ಇತ್ತು ಎಂದರು. ಛಾಯಾಗ್ರಾಹಕ ನಿರಂಜನ್ ಬೋಪಣ್ಣ  ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು

  • ಕಿಚ್ಚೋತ್ಸವ: ‘ಬಿಲ್ಲ ರಂಗ ಬಾಷಾ’ ಟೈಟಲ್, ಕಾನ್ಸೆಪ್ಟ್ ವಿಡಿಯೋ ಗಿಫ್ಟ್

    ಕಿಚ್ಚೋತ್ಸವ: ‘ಬಿಲ್ಲ ರಂಗ ಬಾಷಾ’ ಟೈಟಲ್, ಕಾನ್ಸೆಪ್ಟ್ ವಿಡಿಯೋ ಗಿಫ್ಟ್

    ಭಿನಯ ಚಕ್ರವರ್ತಿ ಕಿಚ್ಚ ಸುದೀಪ್ (Sudeep) ಇಂದು ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಬಾದ್ ಷಾ ಬರ್ತಡೇ ಅಂಗವಾಗಿ ಬಹುನಿರೀಕ್ಷಿತ ಸಿನಿಮಾ ಬಿಲ್ಲ ರಂಗ ಬಾಷಾ (Billa Ranga Basha) ಟೈಟಲ್ ಲೋಗೋ ಹಾಗೂ ಕಾನ್ಸೆಪ್ಟ್ ವಿಡಿಯೋ ಝಲಕ್ ನ್ನು ಅಭಿಮಾನಿಗಳಿಗೆ ಉಡುಗೊರೆಯಾಗಿ ನೀಡಲಾಗಿದೆ. ನಿರೀಕ್ಷೆಗೆ ತಕ್ಕಂತೆ ಮೂಡಿಬಂದಿರುವ ಫಸ್ಟ್ ಝಲಕ್ ನಲ್ಲಿ ನಾನಾ ವಿಷಯಗಳನ್ನು ಅನೂಪ್ ಭಂಡಾರಿ ಕಟ್ಟಿಕೊಟ್ಟಿದ್ದಾರೆ. ಲಿಬರ್ಟಿ ಪ್ರತಿಮೆ, ಐಫೆಲ್ ಟವರ್ ಮತ್ತು ತಾಜ್ ಮಹಲ್ ನ್ನು ಬಿಲ್ಲ ರಂಗ ಭಾಷಾ ಗ್ಲಿಂಪ್ಸ್ ನಲ್ಲಿ ತೋರಿಸಿರುವ ಅವರು ಭವಿಷ್ಯದ ಕಥೆ ಹೇಳೋದಿಕ್ಕೆ ಹೊರಟ್ಟಿದ್ದಾರೆ. Once Upon A Time in  2209 AD ಎಂದು ಶುರುವಾಗುವ ಝಲಕ್ ಬಹಳ ಕುತೂಹಲ ಹೆಚ್ಚಿಸಿದ್ದು, ಬಿಲ್ಲ ರಂಗ ಬಾಷಾ ಫಸ್ಟ್ ಬ್ಲಂಡ್ ಏನಿರಬಹುದು ? ಅನೂಪ್ (Anoop Bhandari)  ಹೇಳೋದಿಕ್ಕೆ ಹೊರಟಿರುವ ಭವಿಷ್ಯದ ಕಥಾಹಂದರ ಏನು? ಎಂಬ ಪ್ರಶ್ನೆಯನ್ನು ಹುಟ್ಟುಹಾಕಿದೆ.

    ಸುದೀಪ್ ಅವರೇ ಹೇಳಿಕೊಂಡಿರುವಂತೆ ಅವರ ಸಿನಿಕರಿಯರ್ ನ ಬಹುದೊಡ್ಡ ಬಜೆಟ್ ಚಿತ್ರ ಇದಾಗಿದೆ. ಟಾಲಿವುಡ್ ಬ್ಲಾಕ್ ಬಸ್ಟರ್ ಹಿಟ್ ಸಿನಿಮಾ ಹನುಮಾನ್ ನಿರ್ಮಾಪಕರಾದ ನಿರಂಜನ್ ರೆಡ್ಡಿ ಹಾಗೂ‌ ಚೈತನ್ಯ ರೆಡ್ಡಿ ಬಿಲ್ಲ ರಂಗ ಬಾಷಾ ಚಿತ್ರಕ್ಕೆ ಹಣ ಹಾಕುತ್ತಿದ್ದಾರೆ. ತಮ್ಮದೇ ಪ್ರೈಮ್ ಶೋ ಎಂಟರ್ ಟೈನ್ಮೆಂಟ್ ಬ್ಯಾನರ್ ನಡಿ ಈ ಚಿತ್ರವನ್ನು ಅವರು ಅದ್ಧೂರಿಯಾಗಿ ನಿರ್ಮಾಣ ಮಾಡುತ್ತಿದ್ದಾರೆ. ಅಭಿಮಾನಿಗಳು “ಅಪ್‌ಡೇಟ್‌ ಬೇಕು ಬಾಸ್‌” ಎಂದು ಹೇಳುತ್ತಿದ್ದಾರೆ. “ಬಾಸ್‌ ಅಪ್‌ಡೇಟ್‌ ಬಾಸ್‌” “ಅಪ್‌ಡೇಟ್‌ ಬೇಕು ಬಾಸ್‌” ಎಂದೆಲ್ಲ ಧ್ವನಿ ಕೇಳುತ್ತಾರೆ. ತಕ್ಷಣ ವಿಡಿಯೋದಲ್ಲಿ ಅನೂಪ್‌ ಭಂಡಾರಿ ಅವರು ಪುಸ್ತಕ ಓದುವಂತೆ ಆ ಪುಸ್ತಕದಲ್ಲಿ ಬಿಲ್ಲ ರಂಗ ಬಾಷಾದ ಟೀಮ್‌ ಕುರಿತು ವಿವರವೂ ದೊರಕುತ್ತದೆ. “ಹನುಮಾನ್‌ ನಿರ್ಮಾಪಕರಿಂದ, ರಂಗಿತರಂಗ, ರಾಜರಥ ವಿಕ್ರಾಂತ್‌ ರೋಣ ನಿರ್ದೇಶಕರಿಂದ ಬಿಲ್ಲಾ ರಂಗ ಭಾಷಾ ಸಿನಿಮಾ” ಎಂಬ ಅಪ್‌ಡೇಟ್‌ ಅನ್ನು ಹಂಚಿಕೊಳ್ಳಲಾಗಿದೆ.

    ಬಿಲ್ಲ ರಂಗ ಬಾಷಾ ಸಿನಿಮಾ ಬಗ್ಗೆ ಮಾತನಾಡಿರುವ ನಿರ್ದೇಶಕ ಅನೂಪ್ ಭಂಡಾರಿ, ವಿಕ್ರಾಂತ್ ರೋಣ ಸಿನಿಮಾ ನಂತರ ಹನುಮಾನ್ ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸದ ಸಮಯದಲ್ಲಿ ನಿರ್ಮಾಪಕರಾದ ನಿರಂಜನ್ ರೆಡ್ಡಿ ನನ್ನನ್ನು ಭೇಟಿಯಾದರು. ನಾನು ಸುದೀಪ್ ಸರ್ ಗೆ ಸಿನಿಮಾ ಮಾಡುತ್ತಿರುವುದಾಗಿ ಹಾಗೂ ಬಿಲ್ಲ ರಂಗ ಭಾಷಾ ಕಥೆ ಹೇಳಿದಾಗ ಅವರು ಎಕ್ಸೈಟ್ ಆದರು. ಅದ್ಧೂರಿಯಾಗಿ ಚಿತ್ರ ನಿರ್ಮಾಣ ಮಾಡುವುದಾಗಿ ತಿಳಿಸಿದರು. ಸುದೀಪ್ ಸರ್ ಜೊತೆ ಕೆಲಸ ಮಾಡುವುದು ಅದ್ಭುತ ಅನುಭವವಾಗಿದೆ. ಜನ ವಿಕ್ರಾಂತ್ ರೋಣ ಚಿತ್ರ ಇಷ್ಟಪಟ್ಟಿದ್ದಾರೆ. ಸುದೀಪ್ ಸರ್ ಈ ಚಿತ್ರವನ್ನು ದೊಡ್ಡ ಚಿತ್ರ ಎಂದಿರುವುದು ನನಗೆ ಜವಾಬ್ದಾರಿಯನ್ನು ಜಾಸ್ತಿ ಮಾಡಿದೆ ಎಂದರು.

    ನಿರ್ಮಾಪಕರಾದ ನಿರಂಜನ್ ರೆಡ್ಡಿ ಮಾತನಾಡಿ, ಸುದೀಪ್ ಸರ್ ಜೊತೆ ಅನೂಪ್ ಕೈ ಜೋಡಿಸಿದ್ದಾರೆ ಎಂದಾಗ ನಾವು ಉತ್ಸುಕರಾದೆವು. ತೆಲುಗಿನಲ್ಲಿ ವಿಕ್ರಾಂತ್ ರೋಣ ಅದ್ಭುತ ಯಶಸ್ಸು ಕಂಡಿದೆ. ಬಿಲ್ಲ ರಂಗ ಬಾಷಾ ಕಥೆ ಕೇಳಿದಾಗ ನಾವೇ ಚಿತ್ರ ನಿರ್ಮಾಣ ಮಾಡಬೇಕು ಎಂದುಕೊಂಡೆವು. ಕಿಚ್ಚ ಸುದೀಪ್ ಸರ್ ಜೊತೆ ಕೈ ಜೋಡಿಸಿರುವುದು ಒಂದೊಳ್ಳೆ ಅವಕಾಶವಾಗಿದ್ದು, ಬಿಲ್ಲ ರಂಗ ಬಾಷಾ ಸಿನಿಮಾ ಮೂಲಕ ಪ್ರೇಕ್ಷಕರಿಗೆ ಅದ್ಭುತ ಪ್ರಪಂಚ ಪರಿಚಯಿಸುತ್ತೇವೆ ಎಂದರು. ಬಿಲ್ಲ ರಂಗ ಬಾಷಾ ಬಹುಭಾಷಾಯಲ್ಲಿ ನಿರ್ಮಾಣವಾಗುತ್ತಿದ್ದು, ಶೀಘ್ರದಲ್ಲೇ ಶೂಟಿಂಗ್ ಅಖಾಡಕ್ಕೆ ಇಳಿಯಲಿದೆ ಚಿತ್ರತಂಡ

  • ‘ಕಲ್ಜಿಗ’ ಟೈಟಲ್ ಅನಾವರಣ ಮಾಡಿದ ಸಂಗೀತ ನಿರ್ದೇಶಕ ಹಂಸಲೇಖ

    ‘ಕಲ್ಜಿಗ’ ಟೈಟಲ್ ಅನಾವರಣ ಮಾಡಿದ ಸಂಗೀತ ನಿರ್ದೇಶಕ ಹಂಸಲೇಖ

    ರಾವಳಿ ಸೀಮೆಯಿಂದ ಕನ್ನಡ ಚಿತ್ರರಂಗಕ್ಕೆ ಈಗಾಗಲೇ ಅನೇಕರು ಆಗಮಿಸಿದ್ದಾರೆ. ಒಂದಷ್ಟು ಗೆಲುವನ್ನೂ ದಾಖಲಿಸಿದ್ದಾರೆ. ಇದೀಗ `ಕಲ್ಜಿಗ’ (Kaljiga) ಎಂಬ ಚಿತ್ರದ ಮೂಲಕ ಮತ್ತೊಂದು ತಂಡ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದೆ. ಶೀರ್ಷಿಕೆಯಲ್ಲಿಯೇ ಕೌತುಕ ಬೆರೆತ ಸೆಳೆತವೊಂದನ್ನು ಬಚ್ಚಿಟ್ಟುಕೊಂಡಂತಿರುವ ಈ ಚಿತ್ರದ ಟೈಟಲ್ ಹಾಗೂ ಪೋಸ್ಟರ್ ಇದೀಗ ಅನಾವಣಗೊಂಡಿದೆ. ಚಿತ್ರತಂಡ, ನಾನಾ ಕ್ಷೇತ್ರದ ಗಣ್ಯರು ಮತ್ತು ನಾದಬ್ರಹ್ಮ ಹಂಸಲೇಖ (Hamsalekha) ಸಮ್ಮುಖದಲ್ಲಿ ಕಲ್ಜಿಗದ ಟೈಟಲ್ (Title) ಹಾಗೂ ಪೋಸ್ಟರ್ ಬಿಡುಗಡೆಗೊಂಡಿದೆ.

    ಹಿಮಾನಿ ಫಿಲಂಸ್ ಬ್ಯಾನರಿನಡಿಯಲ್ಲಿ ನಿರ್ಮಾಣಗೊಂಡಿರುವ ಕಲ್ಜಿಗ ಚಿತ್ರವನ್ನು ಸುಮನ್ ಸುವರ್ಣ (Suman Suvarna) ನಿರ್ದೇಶನ ಮಾಡಿದ್ದಾರೆ. ವಿಶೇಷವೆಂದರೆ, ಬಹು ಕಾಲದ ನಂತರ ನಾದಬ್ರಹ್ಮ ಹಂಸಲೇಖ ಈ ಸಿನಿಮಾ ಮೂಲಕ ಸಂಗೀತ ನಿರ್ದೇಶನಕ್ಕೆ ಮರಳಿದ್ದಾರೆ. ಗೀತರಚನೆಯತ್ತಲೂ ಹೊರಳಿಕೊಂಡಿದ್ದಾರೆ. ಈ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಖುದ್ದು ಹಂಸಲೇಖ ಅವರೇ ಹಾಜರಿದ್ದರು. ಈ ಸಂದರ್ಭದಲ್ಲಿ ಚಿತ್ರತಂಡವನ್ನು ಮೆಚ್ಚಿಕೊಳ್ಳುತ್ತಲೇ ಒಂದಷ್ಟು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ನಲವತ್ತಕ್ಕೂ ಹೆಚ್ಚು ಸಿನಿಮಾಗಳ ಆಫರ್ ಗಳನ್ನು ತಿರಸ್ಕರಿಸಿ, ಕಲ್ಜಿಗ ಚಿತ್ರದತ್ತ ಆಕರ್ಷಿತರಾದುದಕ್ಕೆ ಕಾರಣಗಳನ್ನು ಬಿಚ್ಚಿಟ್ಟರು. ಒಟ್ಟಾರೆಯಾಗಿ, ನಾದಬ್ರಹ್ಮನ ಮಾತುಗಳಲ್ಲಿ ಒಂದಿಡೀ ಚಿತ್ರ ಮೂಡಿ ಬಂದಿರಬಹುದಾದ ರೀತಿಯ ಬಗ್ಗೆ ಮೆಚ್ಚುಗೆ ಹೊಮ್ಮುತ್ತಿತ್ತು.

    ಇನ್ನುಳಿದಂತೆ, ಗಿರ್ ಗಿಟ್, ಸರ್ಕಸ್, ಗಮ್ಜಾಲ್ ಮುಂತಾದ ಚಿತ್ರಗಳಲ್ಲಿ ನಿರ್ದೇಶನ ವಿಭಾಗದಲ್ಲಿ ಕಾರ್ಯನಿರ್ವಹಿಸಿದ್ದ ಸುಮನ್ ಸುವರ್ಣ `ಕಲ್ಜಿಗ’ದ ಮೂಲಕ ಸ್ವತಂತ್ರ ನಿರ್ದೇಶಕರಾಗಿದ್ದಾರೆ. ತುಳು ಚಿತ್ರರಂಗದಲ್ಲಿ ಕಿಂಗ್ ಆಫ್ ಆಕ್ಷನ್ ಎಂಬ ಬಿರುದಾಂಕಿತರಾಗಿರುವ ಅರ್ಜುನ್ ಕಾಪಿಕಾಡ್ ಈ ಚಿತ್ರದ ನಾಯಕನಾಗಿ ನಟಿಸಿದ್ದಾರೆ. ಅಪ್ಪಟ ಕನ್ನಡತಿ ಸುಶ್ಮಿತಾ ಭಟ್ ನಾಯಕಿಯಾಗಿ ಜೊತೆಯಾಗಿದ್ದಾರೆ. ಎಸ್ ಕೆ ಗ್ರೂಪ್ ಎಂಬ ಮಾರ್ಕೆಟಿಂಗ್ ಸಂಸ್ಥೆಯ ಮಾಲೀಕರಾಗಿರುವ ಶರತ್ ಕುಮಾರ್ ಎ.ಕೆ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ.

    ಸದ್ಯದ ಮಟ್ಟಿಗೆ ಕಲ್ಜಿಗದ ಆಂತರ್ಯವನ್ನು ಚಿತ್ರತಂಡ ಗೌಪ್ಯವಾಗಿಟ್ಟಿದೆ. ಈಗಾಗಲೇ ಉಡುಪಿ, ಮಂಗಳೂರು ಸುತ್ತಮುತ್ತಲ ಪ್ರದೇಶಗಳಲ್ಲಿ ಚಿತ್ರೀಕರಣ ಮುಕ್ತಾಯವಾಗಿದೆ. ಇದೀಗ ಮುಕ್ಕಾಲು ಭಾಗ ಪೋಸ್ಟ್ ಪ್ರೊಡಕ್ಷನ್ ಕಾರ್ಯವೂ ಸಮಾಪ್ತಿಗೊಂಡಿದೆ. ಮಂಗಳೂರು ಸೀಮೆಯ ಕನ್ನಡ ಭಾಷಾ ಶೈಲಿಯಲ್ಲಿ ತಯಾರಾಗಿರುವ ಈ ಚಿತ್ರವನ್ನು ತುಳುವಿಗೆ ಡಬ್ ಮಾಡಲಾಗಿದೆಯಂತೆ. ಧರ್ಮದ ದಾರಿಯಲ್ಲಿ ಅಧರ್ಮದ ನೆರಳು ಬಿದ್ದ ನಂತರದಲ್ಲಿ ಘಟಿಸುವ ರೋಚಕ ಕಥನ ಕಲ್ಜಿಗದಲ್ಲಿದೆಯಂತೆ. ಈ ಪೋಸ್ಟರ್ ಮತ್ತು ಟೈಟಲ್ ಅನಾವರಣದ ವೇದಿಕೆಯಲ್ಲಿ ಚಿತ್ರತಂಡದ ಕಡೆಯಿಂದ ಇವಿಷ್ಟು ಮಾಹಿತಿಗಳು ಜಾಹೀರಾಗಿವೆ.

    ಈ ಸಂದರ್ಭದಲ್ಲಿ ಛಾಯಾಗ್ರಾಹಕ ಸಚಿನ್ ಶೆಟ್ಟಿ, ಕುಲದಲ್ಲಿ ಕೀಳ್ಯಾವುದೋ ಸಿನಿಮಾ ನಿರ್ಮಾಪಕ ಸಂತೋಷ್ ಕುಮಾರ್, ನಿರ್ವತ್ತ ಪೊಲೀಸ್ ಅಧಿಕಾರಿ ಶಿವಪ್ರಕಾಶ್ ಮತ್ತು ಚಿತ್ರತಂಡ ಹಾಜರಿತ್ತು. ಹಂಸಲೇಖ ಸಂಗೀತ, ಸಾಹಿತ್ಯ, ಸಚಿನ್ ಶೆಟ್ಟಿ ಛಾಯಾಗ್ರಹಣ, ಪ್ರಸಾದ್ ಕೆ ಶೆಟ್ಟಿ ಹಿನ್ನೆಲೆ ಸಂಗೀತ, ಯಶ್ವಿನ್ ಕೆ ಶೆಟ್ಟಿಗಾರ್ ಸಂಕಲನ ಈ ಚಿತ್ರಕ್ಕಿದೆ. ಕಾಂತಾರ ಖ್ಯಾತಿಯ ಸನೀಲ್ ಗುರು ಕ್ರಿಯೇಟಿವ್ ಹೆಡ್ ಆಗಿ ಕಾರ್ಯನಿರ್ವಹಿಸಿದ್ದಾರೆ. ಕಾರ್ಯಕಾರಿ ನಿರ್ಮಾಪಕರಾಗಿ ರಾಧಾಕೃಷ್ಣ ಮಾಣಿಲ, ಪ್ರೊಡಕ್ಷನ್ ಮ್ಯಾನೇಜರ್ ಆಗಿ ಸಂದೀಪ್ ಶೆಟ್ಟಿ `ಕಲ್ಜಿಗ’ಕ್ಕೆ ಕೈ ಜೋಡಿಸಿದ್ದಾರೆ. ಈಗಾಗಲೇ ಕಲ್ಜಿಗ ಸೆಪೆಂಬರ್ ತಿಂಗಳಲ್ಲಿ ತೆರೆಗಾಣೋದು ಖಾತರಿಯಾಗಿದೆ. ಪೋಸ್ಟ್ ಪ್ರೊಡಕ್ಷನ್ ಕಾರ್ಯ ಸಂಪೂರ್ಣಗೊಂಡ ನಂತರದಲ್ಲಿ ಚಿತ್ರತಂಡ ಮತ್ತೊಂದಷ್ಟು ವಿಚಾರಗಳೊಂದಿಗೆ ಪ್ರೇಕ್ಷಕರನ್ನು ತಲುಪಿಕೊಳ್ಳಲಿದೆ.

  • ಸಲ್ಮಾನ್ ಚಿತ್ರಕ್ಕೆ ‘ಸಿಖಂದರ್’ ಟೈಟಲ್: ದಕ್ಷಿಣದ ಸ್ಟಾರ್ ನಿರ್ದೇಶಕನ ಸಿನಿಮಾವಿದು

    ಸಲ್ಮಾನ್ ಚಿತ್ರಕ್ಕೆ ‘ಸಿಖಂದರ್’ ಟೈಟಲ್: ದಕ್ಷಿಣದ ಸ್ಟಾರ್ ನಿರ್ದೇಶಕನ ಸಿನಿಮಾವಿದು

    ಬಾಲಿವುಡ್ ಸ್ಟಾರ್ ಸಲ್ಮಾನ್ ಖಾನ್ (Salman Khan) ಚಿತ್ರರಂಗದಲ್ಲಿ ಲಕ್ ಕೈಕೊಟ್ಟಿದೆ. ಯಾವುದೇ ರೀತಿಯ ಸಿನಿಮಾ ಮಾಡಿದ್ರೂ ಸಲ್ಮಾನ್‌ಗೆ ಸಕ್ಸಸ್ ರುಚಿ ಸಿಗುತ್ತಿಲ್ಲ. ಸತತ ಸಿನಿಮಾ ಸೋಲಿನ ಬೆನ್ನಲ್ಲೇ ತಮಿಳಿನ ಸ್ಟಾರ್ ನಿರ್ದೇಶಕನ ಜೊತೆ ಸಿನಿಮಾ ಮಾಡಲು ಹೊರಟಿರುವ ವಿಚಾರ ಗೊತ್ತೇ ಇದೆ. ಆ ಚಿತ್ರಕ್ಕೆ ಇಂದು ಟೈಟಲ್ ಫಿಕ್ಸ್ ಆಗಿದೆ.

    ಇದೀಗ ಚಿತ್ರರಂಗದಲ್ಲಿ ಹಿಂದಿ ಸಿನಿಮಾಗಳಿಗಿಂತ ಸೌತ್ ಸಿನಿಮಾಗಳೇ ಭಾರೀ ಸದ್ದು ಮಾಡುತ್ತಿವೆ. ಅದಕ್ಕಾಗಿ ಹೊಸ ಪ್ರಯೋಗ ಮಾಡೋದಕ್ಕೆ ಸಲ್ಮಾನ್ ಸಜ್ಜಾಗಿದ್ದಾರೆ. ಕಾಲಿವುಡ್ ಸ್ಟಾರ್ ಡೈರೆಕ್ಟರ್ ಎಆರ್ ಮುರುಗದಾಸ್ ಜೊತೆ ಸಿನಿಮಾ ಮಾಡಲು ಕೈಜೋಡಿಸಿದ್ದಾರೆ. ಈ ಚಿತ್ರಕ್ಕೆ ಸಿಖಂದರ್ (Sikhander) ಎಂದು ಇಂದು ನಾಮಕರಣ ಮಾಡಲಾಗಿದೆ.

    ಈ ಹಿಂದೆ ತಮ್ಮ ಹೊಸ ಸಿನಿಮಾ ಬಗ್ಗೆ ಸಲ್ಮಾನ್ ಖಾನ್  ಸೋಷಿಯಲ್ ಮೀಡಿಯಾದಲ್ಲಿ ಮಾಹಿತಿ ನೀಡಿದ್ದರು. ಈ ಪ್ರತಿಭಾವಂತ ತಂಡವನ್ನು ಸೇರಿಕೊಳ್ಳುತ್ತಿರುವುದಕ್ಕೆ ಬಹಳ ಸಂತಸವಾಗುತ್ತಿದೆ. ಎಆರ್ ಮುರುಗದಾಸ್ (Murugadoss) ಮತ್ತು ನನ್ನ ಗೆಳೆಯ ಸಾಜಿದ್ ನಾಡಿಯಾವಾಲ (Sajid Nadiadwala) ಜೊತೆಗೆ ಸಿನಿಮಾ ಮಾಡುತ್ತಿರುವುದಕ್ಕೆ ಬಹಳ ಉತ್ಸುಕನಾಗಿದ್ದೇನೆ. ಈ ಸಿನಿಮಾ ಬಹಳ ವಿಶೇಷವಾಗಿರಲಿದೆ. ಈ ಸಿನಿಮಾಕ್ಕಾಗಿ ನಾನು ಎದುರು ನೋಡುತ್ತಿದ್ದೇನೆ ಮತ್ತು ನಿರೀಕ್ಷೆಗಳನ್ನು ಇರಿಸಿಕೊಂಡಿದ್ದೇನೆ. 2025ರ ಈದ್ ಹಬ್ಬಕ್ಕೆ ಸಿನಿಮಾ ಬಿಡುಗಡೆ ಆಗಲಿದೆ ಎಂದಿದ್ದರು.

     

    ಈ ಸಿನಿಮಾ ಪಕ್ಕಾ ಆ್ಯಕ್ಷನ್ ಥ್ರಿಲ್ಲರ್ ಸಿನಿಮಾ ಆಗಿರಲಿದ್ದು, ಸಿನಿಮಾದ ಶೂಟಿಂಗ್ ಪೋರ್ಚುಗಲ್ ಮತ್ತು ಕೆಲವು ಯೂರೋಪ್ ದೇಶಗಳಲ್ಲಿ ನಡೆಯಲಿದೆ. ಸುಮಾರು 400 ಕೋಟಿ ಬಜೆಟ್‌ನಲ್ಲಿ ಮೂಡಿ ಬರಲಿದೆ. ಸಿನಿಮಾದಲ್ಲಿ ಬೇರೆ ಭಾಷೆಗಳ ಕೆಲವು ಸ್ಟಾರ್ ನಟರು ಸಹ ನಟಿಸಲಿದ್ದಾರೆ. ಈ ಸಿನಿಮಾ ಬಹುಭಾಷೆಗಳಲ್ಲಿ ಮೂಡಿ ಬರಲಿದೆ. ಸಲ್ಮಾನ್‌ ಈ ತಂತ್ರ ಕೈಹಿಡಿಯುತ್ತಾ? ಕಾದುನೋಡಬೇಕಿದೆ.

  • ಬನಾರಸ್ ಹುಡುಗನ ‘ಕಲ್ಟ್’: ಝೈದ್ ಖಾನ್ ಚಿತ್ರಕ್ಕೆ ಇದೆಂಥ ಟೈಟಲ್?

    ಬನಾರಸ್ ಹುಡುಗನ ‘ಕಲ್ಟ್’: ಝೈದ್ ಖಾನ್ ಚಿತ್ರಕ್ಕೆ ಇದೆಂಥ ಟೈಟಲ್?

    ನಾರಸ್ ಚಿತ್ರದ ಮೂಲಕ ಕನ್ನಡಿಗರ ಮನ ಗೆದ್ದಿರುವ ಝೈದ್ ಖಾನ್ (Zaid Khan) ಹಾಗೂ ಈ ವರ್ಷದ ಮೊದಲ ಹಿಟ್ ‘ಉಪಾಧ್ಯಕ್ಷ’ ಚಿತ್ರದ ನಿರ್ದೇಶಕ ಅನಿಲ್ ಕುಮಾರ್ (Anil Kumar) ಕಾಂಬಿನೇಶನ್ ನಲ್ಲಿ ನೂತನ ಚಿತ್ರದ ಶೀರ್ಷಿಕೆ ಅನಾವರಣವಾಗಿದೆ. ಈ ಚಿತ್ರಕ್ಕೆ ಕಲ್ಟ್ (Cult) ಎಂದು ಹೆಸರಿಡಲಾಗಿದೆ.

    ಝೈದ್ ಖಾನ್ ನಟನೆಯ ಎರಡನೇ ಚಿತ್ರ ಇದಾಗಿದ್ದು, ಶೀರ್ಷಿಕೆ (Title) ಅರ್ಥದ ಬಗ್ಗೆ ಈಗಿನಿಂದಲೇ ಕುತೂಹಲ ಮೂಡಿಸಿದೆ. ಮೊನ್ನೆಯಷ್ಟೇ ಈ ಚಿತ್ರದ ಕುರಿತಂತೆ ಪೋಸ್ಟರ್ ವೊಂದನ್ನು ಚಿತ್ರತಂಡ ಬಿಡುಗಡೆ ಮಾಡಿತ್ತು‌‌. ಪೋಸ್ಟರ್ ನಲ್ಲೇ ಚಿತ್ರದ ಕುರಿತಂತೆ ಕುತೂಹಲ ಮೂಡಿಸಿತ್ತು.

    ಇಂದು ಅನಾವರಣವಾಗಿರುವ ಟೈಟಲ್ ಪೋಸ್ಟರ್ ಬಗ್ಗೆಯೂ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗುತ್ತಿದ್ದು,  ಶೀರ್ಷಿಕೆ ಮತ್ತು ಅದಕ್ಕೆ ಬಳಸಿರುವಂಥ ಫೋಟೋ ಬಗ್ಗೆ ಅನೇಕರು ಅನೇಕ ರೀತಿಯಲ್ಲಿ ಚರ್ಚೆ ಮಾಡುತ್ತಿದ್ದಾರೆ. ಹೆಣ್ಣಿನ ಕಾಲುಗಳನ್ನು ಬಳಸಿಕೊಂಡು ಸಿಗರೇಟು ಸೇದುವಂತಹ ಕಲ್ಪನೆಗೆ ನಾನಾ ಅರ್ಥ ಕಲ್ಪಿಸಲಾಗುತ್ತಿದೆ.

     

    ಝೈದ್ ಖಾನ್ ನಾಯಕರಾಗಿ ನಟಿಸುತ್ತಿರುವ ಎರಡನೇ ಚಿತ್ರವಿದು. ಆಶ್ರಿತ್ ಸಿನಿಮಾಸ್ ಲಾಂಛನದಲ್ಲಿ ಈ ಸಿನಿಮಾ ನಿರ್ಮಾಣವಾಗಲಿದ್ದು, ರಚನೆ ಹಾಗೂ ನಿರ್ದೇಶನ ಅನಿಲ್ ಕುಮಾರ್ ಅವರದು. ಜೆ.ಎಸ್ ವಾಲಿ ಛಾಯಾಗ್ರಹಣ, ಅರ್ಜುನ್ ಜನ್ಯ ಸಂಗೀತ ನಿರ್ದೇಶನ, ಕೆ.ಎಂ.ಪ್ರಕಾಶ್ ಸಂಕಲನ ಹಾಗೂ ರವಿವರ್ಮ ಅವರ ಸಾಹಸ ನಿರ್ದೇಶನ ಈ ಚಿತ್ರಕ್ಕಿದೆ.

  • ಏಪ್ರಿಲ್ 9ಕ್ಕೆ ಝೈದ್ ಖಾನ್ ನಟನೆಯ ಹೊಸ ಚಿತ್ರದ ಟೈಟಲ್ ರಿಲೀಸ್

    ಏಪ್ರಿಲ್ 9ಕ್ಕೆ ಝೈದ್ ಖಾನ್ ನಟನೆಯ ಹೊಸ ಚಿತ್ರದ ಟೈಟಲ್ ರಿಲೀಸ್

    ನಾರಸ್ ಚಿತ್ರದ ಮೂಲಕ ಕನ್ನಡಿಗರ ಮನ ಗೆದ್ದಿರುವ ಝೈದ್ ಖಾನ್ (Zaid Khan) ಹಾಗೂ ಈ ವರ್ಷದ ಮೊದಲ ಹಿಟ್ ‘ಉಪಾಧ್ಯಕ್ಷ’ ಚಿತ್ರದ ನಿರ್ದೇಶಕ ಅನಿಲ್ ಕುಮಾರ್ (Anil Kumar) ಕಾಂಬಿನೇಶನ್ ನಲ್ಲಿ ನೂತನ ಚಿತ್ರದ ಶೀರ್ಷಿಕೆ ಏಪ್ರಿಲ್ 9ರಂದು ಅನಾವರಣವಾಗಲಿದೆ. ಝೈದ್ ಖಾನ್ ನಟನೆಯ ಎರಡನೇ ಚಿತ್ರ ಇದಾಗಿದ್ದು, ಶೀರ್ಷಿಕೆ ಬಗ್ಗೆ ಈಗಿನಿಂದಲೇ ಕುತೂಹಲ ಮೂಡಿಸಿದೆ.

    ಮೊನ್ನೆಯಷ್ಟೇ ಈ ಚಿತ್ರದ ಕುರಿತಂತೆ ಪೋಸ್ಟರ್ ವೊಂದನ್ನು ಚಿತ್ರತಂಡ ಬಿಡುಗಡೆ ಮಾಡಿತ್ತು‌‌. ಪೋಸ್ಟರ್ ನಲ್ಲೇ ಚಿತ್ರದ ಕುರಿತಂತೆ ಕುತೂಹಲ ಮೂಡಿಸಿತ್ತು. ಸದ್ಯದಲ್ಲೇ ಫಸ್ಟ್ ಲುಕ್ ರಿಲೀಸ್ ಮಾಡುವುದಾಗಿ ಪೋಸ್ಟರ್ ಮೂಲಕ ತಿಳಿಸಲಾಗಿತ್ತು. ಅದರಂತೆ ಫಸ್ಟ್ ಲುಕ್ ಮತ್ತು ಟೈಟಲ್ ಎರಡನ್ನೂ ರಿಲೀಸ್ ಮಾಡಲಾಗುತ್ತಿದೆಯಂತೆ.

    ಪೋಸ್ಟರ್ ಬಗ್ಗೆ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗುತ್ತಿದ್ದು,  ಇನ್ನು ಈ ನೂತನ ಚಿತ್ರದ ಫಸ್ಟ್ ಲುಕ್ ಹೇಗಿರಬಹುದೆಂಬ? ಕುತೂಹಲ ಅಭಿಮಾನಿ ವಲಯದಲ್ಲಿದೆ. ಫಸ್ಟ್ ಲುಕ್ ನಲ್ಲೇ ಚಿತ್ರದ ಶೀರ್ಷಿಕೆ ಸಹ ಅನಾವರಣವಾಗಲಿದೆ‌.

     

    ಝೈದ್ ಖಾನ್ ನಾಯಕರಾಗಿ ನಟಿಸುತ್ತಿರುವ ಎರಡನೇ ಚಿತ್ರವಿದು. ಆಶ್ರಿತ್ ಸಿನಿಮಾಸ್ ಲಾಂಛನದಲ್ಲಿ ಈ ಸಿನಿಮಾ ನಿರ್ಮಾಣವಾಗಲಿದ್ದು, ರಚನೆ ಹಾಗೂ ನಿರ್ದೇಶನ ಅನಿಲ್ ಕುಮಾರ್ ಅವರದು. ಜೆ.ಎಸ್ ವಾಲಿ ಛಾಯಾಗ್ರಹಣ, ಅರ್ಜುನ್ ಜನ್ಯ ಸಂಗೀತ ನಿರ್ದೇಶನ, ಕೆ.ಎಂ.ಪ್ರಕಾಶ್ ಸಂಕಲನ ಹಾಗೂ ರವಿವರ್ಮ ಅವರ ಸಾಹಸ ನಿರ್ದೇಶನ ಈ ಚಿತ್ರಕ್ಕಿದೆ.

  • ಮಧುಚಂದ್ರ ನಿರ್ದೇಶನದ ಹೊಸ ಚಿತ್ರಕ್ಕೆ ‘Mr.ರಾಣಿ’ ಟೈಟಲ್ ಫಿಕ್ಸ್

    ಮಧುಚಂದ್ರ ನಿರ್ದೇಶನದ ಹೊಸ ಚಿತ್ರಕ್ಕೆ ‘Mr.ರಾಣಿ’ ಟೈಟಲ್ ಫಿಕ್ಸ್

    ಪ್ರತಿ ಸಿನಿಮಾದಲ್ಲೊಂದು ಗಟ್ಟಿ ಸಂದೇಶದ ಮೂಲಕ ಪ್ರೇಕ್ಷಕರ ಎದುರು ಹಾಜರಾಗುವ ಮಧುಚಂದ್ರ ಈಗ ಮತ್ತೆ ಬಂದಿದ್ದಾರೆ. ಈ ಬಾರಿಯೂ ಫ್ರೆಶ್ ಕಥೆಯನ್ನು ಹೊತ್ತು ಬಂದಿದ್ದಾರೆ. ಸದ್ಯಕ್ಕೆ ಕಥೆ ಬಗ್ಗೆ ಗುಟ್ಟುರಟ್ಟು ಮಾಡದ ವಾಸ್ಕೋಡಿಗಾಮಾ ಹಾಗೂ ಸೆಲ್ಫಿ ಮಮ್ಮಿ ಗೂಗಲ್ ಡ್ಯಾಡಿ ಡೈರೆಕ್ಟರ್ ಮಧುಚಂದ್ರ (Madhuchandra) ತಮ್ಮ ಮುಂದಿನ ಚಿತ್ರದ ಟೈಟಲ್ ಅನಾವರಣ ಮಾಡಿದ್ದಾರೆ. ಅದು ಸಾಮಾನ್ಯವಾಗಿ ಅಲ್ಲವೇ ಅಲ್ಲ. ವಿಭಿನ್ನ.. ಹೀಗೂ ಟೈಟಲ್ ಲಾಂಚ್ ಮಾಡಬಹುದು ಅನ್ನುವುದು ತೋರಿಸಿದ್ದಾರೆ.

    ಕಮಲ್ ಹಾಸನ್ ಕರೆದುಕೊಂಡು ಬಂದು ಟೈಟಲ್ ಲಾಂಚ್ ಮಾಡಿಸುತ್ತೇನೆ ಅಂತಾ ನಿರ್ದೇಶಕರು ನಿರ್ಮಾಪಕರಿಗೆ ಪ್ರಾಮಿಸ್ ಮಾಡಿರ್ತಾರೆ. ಕಮಲ್ ಬರ್ತಿದ್ದಾರೆ ಅಂತಾ ಗೊತ್ತಾಗ್ತಿದ್ದಂತೆ ಇಡೀ ತಂಡ ಅವರಿಗೆ ಕಾತರದಿಂದ ಕಾಯ್ತಾ ಇರುತ್ತದೆ. ಆದರೆ ಕಹಾನಿ ಮೇ ಟ್ವಿಸ್ಟ್. ಅಲ್ಲಿ‌ ಕಮಲ್ ಹಾಸನ್ ಬದಲು ಬಂದಿದ್ದು ಬೇರೆಯವರು. ಕಾರ್ಯಕ್ರಮದ ಆಯೋಜಕರು ಕಮಲ್ ಹಾಸನ್ ಕರೆದುಕೊಂಡು ಬರ್ತಿನಿ ಅಂತಾ ಹಾಸನದಿಂದ ಕಮಲಾ ಎಂಬುವವರನ್ನು ಕರೆದುಕೊಂಡು ಬಂದು ಚೀಟ್ ಮಾಡಿರ್ತಾರೆ. ಬಳಿಕ ನಿರ್ದೇಶಕರಿಗೆ ನಿರ್ಮಾಪಕರೆಲ್ಲರೂ ಗೂಸಾ ಕೊಡ್ತಾರೆ. ಹೀಗೆ  ತಮಾಷೆಯಾಗಿರುವ ವಿಡಿಯೋ ಮೂಲಕ ಚಿತ್ರದ ಶೀರ್ಷಿಕೆ ರಿವೀಲ್ ಮಾಡಲಾಗಿದೆ.

    ಮಧುಚಂದ್ರ ತಮ್ಮ ಹೊಸ ಪ್ರಯತ್ನಕ್ಕೆ Mr.ರಾಣಿ (Mr. Rani) ಎಂಬ ಟೈಟಲ್ ಇಟ್ಟಿದ್ದಾರೆ. ಟೈಟಲ್ ಎಷ್ಟು ಕ್ರೇಜಿ ಆಗಿದೆಯೋ ಕಥೆ ಕೂಡ ಅಷ್ಟೇ ಕ್ರೇಜಿಯಾಗಿದೆ ಅನ್ನುತ್ತಾರೆ ಮಧುಚಂದ್ರ. Mr.ರಾಣಿ ಚಿತ್ರದಲ್ಲಿ ಲಕ್ಷ್ಮೀ ನಿವಾಸ ಸೀರಿಯಲ್ ಖ್ಯಾತಿಯ ದೀಪಕ್ ಸುಬ್ರಹ್ಮಣ್ಯ, ಪಾರ್ವತಿ ನಾಯರ್ ನಾಯಕ ಹಾಗೂ ನಾಯಕಿಯಾಗಿ ನಟಿಸಿದ್ದು, ಉಳಿದಂತೆ ಶ್ರೀವಸ್ತ, ರೂಪ ಪ್ರಭಾಕರ್, ಲಕ್ಷ್ಮೀ ಕಾರಂತ್, ಮಧುಚಂದ್ರ, ಆನಂದ್, ಚಕ್ರವರ್ತಿ ದಾವಣಗೆರೆ ತಾರಾಬಳಗದಲ್ಲಿದ್ದಾರೆ.

    ಎಕ್ಸೆಲ್ ಆರ್ಬಿಟ್ ಕ್ರಿಯೇಷನ್ಸ್ ನಡಿ  ಮಧುಚಂದ್ರ ಕಥೆ ಬರೆದು ನಿರ್ದೇಶಿಸುತ್ತಿರುವ Mr.ರಾಣಿ ಜೂಡಾ ಸ್ಯಾಂಡಿ ಸಂಗೀತ, ರವೀಂದ್ರನಾಥ್ ಟಿ ಛಾಯಾಗ್ರಹಣ ಹಾಗೂ ಮಧು ತುಂಬಕೆರೆ ಸಂಕಲನ ಚಿತ್ರಕ್ಕಿದೆ. ಶೂಟಿಂಗ್ ಮುಗಿಸಿರುವ ಚಿತ್ರತಂಡ ಪೋಸ್ಟ್ ಪ್ರೊಡಕ್ಷನ್ ನಲ್ಲಿ ಬ್ಯುಸಿಯಾಗಿದೆ. ಅಂದಹಾಗೇ Mr.ರಾಣಿ ಕ್ರೌಡ್ ಫಂಡೆಂಡ್ ಸಿನಿಮಾ, 100ಕ್ಕೂ ಹೆಚ್ಚು ಜನ ಸೇರಿ ಚಿತ್ರ ನಿರ್ಮಾಣ ಮಾಡಿದ್ದಾರೆ.

  • ‘ಮರ್ಯಾದೆ ಪ್ರಶ್ನೆ’ಗೆ ಕೊನೆಗೂ ಉತ್ತರ ಸಿಕ್ತು: ಇದು ಪ್ರದೀಪ್ ಕನಸು

    ‘ಮರ್ಯಾದೆ ಪ್ರಶ್ನೆ’ಗೆ ಕೊನೆಗೂ ಉತ್ತರ ಸಿಕ್ತು: ಇದು ಪ್ರದೀಪ್ ಕನಸು

    ಳೆದ ಎರಡ್ಮೂರು ದಿನದಿಂದ ಸ್ಯಾಂಡಲ್ ವುಡ್ ನಲ್ಲಿ ‘ಮರ್ಯಾದೆ ಪ್ರಶ್ನೆ’ ಎನ್ನುವ ಪದವು ನಾನಾ ರೂಪಗಳನ್ನು ತಾಳಿ ಸಂಚಲನ ಮೂಡಿಸಿತ್ತು. ಅನೇಕ ನಟ ನಟಿಯರು, ತಂತ್ರಜ್ಞರು, ಬಿಗ್ ಬಾಸ್ ಸ್ಪರ್ಧಿಗಳು, ಕಿರುತೆರೆಯ ಕಲಾವಿದರು ತಮ್ಮದೇ ಆದ ರೀತಿಯಲ್ಲಿ ಈ ಪದ ಪ್ರಯೋಗ ಮಾಡಿ, ಕುತೂಹಲ ಮೂಡಿಸಿದ್ದರು. ಇದು ಏನಿರಬಹುದು ಎನ್ನುವ ಚರ್ಚೆ ಕೂಡ ಸೃಷ್ಟಿಯಾಗಿತ್ತು. ಅದಕ್ಕೀಗ  ಉತ್ತರ ಸಿಕ್ಕಿದೆ. ಇದು ಸಿನಿಮಾದ ಟೈಟಲ್ ಅನ್ನುವ ವಿಚಾರ ಬಹಿರಂಗವಾಗಿದೆ.

    ಕೆಲ ತಿಂಗಳ ಹಿಂದೆ ಆರ್.ಜೆ ಪ್ರದೀಪ್ ತಮ್ಮ ಸಕ್ಕತ್ ಸ್ಟುಡಿಯೋ ಮೂಲಕ ಸಿನಿಮಾವೊಂದನ್ನು ತಯಾರಿಸಿರುವ ವಿಚಾರವನ್ನು ಹಂಚಿಕೊಂಡಿದ್ದರು. ನಾಗರಾಜ್ ಸೋಮಯಾಜಿ ನಿರ್ದೇಶನದಲ್ಲಿ ಮೂಡಿ ಬಂದಿರುವ ಆ ಚಿತ್ರಕ್ಕೆ ‘ಮರ್ಯಾದೆ ಪ್ರಶ್ನೆ’ (Maryade prashne) ಎಂದು ಹೆಸರಿಡಲಾಗಿದೆ. ಈ ಶೀರ್ಷಿಕೆಯನ್ನು ಪ್ರದೀಪ್ ಸೇರಿದಂತೆ ಚಿತ್ರತಂಡ ಹಂಚಿಕೊಂಡಿದೆ.

    ಕನ್ನಡ ಡಿಜಿಟಲ್ ಕ್ಷೇತ್ರದಲ್ಲಿ ಸಕ್ಕತ್ ಸ್ಟುಡಿಯೋ (Sakkat Studio) ಟ್ರೆಂಡ್ಸೆಟ್ಟರ್ ಆಗಿರುವುದು ಸುಳ್ಳಲ್ಲಾ. ಸುನೀಲ್ ರಾವ್, ಅನುಪಮಾ ಗೌಡ, ಸಿಂಧು ಲೋಕನಾಥ್ ಮುಂತಾದವರು ನಟಿಸಿರುವ ‘ಲೂಸ್ ಕನೆಕ್ಷನ್’ ನಮ್ಮ ಕನ್ನಡದ ಮೊದಲ ವೆಬ್ ಸರಣಿಯ ನಿರ್ಮಿಸಿದ್ದು ಇದೇ ಸಂಸ್ಥೆ. ಸ್ಟಾರ್ ದಂಪತಿಗಳಾದ ಆರ್. ಜೆ. ಪ್ರದೀಪ್ (Pradeep) ಮತ್ತು ಶ್ವೇತಾ ಆರ್ ಪ್ರಸಾದ್ (Shweta R Prasad) ಅವರ ನೇತೃತ್ವದಲ್ಲಿ ಶುರುವಾದ ಸಕ್ಕತ್ ಸ್ಟುಡಿಯೋ ವೈವಿಧ್ಯಮಯ ವೆಬ್ ಸರಣಿಗಳೊಂದಿಗೆ ಪ್ರೇಕ್ಷಕರನ್ನು ಆಕರ್ಷಿಸುತ್ತಲೇ ಇತ್ತು. ಹ್ಯಾಟ್ರಿಕ್ ಹಿರೋ ಶಿವರಾಜ್ ಕುಮಾರ್ ರವರ ಪುತ್ರಿ ನಿವೇದಿತಾ ಶಿವರಾಜ್ ಕುಮಾರ್ ಅವರ ಸಹಯೋಗದೊಂದಿಗೆ ಸಕ್ಕತ್ ಸ್ಟುಡಿಯೋ, ನಾಗಭೂಷಣ ಮತ್ತು ಸಂಜನಾ ಆನಂದ್ ಅಭಿನಯದ ‘ಹನಿಮೂನ್’, ಪೂರ್ಣ ಮೈಸೂರು ಮತ್ತು ಸಿರಿ ರವಿಕುಮಾರ್ ಅಭಿನಯದ ‘ಬೈ ಮಿಸ್ಟೇಕ್’ ಮತ್ತು ಅರವಿಂದ್ ಅಯ್ಯರ್ ಮತ್ತು ದಿಶಾ ಮದನ್ ಅಭಿನಯದ “ಹೇಟ್ ಯು ರೋಮಿಯೋ” ಹೀಗೆ ಉನ್ನತ ಮಟ್ಟದ ಸರಣಿಗಳು ನಿರ್ಮಾಣವಾಗಿ ವೂಟ್ ( Voot), ಆಹಾ (Aha ), ಮುಂತಾದ ಒಟಿಟಿ ಪ್ಲಾಟ್‌ಫಾರಂ ಗಳಲ್ಲಿ ನೋಡುಗರ ಗಮನ ಸೆಳೆದಿವೆ.

    ಡಿಜಿಟಲ್ ಕ್ಷೇತ್ರದಲ್ಲಿ ಒಂದು ಸ್ಥಾನವನ್ನು ಯಶಸ್ವಿಯಾಗಿಸಿ, ಸಕ್ಕತ್ ಸ್ಟುಡಿಯೋ ಈಗ ಸಿನಿಮಾ ಜಗತ್ತಿಗೆ ಕಾಲಿಡುವ ಮೂಲಕ ಹೊಸ ಅಧ್ಯಾಯವನ್ನು ಪ್ರಾರಂಭಿಸಿದೆ. ತನ್ನ ಮೊಟ್ಟಮೊದಲ ಚಿತ್ರದ ಚಿತ್ರೀಕರಣ ಮುಗಿಸಿ ಕುಂಬಳಕಾಯಿ ಹೊಡೆದು ಇದೀಗ ಪೋಸ್ಟ್ ಪ್ರೊಡಕ್ಷನ್ ಹಂತ ತಲುಪಿದೆ. ಕ್ರೇಜಿಸ್ಟಾರ್ ರವಿಚಂದ್ರನ್ (Ravichandran) ಅವರು ಚಿತ್ರದ ಮಹೂರ್ತಕ್ಕೆ ಆಗಮಿಸಿ ಕ್ಲ್ಯಾಪ್ ಮಾಡಿ ಚಿತ್ರಕ್ಕೆ ಶುಭ ಹಾರೈಸಿದ್ದರು. ಅದೇ ಚಿತ್ರವೇ ಮರ್ಯಾದೆ ಪ್ರಶ್ನೆ.

    ದಕ್ಷಿಣ ಭಾರತದ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಸೇರಿದಂತೆ ಪ್ರತಿಷ್ಠಿತ ಪ್ರಶಸ್ತಿಗಳನ್ನು ಪಡೆದ ‘ದಿ ಬೆಸ್ಟ್ ಆಕ್ಟರ್’ ಮೈಕ್ರೊ ಮೂವಿ ನಿರ್ದೇಶನ ಸೇರಿದಂತೆ, ದಿವಂಗತ ಸಂಚಾರಿ ವಿಜಯ್ ನಟಿಸಿರುವ ‘ಪುಕ್ಸಟ್ಟೆ ಲೈಫ್ “ಚಿತ್ರವನ್ನು ನಿರ್ಮಿಸಿದ್ದ ನಾಗರಾಜ್ ಸೋಮಯಾಜಿ ಇದೀಗ ಸಕ್ಕತ್ ಸ್ಟುಡಿಯೋದ ಮೊದಲ ಸಿನಿಮಾದ ನಿರ್ದೇಶನದ ಜವಾಬ್ದಾರಿಯನ್ನು ಹೊತ್ತಿದ್ದಾರೆ. ಮುಂಬರುವ ದಿನಗಳಲ್ಲಿ ವಿಶಿಷ್ಟ ಶೀರ್ಷಿಕೆ, ಪರಿಕಲ್ಪನೆ ಮತ್ತು ತಾರಾಗಣವನ್ನು ಅನಾವರಣಗೊಳಿಸುವುದಾಗಿ ಚಿತ್ರತಂಡ ಹೇಳಿಕೊಂಡಿತ್ತು. ಇದೀಗ ಕೇವಲ ಶೀರ್ಷಿಕೆಯನ್ನು ಮಾತ್ರ ಬಹಿರಂಗ ಪಡಿಸಿದೆ. ಮುಂದಿನ ದಿನಗಳಲ್ಲಿ ತಾರಾಗಣ ಹಾಗೂ ಮತ್ತಿತರ ವಿಷಯಗಳನ್ನು ಹಂಚಿಕೊಳ್ಳಬಹುದು.

     

    ಹೆಚ್ಚು ಹೆಚ್ಚು ಕನ್ನಡ ಸಿನಿಮಾಗಳು ನಿರ್ಮಾಣವಾಗಬೇಕು ಹಾಗು ಗೆಲ್ಲಬೇಕೆಂಬ ನಿರೀಕ್ಷೆಯಲ್ಲಿರುವ ಪ್ರೇಕ್ಷಕ ವರ್ಗ, ಝೀ5ನ ಒಟಿಟಿ ಕ್ಷೇತ್ರದಲ್ಲಿ ಪ್ರದೀಪ್ ಅವರ ಹಿಂದಿನ ನಾಯಕತ್ವ ಮತ್ತು ಛಾಯಾಗ್ರಹಣ ಮತ್ತು ಕಥೆ ಹೇಳುವಿಕೆಯಲ್ಲಿ ನಾಗರಾಜ್ ಅವರ ಪ್ರಭಾವ, ಸೃಜನಶೀಲ ಮನಸ್ಸುಗಳನ್ನು ಒಳಗೊಂಡಿರುವ ತಂಡವು ನಿಸ್ಸಂದೇಹವಾಗಿ ‘ಸಕ್ಕತ್’ ಕನ್ನಡ ಚಿತ್ರವನ್ನು  ಪ್ರೇಕ್ಷಕನಿಗೆ ನೀಡುತ್ತಾರೆಂಬ ಭರವಸೆ ಮೂಡಿಸಿದೆ.