Tag: Tithi Cinema

  • ಡಿಸೆಂಬರ್ 4ಕ್ಕೆ ‘ತಿಥಿ ಚಿತ್ರ’ ಖ್ಯಾತಿಯ ನಟಿ ಪೂಜಾ ಮದುವೆ

    ಡಿಸೆಂಬರ್ 4ಕ್ಕೆ ‘ತಿಥಿ ಚಿತ್ರ’ ಖ್ಯಾತಿಯ ನಟಿ ಪೂಜಾ ಮದುವೆ

    ನ್ನಡ ಸಿನಿಮಾ ರಂಗವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಮತ್ತೊಮ್ಮೆ ಗುರುತಿಸುವಂತೆ ಮಾಡಿದ್ದ ತಿಥಿ ಸಿನಿಮಾದ ನಾಯಕಿ ಪೂಜಾ ಕೆಲವು ವರ್ಷಗಳಿಂದ ಸಿನಿಮಾ ರಂಗದಿಂದಲೇ ದೂರವಾಗಿದ್ದರು. ಓದಿನ ಕಡೆ ಗಮನ ಕೊಟ್ಟಿದ್ದ ಪೂಜಾ ಇದೀಗ ಹೊಸ ಜೀವನಕ್ಕೆ ಕಾಲಿಡುತ್ತಿದ್ದಾರೆ. ಇತ್ತೀಚೆಗಷ್ಟೇ ನಿಶ್ಚಿತಾರ್ಥ ಮಾಡಿಕೊಂಡಿರುವ ಅವರು, ಡಿಸೆಂಬರ್ ನಲ್ಲಿ ಸಪ್ತಪದಿ ತುಳಿಯಲಿದ್ದಾರೆ ಎಂದು ಹೇಳಿದ್ದರು ಅದೇ ರೀತಿಯಾಗಿ ಡಿಸೆಂಬರ್ 4ರಂದು ಬೆಂಗಳೂರಿನ ಮಾಗಡಿ ರಸ್ತೆಯಲ್ಲಿರುವ ಚೌಟ್ರಿಯಲ್ಲಿ ಅವರು ಹೊಸ ಜೀವನಕ್ಕೆ ಕಾಲಿಡುತ್ತಿದ್ದಾರೆ.

    ಮದುವೆಯಾಗಿಯೇ ವಿಶೇಷ ಪ್ರೊಮೋ ಒಂದನ್ನು ಅವರು ರೆಡಿ ಮಾಡಿದ್ದು, ಅಲ್ಲಿ ಆರತಕ್ಷತೆ ಮತ್ತು ಮದುವೆಯ ದಿನಾಂಕವನ್ನು ಬಹಿರಂಗ ಪಡಿಸಿದ್ದಾರೆ. ಈ ಮೂಲಕ ತಮ್ಮೆಲ್ಲರ ಹಾರೈಕೆ ಹೊಸ ಜೋಡಿಗೆ ಇರಲಿ ಎಂದು ಅವರು ಕೇಳಿಕೊಂಡಿದ್ದಾರೆ.  ಸಿನಿಮಾ ರಂಗದಿಂದ ದೂರವಾಗಿ ಖಾಸಗಿ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದ ಪೂಜಾ, ಸಾಫ್ಟ್ ವೇರ್ ಇಂಜಿನಿಯರ್ ಆಗಿರುವ ಪ್ರೇಮ್ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಆ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದವು. ತಿಥಿ ಸಿನಿಮಾದ ಕಾವೇರಿಗೂ ಕಂಕಣ ಭಾಗ್ಯ ಎಂದು ಅಭಿಮಾನಿಗಳು ಶುಭ ಹಾರೈಸಿದ್ದರು. ಇದನ್ನೂ ಓದಿ: ಮಾಜಿ ಸಿಎಂ ಸಿದ್ದರಾಮಯ್ಯ ಬಯೋಪಿಕ್‌ನಲ್ಲಿ ತಮಿಳು ನಟ ವಿಜಯ್ ಸೇತುಪತಿ

    ತಿಥಿ ಸಿನಿಮಾ ಬಂದಾಗ ದಿಢೀರ್ ಅಂತ ಪೂಜಾ ಫೇಮಸ್ ಆದರು. ಕುರಿ ಕಾಯುವ ಕಾವೇರಿಯ ಪಾತ್ರದಲ್ಲಿ ಅವರು ಎಲ್ಲರ ಗಮನ ಸೆಳೆದಿದ್ದರು. ಅವರಿಗೆ ರಾಜ್ಯ ಪ್ರಶಸ್ತಿ ಕೂಡ ಬಂತು. ಅಲ್ಲಿಂದ ಹಲವು ಸಿನಿಮಾಗಳಲ್ಲೂ ನಟಿಸಿದರು. ನಂತರ ಸಿನಿಮಾ ರಂಗದಿಂದ ದೂರವಾದರು. ಖಾಸಗಿ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ಸುದ್ದಿಯೂ ಆಗಿತ್ತು. ಇದೀಗ ಪ್ರೇಮ್ ಜೊತೆ ಹೊಸ ಜೀವನಕ್ಕೆ ಕಾಲಿಡುತ್ತಿದ್ದು, ಡಿಸೆಂಬರ್ 3 ಮತ್ತು 4 ರಂದು ಈ ಜೋಡಿ ಹಸೆಮಣೆ ಏರುತ್ತಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಡಿಸೆಂಬರ್ ನಲ್ಲಿ ಮದುವೆ ಆಗಲಿದ್ದಾರೆ ತಿಥಿ ಸಿನಿಮಾ ಖ್ಯಾತಿಯ ಪೂಜಾ

    ಡಿಸೆಂಬರ್ ನಲ್ಲಿ ಮದುವೆ ಆಗಲಿದ್ದಾರೆ ತಿಥಿ ಸಿನಿಮಾ ಖ್ಯಾತಿಯ ಪೂಜಾ

    ನ್ನಡ ಸಿನಿಮಾ ರಂಗವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಮತ್ತೊಮ್ಮೆ ಗುರುತಿಸುವಂತೆ ಮಾಡಿದ್ದ ತಿಥಿ ಸಿನಿಮಾದ ನಾಯಕಿ ಪೂಜಾ ಕೆಲವು ವರ್ಷಗಳಿಂದ ಸಿನಿಮಾ ರಂಗದಿಂದಲೇ ದೂರವಾಗಿದ್ದರು. ಓದಿನ ಕಡೆ ಗಮನ ಕೊಟ್ಟಿದ್ದ ಪೂಜಾ ಇದೀಗ ಹೊಸ ಜೀವನಕ್ಕೆ ಕಾಲಿಡಲು ಸಿದ್ಧತೆ ಮಾಡಿಕೊಂಡಿದ್ದಾರೆ. ಇತ್ತೀಚೆಗಷ್ಟೇ ನಿಶ್ಚಿತಾರ್ಥ ಮಾಡಿಕೊಂಡಿರುವ ಅವರು, ಡಿಸೆಂಬರ್ ನಲ್ಲಿ ಸಪ್ತಪದಿ ತುಳಿಯಲಿದ್ದಾರೆ.

    ಸಿನಿಮಾ ರಂಗದಿಂದ ದೂರವಾಗಿ ಖಾಸಗಿ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದ ಪೂಜಾ, ಸಾಫ್ಟ್ ವೇರ್ ಇಂಜಿನಿಯರ್ ಆಗಿರುವ ಪ್ರೇಮ್ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದು, ಸದ್ಯ ಆ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ತಿಥಿ ಸಿನಿಮಾದ ಕಾವೇರಿಗೂ ಕಂಕಣ ಭಾಗ್ಯ ಎಂದು ಅಭಿಮಾನಿಗಳು ಶುಭ ಹಾರೈಸಿದ್ದಾರೆ. ವೈವಾಹಿಕ ಜೀವನ ಚೆನ್ನಾಗಿರಲಿ ಎಂದು ಶುಭಾಶಯ ಕೋರಿದ್ದಾರೆ. ಇದನ್ನೂ ಓದಿ:ಕಂಗನಾ ರಣಾವತ್ ವಿರುದ್ಧ ತಿರುಗಿ ಬಿದ್ದ ಠಾಕ್ರೆ ಅಭಿಮಾನಿಗಳು

    ತಿಥಿ ಸಿನಿಮಾ ಬಂದಾಗ ದಿಢೀರ್ ಅಂತ ಪೂಜಾ ಫೇಮಸ್ ಆದರು. ಕುರಿ ಕಾಯುವ ಕಾವೇರಿಯ ಪಾತ್ರದಲ್ಲಿ ಅವರು ಎಲ್ಲರ ಗಮನ ಸೆಳೆದಿದ್ದರು. ಅವರಿಗೆ ರಾಜ್ಯ ಪ್ರಶಸ್ತಿ ಕೂಡ ಬಂತು. ಅಲ್ಲಿಂದ ಹಲವು ಸಿನಿಮಾಗಳಲ್ಲೂ ನಟಿಸಿದರು. ನಂತರ ಸಿನಿಮಾ ರಂಗದಿಂದ ದೂರವಾದರು. ಖಾಸಗಿ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ಸುದ್ದಿಯೂ ಆಗಿತ್ತು. ಇದೀಗ ಪ್ರೇಮ್ ಜೊತೆ ಹೊಸ ಜೀವನಕ್ಕೆ ಕಾಲಿಡುತ್ತಿದ್ದು, ಡಿಸೆಂಬರ್ 3 ಮತ್ತು 4 ರಂದು ಈ ಜೋಡಿ ಹಸೆಮಣೆ ಏರುತ್ತಿದೆ.

    Live Tv

  • ಸಪ್ತಪದಿ ತುಳಿದ ತಿಥಿ ಚಿತ್ರ ನಟ ಅಭಿಷೇಕ್

    ಸಪ್ತಪದಿ ತುಳಿದ ತಿಥಿ ಚಿತ್ರ ನಟ ಅಭಿಷೇಕ್

    ಮಂಡ್ಯ: ತಿಥಿ ಸಿನಿಮಾದ ಮೂಲಕ ಚಂದನವನಕ್ಕೆ ಪಾದಾರ್ಪಣೆ ಮಾಡಿದ್ದ ಯುವ ನಟ ಅಭಿಷೇಕ್ ಇಂದು ಸಪ್ತಪದಿ ತುಳಿದಿದ್ದಾರೆ.

    ನಗರದ ಆಂಜನೇಯಸ್ವಾಮಿ ಕಲ್ಯಾಣ ಮಂಟಪದಲ್ಲಿ ನಡೆದ ಮದುವೆಯಲ್ಲಿ ನಟ ಅಭಿಷೇಕ್ ತಮ್ಮದೇ ಗ್ರಾಮದ ಹೊಂಬಾಳೆಯವರನ್ನು ಮದುವೆಯಾಗಿದ್ದಾರೆ.

    2015 ರಲ್ಲಿ ಬಿಡುಗಡೆಯಾಗಿದ್ದ ಸುಂದರ ಸಾಮಾಜಿಕ ಹಾಗೂ ಕಲಾತ್ಮಕ ಸಿನಿಮಾ `ತಿಥಿ’ ಮೂಲಕ ಅಭಿಷೇಕ್ ತಮ್ಮ ಸಿನಿ ಜೀವನವನ್ನು ಆರಂಭಿಸಿದ್ದರು. ವಿಮರ್ಶಕರು ಮತ್ತು ಪ್ರೇಕ್ಷಕರಿಂದ ಅಪಾರ ಮೆಚ್ಚುಗೆಯನ್ನು ಪಡೆದುಕೊಳ್ಳುವುದರ ಜೊತೆಗೆ ಸಿನಿಮಾ ರಾಷ್ಟ್ರ ಪ್ರಶಸ್ತಿಯನ್ನು ಸಹ ಪಡೆದುಕೊಂಡಿತ್ತು.

    ಅಭಿಷೇಕ್ ತಿಥಿ ಸಿನಿಮಾದ ನಂತರ ತರ್ಲೆ ವಿಲೇಜ್, ಏನ್ ನಿನ್ನ ಪ್ರಾಬ್ಲಂ ಮತ್ತು ಹಳ್ಳಿ ಪಂಚಾಯ್ತಿ ಚಿತ್ರಗಳಲ್ಲಿ ನಟಿಸಿದ್ದಾರೆ.

    ಮೂಲತಃ ಮಂಡ್ಯದ ಹುಲಿಕೆರೆ ಕೊಪ್ಪಲು ಗ್ರಾಮದವರಾದ ಅಭಿಷೇಕ್, ಅಕ್ಕನ ಮಗಳು ಹೊಂಬಾಳೆಯನ್ನು ಮದುವೆಯಾಗಿದ್ದಾರೆ. ಅಭಿಷೇಕ್ ಮದುವೆಗೆ ಕಲಾವಿದರು, ಸ್ನೇಹಿತರು, ಸಂಬಂಧಿಕರು ಆಗಮಿಸಿ ಶುಭಕೋರಿದರು.