ಜಗತ್ತಿನ ಶ್ರೇಷ್ಠ ಸಿನಿಮಾಗಳಲ್ಲಿ ಒಂದಾದ, ಹಾಲಿವುಡ್ ನ ಅತ್ಯಂತ ಜನಪ್ರಿಯ ಸಿನಿಮಾ ಟೈಟಾನಿಕ್ (Titanic) ನ ಕ್ಯಾಪ್ಟನ್ ನಟ ಬರ್ನಾರ್ಡ್ (Bernard Hill) ನಿಧನರಾಗಿದ್ದಾರೆ (Passed away). 79ರ ವಯಸ್ಸಿನ ಈ ನಟ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು ಎಂದು ಹೇಳಲಾಗುತ್ತಿದೆ.
ಕೇಟ್ ವಿನ್ಸ್ ಲೆಟ್ ಸೇರಿದಂತೆ ಸಾಕಷ್ಟು ಚಿತ್ರಗಳಲ್ಲಿ ನಟಿಸಿರುವ ಬರ್ನಾರ್ಡ್ ಈವರೆಗೂ ಸುಮಾರು 11 ಬಾರಿ ಪ್ರತಿಷ್ಠಿತ ಆಸ್ಕರ್ ಪ್ರಶಸ್ತಿಗಳನ್ನು ಪಡೆದಿದ್ದಾರೆ. ಹಾಲಿವುಡ್ ನಲ್ಲಿ ವಿವಿಧ ಪಾತ್ರಗಳನ್ನು ಮಾಡಿರುವ ಬೆರಳೆಣಿಕೆಯ ಕಲಾವಿದರಲ್ಲಿ ಇವರೂ ಒಬ್ಬರಾಗಿದ್ದಾರೆ.
ಬರ್ನಾರ್ಡ್ ನಿಧನಕ್ಕೆ ಕೇವಲ ಹಾಲಿವುಡ್ ಮಾತ್ರವಲ್ಲ, ಜಗತ್ತಿನ ಅನೇಕ ತಂತ್ರಜ್ಞರು ಹಾಗೂ ಕಲಾವಿದರು ಮತ್ತು ಅಭಿಮಾನಿಗಳ ಕಂಬನಿ ಮಿಡಿದಿದ್ದಾರೆ. ಅವರ ಆತ್ಮಕ್ಕೆ ಶಾಂತಿ ಕೋರಿದ್ದಾರೆ.
ಸಮುದ್ರ ವಿಪತ್ತುಗಳು ಇತಿಹಾಸದುದ್ದಕ್ಕೂ ಸಂಭವಿಸಿವೆ. ಇವುಗಳಿಂದಾಗಿ ಅಪಾರ ಸಂಖ್ಯೆಯಲ್ಲಿ ಜೀವಗಳು ಬಲಿಯಾಗಿದ್ದು, ವಿಶ್ವದ ಹಡಗು ಉದ್ಯಮಕ್ಕೂ ಅಪಾರ ಹಾನಿಯುಂಟಾಗಿದೆ. ಘರ್ಷಣೆ, ಬೆಂಕಿ, ಸ್ಫೋಟ, ಮುಳುಗುವಿಕೆ ಸೇರಿದಂತೆ ಇನ್ನಿತರ ರೀತಿಯ ವಿಪತ್ತುಗಳು ಇದರಲ್ಲಿ ಸೇರಿವೆ.
ಇತ್ತೀಚೆಗೆ ಇತಿಹಾಸ ಯಾವಾಗಲೂ ನೆನಪಿಸಿಕೊಳ್ಳುವ ಟೈಟಾನಿಕ್ ಹಡಗು ದುರಂತದ ಅವಶೇಷ ನೋಡಲು ಸಬ್‍ಮರ್ಸಿಬಲ್ ಮೂಲಕ ತೆರಳಿದ್ದ ಐವರು ಶ್ರೀಮಂತ ವ್ಯಕ್ತಿಗಳ ದಾರುಣ ಸಾವಾಗಿತ್ತು. ಈ ಘಟನೆ ಟೈಟಾನಿಕ್ ದುರಂತವನ್ನು ಮತ್ತೆ ಮೆಲುಕುಹಾಕುವಂತೆ ಮಾಡಿತು. ಆದರೆ ಈ ಘಟನೆಗೂ ಅತ್ಯಂತ ಮಾರಣಾಂತಿಕ ಹಡಗು ದುರಂತಗಳು (Shipwrecks) ಇತಿಹಾಸದಲ್ಲಿ ಸಂಭವಿಸಿದೆ. ಇತಿಹಾಸದಲ್ಲಿ ದಾಖಲಾದ ಅತ್ಯಂತ ಮಾರಣಾಂತಿಕ ಹಡಗು ದುರಂತಗಳು ಯಾವುವು ಎಂಬುದನ್ನು ನೋಡೋಣ.
1. ವಿಲ್ಹೆಲ್ಮ್ ಗಸ್ಟ್ಲೋಫ್:
ಇತಿಹಾಸದಲ್ಲಿ ದಾಖಲಾಗಿರುವ ಅತ್ಯಂತ ಹೆಚ್ಚು ಜನರ ಬಲಿ ತೆಗೆದುಕೊಂಡ ಹಡಗು ದುರಂತ ಎಂದರೆ ವಿಲ್ಹೆಲ್ಮ್ ಗಸ್ಟ್ಲೋಫ್. ಜರ್ಮನ್ ಮಿಲಿಟರಿ ಸಾರಿಗೆ ಹಡಗಾಗಿದ್ದ ಇದು 1945ರ ಜನವರಿ 30ರಂದು ಸೋವಿಯತ್ ಜಲಾಂತರ್ಗಾಮಿ ಎಸ್-13 ದಾಳಿಗೆ ಬಾಲ್ಟಿಕ್ ಸಮುದ್ರದಲ್ಲಿ ಮುಳುಗಿತು.
ಕೇವಲ 1,900 ಜನರನ್ನು ಮಾತ್ರವೇ ಹೊತ್ತು ಸಾಗಲು ಸಾಧ್ಯವಿದ್ದ ಈ ಹಡಗಿನಲ್ಲಿ ಅಂದಾಜು 10,000 ಜನರನ್ನು ಸ್ಥಳಾಂತರಿಸಲಾಗುತ್ತಿತ್ತು. ನಾಗರಿಕರು, ಮಿಲಿಟರಿ ಸಿಬ್ಬಂದಿಯನ್ನು ಪೂರ್ವ ಪ್ರಶ್ಯ ಹಾಗೂ ಜರ್ಮನ್ ಆಕ್ರಮಿತ ಬಾಲ್ಟಿಕ್ ರಾಜ್ಯಗಳಿಂದ ಸ್ಥಳಾಂತರಿಸುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿತು. ಘಟನೆಯಲ್ಲಿ ಅಂದಾಜು 9,400 ಜನರ ಮಾರಣಹೋಮವಾಗಿತ್ತು. ಇದು ಇತಿಹಾಸದಲ್ಲಿ ಮುಳುಗಿದ ಒಂದೇ ಹಡಗಿನ ಅತಿ ದೊಡ್ಡ ಜೀವಹಾನಿ ಎನಿಸಿಕೊಂಡಿದೆ.
2. ಡೋನಾ ಪಾಜ್:
ಇತಿಹಾಸದ 2ನೇ ಅತಿ ಕೆಟ್ಟ ಹಡಗು ದುರಂತ ಡೋನಾ ಪಾಜ್ ಎನಿಸಿಕೊಂಡಿದೆ. ಜಪಾನ್ ನಿರ್ಮಿತ ಮತ್ತು ಫಿಲಿಪೈನ್ಸ್ ನೋಂದಾಯಿತ ಪ್ರಯಾಣಿಕ ದೋಣಿಯಾಗಿದ್ದ ಡೊನಾ ಪಾಜ್ 1987ರಲ್ಲಿ ತೈಲ ಟ್ಯಾಂಕರ್ ವೆಕ್ಟರ್‌ಗೆ ಡಿಕ್ಕಿ ಹೊಡೆದ ಬಳಿಕ ಮುಳುಗಿತು.
ಹಡಗು ಲೇಯ್ಟ್ ದ್ವೀಪದಿಂದ ಫಿಲಿಪೈನ್ ರಾಜಧಾನಿ ಮನಿಲಾಗೆ ಪ್ರಯಾಣಿಸುವಾಗ ದುರ್ಘಟನೆ ಸಂಭವಿಸಿದೆ. ಪರಿಣಾಮ ಅಂದಾಜು 4,380 ಪ್ರಯಾಣಿಕರು ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ. ಘಟನೆಯಲ್ಲಿ ಕೇವಲ 26 ಜನರು ಬದುಕುಳಿದಿದ್ದರು. ಈ ದುರಂತವನ್ನು ಇತಿಹಾಸದಲ್ಲಿ ಯುದ್ಧ ಕಾಲದ ಬಳಿಕ ನಡೆದ ಅತಿ ದೊಡ್ಡ ಕಡಲ ದುರಂತ ಎಂದು ಪರಿಗಣಿಸಲಾಗಿದೆ.
3. ಆರ್‌ಎಮ್‍ಎಸ್ ಲಂಕಾಸ್ಟ್ರಿಯಾ:
ಆಪರೇಷನ್ ಏರಿಯಲ್‍ನ ಭಾಗವಾಗಿ 2ನೇ ವಿಶ್ವಯುದ್ಧದ ಸಮಯದಲ್ಲಿ ಬ್ರಿಟನ್ ಸರ್ಕಾರದಿಂದ ಪಡೆಯಲಾಗಿದ್ದ ಹಡಗು ಆರ್‌ಎಮ್‍ಎಸ್ ಲಂಕಾಸ್ಟ್ರಿಯಾ ಆಗಿತ್ತು. ಇದನ್ನು ಫ್ರಾನ್ಸ್‌ನಿಂದ ಬ್ರಿಟಿಷ್ ಪ್ರಜೆಗಳು ಹಾಗೂ ಪಡೆಗಳನ್ನು ಸ್ಥಳಾಂತರಿಸಲು ನಿರಂತರವಾಗಿ ಬಳಸಲಾಗಿತ್ತು.
1940ರ ಜೂನ್ 17ರಂದು ಫ್ರಾನ್ಸ್‌ನಿಂದ ಬ್ರಿಟಿಷ್ ಪ್ರಜೆಗಳು ಹಾಗೂ ಸೈನ್ಯವನ್ನು ತುರ್ತಾಗಿ ಸ್ಥಳಾಂತರಿಸಲು ಬಳಸಿದ್ದಾಗ ಹಡಗು ಮುಳುಗಡೆಯಾಗಿತ್ತು. ಹಡಗು ಸುಮಾರು 1,300 ಪ್ರಯಾಣಿಕರ ಸಾಮರ್ಥ್ಯವನ್ನು ಹೊಂದಿತ್ತು. ಆದರೆ ಅಂದು ಸಾಮರ್ಥ್ಯಕ್ಕೂ ಮೀರಿ ಪ್ರಯಾಣಿಕರನ್ನು ಸ್ಥಳಾಂತರಿಸಲಾಗುತ್ತಿತ್ತು. ಮುಳುಗಡೆ ವೇಳೆ ಹಡಗಿನಲ್ಲಿ 4,000 ದಿಂದ 7,000 ಪ್ರಯಾಣಿಕರು ಇದ್ದರು ಎನ್ನಲಾಗಿದೆ. ಆದರೆ ದುರ್ಘಟನೆ ಸಂಭವಿಸಿದಾಗ ಕೇವಲ ಬೆರಳೆಣಿಕೆಯಷ್ಟು ಜನನ್ನು ಮಾತ್ರವೇ ಹೆಲಿಕಾಪ್ಟರ್ ಸಹಾಯದಿಂದ ರಕ್ಷಿಸಲಾಗಿತ್ತು.
4. ಎಸ್‍ಎಸ್ ಕಿಯಾಂಗ್ಯಾ:
1948ರಲ್ಲಿ ಚೀನಾದ ಅಂತರ್ಯುದ್ಧದ ಕಾಲದಲ್ಲಿ ಎಸ್‍ಎಸ್ ಕಿಯಾಂಗ್ಯಾ ದುರಂತ ಸಂಭವಿಸಿತು. ನಿರಾಶ್ರಿತರನ್ನು ಸಾಗಿಸುವ ಕಾರ್ಯ ನಿರ್ವಹಿಸುತ್ತಿದ್ದ ಚೀನಾದ ಪ್ರಯಾಣಿಕ ಹಡಗು ಇದಾಗಿತ್ತು. 1948ರ ಡಿಸೆಂಬರ್ 4 ರಂದು ಹಡಗು ಸಾಮರ್ಥ್ಯಕ್ಕಿಂತಲು ಹೆಚ್ಚು ಪ್ರಯಾಣಿಕರನ್ನು ಸಾಗಿಸುತ್ತಿದ್ದ ವೇಳೆ ದುರಂತ ಸಂಭವಿಸಿದೆ. ಇದನ್ನೂ ಓದಿ: 6 ತಿಂಗಳಲ್ಲಿ ದೇಶ ತೊರೆದಿದ್ದಾರೆ 8 ಲಕ್ಷಕ್ಕೂ ಅಧಿಕ ಮಂದಿ – ಪಾಕಿಸ್ತಾನದಲ್ಲಿ ನಿಜಕ್ಕೂ ಏನಾಗ್ತಿದೆ?
ಅಧಿಕೃತವಾಗಿ 2,150 ಜನರನ್ನು ಸಾಗಿಸುವ ಸಾಮರ್ಥ್ಯ ಹೊಂದಿದ್ದ ಹಡಗು ಓವರ್‌ಲೋಡ್‍ನಿಂದಾಗಿ ದುರ್ಬಲಗೊಂಡಿತ್ತು. ಶಾಂಘೈನ ದಕ್ಷಿಣಕ್ಕೆ ಸುಮಾರು 50 ಮೈಲುಗಳಷ್ಟು ದೂರದಲ್ಲಿ ಹುವಾಂಗ್ಬು ನದಿಯ ಮುಂಭಾಗ ಹಡಗು ಬಿರುಕು ಬಿಟ್ಟು ಮುಳುಗಡೆಯಾಯಿತು. ಘಟನೆಯಲ್ಲಿ ಸುಮಾರು 4,000 ಜನರು ಸಾವನ್ನಪ್ಪಿದರೆ, 1,000 ಜನರನ್ನು ಮಾತ್ರವೇ ರಕ್ಷಣೆ ಮಾಡಲಾಗಿತ್ತು.
5. ಲೆ ಜೂಲಾ:
ಲೆ ಜುಲಾ ಸೆನೆಗಲೀಸ್ ಸರ್ಕಾರದ ಒಡೆತನದ ದೋಣಿಯಾಗಿದ್ದು, 2002 ಸೆಪ್ಟೆಂಬರ್ 26 ರಂದು ಗ್ಯಾಂಬಿಯಾದ ಕರಾವಳಿ ಪ್ರದೇಶದಲ್ಲಿ ಮುಳುಗಿತು. ಇದರ ಪರಿಣಾಮ 1,863 ಜನರು ಸಾವನ್ನಪ್ಪಿದರು. ಕೇವಲ 64 ಜನರನ್ನು ರಕ್ಷಣೆ ಮಾಡಲಾಗಿತ್ತು.
ದೋಣಿಯು ಕ್ಯಾಸಮಾನ್ಸ್ ಪ್ರದೇಶದ ಜಿಗುಯಿಂಚೋರ್‌ನಿಂದ ಸೆನೆಗಲ್‍ನ ರಾಜಧಾನಿ ಡಾಕರ್‌ಗೆ ಪ್ರಯಾಣಿಸುತ್ತಿದ್ದಾಗ ತೀವ್ರ ಚಂಡಮಾರುತದಿಂದಾಗಿ ದುರಂತ ಸಂಭವಿಸಿತು. ಇದು ಆಳವಿಲ್ಲದ ನೀರಿನಲ್ಲಿ ಮಾತ್ರವೇ ನೌಕಾಯಾನ ಮಾಡಲು ಪರವಾನಗಿ ಪಡೆದಿತ್ತು. ಈ ದುರಂತವನ್ನು ಆಫ್ರಿಕಾದ ಟೈಟಾನಿಕ್ ಎಂತಲೂ ಕರೆಯಲಾಗುತ್ತದೆ.
6. ಎಸ್‍ಎಸ್ ಸುಲ್ತಾನಾ:
ಎಸ್‍ಎಸ್ ಸುಲಾನಾ ಅಮೆರಿಕದ ಅತ್ಯಂತ ಭೀಕರ ಸಮುದ್ರ ದುರಂತ ಎನಿಸಿಕೊಂಡಿದೆ. 1865ರ ಏಪ್ರಿಲ್ 27 ಅಮೆರಿಕದ ಅಂತರ್ಯುದ್ಧ ಕೊನೆಗೊಂಡು ಕೇವಲ 1 ವಾರ ಕಳೆದಿತ್ತು. ಒಕ್ಕೂಟದ ಮಿಲಿಟರಿ ಕಾರಾಗೃಹಗಳಿಂದ ಬಿಡುಗಡೆಯಾದ ಹಾಗೂ ಮನೆಗೆ ವಾಪಸಾಗಲು ಉತ್ಸುಕರಾಗಿದ್ದ ಹೆಚ್ಚಿನ ಸಂಖ್ಯೆ ಯೂನಿಯನ್ ಯುದ್ಧ ಕೈದಿಗಳನ್ನು ಈ ಹಡಗು ಒಯ್ಯುತ್ತಿತ್ತು. ಇದನ್ನೂ ಓದಿ: ಪಾಕ್‌ನಲ್ಲಿ ರಾಜಕೀಯ ಕೋಲಾಹಲ – ಜೈಲುಪಾಲಾದ ಕ್ರಿಕೆಟ್ ದಂತಕಥೆಯ ಜೀವಕ್ಕೆ ಇದೆಯಾ ಆಪತ್ತು?
ವರದಿಗಳ ಪ್ರಕಾರ ಹಡಗಿನ ಬಾಯ್ಲರ್ ಅನ್ನು ಸರಿಯಾಗಿ ನಿರ್ವಹಿಸಿರಲಿಲ್ಲ ಹಾಗೂ ಹಡಗಿನಲ್ಲಿ 2,300 ಜನರು ತುಂಬಿದ್ದರು ಎನ್ನಲಾಗಿದೆ. ಇದು ಹಡಗಿನ ಸಾಮರ್ಥ್ಯಕ್ಕಿಂತಲೂ 6 ಪಟ್ಟು ಹೆಚ್ಚಾಗಿತ್ತು. ಒತ್ತಡದಿಂದಾಗಿ ಬಾಯ್ಲರ್ ಸ್ಫೋಟಗೊಂಡಾಗ ಆರಂಭದಲ್ಲಿ ನೂರಾರು ಜನರು ಸಾವನ್ನಪ್ಪಿದರು. ಓವರ್‌ಲೋಡ್‍ನಿಂದಾಗಿ ಡೆಕ್‍ಗಳು ಕುಸಿದಾಗ ಇನ್ನೂ ಅನೇಕರು ಸಿಕ್ಕಿಬಿದ್ದರು. ಘಟನೆಯಲ್ಲಿ ಸುಮಾರು 1,800 ಜನರ ಬಲಿಯಾಗಿತ್ತು. ಆದರೆ ಮಾಧ್ಯಮಗಳಲ್ಲಿ ಅಬ್ರಹಂ ಲಿಂಕನ್ ಹತ್ಯೆಯ ಬಗ್ಗೆ ನಿರಂತರವಾಗಿ ಪ್ರಸಾರ ಮಾಡಲಾಗಿದ್ದರಿಂದ ಈ ಘಟನೆ ಹೆಚ್ಚು ಸುದ್ದಿಯಾಗಿರಲಿಲ್ಲ.
7. ನೆಫ್ಚೂನ್:
1993ರ ಫೆಬ್ರವರಿ 17ರಂದು ಪೋರ್ಟ್-ಔ-ಪ್ರಿನ್ಸ್‍ನಿಂದ ಹೈಟಿಯ ಜೆರೆಮಿಗೆ ಪ್ರಯಾಣಿಸುತ್ತಿದ್ದ ನೆಫ್ಚೂನ್ ಪ್ರಯಾಣಿಕ ಹಡಗು ಭಾರೀ ಅಲೆಗಳ ಹೊಡೆತಕ್ಕೆ ಮುಳುಗಿತು. ಕೇವಲ 400 ಪ್ರಯಾಣಿಕರನ್ನು ತುಂಬುವ ಸಾಮಥ್ರ್ಯವಿದ್ದ ಹಡಗಿನಲ್ಲಿ ಸುಮಾರು 2,000 ಜನರು ಪ್ರಯಾಣಿಸುತ್ತಿದ್ದರು ಎನ್ನಲಾಗಿದೆ. ಹಡಗು ಮುಳುಗಡೆ ಸಂದರ್ಭ ರಕ್ಷಣಾ ಪ್ರಯತ್ನಗಳನ್ನು ಮಾಡಲಾಗಿದ್ದರೂ ಎಲ್ಲವೂ ಅಸ್ತವ್ಯಸ್ತಗೊಂಡಿತ್ತು. ಘಟನೆಯಲ್ಲಿ 1,500 ಜನರು ಸಾವನ್ನಪ್ಪಿದ್ದಾರೆ ಎಂದು ಅಂದಾಜಿಸಲಾಗಿದೆ.
8. ತೈಪಿಂಗ್:
1949ರ ಜನವರಿ 27ರಂದು ಚೀನಾದಿಂದ ತೈವಾನ್‍ಗೆ ತೆರಳುತ್ತಿದ್ದ ತೈಪಿಂಗ್ ಹೆಸರಿನ ಹಡಗು ಅಪಘಾತಕ್ಕೀಡಾಗಿ ಮುಳುಗಡೆಯಾಗಿತ್ತು. ಅಂದಾಜಿನ ಪ್ರಕಾರ ಹಡಗಿನಲ್ಲಿ 1,500ಕ್ಕೂ ಹೆಚ್ಚು ಜನರಿದ್ದರು. ಅದರಲ್ಲಿ ಹೆಚ್ಚಿನವರು ಚೀನಾದ ಅಂತರ್ಯುದ್ಧದಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಿದ್ದ ನಿರಾಶ್ರಿತರಾಗಿದ್ದರು. ಕೇವಲ 580 ಪ್ರಯಾಣಿಕರ ಸಾಮರ್ಥ್ಯವಿದ್ದ ಹಡಗು ಇದಾಗಿತ್ತು. ಕರ್ಫ್ಯೂ ಕಾರಣದಿಂದಾಗಿ ತೈಪಿಂಗ್ ಹಡಗಿನಲ್ಲಿ ರಾತ್ರಿ ದೀಪಗಳಿಲ್ಲದೇ ಪ್ರಯಾಣ ಬೆಳೆಸಿತ್ತು. ಆದರೆ ಅದು ಝೌಶನ್ ದ್ವೀಪಸಮೂಹದ ಬಳಿ ಬಂದಾಗ ಚಿಕ್ಕ ಸರಕು ಹಡಗು ಚೀನುವಾನ್‍ಗೆ ಡಿಕ್ಕಿ ಹೊಡೆದು ಮುಳುಗಡೆಯಾಯಿತು. ಘಟನೆಯಲ್ಲಿ ಕೇವಲ 37 ಜನರನ್ನು ರಕ್ಷಿಸಲಾಗಿತ್ತು. ಇದನ್ನೂ ಓದಿ: ವಿಶ್ವದ ಅತಿಸಣ್ಣ ದೇಶ ಯಾವ್ದು..? ಎಲ್ಲಿದೆ ಗೊತ್ತಾ..? – ಅಚ್ಚರಿಯಾದ್ರೂ ಇದು ನಿಜ!
9. ಟೈಟಾನಿಕ್:
ವಿಶ್ವದಾದ್ಯಂತ ಹೆಚ್ಚು ಸದ್ದು ಮಾಡಿದ ಹಡಗು ದುರಂತದಲ್ಲಿ ಟೈಟಾನಿಕ್ ಮೊದಲನೆಯದಾಗಿದೆ. ಟೈಟಾನಿಕ್ ಬ್ರಿಟಿಷ್ ಪ್ರಯಾಣಿಕ ಹಡಗಾಗಿದ್ದು, ಮುಳುಗದ ಹಡಗು ಎಂದೇ ಹೆಸರು ಪಡೆದಿತ್ತು. ಆದರೆ 1912ರ ಏಪ್ರಿಲ್ 15 ರಂದು ತನ್ನ ಮೊಟ್ಟ ಮೊದಲ ಪ್ರಯಾಣದಲ್ಲೇ ದೈತ್ಯ ಮಂಜುಗಡ್ಡೆಗೆ ಡಿಕ್ಕಿ ಹೊಡೆದು ಟೈಟಾನಿಕ್ ಮುಳುಗಡೆಯಾಯಿತು. ಹಡಗು ಸೌತಾಂಪ್ಟನ್‍ನಿಂದ ನ್ಯೂಯಾರ್ಕ್ ನಗರಕ್ಕೆ ತೆರಳುತ್ತಿದ್ದಾಗ ದುರ್ಘಟನೆ ನಡೆದಿದೆ. ಘಟನೆ ವೇಳೆ ಹಡಗಿನಲ್ಲಿ 2,200ಕ್ಕೂ ಹೆಚ್ಚು ಪ್ರಯಾಣಿಕರು ಹಾಗೂ ಸಿಬ್ಬಂದಿಗಳಿದ್ದರು. ಲೈಫ್‍ಬೋಟ್ ಸಹಾಯದಿಂದ ನೂರಾರು ಜನರನ್ನು ರಕ್ಷಣೆ ಮಾಡಲಾಯಿತಾದರೂ ದುರಂತದಲ್ಲಿ ಅಂದಾಜು 1,500ಕ್ಕೂ ಹೆಚ್ಚು ಜನರು ಪ್ರಾಣ ಕಳೆದುಕೊಂಡಿದ್ದಾರೆ.
ಸಮುದ್ರದ (Sea) ಆಳ, ಭೂಮಿಯ ಅಜ್ಞಾತ ಪ್ರದೇಶವಾಗಿಯೇ ಉಳಿದಿದೆ. ಇಂದಿಗೂ ಪ್ರಕೃತಿ ಇಲ್ಲಿನ ಆನೇಕ ರಹಸ್ಯಗಳನ್ನು ತನ್ನಲ್ಲಿಯೇ ಇಟ್ಟುಕೊಂಡಿದೆ. ಆಳವಾದ ಸಮುದ್ರದಲ್ಲಿರುವ ನೀರಿನ ಒತ್ತಡ. ಸಮುದ್ರದ ಆಳದಲ್ಲಿ ಮೇಲ್ಮಟ್ಟಕ್ಕಿಂತ 1,000 ಪಟ್ಟು ಹೆಚ್ಚಿನ ಒತ್ತಡ ಹೊಂದಿರುತ್ತದೆ. ಈ ಒತ್ತಡವೂ ಸದೃಢವಾದ ಹಡಗನ್ನು ಸಹ ಪುಡಿ ಮಾಡಬಲ್ಲಷ್ಟು ಪ್ರಬಲವಾಗಿರುತ್ತದೆ.
ಇದೇ ಕಾರಣಕ್ಕೆ, ಆಳವಾದ ಸಮುದ್ರದ ತೀವ್ರ ಒತ್ತಡ, ಕಡಿಮೆ ತಾಪಮಾನ ಮತ್ತು ಕತ್ತಲೆಯ ನಡುವೆಯೂ ಕಾರ್ಯ ನಿರ್ವಹಿಸುವಂತೆ ನಿರ್ಮಾಣ ಮಾಡಲಾಗಿಯೂ ಸಹ ಟೈಟಾನಿಕ್ ಹಡಗಿನ ಅವಶೇಷಗಳನ್ನು ನೋಡಲು ತೆರಳಿದ್ದ ಸಬ್‌ಮರ್ಸಿಬಲ್ (Submersible) ಪತನವಾಯಿತು. ಇದನ್ನೂ ಓದಿ: ಟೈಟಾನಿಕ್ ಹಡಗಿನ ಅವಶೇಷ ನೋಡಲು ತೆರಳಿದ್ದ ವಿಶ್ವದ ಐವರು ಶ್ರೀಮಂತರ ದಾರುಣ ಸಾವು
ಜೂನ್ 18 ರಂದು ದುರಂತ ಅಂತ್ಯ ಕಂಡ ಜಲಾಂತರ್ಗಾಮಿ (Titan Tragedy) ಸಮುದ್ರದ ಆಳದ ಒತ್ತಡವನ್ನು ತಡೆದುಕೊಳ್ಳುವಂತೆ ಮೇಲ್ನೋಟಕ್ಕೆ ವಿನ್ಯಾಸಗೊಳಿಸಲಾಗಿತ್ತು. ಇದು ಕಾರ್ಯಾಚರಣೆಯ ದುರಂತಕ್ಕೆ ಕಾರಣವಾಯಿತು. ಒಂದು ವಾರದ ತೀವ್ರ ಶೋಧದ ಬಳಿಕ ಅಮೆರಿಕಾ ಕೋಸ್ಟ್ ಗಾರ್ಡ್ ಸಬ್‌ಮರ್ಸಿಬಲ್‌ನಲ್ಲಿ ತೆರಳಿದ್ದ ಎಲ್ಲರೂ ಸಾವಿಗೀಡಾಗಿದ್ದಾರೆ ಎಂದು ಘೋಷಿಸಿತ್ತು.
ಸಮುದ್ರದ ಮೇಲ್ಮೈಯಿಂದ 12,000 ಅಡಿಗಳಿಗಿಂತ ಹೆಚ್ಚು ಆಳದಲ್ಲಿದ್ದ ಟೈಟಾನಿಕ್ (Titanic) ಅವಶೇಷಗಳಿರುವ ಜಾಗಕ್ಕೆ ತೆರಳುವುದು ಅಪಾಯಕಾರಿಯಾಗಿತ್ತು. ಈ ಶೋಧನೆಯ ಪ್ರಯಾಸಗಳು ತಿಳಿದಿದ್ದರೂ ಸಹ ಯತ್ನಕ್ಕೆ ಕೈ ಹಾಕಿರುವುದು ಒಂದು ಬಗೆಯಲ್ಲಿ ದುರಂತಕ್ಕೆ ಆಹ್ವಾನ ಕೊಟ್ಟಂತೆಯೇ ಇತ್ತು. ಆದರೆ ದುರಂತದ ಸಮಯದಲ್ಲಿ ನಿಖರವಾಗಿ ಏನು ತಪ್ಪಾಗಿದೆ ಎಂಬುದು ನಿಗೂಢವಾಗಿಯೇ ಉಳಿದಿದೆ. ಸದ್ಯಕ್ಕೆ ತಿಳಿದಿರುವ ಸಂಗತಿ ಅಂದರೆ, ಸಬ್‌ಮರ್ಸಿಬಲ್ ಸ್ಫೋಟಕ್ಕೆ ಒಳಗಾಯಿತು ಎಂಬುದಷ್ಟೇ ಆಗಿದೆ.
ಸಾಗರದ ಆಳ ಮತ್ತು ನೀರಿನ ಒತ್ತಡ
ಸಾಗರವನ್ನು ಹಲವಾರು ಪದರಗಳಾಗಿ ವಿಂಗಡಿಸಲಾಗಿದೆ. ಪ್ರತಿಯೊಂದೂ ತನ್ನದೇ ಆದ ವಿಶಿಷ್ಟ ಲಕ್ಷಣಗಳನ್ನು ಹೊಂದಿದೆ. ಪದರಗಳು ಸೂರ್ಯನ ಬೆಳಕಿನ ವಲಯ, ಟ್ವಿಲೈಟ್ ವಲಯ, ಮಧ್ಯರಾತ್ರಿ ವಲಯ, ಪ್ರಪಾತ ವಲಯ ಮತ್ತು ಹಡಲ್ ವಲಯವಾಗಿ (ಕೊನೆಯದು ಆಳವಾದದ್ದು) ವಿಂಗಡಿಸಲಾಗಿದೆ.
ಸೂರ್ಯನ ಬೆಳಕಿನ ವಲಯವು ಮೇಲ್ಮೈಯಿಂದ ಸುಮಾರು 200 ಮೀಟರ್ ಆಳದವರೆಗಿನ ಹೆಚ್ಚಿನ ಸಮುದ್ರ ಜೀವಿಗಳು ಮತ್ತು ಮಾನವ ಚಟುವಟಿಕೆಗಳಿಗೆ ಯೋಗ್ಯವಾದದ್ದು. ಟ್ವಿಲೈಟ್ ವಲಯಕ್ಕೆ (200 ರಿಂದ 1,000 ಮೀಟರ್) ಇಳಿಯುತ್ತಿದ್ದಂತೆ, ಸೂರ್ಯನ ಬೆಳಕು ಕಡಿಮೆಯಾಗುತ್ತದೆ. ತಾಪಮಾನ ಇಳಿಯುತ್ತದೆ ಮತ್ತು ಒತ್ತಡ ಹೆಚ್ಚಾಗುತ್ತದೆ. ಮಧ್ಯರಾತ್ರಿ ವಲಯದಲ್ಲಿ (1,000 ರಿಂದ 4,000 ಮೀಟರ್‌ಗಳು), ಸಂಪೂರ್ಣ ಕತ್ತಲೆಯೇ ಆ ಸಾಮ್ರಾಜ್ಯವನ್ನು ಆಳುತ್ತದೆ.
ಇನ್ನೂ ಪ್ರಪಾತ ವಲಯ (4,000 ರಿಂದ 6,000 ಮೀಟರ್) ವಿಶಾಲವಾದ ಸಾಗರ ತಳವನ್ನು ಆವರಿಸಿದೆ. ಇಲ್ಲಿ ತಾಪಮಾನವು ಘನೀಕರಣಕ್ಕಿಂತ ಸ್ವಲ್ಪ ಮೇಲಿರುತ್ತದೆ ಮತ್ತು ಒತ್ತಡವು ಅಗಾಧವಾಗಿರುತ್ತದೆ. ಹಡಲ್ ವಲಯ (6,000 ರಿಂದ 11,000 ಮೀಟರ್), ಕಂದಕಗಳು ಮತ್ತು ಕಣಿವೆಗಳನ್ನು ಒಳಗೊಂಡಿದೆ. ಸಾಗರದ ಆಳವಾದ ಭಾಗವಾದ ಮರಿಯಾನಾ ಕಂದಕವು ಮೌಂಟ್ ಎವರೆಸ್ಟ್ನ ಎತ್ತರಕ್ಕಿಂತ 11,034 ಮೀಟರ್ ಆಳಕ್ಕಿದೆ. ಸಮುದ್ರದ ಪ್ರತಿ 10 ಮೀಟರ್ ಆಳದಲ್ಲಿ ಒತ್ತಡದಲ್ಲಿ ಭಾರೀ ಪ್ರಮಾಣದ ಬದಲಾವಣೆಯಾಗುತ್ತಿರುತ್ತದೆ. ಸಮುದ್ರದ ಆಳವಾದ ಭಾಗದಲ್ಲಿ ಸುಮಾರು 50 ಜಂಬೋ ಜೆಟ್‌ಗಳನ್ನು ಒಬ್ಬನ ಮೇಲೆ ಜೋಡಿಸಿದಷ್ಟು ಪರಿಣಾಮ ಬೀರುತ್ತದೆ.
ಸಬ್‌ಮರ್ಸಿಬಲ್‌ಗೆ ಏನಾಗಿರಬಹುದು?
ಸಮುದ್ರದ ಆಳದ ತೀವ್ರ ಒತ್ತಡವು ಅನ್ವೇಷಣೆಗೆ ದೊಡ್ಡ ಸವಾಲುಗಳಲ್ಲಿ ಒಂದಾಗಿದೆ. ಟೈಟಾನ್‌ನಂತಹ ಸಬ್‌ಮರ್ಸಿಬಲ್ ಕೆಳಗಿಳಿದಾಗ ಅದು ನೀರಿನ ಹೆಚ್ಚು ಭಾರವನ್ನು ತಡೆದುಕೊಳ್ಳಬೇಕಾಗುತ್ತದೆ. ಅದರ ಹೊರಗಿನ ಒತ್ತಡವು ಒಳಗಿನ ಒತ್ತಡಕ್ಕಿಂತ ಗಮನಾರ್ಹವಾಗಿ ಹೆಚ್ಚಾದರೆ ಅದು ಸ್ಫೋಟಕ್ಕೆ ಕಾರಣವಾಗಬಹುದು.
ಆದರೆ ಟೈಟಾನಿಕ್ ಹಡಗು ಮುಳುಗಿದ್ದಾಗ ಅದು ಸ್ಫೋಟಗೊಂಡಿರಲಿಲ್ಲ. ಯಾಕೆಂದರೆ, ಟೈಟಾನಿಕ್ ಕ್ರಮೇಣ ಕೆಳಗಿಳಿದಂತೆ ಗಾಳಿ ತುಂಬಿದ್ದ ಭಾಗಗಳು ನೀರಿನಿಂದ ತುಂಬಿರಬಹುದು. ಹಡಗಿನ ಒಳಗೆ ಮತ್ತು ಹೊರಗಿನ ಒತ್ತಡ ಸಮವಾಗಿ ಸ್ಫೋಟ ಆಗದೆ ಉಳಿದಿದೆ. ಇದಕ್ಕೆ ವ್ಯತಿರಿಕ್ತವಾಗಿ ಸಬ್‌ಮರ್ಸಿಬಲ್ ಗಾಳಿಯಿಂದ ತುಂಬಿತ್ತು. ಅಲ್ಲದೇ ನೀರಿನ ಆಳಕ್ಕೆ ವೇಗವಾಗಿ ಇಳಿಯಿತು. ಇದು ಅಪಾಯಕಾರಿ ಒತ್ತಡದ ವ್ಯತ್ಯಾಸವನ್ನು ಎದುರಿಸಲು ಕಾರಣವಾಗಿರಬಹುದು. ಈ ವ್ಯತ್ಯಾಸವು ಸಬ್‌ಮರ್ಸಿಬಲ್‌ನ ರಚನಾತ್ಮಕ ಮಿತಿಗಳನ್ನು ಮೀರಿ ಸ್ಫೋಟವನ್ನು ಅದು ಪ್ರಚೋದಿಸಬಹುದು.
ಸಮುದ್ರದಲ್ಲಿಯೇ ವಾಸಿಸುವ ಜೀವಿಗಳಿಗೆ ಈ ಪರಿಸ್ಥಿತಿಗಳನ್ನು ಎದುರಿಸುವ ಶಕ್ತಿಯನ್ನು ಪ್ರಕೃತಿಯೇ ನೀಡಿರುತ್ತದೆ. ಬದುಕಲು ವಿಶಿಷ್ಟವಾದ ದೇಹ ರಚನೆಯನ್ನು ಸಮುದ್ರದಾಳದ ಜೀವಿಗಳು ಹೊಂದಿರುತ್ತವೆ. ಆದರೆ ಮನುಷ್ಯನಿಗಾಗಲಿ ಮುನುಷ್ಯ ನಿರ್ಮಾಣ ಮಾಡಿರುವ ಸಾಧನಗಳಿಗೆ ಈ ಗ್ಯಾರಂಟಿ ಕೊಡಲು ಸಾಧ್ಯವಿಲ್ಲ.
ಆ ಕಾರಣಕ್ಕಾಗಿ ಹೆಚ್ಚಿನ ನೀರೊಳಗಿನ ಆಳ-ಸಮುದ್ರದ ಅನ್ವೇಷಣೆಯನ್ನು ಮಾನವರಹಿತ ಸಾಧನಗಳಿಂದ ನಡೆಸಲಾಗುತ್ತದೆ. ಹೆಚ್ಚು ವ್ಯಾಪಕವಾಗಿ ಬಳಸಲಾಗುವ ಆಳ ಸಮುದ್ರದ ವಾಹನಗಳ ಪೈಕಿ ರಿಮೋಟ್ ಆಪರೇಟೆಡ್ ವೆಹಿಕಲ್ಸ್, ಆಟೋಮೆಟಿಕ್ ವಾಹನಗಳನ್ನು ಬಳಸಲಾಗುತ್ತದೆ. ಆದರೆ ಸಬ್‌ಮರ್ಸಿಬಲ್ ಹೆಚ್ಚಿನ ಆಳದ ಅಧ್ಯಯನಕ್ಕೆ ಯೋಗ್ಯವಲ್ಲ ಎನ್ನುವುದು ಈ ದುರಂತ ಸಾಬೀತು ಪಡಿಸಿದಂತಿದೆ. ಇದನ್ನೂ ಓದಿ: ಲೋಕಸಭೆಯಲ್ಲಿ ಸ್ಪರ್ಧಿಸಲು ಪಕ್ಷ ಸೂಚನೆ ನೀಡಿದ್ರೆ ಆದೇಶ ಪಾಲಿಸಲು ಸಿದ್ಧ: ಯತೀಂದ್ರ ಸಿದ್ದರಾಮಯ್ಯ
ಹಾಲಿವುಡ್ ನ ಖ್ಯಾತ ನಟ, ಟೈಟಾನಿಕ್ ಚಿತ್ರದ ಹೀರೋ ಲಿಯೋನಾರ್ಡೊ ಡಿಕ್ಯಾಪ್ರಿಯೋ ಇದೀಗ ಭಾರತೀಯ ಮೂಲಕ ಮಾಡೆಲ್ ನೀಲಂ ಗೀಲ್ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ ಅನ್ನು ವಿಚಾರ ಹಾಲಿವುಡ್ ರಂಗದಲ್ಲಿ ಗಿರಕಿ ಹೊಡೆಯುತ್ತಿದೆ. ಪದೇ ಪದೇ ನೀಲಂ ಗೀಲ್ ಜೊತೆ ಲಿಯೋನಾರ್ಡೊ ಕಾಣಿಸಿಕೊಳ್ಳುತ್ತಿರುವುದು ಅನುಮಾನಕ್ಕೆ ಕಾರಣವಾಗಿದೆ.
ಪದೇ ಪದೇ ಒಟ್ಟಿಗೆ ಹಲವಾರು ಕಡೆ ಕಾಣಿಸಿಕೊಂಡಿರುವ ಈ ಜೋಡಿ ಇತ್ತೀಚೆಗಷ್ಟೇ ನಡೆದ ಔತಣಕೂಟದಲ್ಲಿ ಒಟ್ಟಿಗೆ ಭಾಗಿಯಾಗಿದ್ದರು. ಪ್ಯಾರಿಸ್ ನಲ್ಲಿರುವ ಹೋಟೆಲ್ ನಲ್ಲಿ ಈ ಜೋಡಿ ತಡರಾತ್ರಿ ಊಟಕ್ಕಾಗಿ ಬಂದಿತ್ತು ಎಂದು ಹೇಳಲಾಗುತ್ತಿದೆ. ಇವರ ಜೊತೆ ಡಿಕಾಪ್ರಿಯೊ ಕುಟುಂಬದ ಸದಸ್ಯರು ಕೂಡ ಇದ್ದರು ಎಂದು ವರದಿಯಾಗಿದೆ. ಇದನ್ನೂ ಓದಿ:ಕೆಂಪು ಬಣ್ಣದ ಸೀರೆಯಲ್ಲಿ ಗ್ಲ್ಯಾಮರಸ್ ಆಗಿ ಮಿಂಚಿದ ಮಾನ್ವಿತಾ
ಡಿಕಾಪ್ರಿಯೋ ಮತ್ತು ನೀಲಂ ಜೊತೆಯಾಗಿ ಕಾಣಿಸಿಕೊಳ್ಳುತ್ತಿರುವುದು ಇದೇ ಮೊದಲೇನೂ ಅಲ್ಲ ಎಂದು ಹಾಲಿವುಡ್ ಮಾಧ್ಯಮಗಳ ವರದಿ ಮಾಡಿವೆ. ಇತ್ತೀಚೆಗೆ ನಡೆದ ಎರಡೂ ಕಾರ್ಯಕ್ರಮದಲ್ಲೂ ನೀಲಂ ತನ್ನ ಕುಟುಂಬದ ಜೊತೆಯೇ ಕಾರ್ಯಕ್ರಮಕ್ಕೆ ಬಂದಿದ್ದರು. ಅಲ್ಲಿ ಡಿಕಾಪ್ರಿಯೊ ಕೂಡ ಇದ್ದರು. ಅಲ್ಲದೇ ಲಂಡನ್ ನ ಚಿಲ್ಟರ್ನ್ ಫೈರ್ ಹೌಸ್ ನಲ್ಲಿ ನಡೆದ ಔತಣಕೂಟದಲ್ಲಿ ಎರಡು ಕಡೆಯ ಕುಟುಂಬ ಭಾಗಿಯಾಗಿತ್ತು.
ಎರಡೂ ಕುಟುಂಬಗಳು ಅನೇಕ ಬಾರಿ ಡಿನ್ನರ್ ಗೆ ಸೇರಿದ್ದರಂತೆ ನೀಲಂ ಮತ್ತು ಡಿಕಾಪ್ರಿಯೋ ಲವ್ ಇನ್ ಸಂಬಂಧದಲ್ಲಿ ಇದ್ದಾರೆ ಎಂದೂ ಹೇಳಲಾಗುತ್ತಿದೆ. ಆದರೆ, ನೀಲಂ ಆಗಲಿ ಡಿಕಾಪ್ರಿಯೋ ಆಗಲಿ ಈ ಕುರಿತು ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಆದರೆ, ಒಟ್ಟೊಟ್ಟಿಗೆ ಕಾಣಿಸಿಕೊಳ್ಳುವುದು ಮಾತ್ರ ಬಿಟ್ಟಿಲ್ಲ.
ವಾಷಿಂಗ್ಟನ್: ಅಟ್ಲಾಂಟಿಕ್ ಸಾಗರದಲ್ಲಿ ಮುಳುಗಿದ್ದ ಟೈಟಾನಿಕ್ (Titanic) ಹಡಗಿನ ಅವಶೇಷಗಳನ್ನ ನೋಡಲು ಸಣ್ಣ ಜಲಾಂತರ್ಗಾಮಿಯಲ್ಲಿ (Submersible) ತೆರಳಿದ್ದ ವಿಶ್ವದ ಐವರು ಶ್ರೀಮಂತರು ಮೃತಪಟ್ಟಿದ್ದಾರೆ ಎಂದು ಅಮೆರಿಕದ ಕೋಸ್ಟ್ ಗಾರ್ಡ್ ಖಚಿತಪಡಿಸಿದೆ.
ಪ್ರವಾಸಿಗರನ್ನು ಕರೆದೊಯ್ದಿದ್ದ ಸೀಮಿತ ಪ್ರದೇಶದಲ್ಲಿ ಸಂಚರಿಸುವ ಸಣ್ಣ ಜಲಾಂತರ್ಗಾಮಿ (Submersible) ಸಾಗರದ ಒಳಗಡೆ ಸುಮಾರು 1,600 ಅಡಿ (488 ಮೀಟರ್) ಆಳದಲ್ಲಿ ಟೈಟಾನಿಕ್ ಹಡಗಿನ ಅವಶೇಷಗಳ ಬಳಿ ಸ್ಫೋಟಗೊಂಡಿದೆ. ಇದರಿಂದಾಗಿ ಐವರು ದುರಂತ ಸಾವಿಗೀಡಾಗಿದ್ದಾರೆ. ರಿಮೋಟ್ ಕಂಟ್ರೋಲ್ ಸಾಧನದಿಂದ ಇದನ್ನು ಪತ್ತೆಹೆಚ್ಚಲಾಗಿದೆ. ಜಲಾಂತರ್ಗಾಮಿ ಸಬ್‌ಮರ್ಸಿಬಲ್‌ನಲ್ಲಿ ಒಬ್ಬ ಪೈಲಟ್ ಮತ್ತು ನಾಲ್ವರು ಪ್ರಯಾಣಿಕರಿದ್ದರು ಎಂದು ಹೇಳಿದೆ.
ಈ ಕುರಿತು ಓಷಿಯನ್‌ಗೇಟ್ ಎಕ್ಸ್‌ಪೆಡಿಷನ್ ಸಹ ಪ್ರಕಟಣೆ ಬಿಡುಗಡೆಗೊಳಿಸಿದ್ದು, ಕಂಪನಿಯ ಸಿಇಒ ಸ್ಟಾಕ್‌ಟನ್ ರಷ್ ಸೇರಿದಂತೆ ಜಲಾಂತರ್ಗಾಮಿಯಲ್ಲಿ ಸಂಚರಿಸಿದ್ದ ಎಲ್ಲ ಐದು ಮಂದಿಯೂ ಮೃತಪಟ್ಟಿದ್ದಾರೆ ಎಂದು ತಿಳಿಸಿದೆ. ಟೈಟಾನಿಕ್ ಹಡಗಿನ ಅವಶೇಷಗಳನ್ನು ನೋಡಲು ಜಲಾಂತರ್ಗಾಮಿಯಲ್ಲಿ ತೆರಳಿದ್ದ ಒಶಿಯನ್‌ಗೇಟ್ ಸಿಇಒ ಸ್ಟಾಕ್‌ಟನ್ ರಷ್, ಬ್ರಿಟಿಷ್ ಉದ್ಯಮಿ ಹಮೀಶ್ ಹಾರ್ಡಿಂಗ್, ಪಾಲ್ ಹೆನ್ರಿ ನಾರ್ಗಿಯೊಲೆಟ್, ಪಾಕಿಸ್ತಾನದ ಉದ್ಯಮಿ ಶಹಜಾದಾ ದಾವೂದ್ ಮತ್ತು ಅವರ ಮಗ ಸುಲೇಮಾನ್ ದಾವೂದ್ ಭಾನುವಾರವಷ್ಟೇ ಕಣ್ಮರೆಯಾಗಿದ್ದರು.
ಟೈಟಾನಿಕ್ ಹಡಗಿನ ಅವಶೇಷಗಳನ್ನ ನೋಡಲು ಸಣ್ಣ ಜಲಾಂತರ್ಗಾಮಿ ಅಟ್ಲಾಂಟಿಕ್ ಸಾಗರದಲ್ಲಿ ಕಳೆದ ನಾಲ್ಕು ದಿನಗಳ ಹಿಂದೆ ನಾಪತ್ತೆಯಾಗಿತ್ತು. ಇದಕ್ಕೆ ಯುಎಸ್ ಕೋಸ್ಟ್ ಗಾರ್ಡ್ ಸಿಬ್ಬಂದಿ ತೀವ್ರವಾಗಿ ಹುಡುಕಾಟ ನಡೆಸಿದ್ದರು. 96 ತಾಸು ಸಾಗರದಲ್ಲಿ ಸಂಚರಿಸುವಷ್ಟು ಆಮ್ಲಜನಕವನ್ನಷ್ಟೇ ಅದು ಹೊಂದಿತ್ತು. ಇದನ್ನೂ ಓದಿ: ಟೈಟಾನಿಕ್ ಅವಶೇಷ ನೋಡಲು ಪ್ರವಾಸಿಗರನ್ನು ಕರೆದೊಯ್ಯುತ್ತಿದ್ದ ಜಲಾಂತರ್ಗಾಮಿ ನಾಪತ್ತೆ
ಟೈಟಾನಿಕ್ ದುರಂತ:
ದೈತ್ಯ ಟೈಟಾನಿಕ್ ಹಡಗು 1912ರಲ್ಲಿ ತನ್ನ ಮೊದಲ ಪ್ರಯಾಣದಲ್ಲೇ ಮಂಜುಗಡ್ಡೆಗೆ ಡಿಕ್ಕಿ ಹೊಡೆದು ಅಟ್ಲಾಂಟಿಕ್ ಸಾಗರದಲ್ಲಿ ಮುಳುಗಿತು. ಈ ದುರಂತದಲ್ಲಿ 1,500ಕ್ಕೂ ಹೆಚ್ಚು ಜನರು ಸಾವನ್ನಪ್ಪಿದರು. ಈ ಹಡಗಿನ ಅವಶೇಷವನ್ನು 1985ರಲ್ಲಿ ಕಂಡುಹಿಡಿಯಲಾಯಿತು. ಅಟ್ಲಾಂಟಿಕ್‌ನ ಆಳದಲ್ಲಿರುವ ಈ ಅವಶೇಷವನ್ನು ಅಂದಿನಿಂದ ಇಂದಿನವರೆಗೂ ವ್ಯಾಪಕವಾಗಿ ಪರಿಶೋಧಿಸಲಾಗುತ್ತಿದೆ.
ವಾಷಿಂಗ್ಟನ್: ಉತ್ತರ ಅಟ್ಲಾಂಟಿಕ್‌ನಲ್ಲಿ ಟೈಟಾನಿಕ್ (Titanic) ಅವಶೇಷಗಳನ್ನು ವೀಕ್ಷಿಸಲು ತೆರಳಿದ್ದ ಜಲಾಂತರ್ಗಾಮಿಯೊಂದು (Submarine) ನಾಪತ್ತೆಯಾಗಿರುವ ಘಟನೆ ನಡೆದಿತ್ತು. ಇದೀಗ ನಾಪತ್ತೆಯಾಗಿರುವ ಜಲಾಂತರ್ಗಾಮಿಯಲ್ಲಿ ಪ್ರಯಾಣಿಸುತ್ತಿದ್ದ ಐವರಲ್ಲಿ ಪಾಕಿಸ್ತಾನದ ಪ್ರಮುಖ ಉದ್ಯಮಿ (Pakistani businessman) ಹಾಗೂ ಅವರ ಪುತ್ರ ಸೇರಿದ್ದರು ಎಂದು ಅವರ ಕುಟುಂಬ ಮಂಗಳವಾರ ತಿಳಿಸಿದೆ.
ಓಷನ್‌ಗೇಟ್ ಎಕ್ಸ್‌ಪೆಂಡಿಷನ್ಸ್ ಕಂಪನಿ ನಿರ್ವಹಿಸುತ್ತಿದ್ದ ಟೂರಿಸ್ಟ್ ಕ್ರಾಫ್ಟ್ ಭಾನುವಾರ ಸಾಗರಕ್ಕಿಳಿದ 2 ಗಂಟೆಗಳಲ್ಲಿ ಸಂಪರ್ಕವನ್ನು ಕಡಿದುಕೊಂಡಿದೆ. ಅದು 96 ಗಂಟೆಗಳ ಆಮ್ಲಜನಕ ಪೂರೈಕೆ ಹೊಂದಿದೆ. ಜಲಾಂತರ್ಗಾಮಿಯೊಂದಿಗೆ ಸಂಪರ್ಕವನ್ನು ಮರುಸ್ಥಾಪಿಸಲು ಹಾಗೂ ಅದನ್ನು ಸುರಕ್ಷಿತವಾಗಿ ಕರೆತರಲು ಅನೇಕ ಸರ್ಕಾರಿ ಸಂಸ್ಥೆಗಳು ಹಾಗೂ ಕಂಪನಿಗಳು ಜಂಟಿಯಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದೀಗ ನಾಪತ್ತೆಯಾಗಿರುವ ಜಲಾಂತರ್ಗಾಮಿಯಲ್ಲಿ ಪ್ರಯಾಣಿಸುತ್ತಿದ್ದ ಐವರಲ್ಲಿ ಪಾಕಿಸ್ತಾನದ ಶ್ರೀಮಂತ ಉದ್ಯಮಿಗಳಲ್ಲೊಬ್ಬರಾದ ಶಹಜಾದಾ ದಾವೂದ್ (Shahzada Dawood) ಹಾಗೂ ಅವರ ಮಗ ಹುಸೇನೆ ದಾವೂದ್ ಇದ್ದರು ಎಂಬುದು ತಿಳಿದುಬಂದಿದೆ. ಶಹಜಾದಾ ದಾವೂದ್ ಖ್ಯಾತ ಎಂಗ್ರೋ ಕಂಪನಿಯ ಉಪಾಧ್ಯಕ್ಷ. ಎಂಗ್ರೋ ಇಂಧನ, ಕೃಷಿ, ಪೆಟ್ರೋಕೆಮಿಕಲ್ಸ್ ಹಾಗೂ ದೂರಸಂಪರ್ಕದಲ್ಲಿ ಹೂಡಿಕೆ ಮಾಡುವ ಸಂಸ್ಥೆಯಾಗಿದೆ. ಇದು 2022ರ ಕೊನೆಯಲ್ಲಿ 350 ಶತಕೋಟಿ ರೂ. ಆದಾಯವನ್ನು ಘೋಷಿಸಿದೆ. ಇದನ್ನೂ ಓದಿ: ಟೈಟಾನಿಕ್ ಅವಶೇಷ ನೋಡಲು ಪ್ರವಾಸಿಗರನ್ನು ಕರೆದೊಯ್ಯುತ್ತಿದ್ದ ಜಲಾಂತರ್ಗಾಮಿ ನಾಪತ್ತೆ
ನಾಪತ್ತೆಯಾಗಿರುವ ಜಲಾಂತರ್ಗಾಮಿಯಲ್ಲಿ ಪ್ರಯಾಣಿಸುತ್ತಿದ್ದ ಮತ್ತೊಬ್ಬ ಪ್ರಯಾಣಿಕನನ್ನು ಬ್ರಿಟಿಷ್ ಉದ್ಯಮಿ ಹಮೀಶ್ ಹಾರ್ಡಿಂಗ್ ಎಂದು ಗುರುತಿಸಲಾಗಿದೆ. ಇದೀಗ ಅಮೆರಿಕ ಹಾಗೂ ಕೆನಡಾದ ಹಡಗುಗಳು ಮಾತ್ರವಲ್ಲದೇ ವಿಮಾನಗಳು ಕೂಡಾ ಜಲಾಂತರ್ಗಾಮಿ ಹುಡುಕಾಟಕ್ಕೆ ಇಳಿದಿವೆ. ಇದನ್ನೂ ಓದಿ: ಅಮೆರಿಕದಲ್ಲಿ ಎಲೋನ್ ಮಸ್ಕ್ ಭೇಟಿಯಾಗ್ತಾರೆ ಪ್ರಧಾನಿ ಮೋದಿ
ವಾಷಿಂಗ್ಟನ್: ಟೈಟಾನಿಕ್ (Titanic) ಅವಶೇಷಗಳನ್ನು ನೋಡಲು ಪ್ರವಾಸಿಗರನ್ನು ಕರೆದುಕೊಂಡು ಹೋಗುತ್ತಿದ್ದ ಸಣ್ಣ ಜಲಾಂತರ್ಗಾಮಿ (Submarine) ಅಟ್ಲಾಂಟಿಕ್ ಸಾಗರದಲ್ಲಿ ನಾಪತ್ತೆಯಾಗಿದೆ ಎಂದು ವರದಿಯಾಗಿದೆ.
ಅಮೆರಿಕದ ಕರಾವಳಿ ಕಾವಲು ಪಡೆ ಈ ಬಗ್ಗೆ ಮಾಹಿತಿ ನೀಡಿದೆ. ಈ ಜಲಾಂತರ್ಗಾಮಿ ಒಂದು ಬಾರಿ 5 ಜನರನ್ನು ಹೊತ್ತೊಯ್ಯಬಹುದು ಎನ್ನಲಾಗಿದ್ದು ಟೈಟಾನಿಕ್ ಹಡಗು ದುರಂತದ ಅವಶೇಷಗಳನ್ನು ವೀಕ್ಷಿಸುವ ಪೂರ್ಣ ಡೈವ್ ಸುಮಾರು 8 ಗಂಟೆಗಳನ್ನು ತೆಗೆದುಕೊಳ್ಳುತ್ತದೆ ಎನ್ನಲಾಗಿದೆ.
ನಾಪತ್ತೆಯಾಗಿರುವ ಜಲಾಂತರ್ಗಾಮಿಯಲ್ಲಿ ಓಷನ್‌ಗೇಟ್ ಎಕ್ಸ್‌ಪೆಡಿಶನ್ಸ್ ಕಂಪನಿಗೆ ಸೇರಿದ್ದು, ಅದರಲ್ಲಿ ಎಷ್ಟು ಜನರಿದ್ದರು ಎಂಬುದು ಇನ್ನು ಕೂಡಾ ಸ್ಪಷ್ಟವಾಗಿಲ್ಲ. ಸಿಬ್ಬಂದಿ ಸೇರಿ ಅದರಲ್ಲಿದ್ದ ಎಲ್ಲಾ ಪ್ರವಾಸಿಗರನ್ನು ಸುರಕ್ಷಿತವಾಗಿ ಕರೆತರಲು ಎಲ್ಲಾ ರೀತಿಯಲ್ಲೂ ಪ್ರಯತ್ನಿಸಲಾಗುತ್ತಿದೆ ಎಂದು ಕಂಪನಿ ತಿಳಿಸಿದೆ. ಇದನ್ನೂ ಓದಿ: ಏರ್‌ಬಸ್ ಜೊತೆ ಬರೋಬ್ಬರಿ 500 ವಿಮಾನ ಖರೀದಿಗೆ ಡೀಲ್ – ವಿಶ್ವದಾಖಲೆ ಬರೆದ ಇಂಡಿಗೋ
ದೈತ್ಯ ಟೈಟಾನಿಕ್ ಹಡಗು 1912ರಲ್ಲಿ ತನ್ನ ಮೊದಲ ಪ್ರಯಾಣದಲ್ಲೇ ಮಂಜುಗಡ್ಡೆಗೆ ಡಿಕ್ಕಿ ಹೊಡೆದು ಅಟ್ಲಾಂಟಿಕ್ ಸಾಗರದಲ್ಲಿ ಮುಳುಗಿತು. ಈ ದುರಂತದಲ್ಲಿ 1,500ಕ್ಕೂ ಹೆಚ್ಚು ಜನರು ಸಾವನ್ನಪ್ಪಿದರು. ಈ ಹಡಗಿನ ಅವಶೇಷವನ್ನು 1985ರಲ್ಲಿ ಕಂಡುಹಿಡಿಯಲಾಯಿತು. ಅಟ್ಲಾಂಟಿಕ್‌ನ ಆಳದಲ್ಲಿರುವ ಈ ಅವಶೇಷವನ್ನು ಅಂದಿನಿಂದ ಇಂದಿನವರೆಗೂ ವ್ಯಾಪಕವಾಗಿ ಪರಿಶೋಧಿಸಲಾಗುತ್ತಿದೆ. ಇದನ್ನೂ ಓದಿ: ಶತಮಾನ ಪೂರೈಸಿದ ಗೀತಾ ಪ್ರೆಸ್‌ಗೆ ಗಾಂಧಿ ಶಾಂತಿ ಪ್ರಶಸ್ತಿ – ಸಾವರ್ಕರ್, ಗೋಡ್ಸೆಗೆ ನೀಡಿದಂತೆ ಎಂದು ಕಾಂಗ್ರೆಸ್ ಕಿಡಿ
ಟೈಟಾನಿಕ್ (Titanic) ಸಿನಿಮಾದ ಮೂಲಕ ರಾತ್ರೋರಾತ್ರಿ ಫೇಮಸ್ ಆದ ನಟಿ ಕೇಟ್ ವಿನ್ಸ್ ಲೆಟ್ (Kate Winslet). ಈ ಸಿನಿಮಾದಲ್ಲಿ ನಾಯಕಿಯಾಗುವ ಮೂಲಕ ಜಗತ್ತಿನ ಅತ್ಯಂತ ಪ್ರಭಾವಿ ನಟಿಯರ ಪಟ್ಟಿಯಲ್ಲೂ ಇವರು ಸೇರ್ಪಡೆಯಾದರು. ಶೂಟಿಂಗ್ ಸೆಟ್ ನಲ್ಲಿ ನಡೆದ ಅವಘಡದಿಂದಾಗಿ ಅವರು ಆಸ್ಪತ್ರೆ (Hospital) ಸೇರಿಕೊಂಡಿದ್ದಾರೆ. ಇದೀಗ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಚಕಿತ್ಸೆಗೂ ಅವರು ಸ್ಪಂದಿಸಿದ್ದಾರೆ ಎಂದು ವರದಿ ಆಗಿದೆ.
ಸದ್ಯ ಕೇಟ್ ಹೊಸ ಸಿನಿಮಾದ ಶೂಟಿಂಗ್(Shooting) ನಲ್ಲಿ ತೊಡಗಿದ್ದರು. ಲೀ ಹೆಸರಿನಲ್ಲಿ ತಯಾರಾಗುತ್ತಿರುವ ಸಿನಿಮಾದಲ್ಲಿ ಅವರು ಸತತ ನಾಲ್ಕೈದು ವರ್ಷಗಳಿಂದಲೂ ನಟಿಸುತ್ತಿದ್ದಾರೆ. ಈ ಸಿನಿಮಾಗಾಗಿ ಬೃಹತ್ ಸೆಟ್ ಗಳನ್ನು ಹಾಕಿದ್ದು, ಈ ಸೆಟ್ ನಿಂದ ಆಯಾ ತಪ್ಪಿ ಕೆಳಗೆ ಬಿದ್ದಿದ್ದಾರೆ. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ. ಎತ್ತರದ ಪ್ರದೇಶದಿಂದ ಕೆಳಗೆ ಬಿದ್ದಿದ್ದರಿಂದ ಬಲವಾದ ಪೆಟ್ಟು ಬಿದ್ದಿವೆ ಎಂದು ಹೇಳಲಾಗುತ್ತಿದೆ. ಇದನ್ನೂ ಓದಿ:`ಗಿಚ್ಚಿ ಗಿಲಿಗಿಲಿ’ ವಿನ್ನರ್ ಆದ ವನ್ಷಿಕಾ, ರನ್ನರ್ ಅಪ್ ಆಗಿ ನಿವೇದಿತಾ ಗೌಡ
ಸೆಟ್ ಮೇಲಿಂದ ಕೇಟ್ ಬೀಳುತ್ತಿದ್ದಂತೆ ಅವರನ್ನು ಆಸ್ಪತ್ರೆಗೆ ದಾಖಲಿಸಿ, ಶೂಟಿಂಗ್ ನಿಲ್ಲಿಸಲಾಗಿದೆ. ಅವರು ಹೇಗೆ ಬಿದ್ದರು, ತಪ್ಪಾಗಿದ್ದು ಹೇಗೆ ಅನ್ನುವ ಕುರಿತು ಚರ್ಚೆ ಶುರುವಾಗಿದೆ. ಕೇಟ್ ಪ್ರಾಣಾಪಾಯದಿಂದ ಪಾರಾಗಿದ್ದು, ಕೆಲವೇ ದಿನಗಳಲ್ಲಿ ಮತ್ತೆ ಅವರು ಶೂಟಿಂಗ್ ನಲ್ಲಿ ಪಾಲ್ಗೊಳ್ಳಲಿದ್ದಾರಂತೆ. ಲೀ ಹೆಸರಿನಲ್ಲಿ ಮೂಡಿ ಬರುತ್ತಿರುವ ಈ ಸಿನಿಮಾ ಅಮೆರಿಕಾದ ಖ್ಯಾತ ಮಹಿಳಾ ಫೋಟೋ ಜರ್ನಲಿಸ್ಟ್ ಎಲಿಜಬೆತ್ ಲೀ (Lee) ಮಿಲ್ಲರ್ ಬಯೋಪಿಕ್ ಆಗಿದ್ದು, ಕೇಟ್ ಫೋಟೋಗ್ರಾಫರ್ ಆಗಿ ಕಾಣಿಸಿಕೊಂಡಿದ್ದಾರೆ.
1997ರಲ್ಲಿ ತೆರೆಕಂಡ ಟೈಟಾನಿಕ್ ಸಿನಿಮಾ ಮೂಲಕ ಜಗತ್ತಿನ ಸಿನಿಮಾ ಪ್ರೇಮಿಗಳಿಗೆ ಪರಿಚಯವಾದ ಕೇಟ್, ಆನಂತರ ಸಾಕಷ್ಟು ಚಿತ್ರಗಳಲ್ಲಿ ನಟಿಸಿದ್ದಾರೆ. ಇಂಗ್ಲೆಂಡ್ ನಲ್ಲಿ ಜನಿಸಿರುವ ಇವರು, ಕಷ್ಟದ ಜೀವನದಲ್ಲೇ ನಡೆದು ಬಂದವರ. ಇವರ ತಂದೆ ಕೂಡ ಸಿನಿಮಾದಲ್ಲಿ ಚಿಕ್ಕ ಪುಟ್ಟ ಪಾತ್ರಗಳನ್ನು ಮಾಡುತ್ತಾ ಬಂದವರು. ಟೈಟಾನಿಕ್ ಸಿನಿಮಾ ಕೇಟ್ ಅದೃಷ್ಟವನ್ನೇ ಬದಲಿಸಿ ಬಿಟ್ಟಿತು.
Live Tv
[brid partner=56869869 player=32851 video=960834 autoplay=true]
ಕಾರವಾರ: ದುರಂತಕ್ಕೀಡಾಗಿ ಇಬ್ಬರನ್ನು ಬಲಿ ತೆಗೆದುಕೊಂಡು ಸಮುದ್ರದಿಂದ ಮೇಲೆತ್ತಲಾಗದೇ ಅರ್ಧ ಭಾಗವನ್ನು ಬಿಟ್ಟು ಹೋಗಿದ್ದ ಹಡಗು ಈಗ ಕಾರವಾರದ ಲೈಟ್ ಹೌಸ್ ನಲ್ಲಿ ಪತ್ತೆಯಾಗಿದೆ.
ಸಮುದ್ರದಲ್ಲಿ ಎದ್ದ ಬಿರುಗಾಳಿಗೆ 2003ರಲ್ಲಿ ಓಷನ್ ಇರಾನಿ ಹೆಸರಿನ ಕಚ್ಚಾ ತೈಲ ಹಡಗು ಕಾರವಾರದ ಬಂದರಿಗೆ ಬರುವ ವೇಳೆ ಇಲ್ಲಿನ ಸಮುದ್ರದ ಮಧ್ಯದಲ್ಲಿರುವ ಲೈಟ್ ಹೌಸ್ ದ್ವೀಪದ ಕಲ್ಲುಬಂಡೆಗೆ ಅಪ್ಪಳಿಸಿ ಸಮುದ್ರದಲ್ಲಿ ಮುಳುಗಿತ್ತು.
ಈ ವೇಳೆ ಹದಿನೈದು ಜನರನ್ನು ರಕ್ಷಿಸಿದ್ದು ಇಬ್ಬರು ಪ್ರಾಣ ಕಳೆದುಕೊಂಡಿದ್ದರು. ನಂತರ ಹಡಗಿನ ಅರ್ಧ ಭಾಗವನ್ನು ತುಂಡರಿಸಿ ಉಳಿದ ಭಾಗವನ್ನು ಮೇಲೆತ್ತಲಾಗದೆ ಅಲ್ಲಿಯೇ ಬಿಡಲಾಗಿತ್ತು. ಈಗ ಈ ಹಡಗಿನ ಅವಶೇಷಗಳಲ್ಲಿ ಬಲು ಅಪರೂಪದ ಹವಳದ ದಿಬ್ಬಗಳು ಬೆಳೆದಿದ್ದು ಕೋಟಿ ಕೋಟಿಗೆ ಬೆಲೆ ಬಾಳುತ್ತಿದೆ. ಹೀಗಾಗಿ ಇದೀಗ ಉತ್ತಮ ಪ್ರವಾಸಿ ತಾಣವಾಗಿ ಮಾರ್ಪಟ್ಟಿದೆ.
ಇಂದು ಲೈಟ್ ಹೌಸ್ ಬಳಿ ನೇತ್ರಾಣಿ ಅಡ್ವೆಂಚರ್ ನ ಸಿಬ್ಬಂದಿ ಸ್ಕೂಬಾ ಡೈ ಮಾಡಿದಾಗ ಈ ಹಡಗು ಹಾಗೂ ಹವಳದ ದಿಬ್ಬ ಪತ್ತೆಯಾಗಿದ್ದು ಜನರನ್ನು ಸೆಳೆಯುತ್ತಿದೆ.