Tag: Tita

  • ಕೇವಲ 5 ನಿಮಿಷ- ಭಾರೀ ಅನಾಹುತದಿಂದ ಪಾರಾದ್ರು ಡಾ. ಜಿ ಪರಮೇಶ್ವರ್!

    ಕೇವಲ 5 ನಿಮಿಷ- ಭಾರೀ ಅನಾಹುತದಿಂದ ಪಾರಾದ್ರು ಡಾ. ಜಿ ಪರಮೇಶ್ವರ್!

    ತುಮಕೂರು: ಗೊರವನಹಳ್ಳಿಯಿಂದ ತೀತಾಗೆ ಸಂಪರ್ಕ ಕಲ್ಪಿಸುವ ಸೇತುವೆ ಮಳೆಯಿಂದಾಗಿ ಕುಸಿದು ಬಿದ್ದಿದ್ದು, ಮಾಜಿ ಡಿಸಿಎಂ ಡಾ.ಜಿ ಪರಮೇಶ್ವರ್ ಸ್ವಲ್ಪದರಲ್ಲೇ ಪಾರಾಗಿದ್ದಾರೆ. ಪರಮೇಶ್ವರ್ ಭೇಟಿ ಬಳಿಕ ಕೇವಲ 5 ನಿಮಿಷಕ್ಕೆ ತೀತಾ ಸೇತುವೆ ಕುಸಿತವಾಗಿದೆ.

    ಕೊರಟಗೆರೆ ತಾಲೂಕಿನ ತೀತಾ ಸೇತುವೆ ಗುರುವಾರ ರಾತ್ರಿಯ ಮಳೆಗೆ ಮುಂಜಾನೆ ಅರ್ಧ ಕುಸಿದಿತ್ತು. ಕುಸಿತದ ಹಿನ್ನೆಲೆ ಸ್ಥಳ ವೀಕ್ಷಿಸಲು ಪರಮೆಶ್ವರ್ ಇಂದು ಸಂಜೆ ಆಗಮಿಸಿದ್ದರು. ಪರಮೇಶ್ವರ್ ಅವರು ಸೇತುವೆ ಮೇಲೆಯೇ ನಿಂತು ಕುಸಿತವಾಗಿದ್ದ ಭಾಗವನ್ನು ವೀಕ್ಷಿಸಿದ್ದರು. ಇದನ್ನೂ ಓದಿ: ಅಪರಾಧಿಗಳಿಗೆ ಸಿಂಹಸ್ವಪ್ನವಾಗಿದ್ದ ಲೇಡಿ ಸಿಂಗಂ ಇನ್ನಿಲ್ಲ!

    ಸ್ಥಳ ವೀಕ್ಷಣೆ ಬಳಿಕ ಪರಮೇಶ್ವರ್ ಅಲ್ಲಿಂದ ಮುಂದೆ ಹೋಗಿದ್ದರು. ಅವರು ತೆರಳಿದ ಕೇವಲ 5 ನಿಮಿಷಗಳ ಬಳಿಕ ಸೇತುವೆಯ ಇನ್ನೊಂದು ಭಾಗವೂ ಕುಸಿತವಾಗಿದೆ. ಪರಮೇಶ್ವರ್ ನಿಂತಿದ್ದ ಜಾಗವೂ ಕುಸಿತವಾಗಿದ್ದು, ಅವರು ಸ್ವಲ್ಪದರಲ್ಲೇ ಅಪಾಯದಿಂದ ಪಾರಾಗಿದ್ದಾರೆ.

    ಸೇತುವೆ ಕುಸಿತದ ಹಿನ್ನೆಲೆ ಗೊರವನಹಳ್ಳಿಯಿಂದ ತೀತಾಗೆ ಸಂಪರ್ಕ ಕಲ್ಪಿಸುವ ರಸ್ತೆ ಬಂದ್ ಆಗಿದೆ. ಸದ್ಯ ಪರ್ಯಾಯ ಮಾರ್ಗದ ಮೂಲಕ ವಾಹನಗಳು ಸಂಚರಿಸುತ್ತಿವೆ. ಇದನ್ನೂ ಓದಿ: BMTCಗೆ ನಷ್ಟದ ಮೇಲೆ ನಷ್ಟ- ಬೆಂಗ್ಳೂರಿನಲ್ಲಿ ವೋಲ್ವೊಗಿಂತ ಎಲೆಕ್ಟ್ರಿಕ್‌ ಬಸ್ಸುಗಳಿಗೇ ಡಿಮ್ಯಾಂಡ್

    Live Tv
    [brid partner=56869869 player=32851 video=960834 autoplay=true]