Tag: Tiruvananthapuram

  • ಕೇರಳ| ಲವ್ವರ್, ಕುಟುಂಬದ ಐವರನ್ನು ಹತ್ಯೆ ಮಾಡಿದ ವ್ಯಕ್ತಿ – ತಾಯಿ ಸ್ಥಿತಿ ಗಂಭೀರ

    ಕೇರಳ| ಲವ್ವರ್, ಕುಟುಂಬದ ಐವರನ್ನು ಹತ್ಯೆ ಮಾಡಿದ ವ್ಯಕ್ತಿ – ತಾಯಿ ಸ್ಥಿತಿ ಗಂಭೀರ

    – ಕೊಲೆ ಮಾಡಿ ಪೊಲೀಸರಿಗೆ ಶರಣಾದ ಆರೋಪಿ

    ತಿರುವನಂತಪುರಂ: ಕೇರಳದಲ್ಲಿ (Kerala) ಯುವಕನೊಬ್ಬ ಪ್ರೇಯಸಿ (Lover) ಹಾಗೂ ತನ್ನ ಕುಟುಂಬದ ಐವರನ್ನು ಹತ್ಯೆ ಮಾಡಿರುವ ಘಟನೆ ನಡೆದಿದೆ.

    23 ವರ್ಷದ ಯುವಕ ತನ್ನ 13 ವರ್ಷದ ಸಹೋದರ, 80 ವರ್ಷದ ಅಜ್ಜಿ ಮತ್ತು ಪ್ರೇಯಸಿ ಸೇರಿ 6 ಜನರನ್ನು ಕೊಂದು ಪೊಲೀಸರಿಗೆ ಶರಣಾಗಿರುವ ಘಟನೆ ತಿರುವನಂತಪುರಂನ (Thiruvananthapuram) ವೆಂಜರಮೂಡುವಿನಲ್ಲಿ ನಡೆದಿದೆ. ಇದನ್ನೂ ಓದಿ: Maha Kumbh Mela: ಮಹಾಶಿವರಾತ್ರಿಯಂದು ಕಡೆಯ ಅಮೃತಸ್ನಾನಕ್ಕೆ ಜಿಲ್ಲಾಡಳಿತ ಸಜ್ಜು

    ಆರೋಪಿ ಅಫಾನ್ ವಿಷ ಸೇವಿಸಿ ಬಂದು ಠಾಣೆಯಲ್ಲಿ ತಪ್ಪೊಪ್ಪಿಕೊಂಡಿದ್ದು, ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಸಿಎಂ ವಿರುದ್ಧದ ಮುಡಾ ಹಗರಣ – ಆಗಿನ ಮೈಸೂರು ಡಿಸಿ, ಹಾಲಿ ಸಂಸದ ಕುಮಾರ್ ನಾಯಕ್ ಲೋಪ

    ಅಫಾನ್ ತನ್ನ ಮನೆಯವರನ್ನು ಕೊಂದು ಪೊಲೀಸರ ಮುಂದೆ ಶರಣಾಗಿದ್ದಾನೆ. ಹಲ್ಲೆಗೊಳಗಾದ ಐವರು ಸಾವನ್ನಪ್ಪಿದ್ದಾರೆ. ಹಲ್ಲೆಯಿಂದ ಗಂಭೀರವಾಗಿ ಗಾಯಗೊಂಡಿರುವ ಅಫಾನ್ ತಾಯಿಯನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಬೀದರ್‌ನಲ್ಲಿ ಭೀಕರ ರಸ್ತೆ ಅಪಘಾತ – ಸ್ಥಳದಲ್ಲೇ ವೈದ್ಯ ಸಾವು

    ವೆಂಜರಮೂಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಶಬರಿಮಲೆಗೆ ಹೋಗ್ತಿದ್ದ ಮಹಿಳೆ ಮೇಲೆ ಪೆಪ್ಪರ್ ಸ್ಪ್ರೇ

    ಶಬರಿಮಲೆಗೆ ಹೋಗ್ತಿದ್ದ ಮಹಿಳೆ ಮೇಲೆ ಪೆಪ್ಪರ್ ಸ್ಪ್ರೇ

    ತಿರುವನಂತಪುರಂ: ಶಬರಿಮಲೆಗೆ ಹೋಗುತ್ತಿದ್ದ ಮಹಿಳೆಯರ ಮೇಲೆ ವ್ಯಕ್ತಿಯೊಬ್ಬ ಪೆಪ್ಪರ್ ಸ್ಪ್ರೇ ಸಿಂಪಡಿಸಿದ ಘಟನೆ ಕೇರಳದ ಕೊಚ್ಚಿ ಪೊಲೀಸ್ ಆಯುಕ್ತರ ಕಚೇರಿ ಆವರಣದಲ್ಲಿ ನಡೆದಿದೆ. ಇದೀಗ ಮಹಿಳೆಯರ ಮೇಲೆ ಪೆಪ್ಪರ್ ಸ್ಪ್ರೇ ಮಾಡಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

    ವಿಡಿಯೋದಲ್ಲಿ ಹೋರಾಟಗಾರ್ತಿ ಬಿಂದು ಅಮ್ಮಿಣಿ ತಮ್ಮ ಮುಖವನ್ನು ಮುಚ್ಚಿಕೊಂಡು ಹಲ್ಲೆ ಮಾಡಿದ ವ್ಯಕ್ತಿಯಿಂದ ದೂರ ಓಡಿ ಹೋಗುತ್ತಿದ್ದಾರೆ. ಹಲ್ಲೆಯಿಂದ ಅಮ್ಮಿಣಿಗೆ ಗಾಯವಾಗುತ್ತಿದ್ದಂತೆ ವ್ಯಕ್ತಿ ಕಾಂಪೌಂಡ್ ಹಾರಿ ಅಲ್ಲಿಂದ ಪರಾರಿಯಾಗಿದ್ದಾನೆ. ಹಲ್ಲೆಯಿಂದ ಗಾಯಗೊಂಡ ಅಮ್ಮಿಣಿಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು. ಹೋರಾಟಗಾರ್ತಿ ತೃಪ್ತಿ ದೇಸಾಯಿ ಸೇರಿದಂತೆ ಐವರು ಮಹಿಳೆಯರು ಇಂದು ಶಬರಿಮಲೆಗೆ ಪ್ರವೇಶ ಮಾಡಲು ನಿರ್ಧರಿಸಿದ್ದರು.

    ಇಂದು ಬೆಳಗ್ಗೆ ತೃಪ್ತಿ ದೇಸಾಯಿ ಕೊಚ್ಚಿ ವಿಮಾನ ನಿಲ್ದಾಣಕ್ಕೆ ಬಂದಿಳಿದರು. ಈ ವೇಳೆ ಅವರು, “ಇಂದು ಸಂವಿಧಾನದ ದಿನವಾಗಿದ್ದು, ಇಂದೇ ನಾವು ಶಬರಿಮಲೆ ಪ್ರವೇಶಿಸುತ್ತೇವೆ. ನಾವು ದೇವಾಲಯ ಪ್ರವೇಶಿಸುವುದನ್ನು ರಾಜ್ಯ ಸರ್ಕಾರದಿಂದ ಅಥವಾ ಪೊಲೀಸರಿಂದ ತಡೆಯಲು ಸಾಧ್ಯವಿಲ್ಲ. ನಮಗೆ ಭದ್ರತೆ ಸಿಕ್ಕರೂ ಸಿಗದಿದ್ದರೂ ನಾವು ದೇವಸ್ಥಾನಕ್ಕೆ ಹೋಗುತ್ತೇವೆ. ದೇವಸ್ಥಾನಕ್ಕೆ ಹೋಗಿ ಪ್ರಾರ್ಥನೆ ಸಲ್ಲಿಸಿದ ಬಳಿಕವೇ ನಾನು ಕೇರಳವನ್ನು ಬಿಟ್ಟು ಹೋಗುತ್ತೇನೆ” ಎಂದು ಪ್ರತಿಕ್ರಿಯಿಸಿದರು.

    ನನ್ನ ಚಲನವಲನದ ಬಗ್ಗೆ ಸೂಕ್ಷ್ಮವಾಗಿ ಗಮನಿಸಲಾಗುತ್ತಿದೆ. ನನ್ನ ಮೇಲೆ ಹಲ್ಲೆ ನಡೆಸುವವರು ನನ್ನ ಕಾರಿನ ನಂಬರ್ ಗಮನಿಸಿದ್ದಾರೆ ಎಂದು ತೃಪ್ತಿ ಆರೋಪಿಸಿದ್ದಾರೆ. ಪುಣೆ ಮೂಲದ ಹೋರಾಟಗಾರ್ತಿ ತೃಪ್ತಿ ಕಳೆದ ವರ್ಷ ಕೂಡ ಶಬರಿಮಲೆ ಪ್ರವೇಶಿಸಲು ಯತ್ನಿಸಿದ್ದರು. ಆದರೆ ಆಗ ಹೋರಾಟಗಾರರು ಅವರನ್ನು ತಡೆದಿದ್ದರು.

  • ಮೈದಾನದ ಸಿಬ್ಬಂದಿಗೆ ಒಂದೂವರೆ ಲಕ್ಷ ರೂ. ದಾನ ಮಾಡಿದ ಸಂಜು

    ಮೈದಾನದ ಸಿಬ್ಬಂದಿಗೆ ಒಂದೂವರೆ ಲಕ್ಷ ರೂ. ದಾನ ಮಾಡಿದ ಸಂಜು

    ತಿರುವಂನಂತಪುರಂ: ಭಾರತದ ಕ್ರಿಕೆಟ್ ತಂಡದ ಆಟಗಾರ ಸಂಜು ಸ್ಯಾಮ್‍ಸನ್ ಅವರು ತಮ್ಮ ಎರಡು ಪಂದ್ಯದ ಫೀಸ್ ಅಂದರೆ ಒಂದೂವರೆ ಲಕ್ಷ ರೂ. ಮೈದಾನದ ಸಿಬ್ಬಂದಿಗೆ ದಾನ ಮಾಡಿದ್ದಾರೆ.

    ಶುಕ್ರವಾರ ತಿರುವನಂತಪುರಂನ ಗ್ರೀನ್‍ಫೀಲ್ಡ್ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ದಕ್ಷಿಣ ಆಫ್ರಿಕಾ ಎ ವಿರುದ್ಧದ ಐದನೇ ಏಕದಿನ ಪಂದ್ಯದಲ್ಲಿ ವಿಕೆಟ್‍ಕೀಪರ್, ಬ್ಯಾಟ್ಸ್ ಮೆನ್ ಸಂಜು ಸ್ಯಾಮ್‍ಸನ್ ಭಾರತ ಎ ಪರ ಅದ್ಭುತವಾಗಿ ಆಡಿದ್ದಾರೆ. ಸಂಜು 48 ಎಸೆತಗಳಲ್ಲಿ 91 ರನ್ ಗಳಿಸುವ ಮೂಲಕ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಭಾರತ ಎ ತಂಡ 4-1 ಸರಣಿಯಿಂದ ಗೆದ್ದಿದೆ.

    ಸಂಜು ಸ್ಯಾಮ್‍ಸನ್ ಅವರ ಅತ್ಯುತ್ತಮ ಆಟವಾಗಿದ್ದಕ್ಕೆ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಆಯ್ಕೆ ಆಗಿದ್ದಾರೆ. ಇದಾದ ಬಳಿಕ ಅವರು ತಮ್ಮ ಎರಡೂ ಪಂದ್ಯದ ಫೀಸ್ ಅಂದರೆ ಒಂದೂವರೆ ಲಕ್ಷ ರೂ. ವನ್ನು ತಿರುವನಂತಪುರಂ ಕ್ರೀಡಾಂಗಣದ ಸಿಬ್ಬಂದಿಗೆ ದಾನ ಮಾಡಿದ್ದಾರೆ. ಸಂಜು ಅವರು ಮೈದಾನದ ಸಿಬ್ಬಂದಿಯ ಕೆಲಸದಿಂದ ಪ್ರಭಾವಿತರಾಗಿದ್ದಾರೆ. ಮಳೆ ಅಡ್ಡಿಪಡಿಸಿದ ಪಂದ್ಯವನ್ನು ಪೂರ್ಣಗೊಳಿಸಲು ಅವರು ಶ್ರಮಿಸಿದ್ದರು.

    ಪಂದ್ಯ ಮುಗಿದ ನಂತರ ಮಾತನಾಡಿದ ಸಂಜು ಸ್ಯಾಮ್‍ಸನ್, ಈ ಪಂದ್ಯವನ್ನು ಪೂರ್ಣಗೊಳಿಸಿದ ಶ್ರೇಯಸ್ಸು ಸಂಪೂರ್ಣವಾಗಿ ಕ್ರೀಡಾಂಗಣದ ಸಿಬ್ಬಂದಿಗೆ ಸಲ್ಲುತ್ತದೆ. ಏಕೆಂದರೆ ಅವರಿಂದಾಗಿ ನಾವು ಈ ಪಂದ್ಯವನ್ನು ಆಡಲು ಸಾಧ್ಯವಾಯಿತು. ಕ್ರೀಡಾಂಗಣ ಪಂದ್ಯ ಆಡಲು ಅಂಪೈರ್ ಅನುಮತಿ ನೀಡುತ್ತಿರಲಿಲ್ಲ. ಸಿಬ್ಬಂದಿಯ ಕಠಿಣ ಪರಿಶ್ರಮದಿಂದಾಗಿ ಈ ಪಂದ್ಯ ಆಡಲು ಸಾಧ್ಯವಾಯಿತು ಎಂದು ಹೇಳಿದ್ದಾರೆ.

  • 2018ರಲ್ಲಿ ಪರಿಹಾರ ಕೇಂದ್ರದಲ್ಲಿ ಭೇಟಿ – 2019ರ ಪ್ರವಾಹದ ನಂತ್ರ ಮದುವೆ

    2018ರಲ್ಲಿ ಪರಿಹಾರ ಕೇಂದ್ರದಲ್ಲಿ ಭೇಟಿ – 2019ರ ಪ್ರವಾಹದ ನಂತ್ರ ಮದುವೆ

    ತಿರುವನಂತಪುರಂ: 2018ರಲ್ಲಿ ಕೇರಳದಲ್ಲಿ ಸಂಭವಿಸಿದ ಪ್ರವಾಹದಲ್ಲಿ ಹಲವರು ತಮ್ಮ ಮನೆ ಕಳೆದುಕೊಂಡು ಪರಿಹಾರ ಕೇಂದ್ರದಲ್ಲಿ ಆಶ್ರಯ ಪಡೆದಿದ್ದರು. ಈ ವೇಳೆ ಯುವಕ ಹಾಗೂ ಯುವತಿ ನಡುವೆ ಪ್ರೀತಿಯಾಗಿದ್ದು, ಈ ವರ್ಷದಲ್ಲಿ ಮದುವೆ ಆಗಿದ್ದಾರೆ.

    2018ರಲ್ಲಿ ಸಂಭವಿಸಿದ ಪ್ರವಾಹದಲ್ಲಿ ಪಾಲಕ್ಕಾಡ್ ನಿವಾಸಿಯಾಗಿರುವ ಮಹಿಳಾ ಸಿವಿಲ್ ಪೊಲೀಸ್ ಅಧಿಕಾರಿ ಸೂರ್ಯ ಅವರು ಅಲುವಾದಲ್ಲಿನ ಪ್ರವಾಹ ಪರಿಹಾರ ಕೇಂದ್ರದಲ್ಲಿ ಕರ್ತವ್ಯದಲ್ಲಿದ್ದರು. ಈ ವೇಳೆ ಅವರು ಅಲುವಾ ನಿವಾಸಿ ವಿನೀತ್‍ರನ್ನು ಭೇಟಿ ಆಗಿದ್ದರು. ವಿನೀತ್ ಪ್ರವಾಹ ಪರಿಹಾರ ಚಟುವಟಿಕೆಯಲ್ಲಿ ಸಕ್ರಿಯರಾಗಿದ್ದರು.

    ಈ ವೇಳೆ ಸೂರ್ಯ ಹಾಗೂ ವಿನೀತ್ ನಡುವೆ ಸ್ನೇಹ ಆಗಿದೆ. ಬಳಿಕ ಸ್ನೇಹ ಪ್ರೀತಿಗೆ ತಿರುಗಿ 2019ರ ಪ್ರವಾಹದ ನಂತರ ಇಬ್ಬರು ಮದುವೆಯಾಗಿದ್ದಾರೆ. ಸೂರ್ಯ ಹಾಗೂ ವಿನೀತ್ ಭಾನುವಾರ ಅಲುವಾ ಅಶೋಕಾಪುರಂ ದುರ್ಗಾ ಭಗವತಿ ದೇವಸ್ಥಾನದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

    ಕಾರ್ಮೆಲ್ ಸೆಂಟ್ ಫ್ರಾನ್ಸಿಸ್ ಡಿ ಅಸ್ಸಿಸಿ ಶಾಲೆಯಲ್ಲಿ ಸ್ಥಾಪಿಸಲಾದ ಅಲುವಾ ಪರಿಹಾರ ಶಿಬಿರದಲ್ಲಿ ಸೂರ್ಯ ಅವರು ಕರ್ತವ್ಯ ನಿರ್ವಹಿಸಿದ್ದರು. ಅಶೋಕಪುರಂನಲ್ಲಿದ್ದ ತನ್ನ ಮನೆ ಪ್ರವಾಹದಲ್ಲಿ ಮುಳುಗಿದ್ದರಿಂದ ವಿನೀತ್ ಪರಿಹಾರ ಕೇಂದ್ರಕ್ಕೆ ತಲುಪಿದ್ದರು. ಪರಿಹಾರ ಕೇಂದ್ರದಲ್ಲಿ ವಿನೀತ್ ತನ್ನ ತಂದೆ-ತಾಯಿ ಜೊತೆ ವಾಸಿಸುತ್ತಿದ್ದರು. ಅಲ್ಲದೆ ಪರಿಹಾರ ಕೇಂದ್ರಕ್ಕೆ ಬರುತ್ತಿದ್ದ ಜನರ ಸಹಾಯಕ್ಕೆ ವಿನೀತ್ ಮುಂದಾಗುತ್ತಿದ್ದರು.

  • ಗೆಳತಿಯನ್ನು ಮದ್ವೆಯಾಗಲು ಲಿಂಗ ಪರಿವರ್ತನೆ ಮಾಡ್ಕೊಂಡು ಬಂದ ಯುವತಿಗೆ ಕಾದಿತ್ತು ಶಾಕ್

    ಗೆಳತಿಯನ್ನು ಮದ್ವೆಯಾಗಲು ಲಿಂಗ ಪರಿವರ್ತನೆ ಮಾಡ್ಕೊಂಡು ಬಂದ ಯುವತಿಗೆ ಕಾದಿತ್ತು ಶಾಕ್

    ತಿರುವನಂತಪುರಂ: ಯುವತಿಯೊಬ್ಬಳು ತನ್ನ ಗೆಳತಿಯನ್ನು ಮದುವೆಯಾಗಲು ಲಿಂಗ ಪರಿವರ್ತನೆ ಮಾಡಿಕೊಂಡು ಯುವಕನಾಗಿ ಬದಲಾಗಿದ್ದಾಳೆ. ಆದರೆ ಯುವತಿ ಲಿಂಗ ಪರಿವರ್ತನೆ ಮಾಡಿಕೊಂಡ ಬಳಿಕ ಗೆಳತಿ ಕೈಕೊಟ್ಟ ಘಟನೆಯೊಂದು ಕೇರಳದಲ್ಲಿ ನಡೆದಿದೆ.

    ಕೇರಳದ ಯುವತಿ ಅರ್ಚನಾ(23) ತನ್ನ ಗೆಳತಿಯನ್ನು ಮದುವೆಯಾಗಲು ಲಿಂಗ ಪರಿವರ್ತನೆ ಮಾಡಿಕೊಂಡು ದೀಪು ಆರ್ ದರ್ಶನ್ ಎಂದು ಯುವಕನಾಗಿ ಬದಲಾಗಿದ್ದಾಳೆ. ಆದರೆ ಈಗ ಗೆಳತಿ ದರ್ಶನ್‍ನನ್ನು ಮದುವೆಯಾಗಲು ನಿರಾಕರಿಸಿದ್ದು, ಈಗ ಹೈಕೋರ್ಟ್ ನಲ್ಲಿ ಹೇಬಿಯಸ್ ಕಾರ್ಪಸ್ ಅರ್ಜಿ ದಾಖಲಾಗಿದೆ.

    ಏನಿದು ಪ್ರಕರಣ?
    ಅರ್ಚನಾ ಏರ್ ಪೋರ್ಟ್ ಮ್ಯಾನೇಜ್‍ಮೆಂಟ್‍ನಲ್ಲಿ ಡಿಪ್ಲೊಮಾ ಮಾಡಿದ್ದು, ಕೇರಳದ ಪ್ರೈವೆಟ್ ಎಲೆಕ್ಟ್ರಾನಿಕ್ಸ್ ಕಂಪೆನಿಯಲ್ಲಿ ಸೆಲ್ಸ್ ಡಿವಿಶನ್‍ನಲ್ಲಿ ಕೆಲಸ ಮಾಡುತ್ತಿದ್ದಳು. ಈ ವೇಳೆ ತನ್ನ ಗೆಳತಿ ಅನಾಗಾ(ಹೆಸರು ಬದಲಾಯಿಸಲಾಗಿದೆ) ಜೊತೆ ಸ್ನೇಹವಾಗಿದೆ.

    ಅನಾಗಾ ಜೊತೆ ಸ್ನೇಹ ಮಾಡಿದ ಅರ್ಚನಾ ಆಕೆಯ ಜೊತೆ ಒಟ್ಟಿಗೆ ಸಮಯ ಕಳೆಯುತ್ತಿದ್ದಳು. ಅಲ್ಲದೇ ಇಬ್ಬರು ಜೊತೆಯಲ್ಲೇ ಇರುತ್ತಿದ್ದರು. ಈ ವೇಳೆ ಅನಾಗಾ ನೀನು ಹುಡುಗ ಆಗಿದ್ದರೆ ನಾನು ನಿನ್ನನ್ನೇ ಮದುವೆಯಾಗುತ್ತಿದ್ದೆ. ಆಗ ನಾವು ಜೀವನದಲ್ಲಿ ಒಟ್ಟಿಗೆ ಇರಬಹುದು ಎಂದು ಹೇಳಿದ್ದಾಳೆ. ಅನಾಗಾಳ ಈ ಮಾತು ಕೇಳಿ ಅರ್ಚನಾ ಲಿಂಗ ಪರಿವರ್ತನೆ ಮಾಡಿಸಿಕೊಳ್ಳಲು ನಿರ್ಧರಿಸಿದ್ದಾಳೆ.

    ಅರ್ಚನಾ ತನ್ನ ಅಂಕಲ್ ಬಳಿ ಈ ವಿಷಯ ಚರ್ಚೆ ಮಾಡಿದ್ದಾಳೆ. ಇದೇ ವೇಳೆ ಅನಾಗಾಗೆ ಮದುವೆ ಪ್ರಸ್ತಾಪಗಳು ಬರುತ್ತಿತ್ತು. ಅರ್ಚನಾ ಲಿಂಗ ಪರಿವರ್ತನೆ ಮಾಡಿಕೊಳ್ಳುವುದರ ಬಗ್ಗೆ ಹೆಚ್ಚು ಆಸಕ್ತಿ ತೋರಿಸಿದ್ದಳು. ಈ ವರ್ಷದ ಅಕ್ಟೋಬರ್ 25ರಂದು ಅರ್ಚನಾ ಚೆನ್ನೈನ ಆಸ್ಪತ್ರೆಯೊಂದರಲ್ಲಿ ಲಿಂಗ ಪರಿವರ್ತನೆ ಶಸ್ತ್ರಚಿಕಿತ್ಸೆ ಮಾಡಿ ತನ್ನ ಹೆಸರನ್ನು ದೀಪು ಆರ್ ದರ್ಶನ್ ಎಂಬುದಾಗಿ ಬದಲಾಯಿಸಿದ್ದಾಳೆ.

    ಲಿಂಗ ಪರಿವರ್ತನೆ ಶಸ್ತ್ರಚಿಕಿತ್ಸೆ ಯಶಸ್ವಿಯಾದ ನಂತರ ದರ್ಶನ್ ತನ್ನ ಗೆಳತಿ ಅನಾಗಾಳನ್ನು ಭೇಟಿ ಮಾಡಲು ಹೋಗಿದ್ದಾನೆ. ಆದರೆ ಅನಾಗಾ ಮಾತ್ರ ಅರ್ಚನಾ ಕರೆಗೆ ಹಾಗೂ ಮೆಸೇಜ್‍ಗೆ ರಿಪ್ಲೈ ಮಾಡುತ್ತಿರಲಿಲ್ಲ. ಹಾಗಾಗಿ ದರ್ಶನ್ ನವೆಂಬರ್ 6 ರಂದು ಪೇರುವನ್ನಾಮುಜಿ ಪೊಲೀಸ್ ಠಾಣೆಯಲ್ಲಿ ಅನಾಗಾ ವಿರುದ್ಧ ಮದುವೆಯಾಗುವುದಾಗಿ ನಂಬಿಸಿ ಮೋಸ ಮಾಡಿದ್ದಾಳೆ ಎಂದು ದೂರು ದಾಖಲಿಸಿದ್ದಾನೆ.

    ಪೊಲೀಸರು ದರ್ಶನ್ ದೂರನ್ನು ಸ್ವೀಕರಿಸಿಕೊಳ್ಳದೇ ಎರಡು ಕುಟುಂಬಗಳು ಮಾತುಕತೆಯ ಮೂಲಕ ಈ ಸಮಸ್ಯೆಯನ್ನು ಬಗ್ಗೆ ಹರಿಸಿಕೊಳ್ಳಿ ಎಂದು ಸಲಹೆ ನೀಡಿದ್ದಾರೆ. ಇದರಿಂದ ಬೇಸತ್ತ ದರ್ಶನ್ ಖಿನ್ನತೆಗೊಳಗಾಗಿ ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧರಿಸಿದ್ದಾನೆ.

    ಲಿಂಗ ಪರಿವರ್ತನೆ ಮಾಡಿಕೊಳ್ಳುವ ಹಿಂದಿನ ದಿನ ಅನಾಗಾ ಜೊತೆ ಫೋನಿನಲ್ಲಿ ನಾನು ಮಾತನಾಡಿದ್ದೇನೆ. ಈ ವೇಳೆ ಅನಾಗಾ ಶಸ್ತ್ರಚಿಕಿತ್ಸೆ ಬಳಿಕ ನಾವು ಮದುವೆಯಾಗಿ ತಮಿಳುನಾಡಿನ ತಿರುಪುರ್ ಗೆ ಓಡಿ ಹೋಗೋಣ ಎಂದು ಹೇಳಿದ್ದಳು ಎಂದು ಅರ್ಚನಾ ಪೊಲೀಸರ ಬಳಿ ಹೇಳಿಕೊಂಡಿದ್ದಾಳೆ.

    ಈ ವಿಚಾರದ ಬಗ್ಗೆ ಪೇರುವನ್ನಾಮುಜಿ ಎಸ್‍ಐ ಅನಾಗಾ ಬಳಿ ಮಾತನಾಡಿದ್ದಾರೆ. ಮಾತುಕತೆಯ ವೇಳೆ ಅನಾಗಾ, ನನ್ನ ಮತ್ತು ಅರ್ಚನಾ ಮಧ್ಯೆ ಯಾವುದೇ ಸಂಬಂಧವಿರಲಿಲ್ಲ. ಅರ್ಚನಾ ಲಿಂಗಪರಿವರ್ತನೆ ಶಸ್ತ್ರಚಿಕಿತ್ಸೆ ಮಾಡಿಕೊಂಡ ವಿಷಯ ನನಗೆ ಗೊತ್ತೇ ಇಲ್ಲ ಎಂದಿದ್ದಾಳೆ. ಅನಾಗಾಳ ಈ ಮಾತು ಕೇಳಿ ದರ್ಶನ್ ಹೈ ಕೋರ್ಟ್ ನಲ್ಲಿ ಹೇಬಿಸ್ ಕಾರ್ಪಸ್ ದಾಖಲಿಸಿದ್ದಾನೆ. ಕುಟುಂಬದವರ ಒತ್ತಡಕ್ಕೆ ಮಣಿದು ಆಕೆ ಈ ರೀತಿಯ ಹೇಳಿಕೆ ನೀಡುತ್ತಿದ್ದಾಳೆ ಎಂದು ಅರ್ಜಿಯಲ್ಲಿ ಆರೋಪಿಸಿದ್ದಾನೆ.

    ಏನಿದು ಹೇಬಿಯಸ್ ಕಾರ್ಪಸ್?
    ಸಂವಿಧಾನ ಪರಿಚ್ಛೇದ 226 ಮತ್ತು 227ರ ಅಡಿಯಲ್ಲಿ ಅಕ್ರಮ ಬಂಧನ, ನಾಪತ್ತೆ ಹಾಗೂ ಅಪಹರಣಕ್ಕೀಡಾದವರ ಪತ್ತೆ ಹಚ್ಚಲು ಪೊಲೀಸರಿಗೆ ನಿರ್ದೇಶಿಸಲು ಕೋರಿ ಹೈಕೋರ್ಟ್ ನಲ್ಲಿ ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಲು ಅವಕಾಶವಿದೆ. ಅಷ್ಟೇ ಅಲ್ಲದೇ ಯಾವುದೇ ವ್ಯಕ್ತಿಯನ್ನು ಪೊಲೀಸರೇ ಅಕ್ರಮವಾಗಿ ವಶಕ್ಕೆ ಪಡೆದ ಸಂದರ್ಭದಲ್ಲೂ ಆ ವ್ಯಕ್ತಿಯ ಕುಟುಂಬ ಸದಸ್ಯರು ನ್ಯಾಯಾಲಯದಲ್ಲಿ ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಬಹುದು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಮದ್ವೆಯಲ್ಲಿ ತೆಗೆದ ಫೋಟೋವನ್ನು ಅಶ್ಲೀಲ ಫೋಟೋ ಮಾಡಿ ಅಪ್ಲೋಡ್ ಮಾಡಿದ್ದ ಫೋಟೋಗ್ರಾಫರ್ ಅರೆಸ್ಟ್!

    ಮದ್ವೆಯಲ್ಲಿ ತೆಗೆದ ಫೋಟೋವನ್ನು ಅಶ್ಲೀಲ ಫೋಟೋ ಮಾಡಿ ಅಪ್ಲೋಡ್ ಮಾಡಿದ್ದ ಫೋಟೋಗ್ರಾಫರ್ ಅರೆಸ್ಟ್!

    ತಿರುವನಂತಪುರಂ: ಸಾಮಾಜಿಕ ಜಾಲತಾಣದಲ್ಲಿ ಮಹಿಳೆಯರ ಅಶ್ಲೀಲ ಫೋಟೋಗಳನ್ನು ಹರಿಬಿಟ್ಟ ಆರೋಪದ ಅಡಿಯಲ್ಲಿ ಫೋಟೋಗ್ರಾಫರ್ ನನ್ನು ಕೇರಳ ಪೊಲೀಸರು ಬಂಧಿಸಿದ್ದಾರೆ.

    ಕೋಝಿಕೋಡ್‍ನ ವದಕಾರಾದಲ್ಲಿರುವ ಸದ್ಯಮ್ ಶೂಟ್ ಆ್ಯಂಡ್ ಎಡಿಟ್ ಸ್ಟುಡಿಯೋ ವಿರುದ್ಧ ದೂರು ದಾಖಲಾಗಿತ್ತು. ಆ ಸ್ಟುಡಿಯೋದಲ್ಲಿ ಮಹಿಳೆಯರ ಫೋಟೋಗಳನ್ನು ಎಡಿಟ್ ಮಾಡಿ ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕುತ್ತಿದ್ದರು ಎನ್ನುವ ಆರೋಪ ಕೇಳಿ ಬಂದಿತ್ತು.

    ಸದ್ಯಮ್ ಸ್ಟುಡಿಯೋವನ್ನು ಪೊಲೀಸರು ಸೀಜ್ ಮಾಡಿ ಕೆಲವು ದಾಖಲೆಗಳನ್ನು ತಮ್ಮ ವಶಕ್ಕೆ ಪಡೆದುಕೊಂಡಿದ್ದಾರೆ. ಅಷ್ಟೇ ಅಲ್ಲದೇ ಸ್ಟುಡಿಯೋ ಮಾಲೀಕ ಬೀಬೇಶ್ ಜೊತೆಗೆ ದಿನೇಶನ್, ಸತೀಶನ್ ಅವರನ್ನು ಪೊಲೀಸರು ಬಂಧಿಸಿದ್ದಾರೆ ಎಂದು ಕೇರಳ ಸಿಎಂ ಪಿನರಾಯಿ ವಿಜಯನ್ ವಿಧಾನಸಭೆಯಲ್ಲಿ ತಿಳಿಸಿದರು.

    ಕುಟುಂಬವೊಂದು ಮದುವೆಗಾಗಿ ಈ ಸ್ಟುಡಿಯೋವನ್ನು ಸಂಪರ್ಕಿಸಿತ್ತು. ಮದುವೆಯಲ್ಲಿ ತೆಗೆದ ಫೋಟೋಗಳನ್ನು ಅಶ್ಲೀಲ ಫೋಟೋಗಳನ್ನಾಗಿ ಎಡಿಟ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವುದನ್ನು ಗಮನಿಸಿದ ಕುಟುಂಬದವರು ಪೊಲೀಸರಿಗೆ ದೂರು ನೀಡಿದ ನಂತರ ಆರೋಪಿಗಳ ಕೃತ್ಯ ಬೆಳಕಿಗೆ ಬಂದಿದೆ.

  • ತೃತೀಯಲಿಂಗಿಗಳ ಬಟ್ಟೆ ಬಿಚ್ಚಿಸಿ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟ ಪೊಲೀಸರು!

    ತೃತೀಯಲಿಂಗಿಗಳ ಬಟ್ಟೆ ಬಿಚ್ಚಿಸಿ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟ ಪೊಲೀಸರು!

    ತಿರುವನಂತಪುರಂ: ತೃತೀಯಲಿಂಗಿಗಳನ್ನು ಪೊಲೀಸರು ವಿವಸ್ತ್ರಗೊಳಿಸಿ ಅವರ ಫೋಟೋ ಹಾಗೂ ವಿಡಿಯೋ ತೆಗೆದು ಸಾಮಾಜಿಕ ಜಾಲತಾಣದಲ್ಲಿ ಹಾಕಿದ ಘಟನೆ ಕೇರಳದ ಅಲೆಪ್ಪಿ ಪೊಲೀಸ್ ಠಾಣೆಯಲ್ಲಿ ನಡೆದಿದೆ.

    ಕುಡಿದು ಮದ್ಯದ ನಶೆಯಲ್ಲಿ ತೃತೀಯಲಿಂಗಿಗಳು ಗಲಾಟೆ ಮಾಡುತ್ತಿದ್ದರು. ಅವರ ಗಲಾಟೆಯಿಂದ ನೊಂದ ಸ್ಥಳೀಯರು ಪೊಲೀಸರಿಗೆ ಕರೆ ಮಾಡಿ ದೂರು ನೀಡಿದ್ದಾರೆ. ಹೀಗಾಗಿ ಪೆಟ್ರೋಲಿಂಗ್ ತಂಡ ಅವರನ್ನು ಪೊಲೀಸ್ ಠಾಣೆಗೆ ಕರೆದುಕೊಂಡು ಬಂದಿದ್ದಾರೆ.

    ಪೊಲೀಸ್ ಠಾಣೆಯಲ್ಲೂ ತೃತೀಯ ಲಿಂಗಿಗಳು ವಾಗ್ವಾದ ನಡೆಸಿದ್ದಾರೆ. ಹೀಗಾಗಿ ಇವರು ಜೈಲಿನಲ್ಲಿ ಆತ್ಮಹತ್ಯೆ ಮಾಡಿಕೊಳ್ಳಬಹುದು ಎನ್ನುವ ಭಯದಿಂದ ಅಲ್ಲಿದ್ದ ಮಹಿಳಾ ಪೊಲೀಸರು ಅವರನ್ನು ವಿವಸ್ತ್ರಗೊಳಿಸಿ ಫೋಟೋ ಹಾಗೂ ವಿಡಿಯೋ ತೆಗೆದಿದ್ದರು. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದೆ.

    ಈ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿದ ಎಂದು ಪೊಲೀಸ್ ವರಿಷ್ಠಾಧಿಕಾರಿ ಎ. ಸುರೇಂದ್ರ, ಗುರುವಾರ ಈ ಘಟನೆ ನಡೆದಿದ್ದು, ವಿಡಿಯೋವನ್ನು ಮಾಡಿ ಸಾಮಾಜಿಕ ಜಾಲತಾಣದಲ್ಲಿ ಯಾರೂ ಹಾಕಿದ್ದಾರೆಂಬುದರ ಬಗ್ಗೆ ತನಿಖೆ ನಡೆಸುತ್ತೇವೆ ಎಂದು ಎ. ಸುರೇಂದ್ರ ಹೇಳಿದ್ದಾರೆ.

    ಪೆಟ್ರೋಲಿಂಗ್ ಪೊಲೀಸ್ ತಂಡ ತೃತೀಯ ಲಿಂಗದವರನ್ನು ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಿದ್ದರು. ನಂತರ ಅಲ್ಲಿ ಅವರನ್ನು ವಿವಸ್ತ್ರಗೊಳಿಸಿ ಫೋಟೋ, ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟರು ಎಂದು ತೃತೀಯ ಲಿಂಗಿಗಳು ತಿಳಿಸಿದ್ದಾರೆ.