Tag: tiruvanantapuram

  • ಸಿಪಿಎಂ ಸ್ಥಳೀಯ ಮುಖಂಡನ ಬರ್ಬರ ಹತ್ಯೆ- RSS ಮೇಲೆ ಆರೋಪ

    ಸಿಪಿಎಂ ಸ್ಥಳೀಯ ಮುಖಂಡನ ಬರ್ಬರ ಹತ್ಯೆ- RSS ಮೇಲೆ ಆರೋಪ

    ತಿರುವನಂತಪುರಂ: ಸಿಪಿಐ(ಎಂ) ಸ್ಥಳೀಯ ಮುಖಂಡರೊಬ್ಬರ ಮೇಲೆ ಗುಂಪೊಂದು ಹಲ್ಲೆ ನಡೆಸಿ ಬರ್ಬರವಾಗಿ ಕೊಚ್ಚಿ ಕೊಲೆ ಮಾಡಿರುವ ಘಟನೆ ಕೇರಳದಲ್ಲಿ ನಡೆದಿದೆ.

    ಪಿ.ಬಿ ಸಂದೀಪ್ ಕುಮಾರ್ ಕೊಲೆಯಾದ ವ್ಯಕ್ತಿ. ಈ ಘಟನೆ ಗುರುವಾರ ರಾತ್ರಿ 8.30ರ ಸುಮಾರಿಗೆ ತಿರುವಲ್ಲಾ ಎಂಬಲ್ಲಿ ನಡೆದಿದೆ. ಸಂದೀಪ್ ಅವರು ಮಾಜಿ ಪೆರಿಂಗಾರ ಪಂಚಾಯತ್ ಸದಸ್ಯರಾಗಿದ್ದರು. ಅಷ್ಟೇ ಅಲ್ಲದೆ ಇತ್ತೀಚೆಗೆ ಸ್ಥಳೀಯ ಕಾರ್ಯದರ್ಶಿಯಾಗಿ ಅವಿರೋಧವಾಗಿ ಆಯ್ಕೆಯಾಗಿದ್ದರು. ಅವರು ಡಿವೈಎಫ್‌ಐ ಚಟುವಟಿಕೆಗಳಲ್ಲಿ ಹೆಚ್ಚು ಸಕ್ರಿಯರಾಗಿದ್ದರು ಮತ್ತು ಪೆರಿಂಗಾರದಲ್ಲಿ ಪಕ್ಷವನ್ನು ಬಲಪಡಿಸಲು ಹೆಚ್ಚು ಶ್ರಮಿಸುತ್ತಿದ್ದರು.

    POLICE JEEP

    ಘಟನೆ ಹಿನ್ನೆಲೆ:
    ಸಂದೀಪ್ ಅವರು ಪಕ್ಷದ ಕಚೇರಿಯಿಂದ ತಮ್ಮ ಮನೆಗೆ ತೆರಳುತ್ತಿದ್ದ ಸಂದರ್ಭದಲ್ಲಿ ಮೋರಿಯಲ್ಲಿ ಕುಳಿತ್ತಿದ್ದ ಆರು ಮಂದಿಯ ಗುಂಪೊಂದು ಅವರನ್ನು ಕಂಡು ಬೆನ್ನೆಟ್ಟಿದೆ. ಅಲ್ಲದೆ ಸಮೀಪದ ಗದ್ದೆಯಲ್ಲಿ ಸಂದೀಪ್ ಅವರನ್ನು ಚಾಕುವಿನಿಂದ ಇರಿದು ಕೊಂದಿದೆ. ಪಕ್ಷದ ಕಾರ್ಯಕರ್ತರು ಸಂದೀಪ್ ಅವರನ್ನು ಉಳಿಸಲು ಸ್ಥಳಕ್ಕೆ ಆಗಮಿಸಿದರೂ, ದಾಳಿಕೋರರು ಚಾಕು ತೋರಿಸಿ ಬೆದರಿಸಿದ್ದಾರೆ. ಹಲ್ಲೆಗೊಳಗಾದ ಸಂದೀಪ್ ಅವರನ್ನು ತಿರುವಲ್ಲಾ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಅವರನ್ನು ಉಳಿಸಲಾಗಲಿಲ್ಲ.

    ಈ ಬಗ್ಗೆ ತಿರುವಲ್ಲಾ ಡಿವೈಎಸ್ಪಿ ಟಿ ರಾಜಪ್ಪ ಮಾತನಾಡಿ, ತಿರುವಲ್ಲಾದ ಚತ್ತಂಕರಿಯಲ್ಲಿ ಗುರುವಾರ ರಾತ್ರಿ ಬೈಕಿನಲ್ಲಿ ಬಂದ ಆರು ಮಂದಿ ಸಂದೀಪ್ ಮೇಲೆ ದಾಳಿ ನಡೆಸಿದ್ದಾರೆ. ಇದು ರಾಜಕೀಯಕ್ಕಾಗಿ ನಡೆದ ಕೊಲೆ ಎಂಬುದು ಇನ್ನೂ ಖಚಿತವಾಗಿಲ್ಲ. ಈ ಕುರಿತು ತನಿಖೆ ಪ್ರಾರಂಭಿಸಿದ್ದು, ಆರೋಪಿಗಳನ್ನು ಪತ್ತೆ ಮಾಡುತ್ತೇವೆ ಎಂದು ತಿಳಿಸಿದರು. ಇದನ್ನೂ ಓದಿ: ನನ್ನ ಹುಟ್ಟಿಸಿದ್ಯಾಕೆ?- ತಾಯಿಯ ಹೆರಿಗೆ ಮಾಡಿಸಿದ್ದ ವೈದ್ಯರ ವಿರುದ್ಧ ಯುವತಿ ಕೇಸ್

    ಸಂದೀಪ್ ಅವರ ಹತ್ಯೆ ಪೂರ್ವ ನಿಯೋಜಿತವಾಗಿದ್ದು, ದಾಳಿಯ ಹಿಂದೆ ಆರ್‌ಎಸ್‌ಎಸ್ ಕೈವಾಡವಿದೆ ಎಂದು ಸಿಪಿಐ(ಎಂ) ಜಿಲ್ಲಾ ನಾಯಕತ್ವ ಆರೋಪಿಸಿದ್ದಾರೆ. ಸಂದೀಪ್ ಪಕ್ಷದ ಜನಪ್ರಿಯ ಮುಖಂಡರಲ್ಲಿ ಒಬ್ಬರಾಗಿದ್ದರು. ಇದರಿಂದ ಸಹಿಸದ ಆರ್‌ಎಸ್‌ಎಸ್ ಉದ್ದೇಶಪೂರ್ವಕವಾಗಿ ಸಂದೀಪ್ ಅವರನ್ನು ಹತ್ಯೆಗೈದಿದ್ದಾರೆ ಎಂದು ಸಿಪಿಐ(ಎಂ) ಪತ್ತನಂತಿಟ್ಟ ಜಿಲ್ಲಾ ಮುಖಂಡ ಸನಲ್ ಕುಮಾರ್ ಆರೋಪಿಸಿದ್ದಾರೆ.

    ಸಂದೀಪ್ ಹತ್ಯೆಯನ್ನು ಖಂಡಿಸಿದ ಸಿಪಿಐ(ಎಂ) ರಾಜ್ಯ ಕಾರ್ಯದರ್ಶಿ ಮಾತನಾಡಿ, ಆರ್‌ಎಸ್‌ಎಸ್ ರಾಜ್ಯದಲ್ಲಿ ಭಯೋತ್ಪಾದಕ ಪರಿಸ್ಥಿತಿಯನ್ನು ಸೃಷ್ಟಿಸಲು ಪ್ರಯತ್ನಿಸುತ್ತಿದೆ. ತಿರುವನಂತಪುರದಲ್ಲಿ ನೀಡಿರುವ ಹೇಳಿಕೆಯಲ್ಲಿ ಪಕ್ಷದ ಕಾರ್ಯದರ್ಶಿ ಹತ್ಯೆಯ ಹಿಂದಿನ ಪಿತೂರಿಯನ್ನು ಹೊರತರಬೇಕು ಎಂದು ಒತ್ತಾಯಿಸಿದರು. ಭೀಮಾತೀರದಲ್ಲಿ ಮತ್ತೆ ಹರಿದ ನೆತ್ತರು- ಪಟ್ಟಣ ಪಂಚಾಯ್ತಿ ಮಾಜಿ ಸದಸ್ಯನ ಬರ್ಬರ ಕೊಲೆ

    ಪಿ ವಿ ಸಂದೀಪ್ ಕುಮಾರ್ ಹತ್ಯೆ ಖಂಡಿಸಿ ಇಂದು ತಿರುವಲ್ಲಾ ಪುರಸಭೆ ಮತ್ತು ಪಕ್ಕದ ಐದು ಪಂಚಾಯತ್‌ಗಳಲ್ಲಿ ಸಿಪಿಎಂ ಹರತಾಳಕ್ಕೆ ಕರೆ ನೀಡಿದೆ.

  • ಲಾಕ್‍ಡೌನ್‍ನಲ್ಲಿ ಮನೆಯಲ್ಲಿ ಸ್ನೇಹಿತನಿಗೆ ಜಾಗ ಕೊಟ್ಟ ಪತಿ – ಆತನ ಜೊತೆಗೇ ಓಡೋದ್ಲು ಪತ್ನಿ

    ಲಾಕ್‍ಡೌನ್‍ನಲ್ಲಿ ಮನೆಯಲ್ಲಿ ಸ್ನೇಹಿತನಿಗೆ ಜಾಗ ಕೊಟ್ಟ ಪತಿ – ಆತನ ಜೊತೆಗೇ ಓಡೋದ್ಲು ಪತ್ನಿ

    – ಕೊರೊನಾ ಸಂಕಷ್ಟದಲ್ಲಿ ಸಹಾಯ ಮಾಡಿದ್ದೆ ತಪ್ಪಾಯ್ತು
    – 2 ತಿಂಗಳ ಪ್ರೀತಿಗಾಗಿ 20 ವರ್ಷದ ಸ್ನೇಹಕ್ಕೆ ಮೋಸ

    ತಿರುವನಂತಪುರಂ: ವಿಶ್ವವ್ಯಾಪಿ ಅಟ್ಟಹಾಸ ಮೆರೆಯುತ್ತಾ ಲಕ್ಷಾಂತರ ಜೀವಗಳನ್ನು ಬಲಿ ಪಡೆದಿರುವ ಕೊರೊನಾ ವೈರಸ್ ಕರಿನೆರಳು ಈಗ ವೈವಾಹಿಕ ಸಂಬಂಧಗಳ ಮೇಲೂ ಬಿದ್ದಿದೆ. ಕೊರೊನಾ ಲಾಕ್‍ಡೌನ್‍ನಿಂದ ಊರಿಗೆ ಹೋಗಲು ಸಾಧ್ಯವಾಗದೆ ಪರದಾಡುತ್ತಿದ್ದ ಸ್ನೇಹಿತನಿಗೆ ವ್ಯಕ್ತಿಯೋರ್ವ ತನ್ನ ಮನೆಯಲ್ಲಿಯೇ ಆಶ್ರಯ ಕೊಟ್ಟಿದ್ದ. ಆದರೆ ಸ್ನೇಹಿತ ಮಾತ್ರ ವ್ಯಕ್ತಿಯ ಪತ್ನಿಯನ್ನೇ ಪ್ರೀತಿಸಿ ಆಕೆಯ ಜೊತೆ ಓಡಿಹೋಗಿದ್ದಾನೆ.

    ಕೇರಳದ ಇಡುಕ್ಕಿ ಜಿಲ್ಲೆಯ 32 ವರ್ಷದ ಲೋಥಾರಿಯೋ ಎರ್ನಾಕುಲಂನಲ್ಲಿ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ. ಮಾರ್ಚ ತಿಂಗಳಲ್ಲಿ ಲಾಕ್‍ಡೌನ್ ಫೋಷಿಸಿದ ವೇಳೆ ಊರಿಗೆ ವಾಪಸ್ ಹೋಗಲು ಆಗದೆ ಮುವಾಟ್ಟುಪುಳದಲ್ಲಿ ಸಿಲುಕಿಕೊಂಡಿದ್ದ. ಆಗ ವ್ಯಕ್ತಿಗೆ 20 ವರ್ಷದ ನಂತರ ಆತನ ಬಾಲ್ಯದ ಸ್ನೇಹಿತನ ಸಂಪರ್ಕ ಸಿಕ್ಕಿತು. ಮುವಾಟ್ಟುಪುಳದಲ್ಲಿ ಇದ್ದ ಸ್ನೇಹಿತನನ್ನು ಸಂಪರ್ಕಿಸಿ ಸಹಾಯ ಕೇಳಿದ್ದನು.

    ಈ ವೇಳೆ ಸ್ನೇಹಿತ ಆತನಿಗೆ ತನ್ನ ಮನೆಯಲ್ಲಿಯೇ ಇರಲು ಆಶ್ರಯ ಕೊಟ್ಟಿದ್ದನು. ಸ್ನೇಹಿತನ ಮನೆಯಲ್ಲಿ ಆತ ತನ್ನ ಪತ್ನಿ ಹಾಗೂ ಇಬ್ಬರು ಮಕ್ಕಳ ಜೊತೆ ವಾಸವಾಗಿದ್ದನು. ಏಪ್ರಿಲ್ ಅಂತ್ಯದವರೆಗೂ ಊಟ ವಸತಿ ನೀಡಿದ್ದನು. ಆದರೆ ಏಪ್ರಿಲ್ ನಂತರ ಎರ್ನಾಕುಲಂ ಕೊರೊನಾ ಮುಕ್ತವಾಗಿ ಗ್ರೀನ್ ಝೋನ್‍ಗೆ ಬಂದಿತ್ತು. ಹೀಗಾಗಿ ಅಲ್ಲಿ ಲಾಕ್‍ಡೌನ್ ಸೆಡಿಲಿಕೆ ಮಾಡಲಾಗಿತ್ತು. ಆದರೂ ಲೋಥಾರಿಯೋ ವಾಪಸ್ ತೆರಳದಿದ್ದಾಗ ಸ್ನೇಹಿತನಿಗೆ ಅನುಮಾನ ಮೂಡಿತ್ತು. ಆ ಬಳಿಕ ಸ್ವಲ್ಪ ದಿನದಲ್ಲೇ ಲೋಥಾರಿಯೋ ಸ್ನೇಹಿತನ ಪತ್ನಿ ಜೊತೆ ಇಬ್ಬರು ಮಕ್ಕಳನ್ನು ಕರೆದುಕೊಂಡು ಓಡಿ ಹೋಗಿದ್ದನು. ಆಗ ಸ್ನೇಹಿತನ ಜೊತೆ ತನ್ನ ಪತ್ನಿ ಓಡಿಹೋಗಿರುವುದಾಗಿ ಪತಿ ಪೊಲೀಸರಿಗೆ ದೂರು ನೀಡಿದ್ದನು.

    ದೂರಿನ ಅನ್ವಯ ಪೊಲೀಸರು ತನಿಖೆ ಆರಂಭಿಸಿದಾಗ ಓಡಿ ಹೋಗಿದ್ದ ಲೋಥಾರಿಯೋ ಸ್ನೇಹಿತನ ಪತ್ನಿ ಹಾಗೂ ಮಕ್ಕಳ ಜೊತೆ ವಾಪಸ್ ಬಂದಿದ್ದ. ಈ ವೇಳೆ ಸ್ನೇಹಿತ ತನ್ನ ಪತ್ನಿಯನ್ನು ಕ್ಷಮಿಸಿ ಮಕ್ಕಳೊಂದಿಗೆ ಮನೆಗೆ ಕರೆದುಕೊಂಡು ಹೋಗಿದ್ದನು. ಆದರೆ ಕಳೆದ ವಾರ ಮತ್ತೆ ಮಕ್ಕಳನ್ನು ಕರೆದುಕೊಂಡು ಪತ್ನಿ ಲೋಥಾರಿಯೋ ಜೊತೆ ಪತಿ ತನ್ನ ಹೆಸರಲ್ಲಿ ಖರೀದಿಸಿದ್ದ ಕಾರಿನಲ್ಲಿಯೇ ಓಡಿಹೋಗಿದ್ದಾಳೆ. ಮನೆಯಲ್ಲಿದ್ದ ತನ್ನ ಬಂಗಾರದ ಒಡವೆಗಳನ್ನು ದೋಚಿಕೊಂಡು ಪ್ರೇಮಿ ಜೊತೆ ಪರಾರಿಯಾಗಿದ್ದಾಳೆ ಎಂದು ಪೊಲೀಸರು ಹೇಳಿದ್ದಾರೆ.

  • ಸಂತ್ರಸ್ತರಿಗೆ ಗೋಡಾನಿನಲ್ಲಿದ್ದ ಬಟ್ಟೆಗಳನ್ನು ಕಳುಹಿಸಿದ ವ್ಯಾಪಾರಿ

    ಸಂತ್ರಸ್ತರಿಗೆ ಗೋಡಾನಿನಲ್ಲಿದ್ದ ಬಟ್ಟೆಗಳನ್ನು ಕಳುಹಿಸಿದ ವ್ಯಾಪಾರಿ

    ತಿರುವನಂತಪುರಂ: ಮಹಾಮಳೆಗೆ ದೇವರನಾಡು ಕೇರಳ ತತ್ತರಿಸಿ ಹೋಗಿದೆ. ಈಗಾಗಲೇ ನೂರಕ್ಕೂ ಹೆಚ್ಚು ಜನರು ಪ್ರವಾಹಕ್ಕೆ ಬಲಿಯಾಗಿದ್ದಾರೆ. ಗುಡ್ಡಗಾಡು ಪ್ರದೇಶಗಳಲ್ಲಿ ಎಡಬಿಡದೆ ಭೂಕುಸಿತ ಸಂಭವಿಸುತ್ತಿದ್ದು. ಜನರು ಕಂಗಾಲಾಗಿದ್ದಾರೆ. ಈ ಸಂಕಷ್ಟದ ಪರಿಸ್ಥಿತಿಯಲ್ಲಿ ಪ್ರವಾಹ ಸಂತ್ರಸ್ತರಿಗೆ ಗಾರ್ಮೆಂಟ್ಸ್ ವ್ಯಾಪಾರಿಯೊಬ್ಬರು ನೆರವಾಗಿ ಮಾನವೀಯತೆ ಮೆರೆದಿದ್ದಾರೆ.

    ಪ್ರವಾಹದಿಂದ ಉಂಟಾಗಿರುವ ಅನಾಹುತಗಳಿಂದ ಸಾಕಷ್ಟು ಮಂದಿ ಮನೆಮಠ ಕಳೆದುಕೊಂಡು ಒದ್ದಾಡುತ್ತಿದ್ದಾರೆ. ಸಂತ್ರಸ್ತರ ನೆರವಿಗಾಗಿ ಮತ್ತು ಅವರಿಗೆ ಪುನರ್ವಸತಿ ಕಲ್ಪಿಸಲು ರಾಜ್ಯ ಸರ್ಕಾರ ಶಕ್ತಿಮೀರಿ ಪ್ರಯತ್ನ ನಡೆಸುತ್ತಿದೆ. ಇದರ ಜೊತೆಗೆ ಸಾವಿರಾರು ಜನರು ಸ್ವಯಂಪ್ರೇರಿತರಾಗಿ ಪರಿಹಾರ ಕಾರ್ಯದಲ್ಲಿ ಕೈ ಜೋಡಿಸಿದ್ದಾರೆ. ಅವರಲ್ಲಿ ಎರ್ನಾಕುಲಂನಲ್ಲಿ ಗಾರ್ಮೆಂಟ್ ವ್ಯಾಪಾರಿಯಾಗಿರುವ ನೌಶಾದ್ ಕೂಡ ಒಬ್ಬರಾಗಿದ್ದಾರೆ. ಇವರು ತಮ್ಮ ಅಂಗಡಿಗೆ ಬಂದ ಮಹಿಳೆಯರು ಮತ್ತು ಮಕ್ಕಳ ಸಿದ್ಧ ಉಡುಪುಗಳನ್ನು ನೇರವಾಗಿ ಕೇರಳ ಪ್ರವಾಹ ಸಂತ್ರಸ್ತರಿಗೆ ಕಳುಹಿಸಿಕೊಡುವ ಮೂಲಕ ಸಹಾಯ ಹಸ್ತ ಚಾಚಿದ್ದಾರೆ.

    ನೌಶಾದ್ ಅವರು ತಮ್ಮ ಗಾರ್ಮೆಂಟ್ ಗೋಡಾನಿನಲ್ಲಿದ್ದ ಬಟ್ಟೆಗಳನ್ನು ಸಂತ್ರಸ್ತರಿಗೆ ಕಳುಹಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಎಲ್ಲರ ಮನ ಗೆದ್ದಿದೆ. ನಾವು ಸತ್ತಾಗ ಈ ಜಗತ್ತಿನಿಂದ ಏನನ್ನೂ ಕೊಂಡೊಯ್ಯುವುದಿಲ್ಲ. ನನ್ನ ವ್ಯಾಪಾರದಲ್ಲಿ ಬಂದ ಲಾಭವನ್ನು ಅಗತ್ಯ ಇರುವವರಿಗೆ ನೀಡುತ್ತಿದ್ದೇನೆ. ಇದರಿಂದ ನನಗೆ ನಷ್ಟವಿಲ್ಲ. ಅಗತ್ಯ ಇರುವವರಿಗೆ ಬಟ್ಟೆಗಳನ್ನು ನೀಡುವ ಮೂಲಕ ಬಕ್ರಿದ್ ಹಬ್ಬವನ್ನು ಆಚರಣೆ ಮಾಡುತ್ತಿದ್ದೇನೆ ಎಂದು ನೌಶಾದ್ ವಿಡಿಯೋದಲ್ಲಿ ತಿಳಿಸಿದ್ದಾರೆ.

    ವಿಡಿಯೋದಲ್ಲಿ, ನೌಶಾದ್ ಅವರು ಗಾರ್ಮೆಂಟ್ ಗೋಡಾನಿನಲ್ಲಿದ್ದ ಹೊಸ ಬಟ್ಟೆಗಳನ್ನು ದೊಡ್ಡ ದೊಡ್ಡ ಚೀಲಗಳಲ್ಲಿ ತುಂಬಿ ಪ್ರವಾಹ ಸಂತ್ರಸ್ತರಿಗೆ ಕಳುಹಿಸುವ ತಯಾರಿ ಮಾಡುತ್ತಿರುವ ದೃಶ್ಯಗಳು ಸೆರೆಯಾಗಿದೆ.

    ವ್ಯಾಪಾರಿಯ ಈ ಕಾರ್ಯಕ್ಕೆ ಎಲ್ಲೆಡೆಯಿಂದ ಮೆಚ್ಚುಗೆ ವ್ಯಕ್ತವಾಗುತ್ತಿದ್ದು, ಮಲಯಾಳಂ ನಟ ಮಮ್ಮುಟ್ಟಿ, ಜಯಸೂರ್ಯ ನೌಶಾದ್ ಸೇವೆಗೆ ಶ್ಲಾಘಿಸಿದ್ದಾರೆ. ಮತ್ತೊಂದೆಡೆ ಕಲಾವಿದ ಡಾವಿನ್ಸೀ ಸುರೇಶ್ ಅವರು ಕೇವಲ ಬಟ್ಟೆಗಳಿಂದಲೇ ನೌಶಾದ್ ಅವರ ಪೋಟ್ರೇಟ್ ಚಿತ್ರವನ್ನು ರಚಿಸಿ ಗೌರವ ಸಲ್ಲಿಸಿದ್ದಾರೆ.

    https://www.facebook.com/rajesh.sharma.3720/videos/2467443179987522/

  • ಅನೈತಿಕ ಸಂಬಂಧ ಹೊಂದಿದ್ದ ಶ್ವಾನವನ್ನು ಮನೆಯಿಂದ ಹೊರಹಾಕಿದ ಮಾಲೀಕ

    ಅನೈತಿಕ ಸಂಬಂಧ ಹೊಂದಿದ್ದ ಶ್ವಾನವನ್ನು ಮನೆಯಿಂದ ಹೊರಹಾಕಿದ ಮಾಲೀಕ

    ತಿರುವನಂತಪುರಂ: ನೆರೆ ಮನೆಯ ನಾಯಿಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ ಪಮೋರಿಯನ್ ನಾಯಿಯೊಂದನ್ನು ಮಾಲೀಕ ಮನೆಯಿಂದ ಹೊರಹಾಕಿರುವ ವಿಚಿತ್ರ ಘಟನೆ ಕೇರಳದಲ್ಲಿ ನಡೆದಿದೆ.

    ಹೌದು, ವಿಚಿತ್ರ ಎನಿಸಿದರು ಇದು ಸತ್ಯ. ಮನುಷ್ಯರು ಅನೈತಿಕ ಸಂಬಂಧ ಹೊಂದಿರುವುದು ಬಯಲಾದರೆ. ಅವರನ್ನು ಕುಟುಂಬಸ್ಥರು ಮನೆಯಿಂದ ಹೊರಹಾಕುವುದು, ಹಲ್ಲೆ ಮಾಡುವ ಪ್ರಕರಣಗಳು ದಿನನಿತ್ಯ ನಡೆಯುತ್ತಲೇ ಇರುತ್ತದೆ. ಆದ್ರೆ ಅನೈತಿಕ ಸಂಬಂಧ ಹೊಂದಿದೆ ಎಂದು ನಾಯಿಯನ್ನು ಮನೆಯಿಂದ ಹೊರಹಾಕಿರುವುದು ಇದೇ ಮೊದಲ ಪ್ರಕರಣ ಎಂದು ವರದಿಯಾಗಿದೆ.

    ಈ ನಾಯಿಗೆ ಸುಮಾರು ಮೂರು ವರ್ಷ ವಯಸ್ಸಾಗಿದ್ದು, ತಿರುವನಂತಪುರದ ಚೆಕಾಯ್ ಮಾರುಕಟ್ಟೆಯಲ್ಲಿ ಅನಾಥವಾಗಿ ಈ ನಾಯಿ ನಿಂತಿತ್ತು. ಈ ವೇಳೆ ಪೀಪಲ್ ಫಾರ್ ಎನಿಮಲ್ಸ್(ಪಿಎಫ್‍ಎ) ಸ್ವಯಂ ಸೇವಕ ಶಮೀಮ್ ಅವರು ನಾಯಿಯನ್ನು ಕಂಡು ಅದರ ಬಳಿ ಹೋಗಿ ನೋಡಿದಾಗ, ಅದರ ಕೊರಳಿಗೆ ಒಂದು ಚೀಟಿಯನ್ನು ಕಟ್ಟಲಾಗಿತ್ತು. ಅದನ್ನು ತೆರೆದು ನೋಡಿದಾಗ ನಾಯಿ ಬಗ್ಗೆ ಶಮೀಮ್ ಅವರಿಗೆ ತಿಳಿದಿದೆ.

    ಚೀಟಿಯಲ್ಲಿ ಏನಿದೆ?
    ಇದು ಆತ್ಯುತ್ತಮ ತಳಿಯ ನಾಯಿ, ಒಳ್ಳೆ ನಡವಳಿಕೆ ಹೊಂದಿದೆ. ಇದಕ್ಕೆ ಯಾವುದೇ ಕಾಯಿಲೆಗಳಿಲ್ಲ. ಇದಕ್ಕೆ ಸಾಮಾನ್ಯವಾಗಿ ಐದು ದಿನಗಳಿಗೆ ಒಮ್ಮೆ ಸ್ನಾನ ಮಾಡಿಸಲಾಗುತಿತ್ತು. ಇದು ಕೇವಲ ಬೊಗಳುತ್ತದೆ, ಕಚ್ಚುವುದಿಲ್ಲ. ಮೂರು ವರ್ಷದಲ್ಲಿ ಯಾರನ್ನೂ ಕಡಿದಿಲ್ಲ. ಹಾಲು, ಬಿಸ್ಕೆಟ್ ಮತ್ತು ಮೊಟ್ಟೆಯನ್ನು ಹೆಚ್ಚು ತಿನ್ನಲು ಇಷ್ಟ ಪಡುತ್ತದೆ. ನೆರೆಮನೆಯ ನಾಯಿ ಜೊತೆಗೆ ಇದು ಅನೈತಿಕ ಸಂಬಂಧ ಹೊಂದಿರುವ ಬಗ್ಗೆ ತಿಳಿದಿದ್ದಕ್ಕೆ ಇದನ್ನು ಮನೆಯಿಂದ ಹೊರ ಹಾಕಲಾಗಿದೆ ಎಂದು ಬರೆಯಲಾಗಿದೆ.

    https://www.facebook.com/sreedevi.s.kartha/posts/10156939196634300

    ಅಲ್ಲದೆ ಈ ಬಗ್ಗೆ ತಿಳಿದ ಬಳಿಕ, ಪ್ರಾಣಿ ಹಕ್ಕುಗಳ ರಕ್ಷಣೆಗಾಗಿ ಹೋರಾಡುವ ಕಾರ್ಯಕರ್ತೆ ಶ್ರೀದೇವಿ ಎಸ್. ಕರ್ಥ ಅವರು ಪೊಮೇರಿಯನ್ ನಾಯಿಯ ಫೋಟೋ ಹಾಗೂ ಅದರ ಕೊರಳಿನಲ್ಲಿದ್ದ ಚೀಟಿಯ ಫೋಟೋವನ್ನು ತಮ್ಮ ಫೇಸ್‍ಬುಕ್ ನಲ್ಲಿ ಪೋಸ್ಟ್ ಮಾಡಿದ್ದಾರೆ. ಇದನ್ನು ನೋಡಿದ ಪ್ರಾಣಿಪ್ರಿಯರು ನಾಯಿಯ ಮಾಲೀಕರ ವರ್ತನೆಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

  • ಸಮುದ್ರ ಪಾಲಾಗುತ್ತಿದ್ದ ವ್ಯಕ್ತಿಯನ್ನು ಕಾಪಾಡಿ ರಿಯಲ್ ಹೀರೋ ಆದ ನೌಕಾಪಡೆ ಅಧಿಕಾರಿ

    ಸಮುದ್ರ ಪಾಲಾಗುತ್ತಿದ್ದ ವ್ಯಕ್ತಿಯನ್ನು ಕಾಪಾಡಿ ರಿಯಲ್ ಹೀರೋ ಆದ ನೌಕಾಪಡೆ ಅಧಿಕಾರಿ

    ತಿರುವನಂತಪುರಂ: ಕೇರಳದ ಬೀಚ್‍ನಲ್ಲಿ ಆಡಲು ಹೋಗಿ, ಸಮುದ್ರ ಪಾಲಾಗುತ್ತಿದ್ದ ವ್ಯಕ್ತಿಯೋರ್ವನನ್ನು ನೌಕಾಪಡೆ ಅಧಿಕಾರಿಯೊಬ್ಬರು ಕಾಪಾಡಿದ್ದು, ಅಧಿಕಾರಿಯ ಕಾರ್ಯಕ್ಕೆ ಸಾಮಾಜಿಕ ಜಾಲತಾಣದಲ್ಲಿ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ.

    ಹೌದು, ಏಪ್ರಿಲ್ 5ರ ಸಂಜೆ ಔರಂಗಬಾದ್ ಮೂಲದ ದಿಲೀಪ್ ಕುಮಾರ್ ಸಮುದ್ರದಲ್ಲಿ ಆಡುತ್ತಿರುವಾಗ ಅಲೆಗಳ ರಭಸಕ್ಕೆ ಕೊಚ್ಚಿಕೊಂಡು ಹೋಗಿದ್ದನು. ಆಗ ದಿಲೀಪ್ ಜತೆಯಲ್ಲಿದ್ದವರು, ಆತ ಸಮುದ್ರದಲ್ಲಿ ಕೊಚ್ಚಿಕೊಂಡು ಹೋದ ಬಗ್ಗೆ ಅಳಲು ತೋಡಿಕೊಂಡು ಕಾಪಾಡುವಂತೆ ಸ್ಥಳದಲ್ಲಿದ್ದವರ ಬಳಿ ಮನವಿ ಮಾಡಿದ್ದಾರೆ. ಇದೇ ವೇಳೆಯಲ್ಲಿ ಪತ್ನಿ ಹಾಗೂ ಪುತ್ರಿಯೊಂದಿಗೆ ಲೆಫ್ಟಿನೆಂಟ್ ರಾಹುಲ್ ದಲಾಲ್ ಬೀಚ್‍ಗೆ ಆಗಮಿಸಿದ್ದು, ಗೆಳೆಯರ ಗೋಳು ಗಮನಿಸಿ ಸಮುದ್ರಕ್ಕೆ ಹಾರಿ ವ್ಯಕ್ತಿಯನ್ನು ರಕ್ಷಿಸಿ ಮಾನವೀಯತೆ ಮೆರೆದಿದ್ದಾರೆ.

    ಈ ಬಗ್ಗೆ ನೌಕಾಪಡೆಯು ತನ್ನ ಫೇಸ್‍ಬುಕ್ ಪೇಜ್‍ನಲ್ಲಿ ಅಧಿಕಾರಿಯ ಶೌರ್ಯದ ಬಗ್ಗೆ ಪೋಸ್ಟ್ ಮಾಡಿತ್ತು. ನಮ್ಮ ನೌಕಾಪಡೆಯ ಅಧಿಕಾರಿ ಲೆಫ್ಟಿನೆಂಟ್ ರಾಹುಲ್ ದಲಾಲ್ ಸಮುದ್ರದಲ್ಲಿ ಕೊಚ್ಚಿ ಹೋಗುತ್ತಿದ್ದ ವ್ಯಕ್ತಿಯನ್ನು ರಕ್ಷಿಸಲು, ತಮ್ಮ ಜೀವವನ್ನು ಪಣಕ್ಕಿಟ್ಟು ಸಮುದ್ರಕ್ಕೆ ಹಾರಿ, ವ್ಯಕ್ತಿಯನ್ನು ಕಾಪಾಡಿದ್ದಾರೆ. ಆತನನ್ನು ತನ್ನ ಹೆಗಲ ಮೇಲೆ ಹಾಕಿಕೊಂಡು ಸುರಕ್ಷಿತವಾಗಿ ದಡ ಸೇರಿಸಿದ್ದಾರೆ. ಆದರೆ ಸುಮಾರು 20 ನಿಮಿಷಗಳ ಕಾಲ ದಿಲೀಪ್ ಉಸಿರಾಡದೇ, ಪ್ರಜ್ಞೆ ತಪ್ಪಿದ್ದರು. ಆಗ ಪ್ರಾಥಮಿಕ ಚಿಕಿತ್ಸೆ ನೀಡುವ ಮೂಲಕ ಜೀವ ಉಳಿಸಿದ್ದಾರೆ ಎಂದು ಬರೆದು ಫೋಟೋ ಹಾಕಿ ಪೋಸ್ಟ್ ಮಾಡಿದೆ.

    https://www.facebook.com/IndianNavy/posts/872951193059742

    ನೌಕಾ ಸಿಬ್ಬಂದಿಯ ಈ ಶೌರ್ಯ, ಮಾನವೀಯತೆ ಗುಣ ಹಾಗೂ ಜನಪರ ಕಾಳಜಿಗೆ ಸಾಮಾಜಿಕ ಜಾಲತಾಣದಲ್ಲಿ ಭಾರಿ ಪ್ರಶಂಸೆ ವ್ಯಕ್ತವಾಗಿದ್ದು, ಲೆಫ್ಟಿನೆಂಟ್ ರಾಹುಲ್ ದಲಾಲ್‍ಗೆ ನೆಟ್ಟಿಗರು ಸಲಾಂ ಹೊಡೆದು ಪೋಸ್ಟಿಗೆ ಮೆಚ್ಚುಗೆ ಸೂಚಿಸಿದ್ದಾರೆ.

  • ಕಾಂಗ್ರೆಸ್ ಚಿಹ್ನೆಯಲ್ಲಿ 6 ಬೆರಳು!- ಕೈ ಪಕ್ಷದ ಕಾಲೆಳೆದ ನೆಟ್ಟಿಗರು

    ಕಾಂಗ್ರೆಸ್ ಚಿಹ್ನೆಯಲ್ಲಿ 6 ಬೆರಳು!- ಕೈ ಪಕ್ಷದ ಕಾಲೆಳೆದ ನೆಟ್ಟಿಗರು

    ತಿರುವನಂತಪುರಂ: ಲೋಕಸಭಾ ಚುನಾವಣೆಯ ಪ್ರಚಾರದ ಅಬ್ಬರ ಎಲ್ಲೆಡೆ ಜೋರಾಗಿದೆ. ಈ ಮದ್ಯ ಕಾಂಗ್ರೆಸ್ ಹಾಗೂ ಬಿಜೆಪಿ ಸೇರಿದಂತೆ ವಿವಿಧ ಪಕ್ಷಗಳು ಲೋಕಸಮರದಲ್ಲಿ ಜಯಗಳಿಸಲು ಕಸರತ್ತು ಮಾಡುತ್ತಿದೆ. ಆದ್ರೆ ಪ್ರಚಾರದ ಭರದಲ್ಲಿ ಕಾರ್ಯಕರ್ತರು ಮಾಡಿರುವ ಎಡವಟ್ಟಿಗೆ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಕಾಂಗ್ರೆಸ್ ಟ್ರೋಲ್ ಆಗುತ್ತಿದೆ.

    ಹೌದು, ಕೇರಳದ ತ್ರಿಶೂರ್ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಟಿ.ಎನ್. ಪ್ರತಾಪನ್ ಅವರ ಪ್ರಚಾರದ ವೇಳೆ ಕಾರ್ಯಕರ್ತರು ಮಾಡಿದ ಎಡವಟ್ಟಿಗೆ ಇಡೀ ಕೈ ಪಾಳೆಯವನ್ನೇ ನೆಟ್ಟಿಗರು ಟ್ರೋಲ್ ಮಾಡುತ್ತಿದ್ದಾರೆ. ಪ್ರಚಾರದ ವೇಳೆ ಪ್ರತಾಪನ್ ಅವರಿಗೆ ಮತ ನೀಡುವಂತೆ ಕೋರಿದ ಕಾರ್ಯಕರ್ತರು, ಗೋಡೆ ಬರಹದಲ್ಲಿ `ಹಸ್ತ’ದ ಚಿಹ್ನೆಗೆ ಆರು ಬೆರಳುಗಳನ್ನು ಬಿಡಿಸಿದ್ದಾರೆ. ಇದಕ್ಕೆ ಗೇಲಿ ಮಾಡುತ್ತಿರುವ ನೆಟ್ಟಿಗರು ಟ್ರೋಲ್‍ಗಳ ಮೇಲೆ ಟ್ರೋಲ್ ಮಾಡಿ ಕಾಂಗ್ರೆಸ್ ಅಭ್ಯರ್ಥಿಯ ಕಾಲೆಳೆಯುತ್ತಿದ್ದಾರೆ.

    ಕೈ ಕಾರ್ಯಕರ್ತರ ಎಡವಟ್ಟಿಗೆ ವಯಾನಾಡು ಲೋಕಸಭಾ ಕ್ಷೇತ್ರದಿಂದ ಸ್ಪರ್ಧೆಗಳಿದಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯನ್ನು ನೆಟ್ಟಿಗರು ಟ್ರೋಲ್ ಮಾಡುತ್ತಿದ್ದಾರೆ. ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸಲು ಕಾಯಕರ್ತರು ಪ್ರಯತ್ನ ಮೀರಿ ಕೆಲಸ ಮಾಡಬೇಕು ಎಂದು ಕರೆ ನೀಡಿದ್ದರು. ಅದಕ್ಕೆ ಪಾಪ ಐದಕ್ಕೆ ಇನ್ನೊಂದು ಬೆರಳು ಜೋಡಿಸಿ ತಮ್ಮ ಪ್ರಯತ್ನ ಮೆರೆದಿದ್ದಾರೆ ಅಂತ ಬರೆದು ಕಾಲೆಳೆಯುತ್ತಿದ್ದಾರೆ.

  • ಅಭಿನಂದನ್ ವಾಪಾಸ್ ಬರಲು ಸಿಧು ಕಾರಣ ಅಂದ್ರು ಕೇರಳ ಮಾಜಿ ಸಿಎಂ!

    ಅಭಿನಂದನ್ ವಾಪಾಸ್ ಬರಲು ಸಿಧು ಕಾರಣ ಅಂದ್ರು ಕೇರಳ ಮಾಜಿ ಸಿಎಂ!

    ತಿರುವನಂತಪುರಂ: ಪಾಕಿಸ್ತಾನ ಸೇನೆ ವಶದಲ್ಲಿದ್ದ ಭಾರತೀಯ ವಾಯುಸೇನೆಯ ವಿಂಗ್ ಕಮಾಂಡರ್ ಅಭಿನಂದನ್ ಶುಕ್ರವಾರ ಭಾರತಕ್ಕೆ ವಾಪಾಸ್ಸಾಗಿದ್ದಾರೆ. ಇದಕ್ಕೆ ಕಾಂಗ್ರೆಸ್‍ನ ಪಂಜಾಬ್ ಸಚಿವ ನವಜೋತ್ ಸಿಂಗ್ ಸಿಧು ಕಾರಣ ಎಂದು ಕೇರಳ ಮಾಜಿ ಸಿಎಂ ಒಮ್ಮನ್ ಚಾಂಡಿ ಟ್ವೀಟ್ ಮಾಡಿದ್ದಾರೆ.

    ಕೇಂದ್ರ ಸರ್ಕಾರ ಹಾಗೂ ಭಾರತೀಯ ಸೇನೆ ಶ್ರಮಪಟ್ಟು ಪಾಕಿಸ್ತಾನದಿಂದ ವಿಂಗ್ ಕಮಾಂಡರ್ ಅಭಿನಂದನ್ ಅವರನ್ನ ಭಾರತಕ್ಕೆ ವಾಪಾಸ್ ಕರೆಸಿಕೊಂಡಿದೆ. ಆದರೆ ಕೇರಳ ಸಿಎಂ ಮಾತ್ರ ಅಭಿನಂದನ್ ಬಿಡುಗಡೆಯಾಗಲು ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಮತ್ತು ಕಾಂಗ್ರೆಸ್‍ನ ಪಂಜಾಬ್ ಸಚಿವ ನವಜೋತ್ ಸಿಂಗ್ ಸಿಧು ಕಾರಣ ಎಂದು ಟ್ವೀಟ್ ಮಾಡಿದ್ದು, ಈ ಟ್ವೀಟ್ ರಾಜಕೀಯ ಪಾಳಯದಲ್ಲಿ ಬಿರುಗಾಳಿ ಎಬ್ಬಿಸುವ ಎಲ್ಲಾ ಲಕ್ಷಣಗಳು ಕಾಣುತ್ತಿದೆ.

    https://twitter.com/Oommen_Chandy/status/1101461843170680832

    ಟ್ವೀಟ್‍ನಲ್ಲಿ ಏನಿದೆ?
    #WelcomeHomeAbhinandan, ನವಜೋತ್ ಸಿಂಗ್ ಸಿಧು ಅವರ ಶ್ರಮ ಹಾಗೂ ಇಮ್ರಾನ್ ಖಾನ್ ಅವರ ಬೆಂಬಲಕ್ಕೆ ಧನ್ಯವಾದ. ಈ ನಡೆ ಒಳ್ಳೆಯದು ಇದರಿಂದ ಎರಡು ರಾಷ್ಟ್ರಗಳ ಗಡಿಯಲ್ಲಿ ಶಾಂತಿ ನೆಲೆಸುತ್ತದೆ ಎಂದು ಭಾವಿಸಿದ್ದೇನೆ ಎಂದು ಸಿಧು ಹಾಗೂ ಪಾಕ್ ಸಿಎಂ ಅವರನ್ನ ಟ್ಯಾಗ್ ಮಾಡಿ ಒಮ್ಮನ್ ಚಾಂಡಿ ಟ್ವೀಟ್ ಮಾಡಿದ್ದಾರೆ.

    ಒಮ್ಮನ್ ಚಾಂಡಿ ಅವರು ಮಾಡಿರುವ ಟ್ವೀಟ್ ಅನ್ನು ರೀಟ್ವೀಟ್ ಮಾಡುವ ಮೂಲಕ ಕಾಂಗ್ರೆಸ್‍ನ ಸಾಮಾಜಿಕ ಜಾಲತಾಣ ಮುಖ್ಯಸ್ಥೆ ರಮ್ಯಾ ಅವರು ಕೂಡ ಈ ಮಾತನ್ನು ಒಪ್ಪಿದ್ದಾರೆ.

    ಅಲ್ಲದೆ ಒಮ್ಮನ್ ಚಾಂಡಿ ಅವರ ಟ್ವೀಟ್‍ಗೆ ಪ್ರತಿಕ್ರಿಯಿಸಿರುವ ನವಜೋತ್ ಸಿಂಗ್ ಸಿಧು ಅವರು, ನಿಮ್ಮ ಮಾತುಗಳು ನನಗೆ ಸತ್ಯದ ದಾರಿಯಲ್ಲಿ ನಡೆಯಲು ಶಕ್ತಿ ಮತ್ತು ಧೈರ್ಯವನ್ನು ನೀಡಿವೆ, ನಾನು ನನ್ನ ಆದರ್ಶದೊಂದಿಗೆ ಎಂದೂ ರಾಜಿ ಮಾಡಿಕೊಳ್ಳುವುದಿಲ್ಲ. ನೈತಿಕ ಮೌಲ್ಯಗಳನ್ನು ಮರೆಯುವುದಿಲ್ಲ ಎಂದು ರೀ-ಟ್ವೀಟ್ ಮಾಡಿ ಧನ್ಯವಾದ ತಿಳಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಯೋಧನ ಪಾರ್ಥಿವ ಶರೀರದ ಮುಂದೆ ಸೆಲ್ಫಿ ಕ್ಲಿಕ್ಕಿಸಿಕೊಂಡ ಕೇಂದ್ರ ಸಚಿವ

    ಯೋಧನ ಪಾರ್ಥಿವ ಶರೀರದ ಮುಂದೆ ಸೆಲ್ಫಿ ಕ್ಲಿಕ್ಕಿಸಿಕೊಂಡ ಕೇಂದ್ರ ಸಚಿವ

    ತಿರುವನಂತಪುರಂ: ಜಮ್ಮು ಮತ್ತು ಕಾಶ್ಮೀರದ ಪುಲ್ವಾಮದಲ್ಲಿ ನಡೆದ ಉಗ್ರರ ದಾಳಿಯಲ್ಲಿ ಹುತಾತ್ಮರಾದ ಸಿಆರ್‌ಪಿಎಫ್ ಯೋಧ ವಸಂತ್ ಕುಮಾರ್ ಅವರ ಮೃತದೇಹದ ಮುಂದೆ ಸೆಲ್ಫಿ ಕ್ಲಿಕ್ಕಿಸಿ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದಕ್ಕೆ ಕೇಂದ್ರ ಸಚಿವ ಅಲ್ಫೋನ್ಸ್ ಕಣ್ಣಂತಾನಂ ಅವರ ವಿರುದ್ಧ ಆಕ್ರೋಶ ವ್ಯಕ್ತವಾಗುತ್ತಿದೆ.

    ಪುಲ್ವಾಮ ಉಗ್ರರ ದಾಳಿಯಲ್ಲಿ ಹುತಾತ್ಮರಾದ ಸಿಆರ್‌ಪಿಎಫ್ ಯೋಧ ವಸಂತ್ ಕುಮಾರ್ ಅವರ ಅಂತ್ಯಸಂಸ್ಕಾರವನ್ನು ಶನಿವಾರ ರಾತ್ರಿ ಅವರ ಹುಟ್ಟೂರಾದ ಕೇರಳದ ವೈಯನಾಡುವಿನ ತ್ರಿಕ್ಕೈಪೆಟ್ಟ ಗ್ರಾಮದಲ್ಲಿ ನಡೆಸಲಾಯಿತು. ಈ ವೇಳೆ ವೀರ ಯೋಧನ ಅಂತಿಮ ದರ್ಶನ ಪಡೆಯಲು ಬಂದಿದ್ದ ಕೇಂದ್ರ ಸಚಿವ ಅಲ್ಫೋನ್ಸ್ ಕಣ್ಣಂತಾನಂ ಅವರು ಯೋಧನ ಮೃತದೇಹದ ಮುಂದೆ ಸೆಲ್ಫಿ ತೆಗೆದುಕೊಂಡಿದ್ದಾರೆ. ಅಲ್ಲದೆ ಆ ಸೆಲ್ಫಿಯನ್ನು ತಮ್ಮ ಫೇಸ್‍ಬುಕ್ ಹಾಗೂ ಟ್ವಿಟ್ಟರ್ ನಲ್ಲಿ ಪೋಸ್ಟ್ ಮಾಡಿಕೊಂಡಿದ್ದಾರೆ.

    https://twitter.com/ShanShakir1/status/1096879068174315525?ref_src=twsrc%5Etfw%7Ctwcamp%5Etweetembed%7Ctwterm%5E1096879068174315525&ref_url=https%3A%2F%2Fwww.thenewsminute.com%2Farticle%2Fwhat-shame-union-mos-alphons-lambasted-posting-selfie-martyr-s-coffin-96872

    ಹುತಾತ್ಮ ವಸಂತ್ ಕುಮಾರ್ ಗೆ ನಮನ, ನಿಮ್ಮಂತ ವೀರರ ತ್ಯಾಗ ಬಿಲಿದಾನದಿಂದಾಗಿ ನಾವು ಇಲ್ಲಿ ಸುಖವಾಗಿ ಬದುಕಲು ಸಾಧ್ಯವಾಗಿರುವುದು ಎಂದು ಬರೆದು ಸೆಲ್ಫಿ ಫೋಟೋವನ್ನು ಫೇಸ್‍ಬುಕ್ ಸ್ಟೇಟಸ್‍ಗೆ ಹಾಕಿದ್ದರು. ಇದನ್ನ ಕಂಡ ನೆಟ್ಟಿಗರು ಸಾವಿನ ಮನೆಯಲ್ಲೂ ನಿಮ್ಮ ರಾಜಕೀಯ ಬುದ್ದಿ ತೋರಿಸುತ್ತೀರ. ನಿಮಗೆ ನಾಚಿಕೆಯಾಗಬೇಕು ಅಂತ ಕಮೆಂಟ್ ಮಾಡಿದ್ದಾರೆ. ಅಲ್ಲದೆ ಈ ರೀತಿ ಸಾವಿನ ಮನೆಯಲ್ಲಿ ಸೆಲ್ಫಿ ಕ್ಲಿಕ್ಕಿಸಿದಲ್ಲದೆ ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದಕ್ಕೆ ನೆಟ್ಟಿಗರು ಕಣ್ಣಂತಾನಂ ಮೇಲೆ ಗರಂ ಆಗಿದ್ದಾರೆ. ಹಾಗೆಯೇ ಅವರ ಪೋಸ್ಟ್ ಗೆ ಬೈದು ಕಮೆಂಟ್‍ಗಳ ಸುರಿಮಳೆಯನ್ನೇ ಹರಿಸಿ ಕೇಂದ್ರ ಸಚಿವರ ಬೆವರಿಳಿಸಿದ್ದಾರೆ.

    https://twitter.com/balusunil2/status/1096808758309675009?ref_src=twsrc%5Etfw%7Ctwcamp%5Etweetembed%7Ctwterm%5E1096808758309675009&ref_url=https%3A%2F%2Fwww.thenewsminute.com%2Farticle%2Fwhat-shame-union-mos-alphons-lambasted-posting-selfie-martyr-s-coffin-96872

    ಸಾಮಾಜಿಕ ಜಾಲತಾಣಗಳಲ್ಲಿ ಕಣ್ಣಂತಾನಂ ಅವರ ಸೆಲ್ಫಿ ಪೋಸ್ಟ್ ಗೆ ವಿರೋಧ ವ್ಯಕ್ತವಾಗುತ್ತಿದ್ದಂತೆ ಅವರು ಪೋಸ್ಟ್ ಅನ್ನು ಡಿಲೀಟ್ ಮಾಡಿದ್ದಾರೆ. ಆದರೂ ಕೂಡ ಸಿಟ್ಟಿಗೆದ್ದಿರುವ ನೆಟ್ಟಿಗರು ಮಾತ್ರ ಕಣ್ಣಂತಾನಂ ಅವರ ಇತರೇ ಪೋಸ್ಟ್ ಗಳಿಗೂ ಕಮೆಂಟ್ ಮಾಡಿ ಬೈಯ್ಯುತ್ತಿದ್ದಾರೆ.

    https://twitter.com/hi_paresh/status/1096826435988262913?ref_src=twsrc%5Etfw%7Ctwcamp%5Etweetembed%7Ctwterm%5E1096826435988262913&ref_url=https%3A%2F%2Fwww.thenewsminute.com%2Farticle%2Fwhat-shame-union-mos-alphons-lambasted-posting-selfie-martyr-s-coffin-96872

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಮತ್ತೆ ಅಯ್ಯಪ್ಪನ ದರ್ಶನಕ್ಕೆ ಬಂದ್ರು ಇಬ್ಬರು ಮಹಿಳೆಯರು- ಬೆಳ್ಳಂಬೆಳಗ್ಗೆ ಪ್ರತಿಭಟನೆ ಶುರು

    ಮತ್ತೆ ಅಯ್ಯಪ್ಪನ ದರ್ಶನಕ್ಕೆ ಬಂದ್ರು ಇಬ್ಬರು ಮಹಿಳೆಯರು- ಬೆಳ್ಳಂಬೆಳಗ್ಗೆ ಪ್ರತಿಭಟನೆ ಶುರು

    ತಿರುವನಂತಪುರ: ಇಂದು ಬೆಳ್ಳಂಬೆಳಗ್ಗೆ ಮತ್ತೆ ಶಬರಿಮಲೆ ಪ್ರವೇಶಿಸಲು ಮುಂದಾದ ಇಬ್ಬರು ಮಹಿಳೆಯರನ್ನು ಭಕ್ತಾಧಿಗಳು ತಡೆದು ಶಬರಿಮಲೆ ದೇವಾಲಯದ ಬಳಿ ಭಾರಿ ಪ್ರತಿಭಟನೆ ನಡೆಸಿದ್ದಾರೆ.

    ಬೆಳಗ್ಗೆ ಪಂಪಾ ಬೇಸ್ ಕ್ಯಾಂಪ್ ದಾಟಿಕೊಂಡು ಸಾಗುತ್ತಿದ್ದ ಮಹಿಳೆಯರನ್ನ ಪ್ರತಿಭಟನಾಕಾರರು ಸುತ್ತುವರೆದು, ಅಯ್ಯಪ್ಪ ದೇವಾಲಯಕ್ಕೆ ಪ್ರವೇಶಿಸದಂತೆ ತಡೆದಿದ್ದಾರೆ. ಒಟ್ಟು 9 ಮಹಿಳೆಯರ ಗುಂಪು ಶಬರಿಮಲೆ ದೇವಾಲಯ ಪ್ರವೇಶಿಸಲು ಬಂದಿದ್ದರು. ಇವರಲ್ಲಿ 30 ವರ್ಷ ವಯಸ್ಸಿನ ಈ ಇಬ್ಬರು ಮಹಿಳೆಯರು ಕೂಡ ಗುಂಪಿನಲ್ಲಿದ್ದರು ಎಂದು ವರದಿಯಾಗಿದೆ.

    ಮೊದಲು ಈ ಇಬ್ಬರು ಮಹಿಳೆಯರನ್ನು 6-7 ಪ್ರತಿಭಟನಾಕಾರರು ಬೇಸ್ ಕ್ಯಾಂಪ್ ಬಳಿ ತಡೆದಿದ್ದಾರೆ. ಬಳಿಕ ಈ ವಿಷಯ ಎಲ್ಲೆಡೆ ಹರಡುತ್ತಿದ್ದಂತೆ ಸುಮಾರು 2 ಸಾವಿರ ಪ್ರತಿಭಟನಾಕಾರರು ಶಬರಿಮಲೆ ಬೆಟ್ಟದ ಮೇಲೆ ಒಟ್ಟಾಗಿ ಪ್ರತಿಭಟನೆ ಮಾಡಿ ಆಕ್ರೋಶ ಹೊರಹಾಕಿದ್ದಾರೆ. ಅಲ್ಲದೆ ಅವರನ್ನು ತಡೆಯಲು ಬಂದ ಪೊಲೀಸರ ಬಳಿಯೂ ಪ್ರತಿಭಟನಾಕಾರರು ಜಗಳ ಮಾಡಿದ್ದಾರೆ. ಸದ್ಯ ಇಬ್ಬರು ಮಹಿಳೆಯರಿಗೆ ಪೊಲೀಸರು ಭದ್ರತೆ ಒದಗಿಸಿ ಪೊಲೀಸ್ ವಾಹನದಲ್ಲಿಯೇ ಸುರಕ್ಷಿತ ಸ್ಥಳಕ್ಕೆ ಕರೆದುಕೊಂಡು ಹೋಗಿದ್ದಾರೆ.

    ಈ ಕುರಿತು ಕೇರಳ ಮೂಲದ ಓರ್ವ ಮಹಿಳೆ ಮಾತನಾಡಿ, ನನಗೆ ಹಲವರು ಜೀವಬೆದರಿಕೆಗಳನ್ನು ಹಾಕಿದ್ದಾರೆ. ಅವರು ನನ್ನನ್ನು ಭಯಪಡಿಸಿದರು ನಾನು ಖಂಡಿತ ವಾಪಸ್ ಹೋಗುವುದಿಲ್ಲ. ಅಲ್ಲಿ ಅಯ್ಯಪ್ಪ ಸ್ವಾಮಿ ಇದ್ದಾನೆ. ಮಹಿಳೆಯರು ದೇವಾಲಯ ಪ್ರವೇಶಿಸಲು ಅಯ್ಯಪ್ಪನಿಗೇ ಆಕ್ಷೇಪವಿಲ್ಲ. ಆದ್ರೆ ಈ ಜನರು ಯಾಕೆ ಮಹಿಳೆಯರ ವಿರುದ್ಧ ಪ್ರತಿಭಟನೆ ಮಾಡ್ತಿದ್ದಾರೆ ಎಂದು ಪ್ರಶ್ನಿಸಿದ್ದಾರೆ.

    ಅಷ್ಟೇ ಅಲ್ಲದೆ ಕಳೆದ ತಿಂಗಳು ಭಾರಿ ಸುದ್ದಿಯಾಗಿದ್ದ ಶಬರಿಮಲೆ ಪ್ರವೇಶಿಸಿದ ಇಬ್ಬರು ಮಹಿಳೆಯರ ಪೈಕಿ ಒಬ್ಬರಾದ ಕನಕದುರ್ಗ ಎಂಬ ಮಹಿಳೆ ಎರಡು ವಾರದ ಬಳಿಕ ಮನೆಗೆ ವಾಪಾಸ್ ತೆರಳಿದ್ದರು. ಸೋಮವಾರದಂದು ಮನೆಗೆ ತೆರೆಳಿದ್ದ ಕನಕದುರ್ಗ ಅವರು ಶಬರಿಮಲೆ ಪ್ರವೇಶಿಸಿದಕ್ಕೆ ಅವರ ಗಂಡನ ಮನೆಯವರು ಆಕೆಯ ಮೇಲೆ ಹಲ್ಲೆ ಮಾಡಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ದೇವರ ನಾಡಲ್ಲಿ ಭೀಕರ ಜಲ ಪ್ರವಾಹ – 30 ಸಾವು, ರಕ್ಷಣಾ ಕಾರ್ಯಾಚರಣೆ ದುಸ್ತರ

    ದೇವರ ನಾಡಲ್ಲಿ ಭೀಕರ ಜಲ ಪ್ರವಾಹ – 30 ಸಾವು, ರಕ್ಷಣಾ ಕಾರ್ಯಾಚರಣೆ ದುಸ್ತರ

    ತಿರುವನಂತಪುರಂ: ಕೇರಳದಲ್ಲಿ ಸುರಿಯುತ್ತಿರುವ ಮರಣ ಮಳೆಗೆ ಬಲಿಯಾದವರ ಸಂಖ್ಯೆ 30ಕ್ಕೆ ಏರಿಕೆಯಾಗಿದೆ. ಅಲಲ್ಲಿ ಭೂಕುಸಿತ, ರಸ್ತೆಗಳೇ ಕೊಚ್ಚಿ ಹೋಗಿರೋದ್ರಿಂದ ರಕ್ಷಣಾ ಕಾರ್ಯಾಚರಣೆ ದುಸ್ತರವಾಗಿದೆ.

    ಇಡುಕ್ಕಿ ಡ್ಯಾಂನಿಂದ ನೀರು ಹರಿದು ಹಲವು ಗ್ರಾಮಗಳು ಪ್ರವಾಹದ ಸುಳಿಯಲ್ಲಿ ಸಿಲುಕಿವೆ. ಸೇನೆಯ 8 ತುಕಡಿಗಳು ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿವೆ. ಮಿಲಿಟರಿ ಎಂಜಿನಿಯರಿಂಗ್ ಸರ್ವಿಸಸ್‍ನಿಂದ ಮೂರು ತುಕಡಿಗಳನ್ನು, ಬೆಂಗಳೂರಿನಿಂದ ಎರಡು, ಹೈದರಾಬಾದ್‍ನಿಂದ ಒಂದು ತುಕಡಿಯನ್ನು ಕೇರಳಕ್ಕೆ ಕಳುಹಿಸಲಾಗಿದೆ. ಈ ನಡುವೆ, ವಯನಾಡ್ ಜಿಲ್ಲೆಯ ಪನಮರಮ್‍ನಲ್ಲಿ ಪ್ರವಾಹದ ನಡುವೆ ಸಿಕ್ಕಿಹಾಕಿಕೊಂಡ ಸುಮಾರು 50 ಮಂದಿಯನ್ನು ಭಾರತೀಯ ನೌಕಾಪಡೆ ರಕ್ಷಿಸಿದೆ. ಇದನ್ನೂ ಓದಿ: ಕೇರಳದಲ್ಲಿ ವರುಣನ ಆರ್ಭಟ – ಮುನ್ನಾರ್ ರೆಸಾರ್ಟ್ ನಲ್ಲಿ ಸಿಲುಕಿದ 60 ಪ್ರವಾಸಿಗರು

    ಪತ್ತನಂತಿಟ್ಟ ಜಿಲ್ಲೆಯ ಕಕ್ಕಿ ಅಣೆಕಟ್ಟೆ ಹಾಗೂ ಚೆರುತ್ತೋಣಿ ಅಣೆಕಟ್ಟೆಯಿಂದ ಹೊರಬರುವ ಪ್ರವಾಹ ಅಧಿಕವಾಗಿರುವುದರಿಂದ ಕೊಚ್ಚಿಯ ವೆಲ್ಲಿಂಗ್ಟನ್ ದ್ವೀಪ ಮುಳುಗಡೆಯಾಗುವ ಭೀತಿಯಿದೆ. ಇದನ್ನೂ ಓದಿ: ಕೇರಳ ಮಳೆಗೆ ಮೈಸೂರು ಭಾಗ ತತ್ತರ- ಇತ್ತ ದಕ್ಷಿಣ ಕನ್ನಡದಲ್ಲಿ ಶಾಲಾ ಕಾಲೇಜಿಗೆ ರಜಾ

    ಒಟ್ಟಿನಲ್ಲಿ ಕಂಡು ಕೇಳರಿಯದ ಭಾರೀ ಮಳೆಗೆ ದೇವರನಾಡು ಕೇರಳ ತತ್ತರವಾಗಿದ್ದು, 2 ದಿನಗಳ ಹಿಂದೆ ಕೇರಳದ ಮುನ್ನಾರ್‍ಗೆ ಪ್ರವಾಸಕ್ಕೆ ಬಂದಿದ್ದ 6 ಮಂದಿ ಮಂಡ್ಯ ಪ್ರವಾಸಿಗರು ಸಿಲುಕಿಕೊಂಡಿದ್ದಾರೆ. ರಸ್ತೆ ಜಲಾವೃತವಾಗಿ ದಾರಿ ಕಾಣದೆ ಸಂಕಷ್ಟಕ್ಕೆ ಒಳಗಾಗಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ: www.instagram.com/publictvnews