Tag: Tirupati Thimmappa

  • ಮೊಣಕಾಲಿನಿಂದ ತಿರುಪತಿ ತಿಮ್ಮಪ್ಪನ ಮೆಟ್ಟಿಲೇರಿದ ಜಾಹ್ನವಿ ಕಪೂರ್

    ಮೊಣಕಾಲಿನಿಂದ ತಿರುಪತಿ ತಿಮ್ಮಪ್ಪನ ಮೆಟ್ಟಿಲೇರಿದ ಜಾಹ್ನವಿ ಕಪೂರ್

    ತಿರುಪತಿ ತಿಮ್ಮಪ್ಪನ (Tirupati Thimmappa) ದರ್ಶನವನ್ನು ಕಠಿಣ ವ್ರತ ಮಾಡಿ ಪಡೆದುಕೊಂಡಿದ್ದಾರೆ ಬಾಲಿವುಡ್ ನಟಿ ಜಾಹ್ನವಿ ಕಪೂರ್. ಮೊಣಕಾಲಿನಿಂದಲೇ ಮೆಟ್ಟಿಲುಗಳನ್ನು ಏರಿ ತಿರುಪತಿ ತಿಮ್ಮಪ್ಪನ ದರ್ಶನ ಪಡೆದಿದ್ದಾರೆ. ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಇಷ್ಟೊಂದು ಭಕ್ತಿ ಹೊಂದಿರುವ ನಟಿಗೆ ಒಳ್ಳೆಯದು ಆಗಲಿ ಎಂದು ಅಭಿಮಾನಿಗಳು ಹಾರೈಸುತ್ತಿದ್ದಾರೆ.

    ಈ ನಡುವೆ ಜಾಹ್ನವಿಗೆ ಸಾಕಷ್ಟು ಆಫರ್ಸ್ ಬರುತ್ತಿವೆ. ನಿನ್ನೆಯಷ್ಟೇ ರಾಮ್ ಚರಣ್ (Ram Charan) ಮತ್ತು ಜಾಹ್ನವಿ ಕಪೂರ್ (Jahnavi Kapoor) ಕಾಂಬಿನೇಷನ್ ನ ಹೊಸ ಚಿತ್ರಕ್ಕೆ ಚಾಲನೆ ಸಿಕ್ಕಿದೆ. ಈ ಮುಹೂರ್ತ ಸಮಾರಂಭಕ್ಕೆ ರಾಮ್ ಚರಣ್ ತಂದೆ ಚಿರಂಜೀವಿ (Chiranjeevi), ಜಾಹ್ನವಿ ಕಪೂರ್ ತಂದೆ ಬೋನಿ ಕಪೂರ್ (Boney Kapoor) ಸಾಕ್ಷಿಯಾಗಿದ್ದು ವಿಶೇಷವಾಗಿತ್ತು. ತಮ್ಮ ಮಕ್ಕಳಿಗೆ ಈ ಸಿನಿಮಾ ಸಾಕಷ್ಟು ಗೆಲುವು ತಂದು ಕೊಡಲಿ ಎಂದು ಇಬ್ಬರೂ ತಮ್ಮ ತಮ್ಮ ಮಕ್ಕಳಿಗೆ ಹಾರೈಸಿದ್ದಾರೆ.

    ತ್ರಿಬಲ್ ಆರ್ ಸಿನಿಮಾದ ಯಶಸ್ಸಿನ ಬಳಿಕ ರಾಮ್ ಚರಣ್ ಗ್ಲೋಬಲ್ ಸ್ಟಾರ್ ಆಗಿ ಹೊರಹೊಮ್ಮಿದ್ದಾರೆ. ಸದ್ಯ ಚೆರ್ರಿ ಶಂಕರ್ ನಿರ್ದೇಶನದ ಗೇಮ್ ಚೇಂಜರ್ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಪ್ರಾಜೆಕ್ಟ್ ನಲ್ಲಿ ಬ್ಯುಸಿಯಾಗಿರುವ ರಾಮ್ ಚರಣ್ ಬುಚ್ಚಿ ಬಾಬು ಜೊತೆ ಕೈ ಜೋಡಿಸಿದ್ದಾರೆ. ಈ ಚಿತ್ರಕ್ಕೆ RC 16 ಎಂದು ಟೈಟಲ್ ಇಡಲಾಗಿದೆ. ಈ ಹೊಸ ಸಿನಿಮಾದ ಮುಹೂರ್ತ ಸಮಾರಂಭ  ನಿನ್ನೆ ಹೈದ್ರಾಬಾದ್ ನಲ್ಲಿ ನೆರವೇರಿದೆ.

     

    ನಿರ್ಮಾಪಕ ಅಲ್ಲು ಅರವಿಂದ್ ಅವರು ಬೌಂಡ್ ಸ್ಕ್ರಿಪ್ಟ್ ಅನ್ನು ನಿರ್ದೇಶಕ ಬುಚ್ಚಿ ಬಾಬು ಸನಾ ಅವರಿಗೆ ಹಸ್ತಾಂತರಿಸಿದರು. ರಾಮ್ ಚರಣ್ ಅವರ ಗೇಮ್ ಚೇಂಜರ್ ಚಿತ್ರವನ್ನು ನಿರ್ದೇಶಿಸುತ್ತಿರುವ ಸ್ಟಾರ್ ನಿರ್ದೇಶಕ ಶಂಕರ್ ಅವರು ಬೋನಿ ಕಪೂರ್ ಮತ್ತು ಅನ್ಮೋಲ್ ಶರ್ಮಾ ಕ್ಯಾಮೆರಾ ಚಾಲನೆ ನೀಡಿದರು.  ಮೆಗಾ ಸ್ಟಾರ್ ಚಿರಂಜೀವಿ ಕ್ಲಾಪ್ ಬೋರ್ಡ್ ಮಾಡಿ ಇಡೀ ತಂಡಕ್ಕೆ ಶುಭ ಹಾರೈಸಿದರು.

  • ತಿರುಪತಿ ತಿಮ್ಮಪ್ಪನ ದರ್ಶನ ಪಡೆದ ನಟ ಮೋಹನ್ ಲಾಲ್

    ತಿರುಪತಿ ತಿಮ್ಮಪ್ಪನ ದರ್ಶನ ಪಡೆದ ನಟ ಮೋಹನ್ ಲಾಲ್

    ಲಯಾಳಂ ಚಿತ್ರೋದ್ಯಮದ ಹೆಸರಾಂತ ನಟ ಮೋಹನ್ ಲಾಲ್ (Mohan Lal) ಇಂದು ತಿರುಪತಿ ತಿಮ್ಮಪ್ಪನ (Tirupati Thimmappa) ಸನ್ನಿಧಾನಕ್ಕೆ ಆಗಮಿಸಿದ್ದರು. ತಮ್ಮ ಟೀಮ್ ಜೊತೆ ಬಂದಿದ್ದ ಮೋಹನ್ ಲಾಲ್ ಪೂಜೆ ಸಲ್ಲಿಸಿ ತಿಮ್ಮಪ್ಪನ ದರ್ಶನ ಪಡೆದಿದ್ದಾರೆ. ಕೆಲ ಹೊತ್ತು ದೇವಸ್ಥಾನದ ಆವರಣದಲ್ಲೇ ನಟ ಇದ್ದರು. ನಂತರ ಅಭಿಮಾನಿಗಳ ಜೊತೆ ಸಮಯ ಕಳೆದರು.

    ಈ ನಡುವೆ ಮೋಹನ್ ಲಾಲ್ ಸದ್ಯ ವೃಷಭ ಸಿನಿಮಾದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಇದೊಂದು ಬೃಹತ್ ಸಾಹಸಮಯ ಚಿತ್ರವಾಗಿದ್ದು, ಮೈ ಜುಂ ಎನಿಸುವಂತಹ ಸಾಹಸ ಮತ್ತು ರೋಚಕ ದೃಶ್ಯಗಳು ಇವೆ. ಮೋಹನ್ ಲಾಲ್ ಜೊತೆಗೆ ರೋಶನ್ ಮೇಕಾ, ಶನಾಯ ಕಪೂರ್, ಝಾರಾ ಖಾನ್, ಶ್ರೀಕಾಂತ್ ಮೇಕಾ ಮುಂತಾದವರು ನಟಿಸುತ್ತಿದ್ದಾರೆ. ಕನ್ನಡದ ರಾಗಿಣಿ ದ್ವಿವೇದಿ ಸಹ ಈ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವುದು ವಿಶೇಷ.

     

    ‘ಕಾಂದಹಾರ್’ ನಂತರ ಇದೇ ಎರಡನೆಯ ಬಾರಿಗೆ ಮೋಹನ್ ಲಾಲ್ ಜೊತೆಗೆ ರಾಗಿಣಿ (Ragini Dwivedi) ನಟಿಸುತ್ತಿದ್ದಾರೆ. ಕನ್ನಡದಲ್ಲಿ ಸಾಕಷ್ಟು ಯಶಸ್ವಿ ಚಿತ್ರಗಳನ್ನು ನೀಡಿರುವ ನಿರ್ದೇಶಕ ನಂದಕಿಶೋರ್ (Nandakishor) ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ.

  • ‘ಕಾಟೇರ’ ಟೀಮ್ ಟೆಂಪಲ್ ರನ್ : ತಿರುಪತಿಯಲ್ಲಿ ದರ್ಶನ್

    ‘ಕಾಟೇರ’ ಟೀಮ್ ಟೆಂಪಲ್ ರನ್ : ತಿರುಪತಿಯಲ್ಲಿ ದರ್ಶನ್

    ಕಾಟೇರ (Katera) ಸಿನಿಮಾದ ಸಕ್ಸಸ್ ಬೆನ್ನಲ್ಲೇ ಕಾಟೇರ ಟೀಮ್ ದೇವಸ್ಥಾನಗಳಿಗೆ ಭೇಟಿ ನೀಡಿ, ಭಗವಂತನ ದರ್ಶನ ಮಾಡುತ್ತಿದೆ. ಮೊನ್ನೆಯಷ್ಟೇ ನಿರ್ದೇಶಕ ತರುಣ್ ಸುಧೀರ್ ಕೊರಗಜ್ಜನ ದೇವಸ್ಥಾನಕ್ಕೆ ಮತ್ತು ಧರ್ಮಸ್ಥಳದ ಮಂಜುನಾಥ ಟೆಂಪಲ್ ಗೆ ಭೇಟಿ ನೀಡಿ, ದೇವರ ದರ್ಶನ ಪಡೆದುಕೊಂಡಿದ್ದರು. ಇದೀಗ ದರ್ಶನ್ (Darshan) ಕೂಡ ತಿರುಪತಿಯಲ್ಲಿ (Tirupati Thimmappa) ಕಾಣಿಸಿಕೊಂಡಿದ್ದಾರೆ.

    ಮುಂದಿನ ವಾರದ ದರ್ಶನ್ ಅವರ ಹುಟ್ಟು ಹಬ್ಬ. ಅದಕ್ಕೂ ಮುನ್ನ ಅವರು ತಿರುಪತಿಗೆ ತೆರಳಿ ತಿಮ್ಮಪ್ಪನ ದರ್ಶನ ಪಡೆದಿದ್ದಾರೆ. ಹುಟ್ಟು ಹಬ್ಬ ಮತ್ತು ಕಾಟೇರ ಸಿನಿಮಾದ ಸಕ್ಸಸ್ ಪ್ರಯುಕ್ತವಾಗಿ ದೇವಸ್ಥಾನಕ್ಕೆ ತೆರಳಿದ್ದಾರೆ ಎನ್ನುವ ಮಾಹಿತಿ ಇದೆ.

    ಈಗಾಗಲೇ ಹುಟ್ಟು ಹಬ್ಬಕ್ಕೆ ತಮ್ಮ ಅಭಿಮಾನಿಗಳಿಗೆ ಸಂದೇಶವೊಂದನ್ನು ರವಾಣಿಸಿದ್ದಾರೆ ದರ್ಶನ್. ಕೇಕ್, ಹಾರು, ತುರಾಯಿ ಬದಲು ದವಸ ಧಾನ್ಯಗಳನ್ನು ನೀಡುವಂತೆ ಕೇಳಿದ್ದಾರೆ. ಅನಾಥಾಶ್ರಮಗಳಿಗೆ ಅಕ್ಕಿ, ಬೆಳೆ, ಆಹಾರ ಪದಾರ್ಥಗಳನ್ನು ಕೊಡುವಂತೆ ಮನವಿ ಮಾಡಿಕೊಂಡಿದ್ದಾರೆ.

     

    ಪ್ರತಿ ಬಾರಿಯೂ ತಮ್ಮ ಅಭಿಮಾನಿಗಳಿಗೆ ಈ ಸಂದೇಶವನ್ನು ಕೊಡುತ್ತಾ ಬಂದಿದೆ. ನೆಚ್ಚಿನ ನಟನ ಮಾತಿನಂತೆ ಅಭಿಮಾನಿಗಳು ಕೂಡ ಆ ಕೆಲಸವನ್ನು ಮಾಡುತ್ತಾ ಬಂದು, ಮಾದರಿಯಾಗಿದ್ದಾರೆ.

  • ಪತ್ನಿ, ಮಗಳ ಜೊತೆ ತಿರುಪತಿ ತಿಮ್ಮಪ್ಪನ ದರ್ಶನ ಪಡೆದ ನಟ ಪ್ರಭುದೇವ್

    ಪತ್ನಿ, ಮಗಳ ಜೊತೆ ತಿರುಪತಿ ತಿಮ್ಮಪ್ಪನ ದರ್ಶನ ಪಡೆದ ನಟ ಪ್ರಭುದೇವ್

    ಟ, ನಿರ್ದೇಶಕ ಪ್ರಭುದೇವ್ (Prabhudev) ನಿನ್ನೆ ತಿರುಪತಿಗೆ ಆಗಮಿಸಿ ತಿಮ್ಮಪ್ಪನ ದರ್ಶನ (Tirupati Thimmappa) ಮಾಡಿದ್ದಾರೆ. ಮೊದಲ ಬಾರಿಗೆ ಮಗಳು ಹಾಗೂ ಪತ್ನಿಯೊಂದಿಗೆ ತಿಮ್ಮಪ್ಪನ ಸನ್ನಿಧಿಗೆ ಆಗಮಿಸಿದ್ದ ಪ್ರಭುದೇವ ಪೂಜೆ ಸಲ್ಲಿಸಿ ದರ್ಶನ ಪಡೆದಿದ್ದಾರೆ. ಪತ್ನಿ ಹಿಮಾನಿ ಸಿಂಗ್ (Himani Sing) ಮತ್ತು ಪ್ರಭುದೇವ್ ಪುತ್ರಿ ಈ ಸಂದರ್ಭದಲ್ಲಿ ಜೊತೆಯಾಗಿದ್ದರು.

    ಮಗಳು ಹುಟ್ಟಿದ ನಂತರ ಪ್ರಭುದೇವ್ ಈವರೆಗೂ ಸಾರ್ವಜನಿಕವಾಗಿ ಮಗಳನ್ನು ತೋರಿಸಿರಲಿಲ್ಲ. ಇದೇ ಮೊದಲ ಬಾರಿಗೆ ಪುತ್ರಿಯು ಕ್ಯಾಮೆರಾಗಳ ಕಣ್ಣಿಗೆ ಬಿದಿದ್ದಾರೆ. ಪ್ರಭುದೇವ್ ತಿರುಪತಿಗೆ ಬಂದ ಸುದ್ದಿ ಕೇಳಿ, ಅನೇಕ ಅಭಿಮಾನಿಗಳು ಕೂಡ ಜಮಾಯಿಸಿದ್ದರು. ನೆಚ್ಚಿನ ನಟನನ್ನು ನೋಡಿ ಕಣ್ತುಂಬಿಕೊಂಡರು. ಇದನ್ನೂ ಓದಿ:ಜುಲೈ 23ಕ್ಕೆ ವಿಶ್ವಕುಂದಾಪ್ರ ಕನ್ನಡ ದಿನಕ್ಕೆ ಸಿಎಂ, ರಿಷಬ್ ಶೆಟ್ಟಿ- ಪ್ರಮೋದ್ ಶೆಟ್ಟಿ ಸಾಥ್

    ಪ್ರಭುದೇವ್ ಸದ್ಯ ಕನ್ನಡದಲ್ಲೂ ಒಂದು ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಇದೇ ಮೊದಲ ಬಾರಿಗೆ ಅವರು ಶಿವರಾಜ್ ಕುಮಾರ್ ಜೊತೆ ತೆರೆ ಹಂಚಿಕೊಂಡಿದ್ದಾರೆ. ಸಿನಿಮಾದ ಶೂಟಿಂಗ್ ಭರ್ಜರಿಯಾಗಿ ನಡೆಯುತ್ತಿದೆ. ಒಂದಷ್ಟು ದಿನ ಪ್ರಭುದೇವ್ ಬೆಂಗಳೂರಿನಲ್ಲೇ ಇದ್ದುಕೊಂಡು ಶೂಟಿಂಗ್ ನಲ್ಲಿ ಪಾಲ್ಗೊಂಡಿದ್ದರು.

     

    ಪ್ರಭುದೇವ್ ಮತ್ತು ಶಿವರಾಜ್ ಕುಮಾರ್ ಕಾಂಬಿನೇಷನ್ ನ ಆ ಸಿನಿಮಾಗೆ ಕರಟಕ ದಮನಕ ಎಂದು ಹೆಸರಿಡಲಾಗಿದೆ. ಯೋಗರಾಜ್ ಭಟ್ ನಿರ್ದೇಶನದಲ್ಲಿ ಈ ಸಿನಿಮಾ ಮೂಡಿ ಬರುತ್ತಿದ್ದು, ರಾಕ್ ಲೈನ್ ವೆಂಕಟೇಶ್ ಈ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದಾರೆ. ಸಿನಿಮಾದ ಬಹುತೇಕ ಶೂಟಿಂಗ್ ಮುಗಿದಿದೆ ಎಂದು ಹೇಳಲಾಗುತ್ತಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ಹೊರಟ ‘ಕಬ್ಜ’ ಟೀಮ್ : ವಿಮಾನ ಏರಿದ ಆರ್.ಚಂದ್ರು

    ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ಹೊರಟ ‘ಕಬ್ಜ’ ಟೀಮ್ : ವಿಮಾನ ಏರಿದ ಆರ್.ಚಂದ್ರು

    ನಾಳೆ ವಿಶ್ವದಾದ್ಯಂತ ಕಬ್ಜ ಸಿನಿಮಾ ರಿಲೀಸ್ ಆಗುತ್ತಿದೆ. ಬಿಡುಗಡೆಗೂ ಒಂದು ದಿನ ಮುನ್ನ ಕಬ್ಜ (Kabzaa) ಟೀಮ್ ತಿರುಪತಿಯತ್ತ ಪ್ರಯಾಣ ಬೆಳೆಸಿದೆ. ವಿಶೇಷ ವಿಮಾನದಲ್ಲಿ ನಟ ಉಪೇಂದ್ರ (Upendra), ನಿರ್ದೇಶಕ ಆರ್.ಚಂದ್ರು (R. Chandru), ಕೆ.ಪಿ ಶ್ರೀಕಾಂತ್ ಸೇರಿದಂತೆ ಹಲವರು ಬೆಳಗ್ಗೆ ಪ್ರಯಾಣ ಬೆಳೆಸಿದ್ದಾರೆ. ತಿರುಪತಿ ತಿಮ್ಮಪ್ಪನ (Tirupati Thimmappa) ದರ್ಶನ ಪಡೆದು, ಅಧಿಕೃತವಾಗಿ ಚಿತ್ರದ ಬಿಡುಗಡೆಗೆ ಚಾಲನೆ ನೀಡಲಿದ್ದಾರೆ.

    ಮೊನ್ನೆಯಷ್ಟೇ ಈ ಸಿನಿಮಾದ ಪ್ರಿ ಇವೆಂಟ್ ಕಾರ್ಯಕ್ರಮ ಅದ್ಧೂರಿಯಾಗಿ ನಡೆದಿದ್ದು, ಆ ಕಾರ್ಯಕ್ರಮದಲ್ಲಿ ಚಿತ್ರತಂಡ ಹಲವಾರು ವಿಷಯಗಳನ್ನು ಹಂಚಿಕೊಂಡಿದೆ. ವಿಶ್ವದಾದ್ಯಂತ ನಾಲ್ಕು ಸಾವಿರಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಐದು ಭಾಷೆಗಳಲ್ಲಿ ಚಿತ್ರ ರಿಲೀಸ್ ಆಗುತ್ತಿದೆ. ಈ ಸಮಯದಲ್ಲಿ ಕಬ್ಜ 2 ಸಿನಿಮಾದ ಬಗ್ಗೆ ಸುಳಿವು ನೀಡಿದ್ದಾರೆ ನಟ ಉಪೇಂದ್ರ. ನಿನ್ನೆ ಬೆಂಗಳೂರಿನ ಪ್ರತಿಷ್ಠಿತ ಹೋಟೆಲ್ ನಲ್ಲಿ ನಡೆದ ಪ್ರಿ ರಿಲೀಸ್ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕಬ್ಜ 2 ಸಿನಿಮಾದಲ್ಲಿ ನನಗೆ ಅತಿಥಿ ಪಾತ್ರ ಕೊಡಿ, ಸುದೀಪ್ ಅವರನ್ನು ಹೀರೋ ಆಗಿ ಮಾಡಿ ಎಂದು ನಿರ್ದೇಶಕರಲ್ಲಿ ಮನವಿ ಮಾಡಿಕೊಂಡರು. ಇದನ್ನೂ ಓದಿ: ಆಸ್ಕರ್‌ನಲ್ಲಿ ಜ್ಯೂ.ಎನ್‌ಟಿಆರ್-ಚರಣ್ ಡ್ಯಾನ್ಸ್ ಮಾಡಿಲ್ಲ ಯಾಕೆ? ಇಲ್ಲಿದೆ ಅಸಲಿ ಕಾರಣ

    ‘ಕಬ್ಜ ಇದು ನಟರ ಸಿನಿಮಾವಲ್ಲ, ಟೆಕ್ನಿಷಿಯನ್ಸ್ ಸಿನಿಮಾ. ಈ ಸಿನಿಮಾದಲ್ಲಿ ನಿರ್ದೇಶಕರು, ಸಂಗೀತ ನಿರ್ದೇಶಕರ, ಕಲಾ ನಿರ್ದೇಶಕ, ಸಿನಿಮಾಟೋಗ್ರಾಫರ್ ಕಾಣುತ್ತಾರೆ. ನಟರು ಕೇವಲ ಹಿಂದಿನ ಶಕ್ತಿ ಅಷ್ಟೇ. ಇಂತಹ ಸಿನಿಮಾಗಳನ್ನು ಪ್ರೇಕ್ಷಕರು ಗೆಲ್ಲಿಸುತ್ತಾರೆ. ಕಬ್ಜ 2 ಸಿನಿಮಾ ಕೂಡ ಆಗಲಿ. ಆ ಸಿನಿಮಾದಲ್ಲಿ ಸುದೀಪ್ ಮುಖ್ಯ ಪಾತ್ರ ಮಾಡಲಿ’ ಎಂದು ಹಾರೈಸಿದರು ಹಾಗೂ ಕಬ್ಜ 2 ಬರುವ ಕುರಿತು ಸುಳಿವನ್ನೂ ಅವರು ನೀಡಿದರು.

    ಪ್ರಿ ರಿಲೀಸ್ ಇವೆಂಟ್ ನಲ್ಲಿ ಭಾಗಿಯಾಗಿದ್ದ ಡಾಲಿ ಧನಂಜಯ್, ‘ಕಬ್ಜ ಸಿನಿಮಾದಲ್ಲಿ ನನಗೆ ಅವಕಾಶ ನೀಡಿಲ್ಲ. ನಿರ್ದೇಶಕರು ಬಹುಶಃ ನನ್ನನ್ನು ಮರೆತಿದ್ದಾರೆ. ಕಬ್ಜ 2 ನಲ್ಲಾದರೂ ಅವಕಾಶ ಕೊಡಲಿ ಎಂದರು. ಅಲ್ಲದೇ ಮೊದಲ ಶೋ ರಾತ್ರಿಯೇ ಇರಲಿ, ಬೆಳಗ್ಗೆ ಆಯೋಜನೆ ಆಗಿರಲಿ ಒಬ್ಬ ಅಭಿಮಾನಿಯಾಗಿ ಬಂದು ಥಿಯೇಟರ್ ನಲ್ಲಿ ಸಂಭ್ರಮಿಸುತ್ತೇನೆ’ ಎಂದರು.

    ನಿರ್ದೇಶಕ ಆರ್.ಚಂದ್ರು ಅವರನ್ನು ಹಾಡಿ ಹೊಗಳಿದ ಕಿಚ್ಚ ಸುದೀಪ್, ‘ಇಂಥದ್ದೊಂದು ಸಿನಿಮಾದಲ್ಲಿ ನಾನು ಭಾಗಿಯಾಗಿದ್ದೇನೆ ಎನ್ನುವುದು ಸಂತಸ ತಂದಿದೆ. ನಿರ್ದೇಶಕರು ಸಿನಿಮಾವನ್ನು ತುಂಬಾ ಚೆನ್ನಾಗಿ ಮಾಡಿದ್ದಾರೆ. ಪ್ರೇಕ್ಷಕರು ಕೂಡ ಅಷ್ಟೇ ಈ ಸಿನಿಮಾವನ್ನು ಒಪ್ಪಿಕೊಳ್ಳುತ್ತಾರೆ ಎನ್ನುವ ವಿಶ್ವಾಸವಿದೆ. ಒಳ್ಳೊಳ್ಳೆ ಸಿನಿಮಾಗಳು ಹಾಗೂ ಹೃದಯಕ್ಕೆ ಹತ್ತಿರ ಇದ್ದವರು ಸಿನಿಮಾ ಮಾಡಿದಾಗ, ಅವರಿಗೆ ಸಪೋರ್ಟ್ ಮಾಡುವುದು ನನ್ನ ಕರ್ತವ್ಯ. ನಾನು ಮಾಡಿದ್ದೇನೆ’ ಎಂದು ಹೇಳಿದರು.