Tag: tirupati temple

  • ತಿರುಪತಿಯಲ್ಲಿ ಬರೋಬ್ಬರಿ 100 ಕೋಟಿ ಲೂಟಿ – ಬಿಜೆಪಿ ನಾಯಕ ಆರೋಪ

    ತಿರುಪತಿಯಲ್ಲಿ ಬರೋಬ್ಬರಿ 100 ಕೋಟಿ ಲೂಟಿ – ಬಿಜೆಪಿ ನಾಯಕ ಆರೋಪ

    – ಕಳ್ಳತನದ ಸಿಸಿಟಿವಿ ದೃಶ್ಯ ರಿಲೀಸ್

    ಹೈದರಾಬಾದ್: ತಿರುಪತಿಯ (Tirupati) ವೆಂಕಟೇಶ್ವರನ ಸನ್ನಿಧಿಯಲ್ಲಿ ಬರೋಬ್ಬರಿ 100 ಕೋಟಿ ರೂ. ಕಳ್ಳತನ ಮಾಡಿರುವುದಾಗಿ ಬಿಜೆಪಿ ಮುಖಂಡ ಟಿಟಿಡಿ ಟ್ರಸ್ಟ್ ಸದಸ್ಯ ಭಾನುಪ್ರಕಾಶ್ ರೆಡ್ಡಿ ಆರೋಪಿಸಿದ್ದಾರೆ.

    ಜಗನ್‌ಮೋಹನ್ ರೆಡ್ಡಿ ಆಡಳಿತದ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ತಿಮ್ಮಪ್ಪನ ಕಾಣಿಕೆ ಹುಂಡಿಯಿಂದ 100 ಕೋಟಿ ರೂ.ಗೂ ಅಧಿಕ ಹಣ ಕಳ್ಳತನ ಮಾಡಲಾಗಿದೆ ಆರೋಪಿಸಿದ್ದಾರೆ. ಈ ಹಣವನ್ನು ದೇವಸ್ಥಾನದ ಸಿಬ್ಬಂದಿ ರವಿಕುಮಾರ್ ಕಾಣಿಕೆ ಪೆಟ್ಟಿಗೆಯಿಂದ ಕದ್ದಿದ್ದಾರೆ ಎಂದು ತಿಳಿಸಿದ್ದಾರೆ. ಅಲ್ಲದೇ ಈ ಸಂಬಂಧ ಸಿಸಿಟಿವಿ ದೃಶ್ಯಾವಳಿಗಳನ್ನು ಬಿಡುಗಡೆ ಮಾಡಿದ್ದಾರೆ.ಇದನ್ನೂ ಓದಿ: ಜೈನ ಮಂದಿರಗಳ ಅರ್ಚಕರಿಗೆ ವೇತನ – ಅಧಿಕೃತ ಆದೇಶ

    ಲೂಟಿ ಮಾಡಿದ ಹಣವನ್ನು ಕೋಟ್ಯಂತರ ರೂ. ಮೌಲ್ಯದ ರಿಯಲ್ ಎಸ್ಟೇಟ್‌ನಲ್ಲಿ ಹೂಡಿಕೆ ಮಾಡಿದ್ದಾರೆ. ಅಲ್ಲದೇ ಈ ಹಣವನ್ನು ಜಗನ್ ರೆಡ್ಡಿ ಅವರ ತಡೆಪಲ್ಲಿ ಅರಮನೆಗೆ ವರ್ಗಾಯಿಸಲಾಗಿದೆ. ಬಳಿಕ ಲೋಕ್ ಅದಾಲತ್‌ನಲ್ಲಿಯೂ ಈ ಪ್ರಕರಣವನ್ನು ಮುಚ್ಚಿಹಾಕಲು ಪ್ರಯತ್ನಿಸಿ, ಎಲ್ಲಾ ಸಾಕ್ಷ್ಯಗಳನ್ನು ನಾಶಪಡಿಸಲಾಗಿದೆ. ಟಿಟಿಡಿಯ ಇತಿಹಾಸದಲ್ಲಿ ನಡೆದ ಅತ್ಯಂತ ದೊಡ್ಡ ಲೂಟಿ ಎಂದು ಹೇಳಿದ್ದಾರೆ.

    ಈ ಹಿನ್ನೆಲೆ ಆಂಧ್ರ ರಾಜಕೀಯದಲ್ಲಿ ಅಲ್ಲೋಲ-ಕಲ್ಲೋಲಕ್ಕೆ ಉಂಟಾಗಿದ್ದು, ಅಲ್ಲದೇ ತಿರುಪತಿ ಭಕ್ತರಲ್ಲೂ ಭಾರೀ ಚರ್ಚೆಗೆ ಕಾರಣವಾಗಿದೆ.ಇದನ್ನೂ ಓದಿ: ರಾಯಚೂರು | ನಟಿ ಸಪ್ತಮಿಗೌಡ ನೋಡಲು ಅಭಿಮಾನಿಗಳ ನೂಕುನುಗ್ಗಲು

  • ತಿರುಪತಿಯಲ್ಲಿ ಭಕ್ತರ ಶೀಘ್ರ ದರ್ಶನಕ್ಕಾಗಿ `ಶ್ರೀವಾಣಿ ದರ್ಶನ’ ಟಿಕೆಟ್ ಸೇವೆ ಆರಂಭ

    ತಿರುಪತಿಯಲ್ಲಿ ಭಕ್ತರ ಶೀಘ್ರ ದರ್ಶನಕ್ಕಾಗಿ `ಶ್ರೀವಾಣಿ ದರ್ಶನ’ ಟಿಕೆಟ್ ಸೇವೆ ಆರಂಭ

    – 60 ಲಕ್ಷ ರೂ. ವೆಚ್ಚದಲ್ಲಿ ಹೊಸ ಕೌಂಟರ್‌ಗಳ ನಿರ್ಮಾಣ

    ಹೈದರಾಬಾದ್: ತಿರುಪತಿಯಲ್ಲಿ (Tirupati) ಭಕ್ತರ ಶೀಘ್ರ ದರ್ಶನ ಮತ್ತು ಭಕ್ತರ ಕಾಯುವ ಸಮಯ ಕಡಿಮೆ ಮಾಡುವ ಸಲುವಾಗಿ ಟಿಟಿಡಿ (TTD) ದೇವಸ್ಥಾನ ಮಂಡಳಿ ಹೊಸ `ಶ್ರೀವಾಣಿ ದರ್ಶನ’ ಟಿಕೆಟ್ ಸೇವೆ ಆರಂಭಿಸಿದೆ.

    `ಶ್ರೀವಾಣಿ ದರ್ಶನ’ ಟಿಕೆಟ್ ಮೂಲಕ ಭಕ್ತರು ಕಾಯುವ ಸಮಯ ಕಡಿಮೆಯಾಗಲಿದೆ ಎಂದು ತಿರುಮಲ ತಿರುಪತಿ ದೇವಸ್ಥಾನ ಮಂಡಳಿ ತಿಳಿಸಿದೆ. ಸದ್ಯ ನೂತನ ಶ್ರೀವಾಣಿ ದರ್ಶನ ಟಿಕೆಟ್ ವಿತರಣಾ ಕೇಂದ್ರವನ್ನು ತಿರುಮಲದಲ್ಲಿ ತೆರೆಯಲಾಗಿದೆ.

    ಈ ಕುರಿತು ಟಿಟಿಡಿ ಅಧ್ಯಕ್ಷ ಬಿ.ಆರ್.ನಾಯ್ಡು (BR Naidu) ಮಾತನಾಡಿ, ಶ್ರೀವಾಣಿ ದರ್ಶನ ಟಿಕೆಟ್‌ಗಳಿಗಾಗಿ ಭಕ್ತರು ಬೆಳಿಗ್ಗೆ 5 ಗಂಟೆಯಿಂದಲೇ ಸರತಿ ಸಾಲಿನಲ್ಲಿ ನಿಲ್ಲುತ್ತಿದ್ದಾರೆ. ಈ ಸಂದರ್ಭದಲ್ಲಿ, ಟಿಕೆಟ್‌ಗಳನ್ನು ಸುಲಭವಾಗಿ ನೀಡಲು ಅತ್ಯಾಧುನಿಕ ಮೂಲಸೌಕರ್ಯದೊಂದಿಗೆ 60 ಲಕ್ಷ ರೂ. ವೆಚ್ಚದಲ್ಲಿ ಹೊಸ ಕೌಂಟರ್‌ಗಳನ್ನು ನಿರ್ಮಿಸಲಾಗಿದೆ ಎಂದು ಹೇಳಿದ್ದಾರೆ.

  • ಮೊಣಕಾಲಿನಲ್ಲೇ ತಿರುಪತಿ ದೇವಾಲಯದ ಮೆಟ್ಟಿಲು ಹತ್ತಿ ಹರಕೆ ತೀರಿಸಿದ ನಿತೀಶ್ ಕುಮಾರ್ ರೆಡ್ಡಿ

    ಮೊಣಕಾಲಿನಲ್ಲೇ ತಿರುಪತಿ ದೇವಾಲಯದ ಮೆಟ್ಟಿಲು ಹತ್ತಿ ಹರಕೆ ತೀರಿಸಿದ ನಿತೀಶ್ ಕುಮಾರ್ ರೆಡ್ಡಿ

    ಅಮರಾವತಿ: ಆಸ್ಟ್ರೇಲಿಯಾದಲ್ಲಿ ನಡೆದ ಬಾರ್ಡರ್-ಗವಾಸ್ಕರ್ ಟ್ರೋಫಿಯಲ್ಲಿ ಟೀಂ ಇಂಡಿಯಾ ಪರ ಸಾಧನೆ ಮಾಡಿದ ನಿತೀಶ್ ಕುಮಾರ್ ರೆಡ್ಡಿ (Nitish Kumar Reddy), ಆಂಧ್ರಪ್ರದೇಶದ ತಿರುಪತಿ ತಿಮ್ಮಪ್ಪ ದೇವಸ್ಥಾನದ ಮೆಟ್ಟಿಲುಗಳನ್ನು ಮೊಣಕಾಲಿನಿಂದ ಹತ್ತಿ ಹರಕೆ ತೀರಿಸಿದ್ದಾರೆ.

    ಆಲ್‌ರೌಂಡರ್ ಸೋಮವಾರ ರಾತ್ರಿ ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ತಮ್ಮ ಆಧ್ಯಾತ್ಮಿಕ ಪ್ರಯಾಣದ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ಭಾರತದ ಮೇಲಿನ ಪರಮಾಣು ನಿರ್ಬಂಧ ತೆಗೆದ ಅಮೆರಿಕ – ಏನಿದರ ಮಹತ್ವ?

     

     

    ಭಕ್ತರು ತಮ್ಮ ಹರಕೆಗಳನ್ನು ಪೂರೈಸಲು ತಿರುಪತಿಯಿಂದ ಕಾಲ್ನಡಿಗೆಯಲ್ಲಿ ತಿರುಮಲ ತಲುಪಲು ಈ ಮಾರ್ಗವನ್ನು ಬಳಸುತ್ತಾರೆ. ಇದು 3550 ಮೆಟ್ಟಿಲುಗಳನ್ನು ಹೊಂದಿದ್ದು, 12 ಕಿ.ಮೀ ದೂರವನ್ನು ಕ್ರಮಿಸುತ್ತದೆ.

    ಆಸ್ಟ್ರೇಲಿಯಾದಲ್ಲಿ ಭಾರತ ತಂಡವು 1-3 ಅಂತರದಲ್ಲಿ ಸೋತಿದ್ದ ನಿರಾಶಾದಾಯಕ ಪಂದ್ಯದಲ್ಲಿ ನಿತೀಶ್ ಉತ್ತಮ ಪ್ರದರ್ಶನ ನೀಡಿದ್ದರು. ಈ ಹಿಂದೆ ಯಾವುದೇ ರೆಡ್ ಬಾಲ್ ಅನುಭವವಿಲ್ಲದ 21 ವರ್ಷದ ಆಟಗಾರ ಆಸ್ಟ್ರೇಲಿಯಾದಲ್ಲಿ ಎಲ್ಲಾ ಐದು ಟೆಸ್ಟ್ ಪಂದ್ಯಗಳನ್ನು ಆಡಿದರು. ಹೆಚ್ಚಿನ ಸಮಯ 8 ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದರೂ ಭಾರತದ ಪರ ಅತಿ ಹೆಚ್ಚು ಸ್ಕೋರರ್‌ಗಳಲ್ಲಿ ಒಬ್ಬರಾಗಿ ಹೊರಹೊಮ್ಮಿದ್ದಾರೆ. ಇದನ್ನೂ ಓದಿ: ಸ್ಟೀವ್‌ ಜಾಬ್ಸ್‌ ಪತ್ನಿ ಅಸ್ವಸ್ಥ – ಸನಾತನದ ಬಗ್ಗೆ ಸಾಕಷ್ಟು ಪ್ರಶ್ನೆ ಕೇಳುತ್ತಿದ್ದಾರೆ ಕಮಲಾ

    ಸರಣಿಯಲ್ಲಿ ನಿತೀಶ್ 298 ರನ್ ಗಳಿಸುವ ಮೂಲಕ ಗಮನಾರ್ಹ ಸಾಧನೆ ಮಾಡಿದರು. ಇದು ಅವರನ್ನು ಭಾರತದ ಎರಡನೇ ಅತಿ ಹೆಚ್ಚು ಸ್ಕೋರರ್ ಎಂಬ ಸ್ಥಾನಕ್ಕೇರಿಸಿತು.

  • ತಿರುಪತಿ ತಿಮ್ಮಪ್ಪನ ಚಿನ್ನ ಕದ್ದು ಪೊಲೀಸರಿಗೆ ಸಿಕ್ಕಿಬಿದ್ದ ಟಿಟಿಡಿ ನೌಕರ

    ತಿರುಪತಿ ತಿಮ್ಮಪ್ಪನ ಚಿನ್ನ ಕದ್ದು ಪೊಲೀಸರಿಗೆ ಸಿಕ್ಕಿಬಿದ್ದ ಟಿಟಿಡಿ ನೌಕರ

    ಅಮರಾವತಿ: ತಿರುಪತಿ (Tirupati Temple) ತಿಮ್ಮಪ್ಪನಿಗೆ ಭಕ್ತರಿಂದ ಕಾಣಿಕೆ ರೂಪದಲ್ಲಿ ಬಂದಿದ್ದ ಚಿನ್ನವನ್ನು ಕದ್ದಿದ್ದ ಹೊರಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿರುವ ಟಿಟಿಡಿ (TTD) ನೌಕರನನ್ನು ಪೊಲೀಸರು ಬಂಧಿಸಿದ್ದಾರೆ.

    ಶ್ರೀವರಿ ಪರಕಾಮಣಿಯ ಸಂಗ್ರಹಾಲಯದಿಂದ ಚಿನ್ನವನ್ನು ಕದಿಯುತ್ತಿದ್ದಾಗ ಸಿಕ್ಕಿಬಿದ್ದಿದ್ದಾನೆ. ತಿರುಮಲ ದೇವಸ್ಥಾನದಲ್ಲಿ ಟಿಟಿಡಿಯಲ್ಲಿರುವ ದೇಣಿಗೆ ಪೆಟ್ಟಿಗೆಯಾದ ‘ಶ್ರೀವರಿ ಹುಂಡಿ’ಯಲ್ಲಿ ಕಾಣಿಕೆಗಳನ್ನು ವಿಂಗಡಿಸಲು ಮತ್ತು ಎಣಿಸಲು ಟಿಟಿಡಿಗೆ ಸಿಬ್ಬಂದಿಯನ್ನು ಪೂರೈಸುವ ಹೊರಗುತ್ತಿಗೆ ಸಂಸ್ಥೆ ‘ಅಗ್ರಿಗೋಸ್’. ಇದರ ನೌಕರ ಕಳ್ಳತನ ಮಾಡಿ ಸಿಕ್ಕಿಬಿದ್ದಿದ್ದಾನೆ. ಇದನ್ನೂ ಓದಿ: ಸ್ಟೀವ್‌ ಜಾಬ್ಸ್‌ ಪತ್ನಿ ಅಸ್ವಸ್ಥ – ಸನಾತನದ ಬಗ್ಗೆ ಸಾಕಷ್ಟು ಪ್ರಶ್ನೆ ಕೇಳುತ್ತಿದ್ದಾರೆ ಕಮಲಾ

    ಕಳೆದ ಎರಡು ವರ್ಷಗಳಿಂದ ಕಾಣಿಕೆ ಹುಂಡಿ ಹಣ ಎಣಿಸುವ ಮತ್ತು ವಿಂಗಡಿಸುವ ಕೆಲಸದಲ್ಲಿ ತೊಡಗಿದ್ದ ವೀರಿಶೆಟ್ಟಿ ಪೆಂಚಲಯ್ಯ ಎಂಬ ವ್ಯಕ್ತಿ, ಪರಕಾಮಣಿಯ ಚಿನ್ನದ ಸಂಗ್ರಹಣಾ ಕೊಠಡಿಯಲ್ಲಿ ಸಂಗ್ರಹಿಸಿದ್ದ ಚಿನ್ನಾಭರಣಗಳನ್ನು ಕದಿಯುತ್ತಿದ್ದ.

    ಶನಿವಾರ (ಜನವರಿ 11) ಮಧ್ಯಾಹ್ನ, ಪೆಂಚಲಯ್ಯ ಶೇಖರಣಾ ಕೊಠಡಿಯಿಂದ 100 ಗ್ರಾಂ ಚಿನ್ನದ ಬಿಸ್ಕೆಟ್‌ಗಳನ್ನು ಕದಿಯುವಾಗ ಸಿಕ್ಕಿಬಿದ್ದಿದ್ದಾನೆ. ಕದ್ದ ಚಿನ್ನದ ಬಿಸ್ಕೆಟ್‌ಗಳನ್ನು ಪರಕಮಣಿ ಕಟ್ಟಡದಲ್ಲಿ ಟ್ರಾಲಿಯ ಮೂಲಕ ಸಾಗಿಸುತ್ತಿದ್ದಾಗ ವಿಜಿಲೆನ್ಸ್ ಸಿಬ್ಬಂದಿ ಅಡಗಿಸಿಟ್ಟ ಚಿನ್ನವನ್ನು ಪತ್ತೆ ಮಾಡಿ, ಸಿಸಿಟಿವಿ ಮೂಲಕ ಕಳ್ಳತನವನ್ನು ದೃಢಪಡಿಸಿ, ತಿರುಮಲ ಪೊಲೀಸರಿಗೆ ಒಪ್ಪಿಸಿದ್ದಾರೆ. ಟಿಟಿಡಿ ವಿಜಿಲೆನ್ಸ್ ಸಿಬ್ಬಂದಿ ತಿರುಮಲ I ಪಟ್ಟಣ ಪೊಲೀಸರಿಗೆ ದೂರು ನೀಡಿದ್ದಾರೆ. ಇದನ್ನೂ ಓದಿ: ಜ್ಯೋತಿ ರೂಪದಲ್ಲಿ ಭಕ್ತರಿಗೆ ದರ್ಶನ ಕೊಟ್ಟ ಅಯ್ಯಪ್ಪ

    ನಂತರ ಪೊಲೀಸರು ಪೆಂಚಲಯ್ಯನನ್ನು ಬಂಧಿಸಿದ್ದಾರೆ. ವಿಚಾರಣೆಯ ನಂತರ ಆತನಿಂದ 555 ಗ್ರಾಂ ಚಿನ್ನ ಮತ್ತು 157 ಗ್ರಾಂ ಬೆಳ್ಳಿಯನ್ನು ವಶಪಡಿಸಿಕೊಂಡಿದ್ದಾರೆ. ಕದ್ದ ವಸ್ತುಗಳು ಒಟ್ಟು 655 ಗ್ರಾಂ ಚಿನ್ನ ಮತ್ತು 157 ಗ್ರಾಂ ಆಗಿದ್ದು, ಅಂದಾಜು 46 ಲಕ್ಷ ರೂ. ಮೌಲ್ಯದ್ದಾಗಿದೆ.

  • ತಿರುಪತಿ ಲಡ್ಡು ಕೇಂದ್ರದಲ್ಲಿ ಅಗ್ನಿ ಅವಘಡ – ಸಿಬ್ಬಂದಿ ಸಮಯ ಪ್ರಜ್ಞೆಯಿಂದ ತಪ್ಪಿದ ಭಾರೀ ಅನಾಹುತ

    ತಿರುಪತಿ ಲಡ್ಡು ಕೇಂದ್ರದಲ್ಲಿ ಅಗ್ನಿ ಅವಘಡ – ಸಿಬ್ಬಂದಿ ಸಮಯ ಪ್ರಜ್ಞೆಯಿಂದ ತಪ್ಪಿದ ಭಾರೀ ಅನಾಹುತ

    ತಿರುಪತಿ: ತಿರುಮಲದಲ್ಲಿರುವ ಶ್ರೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನದ (Tirupati Temple) ಲಡ್ಡು ಕೌಂಟರ್‌ನಲ್ಲಿ ಅಗ್ನಿ ಅವಘಡ (Fire Accident) ಸಂಭವಿಸಿದೆ.

    ದೇವಾಲಯದ 47ನೇ ಲಡ್ಡು ಕೌಂಟರ್‌ನಲ್ಲಿ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಹೊತ್ತಿಕೊಂಡಿದೆ. ಕೂಡಲೇ ದೇವಾಲಯದ ಸಿಬ್ಬಂದಿ ತಕ್ಷಣ ಕಾರ್ಯಪ್ರವೃತ್ತರಾಗಿ ಬೆಂಕಿಯನ್ನು ನಂದಿಸಿದ್ದಾರೆ. ಇದರಿಂದ ಭಾರೀ ಅನಾಹುತ ತಪ್ಪಿದೆ.

    ದೇವಾಲಯದ ಸಿಬ್ಬಂದಿಯ ಸಮಯ ಪ್ರಜ್ಞೆಯಿಂದ ಇತರ ಭಾಗಗಳಿಗೆ ಬೆಂಕಿ ಹರಡುವುದು ತಪ್ಪಿದಂತಾಗಿದೆ.

    ಜ. 8ರಂದು ತಿರುಪತಿಯಲ್ಲಿ ಸಾವಿರಾರು ಭಕ್ತರು ವೈಕುಂಠ ದ್ವಾರ ದರ್ಶನಕ್ಕಾಗಿ ಟಿಕೆಟ್‌ಗಾಗಿ ಮುಗಿಬಿದ್ದಿದ್ದರಿಂದ ಕಾಲ್ತುಳಿತ ಸಂಭವಿಸಿತ್ತು. ಇದರಿಂದ ಸುಮಾರು 6 ಜನ ಸಾವನ್ನಪ್ಪಿದ್ದರು. ತಿರುಪತಿಯ ವಿಷ್ಣು ನಿವಾಸದ ಬಳಿ ಇರುವ ತಿರುಮಲ ಶ್ರೀವಾರಿ ವೈಕುಂಠ ದ್ವಾರದಲ್ಲಿ ಬುಧವಾರ ರಾತ್ರಿ ಈ ಅವಘಡ ಸಂಭವಿಸಿತ್ತು. ಇದಾದ ಕೆಲವೇ ದಿನಗಳ ಅಂತರದಲ್ಲಿ ಅಗ್ನಿಅವಘಡ ಸಂಭವಿಸಿದೆ.

  • ಬೆಂಗಳೂರು | ದರ್ಶನಕ್ಕೆ ಪಾಸ್‌ ಸಿಗದಿದ್ದಕ್ಕೆ ತಿರುಪತಿ ತಿಮ್ಮಪ್ಪನನ್ನೇ ಮನೆಗೆ ಕರೆಸಿದ ಭಕ್ತ!

    ಬೆಂಗಳೂರು | ದರ್ಶನಕ್ಕೆ ಪಾಸ್‌ ಸಿಗದಿದ್ದಕ್ಕೆ ತಿರುಪತಿ ತಿಮ್ಮಪ್ಪನನ್ನೇ ಮನೆಗೆ ಕರೆಸಿದ ಭಕ್ತ!

    – ವೈಕುಂಠ ದ್ವಾರ, ಲಕ್ಷಿ-ಶ್ರೀನಿವಾಸನ ತೂಗು-ಉಯ್ಯಾಲೆ…!

    ಬೆಂಗಳೂರು: ಇಂದು ನಾಡಿನೆಲ್ಲೆಡೆ ವೈಕುಂಠ ಏಕಾದಶಿಯ ಸಂಭ್ರಮ ಮನೆಮಾಡಿದೆ. ತಿರುಪತಿ ತಿಮ್ಮಪ್ಪನ ದರ್ಶನ ಮಾಡಬೇಕು ಅನ್ನೋ ನಂಬಿಕೆ ಲಕ್ಷಾಂತರ ಭಕ್ತಾದಿಗಳಲ್ಲಿ ಇದ್ದೇ ಇರುತ್ತೆ. ಆದ್ರೆ ವೆಂಕಟೇಶ್ವರನ ಪಾಸ್ ಸಿಗದೇ ಇದ್ದಿದ್ದಕ್ಕೆ ಬೆಂಗಳೂರಿನ ಭಕ್ತನೊಬ್ಬ ತಿರುಪತಿ ತಿಮ್ಮಪ್ಪನನ್ನೇ ಮನೆಗೆ ಕರೆಸಿದ್ದಾನೆ.

    ಧನುರ್ಮಾಸ ಶುಕ್ಲ ಪಕ್ಷದಲ್ಲಿ ಬರುವ ವೈಕುಂಠ ಏಕಾದಶಿಯಂದು ದೇವತೆಗಳು ಭೂ ಲೋಕಕ್ಕೆ ಬಂದು ಜಗದೊಡೆಯ ಶ್ರೀವಿಷ್ಣು ದೇವರನ್ನು ಪೂಜಿಸುತ್ತಾರೆ ಎಂದು ಪುರಾಣಗಳು ಹೇಳುತ್ತವೆ. ಆದ್ದರಿಂದಲೇ ಈ ದಿನದಂದು ದೇವಾಲಯದ ಉತ್ತರ ದ್ವಾರದ ಮೂಲಕ ವಿಷ್ಣುವಿನ ದರ್ಶನ ಮಾಡಿದರೆ ಸಕಲ ಪುಣ್ಯಗಳು ಪ್ರಾಪ್ತಿಯಾಗುತ್ತವೆ ಎಂಬುದು ನಂಬಿಕೆ. ಅದರಂತೆ ಇಂದು ನಾಡಿನೆಲ್ಲೆಡೆ ವೈಕುಂಠ ಏಕಾದಶಿ ಹಬ್ಬದ ಸಂಭ್ರಮ ಮನೆ ಮಾಡಿದೆ. ಇದನ್ನೂ ಓದಿ: Tirupati Stampede: ಗಾಯಗೊಂಡ ಗಾಯಾಳುಗಳಿಗೆ ವಿಶೇಷ ದರ್ಶನ, ಅಧಿಕಾರಿಗಳು ಅಮಾನತು

    ಇಂದು ತಿರುಪತಿ ತಿಮ್ಮಪ್ಪನ ದರ್ಶನ ಮಾಡಬೇಕು ಅನ್ನೋ ನಂಬಿಕೆ ಲಕ್ಷಾಂತರ ಭಕ್ತಾದಿಗಳಲ್ಲಿ ಇರುತ್ತದೆ. ಆದ್ರೆ ಟಿಕೆಟ್ ಎಲ್ಲರಿಗೂ ಸಿಗಲ್ಲ. ಈ ಹಿನ್ನಲೆ, ಬೆಂಗಳೂರಿನ ತಿರುಪತಿ ತಿಮ್ಮಪ್ಪನ ಅಪ್ಪಟ್ಟ ಭಕ್ತನೊಬ್ಬ, ಟಿಕೆಟ್ ಸಿಗದೇ ಇದ್ದಿದ್ದಕ್ಕೆ ಬೆಂಗಳೂರಿನ ತನ್ನ ಮನೆಯಲ್ಲೇ ವೆಂಕಟೇಶ್ವರ ಮೂರ್ತಿಯನ್ನು ನಿರ್ಮಿಸಿದ್ದಾರೆ. ಸುಮಾರು 8 ಅಡಿ ಎತ್ತರದಲ್ಲಿ ಬಾಲಾಜಿ ಮೂರ್ತಿಯನ್ನು ನಿರ್ಮಾಣ ಮಾಡಿದ್ದಾರೆ. ಹತ್ತಿ, ಬಟ್ಟೆ, ಪೇಯಿಂಟ್‌ ಮೂಲಕ ಬಾಲಾಜಿಯನ್ನು ಅಲಂಕರಿಸಲಾಗಿದೆ.

    ಜಯನಗರದ ಉಷಾ ಅಪಾರ್ಟ್ಮೆಂಟ್ ನಿವಾಸಿಯಾಗಿರೋ ದೀಪಕ್, ಕಳೆದ 9 ವರ್ಷದಿಂದ ಪ್ರತಿ ತಿಂಗಳು ತಿರುಪತಿ ಬೆಟ್ಟ ಹತ್ತಿಕೊಂಡು ದರ್ಶನ ಮಾಡುತ್ತಿದ್ದರು. ಆದ್ರೇ ಇಂದು ಬಾಲಾಜಿ ದರ್ಶನ ಸಿಗದ ಹಿನ್ನೆಲೆ ಮನೆಯಲ್ಲೇ ದೇಗುಲ ನಿರ್ಮಿಸಿದ್ದಾರೆ. ವೆಂಕಟೇಶ್ವರ ಮೂರ್ತಿ ಜೊತೆ ಲಕ್ಷ್ಮಿ, ವೆಂಕಟೇಶ್ವರ ತೂಗು ಉಯ್ಯಾಲೆ, ವೈಕುಂಠ ದ್ವಾರ ನಿರ್ಮಿಸಿದ್ದಾರೆ. ತಿರುಪತಿ ತಿಮ್ಮಪ್ಪನ ದರ್ಶನ ಪಡೆಯಲು ಸ್ಥಳೀಯ ಜನ ಬರುತ್ತಿದ್ದಾರೆ. ಇದನ್ನೂ ಓದಿ: ಬೆಂಗ್ಳೂರಿನಲ್ಲಿ ದೇವಸ್ಥಾನಗಳಲ್ಲಿ ಏಕಾದಶಿ ಸಂಭ್ರಮ – ರಾತ್ರಿ 11 ಗಂಟೆ ವರೆಗೆ ಇಸ್ಕಾನ್‌ನಲ್ಲಿ ದರ್ಶನಕ್ಕೆ ಅವಕಾಶ

  • Tirupati Stampede | ವೈಕುಂಠ ಏಕಾದಶಿಯಂದು ತಿರುಪತಿಗೆ ಯಾಕೆ ಭಾರೀ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಾರೆ?

    Tirupati Stampede | ವೈಕುಂಠ ಏಕಾದಶಿಯಂದು ತಿರುಪತಿಗೆ ಯಾಕೆ ಭಾರೀ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಾರೆ?

    ತಿರುಪತಿ: ಪ್ರತಿ ವರ್ಷ ವೈಕುಂಠ ಏಕಾದಶಿ (Vaikunta Ekadasi ) ಸಮಯದಲ್ಲಿ ತಿರುಮಲದ ವೆಂಕಟೇಶ್ವರ ಸ್ವಾಮಿ ದೇವಸ್ಥಾನನಕ್ಕೆ (Tirupati Temple) ಭಾರೀ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಾರೆ. ದೇಶ ವಿದೇಶಗಳಲ್ಲಿ ಭಕ್ತರು ಆಗಮಿಸಿ ದೇವರನ್ನು ಸಂದರ್ಶಿಸಿ ಪುನೀತರಾಗುತ್ತಾರೆ.

    ಸಾಧಾರಣವಾಗಿ ತಿರುಪತಿಯಲ್ಲಿ ಎರಡು ಸಂದರ್ಭದಲ್ಲಿ ಭಾರೀ ಸಂಖ್ಯೆಯಲ್ಲಿ ಜನರು ದೇವಸ್ಥಾನಕ್ಕೆ ಆಗಮಿಸುತ್ತಾರೆ. ಒಂದು ಒಂಬತ್ತು ದಿನಗಳ ಕಾಲ ನಡೆಯಲಿರುವ ಬ್ರಹ್ಮೋತ್ಸವ (Bsrahmotsavam) ಎರಡನೇಯದ್ದು ವೈಕುಂಠ ಏಕಾದಶಿ.

    ಆರಂಭದಲ್ಲಿ ಒಂದೇ ದಿನ ವೈಕುಂಠ ಏಕಾದಶಿಯನ್ನು ಆಚರಿಸಲಾಗುತ್ತಿತ್ತು. ಆದರೆ 1980 ಮತ್ತು 1990 ರ ದಶಕದ ಬಳಿಕ ಭಾರೀ ಸಂಖ್ಯೆಯಲ್ಲಿ ಭಕ್ತರು ದರ್ಶನಕ್ಕೆ ಬರಲು ಆಗಮಿಸತೊಡಗಿದರು. ಹೀಗಾಗಿ ಟಿಟಿಡಿ ವೈಕುಂಠ ದ್ವಾದಶಿಯನ್ನು ಹೆಚ್ಚುವರಿ ಪವಿತ್ರ ದಿನವೆಂದು ಗುರುತಿಸುವ ಮೂಲಕ ಹಬ್ಬದ ಸಂಭ್ರಮವನ್ನು ವಿಸ್ತರಿಸಿತು.

    ಮಕರ ಸಂಕ್ರಾಂತಿ ಹಬ್ಬದ ಹಿಂದಿನ ಎರಡೂ ದಿನಗಳನ್ನು ಅತ್ಯಂತ ಶುಭವೆಂದು ಪರಿಗಣಿಸಲಾಗುತ್ತದೆ. ತಿರುಮಲದಲ್ಲಿ ವೆಂಕಟೇಶ್ವರನೆಂದು ಪೂಜಿಸಲ್ಪಡುವ ವಿಷ್ಣುವನ್ನು ಈ ಅವಧಿಯಲ್ಲಿ ದರ್ಶನ ಮಾಡಿದರೆ ಸ್ವರ್ಗ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆಯಿದೆ.

    ಸಾಮಾನ್ಯ ಭಕ್ತರು ಅಲ್ಲದೇ ವೈಕುಂಠ ಏಕಾದಶಿಯ ಸಮಯದಲ್ಲಿ ಗೋವಿಂದನ ಮಾಲೆಯನ್ನು ಧರಿಸಿದ ಭಕ್ತರು ತಿರುಪತಿಗೆ ಬರುತ್ತಾರೆ. ವೈಕುಂಠ ಏಕಾದಶಿಗೆ 41 ದಿನಗಳ ಮುಂಚಿತವಾಗಿ ಗೋವಿಂದ ಮಾಲೆಯನ್ನು ಭಕ್ತರು ಧರಿಸಿ ವ್ರತಾಚರಣೆ ಮಾಡುತ್ತಾರೆ. ಭಕ್ತಿಯ ಸಂಕೇತವಾಗಿ ಭಕ್ತರು ನೂರಾರು ಕಿಲೋಮೀಟರ್‌ ದೂರದಿಂದ ಬರಿಗಾಲಿನಲ್ಲಿ ನಡೆದುಕೊಂಡು ತಿರುಪತಿಗೆ ಬರುತ್ತಾರೆ. ಇದನ್ನೂ ಓದಿ: ತಿರುಪತಿಯಲ್ಲಿ ದುರಂತ – ಕಾಲ್ತುಳಿತಕ್ಕೆ ಮೂಲ ಕಾರಣ ಏನು? ದಿಢೀರ್‌ ಗೇಟ್‌ ಓಪನ್‌ ಮಾಡಿದ್ದು ಯಾಕೆ?

    ವರ್ಷದಿಂದ ವರ್ಷಕ್ಕೆ ಭಕ್ತರ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಹಿಂದೂ ಧಾರ್ಮಿಕ ನಾಯಕರ ಜೊತೆ ಚರ್ಚಿಸಿದ ಬಳಿಕ ಟಿಟಿಡಿ 2021-2022 ರಲ್ಲಿ ವೈಕುಂಠ ಏಕಾದಶಿ ಮತ್ತು ದ್ವಾದಶಿಯನ್ನು ಹತ್ತು ದಿನಗಳವರೆಗೆ ವಿಸ್ತರಿಸಿತು. ಈ ನಿರ್ಧಾರದ ನಂತರ ವೆಂಕಟೇಶ್ವರನ ಗರ್ಭಗುಡಿಯ ಸುತ್ತಲಿನ ಉತ್ತರ ದ್ವಾರವನ್ನು ಹತ್ತು ದಿನಗಳವರೆಗೆ ತೆರೆದಿಡಲಾಗುತ್ತದೆ. ಈ ಸಂದರ್ಭದಲ್ಲಿ ಭಕ್ತರು ಉತ್ತರ ದ್ವಾರದ ಮೂಲಕ ಪ್ರವೇಶಿಸಿ ದೇವರ ದರ್ಶನ ಪಡೆದು ಇಷ್ಟಾರ್ಥಸಿದ್ಧಿಗಾಗಿ ಪ್ರಾರ್ಥನೆ ಮಾಡುತ್ತಾರೆ.

     

  • ತಿರುಪತಿಯಲ್ಲಿ ದುರಂತ – ಕಾಲ್ತುಳಿತಕ್ಕೆ ಮೂಲ ಕಾರಣ ಏನು? ದಿಢೀರ್‌ ಗೇಟ್‌ ಓಪನ್‌ ಮಾಡಿದ್ದು ಯಾಕೆ?

    ತಿರುಪತಿಯಲ್ಲಿ ದುರಂತ – ಕಾಲ್ತುಳಿತಕ್ಕೆ ಮೂಲ ಕಾರಣ ಏನು? ದಿಢೀರ್‌ ಗೇಟ್‌ ಓಪನ್‌ ಮಾಡಿದ್ದು ಯಾಕೆ?

    ತಿರುಪತಿ: ಪ್ರಸಿದ್ಧ ವೆಂಕಟೇಶ್ವರಸ್ವಾಮಿ ದೇಗುಲದಲ್ಲಿ (Tirupati Temple) ಬುಧವಾರ ರಾತ್ರಿ ವೈಕುಂಠ ದ್ವಾರ ದರ್ಶನ (Vaikuntha Dwara Darshan) ಟಿಕೆಟ್‌ ಕೌಂಟರ್‌ ಬಳಿ ನೂಕು ನುಗ್ಗಲು ಸಂಭವಿಸಿ ನಡೆದ ಕಾಲ್ತುಳಿತದಲ್ಲಿ (Stampede) ಬಲಿಯಾದವರ ಸಂಖ್ಯೆ 7ಕ್ಕೆ ಏರಿಕೆಯಾಗಿದೆ.

    ಬೈರಾಗಿಪಟ್ಟೇಡ, ಶ್ರೀನಿವಾಸಂ ಮತ್ತು ಸತ್ಯನಾರಾಯಣಪುರಂನಲ್ಲಿ ಕಾಲ್ತುಳಿತ ಸಂಭವಿಸಿದ್ದು 60ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದು ಅವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ.

    ದುರಂತಕ್ಕೆ ಕಾರಣ ಏನು?
    ಜ. 10, 11 ಮತ್ತು 12 ರಂದು ವೈಕುಂಠ ಏಕಾದಶಿ ಇರುವ ಹಿನ್ನೆಲೆಯಲ್ಲಿ ಗುರುವಾರ ಬೆಳಗ್ಗೆ 5 ಗಂಟೆಯಿಂದ ವೈಕುಂಠದ್ವಾರ ಸರ್ವದರ್ಶನಕ್ಕೆ ಟಿಕೆಟ್​ ನೀಡಲಾಗುವುದು ಎಂದು ತಿರುಮಲ ತಿರುಪತಿ ದೇವಸ್ಥಾನ (TTD)ಪ್ರಕಟಿಸಿತ್ತು. ದಿನಕ್ಕೆ 40 ಸಾವಿರದಂತೆ 3 ದಿನಗಳಲ್ಲಿ 1 ಲಕ್ಷದ 20 ಸಾವಿರ ದರ್ಶನ ಟಿಕೆಟ್​ ನೀಡಲು ಟಿಟಿಡಿ ನಿರ್ಧರಿಸಿತ್ತು. 9 ಕಡೆಗಳಲ್ಲಿ 90 ಕೌಂಟರ್‌ಗಳ ಮೂಲಕ ಸರ್ವದರ್ಶನ ಟಿಕೆಟ್​​ ವಿತರಿಸಲು ಟಿಟಿಡಿ ವ್ಯವಸ್ಥೆ ಮಾಡಿತ್ತು.  ಇದನ್ನೂ ಓದಿ: ತಿರುಪತಿ ಕಾಲ್ತುಳಿತದಲ್ಲಿ ಬಳ್ಳಾರಿ ಮೂಲದ ಮಹಿಳೆ ದುರ್ಮರಣ

    ವೈಕುಂಠ ದ್ವಾರ ದರ್ಶನದ ಟಿಕೆಟ್‌ ಪಡೆಯಲು ಬುಧವಾರ ಸಂಜೆಯಿಂದಲೇ ಭಕ್ತರು ಸಾಲುಗಟ್ಟಿ ನಿಂತಿದ್ದರು. ಭಾರೀ ಸಂಖ್ಯೆಯಲ್ಲಿ ಭಕ್ತರು ಸರದಿಯಲ್ಲಿ ನಿಂತಿದ್ದ ಹಿನ್ನೆಲೆಯಲ್ಲಿ ಬುಧವಾರ ರಾತ್ರಿಯೇ ಟಿಕೆಟ್‌ ನೀಡಲು ಟಿಟಿಡಿ ಮುಂದಾಯಿತು. ಬೈರಾಗಿಪಟ್ಟೇಡ ರಾಮ ನಾಯ್ಡು ಶಾಲೆಯ ಬಳಿಯ ಕೌಂಟರ್‌ನಲ್ಲಿ ಸಾಲಿನಲ್ಲಿ ನಿಂತಿದ್ದ ಭಕ್ತರೊಬ್ಬರಿಗೆ ದಿಢೀರ್‌ ಉಸಿರಾಟದ ಸಮಸ್ಯೆಯಾಗಿದೆ.

    ಆ ಭಕ್ತರನ್ನು ಆಸ್ಪತ್ರೆಗೆ ಕರೆದೊಯ್ಯಲು ಭದ್ರತಾ ಸಿಬ್ಬಂದಿ ಒಮ್ಮೆ ಕೌಂಟರ್‌ ಗೇಟ್‌ ತೆರೆದಿದ್ದಾರೆ. ಈ ವೇಳೆ ಟಿಕೆಟ್‌ ನೀಡಲೆಂದೇ ಈ ಗೇಟ್‌ ತೆರೆಯಲಾಗಿದೆ ಎಂದು ಭಾವಿಸಿದ ಭಕ್ತರು ಏಕಾಏಕಿ ಕೌಂಟರ್‌ ಕಡೆಗೆ ನುಗ್ಗಿದ್ದಾರೆ. ಇದರಿಂದ ನೂಕುನುಗ್ಗಲು ಸಂಭವಿಸಿ ಕೆಲವರು ಕೆಳಗೆ ಬಿದ್ದಿದ್ದಾರೆ. ಬಿದ್ದವರ ಮೇಲೆಯೇ ಕೆಲವರು ಓಡಾಡಿದ ಪರಿಣಾಮ ಈ ದುರಂತ ಸಂಭವಿಸಿದೆ ಎಂದು ಎಂದು ವರದಿಯಾಗಿದೆ. ಟಿಕೆಟ್‌ ಪಡೆಯಲು ಎಲ್ಲಾ ಭಕ್ತರು ಸರತಿಯಲ್ಲೇ ನಿಂತಿದ್ದರು. ಎಲ್ಲಾ ಭಕ್ತರು ಒಂದೇ ಬಾರಿಗೆ ಕೌಂಟರ್‌ ಬಳಿ ನುಗ್ಗಿದ್ದರಿಂದ ಹಲವು ಮಂದಿ ಜನ ಸಂದಣಿಯಲ್ಲಿ ಸಿಲುಕಿದ್ದರಿಂದ ದುರಂತ ಸಂಭವಿಸಿದೆ.

     

    ವೈಕುಂಠ ಏಕಾದಶಿ ಸಂಭ್ರಮದಲ್ಲಿ ದೇಶದ ವಿವಿಧೆಡೆಗಳಿಂದ ಸಾವಿರಾರು ಮಂದಿ ಭಕ್ತರು ದೇವಸ್ಥಾನಕ್ಕೆ ಬರುತ್ತಾರೆ.

    ತೀವ್ರವಾಗಿ ಗಾಯಗೊಂಡವರಿಗೆ ಪೊಲೀಸ್‌ ಸಿಬ್ಬಂದಿಯೇ ಪ್ರಾಥಮಿಕ ಆರೈಕೆ ಮಾಡುತ್ತಿರುವುದು ಹಾಗೂ ಗಾಯಾಳುಗಳನ್ನು ಅಂಬುಲೆನ್‌ನಲ್ಲಿ ಆಸ್ಪತ್ರೆಗೆ ಕರೆದೊಯ್ಯುತ್ತಿರುವ ದೃಶ್ಯಗಳಿರುವ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

     

  • ಪ್ರಾಯಶ್ಚಿತ ದೀಕ್ಷೆ ಕೈಬಿಟ್ಟ ಪವರ್‌ ಸ್ಟಾರ್‌ ಪವನ್‌ ಕಲ್ಯಾಣ್‌

    ಪ್ರಾಯಶ್ಚಿತ ದೀಕ್ಷೆ ಕೈಬಿಟ್ಟ ಪವರ್‌ ಸ್ಟಾರ್‌ ಪವನ್‌ ಕಲ್ಯಾಣ್‌

    ತಿರುಪತಿ: ತಿರುಮಲ ತಿರುಪತಿ ದೇವಸ್ಥಾನದ (Tirupati Temple) ಲಡ್ಡು ವಿವಾದ ಹಿನ್ನೆಲೆಯಲ್ಲಿ 11 ದಿನಗಳ ಪ್ರಾಯಶ್ಚಿತ ದೀಕ್ಷೆ ಕೈಗೊಂಡಿದ್ದ ಆಂಧ್ರ ಪ್ರದೇಶದ ಡಿಸಿಎಂ ಪವನ್ ಕಲ್ಯಾಣ್‌ (Pawan Kalyan) ಅವರಿಂದು ತಿರುಪತಿ ತಿಮ್ಮಪ್ಪನ ದರ್ಶನ ಮಾಡಿದ ನಂತ್ರ ಪ್ರಾಯಶ್ಚಿತ ದೀಕ್ಷೆ ಕೈಬಿಟ್ಟಿದ್ದಾರೆ.

    ವೆಂಗಮಾಂಬ ಅನ್ನಛತ್ರಕ್ಕೆ ತೆರಳಿ ಊಟ ಮಾಡಿದ್ದಾರೆ. ದೇವಸ್ಥಾನಕ್ಕೆ ತೆರಳುವ ಮುನ್ನ, ಕ್ರೈಸ್ತ ಧರ್ಮೀಯರಾದ ಪವನ್ ಕಲ್ಯಾಣ್ ಕಿರಿಯ ಪುತ್ರಿ ಪೊಲೆನಾ ಅಂಜನಾ, ತಮಗೆ ವೆಂಕಟೇಶ್ವರ ಸ್ವಾಮಿಯಲ್ಲಿ ನಂಬಿಕೆ ಇದೆ ಎಂದು ಫೇತ್ ಡಿಕ್ಲರೇಷನ್ ನೀಡಿದ್ರು. ಪೊಲೆನಾ ಅಪ್ರಾಪ್ತರಾಗಿರುವ ಕಾರಣ ತಂದೆ ಪವನ್ ಕಲ್ಯಾಣ್ ಕೂಡ ಸಹಿ ಹಾಕಿದ್ರು. ಇದನ್ನೂ ಓದಿ: ಸನಾತನ ಧರ್ಮದ ಬಗ್ಗೆ 100 ಬಾರಿ ಯೋಚಿಸಿ ಮಾತನಾಡಿ: ಕಾರ್ತಿ ವಿರುದ್ಧ ಪವನ್‌ ಕಲ್ಯಾಣ್‌ ಕಿಡಿ

    ಇತ್ತೀಚಿಗೆ ತಿರುಪತಿಗೆ ಹೊರಟಿದ್ದ ಮಾಜಿ ಸಿಎಂ ಜಗನ್, ಫೇತ್ ಡಿಕ್ಲರೇಷನ್ ಕೊಡಬೇಕು ಎಂದು ತೆಲುಗುದೇಶಂ, ಬಿಜೆಪಿ, ಜನಸೇನಾ ಪಕ್ಷಗಳು ಪಟ್ಟು ಹಿಡಿದಿದವು. ಹೀಗಾಗಿ ಬುಧವಾರ ಪವನ್ ಕಲ್ಯಾಣ್ ಪುತ್ರಿ ನೀಡಿದ ಡಿಕ್ಲರೇಷನ್ ಎಲ್ಲರ ಗಮನ ಸೆಳೆಯಿತು. ಇದನ್ನೂ ಓದಿ: ಅನಗತ್ಯ ಪ್ರಯಾಣ ಬೇಡ, ಸುರಕ್ಷಿತ ಸ್ಥಳದಲ್ಲಿರಿ; ಇರಾನ್ – ಇಸ್ರೇಲ್ ಸಂಘರ್ಷದ ಬೆನ್ನಲ್ಲೇ ಭಾರತದ ಎಚ್ಚರಿಕೆ

    ತಿರುಪತಿ ಲಡ್ಡುವಿನಲ್ಲಿ ಪ್ರಾಣಿ ಕೊಬ್ಬು ಹಾಗೂ ಮೀನಿನ ಎಣ್ಣೆ ಬಳಸಿದ್ದ ವಿಚಾರ ಬೆಳಕಿಗೆ ಬಂದ ಹಿನ್ನೆಲೆ ಪ್ರಾಯಶ್ಚಿತ ದೀಕ್ಷೆಯಾಗಿ 11 ದಿನಗಳ ಉಪವಾಸ ಕೈಗೊಂಡಿದ್ದರು. ಈ ಕುರಿತು ತಮ್ಮ ಎಕ್ಸ್‌ ಖಾತೆಯಲ್ಲಿ ಭಾವನಾತ್ಮಕವಾಗಿ ಬರೆದುಕೊಂಡಿದ್ದರು. ʻತಿರುಪತಿ ಲಡ್ಡು ಅಂದರೆ ಅಮೃತಕ್ಕೆ ಸಮನಾಗಿ ನೋಡುತ್ತೇವೆ. ತಿರುಮಲ ಲಡ್ಡು ಪ್ರಸಾದ ಅಶುದ್ಧವಾಗಿದೆ. ಈ ಪಾಪವನ್ನು ಆರಂಭದಲ್ಲೇ ಪತ್ತೆ ಹಚ್ಚಲು ಸಾಧ್ಯವಾಗದಿರುವುದು ಹಿಂದೂ ಜನಾಂಗಕ್ಕೆ ಕಳಂಕ. ಲಡ್ಡು ಪ್ರಸಾದದಲ್ಲಿ ಪ್ರಾಣಿ ಕೊಬ್ಬು ಬೆರಸಿರುವುದು ಗೊತ್ತಾದ ಕ್ಷಣವೇ ಬೆಚ್ಚಿಬಿದ್ದೆ. ತಪ್ಪಿತಸ್ಥ ಎಂಬ ಭಾವನೆ, ಜನರ ಹಿತಕ್ಕಾಗಿ ಹೋರಾಟ ನಡೆಸುತ್ತಿರುವ ನನಗೆ ಆರಂಭದಲ್ಲಿ ಇಂತಹ ತೊಂದರೆಗಳು ಗಮನಕ್ಕೆ ಬಾರದಿರುವುದು ನೋವು ತಂದಿದೆ. ಸನಾತನ ಧರ್ಮವನ್ನು ನಂಬಿ ಆಚರಿಸುವ ಎಲ್ಲರೂ ಇದಕ್ಕೆ ತಕ್ಕ ಪ್ರಾಯಶ್ಚಿತ್ತವನ್ನು ಮಾಡಿಕೊಳ್ಳಬೇಕುʼ ಎಂದು ಬರೆದುಕೊಂಡಿದ್ದರು. ಇದನ್ನೂ ಓದಿ: Iran Attacks Israel | ದೆಹಲಿಯ ಇಸ್ರೇಲ್ ರಾಯಭಾರ ಕಚೇರಿಯ ಭದ್ರತೆ ಹೆಚ್ಚಳ

  • ಲಡ್ಡು ಲಡಾಯಿ | ಭದ್ರತೆಯ ನೆಪವೊಡ್ಡಿ ತಿರುಪತಿ ಭೇಟಿ ರದ್ದುಗೊಳಿಸಿದ ಜಗನ್ – ಚಂದ್ರಬಾಬು ನಾಯ್ಡು ತಿರುಗೇಟು

    ಲಡ್ಡು ಲಡಾಯಿ | ಭದ್ರತೆಯ ನೆಪವೊಡ್ಡಿ ತಿರುಪತಿ ಭೇಟಿ ರದ್ದುಗೊಳಿಸಿದ ಜಗನ್ – ಚಂದ್ರಬಾಬು ನಾಯ್ಡು ತಿರುಗೇಟು

    – ಸಂಪ್ರದಾಯ, ಭಕ್ತರ ನಂಬಿಕೆಗಳನ್ನ ಗೌರವಿಸಿ ಎಂದ ಹಾಲಿ ಸಿಎಂ

    ತಿರುಪತಿ: ಆಂಧ್ರ ರಾಜಕೀಯದಲ್ಲಿ ತಿರುಪತಿ ಲಡ್ಡು ರಾಜಕೀಯ ತೀವ್ರ ಸ್ವರೂಪ ಪಡೆದುಕೊಂಡಿದೆ. ಭಾರೀ ಹೈಡ್ರಾಮಾ, ತೀವ್ರ ವಿರೋಧದ ನಡುವೆ ಮಾಜಿ ಸಿಎಂ ವೈ.ಎಸ್ ಜಗನ್ ಮೋಹನ್‌ ರೆಡ್ಡಿ (Jagan Mohan Reddy) ತಿರುಪತಿಗೆ ಭೇಟಿಯನ್ನು ರದ್ದು ಮಾಡಿಕೊಂಡರು. ದೇವರ ದರ್ಶನಕ್ಕೆ ಹೋಗ್ತಿದ್ರೆ ನೊಟೀಸ್ ಕೊಟ್ಟು ತಡೆ ಹಿಡೀತಿದ್ದಾರೆ ಎಂದು ಚಂದ್ರಬಾಬು ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ರು. ದೇವರ ದರ್ಶನಕ್ಕೆ ಹೋಗ್ತಿದ್ದಾಗ ಅಡ್ಡಿಪಡಿಸಿರೋದು ದೇಶದಲ್ಲೇ ಇದು ಮೊದಲ ಕೇಸ್. ಆಂಧ್ರದಲ್ಲಿ ರಾಕ್ಷಸ ರಾಜ್ಯವಿದೆ ಎಂದು ಜಗನ್ ವಾಗ್ದಾಳಿ ನಡೆಸಿದ್ರು.

    ಲಡ್ಡು ವಿವಾದವನ್ನು (Tirupati Laddu Controversy) ಮರೆಮಾಚಲು ಡಿಕ್ಲರೇಷನ್ ವಿಚಾರ ದೊಡ್ಡದು ಮಾಡಿದ್ದಾರೆ. ಬರೆದುಕೊಳ್ಳಿ ನನ್ನ ಮತ ಮಾನವೀಯತೆ.. ನಾಲ್ಕು ಗೋಡೆ ಮಧ್ಯೆ ಬೈಬಲ್ ಓದುತ್ತೇನೆ.. ಹೊರಗೆ ಹೋದ್ರೆ ಎಲ್ಲಾ ಧರ್ಮ ಗೌರವಿಸ್ತೇನೆ.. ಹಿಂದೂ ಆಚರಣೆ ಮಾಡ್ತೇನೆ ಎಂದಿದ್ದಾರೆ. ಧರ್ಮದ ಹೆಸರಲ್ಲಿ ಕೀಳು ರಾಜಕೀಯ ನಡೀತಿದೆ ಎಂದು ಜಗನ್ ಕಿಡಿಕಾರಿದ್ದಾರೆ. ಈ ಮಧ್ಯೆ, ಲಡ್ಡು ವಿವಾದಕ್ಕೆ ಸಂಬಂಧಿಸಿದ ಅರ್ಜಿ ವಿಚಾರಣೆಯನ್ನು ಅಕ್ಟೋಬರ್ 4ಕ್ಕೆ ಸುಪ್ರೀಂ ಕೋರ್ಟ್ ಮುಂದೂಡಿದೆ. ಇದನ್ನೂ ಓದಿ: MUDA Case| ರಾಜಧರ್ಮ ಪಾಲಿಸದಿದ್ದರೆ ಅದು ರಾವಣ ರಾಜ್ಯ ಆಗಲಿದೆ: ಕೋರ್ಟ್ ಆದೇಶದಲ್ಲಿ ಏನಿದೆ?

    ಜಗನ್‌ V/S ಚಂದ್ರಬಾಬು ನಾಯ್ಡು:
    ಇನ್ನೂ ಮಾಜಿ ಸಿಎಂ ಜಗನ್‌ ತಿರುಪತಿ ವೆಂಕಟೇಶ್ವರ ದೇವಸ್ಥಾನ ಭೇಟಿಯನ್ನು ಮುಂದೂಡಿದ ಬಳಿಕ ಮತ್ತು ಹಾಲಿ ಮುಖ್ಯಮಂತ್ರಿಗಳ ನಡುವೆ ಮಾತಿನ ಚಕಮಕಿ ನಡೆದಿದೆ. ಜಗನ್‌ ತಿರುಪತಿ ಭೇಟಿ ರದ್ದುಗೊಳಿಸಿದ ಬಗ್ಗೆ ಸಿಎಂ ಚಂದ್ರಬಾಬು ನಾಯ್ಡು (Chandrababu Naidu) ಪ್ರತಿಕ್ರಿಯಿಸಿದ್ದಾರೆ. ಜಗನ್ ತಿರುಮಲ ದೇವಸ್ಥಾನಕ್ಕೆ ತೆಲುಗು ದೇಶಂ ಪಕ್ಷ (ಟಿಡಿಪಿ) ಸರ್ಕಾರ ಅಡ್ಡಿಪಡಿಸಿದೆ ಎಂದು ಸುಳ್ಳು ಹರಡುತ್ತಿದ್ದಾರೆ ಎಂದು ಕಿಡಿ ಕಾರಿದ್ದಾರೆ.

    ಯಾರಾದರೂ ನಿಮ್ಮನ್ನು ಹೋಗದಂತೆ ತಡೆದಿದ್ದಾರಾ? ನೋಟಿಸ್ ಇದ್ದರೇ ಮಾಧ್ಯಮದವರಿಗೆ ತೋರಿಸಿ, ಏಕೆ ಸುಳ್ಳುಗಳನ್ನು ಹರಡುತ್ತಿದ್ದೀರಿ? ಎಂದು ಪ್ರಶ್ನೆ ಮಾಡಿದ್ದಾರೆ. ಇದನ್ನೂ ಓದಿ: ಗಂಗೇನಹಳ್ಳಿ ಡಿನೋಟಿಫಿಕೇಷನ್ ಪ್ರಕರಣ; 1 ಗಂಟೆ ಲೋಕಾಯುಕ್ತ ವಿಚಾರಣೆ ಎದುರಿಸಿದ ಕೇಂದ್ರ ಸಚಿವ ಹೆಚ್‌ಡಿಕೆ

    ಸಾರ್ವಜನಿಕ ಜೀವನದಲ್ಲಿ ಜನರು ಸಂಪ್ರದಾಯಗಳನ್ನು ಅನುಸರಿಸಬೇಕು ಮತ್ತು ಏನು ಮಾಡಬೇಕೋ ಅದನ್ನು ಮಾಡಲೇಬೇಕು. ಪೂಜಾ ಸ್ಥಳಕ್ಕೆ ಭೇಟಿ ನೀಡಬೇಕಾದ್ರೆ, ಅಲ್ಲಿನ ಸಂಪ್ರದಾಯಗಳನ್ನು ಗೌರವಿಸಬೇಕು. ಸಂಪ್ರದಾಯಗಳನ್ನು ಮತ್ತು ಭಕ್ತರ ನಂಬಿಕೆಗಳನ್ನು ಅಗೌರವಗೊಳಿಸಬಾರದು. ಏಕೆಂದರೆ ಅಲ್ಲಿನ ನಂಬಿಕೆಗಳಿಗಿಂತ ಯಾರೂ ಮೇಲಲ್ಲ, ಯಾರೂ ದೇವರಲ್ಲ ಎಂದು ತಿರುಗೇಟು ನೀಡಿದ್ದಾರೆ.