Tag: tirupathi

  • ಶನಿವಾರ ರಾತ್ರಿ ಎಚ್‍ಡಿಕೆಗೆ ಮುಖ್ಯವಾದ ಒಂದು ಸೂಚನೆ ಕೊಟ್ಟ ಎಚ್‍ಡಿಡಿ!

    ಶನಿವಾರ ರಾತ್ರಿ ಎಚ್‍ಡಿಕೆಗೆ ಮುಖ್ಯವಾದ ಒಂದು ಸೂಚನೆ ಕೊಟ್ಟ ಎಚ್‍ಡಿಡಿ!

    ಬೆಂಗಳೂರು: ಭಾರೀ ಸಂಚಲನ ಮೂಡಿಸಿದ್ದ ರಾಜ್ಯ ರಾಜಕಾರಣಕ್ಕೆ ಕೊನೆಗೂ ತೆರೆಬಿದ್ದಿದೆ. ಹೆಚ್ ಡಿ ಕುಮಾರಸ್ವಾಮಿ ಅವರು ಬುಧವಾರ ಪ್ರಮಾಣವಚನ ಸ್ವೀಕಾರ ಮಾಡಲಿದ್ದು, ಈ ಹಿನ್ನೆಲೆಯಲ್ಲಿ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ಅವರು ಹೆಚ್‍ಡಿಕೆಗೆ ಸೂಚನೆ ನೀಡಿದ್ದಾರೆ.

    ಮೇ 23ರಂದು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿರೋ ಹೆಚ್.ಡಿ ಕುಮಾರಸ್ವಾಮಿ ಅವರು ನಿನ್ನೆ ರಾತ್ರಿ ತಂದೆ ಹೆಚ್.ಡಿ ದೇವೇಗೌಡರ ನಿವಾಸಕ್ಕೆ ಭೇಟಿ ನೀಡಿದ್ರು. ಬೆಂಗಳೂರಿನ ಪದ್ಮನಾಭನಗರದಲ್ಲಿರುವ ಹೆಚ್.ಡಿ ದೇವೇಗೌಡರ ನಿವಾಸ ಅಮೋಘಕ್ಕೆ ಭೇಟಿ ಕೊಟ್ಟ ಕುಮಾರಸ್ವಾಮಿ ತಮ್ಮ ತಂದೆಯ ಆಶೀರ್ವಾದ ಪಡೆದರು.

    ನಿನ್ನೆ ತಡ ರಾತ್ರಿ ಸುಮಾರು 2 ಗಂಟೆಗಳ ಕಾಲ ದೇವೇಗೌಡರ ಜೊತೆ ಮಾತುಕತೆ ನಡೆಸಿದ ಕುಮಾರಸ್ವಾಮಿ ಅವರು, ಪ್ರಮಾಣವಚನ ಸ್ವೀಕರಿಸುವವರೆಗೂ ಎಲ್ಲಾ ಶಾಸಕರನ್ನು ಹಿಡಿದಿಟ್ಟುಕೊಳ್ಳುವಂತೆ ಸೂಚನೆ ನೀಡಿದ್ದಾರೆ. ಜೆಡಿಎಸ್ ನ ಯಾವ ಶಾಸಕರಿಗೆ ಮಂತ್ರಿಗಿರಿಯನ್ನು ಕೊಡಬೇಕು ಅನ್ನೋದ್ರ ಬಗ್ಗೆಯೂ ಚರ್ಚೆಯಾಗಿದ್ದು, ಕಾಂಗ್ರೆಸ್ ನ ಯಾವ ಯಾವ ನಾಯಕರನ್ನು ಕ್ಯಾಬಿನೆಟ್ ಗೆ ಸೇರಿಸಬೇಕು ಅನ್ನೋದ್ರ ಬಗ್ಗೆಯೂ ಮಾತುಕತೆ ನಡೆದಿದೆ ಎನ್ನಲಾಗಿದೆ.

    ಜೆಡಿಎಸ್ 15 ಶಾಸಕರಿಗೆ ಸಚಿವ ಸ್ಥಾನ ನೀಡುವ ಬಗ್ಗೆ ನಿರ್ಧರಿಸಿದ್ದು, ಇಂದೂ ಕಾಂಗ್ರೆಸ್ ಹಾಗೂ ಜೆಡಿಎಸ್ ಮುಖಂಡರೊಂದಿಗೆ ಚರ್ಚೆ ನಡೆಯುವ ಸಾಧ್ಯತೆಗಳಿವೆ. ಚರ್ಚೆ ಬಳಿಕ ಹೆಚ್‍ಡಿಕೆ ಇಂದು ಮಧ್ಯಾಹ್ನ ಮೇಲೆ ಎಚ್‍ಎಎಲ್ ಏರ್ ಪೋರ್ಟ್  ನಿಂದ ತಮಿಳುನಾಡಿನ ಶ್ರೀರಂಗಂ ದೇವಸ್ಥಾನಕ್ಕೆ ಹೋಗೋ ಪ್ಲಾನ್ ಮಾಡಿದ್ದಾರೆ ಎಂಬುದಾಗಿ ಪಕ್ಷದ ಮೂಲಗಳಿಂದ ತಿಳಿದುಬಂದಿದೆ.

    ದೇವೇಗೌಡರ ಕುಟುಂಬ ಅತಿಯಾಗಿ ನಂಬುವ ದೈವ ಶ್ರೀರಂಗಮ್ ಹಾಗೂ ತಿರುಪತಿಗೆ ಕುಮಾರಸ್ವಾಮಿ ಹಾಗೂ ರೇವಣ್ಣ ಜೊತೆಯಾಗಿ ತೆರಳಲಿದ್ದಾರೆ. ಚುನಾವಣೆಗೂ ಮುನ್ನ ಜೆಡಿಎಸ್ ಅಭ್ಯರ್ಥಿಗಳ ಬಿ ಫಾರಂಗೂ ಸಹ ಇಲ್ಲಿಯೇ ಪೂಜೆ ಮಾಡಿಸಲಾಗಿತ್ತು. ದೇವೇಗೌಡರು ಸಹ ಈ ದೇವಸ್ಥಾನಗಳಿಗೆ ಭೇಟಿಕೊಡುತ್ತಲೇ ಇರುತ್ತಾರೆ. ಹೀಗಾಗಿ ಕುಮಾರಸ್ವಾಮಿ ಹಾಗೂ ರೇವಣ್ಣ ಇಂದು ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಲಿದ್ದಾರೆ.

  • 150 ವರ್ಷಗಳ ಬಳಿಕ ರಕ್ತಚಂದಿರ ಗ್ರಹಣ- ತಿರುಪತಿ, ಧರ್ಮಸ್ಥಳ, ಕುಕ್ಕೆಯಲ್ಲಿ ದರ್ಶನವಿಲ್ಲ

    150 ವರ್ಷಗಳ ಬಳಿಕ ರಕ್ತಚಂದಿರ ಗ್ರಹಣ- ತಿರುಪತಿ, ಧರ್ಮಸ್ಥಳ, ಕುಕ್ಕೆಯಲ್ಲಿ ದರ್ಶನವಿಲ್ಲ

    ಬೆಂಗಳೂರು, ಮಂಗಳೂರು: ಸೌರವ್ಯೂಹದಲ್ಲಿ ಇಂದು ಚಂದ್ರ ಚೋದ್ಯ ಸಂಭವಿಸಲಿದೆ. 152 ವರ್ಷಗಳ ಬಳಿಕ ಮೊದಲ ಬಾರಿಗೆ ಒಟ್ಟೊಟ್ಟಿಗೆ ಸೂಪರ್‍ಮೂನ್, ಬ್ಲಡ್‍ಮೂನ್, ಬ್ಲೂ ಮೂನ್, ಗೋಚರವಾಗ್ತಿದೆ.

    ರಕ್ತಚಂದಿರ ಗ್ರಹಣದಿಂದಾಗಿ ರಾಜ್ಯದ ಪ್ರಸಿದ್ಧ ದೇವಸ್ಥಾನಗಳಿಗೆ ಬೀಗ ಬಿದ್ದಿದೆ. ಧರ್ಮಸ್ಥಳದ ಮಂಜುನಾಥೇಶ್ವರ, ಕುಕ್ಕೆ, ಚಾಮುಂಡೇಶ್ವರಿ, ತಿರುಪತಿ ತಿಮ್ಮಪ್ಪನ ಸನ್ನಿಧಾನದಲ್ಲಿ ದರ್ಶನವಿಲ್ಲ. ಇದನ್ನೂ ಓದಿ: ಬುಧವಾರ ಚಂದ್ರಗ್ರಹಣದ ಜೊತೆ ಸೂಪರ್ ಮೂನ್, ಬ್ಲಡ್‍ಮೂನ್ ಗೋಚರ- ನಿಮ್ಮ ಎಲ್ಲ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ

    ತಿರುಪತಿಯಲ್ಲಿ ಬೆಳಗ್ಗೆ 11 ಗಂಟೆಗೆ ತಿಮ್ಮಪ್ಪನ ಸನ್ನಿಧಾನದ ಬಾಗಿಲು ಬಂದ್ ಮಾಡಿದ್ರೆ ಮತ್ತೆ ತೆರೆಯೋದು ಇಂದು ರಾತ್ರಿ 9.30ಕ್ಕೆ. ಇತ್ತ ಇದೇ ಮೊದಲ ಬಾರಿಗೆ ಗವಿಗಂಗಾಧರೇಶ್ವನಿಗೆ ಗ್ರಹಣ ಹಿನ್ನೆಲೆಯಲ್ಲಿ ನಾಲ್ಕು ಗಂಟೆಗಳ ಕಾಲ ದರ್ಬೆಯ ಬಂಧನ ಮಾಡಲಾಗಿದೆ. ಗ್ರಹಣ ಮುಗಿದ ಮೇಲೆ ದೋಷ ಕಳೆಯಲು ಹೋಮ ಕೈಗೊಳ್ಳಲಾಗುತ್ತದೆ.

    ರಾತ್ರಿ 9.30-10.30 ವರೆಗೆ ಹೊರಾಂಗಣದಿಂದ ದೇವರ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಧರ್ಮಸ್ಥಳದಲ್ಲೂ ಗ್ರಹಣ ಹಿನ್ನಲೆ ದೇವರ ದರ್ಶನದ ಸಮಯ ಬದಲಾವಣೆ ಮಾಡಲಾಗಿದ್ದು, ಮಧ್ಯಾಹ್ನ 2.30ರಿಂದ 9 ಗಂಟೆ ತನಕ ದೇವರ ದರ್ಶನಕ್ಕೆ ತಡೆ ನೀಡಲಾಗಿದೆ. ರಾತ್ರಿ 9.30 ರಿಂದ 10.30ರವರೆಗೆ ಸಾರ್ವಜನಿಕರಿಗೆ ದೇವರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗುತ್ತದೆ.

    ಶ್ರೀ ಕ್ಷೇತ್ರ ಧರ್ಮಸ್ಥಳ, ಕುಕ್ಕೆ ಸುಬ್ರಹ್ಮಣ್ಯದಲ್ಲಿ ಬೆಳಗ್ಗೆ 6.30ರಿಂದ 9 ಗಂಟೆ ತನಕ ದೇವರ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿದ್ದು, 9 ಗಂಟೆಯಿಂದ ರಾತ್ರಿ 8.30 ರವರೆಗೆ ದೇವಸ್ಥಾನದ ಬಾಗಿಲು ಬಂದ್ ಮಾಡಲಾಗಿದೆ. ಕುಕ್ಕೆ ಸುಬ್ರಹ್ಮಣ್ಯ ಮಧ್ಯಾಹ್ನದ ಅನ್ನಸಂತರ್ಪಣೆ ಇರಲ್ಲ. ವಿಶೇಷ ಅಂದ್ರೆ ದಾವಣಗೆರೆಯ ಹರಪ್ಪನಹಳ್ಳಿಯಲ್ಲಿ ಹುಚ್ಚಂಗಿ ಜಾತ್ರೆ ನಡೀತಿದೆ.

    1866ರ ಮಾರ್ಚ್ 31ರಲ್ಲಿ ಇಂತಹ ಸೋಜಿಗ ಸಂಭವಿಸಿತ್ತು. ಭಾರತದಲ್ಲಿ 35 ವರ್ಷಗಳ ಹಿಂದೆ ಬ್ಲೂಮೂನ್ ಮತ್ತು ಗ್ರಹಣ ಒಟ್ಟಿಗೇ ನಡೆದಿತ್ತು. ಪ್ರತಿನಿತ್ಯ ಕಾಣೋ ಚಂದ್ರನಿಗಿಂತ ಇವತ್ತು ಗೋಚರಿಸೋ ಚಂದ್ರ ಹೆಚ್ಚು ದೊಡ್ಡದಾಗಿ, ಪ್ರಖರವಾಗಿ ಇರಲಿದ್ದಾನೆ. ಚಂದ್ರಮನನ್ನು ಕಣ್ತುಂಬಿಕೊಳ್ಳಲು ವಿಶ್ವವೇ ಬೆರಗುಗಣ್ಣಿನಿಂದ ಕಾಯ್ತಿದೆ. ಭಾರತ ಮಾತ್ರವಲ್ಲದೆ, ಅಮೆರಿಕ, ಈಶಾನ್ಯ, ಯುರೋಪ್, ರಷ್ಯಾ, ಆಸ್ಟ್ರೇಲಿಯಾ, ಏಷ್ಯ, ಹಿಂದು ಮಹಾಸಾಗರ, ಫೆಸಿಫಿಕ್ ಮಹಾಸಾಗರದಲ್ಲಿ ಗ್ರಹಣ ಕಾಣಿಸಲಿದೆ.

  • ಬಿಬಿಎಂಪಿ ಕಾಂಗ್ರೆಸ್ ಪಾಲಿಕೆ ಸದಸ್ಯೆ ತಿರುಪತಿಯಲ್ಲಿ ನಿಧನ

    ಬಿಬಿಎಂಪಿ ಕಾಂಗ್ರೆಸ್ ಪಾಲಿಕೆ ಸದಸ್ಯೆ ತಿರುಪತಿಯಲ್ಲಿ ನಿಧನ

    ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಸದಸ್ಯೆಯೊಬ್ಬರು ಹೃದಯಾಘಾತವಾಗಿ ನಿಧನರಾಗಿದ್ದಾರೆ.

    ವಾರ್ಡ್ 121 ಬಿನ್ನಿಪೇಟೆಯ ಮಹದೇವಮ್ಮ ನಾಗರಾಜ್ ಮೃತಪಟ್ಟ ಸದಸ್ಯೆಯಾಗಿದ್ದು, ಇವರು ಕುಟುಂಬ ಸಮೇತ ಪ್ರಸಿದ್ಧ ಕ್ಷೇತ್ರ ತಿರುಪತಿಗೆ ಹೋಗಿದ್ದರು. ಇಂದು ಮುಂಜಾನೆ ದರ್ಶನ ಮುಗಿಸಿ ಹಿಂದಿರುಗುವಾಗ ಮಾರ್ಗ ಮಧ್ಯದಲ್ಲಿ ಎದೆನೋವು ಕಾಣಿಸಿಕೊಂಡಿದೆ. ಕೂಡಲೇ ಕುಟುಂಬಸ್ಥರು ಅವರನ್ನು ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗ ಮಧ್ಯದಲ್ಲೇ ಕೊನೆಯುಸಿರೆಳೆದಿದ್ದಾರೆ.

    ಮಹದೇವಮ್ಮ ಅವರ ಮೃತದೇಹವನ್ನು ತಿರುಪತಿಯಿಂದ ಬೆಂಗಳೂರಿಗೆ ರವಾನಿಸಲಾಗಿದೆ. ಬಿಬಿಎಂಪಿ ಮೇಯರ್, ಆಯುಕ್ತರು, ಪಾಲಿಕೆ ಸದಸ್ಯರು ಮಹದೇವಮ್ಮ ಅವರ ಸಾವಿಗೆ ಸಂತಾಪ ಸೂಚಿಸಿದ್ದಾರೆ.

     

  • ತಿರುಪತಿ ಮಾರ್ಗ ಮಧ್ಯೆ ಜವರಾಯನ ಅಟ್ಟಹಾಸ – ಬಸ್, ಟೆಂಪೋ ಟ್ರಾವೆಲರ್ ಡಿಕ್ಕಿಯಾಗಿ 5 ಜನ ದುರ್ಮರಣ

    ತಿರುಪತಿ ಮಾರ್ಗ ಮಧ್ಯೆ ಜವರಾಯನ ಅಟ್ಟಹಾಸ – ಬಸ್, ಟೆಂಪೋ ಟ್ರಾವೆಲರ್ ಡಿಕ್ಕಿಯಾಗಿ 5 ಜನ ದುರ್ಮರಣ

    ಕೋಲಾರ: KSRTC ಬಸ್, ಟೆಂಪೋ ಟ್ರಾವೆಲರ್ ನಡುವೆ ಮುಖಾಮುಖಿ ಡಿಕ್ಕಿಯಾಗಿ ಮೂವರು ಮಹಿಳೆಯರು ಸೇರಿದಂತೆ ಐದು ಜನ ಸಾವನ್ನಪ್ಪಿದ್ದಾರೆ.

    ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ಬಂಗಾರು ಪಾಳ್ಯಂನ ಕೆಜಿ ಸತ್ರಂ ಬಳಿ ಈ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಬೆಂಗಳೂರಿನಿಂದ ತಿರುಪತಿಗೆ ತೆರಳುತ್ತಿದ್ದ ಸಾರಿಗೆ ಬಸ್‍ಗೆ ತಿರುಪತಿಯಿಂದ ಬರುತ್ತಿದ್ದ ಟೆಂಪೋ ಟ್ರಾವೆಲರ್ ಡಿಕ್ಕಿಯಾಗಿದೆ. ಪರಿಣಾಮ ಐವರು ಸಾವನ್ನಪ್ಪಿದ್ದು, ಟೆಂಪೋದಲ್ಲಿದ್ದ 11 ಜನ ಗಾಯಗೊಂಡಿದ್ದಾರೆ.

    ಟೆಂಪೋ ಟ್ರಾವೆಲರ್ ನಲ್ಲಿದ್ದ 18 ಮಂದಿ ಛತ್ತೀಸ್‍ಗಢದಿಂದ ತಿರುಪತಿ ದರ್ಶನ ಪಡೆದು ಮೈಸೂರು ಪ್ರವಾಸ ಕೈಗೊಂಡಿದ್ರು. ಸಾರಿಗೆ ಬಸ್‍ನಲ್ಲಿದ್ದವರು ಸಣ್ಣಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

  • ಸಾಲು ಸಾಲು ರಜೆ: ಶನಿವಾರ ಒಂದೇ ದಿನ ತಿರುಪತಿ ಹುಂಡಿಯಲ್ಲಿ ಬಿದ್ದ ಕಾಣಿಕೆ ಎಷ್ಟು ಗೊತ್ತಾ?

    ಸಾಲು ಸಾಲು ರಜೆ: ಶನಿವಾರ ಒಂದೇ ದಿನ ತಿರುಪತಿ ಹುಂಡಿಯಲ್ಲಿ ಬಿದ್ದ ಕಾಣಿಕೆ ಎಷ್ಟು ಗೊತ್ತಾ?

    ತಿರುಪತಿ: ಸಾಲು ಸಾಲು ರಜೆ ಹಿನ್ನೆಲೆಯಲ್ಲಿ ತಿರುಪತಿ ದೇವಾಲಯದದಲ್ಲಿ ಶನಿವಾರ ಒಂದೇ ದಿನ ಹುಂಡಿಯಲ್ಲಿ 3 ಕೋಟಿಗೂ ಅಧಿಕ ಹಣ ಸಂಗ್ರಹವಾಗಿದೆ.

    93 ಸಾವಿರಕ್ಕೂ ಹೆಚ್ಚು ಭಕ್ತರು ಶನಿವಾರ ತಿರುಪತಿ ದೇವಾಲಯಕ್ಕೆ ಭೇಟಿ ನೀಡಿದ್ದು, ರೈಲ್ವೇ ನಿಲ್ದಾಣ ಮತ್ತು ಬಸ್ ನಿಲ್ದಾಣದಲ್ಲಿ ವಿಪರೀತ ಜನ ದಟ್ಟನೆ ಇತ್ತು. ಶನಿವಾರ ಒಂದೇ ದಿನ 3 ಕೋಟಿ ರೂ. ಹಣ ಹುಂಡಿಗೆ ಬಿದ್ದಿದ್ದು, ಎಣಿಕೆ ಕಾರ್ಯ ಮುಂದುವರಿಯುತ್ತಿದೆ ಎಂದು ಟಿಟಿಡಿ ಮೂಲಗಳನ್ನು ಆಧರಿಸಿ ಮಾಧ್ಯಮವೊಂದು ವರದಿ ಮಾಡಿದೆ.

    ರೈಲ್ವೇ ಮುಂಗಡ ಬುಕ್ಕಿಂಗ್, ಬಸ್ ಬುಕ್ಕಿಂಗ್, ವಿಚರಣೆ ಕೊಠಡಿಯಲ್ಲಿ ಸಮಸ್ಯೆ ಸೃಷ್ಟಿಯಾಗಿತ್ತು. ಸಂಖ್ಯೆ ಜಾಸ್ತಿಯಾಗಿದ್ದ ಹಿನ್ನೆಲೆಯಲ್ಲಿ ಜನರನ್ನು ನಿಯಂತ್ರಿಸಲು ಅಧಿಕಾರಿಗಳು ಪೊಲೀಸರು ಹರಸಾಹಸ ಪಟ್ಟಿದ್ದರು. ದೀರ್ಘ ರಜೆ ರುವ ಹಿನ್ನೆಲೆಯಲ್ಲಿ ಭಕ್ತರು ಜಾಸ್ತಿ ಸಂಖ್ಯೆಯಲ್ಲಿ ಬರುವ ಮಾಹಿತಿ ಇದ್ದರೂ ಭಾರತೀಯ ರೈಲ್ವೇ ಯಾವುದೇ ವಿಶೇಷ ರೈಲನ್ನು ಓಡಿಸದ್ದಕ್ಕೆ ಪ್ರಯಾಣಿಕರು ತಮ್ಮ ಅಸಮಾಧಾನವನ್ನು ಹೊರಹಾಕಿದರು.

    ಬೆಂಗಳೂರು ಮತ್ತು ಚೆನ್ನೈ ಕಡೆಯಿಂದ ಜಾಸ್ತಿ ಸಂಖ್ಯೆಯಲ್ಲಿ ಜನರು ಆಗಮಿಸಿದ್ದರು. ಜನ ಸಂಖ್ಯೆ ಹೆಚ್ಚಾದ ಹಿನ್ನೆಲೆಯಲ್ಲಿ ಈ ಕಡೆಯಲ್ಲಿ ಹೆಚ್ಚುವರಿ ಬಸ್ ಗಳನ್ನು ಹಾಕಲಾಯಿತು. ಬಹಳಷ್ಟು ಪ್ರಯಾಣಿಕರು ಸ್ಥಳದಲ್ಲಿ ಮುಂಗಡ ಬುಕ್ಕಿಂಗ್ ಮಾಡಲು ಬಂದಿದ್ದರು ಎಂದು ಆಂಧ್ರಪ್ರದೇಶ ಸಾರಿಗೆ ಇಲಾಖೆಯ ಟ್ರಾಫಿಕ್ ಮ್ಯಾನೇಜರ್ ಭಾಸ್ಕರ್ ರೆಡ್ಡಿ ತಿಳಿಸಿದರು.

    ಸ್ವಾತಂತ್ರ್ಯ ದಿನಾಚರಣೆಯ ಹಿನ್ನೆಲೆಯಲ್ಲಿ ನಗರದಲ್ಲಿ ನಡೆಯಲಿರುವ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯ ಪೊಲೀಸರನ್ನು ನಿಯೋಜಿಸಲಾಗಿತ್ತು. ಪ್ರವಾಸಿಗರ ಸಂಖ್ಯೆ ಹೆಚ್ಚಳವಾಗಿದ್ದರಿಂದ ನಗರದಲ್ಲಿ ವಿಪರೀತ ಟ್ರಾಫಿಕ್ ಸಮಸ್ಯೆಯಾಗಿತ್ತು.

    ಇದನ್ನೂ ಓದಿ: ತಿರುಪತಿ ದೇಗುಲಕ್ಕೆ ತೆಲಂಗಾಣದಿಂದ ಚಿನ್ನ ಕಾಣಿಕೆ: ಎಷ್ಟು ಚಿನ್ನ? ಬೆಲೆ ಎಷ್ಟು?

  • ತಿರುಮಲದಲ್ಲಿ ವ್ಯಕ್ತಿಯಿಂದ ಪಿಸ್ತೂಲ್, 14 ಬುಲೆಟ್ ವಶ

    ತಿರುಮಲದಲ್ಲಿ ವ್ಯಕ್ತಿಯಿಂದ ಪಿಸ್ತೂಲ್, 14 ಬುಲೆಟ್ ವಶ

    ತಿರುಮಲ: ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ತಿರುಮಲದಲ್ಲಿ ವ್ಯಕ್ತಿಯೊಬ್ಬರು ಕಾರಿನಲ್ಲಿದ್ದ ಪಿಸ್ತೂಲ್ ಹಾಗೂ 14 ಬುಲೆಟ್‍ಗಳನ್ನ ವಶಪಡಿಸಿಕೊಳ್ಳಲಾಗಿದೆ.

    ಇಲ್ಲಿನ ಅಲಿಪಿರಿ ಚೆಕ್‍ಪೋಸ್ಟ್ ಬಳಿ ತಪಾಸಣೆ ವೇಳೆ ಪುಣೆ ಮೂಲದ ವ್ಯಕ್ತಿ ಕಾರಿನಲ್ಲಿ ಪಿಸ್ತೂಲ್ ಹಾಗೂ ಬುಲೆಟ್ ಅಡಗಿಸಿಟ್ಟಿದ್ದು ಪತ್ತೆಯಾಗಿದೆ. ಚೆಕ್‍ಪೋಸ್ಟ್ ನ ಸೆಕ್ಯೂರಿಟಿ ಗಾರ್ಡ್‍ಗಳು ಪಿಸ್ತೂಲ್ ಹಾಗೂ ಬುಲೆಟ್‍ಗಳನ್ನು ವಶಪಡಿಸಿಕೊಂಡಿದ್ದಾರೆ.

    ತಿರುಪತಿ ವೆಂಕಟೇಶ್ವರ ಸನ್ನಿಧಿಯ ಪ್ರವೇಶ ದ್ವಾರದ ಬಳಿ ಈ ಚೆಕ್‍ಪೋಸ್ಟ್ ಇದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಚ್ಚಿನ ವಿಚಾರಣೆಗಾಗಿ ಇಬ್ಬರು ಮಹಿಳೆಯರು ಸೇರಿದಂತೆ ನಾಲ್ವರನ್ನು ವಶಕ್ಕೆ ಪಡೆಯಲಾಗಿದೆ.

    ದೇವಾಲಯದ ಭದ್ರತಾ ವ್ಯವಸ್ಥೆಯನ್ನು ಮತ್ತಷ್ಟು ಬಿಗಿಗೊಳಿಸಲಾಗಿದೆ.

  • ಟಿಟಿಡಿಯಿಂದ ತಿರುಪತಿ ತಿಮ್ಮಪ್ಪನ ಭಕ್ತರಿಗೆ ಬಿಗ್ ಶಾಕ್

    ಟಿಟಿಡಿಯಿಂದ ತಿರುಪತಿ ತಿಮ್ಮಪ್ಪನ ಭಕ್ತರಿಗೆ ಬಿಗ್ ಶಾಕ್

    ತಿರುಪತಿ: ತಿಮ್ಮಪ್ಪನ ಹೆಸರು ಹೇಳುತ್ತಲೇ ಭಕ್ತರಿಗೆ ಮೊದಲು ನೆನಪಿಗೆ ಬರೋದು ಲಡ್ಡು ಪ್ರಸಾದ. ತಿರುಪತಿ ಲಡ್ಡುಗಿರೋ ಡಿಮಾಂಡ್ ಎಲ್ರಿಗೋ ಗೊತ್ತೇ ಇದೆ. ಇದೀಗ ಈ ಲಡ್ಡು ಕಾರಣದಿಂದಾಗಿ ವೆಂಕಟೇಶ್ವರನ ಭಕ್ತರಿಗೆ ಬಿಗ್ ಶಾಕ್ ಸಿಗುವ ಪರಿಸ್ಥಿತಿ ಏರ್ಪಟ್ಟಿದೆ.

    ಇಷ್ಟು ದಿನ ಕಾಲ್ನಡಿಗೆ ಮೂಲಕ ತಿರುಮಲಕ್ಕೆ ಬರೋ ಭಕ್ತರಿಗೆ ಇದ್ದ ದಿವ್ಯ ದರ್ಶನವನ್ನು ಶೀಘ್ರದಲ್ಲೇ ರದ್ದು ಮಾಡಲಿದ್ದಾರೆ. ಸದ್ಯ ರಶ್ ಇರೋ ದಿನಗಳಲ್ಲಿ ಮಾತ್ರ ಅಂತಾ ಹೇಳ್ತಿದೆ ಟಿಟಿಡಿ. ಆದ್ರೆ ಮುಂದಿನ ದಿನಗಳಲ್ಲಿ ದಿವ್ಯ ದರ್ಶನವೇ ಇಲ್ಲವಾದರೂ ಅಚ್ಚರಿಯಿಲ್ಲ.

    ದಿವ್ಯ ದರ್ಶನ ರದ್ದತಿಗೆ ಕಾರಣ ಲಡ್ಡು ಎಂಬುದು ಇಲ್ಲಿ ವಿಪರ್ಯಾಸ. ಕಾಲ್ನಡಿಗೆ ಮೂಲಕ ದಿವ್ಯದರ್ಶನಕ್ಕೆ ಬರೋ ಭಕ್ತರಿಗೆ ಎರಡು ಲಡ್ಡು ಉಚಿತವಾಗಿ ವಿತರಿಸಲಾಗ್ತಿದೆ. ಇದ್ರಿಂದ ಟಿಟಿಡಿಗೆ ನಷ್ಟ ಆಗ್ತಿದೆಯಂತೆ. ಆದ್ರೆ ದಿನಕ್ಕೆ ಏನಿಲ್ಲ ಅಂದ್ರೂ ತಿಮ್ಮಪ್ಪನ ಹುಂಡಿಗೆ 2 ಕೋಟಿ ರೂಪಾಯಿ ಹರಕೆ ರೂಪದಲ್ಲಿ ಬಂದು ಬೀಳುತ್ತೆ. ಜೊತೆಗೆ ಕಾಣಿಕೆಗಳೂ ಬೇರೆ ಬರುತ್ವೆ. ಆದ್ರೂ ಸಹ ಆಡಳಿತ ಮಂಡಳಿ ಮಾತ್ರ 2 ಲಡ್ಡು ಉಚಿತವಾಗಿ ಕೊಡೋದ್ರಿಂದ ಭಾರೀ ನಷ್ಟ ಆಗ್ತಿದೆ ಅಂತ ಹೇಳ್ತಿದೆ.

    ಕಾಲ್ನಡಿಗೆಯಲ್ಲಿ ಹೋದ್ರೂ ಸಾಮಾನ್ಯ ಸಾಲಿನಲ್ಲೇ ದರ್ಶನ: ಜುಲೈ 7 ರಿಂದ ಪ್ರತಿ ಶುಕ್ರವಾರ, ಶನಿವಾರ ಮತ್ತು ಭಾನುವಾರ ಕಾಲ್ನಡಿಗೆಯಲ್ಲಿ ಬರೋ ಭಕ್ತರಿಗೆ ದಿವ್ಯ ದರ್ಶನ ಇರೋದಿಲ್ಲ ಎನ್ನಲಾಗ್ತಿದೆ. ಬದಲಿಗೆ ಸಾಮಾನ್ಯರ ದೊಡ್ಡ ಸಾಲಿನಲ್ಲೇ ಸಾಗಬೇಕಾಗಿದೆ. ರಾತ್ರಿಯೆಲ್ಲಾ ಬೆಟ್ಟ ಹತ್ತಿ ಮತ್ತೆ ಕ್ಯೂನಲ್ಲಿ ನಿಲ್ಲಬೇಕು ಅಂದ್ರೆ ಭಕ್ತರಿಗೆ ಕಷ್ಟವಾಗಲಿದೆ.

  • ಉಡುಪಿಯಿಂದ ತಿರುಪತಿಗೆ ಹೋಗ್ತಿದ್ದ ಟೂರಿಸ್ಟ್ ಬಸ್ ಪಲ್ಟಿ- 10 ಮಂದಿಗೆ ಗಾಯ

    ಉಡುಪಿಯಿಂದ ತಿರುಪತಿಗೆ ಹೋಗ್ತಿದ್ದ ಟೂರಿಸ್ಟ್ ಬಸ್ ಪಲ್ಟಿ- 10 ಮಂದಿಗೆ ಗಾಯ

    ಮಂಗಳೂರು: ಉಡುಪಿಯಿಂದ ತಿರುಪತಿಗೆ ಹೋಗುತ್ತಿದ್ದ ಬಸ್, ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದ್ರೆಯ ಬೆಳುವಾಯಿಯಲ್ಲಿ ನಡೆದಿದೆ.

    ಸುಮಾರು 32 ಮಂದಿ ಪ್ರಯಾಣಿಕರೊಂದಿಗೆ ತಿರುಪತಿಗೆ ಹೋಗುತ್ತಿದ್ದ ತಿರುಮಲ ಖಾಸಗಿ ಟೂರಿಸ್ಟ್ ಬಸ್ ಕೆಸರು ಗದ್ದೆ ಎಂಬಲ್ಲಿ ಪಲ್ಟಿಯಾಗಿದ್ದು ಹತ್ತು ಮಂದಿಗೆ ಗಾಯವಾಗಿದೆ. ಗಾಯಾಳುಗಳನ್ನು ಮೂಡಬಿದ್ರೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

    ಇಂದು ಮುಂಜಾನೆ 5 ಗಂಟೆ ಸುಮಾರಿಗೆ ಬಸ್ ಪಲ್ಟಿಯಾಗಿದ್ದು ಚಾಲಕ ನಿದ್ದೆಗೆ ಜಾರಿದ್ದರಿಂದ ಅಫಘಾತ ಸಂಭವಿಸಿದೆ ಎನ್ನಲಾಗಿದೆ. ಈ ಬಗ್ಗೆ ಮೂಡಬಿದ್ರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.