Tag: Tirunelveli

  • ತಮಿಳುನಾಡಿನ ತಿರುನೆಲ್ವೇಲಿ – ಶಿವಮೊಗ್ಗಕ್ಕೆ ಮತ್ತೊಂದು ವಿಶೇಷ ರೈಲು

    ತಮಿಳುನಾಡಿನ ತಿರುನೆಲ್ವೇಲಿ – ಶಿವಮೊಗ್ಗಕ್ಕೆ ಮತ್ತೊಂದು ವಿಶೇಷ ರೈಲು

    ಶಿವಮೊಗ್ಗ: ಪ್ರಯಾಣಿಕರ ದಟ್ಟಣೆ ಕಡಿಮೆ ಮಾಡಲು ತಮಿಳುನಾಡಿನ (Tamil Nadu) ತಿರುನೆಲ್ವೇಲಿ (Tirunelveli) – ಶಿವಮೊಗ್ಗ (Shivamogga) ಮಧ್ಯೆ ಒಂದು ಟ್ರಿಪ್‌ ವಿಶೇಷ ರೈಲು (Special Train) ಸಂಚರಿಸಲಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

    ವಿಶೇಷ ರೈಲಿನ ವೇಳಾಪಟ್ಟಿ
    ಆಗಸ್ಟ್‌ 17ರಂದು ತಿರುನೆಲ್ವೇಲಿಯಿಂದ ಶಿವಮೊಗ್ಗಕ್ಕೆ (ರೈಲು ಸಂಖ್ಯೆ 06103) ಒಂದು ಟ್ರಿಪ್‌ ರೈಲು ಸಂಚರಿಸಲಿದೆ. ಆಗಸ್ಟ್‌ 18ರಂದು ಶಿವಮೊಗ್ಗದಿಂದ ತಿರುನೆಲ್ವೇಲಿಗೆ (ರೈಲು ಸಂಖ್ಯೆ 06104) ಒಂದು ಟ್ರಿಪ್‌ ರೈಲು ಸಂಚರಿಸಲಿದೆ. ‌ ಇದನ್ನೂ ಓದಿ: ಶಿವಮೊಗ್ಗ | ಆಟೋ ಕಾಂಪ್ಲೆಕ್ಸ್‌ನಲ್ಲಿ ಅಗ್ನಿ ಅವಘಡ – 2 ಕಾರು ಭಸ್ಮ

    ವಿಶೇಷ ರೈಲು ತಿರುನೆಲ್ವೇಲಿಯಿಂದ ಭಾನುವಾರ ಸಂಜೆ 4:20ಕ್ಕೆ ಹೊರಡಲಿದೆ. ಸೋಮವಾರ ಮಧ್ಯಾಹ್ನ 1:00 ಗಂಟೆಗೆ ಶಿವಮೊಗ್ಗ ತಲುಪಲಿದೆ. ಶಿವಮೊಗ್ಗದಿಂದ ಸೋಮವಾರ ಮಧ್ಯಾಹ್ನ 2:20ಕ್ಕೆ ಹೊರಡಲಿದೆ. ಮಂಗಳವಾರ ಬೆಳಗ್ಗೆ 10:45ಕ್ಕೆ ತಿರುನಲ್ವೆಲಿಗೆ ತಲುಪಲಿದೆ. ಈ ರೈಲು ಭದ್ರಾವತಿ, ಅರಸಿಕೆರೆ ಬೆಂಗಳೂರು ಮಾರ್ಗವಾಗಿ ತಮಿಳುನಾಡಿನ ತಿರುನಲ್ವೆಲಿ ತಲುಪಲಿದೆ.

    ವಿಶೇಷ ರೈಲು ಒಟ್ಟು 18 ಬೋಗಿಗಳನ್ನು ಹೊಂದಿದ್ದು, ಈ ಪೈಕಿ 2 ಟೈರ್‌ ಎಸಿ ಕೋಚ್‌ – 1, 3 ಟೈರ್‌ ಎಸಿ ಕೋಚ್‌ – 1, 3 ಟೈರ್‌ ಸ್ಲೀಪರ್‌ ಕೋಚ್‌ -9, ಜನರಲ್‌ ಕೋಚ್‌ – 4, ಸಿಟ್ಟಿಂಗ್‌ ಕಮ್‌ ಲಗೇಜ್‌ ಕೋಚ್‌ – 2 ಬೋಗಿಗಳನ್ನು ಹೊಂದಿರುತ್ತದೆ. ಇದನ್ನೂ ಓದಿ: Dharmasthala‌ Case | ಇಡೀ ದೇಶದ ಹಿಂದೂಗಳಿಗೆ ನೋವಾಗಿದೆ – ಅನಾಮಿಕನನ್ನು ಬಂಧಿಸಿ: ಈಶ್ವರಪ್ಪ

  • ಡ್ರೋಣ್ ಕ್ಯಾಮೆರಾ ಮೂಲಕ ಆರೋಪಿ ಸೆರೆಹಿಡಿಯುವಲ್ಲಿ ಪೊಲೀಸರು ಯಶಸ್ವಿ..!

    ಡ್ರೋಣ್ ಕ್ಯಾಮೆರಾ ಮೂಲಕ ಆರೋಪಿ ಸೆರೆಹಿಡಿಯುವಲ್ಲಿ ಪೊಲೀಸರು ಯಶಸ್ವಿ..!

    ತಿರುನಲ್ವೇಲಿ (ತಮಿಳುನಾಡು): `ಬಂಡೆಯಿಂದ ಬಂಡೆಗೆ ಹಾರುವ ಕಲೆ ಕರಗತ ಮಾಡಿಕೊಂಡಿದ್ದ ಆರೋಪಿಯೊಬ್ಬ ಹಲವು ದಿನಗಳಿಂದ ತೆನ್ಕಾಶಿಯ ಚಿನ್ನಪೋತಿ ಎಂಬ ಚಿಕ್ಕಗುಡ್ಡದಲ್ಲಿ ತಲೆ ಮರೆಸಿಕೊಂಡಿದ್ದ. ಪೊಲೀಸರು ಸಹ ಒಂದು ಹಂತದವರೆಗೆ ಅವನ ಕಾರ್ಯತಂತ್ರವನ್ನೆಲ್ಲ ವೀಕ್ಷಿಸಲು ಎರಡು ಡ್ರೋಣ್ ಕ್ಯಾಮೆರಾವನ್ನು ನಿಯೋಜಿಸಿದ್ದರು. ಸಮಯ ನೋಡಿ ಕಾದುಕುಳಿತಿದ್ದ ಪೊಲೀಸರು ಸಮೀಪದಲ್ಲೇ ಇದ್ದ ಹೊಂಡದಲ್ಲಿ ಆತನನ್ನು ಸೆರೆಹಿಡಿಯುವಲ್ಲಿ ಯಶಸ್ವಿಯಾದರು.

    ಹೌದು. ಹಲವು ದಿನಗಳಿಂದ ಗುಡ್ಡದಲ್ಲೇ ತಲೆ ಮರೆಸಿಕೊಂಡಿದ್ದ ಆರೋಪಿ ಶಾಹುಲ್ ಹಮೀದ್ ಅಲಿಯಾಸ್ ಲೆಫ್ಟ್ ಸಾಹುಲ್ (32) ಸಿಕ್ಕಿಬಿದ್ದಿರುವ ಘಟನೆ ತಮಿಳುನಾಡಿನ ತಿರನ್ವೇಲಿಯಲ್ಲಿ ಬೆಳಕಿಗೆ ಬಂದಿದೆ. ಇದನ್ನೂ ಓದಿ: ರಾಯಚೂರಿನಲ್ಲಿ ಮದ್ಯ ಮಾರಾಟ ನಿಷೇಧ

    ಈ ಕುರಿತು ಮಾಹಿತಿ ನೀಡಿದ ಪೊಲೀಸ್ ಅಧಿಕಾರಿ, ಮೊದಲಿಗೆ ಆಯುಧಗಳನ್ನು ಒಪ್ಪಿಸಿ ಶರಣಾಗುವಂತೆ ತಿಳಿಸಿದರು. ಪೊಲೀಸರು ಸುತ್ತುವರಿದಿದ್ದರಿಂದ ಅತನಿಗೆ ತಪ್ಪಿಸಿಕೊಳ್ಳಲು ಆಗಲಿಲ್ಲ. ಇದಕ್ಕೂ ಮುನ್ನ ಡ್ರೋಣ್ ಮೂಲಕ ವೀಕ್ಷಿಸಿದಾಗ ಶಾಹುಲ್ ಕೊಳದ ಮೇಲ್ಮೈಗೆ ಬರುತ್ತಿರುವುದನ್ನು ತೋರಿಸಿತು. ಎತ್ತರದ ಗಿಡಗಂಟಿಗಳೂ ಅಲ್ಲಿ ಬೆಳೆದಿದ್ದರಿಂದ ಪೊಲೀಸರೇ ಹೊಂಡಕ್ಕಿಳಿದು ಆರೋಪಿಯನ್ನು ಕರೆತರುವಲ್ಲಿ ಯಶಸ್ವಿಯಾದರು.

    ಏನಿದು ಘಟನೆ? 
    ಇದೇ ಮಾರ್ಚ್ 10ರಂದು 50 ವರ್ಷದ ಕುರುಬ ಪೀರ್ ಮೊಹಮ್ಮದ್ ಎಂಬವರ ಮೇಲೆ ಶಾಹುಲ್ ಹಲ್ಲೆ ನಡೆಸಿ ತೆನ್ಕಾಶಿಯ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದ. ಗಂಭಿರ ಗಾಯಗೊಂಡಿದ್ದರಿಂದ ಆತನನನ್ನು ತಿರುನಲ್ವೇಲಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಯಿತು. ಈ ವೇಳೆ ತಪ್ಪಿಸಿಕೊಂಡು ಗುಡ್ಡದಲ್ಲಿ ಅಡಗಿಕೊಂಡಿದ್ದ ಎನ್ನಲಾಗಿದೆ. ಇದನ್ನೂ ಓದಿ: ಅಪ್ಪು ಹುಟ್ಟುಹಬ್ಬಕ್ಕೆ ಕನಸಿನ ‘ಗಂಧದಗುಡಿ’ ಫಸ್ಟ್ ಲುಕ್ ರಿಲೀಸ್

    ಕಾಡಿನ ಮಾರ್ಗ ನಿರ್ಬಂಧಿಸಿದ್ದರಿಂದ ಶಾಹುಲ್ ಹೊಂಡದಲ್ಲಿ ಸ್ನಾನಕ್ಕೆ ಬರುವ ಮಹಿಳೆಯರಿಗೂ ಬೆದರಿಕೆಯೊಡಿದ್ದನು ಎನ್ನಲಾಗಿದೆ. ಇಲ್ಲಿನ ಗುಡ್ಡ ನೀರು ಹಾಗೂ ದೊಡ್ಡದೊಡ್ಡ ಗಿಡಗಂಟಿಗಳು ಬೆಳೆದಿದ್ದರಿಂದ ಆರೋಪಿಯನ್ನು ಬಂಧಿಸುವುದು ಸಾಹಸವೇ ಆಗಿತ್ತು. ಬಂಡೆಯಿಂದ ಹಾದುಹೋಗಿ ಹಿಡಿಯಲು ಮುಂದಾದಾಗ ಆತ ಮತ್ತೊಂದು ಬಂಡೆ ಮಾರ್ಗವಾಗಿ ನುಸುಳುತ್ತಿದ್ದನು. ನಂತರ ಇನ್ಸ್‍ಪೆಕ್ಟರ್ ಬಾಲಮುರುಗನ್ ನೇತೃತ್ವದ ಪೊಲೀಸ್ ತಂಡವನ್ನು ಸ್ಥಳಕ್ಕೆ ಕಳುಹಿಸಲಾಯಿತು, ಅವರು ಮಾರ್ಚ್ 15 ರಂದು ಡ್ರೋನ್‍ಗಳನ್ನು ಬಳಸಲು ನಿರ್ಧರಿಸಿದರು.

    ವ್ಯಾಪಕ ಶೋಧಕಾರ್ಯದ ನಂತರ ಆತನನ್ನು ಪತ್ತೆ ಹಚ್ಚಿ ಬಂಧಿಸಿ ಐಪಿಸಿ ಸೆಕ್ಷನ್ 341 (ತಪ್ಪು ಸಂಯಮಕ್ಕೆ ಶಿಕ್ಷೆ), 294 (ಬಿ) (ಅಶ್ಲೀಲ ಕೃತ್ಯಗಳು ಮತ್ತು ಗೀತೆ), 324 (ಅಪಾಯಕಾರಿ ಆಯುಧಗಳು ಅಥವಾ ವಿಧಾನಗಳಿಂದ ಸ್ವಯಂಪ್ರೇರಣೆಯಿಂದ ಗಾಯವನ್ನುಂಟು ಮಾಡಿದಾಗ), 506 (2) (ಅಪರಾಧಕ್ಕೆ ಬೆದರಿಕೆಯೊಡ್ಡಿದಾಗ) ಅಡಿಯಲ್ಲಿ ಎಫ್‍ಐಆರ್ ದಾಖಲಿಸಲಾಗಿದೆ. ತೆನ್ಕಾಶಿ ಪೊಲೀಸ್ ವರಿಷ್ಠಾದಿಕಾರಿ ಆರ್.ಕೃಷ್ಣ ಅವರು ಪೊಲೀಸರ ಕಾರ್ಯಾಚರಣೆಗೆ ಟ್ವೀಟ್ ಮೂಲಕ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

  • ಮಗಳನ್ನು ಅಂಗನವಾಡಿಗೆ ಸೇರಿಸಿದ್ರು ಐಎಎಸ್ ಅಧಿಕಾರಿ- ಕನ್ನಡತಿಯ ನಿರ್ಧಾರಕ್ಕೆ ಜನರ ಮೆಚ್ಚುಗೆ

    ಮಗಳನ್ನು ಅಂಗನವಾಡಿಗೆ ಸೇರಿಸಿದ್ರು ಐಎಎಸ್ ಅಧಿಕಾರಿ- ಕನ್ನಡತಿಯ ನಿರ್ಧಾರಕ್ಕೆ ಜನರ ಮೆಚ್ಚುಗೆ

    ಚೆನ್ನೈ: ಕರ್ನಾಟಕ ಮೂಲದವರಾದ ತಮಿಳುನಾಡಿನ ತಿರುನೆಲ್ವೇಲಿ ಜಿಲ್ಲಾಧಿಕಾರಿ ಶಿಲ್ಪಾ ಪ್ರಭಾಕರ್ ಸತೀಶ್ ಅವರು ತಮ್ಮ ಮಗಳನ್ನು ದುಬಾರಿ ಖಾಸಗಿ ಶಾಲೆಗೆ ಸೇರಿಸದೇ ಅಂಗನವಾಡಿಗೆ ಸೇರಿಸಿ ಸರಳತೆ ಮೆರೆದು ಜನರ ಮೆಚ್ಚುಗೆ ಪಡೆದಿದ್ದಾರೆ.

    ಈಗಿನ ಕಾಲದಲ್ಲಿ ಜನರು ತಮ್ಮ ಮಕ್ಕಳು ಖಾಸಗಿ ಶಾಲೆಯಲ್ಲಿ ಓದಿದರೆ ಒಳ್ಳೆಯದು ಅಂತ ಆರಂಭದಲ್ಲೇ ದುಬಾರಿ ಶಿಕ್ಷಣದತ್ತ ಮುಖ ಮಾಡ್ತಾರೆ. ಆದರೆ ತಮಿಳುನಾಡಿನ ಜಿಲ್ಲಾಧಿಕಾಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ಶಿಲ್ಪಾ ಪ್ರಭಾಕರ್ ಅವರು ತಮ್ಮ ಮಗು ಎಲ್ಲರೊಂದಿಗೆ ಬೆರೆತು ಸಾಮಾಜವನ್ನು ತಿಳಿಯಲಿ ಎಂದು ಅಂಗನವಾಡಿಗೆ ಸೇರಿಸಿದ್ದಾರೆ.

    ಉನ್ನತ ಸ್ಥಾನದಲ್ಲಿದ್ದು ಮಗಳನ್ನು ದುಬಾರಿ ಖಾಸಗಿ ಶಾಲೆಗಳಲ್ಲಿ ಓದಿಸುವುದು ಶಿಲ್ಪಾ ಅವರಿಗೆ ಕಷ್ಟವೇನಲ್ಲ. ಆದ್ರೆ ಸರ್ಕಾರಿ ಶಾಲೆಯಲ್ಲಿ ಮಕ್ಕಳಿಗೆ ಒಳ್ಳೆಯ ವ್ಯವಸ್ಥೆ ಹಾಗೂ ಉತ್ತಮ ಪರಿಸರ ದೊರಕುವಾಗ ದುಬಾರಿ ಶಿಕ್ಷಣದ ಮೊರೆ ಯಾಕೆ ಹೋಗಬೇಕು ಅಂತ ಸರಳವಾಗಿ ತಮ್ಮ ಮಗಳನ್ನು ಜಿಲ್ಲಾಧಿಕಾರಿ ಕಚೇರಿಯ ಸಮೀಪವಿರುವ ಪಲಾಯಕಮೊಟ್ಟಿಯ ಅಂಗನವಾಡಿಗೆ ಸೇರಿಸಿದ್ದಾರೆ. ಇದನ್ನೂ ಓದಿ: ನೆರೆ ವೇಳೆ 8 ದಿನಗಳ ಕಾಲ ಪರಿಚಯ ತಿಳಿಸದೇ ಸ್ವಯಂಸೇವಕರಂತೆ ಕೆಲ್ಸ ಮಾಡಿದ್ರು ಐಎಎಸ್ ಅಧಿಕಾರಿ!

    ಚಿಕ್ಕಬಳ್ಳಾಪುರ ಶಿಡ್ಲಘಟ್ಟ ಮೂಲದ ಶಿಲ್ಪಾ ಪ್ರಭಾಕರ್ 2009ರ ಐಎಎಸ್ ಅಧಿಕಾರಿಯಾಗಿದ್ದು, ಯಾಕೆ ಅಂಗನವಾಡಿಗೆ ಸೇರಿಸಿದ್ದು ಎಂದು ಕೇಳಿದ್ದಕ್ಕೆ, ಅಂಗನವಾಡಿಗೆ ಸೇರಿಸಿದ ಮೇಲೆ ತನ್ನ ಮಗಳ ತಮಿಳು ಸುಧಾರಿಸಿದೆ. ಸಮಾಜದಲ್ಲಿರುವ ಎಲ್ಲಾ ರೀತಿಯ ಜನರೊಂದಿಗೆ ನನ್ನ ಮಗಳು ಸೇರಬೇಕು. ಅವರ ಜೊತೆ ಸೇರಿ ಕಲಿಯಬೇಕು. ಹೀಗಾಗಿ ಖಾಸಗಿ ಶಾಲೆ ಬದಲು ಅಂಗನವಾಡಿಗೆ ಸೇರಿಸಿದ್ದೇನೆ ಎಂದು ಉತ್ತರಿಸಿದ್ದಾರೆ.

    ಅಂಗನವಾಡಿ ಕೇಂದ್ರಗಳು ಮೊದಲಿನಂತಿಲ್ಲ, ಬಹಳಷ್ಟು ಬದಲಾಗಿವೆ. ಅಲ್ಲಿ ಮಕ್ಕಳಿಗೆ ಸಕಲ ಪೌಷ್ಟಿಕ ಆಹಾರ ನೀಡುತ್ತಾರೆ. ಮಕ್ಕಳ ಸವರ್ತೋಮುಖ ಬೆಳವಣಿಗೆಗೆ ಬೇಕಾಗುವ ಉತ್ತಮ ಪರಿಸರವನ್ನು ಕಲ್ಪಸಿಕೊಡಲಾಗುತ್ತದೆ. ತಮ್ಮ ಮಗಳನ್ನು ಸೇರಿಸಿರುವ ಅಂಗನವಾಡಿ ಎಲ್ಲಾ ರೀತಿಯ ಸೌಕರ್ಯಗಳನ್ನು ಹೊಂದಿದೆ, ಅಲ್ಲಿರುವ ಶಿಕ್ಷಕಿಯರು ತುಂಬಾ ಸಕ್ರಿಯರಾಗಿದ್ದಾರೆ. ತಿರುನೆಲ್ವೇಲಿಯಲ್ಲಿರುವ ಎಲ್ಲಾ ಅಂಗನವಾಡಿ ಕೇಂದ್ರಗಳೂ ಸ್ಮಾರ್ಟ್ ಫೋನ್ ಹೊಂದಿವೆ. ಅಲ್ಲಿ ಮಕ್ಕಳ ಎತ್ತರ – ತೂಕ ಹಾಗೂ ಅವರು ತಿಂದ ಆಹಾರದ ಪ್ರಮಾಣ ಕೂಡ ಅಳತೆ ಮಾಡಲಾಗುತ್ತದೆ. ಆದರಿಂದ ಜಿಲ್ಲೆಯಲ್ಲಿ ಅಂಗನವಾಡಿಗಳನ್ನು ಮತ್ತಷ್ಟು ಅಭಿವೃದ್ಧಿಗೊಳಿಸಲು ನಾವು ನಿರ್ಧರಿಸಿದ್ದೇವೆ. ಬಾಲ್ಯದಲ್ಲಿ ಮಕ್ಕಳ ಬೆಳವಣಿಗೆಗೆ ಅಂಗನವಾಡಿಗಳು ಒಳ್ಳೆಯ ಅಡಿಪಾಯ ಹಾಕಿಕೊಡುತ್ತದೆ ಎಂದು ಶಿಲ್ಪಾ ತಿಳಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv