Tag: Tiranga Yatra

  • ಆಪರೇಷನ್ ಸಿಂಧೂರ ಸಕ್ಸಸ್ – `ತಿರಂಗಾ ಯಾತ್ರೆ’ಯಲ್ಲಿ ಅಮಿತ್ ಶಾ ಭಾಗಿ

    ಆಪರೇಷನ್ ಸಿಂಧೂರ ಸಕ್ಸಸ್ – `ತಿರಂಗಾ ಯಾತ್ರೆ’ಯಲ್ಲಿ ಅಮಿತ್ ಶಾ ಭಾಗಿ

    ಗಾಂಧಿನಗರ: ಆಪರೇಷನ್ ಸಿಂಧೂರ(Operation Sindoor) ಯಶಸ್ಸಿನ ಸಲುವಾಗಿ ಭಾರತೀಯ ಸಶಸ್ತ್ರ ಪಡೆಗಳನ್ನು ಗೌರವಿಸಲು ಭಾನುವಾರ ಗುಜರಾತ್‌ನ ಅಹಮದಾಬಾದ್‌ನಲ್ಲಿ ಹಮ್ಮಿಕೊಂಡಿದ `ತಿರಂಗಾ ಯಾತ್ರೆ’ಯನ್ನು(Tiranga Yatra) ಕೇಂದ್ರ ಗೃಹಸಚಿವ ಅಮಿತ್ ಶಾ(Amit Shah) ಮುನ್ನಡೆಸಿದರು.

    ಈ ತಿರಂಗಾ ಯಾತ್ರೆಯ ಕುರಿತು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ ಅವರು, ರಾಷ್ಟ್ರದ ಧೈರ್ಯಶಾಲಿ ಯೋಧರು ತಮ್ಮ ಶೌರ್ಯದಿಂದ ಆಪರೇಷನ್ ಸಿಂಧೂರವನ್ನು ಭಯೋತ್ಪಾದನೆಯ ನಿರ್ಮೂಲನೆಯ ಸಮಾನಾರ್ಥಕ ಪದವನ್ನಾಗಿಸಿದ್ದಾರೆ. ಈ ಕಾರ್ಯಾಚರಣೆಯ ಐತಿಹಾಸಿಕ ಯಶಸ್ಸಿಗಾಗಿ ಸೈನಿಕರನ್ನು ಗೌರವಿಸಲು ಗಾಂಧಿನಗರ ಲೋಕಸಭೆಯಲ್ಲಿ ಆಯೋಜಿಸಲಾದ ತಿರಂಗಾ ಯಾತ್ರೆಯಿಂದ ನೇರಪ್ರಸಾರ ಎಂದು ಬರೆದುಕೊಂಡಿದ್ದರು. ಇದನ್ನೂ ಓದಿ: ಭಾರೀ ಮಳೆಯಿಂದ ಪಂದ್ಯ ರದ್ದು – ನಿರಾಸೆಗೊಂಡಿದ್ದ ಅಭಿಮಾನಿಗಳಿಗೆ ಸಿಹಿ ಸುದ್ದಿ ಕೊಟ್ಟ ಆರ್‌ಸಿಬಿ!

    ಬಿಜೆಪಿಯು ಈ ತಿರಂಗಾ ಯಾತ್ರೆಯನ್ನು ಮೇ 13ರಂದು ಆರಂಭಿಸಿದ್ದು, ಮೇ 23ರಂದು ಇದು ಕೊನೆಗೊಳ್ಳಲಿದೆ. ಆಪರೇಷನ್ ಸಿಂಧೂರದ ಮೂಲಕ ಉಗ್ರರನ್ನು ಮಟ್ಟಹಾಕಿದ ಭಾರತೀಯ ಸೇನೆ(Indian Army) ಹಾಗೂ ಸೈನಿಕರ ಶೌರ್ಯವನ್ನು ಗೌರವಿಸುವ ಉದ್ದೇಶದಿಂದ ಈ ತಿರಂಗಾ ಯಾತ್ರೆ ಮಾಡಲಾಗುತ್ತಿದೆ.

  • ಪಕ್ಷಾತೀತವಾಗಿ ಮೇ 15ರಿಂದ 23ರವರೆಗೆ ಕರ್ನಾಟಕದಲ್ಲಿ ತಿರಂಗಾ ಯಾತ್ರೆ: ಆರ್.ಅಶೋಕ್

    ಪಕ್ಷಾತೀತವಾಗಿ ಮೇ 15ರಿಂದ 23ರವರೆಗೆ ಕರ್ನಾಟಕದಲ್ಲಿ ತಿರಂಗಾ ಯಾತ್ರೆ: ಆರ್.ಅಶೋಕ್

    ಬೆಂಗಳೂರು: ರಾಷ್ಟ್ರ ರಕ್ಷಣೆಗಾಗಿ ಆಪರೇಷನ್ ಸಿಂಧೂರದ (Operation Sindoor) ಜೊತೆ ನಾವಿದ್ದೇವೆ; ಭಾರತದ ಸೇನೆ ಜೊತೆ ನಾವೆಲ್ಲರೂ ಇದ್ದೇವೆ ಎಂದು ಸಂದೇಶ ನೀಡುವ ಸಲುವಾಗಿ ಮೇ 15ರ ಗುರುವಾರ ಬೆಳಗ್ಗೆ 11 ಗಂಟೆಗೆ ಬೆಂಗಳೂರಿನಲ್ಲಿ ತಿರಂಗಾ ಯಾತ್ರೆಯನ್ನು (Tiranga Yatra) ಕೈಗೊಳ್ಳಲಾಗುವುದು ಎಂದು ವಿರೋಧ ಪಕ್ಷದ ನಾಯಕ ಆರ್. ಅಶೋಕ್ (R Ashok) ತಿಳಿಸಿದರು.

    ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ನಗರದ ಮಲ್ಲೇಶ್ವರ ಮಂತ್ರಿಮಾಲ್‌ನ ಸಂಪಿಗೆ ರಸ್ತೆಯ ಸಿರೂರು ಆಟದ ಮೈದಾನದಿಂದ ಪ್ರಾರಂಭವಾಗಿ 18ನೇ ಕ್ರಾಸ್‌ವರೆಗೂ ರಾಷ್ಟ್ರಧ್ವಜದೊಂದಿಗೆ ತಿರಂಗಾ ಯಾತ್ರೆ ಜರುಗಲಿದೆ. ಪಕ್ಷತೀತವಾಗಿ ನಡೆಯುವ ಈ ಯಾತ್ರೆಯಲ್ಲಿ ಪಕ್ಷದ ಯಾವುದೇ ಬ್ಯಾನರ್‌ಗಳು ಇರುವುದಿಲ್ಲ. ಈ ಯಾತ್ರೆಯಲ್ಲಿ ವೈದ್ಯರು, ಇಂಜಿನಿಯರ್‌ಗಳು, ವಿದ್ಯಾರ್ಥಿಗಳು, ರೈತರು, ಕಾರ್ಮಿಕರು ಎಲ್ಲರೂ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು. ಇದನ್ನೂ ಓದಿ: ಪಾಕ್ ಮತ್ತೆ ದಾಳಿ ಮಾಡಿದ್ರೆ ಭಾರತ ನುಗ್ಗಿ ಹೊಡೆಯುತ್ತೆ: ಮೋದಿ

    ಮೇ 16 ಮತ್ತು 17ರಂದು ಜಿಲ್ಲಾ ಕೇಂದ್ರಗಳಲ್ಲಿ ಹಾಗೂ ಮೇ 18ರಿಂದ 23ರವರೆಗೆ ತಾಲೂಕು ಕೇಂದ್ರಗಳಲ್ಲಿ ತಿರಂಗಾ ಯಾತ್ರೆಯನ್ನು ಮಾಡಲಾಗುತ್ತದೆ ಎಂದು ಹೇಳಿದರು. ಪ್ರತಿಹಳ್ಳಿಗಳಲ್ಲಿ ಮತ್ತು ತಾಲೂಕು ಕೇಂದ್ರಗಳಲ್ಲಿ ಪಕ್ಷದ ಬ್ಯಾನರ್ ಇಲ್ಲದೇ ಯಾತ್ರೆಯನ್ನು ಕೈಗೊಳ್ಳಲು ನಮ್ಮ ಕಾರ್ಯಕರ್ತರಿಗೆ ಸೂಚನೆಯನ್ನು ಕೊಡಲಾಗಿದೆ ಎಂದು ವಿವರಿಸಿದರು. ಇದನ್ನೂ ಓದಿ: ಅಬ್ಬಬ್ಬಾ ಈ ಮಾವಿನ ಹಣ್ಣಿನ ಕೆಜಿ ಬೆಲೆ ಬರೋಬ್ಬರಿ 2.7 ಲಕ್ಷ!

    ಭಾರತದ ತಾಯಂದಿರ ಸಿಂಧೂರ ಅಳಿಸಿದರೆ ಏನು ಆಗುತ್ತದೆ ಎಂಬುದನ್ನು ನಮ್ಮ ಸೇನೆಯು ಇಡೀ ವಿಶ್ವಕ್ಕೆ ತೋರಿಸಿಕೊಟ್ಟಿದೆ ಮತ್ತು ಪಾಕಿಸ್ತಾನಕ್ಕೆ ಬುದ್ಧಿ ಕಲಿಸಿದ್ದಾರೆ. ಸುಮಾರು 100ಕ್ಕೂ ಹೆಚ್ಚು ಭಯೋತ್ಪಾದಕರು ಹತರಾಗಿದ್ದಾರೆ. ಪಾಕಿಸ್ತಾನದ ಉಗ್ರರ ಸ್ಥಳಗಳನ್ನು ಈಗಾಗಲೇ ಧ್ವಂಸಗೊಳಿಸಲಾಗಿದೆ. ಪಾಕಿಸ್ತಾನವು ಕೊನೆಗೆ ಈ ಉದ್ವಿಗ್ನತೆಯನ್ನು ಕಡಿಮೆ ಮಾಡಲು ಅಂಗಲಾಚುವ ಸ್ಥಿತಿಗೆ ನಮ್ಮ ಸೈನಿಕರು ತಂದಿದ್ದಾರೆ. ಭಾರತ ಎಂದೂ ಉಗ್ರವಾದವನ್ನು ಸಹಿಸಲ್ಲ ಎಂಬ ಸಂದೇಶವನ್ನು ಇಡೀ ಪ್ರಪಂಚಕ್ಕೆ ನೀಡಿರುತ್ತಾರೆ ಎಂದು ವಿಶ್ಲೇಷಿಸಿದರು. ಇದನ್ನೂ ಓದಿ: ಹ್ಯಾಂಗರ್ಸ್‌ ನಾಶ, ರನ್‌ವೇಗಳಿಗೆ ಹಾನಿ – ಪಾಕ್‌ ದುಸ್ಥಿತಿ ಉಪಗ್ರಹ ಚಿತ್ರಗಳಲ್ಲಿ ಬಹಿರಂಗ

    ಸಿಂಧೂ ನದಿ ನೀರಿನ ವಿಚಾರವಾಗಿ ಈ ಹಿಂದೆ 90% ನೀರು ಪಾಕಿಸ್ತಾನಕ್ಕೆ 10% ಮಾತ್ರ ಭಾರತಕ್ಕೆ ಎಂಬ ಒಪ್ಪಂದವನ್ನು ಪ್ರಧಾನ ಮೋದಿ ಜೀಯವರು ರದ್ದುಪಡಿಸಿರುವುದು ಒಂದು ಸಾಧನೆಯಾಗಿದೆ. ನ್ಯೂಕ್ಲಿಯರ್ ಬಾಂಬ್ ಬೆದರಿಕೆಗೆ ನಾವು ಹೆದರುವುದಿಲ್ಲ ಎಂಬ ಸಂದೇಶವನ್ನು ನಮ್ಮ ಪ್ರಧಾನಿಯವರು ಪಾಕಿಸ್ತಾನಕ್ಕೆ ನೀಡಿದ್ದಾರೆ ಎಂದು ತಿಳಿಸಿದರು. ಇದನ್ನೂ ಓದಿ: ಕೆಂಪೇಗೌಡ ಏರ್‌ಪೋರ್ಟ್‌ನಿಂದ ಕಾರ್ಮಿಕರನ್ನು ಕರೆದೊಯ್ಯುತ್ತಿದ್ದ ಬಸ್ ಪಲ್ಟಿ – 15 ಮಂದಿಗೆ ಗಾಯ

    ನಮ್ಮ ಸೈನಿಕರು ದಾಳಿ ಮಾಡಿರುವುದಕ್ಕೆ ಸಾಕ್ಷಿ ಇದೆಯೇ ಎಂದು ಪ್ರಶ್ನಿಸುತ್ತಿದ್ದರು. ಅಲ್ಲಿನ ಸೈನಿಕರು ಮತ್ತು ಭಯೋತ್ಪಾದಕರು ಎಷ್ಟು ಜನ ಹತರಾಗಿದ್ದಾರೆ ಎಂದು ಪಾಕಿಸ್ತಾನವು ಈಗಾಗಲೇ ಒಪ್ಪಿಕೊಂಡಿದೆ. ನಮ್ಮ ಸೇನಾ ಅಧಿಕಾರಿಗಳೇ ಪತ್ರಿಕಾಗೋಷ್ಠಿ ನೀಡಿ, ಪಾಕಿಸ್ತಾನದ ಮೇಲೆ ದಾಳಿ ಮಾಡಿರುವುದಕ್ಕೆ ಸಾಕ್ಷಿ ಸಮೇತ ಉತ್ತರ ನೀಡಿದ್ದಾರೆ. ಆದರೂ ಪಾಕಿಸ್ತಾನ ಜಿಂದಾಬಾದ್ ಎನ್ನುವವರಿಗೆ ನಂಬಲು ಆಗುತಿಲ್ಲ ಮತ್ತು ಭಾರತದ ಕಾರ್ಯಾಚರಣೆಯನ್ನು ಸಹಿಸಲು ಆಗುತ್ತಿಲ್ಲ ಎಂದರು. ಇದನ್ನೂ ಓದಿ: ‘ಆಪರೇಷನ್‌ ಸಿಂಧೂರ’ಗೆ ಪಾಕ್‌ ವಾಯುಪಡೆ ಮುಖ್ಯ ತಂತ್ರಜ್ಞ ಸೇರಿ 11 ಸೈನಿಕರು ಸಾವು

    ಇಂದು ನಮ್ಮ ಸೈನಿಕರು ಕಾಶ್ಮೀರ ಮತ್ತು ಪಾಕಿಸ್ತಾನ ಆಕ್ರಮಿತ ಕಾಶ್ಮೀರವು ನಮ್ಮದು ಎಂದು ತೋರಿಸಿಕೊಟ್ಟಿದ್ದಾರೆ. ಅಲ್ಲದೆ ನಮ್ಮ ಪ್ರಧಾನ ಮೋದಿ ಜೀರವರು ಸಹ ಹೇಳಿದ್ದಾರೆ. ಪಾಕಿಸ್ತಾನ ಅಕ್ರಮಿತ ಕಾಶ್ಮೀರವನ್ನು ನಾವು ವಾಪಸ್ ಪಡೆಯುತ್ತೇವೆ ಹಾಗೂ ಸಿಂಧೂ ನದಿಯ ಯಾವುದೇ ಒಪ್ಪಂದವನ್ನು ಮಾಡುವುದಿಲ್ಲ. ಪಾಕಿಸ್ತಾನದ ಭಯೋತ್ಪಾದಕರಿಗೆ ಮತ್ತು ಪಾಕಿಸ್ತಾನಕ್ಕೆ ಬುದ್ಧಿ ಕಲಿಸಿರುವ ನಮ್ಮ ಸೈನಿಕರಿಗೆ ಗೌರವ ನೀಡುವ ಸಲುವಾಗಿ ಈ ತಿರಂಗಾ ಯಾತ್ರೆಯನ್ನು ಕೈಗೊಳ್ಳಲಾಗಿದೆ ಎಂದು ಹೇಳಿದರು. ಇದನ್ನೂ ಓದಿ: ಲಂಚ ಪಡೆಯುತ್ತಿದ್ದಾಗ ಲೋಕಾ ರೇಡ್ – ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಪಿಡಿಓ

  • ಅಹಮದಾಬಾದ್‌ನಲ್ಲಿ ‘ತಿರಂಗಾ ಯಾತ್ರೆಗೆ’ ಚಾಲನೆ ನೀಡಿದ ಅಮಿತ್ ಶಾ

    ಅಹಮದಾಬಾದ್‌ನಲ್ಲಿ ‘ತಿರಂಗಾ ಯಾತ್ರೆಗೆ’ ಚಾಲನೆ ನೀಡಿದ ಅಮಿತ್ ಶಾ

    ಗಾಂಧಿನಗರ: ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಭಾನುವಾರ ಗುಜರಾತ್‌ನ (Gujarat) ಅಹಮದಾಬಾದ್‌ನಲ್ಲಿ (Ahamedabad) ‘ತಿರಂಗಾ ಯಾತ್ರೆಗೆ’ ಚಾಲನೆ ನೀಡಿದರು.

    ಕಾರ್ಯಕ್ರಮದಲ್ಲಿ ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ( ಕೂಡಾ ಉಪಸ್ಥಿತರಿದ್ದರು. ಈ ವರ್ಷ ಆಗಸ್ಟ್ 13ರಿಂದ 15ರವರೆಗೆ ‘ಹರ್ ಘರ್ ತಿರಂಗಾ’ ಆಂದೋಲನದಲ್ಲಿ ಪ್ರತಿಯೊಬ್ಬರು ಭಾಗವಹಿಸುವಂತೆ ಪ್ರಧಾನಿ ನರೇಂದ್ರ ಮೋದಿ ಜನರಲ್ಲಿ ಮನವಿ ಮಾಡಿದ್ದಾರೆ. ಇದನ್ನೂ ಓದಿ: ಉಡುಪಿ ಮಾದರಿ ಮತ್ತೊಂದು ಕೇಸ್‌; ಹಾಸ್ಟೆಲ್‌ ಹುಡ್ಗೀರ ಬೆತ್ತಲೆ ವೀಡಿಯೋ ಸೆರೆ ಹಿಡಿದು ಸೀನಿಯರ್‌ಗೆ ಕಳಿಸ್ತಿದ್ದ ವಿದ್ಯಾರ್ಥಿನಿ

    ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಬಳಿಕ ಮಾತನಾಡಿದ ಅಮಿತ್ ಶಾ, ಸ್ವಾತಂತ್ರ್ಯ ಬಂದು 75 ವರ್ಷಗಳು ಕಳೆದಿವೆ. ದೇಶಕ್ಕಾಗಿ ನಾವು ಸಾಯಲು ಸಾಧ್ಯವಿಲ್ಲ. ಆದರೆ ದೇಶಕ್ಕಾಗಿ ಬದುಕುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ ಎಂದರು. ಇದನ್ನೂ ಓದಿ: ಅಸ್ಸಾಂನಲ್ಲಿ ಸ್ವಾತಂತ್ರ್ಯ ದಿನಾಚರಣೆ ಬಹಿಷ್ಕಾರಕ್ಕೆ ಉಗ್ರಸಂಘಟನೆಗಳ ಕರೆ- ಪೊಲೀಸರಿಂದ ಬಿಗಿ ಭದ್ರತೆ

    2022ರ ಸ್ವಾತಂತ್ರ್ಯ ದಿನಾಚರಣೆಯನ್ನು (Independence Day) ನೆನಪಿಸಿಕೊಂಡ ಅವರು, 2022ರ ಆಗಸ್ಟ್ 15 ರಂದು ತ್ರಿವರ್ಣ ಧ್ವಜ ಹಾರಿಸದ ಮನೆ ಇಲ್ಲ. ಪ್ರತಿ ಮನೆಯಲ್ಲೂ ತ್ರಿವರ್ಣ ಧ್ವಜವನ್ನು ಹಾರಿಸಿದಾಗ ಇಡೀ ರಾಷ್ಟ್ರವು ತಿರಂಗಮಯವಾಗುತ್ತದೆ. ಆಜಾದಿ ಕಾ ಅಮೃತ ಮಹೋತ್ಸವದಲ್ಲಿ ಪ್ರಧಾನಿ ಮೋದಿಯವರು (Narendra Modi) ಇಡೀ ರಾಷ್ಟ್ರದಲ್ಲಿ ದೇಶಭಕ್ತಿಯ ಭಾವನೆಯನ್ನು ತುಂಬಲು ಪ್ರಯತ್ನಿಸಿದರು ಎಂದು ಹೇಳಿದರು. ಇದನ್ನೂ ಓದಿ: ಬಿಜೆಪಿ ವಿರುದ್ಧ 50% ಕಮಿಷನ್ ಆರೋಪ – ಪ್ರಿಯಾಂಕಾ ಗಾಂಧಿ ವಿರುದ್ಧ ಪ್ರಕರಣ ದಾಖಲು

    ಇದಲ್ಲದೆ ಗುಜರಾತ್‌ನ ಇನ್‌ಸ್ಟಿಟ್ಯೂಟ್ ಆಫ್ ಹೌಸಿಂಗ್ ಮತ್ತು ಎಸ್ಟೇಟ್ ಡೆವಲಪರ್ಸ್ ಆಯೋಜಿಸಿದ ಸಾಮೂಹಿಕ ಮರ ನೆಡುವ ಕಾರ್ಯಕ್ರಮದಲ್ಲಿ ಅಮಿತ್ ಶಾ ಭಾಗವಹಿಸಿದರು. ಇದನ್ನೂ ಓದಿ: ನನ್ನ 19 ವರ್ಷಗಳ ರಾಜಕೀಯ ಜೀವನದಲ್ಲಿ ಮಣಿಪುರದಂಥ ಘೋರ ಅನುಭವ ಎಂದೂ ಆಗಿಲ್ಲ: ರಾಹುಲ್‌ ಗಾಂಧಿ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಕಾಶ್ಮೀರದಲ್ಲಿ ಇನ್ನು ಭಾರತದ ಧ್ವಜ ಮಾತ್ರ ಹಾರುತ್ತದೆ, ಪಾಕ್ ಧ್ವಜ ಇತಿಹಾಸ ಮಾತ್ರ: ಮನೋಜ್ ಸಿನ್ಹಾ

    ಕಾಶ್ಮೀರದಲ್ಲಿ ಇನ್ನು ಭಾರತದ ಧ್ವಜ ಮಾತ್ರ ಹಾರುತ್ತದೆ, ಪಾಕ್ ಧ್ವಜ ಇತಿಹಾಸ ಮಾತ್ರ: ಮನೋಜ್ ಸಿನ್ಹಾ

    ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿ ಪಾಕಿಸ್ತಾನದ ಧ್ವಜಗಳು ಇನ್ನು ಇತಿಹಾಸ ಮಾತ್ರ. ಇನ್ನು ಇಲ್ಲಿ ಭಾರತದ ರಾಷ್ಟçಧ್ವಜವನ್ನು ಮಾತ್ರ ಹಾರಿಸಲಾಗುತ್ತದೆ ಎಂದು ಕೇಂದ್ರಾಡಳಿತ ಪ್ರದೇಶದ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಭಾನುವಾರ ಹೇಳಿದ್ದಾರೆ.

    ಶ್ರೀನಗರದ ದಾಲ್ ಸರೋವರದ ಉದ್ದಕ್ಕೂ ತಿರಂಗಾ ಯಾತ್ರೆಯನ್ನು ಹಮ್ಮಿಕೊಳ್ಳಲಾಗಿದ್ದು, ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಸಿನ್ಹಾ, ಜಮ್ಮು, ಕಾಶ್ಮೀರದಲ್ಲಿ ಪಾಕಿಸ್ತಾನದ ಧ್ವಜ ಎತ್ತುವುದು ಇತಿಹಾಸ. ಈ ಹಿಂದೆ ತ್ರಿವರ್ಣ ಧ್ವಜ ಏರಿಸಲು ಪ್ರಯತ್ನಗಳು ನಡೆದಿರುವುದೇ ವಿರಳ. ಆದರೆ ಈಗ ಜನರು ಕೂಡಾ ತಿರಂಗವನ್ನು ಏರಿಸಲು ಬಯಸುತ್ತಾರೆ ಎಂದರು. ಇದನ್ನೂ ಓದಿ: ಮಂತ್ರಾಲಯದಲ್ಲಿ ರಾಯರ ದರ್ಶನ ಪಡೆದ ಸಾಲುಮರದ ತಿಮ್ಮಕ್ಕ

    ಇಂದಿನ ತಿರಂಗಾ ಯಾತ್ರೆ ಈ ಪ್ರದೇಶದಲ್ಲಿ ನಡೆದ ಮೊದಲ ಕಾರ್ಯಕ್ರಮವಾಗಿದೆ. ಅದೂ ಸಹ ಆಗಸ್ಟ್ 14 ರಂದು. ಭದ್ರತಾ ಸವಾಲುಗಳ ನಡುವೆಯೂ ತಿರಂಗವನ್ನು ಹಾರಿಸಲಾಗುತ್ತಿದೆ. ಸಮಾಜದ ಎಲ್ಲಾ ವರ್ಗಗಳು ಬೃಹತ್ ಮಟ್ಟದಲ್ಲಿ ಈ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿವೆ. ಎಲ್ಲೆಡೆ ತಿರಂಗವನ್ನು ಬೆಳೆಸಲಾಗುತ್ತಿದೆ ಎಂದರು. ಇದನ್ನೂ ಓದಿ: ಹರ್‌ಘರ್ ತಿರಂಗ ಅಭಿಯಾನ – ಮಕ್ಕಳಿಗೆ ರಾಷ್ಟ್ರಧ್ವಜ ಹಂಚಿ ಸಂತಸಗೊಂಡ ಮೋದಿ ತಾಯಿ

    ಈ ವೇಳೆ ಸೇನಾ ಸಿಬ್ಬಂದಿ, ಗಡಿ ಪೊಲೀಸ್ ಪಡೆ, ಕೇಂದ್ರ ಮೀಸಲು ಪೊಲೀಸ್ ಪಡೆ ಹಾಗೂ ಜಮ್ಮು ಮತ್ತು ಕಾಶ್ಮೀರದ ಪೊಲೀಸರು ತಿರಂಗಾ ಯಾತ್ರೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

    Live Tv
    [brid partner=56869869 player=32851 video=960834 autoplay=true]