Tag: Tiranga Rally

  • ಹರ್ ಘರ್ ತಿರಂಗಾಕ್ಕೆ ಪ್ರೇರಣೆ ನೀಡುವ ಸಂಕಲ್ಪದೊಂದಿಗೆ ತಿರಂಗಾ ರ್‍ಯಾಲಿಯಲ್ಲಿ ಜೋಶಿ ಭಾಗಿ

    ಹರ್ ಘರ್ ತಿರಂಗಾಕ್ಕೆ ಪ್ರೇರಣೆ ನೀಡುವ ಸಂಕಲ್ಪದೊಂದಿಗೆ ತಿರಂಗಾ ರ್‍ಯಾಲಿಯಲ್ಲಿ ಜೋಶಿ ಭಾಗಿ

    ನವದೆಹಲಿ: ಭಾರತ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕು 75 ವರ್ಷ ತುಂಬಿದ ಶುಭ ಸಂದರ್ಭದಲ್ಲಿ ಹರ್ ಘರ್ ತಿರಂಗಾ ಅಭಿಯಾನಕ್ಕೆ ಪ್ರೇರಣೆ ನೀಡುವಲ್ಲಿ ಇಂದು ಸಂಸದರ ತಿರಂಗಾ ಬೈಕ್ ರ್‍ಯಾಲಿ ನಡೆಯಿತು.

    ದೆಹಲಿಯ ಕೆಂಪುಕೋಟೆಯಿಂದ ವಿಜಯ್ ಚೌಕ್‍ವರೆಗೆ ಸಂಸದರು ತ್ರಿವರ್ಣ ಧ್ವಜ ಹಿಡಿದು ಬೈಕ್ ರ್‍ಯಾಲಿ ನಡೆಸಿದರು. ಉಪರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು ಅವರು ತಿರಂಗಾ ಬೈಕ್ ರ್‍ಯಾಲಿಗೆ ಚಾಲನೆ ನೀಡಿದರು. ಇದನ್ನೂ ಓದಿ: ಸಿದ್ದರಾಮಯ್ಯ ಇಂದು ತಮ್ಮ ರಾಜಕೀಯ ನಿವೃತ್ತಿ ಘೋಷಿಸಲಿ: ಅಶ್ವತ್ಥ್‌ನಾರಾಯಣ ಟಾಂಗ್

    ಅಮೃತ ಮಹೋತ್ಸವದ ಹಿನ್ನೆಲೆ ದೇಶದಲ್ಲಿ ರಾಷ್ಟ್ರೀಯ ಭಾವನೆಯನ್ನು ಇಮ್ಮಡಿಗೊಳಿಸುವಂತ ಹಲವು ಕಾರ್ಯಕ್ರಮಗಳನ್ನು ಕೇಂದ್ರ ಬಿಜೆಪಿ ಸರ್ಕಾರ ಹಮ್ಮಿಕೊಂಡಿದೆ. ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಮನ್ ಕೀ ಬಾತ್ ಕಾರ್ಯಕ್ರಮದಲ್ಲಿ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕು 75 ವರ್ಷ ಪೂರ್ಣಗೊಂಡಿರುವ ಕುರಿತು ತಮ್ಮ ಮನದಾಳದ ಮಾತುಗಳನ್ನು ಆಡಿದರು. ಅಮೃತ ಮಹೋತ್ಸವ ಒಂದು ಅಭಿಯಾನವಾಗಬೇಕು. ಈ ನಿಟ್ಟಿನಲ್ಲಿ ದೇಶದ ಪ್ರತಿಯೊಬ್ಬ ಪ್ರಜೆಯೂ ಅಜಾದಿ ಕೀ ಅಮೃತ ಮಹೋತ್ಸವ ಕಾರ್ಯಕ್ರಮದಲ್ಲಿ ತಮ್ಮ ಪಾಲ್ಗೊಳ್ಳುವಿಕೆಯನ್ನು ತೋರ್ಪಡಿಸುವಂತೆ ಕರೆ ನೀಡಿದರು. ಇದನ್ನೂ ಓದಿ: ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ED ಅಧಿಕಾರ ಎತ್ತಿಹಿಡಿದ ಸುಪ್ರೀಂ – ʻಅಪಾಯಕಾರಿ ತೀರ್ಪುʼ ಎಂದ ವಿಪಕ್ಷಗಳು

    ಈ ನಡುವೆ ದೇಶದ ಸಂಸದರನ್ನು ಒಟ್ಟುಗೂಡಿಸಿಕೊಂಡು ತಿರಂಗಾ ರ್‍ಯಾಲಿ ಕಾರ್ಯಕ್ರಮ ನಡೆಸುವ ಕುರಿತು ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ಕೇಂದ್ರ ಸಂಸ್ಕೃತಿ ಇಲಾಖೆಗೆ ಸೂಚನೆ ನೀಡಿದ್ದರು. ಇದು ಬಿಜೆಪಿಯ ಕಾರ್ಯಕ್ರಮವಲ್ಲ. ಇದೊಂದು ರಾಷ್ಟ್ರಾಭಿಮಾನ ಹೆಚ್ಚಿಸುವ ಮಹತ್ವದ ಅಭಿಯಾನ. ದೇಶದ ಜನರನ್ನು ಪ್ರತಿನಿಧಿಸುವ ಸಂಸದರು ತ್ರಿವರ್ಣ ಧ್ವಜ ಹಿಡಿದು ದೇಶದ ಜನರಿಗೆ ಸಂದೇಶ ಸಾರುವುದು ಮುಖ್ಯ. ಈ ನಿಟ್ಟಿನಲ್ಲಿ ಎಲ್ಲ ಸಂಸದರು ಪಾಲ್ಗೊಳ್ಳುವಂತೆ ತಿಳಿಸಿದರು.

    ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷಗಳು ಪೂರ್ಣಗೊಂಡಿರುವ ಹಿನ್ನೆಲೆ ಕೇಂದ್ರ ಸಂಸ್ಕೃತಿ ಸಚಿವಾಲಯ ಕಾರ್ಯಕ್ರಮವನ್ನು ಆಯೋಜಿಸಿತ್ತು. ತಿರಂಗಾ ರ್ಯಾಲಿಗೆ ಚಾಲನೆ ನೀಡಿದ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರೊಂದಿಗೆ ವೇದಿಕೆ ಹಂಚಿಕೊಂಡಿದ್ದ ಪ್ರಹ್ಲಾದ್ ಜೋಶಿ ಅವರು ಧ್ವಜ ಹಾರಿಸುವ ಮೂಲಕ ಸಂಭ್ರಮಿಸಿದರು. ತಿರಂಗಾ ಬೈಕ್ ರ್‍ಯಾಲಿಯಲ್ಲೂ ಹೆಚ್ಚಿನ ಸಂಖ್ಯೆಯಲ್ಲಿ ಸಂಸದರು ಪಾಲ್ಗೊಂಡಿದ್ದರು.

    Live Tv
    [brid partner=56869869 player=32851 video=960834 autoplay=true]

  • ಸಿಎಎ ಬೆಂಬಲಿಸಿ ಗದಗದಲ್ಲಿ ಬೃಹತ್ ತಿರಂಗಾ ರ‍್ಯಾಲಿ

    ಸಿಎಎ ಬೆಂಬಲಿಸಿ ಗದಗದಲ್ಲಿ ಬೃಹತ್ ತಿರಂಗಾ ರ‍್ಯಾಲಿ

    ಗದಗ: ಪೌರತ್ವ ತಿದ್ದುಪಡಿ ಕಾಯ್ದೆ ಬೆಂಬಲಿಸಿ ಗದಗದಲ್ಲಿ ವಿದ್ಯಾರ್ಥಿ ಸಂಘಟನೆಯಿಂದ ಬೃಹತ್ ತಿರಂಗಾ ರ‍್ಯಾಲಿ ಮೂಲಕ ಜನಜಾಗೃತಿ ಮೂಡಿಸಲಾಯಿತು.

    ಎಬಿವಿಪಿ ವಿದ್ಯಾರ್ಥಿ ಸಂಘಟನೆ ಸಹಯೋಗದಲ್ಲಿ ನಗರದ ಅನೇಕ ಕಾಲೇಜ್‍ನ ಸಾವಿರಾರು ವಿದ್ಯಾರ್ಥಿಗಳು ರ‍್ಯಾಲಿಯಲ್ಲಿ ಭಾಗಿಯಾಗಿದ್ದರು. ನಗರದ ಕನಕದಾಸ ವೃತ್ತದಿಂದ ತೋಂಟದಾರ್ಯ ಮಠದ ವರೆಗೆ ಬೃಹತ್ ಜನಜಾಗೃತಿ ಮೆರವಣಿಗೆ ಮಾಡಲಾಯಿತು. ಮೆರವಣಿಗೆಯಲ್ಲಿ ಸುಮಾರು 600 ಮೀಟರ್ ಉದ್ದನೆಯ ತ್ರಿವರ್ಣ ಧ್ವಜ ಹಿಡಿದು ಭಾರತಕ್ಕೆ ಜೈಘೋಷ ಕೂಗುತ್ತಾ ಪೌರತ್ವ ಜನಜಾಗೃತಿ ನಡೆಸಿದರು.

    ಸಿಎಎ ಹಾಗೂ ಎನ್‌ಆರ್‌ಸಿ ಬೆಂಬಲಿಸಿ ಅಂತ ವಿದ್ಯಾರ್ಥಿಗಳು ಸಾರ್ವಜನಿಕರಿಗೆ ಕರಪತ್ರಗಳನ್ನ ಹಂಚಿಕೆ ಮಾಡಿದರು. ಈ ಬೃಹತ್ ರ‍್ಯಾಲಿಯಲ್ಲಿ ಸುಮಾರು ಎರಡು ಸಾವಿರ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಪೌರತ್ವ ಕಾಯ್ದೆ ತಿದ್ದುಪಡಿ ಮಾಡುವುದು ದೇಶದ ಹಿತರಕ್ಷಣೆಗೆ ಹೊರತು, ದೇಶದಲ್ಲಿ ಅಶಾಂತಿ ಕದಡಿಸಲಿಕಲ್ಲ. ಸಿಎಎ ಹಾಗೂ ಎನ್‌ಆರ್‌ಸಿ ಬೆಂಬಲಿಸಿ ದೇಶ ಅಭಿವೃದ್ಧಿಯತ್ತ ಮುನ್ನಡೆಸಲು ಕೈ ಜೋಡಿಸಿ ಎಂದು ಕರಪತ್ರಗಳನ್ನ ಹಂಚಿಕೆ ಮಾಡಿದರು.