Tag: tiranga DP

  • ಪ್ರಧಾನಿ ಮೋದಿ ಅವರ ತಿರಂಗಾ ಡಿಪಿ ಕರೆಯನ್ನು ಆರ್‌ಎಸ್‌ಎಸ್‌ ತಿರಸ್ಕರಿಸಿದೆ – ಬಿಜೆಪಿ ಕಾಲೆಳೆದ ಕಾಂಗ್ರೆಸ್‌

    ಪ್ರಧಾನಿ ಮೋದಿ ಅವರ ತಿರಂಗಾ ಡಿಪಿ ಕರೆಯನ್ನು ಆರ್‌ಎಸ್‌ಎಸ್‌ ತಿರಸ್ಕರಿಸಿದೆ – ಬಿಜೆಪಿ ಕಾಲೆಳೆದ ಕಾಂಗ್ರೆಸ್‌

    ಬೆಂಗಳೂರು: ಭಾರತ ಸ್ವಾತಂತ್ರ್ಯದ ಅಮೃತ ಮಹೋತ್ಸವ (75ನೇ ಸ್ವಾತಂತ್ರ್ಯೋತ್ಸವ) ಹಿನ್ನೆಲೆಯಲ್ಲಿ ಪ್ರತಿಯೊಬ್ಬರೂ ತಮ್ಮ ಸೋಷಿಯಲ್‌ ಮೀಡಿಯಾ ಖಾತೆಗಳ ಡಿಪಿಯಲ್ಲಿ ರಾಷ್ಟ್ರಧ್ವಜ ಚಿತ್ರ ಹಾಕುವಂತೆ ಪ್ರಧಾನಿ ಮೋದಿ ನೀಡಿದ್ದ ಕರೆಯನ್ನು ಆರ್‌ಎಸ್‌ಎಸ್‌ ತಿರಸ್ಕರಿಸಿದೆ ಎಂದು ಕಾಂಗ್ರೆಸ್‌ ಲೇವಡಿ ಮಾಡಿದೆ.

    ಆರ್‌ಎಸ್‌ಎಸ್‌ ತನ್ನ ಡಿಪಿ ಬದಲಾಯಿಸಿಲ್ಲ. ಇದನ್ನು ಉಲ್ಲೇಖಿಸಿರುವ ಕಾಂಗ್ರೆಸ್‌, ಪ್ರಧಾನಿ ಮೋದಿ ಅವರ ʼತಿರಂಗಾ ಡಿಪಿʼ ಕರೆಯನ್ನು ಆರ್‌ಎಸ್‌ಎಸ್‌ ತಿರಸ್ಕರಿಸಿದೆ ಅಲ್ಲವೇ ಎಂದು ಕಾಳೆದಿದೆ. ಇದನ್ನೂ ಓದಿ: ಅಕ್ರಮ ಗೋಹತ್ಯೆ ಮನೆ ಮೇಲೆ ದಾಳಿ – ವಿದ್ಯುತ್ ಸಂಪರ್ಕ ಕಟ್, ಶರಣಾಗಲು ಸೂಚನೆ

    ಈ ಕುರಿತು ಸರಣಿ ಟ್ವೀಟ್‌ ಮಾಡಿರುವ ಕಾಂಗ್ರೆಸ್‌, RSS ಎಂದಿಗೂ ಭಾರತೀಯತೆಯನ್ನು ಒಪ್ಪಿಲ್ಲ, ಮುಂದೆಯೂ ಒಪ್ಪುವುದಿಲ್ಲ. ಪ್ರತ್ಯೇಕ ಐಡೆಂಟಿಟಿಯಲ್ಲಿ ಇರಲು ಭಯಸುವ ಆರ್‌ಎಸ್‌ಎಸ್‌, ಭಾರತದಲ್ಲಿನ ತಾಲಿಬಾನ್ ಇದ್ದಂತೆ. ತಿರಂಗಾ DP ಬದಲಿಸುವ ಪ್ರಧಾನಿ ಕರೆ ಆರ್‌ಎಸ್‌ಎಸ್‌ಗೆ ಅನ್ವಯಿಸುವುದಿಲ್ಲವೇ? ತಿರಂಗಾ ಮೇಲಿನ ಅಸಹನೆ, ದ್ವೇಷ ಸುಪ್ತವಾಗಿ ಮುಂದುವರೆದಿದೆಯೇ? ಆರ್‌ಎಸ್‌ಎಸ್‌ ತಿರಂಗಾ ಒಪ್ಪದಿರುವುದೇಕೆ ಎಂದು ಬಿಜೆಪಿ ಸರ್ಕಾರವನ್ನೇ ಕಾಂಗ್ರೆಸ್‌ ಪ್ರಶ್ನಿಸಿದೆ.

    ಟ್ವೀಟ್‌ನಲ್ಲೇನಿದೆ?
    ತಿರಂಗಾವನ್ನು ‘ಅನಿಷ್ಠದ ಸಂಕೇತ’ ಎಂದು ಕರೆದಿದ್ದ ಆರ್‌ಎಸ್‌ಎಸ್‌ ಇನ್ನೂ ಅದೇ ಧೋರಣೆಯನ್ನು ಮನೋಧರ್ಮವನ್ನು ಮುಂದುವರೆಸಿದೆ. 53 ವರ್ಷಗಳ ಕಾಲ ತಿರಂಗಾವನ್ನು ತಿರಸ್ಕರಿಸಿದ್ದ ಆರ್‌ಎಸ್‌ಎಸ್‌ ಈಗಲೂ ತಿರಸ್ಕರಿಸುತ್ತಿದೆ. ಹಾಗಾಗಿಯೇ ಪ್ರಧಾನಿ ‘ತಿರಂಗಾ ಡಿಪಿ’ ಕರೆಯನ್ನು ಆರ್‌ಎಸ್‌ಎಸ್‌ ತಿರಸ್ಕರಿಸಿದೆ ಅಲ್ಲವೇ? ಇದನ್ನೂ ಓದಿ: ಕಾಂಗ್ರೆಸ್‍ನಿಂದಲೇ ಎಲ್ಲರೂ ಸ್ವಾತಂತ್ರ್ಯ ಗಾಳಿ ಸೇವಿಸುತ್ತಿರುವುದು: ಸಿದ್ದರಾಮಯ್ಯ

    ಅಂದು ಸ್ವತಂತ್ರ ಚಳವಳಿಯ ವಿರುದ್ಧ ಬ್ರಿಟಿಷರೊಂದಿಗೆ ಕೈಜೋಡಿಸಿದ್ದ ಆರ್‌ಎಸ್‌ಎಸ್‌ ಇಂದು ‘ಸ್ವತಂತ್ರ ಅಮೃತ ಮಹೋತ್ಸವ’ವನ್ನೂ ವಿರೋಧಿಸುತ್ತಿರುವಂತಿದೆ. ಆರ್‌ಎಸ್‌ಎಸ್‌ ಎಂದಿಗೂ ಭಾರತದ ಸ್ವತಂತ್ರವನ್ನು ಸಂಭ್ರಮಿಸಲೇ ಇಲ್ಲ, ಭಾರತದ ಸಾರ್ವಭೌಮತೆಯನ್ನು ಒಪ್ಪಿರಲೇ ಇಲ್ಲ. ಏಕೆಂದರೆ ಆರ್‌ಎಸ್‌ಎಸ್‌ಗೆ ಬೇಕಿರುವುದು ಸಂವಿಧಾನಾತ್ಮಕ ಭಾರತವಲ್ಲ, ಮನುಸ್ಮೃತಿಯ ಭಾರತ.

    ಬಿಜೆಪಿ ಮಾಡುತ್ತಿರುವುದು ‘ತಿರಂಗಾ ಅವಮಾನ ಕಾರ್ಯಕ್ರಮ’. ಬಿಜೆಪಿಗೆ ರಾಷ್ಟ್ರಧ್ವಜವನ್ನು ಅವಮಾನಿಸುವ ನಿರ್ದೇಶನ ನಾಗಪುರದ ಸಂಘದ ಶಾಖೆಯಿಂದ ಬಂದಿರಬಹುದು! ದಕ್ಷಿಣ ಕನ್ನಡ ಜಿಲ್ಲೆಯ ಅಂಚೆ ಕಚೇರಿಗೆ ವ್ಯಾಪಾರ ಮಾಡಲು ಸಾವಿರಾರು ಕಳಪೆ ‘ಗುಜರಾತ್ ಮಾಡೆಲ್ ಧ್ವಜಗಳು’ ಬಂದಿವೆ. ತಿರಂಗಾವನ್ನು ಬಿಜೆಪಿ ‘ಟವೆಲ್’ನಂತೆ ಬಳಸಿ ಅವಮಾನಿಸುತ್ತಿದೆ ಎಂದು ಕಾಂಗ್ರೆಸ್‌ ಕಿಡಿಕಾರಿದೆ.

    Live Tv
    [brid partner=56869869 player=32851 video=960834 autoplay=true]